ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನದ ಬಗ್ಗೆ ನನಗೆ ನಮ್ಮ ಸಿಎಂ, ಡಿಸಿಎಂ, ರಾಹುಲ್ ಗಾಂಧಿ ಹೇಳಿದ್ದಾರೆ. ನಾನು ಮಂಡ್ಯದ (Mandya) ಡಿಟೇಲ್ಸ್ ನೋಡಿಲ್ಲ. ನೋಡಿದ ಮೇಲೆ ಹೇಳ್ತೀನಿ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ಹೇಳಿದ್ದಾರೆ.
ವಿಕಾಸಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಮತಗಳ್ಳತನದ ಬಗ್ಗೆ ಒಟ್ಟಾರೆಯಾಗಿ ಹೇಳಿದ್ದಾರೆ. ಜಿಲ್ಲಾವಾರು ಹೇಳಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತಗಳು ಬಿಜೆಪಿ ಅಭ್ಯರ್ಥಿ ಇಲ್ಲದ ಕಡೆ ಕಾಂಗ್ರೆಸ್, ಜೆಡಿಎಸ್‌ಗೆ ಹೋಗಬಹುದು. ಪಾರ್ಲಿಮೆಂಟ್ ಚುನಾವಣೆಯಲ್ಲಿ ಹಾಗೆ ಆಗಲ್ಲ. ಸಂಪೂರ್ಣವಾಗಿ ಬಿಜೆಪಿ ಮತದಾರರು ಪಾರ್ಲಿಮೆಂಟ್ ಚುನಾವಣೆಯಲ್ಲಿ ಮೋದಿ ಮುಖ ನೋಡಿ ಮತ ಹಾಕ್ತಾರೆ. ನಮ್ಮ ಮಂಡ್ಯದಲ್ಲಿ ಮತ ಹಾಕಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಮಹದಾಯಿಗೆ ಕೇಂದ್ರ ಅನುಮತಿ ನೀಡಲ್ಲ ಎಂದಿದ್ದು ಗೋವಾ ಸಿಎಂ ವೈಯಕ್ತಿಕ ಹೇಳಿಕೆ – ಜೋಶಿ ಸ್ಪಷ್ಟನೆ
ಕುಮಾರಸ್ವಾಮಿ (H D Kumaraswamy) ಇದನ್ನು ಒಪ್ತಾರೋ ಇಲ್ವೋ? ಚುನಾವಣೆ ಆಗಿದೆ, ಮಂತ್ರಿ ಆಗಿದ್ದಾರೆ. ನಮ್ಮ ನಾಯಕರು ತನಿಖೆ ನಡೆಸಿ ಹೇಳಿದ ಮೇಲೆ ನಮ್ದು ಅದೇ. ನಮಗೆ ಅನುಮಾನ ಇದೆ ಎಂದು ಹೇಳಿದ್ದಾರೆ.
– ರೇವಣ್ಣ, ಸೂರಜ್, ಪ್ರಜ್ವಲ್ ಯಾರ ನೇತೃತ್ವದಲ್ಲಿ ಬೇಕಾದ್ರೂ ಪಕ್ಷ ಕಟ್ಟಲಿ
ಬೆಂಗಳೂರು: ಜೆಡಿಎಸ್ ಯಾವತ್ತೂ ಸ್ವಂತ ಬಲದಿಂದ ಅಧಿಕಾರಕ್ಕೆ ಬರೋಕೆ ಸಾಧ್ಯವೇ ಇಲ್ಲ ಎಂದು ಹೆಚ್‌ಡಿಕೆಗೆ ಸಚಿವ ಚಲುವರಾಯಸ್ವಾಮಿ (Chaluvaraya Swamy), ಕೇಂದ್ರ ಸಚಿವ ಹೆಚ್‌ಡಿಕೆಗೆ ತಿರುಗೇಟು ನೀಡಿದ್ದಾರೆ.
2028 ಅಧಿಕಾರಕ್ಕೆ ಬರುತ್ತೇವೆ ಎಂಬ ಕುಮಾರಸ್ವಾಮಿ (H D Kumaraswamy) ಹೇಳಿಕೆಗೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ನಮ್ಮನ್ನ ಹೊಗಳೋದಿಲ್ಲ. ಅವರು ವಿಪಕ್ಷದಲ್ಲಿ ಇದ್ದಾರೆ. ಅವರಿಗೆ ಅಧಿಕಾರ ಕೊಟ್ಟಾಗ ಏನು ಮಾಡಲಿಲ್ಲ. 2018ರಲ್ಲಿ ಪೂರ್ಣ ಪ್ರಮಾಣದ ಬಹುಮತ ಬಾರದೇ ಹೋದರೆ, ಪಕ್ಷ ವಿಸರ್ಜನೆ ಮಾಡ್ತೀನಿ ಅಂದ್ರು, ಮಾಡಿದ್ರಾ? 2023ರಲ್ಲೂ ಅದೇ ಹೇಳಿದ್ರು. ನಾನು ಯಾರ ಜೊತೆ ಮೈತ್ರಿಗೆ ಹೋಗಲ್ಲ ಅಂದ್ರು. ಜೆಡಿಎಸ್ ಪಕ್ಷ ಬಿಜೆಪಿ, ಕಾಂಗ್ರೆಸ್‌ನ್ನು ಓವರ್ ಟೇಕ್ ಮಾಡಿ ಅಧಿಕಾರಕ್ಕೆ ಬರಲು ಆಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಶಬರಿಮಲೆ ಬೆಟ್ಟ ಇಳಿಯುವಾಗ ಹೃದಯಾಘಾತ – 18 ವರ್ಷದ ಅಯ್ಯಪ್ಪ ಭಕ್ತ ಸಾವು
ಬಿಜೆಪಿ, ಜೆಡಿಎಸ್‌ನ್ನು (JDS) ಜನ ತಿರಸ್ಕಾರ ಮಾಡಿದ್ದಾರೆ. ಅವರಿಗೆ ಯಾವತ್ತು ಬಹುಮತ ಬಂದಿಲ್ಲ. ಬಹುಮತ ಬಾರದೇ ಇರೋರು ಮಾತಾಡೋದು ಗಾಳಿಯಲ್ಲಿ ಗುಂಡು ಹೊಡೆಯುವ ಹೇಳಿಕೆ ಅಲ್ವಾ? ಕುಮಾರಸ್ವಾಮಿ ಅವರು ಏನೇ ಹೇಳಿದ್ರು ನೀವು ಹಾಕ್ತೀರಾ. ಕುಮಾರಸ್ವಾಮಿ ನಾಯಕತ್ವ ಬಂದ ಮೇಲೆ ಯಾವತ್ತು ಬಹುಮತ ಬಂದಿಲ್ಲ ಎಂದಿದ್ದಾರೆ. ಇದನ್ನೂ ಓದಿ: 3 ದಿನದೊಳಗೆ ಉತ್ತರಿಸಿ – ಕಾಂತಾರ ತಂಡಕ್ಕೆ ನೋಟಿಸ್
