Tag: ಚಲುವರಾಯ ಸ್ವಾಮಿ

  • ಸುಮಲತಾ ಗೆಲುವಿಗೆ ಶ್ರಮಿಸ್ತಿದ್ದಾರಾ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ..?

    ಸುಮಲತಾ ಗೆಲುವಿಗೆ ಶ್ರಮಿಸ್ತಿದ್ದಾರಾ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ..?

    ಮಂಡ್ಯ: ನಾಗಮಂಗಲದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಅವರು ಮಂಡ್ಯ ಲೋಕಸಭಾ ಚುನಾವಣೆ ಸುಮಲತಾ ಗೆಲುವಿಗೆ ಶ್ರಮಿಸುತ್ತಿದ್ದಾರಾ ಅನ್ನೋ ಅನುಮಾನವೊಂದು ಇದೀಗ ರಾಜಕೀಯ ವಲಯದಲ್ಲಿ ಎದ್ದಿದೆ.

    ಚೆಲುವರಾಯ ಸ್ವಾಮಿ ಅವರಿಗೆ ಸುಮಲತಾ ವಂದನೆ ಸಲ್ಲಿಸುತ್ತಿರುವಂತೆ ಪೋಸ್ಟ್ ಹಾಕಿ ವೈರಲ್ ಮಾಡಲಾಗುತ್ತಿದೆ. “ನನ್ನ ಬೆನ್ನ ಹಿಂದೆ ನಿಂತು ನನ್ನ ಗೆಲುವಿಗೆ ಶ್ರಮಿಸುತ್ತಿರುವ ಚೆಲುವರಾಯಸ್ವಾಮಿಯವರಿಗೆ ನನ್ನ ವಂದನೆಗಳು” ಎಂದು ಸುಮಲತಾ ಬರೆದಿದ್ದಾರೆ ಎನ್ನಲಾದ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದ್ರೆ ಇದನ್ನು ಸುಮಲತಾ ಅವರೇ ಬರೆದಿದ್ದಾರಾ ಅಥವಾ ಬೇರೆಯವರು ಬರೆದಿದ್ದಾರಾ ಎಂಬ ಪ್ರಶ್ನೆಗಳು ಎದ್ದಿವೆ.

    ಸುಮಲತಾ, ನಿಖಿಲ್ ಪ್ರಚಾರ:
    ಮಂಡ್ಯ ಕುರುಕ್ಷೇತ್ರದಲ್ಲಿ ನಾನಾ ನೀನಾ ಅಂತ ಜಿದ್ದಿಗೆ ಬಿದ್ದಿರುವ ಸುಮಲತಾ ಹಾಗೂ ನಿಖಿಲ್‍ರ ಅಬ್ಬರದ ಪ್ರಚಾರ ಇಂದು ಮುಂದುವರಿಯಲಿದೆ. ಸುಮಲತಾ ಅಂಬರೀಶ್ ಮೈಸೂರು ಜಿಲ್ಲೆ ಕೆಆರ್ ನಗರ ಭಾಗದಲ್ಲಿ ಇಂದು ಪ್ರಚಾರ ನಡೆಸಲಿದ್ದಾರೆ. ಇವರಿಗೆ ಪುತ್ರ ಅಭಿಷೇಕ್ ಸಾಥ್ ನೀಡಲಿದ್ದಾರೆ.ಹೀಗಾಗಿ ಬಿಎಸ್‍ವೈ ಭೇಟಿಯನ್ನು ಸುಮಲತಾ ಮುಂದೂಡಿದ್ದಾರೆ.

