Tag: ಚಳಿ

  • ಸ್ವಚ್ಛ ದೇಶವೆಂದು ಕರೆಯಲ್ಪಟ್ಟ ಬ್ರಿಟನ್‌ನಲ್ಲಿ ಇಲಿಗಳ ಕಾಟ

    ಸ್ವಚ್ಛ ದೇಶವೆಂದು ಕರೆಯಲ್ಪಟ್ಟ ಬ್ರಿಟನ್‌ನಲ್ಲಿ ಇಲಿಗಳ ಕಾಟ

    ಲಂಡನ್:‌ ಯುರೋಪಿಯನ್ ದೇಶಗಳನ್ನು ಸ್ವಚ್ಛ ದೇಶಗಳೆಂದು ಪರಿಗಣಿಸಲಾಗಿದೆ. ಅದರಲ್ಲಿ ಬ್ರಿಟನ್ (Britain) ಕೂಡ ಒಂದಾಗಿದೆ. ಆದರೆ ಇಲಿಗಳ ಸಂಖ್ಯೆ ಹೆಚ್ಚಾಗಿದ್ದು, ಸದ್ಯ ಇಲ್ಲಿನ ಸ್ವಚ್ಛತೆಯನ್ನೇ ಪ್ರಶ್ನಿಸುವಂತಾಗಿದೆ.

    ಹೌದು. ಬ್ರಿಟನ್ ತನ್ನ ದೇಶದಲ್ಲಿನ ಹೊಲಸುಗಳಿಂದ ತೊಂದರೆಗೀಡಾಗಿದೆ. ಇದರಿಂದಾಗಿ ಇಲ್ಲಿ ಇಲಿಗಳ (Rat) ಕಾಟ ಜಾಸ್ತಿಯಾಗಿದೆ. ಈ ಇಲಿಗಳು ಸಾಮಾನ್ಯ ಇಲಿಗಳಂತಿಲ್ಲ, ಬದಲಾಗಿ ಗಾತ್ರದಲ್ಲಿ ಅವುಗಳು ದೊಡ್ಡದಾಗಿವೆ. ಏಕಾಏಕಿ ಇಲಿಗಳ ಕಾಟ ಹೆಚ್ಚಾದ ಕಾರಣ ಬ್ರಿಟಿಷರು ಕಂಗಾಲಾಗಿದ್ದಾರೆ. ಇಲ್ಲಿನ ಜನರ ಸಂಖ್ಯೆಗಿಂತ ಇಲಿಗಳ ಸಂಖ್ಯೆ 25 ಕೋಟಿಗೆ ತಲುಪಿದೆ. ಏಕಾಏಕಿ ಇಷ್ಟೊಂದು ಇಲಿಗಳು ಬಂದಿರುವುದು ಜನರಲ್ಲಿ ಆತಂಕ ಮೂಡಿಸಿದೆ.

    ಇಲಿಗಳ ಹೆಚ್ಚಳಕ್ಕೆ ಕಾರಣವೇನು?: ಸಮಯಕ್ಕೆ ಸರಿಯಾಗಿ ಕಸದ ತೊಟ್ಟಿಗಳ ಸಂಗ್ರಹ ವಿಳಂಬವೇ ಇಲಿಗಳ ಸಂಖ್ಯೆ ಏಕಾಏಕಿ ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ. ಸ್ವಚ್ಛತೆಯ ಕೊರತೆಯಿಂದ ಇಲಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಇಲಿಗಳು ಈಗ ಬ್ರಿಟನ್‌ನ ಮನೆಗಳ ಮೇಲೆ ದಾಳಿ ಮಾಡುತ್ತಿವೆ. ಬ್ರಿಟಿಷ್ ಪೆಸ್ಟ್ ಕಂಟ್ರೋಲ್ ಅಸೋಸಿಯೇಷನ್ ​​(BPCA) ಪ್ರಕಾರ, ಕಳೆದ 90 ದಿನಗಳಲ್ಲಿ ಈ ಸಮಸ್ಯೆಗಳನ್ನು ಎದುರಿಸಲು ಸಹಾಯ ಪಡೆಯುವವರ ಸಂಖ್ಯೆಯು ಹೆಚ್ಚಾಗಿದೆ.

    ಬ್ರಿಟನ್‌ನಲ್ಲಿ ಸುಮಾರು 25 ಕೋಟಿ ಇಲಿಗಳು ವಾಸಿಸುತ್ತವೆ ಎಂದು ನಂಬಲಾಗಿದೆ. ಇದೀಗ ಚಳಿಯಿಂದಾಗಿ ಇಲಿಗಳು ಮನೆಗಳ ಒಳಗೆ ನುಗ್ಗಲು ಆರಂಭಿಸಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಇದನ್ನೂ ಓದಿ: ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ನಾಯಕರ ಕೆಲಸವಲ್ಲ: ಮೋದಿ ವಿರುದ್ಧ ದೀದಿ ವಾಗ್ದಾಳಿ

