Tag: ಚಳಿ

  • ರಾಜ್ಯದ ನಗರಗಳ ಹವಾಮಾನ ವರದಿ: 7-12-2020

    ರಾಜ್ಯದ ನಗರಗಳ ಹವಾಮಾನ ವರದಿ: 7-12-2020

    ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದಂತಹ ವಾತಾವರಣದ ಇರಲಿದೆ. ಇಂದು ಮತ್ತೆ ನಾಳೆ ಮಳೆಯಾಗುವ ಸಾಧ್ಯತೆ ಇದೆ.ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 25ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 35ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರಲ್ಲಿ ಗರಿಷ್ಠ ಉಷ್ಣಾಂಶ 34ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
    ಬೆಂಗಳೂರು: 25-19
    ಮಂಗಳೂರು: 34-26
    ಶಿವಮೊಗ್ಗ: 31-21
    ಬೆಳಗಾವಿ: 31-19
    ಮೈಸೂರು: 28-20

    ಮಂಡ್ಯ: 27-20
    ರಾಮನಗರ: 27-20
    ಮಡಿಕೇರಿ: 26-17
    ಹಾಸನ: 27-19
    ಚಾಮರಾಜನಗರ: 27-20

    ಚಿಕ್ಕಬಳ್ಳಾಪುರ: 23-17
    ಕೋಲಾರ: 24-19
    ತುಮಕೂರು: 27-19
    ಉಡುಪಿ: 34-26
    ಕಾರವಾರ: 35-17

    ಚಿಕ್ಕಮಗಳೂರು: 27-19
    ದಾವಣಗೆರೆ: 30-21
    ಚಿತ್ರದುರ್ಗ: 28-19
    ಹಾವೇರಿ: 31-21
    ಬಳ್ಳಾರಿ: 30-20

    ಧಾರವಾಡ: 31-19
    ಗದಗ: 31-19
    ಕೊಪ್ಪಳ: 31-20
    ರಾಯಚೂರು: 31-18
    ಯಾದಗಿರಿ: 32-18

    ವಿಜಯಪುರ: 25-19
    ಬೀದರ್: 29-14
    ಕಲಬುರಗಿ: 32-16
    ಬಾಗಲಕೋಟೆ: 32-19

  • ರಾಜ್ಯದ ನಗರಗಳ ಹವಾಮಾನ ವರದಿ: 17-11-2020

    ರಾಜ್ಯದ ನಗರಗಳ ಹವಾಮಾನ ವರದಿ: 17-11-2020

    ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣದ ಇರಲಿದ್ದು, ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕರ್ನಾಟಕ, ಕರಾವಳಿ ಭಾಗ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಬೆಳಗ್ಗೆ ಚಳಿಯ ಜೊತೆ ಇಬ್ಬನಿ ಕವಿದ ವಾತಾವರಣ ಇರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಶಿವಮೊಗ್ಗದಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮೈಸೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ.

    ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
    ಬೆಂಗಳೂರು: 24-19
    ಮಂಗಳೂರು: 32-25
    ಶಿವಮೊಗ್ಗ: 31-21
    ಬೆಳಗಾವಿ: 31-20
    ಮೈಸೂರು: 26-21

    ಮಂಡ್ಯ: 25-21
    ರಾಮನಗರ: 26-21
    ಮಡಿಕೇರಿ: 24-17
    ಹಾಸನ: 25-19
    ಚಾಮರಾಜನಗರ: 25-21

    ಚಿಕ್ಕಬಳ್ಳಾಪುರ: 24-17
    ಕೋಲಾರ: 24-19
    ತುಮಕೂರು: 26-19
    ಉಡುಪಿ: 33-26
    ಕಾರವಾರ: 34-27

    ಚಿಕ್ಕಮಗಳೂರು: 26-19
    ದಾವಣಗೆರೆ: 30-21
    ಚಿತ್ರದುರ್ಗ: 28-20
    ಹಾವೇರಿ: 32-22
    ಬಳ್ಳಾರಿ: 29-22

    ಧಾರವಾಡ: 31-21
    ಗದಗ: 31-21
    ಕೊಪ್ಪಳ: 31-22
    ರಾಯಚೂರು: 32-21
    ಯಾದಗಿರಿ: 32-21

    ವಿಜಯಪುರ: 25-19
    ಬೀದರ್: 31-18
    ಕಲಬುರಗಿ: 33-20
    ಬಾಗಲಕೋಟೆ: 32-21

  • ರಾಜ್ಯದ ನಗರಗಳ ಹವಾಮಾನ ವರದಿ: 16-11-2020

    ರಾಜ್ಯದ ನಗರಗಳ ಹವಾಮಾನ ವರದಿ: 16-11-2020

    ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣದ ಇರಲಿದ್ದು, ಮಳೆ ಪ್ರಮಾಣ ಕಡಿಮೆ ಇದೆ. ಉತ್ತರ ಕರ್ನಾಟಕ, ಕರಾವಳಿ ಭಾಗ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಬೆಳಗ್ಗೆ ಚಳಿಯ ಜೊತೆ ಇಬ್ಬನಿ ಕವಿದ ವಾತಾವರಣ ಇರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ.

    ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
    ಬೆಂಗಳೂರು: 26-21
    ಮಂಗಳೂರು: 34-26
    ಶಿವಮೊಗ್ಗ: 32-22
    ಬೆಳಗಾವಿ: 31-21
    ಮೈಸೂರು: 29-21

    ಮಂಡ್ಯ: 39-21
    ರಾಮನಗರ: 28-21
    ಮಡಿಕೇರಿ: 27-18
    ಹಾಸನ: 27-20
    ಚಾಮರಾಜನಗರ: 29-21

    ಚಿಕ್ಕಬಳ್ಳಾಪುರ: 24-19
    ಕೋಲಾರ: 26-21
    ತುಮಕೂರು: 27-21
    ಉಡುಪಿ: 34-26
    ಕಾರವಾರ: 33-23

    ಚಿಕ್ಕಮಗಳೂರು: 27-17
    ದಾವಣಗೆರೆ: 31-22
    ಚಿತ್ರದುರ್ಗ: 28-21
    ಹಾವೇರಿ: 32-22
    ಬಳ್ಳಾರಿ: 31-22

    ಧಾರವಾಡ: 32-21
    ಗದಗ: 32-22
    ಕೊಪ್ಪಳ: 32-22
    ರಾಯಚೂರು: 32-22
    ಯಾದಗಿರಿ: 32-22

    ವಿಜಯಪುರ: 26-20
    ಬೀದರ್: 31-19
    ಕಲಬುರಗಿ: 33-21
    ಬಾಗಲಕೋಟೆ: 33-22

  • ರಾಜ್ಯದಲ್ಲಿ ಮುಂದಿನ ಐದು ದಿನ ಮತ್ತೆ ಮಳೆಯ ಅಬ್ಬರ

    ರಾಜ್ಯದಲ್ಲಿ ಮುಂದಿನ ಐದು ದಿನ ಮತ್ತೆ ಮಳೆಯ ಅಬ್ಬರ

    ಬೆಂಗಳೂರು: ಒಂದು ವಾರ ಬಿಡುವು ನೀಡಿದ್ದ ವರುಣ ದೇವ ಮುಂದಿನ ಐದು ದಿನ ಮತ್ತೆ ಅಬ್ಬರಿಸಲಿದ್ದಾನೆ. ಈಶಾನ್ಯ ಮಾರುತಗಳು ದಕ್ಷಿಣ ಭಾರತವನ್ನ ಬುಧವಾರ ಪ್ರವೇಶಿಸಿದ್ದು, ತಮಿಳುನಾಡಿನ ಚೆನ್ನೈ ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ.

    ಇತ್ತ ಕರ್ನಾಟಕದ ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ನವೆಂಬರ್ 2 ರವರೆಗೆ ಮಳೆಯಾಗುವ ಸಾಧ್ಯತೆಗಳಿವೆ. ಅಕ್ಟೋಬರ್ 31, ನವೆಂಬರ್ 1 ಮತ್ತು 2 ರಂದು ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಕರಾವಳಿ ಭಾಗ, ಬೆಳಗಾವಿ, ಗದಗ, ವಿಜಯಪುರ, ರಾಯಚೂರು, ಹಾವೇರಿ, ಸೇರಿದಂತೆ ಹಲವೆಡೆ ಹಚ್ಚಿನ ಪ್ರಮಾಣದ ಮಳೆಯಾಗಲಿದೆ. ನಾಳೆಯಿಂದ ನವಂಬರ್ 2 ರವರೆಗೆ ಬೆಂಗಳೂರಿನಲ್ಲೂ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಜಂಟಿ ನಿರ್ದೇಶಕ ವಿಜ್ಞಾನಿ ಸಿ.ಎಸ್.ಪಾಟೀಲ್ ಹೇಳಿದ್ದಾರೆ.

    ಪ್ರತಿ ವರ್ಷದಂತೆ ಈ ಬಾರಿಯೂ ಸಾಧಾರಣ ಚಳಿ ಇರಲಿದೆ. ರಾಜ್ಯದಲ್ಲಿ ಚಳಿಗಾಲದ ಕನಿಷ್ಠ ಉಷ್ಣಾಂಶ ಕಳೆದ ಬಾರಿಯಂತೆಯೇ ಇರಲಿದ್ದು, ಕೆಲವು ಕಡೆ ಹೆಚ್ಚಿನ ಚಳಿ ಇರಲಿದೆ. ಬೆಂಗಳೂರಿನಲ್ಲಿ 12 ರಿಂದ 14 ಡಿಗ್ರಿ ಉಷ್ಣಾಂಶ ಇರಲಿದೆ. ಕನಿಷ್ಠ ಉಷ್ಣಾಂಶ ಸ್ಥಳದಿಂದ ಸ್ಥಳಕ್ಕೆ ಬದಲಾವಣೆ ಆಗಲಿದೆ. ಬೀದರ್, ಕಲಬುರಗಿ, ವಿಜಯಪುರದಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿಗಿಂತ ಕಡಿಮೆ ಆಗಲಿದೆ. ಜೊತೆಗೆ ಬಾಗಲಕೋಟೆ, ರಾಯಚೂರು ಗದಗ ಸೇರಿದಂತೆ ಉತ್ತರ ಒಳನಾಡಿನಲ್ಲಿ ಚಳಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.