    ನಿಖಿಲ್ ಕುಮಾರಸ್ವಾಮಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯಲ್ಲಿ ಸಂಚರಿಸಿ ಮತಬೇಟೆಯಾಡಲಿದ್ದಾರೆ. ಇವರಿಗೆ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಶಾಸಕ ಸುರೇಶ್ ಗೌಡ ಹಾಗೂ ಸಂಸದ ಶಿವರಾಮೇಗೌಡ ಸೇರಿದಂತೆ ಹಲವರು ಸಾಥ್ ನೀಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಲುವರಾಯಸ್ವಾಮಿಯನ್ನ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ರು ಪುಟ್ಟರಾಜು

    ಚಲುವರಾಯಸ್ವಾಮಿಯನ್ನ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ರು ಪುಟ್ಟರಾಜು

    -ಅವ್ರ ತಲೆಯನ್ನು ನಾವ್ ಸರಿ ಮಾಡ್ತೀವಿ ಅಂದ್ರು ಸಚಿವರು

    ಮಂಡ್ಯ: ಜಿಲ್ಲೆಯಲ್ಲಿ ರಾಜಕೀಯ ನಾಯಕರ ವಾಗ್ದಾಳಿ ಮುಂದುವರಿದಿದ್ದು, ಈ ಬಾರಿ ಬಹಿರಂಗ ಚರ್ಚೆಗೆ ಬರುವಂತೆ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಮಾಜಿ ಸಚಿವ ಚಲುವರಾಯಸ್ವಾಮಿ ಅವರಿಗೆ ಆಹ್ವಾನ ನೀಡಿದ್ದಾರೆ.

    ಚಲುವರಾಯಸ್ವಾಮಿ ಬೆಂಬಲಿಗರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಚಿವರು, ಈ ನಿರ್ಧಾರಕ್ಕೆ ಮುಂದಾಗಿದ್ದಾರೆ. ತಮ್ಮ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಗೆದ್ದವನು ಸೋತ, ಸೋತವನು ಸತ್ತ ಅನ್ನುವ ರೀತಿ ನಾವೆಲ್ಲ ರಾಜಕಾರಣ ಮಾಡಬೇಕಾಗಿದೆ. ಆ ಅರ್ಥದಲ್ಲಿ ಡೆಡ್ ಹಾರ್ಸ್ ಪದ ಬಳಸಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನು ಓದಿ:  ಡೆಡ್ ಹಾರ್ಸ್ ಗಳೆಲ್ಲಾ ಮಾತನಾಡೋ ಹಾಗಾಗಿದೆ- ಚಲುವರಾಯ ಸ್ವಾಮಿಯನ್ನ ಸತ್ತ ಕುದುರೆಗೆ ಹೋಲಿಸಿದ್ರು ಸಚಿವ ಪುಟ್ಟರಾಜು

    ಕ್ಷೇತ್ರದ ಜನರು 52 ಸಾವಿರ ಮತಗಳ ಅಂತರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ನೀನು ಸುಮ್ಮನಿರಪ್ಪ ಅಂತ ಹೇಳಿದ್ದಾರೆ. ಹೀಗಾಗಿ ನಾನು ಆ ರೀತಿ ಹೇಳಿಕೆ ನೀಡಿದೆ. ಅವರಿಗೆ ಅಗೌರವ ತರುವ ಉದ್ದೇಶದಿಂದ ಹಾಗೆ ಹೇಳಿಲ್ಲ. ಚಲುವರಾಯಸ್ವಾಮಿ ಅವರನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರನ್ನಾಗಿ ಮಾಡಿ, ರಾಜಕೀಯ ಶಕ್ತಿ ತುಂಬುತ್ತ ಬಂದವರು ಯಾರು ಎನ್ನುವುದರ ಬಗ್ಗೆ ಮಂಡ್ಯದಲ್ಲಿ ದೊಡ್ಡ ವೇದಿಕೆ ಹಾಕಿ ಬಹಿರಂಗ ಚರ್ಚೆ ಮಾಡಲು ನಾನು ಸಿದ್ಧ ಎಂದು ಕಿಡಿಕಾರಿದ್ದಾರೆ.

