Tag: ಚಾಂಪಿಯನ್ಸ್‌ ಟ್ರೋಫಿ 2025

  • Champions Trophy Final: ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳಿಂದ ದೇವರಿಗೆ ವಿಶೇಷ ಪೂಜೆ

    Champions Trophy Final: ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳಿಂದ ದೇವರಿಗೆ ವಿಶೇಷ ಪೂಜೆ

    ಮೈಸೂರು: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಟ್ರೋಫಿಗಾಗಿ ಹಣಾಹಣಿ ನಡೆಯಲಿದೆ. ಟೀಂ ಇಂಡಿಯಾ ಗೆಲುವಿಗಾಗಿ ಮೈಸೂರಿನಲ್ಲಿ (Mysuru) ಕ್ರಿಕೆಟ್ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

    ಕ್ರಿಕೆಟ್ ಪ್ರೇಮಿಗಳಿಗಿಂದು ಸೂಪರ್ ಸಂಡೇಯಾಗಿದ್ದು, ಚಾಂಪಿಯನ್ಸ್ ಟ್ರೋಫಿ ಪಂದ್ಯ ವೀಕ್ಷಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಭಾರತದ ಗೆಲುವಿಗಾಗಿ ಮೈಸೂರಿನಲ್ಲಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಅಗ್ರಹಾರದ ಗಣಪತಿ ದೇಗುಲದಲ್ಲಿ 101 ಈಡುಗಾಯಿ ಹೊಡೆದು ಹರಕೆ ಪೂರೈಸಿದರು. ಇದನ್ನೂ ಓದಿ: Champions Trophy 2025: ಮತ್ತೆರಡು ದಾಖಲೆಗಳ ಹೊಸ್ತಿಲಲ್ಲಿ ಚೇಸಿಂಗ್ ಮಾಸ್ಟರ್ ಕೊಹ್ಲಿ

    ಅಭಿಮಾನಿಗಳು ಟೀಂ ಇಂಡಿಯಾ ಆಟಗಾರರ ಪೋಸ್ಟರ್ ಹಿಡಿದು ಘೋಷಣೆ ಕೂಗಿದರು. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕನ್ನಡಿಗ ಕೆ.ಎಲ್.ರಾಹುಲ್ ಪೋಸ್ಟರ್ ಹಿಡಿದು ಘೋಷಣೆ ಹಾಕಿದರು. ಬಳಿಕ ಟೀಂ ಇಂಡಿಯಾ ಆಟಗಾರರಿಗೆ ಶಕ್ತಿ ನೀಡುವಂತೆ ವಿಘ್ನ ನಿವಾರಕನಿಗೆ ಪ್ರಾರ್ಥನೆ ಸಲ್ಲಿಸಿದರು. ಇದನ್ನೂ ಓದಿ: ಚಾಂಪಿಯನ್ಸ್ ಪಟ್ಟಕ್ಕಾಗಿ ದುಬೈನಲ್ಲಿ ಗುದ್ದಾಟ – ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಲು ಟೀಂ ಇಂಡಿಯಾ ಸನ್ನದ್ಧ

    ಹೈವೋಲ್ಟೇಜ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿಂದು ಭಾರತ ಪಡೆ ನ್ಯೂಜಿಲೆಂಡ್ ತಂಡವನ್ನ ಎದುರಿಸಲಿದೆ. 25 ವರ್ಷಗಳ ಬಳಿಕ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದು, ವಿಶ್ವ ಕ್ರಿಕೆಟ್ ಚಾಂಪಿಯನ್‌ಶಿಪ್‌ಗಾಗಿ ಎರಡು ತಂಡಗಳು ಸೆಣಸಾಡಲಿವೆ. ಇದನ್ನೂ ಓದಿ: ಬೆಂಗಳೂರಲ್ಲಿ ಪ್ರೇಯಸಿ, ಆಕೆಯ ಮಗನನ್ನ ಹತ್ಯೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

    ಇಡೀ ವಿಶ್ವದ ಚಿತ್ತವೇ ಇವತ್ತು ದುಬೈನತ್ತ ನೆಟ್ಟಿದೆ. ಚಾಂಪಿಯನ್ಸ್ ಪಟ್ಟಕ್ಕಾಗಿ ಇಂದು ದುಬೈ ರಣಾಂಗಣದಲ್ಲಿ ಮಹಾಕದನವೇ ನಡೆಯಲಿದೆ. ಒಂದೆಡೆ ಸೋಲಿಗೆ ಪ್ರತೀಕಾರವಾದರೆ, ಮತ್ತೊಂದೆಡೆ 12 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಲು ಟೀಂ ಇಂಡಿಯಾ ಸನ್ನದ್ಧವಾಗಿದೆ.

  • Champions Trophy 2025: ಮತ್ತೆರಡು ದಾಖಲೆಗಳ ಹೊಸ್ತಿಲಲ್ಲಿ ಚೇಸಿಂಗ್ ಮಾಸ್ಟರ್ ಕೊಹ್ಲಿ

    Champions Trophy 2025: ಮತ್ತೆರಡು ದಾಖಲೆಗಳ ಹೊಸ್ತಿಲಲ್ಲಿ ಚೇಸಿಂಗ್ ಮಾಸ್ಟರ್ ಕೊಹ್ಲಿ

    ದುಬೈ: ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲವೂ ಚಿನ್ನ ಎಂಬಂತಾಗಿದೆ. ಅವರ ಅಬ್ಬರ ಬ್ಯಾಟಿಂಗ್‌ನಿಂದ ಬರುತ್ತಿರುವ ರನ್ ದಾಖಲೆಗಳ ಪುಟ ಸೇರುತ್ತಿದೆ. ಇಂದು ನಡೆಯುವ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲೂ ಕೂಡ ಇತರರ ದಾಖಲೆಗಳ ಅಳಿಸಿ ಹಾಕುವತ್ತ ಕಿಂಗ್ ಕೊಹ್ಲಿ ಚಿತ್ತ ನೆಟ್ಟಿದೆ. ಇದರ ಜೊತೆಗೆ, ಫಾರ್ಮ್ನಲ್ಲಿರುವ ಕೊಹ್ಲಿ ಕಿವೀಸ್‌ಗೆ ತಲೆನೋವಾಗಿ ಪರಿಣಮಿಸಿದ್ದಾರೆ.

    2008 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ, ಮತ್ತೆ ಹಿಂದೆ ತಿರುಗು ನೋಡಿದ್ದೆ ಇಲ್ಲ. ಆನೆ ನಡೆದಿದ್ದೇ ದಾರಿ ಎಂಬಂತೆ ಕ್ರಿಕೆಟ್ ಅಖಾಡದಲ್ಲಿ ಅಬ್ಬರಿಸಿದ್ದಾರೆ.

