Tag: ಚಳಿಗಾಲ

  • ರಾಜ್ಯದ ಹವಾಮಾನ ವರದಿ: 04-01-2024

    ರಾಜ್ಯದ ಹವಾಮಾನ ವರದಿ: 04-01-2024

    ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ದಿನೇ ದಿನೆ ಚಳಿ ಪ್ರಮಾಣ ಹೆಚ್ಚುತ್ತಿದೆ. ಮುಂಜಾನೆ ಹೊತ್ತಿಗೆ ಮಂಜು ಆವರಿಸಲಿದೆ. ಎಂದಿನಂತೆ ಮಧ್ಯಾಹ್ನದ ವೇಳೆಗೆ ಬಿಸಿಲಿನ ವಾತಾವರಣ ಇರಲಿದೆ. ಮತ್ತೆ ರಾತ್ರಿ ಹೊತ್ತಿಗೆ ಚಳಿ ಆವರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 23-19
    ಮಂಗಳೂರು: 26-23
    ಶಿವಮೊಗ್ಗ: 23-18
    ಬೆಳಗಾವಿ: 27-17
    ಮೈಸೂರು: 24-20

    ಮಂಡ್ಯ: 24-21
    ಮಡಿಕೇರಿ: 21-18
    ರಾಮನಗರ: 23-21
    ಹಾಸನ: 20-18
    ಚಾಮರಾಜನಗರ: 26-21
    ಚಿಕ್ಕಬಳ್ಳಾಪುರ: 23-19

    ಕೋಲಾರ: 23-19
    ತುಮಕೂರು: 22-19
    ಉಡುಪಿ: 25-23
    ಕಾರವಾರ: 30-22
    ಚಿಕ್ಕಮಗಳೂರು: 19-17
    ದಾವಣಗೆರೆ: 24-19

    ಹುಬ್ಬಳ್ಳಿ: 26-17
    ಚಿತ್ರದುರ್ಗ: 22-19
    ಹಾವೇರಿ: 24-18
    ಬಳ್ಳಾರಿ: 26-21
    ಗದಗ: 25-17
    ಕೊಪ್ಪಳ: 24-18

    ರಾಯಚೂರು: 29-19
    ಯಾದಗಿರಿ: 29-18
    ವಿಜಯಪುರ: 29-18
    ಬೀದರ್: 29-17
    ಕಲಬುರಗಿ: 29-17
    ಬಾಗಲಕೋಟೆ: 29-18

  • ರಾಜ್ಯದ ಹವಾಮಾನ ವರದಿ: 03-01-2024

    ರಾಜ್ಯದ ಹವಾಮಾನ ವರದಿ: 03-01-2024

    ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಎಂದಿನಂತೆ ಚಳಿಯ ವಾತಾವರಣ ಮುಂದುವರಿಯಲಿದೆ. ಮಧ್ಯಾಹ್ನದ ವೇಳೆಗೆ ಬಿಸಿಲಿನ ವಾತಾವರಣ ಇರಲಿದ್ದು, ಮತ್ತೆ ರಾತ್ರಿ ಹೊತ್ತಿಗೆ ಚಳಿ ಆವರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-19
    ಮಂಗಳೂರು: 29-24
    ಶಿವಮೊಗ್ಗ: 29-21
    ಬೆಳಗಾವಿ: 29-19
    ಮೈಸೂರು: 31-21

    ಮಂಡ್ಯ: 29-21
    ಮಡಿಕೇರಿ: 27-19
    ರಾಮನಗರ: 28-21
    ಹಾಸನ: 27-18
    ಚಾಮರಾಜನಗರ: 30-21
    ಚಿಕ್ಕಬಳ್ಳಾಪುರ: 26-18

    ಕೋಲಾರ: 25-19
    ತುಮಕೂರು: 27-19
    ಉಡುಪಿ: 29-24
    ಕಾರವಾರ: 31-23
    ಚಿಕ್ಕಮಗಳೂರು: 26-18
    ದಾವಣಗೆರೆ: 29-21

    ಹುಬ್ಬಳ್ಳಿ: 30-20
    ಚಿತ್ರದುರ್ಗ: 27-19
    ಹಾವೇರಿ: 31-21
    ಬಳ್ಳಾರಿ: 29-21
    ಗದಗ: 29-19
    ಕೊಪ್ಪಳ: 29-21

    ರಾಯಚೂರು: 30-19
    ಯಾದಗಿರಿ: 29-19
    ವಿಜಯಪುರ: 30-20
    ಬೀದರ್: 28-17
    ಕಲಬುರಗಿ: 29-18
    ಬಾಗಲಕೋಟೆ: 30-21