ಕುಮಾರಸ್ವಾಮಿ ಗೆಲ್ಲೋಕೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರು. ಉಪ ಚುನಾವಣೆಯಲ್ಲಿ ನಮಗೆ ಜನ ಆಶೀರ್ವಾದ ಮಾಡಿದ್ರು. ಎಂಪಿ ಎಲೆಕ್ಷನ್‌ನಲ್ಲಿ 9 ಸ್ಥಾನ ಜಾಸ್ತಿ ಮಾಡಿಕೊಂಡಿದ್ದೇವೆ. ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಯಾರು ಮಾತಾಡಿಲ್ಲ. ಅವರನ್ನು ಯಾರು ಕಾಂಗ್ರೆಸ್‌ಗೆ ಕರೆದಿಲ್ಲ. ಕುಮಾರಸ್ವಾಮಿ ಅರೋಗ್ಯ ಚೆನ್ನಾಗಿ ಇರಲಿ. ಆರೋಗ್ಯಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಅವರ ತಂದೆ ಸಕ್ರಿಯವಾಗಿ ಇದ್ದಾರೆ. ಹೀಗಿದ್ರು ರಾಜ್ಯದಲ್ಲಿ ಜೆಡಿಎಸ್ ಶಕ್ತಿ ಕ್ಷೀಣವಾಗಿದೆ ಎಂದು ತಿಳಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನೇತೃತ್ವದ ಪಕ್ಷ ಕಟ್ಟುತ್ತೇನೆ ಎಂದರೆ ಕಟ್ಟಲಿ. ರೇವಣ್ಣ, ಸೂರಜ್, ಪ್ರಜ್ವಲ್ ಯಾರ ನೇತೃತ್ವದಲ್ಲಿ ಬೇಕಾದರೂ ಪಕ್ಷ ಕಟ್ಟಲಿ. ಅದು ಅವರ ಪಕ್ಷದ ವಿಚಾರ. ಅವರಲ್ಲಿ ಆ ಕುಟುಂಬ ಹೇಳಿದ್ದೇ ನಡೆಯೋದು. ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್‌ನ್ನು ಟೀಕೆ ಮಾಡುವ ನೈತಿಕತೆ ಇಲ್ಲ. ಕುಮಾರಸ್ವಾಮಿ ಯಾವ ಗ್ಯಾರಂಟಿ ಕೊಡೋಕೆ ಆಗಲಿಲ್ಲ. ಕುಮಾರಸ್ವಾಮಿ ಸಾಲಮನ್ನಾ ಮಾಡಿದ್ದು, ಇನ್ನೂ 8 ಸಾವಿರ ಕೋಟಿ ರೂ. ಬಾಕಿ ಇದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜನಗಣತಿಗೆ ಕೇಂದ್ರದಿಂದ ಅಧಿಸೂಚನೆ – ಸರ್ಕಾರದ ನಿರ್ಧಾರ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್
ಸಿದ್ದರಾಮಯ್ಯ (Siddaramaiah) ಅವರು ಘೋಷಣೆ ಮಾಡಿದ್ರೆ, ಅದೇ ವರ್ಷ ಜಾರಿ ಮಾಡ್ತೇವೆ. ಅವರು ಯಾವ ನೈತಿಕತೆಯಿಂದ ನಮ್ಮ ಪಕ್ಷವನ್ನ ಟೀಕೆ ಮಾಡ್ತಾರೆ ಗೊತ್ತಿಲ್ಲ. ನಮ್ಮ ಪಕ್ಷ ಸದೃಢವಾಗಿದೆ. ನಮ್ಮ ನಾಯಕತ್ವ ಗಟ್ಟಿಯಾಗಿದೆ. ಜೆಡಿಎಸ್ ರಾಮನಗರದಲ್ಲಿ ಝೀರೋ ಲೆವೆಲ್‌ಗೆ ಬಂದಿದೆ. ತಮ್ಮ ಮಗನನ್ನ ಗೆಲ್ಲಿಸಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಜೆಡಿಎಸ್‌ಗೆ ಹಿನ್ನಡೆ ಆಗಿದೆ. ಕುಮಾರಸ್ವಾಮಿ ಅಸ್ಥಿತ್ವ ಉಳಿಸಿಕೊಳ್ಳೋಕೆ ಮಾತಾಡ್ತಾರೆ ಅಷ್ಟೆ. ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿದ ಸತೀಶ್ ನೀನಾಸಂ, ಸಪ್ತಮಿ ನಟನೆಯ ʻದಿ ರೈಸ್ ಆಫ್ ಅಶೋಕʼ
ಬೆಲೆ ಏರಿಕೆ ಮಾಡಿ ಗ್ಯಾರಂಟಿ ಕೊಡೋದಾಗಿದ್ರೆ ನಾನು ಕೊಡ್ತಿದ್ದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಟೀ ಅಂಗಡಿ, ಬಟ್ಟೆ ಅಂಗಡಿ ಎಲ್ಲದ್ರಲ್ಲೂ ಪ್ರತಿ ವರ್ಷ ಜಾಸ್ತಿ ಮಾಡ್ತಾರೆ. ಸಂಬಳ ಜಾಸ್ತಿ ಮಾಡಿದ್ದೇವೆ. ಬೆಲೆ ಏರಿಕೆ ಮಾಡದೇ ಸರ್ಕಾರ ನಡೆಸಲು ಆಗುವುದಿಲ್ಲ. ಮನಮೋಹನ್ ಸಿಂಗ್ ಇದ್ದಾಗ ಪೆಟ್ರೋಲ್, ಡಿಸೇಲ್ ಎಷ್ಟಿತ್ತು? ಈಗ ಎಷ್ಟಾಗಿದೆ. ಏನಾದ್ರು ಟೀಕೆ ಮಾಡೋದಾದ್ರೆ ಮಾಹಿತಿ ಇಟ್ಟುಕೊಂಡು ಟೀಕೆ ಮಾಡಿ. ಟೀಕೆ ಮಾಡಬೇಕೆಂದು ಟೀಕೆ ಮಾಡೋದು ಸರಿಯಲ್ಲ ಗುಡುಗಿದ್ದಾರೆ.
