Tag: ಚಲೋ ಸಿನಿಮಾ

  • ರಶ್ಮಿಕಾ ಮಂದಣ್ಣಗೆ ಬಿಟ್ಟುಕೊಟ್ಟ ಆ ಚಾನ್ಸ್‌ನಿಂದ ಸ್ಟಾರ್ ಪಟ್ಟ ಕಳೆದುಕೊಂಡ್ರಾ ಶ್ರೀಲೀಲಾ?

    ರಶ್ಮಿಕಾ ಮಂದಣ್ಣಗೆ ಬಿಟ್ಟುಕೊಟ್ಟ ಆ ಚಾನ್ಸ್‌ನಿಂದ ಸ್ಟಾರ್ ಪಟ್ಟ ಕಳೆದುಕೊಂಡ್ರಾ ಶ್ರೀಲೀಲಾ?

    ಚಿತ್ರರಂಗದಲ್ಲಿ ನ್ಯಾಶನಲ್ ಕ್ರಶ್ ಆಗಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ದು ಮಾಡ್ತಿದ್ದಾರೆ. ಕೊಡಗಿನ ಕುವರಿಯ ಕೈಯಲ್ಲಿ ಅರ್ಧ ಡಜನ್ ಸಿನಿಮಾ ಇದ್ರೂ ನಟಿಯ ಮೇಲಿರುವ ಕ್ರೇಜ್ ಅಭಿಮಾನಿಗಳಿಗೆ ಕಮ್ಮಿಯಾಗಿಲ್ಲ. ಹೀಗಿರುವಾಗ ರಶ್ಮಿಕಾ ಮತ್ತು ಶ್ರೀಲೀಲಾ (Sreeleela) ಬಗ್ಗೆ ಹೊಸ ವಿಚಾರವೊಂದು ಚರ್ಚೆಯಾಗುತ್ತಿದೆ. ಶ್ರೀಲೀಲಾ, ಚಲೋ ಸಿನಿಮಾದ ಆಫರ್ ಬಿಟ್ಟು ಕೊಟ್ಟು ನ್ಯಾಶನಲ್ ಕ್ರಶ್ ಪಟ್ಟ ಬಿಟ್ಟು ಕೊಟ್ರಾ.? ಎಂಬ ವಿಷ್ಯ ಚರ್ಚೆಗೆ ಗ್ರಾಸವಾಗಿದೆ.

    ಕನ್ನಡದ ‘ಕಿಸ್’ (Kiss Kannda Film) ಬೆಡಗಿ ಶ್ರೀಲೀಲಾ ಅವರು ಇಂದು ಟಾಲಿವುಡ್‌ನಲ್ಲಿ ಬ್ಯುಸಿ ನಾಯಕಿಯಾಗಿ ರಶ್ಮಿಕಾಗೆ ಸೆಡ್ಡು ಹೊಡೆಯುತ್ತಿದ್ದಾರೆ. 10ಕ್ಕೂ ಹೆಚ್ಚು ಚಿತ್ರಗಳು ಶ್ರೀಲೀಲಾ ಕೈಯಲ್ಲಿದೆ. ರಶ್ಮಿಕಾ ಕೈಯಲ್ಲಿ 3ರಿಂದ 4 ಸಿನಿಮಾಯಿದೆ. ಆದ್ರೂ ಶ್ರೀಲೀಲಾಗೆ ಸ್ಟಾರ್ ಪಟ್ಟ, ನ್ಯಾಶನಲ್ ಕ್ರಶ್ ಪಟ್ಟ ಸಿಗ್ತಿಲ್ಲ ಯಾಕೆ ಎಂಬ ಚರ್ಚೆ ಶುರುವಾಗಿದೆ. ಶ್ರೀಲೀಲಾ, ಗೋಲ್ಡನ್ ಆಫರ್ ಮಿಸ್ ಮಾಡಿಕೊಂಡಿದ್ದರ ಬಗ್ಗೆ ಚರ್ಚೆಯಾಗುತ್ತಿದೆ.