  • ರಾಜ್ಯದ ಹವಾಮಾನ ವರದಿ: 29-12-2023

    ರಾಜ್ಯದ ಹವಾಮಾನ ವರದಿ: 29-12-2023

    ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಚಳಿ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದರ ನಡುವೆ ಬಿಸಿಲಿನ ತಾಪಮಾನವೂ ಹೆಚ್ಚಳವಾಗುತ್ತಿದೆ. ಇಂದು ಸಹ ರಾಜ್ಯದ ವಿವಿಧ ಭಾಗಗಳಲ್ಲಿ ಮುಂಜಾನೆ ಮತ್ತು ಸಂಜೆಯ ವೇಳೆಗೆ ಚಳಿ ಇರಲಿದ್ದು ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-18
    ಮಂಗಳೂರು: 33-24
    ಶಿವಮೊಗ್ಗ: 31-18
    ಬೆಳಗಾವಿ: 29-16
    ಮೈಸೂರು: 31-19

    weather

    ಮಂಡ್ಯ: 31-19
    ಮಡಿಕೇರಿ: 30-18
    ರಾಮನಗರ: 29-19
    ಹಾಸನ: 28-17
    ಚಾಮರಾಜನಗರ: 30-19
    ಚಿಕ್ಕಬಳ್ಳಾಪುರ: 27-17

    ಕೋಲಾರ: 28-17
    ತುಮಕೂರು: 28-18
    ಉಡುಪಿ: 32-22
    ಕಾರವಾರ: 34-23
    ಚಿಕ್ಕಮಗಳೂರು: 27-16
    ದಾವಣಗೆರೆ: 29-18

    ಹುಬ್ಬಳ್ಳಿ: 30-16
    ಚಿತ್ರದುರ್ಗ: 27-15
    ಹಾವೇರಿ: 31-17
    ಬಳ್ಳಾರಿ: 29-17
    ಗದಗ: 29-16
    ಕೊಪ್ಪಳ: 29-17

    Weather

    ರಾಯಚೂರು: 31-18
    ಯಾದಗಿರಿ: 31-17
    ವಿಜಯಪುರ: 31-17
    ಬೀದರ್: 29-15
    ಕಲಬುರಗಿ: 31-16
    ಬಾಗಲಕೋಟೆ: 31-17

  • ರಾಜ್ಯದ ಹವಾಮಾನ ವರದಿ: 28-12-2023

    ರಾಜ್ಯದ ಹವಾಮಾನ ವರದಿ: 28-12-2023

    ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬಿಸಿಲಿನ ಆರ್ಭಟ ಹೆಚ್ಚಿದೆ. ಇದರ ನಡುವೆಯೇ ಮುಂಜಾನೆ ಹಾಗೂ ಸಂಜೆಯ ವೇಳೆಗೆ ಚಳಿ ಸಹ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರು, ಶಿವಮೊಗ್ಗ, ಮಂಗಳೂರು ಸೇರಿದಂತೆ ಚಿಕ್ಕಮಗಳೂರಿನಲ್ಲಿ ಮೋಡ ಕವಿದ ವಾತವರಣ ಇರಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 18 ತಾಪಮಾನ ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-18
    ಮಂಗಳೂರು: 33-24
    ಶಿವಮೊಗ್ಗ: 31-18
    ಬೆಳಗಾವಿ: 29-16
    ಮೈಸೂರು: 31-19

    ಮಂಡ್ಯ: 31-19
    ಮಡಿಕೇರಿ: 30-18
    ರಾಮನಗರ: 29-19
    ಹಾಸನ: 28-17
    ಚಾಮರಾಜನಗರ: 30-19
    ಚಿಕ್ಕಬಳ್ಳಾಪುರ: 27-17

    ಕೋಲಾರ: 28-17
    ತುಮಕೂರು: 28-18
    ಉಡುಪಿ: 32-22
    ಕಾರವಾರ: 34-23
    ಚಿಕ್ಕಮಗಳೂರು: 27-16
    ದಾವಣಗೆರೆ: 29-18

    weather

    ಹುಬ್ಬಳ್ಳಿ: 30-16
    ಚಿತ್ರದುರ್ಗ: 27-15
    ಹಾವೇರಿ: 31-17
    ಬಳ್ಳಾರಿ: 29-17
    ಗದಗ: 29-16
    ಕೊಪ್ಪಳ: 29-17