ಸರ್ಕಾರ ಮಾತು ಕೊಟ್ಟಂತೆ ಗ್ಯಾರಂಟಿ ಕೊಟ್ಟಿದ್ದೇವೆ. ಕುಮಾರಸ್ವಾಮಿ ಏನು ಮಾಡಿದ್ದಾರೆ ಹೇಳಲಿ. ಟ್ಯಾಕ್ಸ್ ಜಾಸ್ತಿ ಮಾಡಿರೋದು ರೊಟೀನ್ ವಿಷಯ. ಆಗಾಗ ಮಾಡ್ತಿರಬೇಕು. ಹಾಸನ, ಮಂಡ್ಯ, ರಾಮನಗರ ಏನು ಅಭಿವೃದ್ಧಿ ಆಗಿದೆ ಕುಮಾರಸ್ವಾಮಿ ಹೇಳಲಿ. ಅವರು ರಾಜಕೀಯ ಹಾಗೂ ಅಭಿವೃದ್ಧಿ ವಿಚಾರದಲ್ಲೂ ಅವರು ಹಿಂದೆ ಬಿದ್ದಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಅನ್ನು ಯಾಕೆ ಟೀಕೆ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಾವಿನಲ್ಲಿ ವಿಪಕ್ಷಗಳು ರಾಜಕೀಯ ಮಾಡೋದು ಬಿಡಲಿ: ಚಲುವರಾಯಸ್ವಾಮಿ
ಒಂದು ಪಕ್ಷವೇ ಕುಟುಂಬಕ್ಕೆ ಮಾಡಿಕೊಂಡಿರೋ ಪಕ್ಷ ಜೆಡಿಎಸ್. ಇಡೀ ಕುಟುಂಬ ಅವರ ಪಕ್ಷ ಆವರಿಸಿಕೊಂಡಿದೆ. ಅವರ ಮನೆಯಲ್ಲಿ ಎಷ್ಟು ಜನ ಇದ್ದಾರೆ ನಿಂತುಕೊಳ್ಳಿ. ನಮಗೇನು ಹೊಟ್ಟೆ ಉರಿ ಇಲ್ಲ ಅಂತ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು: ಮುನಿರತ್ನ (Munirathna) ವಿರುದ್ಧದ ಪ್ರಕರಣಗಳನ್ನ SITಗೆ (ವಿಶೇಷ ತನಿಖಾ ತಂಡ) ವಹಿಸುವಂತೆ ಒಕ್ಕಲಿಗ ಸಚಿವರು, ಶಾಸಕರ ನಿಯೋಗ ಮನವಿ ಸಲ್ಲಿಸಿದೆ. ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾ ಒಕ್ಕಲಿಗ ಸಚಿವರು (Vokkaliga Ministers), ಶಾಸಕರ ನಿಯೋಗ ಮನವಿ ಸಲ್ಲಿಸಿದೆ. ಸಚಿವ ಚಲುವರಾಯಸ್ವಾಮಿ ಸಚಿವ ಕೃಷ್ಣಬೈರೇಗೌಡ, ಸಚಿವ ಸುಧಾಕರ್, ಶಾಸಕ ಶರತ್ ಬಚ್ಚೇಗೌಡ, ಕುಣಿಗಲ್ ರಂಗನಾಥ್ ಸೇರಿ ಹಲವರು ನಿಯೋಗದಲ್ಲಿ ಇದ್ದರು.
ಇದೇ ವೇಳೆ ಮಾಜಿ ಸಿಎಂ ಹೆಚ್‌ಡಿಕೆ (HD Kumaraswamy) ವಿರುದ್ಧವೂ ಎಸ್‌ಐಟಿ ಅಸ್ತ್ರ ಪ್ರಯೋಗಕ್ಕೆ ಪ್ಲ್ಯಾನ್ ಮಾಡಿದ್ದು, ಸಿಎಂ ಭೇಟಿ ವೇಳೆ ಹೆಚ್‌ಡಿಕೆ ವಿರುದ್ಧವೂ ಎಸ್‌ಐಟಿ ತನಿಖೆಗೆ ಒಕ್ಕಲಿಗ ಸಚಿವರು, ಶಾಸಕರ ನಿಯೋಗ ಮನವಿ ಮಾಡಿದೆ. ಸಿಎಂ ಭೇಟಿ ಬಳಿಕ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ನಿನ್ನೆ ರಾತ್ರಿ ಶಾಸಕರು, ಮುಂಖಂಡರು ಸಭೆ ಮಾಡಿದ್ವಿ. ಮತ್ತೊಂದು ಸಭೆ ಮಾಡಲು ತೀರ್ಮಾನ ಮಾಡಿದ್ದೇವೆ. ಬಿಜೆಪಿ, ಜೆಡಿಎಸ್ ಒಕ್ಕಲಿಗ ನಾಯಕರು ಶಾಸಕ ಮುನಿರತ್ನ ಪರ ನಿಂತಿದ್ದಾರೆ. ಇದು ನಮಗೆ ಬಹಳ ನೋವು ತಂದಿದೆ ಎಂದಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದಾಗಲೇ BMTC ಬಸ್ ಚಾಲಕನಿಗೆ ಹೃದಯಾಘಾತ – ಟ್ರಾಫಿಕ್ ಪೊಲೀಸರ ಸಮಯ ಪ್ರಜ್ಞೆಯಿಂದ ಬಚಾವ್!
ಸಮಾಜದ ಪರ ನಿಲ್ಲದೇ ಇರೋದಕ್ಕೆ ನೋವು ತಂದಿದೆ. ಇದನ್ನು ಜನರ ಬಳಿ ತೆಗೆದುಕೊಂಡು ಹೋಗಬೇಕು ಅಂತೇಳಿದ್ರು. ಮುನಿರತ್ನ ವಿರುದ್ಧ ಕೂಡ ಎಸ್‌ಐಟಿ ತನಿಖೆಯಾಗಬೇಕು. ಈ ಬಗ್ಗೆ ಸಿಎಂಗೆ ಮನವಿ ಮಾಡಿದ್ದೇವೆ. ಈಗ ಒಳ್ಳೆಯ ಕೆಲಸಕ್ಕಿಂತ ತನಿಖೆಯಾಗುವುದು ಬಹಳ ಮುಖ್ಯ. ಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಹೋರಾಟ ಮಾಡಲು ಚಿಂತನೆ ನಡೆಸಿದ್ದೇವೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಹಿಜ್ಬುಲ್ಲಾದ 100 ರಾಕೆಟ್ ಲಾಂಚರ್ ಉಡೀಸ್ – ಪ್ರತೀಕಾರದ ದಾಳಿಗೂ ಮುನ್ನವೇ ಪೆಟ್ಟುಕೊಟ್ಟ ಇಸ್ರೇಲ್
ರಾಯಚೂರು: ಲೋಕಸಭಾ ಹಾಗೂ ಪಂಚರಾಜ್ಯ ಚುನಾವಣೆ ವಾತಾವರಣ ಕಾಂಗ್ರೆಸ್‌ಗೆ (Congress) ಪೂರಕವಾಗಿದೆ. ಮಧ್ಯಪ್ರದೇಶ, ಅಸ್ಸಾಂ, ರಾಜಸ್ಥಾನ, ತೆಲಂಗಾಣ ಎಲ್ಲೆಡೆಯೂ ಕಾಂಗ್ರೆಸ್ ಪರ ಒಲವು ಕಾಣುತ್ತಿದೆ. ಇದರಿಂದಾಗಿ ಮೋದಿಯವರಿಗೆ (Narendra Modi) ನೋವಾಗುತ್ತಿದೆ ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ (N. Chaluvaraya Swamy) ವ್ಯಂಗ್ಯವಾಡಿದ್ದಾರೆ.
