Tag: ಚಳಿ

  • ರಾಜ್ಯದ ಹವಾಮಾನ ವರದಿ 17-01-2025

    ರಾಜ್ಯದ ಹವಾಮಾನ ವರದಿ 17-01-2025

    ರಾಜ್ಯದ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಮೈಸೂರು, ಮಂಡ್ಯ, ಕೊಡಗು, ಹಾಸನ ಮತ್ತು ತುಮಕೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳನ್ನು ಹೊರತು ಪಡಿಸಿ, ಕರಾವಳಿ ಕರ್ನಾಟಕ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-17
    ಮಂಗಳೂರು: 32-23
    ಶಿವಮೊಗ್ಗ: 30-18
    ಬೆಳಗಾವಿ: 29-19
    ಮೈಸೂರು: 29-18

    ಮಂಡ್ಯ: 28-18
    ಮಡಿಕೇರಿ: 29-16
    ರಾಮನಗರ: 28-18
    ಹಾಸನ: 27-16
    ಚಾಮರಾಜನಗರ: 29-17
    ಚಿಕ್ಕಬಳ್ಳಾಪುರ: 25-16

    ಕೋಲಾರ: 24-17
    ತುಮಕೂರು: 27-17
    ಉಡುಪಿ: 29-22
    ಕಾರವಾರ: 34-24
    ಚಿಕ್ಕಮಗಳೂರು: 26-15
    ದಾವಣಗೆರೆ: 29-19

    ಹುಬ್ಬಳ್ಳಿ: 30-19
    ಚಿತ್ರದುರ್ಗ: 27-17
    ಹಾವೇರಿ: 30-19
    ಬಳ್ಳಾರಿ: 29-19
    ಗದಗ: 29-18
    ಕೊಪ್ಪಳ: 29-19

    ರಾಯಚೂರು: 30-20
    ಯಾದಗಿರಿ: 30-19
    ವಿಜಯಪುರ: 31-19
    ಬೀದರ್: 29-18
    ಕಲಬುರಗಿ: 30-19
    ಬಾಗಲಕೋಟೆ: 31-20

  • ರಾಜ್ಯದ ಹವಾಮಾನ ವರದಿ 16-01-2025

    ರಾಜ್ಯದ ಹವಾಮಾನ ವರದಿ 16-01-2025

    ಮುಂದಿನ 2 ದಿನಗಳ ಕಾಲ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಮೈಸೂರು, ಮಂಡ್ಯ, ಕೊಡಗು, ಹಾಸನ ಮತ್ತು ತುಮಕೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳನ್ನು ಹೊರತು ಪಡಿಸಿದರೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಇರುವ ಸಾಧ್ಯತೆ ಇದೆ.

    ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದಲ್ಲಿ ಮಂಜು ಬೀಳುವ ಸಾಧ್ಯತೆ ಇದೆ ಎಂದು ಹೇಳಿದೆ. ಜನವರಿ 17ರವರೆಗೂ ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದ್ದು, ರಾಜ್ಯದಾದ್ಯಂತ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-17
    ಮಂಗಳೂರು: 32-23
    ಶಿವಮೊಗ್ಗ: 30-18
    ಬೆಳಗಾವಿ: 29-19
    ಮೈಸೂರು: 29-18

    ಮಂಡ್ಯ: 28-18
    ಮಡಿಕೇರಿ: 29-16
    ರಾಮನಗರ: 28-18
    ಹಾಸನ: 27-16
    ಚಾಮರಾಜನಗರ: 29-17
    ಚಿಕ್ಕಬಳ್ಳಾಪುರ: 25-16

    ಕೋಲಾರ: 24-17
    ತುಮಕೂರು: 27-17
    ಉಡುಪಿ: 29-22
    ಕಾರವಾರ: 34-24
    ಚಿಕ್ಕಮಗಳೂರು: 26-15
    ದಾವಣಗೆರೆ: 29-19

    ಹುಬ್ಬಳ್ಳಿ: 30-19
    ಚಿತ್ರದುರ್ಗ: 27-17
    ಹಾವೇರಿ: 30-19
    ಬಳ್ಳಾರಿ: 29-19
    ಗದಗ: 29-18
    ಕೊಪ್ಪಳ: 29-19

