Tag: ಚಾಕಲೇಟ್

  • ದೀಪಾವಳಿಗೆ ತಯಾರಾಯ್ತು ಚಾಕಲೇಟ್ ಪಟಾಕಿ

    ದೀಪಾವಳಿಗೆ ತಯಾರಾಯ್ತು ಚಾಕಲೇಟ್ ಪಟಾಕಿ

    ಬೆಂಗಳೂರು: ಬೆಳಕಿನ ಹಬ್ಬ ಬಂತೆಂದರೆ ಎಲ್ಲೆಲ್ಲೂ ಪಟಾಕಿಗಳ ಸದ್ದು ಜೋರಾಗಿ ಇರುತ್ತೆ. ಆದರೆ ಈ ಬಾರಿ ದೀಪಾವಳಿಗೆ ಚಾಕಲೇಟ್ ಪಟಾಕಿಗಳನ್ನು ತಯಾರಿಸಲಾಗಿದೆ.

    ದೀಪಾವಳಿ ಎಂದು ಹೇಳಿದ ತಕ್ಷಣ ಎಲ್ಲರ ಕಣ್ಮುಂದೆ ಬರುವುದು ಪಟಾಕಿಗಳು. ಅದರಲ್ಲೂ ಮಕ್ಕಳು ಪಟಾಕಿ ಹೊಡೆದು ಸಂಭ್ರಮಿಸುವ ಪರಿಯೇ ಬೇರೆ. ಆದರೆ ಸುಪ್ರೀಂ ಕೋರ್ಟ್ ಪರಿಸರಕ್ಕೆ ಹಾನಿಕಾರಕವಾದ ಪಟಾಕಿಗಳನ್ನು ಬಳಸಬಾರದು ಎಂದು ಆದೇಶ ನೀಡಿದೆ. ಇದನ್ನೂ ಓದಿ: ದೀಪಾವಳಿಗೆ ಸ್ವೀಟ್ ಪಟಾಕಿ ತಯಾರಿಸಿದ ವ್ಯಾಪಾರಿಗಳು

    ಇದೇ ಮೊದಲ ಬಾರಿಗೆ ಬೆಂಗಳೂರಿನ ಆಬ್ರಿ ಸಂಸ್ಥೆಯೊಂದು ಚಾಕಲೇಟ್ ಪಟಾಕಿಗಳನ್ನು ತಯಾರು ಮಾಡಿದೆ. ಪಟಾಕಿ ಹೊಡೆದು ಪರಿಸರಕ್ಕೆ ಹಾನಿ ಮಾಡುವ ಬದಲು ಚಾಕಲೇಟ್ ಮಾದರಿಯ ಪಟಾಕಿಯಿಂದ ಹಬ್ಬ ಮಾಡಿ ಎಂದು ಹೇಳಿದೆ. ಚಾಕಲೇಟ್ ಎಂದರೆ ಎಲ್ಲರಿಗೂ ಇಷ್ಟವಾಗುತ್ತೆ.

    ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುವ ಚಾಕಲೇಟ್ ಈಗ ಪಟಾಕಿ ಮಾದರಿಯಲ್ಲಿ ಲಗ್ಗೆ ಇಟ್ಟಿದ್ದು, ಎಲ್ಲರೂ ಫಿದಾ ಆಗಿದ್ದಾರೆ. ಗ್ರಾಹಕರು ಕೂಡ ಹಬ್ಬಕ್ಕೆ ತಮ್ಮ ಪ್ರೀತಿ ಪಾತ್ರರಿಗೆ ಈ ಚಾಕಲೇಟ್ ಅನ್ನು ಉಡುಗೊರೆಯಾಗಿ ಕೊಟ್ಟು ಪರಿಸರ ಸ್ನೇಹಿ ಹಬ್ಬ ಆಚರಿಸಿ ಎಂದು ಸಂದೇಶ ನೀಡುತ್ತಿದ್ದಾರೆ.

    ಪರಿಸರ ಸ್ನೇಹಿ ಚಾಕಲೇಟ್ ಪಟಾಕಿಯಿಂದ ವಾಯು ಮಾಲಿನ್ಯವಾಗಲಿ, ಶಬ್ದ ಮಾಲಿನ್ಯವಾಗಲಿ ಆಗುವುದಿಲ್ಲ.