ನಾಲ್ಕೈದು ತಿಂಗಳಲ್ಲಿ ಜನಪರವಾದ ಕಾರ್ಯಕ್ರಮ ಮಾಡಿ ತೋರಿಸಿದ್ದೇವೆ. ಜನರು ಬಿಜೆಪಿಯನ್ನು (BJP) ಸೋಲಿಸಿ ನಮ್ಮನ್ನು ಗೆಲ್ಲಿಸಿದ್ದಾರೆ. ಜನರಿಗೆ ನಮ್ಮ ಮೇಲೆ ವಿಶ್ವಾಸವಿದೆ. ಮೋದಿ ಅವರು ರಾಜ್ಯದಲ್ಲಿ 26 ಕಾರ್ಯಕ್ರಮ ಮಾಡಿದರೂ ಬಿಜೆಪಿಗೆ ಸೋಲಾಯಿತು. 36,000 ಕೋಟಿಯ ಗ್ಯಾರಂಟಿ ಯೋಜನೆ (Guarantee Scheme) ನಾವು ಜಾರಿ ಮಾಡಿದ್ದೇವೆ. ವರ್ಷಕ್ಕೆ 56,000 ಕೋಟಿ ರೂ. ಆಗುತ್ತದೆ. ಈಗ ಎಲ್ಲಾ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಹೊಸ ಕಾಮಗಾರಿ ತೆಗೆದುಕೊಳ್ಳುವ ಎಲ್ಲಾ ಪ್ರಯತ್ನವೂ ನಡೆದಿದೆ. ಇದನ್ನು ತಡೆಯಲು ಆಗದೇ ಮೋದಿ ಹೀಗೆ ಹೇಳುತ್ತಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಹೆಚ್‌ಡಿಕೆ ಅಧಿಕಾರದಲ್ಲಿದ್ದಾಗ ಏನೂ ಮಾಡಿಲ್ಲ, ಈಗ ಫ್ರೀಯಾಗಿದ್ದರೆ ಯಾತ್ರೆ ಮಾಡಲಿ: ಚಲುವರಾಯಸ್ವಾಮಿ ಲೇವಡಿ
ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರನ್ನ ಎದುರಿಸುವ ಶಕ್ತಿ ಯಾರಿಗೂ ಇಲ್ಲ. ಅವರನ್ನ ಯಾರೂ ಬ್ಲ್ಯಾಕ್‌ಮೇಲ್ ಮಾಡೋಕೆ ಆಗಲ್ಲ. ಅವರೇ ಬ್ಲ್ಯಾಕ್‌ಮೇಲ್ ಮಾಡ್ತಾರೆ. ಅವರನ್ನ ಎದುರಿಸುವ ಶಕ್ತಿ ಯಾರಿಗೂ ಇಲ್ಲ. ಅವರೇ ಎಲ್ಲರನ್ನ ಎದುರಿಸ್ತಾರೆ ಎಂದು ಮಾಜಿ ಶಾಸಕ ಸಿ.ಟಿ ರವಿ (CT Ravi) ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿದ್ದು (Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆಯಿಂದ ಸಿಎಂ ಶಾಸಕರ ಸಭೆ ನಡೆಸ್ತಿದ್ದಾರೆ. ಶಾಸಕರು ಬರೆದ ಪತ್ರವನ್ನ ಆಧರಿಸಿ ಸಿಎಲ್‌ಪಿ ಕರೆದಿದ್ರು, ಈಗ ಸಭೆ ನಡೆಸ್ತಿದ್ದಾರೆ ಹಾಗಾಗಿ ಶಾಸಕರು ಬರೆದ ಪತ್ರ ನಕಲಿ ಅಲ್ಲ, ಅಸಲಿ ಅನ್ನೋದನ್ನ ಇದರಿಂದ ಒಪ್ಪಿಕೊಂಡಂಗೆ ಆಗಿದೆ. TCಗಳ ಬದಲಾವಣೆಗೂ ಶಾಸಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮುಂದೆ ಶಾಸಕರ ಈ ಅಸಹನೆ ಸ್ಫೋಟಗೊಳ್ಳುತ್ತೆ. ಲೋಕಸಭೆ ಚುನಾವಣೆ ಬಳಿಕ ಈ ಸರ್ಕಾರ ಉಳಿಯುತ್ತಾ? ಅನ್ನುವಂತಾಗಿದೆ. ಅಷ್ಟೊಂದು ಅಸಹಾಯಕ ಸ್ಥಿತಿಗೆ ಸರ್ಕಾರ ತಲುಪಿದೆ.
ಗುತ್ತಿಗೆದಾರ ಬಳಿ ಕಮಿಷನ್ ಕೇಳ್ತಿದ್ದಾರೆ:
ಬಿಬಿಎಂಪಿ (BBMP) ಗುತ್ತಿಗೆದಾರರಿಂದ ಬಿಲ್ ಪಾವತಿ ಆಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ಬಿಲ್ ಪಾವತಿ ಮಾಡಲು ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ ಅನ್ನೋದು ಗಮನಕ್ಕೆ ಬಂದಿದೆ. ಪಾರದರ್ಶಕತೆ ಆಡಳಿತ ಕೊಡ್ತೀನಿ ಅಂದವರು ಧಮ್ಕಿ ಹಾಕ್ತಿದ್ದಾರೆ. ಈಗಿನ ಬಿಲ್ ಗಳಿಗೆ ಕಮಿಷನ್ ಅಷ್ಟೇ ಅಲ್ಲ, ಕಳೆದ 5 ವರ್ಷಗಳ ಹಿಂದೆ ನಡೆದ ಕಾಮಗಾರಿಗಳ ಬಿಲ್ ಪಾವತಿಗೂ ಕಮಿಷನ್ ಕೇಳ್ತಿದ್ದಾರೆ ಎಂಬ ಮಾಹಿತಿ ಇದೆ. ಡಿಕೆಶಿ ಅವರನ್ನ ಬ್ಲ್ಯಾಕ್‌ಮೇಲ್ ಮಾಡಲು ಆಗಲ್ಲ. ಏಕೆಂದ್ರೆ ಅವರೇ ಬ್ಲ್ಯಾಕ್‌ಮೇಲ್ ಮಾಡ್ತಾರೆ. ಅವರನ್ನು ಎದುರಿಸುವ ಶಕ್ತಿ ಯಾರಿಗೂ ಇಲ್ಲ. ಅವರೇ ಎಲ್ಲರನ್ನ ಎದುರಿಸ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ಕೃಷಿ ಸಚಿವರ ವಿರುದ್ಧ ಪತ್ರ ಬರೆದಿದ್ದಾರೆ, ಅದರ ಬಗ್ಗೆ ತನಿಖೆ ನಡೆಸಿ ಅಂತಾ ಹೇಳಿದ್ದಾರೆ. ತನಿಖೆ ನಡೆಸಿ ವರದಿ ಕೊಡಬೇಕಾಗುತ್ತೆ. ಆದ್ರೆ ತನಿಖೆಗೂ ಮೊದಲೇ ನಕಲಿ ಅಂತಾ ಇವರು ಹೇಗೆ ಹೇಳ್ತಾರೆ? ಸಿಎಂ, ಚಲುವರಾಯಸ್ವಾಮಿ (Chaluvarayaswamy) ತನಿಖೆ ಸಂಸ್ಥೆಗಳಾ? ಸಿಐಡಿ ತನಿಖೆಗೆ ಕೊಟ್ಟಿದ್ದಾರೆ ಈಗ, ಸಿಐಡಿ ತನಿಖೆ ವರದಿ ಕೊಡಬೇಕಲ್ಲವಾ? ಸಿಐಡಿ ತನಿಖೆಗೂ ಮೊದಲೇ ಪತ್ರ ನಕಲಿ ಅಂದ್ರೆ ನಾವು ಹೇಳಬೇಕಾಗುತ್ತೆ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳುತ್ತಾರೆ ಅಂತಾ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಿಚಾರ ಕುರಿತು ಮಾತನಾಡಿದ ಸಿ.