    ರಾಯಚೂರು: 30-20
    ಯಾದಗಿರಿ: 30-19
    ವಿಜಯಪುರ: 31-19
    ಬೀದರ್: 29-18
    ಕಲಬುರಗಿ: 30-19
    ಬಾಗಲಕೋಟೆ: 31-20

  • ರಾಜ್ಯದ ಹವಾಮಾನ ವರದಿ 15-01-2025

    ರಾಜ್ಯದ ಹವಾಮಾನ ವರದಿ 15-01-2025

    ಮುಂದಿನ 2 ದಿನಗಳ ಕಾಲ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಮೈಸೂರು, ಮಂಡ್ಯ, ಕೊಡಗು, ಹಾಸನ ಮತ್ತು ತುಮಕೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳನ್ನು ಹೊರತು ಪಡಿಸಿದರೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಇರುವ ಸಾಧ್ಯತೆ ಇದೆ.

    ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದಲ್ಲಿ ಮಂಜು ಬೀಳುವ ಸಾಧ್ಯತೆ ಇದೆ ಎಂದು ಹೇಳಿದೆ. ಜನವರಿ 15ರಿಂದ ಜನವರಿ 17ರವರೆಗೂ ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದ್ದು, ರಾಜ್ಯದಾದ್ಯಂತ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-18
    ಮಂಗಳೂರು: 31-24
    ಶಿವಮೊಗ್ಗ: 29-19
    ಬೆಳಗಾವಿ: 29-19
    ಮೈಸೂರು: 28-18

    ಮಂಡ್ಯ: 27-18
    ಮಡಿಕೇರಿ: 27-17
    ರಾಮನಗರ: 28-18
    ಹಾಸನ: 26-17
    ಚಾಮರಾಜನಗರ: 29-18
    ಚಿಕ್ಕಬಳ್ಳಾಪುರ: 26-17

    ಕೋಲಾರ: 25-18
    ತುಮಕೂರು: 27-17
    ಉಡುಪಿ: 30-23
    ಕಾರವಾರ: 33-24
    ಚಿಕ್ಕಮಗಳೂರು: 24-16
    ದಾವಣಗೆರೆ: 29-19

    ಹುಬ್ಬಳ್ಳಿ: 29-19
    ಚಿತ್ರದುರ್ಗ: 27-19
    ಹಾವೇರಿ: 30-19
    ಬಳ್ಳಾರಿ: 29-19
    ಗದಗ: 28-19
    ಕೊಪ್ಪಳ: 30-19

    ರಾಯಚೂರು: 30-21
    ಯಾದಗಿರಿ: 30-21
    ವಿಜಯಪುರ: 30-20
    ಬೀದರ್: 29-18
    ಕಲಬುರಗಿ: 31-19
    ಬಾಗಲಕೋಟೆ: 31-20

  • ರಾಜ್ಯದ ಹವಾಮಾನ ವರದಿ 14-01-2025

    ರಾಜ್ಯದ ಹವಾಮಾನ ವರದಿ 14-01-2025

    ಇಂದು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಾಧಾರಣದಿಂದ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಮೈಸೂರು, ಮಂಡ್ಯ, ಕೊಡಗು, ಹಾಸನ ಮತ್ತು ತುಮಕೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳನ್ನು ಹೊರತು ಪಡಿಸಿದರೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಇರುವ ಸಾಧ್ಯತೆ ಇದೆ.

    ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದಲ್ಲಿ ಮಂಜು ಬೀಳುವ ಸಾಧ್ಯತೆ ಇದೆ ಎಂದು ಹೇಳಿದೆ. ಜನವರಿ 15ರಿಂದ ಜನವರಿ 17ರವರೆಗೂ ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದ್ದು, ರಾಜ್ಯದಾದ್ಯಂತ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-18
    ಮಂಗಳೂರು: 31-23
    ಶಿವಮೊಗ್ಗ: 29-19
    ಬೆಳಗಾವಿ: 31-19
    ಮೈಸೂರು: 29-18

    ಮಂಡ್ಯ: 28-19
    ಮಡಿಕೇರಿ: 28-17
    ರಾಮನಗರ: 28-19
    ಹಾಸನ: 27-17
    ಚಾಮರಾಜನಗರ: 29-19
    ಚಿಕ್ಕಬಳ್ಳಾಪುರ: 25-17