  • ಮನೆಯಿಂದ ಹೊರ ಹಾಕಿದ ಮಗ – ಜಿಟಿಜಿಟಿ ಮಳೆಗೆ ಚಳಿಯಲ್ಲಿ ಪರದಾಡಿದ ವೃದ್ಧೆ

    ಮನೆಯಿಂದ ಹೊರ ಹಾಕಿದ ಮಗ – ಜಿಟಿಜಿಟಿ ಮಳೆಗೆ ಚಳಿಯಲ್ಲಿ ಪರದಾಡಿದ ವೃದ್ಧೆ

    ರಾಯಚೂರು: ಲಾಕ್‍ಡೌನ್ ಹಿನ್ನೆಲೆ ಎಲ್ಲೂ ಹೋಗಲಾರದೆ ಜಿಟಿ ಜಿಟಿ ಮಳೆಯಲ್ಲಿ ವೃದ್ಧೆ ರಸ್ತೆಯಲ್ಲೇ ಪರದಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಮನೆಯಿಂದ ಹೊರಹಾಕಿರುವ ಪಾಪಿ ಮಗನ ನಿಷ್ಕಕಾಳಜಿಯಿಂದ ನಗರದ ಮೇದರವಾಡಿ ನಿವಾಸಿ ಈರಮ್ಮ ನಗರ ಕೇಂದ್ರ ಬಸ್ ನಿಲ್ದಾಣದ ಬಳಿ ಮಳೆಯಲ್ಲಿ ನರಳಾಡಿದ್ದಾರೆ.

    ವೃದ್ಧೆಯ ನರಳಾಟ ಕಂಡು ಸಾರ್ವಜನಿಕರು ಬಸ್ ನಿಲ್ದಾಣದ ಒಳಗೆ ತಂದು ಬಿಟ್ಟಿದ್ದಾರೆ. ಆದರೆ ನಗರದಲ್ಲಿ ಮಳೆ ಇರುವುದರಿಂದ ಬಸ್ ನಿಲ್ದಾಣದಲ್ಲಿ ಚಳಿಯಿಂದ ವೃದ್ಧೆ ನಡುಗುತ್ತ ಕುಳಿತುಕೊಂಡೇ ನರಳಾಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಮಾಹಿತಿ ಮೇರೆಗೆ ಸಹಾಯಕ್ಕೆ ಮುಂದಾದ ಜಿಲ್ಲಾಡಳಿತ ನಿರಾಶ್ರಿತರ ಕೇಂದ್ರದ ಸಿಬ್ಬಂದಿ ವೃದ್ಧೆಯನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದೆ. ಆರೋಗ್ಯ ತಪಾಸಣೆ ಬಳಿಕ ನಿರಾಶ್ರಿತರ ಕೇಂದ್ರಕ್ಕೆ ವೃದ್ಧೆಯನ್ನು ಕರೆದೊಯ್ಯಲು ಕೇಂದ್ರದ ಸಿಬ್ಬಂದಿಗೆ ಜಿಲ್ಲಾಡಳಿತ ಸೂಚಿಸಿದೆ.

    ಜಿಲ್ಲೆಯ ರಾಯಚೂರು ಹಾಗೂ ಸಿಂಧನೂರು ನಗರಗಳು ಲಾಕ್‍ಡೌನ್ ಆಗಿವೆ. ಮಧ್ಯಾಹ್ನ 2 ಗಂಟೆವೆರೆಗೆ ಮಾತ್ರ ಅಗತ್ಯ ವಸ್ತುಗಳ ಮಾರಾಟ ನಡೆಯುತ್ತದೆ. ಅದನ್ನು ಹೊರತುಪಡಿಸಿ ಉಳಿದೆಲ್ಲ ವ್ಯವಹಾರಗಳು ಸಂಪೂರ್ಣ ಬಂದ್ ಆಗಿವೆ. ರಾಯಚೂರು ನಗರದಲ್ಲಿ ಮಳೆ ನಡುವೆಯೇ ಜನ ಅಗತ್ಯ ವಸ್ತುಗಳನ್ನು ಕೊಳ್ಳಲು ಓಡಾಡುತ್ತಿದ್ದಾರೆ. ಬಸ್ ಹಾಗೂ ಆಟೋ ಸಂಚಾರ ಸಂಪೂರ್ಣ ಬಂದ್ ಆಗಿದೆ.

    ಜಿಲ್ಲಾಡಳಿತ ಈ ಮೊದಲು ಕೇವಲ ನಗರ ಸಾರಿಗೆ ಮಾತ್ರ ಬಂದ್ ಮಾಡುವುದಾಗಿ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಆದರೆ ಮಂಗಳವಾರ ರಾತ್ರಿ ಎಲ್ಲ ಬಸ್‍ಗಳ ಓಡಾಟಕ್ಕೂ ಬ್ರೇಕ್ ಹಾಕಿದೆ. ಹೀಗಾಗಿ ಮಾಹಿತಿಯಿಲ್ಲದೆ ನಗರದಿಂದ ಹೊರಗಡೆ ಹೋಗಲು ಖಾಸಗಿ ವಾಹನಗಳಿಗೆ ಅವಕಾಶ ಇಲ್ಲದಿರುವುದರಿಂದ ಬೇರೆ ಊರುಗಳಿಗೆ ಹೋಗುವವರು ಬಸ್ ಇಲ್ಲದೆ ಪರದಾಡುತ್ತಿದ್ದಾರೆ.

  • ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಂಜು

    ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಂಜು

    ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯಾದ್ಯಂತ ಚಳಿ ಹಾಗೂ ಮುಂಜಾನೆಯ ಮಂಜು ಹೆಚ್ಚಾಗಿದೆ. ಕಳೆದ ಎರಡು ದಿನಗಳಿಂದ ಬೀಳುತ್ತಿರುವ ದಟ್ಟ ಮಂಜು ಬೆಳಗ್ಗೆ 9 ಗಂಟೆಯಾದರೂ ಕೂಡ ಸೂರ್ಯನ ದರ್ಶನವಾಗದ ಮಟ್ಟಿಗೆ ಬೀಳುತ್ತಿದೆ.