    ಹಲವು ದಾಖಲೆಗಳಲ್ಲಿ ವಿರಾಜಮಾನವಾಗಿರುವ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ, ಮತ್ತೊಂದು ದಾಖಲೆಯ ಹೊಸ್ತಿಲಲ್ಲಿದ್ದಾರೆ. ಅದು ಚಾಂಪಿಯನ್ಸ್ ಟ್ರೋಪಿಯ ಫೈನಲ್ ಅಖಾಡವೇ ವೇದಿಕೆಯಾಗಿದೆ. ಇಂದಿನ ಫೈನಲ್‌ನಲ್ಲಿ ದಿಗ್ಗಜ ಕ್ರಿಕೆಟಿಗರ ದಾಖಲೆಗಳನ್ನ ಅಳಿಸಿ ಹಾಕುವತ್ತ ಕಣ್ಣಿಟ್ಟಿದ್ದಾರೆ. ಇಂದಿನ ಪಂದ್ಯದಲ್ಲಿ ವಿರಾಟ್ 54 ರನ್ ಗಳಿಸಿದರೆ ಇಬ್ಬರು ದಿಗ್ಗಜರ ದಾಖಲೆಗಳು ಉಡೀಸ್ ಆಗಲಿದೆ.

    ಕುಮಾರ್ ಸಂಗಕ್ಕಾರ ಹಿಂದಿಕ್ಕಲು ಬೇಕು 55 ರನ್
    ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್ ಪೂರೈಸಿದ ಆಟಗಾರರ ಪೈಕಿ 55 ಗಳಿಸಿದರೆ, ಶ್ರೀಲಂಕಾದ ದಿಗ್ಗಜ ಆಟಗಾರ ಕುಮಾರ್ ಸಂಗಕ್ಕಾರಗಿಂತ ವೇಗವಾಗಿ ಮತ್ತು ಹೆಚ್ಚು ರನ್ ಗಳಿಸಿದ ಆಟಗಾರರಾಗಲಿದ್ದಾರೆ. ಸದ್ಯ ಸಂಗಕ್ಕಾರ 404 ಪಂದ್ಯದಲ್ಲಿ 14,234 ರನ್ ಗಳಿಸಿ ಸಚಿನ್ ತೆಂಡೂಲ್ಕರ್ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ಸದ್ಯ ಕೊಹ್ಲಿ 301 ಪಂದ್ಯಗಳಲ್ಲೇ 14,180 ರನ್ ಗಳಿಸಿದ್ದು, ಸಂಗಕ್ಕಾರ ದಾಖಲೆ ಮುರಿಯಲು 55 ರನ್‌ಗಳಷ್ಟೇ ಬೇಕಾಗಿದೆ.

    ಗೇಲ್ ದಾಖಲೆ ಉಡೀಸ್‌ಗೆ ಬೇಕು 46 ರನ್‌
    ಚಾಂಪಿಯನ್ ಟ್ರೋಫಿಯಲ್ಲಿ ಕ್ರಿಸ್ ಗೇಲ್ 17 ಪಂದ್ಯಗಳಲ್ಲಿ 791 ರನ್ ಗಳಿಸುವ ಮೂಲಕ ಅತೀ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಕೊಹ್ಲಿ ಪ್ರಸ್ತುತ 17 ಪಂದ್ಯಗಳಲ್ಲಿ 746 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ 46 ರನ್ ಗಳಿಸಿದರೆ ಗೇಲ್ ದಾಖಲೆ ಹಿಂದಿಕ್ಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಲಿದ್ದಾರೆ.

    ಭಾರತದ ವಿರುದ್ಧ ಯಾವುದೇ ತಂಡ ಕಣಕ್ಕಿಳಿದರೂ, ಆ ತಂಡಕ್ಕೆ ವಿರಾಟ್ ಕೊಹ್ಲಿಯೇ ದೊಡ್ಡ ವಿಲನ್. ಇಂದಿನ ಪಂದ್ಯದಲ್ಲೂ ನ್ಯೂಜಿಲೆಂಡ್‌ಗೆ ಕೊಹ್ಲಿಯದ್ದೇ ಚಿಂತೆಯಾಗಿದೆ. ಕಿವೀಸ್‌ನ ಈ ತಲೆಬಿಸಿಗೆ ಕಾರಣ ಕೊಹ್ಲಿಯ ಇತ್ತೀಚಿನ ಫಾರ್ಮ್. ಇಡೀ ಟೂರ್ನಿಯಲ್ಲಿ ಕೊಹ್ಲಿ ಅದ್ಭುತ ಫಾರ್ಮ್ನಲ್ಲಿದ್ದಾರೆ. ಕೊಹ್ಲಿ ಟೂರ್ನಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ 72ರ ಸರಾಸರಿಯಲ್ಲಿ 217 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಸೆಂಚುರಿ ಮತ್ತೊಂದು ಆಫ್ ಸೆಂಚುರಿ. ಅದರಲ್ಲೂ ಕಳೆದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಶತಕ, ಅರ್ಧ ಶತಕ ಪೂರೈಸಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧ ಕೊಹ್ಲಿಯ ಅಂಕಿಅಂಶ
    ಪಂದ್ಯ: 32
    ಒಟ್ಟು ರನ್: 1656
    ಹೆಚ್ಚು ರನ್: 154
    ಸ್ಟೈಕ್ ರೇಟ್: 95.55
    ಶತಕ: 6
    ಅರ್ಧಶತಕ: 9

    ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಕಿವೀಸ್ ವಿರುದ್ಧ 32 ಪಂದ್ಯವನ್ನಾಡಿರುವ ಕೊಹ್ಲಿ, 1656 ರನ್ ಚಚ್ಚಿದ್ದಾರೆ. ಇದರಲ್ಲಿ 6 ಶತಕ, 9 ಅರ್ಧಶತಕ ದಾಖಲಾಗಿದೆ. 154 ಕಿವೀಸ್ ವಿರುದ್ದ ಕೊಹ್ಲಿ ಸಿಡಿಸಿದ ಅತ್ಯಧಿಕ ರನ್ ಆಗಿದೆ.