    ರಾಯಚೂರು: 31-18
    ಯಾದಗಿರಿ: 31-17
    ವಿಜಯಪುರ: 31-17
    ಬೀದರ್: 29-15
    ಕಲಬುರಗಿ: 31-16
    ಬಾಗಲಕೋಟೆ: 31-17

  • ರಾಜ್ಯದ ಹವಾಮಾನ ವರದಿ: 27-12-2023

    ರಾಜ್ಯದ ಹವಾಮಾನ ವರದಿ: 27-12-2023

    ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಚಳಿಯ ವಾತಾವರಣ ಇರಲಿದೆ. ಮಧ್ಯಾಹ್ನದ ಹೊತ್ತಿಗೆ ಬಿಸಿಲು ಇರಲಿದ್ದು, ಸಂಜೆ ಮತ್ತೆ ಚಳಿ ಆವರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-16
    ಮಂಗಳೂರು: 33-23
    ಶಿವಮೊಗ್ಗ: 31-16
    ಬೆಳಗಾವಿ: 29-16
    ಮೈಸೂರು: 31-17

    ಮಂಡ್ಯ: 31-17
    ಮಡಿಕೇರಿ: 30-16
    ರಾಮನಗರ: 29-17
    ಹಾಸನ: 28-15
    ಚಾಮರಾಜನಗರ: 31-17
    ಚಿಕ್ಕಬಳ್ಳಾಪುರ: 26-14

    ಕೋಲಾರ: 26-16
    ತುಮಕೂರು: 28-15
    ಉಡುಪಿ: 32-21
    ಕಾರವಾರ: 34-22
    ಚಿಕ್ಕಮಗಳೂರು: 27-14
    ದಾವಣಗೆರೆ: 29-16

    ಹುಬ್ಬಳ್ಳಿ: 30-16
    ಚಿತ್ರದುರ್ಗ: 27-15
    ಹಾವೇರಿ: 31-17
    ಬಳ್ಳಾರಿ: 29-17
    ಗದಗ: 29-16
    ಕೊಪ್ಪಳ: 29-17

    ರಾಯಚೂರು: 31-18
    ಯಾದಗಿರಿ: 31-17
    ವಿಜಯಪುರ: 31-17
    ಬೀದರ್: 29-15
    ಕಲಬುರಗಿ: 31-16
    ಬಾಗಲಕೋಟೆ: 31-17

  • ರಾಜ್ಯದ ಹವಾಮಾನ ವರದಿ: 16-12-2023

    ರಾಜ್ಯದ ಹವಾಮಾನ ವರದಿ: 16-12-2023

    ರಾಜ್ಯದಲ್ಲಿ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ. ಚೆನ್ನೈನಲ್ಲಿ ಮಳೆಯಾಗುತ್ತಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಮಳೆಯ ಮುನ್ಸೂಚನೆ ಸಿಕ್ಕಿದೆ. ನಗರದಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಚಳಿ ಕೂಡ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-20
    ಮಂಗಳೂರು: 32-26
    ಶಿವಮೊಗ್ಗ: 29-21
    ಬೆಳಗಾವಿ: 28-20
    ಮೈಸೂರು: 30-21

    ಮಂಡ್ಯ: 29-21
    ಮಡಿಕೇರಿ: 29-19
    ರಾಮನಗರ: 29-21
    ಹಾಸನ: 28-19
    ಚಾಮರಾಜನಗರ: 31-21
    ಚಿಕ್ಕಬಳ್ಳಾಪುರ: 25-18

    ಕೋಲಾರ: 25-19
    ತುಮಕೂರು: 26-19
    ಉಡುಪಿ: 32-24
    ಕಾರವಾರ: 33-24
    ಚಿಕ್ಕಮಗಳೂರು: 27-19
    ದಾವಣಗೆರೆ: 29-21

    ಹುಬ್ಬಳ್ಳಿ: 29-21
    ಚಿತ್ರದುರ್ಗ: 27-21
    ಹಾವೇರಿ: 30-21
    ಬಳ್ಳಾರಿ: 29-21
    ಗದಗ: 27-21
    ಕೊಪ್ಪಳ: 28-22

    ರಾಯಚೂರು: 29-21
    ಯಾದಗಿರಿ: 30-21
    ವಿಜಯಪುರ: 29-21
    ಬೀದರ್: 28-18
    ಕಲಬುರಗಿ: 29-21
    ಬಾಗಲಕೋಟೆ: 29-22

