Tag: ಚಹಾ

  • ಇರಾನ್‌ – ಇಸ್ರೇಲ್‌ ಯುದ್ಧ | ಭಾರತದ ಚಹಾ ಉದ್ಯಮಕ್ಕೆ ಹೊಡೆತ

    ಇರಾನ್‌ – ಇಸ್ರೇಲ್‌ ಯುದ್ಧ | ಭಾರತದ ಚಹಾ ಉದ್ಯಮಕ್ಕೆ ಹೊಡೆತ

    ನವದೆಹಲಿ: ಇರಾನ್ – ಇಸ್ರೇಲ್ ಯುದ್ಧದಿಂದ (Iran Israel War) ಭಾರತ ನಷ್ಟ ಅನುಭವಿಸುತ್ತಿದೆ. ಕಚ್ಚಾ ತೈಲ ಹಾಗೂ ಅಡುಗೆ ಎಣ್ಣೆಯಲ್ಲಿ ಒಂದಿಷ್ಟು ಸಮಸ್ಯೆ ಉಂಟಾದರೆ ಭಾರತದಿಂದ (India) ರಫ್ತಾಗುತ್ತಿದ್ದ ಚಹಾ(Tea) ರಫ್ತು ಈಗ ಸ್ಥಗಿತಗೊಂಡಿದೆ.

    ರಷ್ಯಾ ರಷ್ಯಾ ನಂತರ ಎರಡನೇ ಅತೀ ಹೆಚ್ಚು ಚಹಾ ಇರಾನ್‌ಗೆ ಭಾರತದಿಂದ ಹೋಗುತ್ತಿತ್ತು. ಈಗ ಇರಾನ್ ಇಸ್ರೇಲ್ ಯುದ್ಧದಿಂದಾಗಿ ರಫ್ತು ನಿಂತಿದೆ. 2024 ರಲ್ಲಿ 31 ಮಿಲಿಯನ್ ಕೆಜಿ ಚಹಾವನ್ನು ಇರಾನ್‌ಗೆ ಭಾರತ ರಫ್ತು ಮಾಡಿತ್ತು. ಈ ವರ್ಷ ಹೆಚ್ಚಿನ ರಫ್ತು ಮಾಡುವ ಸಾಧ್ಯತೆ ಇತ್ತು. ಆದರೆ ದಿಢೀರ್‌ ಬೆಳವಣಿಗೆಯಿಂದ ರಫ್ತು ಸ್ಥಗಿತವಾಗಿದೆ. ಇದನ್ನೂ ಓದಿ: ಟ್ರಂಪ್‌ಗೆ ಎಚ್ಚರಿಕೆ ಕೊಟ್ಟು ಆತಂಕ ಹೊರಹಾಕಿದ ಮುನೀರ್‌

     

    ಮುಂಬೈ ವಿಮಾನ ನಿಲ್ದಾಣದಲ್ಲಿ ರಫ್ತಾಗಬೇಕಿದ್ದ ಚಹಾ ನಿಂತುಕೊಂಡಿದೆ. ಇರಾನ್‌ನಲ್ಲಿರುವ ಖರೀದಿದಾರರು ಸಹ ಟೀ ಆಮದು ಮಾಡಿಸಿಕೊಳ್ಳಬೇಕಾ? ಬೇಡವಾ ಎಂಬ ಗೊಂದಲದಲ್ಲೇ ಇದ್ದು ಯಾವುದೇ ರೀತಿ ಮೊತ್ತವನ್ನು ಸಹ ಕಳುಹಿಸುತ್ತಿಲ್ಲ. ಇದನ್ನೂ ಓದಿ: ಪಾಕಿಸ್ತಾನಕ್ಕೆ 5ನೇ ತಲೆಮಾರಿನ 40 ಸ್ಟೆಲ್ತ್ ಫೈಟರ್ ಜೆಟ್‌ ಪೂರೈಸಲು ಚೀನಾ ಮೆಗಾ ಡೀಲ್‌

    2024 ರಲ್ಲಿ ಭಾರತ ಒಟ್ಟು 7,111 ಕೋಟಿ ರೂ. ಮೌಲ್ಯದ 255 ಮಿಲಿಯನ್ ಕೆಜಿ ಚಹಾವನ್ನು ರಫ್ತು ಮಾಡಿದೆ. ಇದರಲ್ಲಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳವು 4,833 ಕೋಟಿ ರೂ. ಮೌಲ್ಯದ 154.81 ಮಿಲಿಯನ್ ಕೆಜಿ ರಫ್ತು ಮಾಡಿದರೆ ದಕ್ಷಿಣ ಭಾರತದಿಂದ 2,278 ಕೋಟಿ ರೂ. ಮೌಲ್ಯದ 99.86 ಮಿಲಿಯನ್ ಕೆಜಿ ರಫ್ತು ಮಾಡಿದೆ. ಈ ಒಟ್ಟು ಉತ್ಪಾದನೆಯಲ್ಲಿ ಇರಾನ್‌ಗೆ ರಫ್ತಾಗುವ ಒಟ್ಟು ಟೀಯಲ್ಲಿ ಅಸ್ಸಾಂನಿಂದ ಶೇ.80 ರಷ್ಟು, ಬಂಗಾಳದಿಂದ ಶೇ.20 ರಷ್ಟು ರಫ್ತಾಗುತ್ತದೆ.

    2022 ರಲ್ಲಿ 22 ಮಿಲಿಯನ್‌ ಕೆಜಿ, 2023 ರಲ್ಲಿ 5.9 ಮಿಲಿಯನ್‌ ಕೆಜಿ, 2024 ರಲ್ಲಿ 31 ಮಿಲಿಯನ್‌ ಕೆಜಿ ಚಹಾವನ್ನು ಭಾರತ ಇರಾನ್‌ಗೆ ರಫ್ತು ಮಾಡಿದೆ.