  • ಸಂಸತ್‍ನಲ್ಲಿ ಚಾಕಲೇಟ್ ತಿಂದಿದ್ದಕ್ಕೆ ಕ್ಷಮೆ ಕೇಳಿದ ಕೆನಡಾ ಪ್ರಧಾನಿ

    ಸಂಸತ್‍ನಲ್ಲಿ ಚಾಕಲೇಟ್ ತಿಂದಿದ್ದಕ್ಕೆ ಕ್ಷಮೆ ಕೇಳಿದ ಕೆನಡಾ ಪ್ರಧಾನಿ

    ಒಟ್ಟಾವಾ: ಭ್ರಷ್ಟಾಚಾರ ಆರೋಪ ಮತದಾನದ ವೇಳೆ ಸಂಸತ್ ಭವನದಲ್ಲಿ ಚಾಕಲೇಟ್ ತಿಂದಿದ್ದಕ್ಕಾಗಿ ಕೆನಡಾ ಪ್ರಧಾನ ಮಂತ್ರಿ ಸಂಸತ್‍ನ ಕ್ಷಮೆ ಕೇಳಿದ್ದಾರೆ.

    ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಹೀಗಾಗಿ ಆರೋಪದ ಕುರಿತು ಸಂಸತ್‍ನಲ್ಲಿ ತಡರಾತ್ರಿಯವರೆಗೂ ಚರ್ಚೆ ಮಾಡಲಾಗಿತ್ತು. ಬಳಿಕ ಮತದಾನ ಪ್ರಕ್ರಿಯೆಗೆ ಅವಕಾಶ ನೀಡಲಾಗಿತ್ತು.

    ಮತದಾನ ಪ್ರಕ್ರಿಯೆ ವೇಳೆ ಜಸ್ಟಿನ್ ಟ್ರುಡೋ ಅವರು ಒಂದು ಚಾಕಲೇಟ್ ಬಾರ್ ತಿಂದಿದ್ದಾರೆ. ಇದನ್ನು ನೋಡಿದ ವಿರೋಧ ಪಕ್ಷದ ಸಂಸದ ಸ್ಕಾಟ್ ರೀಡ್ ಅವರು, ಪ್ರಧಾನಿ ಜಸ್ಟಿನ್ ಟ್ರುಡೋ ಅವರು ತಮ್ಮ ಕೆಸ್ಕ್‍ನಲ್ಲಿ ಚಾಕಲೇಟ್ ಬಚ್ಚಿಟ್ಟಿದ್ದಾರೆ ಎಂದು ಸಂಸತ್ ಗಮನಕ್ಕೆ ತಂದರು.

    ಪ್ರಧಾನಿ ಈಗಾಗಲೇ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಸಂಸತ್‍ನಲ್ಲಿ ಸಂಸದರು ಕೇವಲ ನೀರು ಮಾತ್ರ ಕುಡಿಯಬಹುದಾಗಿದೆ ಎನ್ನುವ ನಿಯಮ ಮೀರಿ ಚಾಕಲೇಟ್ ತಿಂದಿದ್ದಾರೆ ಎಂದು ಸಂಸದ ಸ್ಕಾಟ್ ರೀಡ್ ಆರೋಪಿಸಿದರು.

    ತಕ್ಷಣವೇ ಎಚ್ಚೆತ್ತುಕೊಂಡ ಜಸ್ಟಿನ್ ಟ್ರುಡೋ, ನಾನು ಚಾಕಲೇಟ್ ತಿಂದಿದಕ್ಕೆ ಸಂಸತ್‍ನ ಕ್ಷಮೆ ಯಾಚಿಸುತ್ತೇನೆ ಎಂದು ಎರಡು ಬಾರಿ ಪುನರುಚ್ಚರಿಸಿದರು. ಬಳಿಕ ಸ್ಪೀಕರ್ ಜೆಫ್ ರೇಗರ್, ಸಂಸತ್ ಭವನದ ಒಳಗೆ ಆಹಾರ ಪದಾರ್ಥ ತರಲು ಅವಕಾಶವಿಲ್ಲ ಎಂದು ಮತ್ತೆ ನಿಮಗೆ ತಿಳಿಸಬೇಕೇ ಎಂದು ಬೇಸರ ವ್ಯಕ್ತಪಡಿಸಿದರು.