    ಈ ಸಂಬಂಧ BPCA ಯ ತಾಂತ್ರಿಕ ವ್ಯವಸ್ಥಾಪಕಿ ನಟಾಲಿ ಬಂಗಯ್ ಪ್ರತಿಕ್ರಿಯಿಸಿ,  ಚಳಿಗಾಲದಲ್ಲಿ ಇಲಿಗಳ ಹಾವಳಿ ಹೆಚ್ಚಾಗುವುದು ಸಾಮಾನ್ಯ, ಇಲಿಗಳು ಆಹಾರ ಪದಾರ್ಥಗಳನ್ನು ಹುಡುಕಿಕೊಂಡು ಬೆಚ್ಚಗಿನ ಮತ್ತು ಶುಷ್ಕ ಸ್ಥಳಗಳಲ್ಲಿ ಆಶ್ರಯ ಪಡೆಯುತ್ತವೆ. ಹಬ್ಬ ಹರಿದಿನಗಳಲ್ಲಿ ಕಸದ ತೊಟ್ಟಿಗಳನ್ನು ಸಂಗ್ರಹಿಸದಿರುವುದು. ಹಾಗೂ ಕೆಲವೊಮ್ಮೆ ಡಸ್ಟ್‌ಬಿನ್‌ಗಳು ಸಂಪೂರ್ಣ ಭರ್ತಿಯಾದ ಬಳಿಕ ಜನರು ತಮ್ಮ ಕಸವನ್ನು ಅದರ ಬದಿಯಲ್ಲಿ ಇಡುತ್ತಾರೆ ಇದು ಕೂಡ ಕಾರಣವಾಗುತ್ತದೆ ಎಂದು ಹೇಳಿದರು.

  • ಭಕ್ತರು ಚಳಿಯಿಂದ ರಕ್ಷಿಸಿಕೊಳ್ಳಲು ಅಯೋಧ್ಯೆಯಲ್ಲಿ ಮಾಡಲಾಗಿದೆ ವಿಶೇಷ ವ್ಯವಸ್ಥೆ

    ಭಕ್ತರು ಚಳಿಯಿಂದ ರಕ್ಷಿಸಿಕೊಳ್ಳಲು ಅಯೋಧ್ಯೆಯಲ್ಲಿ ಮಾಡಲಾಗಿದೆ ವಿಶೇಷ ವ್ಯವಸ್ಥೆ

    ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ (Pran Prathistha Ceremony) ದಿನಗಣನೆ ಆರಂಭವಾಗಿದೆ. ಇಡೀ ದೇಶದಲ್ಲಿ ಈಗಾಗಲೇ ಸಮಾರಂಭದ ಬಗ್ಗೆ ಉತ್ಸಾಹದ ವಾತಾವರಣವಿದೆ. ಅಯೋಧ್ಯೆಯಲ್ಲಿಯೂ ಸಹ ಸಮಾರಂಭಕ್ಕೆ ಭರದಿಂದ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ದೇಶದಾದ್ಯಂತ ಅನೇಕ ಪ್ರಸಿದ್ಧ ವ್ಯಕ್ತಿಗಳು ಶ್ರೀರಾಮನ ದರ್ಶನಕ್ಕಾಗಿ ಇಲ್ಲಿಗೆ ಬರಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚುತ್ತಿರುವ ಚಳಿ ಹಾಗೂ ತಾಪಮಾನ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಯೋಧ್ಯೆ ಮುನ್ಸಿಪಲ್ ಕಾರ್ಪೊರೇಷನ್ ಹೊಡ ಐಡಿಯಾವೊಂದನ್ನು ಕಂಡುಕೊಂಡಿದೆ.

    ಹೌದು. ಉತರಪ್ರದೇಶ (Uttar Pradesh) ಸೇರಿದಂತೆ ದೇಶಾದ್ಯಂತ ವಿಪರೀತ ಚಳಿ ಇದೆ. ಚಳಿಯಿಂದಾಗಿ ಮಂಜು ಕೂಡ ದಟ್ಟವಾಗಿರುತ್ತದೆ. ಅಲ್ಲದೇ ಮಂಜು ಮುಸುಕಿರುವುದರಿಂದ ರೈಲುಗಳು ಮತ್ತು ವಿಮಾನ ಸೇವೆಗಳಲ್ಲಿ ವ್ಯತ್ಯಯವಾಗುತ್ತದೆ. ರಸ್ತೆಗಳಲ್ಲಿಯೂ ವಾಹನಗಳು ನಿಧಾನವಾಗಿ ಚಲಿಸುತ್ತಿವೆ. ಹೀಗಾಗಿ ಈ ಚಳಿಯನ್ನು ಗಮನದಲ್ಲಿಟ್ಟುಕೊಂಡು ಅಯೋಧ್ಯೆಯಲ್ಲಿ ವಿಶೇಷ ವ್ಯವಸ್ಥೆಯೊಂದನ್ನು ಮಾಡಲಾಗಿದೆ. ಇದನ್ನೂ ಓದಿ: ರಾಮನ ಪ್ರಾಣಪ್ರತಿಷ್ಠೆಗೆ ದಿನಗಣನೆ- ಸೀತಾ ಮಾತೆಯ ರಕ್ಷಣೆಗೆ ಜಟಾಯು ಹೋರಾಡಿದ್ದ ಸ್ಥಳಕ್ಕೆ ಮೋದಿ ಭೇಟಿ