    ನಾನು ಯಾವುದೋ ಕಾಟ್ಪೋಟಿಗಳಿಗೆ (ಲೆಕ್ಕಕ್ಕೆ ಇಲ್ಲದವರಿಗೆ) ಉತ್ತರ ಕೊಡುವ ಅಗತ್ಯ ಇಲ್ಲ ಅಂತಾ ಹೇಳಿದ ಸಚಿವರು, ಚಲುವರಾಯಸ್ವಾಮಿ ಬೆಂಬಲಿಗರ ವಿರುದ್ಧ ಕಿಡಿಕಾರಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಯಾರು ಕಾಲು ಹಿಡಿದುಕೊಂಡರು ಎನ್ನವುದಕ್ಕೆ ಮಾಜಿ ಶಾಸಕ ಎಚ್.ಬಿ.ರಾಮು ಅವರು ಸಾಕ್ಷಿ. ಬೇಕಾದರೆ ಅವರ ನೇತೃತ್ವದಲ್ಲಿಯೇ ಚರ್ಚೆ ನಡೆಯಲಿ ಅಂದ್ರು.

    ನಾನು ಚಲುವರಾಯಸ್ವಾಮಿ ಸ್ನೇಹಿತರು. ರಾಜಕೀಯ ವಿಚಾರದಲ್ಲಿ ಅವರು ನನಗೆ ಏನ್ ತೊಂದರೆ ಕೊಟ್ಟರೂ, ನಾನು ಅವರ ಬಗ್ಗೆ ಏನು ಮಾತನಾಡಿರುವೆ ಎನ್ನುವ ಬಗ್ಗೆ ಚರ್ಚೆಗೆ ನಾನು ಸಿದ್ಧ. ಹೊರತಾಗಿ ಯಾವನೋ ಇನ್ನೊಬ್ಬನ ಮಾತಿಗೆ ನಾನು ಉತ್ತರ ಕೊಡುವ ಅಗತ್ಯವಿಲ್ಲ ಅಂತ ನೇರವಾಗಿ ವಾಗ್ದಾಳಿ ನಡೆಸಿದ್ರು.

    ತಲೆಯಲ್ಲಿ ಮೆದುಳು ಇಟ್ಟುಕೊಂಡು ಮಾತನಾಡಬೇಕು ಎನ್ನುವ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ನನ್ನ ತಲೆಯಲ್ಲಿ ಮೆದುಳು ಇರುವುದಕ್ಕೆ ಎದುರಾಳಿಯ ಅನುಕಂಪದ ಅಲೆ ಇದ್ದರೂ ಜನ ನನ್ನನ್ನ ಗೆಲ್ಲಿಸಿದ್ದಾರೆ. ಚಲುವರಾಯಸ್ವಾಮಿ ಅವರು ತಲೆ ಸರಿ ಮಾಡಿಸಿಕೊಳ್ಳಬೇಕಾಗಿದೆ. ಅವರ ತಲೆಯನ್ನು ನಾವು ಸರಿ ಮಾಡುತ್ತೇವೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪುಟ್ಟರಾಜುಗೆ ಕಾಮನ್ ಸೆನ್ಸ್ ಇಲ್ಲ, ಮೆದುಳೂ ಇಲ್ಲ- ಚೆಲುವರಾಯಸ್ವಾಮಿ ತಿರುಗೇಟು

    ಪುಟ್ಟರಾಜುಗೆ ಕಾಮನ್ ಸೆನ್ಸ್ ಇಲ್ಲ, ಮೆದುಳೂ ಇಲ್ಲ- ಚೆಲುವರಾಯಸ್ವಾಮಿ ತಿರುಗೇಟು

    ಬೆಂಗಳೂರು: ಸತ್ತ ಕುದುರೆ ಅಂತ ಲೇವಡಿ ಮಾಡಿದ್ದ ಸಣ್ಣ ನೀರಾವರಿ ಸಚಿವ ಪುಟ್ಟರಾಜು ಅವರಿಗೆ ಮಾಜಿ ಶಾಸಕ ಚೆಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

    ಸಚಿವ ಪುಟ್ಟರಾಜು ಹೇಳಿಕೆಗೆ ನಗರದಲ್ಲಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಅವರು, ಅವನಿಗೆ ಕಾಮನ್ ಸೆನ್ಸ್ ಇಲ್ಲ. ಮೆದುಳು ಇಲ್ಲ. ಸಚಿವನಾಗಿ ಹೀಗೆ ಮಾತಾಡೋದು ಸರಿಯಿಲ್ಲ ಅಂತ ವಾಗ್ದಾಳಿ ನಡೆಸಿದ್ರು.