  • Champions Trophy: ಸೋತ ಇಂಗ್ಲೆಂಡ್‌ ಟೂರ್ನಿಯಿಂದ ಔಟ್‌ – ಗೆದ್ದ ದ. ಆಫ್ರಿಕಾ ಸೆಮಿಗೆ ಎಂಟ್ರಿ

    Champions Trophy: ಸೋತ ಇಂಗ್ಲೆಂಡ್‌ ಟೂರ್ನಿಯಿಂದ ಔಟ್‌ – ಗೆದ್ದ ದ. ಆಫ್ರಿಕಾ ಸೆಮಿಗೆ ಎಂಟ್ರಿ

    ಕರಾಚಿ: ದಕ್ಷಿಣ ಆಫ್ರಿಕಾದ ಜವಾಬ್ದಾರಿಯುತ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಮುಂದೆ ಇಂಗ್ಲೆಂಡ್‌ ಸೋತು ಶರಣಾಯಿತು. ಆ ಮೂಲಕ ಚಾಂಪಿಯನ್ಸ್‌ ಟ್ರೋಫಿಯಲ್ಲಿ (Champions Trophy 2025) ಒಂದೇ ಒಂದು ಪಂದ್ಯವನ್ನು ಗೆಲ್ಲದೇ ಟೂರ್ನಿಯಿಂದಲೇ ಆಂಗ್ಲ ಪಡೆ ನಿರ್ಗಮಿಸಿದೆ. ಭರ್ಜರಿ ಗೆಲುವಿನೊಂದಿಗೆ ಸೌತ್‌ ಆಫ್ರಿಕಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ಕಳಪೆ ಪ್ರದರ್ಶನದೊಂದಿಗೆ ಕೇವಲ 179 ರನ್‌ಗಳಿಗೆ ಆಲೌಟ್‌ ಆಯಿತು. ಸಾಧಾರಣ ರನ್‌ಗಳ ಗುರಿ ಬೆನ್ನತ್ತಿದ ಆಫ್ರಿಕಾ ರಸಿ ವ್ಯಾನ್‌ ಡರ್‌ ಡುಸೆನ್‌ (72) ಮತ್ತು ಹೆನ್ರಿಚ್‌ ಕ್ಲಾಸೆನ್‌ (64) ಫಿಫ್ಟಿ ಆಟದ ನೆರವಿನಿಂದ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಇದನ್ನೂ ಓದಿ: 50 ರನ್‌ ಅಂತರದಲ್ಲಿ 7 ವಿಕೆಟ್‌ ಪತನ – ಮುಂಬೈ ವಿರುದ್ಧ ಡೆಲ್ಲಿಗೆ ಭರ್ಜರಿ ಜಯ

    180 ರನ್‌ಗಳ ಟಾರ್ಗೆಟ್ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 29.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ‌ ಗುರಿ ತಲುಪಿತು. ಇಂಗ್ಲೆಂಡ್‌ ಪರ ಜೋಫ್ರಾ ಆರ್ಚರ್‌ 2 ಹಾಗೂ ಆದಿಲ್‌ ರಶೀದ್‌ 1 ವಿಕೆಟ್‌ ಪಡೆದರು.

    ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ಗೆ ಆರಂಭದಲ್ಲೇ ಶಾಕ್‌ ಎದುರಾಯಿತು. ಮೊದಲ ಓವರ್‌ನಲ್ಲೇ ಫಿಲ್‌ ಸಾಲ್ಟ್‌ ವಿಕೆಟ್‌ ಒಪ್ಪಿಸಿ ಹೊರ ನಡೆದರು. ನಂತರ ಬಂದ ಜೇಮಿ ಸ್ಮಿತ್‌ ಕೂಡ ಶೂನ್ಯ ಸುತ್ತಿ ಪೆವಿಲಿಯನ್‌ ಕಡೆ ಹೆಜ್ಜೆ ಹಾಕಿದರು.

    ಜೋ ರೂಟ್ 37, ಜೋಫ್ರಾ ಆರ್ಚರ್ 25, ಬೆನ್ ಡಕೆಟ್ 24, ಕ್ಯಾಪ್ಟನ್‌ ಜೋಸ್ ಬಟ್ಲರ್ 21, ಹ್ಯಾರಿ ಬ್ರೂಕ್‌ 19 ರನ್‌ ಗಳಿಸಿದರು. ಇಂಗ್ಲೆಂಡ್‌ ತಂಡವು 38.2 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 179 ರನ್‌ಗಳಿಸಿತು. ಇದನ್ನೂ ಓದಿ: ಪಂದ್ಯಕ್ಕೆ ಮಳೆ ಅಡ್ಡಿ| ಆಸ್ಟ್ರೇಲಿಯಾ ಸೆಮಿಗೆ ಹೋದ್ರೂ ಅಫ್ಘಾನ್‌ಗೆ ಇನ್ನೂ ಇದೆ ಚಾನ್ಸ್‌!

    ಆಫ್ರಿಕಾ ಪರ ಮಾರ್ಕೊ ಜಾನ್ಸೆನ್ ಮತ್ತು ವಿಯಾನ್ ಮುಲ್ಡರ್ ತಲಾ 3 ವಿಕೆಟ್‌ ಕಿತ್ತು ಮಿಂಚಿದರು. ಕೇಶವ ಮಹಾರಾಜ್ 2, ಲುಂಗಿ ಎನ್‌ಗಿಡಿ ಮತ್ತು ಕಗಿಸೊ ರಬಾಡ ತಲಾ 1 ವಿಕೆಟ್‌ ಪಡೆದರು.

  • Champions Trophy | ಇಂಡೋ-ಪಾಕ್ ಕಾದಾಟದ ರೋಚಕ ಇತಿಹಾಸ – ಹೈವೋಲ್ಟೇಜ್ ಕದನದಲ್ಲಿ ಯಾರ ಕೈ ಮೇಲು?

    Champions Trophy | ಇಂಡೋ-ಪಾಕ್ ಕಾದಾಟದ ರೋಚಕ ಇತಿಹಾಸ – ಹೈವೋಲ್ಟೇಜ್ ಕದನದಲ್ಲಿ ಯಾರ ಕೈ ಮೇಲು?

    ಭಾರತ ಮತ್ತು ಪಾಕಿಸ್ತಾನ (Pakistan) ಪಂದ್ಯವೆಂದರೆ ಅದು ಯಾವತ್ತೂ ವಿಶೇಷವೇ. ಇಲ್ಲಿ ಯಾವುದು ಬಲಿಷ್ಠ, ಯಾವುದು ಕನಿಷ್ಠ ಎಂಬಿತ್ಯಾದಿ ಪ್ರಶ್ನಗಳು ಉದ್ಭವಿಸುವುದೇ ಇಲ್ಲ. ಎರಡೂ ತಂಡಗಳ ಆಟಗಾರರು ಉತ್ಸಾಹದಲ್ಲಿರುತ್ತಾರೆ. ಅದೇ ರೀತಿ ಎರಡೂ ತಂಡಗಳ ಮೇಲೆ ಅತೀವ ಒತ್ತಡವೂ ಇರುತ್ತದೆ. ಈ ಒತ್ತಡವನ್ನು ಮೀರಿ ನಿಂತು ಉತ್ತಮ ಪ್ರದರ್ಶನ ತೋರಿದವರೇ ಇಲ್ಲಿ ವಿಜಯ ಶಾಲಿಗಳಾಗುತ್ತಾರೆ.

