Tag: ಚಲುವರಾಯಸ್ವಾಮಿ

  • ಕಾವೇರಿ ನೀರಿಗೆ ತಮಿಳುನಾಡು ಬೇಡಿಕೆ – ಯಾವ ತಿಂಗಳು ಎಷ್ಟು ನೀರು ಬಿಡಬೇಕು?

    ಕಾವೇರಿ ನೀರಿಗೆ ತಮಿಳುನಾಡು ಬೇಡಿಕೆ – ಯಾವ ತಿಂಗಳು ಎಷ್ಟು ನೀರು ಬಿಡಬೇಕು?

    ಮಂಡ್ಯ: ಕಾವೇರಿ (Cauvery) ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಸಂಪೂರ್ಣವಾಗಿ ಕುಗ್ಗಿದ್ದು, ಅಲ್ಪ ಮಳೆ ಬಿದ್ದ ಪರಿಣಾಮ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್ ಡ್ಯಾಂನಲ್ಲಿ (KRS Dam) ಕೊಂಚ ಪ್ರಮಾಣದಲ್ಲಿ ಮಾತ್ರ ನೀರು ಶೇಖರಣೆಯಾಗಿದೆ.

    ಸದ್ಯ ಡ್ಯಾಂನಲ್ಲಿ 89 ಅಡಿಯಲ್ಲಿ 15.349 ಟಿಎಂಸಿ ನೀರು ಇದೆ. ಈ ಪೈಕಿ 8 ಟಿಎಂಸಿಯಷ್ಟು ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳಬಹುದು. ಈ ಹೊತ್ತಿನಲ್ಲಿ ತಮಿಳುನಾಡು (Tamil Nadu) ಪ್ರತಿವರ್ಷ ನೀಡುವಂತೆ ಈ ತಿಂಗಳ ಹಂಚಿಕೆ ನೀರನ್ನು ಬಿಡುವಂತೆ ಕಾವೇರಿ ನಿರ್ವಹಣಾ ಮಂಡಳಿಯಲ್ಲಿ ಪ್ರಸ್ತಾಪ ಮಾಡಿದೆ. ಇದನ್ನೂ ಓದಿ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೂ ಸೋಮಣ್ಣ ಟವೆಲ್? – ಕಾರ್ಯಕರ್ತರ ಸಭೆಯಲ್ಲಿ ಇಂಗಿತ

    ಡ್ಯಾಂನಲ್ಲಿ ಇರುವ ನೀರು ಎರಡು ತಿಂಗಳು ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಬಹದು. ಇತ್ತ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಬೆಳೆಗಳಿಗೆ ನೀರು ಇಲ್ಲದ ಕಾರಣ ಬೆಳೆಗಳು ಒಣಗುತ್ತಿವೆ. ಹೀಗಿರುವಾಗ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲು ಕಷ್ಟಸಾಧ್ಯವಾಗಿದೆ. ಈ ಬಗ್ಗೆ ಸಿಎಂ ಹಾಗೂ ನೀರಾವರಿ ಸಚಿವರೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ಸಚಿವ ಚಲುವರಾಯಸ್ವಾಮಿ (Chaluvarayaswamy) ಹೇಳಿದ್ದಾರೆ. ಇದನ್ನೂ ಓದಿ: ಜು.19 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ – ಲಕ್ಷ್ಮಿ ಹೆಬ್ಬಾಳ್ಕರ್‌

    ಈ ಕುರಿತು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh), ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಕೊಡುವುದು ಕಷ್ಟ ಇದೆ. ಟ್ರಿಬ್ಯೂನಲ್ ಪ್ರಕಾರ ನೀರಿನ ಹಂಚಿಕೆ ವಿಚಾರದಲ್ಲಿ ನಿಯಮಗಳು ಇವೆ. ಸದ್ಯ ಮಳೆ ತುಂಬಾ ಕಡಿಮೆ ಬೀಳುತ್ತಿದ್ದು, ಕೆಆರ್‌ಎಸ್ ನೀರಿನ ಮಟ್ಟ ಆತಂಕಕರವಾಗಿ ಇದೆ. ಈ ಬಗ್ಗೆ ಮೊದಲು ರಾಜ್ಯದ ಸಚಿವರ ಜೊತೆ ತುರ್ತು ಸಭೆ ನಡೆಸಿ ಬಳಿಕ ಕೇಂದ್ರ ಸರ್ಕಾರ ಹಾಗೂ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ಪ್ರವಾಹಕ್ಕೆ ಬಿಜೆಪಿಯೇ ಕಾರಣ – AAP ಆರೋಪ

    ಅಂತಿಮ ಐತೀರ್ಪು ಪ್ರಕಾರ ಯಾರಿಗೆ ಎಷ್ಟು ನೀರು?
    ನ್ಯಾ. ಎನ್.ಪಿ.ಸಿಂಗ್, ನ್ಯಾ. ಸುಧೀರ್ ನಾರಿಯನ್, ನ್ಯಾ. ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪು ನೀಡಿತು. ಈ ಐತೀರ್ಪಿನ ಅನ್ವಯ ಕಾವೇರಿ ಕಣಿವೆಯಲ್ಲಿ 740 ಟಿಎಂಸಿ ನೀರಿದೆ ಎಂದು ಲೆಕ್ಕಹಾಕಲಾಯಿತು. ಕರ್ನಾಟಕಕ್ಕೆ 270 ಟಿಎಂಸಿ, ತಮಿಳುನಾಡಿಗೆ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 10, ಪರಿಸರ ಸಂರಕ್ಷಣೆಗೆ 10 ಟಿಎಂಸಿ, ಸಮುದ್ರ ಸೇರುವ ನೀರು 4 ಟಿಎಂಸಿ ಟಿಎಂಸಿ ನೀರನ್ನು ಹಂಚಲಾಯಿತು. ನ್ಯಾಯಾಧಿಕರಣ 192 ಟಿಎಂಸಿ ನೀರನ್ನು ಕರ್ನಾಟಕಕ್ಕೆ ಹರಿಸುವಂತೆ ಆದೇಶಿಸಿತು. ಇದರ ಜೊತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಸೂಚಿಸಿತು. ಇದನ್ನೂ ಓದಿ: ಎರಡು ದಿನಗಳ ಫ್ರಾನ್ಸ್ ಪ್ರವಾಸ ಮುಗಿಸಿ UAEಯತ್ತ ಹೊರಟ ಮೋದಿ

    ಯಾವ ತಿಂಗಳಿನಲ್ಲಿ ತಮಿಳುನಾಡಿಗೆ ಎಷ್ಟು ಟಿಎಂಸಿ ನೀರು?
    ಜೂನ್ 10, ಜುಲೈ 34, ಅಗಸ್ಟ್ 50, ಸೆಪ್ಟೆಂಬರ್ 40, ಅಕ್ಟೋಬರ್ 22, ನವೆಂಬರ್ 15, ಡಿಸೆಂಬರ್ 8, ಜನವರಿ 3, ಫೆಬ್ರವರಿ 2.5, ಮಾರ್ಚ್ 2.5, ಏಪ್ರಿಲ್ 2.5, ಮೇ 2.5 ಸೇರಿ ಒಟ್ಟು 192 ಟಿಎಂಸಿ ನೀರನ್ನು ಕನಾಟಕ ಪ್ರತಿವರ್ಷ ತಮಿಳುನಾಡಿಗೆ ಹರಿಸಬೇಕು. ಇದನ್ನೂ ಓದಿ: ಗ್ರಾಹಕರಿಗೆ ಶಾಕ್ ಮೇಲೆ ಶಾಕ್ – ಆಷಾಢ ಮುಗಿಯುತ್ತಿದ್ದಂತೆ ಹೋಟೆಲ್ ದರ ಏರಿಕೆ ಬರೆ ಫಿಕ್ಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಲುವರಾಯಸ್ವಾಮಿ ವಿರುದ್ಧ ಮತ್ತೊಂದು ಆಡಿಯೋ ಬಿಟ್ಟ ಜೆಡಿಎಸ್