  • ಅತ್ತೆ ಮನೆ ಮುಂದೆ ಅಳಿಯನ ಟೀ ಅಂಗಡಿ – ಕೈಗೆ ಕೋಳ ಧರಿಸಿ ಚಹಾ ಮಾರಾಟ

    ಅತ್ತೆ ಮನೆ ಮುಂದೆ ಅಳಿಯನ ಟೀ ಅಂಗಡಿ – ಕೈಗೆ ಕೋಳ ಧರಿಸಿ ಚಹಾ ಮಾರಾಟ

    -ಅನ್ಯಾಯದ ವಿರುದ್ಧ ವಿಶಿಷ್ಟ ರೀತಿಯ ಪ್ರತಿಭಟನೆ 

    ಜೈಪುರ: ಪತ್ನಿ ಮತ್ತು ಅತ್ತೆ ಕಿರುಕುಳಕ್ಕೆ ಬೇಸತ್ತು ರಾಜಸ್ಥಾನದ ಯುವಕ ಅತ್ತೆ ಮನೆ ಮುಂದೆ ಠಿಕಾಣಿ ಹೂಡಿದ್ದಾರೆ. ಬರೀ ಠಿಕಾಣಿ ಹೂಡಿರೋದಷ್ಟೆ ಅಲ್ಲ, ಅತ್ತೆ ಮನೆ ಮುಂದೆ ಟೀ ಸ್ಟಾಲ್ (Tea Stall) ಇಟ್ಟಿದ್ದಾರೆ. ಟೀ ಅಂಗಡಿಗೆ `498 ಎ’ ಟೀ ಕೆಫೆ ಎಂದು ಹೆಸರಿಟ್ಟಿದ್ದಾರೆ. ವಿಶೇಷವೆಂದರೆ ಇವರು ಕೈಗೆ ಕೋಳ ಧರಿಸಿ ಚಹಾ ಮಾಡುತ್ತಾರೆ. ಇದರ ಹಿಂದೆ ಬಹಳ ಸ್ವಾರಸ್ಯಕರ ಹಾಗೂ ನೋವಿನ ಕಥೆ ಇದೆ.

    ಕೃಷ್ಣಕುಮಾರ್ ರಾಜಸ್ಥಾನದ ನೀಮುಚ್ ಜಿಲ್ಲೆಯ ಅಥಾನಾ ಪ್ರದೇಶದ ನಿವಾಸಿ. ನಾನು ಜುಲೈ 6, 2018 ರಂದು ಮೀನಾಕ್ಷಿ ಎಂಬವರನ್ನು ಮದುವೆಯಾದೆ. ಇಬ್ಬರೂ ಒಟ್ಟಿಗೆ ಜೇನುಸಾಕಣೆಯನ್ನು ಪ್ರಾರಂಭಿಸಿದೆವು. ಕೆಲ ದಿನಗಳ ಬಳಿಕ ಪತ್ನಿ ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾಳೆ. ವರದಕ್ಷಿಣೆ ಕಿರುಕುಳ, ಖರ್ಚುಗಳಿಗೆ ಬೇಡಿಕೆ (ಸೆಕ್ಷನ್ 125) ಸುಳ್ಳು ಪ್ರಕರಣ ದಾಖಲಿಸಿ, 3 ವರ್ಷದಿಂದ ಕೋರ್ಟ್‌ಗೆ ಅಲೆಯುವಂತಾಗಿದೆ. ಇದರ ವಿರುದ್ಧ ಹೋರಾಟ ಮಾಡುವ ಸಲುವಾಗಿ ಈ ರೀತಿ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ಕೃಷ್ಣಕುಮಾರ್‌ ತಿಳಿಸಿದ್ದಾರೆ.

    ನಾನು ನ್ಯಾಯಾಲಯಕ್ಕೆ ಹೋದಾಗಲೆಲ್ಲಾ, ನನಗೆ ದಿನಾಂಕದ ನಂತರ ದಿನಾಂಕ ಸಿಗುತ್ತದೆ. ನನ್ನ ವೃದ್ಧ ತಾಯಿ ನನ್ನೊಂದಿಗಿದ್ದಾರೆ. ಹೀಗಾಗಿ ನನ್ನ ಅತ್ತೆ ಮನೆ ಮುಂದೆ ಅಂದ್ರೆ ಬರಾನ್ ಜಿಲ್ಲೆಯ ಅಂತಾ ಪಟ್ಟಣದಲ್ಲಿ, ಕೆಕೆ ಧಕಾಡ್ ಎಂಬ ಅಂಗಡಿ ಇದೆ. ಆ ಅಂಗಡಿಯಲ್ಲಿ `498 ಎ’ ಟೀ ಕೆಫೆ ಬ್ಯಾನರ್ ಹಾಕಿದ್ದೇನೆ. ವರದಕ್ಷಿಣೆ ಕಿರುಕುಳಕ್ಕೆ ಹಾಕಿರುವ ಸೆಕ್ಷನ್ ‘498 ಎ’ ಅನ್ನೇ ನನ್ನ ಟೀ ಅಂಗಡಿಗೆ ಹೆಸರಿಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

  • ಕೊಡಗಿನಲ್ಲಿದೆ ರತನ್ ಟಾಟಾ ಒಡೆತನದ ಸಾವಿರಾರು ಎಕರೆ ಕಾಫಿ, ಚಹಾ ತೋಟ!

    ಕೊಡಗಿನಲ್ಲಿದೆ ರತನ್ ಟಾಟಾ ಒಡೆತನದ ಸಾವಿರಾರು ಎಕರೆ ಕಾಫಿ, ಚಹಾ ತೋಟ!

    ಮಡಿಕೇರಿ: ಖ್ಯಾತ ಉದ್ಯಮಿ, ಟಾಟಾ ಸಂಸ್ಥೆಯ ಮುಖ್ಯಸ್ಥ ರತನ್ ಟಾಟಾ (Ratan Tata) ನಿಧನರಾಗಿದ್ದಾರೆ. ಕೊಡಗಿನಲ್ಲಿ (Kodagu) ರತನ್ ಟಾಟಾ ಅವರ ಒಡೆತನದಲ್ಲಿ ಸಾವಿರ ಎಕರೆ ಕಾಫಿ ಹಾಗೂ ಚಹಾ ತೋಟವಿದೆ.

