ಬೆಂಗಳೂರು: ಸಂವಿಧಾನದ ಅಡಿಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಧ್ವಜ ಹಾರಿಸಲಷ್ಟೇ ಅವಕಾಶವಿದೆ. ಇದರ ಹೊರತಾಗಿ ಯಾವುದೇ ರಾಜಕೀಯ, ಧಾರ್ಮಿಕ ಧ್ವಜ ಹಾರಿಸಲು ಅವಕಾಶವಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ (N Chaluvarayaswamy) ತಿಳಿಸಿದರು.
ಕೆರಗೋಡು (Keragodu) ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹನುಮ ಧ್ವಜ (Hanuman Flag) ಹಾರಿಸಿರುವ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ರಾಷ್ಟ್ರೀಯ ಧ್ವಜ ಹಾರಿಸಬಹುದು. ಅದನ್ನು ಹೊರತುಪಡಿಸಿ ಸರ್ಕಾರಿ ಜಾಗದಲ್ಲಿ ಬೇರೆ ಧ್ವಜವನ್ನು ಹಾರಿಸುವಂತಿಲ್ಲ. ತ್ರಿವರ್ಣ ಧ್ವಜಕ್ಕೆ ಅನುಮತಿ ಪಡೆದು ಬೇರೆ ಧ್ವಜ ಹಾರಿಸೋದು ತಪ್ಪು. ಸೋಮವಾರ ಬೆಳಗ್ಗೆ ಡಿಸಿ ಕಚೇರಿ ಮುಂದೆ ಹಾರಿಸುತ್ತೇನೆ ಎನ್ನುತ್ತಾರೆ. ಆಗ ಅವಕಾಶ ಕೊಡಲು ಆಗುತ್ತಾ? ಇದು ಒಂದು ಕಡೆ ಅವಕಾಶ ಕೊಟ್ಟರೆ ಎಲ್ಲಾ ಕಡೆ ಕೇಳುತ್ತಾರೆ. ಇದು ತಪ್ಪು ಎಂದರು. ಇದನ್ನೂ ಓದಿ: ಕಸ ಮತ್ತೆ ಡಸ್ಟ್‌ಬಿನ್‌ಗೆ ಹೋಗಿದೆ – ಪಕ್ಷ ತೊರೆದ ನಿತೀಶ್ ಕುಮಾರ್‌ಗೆ ಲಾಲೂ ಪುತ್ರಿ ಟಾಂಗ್
ನಾನು ರಾಮ ಭಕ್ತ, ನಮ್ಮ ಮನೆ ದೇವರು ವಿಷ್ಣು. ನಾವು ಯಾವುದೇ ಧ್ವಜದ ವಿರೋಧಿಗಳಲ್ಲ. ಪಂಚಾಯತ್‌ನ ಸಭೆಯಲ್ಲಿ ಹನುಮ ಧ್ವಜ ಹಾರಿಸಲು ಅನುಮೋದನೆ ನೀಡಿದರೆ ತಪ್ಪು. ಅವರ ವಿರುದ್ಧವೂ ಕ್ರಮ ಆಗುತ್ತದೆ. ಇದರಲ್ಲಿ ನಾನಾಗಲಿ, ಸ್ಥಳೀಯ ಶಾಸಕರಾಗಲಿ ರಾಜಕೀಯ ಮಾಡುತ್ತಿಲ್ಲ. ಸರ್ಕಾರಿ ಕಚೇರಿ ಮುಂದೆ ಹನುಮ ಧ್ವಜ ಹಾರಿಸಿರುವುದು ಸಂವಿಧಾನಕ್ಕೆ ವಿರುದ್ಧ ಆಗಿರುವುದರಿಂದ ಅದನ್ನು ತೆರವು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಾಷ್ಟ್ರ ಧ್ವಜ ಹಾರಿಸೋ ಬದಲು ಹನುಮ ಧ್ವಜ ಹಾರಿಸಿದ್ದು ಸರಿಯಲ್ಲ – ಸಿದ್ದರಾಮಯ್ಯ
ಮಂಡ್ಯ: ಜಿಲ್ಲೆಯಲ್ಲಿ ಜೆಡಿಎಸ್ (JDS) ನಾಯಕರು ಹಾಗೂ ಸಚಿವ ಚಲುವರಾಯಸ್ವಾಮಿ ನಡುವೆ ಚಡ್ಡಿ ಪಾಲಿಟಿಕ್ಸ್ ತಾರಕಕ್ಕೇರಿದೆ. ಬಿಜೆಪಿಯವರು ಹೇಳಿದರೆ ಕುಮಾರಸ್ವಾಮಿ (H.D.Kumaraswamy) ಚಡ್ಡಿನೂ ಹಾಕ್ತಾರೆ, ಮಾಲೆನೂ ಎಂದಿದ್ದ ಸಚಿವ ಚಲುವರಾಯಸ್ವಾಮಿಗೆ (Chaluvaraya Swamy) ಜೆಡಿಎಸ್ ನಾಯಕರು ಟಾಂಗ್ ನೀಡಿದ್ದಾರೆ.