    ಚಲುವರಾಯಸ್ವಾಮಿ ವಿರುದ್ಧ ಮತ್ತೊಂದು ಆಡಿಯೋ ಬಿಟ್ಟ ಜೆಡಿಎಸ್

    ಮಂಡ್ಯ: ಜಿಲ್ಲೆಯ ನಾಗಮಂಗಲದ ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್ ಆತ್ಮಹತ್ಯೆ ಯತ್ನ ಪ್ರಕರಣವಾದ ಬಳಿಕ ನಾಗಮಂಗಲದಲ್ಲಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ದ್ವೇಷದ ರಾಜಕೀಯ ಮಾಡುತ್ತಾ ಇದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಜೆಡಿಎಸ್ (JDS) ಇದೀಗ ಮತ್ತೊಂದು ಆಡಿಯೋವನ್ನು (Audio) ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ.

    ನಾಗಮಂಗಲ ತಾಲೂಕಿನ ರೈತ ಕೃಷ್ಣೇಗೌಡ ಎಂಬಾತ ಕೆಇಬಿ ಸಿಬ್ಬಂದಿ ಜೊತೆ ಮಾತಾನಾಡುವ ವೇಳೆ ನಡೆದ ಸಂವಾದವನ್ನು ಜೆಡಿಎಸ್ ವೈರಲ್ ಮಾಡುತ್ತಾ ಇದೆ. ಈ ಆಡಿಯೋದಲ್ಲಿ ರೈತ ಕೆಇಬಿ ಸಿಬ್ಬಂದಿಗೆ ಯಾಕೆ ಸಮ್ಮನೆ ವಿದ್ಯುತ್ ಅನ್ನು ತೆಗೆಯುತ್ತಾ ಇದ್ದೀರಾ? ಮಳೆನೂ ಇಲ್ಲ ಗಾಳಿನೂ ಇಲ್ಲ. ಜಿಟಿಜಿಟಿ ಮಳೆಯ ಹಾಗೆ 5 ನಿಮಿಷ ಬರುತ್ತೆ ಅಷ್ಟೇ. ಇಷ್ಟಕ್ಕೆ ವಿದ್ಯುತ್ ತೆಗೆದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

    ಇದಕ್ಕೆ ಕೆಇಬಿ ಸಿಬ್ಬಂದಿ ಲೈನ್ ಟ್ರಿಪ್ ಆಗುತ್ತಾ ಇದೆ. ನಾವೇನ್ ಮಾಡೋದು? ಲೈನ್ ಮ್ಯಾನ್ ಚೆಕ್ ಮಾಡ್ತಾ ಇದ್ದಾನೆ ಎಂದು ಹೇಳಿದ್ದಾರೆ. ರೈತ ಕೃಷ್ಣೇಗೌಡ ಹೀಗೆ ಆದ್ರೆ ಮಕ್ಕಳು ಓದಿಕೊಳ್ಳೋದು ಹೇಗೆ ಎಂದು ಹೇಳಿದ್ದಾರೆ. ಕೆಇಬಿ ಸಿಬ್ಬಂದಿ ಮುಂದುವರಿದು ನಾವೇನ್ ಮಾಡೋದು ಹೇಳಿ ಒಬ್ಬ ಲೈನ್ ಮ್ಯಾನ್ ರಜಾ ಹಾಕಿದ್ದಾನೆ. ಭೀಮನಹಳ್ಳಿ ಲೈನ್ ಮ್ಯಾನ್ ಹುಡುಗನನ್ನು ಜೆಡಿಎಸ್ ಪರ ಓಡಾಡಿದ್ದಾನೆ ಎಂದು ಟ್ರಾನ್ಫ್ಫರ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: RTPS ಮೂರು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ

    ಇದಕ್ಕೆ ರೈತ ಏನು ಜೆಡಿಎಸ್‌ಗೆ ಮಾಡಿದಾರೆ ಎಂದು ಹೀಗೆ ಮಾಡಿದ್ರೆ ಹೇಗೆ? ಜೆಡಿಎಸ್ ಆಗಲಿ, ಕಾಂಗ್ರೆಸ್ ಆಗಲಿ ಹೀಗೆ ಮಾಡಿದರೆ ಹೇಗೆ ಎಂದು ಇಬ್ಬರ ನಡುವೆ ಸಂವಾದ ನಡೆದಿದೆ. ಇದೀಗ ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: KRS ಒಳಹರಿವಿನ ಪ್ರಮಾಣ ಕುಸಿತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆಎಸ್‌ಆರ್‌ಟಿಸಿ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್ – ಅಂಬುಲೆನ್ಸ್ ಅಡ್ಡಗಟ್ಟಿದ ದೃಶ್ಯ ಪತ್ತೆ

    ಕೆಎಸ್‌ಆರ್‌ಟಿಸಿ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್ – ಅಂಬುಲೆನ್ಸ್ ಅಡ್ಡಗಟ್ಟಿದ ದೃಶ್ಯ ಪತ್ತೆ

    – ವೀಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ ಜೆಡಿಎಸ್

    ಮಂಡ್ಯ: ಕೆಎಸ್‌ಆರ್‌ಟಿಸಿ ಚಾಲಕ (KSRTC Driver) ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ (Suicide Attempt) ಪ್ರಕರಣಕ್ಕೆ ಈಗ ಒಂದು ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮಾಜಿ ಶಾಸಕ ಸುರೇಶ್ ಗೌಡ  (Suresh Gowda) ಹಾಗೂ ಜೆಡಿಎಸ್ (JDS) ಕಾರ್ಯಕರ್ತರು ಅಂಬುಲೆನ್ಸ್ (Ambulence) ಅನ್ನು ತಡೆದಿದ್ದರು ಎಂದು ಸಚಿವ ಚಲುವರಾಯಸ್ವಾಮಿ (Chaluvaraya Swamy) ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯವನ್ನು ಜೆಡಿಎಸ್ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದೆ.