    ಐಸಿಸಿ ಏಕದಿನ ವಿಶ್ವಕಪ್ ನ ವಿಚಾರಕ್ಕೆ ಬಂದಾಗ ಇತ್ತಂಡಗಳಲ್ಲಿ ಭಾರತದ್ದೇ ಪಾರಮ್ಯ, ಭಾರತವೇ ಸಾರ್ವಭೌಮ. ಈವರೆಗೆ ನಡೆದಿರುವ 8 ಪಂದ್ಯಗಳಲ್ಲಿ ಏಂಟರಲ್ಲೂ ಭಾರತವೇ ಗೆದ್ದಿದೆ. ಒಂದು ಬಾರಿಯೂ ಪಾಕ್ ಗೆ ಗೆಲುವಿನ ನಗು ಬೀರಲು ಸಾಧ್ಯವಾಗಿಲ್ಲ. ಆದ್ರೆ ಮಿನಿ ವಿಶ್ವಕಪ್‌ ಖ್ಯಾತಿಯ ಚಾಂಪಿಯನ್ಸ್ ಟ್ರೋಫಿಗೆ (Champions Trophy) ಬಂದ್ರೆ ಇಲ್ಲಿ ಫಲಿತಾಂಶ 40:60 ಇದೆ. ಇದನ್ನೂ ಓದಿ: ಕೊನೆ ಓವರ್‌ನಲ್ಲಿ ಹ್ಯಾರಿಸ್ ಹ್ಯಾಟ್ರಿಕ್‌ ವಿಕೆಟ್‌; ಡೆಲ್ಲಿ ಆಲೌಟ್‌ – ಯುಪಿಗೆ 33 ರನ್‌ಗಳ ಜಯ

    ಈವರೆಗೆ ಭಾರತ ಮತ್ತು ಪಾಕಿಸ್ತಾನ (Ind vs Pak) ತಂಡಗಳು ಪರಸ್ಪರ 5 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಭಾರತ ತಂಡ 2 ಬಾರಿ ಗೆದ್ದಿದ್ದರೆ, 3 ಬಾರಿ ಪಾಕಿಸ್ತಾನದ್ದೇ ಮೇಲುಗೈ. ಅದರಲ್ಲೂ ಒಂದು ಬಾರಿ ಅಂತೂ ಫೈನಲ್ ನಲ್ಲೇ ಭಾರತ ತಂಡವನ್ನು ಸೋಲಿಸಿರುವ ಹೆಗ್ಗಳಿಕೆ ಪಾಕಿಸ್ತಾನದ್ದು. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಫೆಬ್ರವರಿ 19ರಂದು ಚಾಲನೆ ಸಿಕ್ಕಿದ್ದು ಇಂದು ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಸಂದರ್ಭದಲ್ಲಿ 1998 ರಿಂದ 2017ರ ವರೆಗೆ ಇತ್ತಂಡಗಳ ನಡುವೆ ನಡೆದಿರುವ ಐದು ಮುಖಾಮುಖಿಗಳ ವಿವರ ಇಲ್ಲಿದೆ. ಇದನ್ನೂ ಓದಿ: ಆಂಗ್ಲರನ್ನು ಸದೆಬಡಿದ ಇಂಗ್ಲಿಸ್ – ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ!

    2004ರಲ್ಲಿ ಪಾಕ್‌ಗೆ ಮೊದಲ ಗೆಲುವಿನ ಕೇಕೆ
    ಇಂಗ್ಲೆಂಡ್‌ನ ಎಡ್ಜ್‌ಬಾಸ್ಟನ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಇನ್ಝಮಾಮುಲ್ ಹಕ್ ಅವರು ಫೀಲ್ಡಿಂಗ್ ಆಯ್ದುಕೊಂಡರು. ವೇಗಿಗಳಾದ ಶೊಯೇಬ್ ಅಖ್ತರ್ ಮತ್ತು ನವೀದ್ ಉಲ್ ಹಸನ್ ದಾಳಿಗೆ ತತ್ತರಿಸಿದ ಭಾರತ ತಂಡ 200 ರನ್ ಗಳಿಗೆ ಆಲೌಟ್ ಆಯಿತು. ನಾಯಕ ಸೌರವ್ ಗಂಗೂಲಿ (0), ವೀರೇಂದ್ರ ಸೆಹ್ವಾಗ್ (10), ವಿವಿಎಸ್ ಲಕ್ಷ್ಮಣ್(3) ಪಾಕ್ ಬೌಲಿಂಗ್ ಅನ್ನು ಎದುರಿಸಲಾಗದೆ ಬೇಗನೇ ಪೆವಿಲಿಯನ್ ಸೇರಿಕೊಂಡರು. ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ದ್ರಾವಿಡ್ (67) ಮತ್ತು ಮೊಹಮ್ಮದ್ ಕೈಫ್ (27) ನಿಧಾನಗತಿಯ ಬ್ಯಾಟಿಂಗ್ ನಡೆಸಿ ತಂಡವನ್ನು ಕುಸಿತದಿಂದ ತಪ್ಪಿಸಿದರೂ ರನ್ ರೇಟ್ ಮೇಲೆ ಹೊಡೆತ ಬಿತ್ತು.

    ಕೈಫ್ ವಿಕೆಟ್ ಪತನದ ಬಳಿಕ ಕ್ರೀಸಿಗೆ ಬಂದ ಯುವರಾಜ್ ಸಿಂಗ್ (0) ಬಂದ ವೇಗದಲ್ಲಿ ಪೆವಿಲಿಯನ್ ಗೆ ಮರಳಿದರೆ, ರೋಹನ್ ಗವಸ್ಕರ್ ಕ್ರೀಸಿನಲ್ಲಿ ಸುಮ್ಮನೇ ಸಮಯ ದೂಡಿದರು. ಅಪರೂಪಕ್ಕೆ ಬ್ಯಾಟ್ ಬೀಸುತ್ತಿದ್ದ ಅಜಿತ್ ಅಗರ್ಕರ್ ಅವರು 50 ಎಸೆತಗಳಿಂದ 47 ರನ್ ಗಳಿಸಿ ತಂಡದ ಮೊತ್ತ 200ರ ಗಡಿಗೆ ತಲುಪಲು ಕಾರಣವಾದರು. ಸಾಧಾರಣ ಮೊತ್ತವನ್ನು ಬೆಂಬತ್ತಿ ಹೊರಟ ಪಾಕಿಸ್ತಾನ ತಂಡ 27 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಾಗ ಭಾರತ ತಂಡ ಗೆಲುವಿನ ಕನಸು ಕಂಡಿತ್ತು. ಆದರೆ ಮೊಹಮ್ಮದ್ ಯೂಸುಫ್ ಅವರು ಅಜೇಯ 81 ರನ್‌ಗಳ ನೆರವಿನಿಂದ ಪಾಕಿಸ್ತಾನ ತಂಡ 49.2 ಓವರ್ ಗಳಲ್ಲಿ ಗುರಿ ತಲುಪಿತು. ಅಂತಿಮವಾಗಿ 3 ವಿಕೆಟ್‌ಗಳಿಂದ ಗೆದ್ದು ಬೀಗಿತು. ಇದು ಐಸಿಸಿ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಪ್ರಥಮ ವಿಜಯವಾಗಿದೆ.