    ಪ್ರಸಿದ್ಧ ಟಾಟಾ ಸಂಸ್ಥೆ ಕೊಡಗು ಸೇರಿ ಹಾಸನ, ಚಿಕ್ಕಮಗಳೂರು, ಪಕ್ಕದ ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ಸುಮಾರು 33 ಸಾವಿರ ಎಕರೆ ಕೃಷಿ ಭೂಮಿ ಹೊಂದಿದ್ದು, ಇಲ್ಲಿ ಕಾಫಿ ಹಾಗೂ ಚಹಾ ಬೆಳೆಯನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಇಲ್ಲಿ ಸಾವಿರಾರು ಮಂದಿ ಕೆಲಸ ಮಾಡಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಹತ್ತರ ಬದಲಾವಣೆ: ಜೈಲನ್ನು 3 ವಿಭಾಗ ಮಾಡಲಿರುವ ಗೃಹ ಇಲಾಖೆ

    ಟಾಟಾ ಕಾಫಿ ಸಂಸ್ಥೆ ಟಾಟಾ ಸಮೂಹದ ಒಂದು ಭಾಗ. ಟಾಟಾ ಕಾಫಿ ವಿಶ್ವದ ಅತಿದೊಡ್ಡ ಸಮಗ್ರ ಕಾಫಿ ಕೃಷಿ ಮತ್ತು ಸಂಸ್ಕರಣಾ ಕಂಪನಿಗಳಲ್ಲಿ ಒಂದಾಗಿದೆ. ಭಾರತೀಯ ಮೂಲದ ಕಾಳು ಮೆಣಸು ಉತ್ಪಾದಿಸುವ ಅತಿದೊಡ್ಡ ಸಂಸ್ಥೆಯಾಗಿದೆ. ಕನ್ಸಲ್ಟೆಂಟ್ ಕಾಫಿ ಸಂಸ್ಥೆಯೊಂದಿಗೆ 2000 ಇಸವಿಯಲ್ಲಿ ಕೊಡಗು ಸೇರಿ ಹಲವು ಕಡೆ ಟಾಟಾ ಸಂಸ್ಥೆ ಕಾಫಿ ತೋಟವನ್ನು ಖರೀದಿಸಿತ್ತು.

    ಕೊಡಗಿನಲ್ಲಿ ಸುಮಾರು 13 ಕಾಫಿ ತೋಟಗಳನ್ನು ಹೊಂದಿದ್ದು, 18 ಸಾವಿರ ಎಕರೆ ಜಮೀನನ್ನು ಸಂಸ್ಥೆ ಹೊಂದಿದೆ ಎನ್ನಲಾಗುತ್ತಿದೆ. ಟಾಟಾ ಸಂಸ್ಥೆಯಿಂದ ಜಿಲ್ಲೆಯಲ್ಲಿ ಅರೇಬಿಕಾ ಹಾಗೂ ರೊಬೆಸ್ಟಾ ಕಾಫಿಯನ್ನು ಬೆಳೆಯಲಾಗುತ್ತಿದ್ದು, ಟಾಟಾ ಕಾಫಿಯ ಅರೇಬಿಕಾ ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಬೇಡಿಕೆಯಿದೆ.

    ಕುಶಾಲನಗರದಲ್ಲಿ ಕಾಫಿ ಕ್ಯೂರಿಂಗ್ ಮಾಡಲಾಗುತ್ತಿದ್ದು, ಜಿಲ್ಲೆಯ ವಿವಿಧೆಡೆ ಕೊಯ್ಲು ಮಾಡಿದ ಕಾಫಿಯನ್ನು ಇಲ್ಲಿ ಕ್ಯೂರಿಂಗ್ ಮಾಡಲಾಗುತ್ತದೆ. ಟಾಟಾ ಕಾಫಿ ತೋಟದಲ್ಲಿ ಗೆಸ್ಟ್ ಹೌಸ್ ಕೂಡ ಇದೆ. ಇನ್ನೂ ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿಯಲ್ಲಿರುವ ಟೀ ಎಸ್ಟೇಟ್ ಸರ್ಕಾರದಿಂದ ಲೀಸ್‌ಗೆ ಪಡೆಯಲಾಗಿದೆ. ಟಾಟಾ ಕಾಫಿಯಲ್ಲಿ ಕೂರ್ಗ್ ಫೌಂಡೇಷನ್ ಸ್ಥಾಪನೆ ಮಾಡಲಾಗಿದ್ದು, ಸಿಆರ್‌ಎಸ್ ಫಂಡ್ ಮೂಲಕ ಆರೋಗ್ಯ ಶಿಬಿರ ಸೇರಿ ಹಲವು ಚಟುವಟಿಕೆ ನಡೆಸಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ರತನ್ ಟಾಟಾ ತಮ್ಮದೇ ಆದ ಪಾಲುದಾರ ಟಾಟಾ ಕಾಫಿ ಸಂಸ್ಥೆಯ ಸಾವಿರಾರು ಎಕರೆ ಕಾಫಿ ತೋಟವನ್ನು ಹೊಂದಿದ್ದರೂ, ತಮ್ಮ ಸಂಸ್ಥೆಗೆ ಯಾವತ್ತೂ ಭೇಟಿ ನೀಡಿರಲಿಲ್ಲ.ಇದನ್ನೂ ಓದಿ: ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಟೀಂ ಇಂಡಿಯಾ ವೇಗಿ ಸಿರಾಜ್‌

  • ಉಜ್ವಲಾ ಯೋಜನೆಯ 10ನೇ ಕೋಟಿ ಫಲಾನುಭವಿ ಮನೆಯಲ್ಲಿ ಚಹಾ ಸವಿದ ಮೋದಿ

    ಉಜ್ವಲಾ ಯೋಜನೆಯ 10ನೇ ಕೋಟಿ ಫಲಾನುಭವಿ ಮನೆಯಲ್ಲಿ ಚಹಾ ಸವಿದ ಮೋದಿ

    ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಅಯೋಧ್ಯೆಗೆ (Ayodhya) ಭೇಟಿ ನೀಡಿದ ಸಂದರ್ಭ ಉಜ್ವಲಾ ಯೋಜನೆಯ (Ujwala Yojana) 10ನೇ ಕೋಟಿ ಫಲಾನುಭವಿ ಮಹಿಳೆಯೊಬ್ಬರ ಮನೆಗೆ ಭೇಟಿ ನೀಡಿ ಚಹಾ (Tea) ಸವಿದಿದ್ದಾರೆ.