    ಸೋತವರ ಬಗ್ಗೆ ಸಚಿವ ಪುಟ್ಟರಾಜು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಹಾಗಾದ್ರೆ ಎಂಪಿ ಎಲೆಕ್ಷನ್ ನಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಸೋತಿದ್ದು ಎಷ್ಟು ವೋಟ್ ನಿಂದ ಅಂತ ಪಾಪ ಅವನಿಗೆ ಗೊತ್ತಿಲ್ಲ ಅಂತ ತಿರುಗೇಟು ನೀಡಿದ್ರು.

    ಉಪ ಚುನಾವಣೆಯಲ್ಲಿ ಅಭ್ಯರ್ಥಿ ಹಾಕೋಣ ಅಂತ ನಾನು ಪಕ್ಷದ ನಾಯಕರಿಗೆ ಹೇಳಿದ್ದೇನೆ. ನಾನು ಸಮ್ಮಿಶ್ರ ಸರ್ಕಾರದ ಬಗ್ಗೆ ಎಲ್ಲೂ ಮಾತನಾಡಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕಿಲ್ಲ ಅಂದ್ರೆ ಮನೆಯಲ್ಲಿ ಕುಳಿತು ಯಾರು ಬೇಕಾದ್ರೂ ಗೆಲ್ಲಬಹುದು. ಒಂದು ವೇಳೆ ಅಭ್ಯರ್ಥಿ ಹಾಕಿದ್ರೆ ಚುನಾವಣೆ ದಿನ ಫಲಿತಾಂಶ ಗೊತ್ತಾಗುತ್ತೆ ಅಂತ ಟಾಂಗ್ ಕೊಟ್ರು.

    ದೇವೇಗೌಡರು ಆರ್.ಆರ್.ನಗರ ಹಾಗೂ ಜಯನಗರ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನ ಹಾಕಿದ್ರು. ನಂತ್ರ ಫ್ರೆಂಡ್ಲಿ ಫೈಟ್ ಅಂತ ಹೇಳಿದ್ರು. ಈಗಲೂ ಅಷ್ಟೇ ಅಭ್ಯರ್ಥಿಗಳನ್ನ ಹಾಕಲಿ ಫ್ರೆಂಡ್ಲಿ ಫೈಟ್ ನಡೆಯಲಿ ಅಂತ ಚೆಲುವರಾಯಸ್ವಾಮಿ ಹೇಳಿದ್ರು. ಇಷ್ಟಕ್ಕೆ ಸುಮ್ಮನಾಗದ ಚೆಲುವರಾಯಸ್ವಾಮಿ ಸಚಿವ ಪುಟ್ಟರಾಜು ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ್ರು. ಅವನು ಹೇಗೆ ಎಂಪಿ ಆದ ಅಂತ ನನಗೆ ಗೊತ್ತು. ಎಂಎಲ್‍ಎ ಟಿಕೆಟ್ ತಗೊಂಡಿದ್ದು ಅಂತಾನೂ ಗೊತ್ತು. ಅವನಂತೆ ನಾನು ಮಾತಾಡೊಲ್ಲ ಅಂತ ಕಿಡಿಕಾರಿದ್ರು.