  • ಚಳಿಗಾಲದಲ್ಲಿ ಹೆಚ್ಚಾಗ್ತಿದೆ ಹೃದಯ ಸಮಸ್ಯೆ- ಇರಲಿ ಎಚ್ಚರ

    ಚಳಿಗಾಲದಲ್ಲಿ ಹೆಚ್ಚಾಗ್ತಿದೆ ಹೃದಯ ಸಮಸ್ಯೆ- ಇರಲಿ ಎಚ್ಚರ

    ಬೆಂಗಳೂರು: ಚಳಿಗಾಲದಲ್ಲಿ ಹೃದಯ ಜೋಪಾನ. ಚಳಿಗಾಲದಲ್ಲಿ ಹೆಚ್ಚಾಗುತ್ತಿದೆ ಹೃದಯಘಾತದ ಸಮಸ್ಯೆ. ವೈದ್ಯರಿಂದ ರವಾನೆಯಾಗಿದೆ ಎಚ್ಚರಿಕೆಯ ಸಂದೇಶ. ಅದರಲ್ಲೂ ಹೃದಯ ಸಂಬಂಧಿ ಸಮಸ್ಯೆ ಇರೋರು ಎಚ್ಚರವಾಗಿರಬೇಕು.

    ಚಳಿಗಾಲ (Winter) ಬಂತು ಅಂದ್ರೆ ದೇಹ ಸೋಮಾರಿತನ ಬಯಸುತ್ತೆ. ಕರಿದ ತಿಂಡಿಯತ್ತ ಮನಸು ಹಾತೊರೆಯುತ್ತೆ. ವಾಕಿಂಗ್ ಜಾಗಿಂಗ್ ವ್ಯಾಯಾಮಕ್ಕೆಲ್ಲ ಗುಡ್ ಬೈ ಹೇಳಿ ಚೆನ್ನಾಗಿ ಹೊದ್ದು ಮಲಗಿಬಿಡೋಣ ಅಂತಾ ಅಂದುಕೊಳ್ಳೋರೆ ಹೆಚ್ಚು. ಆದರೆ ಶಾಕಿಂಗ್ ವಿಚಾರವೆಂದರೆ ಚಳಿಗಾಲದ ಸಮಯದಲ್ಲಿ ಹೃದಯಘಾತ ಪ್ರಕರಣಗಳು ಹೆಚ್ಚಾಗುತ್ತಿದೆಯಂತೆ. 32-40 ಪರ್ಸೆಂಟ್ ಹಾರ್ಟ್ ಆಟ್ಯಾಕ್‍ಗಳು ಚಳಿಗಾಲದಲ್ಲಿ ಆಗುತ್ತೆ ಅಂತಾ ವೈದ್ಯರು ಶಾಕಿಂಗ್ ವಿಚಾರ ತಿಳಿಸಿದ್ದಾರೆ. ಇದನ್ನೂ ಓದಿ: ಮುದ್ದಿನ ಶ್ವಾನ ಹುಡುಕಿಕೊಡಿ- 10 ಸಾವಿರ ಬಹುಮಾನ ಘೋಷಿಸಿದ ಕುಟುಂಬ!

    ಚಳಿಗಾಲದಲ್ಲಿ ಹಾರ್ಟ್ ಆಟ್ಯಾಕ್ (Heart Attack) ಹೆಚ್ಚು: ಸಾಮಾನ್ಯವಾಗಿ ಚಳಿಗಾಲದಲ್ಲಿ ರಕ್ತನಾಳ ಸಂಕುಚಿತಗೊಂಡಿರುತ್ತೆ. ಹೀಗಾಗಿ ಬಿಪಿ (BP) ಇದ್ದವರಲ್ಲಿ ಹಾಗೂ ಹೃದಯ ಸಂಬಂಧಿ ಕಾಯಿಲೆ ಇದ್ದವರಲ್ಲಿ ಸಮಸ್ಯೆ ಕಾಣಿಸಿಕೊಳ್ಳಲಿದೆ. ಹೃದಯಾಘಾತ, ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟೋದು ಕೊಂಚ ಹೆಚ್ಚು. ಕರಿದ ಪದಾರ್ಥಗಳನ್ನು ಹೆಚ್ಚು ತಿನ್ನೋದ್ರಿಂದ ಕೆಲವರಲ್ಲಿ ಕೊಲೆಸ್ಟ್ರಾಲ್ (Cholesterol) ಪ್ರಮಾಣ ಕೊಂಚ ಹೆಚ್ಚಾಗುತ್ತೆ. ಬಹುತೇಕರು ವ್ಯಾಯಾಮ, ವಾಕಿಂಗ್ (Walking) , ಜಾಗಿಂಗ್ (Jogging) ಕಡಿಮೆ ಮಾಡೋದ್ರಿಂದ ದೈಹಿಕ ಚಟುವಟಿಕೆ ಕಡಿಮೆ. ಇದರಿಂದ ಹೃದಯಘಾತ ಹೆಚ್ಚಾಗುವ ಸಾಧ್ಯತೆಗಳು ಇರುತ್ತೆ ಎಂದು ವೈದ್ಯರು ಹೇಳುತ್ತಾರೆ.