  • ಮೂರು ವರ್ಷದ ಬಳಿಕ ಚಾಕಲೇಟ್ ತಿಂದು ಭಾವುಕರಾದ ಶಿಲ್ಪಾ ಶೆಟ್ಟಿ

    ಮೂರು ವರ್ಷದ ಬಳಿಕ ಚಾಕಲೇಟ್ ತಿಂದು ಭಾವುಕರಾದ ಶಿಲ್ಪಾ ಶೆಟ್ಟಿ

    ಮುಂಬೈ: ನಮ್ಮ ಬೇಡಿಕೆ ಪೂರ್ಣವಾಗಲಿ ಅಂತಾ ಕೆಲವರು ದೇವರಲ್ಲಿ ಇಷ್ಟವಾದ ವಸ್ತುವನ್ನು ತ್ಯಾಗ ಮಾಡುತ್ತಾರೆ. ತಮ್ಮ ಬೇಡಿಕೆ ಪೂರ್ಣವಾಗುವರೆಗೂ ಆ ವಸ್ತುವಿನಿಂದ ದೂರು ಉಳಿದು ಕಟ್ಟುನಿಟ್ಟಿನ ವ್ರತ ಪಾಲನೆ ಮಾಡುತ್ತಾರೆ. ಸಾಮಾನ್ಯ ಜನರು ಹೀಗೆ ವ್ರತ ಪಾಲನೆ ಮಾಡೋದನ್ನು ನಾವೆಲ್ಲ ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ. ಆದ್ರೆ ಸೆಲಿಬ್ರೆಟಿಗಳು ಈ ರೀತಿ ವ್ರತ ಪಾಲನೆ ಮಾಡ್ತಾರೆ ಎಂಬ ಅನುಮಾನ ಎಲ್ಲರಲ್ಲಿಯೂ ಮೂಡಿರುತ್ತದೆ. ಬಾಲಿವುಡ್ ನಟಿ, ತುಳು ನಾಡಿನ ಕುಡಿ ಶಿಲ್ಪಾ ಶೆಟ್ಟಿ ಬರೋಬ್ಬರಿ ಮೂರು ವರ್ಷಗಳಿಂದ ಪ್ರೀತಿಯ ಚಾಕಲೇಟ್ ನಿಂದ ದೂರು ಉಳಿದಿದ್ದರು.

    ಇಂದು ಶಿಲ್ಪಾ ಶೆಟ್ಟಿ ಇನ್ಸ್ ಟಾಗ್ರಾಂನಲ್ಲಿ ಚಾಕಲೇಟ್ ತಿನ್ನುವ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಒಂದು ವಿಶ್ ಗಾಗಿ ನನ್ನ ಪ್ರೀತಿಯ ಚಾಕಲೇಟ್ ನಿಂದ ಮೂರು ವರ್ಷಗಳಿಂದ ದೂರ ಉಳಿದುಕೊಂಡಿದ್ದೆ. ಕಳೆದ ಮೂರು ವರ್ಷಗಳಿಂದ ನಾನು ಚಾಕಲೇಟ್ ತಿಂದಿಲ್ಲ. ಇಂದು ನನ್ನ ವಿಶ್ ಪೂರ್ಣವಾಗಿದೆ. ಹಾಗಾಗಿ ಚಾಕಲೇಟ್ ತಿನ್ನುತ್ತಿದ್ದೇನೆ ಎಂದು ಹೇಳುತ್ತಾ ಶಿಲ್ಪಾ ಶೆಟ್ಟಿ ಭಾವುಕರಾಗಿದ್ದಾರೆ.

    ವಿಡಿಯೋ ಅಪ್ಲೋಡ್ ಮಾಡಿಕೊಂಡ ಕೇವಲ 3 ಗಂಟೆಯಲ್ಲಿ 4 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಆದ್ರೆ ಶಿಲ್ಪಾ ಶೆಟ್ಟಿ ತಮ್ಮ ವಿಶ್ ಏನು ಎಂಬುವುದನ್ನು ಮಾತ್ರ ಬಹಿರಂಗಗೊಳಿಸಿಲ್ಲ. ಒಂದು ಮಗುವಿನ ತಾಯಿಯಾದರೂ ಶಿಲ್ಪಾ ಶೆಟ್ಟಿ ಇಂದಿಗೂ ತಮ್ಮ ಮೈಮಾಟವನ್ನು ಮೊದಲಿನಂತೆಯೇ ಉಳಿಸಿಕೊಂಡಿದ್ದಾರೆ. ಯೋಗವೇ ತಮ್ಮ ಸೌಂದರ್ಯದ ಗುಟ್ಟು ಎಂದು ಈ ಹಿಂದೆ ಹಲವು ಬಾರಿ ಶಿಲ್ಪಾ ರಿವೀಲ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/BpeNLVUh3iU/?taken-by=theshilpashetty