    ಕಾಂಗ್ರೆಸ್ ನ ಹಲವರಲ್ಲಿ ಮೈತ್ರಿ ಬೇಡ ಅನ್ನೋದು ಇದೆ. ಉಸ್ತುವಾರಿ ವೇಣುಗೋಪಾಲ್‍ಗೂ ಈ ವಿಷ್ಯ ತಿಳಿಸುತ್ತೇವೆ. ಮುಂದಿನದು ಪಕ್ಷಕ್ಕೆ ಬಿಟ್ಟ ವಿಚಾರ ಅಂದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡೆಡ್ ಹಾರ್ಸ್ ಗಳೆಲ್ಲಾ ಮಾತನಾಡೋ ಹಾಗಾಗಿದೆ- ಚಲುವರಾಯ ಸ್ವಾಮಿಯನ್ನ ಸತ್ತ ಕುದುರೆಗೆ ಹೋಲಿಸಿದ್ರು ಸಚಿವ ಪುಟ್ಟರಾಜು

    ಡೆಡ್ ಹಾರ್ಸ್ ಗಳೆಲ್ಲಾ ಮಾತನಾಡೋ ಹಾಗಾಗಿದೆ- ಚಲುವರಾಯ ಸ್ವಾಮಿಯನ್ನ ಸತ್ತ ಕುದುರೆಗೆ ಹೋಲಿಸಿದ್ರು ಸಚಿವ ಪುಟ್ಟರಾಜು

    ಮಂಡ್ಯ: ಡೆಡ್ ಹಾರ್ಸ್ ಗಳೆಲ್ಲಾ ಮಾತನಾಡುವ ಹಾಗಾಗಿದೆ ಅಂತ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರನ್ನು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಸತ್ತ ಕುದುರೆಗೆ ಹೋಲಿಸಿದ್ದಾರೆ.

    ಮಂಡ್ಯದ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಇತಿಹಾಸದಲ್ಲಿ 52 ಸಾವಿರ ಲೀಡ್ ನಲ್ಲಿ ನಾಗಮಂಗಲದಲ್ಲಿ ಗೆದ್ದಿದ್ದು ನೋಡಿದ್ದೀರಾ. ಚೆಲುವರಾಯಸ್ವಾಮಿ ಅವರನ್ನು ಜನರು ಸ್ವಲ್ಪ ಬಾಯಿಮುಚ್ಚಿಕೊಂಡು ಇರಲಿ ಅಂತ ಸೋಲಿಸಿ ಕಳುಹಿಸಿದ್ದಾರೆ. ಮೊದಲು ಅವರು ಅದನ್ನು ಮಾಡಲಿ ಅಂತ ಹೇಳಿದ್ರು.

    ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆಗೆ ನಮ್ಮ ಪಕ್ಷದಲ್ಲಿ ಸಮರ್ಥರಿದ್ದಾರೆ. ಸ್ಪರ್ಧೆಯೂ ಇದೆ. ಅಂತಿಮವಾಗಿ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು, ಸಿಎಂ ಕುಮಾರಣ್ಣ ಅವರು ತೀರ್ಮಾನ ಮಾಡುತ್ತಾರೆ. ಹೀಗೆ ತೀರ್ಮಾನ ಮಾಡಿದ ಅಭ್ಯರ್ಥಿಯನ್ನು ಅತ್ಯಂತ ಅಂತರದಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಜನತೆ ಗೆಲ್ಲಿಸಿಕೊಡುತ್ತಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ನೀವು ಯಾರನ್ನಾದ್ರೂ ಸೂಚಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾನೊಬ್ಬ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರಿಂದ ಸಮರ್ಥವಾಗಿ ನನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು. ಆ ಹಿನ್ನೆಲೆಯಲ್ಲಿ ಇರುವಂತಹ ವಸ್ತು ಸ್ಥಿತಿಯನ್ನು ರಾಷ್ಟ್ರಧ್ಯಕ್ಷ, ಸಿಎಂ ಹಾಗೂ ರಾಜ್ಯಾಧ್ಯಕ್ಷರಿಗೆ ಮನವರಿಗೆ ಮಾಡಿಕೊಡುತ್ತೇನೆ. ಅದರ ಹಿನ್ನೆಲೆಯಲ್ಲಿ ಪಕ್ಷ ತೀರ್ಮಾನ ಮಾಡಿಕೊಡುತ್ತದೆ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ ಅಂದ್ರು.