    ಭಕ್ತರನ್ನು ಚಳಿಯಿಂದ ರಕ್ಷಿಸಲು ಈ ಕೆಲಸ ಮಾಡಲಾಗಿದ್ದು, ಅಯೋಧ್ಯೆಯಾದ್ಯಂತ ಹಲವಾರು ಸ್ಥಳಗಳಲ್ಲಿ ಸ್ವಲ್ಪ ಕೆಂಪು ಬಣ್ಣದಲ್ಲಿರುವ ಹೊರಾಂಗಣ ಹೀಟರ್‌ಗಳನ್ನು ಅಳವಡಿಸಲಾಗಿದೆ. ಇದು ತಾಪಮಾನವು ಕುಸಿಯುತ್ತಿರುವ ನಡುವೆ ಜನರು ಬೆಚ್ಚಗಾಗಲು ಸಹಾಯ ಮಾಡುತ್ತದೆ. ಈ ಹೀಟರ್‌ಗಳಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿಯೂ ಜನರು ಚಳಿಯನ್ನು ಅನುಭವಿಸುವುದಿಲ್ಲ. ಹೀಗಾಗಿ ಅವರು ಆರಾಮವಾಗಿ ರಾಮಲಲ್ಲಾನ ದರ್ಶನವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಹೀಟರ್‌ಗಳನ್ನು ಮುನ್ಸಿಪಲ್ ಕಾರ್ಪೊರೇಶನ್ ಅಯೋಧ್ಯೆ ಸ್ಥಾಪಿಸಿದೆ.

  • ರಾಜ್ಯದ ಹವಾಮಾನ ವರದಿ: 26-01-2023

    ರಾಜ್ಯದ ಹವಾಮಾನ ವರದಿ: 26-01-2023

    ಬೆಂಗಳೂರು (Bengaluru) ಸೇರಿದಂತೆ ರಾಜ್ಯದಲ್ಲಿ ಈ ಬಾರಿ ಜನವರಿ ಕೊನೆಯವರೆಗೂ ಕೊರೆಯುವ ಚಳಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಜಾನೆ ಮಂಜು ಮುಸುಕಿನ ವಾತಾವರಣ ಇರಲಿದೆ. ಬೆಳಗ್ಗೆ 8 ಗಂಟೆ ನಂತರ ಬಿಸಿಲಿನ ವಾತಾವರಣ ಕಂಡುಬರಲಿದೆ. ಸಂಜೆ ಮತ್ತೆ ಚಳಿ ವಾತಾವರಣ ಇರಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ದಾವಣಗೆರೆಯಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-14
    ಮಂಗಳೂರು: 32-23
    ಶಿವಮೊಗ್ಗ: 33-17
    ಬೆಳಗಾವಿ: 32-17
    ಮೈಸೂರು: 30-15
    ಮಂಡ್ಯ: 31-15

    ಮಡಿಕೇರಿ: 28-13
    ರಾಮನಗರ: 30-15
    ಹಾಸನ: 29-14
    ಚಾಮರಾಜನಗರ: 30-15
    ಚಿಕ್ಕಬಳ್ಳಾಪುರ: 27-12

    ಕೋಲಾರ: 28-14
    ತುಮಕೂರು: 30-14
    ಉಡುಪಿ: 32-23
    ಕಾರವಾರ: 31-23
    ಚಿಕ್ಕಮಗಳೂರು: 29-14
    ದಾವಣಗೆರೆ: 32-17

    ಹುಬ್ಬಳ್ಳಿ: 32-17
    ಚಿತ್ರದುರ್ಗ: 31-16
    ಹಾವೇರಿ: 33-17
    ಬಳ್ಳಾರಿ: 32-17
    ಗದಗ: 32-17
    ಕೊಪ್ಪಳ: 32-17

    ರಾಯಚೂರು: 32-16
    ಯಾದಗಿರಿ: 32-16
    ವಿಜಯಪುರ: 32-18
    ಬೀದರ್: 31-15
    ಕಲಬುರಗಿ: 32-16
    ಬಾಗಲಕೋಟೆ: 33-17

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೊರೆಯುವ ಚಳಿಗೆ ಹೆಚ್ಚಾದ ಆರೋಗ್ಯದ ಸಮಸ್ಯೆಗಳು

    ಕೊರೆಯುವ ಚಳಿಗೆ ಹೆಚ್ಚಾದ ಆರೋಗ್ಯದ ಸಮಸ್ಯೆಗಳು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜ್ಯಕ್ಕೆ ತಟ್ಟಲಿದೆ ಇನ್ನೂ 10 ದಿನ ಕೊರೆಯುವ ಚಳಿ

    ರಾಜ್ಯಕ್ಕೆ ತಟ್ಟಲಿದೆ ಇನ್ನೂ 10 ದಿನ ಕೊರೆಯುವ ಚಳಿ

    ಬೆಂಗಳೂರು : ಈ ಬಾರಿ ಕಳೆದ ವರ್ಷಕ್ಕಿಂತಲೂ ಅಧಿಕ ಚಳಿಯಿದೆ. ಜನವರಿ ಕೊನೆಯವರೆಗೂ ಕೊರೆಯುವ ಚಳಿಯ (Winter) ಎಫೆಕ್ಟ್ ತಟ್ಟಿಲಿದೆ ಎಂದು ಹವಾಮಾನ‌ (Weather) ಇಲಾಖೆ ಮುನ್ಸೂಚನೆ ನೀಡಿದೆ.

    ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಚಳಿಯಿದೆ. ಈಗಾಗಲೇ ರಾಜ್ಯದ ಜನ ಚಳಿಗೆ ಥಂಡಾ ಹೊಡೆದಿದ್ದಾರೆ. ಮುಂದಿನ ಒಂದು ವಾರಗಳ ಕಾಲ ಅಥವಾ 10 ದಿನಗಳ ಕಾಲ ದಟ್ಟ ಮಂಜು ಇರಲಿದೆ. ಇದರ ನಡುವೆ ಬೆಂಗಳೂರು ಹಾಗೂ ಸುತ್ತಮುತ್ತ ಸುಮಾರು 200 ಮೀ.ವರೆಗೆ ಶುಕ್ರವಾರ ವಿಪರೀತ ಮಂಜು ಇರಲಿದೆ. ಅದರಲ್ಲೂ ಯಲಹಂಕ, ಎಚ್‌ಎಎಲ್ ವಿಮಾನ ನಿಲ್ದಾಣ ಸುತ್ತಮುತ್ತ ಹೆಚ್ಚಿತ್ತು. ಹೀಗಾಗಿ ಗುರುವಾರ‌ ಮಂಜು ಕವಿದ ವಾತಾವರಣದ ಮುನ್ನೆಚ್ಚರಿಕೆ ಕೊಡಲಾಗಿದೆ.

    ಮಂಜಿನಲ್ಲಿ ಪ್ರಮುಖವಾಗಿ 3 ವಿಧಗಳಿವೆ. ಹಗುರ ಮಂಜು ಅಂದರೆ 800-500 ಮೀ.ವರೆಗೆ ಇರುತ್ತದೆ. 500-200 ಮೀ. ಇದ್ದರೇ ಅದನ್ನು ಮಧ್ಯಮ ಮಂಜು ಎನ್ನುತ್ತೇವೆ. 200 ಮೀ. ಕೆಳಗೆ ಹೋದರೆ ದಟ್ಟ ಮಂಜು ಎನ್ನುತ್ತೇವೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಹಗುರ ಮತ್ತು ಮಾಧ್ಯಮ ಮಂಜನ್ನು ಕಾಣುತ್ತೇವೆ. ಆದರೆ ಈ ಬಾರಿ 200 ಮೀ. ಎಂದರೆ ದಟ್ಟ ಮಂಜಿನ ಮುನ್ಸೂಚನೆಯನ್ನು ಹವಾಮಾನ ತಜ್ಞ ಪ್ರಸಾದ್ ನೀಡಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಮೋದಿ ಮತ ಭೇಟೆ – ಏನಿದು ಬಿಜೆಪಿ ರಣತಂತ್ರ?

    ಈ ದಟ್ಟ ಮಂಜಿನ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕೆಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಈ ಮಂಜು ಹಾಗೂ ಚಳಿಯಿಂದಾಗಿ ಕೆಲವೊಬ್ಬರಿಗೆ ಮೂಗಿನಿಂದ ರಕ್ತ ಬರಬಹುದು, ಚರ್ಮದಲ್ಲಿ ಡ್ರೈನೇಸ್ ಬರಬಹುದು, ಚರ್ಮ ತುರಿಕೆಯಾ ಸಾಧ್ಯತೆ ಇದೆ. ವಯಸ್ಸಾದವರಿಗೆ, ಮಕ್ಕಳಿಗೆ ನಡುಕ ಉಂಟಾಗಬಹುದು ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ 10 ಅಡಿ ದೂರದ ವ್ಯಕ್ತಿಯೂ ಕಾಣದಷ್ಟು ಮಂಜು ಆವರಿಸಲಿದೆ ಎನ್ನಲಾಗಿದೆ. ಇದನ್ನೂ ಓದಿ: ಯಾದಗಿರಿ, ಕಲಬುರಗಿಗೆ ಮೋದಿ – ಎಲ್ಲಿ, ಎಷ್ಟು ಗಂಟೆಗೆ ಏನು ಕಾರ್ಯಕ್ರಮ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉತ್ತರ ಭಾರತ ಪ್ರವಾಸದ ಯೋಜನೆಯಲ್ಲಿದ್ದರೆ ಸದ್ಯ ಮುಂದೂಡಿ

    ಉತ್ತರ ಭಾರತ ಪ್ರವಾಸದ ಯೋಜನೆಯಲ್ಲಿದ್ದರೆ ಸದ್ಯ ಮುಂದೂಡಿ

    – ಮುಂದಿನ 6 ದಿನ ದೆಹಲಿಗೆ ಎಲ್ಲೋ ಅಲರ್ಟ್
    – ಭಾನುವಾರ ರಾತ್ರಿ 1.4 ಡಿಗ್ರಿ ಕನಿಷ್ಠ ತಾಪಮಾನ ದಾಖಲು

    ನವದೆಹಲಿ: ಉತ್ತರ ಭಾರತ (North India) ಪ್ರವಾಸ ಮಾಡುವ ಯೋಜನೆಯಲ್ಲಿದ್ದರೆ ಕೆಲ ದಿನಗಳ ಕಾಲ ನಿಮ್ಮ ಪ್ರವಾಸ ಮುಂದೂಡುವುದು ಒಳಿತು. ತೀವ್ರ ಶೀತಗಾಳಿಯಿಂದ ದೆಹಲಿ (Delhi) ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಉಷ್ಣಾಂಶ ಕುಸಿದಿದ್ದು ಭಾರೀ ಮಂಜು (Fog) ಮತ್ತು ಚಳಿ (Cold) ಆವರಿಸಿಕೊಂಡಿದೆ.