  • ಬೆಂಗ್ಳೂರಿನಲ್ಲಿ 5ರ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನ!

    ಬೆಂಗ್ಳೂರಿನಲ್ಲಿ 5ರ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನ!

    ಬೆಂಗಳೂರು: ಐದು ವರ್ಷದ ಹೆಣ್ಣು ಮಗುವಿನ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

    ಬೆಂಗಳೂರಿನ ಕಮಲಾನಗರದಲ್ಲಿ ಈ ಘಟನೆ ನಡೆದಿದ್ದು, ಭಾಸ್ಕರ್ ಎಂಬಾತ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಗು ಟಿವಿ ನೋಡೋಕೆ ಬಂದಿದ್ದ ಸಂದರ್ಭದಲ್ಲಿ ಭಾಸ್ಕರ್ ಆಕೆಯನ್ನು ರೇಪ್ ಮಾಡಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.

    ಆರೋಪಿ ಭಾಸ್ಕರ್ ಕಟ್ಟಿಂಗ್ ಶಾಪ್ ನಡೆಸ್ತಿದ್ದಾನೆ. ಈತ ಟಿವಿ ನೋಡೀಕೆ ಮಗು ಬಂದಾಗ ಚಾಕಲೇಟ್ ನೀಡೋದಾಗಿ ಹೇಳಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಘಟನೆಯನ್ನರಿತ ಕೂಡಲೇ ಬಸವೇಶ್ವರ ನಗರ ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.

    ಸದ್ಯ ಆರೋಪಿ ಭಾಸ್ಕರ್ ನನ್ನು ಪೋಕ್ಸೋ ಕೇಸ್ ನಡಿ ಬಂಧಿಸಲಾಗಿದ್ದು, ವಿಚಾರಣೆ ನಡೆಸಿದ್ದಾರೆ.

    ಏನಿದು ಪೋಕ್ಸೋ ಕಾಯ್ದೆ?
    ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ ಮತ್ತು ನಿಯಮಗಳು(ಪೋಕ್ಸೋ) ಜಾರಿಗೆ ತರಲಾಗಿದೆ. ಪೋಕ್ಸೋ ಪ್ರಕಾರ 18 ವರ್ಷದೊಳಗಿನವರನ್ನು ಮಗು ಎಂದು ಪರಿಗಣಿಸಲಾಗುತ್ತದೆ.  ಅತ್ಯಾಚಾರ, ಗುಪ್ತಾಂಗ ಮುಟ್ಟುವುದು, ಲೈಂಗಿಕತೆಗೆ ಪ್ರಚೋದಿಸುವುದು,ಅಶ್ಲೀಲ ಚಿತ್ರಗಳ ಬಳಕೆ, ಮಗುವಿನ ಅಶ್ಲೀಲ ಚಿತ್ರ ಸಂಗ್ರಹಿಸಿದರೆ ಅದು ಈ ಕಾಯ್ದೆಯ ಪ್ರಕರ ಅಪರಾಧ ಎಂದು ಪರಿಗಣಿಸಲ್ಪಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಬೆಂಗ್ಳೂರಲ್ಲಿ 72 ಕೆ.ಜಿಯ ಚಾಕಲೇಟ್ ಬಾರ್ ತಯಾರಿ!

    ಬೆಂಗ್ಳೂರಲ್ಲಿ 72 ಕೆ.ಜಿಯ ಚಾಕಲೇಟ್ ಬಾರ್ ತಯಾರಿ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 72 ಪದಾರ್ಥಗಳನ್ನು ಬಳಸಿ ಬರೋಬ್ಬರಿ 72 ಕೆ.ಜಿಯ ಚಾಕಲೇಟ್ ಬಾರ್ ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿದೆ.