    ಬೆಳಗ್ಗಿನ ಜಾವಕ್ಕೆ ಶುರುವಾದ ಮಂಜು ಬೆಳಗ್ಗೆ 9.30 ಗಂಟೆಯಾದರೂ ಕೂಡ ಬೀಳುತ್ತಲೇ ಇತ್ತು. ಕುಂದಾನಗರಿ ಜನ ಒಂದು ಕ್ಷಣ ಇದು ಮಂಜೋ, ಮಳೆಯೋ ಎಂದು ಆಶ್ಚರ್ಯಗೊಂಡರು. ಕೆಲ ಜನರು ಈ ಮಂಜಿನ ವಾತಾವರಣದ ಖುಷಿಪಟ್ಟರೆ, ವಾಹನ ಸವಾರರು ಮುಂದಿನ ದೃಶ್ಯ ಕಾಣದೇ ಪೇಚಿಗೆ ಸಿಲುಕಿದರು.

    ಶಾಲಾ-ಕಾಲೇಜು, ನೌಕರಿ ಬೇರೆಡೆ ಹೋಗುವ ಜನ ಸ್ವೇಟರ್, ಟೋಪಿ ಧರಿಸಿಕೊಂಡೆ ಮನೆಯಿಂದ ಹೊರ ಬರುತ್ತಿದ್ದರು. ಬೆಳಗಾವಿಯ ನಗರ ಪ್ರದೇಶ, ರಾಷ್ಟ್ರೀಯ ಹೆದ್ದಾರಿ, ಗ್ರಾಮೀಣ ಪ್ರದೇಶದಲ್ಲೂ ಮಂಜು ಆವರಿಸುತ್ತಿದೆ. ಇದು ಪ್ರಕೃತಿ ಪ್ರಿಯರಿಗೆ ರಸದೌತಣ ನೀಡಿದಂತಾಗುತ್ತಿದೆ.

    ನಗರದಲ್ಲಿ ಪ್ರತಿದಿನ ಬೆಳಗ್ಗೆ 6ರಿಂದ 8ರವರೆಗೆ ಯಾವುದೇ ದಿಕ್ಕಿಗೂ ಕಣ್ಣು ಹಾಯಿಸಿದರೂ ಮಂಜು ಮುಸುಕಿದ ವಾತಾವರಣ ಕಂಡು ಬರುತ್ತಿದೆ. ವಾಯು ವಿಹಾರಕ್ಕೆ ಹೊರಟ ಜನರಿಗೆ ಪಕ್ಕದ ಮನೆ, ರಸ್ತೆಯಲ್ಲಿ ಹೋಗುವ ಜನರು, ಎಲ್ಲವೂ ಅಸ್ಪಷ್ಟವಾಗಿ, ಅಸದೃಶ್ಯವಾಗಿ ಕಾಣುತ್ತಿದ್ದಾರೆ. ಜನರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಅಪರೂಪದ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದಾರೆ.

  • ಶುಭ್ರವಾದ ನೀಲಿ ಆಕಾಶದಿಂದ ರಾಜ್ಯದಲ್ಲಿ ಹೆಚ್ಚಾಗಿದೆ ಚಳಿ

    ಶುಭ್ರವಾದ ನೀಲಿ ಆಕಾಶದಿಂದ ರಾಜ್ಯದಲ್ಲಿ ಹೆಚ್ಚಾಗಿದೆ ಚಳಿ

    ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಸಿಕ್ಕಪಟ್ಟೆ ಚಳಿ ಜನರನ್ನು ಹೈರಾಣಾಗಿಸಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಸೋಮವಾರ ಬೀದರ್ ನಲ್ಲಿ ವಾಡಿಕೆಗಿಂತ 7 ಡಿಗ್ರಿ ಸೆಲ್ಸಿಯಸ್ ಕಡಮೆ ತಾಪಮಾನ ದಾಖಲಾಗಿದೆ. ಬರೀ ಬೀದರ್ ಮಾತ್ರವಲ್ಲ ಶಿವಮೊಗ್ಗ, ಚಿತ್ರದುರ್ಗ, ಹಾಸನ, ವಿಜಯಪುರ, ರಾಯಚೂರು ಸೇರಿದಂತೆ ಹಲವೆಡೆ ವಾಡಿಕೆಯ ಕನಿಷ್ಠ ತಾಪಮಾನಕ್ಕಿಂತ ಕಡಿಮೆ ತಾಪಮಾನ ದಾಖಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಈ ರೀತಿಯ ವಾತಾವರಣವಿಲ್ಲ. ವಾಡಿಕೆಗಿಂತ ಕಡಿಮೆ ತಾಪಮಾನ ದಾಖಲಾಗಿಲ್ಲ. ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಮಲೆನಾಡಿನಲ್ಲಿ ಕನಿಷ್ಠ ತಾಪಮಾನ ಕಡಿಮೆಯಾಗಿದೆ.

    ಈ ರೀತಿ ಕನಿಷ್ಠ ತಾಪಮಾನ ದಾಖಲಾಗಲು ಪ್ರಮುಖ ಕಾರಣ ಶುಭ್ರವಾದ ನೀಲಿ ಆಕಾಶ. ಕಳೆದ ವಾರ ರಾಜ್ಯದೆಲ್ಲೆಡೆ ಮೋಡ ಕವಿದ ವಾತಾವರಣವಿತ್ತು. ಆದರೆ ಈ ವಾರ ಮೋಡವೇ ಇಲ್ಲ. ಹೀಗಾಗಿ ಬೆಳಗ್ಗಿನ ಸಮಯದಲ್ಲಿ ಕನಿಷ್ಠ ತಾಪಮಾನ ಕಡಿಮೆಯಾಗುತ್ತಿದೆ.

    ಉತ್ತರ ಭಾರತದಲ್ಲಿ ಮಳೆಯಾಗ್ತಿದ್ದು, ಅಲ್ಲಿನ ಶೀತ ಗಾಳಿಯ ಪ್ರಭಾವವೂ ಕೂಡ ರಾಜ್ಯದಲ್ಲಿ ಚಳಿ ಹೆಚ್ಚಾಗಲು ಕಾರಣವಾಗಿದೆ. ಆದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವಾಡಿಕೆಯ ತಾಪಮಾನ ಇರಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

    ವಿಶೇಷವೆಂದರೆ ದೇಶದಲ್ಲೇ ಸೋಮವಾರ ಗರಿಷ್ಠ ತಾಪಮಾನ ನಮ್ಮ ರಾಜ್ಯದಲ್ಲಿ ದಾಖಲಾಗಿದೆ. ಕಾರವಾರದಲ್ಲಿ ಸೋಮವಾರ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.

  • ತೋಳ ಚಂದ್ರಗ್ರಹಣದ ಎಫೆಕ್ಟ್- ವಾತಾವರಣದಲ್ಲಿ ಭಾರೀ ಬದಲಾವಣೆ

    ತೋಳ ಚಂದ್ರಗ್ರಹಣದ ಎಫೆಕ್ಟ್- ವಾತಾವರಣದಲ್ಲಿ ಭಾರೀ ಬದಲಾವಣೆ

    ಬೆಂಗಳೂರು: ಕಳೆದ ವರ್ಷದ ಕೊನೆಯಲ್ಲಿ ಸೂರ್ಯಗ್ರಹಣ ಈ ವರ್ಷದ ಆರಂಭದಲ್ಲಿ ಚಂದ್ರಗ್ರಹಣ. ಹದಿನೈದು ದಿನಗಳ ಅಂತರದಲ್ಲಿ ಬಂದ ಈ ಎರಡು ಗ್ರಹಣಗಳು ವಾತಾವರಣದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿವೆ.

    ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮೈ ಕೊರೆವ ಚಳಿಯಿಂದ ಜನರು ಹೊರಗಡೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬೆಳಗ್ಗೆ ಮೈಕೊರೆವ ಚಳಿ ಇದ್ದರೆ, ಮಧ್ಯಾಹ್ನದ ವೇಳೆ ಸೆಕೆ ಫೀಲ್ ಆಗುತ್ತೆ. ಸಂಜೆ ಹೊತ್ತಿಗೆ ಮತ್ತದೇ ರಣಭೀಕರ ಚಳಿ. ಹೀಗಾಗಿ ತೋಳ ಚಂದ್ರಗ್ರಹಣದಿಂದ ಹವಾಮಾನದಲ್ಲಿ ಮಹತ್ತರವಾದ ಬದಲಾವಣೆಯಾಗಿದೆ ಎನ್ನಲಾಗುತ್ತಿದೆ.

    ಚಂದ್ರಗ್ರಹಣದ ಬಳಿಕ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗೆ ಜ್ಯೋತಿಷಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ ಸೂರ್ಯಗ್ರಹಣವೇ ಕಾರಣ ಎನ್ನಲಾಗಿದೆ. ಈಗ ಚಂದ್ರಗ್ರಹಣದಿಂದ ಜಲ ಗಂಡಾಂತರ, ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇವೆ ಎಂದು ಹೇಳಲಾಗುತ್ತಿದೆ.

    ವಿಜ್ಞಾನಿಗಳ ಪ್ರಕಾರ, ರಾಜ್ಯದ ದಕ್ಷಿಣ ಕರಾವಳಿ, ಉತ್ತರ ಕರಾವಳಿ ಭಾಗ ಸೇರಿದಂತೆ ನಾನಾಕಡೆ ವಾತಾವರಣದಲ್ಲಿ ತೀವ್ರ ಬದಲಾವಣೆಗೆ ಕಾರಣವಾಗಿದ್ದು, ಸಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ. ದಿನೇ ದಿನೇ ಚಳಿಯ ತೀವ್ರತೆ ಹೆಚ್ಚಾಗುತ್ತಿದ್ದು, ಮಕ್ಕಳು, ಮಹಿಳೆಯರು, ವಯಸ್ಸಾದವರು ಹೆಚ್ಚರ ವಹಿಸಿದರೆ ಒಳ್ಳೆಯದು ಎಂದು ತಿಳಿಸಿದ್ದಾರೆ.

  • ಶಿಮ್ಲಾ, ಮಸ್ಸೂರಿಯನ್ನು ಮೀರಿಸುತ್ತಿದೆ ದೆಹಲಿ ಚಳಿ – ಮೈ ಕೊರೆಯುವ ಚಳಿಗೆ ಕಾರಣ ಏನು ಗೊತ್ತಾ?

    ಶಿಮ್ಲಾ, ಮಸ್ಸೂರಿಯನ್ನು ಮೀರಿಸುತ್ತಿದೆ ದೆಹಲಿ ಚಳಿ – ಮೈ ಕೊರೆಯುವ ಚಳಿಗೆ ಕಾರಣ ಏನು ಗೊತ್ತಾ?

    ನವದೆಹಲಿ: ದೆಹಲಿ ಅತಿಯಾದ ಬಿಸಿಲು ಮತ್ತು ದಟ್ಟ ವಾಯು ಮಾಲಿನ್ಯಕ್ಕೆ ಕುಖ್ಯಾತಿ ಪಡೆದುಕೊಂಡಿತ್ತು. ಆದರೆ ಈ ಬಾರಿ ರಣ ಬಿಸಿಲನ್ನು ಮೀರಿಸುವ ರೀತಿಯಲ್ಲಿ ಮೈ ಕೊರತೆಯುವ ಚಳಿ ಆರಂಭವಾಗಿದೆ. ಪ್ರತಿವರ್ಷ ಬಿಸಿಲಿನ ತಾಪ ತಾಳಲಾರದೆ ದೆಹಲಿಯ ಜನರು ಶಿಮ್ಲಾ, ಮನಾಲಿ, ಮಸ್ಸೂರಿಯಂತಹ ಪ್ರಖ್ಯಾತ ಗಿರಿಧಾಮಗಳಿಗೆ ಹೋಗಿ ರಿಲ್ಯಾಕ್ಸ್ ಮಾಡಿ ಬರುತ್ತಿದ್ದರು. ಆದರೆ ಈ ಬಾರಿ ದೆಹಲಿಯ ಕೆಲವು ಪ್ರದೇಶಗಳಲ್ಲಿ ಗಿರಿಧಾಮಗಳನ್ನೇ ಮೀರಿಸುವ ಕನಿಷ್ಠ ತಾಪಮಾನ ದಾಖಲಾಗಿದೆ.

    119 ವರ್ಷಗಳ ಬಳಿಕ ದೆಹಲಿ ಮತ್ತು ದೆಹಲಿಯ ಸುತ್ತಲಿನ ಪ್ರದೇಶದ ಕಠಿಣ ಡಿಸೆಂಬರ್ ಅನ್ನು ಎದುರಿಸುತ್ತಿದೆ. ದೆಹಲಿಯಲ್ಲಿ ಡಿಸೆಂಬರ್ 14ರ ಬಳಿಕ ದಿನದಿಂದ ದಿನಕ್ಕೆ ಕನಿಷ್ಠ ತಾಪಮಾನ ದಾಖಲಾಗುತ್ತಿದ್ದು, ತೀವ್ರ ಚಳಿಗೆ ಜನರು ಕಂಗೆಟ್ಟು ಹೋಗಿದ್ದಾರೆ. ಈಗ ಚಳಿಯಿಂದ ರಕ್ಷಿಸಿಕೊಳ್ಳಲು ದೆಹಲಿಯಿಂದ ಹೊರಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಕಳೆದ ಎರಡು ದಿನಗಳಿಂದ ಪ್ರಖ್ಯಾತ ಗಿರಿಧಾಮ ಉತ್ತರಾಖಂಡದ ಮುಸ್ಸೂರಿಯಲ್ಲಿ, ಹಗಲು ಮತ್ತು ರಾತ್ರಿ ಸಮಯದಲ್ಲಿ ಗರಿಷ್ಠ ತಾಪಮಾನವು 14 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚಾಗಿದೆ. ಈ ಎರಡೂ ದಿನಗಳಲ್ಲಿ, ರಾಜಧಾನಿ ದೆಹಲಿಯಲ್ಲಿ ಮಸ್ಸೂರಿಗಿಂತ ಕಡಿಮೆ ಉಷ್ಣಾಂಶ ದಾಖಲಾಗಿದೆ. ಭಾರತೀಯ ಹವಾಮಾನ ಕೇಂದ್ರಗಳು ಕಡಿಮೆ ತಾಪಮಾನದ ಶಿಖರಗಳನ್ನು ನೋಂದಾಯಿಸಿದ್ದು ಶನಿವಾರ ಮತ್ತು ಭಾನುವಾರ ದೆಹಲಿಯ ಬಹುತೇಕ ಎಲ್ಲಾ ತಾಪಮಾನವು 14 ಡಿಗ್ರಿ ಸೆಲ್ಸಿಯಸ್‍ಗಿಂತ ಕಡಿಮೆಯಾಗಿದೆ. ಇದನ್ನು ಓದಿ: ದೆಹಲಿಯಲ್ಲಿ ವಿಪರೀತ ಚಳಿ – ಪ್ರಯಾಣಿಕರ ಮನಗೆದ್ದಿತು ಆಟೋ ಚಾಲಕನ ಸಿಂಪಲ್ ಐಡಿಯಾ

    ಭಾನುವಾರ ಹಗಲು ದೆಹಲಿಯ ಜಾಫರ್ಪುರ್ ನಲ್ಲಿ 11.6 ಡಿಗ್ರಿ ಸೆಲ್ಸಿಯಸ್, ಮುಂಗೇಶ್ಪುರ 11.9 ಡಿಗ್ರಿ ಸೆಲ್ಸಿಯಸ್ , ಪಾಲಂ 13.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಶನಿವಾರ ರಾತ್ರಿ 2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಭಾನುವಾರ ಕನಿಷ್ಠ 2.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಶಿಮ್ಲಾ ಮತ್ತು ಮಸ್ಸೂರಿ ಗಿರಿಧಾಮಗಳಿಗೆ ಹೋಲಿಸಿಕೊಂಡರೆ ದೆಹಲಿ ಅತ್ಯಂತ ತಂಪಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಕಾರಣ ಏನು?
    ದೆಹಲಿಯಲ್ಲಿ ತೀವ್ರ ಚಳಿಗೆ ಹಲವು ಕಾರಣಗಳಿವೆ ಪ್ರಮುಖವಾಗಿ ಕಳೆದ ಹದಿನೈದು ದಿನಗಳಿಂದ ಉತ್ತರದ ಬಯಲು ಪ್ರದೇಶಗಳು ಬೆಳಗ್ಗೆ ಹೊತ್ತು ಮಂಜಿನ ಹೊದಿಕೆ ಹೊದ್ದಿವೆ. ಉತ್ತರ ಭಾರತದ ಬಹುತೇಕ ರಾಜ್ಯಗಳು ಮತ್ತು ಪೂರ್ವ ಪಾಕಿಸ್ತಾನ ತೀವ್ರ ಮಂಜಿನಿಂದ ಕೂಡಿದ್ದು ಮೋಡದ ಹೊದಿಕೆ ಹೊದ್ದಂತೆ ಭಾಸವಾಗಿದೆ. ಹೀಗೆ ನಿರ್ಮಾಣವಾಗಿರುವ ದಟ್ಟ ಮಂಜು ಸೂರ್ಯನ ಬೆಳಕು ಭೂಮಿಗೆ ತಾಗದಂತೆ ಮಾಡಿದೆ. ಈ ಮಂಜು ಅಥವಾ ಮೋಡದ ಹೊದಿಕೆ ಸಾಮಾನ್ಯವಾಗಿ ನೆಲದಿಂದ ಕೆಲವೇ ನೂರು ಮೀಟರ್ ಎತ್ತರದಲ್ಲಿದ್ದು ತೀವ್ರ ಚಳಿಗೆ ಕಾರಣ ಎನ್ನಲಾಗಿದೆ. 1,600-2,000 ಮೀಟರ್ ಎತ್ತರದಲ್ಲಿರುವ ಗಿರಿಧಾಮಗಳಲ್ಲಿ ಈ ರೀತಿ ಮೋಡಗಳು ಆವರಿಸುವುದು ತುಂಬಾ ಕಡಿಮೆ. ಇದಲ್ಲದೆ ಕಳೆದ ಕೆಲವು ದಿನಗಳಿಂದ ಗಿರಿಧಾಮಗಳಲ್ಲಿ ಮಳೆಯಾಗಿಲ್ಲ. ಇದರ ಅರ್ಥ ಶಿಮ್ಲಾ ಅಥವಾ ಮಸ್ಸೂರಿಯಲ್ಲಿ ಬೆಳಿಗ್ಗೆ ಮಂಜು ಇದ್ದರೂ, ಸೂರ್ಯನ ಬೆಳಕು ಭೂಮಿಯನ್ನು ತಲುಪುತ್ತಿದೆ. ಹೀಗಾಗಿ ಶಿಮ್ಲಾ ಮತ್ತು ಮಸ್ಸೂರಿ ತೀವ್ರ ಚಳಿ ಇಲ್ಲ ಎಂದು ಐಎಮ್‍ಡಿಯ ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ. ವಾರಾಂತ್ಯದಲ್ಲಿ ಶಿಮ್ಲಾ ಮತ್ತು ಮಸ್ಸೂರಿ ಎರಡರಲ್ಲೂ ದಿನದ ತಾಪಮಾನವು ಸಾಮಾನ್ಯಕ್ಕಿಂತ ಮೂರರಿಂದ ನಾಲ್ಕು ಡಿಗ್ರಿಗಳಷ್ಟಿದೆ. ಇದನ್ನು ಓದಿ: ದೆಹಲಿಯಲ್ಲಿ ದಟ್ಟ ಮಂಜು – ಹೆದ್ದಾರಿ ಕಾಣದೆ ಕಾಲುವೆಗೆ ಬಿತ್ತು ಕಾರು

    ಉತ್ತರ ಭಾರತದ ಪ್ರದೇಶಗಳಲ್ಲಿ ಸದ್ಯ ಪೂರ್ವದ ಶೀತಗಾಳಿ ಬೀಸುತ್ತಿದ್ದು ದೆಹಲಿ ಸೇರಿ ಹಲವಡೆ ದಟ್ಟ ಮಂಜು ಕವಿದುಕೊಳ್ಳಲು ಮತ್ತೊಂದು ಕಾರಣ ಎನ್ನಲಾಗಿದೆ. ಇದೇ ವೇಳೆ ಹಿಮಾಲಯ ಭಾಗದಲ್ಲಿ ನಿರಂತರ ಹಿಮಪಾತ ಆಗುತ್ತಿದ್ದು, ಈಶಾನ್ಯ ಮಾರುತಗಳ ಉತ್ತರದ ಕಡೆ ಬೀಸುತ್ತಿದೆ. ಈ ಎರಡರ ಪರಿಣಾಮದಿಂದ ದೆಹಲಿಯಲ್ಲಿ ದಟ್ಟ ಮಂಜು ಮತ್ತು ತೀವ್ರ ಕೊರತೆಯುವ ಚಳಿಗೆ ಕಾರಣ ಎಂದು ಹವಾಮಾನ ಇಲಾಖೆ ಹೇಳಿದೆ. ಸೋಮವಾರ ಬಳಿಕ ಈ ಮಾರುತಗಳು ದಿಕ್ಕು ಬದಲಿಸುವ ಸಾಧ್ಯ ಇದ್ದು ದೆಹಲಿಯಲ್ಲಿ ತಾಪಮಾನ ಗರಿಷ್ಠಕ್ಕೆ ಏರುವ ಸಾಧ್ಯತೆ ಇದೆ ಎನ್ನಲಾಗಿದೆ.