    ಸಿಸಿಟಿವಿ ದೃಶ್ಯದಲ್ಲೇನಿದೆ?
    ನಾಗಮಂಗಲದ ಕೆಎಸ್‌ಆರ್‌ಟಿಸಿ ಡ್ರೈವರ್ ಜಗದೀಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದ್ದ ಅಂಬುಲೆನ್ಸ್ ಅನ್ನು ಮಾಜಿ ಶಾಸಕ ಸುರೇಶ್ ಗೌಡ ಹಾಗೂ ಬೆಂಬಲಿಗರು ಅಡ್ಡಗಟ್ಟುವ ದೃಶ್ಯ ಪತ್ತೆಯಾಗಿದೆ. ನಾಗಮಂಗಲ ಟಿಬಿ ವೃತ್ತದ ಬಳಿ ಸುರೇಶ್‌ಗೌಡ ಅಡ್ಡಗಟ್ಟಿ ನಿಲ್ಲಿಸಿದ್ದರು. ಬಳಿಕ ಅಂಬುಲೆನ್ಸ್‌ನಲ್ಲಿದ್ದವರೊಂದಿಗೆ ಸುರೇಶ್ ಗೌಡ ಮಾತನಾಡಿದ್ದರು. ಈ ಘಟನೆ ಜುಲೈ 6ರ ಮಧ್ಯರಾತ್ರಿ 1 ಗಂಟೆ ವೇಳೆ ನಡೆದಿದೆ.

    ಘಟನೆಗೆ ಸಂಬಂಧಿಸಿದಂತೆ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕ ಸುರೇಶ್‌ಗೌಡ ಹಾಗೂ ಜೆಡಿಎಸ್ ಕಾರ್ಯಕರ್ತರು ಅಂಬುಲೆನ್ಸ್ ತಡೆದಿದ್ದರು. ಜಗದೀಶ್‌ನ್ನು ಬಿಜಿಎಸ್ ಆಸ್ಪತ್ರೆಯಿಂದ ಮೈಸೂರಿಗೆ ರವಾನೆ ಮಾಡುವಾಗ ತಡೆದಿದ್ದಾರೆ. ಅವರಿಗೆ ಜಗದೀಶ್ ಬದುಕಿಸುವ ಉದ್ದೇಶ ಇರಲಿಲ್ಲ ಎಂದು ಚಲುವರಾಯಸ್ವಾಮಿ ಆರೋಪಿಸಿದ್ದರು. ಇದನ್ನೂ ಓದಿ: ಜೈನ ಮುನಿ ಕೊಲೆ ಮಾಡಿದ್ದು ಒಬ್ಬರಲ್ಲ ಇಬ್ಬರು – ಎಫ್‌ಐಆರ್‌ನಲ್ಲಿ ಬಹಿರಂಗ

    ಇದಾದ ಬಳಿಕ ನಮ್ಮ ಕಾರ್ಯಕರ್ತರು ಅಂಬುಲೆನ್ಸ್ ಅಡ್ಡಗಟ್ಟಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಇದೀಗ ಘಟನೆಗೆ ಸಂಬಂಧಿಸಿಂತೆ ವೀಡಿಯೋ ಬಿಡುಗಡೆ ಮಾಡಿರುವ ಜೆಡಿಎಸ್, ನಾವು ಜಗದೀಶ್‌ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ವಿಚಾರಿಸಲು ಅಂಬುಲೆನ್ಸ್ ಅನ್ನು ನಿಲ್ಲಿಸಿದ್ದೆವು ಎಂದು ಸ್ಪಷ್ಟಪಡಿಸಿದೆ. ಜಗದೀಶ್‌ನ ಎಲ್ಲಿಗೆ ಕರೆದುಕೊಂಡು ಹೋಗ್ತಾ ಇದ್ದೀರಾ? ಬಿಜಿಎಸ್‌ನಲ್ಲಿ ಚಿಕಿತ್ಸೆ ಕೊಡೋಕೆ ಆಗಲ್ವಾ? ಮಣಿಪಾಲ್‌ಗೆ ಕರೆದುಕೊಂಡು ಹೋಗ್ತಾ ಇದ್ದೀರಾ? ಸರಿ ಹೋಗಿ ಎಂದು ಸುರೇಶ್ ಗೌಡ ಮಾತನಾಡಿರುವ ವೀಡಿಯೋ ರಿಲೀಸ್ ಆಗಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರಕ್ರಿಯೆ ನೀಡಿರುವ ಸುರೇಶ್ ಗೌಡ, ನನಗೆ ಯಾವ ದುರುದ್ದೇಶವಿಲ್ಲ. ನಾನು ಜಗದೀಶ್ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗುವಾಗ ಅವರ ಕುಟುಂಬಸ್ಥರು ಫೋನ್ ಮಾಡಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾ ಇದ್ದೀವಿ, ನೀವು ನಾಗಮಂಗಲದಲ್ಲಿಯೇ ಇರಿ. ಅಲ್ಲಿ ನಿಲ್ಲಿಸುತ್ತೇವೆ ಎಂದಿದ್ದರು. ಹಾಗೆ ನಾಗಮಂಗಲದಲ್ಲಿ ಅಂಬುಲೆನ್ಸ್ ನಿಲ್ಲಿಸಿದ್ರು. ಬಳಿಕ ನಾನು ಹೋಗಿ ಎಂದಾಗ ಅವರು ಹೋದರು ಎಂದು ತಿಳಿಸಿದರು.  ಇದನ್ನೂ ಓದಿ: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ಖತರ್ನಾಕ್ ರಾಬರ್ ಕಾಲಿಗೆ ಪೊಲೀಸರ ಗುಂಡೇಟು

    ಜಗದೀಶ್ ಆಸ್ಪತ್ರೆಗೆ ಸೇರಿಸಿದ್ದು ಜೆಡಿಎಸ್ ಕಾರ್ಯಕರ್ತರೆ, ಆತನನ್ನು ಮೈಸೂರಿಗೆ ಕರೆದುಕೊಂಡು ಹೋಗಿದ್ದು ನಮ್ಮ ಕಾರ್ಯಕರ್ತರೆ. ನನಗೆ ಯಾವುದೇ ದುರುದ್ದೇಶವಿಲ್ಲ, ಹಾಗೆ ಏನಾದ್ರು ಇದ್ರೆ ದೊಡ್ಡ ಸರ್ಕಲ್‌ನಲ್ಲಿ ಅದು ಸಿಸಿಟಿವಿ ಇರೋ ಪ್ರದೇಶದಲ್ಲೇ ಏಕೆ ನಿಲ್ಲುತ್ತಿದ್ದೆವು ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾನ ಮರ್ಯಾದೆ, ಕೊಲೆಗಡುಕ, ಕಿತ್ತುಹೋದವರು – ಹೆಚ್‌ಡಿಕೆ Vs ಚಲುವರಾಯಸ್ವಾಮಿ

    ಮಾನ ಮರ್ಯಾದೆ, ಕೊಲೆಗಡುಕ, ಕಿತ್ತುಹೋದವರು – ಹೆಚ್‌ಡಿಕೆ Vs ಚಲುವರಾಯಸ್ವಾಮಿ

    ಬೆಂಗಳೂರು: ನಾಗಮಂಗಲದ ಡಿಪೋದ ಕೆಎಸ್‍ಆರ್‌ಟಿಸಿ ಚಾಲಕನ (KSRTC Driver) ಆತ್ಮಹತ್ಯೆ ಯತ್ನ ಪ್ರಕರಣ ಸದನದಲ್ಲೂ ಇಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಶೂನ್ಯವೇಳೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿ (Basavaraj Bommai) ವಿಷಯ ಪ್ರಸ್ತಾಪ ಮಾಡಿ ಎಫ್‍ಐಆರ್ ಕೂಡ ಹಾಕಿಲ್ಲ. ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿ ಚಲುವರಾಯಸ್ವಾಮಿ (Chaluvaraya Swamy) ತಲೆದಂಡಕ್ಕೆ ಆಗ್ರಹಿಸಿದರು.