    ಕೋಲಾರ: 25-17
    ತುಮಕೂರು: 27-17
    ಉಡುಪಿ: 31-23
    ಕಾರವಾರ: 32-24
    ಚಿಕ್ಕಮಗಳೂರು: 25-17
    ದಾವಣಗೆರೆ: 29-20

    ಹುಬ್ಬಳ್ಳಿ: 31-19
    ಚಿತ್ರದುರ್ಗ: 28-18
    ಹಾವೇರಿ: 31-20
    ಬಳ್ಳಾರಿ: 29-19
    ಗದಗ: 29-19
    ಕೊಪ್ಪಳ: 30-19

    ರಾಯಚೂರು: 31-20
    ಯಾದಗಿರಿ: 31-19
    ವಿಜಯಪುರ: 31-20
    ಬೀದರ್: 30-18
    ಕಲಬುರಗಿ: 31-19
    ಬಾಗಲಕೋಟೆ: 32-20

  • ರಾಜ್ಯದ ಹವಾಮಾನ ವರದಿ 13-01-2025

    ರಾಜ್ಯದ ಹವಾಮಾನ ವರದಿ 13-01-2025

    ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಪರಿಚಲನೆ ಏರ್ಪಟ್ಟಿದ್ದು, ಕರ್ನಾಟಕದಲ್ಲಿ 2 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮುಂದಿನ ಹಾಲಿ ಹವಾಮಾನ ಪರಿಸ್ಥಿತಿ ಕುರಿತು ಮಾಹಿತಿ ನೀಡಿರುವ ಹವಾಮಾನ ಇಲಾಖೆ, ಆಗ್ನೇಯ ಮತ್ತು ಪಕ್ಕದ ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ ಚಂಡಮಾರುತದ ಪರಿಚಲನೆ ಈಗ ನೈಋತ್ಯ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯ ಮೇಲೆ ಇದ್ದು, ಸಮುದ್ರ ಮಟ್ಟದಿಂದ 3.1 ಕಿ.ಮೀ.ವರೆಗೆ ವಿಸ್ತರಿಸಿದೆ. ಅಂತೆಯೇ ಜನವರಿ 13 ಮತ್ತು 14ರಂದು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಪ್ರಮುಖವಾಗಿ ಜನವರಿ 13ರಂದು ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಹಗುರ ಅಥವಾ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆ ಹೆಚ್ಚು. ವಿಜಯಪುರ, ಬೀದರ್, ಕಲಬುರ್ಗಿ, ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದಲ್ಲಿ ಮಂಜು ಬೀಳುವ ಸಾಧ್ಯತೆ ಹೆಚ್ಚು ಎಂದು ಹೇಳಿದೆ.

    ಜನವರಿ 14ರಂದು ಮೈಸೂರು, ಮಂಡ್ಯ, ಕೊಡಗು, ಹಾಸನ ಮತ್ತು ತುಮಕೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳನ್ನು ಹೊರತು ಪಡಿಸಿದರೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಇರುವ ಸಾಧ್ಯತೆ ಇದೆ. ವಿಜಯಪುರ, ಬೀದರ್, ಕಲಬುರ್ಗಿ, ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದಲ್ಲಿ ಮಂಜು ಬೀಳುವ ಸಾಧ್ಯತೆ ಇದೆ ಎಂದು ಹೇಳಿದೆ. ಜನವರಿ 15ರಿಂದ ಜನವರಿ 17ರವರೆಗೂ ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದ್ದು, ರಾಜ್ಯದಾದ್ಯಂತ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ಬೆಂಗಳೂರು: 26-21
    ಮಂಗಳೂರು: 31-24
    ಶಿವಮೊಗ್ಗ: 31-19
    ಬೆಳಗಾವಿ: 31-18
    ಮೈಸೂರು: 30-21

    ಮಂಡ್ಯ: 29-21
    ಮಡಿಕೇರಿ: 28-19
    ರಾಮನಗರ: 29-21
    ಹಾಸನ: 28-19
    ಚಾಮರಾಜನಗರ: 30-21
    ಚಿಕ್ಕಬಳ್ಳಾಪುರ: 26-19

    ಕೋಲಾರ: 26-19
    ತುಮಕೂರು: 28-19
    ಉಡುಪಿ: 31-23
    ಕಾರವಾರ: 32-22
    ಚಿಕ್ಕಮಗಳೂರು: 27-17
    ದಾವಣಗೆರೆ: 31-20

