Tag: ಚಳ್ಳಕೆರೆ

  • ಅಣ್ಣ-ತಂಗಿಯರ ಸಮಾಗಮ ಎನಿಸಿರುವ ಗುಗ್ರಿಹಬ್ಬ- ತವರಿಗೆ ಬರುವ ಮಹಿಳೆಯರಿಂದ ದೇವರಿಗೆ ಬೆಲ್ಲದ ನೈವೇದ್ಯ

    ಅಣ್ಣ-ತಂಗಿಯರ ಸಮಾಗಮ ಎನಿಸಿರುವ ಗುಗ್ರಿಹಬ್ಬ- ತವರಿಗೆ ಬರುವ ಮಹಿಳೆಯರಿಂದ ದೇವರಿಗೆ ಬೆಲ್ಲದ ನೈವೇದ್ಯ

    ಚಿತ್ರದುರ್ಗ: ಅಣ್ಣ-ತಂಗಿಯರು ಆಚರಿಸುವ ಹಬ್ಬ ಎಂದಾಕ್ಷಣ ಎಲ್ಲರ ನೆನಪಿಗೆ ಬರುವುದು ರಕ್ಷಾಬಂಧನ ಹಬ್ಬ. ಆದರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ನಡೆಯುವ ಗುಗ್ರಿಹಬ್ಬವನ್ನು ಅಣ್ಣ ತಂಗಿಯರ ಸಮಾಗಮನದ ಹಬ್ಬವೆಂದೇ ಕರೆಯಲಾಗುತ್ತಿದೆ.

    ಗುಗ್ರಿಹಬ್ಬದಂದು ಗ್ರಾಮದ ಅಹೋಬಲ ನರಸಿಂಹಸ್ವಾಮಿ ದೇಗುಲದ ಮುಂಭಾಗದಲ್ಲಿರುವ ಒಂಟಿ ಕಂಬದ ಮೇಲಿರುವ ದೀಪಕ್ಕೆ ಎಣ್ಣೆ ಎರೆಯುವ ಮೂಲಕ ಆಚರಿಸಲಾಗುತ್ತದೆ. ಆ ದೀಪ ಎಷ್ಟು ಚೆನ್ನಾಗಿ ಉರಿಯುತ್ತೋ ಅಷ್ಟು ಗ್ರಾಮಸ್ಥರಿಗೆ ಒಳ್ಳೆಯದಾಗುತ್ತದೆ. ಅಲ್ಲದೇ ಅಣ್ಣ-ತಂಗಿಯರ ಸಂಬಂಧ ಗಟ್ಟಿಯಾಗಿ ಉಳಿಯುತ್ತದೆ ಎಂಬ ನಂಬಿಕೆ ಇಲ್ಲಿದೆ. ಹೀಗಾಗಿ ತವರು ಮನೆಯಿಂದ ಮದುವೆಯಾಗಿ ಹೋದ ಪ್ರತಿಯೊಬ್ಬ ಹೆಣ್ಣು ಮಕ್ಕಳು ಈ ಹಬ್ಬಕ್ಕೆ ಆಗಮಿಸುವ ಪ್ರತೀತಿ ಇದೆ.

    ದೇವರಮರಿಕುಂಟೆಯ ಅಹೋಬಸ್ವಾಮಿ ದೇವರು ಗ್ರಾಮದಲ್ಲಿ ನೆಲೆನಿಂತಿದ್ದು, ಸ್ವಾಮಿಯ ತಂಗಿ ಗೂಲೋಬಮ್ಮ ಪಾವಗಡ ತಾಲೂಕಿನಲ್ಲಿ ನಿಡುಗಲ್ಲು ಬೆಟ್ಟದಲ್ಲಿ ಪ್ರತಿಷ್ಠಾಪಿತಳಾಗಿರುತ್ತಾಳೆ. ಹೀಗಾಗಿ ಆಕೆ ತನ್ನ ತವರೂರಿಗೆ ಬರಲಾಗದೆ, ಹಬ್ಬದ ಆಚರಣೆಯನ್ನು ದೇಗುಲದಮುಂದೆ ಹಚ್ಚುವ ದೀಪದ ಮೂಲಕ ನನ್ನ ಅಣ್ಣ ಹಬ್ಬ ಆಚರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಯುತ್ತಾಳೆ. ಆಮೂಲಕ ದೇವಿಯು ಅಲ್ಲಿಂದಲೇ ಖುಷಿ ಪಡುತ್ತಾಳೆ ಎಂಬುದು ಐತಿಹ್ಯ ಇದೆ.