  • ದೆಹಲಿಯಲ್ಲಿ ವಿಪರೀತ ಚಳಿ – ಪ್ರಯಾಣಿಕರ ಮನಗೆದ್ದಿತು ಆಟೋ ಚಾಲಕನ ಸಿಂಪಲ್ ಐಡಿಯಾ

    ದೆಹಲಿಯಲ್ಲಿ ವಿಪರೀತ ಚಳಿ – ಪ್ರಯಾಣಿಕರ ಮನಗೆದ್ದಿತು ಆಟೋ ಚಾಲಕನ ಸಿಂಪಲ್ ಐಡಿಯಾ

    ನವದೆಹಲಿ: ರಾಜ್ಯ ರಾಜಧಾನಿಯಲ್ಲಿ ಈಗ ವಿಪರೀತ ಚಳಿ ಇದ್ದು, ಜನರು ತತ್ತರಿಸಿ ಹೋಗಿದ್ದಾರೆ. ಮಾಲಿನ್ಯದ ಜೊತೆಗೆ ಕೊರೆಯುವ ಚಳಿ ದೆಹಲಿಗರನ್ನು ಸುಸ್ತಾಗಿಸಿದೆ. ಆದರೆ ಚಳಿಯಿಂದ ಪ್ರಯಾಣಿಕರನ್ನು ರಕ್ಷಿಸಲು ಆಟೋ ಚಾಲಕರೊಬ್ಬರ ಸಿಂಪಲ್ ಐಡಿಯಾ ಎಲ್ಲರ ಮನ ಗೆದ್ದಿದೆ.

    ಹಿಮಪಾತವಾಗುವ ಶಿಮ್ಲಾ ಚಳಿಯನ್ನೂ ಮೀರಿಸುವಂತೆ ದೆಹಲಿಯಲ್ಲಿ ಚಳಿ ದಾಖಲಾಗಿದೆ. ಶನಿವಾರ ಮುಂಜಾನೆ 2.4 ಡಿಗ್ರಿ ಸೆಲ್ಸಿಯಸ್‍ನಷ್ಟು ತಾಪಮಾನ ರಾಷ್ಟ್ರ ರಾಜಧಾನಿಯಲ್ಲಿ ದಾಖಲಾಗಿತ್ತು. ಅಲ್ಲದೆ ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಚಳಿ ಇನ್ನೂ ಹೆಚ್ಚಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಹನಗಳಲ್ಲಿ ಹೋಗುವಾಗ ಸಾಮಾನ್ಯವಾಗಿ ಚಳಿಯಾಗುತ್ತೆ. ಆದರೆ ಕೊರೆಯುವ ಚಳಿಯಲ್ಲಿ ವಾಹನಗಳಲ್ಲಿ ಪ್ರಯಾಣಿಸೋದು ತುಂಬಾ ಕಷ್ಟ. ಇದನ್ನು ಮನಗಂಡ ಆಟೋ ಚಾಲಕರೊಬ್ಬರು ಪ್ರಯಾಣಿಕರನ್ನು ಚಳಿಯಿಂದ ರಕ್ಷಿಸಲು ಸಖತ್ ಪ್ಲಾನ್ ಮಾಡಿದ್ದಾರೆ. ತಮ್ಮ ಆಟೋದಲ್ಲಿ ಪ್ರಯಾಣಿಕರು ಕೂರುವ ಸ್ಥಳದ ಸುತ್ತ ಬಬಲ್ ನೆಟ್ ಹಾಕಿ ಚಳಿಯಿಂದ ಪ್ರಯಾಣಿಕರನ್ನು ರಕ್ಷಿಸುತ್ತಿದ್ದಾರೆ.

    https://twitter.com/Polychai1/status/1209160475348480000

    ಪೊಲಿಚಾಯ್ ಹೆಸರಿನ ಟ್ವಿಟ್ಟರ್ ಬಳಕೆದಾರರೊಬ್ಬರು ಆಟೋ ಚಾಲಕನ ಐಡಿಯಾಗೆ ಫಿದಾ ಆಗಿದ್ದು, ಈ ವಿಶೇಷ ಆಟೋದ ವಿಡಿಯೋ ಮಾಡಿ ಜಿಫ್ ಫಾರ್ಮೆಟ್‍ನಲ್ಲಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಆಟೋವಾಲಾ ನನ್ನ ಹೃದಯವನ್ನು ಗೆದ್ದಿದ್ದಾರೆ. ಇದು ನೋಡಲು ಸಿಂಪಲ್ ಎನಿಸಿದರೂ ಪ್ರಯಾಣಿಕರನ್ನು ಚಳಿಯಿಂದ ರಕ್ಷಿಸುತ್ತದೆ. ದೆಹಲಿ ಚಳಿಗೆ ಇದು ಸೂಪರ್ ಉಪಾಯ ಎಂದು ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್ ಸದ್ಯ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಆಟೋ ಚಾಲಕನ ಐಡಿಯಾಗೆ ಫಿದಾ ಆಗಿದ್ದಾರೆ. ಸಿಂಪಲ್ ಆಗಿ ಪರಿಣಾಮಕಾರಿ ಉಪಾಯ ಮಾಡಿರುವ ಚಾಲಕನಿಗೆ ಭೇಷ್ ಎನ್ನುತ್ತಿದ್ದಾರೆ. ನಿಮಗಾದರೂ ನಮ್ಮ ಕಷ್ಟ ಅರ್ಥವಾಯ್ತಲ್ಲ ಥ್ಯಾಂಕ್ ಯೂ ಎಂದು ಆಟೋವಾಲಾನ ಐಡಿಯಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.