    ಹುಬ್ಬಳ್ಳಿ: 30-18
    ಚಿತ್ರದುರ್ಗ: 28-19
    ಹಾವೇರಿ: 31-20
    ಬಳ್ಳಾರಿ: 30-20
    ಗದಗ: 29-18
    ಕೊಪ್ಪಳ: 29-19

    ರಾಯಚೂರು: 31-20
    ಯಾದಗಿರಿ: 30-19
    ವಿಜಯಪುರ: 31-19
    ಬೀದರ್: 29-17
    ಕಲಬುರಗಿ: 31-19
    ಬಾಗಲಕೋಟೆ: 31-19

  • ರಾಜ್ಯದ ಹವಾಮಾನ ವರದಿ 12-01-2025

    ರಾಜ್ಯದ ಹವಾಮಾನ ವರದಿ 12-01-2025

    ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ 3-4 ದಿನಗಳ ಶೀತಗಾಳಿ ಹಾಗೂ ಚಳಿಯ ವಾತಾವರಣ ಮುಂದಯವರಿಯಲಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರಾವಳಿ, ಉತ್ತರ, ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಶೀತಗಾಳಿಯ ಎಚ್ಚರಿಕೆ ನೀಡಲಾಗಿದೆ. ಉತ್ತರ ಕನ್ನಡ, ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿ, ಹಾವೇರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಶೀತಗಾಳಿ ಹಾಗೂ ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಮಂಡ್ಯ ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ್ದು, ಜನ ಅಗತ್ಯ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-19
    ಮಂಗಳೂರು: 31-23
    ಶಿವಮೊಗ್ಗ: 30-19
    ಬೆಳಗಾವಿ: 30-19
    ಮೈಸೂರು: 31-20

    ಮಂಡ್ಯ: 31-21
    ಮಡಿಕೇರಿ: 29-17
    ರಾಮನಗರ: 30-21
    ಹಾಸನ: 28-17
    ಚಾಮರಾಜನಗರ: 32-19
    ಚಿಕ್ಕಬಳ್ಳಾಪುರ: 27-18

    ಕೋಲಾರ: 27-19
    ತುಮಕೂರು: 29-18
    ಉಡುಪಿ: 30-23
    ಕಾರವಾರ: 31-22
    ಚಿಕ್ಕಮಗಳೂರು: 27-16
    ದಾವಣಗೆರೆ: 30-19

    ಹುಬ್ಬಳ್ಳಿ: 30-19
    ಚಿತ್ರದುರ್ಗ: 28-19
    ಹಾವೇರಿ: 31-19
    ಬಳ್ಳಾರಿ: 29-19
    ಗದಗ: 28-18
    ಕೊಪ್ಪಳ: 29-19

    ರಾಯಚೂರು: 29-20
    ಯಾದಗಿರಿ: 29-19
    ವಿಜಯಪುರ: 31-19
    ಬೀದರ್: 29-18
    ಕಲಬುರಗಿ: 30-19
    ಬಾಗಲಕೋಟೆ: 31-19

  • ರಾಜ್ಯದ ಹವಾಮಾನ ವರದಿ 11-01-2025

    ರಾಜ್ಯದ ಹವಾಮಾನ ವರದಿ 11-01-2025

    ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ 3-4 ದಿನಗಳ ಶೀತಗಾಳಿ ಹಾಗೂ ಚಳಿಯ ವಾತಾವರಣ ಮುಂದಯವರಿಯಲಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರಾವಳಿ, ಉತ್ತರ, ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಶೀತಗಾಳಿಯ ಎಚ್ಚರಿಕೆ ನೀಡಲಾಗಿದೆ. ಉತ್ತರ ಕನ್ನಡ, ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿ, ಹಾವೇರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಶೀತಗಾಳಿ ಹಾಗೂ ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಮಂಡ್ಯ ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ್ದು, ಜನ ಅಗತ್ಯ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-18
    ಮಂಗಳೂರು: 31-23
    ಶಿವಮೊಗ್ಗ: 29-18
    ಬೆಳಗಾವಿ: 29-18
    ಮೈಸೂರು: 31-18

    ಮಂಡ್ಯ: 29-19
    ಮಡಿಕೇರಿ: 29-17
    ರಾಮನಗರ: 28-18
    ಹಾಸನ: 27-17
    ಚಾಮರಾಜನಗರ: 31-18
    ಚಿಕ್ಕಬಳ್ಳಾಪುರ: 26-16