    ಚಳಿಗಾಲದಲ್ಲಿ `ಹೃದಯ’ದ ಬಗ್ಗೆ ಇರಲಿ ಎಚ್ಚರ: ಹೃದಯ ಸಂಬಂಧಿ ಸಮಸ್ಯೆ ಇದ್ರೆ ನಿಯಮಿತವಾಗಿ ಚಳಿಗಾಲದಲ್ಲಿ ಪರೀಕ್ಷೆ ಮಾಡಿಸಬೇಕು. ನಿಯಮಿತವಾಗಿ ಇಸಿಜಿ ಟೆಸ್ಟ್ ಮಾಡಿಸಬೇಕು. ತಾಜಾ ತರಕಾರಿ- ಹಣ್ಣುಗಳನ್ನು ಸೇವನೆ ಮಾಡಬೇಕು. ಕರಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂದು ರಾಮಯ್ಯ ಆಸ್ಪತ್ರೆಯ ಹೃದ್ರೋಗ ತಜ್ಞೆ ಡಾ.ಅನುಪಮಾ.ವಿ ಹೆಗ್ಡೆ ಸಲಹೆ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೈ ಕೊರೆಯುವ ಚಳಿಗಾಲದಲ್ಲಿ ಬೆಚ್ಚಗಿರಲು ಧರಿಸಿ ಈ ಸೂಕ್ತ ಉಡುಪುಗಳು!

    ಮೈ ಕೊರೆಯುವ ಚಳಿಗಾಲದಲ್ಲಿ ಬೆಚ್ಚಗಿರಲು ಧರಿಸಿ ಈ ಸೂಕ್ತ ಉಡುಪುಗಳು!

    ವೆಂಬರ್ ತಿಂಗಳು ಬರುತ್ತಿದ್ದಂತೆಯೇ ಚಳಿ, ಗಾಳಿ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಜನ ಚಳಿಯಿಂದ ಬೆಚ್ಚಗಿರಲು ಶಾಲ್, ಟೋಪಿ, ಸ್ವೆಟರ್, ಪುಲ್‍ಓವರ್, ಸ್ವೆಟ್‍ಶರ್ಟ್‍ಗಳ ಮೊರೆಹೋಗಿರುತ್ತಾರೆ. ಅಲ್ಲದೇ ಚಳಿಗಾಲದಲ್ಲಿ ಎಂತಹ ಉಡುಪುಗಳನ್ನು ಧರಿಸಬೇಕು ಎಂಬುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ವರ್ಷಾಂತ್ಯದಲ್ಲಿ ಬರುವ ಚಳಿಗಾಲದಲ್ಲಿ ಜನರ ಕಣ್ಣು ಕುಕ್ಕುವಂತಹ ನಾನಾ ವೆರೈಟಿ ಹೊದಿಕೆಗಳು, ಸ್ಟೆಟರ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಈ ಕುರಿತ ಒಂದಷ್ಟು ಮಾಹಿತಿ ಈ ಕೆಳಗೆ ನೀಡಲಾಗಿದೆ.

    ಅಲೆನ್ ಸೋಲಿ ಮೆನ್ ಸ್ವೆಟ್‍ಶರ್ಟ್
    ಕಿತ್ತಳೆ ಬಣ್ಣದ ಈ ಸ್ವೆಟ್‍ಶರ್ಟ್ ನಿಮ್ಮನ್ನು ಬೆಚ್ಚಗಿರಿಸುವುದಷ್ಟೇ ಅಲ್ಲದೇ ಸಖತ್ ಅಟ್ರ್ಯಾಕ್ಟಿವ್ ಲುಕ್ ನೀಡುತ್ತದೆ. ಇದು ಚಳಿಗಾಲದಲ್ಲಿಯೂ ಬೇಸಿಗೆ ಎಂಬಂತಹ ಭಾವನೆ ಮೂಡಿಸುವಷ್ಟು ನಿಮ್ಮನ್ನು ಬೆಚ್ಚಗಿರಿಸುತ್ತದೆ. ಜೊತೆಗೆ ಇದು ನಿಮಗೆ ಸ್ಟೈಲಿಶ್ ಲುಕ್ ಕೂಡ ನೀಡುತ್ತದೆ. ನೂಲಿನಿಂದ ಮಾಡಲಾಗಿರುವ ಈ ಜಾಕೆಟ್ ಮದ್ಯದಲ್ಲಿ ಜಿಪ್ ಇರುವುದನ್ನು ಕಾಣಬಹುದಾಗಿದೆ.