    2009ರಲ್ಲೂ ಭಾರತ ವಿಫಲ
    ದಕ್ಷಿಣ ಆಫ್ರಿಕಾದಲ್ಲಿ ನಡೆದ ಭಾರತ vs ಪಾಕಿಸ್ತಾನ ಮುಖಾಮುಖಿಯಲ್ಲಿ ಭಾರತ ತಂಡ 54 ರನ್ ಗಳಿಂದ ಪರಾಭವ ಅನುಭವಿಸಿತು. ಟಾಸ್ ಗೆದ್ದ ಪಾಕ್ ನಾಯಕ ಯೂನಸ್ ಖಾನ್ ಬ್ಯಾಟಿಂಗ್ ಆಯ್ದುಕೊಂಡರು. ಶೊಯೇಬ್ ಮಲಿಕ್ ಅವರು ಅಮೋಘ ಶತಕ(128)ದ ಮತ್ತು ಮೊಹಮ್ಮದ್ ಯೂನುಸ್ ಅವರ ಅರ್ಧಶತಕ (87) ಗಳ ನೆರವಿನಿಂದ ಪಾಕಿಸ್ತಾನ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತು. ಆಶೀಶ್ ನೆಹ್ರಾ 4 ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: ಡಕೆಟ್‌, ರೂಟ್‌ ಶತಕದ ಜೊತೆಯಾಟ – ಗರಿಷ್ಠ ರನ್‌ ದಾಖಲೆ, ಆಸೀಸ್‌ ಗೆಲುವಿಗೆ 352 ರನ್‌ ಗುರಿ

    ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಸಚಿನ್ ವಿಕೆಟ್ ಬೇಗನೇ ಕಳೆದುಕೊಂಡರೂ ಗೌತಮ್ ಗಂಭೀರ್ (57) ಮತ್ತು ರಾಹುಲ್ ದ್ರಾವಿಡ್ (76) ಅವರು ತಂಡವನ್ನು ಆಧರಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ (46) ಅವರಿಗೆ ಸರಿಯಾದ ಬೆಂಬಲ ಸಿಗದ್ದರಿಂದ ಭಾರತ ತಂಡ ಅಂತಿಮವಾಗಿ 44.5 ಓವರ್ ಗಳಲ್ಲಿ 248 ರನ್ ಗೆ ಸರ್ವಪತನ ಕಂಡಿತು.

    2013ರಲ್ಲಿ ಭಾರತಕ್ಕೆ ಮೊದಲ ಗೆಲುವು
    ಎಡ್ಜ್‌ಬಾಸ್ಟನ್ ಮಳೆಯಿಂದ ತೊಂದರೆಗೀಡಾದ ಪಂದ್ಯದಲ್ಲಿ ಭಾರತ ತಂಡ ಡಕ್‌ವರ್ತ್ ಲೂಯಿಸ್ ನಿಯಮದಡಿ 8 ವಿಕೆಟ್ ಗಳ ಭರ್ಜರಿ ವಿಜಯ ಸಾಧಿಸಿತು. ಮಳೆಯಿಂದಾಗಿ 40 ಓವರ್ ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಪಾಕಿಸ್ತಾನ ತಂಡ ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ 39.4 ಓವರ್ ಗಳಲ್ಲಿ 165 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಭಾರತ ತಂಡ 19.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿತ್ತು. ಆಗ ಮಳೆ ಮುಂದುವರಿದ ಹಿನ್ನಲೆಯಲ್ಲಿ ಭಾರತವನ್ನು ವಿಜಯಿ ಎಂದು ಘೋಷಿಸಲಾಯಿತು.

    2017ರಲ್ಲಿ ಇತ್ತಂಡಗಳಿಗೂ ಬೇವು ಬೆಲ್ಲ
    ಈ ವರ್ಷ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಗುಂಪು ಹಂತದ ಪಂದ್ಯದಲ್ಲಿ ಭಾರತ ಭರ್ಜರಿ ವಿಜಯ ಸಾಧಿಸಿದರೆ ಫೈನಲ್ ನಲ್ಲಿ ಪಾಕಿಸ್ತಾನ ಗೆದ್ದು ಟ್ರೋಫಿ ಮೇಲೆ ಹಕ್ಕು ಸಾಧಿಸಿತು. ಎಡ್ಜ್‌ಬಾಸ್ಟನ್ ನಲ್ಲಿ ನಡೆದ ಬಿ-ಗ್ರೂಪ್ ಹಂತದ ಪಂದ್ಯದಲ್ಲಿ ಭಾರತ ತಂಡ ಡೆಕ್ ವರ್ತ್ ಲೂಯಿಸ್ ವಿಧಾನದಿಂದ 124 ರನ್‌ಗಳಿಂದ ಗೆದ್ದಿತು. ಮಳೆಯಿಂದಾಗಿ 48 ಓವರ್ ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಭಾರತ ತಂಡ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟಿತ್ತು. ರೋಹಿತ್ ಶರ್ಮಾ (91), ಶಿಖರ್ ಧವನ್ (68), ವಿರಾಟ್ ಕೊಹ್ಲಿ (81) ಮತ್ತು ಯುವರಾಜ್ ಸಿಂಗ್ (53) ಅವರ ಅರ್ಧಶತಕಗಳ ಸಹಾಯದಿಂದ ಭಾರತ ತಂಡ 3 ವಿಕೆಟ್ ನಷ್ಟಕ್ಕೆ 319 ರನ್ ಗಳನ್ನು ಕಲೆ ಹಾಕಿತು. ಇದಕ್ಕುತ್ತರವಾಗಿ ಪಾಕಿಸ್ತಾನ ಕೇವಲ 33.4 ಓವರ್ ಗಳಲ್ಲೇ 164 ರನ್ ಗಳಿಸುವಲ್ಲಿ ಸರ್ವಪತನ ಕಂಡಿತು.