    ಕೋಲಾರ: 24-16
    ತುಮಕೂರು: 28-18
    ಉಡುಪಿ: 30-22
    ಕಾರವಾರ: 32-22
    ಚಿಕ್ಕಮಗಳೂರು: 27-16
    ದಾವಣಗೆರೆ: 29-19

    ಹುಬ್ಬಳ್ಳಿ: 29-18
    ಚಿತ್ರದುರ್ಗ: 28-18
    ಹಾವೇರಿ: 31-18
    ಬಳ್ಳಾರಿ: 29-18
    ಗದಗ: 28-18
    ಕೊಪ್ಪಳ: 29-18

    ರಾಯಚೂರು: 29-19
    ಯಾದಗಿರಿ: 29-19
    ವಿಜಯಪುರ: 31-19
    ಬೀದರ್: 29-17
    ಕಲಬುರಗಿ: 29-18
    ಬಾಗಲಕೋಟೆ: 31-19

  • ಚಿಕ್ಕಬಳ್ಳಾಪುರ | ರಾಜ್ಯಕ್ಕೂ ತಟ್ಟಿದ ಸೈಕ್ಲೋನ್ ಎಫೆಕ್ಟ್ – ಚುಮುಚುಮು ಚಳಿಯೊಂದಿಗೆ ತುಂತುರು ಮಳೆ!

    ಚಿಕ್ಕಬಳ್ಳಾಪುರ | ರಾಜ್ಯಕ್ಕೂ ತಟ್ಟಿದ ಸೈಕ್ಲೋನ್ ಎಫೆಕ್ಟ್ – ಚುಮುಚುಮು ಚಳಿಯೊಂದಿಗೆ ತುಂತುರು ಮಳೆ!

    – ಪ್ರವಾಸಿಗರ ಮನಸೆಳೆದ ನಂದಿಬೆಟ್ಟದ ಮಂಜು

    ಚಿಕ್ಕಬಳ್ಳಾಪುರ: ಬಂಗಾಳಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದಲ್ಲಿ ನಿನ್ನೆ ಹಲವೆಡೆ ಭಾರೀ ಮಳೆಯಾಗಿದ್ರೆ.. ಮತ್ತೆ ಕೆಲವೆಡೆ ತುಂತುರು ಮಳೆಯಾಗಿದೆ. ಇನ್ನು ನಿನ್ನೆ ಮುಂಜಾನೆಯಿಂದ ಮೋಡ ಕವಿದ ವಾತಾವರಣ ಉಂಟಾಗಿ, ಚಳಿಯ ಜೊತೆ ತುಂತುರ ಹನಿಯಲ್ಲಿ ಜನರು ಗಡಗಡ ನಡುಗಿದ್ದಾರೆ.

    ಅತ್ತ ನಂದಿ ಬೆಟ್ಟದಲ್ಲಿ ಮಂಜುಮುಸುಕಿದ ವಾತಾವರಣ ಪ್ರವಾಸಿಗರ ಚಿತ್ತಾಕರ್ಷಿಸಿದೆ. ಇತ್ತ ಕಾಫಿನಾಡು ಚಿಕ್ಕಮಗಳೂರಲ್ಲಿ ಚುಮುಚುಮು ಚಳಿಯ ನಡುವೆ ದತ್ತಪೀಠದಲ್ಲಿ ನಡೆಯುತ್ತಿರುವ ಉತ್ಸವದಲ್ಲಿ ಭಕ್ತರು ಪಾಲ್ಗೊಂಡು ಪೂಜೆ ಪುನಸ್ಕಾರ ನೆರವೇರಿಸಿದ್ರು. ಇದನ್ನೂ ಓದಿ: ರಾಜ್ಯದಲ್ಲಿ ಅಪರಾಧಿಗಳಿಗೆ ಜಾಗವಿಲ್ಲ – ಹರಿಯಾಣ ಸಿಎಂ ಖಡಕ್ ವಾರ್ನಿಂಗ್

    ಮಂಜಿನಿಂದ ಆವೃತವಾಗಿರುವ ವಿಶ್ವವಿಖ್ಯಾತ ನಂದಿಗಿರಿಧಾಮ, ಎದುರಗಡೆ ಇರೋ ವ್ಯಕ್ತಿಯೂ ಕಣ್ಣಿಗೆ ಕಾಣದಷ್ಟು ಮೈಗೆ ಹೊದ್ದುಕೊಂಡಿರೋ ಮಂಜು, ಮಂಜಿನ ನಡುವೆಯೇ ಪ್ರೇಮಿಗಳ ಕಲರವ, ಅರಳಿ ನಿಂತ ಹೂಗಳು, ಹಚ್ಚು ಹಸುರಾಗಿ ಸಂಭ್ರಮಿಸುತ್ತಿರೋ ಗಿಡ ಮರಗಳು, ತೊಟಕ್ ತೊಟಕ್ ಅಂತ ಮರ ಗಿಡಗಳಿಂದ ಜಾರಿ ಬೀಳುವ ಇಬ್ಬನಿಯ ಹನಿಗಳ ಸದ್ದು, ಇದರ ನಡುವೆಯೇ ಪ್ರೇಮಿಗಳ ಪಿಸುಮಾತು ಅಬ್ಬಬ್ಬಾ ನಂದಿಬೆಟ್ಟ ಕೇವಲ ಬೆಟ್ಟವಲ್ಲ ಅದೊಂದು ನಿಸರ್ಗದ ಗಣಿ, ಪ್ರಕೃತಿಯ ಸೌಂದರ್ಯಕ್ಕೆ ಸಾಟಿಯೇ ಇಲ್ಲ ಎನ್ನುವಂತ ಸ್ವರ್ಗಧಾಮ..

    ಹೌದು. ಚಳಿಗಾಲ ಆರಂಭವಾಗುತ್ತಿದ್ದಂತೆ ನಂದಿಬೆಟ್ಟಕ್ಕೆ ಮಂಜು ಆವೃತವಾಗಲು ಆರಂಭವಾಗುತ್ತದೆ, ಅದ್ರಲ್ಲೂ ಚಳಿಗಾಲದಲ್ಲಿ ಹೆಚ್ಚಾಗಿ ಪ್ರವಾಸಿಗರು, ಚಾರಣಿಗರು, ಪ್ರಕೃತಿ ಪ್ರಿಯರು ನಂದಿಬೆಟ್ಟಕ್ಕೆ ಆಗಮಿಸ್ತಾರೆ. ಅದ್ರಲ್ಲೂ ಈಗ ಸೈಕ್ಲೋನ್ ಬೇರೆ ಇದ್ರಿಂದ ವಿಶ್ವವಿವಿಖ್ಯಾತ ನಂದಿಗಿರಿಧಾಮ ಮಂಜನ್ನೇ ಹೊದ್ದುಕೊಂಡು ಮಲಗಿದಂತೆ ಭಾಸವಾಗುತ್ತಿದ್ದು, ಮಂಜಿನ ನಡುವೆಯೇ ಪ್ರವಾಸಿಗರು ಕುಣಿದು ಕುಪ್ಪಳಿಸುತ್ತಿದ್ದಾರೆ. ಪೋಟೋ, ಸೆಲ್ಫಿ ತಗೊಂಡು ಸಖತ್ ಎಂಜಾಯ್ ಮಾಡ್ತಿದ್ದು, ನಂದಿಬೆಟ್ಟದ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ಇದನ್ನೂ ಓದಿ: ಚಾಮುಂಡಿ ದೇವಿಗೆ ಕೊಟ್ಟ ಹರಕೆ ಸೀರೆ ಕಾಳಸಂತೆಯಲ್ಲಿ ಮಾರಾಟ ಆರೋಪ – ಸ್ನೇಹಮಯಿ ಕಷ್ಣ ದೂರು

    ದತ್ತಪೀಠದಲ್ಲಿ ಮಂಜು.. ತುಂತುರು ಮಳೆ:
    ಅತ್ತ, ಕಾಫಿನಾಡು ಚಿಕ್ಕಮಗಳೂರಿಗೂ ಚಂಡಮಾರುತದ ಎಫೆಕ್ಟ್ ತಟ್ಟಿದೆ. ದಟ್ಟ ಮಂಜಿನ ನಡುವೆ ತುಂತುರು ಮಳೆ ದತ್ತಭಕ್ತರನ್ನು ಗಢಗಢ ನಡುಗುವಂತೆ ಮಾಡಿದೆ. ದತ್ತಜಯಂತಿ ಅಂಗವಾಗಿ ಅನುಸೂಯ ದೇವಿ ದರ್ಶನ ಪಡೆಯಲು ಆಗಮಿಸಿದ ಸಾವಿರಾರು ಮಹಿಳೆಯರು.. ಚಳಿ ಮಳೆಯಲ್ಲಿ ನಡುಗುತ್ತಲೇ ದೇವಿ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮಹಾಕುಂಭ ಮೇಳ – 5,500 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿಯಿಂದ ಚಾಲನೆ