    ಮಾಂಟೆ ಕಾರ್ಲೊ ವುಮೆನ್ಸ್ ಬ್ಲಾಕ್ ಪಾರ್ಕ್ ಜಾಕೆಟ್
    ಮುಂಭಾಗ ಜಿಪ್ ಮತ್ತು ಬಟನ್‍ಗಳೊಂದಿಗೆ, ದೊಡ್ಡ ಜೇಬಿಗಳಿರುವ ಈ ಜಾಕೆಟ್ ನಿಮ್ಮನ್ನು ಬೆಚ್ಚಗಿರಿಸುವುದರ ಜೊತೆಗೆ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತದೆ. ಫ್ಯಾಶನ್ ಲುಕ್ ನೀಡುವ ಈ ಜಾಕೆಟ್ ಉಷ್ಣಾಂಶವನ್ನು ಹೆಚ್ಚಾಗಿಸುತ್ತದೆ. ಈ ಜಾಕೆಟ್ ಅನ್ನು ಜೀನ್ಸ್ ಜೊತೆಗೆ ಶೂಗಳೊಂದಿಗೆ ಧರಿಸುವುದರಿಂದ ಬೆಸ್ಟ್ ಎಂದೇ ಹೇಳಬಹುದು.

    ಜಾಮ್ & ಹನಿ ಬಾಯ್ಸ್ ಸ್ವೆಟರ್
    ಸ್ಲೀವ್ಸ್ ಇಲ್ಲದ ಈ ಸ್ವೆಟರ್ ಕುತ್ತಿಗೆ ಪೂರ್ತಿ ಬರುತ್ತದೆ. ಸಾಮಾನ್ಯವಾಗಿ ಬ್ಲಾಕ್ ಕಲರ್ ಉಡುಪು ಚೆನ್ನಾಗಿಯೇ ಕಾಣಿಸುತ್ತದೆ. ಸದ್ಯ ಈ ಸ್ವೆಟರ್ ಕೂಡ ಬ್ಲಾಕ್ ಕಲರ್ ಆಗಿದ್ದು, ಮದ್ಯದಲ್ಲಿ ಬಿಳಿ ಬಣ್ಣದ ಸ್ಟಾರ್ ಡಿಸೈನ್ ಎದ್ದು ಕಾಣುತ್ತದೆ. ವಿಷೇಶವೆಂದರೆ ಈ ಸ್ವೆಟರ್ ಅನ್ನು ಯಾವುದೇ ಶರ್ಟ್ ಮೇಲೆ ಬೇಕಾದರೂ ಧರಿಸಬಹುದಾಗಿದೆ.

    ಸಿಂಬಲ್ ಗರ್ಲ್ಸ್‌  ಜಾಕೆಟ್
    ಯೆಲ್ಲೋ ಕಲರ್‌ನ ಈ ಜಾಕೆಟ್ ಹುಡುಗಿಯರಿಗೇ ಚಳಿಗಾಲದಲ್ಲಿ ಬೆಸ್ಟ್ ಎಂದೇ ಹೇಳಬಹುದು. ಈ ಜಾಕೆಟ್‍ನ ಮುಂಭಾಗದಲ್ಲಿ ಜಿಪ್ ಇರುತ್ತದೆ. ಈ ಜಾಕೆಟ್ ಒಳಗಡೆ ಕಪ್ಪು ಲೈನಿಂಗ್ ಮತ್ತು ಮ್ಯಾಂಡರಿನ್ ಕಾಲರ್ ಇದೆ. ಇದು ನಿಮ್ಮನ್ನು ಬೆಚ್ಚಗಿರಿಸುವುದರ ಜೊತೆಗೆ ಧರಿಸಲು ಕಂಫರ್ಟ್ ಆಗಿರುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಚಳಿಗಾಲದಲ್ಲಿ ಈ ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

    ಚಳಿಗಾಲದಲ್ಲಿ ಈ ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

    ಳಿಗಾಲದಲ್ಲಿ ಸೇವಿಸಬೇಕಾದ ಆಹಾರಕ್ಕೆ ಬಹಳಷ್ಟು ವ್ಯತ್ಯಾಸಗಳಿರುತ್ತವೆ. ವೈಜ್ಞಾನಿಕ ಕಾರಣಗಳನ್ನು ಅರಿತರೆ ಮಾತ್ರವೇ ಅವುಗಳ ಹಿಂದಿರುವ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.