    ದಿ ಓವಲ್ ನಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ 180 ರನ್‌ಗಳಿಂದ ಗೆದ್ದಿತು . ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಫಖರ್ ಜಮಾನ್ ಅವರ ಸ್ಫೋಟಕ 114 ರನ್ ನಿಂದಾಗಿ 4 ವಿಕೆಟ್ ನಷ್ಟಕ್ಕೆ 338 ರನ್ ಪೇರಿಸಿತು. ಅಜರ್ ಅಲಿ (59), ಮೊಹಮ್ಮದ್ ಹಫೀಝ್ (57) ರನ್ ಗಳಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಕೇವಲ 30.3 ಓವರ್ ಗಳಲ್ಲಿ 158 ರನ್ ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಇತಿಹಾಸ ನಿರ್ಮಿಸಿದ ಬೆನ್‌ ಡಕೆಟ್‌ – ಸಚಿನ್‌, ಗಂಗೂಲಿ ದಾಖಲೆಗಳು ನುಚ್ಚುನೂರು

  • ಪಾಕ್‌ ನೆಲದಲ್ಲಿ ಮೊಳಗಿದ ಭಾರತದ ರಾಷ್ಟ್ರಗೀತೆ – ಟ್ರೋಲ್‌ ಆಯ್ತು PCB

    ಪಾಕ್‌ ನೆಲದಲ್ಲಿ ಮೊಳಗಿದ ಭಾರತದ ರಾಷ್ಟ್ರಗೀತೆ – ಟ್ರೋಲ್‌ ಆಯ್ತು PCB

    ಲಾಹೋರ್: ಚಾಂಪಿಯನ್ಸ್‌ ಟ್ರೋಫಿಯ ಆಸ್ಟ್ರೇಲಿಯಾ ವರ್ಸಸ್‌ ಇಂಗ್ಲೆಂಡ್‌ ಪಂದ್ಯಕ್ಕೂ ಮುನ್ನ ಲಾಹೋರ್‌ನಲ್ಲಿ ಭಾರತದ ರಾಷ್ಟ್ರಗೀತೆ (Indian national anthem) ಮೊಳಗಿತು.

    2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮೆಗಾ ಪಂದ್ಯಕ್ಕೆ ಇನ್ನೂ ಒಂದು ದಿನ ಬಾಕಿ ಇದೆ. ಆದರೆ, ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ ಈಗಾಗಲೇ ಪಾಕ್‌ ನೆಲದಲ್ಲಿ ಮೊಳಗಿದೆ.

    ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಗ್ರೂಪ್ ಬಿ ಪಂದ್ಯ ನಡೆಯುತ್ತಿದೆ. ಮೊದಲು ಇಂಗ್ಲೆಂಡ್‌ನ ರಾಷ್ಟ್ರಗೀತೆ ನುಡಿಸಲಾಯಿತು. ನಂತರ ಆಸ್ಟ್ರೇಲಿಯಾದ ರಾಷ್ಟ್ರಗೀತೆ ಬದಲಿಗೆ ಭಾರತದ ರಾಷ್ಟ್ರಗೀತೆ ‘ಭಾರತ್ ಭಾಗ್ಯ ವಿಧಾತ’ ನುಡಿಸಲಾಯಿತು.

    ತಕ್ಷಣ ಆದನ್ನು ಶೀಘ್ರದಲ್ಲೇ ಸರಿಪಡಿಸಲಾಯಿತು. ಆದರೆ, ಈ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಟ್ರೋಲ್‌ಗೆ ಒಳಗಾಗಿದೆ.

  • Champions Trophy 2025 | ಜನವರಿ 12ರ ಒಳಗೆ ಟೀಂ ಇಂಡಿಯಾ ಪ್ರಕಟ

    Champions Trophy 2025 | ಜನವರಿ 12ರ ಒಳಗೆ ಟೀಂ ಇಂಡಿಯಾ ಪ್ರಕಟ

    ಮುಂಬೈ: ಭಾರೀ ಕುತೂಹಲ ಕೆರಳಿಸಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ (Champions Trophy 2025) ಇದೇ ಜನವರಿ 12ರ ಒಳಗೆ ಭಾರತ ತಂಡ (Team India) ಪ್ರಕಟಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

    ಈಗಾಗಲೇ ವೇಳಾಪಟ್ಟಿ ಪ್ರಕಟಿಸಿರುವ ಐಸಿಸಿ (ICC), ಜನವರಿ 12ರ ಒಳಗೆ ತಾತ್ಕಾಲಿಕ ತಂಡಗಳನ್ನು ಪ್ರಕಟಿಸಲು ಗಡುವು ನೀಡಿದೆ. ಆ ಬಳಿಕ ಸ್ಕ್ವಾಡ್‌ನಲ್ಲಿ ಬದಲಾವಣೆ ತರಲು ಫೆ.13ರ ವರೆಗೆ ಅವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಸ್ಕ್ವಾಡ್‌ಗೆ ಆಯ್ಕೆಯಾದವರು ಫಾರ್ಮ್‌ಗೆ ಹೊಂದಿಕೊಳ್ಳದಿದ್ದರೆ, ಅಭ್ಯಾಸದ ವೇಳೆ ಗಾಯದ ಸಮಸ್ಯೆಗೆ ತುತ್ತಾದರೆ, ಲೈನ್‌ ಅಪ್‌ ಸಮಸ್ಯೆಗಳಿದ್ದರೆ ಸರಿಪಡಿಸಿಕೊಳ್ಳುವುದಕ್ಕೆ ಫೆ.13ರ ವರೆಗೆ ಅವಕಾಶ ಇರಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಜ.12ರ ಒಳಗೆ ಭಾರತ ತಂಡವನ್ನು ಪ್ರಕಟಿಸಲಿದೆ.

    ಅಲ್ಲದೇ ಇದೇ ಜನವರಿ 22ರಿಂದ ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗೆ ಜನವರಿ 11ರ ಒಳಗೆ ಭಾರತ ತಂಡವನ್ನು ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ 2025 ರ ವೇಳಾಪಟ್ಟಿ ಪ್ರಕಟ; ಫೆ.23ರ ಭಾನುವಾರ ಭಾರತ-ಪಾಕ್‌ ಮುಖಾಮುಖಿ

    ಈ ಬಾರಿ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವ ಎಲೈಟ್ ಪಂದ್ಯಾವಳಿಯು ಫೆಬ್ರವರಿ 19 ರಂದು ಕರಾಚಿಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಮಾರ್ಚ್ 9 ರಂದು ಫೈನಲ್ ಪಂದ್ಯ ನಡೆಯಲಿದೆ. ಭಾರತವು ಫೆಬ್ರವರಿ 20 ರಂದು ಬಾಂಗ್ಲಾದೇಶ ತಂಡದ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ. ಫೆಬ್ರವರಿ 23 ರಂದು ದುಬೈನಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಈ ಬಾರಿ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.