ಬುಧವಾರ ಚಲುವರಾಯಸ್ವಾಮಿಗೆ ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮದೇ ಶೈಲಿನಲ್ಲಿ ವಾಗ್ದಾಳಿ ನಡೆಸಿದ್ದರು. ಇಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಸುರೇಶ್‌ಗೌಡ (Suresh Gowda) ವಾಗ್ದಾಳಿ ನಡೆಸಿದ್ದಾರೆ. ಚಲುವರಾಯಸ್ವಾಮಿ ಮೊದಲೇ ಚಡ್ಡಿ ಹಾಕಲ್ಲ. ಇವರಿಗೆ ಯಾರು ಹೇಳಬೇಕು ಚಡ್ಡಿ ಹಾಕು ಅಂತ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಮ್ಮ ವರದಿ ನೈಜವಾಗಿ, ವೈಜ್ಞಾನಿಕವಾಗಿದೆ: ಕಾಂತರಾಜು
ಡಿ.ಕೆ.ಶಿವಕುಮಾರ್ ಅಥವಾ ಸಿದ್ದರಾಮಯ್ಯ ಹೇಳಬೇಕಾ? ಇವರಿಗೆ ಯಾಕೆ ನಮ್ಮ ವಿಷಯ. ಇವರದ್ದು ಎಷ್ಟಿದೆ ಅಷ್ಟು ನೋಡಿಕೊಳ್ಳಬೇಕು. ಈತನಿಗೆ ಪ್ಯಾಂಟ್ ಹಾಕೋದು ಕಲಿಸಿದ್ದವರು ಯಾರು? ಚಲುವರಾಯಸ್ವಾಮಿಗೆ ಚಡ್ಡಿ ಹಾಕಿದ್ರೆ ತೊಂದರೆ ಆಗಬಹುದು. ಅದಕ್ಕೆ ಆತ ಚಡ್ಡಿ ವಿಚಾರ ಹೇಳ್ತಾ ಇದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅಸಮಾಧಾನಿತ ನಾಯಕ ರಮೇಶ್ ಜಾರಕಿಹೊಳಿ ಮನೆಗೆ ವಿಜಯೇಂದ್ರ ಭೇಟಿ
ಚಡ್ಡಿ ಹಾಕೊಂಡ್ರೆ ಬಿಚ್ಚೋಕೆ ತೊಂದರೆ ಆಗಬಹುದು. ಅದಕ್ಕೆ ಚಡ್ಡಿ ಹಾಕಬಾರದೆಂದು ಚಲುವರಾಯಸ್ವಾಮಿ ತೀರ್ಮಾನ ಮಾಡಿರಬೇಕು. ಪ್ಯಾಂಟ್ ಹಾಕೋದನ್ನು ಕಲಿಸಿದ್ದು ಯಾರು? ಮಾತಾಡೋದನ್ನು ಹೇಳಿಕೊಟ್ಟೋರು ಯಾರು ಅಂತ ಅವರೇ ಹೇಳಬೇಕು. ನಾವು ಚಡ್ಡಿ ಹಾಕೋತಿವೋ ಇಲ್ಲ ಬುಂಡ ಬುಂಡ ಓಡಾಡುತ್ತಿವೋ ಇವರಿಗೆ ಯಾಕೆ? ಚಲುವರಾಯಸ್ವಾಮಿಗೆ ಕುಮಾರಸ್ವಾಮಿ ದೇವೇಗೌಡರ ಬಗ್ಗೆ ಮಾತಾಡಿದ್ರೆ ದೊಡ್ಡ ಲೀಡರ್ ಆಗ್ತೀನಿ ಎನ್ನುವ ಭ್ರಮೆಯಲ್ಲಿ ಇದ್ದಾರೆ. ಸಿದ್ದರಾಮಯ್ಯ ಅವರ ಕಿವಿ ತಂಪು ಮಾಡಲು ಹೀಗೆ ಮಾತಾಡುತ್ತಾ ಇದ್ದಾರೆ. ಇವರ ಎಲ್ಲಾ ವಿಚಾರಗಳು ಹೊರಗೆ ಬರುತ್ತವೆ. ಇವರು ಗಾಜಿನ ಮನೆಯಲ್ಲಿ ಇದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಡ್ಯ: ವಿಜಯೇಂದ್ರ (BY Vijayendra) ಪಾಪ ಇನ್ನೂ ಮಗು. ಆತನಿಗೆ ಇನ್ನೂ ಏನೂ ಗೊತ್ತಿಲ್ಲ ಎನ್ನುವ ಮೂಲಕ ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ಮಾಡಿದ್ದ ನೂತನ ಬಿಜೆಪಿ ರಾಜ್ಯಾಧ್ಯಕ್ಷರಿಗೆ ತಮ್ಮ ಮಾತಿನ ಮೂಲಕ ಸಚಿವ ಚಲುವರಾಯಸ್ವಾಮಿ (N Chaluvaraya Swamy) ಕಾಲೆಳೆದಿದ್ದಾರೆ.