    * ಟೊಮೆಟೋ: ಹಲವಾರು ಪೋಷಕಾಂಶ ಗಳಿಂದ ಕೂಡಿದ್ದು, ಇದರಲ್ಲಿ ಶೇ.90ರಷ್ಟು ನೀರಿನಾಂಶವಿದೆ. ಇದು ದೇಹಕ್ಕೆ ಪೋಷಣೆ ನೀಡಲು ತುಂಬಾ ಸಹಕಾರಿ ಮತ್ತು ತೂಕ ಇಳಿಸಲು ಸಹಕಾರಿ ಆಗುತ್ತದೆ. ಇದನ್ನೂ ಓದಿ: ಖರ್ಜೂರ ತಿಂದು ಆರೋಗ್ಯವಾಗಿರಿ – ಪ್ರತಿದಿನ ಒಂದೊಂದು ತಿಂದರೂ ನೀವು ಗಟ್ಟಿಯಾಗ್ತೀರಿ

    * ಹೂಕೋಸು : ಇದರಲ್ಲಿ ಸಕ್ಕರೆಯಂಶ ಇರುವುದಿಲ್ಲ. ಹೀಗಾಗಿ, ಮಧುಮೇಹಿಗಳಿಗೆ ಉತ್ತಮವಾಗಿದೆ. ವಿಟಮನ್‌ ಸಿ, ನಾರಿನಂಶ, ಪೊಟ್ಯಾಶಿಯಂ  ಅಂಶವೂ ಚೆನ್ನಾಗಿರುತ್ತದೆ.

    * ಪಾಲಕ್ ಸೊಪ್ಪು: ಈ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಕರ್ಬೋಹೈಡ್ರೇಟ್ ಹೊಂದಿದ್ದರು ಇದರಲ್ಲಿ ಇರುವ ನಾರಿನಂಶವು ದೇಹಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುತ್ತದೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ , ಕಬ್ಬಿಣಾಂಶ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನಿಸಿಯಮ್ ಅಂತಹ ಜೀವಸತ್ವಗಳು ಮತ್ತು ಖನಿಜಗಳು ಅಧಿಕವಾಗಿರುತ್ತವೆ.  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕಾರಿಯಾಗಿದೆ.  ಇದನ್ನೂ ಓದಿ: ಮೆಂತೆ ಸೊಪ್ಪಿನ ಸೇವನೆಯಿಂದ ಸಿಗಲಿದೆ ಆರೋಗ್ಯಕರ ಅಂಶ

    * ಎಲೆ ಕೋಸು: ಮಧುಮೇಹಕ್ಕೆ ಇದು ಒಳ್ಳೆಯ ಮದ್ದೂ ಹೌದು. ಎಲೆಕೋಸು ಅಮೂಲ್ಯವಾದ ಖನಿಜಗಳನ್ನು ಹೊಂದಿರುತ್ತದೆ ಮತ್ತು ಚರ್ಮಕ್ಕೆ ತುಂಬಾ ಪೋಷಣೆಯನ್ನು ನೀಡುತ್ತದೆ.  ಇದು ವಿಟಮಿನ್ ಹೊಂದಿದೆ ಹೀಗಾಗಿ  ಚರ್ಮಕ್ಕೆ ಒಳ್ಳೆಯದು.

    * ಕ್ಯಾರೆಟ್: ಹಸಿ ಕ್ಯಾರೆಟ್ ಸೇವನೆ ಒಳ್ಳೆಯದು. ದೇಹಕ್ಕೆ ಹಲವು ವಿಟಾಮಿನ್‍ಗಳು ಸಿಕ್ಕಂತಾಗುತ್ತದೆ. ವಿಟಾಮಿನ್ ಎ ಇದರಲ್ಲಿ ಹೇರಳವಾಗಿರುವುದಲ್ಲದೆ, ಕ್ಯಾಲ್ಷಿಯಂ ಸಹ ಇದರಲ್ಲಿ ಹೇರಳವಾಗಿರುತ್ತವೆ.  ಕೊಬ್ಬಿನಂಶವನ್ನು ಕಡಿಮೆಗೊಳಿಸುವಲ್ಲಿ  ಕ್ಯಾರೆಟ್‍ ಸಹಾಯಕಾರಿಯಾಗುತ್ತದೆ. ಇದನ್ನೂ ಓದಿ:  ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