ಟಿ ರವಿ, ಅಧ್ಯಕ್ಷರನ್ನ ಯಾವಾಗ ನೇಮಕ ಮಾಡ್ಬೇಕು ಅನ್ನೋದು ಹೈಕಮಾಂಡ್‌ಗೆ ಚೆನ್ನಾಗಿ ಗೊತ್ತಿದೆ. ತಾಯಿ ಬಗ್ಗೆ ಮಕ್ಕಳಿಗೆ ಹೇಗೆ ನಂಬಿಕೆ ಇರುತ್ತೆ? ಹಾಗೆಯೇ ನಮಗೆ ಪಕ್ಷದ ಮೇಲೆ, ಹೈಕಮಾಂಡ್ ಮೇಲೆ ನಂಬಿಕೆ ಇದೆ. ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಲ್ಲ ಎಂದು ಮೊದಲೇ ಹೇಳಿದ್ದೆ. ದೆಹಲಿಗೆ ಹೋದಾಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಹಕಾರ ಕೊಟ್ಟಿದ್ದವರಿಗೆಲ್ಲ ಧನ್ಯವಾದ ಹೇಳಿ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವ್ರನ್ನ ಕೇಳಲು ಬಯಸುತ್ತೇನೆ ನಿಮ್ಮ ಮೊಹಬತ್ ಚೀನಾದ ಜೊತೆಗಾ? ನಮ್ಮ ದೇಶದ ಪ್ರಧಾನಿಯನ್ನ ವಿದೇಶದಲ್ಲಿ ಟೀಕಿಸಿದ್ರಿ. ಚೀನಾದ ಕಮ್ಯೂನಿಸ್ಟ್ ಜೊತೆ ಮಾಡಿಕೊಂಡ ಒಪ್ಪಂದ ಇದೇನಾ ರಾಹುಲ್ ಗಾಂಧಿ ಅವರೇ? ನ್ಯೂಯಾರ್ಕ್ ಟೈಮ್ಸ್ ವರದಿ ಆಧರಿಸಿ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಚಾಮರಾಜನಗರ: ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅವರದ್ದು, ಬರೀ ಹಿಟ್ ಅಂಡ್ ರನ್ ಕೇಸ್. ಎಲ್ಲ ತಮಗೇ ಗೊತ್ತಿದೆ ಅನ್ಕೊಂಡಿದ್ದಾರೆ ನನ್ನತ್ರ ಸಿಡಿ ಇದೆ, ಕ್ಯಾಸೆಟ್ ಇದೆ ಅಂತಾರೆ. ಇದ್ದರೆ ಬಿಡುಗಡೆ ಮಾಡಲಿ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಸವಾಲು ಹಾಕಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಲೋಕಲ್ ರಾಜಕೀಯ ಮಾಡುತ್ತಾ ಮೈಲೇಜ್ ತೆಗೆದುಕೊಳ್ಳಲು ಹೊರಟಿದ್ದಾರೆ. ಇವರಿಗೆ ರಾಷ್ಟ್ರ ಹಾಗೂ ರಾಜ್ಯದ ಸಮಸ್ಯೆಗಳು ಬೇಕಿಲ್ಲ ಎಂದು ಆರೋಪಿಸಿದರು.
ಜವಾಬ್ದಾರಿ ಸ್ಥಾನದಲ್ಲಿರುವ ಕುಮಾರಸ್ವಾಮಿ ಸುಮಲತಾ ಕೆಸರೆರಚಾಟ ಸರಿಯಲ್ಲ. ತಮ್ಮ ವೈಫಲ್ಯತೆಗಳನ್ನು ಮುಚ್ಚಿಕೊಳ್ಳಲು ಇಬ್ಬರೂ ಬೀದಿಜಗಳ ಆಡುತ್ತಿದ್ದಾರೆ. ಜನರು ಸಂಕಷ್ಟದಲ್ಲಿರುವಾಗ ಇವರು ಜಗಳ ಆಡುವ ಅವಶ್ಯಕತೆ ಇದೆಯಾ..? ಕೋವಿಡ್ ಸಂಕಷ್ಟದಲ್ಲಿ ಇವರು ಯಾರ ಮನೆ ಬಳಿ ಹೋಗಿದ್ದಾರೆ, ಯಾರ ಕಷ್ಟ ಆಲಿಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಂಬರೀಶ್‍ಗೆ ನಾನೇನು ಗುಲಾಮನಾಗಿದ್ನಾ: ಫೋಟೋ ವೈರಲ್‍ಗೆ ಹೆಚ್‍ಡಿಕೆ ಪ್ರಶ್ನೆ
ಹೀಗೆ ಪರಸ್ಪರ ಜಗಳ ಆಡುವುದು ಇಬ್ಬರಿಗು ಗೌರವ ಅಲ್ಲ. ಜನರ ಹಿತಾಸಕ್ತಿ ದೃಷ್ಟಿಯಿಂದ ಕೆಲಸ ಮಾಡುವುದು ಬಿಟ್ಟು ಹೀಗೆ ಜಗಳವಾಡುತ್ತಿದ್ದರೆ ಜನ ನಗಲ್ಲವೇ ಎಂದ ಅವರು, ಮನ್ಮುಲ್ ಹಗರಣ ಇದೆ. ಸಕ್ಕರೆ ಕಾರ್ಖಾನೆ ವಿಚಾರ ಇದೆ. ಕೆ.ಅರ್.ಎಸ್ ವಿಚಾರ ಇದೆ. ಇದೆಲ್ಲವನ್ನು ಬಿಟ್ಟು ಬೀದಿ ಜಗಳ ಆಡುವುದು ಎಷ್ಟು ಸರಿ ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು. ಇದನ್ನೂ ಓದಿ: ಸುಮಲತಾರಿಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ: ನಿಖಿಲ್
ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಸತ್ಯ ಎಂದ ಅವರು, ಕೆ.ಆರ್.ಎಸ್ ಗೆ ಹಾನಿಯುಂಟು ಮಾಡುವ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯ ಕೊನೆಯಲ್ಲಿ ಅಕ್ರಮಗಣಿಗಾರಿಕೆ ಬಯಲಿಗೆ ಬಂತು. ಅವರು ಕೂಡ ತನಿಖೆಗೆ ಆದೇಶ ಕೊಟ್ಟಿದ್ದರು. ಆ ಬಳಿಕ ಕುಮಾರಸ್ವಾಮಿ ನಂತರ ಯಡಿಯೂರಪ್ಪ ಸಿಎಂ ಆದರು. ಅದು ಅಲ್ಲಿಗೆ ನಿಂತು ಹೋಯಿತು. ಸರ್ಕಾರ ಹೀಗೆ ಉದಾಸೀನ ಮಾಡಿದರೆ ಈ ರೀತಿ ಕೆಸರೆರೆಚಾಟ ನಡೆಯುತ್ತಾ ಇರುತ್ತದೆ ಎಂದು ಚಲುವರಾಯಸ್ವಾಮಿ ಹೇಳಿದರು. ಇದನ್ನೂ ಓದಿ: ಅಂಬರೀಶ್ ಪಾರ್ಥಿವ ಶವ ತಂದಿದ್ದೇ ಹೆಚ್‍ಡಿಕೆ, ಆ ಫೋಟೋವನ್ನೂ ವೈರಲ್ ಮಾಡ್ಲಿ: ಕೆಟಿಎಸ್ ಆಗ್ರಹ
– ಡಿಸಿ ತಮ್ಮಣ್ಣ ವಿರುದ್ಧ ಗರಂ
– ಸಮ್ಮಿಶ್ರ ಸರ್ಕಾರ ಸುಭದ್ರವಾಗಿಲ್ಲ
ಮಂಡ್ಯ: ಬಿಜೆಪಿಗೆ ಹೋಗೋದು, ಕಾಂಗ್ರೆಸ್‍ನಲ್ಲಿ ಉಳಿಯೋದು ಹೇಳೋದಕ್ಕೆ ಅವನು ಯಾರು ಎಂದು ಶಾಸಕ ಸುರೇಶ್ ಗೌಡಗೆ ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಏಕವಚನದಲ್ಲೇ ತಿರುಗೇಟು ನೀಡಿದ್ದಾರೆ.
ಚಲುವರಾಯಸ್ವಾಮಿ ಬಿಜೆಪಿ ಸೇರ್ತಾರೆ ಎಂಬ ಶಾಸಕ ಸುರೇಶ್ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ ಗರಂ ಆದ ಅವರು, ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ನೋಡೋ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ಲಿ ಅಂತನೇನೋ ಜಿಲ್ಲೆಯ ಜನ ತೀರ್ಮಾನ ತೆಗೆದುಕೊಂಡು ನಮ್ಮನ್ನು ಸೋಲಿಸಿದರು. ಸುರೇಶ್ ಗೌಡರು ನಾಲಿಗೆಗೂ, ಮೆದುಳಿಗೂ ಕನೆಕ್ಟ್ ಇಲ್ಲದಂಗೆ ಮಾತಾಡ್ತಾರೆ. ಬಿಜೆಪಿಗೆ ಹೋಗೋದು, ಕಾಂಗ್ರೆಸ್ ನಲ್ಲಿ ಉಳಿಯೋದು ಹೇಳೋದಕ್ಕೆ ಅವನ್ಯಾರು ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಸಮಸ್ಯೆ ಹೇಳಿಕೊಳ್ಳಲು ಬಂದ ಜನರ ಮೇಲೆ ಡಿ.ಸಿ.ತಮ್ಮಣ್ಣ ದರ್ಪ ತೋರಿದ ವಿಚಾರದ ಕುರಿತು ಮಾತನಾಡಿದ ಅವರು, ಅದು ತಪ್ಪು. ಸೋತ ತಕ್ಷಣ ಹತಾಶರಾಗಿ ಮಾತನಾಡುವುದು ಸರಿಯಲ್ಲ. ಅವರನ್ನ ಗೆಲ್ಲಿಸಿದ್ದಾರೆ, ಮಂತ್ರಿಯಾಗಿದ್ದಾರೆ. ಅದಕ್ಕೆ ಕೆಲಸ ಮಾಡಬೇಕು. ಲೋಕಸಭೆ ತೀರ್ಮಾನ ಜನರಿಗೆ ಬಿಟ್ಟಿದ್ದು. ಜನರು ನಮ್ಮನ್ನ ಕೇಳಿಕೊಂಡು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳೋದಕ್ಕೆ ಆಗಲ್ಲ ಎಂದು ಗರಂ ಆದರು.
ದೇವೇಗೌಡ್ರು ಸೋತಿಲ್ವಾ, ದೇವೇಗೌಡರಿಗಿಂತ ಬಹಳ ಪ್ರಭಾವಿನಾ ಎಂದು ಪ್ರಶ್ನಿಸಿದ ಮಾಜಿ ಸಚಿವ, ಇವರ ಕ್ಷೇತ್ರದಲ್ಲಿ ಹಿನ್ನಡೆಯಾದರೆ ಜನರನ್ನ ಗೆಟೌಟ್ ಅಂದ್ರೆ ಜನಪ್ರತಿನಿಧಿಗೆ ಗೌರವ ತರುವಂತದ್ದಲ್ಲ. ಅವರಿಗೆ ಸಿಎಂ ಎಚ್ಚರಿಕೆ ಕೊಟ್ಟಿರಬೇಕು. ಹತಾಶರಾಗಿ ಮಾತನಾಡಿದ್ದಾರೆ. ಅಷ್ಟಕ್ಕೆ ಕೈ ಬಿಡೋದು ಒಳ್ಳೆಯದು ಎಂದರು.
ಸರ್ಕಾರ ಅಭದ್ರತೆ ಬಗ್ಗೆ ಜೆಡಿಎಸ್ ನಾಯಕರ ಗೊಂದಲ ಹೇಳಿಕೆ ವಿಚಾರದ ಕುರಿತು ಮಾತನಾಡಿ, ಸರ್ಕಾರದ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ನಿಮಗೂ ಗೊತ್ತು, ನಮಗೂ ಗೊತ್ತು. ಚೆನ್ನಾಗಿಲ್ಲ ಎಂಬುದನ್ನ ಚರ್ಚೆ ಮಾಡುವುದಲ್ಲ. ಅದು ವಾಸ್ತವವಾಗಿ ಗೊತ್ತಿರುವ ವಿಚಾರವಾಗಿದೆ ಎಂದು ಹೇಳುವ ಮೂಲಕ ಚಲುವರಾಯಸ್ವಾಮಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿಲ್ಲ ಎಂದು ಮತ್ತೊಮ್ಮೆ ಹೇಳಿದರು. ಸರಿ ಪಡಿಸಿಕೊಳ್ಳುತ್ತಾರಾ, ಕ್ಲೋಸ್ ಮಾಡ್ತಾರಾ ಅಥವಾ ಬೇರೆಯವರೇ ಇವರನ್ನ ಕ್ಲೋಸ್ ಮಾಡ್ತಾರಾ ಎಂಬುದನ್ನು ನೋಡೋಣ ಎಂದು ಹೇಳಿದರು.