    ಮೈತ್ರಿ ಬೇಕು ಅಂತ ಮಂಡ್ಯದಲ್ಲಿ ಯಾರೂ ಗೋಗರೆಯುತ್ತಿಲ್ಲ. ಜನ ಕೊಟ್ಟ ತೀರ್ಪಿನಿಂದ ಅನಿವಾರ್ಯತೆ ಬಂದ ಕಾರಣ ಈ ರಾಜ್ಯದಲ್ಲಿ ಇಂದು ಸಮ್ಮಿಶ್ರ ಸರ್ಕಾರ ಆಗಿದೆ. ಆ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ಸುಭದ್ರವಾಗಿದೆ. ಹೀಗಾಗಿ ಇಂದು ನಾವು ಯಾರ ಜೊತೆನೂ ಅಂಗಲಾಚುವ ಅಗತ್ಯತೆ ಇಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ನಾಯಕರು ಮೈತ್ರಿಗೆ ಸಮ್ಮತಿಸಿದ್ರು. ಹೀಗಾಗಿ ಎರಡೂ ಪಕ್ಷದ ನಾಯಕರು ತೀರ್ಮಾನಕ್ಕೆ ನಾನೂ ನಡೀಬೇಕಾಗುತ್ತದೆ. ಚಲುವರಾಯ ಸ್ವಾಮಿ ಅವರೂ ನಡೀಬೇಕಾಗಿದೆ ಅಂತ ಅವರು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೆಡಿಎಸ್ ಬಂಡಾಯ ಶಾಸಕರಿಂದ ಇಂದು ಶಕ್ತಿಪ್ರದರ್ಶನ – ಕೈ ಟಿಕೆಟ್‍ಗಾಗಿ ಚಲುವರಾಯಸ್ವಾಮಿ ತಂತ್ರ

    ಜೆಡಿಎಸ್ ಬಂಡಾಯ ಶಾಸಕರಿಂದ ಇಂದು ಶಕ್ತಿಪ್ರದರ್ಶನ – ಕೈ ಟಿಕೆಟ್‍ಗಾಗಿ ಚಲುವರಾಯಸ್ವಾಮಿ ತಂತ್ರ

    ಮಂಡ್ಯ: ಜೆಡಿಎಸ್ ನಿಂದ ಅಮಾನತ್ತಾದ ಶಾಸಕ ಚಲುವರಾಯಸ್ವಾಮಿ ಇದೇ ಪ್ರಥಮ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

    ಇಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮವೇ ಆದರೂ ಪರೋಕ್ಷವಾಗಿ ಚೆಲುವರಾಯಸ್ವಾಮಿ ಜೆಡಿಎಸ್ ವರಿಷ್ಠರ ವಿರುದ್ಧ ನಡೆಸುತ್ತಿರುವ ಶಕ್ತಿ ಪ್ರದರ್ಶನ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಖಾಸಗಿ ವೈದ್ಯರ ವಿಧೇಯಕ ಮಂಡನೆಯನ್ನೇ ಮುಂದೂಡಲಾಗಿದೆ ಎಂಬ ಚರ್ಚೆ ಶುರುವಾಗಿದೆ.

    ಈಗಾಗಲೇ ನಾಗಮಂಗಲ ತಾಲೂಕಿನಲ್ಲಿ ಫ್ಲೆಕ್ಸ್ ಗಳ ಅಬ್ಬರ ಕೂಡ ಜೋರಾಗಿದ್ದು, ಜಮೀರ್ ಅಹಮದ್, ಬಾಲಕೃಷ್ಣ ಅವರ ಭಾವಚಿತ್ರಗಳೂ ರಾರಾಜಿಸುತ್ತಿವೆ. ಶಕ್ತಿ ಪ್ರದರ್ಶನದ ಜೊತೆಗೆ ಕಾಂಗ್ರೆಸ್ ಟಿಕೆಟ್ ಖಾತ್ರಿ ಪಡಿಸಿಕೊಳ್ಳಲು ಚಲುವರಾಯಸ್ವಾಮಿ ಕಾರ್ಯಕ್ರಮ ಯಶಸ್ಸಿಗೆ ಕೆಲಸ ಮಾಡ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.