    ಮೀರಾ ಮಾಂಝಿ, ಪ್ರಧಾನಿ ಮೋದಿಗೆ ಚಹಾ ನೀಡಿ ಸತ್ಕರಿಸಿದ ಮಹಿಳೆ. ಇವರು ತನ್ನ ಪತಿ ಮತ್ತು ಅತ್ತೆಯೊಂದಿಗೆ ಅಯೋಧ್ಯೆಯಲ್ಲಿ ವಾಸಿಸುತ್ತಿದ್ದು, ಉಜ್ವಲಾ ಯೋಜನೆಯ ಫಲಾನುಭವಿಯಾಗಿದ್ದಾರೆ. ಮೋದಿ ತನ್ನ ಮನೆಗೆ ಭೇಟಿ ನೀಡಿದ ಸಂದರ್ಭ ಮೀರಾ ಭಾವುಕಳಾಗಿ, ಪ್ರಧಾನಿ ಆಗಮನದಿಂದ ತನಗೆ ತುಂಬಾ ಸಂತೋಷವಾಗಿದೆ. ದೇವರು ನನ್ನ ಮನೆಗೆ ಈ ರೀತಿಯಾಗಿ ಭೇಟಿ ನೀಡುತ್ತಾನೆ ಎಂದು ನಾನು ಊಹಿಸಿರಲಿಲ್ಲ. ನನ್ನ ಸಂತೋಷಕ್ಕೆ ಪಾರವೇ ಇಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನೆಲದ ಕಾನೂನು ಎಲ್ಲರಿಗೂ ಒಂದೆ: ಪ್ರತಾಪ್ ಸಿಂಹ ಸಹೋದರನ ಬಂಧನಕ್ಕೆ ಈಶ್ವರ್ ಖಂಡ್ರೆ ಪ್ರತಿಕ್ರಿಯೆ

    ಈ ವೇಳೆ ಮೋದಿ ಉಜ್ವಲಾ ಯೋಜನೆಯಡಿ ದೊರೆಯುತ್ತಿರುವ ಸೌಲಭ್ಯಗಳ ಕುರಿತು ಮಹಿಳೆ ಬಳಿ ವಿಚಾರಿಸಿದರು. ಅಲ್ಲದೇ ಜನವರಿ 22ರಂದು ನಡೆಯಲಿರುವ ರಾಮಮಂದಿರ (Ram Mandir) ಉದ್ಘಾಟನಾ ಕಾರ್ಯಕ್ರಮಕ್ಕೆ ಮಹಿಳೆ ಮತ್ತು ಆಕೆಯ ಕುಟುಂಬವನ್ನು ಆಹ್ವಾನಿಸಿದರು. ಇದನ್ನೂ ಓದಿ: ಸಲಹೆಗಾರರನ್ನು ನೇಮಕ ಮಾಡಿಕೊಂಡ ಮುಖ್ಯಮಂತ್ರಿಗೆ ಹ್ಯಾಟ್ಸಾಫ್‌: ಹೆಚ್‌ಡಿಕೆ ವ್ಯಂಗ್ಯ‌

    ಜನವರಿ 22ಕ್ಕೆ ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಆದರೆ ಅದಕ್ಕೂ ಮುನ್ನ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಹೊಸ ವಿಮಾನ ನಿಲ್ದಾಣ, ಅಭಿವೃದ್ಧಿಗೊಂಡಿರುವ ರೈಲು ನಿಲ್ದಾಣವನ್ನೂ ಮೋದಿ ಉದ್ಘಾಟಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರಿಗೆ ಕಾಣಿಕೆ ಮೇಲೆ ಕಾಣಿಕೆ ಕೊಡ್ತಿದೆ: ಅಶೋಕ್ ವಾಗ್ದಾಳಿ

    ಮಾತ್ರವಲ್ಲದೇ 11 ಸಾವಿರ ಕೋಟಿ ರೂ. ಮೌಲ್ಯದ ಅಯೋಧ್ಯೆ ಅಭಿವೃದ್ಧಿ ಕಾಮಗಾರಿ ಹಾಗೂ ಉತ್ತರ ಪ್ರದೇಶದ 4,600 ಕೋಟಿ ರೂ.ಗಳಷ್ಟು ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಿದ್ದಾರೆ. ಇದರಲ್ಲಿ ರಸ್ತೆ, ಹೆದ್ದಾರಿ, ವಿಮಾನ, ರೈಲ್ವೇ ಸೇರಿದಂತೆ ಮೂಲಭೂತ ಸೌಕರ್ಯಗಳ ಯೋಜನೆಗಳು ಒಳಗೊಂಡಿವೆ. ವಿಶೇಷವೆಂದರೆ ಇದೇ ದಿನ 6 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹಾಗೂ 2 ಅಮೃತ್ ಭಾರತ್ ರೈಲುಗಳಿಗೂ ಪ್ರಧಾನಿ ಹಸಿರು ನಿಶಾನೆ ತೋರಿದ್ದಾರೆ. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗೋದಾದ್ರೆ ನೂರಕ್ಕೆ ನೂರರಷ್ಟು ಬೆಂಬಲಿಸುತ್ತೇವೆ: ಬಿ.ನಾಗೇಂದ್ರ

  • ಕೇದಾರನಾಥದಲ್ಲಿ ಕಾಯುತ್ತಿರುವ ಯಾತ್ರಾರ್ಥಿಗಳಿಗೆ ಚಹಾ ಹಂಚಿದ ರಾಗಾ

    ಕೇದಾರನಾಥದಲ್ಲಿ ಕಾಯುತ್ತಿರುವ ಯಾತ್ರಾರ್ಥಿಗಳಿಗೆ ಚಹಾ ಹಂಚಿದ ರಾಗಾ

    ಡೆಹ್ರಾಡೂನ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು (Rahul Gandhi) ಕೇದಾರನಾಥ ದೇಗುಲದಲ್ಲಿ (Keadaranath) ದೇವರ ದರ್ಶನಕ್ಕೆ ಕಾಯುತ್ತಿದ್ದ ಯಾತ್ರಾರ್ಥಿಗಳಿಗೆ ಚಹಾ ನೀಡಿದ ಪ್ರಸಂಗವೊಂದು ನಡೆದಿದೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಮೂರು ದಿನಗಳ ಭೇಟಿಗಾಗಿ ರಾಹುಲ್ ಗಾಂಧಿಯವರು ಭಾನುವಾರ ಉತ್ತರಾಖಂಡಕ್ಕೆ ತೆರಳಿದ್ದಾರೆ. ಅಂತೆಯೇ ಬೆಟ್ಟದ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ತಮ್ಮ ಸರದಿಗಾಗಿ ಕಾಯುತ್ತಿರುವ ಯಾತ್ರಾರ್ಥಿಗಳಿಗೆ ಚಹಾ ನೀಡುತ್ತಾ ‘ಚಾಯ್ ಸೇವೆ’ ಮಾಡುತ್ತಿರುವುದು ಕಂಡುಬಂದಿತು.