ಮಂಡ್ಯ: ಗ್ರಾಮ ವಾಸ್ತವ್ಯ ರಾಜಕೀಯ ಸ್ಟಂಟೇ ಹೊರತು ಅದರಿಂದ ಈಗ ಆಗಿರುವ ವ್ಯತ್ಯಾಸಗಳನ್ನ ಸರಿಪಡಿಸಲು ಸಾಧ್ಯವಿಲ್ಲ. ಈಗಾಗಲೇ ಒಂದು ವರ್ಷದಲ್ಲಿ ಅವರು ಯಾರು ಮಾಡಿಕೊಳ್ಳದೇ ಇರೋವಷ್ಟು ಡ್ಯಾಮೇಜನ್ನು ಅವರಾಗಿಯೇ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸದ ಮೂಲಕ ಜನರ ಹತ್ತಿರ ಹೋಗಬೇಕೇ ವಿನಃ ಈ ರೀತಿ ಗ್ರಾಮ ವಾಸ್ತವ್ಯದಿಂದ ಒಂದಿಬ್ಬರು ಬಡವರನ್ನು ಮಾತಾಡಿಸಿದರೆ ಸಾಧ್ಯವಾಗಲ್ಲ. ಬಡವರನ್ನು ಒಬ್ಬರನ್ನು ಮಾತಾಡಿಸಿ ಮತ್ತೊಬ್ಬರನ್ನು ಬಿಡೋದು ಅಲ್ಲ. ಎಲ್ಲಾ ಬಡವರನ್ನು ಒಂದೇ ರೀತಿ ಕಾಣ್ತಾ, ಇಡೀ ರಾಜ್ಯದ ಎಲ್ಲಾ ಬಡವರನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಸಂಕಷ್ಟದಲ್ಲಿ ಇರುವವರಿಗೆ ಅನುಕೂಲವಾಗುವಂತಹ ಕಾರ್ಯಕ್ರಮ ಕೊಡಬೇಕು. ಅದನ್ನು ಬಿಟ್ಟು ನಾವು ಸಿಕ್ಕಿದ ಕಡೆ ಫೋಟೋ ತೆಗೆಸಿಕೊಂಡು ಅವರಿಗೆ ಸಹಾಯ ಮಾಡಿದೆ. ಇವರಿಗೆ ಸಹಾಯ ಮಾಡಿದೆ ಅನ್ನೋದಲ್ಲ. ಅದನ್ನು ನಾನು ಕೂಡ ಮಾಡಬಹುದು ನೀವೂ ಮಾಡಬಹುದು ಎಂದಿದ್ದಾರೆ.
ಸಿಎಂ ಆದ ಮೇಲೆ ಸಹಾಯ ಮಾಡೋದು ದೊಡ್ಡಸ್ತಿಕೆ ಅಲ್ಲ. ಸಿಎಂ ಆದವರು ಈ ನಾಡಿನ 6 ಕೋಟಿ ಜನರಿಗೆ ಉಪಯೋಗವಾಗುವಂತಹ ಕೆಲಸ ಮಾಡಬೇಕು. ಅದು ಬಿಟ್ಟು ಈ ರೀತಿಯ ಗ್ರಾಮ ವಾಸ್ತವ್ಯದಿಂದ ಖಂಡಿತಾ ಪ್ರಯೋಜನವಿಲ್ಲ ಎಂದು ಕುಟುಕಿದ್ದಾರೆ.
ಮಂಡ್ಯ: ಮಾಜಿ ಸಚಿವ ಚಲುವರಾಯಸ್ವಾಮಿ ಹುಟ್ಟು ಹಬ್ಬಕ್ಕೆ ಶುಭಕೋರಿ ಮಂಡ್ಯ ನಗರದಲ್ಲಿ ಹಾಕಲಾಗಿರುವ ಫ್ಲೆಕ್ಸ್‍ಗಳಲ್ಲಿ ಸುಮಲತಾ ಫೋಟೋ ರಾರಾಜಿಸುತ್ತಿದ್ದು, ಕಳೆದ ಲೋಕಸಭೆ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಸುಮಲತಾ ಪರ ಪ್ರಚಾರ ಮಾಡಿದ್ದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಚರ್ಚೆ ಮತ್ತೆ ಜಿಲ್ಲೆಯಲ್ಲಿ ಜೋರಾಗಿ ಕೇಳಿ ಬರುತ್ತಿದೆ.
ಇಂದು ಚಲುವರಾಯಸ್ವಾಮಿ ಹುಟ್ಟು ಹಬ್ಬದ ಪ್ರಯುಕ್ತ ಮಂಡ್ಯ ನಗರದ ಹಲವೆಡೆ ಶುಭಕೋರಿ ಫ್ಲೆಕ್ಸ್ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಸುಮಲತಾ ಅವರು ತಮ್ಮ ಭವಿಷ್ಯದ ರಾಜಕೀಯ ದೃಷ್ಟಿಯಿಂದ ಕಾಂಗ್ರೆಸ್ ಕೈ ಹಿಡಿಯಲಿದ್ದಾರಾ ಎಂಬ ಚರ್ಚೆ ಕೂಡ ಶುರುವಾಗಿದೆ.
ಮಾಜಿ ಸಚಿವ ಸಲುವರಾಯಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಕೋರಿ ಹಾಕಲಾಗಿರುವ ಫ್ಲೆಕ್ಸ್ ಗಳಲ್ಲಿ ಚುನಾವಣೆಯಲ್ಲಿ ಸುಮಲತಾ ಪರ ಪ್ರಚಾರ ನಡೆಸಿ ಕಾಂಗ್ರೆಸ್‍ನಿಂದ ಉಚ್ಚಾಟನೆಗೊಂಡ ಮುಖಂಡರೇ ಪ್ರಮುಖರಾಗಿದ್ದಾರೆ. ಪ್ರಮುಖವಾಗಿ ಕಾಂಗ್ರೆಸ್ ಉಚ್ಚಾಟಿತ ಕೆಪಿಸಿಸಿ ಸದಸ್ಯ ಇಂಡುವಾಳು ಸಚ್ಚಿದಾನಂದ, ಮಾಜಿ ಶಾಸಕ ಎಚ್.ಬಿ.ರಾಮು ಹಲವರ ಫೋಟೋ ಹಾಕಲಾಗಿದೆ.