    ಭಾನುವಾರ ರಾತ್ರಿ 1.4 ಡಿಗ್ರಿ ಕನಿಷ್ಠ ತಾಪಮಾನ ದೆಹಲಿಯಲ್ಲಿ ದಾಖಲಾಗಿದ್ದು ಈ ಋತುವಿನ ಅತ್ಯಂತ ಕಡಿಮೆ ತಾಪಮಾನ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ. ಸೋಮವಾರದಿಂದ ಮುಂದಿನ 6 ದಿನಗಳವರೆಗೆ ದೆಹಲಿಯಲ್ಲಿ ಎಲ್ಲೋ ಅಲರ್ಟ್ ನೀಡಲಾಗಿದೆ. ಮೊದಲ 3 ದಿನಗಳಲ್ಲಿ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ನಂತರದ 3 ದಿನ ದಟ್ಟ ಮಂಜು ಆವರಿಸಿಕೊಳ್ಳಲಿದೆ ಎಂದು ಎಚ್ಚರಿಸಲಾಗಿದೆ. ಇದನ್ನೂ ಓದಿ: ಸಚಿವ ಸುಧಾಕರ್‌ರನ್ನ ಹಾಡಿ ಹೊಗಳಿದ ರಮ್ಯಾ: ಕೈಗೆ ನಟಿ ಬೈ ಹೇಳಿ ಬಿಜೆಪಿ ಸೇರ್ಪಡೆ?

    ಹವಾಮಾನ ಇಲಾಖೆಯ ಪ್ರಕಾರ, ಹಿಮಾಲಯದಿಂದ ವಾಯುವ್ಯ ಭಾರತದ ಬಯಲು ಪ್ರದೇಶದತ್ತ ವಾಯುವ್ಯ ಮಾರುತಗಳು ಬೀಸುತ್ತಿದ್ದು, ಮುಂದಿನ 2 ದಿನಗಳಲ್ಲಿ ಕನಿಷ್ಠ ತಾಪಮಾನವು 2-4 ಡಿಗ್ರಿಗಳಷ್ಟು ಕುಸಿಯುವ ಸಾಧ್ಯತೆಯಿದೆ. ಇದರ ಪರಿಣಾಮ ಉತ್ತರ ಭಾರತದ ಹಲವು ರಾಜ್ಯಗಳಲ್ಲೂ ಉಷ್ಣಾಂಶ ಕನಿಷ್ಠ ಮಟ್ಟದಲ್ಲಿರಲಿದೆ.

    ತಾಪಮಾನ ಕುಸಿದ ಹಿನ್ನಲೆ ಉತ್ತರ ರೈಲ್ವೆ ಪ್ರದೇಶದಲ್ಲಿ 30ಕ್ಕೂ ಹೆಚ್ಚು ರೈಲುಗಳು ತಡವಾಗಿ ಓಡುತ್ತಿವೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಇನ್ನು ವಿಮಾನಗಳ ಹಾರಾಟದಲ್ಲೂ ವ್ಯತ್ಯಯವಾಗಿದೆ. ಇದನ್ನೂ ಓದಿ: ಏಕಕಾಲಕ್ಕೆ 72 ಕ್ಷೇತ್ರ ನಿರ್ವಹಿಸುವ ರಿಮೋಟ್ ಮತಯಂತ್ರ ಪ್ರದರ್ಶನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜ್ಯದಲ್ಲಿ ಮುಂದಿನ 6 ದಿನ ಚಳಿ ಹೆಚ್ಚಳ ಸಾಧ್ಯತೆ

    ರಾಜ್ಯದಲ್ಲಿ ಮುಂದಿನ 6 ದಿನ ಚಳಿ ಹೆಚ್ಚಳ ಸಾಧ್ಯತೆ

    ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಚಳಿಯ ಅಬ್ಬರ ಜೋರಾಗಿದೆ. ಪ್ರತಿವರ್ಷದ ವಾಡಿಕೆ ಪ್ರಮಾಣಕ್ಕಿಂತಲೂ ಈ ಬಾರಿ ಹೆಚ್ಚು ಚಳಿ (Cold Wave) ಅಬ್ಬರಿಸುತ್ತಿದ್ದು ಮುಂದಿನ ಹಲವು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿದೆ.

    ಇದರ ಮಧ್ಯ ಶೀತಗಾಳಿಯ ಎಚ್ಚರಿಕೆ ಸಹ ನೀಡಲಾಗಿದ್ದು ದಕ್ಷಿಣ ಒಳನಾಡು, ಮತ್ತು ಉತ್ತರ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಮುಂದಿನ 6 ದಿನಗಳ ಕಾಲ ಮತ್ತಷ್ಟು ಚಳಿ ಹೆಚ್ಚಾಗುವ ಸಾಧ್ಯತೆ ಇದೆ. ಭಾನುವಾರದಿಂದ 6 ದಿನಗಳ ಕಾಲ ಕರ್ನಾಟಕದ (Karnataka) ಬಹುತೇಕ ಜಿಲ್ಲೆಗಳಲ್ಲಿ ಮಂಜು ಕವಿಯುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ (Bengaluru) ಜ.15 ರಿಂದ 19 ರವರೆಗೆ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ

    ಬೆಂಗಳೂರು, ಮೈಸೂರು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮುಂತಾದೆಡೆ ಶೀತ ಗಾಳಿ ಹೆಚ್ಚಾಗಲಿದೆ. ಹಾಗೇ, ಉತ್ತರ ಕರ್ನಾಟಕದಲ್ಲಿ ಕೂಡ ಚಳಿ ಹೆಚ್ಚಾಗುತ್ತಲೇ ಇದೆ. ಕರ್ನಾಟಕದ ಕೆಲವು ಭಾಗಗಳಲ್ಲಿ, ಶೀತ ಅಲೆಗಳ ಪರಿಸ್ಥಿತಿ ಇರುತ್ತದೆ. ಉತ್ತರ ಕರ್ನಾಟಕದ ಬಾಗಲಕೋಟೆ, ಬೀದರ್, ಬಾಗಲಕೋಟೆ, ವಿಜಯಪುರದಲ್ಲಿ ಭಾರೀ ಚಳಿ ಶುರುವಾಗಿದೆ. ಉತ್ತರ ಕರ್ನಾಟಕದ ಬೀದರ್, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಶೀತ ಅಲೆಯ ಮುನ್ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸಲಿದೆ ಸಂಕ್ರಾಂತಿ ಸೂರ್ಯ ರಶ್ಮಿ..!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಂಕ್ರಾಂತಿಗೂ ಇರಲಿದೆ ಮೈ ಕೊರೆವ ಚಳಿ- ಆರೋಗ್ಯದ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ!

    ಸಂಕ್ರಾಂತಿಗೂ ಇರಲಿದೆ ಮೈ ಕೊರೆವ ಚಳಿ- ಆರೋಗ್ಯದ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ!

    ಬೆಂಗಳೂರು: `ಬೆಳಗ್ಗೆ ಎದ್ದರೆ ಸಾಕು ಹೊರಗೆ ಕಾಲಿಡೋಕೆ ಆಗಲ್ಲ, ಚಳಿಯಪ್ಪಾ ಚಳಿ’ ಇದು ಸದ್ಯ ಬೆಂಗಳೂರಿನ (Bengaluru) ಪರಸ್ಥಿತಿ. ಹಾಗಾಗಿ ಚಳಿ ಇನ್ನೂ ಎಷ್ಟು ದಿನ ಇರುತ್ತೆ? ಇದ್ರಿಂದ ಜನರ ಆರೋಗ್ಯದಲ್ಲಾದ ಏರುಪೇರುಗಳೇನು? ಅನ್ನೋ ಚಿಂತೆ ಜನರಲ್ಲಿ ಮನೆ ಮಾಡಿದ್ದು, ಹವಾಮಾನ ಇಲಾಖೆ (Meteorological Department) ಆರೋಗ್ಯ (Health) ಸಲಹೆ ನೀಡಿದೆ.

    ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಚಳಿಯಿದೆ. ಬೆಂಗಳೂರಿಗೂ ಸಹ ಕೊರವ ಚಳಿಯ ಎಫೆಕ್ಟ್ ತಟ್ಟಿದ್ದು, ಸಿಲಿಕಾನ್ ಸಿಟಿ ಜನ ಥಂಡಾ ಹೊಡೆದಿದ್ದಾರೆ. ಈ ಚಳಿ ಕಾಟ ಈ ತಿಂಗಳ ಕೊನೆಯವರೆಗೂ ಇರಲಿದೆ ಅಂತಾ ಹವಾಮಾನ ಇಲಾಖೆ ಹೇಳಿದೆ. ಆದ್ರೆ ಸಂಕ್ರಾಂತಿವರೆಗೆ (Sankranti Festival) ಹೆಚ್ಚು ಶೀತ, ಚಳಿಗಾಳಿ ಇರಲಿದೆ. ಮುಂದಿನ ವಾರದಲ್ಲಿ ಕಡಿಮೆಯಾಗಲಿದೆ ಎಂದು ಹವಾಮಾನ ತಜ್ಞ ಪ್ರಸಾದ್ ಹೇಳಿದ್ದಾರೆ. ಇದನ್ನೂ ಓದಿ: ಪಿಲ್ಲರ್ ದುರಂತ ಬಳಿಕ ಮತ್ತೊಂದು ಎಡವಟ್ಟು – ಬ್ರಿಗೇಡ್ ರಸ್ತೆಯಲ್ಲಿ 30 ಅಡಿ ಆಳಕ್ಕೆ ಕುಸಿದ ರಸ್ತೆ

    ಕಳೆದ ಕೆಲ ದಿನಗಳಿಂದ ಹೆಚ್ಚಾಗಿದ್ದು, ಬಹುತೇಕ ಕಡೆ ಕನಿಷ್ಠ ಉಷ್ಣಾಂಶ ಕೂಡ ಗಮನಾರ್ಹವಾಗಿ ಇಳಿಕೆ ಕಂಡಿದೆ. ನಿನ್ನೆ ಅತೀ ಕಡಿಮೆ ಕನಿಷ್ಠ ಉಷ್ಣಾಂಶ ಬಾಗಲಕೋಟೆಯಲ್ಲಿ 8.4 ದಾಖಲಾಗಿದೆ. ಇಂದು ಬೀದರ್, ವಿಜಯಪುರ, ಬಾಗಲಕೋಟೆ, ಬಳ್ಳಾರಿ ಹಾಗೂ ಮಂಡ್ಯ (Mandya) ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸಹ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ರುಚಿಯಾದ ಅನಾನಸ್ ಕೇಸರಿಬಾತ್ ಮಾಡಿ ಮಕ್ಕಳಿಗೆ ನೀಡಿ