    ಒಬ್ಬ ಜನಪ್ರಿಯ ನಾಯಕ ಸಾರ್ವಜನಿಕರೊಂದಿಗೆ ಮಾತನಾಡುವುದನ್ನು ಕಂಡು ಆಶ್ಚರ್ಯಚಕಿತರಾದ ಭಕ್ತರು ಸೆಲ್ಫಿಗಾಗಿ ಮನವಿ ಮಾಡಿದರು. ಈ ವೇಳೆ ರಾಗಾ ಅವರು ಕೂಡ ಭಕ್ತರ ಮನವಿಯನ್ನು ತಿರಸ್ಕರಿಸಿದೆ ಸೆಲ್ಫಿ ನೀಡಿದರು. ಇದನ್ನೂ ಓದಿ: ಪೇಜಾವರ ಶ್ರೀಗಳಿಗೆ ಪಿತೃ ವಿಯೋಗ

    ರಾಗಾ ಅವರು ಯಾತ್ರಾರ್ಥಿಗಳಿಗೆ ಚಹಾ ಹಂಚುತ್ತಿದ್ದಾಗ ಭಕ್ತರೊಬ್ಬರು ಸರ್, ನಾವು ನಿಮ್ಮನ್ನು ಟಿವಿಯಲ್ಲಿ ನೋಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ನಾವು ನಿಮ್ಮನ್ನು ನಿಜವಾಗಿ ನೋಡುತ್ತಿದ್ದೇವೆ. ನಾನು ನಿಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಬಹುದೇ ಎಂದು ಕೇಳಿದ್ದಾರೆ. ರಾಹುಲ್ ಗಾಂಧಿಯವರು ಕೇದಾರನಾಥದಲ್ಲಿ ಪ್ರಾರ್ಥನೆ ಸಲ್ಲಿಸಿ, ಆರತಿಯಲ್ಲಿ ಭಾಗವಹಿಸಿದರು ಎಂದು ಕಾಂಗ್ರೆಸ್ (Congress) ತನ್ನ ಎಕ್ಸ್ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿದೆ.

    ನವೆಂಬರ್ 7 ರಂದು ಛತ್ತೀಸ್‍ಗಢ ಮತ್ತು ಮಿಜೋರಾಂನಲ್ಲಿ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ಕೇದಾರನಾಥಕ್ಕೆ ಬೇಟಿ ನೀಡಿದ್ದು, ಕುತೂಹಲ ಹುಟ್ಟಿಸಿದೆ.

  • 20 ವರ್ಷದಿಂದ ಟೀ ಮಾರಿ ಜೀವನ ಕಟ್ಟಿಕೊಂಡಿದ್ದ ಅನ್ನಪೂರ್ಣಮ್ಮ ಈಗ ಪಂಚಾಯ್ತಿ ಅಧ್ಯಕ್ಷೆ!

    20 ವರ್ಷದಿಂದ ಟೀ ಮಾರಿ ಜೀವನ ಕಟ್ಟಿಕೊಂಡಿದ್ದ ಅನ್ನಪೂರ್ಣಮ್ಮ ಈಗ ಪಂಚಾಯ್ತಿ ಅಧ್ಯಕ್ಷೆ!

    ತುಮಕೂರು: ಆಕೆ ಪ್ರಧಾನಿ ಮೋದಿಯ (Narendra Modi) ಅಪ್ಪಟ ಅಭಿಮಾನಿ. ಈ ಹಿಂದೆ ಮೋದಿ ಅವರು ಟೀ ಮಾರಿದಂತೆ (Tea Sale) ಈ ಅಭಿಮಾನಿಯೂ ಟೀ ಮಾರುತಿದ್ದಾಳೆ. ಟೀ ಮಾರಿ 20 ವರ್ಷದಿಂದ ಜೀವನ ಕಟ್ಟಿಕೊಂಡಿದ್ದಾಳೆ. ಅಷ್ಟೇ ಅಲ್ಲಾ ಟೀ ಮಾರಿದ ಮೋದಿ ಪಾರ್ಲಿಮೆಂಟ್ ಗೆ ಪ್ರಧಾನಿ ಆದ್ರೆ, ಈ ಅಭಿಮಾನಿ ಪಂಚಾಯತಿಗೆ ಅಧ್ಯಕ್ಷೆಯಾಗಿದ್ದಾರೆ. ಪಂಚಾಯತಿಯಿಂದ ಪಾರ್ಲಿಮೆಂಟ್ ವರೆಗಿನ ಟೀ ಮಹಾತ್ಮೆಯ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.