  • ಆರೋಗ್ಯಕರವಾದ ನುಗ್ಗೆಕಾಯಿ ಸೂಪ್ ಮಾಡುವ ವಿಧಾನ ನಿಮಗಾಗಿ

    ಆರೋಗ್ಯಕರವಾದ ನುಗ್ಗೆಕಾಯಿ ಸೂಪ್ ಮಾಡುವ ವಿಧಾನ ನಿಮಗಾಗಿ

    ಳಿಗಾಲ ಬಂತೆಂದರೆ ಸಾಕು  ನಾಲಿಗೆ ಹಸಿವನ್ನು ತಣಿಸುವ ವಿವಿಧ ಖಾದ್ಯಗಳನ್ನು ಸವಿಯಲು ನಾಲಿಗೆ ಬಯಸುತ್ತದೆ. ಚಳಿಗಾಲಕ್ಕೆ ಎಂದೇ ಹೆಸರುವಾಸಿಯಾಗಿರುವ ಕೆಲವೊಂದು ರುಚಿಕರ ಮತ್ತು ಸ್ವಾದಿಷ್ಟವಾದ ಕೆಲವು ಸೂಪ್‍ಗಳಿವೆ. ಬಿಸಿ ಬಿಸಿ, ಖಾರ ಖಾರದ ವಿಭಿನ್ನ ರುಚಿಯನ್ನು ಹೊಂದಿರುವ ನುಗ್ಗೆಕಾಯಿ ಸೂಪ್ ಎಂದಾದರೂ ಸೇವಿಸಿದ್ದೀರಾ..? ಈ ಸೂಪ್‌ ಮಾಡೋ ಸರಳ ವಿಧಾನ ನಿಮಗೆ ಗೊತ್ತಾ..?

    ಬೇಕಾಗುವ ಸಾಮಗ್ರಿಗಳು:
    * ನುಗ್ಗೆಕಾಯಿ -3
    * ಈರುಳ್ಳಿ -1
    * ಟೊಮೆಟೋ -1
    * ಶುಂಠಿ -ಸ್ವಲ್ಪ
    * ಬೆಳ್ಳುಳ್ಳಿ – 2
    * ರುಚಿಗೆ ತಕ್ಕಷ್ಟು ಉಪ್ಪು
    * ಅರಿಶಿನ ಪುಡಿ-1 ಚಮಚ
    * ಜೀರಿಗೆ ಪುಡಿ -1 ಚಮಚ
    * ಕಾಳುಮೆಣಸು -1 ಚಮಚ
    * ಕೊತ್ತಂಬರಿ ಸೊಪ್ಪು – ಸ್ವಲ್ಪ


    ಮಾಡುವ ವಿಧಾನ:
    * ಮೊದಲು ಕುಕ್ಕರ್‌ಗೆ ಹೆಚ್ಚಿದ ನುಗ್ಗೆಕಾಯಿ, ಈರುಳ್ಳಿ ಟೊಮೆಟೋ, ಶುಂಠಿ, ಬೆಳ್ಳುಳ್ಳಿ , ಉಪ್ಪು, ಅರಿಶಿನ ಪುಡಿ ಜೀರಿಗೆ ಪುಡಿ ಮತ್ತು 2 ಕಪ್ ನೀರನ್ನು ಹಾಕಿ 3 ಸೀಟಿ ಕೂಗಿಸಿಕೊಳ್ಳಬೇಕು.


    * ನಂತರ ಕುಕ್ಕರ್ ತಣ್ಣಗಾದ ಆದನಂತರ ಬೇಯಿಸಿದ ತರಕಾರಿಗಳನ್ನು ನೀರಿನಿಂದ ಬೇರ್ಪಡಿಸಿ ನುಗ್ಗೆಕಾ ಯಿ ತಿರುಳನ್ನು ಸಿಪ್ಪೆಯಿಂದ ಬೇರೆ ಪಡಿಸಿ ಉಳಿದ ತರಕಾರಿಯ ಜೊತೆಗೆ ರುಬ್ಬಿಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ 

    * ರುಬ್ಬಿದ ಮಿಶ್ರಣವನ್ನು ಬೇಯಿಸಿದ ನೀರಿನ ಜೊತೆ ಒಂದು ಬಾಣಲಿಗೆ ಹಾಕಿ ಅದಕ್ಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ 8 ನಿಮಿಷ ಕುದಿಸಬೇಕು. ಕೊನೆಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಸೂಪ್ ಸಿದ್ಧವಾಗುತ್ತದೆ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