    ಭಾರತದ ಅತ್ಯಂತ ಜನಪ್ರಿಯ ಚಾಕಲೇಟ್ ಬ್ರಾಂಡ್ ಫೆಬೆಲ್ಲೆ(Fabelle), ಇದೇ ಮೊದಲ ಬಾರಿಗೆ ವಿಶಿಷ್ಟ ಹಾಗೂ 72 ಪದಾರ್ಥಗಳನ್ನು ಬಳಸಿ 72 ಕಿಲೋ ಚಾಕಲೇಟ್ ಬಾರ್ ತಯಾರಿಸಿದೆ. ಬೆಂಗಳೂರು ಮಾತ್ರವಲ್ಲದೇ ಎಲ್ಲ 6 ಮೆಟ್ರೋ ನಗರಗಳಲ್ಲಿ ಒಂದೊಂದು 72 ಕಿಲೋ ಚಾಕೊಲೇಟ್ ಬಾರ್ ತಯಾರಿಸಿದೆ.

    ಈ ಚಾಕಲೇಟ್ ಬಾರ್ ಗಳನ್ನು ಮುಂಬೈ, ದೆಹಲಿ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಉನ್ನತ ಗುಣಮಟ್ಟದ ಹಾಲು, ನಟ್ಸ್, ಒಣ ಹಣ್ಣುಗಳು, ಕುಕೀಸ್, ಸೀಡ್‍ಗಳು, ಜೆಲ್ಲಿ, ಬಿಸ್ಕಿಟ್ ಹಾಗೂ ಇತರ ಪದಾರ್ಥಗಳ ಮಿಶ್ರಣದಿಂದ ಫೆಬೆಲ್ಲೆ ಮಾಸ್ಟರ್ ಚಾಕಲೇಟಿಯರ್ ಗಳು ಮಿಲ್ಕ್ ಚಾಕಲೇಟ್ ಬಾರ್ ಗಳನ್ನು ತಯಾರಿಸಿದ್ದಾರೆ. ಚಾಕಲೇಟ್ ರುಚಿಯನ್ನು ವಿಶಿಷ್ಟವಾಗಿಸಲು ಹಲವು ಸುತ್ತಿನ ಟೆಸ್ಟಿಂಗ್ ಟ್ರಯಲ್‍ಗಳನ್ನೂ ಮಾಡಲಾಗಿದೆಯಂತೆ. ಅಂತಿಮವಾಗಿ 7 ರಿಂದ 8 ದಿನಗಳವರೆಗೆ ಕೆಲಸ ಮಾಡಿ ಚಾಕಲೇಟ್ ಬಾರ್ ತಯಾರಿಸಲಾಗಿದೆ. ಇದನ್ನೂ ಓದಿ: ಈ ಪುಟಾಣಿ ಚಾಕ್ಲೇಟ್ ಬೆಲೆ 6 ಲಕ್ಷ ರೂ.

    ಈ ತಯಾರಿಕೆಯ ಪಯಣ ಅತ್ಯಂತ ಸವಾಲಿನದಾಗಿದ್ದು, ಬರಿ ದೊಡ್ಡ ಚಾಕಲೇಟ್ ಬಾರ್ ತಯಾರಿಸುವುದಷ್ಟೇ ನಮ್ಮ ಗುರಿಯಾಗಿರಲಿಲ್ಲ. ಬದಲಿಗೆ ಸಾಮಾನ್ಯ ಫೆಬೆಲ್ಲೆ ಚಾಕಲೇಟ್‍ಗಿಂತ ವಿಶಿಷ್ಟ ರುಚಿಯನ್ನು ಇದು ಹೊಂದಿರಬೇಕು ಎಂದು ನಾವು ಬಯಸಿದ್ದೆವು. ಇದೇ ಕಾರಣಕ್ಕೆ ಚಾಕಲೇಟ್ ತಯಾರಕರು ತಮ್ಮ ಎಲ್ಲ ಅನುಭವವನ್ನೂ ಬಳಸಿ ತಯಾರಿಸಿದ್ದಾರೆ.