    ಅಹೋಬಲ ನರಸಿಂಹ ಸ್ವಾಮಿಗೆ ಬೆಲ್ಲವೇ ಇಷ್ಟವಾದ ನೈವೇದ್ಯ. ಆದ್ದರಿಂದ ಭಕ್ತರೆಲ್ಲರೂ ಬೆಲ್ಲವನ್ನೇ ತಂದು ಸ್ವಾಮಿಗೆ ನೈವೇದ್ಯ ಮಾಡಿ ಹರಕೆ ತೀರಿಸುತ್ತಾರೆ. ಈ ವರ್ಷ ಕಟ್ಟಿಕೊಂಡ ಹರಕೆ, ಇಷ್ಟಾರ್ಥ ನೆರವೇರಿದ ಬಳಿಕ ಮುಂದಿನ ವರ್ಷ ಬೆಲ್ಲವನ್ನು ಸ್ವಾಮಿಗೆ ಅರ್ಪಣೆ ಮಾಡೋದ್ರಿಂದ ತಮ್ಮ ಹರಕೆ ಸಲ್ಲಿಸುವ ಸಂಪ್ರದಾಯ ಇಲ್ಲಿದೆ. ಹೀಗಾಗಿ ವಿವಿಧೆಡೆಗಳಿಂದ ಅಹೋಬಲ ಸ್ವಾಮಿಯ ಗುಗ್ಗರಿ ಹಬ್ಬಕ್ಕೆ ಆಗಮಿಸುವ ಭಕ್ತರು ಬೆಲ್ಲವನ್ನು ದೇವರಿಗೆ ಸಮರ್ಪಿಸಿ, ಕಂಬದಮೇಲೆಹಚ್ಚುವ ದೀಪಕ್ಕೆ ಎಣ್ಣೆ ಎರೆಯುವ ಮೂಲಕ ಅಣ್ಣ ತಂಗಿಯರ ಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತಾರೆ.

  • ನೀರಿನ ತೊಟ್ಟಿಗೆ ಬಿದ್ದು 2 ವರ್ಷದ ಮಗು ಸಾವು

    ನೀರಿನ ತೊಟ್ಟಿಗೆ ಬಿದ್ದು 2 ವರ್ಷದ ಮಗು ಸಾವು

    ಚಿತ್ರದುರ್ಗ: ನೀರಿನ ತೊಟ್ಟಿಗೆ ಬಿದ್ದು 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಳ್ಳಕೆರೆಯ ಗಾಂಧಿನಗರದಲ್ಲಿ ನಡೆದಿದೆ.

    ಗಾಂಧಿನಗರದ ಜಗನಾಥ್ ಮತ್ತು ಚಂದ್ರಿಕಾ ದಂಪತಿಯ 2 ವರ್ಷದ ಬಾಲಕ ಸೋನು ಮೃತ ದುರ್ದೈವಿ. ಇಂದು ಮುಂಜಾನೆ ಮನೆ ಅಂಗಳದಲ್ಲಿ ಆಟವಾಡುತ್ತಿತ್ತು. ಆದರೆ ಆಕಸ್ಮಿಕವಾಗಿ ಮಗು ನೀರಿನ ತೊಟ್ಟಿಗೆ ಬಿದ್ದಿದೆ.

    ಪೋಷಕರು ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗು ಕಾಣುತಿಲ್ಲ ಎಂದು ಹುಡುಕಿದಾಗ ತೊಟ್ಟಿಗೆ ಬಿದ್ದಿರುವುದು ತಿಳಿದಿದೆ. ತಕ್ಷಣ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ.  ಇದನ್ನೂ ಓದಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ!

    ಈ ಘಟನೆ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.  ಇದನ್ನೂ ಓದಿ : ಆಟವಾಡುವ ವೇಳೆ ನೀರು ತುಂಬಿದ್ದ ಪಾತ್ರೆಗೆ ಬಿದ್ದು 8 ತಿಂಗಳ ಮಗು ಸಾವು

  • ಚಿತ್ರಾನ್ನ, ಮಂಡಕ್ಕಿ ತಿಂಡಿ ತಿಂದು ಇಬ್ಬರು ಮಕ್ಕಳ ಸಾವು

    ಚಿತ್ರಾನ್ನ, ಮಂಡಕ್ಕಿ ತಿಂಡಿ ತಿಂದು ಇಬ್ಬರು ಮಕ್ಕಳ ಸಾವು

    ಚಿತ್ರದುರ್ಗ: ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರೋ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪಾತಪ್ಪನಗುಡಿ ಗ್ರಾಮದಲ್ಲಿ ನಡೆದಿದೆ.