    8 ಸ್ಪರ್ಧಾತ್ಮಕ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಪಾಕಿಸ್ತಾನ, ಭಾರತ, ನ್ಯೂಜಿಲೆಂಡ್, ಬಾಂಗ್ಲಾದೇಶ ತಂಡಗಳಿವೆ. ಬಿ-ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್ ಸೇರಿವೆ. ಇದನ್ನೂ ಓದಿ:  4 ರನ್‌ ಗಳಿಸಿ ವೈಭವ್‌ ವಿಶೇಷ ಸಾಧನೆ – 13ರ ಬಾಲಕನಿಗೆ ಹಿರಿಯ ಕ್ರಿಕೆಟಿಗರಿಂದ ಮೆಚ್ಚುಗೆ

  • ಚಾಂಪಿಯನ್ಸ್ ಟ್ರೋಫಿ 2025 ರ ವೇಳಾಪಟ್ಟಿ ಪ್ರಕಟ; ಫೆ.23ರ ಭಾನುವಾರ ಭಾರತ-ಪಾಕ್‌ ಮುಖಾಮುಖಿ

    ಚಾಂಪಿಯನ್ಸ್ ಟ್ರೋಫಿ 2025 ರ ವೇಳಾಪಟ್ಟಿ ಪ್ರಕಟ; ಫೆ.23ರ ಭಾನುವಾರ ಭಾರತ-ಪಾಕ್‌ ಮುಖಾಮುಖಿ

    ನವದೆಹಲಿ: ಬಹಳ ವಿಳಂಬದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಂಗಳವಾರ ಅಧಿಕೃತವಾಗಿ ಚಾಂಪಿಯನ್ಸ್ ಟ್ರೋಫಿ 2025 (Champions Trophy 2025) ವೇಳಾಪಟ್ಟಿಯನ್ನು ಪ್ರಕಟಿಸಿದೆ.

    ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗುತ್ತಿರುವ ಎಲೈಟ್ ಪಂದ್ಯಾವಳಿಯು ಫೆಬ್ರವರಿ 19 ರಂದು ಕರಾಚಿಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾಡೆಲ್‌ನಲ್ಲೇ ಆಟ – ತಟಸ್ಥ ತಾಣಗಳಲ್ಲಿ ಭಾರತದ ಪಂದ್ಯಗಳ ಆಯೋಜನೆ: ಖಚಿತಪಡಿಸಿದ ICC

    ಮಾರ್ಚ್ 9 ರಂದು ಫೈನಲ್ ಪಂದ್ಯ ನಡೆಯಲಿದೆ. ಭಾರತವು ಫೆಬ್ರವರಿ 20 ರಂದು ಬಾಂಗ್ಲಾದೇಶ ತಂಡದ ವಿರುದ್ಧ ಚಾಂಪಿಯನ್ಸ್ ಟ್ರೋಫಿಯ ತನ್ನ ಮೊದಲ ಪಂದ್ಯವನ್ನು ದುಬೈನಲ್ಲಿ ಆಡಲಿದೆ. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.

    ಎಂಟು ಸ್ಪರ್ಧಾತ್ಮಕ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಪಾಕಿಸ್ತಾನ, ಭಾರತ, ನ್ಯೂಜಿಲೆಂಡ್, ಬಾಂಗ್ಲಾದೇಶ ತಂಡಗಳಿವೆ. ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್ ಸೇರಿವೆ. ಭಾರತವು ಫೆಬ್ರವರಿ 23 ರಂದು ದುಬೈನಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಇದನ್ನೂ ಓದಿ: ಷರತ್ತು ವಿಧಿಸಿ ಹೈಬ್ರಿಡ್‌ ಮಾದರಿಗೆ ಪಾಕ್‌ ಒಪ್ಪಿಗೆ – ದುಬೈನಲ್ಲಿ ಭಾರತದ ಪಂದ್ಯ

    ಎಂಟು ತಂಡಗಳ ಟೂರ್ನಿಯಲ್ಲಿ 15 ಪಂದ್ಯಗಳು ನಡೆಯಲಿದ್ದು, ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿವೆ ಎಂದು ಐಸಿಸಿ ತಿಳಿಸಿದೆ. ಪಾಕಿಸ್ತಾನದಲ್ಲಿ ರಾವಲ್ಪಿಂಡಿ, ಲಾಹೋರ್ ಮತ್ತು ಕರಾಚಿ ಪಂದ್ಯಾವಳಿಗಳು ನಡೆಯಲಿವೆ.

    ಭಾರತ ಫೈನಲ್‌ಗೆ ಅರ್ಹತೆ ಪಡಯದೇ ಇದ್ದರೆ, ಮಾರ್ಚ್ 9ರ ಪಂದ್ಯ ಲಾಹೋರ್‌ನಲ್ಲಿ ನಡೆಯಲಿದೆ. ಒಂದು ವೇಳೆ, ಅರ್ಹತೆ ಪಡೆದರೆ ದುಬೈನಲ್ಲಿ ಪಂದ್ಯ ಫೈನಲ್‌ ನಡೆಯಲಿದೆ. ಸೆಮಿಫೈನಲ್ ಮತ್ತು ಫೈನಲ್ ಎರಡೂ ಮೀಸಲು ದಿನಗಳನ್ನು ಹೊಂದಿರುತ್ತದೆ. ಭಾರತವನ್ನು ಒಳಗೊಂಡ ಮೂರು ಗುಂಪು ಪಂದ್ಯಗಳು ಮತ್ತು ಮೊದಲ ಸೆಮಿಫೈನಲ್ ಪಂದ್ಯ ದುಬೈನಲ್ಲಿ ನಡೆಯಲಿದೆ. ಇದನ್ನೂ ಓದಿ: ಭಾರತಕ್ಕೂ ಮೊದಲೇ ಚಾಂಪಿಯನ್ಸ್‌ ಟ್ರೋಫಿ ಬಾಯ್ಕಾಟ್‌ ಮಾಡ್ಬೇಕು – ಪಾಕ್ ಹೊಸ ಕ್ಯಾತೆ

  • ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾಡೆಲ್‌ನಲ್ಲೇ ಆಟ – ತಟಸ್ಥ ತಾಣಗಳಲ್ಲಿ ಭಾರತದ ಪಂದ್ಯಗಳ ಆಯೋಜನೆ: ಖಚಿತಪಡಿಸಿದ ICC

    ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾಡೆಲ್‌ನಲ್ಲೇ ಆಟ – ತಟಸ್ಥ ತಾಣಗಳಲ್ಲಿ ಭಾರತದ ಪಂದ್ಯಗಳ ಆಯೋಜನೆ: ಖಚಿತಪಡಿಸಿದ ICC

    ಮುಂಬೈ: ICC ಚಾಂಪಿಯನ್ಸ್ ಟ್ರೋಫಿ 2025 ರ ಪಂದ್ಯಗಳ ಆಯೋಜನೆ ಸ್ಥಳದ ಕುರಿತು ಎದ್ದಿದ್ದ ಗೊಂದಲ ಕೊನೆಗೊಂಡಿದೆ. ತಿಂಗಳ ವಿಳಂಬದ ನಂತರ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಂತಿಮವಾಗಿ ಸ್ಥಳಗಳನ್ನು ಅಧಿಕೃತವಾಗಿ ಘೋಷಿಸಿದೆ.