    ಇದಕ್ಕೆ ಕುಮಾರಸ್ವಾಮಿಯೂ ದನಿಗೂಡಿಸಿ ಉಭಯ ಪಕ್ಷಗಳ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ಹಂತದಲ್ಲಿ ಚಲುವರಾಯಸ್ವಾಮಿ ಅವರನ್ನು ತಮ್ಮ ಬಳಿ ಕರೆಸಿಕೊಂಡ ಸಿಎಂ, ಏನೆಲ್ಲಾ ಆಯ್ತು ಎಂಬುದನ್ನು ತಿಳಿದುಕೊಂಡರು.

    ತಮ್ಮ ಮೇಲಿನ ಆರೋಪ ನಿರಾಕರಿಸುತ್ತಾ ಕುಮಾರಸ್ವಾಮಿ (Kumaraswamy) ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿಗೆ ಇಳಿದರು. ಬೇಕಂತಲೇ ಮೈಸೂರಿಗೆ ಶಿಫ್ಟ್ ಮಾಡುವುದನ್ನು ಕುಮಾರಸ್ವಾಮಿ ತಡೆದರು. ರಾಜಕೀಯ ಲಾಭ ಪಡೆಯಲು ಯತ್ನಿಸಿದರು ಎಂದು ಆರೋಪಿಸಿದರು. ನಾವಿಲ್ಲಿ 135 ಮಂದಿ ಕುಳಿತಿರುವುದನ್ನು ಸಹಿಸಲು ಆಗುತ್ತಿಲ್ಲ. ನಾಚಿಕೆ ಆಗಬೇಕು ನಿಮಗೆ. ಕುಳಿತುಕೊಳ್ಳಿ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

    ಇದಕ್ಕೆ ಕೆರಳಿದ ಕುಮಾರಸ್ವಾಮಿ, ನಮಗೆ ಯಾಕೆ ನಾಚಿಕೆ? ನೀನು ಕೂರಯ್ಯ ಎಂದರು. ನಂತರ ನಿಮ್ಮನ್ನು ಸಿಎಂ ಮಾಡಿದ್ದು ಯಾರು ಅಂತಾ ಚಲುವರಾಯಸ್ವಾಮಿ ಮತ್ತೆ ಕೆಣಕಿದರು. ಆಗ ಪರಸ್ಪರರು ಏಕವಚನಗಳ ಪ್ರಯೋಗ ಮಾಡಿಕೊಂಡರು. ಇದನ್ನೂ ಓದಿ: ಸದನದಲ್ಲಿ ಸಿದ್ದರಾಮಯ್ಯ-ಹೆಚ್‌ಡಿಕೆ ಮಧ್ಯೆ ಬೆಂಕಿ ಫೈಟ್‌

     

    ಈ ಸಂದರ್ಭದಲ್ಲಿ ಮಾನ ಮರ್ಯಾದೆ, ಕೊಲೆಗಡುಕ, ಕಿತ್ತುಹೋದವರು, ಹೀಗೆ ಅನೇಕ ಪದಪುಂಜಗಳ ಬಳಕೆಯೂ ಆಯ್ತು. ಕಾಂಗ್ರೆಸ್ಸಿಗರು-ಜೆಡಿಎಸ್‍ನವರು ಸಿಟ್ಟಿಗೆದ್ದ ಕಾರಣ ಗದ್ದಲ ಜೊರಾಯ್ತು.

    ಚಲುವರಾಯಸ್ವಾಮಿ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿ ಜೆಡಿಎಸ್-ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಕೊನೆಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ತನಿಖೆ ನಡೆಸುವುದಾಗಿ ಗೃಹಸಚಿವರು ಭರವಸೆ ನೀಡಿದ ಬಳಿಕ ವಿಪಕ್ಷಗಳು ಧರಣಿ ಹಿಂಪಡೆದವು.

  • KSRTC ಚಾಲಕನ ವರ್ಗಾವಣೆ ಯಾವ ಕಾರಣಕ್ಕೆ ಎಂಬ ಮಾಹಿತಿ ತರಿಸಿಕೊಳ್ತೀನಿ: ರಾಮಲಿಂಗಾ ರೆಡ್ಡಿ

    KSRTC ಚಾಲಕನ ವರ್ಗಾವಣೆ ಯಾವ ಕಾರಣಕ್ಕೆ ಎಂಬ ಮಾಹಿತಿ ತರಿಸಿಕೊಳ್ತೀನಿ: ರಾಮಲಿಂಗಾ ರೆಡ್ಡಿ

    ಬೆಂಗಳೂರು: ನಾಗಮಂಗಲದಲ್ಲಿ (Nagamangala) ಕೆಎಸ್‌ಆರ್‌ಟಿಸಿ ಚಾಲಕ (KSRTC Driver) ಆತ್ಮಹತ್ಯೆಗೆ ಯತ್ನಿಸಿದ್ದು ಯಾವ ಕಾರಣಕ್ಕೆ ಎಂಬ ಬಗ್ಗೆ ಮಾಹಿತಿ ಇಲ್ಲ. ವರ್ಗಾವಣೆ (Transfer) ಯಾವ ಕಾರಣಕ್ಕೆ ಎಂಬ ಮಾಹಿತಿ ತರಿಸಿಕೊಳ್ಳುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿಕೆ ನೀಡಿದ್ದಾರೆ.

    ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ಬಸ್ ಡಿಪೋದ ಚಾಲಕ ಜಗದೀಶ್, ಸಚಿವ ಚಲುವರಾಯಸ್ವಾಮಿ ಸೂಚನೆಯಂತೆ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ಅಸ್ವಸ್ಥರಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ರಾಮಲಿಂಗಾ ರೆಡ್ಡಿ, ಯಾವ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಮಾಹಿತಿಯಿಲ್ಲ. ಯಾರಾದ್ರೂ ಕಂಡಕ್ಟರ್, ಡ್ರೈವರ್‌ ವರ್ಗಾವಣೆಗೆ ನಮ್ಮವರೆಗೂ ಬರುತ್ತಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: KSRTC ನೌಕರ ಆತ್ಮಹತ್ಯೆಗೆ ಪ್ರಯತ್ನಿಸಿದ್ದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ – ಚಲುವರಾಯಸ್ವಾಮಿ ಸ್ಪಷ್ಟನೆ

    ಘಟನೆಯ ಕುರಿತು ಎಂಡಿ ಬೆಳಗ್ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ವರ್ಗಾವಣೆ ಯಾವ ಕಾರಣಕ್ಕೆ ಎಂಬ ಮಾಹಿತಿಯನ್ನು ತರಿಸಿಕೊಳ್ಳುತ್ತೇನೆ. ಸಚಿವ ಚಲುವರಾಯಸ್ವಾಮಿ (Chaluvarayaswamy) ಒತ್ತಡ ಇತ್ತಾ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಡೆತ್‌ನೋಟ್ ಬರೆದಿದ್ದಾರೆ ಅಂತಾ ಮಾಹಿತಿ ಕೊಟ್ಟಿದ್ದಾರೆ. ಆತ್ಮಹತ್ಯೆ ಯತ್ನದ ನಂತರ ಚಿಕಿತ್ಸೆ ನಡೆಯುತ್ತಿದೆ. ಯಾರು ಒತ್ತಡ ಹಾಕಿದರು, ವರ್ಗಾವಣೆಗೆ ಕಾರಣ ಏನು ಎನ್ನುವ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತೇನೆ ಎಂದರು. ಇದನ್ನೂ ಓದಿ: ಸರ್ಕಾರ ರಾಜಕೀಯ ತೆವಲಿಗಾಗಿ ಜೀವದ ಜೊತೆ ಚೆಲ್ಲಾಟವಾಡ್ತಿದೆ – KSRTC ನೌಕರನ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • KSRTC ನೌಕರ ಆತ್ಮಹತ್ಯೆಗೆ ಪ್ರಯತ್ನಿಸಿದ್ದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ – ಚಲುವರಾಯಸ್ವಾಮಿ ಸ್ಪಷ್ಟನೆ