  • ಸಿಲಿಕಾನ್ ಸಿಟಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಚಳಿ – 12 ಡಿಗ್ರಿಗೆ ಕುಸಿಯಲಿದ್ಯಂತೆ ತಾಪಮಾನ

    ಸಿಲಿಕಾನ್ ಸಿಟಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಚಳಿ – 12 ಡಿಗ್ರಿಗೆ ಕುಸಿಯಲಿದ್ಯಂತೆ ತಾಪಮಾನ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ದಿನೇ ದಿನೇ ಚಳಿ ಹೆಚ್ಚಾಗುತ್ತಿದ್ದು, ನಗರದ ತಾಪಮಾನ 12 ಡಿಗ್ರಿಗೆ ಕುಸಿಯುವ ಸಾಧ್ಯತೆಯಿದೆ.

    ಹೌದು, ಸಿಲಿಕಾನ್ ಸಿಟಿಯಲ್ಲಿ (Silicon City) ಇದೀಗ ಹೊರಗಡೆ ಹೋಗುವಾಗ ಸ್ವೆಟರ್ ಹಾಕಿ, ಕೈಗೆ ಗ್ಲೌಸ್, ಕಾಲಿಗೆ ಸಾಕ್ಸ್ ಹಾಕುವ ಪರಿಸ್ಥಿತಿ ಉಂಟಾಗಿದೆ. ದಿನಗಳೆದಂತೆ ಚಳಿ ಜಾಸ್ತಿಯಾಗುತ್ತಿದ್ದು, ಸಂಜೆಯಿಂದಲೇ ಚಳಿ ಪ್ರಾರಂಭವಾಗುತ್ತಿದೆ.ಇದನ್ನೂ ಓದಿ: ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಯಸಿಗೆ ಚಾಕು ಇರಿತ – ಕುಡಿದ ಮತ್ತಲ್ಲಿ ಕೃತ್ಯ

    ಈ ಬಾರಿ ರಾಜ್ಯಕ್ಕೆ ಮಾಗಿ ಚಳಿ ಬೇಗ ಆಗಮಿಸಿದ್ದು, ಇದರ ಪರಿಣಾಮ ಚಳಿ ಜೊತೆಗೆ ಮಧ್ಯರಾತ್ರಿ ಇಬ್ಬನಿ ಕೂಡ ಶುರುವಾಗಿದೆ. ಇನ್ನಷ್ಟೂ ಚಳಿಯ ಪ್ರಮಾಣ ಹೆಚ್ಚಾಗಲಿದ್ದು, ಬೆಂಗಳೂರು ತಾಪಮಾನ 12 ಡಿಗ್ರಿಗೆ ಇಳಿಯುವ ಸಾಧ್ಯತೆ ಇದೆ. ಈಗಾಗಲೇ ಚಳಿ ಹೆಚ್ಚಿದ್ದು, ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಚಳಿ ಜಾಸ್ತಿ ಆಗುವ ಸಾಧ್ಯತೆಯಿದೆ.

    ರಾಜ್ಯದಲ್ಲಿ ಲಾ ನಿನೊ ಸ್ಥಿತಿಯಿಂದಾಗಿ ಈ ಬಾರಿ ಚಳಿ ಪ್ರಮಾಣ ತೀವ್ರಗೊಂಡಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗುವ ಮೂನ್ಸುಚನೆಯಿದ್ದು, ಈ ರೀತಿ ಕಡಿಮೆಯಾಗುವುದನ್ನು ಲಾ ನಿನೋ ಎಂದು ಕರೆಯುತ್ತಾರೆ. ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿರುವ ಕಾರಣ ಚಳಿ ಹೆಚ್ಚಾಗಿದೆ.ಇದನ್ನೂ ಓದಿ: ಕಲಬುರಗಿ| ನರ್ಸ್‌ ವೇಷದಲ್ಲಿ ಬಂದ ಮಹಿಳೆಯರಿಂದ ಹಸುಗೂಸು ಕಿಡ್ನ್ಯಾಪ್‌