    ಟೀ ಮಾರೋರೆಲ್ಲಾ ಪ್ರಧಾನಿಯಾಗಲ್ಲ, ಚಹಾ ಮಾರಿ ಜೀವನ ಕಟ್ಟಿಕೊಂಡವರೆಲ್ಲಾ ಪಂಚಾಯ್ತಿ ಅಧ್ಯಕ್ಷರಾಗಲ್ಲ. ಆದರೆ ಅವರ ಪರಿಶ್ರಮ, ಏನಾದರೂ ಸಾಧನೆ ಮಾಡಬೇಕು ಅನ್ನೋ ಛಲ ಅವರನ್ನು ಉತ್ತುಂಗಕ್ಕೇರಿಸುತ್ತದೆ. ಇದಕ್ಕೆ ಸಾಕ್ಷಿಯಾಗಿದ್ದು ತುಮಕೂರಿನ ಊರ್ಡಿಗೆರೆ ಗ್ರಾಮ ಪಂಚಾಯ್ತಿ. ಈ ಗ್ರಾಮ ಪಂಚಾಯ್ತಿಯಲ್ಲಿ ಚಹಾ ಮಾರುವ ಮಹಿಳೆಯೋರ್ವಳು ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ದೇವರಾಯನದುರ್ಗ ದೇವಸ್ಥಾನದ ಬಳಿ ಪುಟ್ಟ ಟೀ ಅಂಗಡಿ ಇಟ್ಟುಕೊಂಡು ಕಳೆದ 20 ವರ್ಷದಿಂದ ಬದುಕು ಕಟ್ಟಿಕೊಂಡಿದ್ದ ಅನ್ನಪೂರ್ಣಮ್ಮ ಈಗ ಪಂಚಾಯ್ತಿ ಅಧ್ಯಕ್ಷೆಯಾಗಿ (Grama Panchayat President) ಹೊರಹೊಮ್ಮಿದ್ದಾರೆ. 2 ನೇ ಅವಧಿಗೆ ಗುರುವಾರ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಊರ್ಡಿಗೆರೆ ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 21 ಸದಸ್ಯರ ಸಂಖ್ಯೆ ಇದೆ. ಇದರಲ್ಲಿ ಬಿಜೆಪಿ ಬೆಂಬಲಿತರ ಸಂಖ್ಯೆ 10, ಜೆಡಿಎಸ್ ಬೆಂಬಲಿತರ ಸಂಖ್ಯೆ 11 ಇದೆ. ಅನ್ನಪೂರ್ಣಮ್ಮ ಬಿಜೆಪಿ ಬೆಂಬಲಿತ ಸದಸ್ಯೆ. ಆದರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಜೆಡಿಎಸ್‍ನಲ್ಲಿ ನಾಲ್ಕು ಜನ ಮುಸ್ಲಿಂ ಮಹಿಳೆಯರೂ ಇದ್ದರು. ಆದರೂ ಅವರೆಲ್ಲರೂ ಸೇರಿ ಟೀ ಮಾರುವ ಅನ್ನಪೂರ್ಣಮ್ಮರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡರ ಪ್ಲಾನ್ ಇಲ್ಲಿ ಫಲಿಸಿದೆ.

    ನೂತನವಾಗಿ ಅಧ್ಯಕ್ಷೆಯಾದ ಅನ್ನಪೂರ್ಣಮ್ಮ ಮಹಿಳಾಪರ ಹಲವು ಕನಸು ಕಂಡಿದ್ದಾರೆ. ತಮ್ಮ ಪಂಚಾಯ್ತಿ ವ್ಯಾಪ್ತಿಯ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ದುಡಿಯುವ ವಾಗ್ದಾನ ಮಾಡಿದ್ದಾರೆ. ಒಟ್ಟಾರೆ ಟೀ ಮಾರೋ ಮಹಿಳೆ ಅಧ್ಯಕ್ಷೆ ಗಾದಿಗೆ ಏರಿರುವ ಯಶೋಗಾಥೆ ಜಿಲ್ಲೆಯಲ್ಲಿ ಚರ್ಚೆಯಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂಗ್ಲಿಷ್‌ ಪದವೀಧರೆ ಈಗ ಚಾಯ್‌ವಾಲಿ – ಯುವತಿ ಭವಿಷ್ಯದ ಕನಸಿಗೆ ಜನರ ಮೆಚ್ಚುಗೆ

    ಇಂಗ್ಲಿಷ್‌ ಪದವೀಧರೆ ಈಗ ಚಾಯ್‌ವಾಲಿ – ಯುವತಿ ಭವಿಷ್ಯದ ಕನಸಿಗೆ ಜನರ ಮೆಚ್ಚುಗೆ

    ನವದೆಹಲಿ: ಬ್ರಿಟಿಷ್‌ ಕೌನ್ಸಿಲ್‌ (British Council ) ಲೈಬ್ರರಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಯುವತಿ ಈಗ ದೆಹಲಿಯ (Delhi) ಬೀದಿಯಲ್ಲಿ ಚಹಾ (Roadside Tea Stall) ಮಾರಾಟ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

    26 ವರ್ಷದ ಶರ್ಮಿಷ್ಠ ಘೋಷ್‌ ಇಂಗ್ಲಿಷ್‌ ಪದವೀಧರೆ. ಭವಿಷ್ಯದಲ್ಲಿ ದೊಡ್ಡ ಚಹಾ ಉದ್ಯಮ ನಡೆಸುವ ಕನಸು ಕಂಡಿದ್ದು, ಈಗ ಚಹಾ ಮಾರಾಟ ಮಾಡುತ್ತಿದ್ದಾರೆ.

    ಶರ್ಮಿಷ್ಠ ಘೋಷ್‌ (Sharmistha Ghosh) ಅವರ ಉದ್ಯಮಕ್ಕೆ ಸ್ನೇಹಿತೆ ಲುಫ್ತಾನ್ಸಾನದಲ್ಲಿ ಕೆಲಸ ಮಾಡುತ್ತಿರುವ ಭಾವನಾ ರಾವ್‌ ಸಹ ಸಾಥ್‌ ನೀಡಿದ್ದಾರೆ. ಈಗ ಇವರಿಬ್ಬರು ಜೊತೆಯಾಗಿ ದೆಹಲಿಯ ರಸ್ತೆ ಬದಿಯಲ್ಲಿ ಸಂಜೆ ಚಹಾ ಮಾರಾಟ ಮಾಡುತ್ತಿದ್ದಾರೆ.  ಇದನ್ನೂ ಓದಿ: ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ ನಂತರ ಪಾಕಿಸ್ತಾನ ಪಾಠ ಕಲಿತಿದೆ – ಶೆಹಬಾಜ್ ಷರೀಫ್

    ಬ್ರಿಗೇಡಿಯರ್ ಸಂಜಯ್ ಖನ್ನಾ ಅವರು ಲಿಂಕ್ಡ್‌ಇನ್‌ನಲ್ಲಿ ಇವರಿಬ್ಬರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್‌ ಮಾಡಿದ ಬಳಿಕ ಈಗ ಇವರು ಹೆಚ್ಚು ಸುದ್ದಿಯಾಗಿದ್ದಾರೆ.