    KSRTC ನೌಕರ ಆತ್ಮಹತ್ಯೆಗೆ ಪ್ರಯತ್ನಿಸಿದ್ದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ – ಚಲುವರಾಯಸ್ವಾಮಿ ಸ್ಪಷ್ಟನೆ

    -ಸರ್ಕಾರ ಬದಲಾದಾಗ ಎಲ್ಲರ ಕಾಲದಲ್ಲೂ ವರ್ಗಾವಣೆ ಆಗಿದೆ

    ಮಂಡ್ಯ: ಸರ್ಕಾರ ಬದಲಾದಾಗ ಎಲ್ಲರ ಕಾಲದಲ್ಲೂ ವರ್ಗಾವಣೆ ಆಗಿರುತ್ತದೆ. ಕೆಎಸ್‌ಆರ್‌ಟಿಸಿ ಚಾಲಕ (KSRTC Driver) ಆತ್ಮಹತ್ಯೆಗೆ ಪ್ರಯತ್ನಿಸಿರುವ (Suicide Attempt) ಘಟನೆಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ (Chaluvaraya Swamy) ಪ್ರಯಿಕ್ರಿಯೆ ನೀಡಿದ್ದಾರೆ.

    ಮಂಡ್ಯ (Mandya) ಜಿಲ್ಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಚಲುವರಾಯಸ್ವಾಮಿ, ಕೆಲವರು ಅನಾವಶ್ಯಕವಾಗಿ ಈ ರೀತಿ ರಾಜಕೀಯ ಮಾಡುವುದು ಪರಿಪಾಟಲು. ವರ್ಗಾವಣೆ ಸಹಜ ಪ್ರಕ್ರಿಯೆ. ಸರ್ಕಾರ ಬದಲಾದಾಗ ಎಲ್ಲರ ಕಾಲದಲ್ಲೂ ವರ್ಗಾವಣೆ ಆಗಿರುತ್ತೆ. ಹಿಂದೆಯೂ ಸಾಕಷ್ಟು ವರ್ಗಾವಣೆ ಆಗಿದೆ. ಹಾಗಂತ ಜೆಡಿಎಸ್‌ನವರೆಲ್ಲರನ್ನೂ ವರ್ಗಾವಣೆ ಮಾಡೋಕಾಗುತ್ತಾ ಎಂದು ಪ್ರಶ್ನಿಸಿದರು.

    ನಾನು ಆ ಚಾಲಕನ ವರ್ಗಾವಣೆಗೆ ಲೆಟರ್ ಕೊಟ್ಟಿಲ್ಲ. ವರ್ಗಾವಣೆ ಮಾಡಿ ಎಂದು ನಾನು ಹೇಳಿಲ್ಲ. ಆದರೆ ವರ್ಗಾವಣೆ ಆಗಿದೆ. ಆ ಚಾಲಕನ ಬಾವ ನನಗೆ ಫೋನ್ ಮಾಡಿದ್ರು. ಹೀಗಾಗಿ ನಾನೇ ಹೋಲ್ಡ್ ಮಾಡುವಂತೆ ಹೇಳಿದ್ದೇನೆ. ಏನಾದ್ರೂ ತಪ್ಪಿದ್ರೆ ತನಿಖೆ ಮಾಡಿ ಆಮೇಲೆ ವರ್ಗಾವಣೆ ಮಾಡಿ ಎಂದು ಹೇಳಿದ್ದೆ. ಅದನ್ನು ಕ್ಯಾನ್ಸಲ್ ಮಾಡಿ ಅಂತ ಇವರು ನಿನ್ನೆ ಹೋಗಿ ಈ ರೀತಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

    ಮಂತ್ರಿ ಮಂಡಲದಿಂದ ಚಲುವರಾಯಸ್ವಾಮಿ ವಜಾ ಮಾಡುವಂತೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೈ ಮುಗಿದು, ಕುಮಾರಸ್ವಾಮಿ ಅವರು ಏನಾದ್ರೂ ಹೇಳಲಿ, ಅವರಿಗೆ ಒಳ್ಳೆದಾಗಲಿ. ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಜಗದೀಶ್ ಆತ್ಮಹತ್ಯೆ ಯತ್ನಕ್ಕೆ ಚಲುವರಾಯಸ್ವಾಮಿ ಕಾರಣ- ಗೆಳೆಯರು, ಕುಟುಂಬಸ್ಥರು ಆಕ್ರೋಶ

    ಕೆಎಸ್‌ಆರ್‌ಟಿಸಿ ಬಸ್ ಚಾಲಕ ಕಂ ನಿರ್ವಾಹಕನ ಆತ್ಮಹತ್ಯೆ ಯತ್ನಕ್ಕೆ ಕಾಂಗ್ರೆಸ್ ಶಾಸಕ ಚಲುವರಾಯಸ್ವಾಮಿ ಕಾರಣ ಎಂದು ಜಗದೀಶ್ ಸ್ನೇಹಿತರು ಹಾಗೂ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ವಿಷ ಸೇವಿಸಿದ ಚಾಲಕ ಜಗದೀಶ್ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರ ರಾಜಕೀಯ ತೆವಲಿಗಾಗಿ ಜೀವದ ಜೊತೆ ಚೆಲ್ಲಾಟವಾಡ್ತಿದೆ – KSRTC ನೌಕರನ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಗದೀಶ್ ಆತ್ಮಹತ್ಯೆ ಯತ್ನಕ್ಕೆ ಚಲುವರಾಯಸ್ವಾಮಿ ಕಾರಣ- ಗೆಳೆಯರು, ಕುಟುಂಬಸ್ಥರು ಆಕ್ರೋಶ

    ಜಗದೀಶ್ ಆತ್ಮಹತ್ಯೆ ಯತ್ನಕ್ಕೆ ಚಲುವರಾಯಸ್ವಾಮಿ ಕಾರಣ- ಗೆಳೆಯರು, ಕುಟುಂಬಸ್ಥರು ಆಕ್ರೋಶ

    ಮಂಡ್ಯ: ಕೆಎಸ್‍ಆರ್ ಟಿಸಿ ಬಸ್ ಚಾಲಕ ಕಂ ನಿರ್ವಾಹಕನ ಆತ್ಮಹತ್ಯೆ ಯತ್ನಕ್ಕೆ ಕಾಂಗ್ರೆಸ್ ಶಾಸಕ ಚಲುವರಾಯಸ್ವಾಮಿ (Chaluvarayaswamy) ಕಾರಣ ಎಂದು ಜಗದೀಶ್ ಸ್ನೇಹಿತರು ಹಾಗೂ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