    ಮೃತರು ಬೋಜಪ್ಪ, ಲಕ್ಷ್ಮಿದೇವಿ ದಂಪತಿಯ ಮಕ್ಕಳಾದ ವರ್ಷಿಣಿ(3) ಹಾಗೂ ಜಗದೀಶ್(6) ಎಂದು ಗುರುತಿಸಲಾಗಿದೆ. ರಾತ್ರಿ ಮನೆಯಲ್ಲಿ ಚಿತ್ರಾನ್ನ ಹಾಗು ಮಂಡಕ್ಕಿ ತಿಂಡಿ ತಿಂದು ಮಲಗಿದ್ದರು. ಆದ್ರೆ ತಡರಾತ್ರಿ ತೀವ್ರ ಹೊಟ್ಟೆನೋವು ಹಾಗು ವಾಂತಿ ಭೇದಿ ಕಾಣಿಸಿಕೊಂಡಿತ್ತು. ಪೋಷಕರು ಮಾತ್ರೆ ಕೊಟ್ಟು ಮಲಗಿಸಿದ್ದರು. ಬೆಳಗ್ಗೆ ಚಿಕಿತ್ಸೆಗಾಗಿ ಚಳ್ಳಕೆರೆ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಇಬ್ಬರೂ ಕೂಡ ಸಾವನ್ನಪ್ಪಿದ್ದಾರೆ.

    ಮಕ್ಕಳ ತಂದೆ, ತಾಯಿ ಹಾಗು ತಂಗಿ ಕೂಡ ಅದೇ ಆಹಾರ ಸೇವಿಸಿದ್ರಿಂದ ಅವರನ್ನು ಕೂಡ ತಪಾಸಣೆಗೊಳಪಡಿಸಲಾಗಿದೆ. ಅದೃಷ್ಟವಶಾತ್ ಅವರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ಈ ಇಬ್ಬರು ಮಕ್ಕಳು ಸೇವಿಸಿರೋ ಆಹಾರದಲ್ಲಿ ಹಲ್ಲಿ ಬಿದ್ದಿರೋ ಶಂಕೆ ವ್ಯಕ್ತವಾಗಿದೆ. ಇದ್ದ ಇಬ್ಬರು ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಬಗ್ಗೆ ಪರಶುರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಿತ್ರದುರ್ಗ: ಮಾಂಗಲ್ಯ ಸರ ಕದ್ದು ಮಿಂಚಿನಂತೆ ಪರಾರಿಯಾಗ್ತಿದ್ದ ಕಳ್ಳರ ಬಂಧನ

    ಚಿತ್ರದುರ್ಗ: ಮಾಂಗಲ್ಯ ಸರ ಕದ್ದು ಮಿಂಚಿನಂತೆ ಪರಾರಿಯಾಗ್ತಿದ್ದ ಕಳ್ಳರ ಬಂಧನ

    ಚಿತ್ರದುರ್ಗ: ಮಹಿಳೆಯರ ಮಾಂಗಲ್ಯ ಸರ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಚಳ್ಳಕೆರೆ ಪೊಲೀಸರು ಯಶ್ವಸಿಯಾಗಿದ್ದಾರೆ.

    ದಾದಾಪೀರ್(27) ಮತ್ತು ಶ್ರೀನಿವಾಸ್(39) ಬಂಧಿತ ಆರೋಪಿಗಳು. ಇಬ್ಬರೂ ಇಮಾಂಪುರ ಹಾಗು ಕುರುಡಿಹಳ್ಳಿಯ ನಿವಾಸಿಗಳು. ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾಂಗಲ್ಯ ಸರ ಕದ್ದು ಮಿಂಚಿನಂತೆ ಪರಾರಿಯಾಗುತ್ತಿದ್ದರು.

    ಇಂದು ಬೆಳಗಿನ ಜಾವ ಎಸ್ಪಿ ಅರುಣ್ ರಂಗರಾಜನ್ ನೇತೃತ್ವದಲ್ಲಿ ನಗರದ ಬಳ್ಳಾರಿ ರಸ್ತೆಯ ಹೀರೋ ಹೊಂಡ ಶೋರೂಂ ಬಳಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 4.53 ಲಕ್ಷ ಮೌಲ್ಯದ 185 ಗ್ರಾಂ ಚಿನ್ನಾಭರಣ ಹಾಗೂ ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ.