Tag: ಚಳ್ಳಕೆರೆ

  • ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಹೆತ್ತ ಮಕ್ಕಳನ್ನು ಕೊಂದು ತಾಯಿ ನೇಣಿಗೆ ಶರಣು

    ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಹೆತ್ತ ಮಕ್ಕಳನ್ನು ಕೊಂದು ತಾಯಿ ನೇಣಿಗೆ ಶರಣು

    ಚಿತ್ರದುರ್ಗ: ಹೆತ್ತ ತಾಯಿಯೇ ಇಬ್ಬರು ಮಕ್ಕಳನ್ನು ಕೊಂದು, ಬಳಿಕ ತಾನು ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ (Challakere) ತಾಲೂಕಿನ ಯಾದಲಘಟ್ಟ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಯಾದಲಘಟ್ಟ ಗ್ರಾಮದ ಲತಾ ಹಾಗೂ ಪತಿ ತಿಪ್ಪೇಸ್ವಾಮಿಗೆ ಇಬ್ಬರು ಮಕ್ಕಳಿದ್ದು, ಬೆಳಗ್ಗೆ ಎಂದಿನಂತೆ ತಿಪ್ಪೇಸ್ವಾಮಿ ಜಮೀನಿಗೆ ತೆರಳಿದ್ದರು. ಹೀಗಾಗಿ ಎಂದಿನಂತೆ ಪತ್ನಿ ಊಟ ತೆಗೆದುಕೊಂಡು ಬರುವಳೆಂಬ ನಿರೀಕ್ಷೆಯಲ್ಲಿದ್ದ ಪತಿಗೆ ಮನೆಯಲ್ಲಿ ನಡೆದಿರುವ ಘಟನೆ ಕೇಳಿ ಶಾಕ್ ಆಗಿದೆ. ಗ್ರಾಮಸ್ಥರಿಂದ ವಿಷಯ ತಿಳಿದು ಮನೆಗೆ ಧಾವಿಸಿ, ಗಮನಿಸಿದಾಗ ಪತ್ನಿ ಲತಾ ಹಾಗೂ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.

    ತಾಯಿ ಲತಾ (25) ಮಗಳು ಪ್ರಣೀತ(5), ಪುತ್ರ ಜ್ಞಾನೇಶ್ವರ ಮೃತರೆಂದು ಗುರುತಿಸಲಾಗಿದೆ. ಲತಾ ಮೊದಲಿಗೆ ತನ್ನ ಇಬ್ಬರು ಮಕ್ಕಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಹತ್ಯೆಗೈದಿದ್ದು ಬಳಿಕ ತಾನು ಸಹ ನೇಣಿಗೆ ಶರಣಾಗಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆದರೆ ಈವರೆಗೆ ಆತ್ಮಹತ್ಯೆಗೆ (Suicide) ನಿಖರ ಕಾರಣ ತಿಳಿದು ಬಂದಿಲ್ಲ. ಕೌಟಂಬಿಕ ಕಲಹದ ಶಂಕೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ತಾಳಿ ಕಟ್ಟುವಾಗ್ಲೇ ಕೈ ಅಡ್ಡ ಹಿಡಿದ ವಧು- ಮುರಿದು ಬಿದ್ದ ಮದ್ವೆಯ ವೀಡಿಯೋ ವೈರಲ್

    ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಲತಾಳ ಪತಿ ತಿಪ್ಪೇಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸರ ತನಿಖೆ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ. ಸ್ಥಳದಲ್ಲಿ ಮೃತರ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಮುರುಘಾ ಮಠದ ಉಸ್ತುವಾರಿ ವಿರುದ್ಧ 24 ಲಕ್ಷ ರೂ. ದುರ್ಬಳಕೆ ಆರೋಪ- ವೈರಲಾಯ್ತು ನೋಟಿಸ್

  • ವಿಚ್ಛೇದನ ತೀರ್ಪಿನ ದಿನವೇ ಪತ್ನಿಗೆ ಮಚ್ಚೇಟು – ಆರೋಪಿ ಅರೆಸ್ಟ್

    ವಿಚ್ಛೇದನ ತೀರ್ಪಿನ ದಿನವೇ ಪತ್ನಿಗೆ ಮಚ್ಚೇಟು – ಆರೋಪಿ ಅರೆಸ್ಟ್

    ಚಿತ್ರದುರ್ಗ: ವಿಚ್ಛೇದನದ (Divorce) ತೀರ್ಪಿನ ದಿನವೇ ವ್ಯಕ್ತಿಯೊಬ್ಬ ಪತ್ನಿಯ (Wife) ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಮಹಿಳೆಯನ್ನು ಆಶಾ (26) ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿದ ಆರೋಪಿಯನ್ನು ಕುಮಾರಸ್ವಾಮಿ ಅಲಿಯಾಸ್ ಶಿವಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿ ಮೂರು ವರ್ಷಗಳ ಹಿಂದೆ ಆಶಾಳನ್ನು ಮದುವೆಯಾಗಿದ್ದ. ಬಳಿಕ ಒಂದು ವರ್ಷದ ಹಿಂದೆ ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ, ಕುಡಿದು ಕಿರುಕುಳ ನೀಡುತ್ತಿದ್ದ. ಪತಿಯ ಕಿರುಕುಳದಿಂದ ಬೇಸತ್ತು ಮಹಿಳೆ ವಿಚ್ಛೇದನ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದಳು. ಇದನ್ನೂ ಓದಿ: ಗ್ಯಾಸ್ ಗೀಸರ್ ಲೀಕ್‍ನಿಂದ ಪತ್ನಿ ಸಾವು ಎಂದ ಪತಿ- ಕೊಲೆ ಆರೋಪ

    ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಮಹಿಳೆ ನೆಮ್ಮದಿಗಾಗಿ ಬೆಂಗಳೂರಿನ ಸಂಬಂಧಿಗಳ ಮನೆಯಲ್ಲಿ ವಾಸವಾಗಿದ್ದಳು. ಇಂದು ಕೋರ್ಟ್‍ನ ಅಂತಿಮ ತೀರ್ಪು ಇದ್ದಿದ್ದರಿಂದ ಚಳ್ಳಕೆರೆ ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದಳು. ಈ ವೇಳೆ ಬಸ್ ನಿಲ್ದಾಣದ ಬಳಿ ಕಾದು ಕುಳಿತು ಆರೋಪಿ ಹಲ್ಲೆ ನಡೆಸಿದ್ದಾನೆ.

    ಹಲ್ಲೆಯಿಂದ ತಲೆ ಹಾಗೂ ಕೈಕಾಲುಗಳಿಗೆ ತೀವ್ರ ಪೆಟ್ಟಾಗಿದ್ದು, ಕೈ ಹಾಗೂ ಕಾಲಿನ ಬೆರಳುಗಳು ತುಂಡಾಗಿವೆ. ತೀವ್ರ ರಕ್ತಸ್ರಾವದಿಂದ ಮಹಿಳೆ ಅಸ್ವಸ್ಥಳಾಗಿದ್ದು, ಆಕೆಯನ್ನು ಚಳ್ಳಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗ (Chitradurga) ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ಥಳೀಯರು ಮಹಿಳೆಯನ್ನು ರಕ್ಷಿಸಲು ಕುಮಾರಸ್ವಾಮಿಗೆ ಗೂಸಾ ಕೊಟ್ಟಿದ್ದಾರೆ. ಬಳಿಕ ಚಳ್ಳಕೆರೆ ಪೊಲೀಸರು (Police) ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೈಕಿಗೆ ಅಡ್ಡ ಬಂದು ಸವಾರ ದುರ್ಮರಣ- 3 ದಿನದ ಬಳಿಕ ಕುಟುಂಬಕ್ಕೆ ಶ್ವಾನ ಸಾಂತ್ವನ

  • ಶಾಲಾ ಆವರಣದಲ್ಲಿ ವಾಮಾಚಾರ- ತಲೆ ಬುರುಡೆ, ನಿಂಬೆ ಹಣ್ಣು, ಕುಂಕುಮ ಪತ್ತೆ

    ಶಾಲಾ ಆವರಣದಲ್ಲಿ ವಾಮಾಚಾರ- ತಲೆ ಬುರುಡೆ, ನಿಂಬೆ ಹಣ್ಣು, ಕುಂಕುಮ ಪತ್ತೆ

    – ಬೆಚ್ಚಿಬಿದ್ದ ಸಿಬ್ಬಂದಿ, ವಿದ್ಯಾರ್ಥಿಗಳು

    ಚಿತ್ರದುರ್ಗ: ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವಾಮಾಚಾರ (Black Magic) ನಡೆಸಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ ತಾಲೂಕಿನ ತಿಮ್ಮಪ್ಪನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

    ಶನಿವಾರ ಬೆಳಗ್ಗೆ ತರಗತಿಗೆ ಧಾವಿಸಿದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ, ಶಾಲೆಯ ಮುಖ್ಯ ಶಿಕ್ಷಕರ ಕೊಠಡಿ ಮುಂಭಾಗದಲ್ಲಿದ್ದ ತಲೆ ಬುರುಡೆ, ನಿಂಬೆ ಹಣ್ಣು, ಎಲೆ ಅಡಿಕೆ, ಕುಂಕುಮ ಕಂಡು ಬೆಚ್ಚಿಬಿದ್ದಿದ್ದಾರೆ.

    ಈ ಕೃತ್ಯವನ್ನು ಯಾರು ಮಾಡಿದ್ದಾರೆಂದು ತಿಳಿದುಬಂದಿಲ್ಲ. ಆದರೆ ವಾಮಾಚಾರ ಕಂಡು ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಮಾತ್ರ ಆತಂಕ ಮನೆಮಾಡಿದೆ. ಹೀಗಾಗಿ ಈ ಕೃತ್ಯ ಎಸಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಭುಗಿಲೆದ್ದ ಆಕ್ರೋಶದ ನಡುವೆಯೂ ತಮಿಳುನಾಡಿಗೆ ನೀರು; KRS ನೀರಿನ ಮಟ್ಟ 96 ಅಡಿಗೆ ಕುಸಿತ

    ಕೃತ್ಯ ನಡೆದ ಸ್ಥಳಕ್ಕೆ ತಳಕು ಠಾಣೆಯ ಪಿಎಸ್‌ಐ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಬೆದರಿಸಲು ವಾಮಾಚಾರ ನಡೆಸಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ. ಸದ್ಯ ಶಾಲಾ ಆವರಣದಲ್ಲಿ ಪತ್ತೆಯಾದ ತಲೆಬುರುಡೆ ಹಾಗೂ ಇತರ ವಸ್ತುಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಇದನ್ನೂ ಓದಿ: ಮೈತ್ರಿ ಅಧಿಕೃತಗೊಂಡರೂ ಸೀಟು ಹಂಚಿಕೆ ಕಗ್ಗಂಟು – ದೋಸ್ತಿಗಳ ಲೆಕ್ಕಾಚಾರ ಏನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಸರ ಕಳ್ಳತನ

    ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಸರ ಕಳ್ಳತನ

    ಚಿತ್ರದುರ್ಗ: ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಏಕಾಏಕಿ ಅಂಗಡಿಯೊಂದಕ್ಕೆ ನುಗ್ಗಿ, ವ್ಯಾಪಾರಿ ಕಣ್ಣಿಗೆ ಖಾರದ ಪುಡಿ (Chilli Powder) ಎರಚಿ ಚಿನ್ನಾಭರಣ (Gold) ಎಗರಿಸಿ ಪರಾರಿಯಾಗಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ನಡೆದಿದೆ.

    ನಗರದ ವದನಂ ಟೆಕ್ಸ್ಟೈಲ್ಸ್ ಅಂಗಡಿಗೆ ನುಗ್ಗಿದ ಖದೀಮರು ವ್ಯಾಪಾರಿ ಗೋವಿಂದರಾಜು ಅವರ ಕಣ್ಣಿಗೆ ಖಾರದ ಪುಡಿ ಎರಚಿ ಸುಮಾರು 2.5 ಲಕ್ಷ ರೂ. ಬೆಲೆಬಾಳುವ ಚಿನ್ನದ ಸರವನ್ನು ಕಿತ್ತು ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ವಿಮಾನದಲ್ಲಿ ಬಂದು ದುಬಾರಿ ಸೀರೆ ಕದ್ದು ಪರಾರಿಯಾಗ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್ ಅರೆಸ್ಟ್

    ಈ ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬಾಣಂತಿ, ಶಿಶುವಿಗೆ ಚಿಕಿತ್ಸೆ ನಿರ್ಲಕ್ಷ್ಯ – ಪ್ರಶ್ನೆ ಮಾಡಿದ್ದಕ್ಕೆ ರೌಡಿ ರೀತಿ ವರ್ತಿಸಿದ ಜಿಲ್ಲಾಸ್ಪತ್ರೆ ವೈದ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಳ್ಳಕೆರೆ DRDO ಬಳಿ ಚಿರತೆ ಓಡಾಟದ ವಿಡಿಯೋ ವೈರಲ್ – ಗ್ರಾಮಸ್ಥರಲ್ಲಿ ಆತಂಕ

    ಚಳ್ಳಕೆರೆ DRDO ಬಳಿ ಚಿರತೆ ಓಡಾಟದ ವಿಡಿಯೋ ವೈರಲ್ – ಗ್ರಾಮಸ್ಥರಲ್ಲಿ ಆತಂಕ

    ಚಿತ್ರದುರ್ಗ: ಚಳ್ಳಕೆರೆಯ (Challakere) ಡಿಆರ್‌ಡಿಓ (DRDO) ಬಳಿ ಚಿರತೆ (Leopard) ಓಡಾಡ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿನ್ನಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

    ಕುದಾಪುರ ಬಳಿಯ ಡಿಆರ್‌ಡಿಓ ಸಂಸ್ಥೆ ಆವರಣದ ಸಮೀಪದಲ್ಲೇ ಚಿರತೆ ಓಡಾಡಿದೆ. ಇಲ್ಲಿ ಸಂಸ್ಥೆ ಆಗುವ ಮುನ್ನ ಈ ಪ್ರದೇಶ ಮೀಸಲು ಅರಣ್ಯವಾಗಿತ್ತು. ಡಿಆರ್‍ಡಿಓ ಘೋಷಣೆಯಾದ ಮೇಲೆ ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಈ ಪ್ರದೇಶದಲ್ಲಿ ಚಿರತೆ, ಕರಡಿ ಹಾಗೂ ಜಿಂಕೆಗಳು ಸೇರಿದಂತೆ ಅಪಾರವಾದ ವನ್ಯಜೀವಿಗಳಿವೆ. ಸುತ್ತಲು ತಡೆಗೋಡೆ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಆಹಾರ ಹುಡುಕುತ್ತಾ ಜನವಸತಿ ಸ್ಥಳಗಳತ್ತ ಪ್ರಾಣಿಗಳು ಆಗಮಿಸುತ್ತಿವೆ. ಇದನ್ನೂ ಓದಿ: ಹನುಮ ಜಯಂತಿ ವೇಳೆ ಗಲಾಟೆ – ಬಾಟಲಿಯಿಂದ ಇರಿದು ಯುವಬ್ರಿಗೇಡ್ ಕಾರ್ಯಕರ್ತನ ಹತ್ಯೆ

    ಇದೇ ಜಾಗದ ಬಳಿ ಕಳೆದ ಮೂರು ವರ್ಷಗಳ ಹಿಂದೆಯೂ ಜನರ ಮೇಲೆ ಚಿರತೆ ದಾಳಿ ಮಾಡಿತ್ತು. ಆಗ ಚಿಕ್ಕನಮ್ಮಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆ ಗಮನಕ್ಕೆ ತಂದು ಬೋನ್ ಇರಿಸಿದ್ದರು. ಆಗ ಸೆರೆಸಿಕ್ಕ ಚಿರತೆಯನ್ನು ಸಂರಕ್ಷಿಸದೇ ಸಾರ್ವಜನಿಕರು ಚಿರತೆಯನ್ನು ಹೊಡೆದು ಕೊಂದಿದ್ದರು. ಇದನ್ನೂ ಓದಿ: ಬೆಲೆ ಏರಿಕೆ ನಡುವೆ 2 ಟನ್ ಟೊಮೆಟೊವಿದ್ದ ವಾಹನವನ್ನೇ ಕದ್ದ ಕಳ್ಳರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಳೆಗೆರೆ ಲಕ್ಷ್ಮಿರಂಗನಾಥಸ್ವಾಮಿ ದೇಗುಲಕ್ಕೆ ಕನ್ನ – ಬೀಗ ಮುರಿದು ದೇವರ ಆಭರಣ ಕದ್ದ ಖದೀಮರು

    ಬೆಳೆಗೆರೆ ಲಕ್ಷ್ಮಿರಂಗನಾಥಸ್ವಾಮಿ ದೇಗುಲಕ್ಕೆ ಕನ್ನ – ಬೀಗ ಮುರಿದು ದೇವರ ಆಭರಣ ಕದ್ದ ಖದೀಮರು

    ಚಿತ್ರದುರ್ಗ: ದೇಗುಲದ ಬೀಗ ಮುರಿದು ದೇವರಿಗೆ ಹಾಕಿದ್ದ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಚಳ್ಳಕೆರೆಯ (Challakere) ಬೆಳಗೆರೆ (Belagere) ಲಕ್ಷ್ಮಿರಂಗನಾಥಸ್ವಾಮಿ ದೇವಾಲಯದಲ್ಲಿ (Ranganatha Swamy Temple) ಶನಿವಾರ ತಡರಾತ್ರಿ ನಡೆದಿದೆ.

    ವಿಗ್ರಹದ ಮೇಲಿದ್ದ ಬೆಲೆಬಾಳುವ ಆಭರಣಗಳಾದ ಕಿರೀಟ, ಕಣ್ಣು, ಮೀಸೆ ಸೇರಿದಂತೆ ಬೆಳ್ಳಿ ಕುದುರೆಯನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಊರಿನ ಹೊರ ವಲಯದಲ್ಲಿ ದೇವಾಲಯ ಇರುವುದರಿಂದ ರಾತ್ರಿ ವೇಳೆ ಯಾರು ಅಲ್ಲಿ ಓಡಾಡುವುದಿಲ್ಲ. ಇದನ್ನೇ ಬಳಸಿಕೊಂಡು ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಇದನ್ನೂ ಓದಿ: ಸ್ನೇಹಿತರ ಜೊತೆ ಪಾರ್ಟಿ ವೇಳೆ ಗಲಾಟೆ – ಬೆಂಗಳೂರಲ್ಲಿ ಯುವಕನ ಬರ್ಬರ ಹತ್ಯೆ

    ಒಂದು ವರ್ಷದ ಹಿಂದೆ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಲಾಗಿತ್ತು. ಈ ವೇಳೆ ಹಳೆಯ ಆಭರಣಗಳ ಜೊತೆಗೆ ದೇವರಿಗೆ ಹೊಸ ಆಭರಣಗಳನ್ನು ಮಾಡಿಸಿ ಹಾಕಲಾಗಿತ್ತು. ಈಗ ಎಲ್ಲಾ ಕಳ್ಳರ ಪಾಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

    ಈ ಘಟನೆಯಿಂದಾಗಿ ಗ್ರಾಮಸ್ಥರು ಹಾಗೂ ಭಕ್ತರಲ್ಲಿ ಆತಂಕ ಮನೆ ಮಾಡಿದೆ. ದೇಗುಲಕ್ಕೆ ಕನ್ನ ಹಾಕಿರುವ ಕಳ್ಳರ ವಿರುದ್ಧ ಆಕ್ರೋಶ ಹೊರಹಾಕಿರುವ ಗ್ರಾಮಸ್ಥರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರಷ್ಯಾ ದಂಗೆ ಮಾತುಕತೆ ಮೂಲಕ ದಮನ – ಬೆಲಾರಸ್ ಅಧ್ಯಕ್ಷ ಮಧ್ಯಸ್ತಿಕೆಯಿಂದ ಮಾರ್ಗ ಮಧ್ಯೆಯೇ ಹೋರಾಟ ಕೈಬಿಟ್ಟ ಪ್ರಿಗೋಜಿನ್

  • ಅಪರಿಚಿತ ವಾಹನ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು

    ಅಪರಿಚಿತ ವಾಹನ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು

    ಚಿತ್ರದುರ್ಗ: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ (Challakere) ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದ ಬಳಿ ನಡೆದಿದೆ.

    ಚಿತ್ರದುರ್ಗ ತಾಲೂಕಿನ ಗಂಜಿಗಟ್ಟೆ ಗ್ರಾಮದ ನಿವಾಸಿ ಮಹಂತೇಶ್ (30) ಮೃತ ದುರ್ದೈವಿ. ಬೆಳಗ್ಗೆ ಚಿಕ್ಕಮ್ಮನಹಳ್ಳಿಯಿಂದ ಗಂಜಿಗಟ್ಟೆ ಗ್ರಾಮಕ್ಕೆ ತೆರಳುವಾಗ ಈ ದುರ್ಘಟನೆ ನಡೆದಿದೆ. ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದಿರುವ ವಾಹನ ಈತನ ಬೈಕಿಗೆ ಡಿಕ್ಕಿಯಾಗಿರುವ ಸಾಧ್ಯತೆ ಇದೆ. ಇದನ್ನೂ ಓದಿ: ಶಾಲಾ ಮಕ್ಕಳ ಮೊಟ್ಟೆಗೆ ಕತ್ತರಿ ಹಾಕಿದ ಸರ್ಕಾರ

    ಡಿಕ್ಕಿಯಿಂದಾಗಿ ಬೈಕ್‌ನ ಮುಂಭಾಗ ನಜ್ಜುಗುಜ್ಜಾಗಿದ್ದು, ಡಿಕ್ಕಿಯ ರಭಸಕ್ಕೆ ಮಹಂತೇಶನ ಮೃತದೇಹ ರಸ್ತೆಯ ಪಕ್ಕಕ್ಕೆ ಬಿದ್ದಿದೆ. ಈ ಘಟನೆ ಸಂಭವಿಸಿದ ಬಳಿಕ ಅಪರಿಚಿತ ವಾಹನದ ಚಾಲಕ ವಾಹನ ಸಮೇತವಾಗಿ ಎಸ್ಕೇಪ್ ಆಗಿದ್ದಾನೆ. ಈ ಪ್ರಕರಣ ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಎಸ್ಕೇಪ್ ಆಗಿರುವ ಚಾಲಕ ಹಾಗೂ ವಾಹನದ ಪತ್ತೆಗಾಗಿ ಬಲೆಬೀಸಿದ್ದಾರೆ. ಇದನ್ನೂ ಓದಿ: ಕಾಂಪೌಂಡ್ ಹತ್ತುವ ವೇಳೆ ಜಾರಿಬಿದ್ದು ವಿದ್ಯಾರ್ಥಿನಿ ಸಾವು

  • ಚಿತ್ರದುರ್ಗದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ – 7 ಮನೆಗಳ ಮೇಲ್ಛಾವಣಿ ಕುಸಿತ

    ಚಿತ್ರದುರ್ಗದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ – 7 ಮನೆಗಳ ಮೇಲ್ಛಾವಣಿ ಕುಸಿತ

    ಚಿತ್ರದುರ್ಗ: ಚಿತ್ರದುರ್ಗ (Chitradurga) ಜಿಲ್ಲೆಯ ಹಲವೆಡೆ ಗುರುವಾರ ಬಿರುಗಾಳಿ ಸಹಿತ ಭಾರೀ ಮಳೆ (Rain) ಸುರಿದಿದ್ದು, ಮಿಡ್ಲುಗಟ್ಟೆ ಪಿಂಜಾರಹಟ್ಟಿ ಗ್ರಾಮದಲ್ಲಿ 7 ಮನೆಗಳ ಮೇಲ್ಛಾವಣಿ ಕುಸಿದಿವೆ.

    ತಡರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಚಳ್ಳಕೆರೆ (Challakere) ತಾಲೂಕಿನ ಮಿಡ್ಲುಗಟ್ಟೆ ಪಿಂಜಾರಹಟ್ಟಿ ಗ್ರಾಮದಲ್ಲಿ 7 ಮನೆಗಳ ಮೇಲ್ಛಾವಣಿ (Roof) ಕುಸಿದು ಬಿದ್ದಿದೆ. ಗಾಳಿಯ ರಭಸಕ್ಕೆ ಮೇಲ್ಛಾವಣಿಯ ಶೀಟುಗಳು, ಹೆಂಚುಗಳು ಪುಡಿಪುಡಿಯಾಗಿ ಬಿದ್ದಿದೆ. ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಬಿಪೊರ್‌ಜೊಯ್‌ ಸೈಕ್ಲೋನ್‌ ಎಫೆಕ್ಟ್‌; ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ

    ಈ ಮನೆಗಳು ಗ್ರಾಮದ ರುಸೂಬಿ ಕಾಸಿಂಸಾಬ್, ರೇಷ್ಮ ಷರೀಫ್, ಬಿ.ದಾದು, ರುದ್ರಪ್ಪ, ಮಹಬೂಬ್ ಸಾಬ್, ಖಾಸಿಂಪೀರ್ ಎಂಬವರಿಗೆ ಸೇರಿದ್ದು, ಸೂಕ್ತ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಿಹಿ ಸುದ್ದಿ – ಕೇರಳಕ್ಕೆ ಮುಂಗಾರು ಪ್ರವೇಶ

  • ಚಳ್ಳಕೆರೆಯಲ್ಲಿ ಅಖಾಡ ಹೇಗಿದೆ? ವರ್ಕೌಟ್ ಆಗುತ್ತಾ ವಲಸಿಗರ ಪ್ರಚಾರ?

    ಚಳ್ಳಕೆರೆಯಲ್ಲಿ ಅಖಾಡ ಹೇಗಿದೆ? ವರ್ಕೌಟ್ ಆಗುತ್ತಾ ವಲಸಿಗರ ಪ್ರಚಾರ?

    ಚಿತ್ರದುರ್ಗ: ಎಸ್‌ಟಿ ಮೀಸಲಾತಿ ಕ್ಷೇತ್ರವಾಗಿರುವ ಚಳ್ಳಕೆರೆ (Challakere) ಈ ಹಿಂದೆ ಛೋಟಾ‌ಬಾಂಬೆ ಎಂದೇ ಪ್ರಖ್ಯಾತಿಯಾಗಿತ್ತು. ಇತ್ತೀಚೆಗೆ ಡಿಆರ್‌ಡಿಒ, ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಎಂಜಿನಿಯರಿಂಗ್ ಕಾಲೇಜು ಆರಂಭದಿಂದಾಗಿ ಸೈನ್ಸ್ ಸಿಟಿಯಾಗಿ ಪರಿವರ್ತನೆಯಾಗಿದೆ. ಚಳ್ಳಕೆರೆಯಲ್ಲಿ ಹಿಂದೆ ಇದ್ದಂತಹ ಆಯಿಲ್ ಮಿಲ್‌ಗಳ ಬೃಹತ್ ಉದ್ಯಮ ಬಂದ್‌ಆಗಿದೆ.

    ಈ ಚಳ್ಳಕೆರೆ ವಿಧಾನಸಭಾ ಕ್ಷೇತ್ರ‌ ಕಾಂಗ್ರೆಸ್ (Congress) ಭದ್ರ ಕೋಟೆ. 2013 ರಿಂದ ಸತತ ಎರಡು ಭಾರಿ ಶಾಸಕರಾಗಿ ಆಯ್ಕೆಯಾಗಿರುವ ಟಿ ರಘುಮೂರ್ತಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ಭಾಗದ ಅಭಿವೃದ್ದಿ ಮತ್ತು ಜನೋಪಯೋಗಿ ಶಾಸಕ ಎಂಬ ಖ್ಯಾತಿ ಪಡೆದಿರುವ ಶಾಸಕ ರಘುಮೂರ್ತಿಗೆ ಬದ್ದ ಎದುರಾಳಿ ಮಾಜಿ ಸಚಿವ ತಿಪ್ಪೇಸ್ವಾಮಿ ಪುತ್ರ ಕೆಟಿ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರೋದು ಬಾರಿ ತಲೆನೋವಾಗಿ ಪರಿಣಮಿಸಿದೆ.

    ‌ಜೆಡಿಎಸ್ (JDS) ಅಭ್ಯರ್ಥಿ ರವೀಶ್ ಕುಮಾರ್ ಕಳೆದ‌ ಚುನಾವಣೆಯಲ್ಲಿ ‌ಅತಿ ಕಡಿಮೆ ಅಂತರದಿಂದ ಸೋತರೂ ಸಹ ಮತ್ತೆ ‌ಚುನಾವಣೆ ಬರುವವರೆಗೆ ಕ್ಷೇತ್ರದತ್ತ ತಲೆಹಾಕಿಲ್ಲ ಎಂಬ ಆರೋಪವಿದೆ. ಅಲ್ಲದೇ ಸ್ಥಳಿಯರಾದ ಪಕ್ಷೇತರ ಅಭ್ಯರ್ಥಿ ಕೆಟಿ ಕುಮಾರಸ್ವಾಮಿ ಸಹ ಕಳೆದ ಬಾರಿ ಸಾಂಸಾರಿಕ‌ ಸಮಸ್ಯೆಯಿಂದ‌ ಚುನಾವಣೆಗೆ ನಾಮಪತ್ರ‌ ಸಲ್ಲಿಸಿ ಚುನಾವಣೆಗೂ ಮುನ್ನವೇ ಕಣದಿಂದ‌ ಹಿಂದೆ ಸರಿದಿದ್ದರು. ಇದೇ ಕೊರಗಿನಿಂದಾಗಿ ಅವರ ತಂದೆ‌ ಮಾಜಿ‌ ಸಚಿವ ತಿಪ್ಪೇಸ್ವಾಮಿ ಮೃತಪಟ್ಟಿದ್ದರು. ಕುಮಾರಸ್ವಾಮಿ ತಾಯಿ ಸಹ ಮಗನಿಂದ‌ ಐದು‌ ವರ್ಷಕಾಲ‌ ಮಾತನಾಡಿಸಿರಲಿಲ್ಲ.

    ಈ ಬಾರಿ ತಾಯಿಮಗ ಒಟ್ಟಾಗಿದ್ದಾರೆ. ತಂದೆಯ ಚಿರಶಾಂತಿಗಾಗಿ ಚುನಾವಣೆಯಲ್ಲಿ ಗೆಲ್ಲಬೇಕೆಂದೇ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿ ಮಾರಾಟ ಮಾಡಿ ಕಣದಲ್ಲಿದ್ದಾರೆ. ಹಣದ ಕೊರತೆಯು ‌ಇಲ್ಲದಂತೆ ಜನರೊಂದಿಗೆ ಪ್ರಚಾರದಲ್ಲಿ ಇರುವ ಪಕ್ಷೇತರ ಅಭ್ಯರ್ಥಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ರಘುಮೂರ್ತಿ ಮಧ್ಯೆ ಬಾರಿ ಸ್ಪರ್ಧೆ ಏರ್ಪಟ್ಟಿದೆ.

    ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಈ ಕ್ಷೇತ್ರಕ್ಕೆ ಹೊಸ ಮುಖವೆನಿಸಿದ್ದು ಕಾರ್ಯಕರ್ತರನ್ನು ಒಗ್ಗೂಡಿಸುವುದೇ ಕಷ್ಟಕರವಾಗಿದೆ. ಈವರೆಗೆ ಮತದಾರರನ್ನು ತಲಪಲು ಆಗಿಲ್ಲ. ಫೇಸ್ ವಾಲ್ಯೂ ಸಹ ಇಲ್ಲದ ಅನಿಲ್ ಕುಮಾರ್ ಗೆ ಚಳ್ಳಕೆರೆ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ. ಉಳಿದಂತೆ ಯಾವುದೇ ಬಲ ಬಿಜೆಪಿಗಿಲ್ಲ.

    ಅನಿಲ್ ಕುಮಾರ್ ಧನಾತ್ಮಕ ಅಂಶಗಳು:
    ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಲಾಭ ತಂದುಕೊಡಬಹುದು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ನಡುವೆ ಅಸಮಧಾನದ ಹೊಗೆ. ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಯಾದವ ಸಮುದಾಯ ಆಗಿರುವುದರಿಂದ ಯಾದವ ಸಮುದಾಯದ ಮತದಾರರನ್ನು ಸೆಳೆಯುತ್ತಾರೆ. ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಇರುವುದರಿಂದ ದಲಿತ ಸಮುದಾಯದ ಮತಗಳು ಒಂದೆಡೆ ಸೇರುವ ಸಾಧ್ಯತೆ. ಭದ್ರ ಮೇಲ್ದಾಂಡೆ ಯೋಜನೆಗೆ ಕೇಂದ್ರ ಸರ್ಕಾರ 5,300 ಕೋಟಿ ರೂ ಹಣವನ್ನು ಮೀಸಲು ಇಟ್ಟಿದೆ. ಬಿಜೆಪಿ ಮುಖಂಡರು ಒಗ್ಗಟ್ಟಿನ ಬಲ ಪ್ರದರ್ಶಿಸಿದರೆ ಗೆಲುವು ಸಿಗಬಹುದು.

    ಋಣಾತ್ಮಕ ಅಂಶಗಳು:
    ಬಿಜೆಪಿ ಸಮರ್ಥ ನಾಯಕರ ಮುಖಂಡರ ಕೊರತೆ, ಶಾಸಕ ಟಿ ರಘುಮೂರ್ತಿ ವಿರುದ್ಧ ಪ್ರಬಲ ಪ್ರತಿಸ್ಪರ್ಧಿಯ ಕೊರತೆ. ವಲಸಿಗ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದೆ. ಮಾಜಿ ಶಾಸಕ ಬಸವರಾಜ್ ಮಂಡಿಮಠ್ ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ. ಕೆಟಿ ಕುಮಾರಸ್ವಾಮಿ ಬಿಜೆಪಿಯಿಂದ ಟಿಕೆಟ್‌ ತಪ್ಪಿ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಿರುವುದು.

    ಕಾಂಗ್ರೆಸ್ ಅಭ್ಯರ್ಥಿ ರಘುಮೂರ್ತಿ ಧನಾತ್ಮಕ ಅಂಶಗಳು:
    ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಕೆಪಿಸಿಸಿಗೆ ಅರ್ಜಿ ಸಲ್ಲಿಸಿರುವ ಏಕೈಕ ಆಭ್ಯರ್ಥಿ ಶಾಸಕ ಟಿ ರಘುಮೂರ್ತಿ. ಚಳ್ಳಕೆರೆ ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯ ಶಾಸಕರ ಹೆಗಲಿಗಿವೆ. ಶಾಸಕ ರಘುಮೂರ್ತಿ ಪ್ರಯತ್ನದಿಂದ 51 ಕೆರೆಗಳ ನೀರು ತುಂಬಿಸುವ ಯೋಜನೆಗೆ ಸೇರ್ಪಡೆಯಾಗಿದೆ. ಪರುಶುರಾಂಪುರ ಭಾಗದಲ್ಲಿ ಹರಿಯುವ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಆರು ಚೆಕ್ ಡ್ಯಾಂಗಳ ನಿರ್ಮಾಣದಿಂದ 365 ದಿನ ಕೃಷಿಚಟುವಟಿಕೆಗೆ ದಾರಿ.

    ಗ್ರಾಮಾಂತರ ಪ್ರದೇಶಗಳಲ್ಲಿ ಭವನಗಳು, ಸಿಸಿ ರಸ್ತೆಗಳು, ಶುದ್ದ ನೀರು ಘಟಕ ಸ್ಥಾಪನೆಯಾಗಿದೆ. ಸ್ವಂತ ಕಟ್ಟಡಗಳ ಶಾಲೆಗಳ ನಿರ್ಮಾಣ, ಸರ್ಕಾರಿ ಕಟ್ಟಡಗಳು, ಹಾಸ್ಟೆಲ್‌ ನಿರ್ಮಾಣ. ಚಳ್ಳಕೆರೆ ನಗರಸಭೆ 16 ವಾರ್ಡ್ ಕೈ ವಶದಲ್ಲಿದೆ. ಚಳ್ಳಕೆರೆ ಉದ್ಯಮಿ ವೀರೇಂದ್ರ ಪಪ್ಪಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜನರ ಸಂಪರ್ಕದಲ್ಲಿದ್ದರು ಮತ್ತು ಕ್ಷೇತ್ರದ ಅನೇಕ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.

     

     

    ಕಾಂಗ್ರೆಸ್ ಅಭ್ಯರ್ಥಿ‌ ಋಣಾತ್ಮಕ ಅಂಶಗಳು:
    ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದನೆ ಇಲ್ಲ. ಚುನಾವಣೆ ಘೋಷಣೆ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡಲಾಗಿದೆ. ನಗರ ಅಧ್ಯಕ್ಷ ಕೆ ವೀರಭದ್ರಯ್ಯಸ್ಥಾನಕ್ಕೆ ದಲಿತ ಸಮುದಾಯ ಮತ್ತು ಪರುಶುರಾಮಪುರ ಭಾಗಕ್ಕೆ ಜಿಟಿ ಶಶಿಧರ ಆಯ್ಕೆಯಿಂದ ಪಕ್ಷದ ಹಿರಿಯರ ಅಸಮಧಾನ ಸ್ಪೋಟ. ಕ್ಷೇತದಲ್ಲಿ ತಹಶಿಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ ರಘುಮೂರ್ತಿ ಮತ್ತು ಶಾಸಕ ನಡುವಿನ ಭಿನ್ನಾಭಿಪ್ರಯಗಳು. ಕಾಮಗಾರಿ ವಿಚಾರದಲ್ಲಿ ಕಂಟ್ರಾಕ್ಟರ್ ಹಾಗೂ ಶಾಸಕರ‌ ಮಧ್ಯೆ ಭಿನ್ನಾಭಿಪ್ರಾಯ. ಎಲ್ಲಾ ಕಾಮಗಾರಿಗಳನ್ನು ಶಾಸಕರೇ ನಿರ್ವಹಣೆ ಮಾಡಿರುವುದಕ್ಕೆ ಅಸಮಾಧಾನ.

    ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಧನಾತ್ಮಕ ಅಂಶಗಳು
    ಕಳೆದ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ ಕೊನೆ ಸಮಯದಲ್ಲಿ ಬಿಜೆಪಿ ಆಭ್ಯರ್ಥಿ ತಟಸ್ಥವಾದ ಕಾರಣ ಜೆಡಿಎಸ್ ನ ಮತ ಪ್ರಮಾಣ ಹೆಚ್ಚಾಗಿತ್ತು. 30 ಸಾವಿರಕ್ಕೂ ಅಧಿಕ ಮತ ಗಳಿಸಿದ್ದ ಜೆಡಿಎಸ್ ಅಭ್ಯರ್ಥಿ ರವೀಶ್ ಇದನ್ನೇ ಬಲವರ್ಧನೆ ಮಾಡಿಕೊಂಡು ಗೆಲುವಿನ ಹಮ್ಮಸ್ಸಿನಲ್ಲಿದ್ದಾರೆ. ಸಕ್ರಿಯವಾಗಿ ಚುನಾವಣೆ ಚಟುವಟಿಕೆಯಲ್ಲಿದ್ದಾರೆ. ಇದನ್ನೂ ಓದಿ: ಟಿಕೆಟ್ ವಂಚಿತ ಶಾಸಕ ರಾಮದಾಸ್‌ರನ್ನು ತಬ್ಬಿ ಬೆನ್ನು ತಟ್ಟಿದ ಅಮಿತ್ ಶಾ

    ಋಣಾತ್ಮಕ ಅಂಶಗಳು:
    ಖಾಯಂ ನಾಯಕರನ್ನು ಹೊರತುಪಡಿಸಿ ಕ್ಷೇತ್ರದ ಮುಖಂಡರು ನಾಯರನ್ನು ಸಂಪರ್ಕಿಸಲಾಗುತ್ತಿಲ್ಲ. ವಾಣಿಜ್ಯೋದ್ಯಮಿ ಮತ್ತು ಪಕ್ಷದ ಪ್ರಭಾವಿ ನಾಯಕ ಎನಿಸಿಕೊಂಡಿದ್ದ ಕೆಸಿ ವೀರೆಂದ್ರ ಪಪ್ಪಿ ಕಾಂಗ್ರೆಸ್ ಗೆ ಸೇರಿರುವುದು ದೊಡ್ಡ ಹೊಡೆತ. ಮಾಜಿ ಶಾಸಕ ಬಸವರಾಜ್ ಮಂಡಿಮಠ್ ಬಿಜಿಪಿಯಿಂದ ಜೆಡಿಎಸ್‌ಗೆ ಬಂದ್ದಿರೂ ಸಹ ನಿರೀಕ್ಷೆಯಷ್ಟು ಲಾಭ ಇಲ್ಲ. ಜೆಡಿಎಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಕೆಟಿ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ.

    ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಧನಾತ್ಮಕ ಅಂಶಗಳು:
    ಸ್ಥಳಿಯ ಅಭ್ಯರ್ಥಿ ಎಂಬ ಹಣೆಪಟ್ಟಿ. ಮಾಜಿ ಸಚಿವ ದಿ ತಿಪ್ಪೇಸ್ವಾಮಿ ‌ಸೇವೆ ಕೆಟಿಕೆಗೆ ವರದಾನವಾಗಿದೆ. ಎರಡು ಬಾರಿ ಸೋತಿರುವ ಅನುಕಂಪ ಕುಮಾರಸ್ವಾಮಿ‌ ಮೇಲಿದೆ. ವಲಸಿಗರಿಗಿಂತ ಕುಮಾರಸ್ವಾಮಿ ಪರ ಸ್ಥಳೀಯ ನಾಯಕರ ಬ್ಯಾಟಿಂಗ್.

    ಕುಮಾರಸ್ವಾಮಿ ಋಣಾತ್ಮಕ ಅಂಶಗಳು:
    ಕಳೆದ ಚುನಾವಣೆವೇಳೆ‌ ಕಣದಿಂದ‌ ಪಲಾಯನ. ಮತದಾರರನ್ನು ತಲುಪದೇ ನಿರ್ಲಕ್ಷ ವಹಿಸಿದ್ದ ಅಸಮಾಧಾನ. ತಂದೆಯ ಹೆಸರಿನ ಮೇಲೆ ಗೆಲ್ಲುವ ನಿರೀಕ್ಷೆ. ಕೈನಲ್ಲಿ‌ಹಣವಿಲ್ಲದೇ ಆಸ್ತಿ ಮಾರಾಟ ಮಾರಿ ಸ್ಪರ್ಧೆ. ಕಳೆದ ಐದು ವರ್ಷ ಕ್ಷೇತ್ರದ ಜನರ ಒಡನಾಟ ಇರಲಿಲ್ಲ. ಚುನಾವಣೆ ವೇಳೆ ಅಪ್ಪನ ಹೆಸರಿನಲ್ಲಿ ಮತಯಾಚನೆ.

    ಮತದಾರರು ಎಷ್ಟಿದ್ದಾರೆ?
    ಒಟ್ಟು : 2,20,091
    ಪುರುಷರು: 1,09,602
    ಮಹಿಳೆಯರು: 1,10,486

    ಜಾತಿವಾರು ಲೆಕ್ಕಾಚಾರ
    ನಾಯಕ ಸಮುದಾಯ: 47,000
    ಎಸ್ಸಿ ಸಮುದಾಯ: 43,000
    ಯಾದವ ಸಮುದಾಯ: 37,000
    ಲಿಂಗಾಯತ : 18,000
    ಮುಸ್ಲಿಂ: 19,000
    ಒಕ್ಕಲಿಗ ಸಮುದಾಯ: 18,000
    ಇತರೆ: 39,000

  • 5 ಬಾರಿ ಗರ್ಭಪಾತ, ಮೂರನೇ ಪತ್ನಿಯಾಗಿರುವಂತೆ ಒತ್ತಡ- ಸಿಪಿಐ ವಿರುದ್ಧ ರೇಪ್ ಕೇಸ್!

    5 ಬಾರಿ ಗರ್ಭಪಾತ, ಮೂರನೇ ಪತ್ನಿಯಾಗಿರುವಂತೆ ಒತ್ತಡ- ಸಿಪಿಐ ವಿರುದ್ಧ ರೇಪ್ ಕೇಸ್!

    ಚಿತ್ರದುರ್ಗ: ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಐ ಜಿ.ಬಿ ಉಮೇಶ್ ವಿರುದ್ಧ ರೇಪ್ ಕೇಸ್ ದಾಖಲು ಮಾಡಲಾಗಿದೆ.

    ಶಿವಮೊಗ್ಗದಲ್ಲಿ ಯುವತಿ ಬಿಇಡಿ ಓದುತ್ತಿದ್ದಳು. ಇದೀಗ ಈಕೆ ಸೋದರ ಮಾವನ ಮಗನಾಗಿರುವ ಉಮೇಶ್ ವಿರುದ್ಧ ಚಿತ್ರದುರ್ಗ ನಗರದ ಮಹಿಳಾ ಠಾಣೆ (Chitradurga women Police Station) ಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

    5 ವರ್ಷದ ಹಿಂದೆ ದಾವಣಗೆರೆಯಲ್ಲಿ ಉಮೇಶ್ (Umesh) ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ದಾವಣಗೆರೆ (Davanagere) ಯಲ್ಲಿ ನಿವೇಶನದ ಸಮಸ್ಯೆ ಹಿನ್ನೆಲೆ ಸಹಾಯ ಕೇಳಿದ್ದೆವು. ಆಗ ದಾವಣಗೆರೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಆರೋಪಿಸಲಾಗಿದೆ.

    ಆತ ಕರೆದಾಗ ಹೋಗದಿದ್ದಕ್ಕೆ ಶಿವಮೊಗ್ಗ (Shivamogga)ಕ್ಕೆ ಬಂದು ಬಲತ್ಕಾರ ಮಾಡಿದ್ದಾರೆ. ಐದು ಸಲ ಯುವತಿಗೆ ಗರ್ಭಪಾತ ಮಾಡಿಸಿರುವ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ನರ್ಸ್‍ನ್ನು ಕಟ್ಟಿ ಹಾಕಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ

    ಸಿಪಿಐ ಉಮೇಶ್‍ಗೆ ಈಗಾಗಲೇ ಇಬ್ಬರು ಹೆಂಡತಿಯರಿದ್ದಾರೆ. 3ನೇ ಪತ್ನಿಯಾಗಿ ಇರುವಂತೆ ಸಿಪಿಐ ಉಮೇಶ್ ಒತ್ತಡ ಹೇರಿದ್ದಾನೆ. ದಾವಣಗೆರೆಯ ನಿವೇಶನ ನಿನಗೆ ಸಿಗದಂತೆ ಮಾಡುತ್ತೇನೆ. ನಿಮ್ಮ ತಂದೆ-ತಾಯಿಯ ಬದುಕು ಬೀದಿಗೆ ತರುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುವುದಾಗಿ ಯುವತಿ ಆರೋಪಿಸಿದ್ದಾಳೆ.

    ಕಲಂ 376 ಕ್ಲಾಸ್ (2)(ಞ)(ಟಿ), 323 (ಗಾಯಗೊಳಿಸುವುದು), 504 (ಉದ್ದೇಶಪೂರ್ವಕ ಅವಮಾನ), 506 (ಅಪರಾಧ ಬೆದರಿಕೆ) ಐಪಿಸಿ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣ ದಾಖಲಾದ ಬಳಿಕ ಸಿಪಿಐ ಜಿ.ಬಿ.ಉಮೇಶ್ ನಾಪತ್ತೆಯಾಗಿದ್ದಾನೆ.

    Live Tv
    [brid partner=56869869 player=32851 video=960834 autoplay=true]