    ಇನ್ನೂ ಶೀತ ಅಲೆಯ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕೆಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಈ ಚಳಿಯಿಂದ ಮೂಗಿನಿಂದ ರಕ್ತ ಬರಬಹುದು, ಚರ್ಮದಲ್ಲಿ ಡ್ರೈನೆಸ್‌ (ಚರ್ಮ ಒಣಗುವಿಕೆ) ಉಂಟಾಗಬಹುದು, ಚರ್ಮ ತುರಿಕೆಯ ಸಾಧ್ಯತೆ ಹಾಗೂ ವೃದ್ಧರು ಮಕ್ಕಳಿಗೆ ನಡುಕ ಉಂಟಾಗಬಹುದು ಎಚ್ಚರಿಕೆ ನೀಡಿದ್ದಾರೆ.

    ಆದ್ದರಿಂದ ತಲೆ, ಕೈ, ಕಾಲಿಗೆ ಸಾಕ್ಸ್ ಹಾಕಬೇಕು, ಕಿವಿಗೆ ಹತ್ತಿ ಇಟ್ಟುಕೊಳ್ಳಬೇಕು, ಸೂರ್ಯನ ಬೆಳಕಿಗೆ ಮೈ ಒಡ್ಡಿ ನಿಲ್ಲಬೇಕು ಎಂದು ಹವಾಮಾನ ತಜ್ಞ ಪ್ರಸಾದ್ ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೆಹಲಿಯಲ್ಲಿ ದಾಖಲಾಗಲಿದ್ಯಾ ಶತಮಾನದ ಚಳಿ? – ಕರ್ನಾಟಕಕ್ಕೂ ಎಚ್ಚರಿಕೆ

    ದೆಹಲಿಯಲ್ಲಿ ದಾಖಲಾಗಲಿದ್ಯಾ ಶತಮಾನದ ಚಳಿ? – ಕರ್ನಾಟಕಕ್ಕೂ ಎಚ್ಚರಿಕೆ

    ನವದೆಹಲಿ: ಜನವರಿ 16 – 18ರ ನಡುವೆ ದೆಹಲಿಯ ಉಷ್ಣಾಂಶದಲ್ಲಿ ಭಾರೀ ಇಳಿಕೆ ಕಂಡು ಬರಲಿದ್ದು, ಬಯಲು ಪ್ರದೇಶದಲ್ಲಿ -4° ತಲುಪಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

    ಲೈವ್ ವೆದರ್ ಆಫ್ ಇಂಡಿಯಾ ಹೆಸರಿನ ಆನ್‌ಲೈನ್ ಹವಾಮಾನ (Weather) ವೇದಿಕೆಯ ಸಂಸ್ಥಾಪಕ ನವದೀಪ್ ದಹಿಯಾ ಈ ಬಗ್ಗೆ ಟ್ವೀಟ್ ಮಾಡಿದ್ದು ನನ್ನ ವೃತ್ತಿಜೀವನದಲ್ಲಿ ತಾಪಮಾನವು ಈ ಮಟ್ಟಕ್ಕೆ ಇಳಿಯುವುದನ್ನು ನೋಡಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಉತ್ತರ ಭಾರತದಲ್ಲಿ (North India) ಚಳಿಗಾಳಿಯು ಜನವರಿ 14-19ರ ಅವಧಿಯಲ್ಲಿ ಕಂಡು ಬರಲಿದ್ದು, 16-18ರ ನಡುವೆ ಗರಿಷ್ಠವಾಗಿ ಕಾಣಿಸುತ್ತದೆ. ಬಯಲು ಪ್ರದೇಶಗಳಲ್ಲಿ -4 °c ನಿಂದ +2 °c ತಾಪಮಾನ ದಾಖಲಾಗಲಿದೆ ಎಂದು ನವದೀಪ್ ದಹಿಯಾ ಹೇಳಿದ್ದಾರೆ. ಇದನ್ನೂ ಓದಿ: 4 ವರ್ಷಗಳ ಬಳಿಕ ಸಿಲಿಕಾನ್ ಸಿಟಿಯಲ್ಲಿ ದಾಖಲೆಯ ಕನಿಷ್ಠ ಉಷ್ಣಾಂಶ ಕುಸಿತ

    ದೀರ್ಘಾವಧಿಯಲ್ಲಿ ಏಕ ಸಂಖ್ಯೆಯ ತಾಪಮಾನ ದೆಹಲಿಯಲ್ಲಿ ಇರಲಿದ್ದು, 2023ರ ಜನವರಿ 21ನೇ ಶತಮಾನದ ಅತ್ಯಂತ ಚಳಿಯ ದಿನಗಳಿರಬಹುದು ಎಂದು ಎಚ್ಚರಿಸಿದ್ದಾರೆ. ಉತ್ತರ ಮತ್ತು ವಾಯುವ್ಯ ಭಾರತದ ಭಾಗಗಳು ಈಗಾಗಲೇ ತೀವ್ರ ಚಳಿ ಮತ್ತು ದಟ್ಟವಾದ ಮಂಜಿನಿಂದ ಮುಚ್ಚಿಹೋಗಿವೆ. ಈ ವಾರದ ಆರಂಭದಲ್ಲಿ ದೆಹಲಿಯ ಸಫ್ದರ್‌ಜಂಗ್ ಹವಾಮಾನ ಕೇಂದ್ರದಲ್ಲಿ ಕನಿಷ್ಠ 1.9 ಡಿಗ್ರಿ ತಾಪಮಾನ ದಾಖಲಾಗಿದೆ.