  • ನವೆಂಬರ್ ಅಂತ್ಯದಿಂದ ಡಿಸೆಂಬರ್‌ವರೆಗೂ ಅಧಿಕ ಚಳಿ: ಹವಾಮಾನ ತಜ್ಞ ಸಿ.ಎಸ್. ಪಾಟೀಲ್

    ನವೆಂಬರ್ ಅಂತ್ಯದಿಂದ ಡಿಸೆಂಬರ್‌ವರೆಗೂ ಅಧಿಕ ಚಳಿ: ಹವಾಮಾನ ತಜ್ಞ ಸಿ.ಎಸ್. ಪಾಟೀಲ್

    ಬೆಂಗಳೂರು: ನವೆಂಬರ್ ಅಂತ್ಯದಿಂದ ಡಿಸೆಂಬರ್‌ವರೆಗೂ ಅಧಿಕ ಚಳಿ ಇರಲಿದೆ ಎಂದು ಹವಾಮಾನ ತಜ್ಞ ಸಿ.ಎಸ್. ಪಾಟೀಲ್ (C S Patil) ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಅವರು, ಈ ವರ್ಷ ಚಳಿಗಾಲ ತೀವ್ರವಾಗುವ ಹೆಚ್ಚಿನ ಸಾಧ್ಯತೆ ಇದೆ. ಫೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ಉಷ್ಣಾಂಶ ಕಡಿಮೆಯಾಗುವ ಹಿನ್ನೆಲೆಹೆಚ್ಚಿನ ಚಳಿ ಅನುಭವವಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಚಿತ್ರದುರ್ಗ| ಪತಿ ಸಾವಿನಿಂದ ಖಿನ್ನತೆ – ತಾಯಿ, ಮಗಳು ನೇಣಿಗೆ ಶರಣು

    ಉಷ್ಣಾಂಶವು ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗುವುದಕ್ಕೆ ಲಾ-ನಿನೋ ಎಂದು ಕರೆಯುತ್ತಾರೆ. ಲಾ-ನಿನೋ ಪರಿಸ್ಥಿತಿಯಿದಾಗಿ ನವೆಂಬರ್ ಅಂತ್ಯದಿಂದ ಡಿಸೆಂಬರ್‌ವರೆಗೂ ಅಧಿಕ ಚಳಿ ಇರಲಿದ್ದು, ಈ ಚಳಿಯ ಅನುಭವ ಜನವರಿಯಿಂದ ಮಾರ್ಚ್ವರೆಗೂ ಕೂಡ ಮುಂದುವರೆಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯು.ಟಿ.ಪಿ ಕಾಲುವೆ ಒಡೆದು 1 ತಿಂಗಳಾದ್ರೂ ದುರಸ್ತಿ ಮಾಡದ ಅಧಿಕಾರಿಗಳು- ಕಂಗಾಲಾದ ರೈತರು

    ಉತ್ತರಭಾರತದಿಂದ ತಂಪು ಹವೆ ಬೀಳುವ ಪರಿಣಾಮ, ಉಷ್ಣಾಂಶ ಕಡಿಮೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಡಿಸೆಂಬರ್ ಹಾಗೂ ಜನವರಿಯಲ್ಲಿ 8 ರಿಂದ 10 ಡಿಗ್ರಿ ಉಷ್ಣಾಂಶ ಇರಬಹುದು. ಬೆಂಗಳೂರಿನಲ್ಲಿ ಡಿಸೆಂಬರ್ ಹಾಗೂ ಜನವರಿಯಲ್ಲಿ 12 ರಿಂದ 14 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ಚಳಿಗಾಲದಲ್ಲಿ ನಸುಕಿನ ಜಾವ 4 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೂ ಶೀತದ ವಾತವರಣ ಇರಲಿದ್ದು, ಶೀತ -ಜ್ವರ ಹೆಚ್ಚಾಗಬಹುದು ಎಂದು ಅವರು ಮಾಹಿತಿ ನೀಡಿದರು. ಇದನ್ನೂ ಓದಿ: Tumakuru| ಶಾಲಾ ಶಿಕ್ಷಕಿಯ ವಾಹನ ಅಡ್ಡಗಟ್ಟಿ ಸರಗಳ್ಳತನ