    ಈ ಚಾಕಲೇಟ್ ಮಾರಾಟ ಮಾಡಿ ಮೇಕ್ ಎ ವಿಶ್ ಫೌಂಡೇಶನ್ ಮೂಲಕ ಮಕ್ಕಳಿಗೆ ಆ ಹಣ ನೀಡುವುದು ಈ ಚಾಕಲೇಟ್ ತಯಾರಿಕೆಯ ಹಿಂದಿನ ಉದ್ದೇಶವಾಗಿದೆ. ಜೊತೆಗೆ 72 ನೇ ಸ್ವಾತಂತ್ರೋತ್ಸವ ಹಿನ್ನೆಲೆಯಲ್ಲಿ 72 ಕೆಜಿಯ ಚಾಕಲೇಟ್ ತಯಾರು ಮಾಡಿ ಒಂದೊಳ್ಳೆ ಕೆಲಸ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟ್ಯಾಂಕರ್ ಪಲ್ಟಿಯಾಗಿ ರಸ್ತೆಯಿಡೀ ಹರಿಯಿತು ಚಾಕಲೇಟ್!

    ಟ್ಯಾಂಕರ್ ಪಲ್ಟಿಯಾಗಿ ರಸ್ತೆಯಿಡೀ ಹರಿಯಿತು ಚಾಕಲೇಟ್!

    ಪೋಲ್ಯಾಂಡ್: ಚಾಕಲೇಟ್ ದ್ರಾವಣ ತುಂಬಿದ್ದ ಟ್ಯಾಂಕರೊಂದು ರಸ್ತೆ ಮಧ್ಯೆ ಪಲ್ಟಿಯಾದ ಪರಿಣಾಮ ದ್ರವ ರೂಪದ ಚಾಕಲೇಟ್ ರಸ್ತೆಯಿಡೀ ಚೆಲ್ಲಿದ ಘಟನೆ ಪೋಲ್ಯಾಂಡ್ ನಲ್ಲಿ ನಡೆದಿದೆ.

    ಈ ಘಟನೆ ಬುಧವಾರ ನಡೆದಿದ್ದು, ಘಟನೆಯಿಂದ ಕೆಲ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಹ ಸ್ಥಿತಿ ಬಂದಿತ್ತು. ಈ ಟ್ಯಾಂಕರ್ ದಕ್ಷಿಣ ಪೋಲ್ಯಾಂಡ್ ಗೆ ಸೇರಿದ್ದಾಗಿದೆ ಎಂಬುದಾಗಿ ವರದಿಯಾಗಿದೆ.

    ಗ್ರ್ಯಾಬೋಸ್ಜೆವೊ ಟ್ರಾಫಿಕ್ ತಡೆಗೋಡೆಗೆ ಡಿಕ್ಕಿಯಾದ ಪರಿಣಾಮ ಸುಮಾರು 12 ಟನ್ ಚಾಕಲೇಟ್ ದ್ರಾವಣವಿದ್ದ ಟ್ಯಾಂಕರ್ ಪಲ್ಟಿಯಾಗಿದೆ ಎಂದು ಅಲ್ಲಿನ ಕೆಲ ಮಾಧ್ಯಮಗಳು ವರದಿ ಮಾಡಿದ್ದವು.

    ಘಟನೆಯಲ್ಲಿ 60 ವರ್ಷದ ಚಾಲಕನ ಕೈಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದರು. ಸೂರ್ಯನ ಬಿಸಿಲಿಗೆ ರಸ್ತೆಯಲ್ಲಿ ಚೆಲ್ಲಿದ್ದ ಚಾಕಲೇಟ್ ದ್ರಾವಣ ಒಣಗಿ ಅಂಟು ಅಂಟಾಗಿತ್ತು. ಹೀಗಾಗಿ ಆ ದ್ರಾವಣವನ್ನು ತೆಗೆಯಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟರು. ಚಾಕಲೇಟ್ ಗಿಂತ ಎಣ್ಣೆಯನ್ನು ತೆರವುಗೊಳಿಸುವುದೇ ಸುಲಭ ಅಂತ ಸ್ಲುಪ್ಕಾ ನಗರದ ಪೊಲೀಸ್ ಮಾರ್ಲೆನಾ ಕುಕಾವಾಕ ತಿಳಿಸಿದ್ದಾರೆ.

  • ಚಾಕ್ಲೇಟ್ ತಿನ್ನುವ ಮುನ್ನ ಎಚ್ಚರ- ಸಿಹಿ ಜೊತೆ ಫ್ರಿಯಾಗಿ ಸಿಗುತ್ತೆ ಹುಳುಗಳು!

    ಚಾಕ್ಲೇಟ್ ತಿನ್ನುವ ಮುನ್ನ ಎಚ್ಚರ- ಸಿಹಿ ಜೊತೆ ಫ್ರಿಯಾಗಿ ಸಿಗುತ್ತೆ ಹುಳುಗಳು!

    ಬೆಂಗಳೂರು: ಹುಟ್ಟುಹಬ್ಬ, ಪ್ರೇಮಿಗಳ ದಿನ, ಹೊಸ ವರ್ಷ, ಪಾರ್ಟಿ.. ಹೀಗೆ ಎಲ್ಲ ಸಂತೋಷದಲ್ಲೂ ನಾವು ಮೊದಲು ಖರೀದಿಸೋದು ಚಾಕ್ಲೇಟ್. ಆದ್ರೇ ನಗರದ ಪ್ರತಿಷ್ಠಿತ ಅಂಗಡಿಯಲ್ಲಿ ಸಿಗೋ ಚಾಕ್ಲೇಟ್ ಗಳನ್ನ ನೀವು ತಿಂದ್ರೆ ನಿಮ್ಮ ಆರೋಗ್ಯಕ್ಕೆ ಕುತ್ತು ಗ್ಯಾರಂಟಿ.

    ಪ್ರತಿಷ್ಠಿತ ಅಂಗಡಿಗಳಿಗೆ ಹೋಗಿ ಸೊಗಸಾಗಿ ಪ್ಯಾಕ್ ಆಗಿರೋ ಚಾಕ್ಲೇಟ್ ಗಳನ್ನು ಖರೀದಿಸಿ ಮಕ್ಕಳಿಗೆ ಕೊಡುವ ಮುನ್ನ ಪರೀಕ್ಷಿಸಿಕೊಳ್ಳಿ. ಯಾಕಂದ್ರೆ ಸಿಹಿ ಜೊತೆ ಇಲ್ಲಿ ಹುಳುಗಳೂ ಫ್ರೀಯಾಗಿ ಸಿಕ್ತಾವೆ. ಈ ಬಗ್ಗೆ ಯಾರಾದ್ರೂ ಬಂದು ಕೇಳಿದ್ರೆ ಅವರಿಗೆ ಬದಲಿ ಚಾಕ್ಲೇಟ್ ಕೊಟ್ಟು ಕಳಿಸಿ ಕೈ ತೊಳೆದುಕೊಳ್ತಾರೆ. ಬಿಟಿಎಂ ಲೇಔಟ್‍ನಲ್ಲಿರೋ `ಮೋರ್ ದೆನ್’ ಚಾಕ್ಲೇಟ್ ಹಾಗೂ ಕೇಕ್ ಶಾಪ್ ನಲ್ಲಿ ಹುಳುವಿರೋ ಚಾಕ್ಲೇಟ್ ಗಿಫ್ಟ್ ಆಗಿ ಸಿಕ್ಕಿದೆ. ಎಕ್ಸ್ಪೈರ್ ಡೇಟ್ ಸಹ ಅಳಿಸಿ ಚಾಕ್ಲೇಟ್ ಮಾರಾಟ ಮಾಡಲಾಗಿತ್ತು.

    ಈ ಬಗ್ಗೆ ಅಂಗಡಿಯವರನ್ನ ಕೇಳಿದ್ರೆ ಬದಲಿ ಚಾಕ್ಲೇಟ್ ಕೊಟ್ಟು ಸಾಗಹಾಕೋಕೆ ಮುಂದಾದ್ರು. ಹಣ ಪಡೆದು ಅವಧಿ ಮುಗಿದಿರೋ ಹುಳುಗಳಿರೋ ಚಾಕ್ಲೇಟ್ ಮಾರಾಟ ಮಾಡಿದ ವ್ಯಾಪಾರಿ ವಿರುದ್ಧ ಗ್ರಾಹಕಿ ವೇದ ಗ್ರಾಹಕರ ಕೋರ್ಟ್ ಮೆಟ್ಟಿಲೇರೋ ತಯಾರಿ ನಡೆಸಿದ್ದಾರೆ.