    ಚಲುವರಾಯಸ್ವಾಮಿ ತನ್ನ ಚೇಲಾಗಳ ಮಾತು ಕೇಳಿ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಜಗದೀಶ್ ಕುಟುಂಬ ಜೆಡಿಎಸ್ ಪರ ಗುರುತಿಸಿಕೊಂಡಿತ್ತು. ಸುರೇಶ್ ಗೌಡ ಪರ ಜಗದೀಶ್ (KSRTC Bus Driver Jagadeesh) ಕುಟುಂಬ ಚುನಾವಣೆಯಲ್ಲಿ ಕೆಲಸ ಮಾಡಿತ್ತು. ಅಲ್ಲದೇ ಜಗದೀಶ್ ಹೆಂಡತಿ ಜೆಡಿಎಸ್ (JDS) ಬೆಂಬಲಿತ ಗ್ರಾ.ಪಂ ಸದಸ್ಯೆ. ಅವರಿಗೆ ಗ್ರಾ.ಪಂ ಅಧ್ಯಕ್ಷೆ ಆಗುವ ಅವಕಾಶ ಇತ್ತು ಎಂದು ಹೇಳಿದ್ದಾರೆ.

    ಕಾಂಗ್ರೆಸ್ (Congress) ಮುಖಂಡರು ನಮ್ಮ ಪಕ್ಷಕ್ಕೆ ಬನ್ನಿ ಇಲ್ಲವೇ ನಿನ್ನ ಗಂಡನ ಕೆಲಸಕ್ಕೆ ತೊಂದರೆ ಮಾಡ್ತೀವಿ ಎಂದಿದ್ದರು. ಹಾಗಿದ್ದರೂ ಜಗದೀಶ್ ಪತ್ನಿ ಕಾಂಗ್ರೆಸ್ ಹೋಗಲು ನೀರಾಕರಿಸಿದ್ದರು. ಹೀಗಾಗಿ ತನ್ನ ಬೆಂಬಲಿಗರ ಮಾತು ಕೇಳಿ ಚಲುವರಾಯಸ್ವಾಮಿ ದ್ವೇಷದ ರಾಜಕೀಯ ಮಾಡಿದ್ದಾರೆ. ಜಗದೀಶ್ ಆತ್ಮಹತ್ಯೆ ಯತ್ನಕ್ಕೆ ಚಲುವರಾಯಸ್ವಾಮಿ ಕಾರಣರಾಗಿದ್ದಾರೆ. ಜಗದೀಶ್ ಜೀವಕ್ಕೆ ಹೆಚ್ಚು ಕಡಿಮೆ ಆದ್ರೆ ಅವರ ಕುಟುಂಬ ನೋಡಿಕೊಳ್ಳೋರು ಯಾರು ಎಂದು ಸ್ನೇಹಿತರು ಕಿಡಿಕಾರಿದ್ದಾರೆ. ಇದನ್ನೂ ಓದಿ: JDS ಪರ ಪ್ರಚಾರ ಮಾಡಿದ್ದಕ್ಕೆ ಮಗನ ವರ್ಗಾವಣೆ- ಆತ್ಮಹತ್ಯೆಗೆ ಯತ್ನಿಸಿದ ಜಗದೀಶ್ ತಂದೆ ಬೇಸರ

    ವಿಷ ಸೇವಿಸಿದ ಚಾಲಕ ಜಗದೀಶ್ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬುಧವಾರ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಜಗದೀಶ್ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಬಗ್ಗೆ ಏನೂ ಹೇಳು ಆಗಲ್ಲ. ಬದುಕಿಸಲು ಪ್ರಯತ್ನ ಮಾಡ್ತೇವೆ ಎಂದು ವೈದ್ಯರು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ: ಅಧಿಕಾರಿಗಳಿಗೆ ಚಲುವರಾಯಸ್ವಾಮಿ ಸೂಚನೆ

    ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ: ಅಧಿಕಾರಿಗಳಿಗೆ ಚಲುವರಾಯಸ್ವಾಮಿ ಸೂಚನೆ

    ಬೆಂಗಳೂರು: ಮುಂಗಾರು ಹಂಗಾಮು ಆರಂಭವಾಗುತ್ತಿದ್ದು ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆವಹಿಸಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಅವರು ಅಧಿಕಾರಿಗಳಿಗೆ ಸೂಚಿಸಿದರು.

    ಕೃಷಿ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ಚಲುವರಾಯಸ್ವಾ ಮಂಗಳವಾರ ವಿಧಾನಸೌಧದಲ್ಲಿ ಮೊದಲ ಬಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಪರಿಚಯಾತ್ಮಕ ಹಾಗೂ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಈ ವೇಳೆ ಇಲಾಖೆಯ ಯೋಜನೆಗಳು, ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.

    ಪೂರ್ವ ಮುಂಗಾರಿನಲ್ಲಿ ವಾಡಿಕೆಯಾಗಿ 108 ಮಿ.ಮೀ ಮಳೆಯಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 108 ಮಿ.ಮೀ ಮಳೆಯಾಗಿದ್ದು, ಯಾವುದೇ ಕೊರತೆ ಆಗಿಲ್ಲ. 2022-23 ನೇ ಸಾಲಿನ 3ನೇ ಮುಂಗಡ ಅಂದಾಜಿನಂತೆ 139.28 ಲಕ್ಷ ಟನ್‌ಗಳಷ್ಟು ಆಹಾರ ಧಾನ್ಯಗಳ ಉತ್ಪಾದನೆಯನ್ನು ಅಂದಾಜಿಸಲಾಗಿದೆ. 2023 ರ ಮುಂಗಾರು ಹಂಗಾಮಿನಲ್ಲಿ 82.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಪೂರ್ವ ಮುಂಗಾರು ಬೆಳೆಗಳ 2.95 ಲಕ್ಷ ಹೆಕ್ಟೇರ್ ಗುರಿಯಿದ್ದು, ಇದುವರೆಗೆ 2.48 ಲಕ್ಷ ಹೆಕ್ಟೇರ್ (84%) ಪ್ರದೇಶದಲ್ಲಿ ಕೈಗೊಳ್ಳಲಾಗಿದೆ. 5.54 ಲಕ್ಷ ಕ್ವಿಂಟಲ್ ಬಿತ್ತನೆ ಬೀಜಗಳ ಬೇಡಿಕೆಯಿದ್ದು, 7.85 ಲಕ್ಷ ಕ್ವಿಂಟಲ್ ಬಿತ್ತನೆ ಬೀಜಗಳು ಲಭ್ಯವಿದೆ. ಬಿತ್ತನೆ ಬೀಜದಲ್ಲಿ ಯಾವುದೇ ಕೊರತೆ ಇಲ್ಲ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

    2023-24 ಸಾಲಿನ ಮುಂಗಾರು ಹಂಗಾಮಿಗೆ 25.47 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದೆ. 7.30 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಆಗಿದೆ. ಪ್ರಸ್ತುತ ಖಾಸಗಿ ಹಾಗೂ ಸಹಕಾರ ಸಂಘಗಳಲ್ಲಿ 13.90 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. 1.68 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಕಾಪು ದಾಸ್ತಾನು (Buffer Stock) ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಲಭ್ಯವಿದ್ದು, ಪ್ರಸ್ತುತ ರಸಗೊಬ್ಬರದ ಯಾವುದೇ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.

    ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇದ್ದು, ರೈತರಿಗೆ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಆಗಬಾರದು. ಪರೀಕ್ಷೆ ಮಾಡಿ ಗುಣಮಟ್ಟದ ಬಿತ್ತನೆ ಬೀಜಗಳನ್ನು ರೈತರಿಗೆ ಪೂರೈಕೆ ಮಾಡಬೇಕು. ರೈತರಿಗೆ ಅಗತ್ಯವಿರುವ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಪೂರೈಸಬೇಕು. ಮುಂಗಾರಿನಲ್ಲಿ ರೈತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವ ಚಲುವರಾಯಸ್ವಾಮಿ ಅವರು ಸೂಚನೆ ನೀಡಿದರು.

    ಇದರ ಜೊತೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಕಡ್ಡಾಯವಾಗಿ ಎಒಗಳು ಹಾಜರಿರಬೇಕು. ಮಣ್ಣಿನ ಪರೀಕ್ಷೆಯ (Soil Test) ರಿಪೋರ್ಟ್‌ಗಳನ್ನು ಸೂಕ್ತ ಸಮಯದಲ್ಲಿ ನೀಡಬೇಕು. ಬೆಳೆ ವಿಮೆ ನೀಡುವಲ್ಲಿ ರೈತರಿಗೆ ಸಮಸ್ಯೆ ಆಗಬಾರದು. ಜಿಲ್ಲಾ ಮಟ್ಟದಲ್ಲಿ ಯಾವುದೇ ಸಮಸ್ಯೆಯಾದರೂ ಜಂಟಿ ನಿರ್ದೇಶಕರೇ ನೇರ ಹೊಣೆ ಆಗ್ತೀರಾ ಎಂದು ಸಚಿವರು ಎಚ್ಚರಿಕೆ ನೀಡಿದರು.

    ನೆಟೆ ರೋಗ – ಶೀಘ್ರ ಪರಿಹಾರ ಬಿಡುಗಡೆ:
    2022-23ನೇ ಸಾಲಿನಲ್ಲಿ ನೆಟೆ ರೋಗದಿಂದ ಕಲಬುರಗಿ ಜಿಲ್ಲೆಯಲ್ಲಿ 1,98,488 ಹೆಕ್ಟೇರ್, ಬೀದರ್ ಜಿಲ್ಲೆಯಲ್ಲಿ 14,495 ಹೆಕ್ಟೇರ್, ವಿಜಯಪುರ ಜಿಲ್ಲೆಯಲ್ಲಿ 20,401 ಹೆಕ್ಟೇರ್, ಯಾದಗಿರಿ ಜಿಲ್ಲೆಯಲ್ಲಿ 10,259 ಪ್ರದೇಶದಲ್ಲಿ ತೊಗರಿ ಬೆಳೆ ಹಾನಿಯಾಗಿದೆ. ಇದರಿಂದ ನಷ್ಟವಾದ ರೈತರಿಗೆ ಪ್ರತಿ ಹೆಕ್ಟೇರ್ 10,000 ರೂ. ಪರಿಹಾರದಂತೆ ಗರಿಷ್ಠ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ ಸರ್ಕಾರದಿಂದ 223 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಶೀಘ್ರದಲ್ಲೇ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು. ಇದನ್ನೂ ಓದಿ: ಅಶ್ವಥ್‌ ನಾರಾಯಣ್‌ಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್‌

    ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ:
    ಕೃಷಿ ಇಲಾಖೆಯಲ್ಲಿ 58% ರಷ್ಟು ಹುದ್ದೆಗಳು ಖಾಲಿಯಿದ್ದು, ಯೋಜನೆಗಳನ್ನು ಪರಿಣಾಮಕಾರಿಯಾಗಿ ರೈತರಿಗೆ ತಲುಪಿಸಲು ವಿಳಂಬ ಆಗಲಿದೆ. ಆ ನಿಟ್ಟಿನಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ಅವಶ್ಯವಿದೆ. ಹಾಗಾಗಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಕೃಷಿ ಇಲಾಖೆಗೆ ಒಟ್ಟು 8,982 ಹುದ್ದೆಗಳು ಮಂಜೂರಾಗಿದ್ದು, ಆ ಪೈಕಿ 3,787 ಹುದ್ದೆಗಳು ಭರ್ತಿಯಾಗಿವೆ. 5,195 ಹುದ್ದೆಗಳು ಖಾಲಿ ಇರುತ್ತವೆ ಎಂದು ಮಾಹಿತಿ ನೀಡಿದರು.

    ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: 10 ಕೆಜಿ ಉಚಿತ ಅಕ್ಕಿ – ಸರ್ಕಾರದ ಲೆಕ್ಕಾಚಾರ ಏನು?

  • ದೇವೇಗೌಡರು ನಮ್ಮ ತಂದೆ ಆಗಿದ್ರೆ ಕೂತಿದ್ದ ಕಡೆ ನೆಮ್ಮದಿಯಿಂದ ನೋಡಿಕೊಳ್ಳುತ್ತಿದ್ದೆ: ಚಲುವರಾಯಸ್ವಾಮಿ

    ದೇವೇಗೌಡರು ನಮ್ಮ ತಂದೆ ಆಗಿದ್ರೆ ಕೂತಿದ್ದ ಕಡೆ ನೆಮ್ಮದಿಯಿಂದ ನೋಡಿಕೊಳ್ಳುತ್ತಿದ್ದೆ: ಚಲುವರಾಯಸ್ವಾಮಿ

    ಮಂಡ್ಯ: ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು (HD Devegowda) ನಮ್ಮ ತಂದೆ ಆಗಿದ್ರೆ ಕೂತಿದ್ದ ಕಡೆ ಬಹಳ ಸುಖದ ನೆಮ್ಮದಿಯಿಂದ ನೋಡಿಕೊಳ್ಳುತ್ತಿದ್ದೆ ಎನ್ನುವ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ (HD Kumaraswamy) ಶಾಸಕ ಚಲುವರಾಯಸ್ವಾಮಿ (Chaluvaraya Swamy) ಕುಟುಕಿದ್ದಾರೆ.

    ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಮಾತನಾಡಿದ ಅವರು, ಹೆಚ್.ಡಿ.ದೇವೇಗೌಡರು ನನ್ನ ವಿರುದ್ಧ ಏನು ಮಾತನಾಡಿಲ್ಲ, ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರನ್ನು ಈ ವಯಸ್ಸಿನಲ್ಲಿ ಆರೋಗ್ಯದ ಸಮಸ್ಯೆಯ ನಡುವೆ ಸುತ್ತಾಡಿಸಿದ್ದು ತಪ್ಪು. ಅವರು ಕೂತಿರುವ ಕಡೆ ಆಶೀರ್ವಾದ ತೆಗೆದುಕೊಂಡು ಚುನಾವಣೆ ಮಾಡಬೇಕಿತ್ತು, ರಾಜ್ಯ ಸುತ್ತಿದ್ದು ಸರಿಯಲ್ಲ. ಅವರನ್ನು ಸುತ್ತಿಸಿದವರಿಗೆ ದೇವರು ಬುದ್ಧಿಕೊಡಲಿ ಎಂದರು. ಇದನ್ನೂ ಓದಿ: ಬಿಜೆಪಿ ಸೋಲಿಗೆ ವ್ಯಂಗ್ಯವಾಡಿದ ಕಾಂಗ್ರೆಸ್ಸಿಗರಿಗೆ ಬಿ.ಎಲ್ ಸಂತೋಷ್ ಹೊಸ ಸವಾಲ್

    ಹೆಚ್‌ಡಿಡಿ ಅವರಿಂದ ಉಪಯೋಗ ಪಡೆದುಕೊಂಡು ಎಂಎಲ್‌ಎ, ಮಂತ್ರಿ, ಮುಖ್ಯಮಂತ್ರಿ ಎಲ್ಲ ಖಾತೆ ಅನುಭವಿಸಿದ್ದಾರೆ. ಈಗಲೂ ಅವರನ್ನು ಬಿಡಲು ತಯಾರು ಇಲ್ಲ . ನಮಗೆ ಇಂತಹ ವಯಸ್ಸಿನಲ್ಲಿ ನಮ್ಮ ತಂದೆ ನೋಡಿಕೊಳ್ಳುವ ಭಾಗ್ಯ ಸಿಗಲಿಲ್ಲ. ನಾನು ಆಗಿದ್ರೆ ಅವರು ಕೂತಿದ್ದ ಕಡೆ ಬಹಳ ಸುಖದ ನೆಮ್ಮದಿಯಿಂದ ನೋಡಿಕೊಳ್ಳುತ್ತಿದ್ದೆ ಎನ್ನುವ ಮೂಲಕ ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಕುಟುಕಿದ್ದಾರೆ. ಇದನ್ನೂ ಓದಿ: ಸೋಮವಾರ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಟೀಲ್ ರಾಜೀನಾಮೆ?

  • ಮಂಡ್ಯ ಬಿಟ್ಟು ಬೇರೆ ಯಾವ ಜಿಲ್ಲೆ ಜನರಿಗೂ ಹೆಚ್‌ಡಿಕೆ ಭರವಸೆ ಮೇಲೆ ನಂಬಿಕೆಯಿಲ್ಲ – ಚಲುವರಾಯಸ್ವಾಮಿ

    ಮಂಡ್ಯ ಬಿಟ್ಟು ಬೇರೆ ಯಾವ ಜಿಲ್ಲೆ ಜನರಿಗೂ ಹೆಚ್‌ಡಿಕೆ ಭರವಸೆ ಮೇಲೆ ನಂಬಿಕೆಯಿಲ್ಲ – ಚಲುವರಾಯಸ್ವಾಮಿ

    ಮಂಡ್ಯ: ಮಂಡ್ಯ ಬಿಟ್ಟು ಬೇರೆ ಯಾವ ಜಿಲ್ಲೆಯಲ್ಲೂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರ ಭರವಸೆಯ ಮೇಲೆ ಜನರಿಗೆ ನಂಬಿಕೆ ಇಲ್ಲ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಕಾಲೆಳೆದಿದ್ದಾರೆ.

    ಮಂಡ್ಯ (Mandya) ಜಿಲ್ಲೆಯ ನಾಗಮಂಗಲ (Nagamangala) ಕ್ಷೇತ್ರದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ನನಗೆ 123 ಸೀಟು ಬಂದರೆ ಪಂಚರತ್ನ (Pancharathna) ಯೋಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಾಗೂ 123 ಸೀಟು ಬರಲಿಲ್ಲ ಅಂದರೆ ನೀವ್ಯಾರು ನನ್ನನ್ನು ಏನೂ ಕೇಳಬಾರದು ಎಂದು ಕೂಡಾ ಹೇಳಿದ್ದಾರೆ. ಬೆಳಗಾವಿ, ಮಂಗಳೂರು, ಗುಲ್ಬರ್ಗ, ಕೋಲಾರದಲ್ಲಿ ಅವರು ಭರವಸೆ ಕೇಳಲ್ಲ. ಬರೀ ಮಂಡ್ಯದಲ್ಲಿ ಕೇಳಿದರೆ ಏನು ಪ್ರಯೋಜನ ಎನ್ನುವ ಮೂಲಕ ಈ ಬಾರಿ ಮಂಡ್ಯ ಜನರು ಜೆಡಿಎಸ್ (JDS) ಬೆಂಬಲಿಸದೆ ಕಾಂಗ್ರೆಸ್ (Congress) ಬೆಂಬಲಿಸಿ ಎಂದರು. ಇದನ್ನೂ ಓದಿ: ನನ್ನ ಹೇಳಿಕೆ ತಿರುಚಿದ್ದಾರೆ: ಡಿಕೆಶಿನ ಹೈಕಮಾಂಡ್ ಸಿಎಂ ಮಾಡಲ್ಲ ಹೇಳಿಕೆಗೆ ಸಿದ್ದು ಸ್ಪಷ್ಟನೆ 

    31 ಜಿಲ್ಲೆಯ ಎಲ್ಲಾ ವರ್ಗದ ಜನ ಅವರ ಭರವಸೆಯ ಬಗ್ಗೆ ನಂಬಿಕೆ ಇಟ್ಟರೆ ಜೆಡಿಎಸ್‌ಗೆ 123 ಸೀಟ್ ಬರಬಹುದು. ಆದರೆ ಮಂಡ್ಯ ಬಿಟ್ಟು ಬೇರೆ ಯಾವ ಜಿಲ್ಲೆಯಲ್ಲೂ ಅವರ ಭರವಸೆಯ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸಿಎಂ ಆಗೋ ಕನಸು ನನಸಾಗಲ್ಲ: ಬೊಮ್ಮಾಯಿ

    ಕುಮಾರಸ್ವಾಮಿ ಅವರಿಗೆ ಯಾವ ಪಕ್ಷವೂ ಅಧಿಕಾರಕ್ಕೆ ಬರಬಾರದು. ನಮ್ಮನ್ನು ಮಧ್ಯದಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಅಂದುಕೊಂಡಿದ್ದಾರೆ. ಕಳೆದ ಬಾರಿ ಮಂಡ್ಯ ಜಿಲ್ಲೆಯ ಜನರ ಆಶೀರ್ವಾದದಿಂದ 37 ಸೀಟ್ ಬಂತು. ಹೀಗಾಗಿ ಕಾಂಗ್ರೆಸ್, ಬಿಜೆಪಿ (BJP) 113 ಸೀಟ್ ದಾಟಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಕುಮಾರಸ್ವಾಮಿಯವರ ಮನೆಗೆ ಹೋಗಿ ಅವರನ್ನು ಸಿಎಂ ಮಾಡಿತ್ತು. ಆದರೆ ಅವರು ಸರಿಯಾಗಿ ಅಧಿಕಾರ ಮಾಡಲಿಲ್ಲ. ಈ ಬಾರಿಯಾದರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಜನರಲ್ಲಿ ಮನವಿ ಮಾಡಿದರು. ಇದನ್ನೂ ಓದಿ: ಶಾಸಕ ಟಿ.ಡಿ ರಾಜೇಗೌಡ ಹಂಚಿದ್ದ ಕುಕ್ಕರ್ ಬ್ಲಾಸ್ಟ್- ರೊಚ್ಚಿಗೆದ್ದ ಹಳ್ಳಿಗರು