    ‘ಚಲೋ’ (Challo)ಸಿನಿಮಾದ ಹೀರೊ ನಾಗಶೌರ್ಯ (Nagashaurya) ಇತ್ತೀಚಿನ ಸಂದರ್ಶನದಲ್ಲಿ ರಶ್ಮಿಕಾಗೂ ಮುನ್ನ ಚಿತ್ರತಂಡ ಶ್ರೀಲೀಲಾರನ್ನು ಸಂಪರ್ಕ ಮಾಡಿತ್ತು. ಆದರೆ, ಶ್ರೀಲೀಲಾ ಕಾರಣಾಂತರಗಳಿಂದ ಈ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರು. ಅವರ ಸ್ಥಾನಕ್ಕೆ ಕನ್ನಡದ ಮತ್ತೊಬ್ಬ ನಟಿ ರಶ್ಮಿಕಾ ಮಂದಣ್ಣರನ್ನು ಆಯ್ಕೆ ಮಾಡಲಾಯ್ತು ಎಂದಿದ್ದಾರೆ. ಈ ಹೇಳಿಕೆ ಬಳಿಕ ಶ್ರೀಲೀಲಾ ಬಿಟ್ಟುಕೊಟ್ಟ ಗೋಲ್ಡನ್ ಚಾನ್ಸ್ ಬಗ್ಗೆ ಅನೇಕರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ ಪೂಜಾ ಭಟ್

    ‘ಚಲೋ’ ಸಿನಿಮಾ ತೆರೆಕಂಡ ಮೂರು ವರ್ಷಗಳ ಬಳಿಕ ಟಾಲಿವುಡ್‌ಗೆ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದರು. ‘ಪೆಳ್ಳಿ ಸಂದಡಿ’ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಈಗ ಶ್ರೀಲೀಲಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೈಯಲ್ಲಿ ಬರೋಬ್ಬರಿ 10ಕ್ಕೂ ಹೆಚ್ಚು ಸಿನಿಮಾಗಳಿವೆ.

    ರಶ್ಮಿಕಾ ಮಂದಣ್ಣ ‘ಪುಷ್ಪ’ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಪ್ಯಾನ್ ಇಂಡಿಯಾ ಸ್ಟಾರ್ ಆಗ್ಬಿಟ್ರು. ತಕ್ಷಣಕ್ಕೆ ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇಲ್ಲಿಂದ ರಶ್ಮಿಕಾ ತೆಲುಗು ಸಿನಿಮಾಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ‘ಪುಷ್ಪ 2’ ರಶ್ಮಿಕಾ ಕೈಯಲ್ಲಿರೋ ಏಕೈಕ ತೆಲುಗು ಬಿಗ್ ಬಜೆಟ್ ಸಿನಿಮಾ. ಆದರೂ ಶ್ರೀವಲ್ಲಿ ಮೇಲಿನ ಕ್ರೇಜ್ ಕಮ್ಮಿಯಾಗಿಲ್ಲ. ರಶ್ಮಿಕಾಗೆ ಅರಸಿ ಬರುತ್ತಿದ್ದ ಪಾತ್ರಗಳು ಈಗ ಶ್ರೀಲೀಲಾ ಆಫರ್ ಸಿಗುತ್ತಿದೆ. ಆದ್ರೂ ರಶ್ಮಿಕಾ ಸ್ಥಾನ ಭದ್ರವಾಗಿದೆ. ಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ಮಿಂಚ್ತಿರೋ ಶ್ರೀಲೀಲಾ ಲಕ್ ಹೇಗೆಲ್ಲಾ ಬದಲಾಗಬಹುದು ಎಂದು ಮುಂದಿನ ದಿನಗಳವರೆಗೂ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಡುರಸ್ತೆಯಲ್ಲಿ ಹುಡುಗಿಗೆ ಹೊಡೆದ ಲವರ್‌ಗೆ ಜಾಡಿಸಿದ ನಟ ನಾಗಶೌರ್ಯ