    ಇಬ್ಬರು ಯುವತಿಯರ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಾವುದೇ ಕೆಲಸ ದೊಡ್ಡದು, ಚಿಕ್ಕದಲ್ಲ. ಪ್ರತಿ ಕೆಲಸವು ದೊಡ್ಡದೇ. ಶ್ರಮವಹಿಸಿ ಮಾಡಿದರೆ ಖಂಡಿತ ಯಶಸ್ಸು ಸಿಗುತ್ತದೆ. ಆರಂಭದಲ್ಲಿ ಸಣ್ಣ ಕನಸು, ಸಣ್ಣ ಉದ್ಯೋಗ ಮಾಡಿದವರೇ ಈಗ ದೊಡ್ಡ ಉದ್ಯಮಿಗಳಾಗಿದ್ದಾರೆ ಎಂದು ಬರೆದು ಶ್ಲಾಘಿಸಿ ಭವಿಷ್ಯದ ಕನಸಿಗೆ ಶುಭ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇದರಲ್ಲಿ ವಿಷ ಇದ್ರೆ? – UP ಪೊಲೀಸರು ನೀಡಿದ ಚಹಾವನ್ನು ನಿರಾಕರಿಸಿದ ಅಖಿಲೇಶ್ ಯಾದವ್

    ಇದರಲ್ಲಿ ವಿಷ ಇದ್ರೆ? – UP ಪೊಲೀಸರು ನೀಡಿದ ಚಹಾವನ್ನು ನಿರಾಕರಿಸಿದ ಅಖಿಲೇಶ್ ಯಾದವ್

    ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರು ಭಾನುವಾರ ಉತ್ತರ ಪ್ರದೇಶದ ಪೊಲೀಸ್ (Uttar Pradesh) ಪ್ರಧಾನ ಕಚೇರಿಗೆ ಭೇಟಿ ನೀಡಿದ್ದು, ಅಲ್ಲಿ ಅವರು ಚಹಾವನ್ನು (Tea) ನಿರಾಕರಿಸಿದ್ದಾರೆ. ನೀವಿದರಲ್ಲಿ ವಿಷ (Poison) ಬೆರೆಸಿರಬಹುದು ಎನ್ನುತ್ತಾ ಯಾದವ್ ಸಂದೇಹ ವ್ಯಕ್ತಪಡಿಸಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

    ವೀಡಿಯೋದಲ್ಲಿ ಅಖಿಲೇಶ್ ಯಾದವ್, ಪೊಲೀಸ್ ಸಿಬ್ಬಂದಿ ನೀಡಿದ ಚಹಾವನ್ನು ನಿರಾಕರಿಸಿರುವುದು ಕಂಡುಬಂದಿದೆ. ನಾನು ಇಲ್ಲಿ ಚಹಾ ಕುಡಿಯುವುದಿಲ್ಲ. ನಾವು ಹೊರಗಿನಿಂದ ಚಹಾ ತರಿಸಿಕೊಂಡು ಕುಡಿಯುತ್ತೇವೆ. ಬೇಕೆಂದರೆ ನಾವು ನಿಮ್ಮ ಬಳಿಯಿಂದ ಕಪ್ ತೆಗೆದುಕೊಳ್ಳುತ್ತೇವೆ. ನೀವು ನನಗೆ ವಿಷ ಕೊಟ್ಟರೆ ಏನು? ನನಗೆ ನಿಮ್ಮ ಬಗ್ಗೆ ನಂಬಿಕೆಯಿಲ್ಲ ಎಂದು ನೇರಾನೇರ ಹೇಳಿದ್ದಾರೆ. ಅವರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಮೋದಿ, ಅಮಿತ್ ಶಾ ಕಂಡ್ರೆ ನಮಗಲ್ಲ, ಡಿಕೆಶಿಗೆ ಭಯ: ಆರ್. ಅಶೋಕ್

    ವರದಿಗಳ ಪ್ರಕಾರ ಪಕ್ಷದ ಸಾಮಾಜಿಕ ಮಾಧ್ಯಮ ನಿರ್ವಾಹಕ ಮನೀಶ್ ಜಗನ್ ಅವರು ಟ್ವಿಟರ್‌ನಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಹಜರತ್‌ಗಂಜ್ ಪೊಲೀಸರು (Hazratganj Police) ಅವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿದ್ದು, ಭಾನುವಾರ ಬೆಳಗ್ಗೆ ಅಗರ್ವಾಲ್ ಅವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಮುಂಬೈ ದಾಳಿ ವೇಳೆ ನಾನೂ ಹೋಟೆಲ್‌ನಲ್ಲಿದ್ದೆ: ಪಾರಾದ ಥ್ರಿಲ್ಲಿಂಗ್ ಘಟನೆ ವಿವರಿಸಿದ ಅದಾನಿ

    ಅಗರ್ವಾಲ್ ಬಂಧನವನ್ನು ಖಂಡಿಸಿ ಪ್ರತಿಭಟನೆ ನಡೆಸಲು ಅಖಿಲೇಶ್ ಯಾದವ್ ಡಿಜಿಪಿ ಕಚೇರಿಗೆ ತೆರಳಿದ್ದರು. ಅಲ್ಲಿ ಅವರು ಬಂಧನದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಹಾಗೂ ಅವರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚಹಾಗೆ ಸಕ್ಕರೆ ಹಾಕಿಲ್ಲ ಎಂದು ಹೋಟೆಲ್ ಮಾಲೀಕನಿಗೆ ಚಾಕು ಇರಿದ

    ಚಹಾಗೆ ಸಕ್ಕರೆ ಹಾಕಿಲ್ಲ ಎಂದು ಹೋಟೆಲ್ ಮಾಲೀಕನಿಗೆ ಚಾಕು ಇರಿದ

    ತಿರುವನಂತಪುರಂ: ಚಹಾಕ್ಕೆ (Tea) ಸಕ್ಕರೆ (Sugar) ಹಾಕಿಲ್ಲ ಎಂದು ವ್ಯಕ್ತಿಯೊಬ್ಬ ಹೋಟೆಲ್ (Hotel) ಮಾಲೀಕನಿಗೆ (Owner) ಚಾಕು ಇರಿದ ಘಟನೆ ಕೇರಳದ ಮಲಪ್ಪುರಂನ ತಾನೂರ್‌ನಲ್ಲಿ ನಡೆದಿದೆ.