    ಅದೇ ರೀತಿ ದಕ್ಷಿಣ ಭಾರತದಾದ್ಯಂತ ಶೀತದ ಪರಿಸ್ಥಿತಿಗಳು ವರದಿಯಾಗಲಿವೆ. ಹವಾಮಾನ ಅಧಿಕಾರಿಗಳು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಉತ್ತರದಲ್ಲಿ ಈ ಶೀತ ಮತ್ತು ಮಂಜಿನ ಪರಿಸ್ಥಿತಿಗಳು ರೈಲು ಮತ್ತು ವಾಯು ಸಂಚಾರಕ್ಕೆ ಅಡ್ಡಿಪಡಿಸಿವೆ, ಪ್ರತಿದಿನ ಡಜನ್‌ಗಟ್ಟಲೆ ರೈಲುಗಳು ವಿಳಂಬವಾಗುತ್ತವೆ, ವಿಮಾನಗಳ ಮೇಲೆಯೂ ಇದು ಪರಿಣಾಮ ಬೀರಿದೆ. ಇದನ್ನೂ ಓದಿ: ಮೆಟ್ರೋ ಸುರಂಗ ಕಾಮಗಾರಿ – ಬೈಕಿನಲ್ಲಿ ತೆರಳುತ್ತಿದ್ದಾಗ ದಿಢೀರ್ ಕುಸಿದ ರಸ್ತೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉತ್ತರ ಕರ್ನಾಟಕದಲ್ಲಿ ಚಳಿ ಮತ್ತಷ್ಟು ಹೆಚ್ಚಳ – ಶೀತ ಮಾರುತಗಳ ಅಲರ್ಟ್

    ಉತ್ತರ ಕರ್ನಾಟಕದಲ್ಲಿ ಚಳಿ ಮತ್ತಷ್ಟು ಹೆಚ್ಚಳ – ಶೀತ ಮಾರುತಗಳ ಅಲರ್ಟ್

    ಬೆಂಗಳೂರು: ರಾಜ್ಯದಲ್ಲಿ ಚಳಿಯ (Cold Weather) ಅಬ್ಬರ ಮತ್ತಷ್ಟು ಜೋರಾಗಿದೆ. ದಿನ ಕಳೆದಂತೆ ಕನಿಷ್ಠ ತಾಪಮಾನ ಮತ್ತಷ್ಟು ಕುಸಿತ ಕಂಡಿದ್ದು, ಉತ್ತರ ಕರ್ನಾಟಕ (North Karnataka) ಅಕ್ಷರಶಃ ಚಳಿಗೆ ತತ್ತರಿಸಿದೆ.

    ಉತ್ತರ ಕರ್ನಾಟಕದ ಬಾಗಲಕೋಟೆಯಲ್ಲಿ (Bagalkote) ಮಂಗಳವಾರ ಅತಿ ಕಡಿಮೆ 6 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಬುಧವಾರ ಕೂಡ ಅದೇ ಪರಿಸ್ಥಿತಿ ಮುಂದುವರೆದಿದೆ. ಅಲ್ಲದೆ ಮುಂದಿನ 24 ಗಂಟೆಗಳು ಉತ್ತರ ಕರ್ನಾಟಕದ ಬೀದರ್, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ಶೀತ ಮಾರುತಗಳು ಹೆಚ್ಚಾಗುವ (Cold Wave Warning) ಹಿನ್ನೆಲೆಯಲ್ಲಿ ಯಲ್ಲೋ ಅಲರ್ಟ್ ನೀಡಲಾಗಿದೆ. ಅಲ್ಲದೆ ಮುಂದಿನ 24 ಗಂಟೆ ಉತ್ತರ ಒಳನಾಡಿನ ಕೆಲ ಭಾಗಗಳಲ್ಲಿ ಸಾಮಾನ್ಯಕ್ಕಿಂತ 6 ರಿಂದ 7 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್: ಡಿಕೆಶಿ ಘೋಷಣೆ

    ರಾಜ್ಯದ ಇತರ ಭಾಗಗಳಲ್ಲೂ 3 ರಿಂದ 4 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಲ್ಲೂ ಕೂಡ ಚಳಿಯ ಅಬ್ಬರ ಕೊಂಚ ಜೋರಾಗಿಯೇ ಇದೆ. ಬೆಂಗಳೂರಲ್ಲಿ 13 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಕಂಡಿದೆ. ಸೋಮವಾರ ನಗರದಲ್ಲಿ 14.5 ಡಿಗ್ರಿ ಸೆಲ್ಸಿಯಸ್ ಕಡಿಮೆ ಉಷ್ಣಾಂಶ ದಾಖಲಾಗಿತ್ತು.

    ಬುಧವಾರ ಮತ್ತೆ ಉಷ್ಣಾಂಶ ಇಳಿಕೆ ಕಂಡಿದ್ದು ಮುಂದಿನ 48 ಗಂಟೆಗಳ ಕಾಲ ಇದೆ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದ್ದು, ನಗರದ ಕೆಲ ಕಡೆ ದಟ್ಟ ಮಂಜು ಆವರಿಸುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k