    ನಡುರಸ್ತೆಯಲ್ಲಿ ಹುಡುಗಿಗೆ ಹೊಡೆದ ಲವರ್‌ಗೆ ಜಾಡಿಸಿದ ನಟ ನಾಗಶೌರ್ಯ

    ತೆರೆಯ ಮೇಲಷ್ಟೇ ನಾವು ಹೀರೋ ಅಲ್ಲ, ನಿಜ ಜೀವನದಲ್ಲೂ ಹೀರೋನೇ ಎಂದು ಇತ್ತೀಚಿನ ಘಟನೆಯೊಂದರಿಂದ ಟಾಲಿವುಡ್ (Tollywood) ನಟ ನಾಗಶೌರ್ಯ (Actor Naga shourya) ಪ್ರೂವ್ ಮಾಡಿದ್ದಾರೆ. ನಡುರಸ್ತೆಯಲ್ಲಿ ಯುವತಿಗೆ ಹೊಡೆದ ಲವರ್‌ಗೆ ಇದೀಗ ನಟ ನಾಗಶೌರ್ಯ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಸಿನಿಮಾ ತಮ್ಮ ಖಾಸಗಿ ಜೀವನ ಅಂತಾ ನಟ-ನಟಿಯರು ಬ್ಯುಸಿಯಿರುತ್ತಾರೆ. ಇತರೆ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಹೀಗಿರುವಾಗ ನಾಗಶೌರ್ಯ ಇದೀಗ ಮಾಡಿರುವ ಕೆಲಸ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಸಿನಿಮಾದಲ್ಲಿಷ್ಟೇ ಹೀರೋ ಅಲ್ಲ, ತೆರೆ ಹಿಂದೆ ಕೂಡ ರಿಯಲ್ ಹೀರೋ ಎಂಬುದನ್ನ ನಟ ಪ್ರೂವ್ ಮಾಡಿದ್ದಾರೆ. ಇದನ್ನೂ ಓದಿ: ಅನುಷ್ಕಾಳೇ ನನ್ನ ಸ್ಫೂರ್ತಿ ಎಂದು ಪತ್ನಿಯನ್ನು ಹಾಡಿ ಹೊಗಳಿದ ವಿರಾಟ್ ಕೊಹ್ಲಿ

    ಅಷ್ಟಕ್ಕೂ ಅಲ್ಲಿ ನಡೆದ ಘಟನೆ ಏನೆಂದರೆ, ಪ್ರೇಮಿಗಳಿಬ್ಬರು ರಸ್ತೆ ಮಧ್ಯೆ ಜಗಳವಾಡುತ್ತಿದ್ದರು. ಆಗ ಯುವಕ, ಯುವತಿ ಮೇಲೆ ಕೈ ಮಾಡಿದ್ದಾನೆ. ಇದನ್ನು ಕಂಡು ಸಿಟ್ಟಿಗೆದ್ದ ನಾಗ ಶೌರ್ಯ, ಕಾರಿನಿಂದ ಇಳಿದಿದ್ದಾರೆ. ಯುವತಿ ಹಲ್ಲೆ ಮಾಡಿದ್ದಕ್ಕಾಗಿ ಕ್ಷಮೆ ಕೇಳುವಂತೆ ಆ ಹುಡುಗನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಆ ಹುಡುಗ, ನಾನು ಆಕೆಯ ಲವರ್ ಎಂದು ಸಬೂಬು ಹೇಳಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ನಟ, ಲವರ್ ಆಗಿಬಿಟ್ಟರೆ, ಆಕೆಯ ಮೇಲೆ ಕೈ ಮಾಡಬಹುದಾ ಕ್ಷಮೆ ಕೇಳು ಎಂದು ಯುವಕನ ವಿರುದ್ಧ ಗರಂ ಆಗಿದ್ದಾರೆ. ಈ ರೀತಿ ಆ ಹುಡುಗನಿಗೆ ನಟ ಜೋರು ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

    ಆರಂಭದಲ್ಲಿ ಈ ವಿಡಿಯೋ ವೈರಲ್ ಆದಾಗ, ನಟ ನಾಗ ಶೌರ್ಯ ಅವರು ನಡುರಸ್ತೆಯಲ್ಲಿ ಯಾರೋ ಯುವಕನ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಸತ್ಯಾಸತ್ಯತೆ ಗೊತ್ತಾದ ಮೇಲೆ ನಾಗ ಶೌರ್ಯ ಅವರ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿದೆ. ಇನ್ನೂ, ಆ ಯುವಕನ ಪರವಾಗಿ ಮಾತನಾಡಿರುವ ಆ ಯುವತಿ, ಏನೋ ಆಗಿದ್ದು ಆಗಿದೆ, ಬಿಟ್ಟುಬಿಡಿ ಎಂದು ಕೇಳಿಕೊಂಡರು ಎನ್ನಲಾಗಿದೆ. ಅಲ್ಲಿದ್ದವರು ಕೂಡ ಆ ಯುವಕನಿಗೆ ಕ್ಷಮೆ ಕೇಳುವಂತೆ ಪಟ್ಟುಹಿಡಿದಿದ್ದರು. ಒಟ್ಟಾರೆ ನಟ ನಾಗಶೌರ್ಯ ನಡೆಗೆ ಫ್ಯಾನ್ಸ್ ಭೇಷ್ ಎಂದಿದ್ದಾರೆ. ಮಹಿಳೆಯರಿಗೆ ನಾಗಶೌರ್ಯ ಗೌರವಿಸುವ ರೀತಿಯನ್ನ ಫ್ಯಾನ್ಸ್‌ ಮೆಚ್ಚಿದ್ದಾರೆ.