    ಆರೋಪಿಯನ್ನು ಸುಬೈರ್ ಎಂದು ಗುರುತಿಸಲಾಗಿದ್ದು, ಈತ ತನೂರಿನ ಟಿಎ ಹೋಟೆಲ್‌ಗೆ ಚಹಾ ಕುಡಿಯಲು ಹೋಗಿದ್ದ. ಈ ವೇಳೆ ಹೋಟೆಲ್ ಸಿಬ್ಬಂದಿ ನೀಡಿದ್ದ ಚಹಾದಲ್ಲಿ ಸಕ್ಕರೆ ಸ್ವಲ್ಪ ಕಡಿಮೆ ಇತ್ತು. ಇದರಿಂದಾಗಿ ಸುಬೈರ್ ಹೋಟೆಲ್ ಮಾಲೀಕ ಮನಾಫ್‍ನೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಮನಾಫ್‍ಗೆ ಸುಬೈರ್ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಮಹಿಳಾ ಕಾರ್ಯಕರ್ತೆಯರು – ಇಬ್ಬರ ಬಂಧನ

    ತಕ್ಷಣ ಅಲ್ಲಿದ್ದ ಸಿಬ್ಬಂದಿ ಮನಾಫ್‍ನನ್ನು ಕೊಯಿಕ್ಕೋಡ್‍ನಲ್ಲಿರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಮನಾಫ್ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡುಮ ಸುವೈರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಬಹುತೇಕ ಖಚಿತ- ಜ. 9ಕ್ಕೆ ಅಧಿಕೃತ ಘೋಷಣೆ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟೀ ನಿರಾಕರಿಸಿದ ಡಿಸಿಗೆ ಮದ್ಯ ಕುಡಿತೀರಾ ಅಂದ ಮಹಾರಾಷ್ಟ್ರ ಕೃಷಿ ಸಚಿವ – ವೀಡಿಯೋ ವೈರಲ್

    ಟೀ ನಿರಾಕರಿಸಿದ ಡಿಸಿಗೆ ಮದ್ಯ ಕುಡಿತೀರಾ ಅಂದ ಮಹಾರಾಷ್ಟ್ರ ಕೃಷಿ ಸಚಿವ – ವೀಡಿಯೋ ವೈರಲ್

    ಮುಂಬೈ: ಮಹಾರಾಷ್ಟ್ರದ ಕೃಷಿ ಸಚಿವ ಅಬ್ದುಲ್ ಸತ್ತಾರ್ (Maharashtra Agriculture Minister Abdul Sattar) ಅವರು ಜಿಲ್ಲಾಧಿಕಾರಿ ರಾಧಾಬಿನೋದ್ ಶರ್ಮಾ (Radhabinod Sharma) ಅವರಿಗೆ ಮದ್ಯಪಾನ ಮಾಡುತ್ತೀರಾ ಎಂದು ಕೇಳಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಮಧ್ಯ ಮಹಾರಾಷ್ಟ್ರದ (Maharashtra) ಬೀಡ್ ಜಿಲ್ಲೆಯ (Beed district) ಪ್ರವಾಸದಲ್ಲಿರುವಾಗ ಅಬ್ದುಲ್ ಸತ್ತಾರ್ ಅವರೊಂದಿಗೆ ಅಕ್ಟೋಬರ್ 21 ರಂದು ಜಿಲ್ಲೆಯ ಗೆವ್ರಾಯಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಬಗ್ಗೆ ಪರಿಶೀಲನೆ ನಡೆಸಲು ರಾಧಾಬಿನೋದ್ ಶರ್ಮಾ ಬಂದಿದ್ದರು. ಈ ವೇಳೆ ಚಹಾ ನೀಡಲು ಬಂದಾಗ ನಿರಾಕರಿಸಿದ್ದಕ್ಕೆ ರಾಧಾಬಿನೋದ್ ಶರ್ಮಾ ಮದ್ಯ ಸೇವಿಸುತ್ತೀರಾ ಎಂದು ಅಬ್ದುಲ್ ಸತ್ತಾರ್ ಅಣಕಿಸಿದ್ದಾರೆ. ಇದನ್ನೂ ಓದಿ: ಪೊಲೀಸರಿಗೆ ಒಂದು ದೇಶ, ಒಂದು ಸಮವಸ್ತ್ರ – ಕಲ್ಪನೆ ಪ್ರಸ್ತಾಪಿಸಿದ ಮೋದಿ

    ಇದೀಗ ಈ ವೀಡಿಯೋ ವೈರಲ್ ಆಗುತ್ತಿದ್ದು, ವೀಡಿಯೋದಲ್ಲಿ ಅಬ್ದುಲ್ ಸತ್ತಾರ್, ರಾಧಾಬಿನೋದ್ ಶರ್ಮಾ ಮತ್ತು ಇನ್ನೂ ಕೆಲವರು ಕುಳಿತುರುವುದನ್ನು ಕಾಣಬಹುದಾಗಿದೆ. ಸದ್ಯ ಈ ವೀಡಿಯೋ ಕುರಿತಂತೆ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (Maharashtra Congress general secretary) ಸಚಿನ್ ಸಾವಂತ್ (Sachin Sawant), ಸತ್ತಾರ್ ಅವರದ್ದು ಮಳೆ ಹಾನಿ ಪರಿಶೀಲನೆ ಪ್ರವಾಸವೋ ಅಥವಾ ಮದ್ಯ ಸೇವಿಸಲು ಹೋಗಿರುವ ಪ್ರವಾಸವೋ ಎಂದು ಟ್ವೀಟ್ ಮಾಡಿದ್ದಾರೆ.  ಇದನ್ನೂ ಓದಿ: IPC, CRPC ಸುಧಾರಣೆಗೆ ಶೀಘ್ರದಲ್ಲೇ ನೂತನ ಕರಡು ಮಂಡನೆ – ಶಾ ಹೇಳಿಕೆ

    Live Tv
    [brid partner=56869869 player=32851 video=960834 autoplay=true]