    ICC ಪುರುಷರ ಚಾಂಪಿಯನ್ಸ್ ಟ್ರೋಫಿ 2025 ಅನ್ನು ಪಾಕಿಸ್ತಾನ ಮತ್ತು ತಟಸ್ಥ ಸ್ಥಳದಲ್ಲಿ ಆಯೋಜಿಸಲಾಗುವುದು ಎಂದು ICC ಹೇಳಿಕೆಯಲ್ಲಿ ತಿಳಿಸಿದೆ. ಇದರರ್ಥ ಭಾರತವು ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡುತ್ತದೆ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಲಾಗುವುದು ಎಂದು ಜಯ್ ಶಾ ನೇತೃತ್ವದ ಮಂಡಳಿ ಘೋಷಿಸಿದೆ.

    2024-2027 ರ ಐಸಿಸಿ ಈವೆಂಟ್‌ಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲಾಗುವುದು ಎಂದು ಐಸಿಸಿ ಮಂಡಳಿಯು ಇಂದು ದೃಢಪಡಿಸಿದೆ.

  • ವಿಶ್ವಕಪ್‌ನ ಟಾಪ್‌ 7 ತಂಡಗಳು 2025 ರ ಚಾಂಪಿಯನ್ಸ್‌ ಟ್ರೋಫಿಗೆ – ಪಾಕಿಸ್ತಾನ ಡೈರೆಕ್ಟ್‌ ಎಂಟ್ರಿ

    ವಿಶ್ವಕಪ್‌ನ ಟಾಪ್‌ 7 ತಂಡಗಳು 2025 ರ ಚಾಂಪಿಯನ್ಸ್‌ ಟ್ರೋಫಿಗೆ – ಪಾಕಿಸ್ತಾನ ಡೈರೆಕ್ಟ್‌ ಎಂಟ್ರಿ

    – ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಟ್ರೋಫಿಯಿಂದ ಹೊರಗುಳಿಯುತ್ತಾ?

    ನವದೆಹಲಿ: ಈ ಬಾರಿಯ ಏಕದಿನ ವಿಶ್ವಕಪ್‌ನ (World Cup 2023) ಲೀಗ್‌ ಹಂತದಲ್ಲಿ ಅಗ್ರ 7 ಸ್ಥಾನ ಪಡೆಯುವ ತಂಡಗಳು 2025 ರ ಚಾಂಪಿಯನ್ಸ್‌ ಟ್ರೋಫಿಗೆ (2025 Champions Trophy) ಅರ್ಹತೆ ಪಡೆಯಲಿವೆ ಎಂದು ಐಸಿಸಿ ತಿಳಿಸಿದೆ.

    2025 ರ ಚಾಂಪಿಯನ್ಸ್‌ ಟ್ರೋಫಿ ಆತಿಥ್ಯವನ್ನು ಪಾಕಿಸ್ತಾನ (Pakistan) ವಹಿಸಲಿದೆ. ಹೀಗಾಗಿ ಟ್ರೋಫಿಗೆ ಪಾಕಿಸ್ತಾನ ನೇರ ಪ್ರವೇಶ ಪಡೆಯಲಿದೆ. ಭಾರತದಲ್ಲಿ ಈಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಲೀಗ್‌ ಹಂತದ ಮುಕ್ತಾಯಕ್ಕೆ ಅಗ್ರ 7 ಸ್ಥಾನ ಪಡೆಯುವ ತಂಡಗಳು ಚಾಂಪಿಯನ್ಸ್‌ ಟ್ರೋಫಿ ಟಿಕೆಟ್‌ ಪಡೆಯಲಿವೆ. ಇದನ್ನೂ ಓದಿ: ಇಂಗ್ಲೆಂಡ್‌ ವಿರುದ್ಧ 100 ರನ್‌ಗಳ ಭರ್ಜರಿ ಜಯ – 20 ವರ್ಷಗಳ ಬಳಿಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ

    ಒಂದು ವೇಳೆ ಈ ಟೂರ್ನಿಯಲ್ಲಿ ಪಾಕಿಸ್ತಾನ ಅಗ್ರ 7 ತಂಡಗಳ ಸಾಲಿನಲ್ಲಿ ಸ್ಥಾನ ಪಡೆದರೆ, ಆಗ 8 ನೇ ಸ್ಥಾನ ಗಳಿಸುವ ತಂಡಕ್ಕೂ ಟ್ರೋಫಿಗೆ ಅರ್ಹತೆ ಸಿಗಲಿದೆ. 2025 ಚಾಂಪಿಯನ್ಸ್ ಟ್ರೋಫಿಗೆ ಅರ್ಹತಾ ಮಾದರಿಯನ್ನು 2021 ರಲ್ಲೇ ICC ಮಂಡಳಿಯು ಅನುಮೋದಿಸಿತ್ತು. ಆದರೆ ಹಲವು ತಂಡಗಳಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ.

    ಟ್ರೋಫಿಯಿಂದ ಹೊರಗುಳಿಯುತ್ತಾ ಇಂಗ್ಲೆಂಡ್?‌
    ವಿಶ್ವಕಪ್‌ನ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಈ ಬಾರಿಯ ಟೂರ್ನಿಯಲ್ಲಿ ಅಂಕಪಟ್ಟಿಯಲ್ಲಿ ಹತ್ತನೇ ಸ್ಥಾನಕ್ಕೆ ಕುಸಿದಿದೆ. ಅಗ್ರ ಏಳು ತಂಡಗಳಲ್ಲಿ ಸ್ಥಾನ ಪಡೆಯಲು ವಿಫಲವಾದರೆ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯುವ ಅಪಾಯವಿದೆ. ಇದನ್ನೂ ಓದಿ: ಡಚ್ಚರ ವಿರುದ್ಧ ಬಾಂಗ್ಲಾಕ್ಕೆ ಹೀನಾಯ ಸೋಲು – ತನ್ನ ಶೂನಿಂದ ತಾನೇ ಹೊಡೆದುಕೊಂಡ ಅಭಿಮಾನಿ

    2025 ರ ಚಾಂಪಿಯನ್ಸ್ ಟ್ರೋಫಿಯ ಅರ್ಹತಾ ವಿಧಾನವು ಪ್ರಪಂಚದಾದ್ಯಂತದ ಅನೇಕ ಕ್ರಿಕೆಟ್ ಮಂಡಳಿಗಳ ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾದ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ತಂಡಗಳು ತಮ್ಮ ಸ್ಥಾನಕ್ಕಾಗಿ ಹೋರಾಡಲು ಸಾಧ್ಯವಾಗುತ್ತದೆ. ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ವಿಶ್ವಕಪ್ ಲೀಗ್‌ ಹಂತದ ಅಗ್ರ 7 ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾದರೆ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆಯಂತಹ ಪೂರ್ಣ ಸದಸ್ಯ ರಾಷ್ಟ್ರಗಳ ಭವಿಷ್ಯವು ಪಂದ್ಯಾವಳಿಯಿಂದ ಹೊರಗುಳಿಯುವ ಸಾಧ್ಯತೆ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]