ಇದರೊಂದಿಗೆ ಫ್ಲೆಕ್ಸ್ ಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿಕೆ.ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರ ಜೊತೆ ಸುಮಲತಾ ಫೋಟೊ ಕೂಡ ಇದೆ. ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಇದ್ದರೂ ಮುಂಬರುವ ದಿನಗಳಲ್ಲಿ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಮತ್ತೆ ಮಂಡ್ಯದಲ್ಲಿ ಕೈ ಸೇರ್ಪಡೆಯಾಗುವದು ಅನುಮಾನವಿಲ್ಲ. ಇದಕ್ಕೆ ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ಗಳಲ್ಲಿ ಸುಮಲತಾ ರಾರಾಜಿಸುತ್ತಿರುವುದೇ ಸಾಕ್ಷಿಯಾಗಿದೆ ಎಂಬ ಮಾತು ಕ್ಷೇತ್ರದ ರಾಜಕೀಯ ವಲಯದಿಂದ ಕೇಳಿ ಬಂದಿದೆ.
ಇತ್ತ ಸುಮಲತಾ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಚಲುವರಾಯಸ್ವಾಮಿ ಅವರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುವುದು ಬಿಡುವುದು ಅವರ ವೈಯಕ್ತಿಕ ವಿಚಾರ. ಈ ಬಗ್ಗೆ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದು, ಮಂಡ್ಯ ಜನರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಹೇಳಿದ್ದಾರೆ. ಜನರು ಏನು ಹೇಳುತ್ತಾರೆ ಅದನ್ನೇ ಅವರು ತೀರ್ಮಾನಿಸುತ್ತಾರೆ ಎಂದರು.
ಬೆಂಗಳೂರು: ರಾಜ್ಯ ಲೋಕಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ವಿರುದ್ಧ ಬಂಡಾಯ ಹೂಡಿರುವ ಮಾಜಿ ಶಾಸಕರು ಮನವೊಲಿಕೆ ಕರೆದಿದ್ದ ಸಭೆ ವಿಫಲವಾಗಿದೆ. ಸಭೆ ಬಳಿಕ ಮಾತನಾಡಿದ ಮಾಜಿ ಶಾಸಕ ಚಲುವರಾಯಸ್ವಾಮಿ ಅವರು, ರಾಜ್ಯದಲ್ಲಿ ಮೈತ್ರಿ ಧರ್ಮ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.
ಕಾವೇರಿ ನಿವಾಸದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ಇಂದಿನ ಸಭೆ ಕೇವಲ ಪಕ್ಷದ ಸಭೆ ಆಗಿದ್ದು, ಮೈತ್ರಿ ಕುರಿತಾದ ಸಭೆ ಅಲ್ಲ. ಮಂಡ್ಯದ ಎಂಟು ಕ್ಷೇತ್ರದ ಪರಾಜಿತ ಅಭ್ಯರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದು, ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ನಮ್ಮ ಪಾತ್ರ ಏನು ಇರುವುದಿಲ್ಲ. ರಾಜ್ಯದಲ್ಲಿ ಮೈತ್ರಿ ಮುಂದುವರಿಯುತ್ತದೆ. ಆದರೆ ಮಂಡ್ಯ ಕ್ಷೇತ್ರವನ್ನು ಬಿಟ್ಟು ಬಿಡಿ ಈ ಬಗ್ಗೆ ಕೇಳಬೇಡಿ ಎಂದು ಮಾಧ್ಯಮಗಳಿಗೆ ಉತ್ತರಿಸಿದರು.
ಚುನಾವಣೆಗೆ ಕೆಲ ದಿನಗಳಲೇ ಇರುವ ಕಾರಣ ಸಿದ್ದರಾಮಯ್ಯ ಅವರು ನಾಳೆಯಿಂದ ಬಿಡುವಿಲ್ಲದ ಪ್ರಚಾರದಲ್ಲಿ ತೊಡಗುತ್ತಾರೆ. ಮಂಡ್ಯ ಕ್ಷೇತ್ರದಲ್ಲಿ ನಮ್ಮ ಮೇಲೆ ಸಿದ್ದರಾಮಯ್ಯ ಅವರು ಡಿಪೆಂಡ್ ಆಗಿದ್ದರೆ ನಾವು ಕಾರ್ಯಕರ್ತರ ಮೇಲೆ ಡಿಪೆಂಡ್ ಆಗಿದ್ದೇವೆ. ಅದ್ದರಿಂದ ಕಾರ್ಯಕರ್ತರೊಂದಿಗೆ ಮಾತನಾಡಿ ತೀರ್ಮಾನಕ್ಕೆ ಬರುತ್ತೇವೆ. ಮತ್ತೆ ಸಭೆ ನಡೆಸಲು ಸಮಯ ಇಲ್ಲ ಎಂದರು.
ಮಂಡ್ಯ ಮೈತ್ರಿ ವಿಚಾರದಲ್ಲಿ ಕುಮಾರಸ್ವಾಮಿ ಸೂಕ್ಷ್ಮವಾಗಿ ಹೇಳಿದ್ದಾರೆ. ಜನರ ತೀರ್ಮಾನಕ್ಕೆ ಬಿಟ್ಟು ಬಿಡೋಣ ಎಂದು ಅವರೇ ಹೇಳಬಹುದು ಎಂದು ನಿನ್ನೆಯೇ ತಿಳಿಸಿದ್ದೇನೆ. ಉಳಿದ ಕ್ಷೇತ್ರದಲ್ಲಿ ಮೈತ್ರಿಯಾಗಿ ಹೋಗೋಣ ಎಂದು ನಾನು ನಾಯಕರಿಗೆ ತಿಳಿಸಿದ್ದೇನೆ. ನಮ್ಮ ಕಾರ್ಯಕರ್ತರನ್ನು ಕೇಳದೆ ನಾವು ಯಾವ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಈ ಜಿಲ್ಲೆ ಬಿಟ್ಟು ಉಳಿದ ಕಡೆ ಮೈತ್ರಿ ಧರ್ಮ ಪಾಲಿಸೋಣ ಎಂದರು.
ಶಿಸ್ತುಕ್ರಮಕ್ಕೆ ಸ್ವಾಗತ: ಇದೇ ವೇಳೆ ಅತೃಪ್ತರ ವಿರುದ್ಧ ಶಿಸ್ತು ಕ್ರಮದ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಆದರೆ ನಾಯಕರ ಈ ನಿರ್ಧಾರವನ್ನು ನಾನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ನಾಯಕರು ಹೊಡೆದರೆ ಅದನ್ನೇ ಒಂದು ಆಶೀರ್ವಾದ ಎಂದು ಕೊಳ್ಳುತ್ತೇವೆ. ಮಂಡ್ಯದಲ್ಲಿ ನಮ್ಮ ಪಾತ್ರ ಇರಲ್ಲ ಎಂದು ಸ್ಪಷ್ಟಪಡಿಸಿದರು.