ಮಂಡ್ಯ (Mandya) ಜಿಲ್ಲೆಯ ಮಳವಳ್ಳಿಯ ಹಲಗೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ (HD Kumaraswamy) ಸೌಂಡ್ ಜಾಸ್ತಿ ಆಗಿದೆ ಎಂದು ವಿಜಯೇಂದ್ರ ಸೌಂಡ್ ಜಾಸ್ತಿ ಮಾಡುತ್ತಿದ್ದಾರೆ. ಪಾಪ ವಿಜಯೇಂದ್ರಗೆ ಏನು ಗೊತ್ತು ಆತ ಇನ್ನೂ ಮಗು. ಅವರ ತಂದೆ ಸಿಎಂ ಆದಾಗ ತಂದೆ ಜೊತೆಯಲ್ಲಿ ತೊಡಗಿಸಿಕೊಂಡಿದ್ದರಿಂದ ರಾಜ್ಯದ ವಿಚಾರ ತಿಳಿದಿದ್ದೇನೆ ಅಂದರೆ ಏನೂ ಮಾಡಲು ಆಗಲ್ಲ ಎಂದರು. ಇದನ್ನೂ ಓದಿ: ದೇಶದ ವ್ಯವಸ್ಥೆಯಲ್ಲಿ ಕಳ್ಳರು ಒಂದೇ, ಸುಳ್ಳರು ಒಂದೇ.. ಭಗವಂತ ಇದ್ದಾನೆ: ಹೆಚ್‌ಡಿಕೆ
ಪಕ್ಷದ ಅಧ್ಯಕ್ಷನಾಗಿ ಯಾವ ಪದ ಬಳಕೆ ಮಾಡಬೇಕು ಎಂದು ಅವರಿಗೆ ಗೊತ್ತಿಲ್ಲ. ಇವರಿಗೆ ಉತ್ತರ ಕೊಡಲು ನಮಗೆ ಗೊತ್ತಿಲ್ಲ ಅಂತಾ ಅಲ್ಲ. ಅವರಿಗಿಂತ ಹೆಚ್ಚಾಗಿ ಮಾತನಾಡುತ್ತೇವೆ. ನಾವು ಹಳ್ಳಿಯಿಂದಲೇ ಬಂದಿರೋದು. ನಮಗೂ ಭಾಷೆ ಗೊತ್ತಿದೆ. ಯಾವ ಭಾಷೆ ಬಳಸಬೇಕು ಅಂತಾನೂ ಗೊತ್ತಿದೆ. ನಮ್ಮ ನಾಲಿಗೆ ಹಿಡಿತದಲ್ಲಿ ಇರಬೇಕು ಅಂತಾ ಸುಮ್ಮನಿದ್ದೇವೆ ಅಷ್ಟೇ ಎಂದು ಕಿಡಿಕಾರಿದರು. ಇದನ್ನೂ ಓದಿ: ಪುತ್ರನ ಚುನಾವಣೆಗೆ ಸಿಎಂ ಇಬ್ರಾಹಿಂ ನನ್ನಿಂದ ಹಣ ಪಡೆದಿದ್ದಾರೆ: ಟಿಎ ಶರವಣ
ವಿಜಯೇಂದ್ರಗೆ ಪಕ್ಷದಲ್ಲಿ ತುಂಬಾ ವ್ಯತ್ಯಾಸ ಇದೆ. ಅವರನ್ನು ಯಾರೂ ಅಧ್ಯಕ್ಷರನ್ನಾಗಿ ಒಪ್ಪಲು ತಯಾರಿಲ್ಲ. ಈಗ ಅಶೋಕ್ ಮನೆ ಮನೆಗೆ ಹೋಗಿ ಸಮಾಧಾನ ಮಾಡುತ್ತೇವೆ ಎಂದಿದ್ದಾರೆ. ಇಲ್ಲಿಯೇ ಅವರ ಪಕ್ಷ ಅವರನ್ನು ಎಷ್ಟು ಒಪ್ಪಿಕೊಂಡಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಬದಲಾವಣೆ ಬಗ್ಗೆ ಮಾತಾಡೋಕೆ ಯಾರಿಗೂ ಯೋಗ್ಯತೆ ಇಲ್ಲ: ನರೇಂದ್ರಸ್ವಾಮಿ
ಮಂಡ್ಯ: ಬಿಜೆಪಿ (BJP) ಅವರು ಹೇಳಿದರೆ ಕುಮಾರಸ್ವಾಮಿ (HD Kumaraswamy) ಚಡ್ಡಿನೂ ಹಾಕುತ್ತಾರೆ, ದತ್ತ ಮಾಲೆಯನ್ನೂ ಸಹ ಹಾಕಿಕೊಳ್ಳುತ್ತಾರೆ ಎನ್ನುವ ಮೂಲಕ ಕುಮಾರಸ್ವಾಮಿ ವಿರುದ್ಧ ಮತ್ತೆ ಸಚಿವ ಚಲುವರಾಯಸ್ವಾಮಿ (N Chaluvaraya Swamy) ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ (Mandya) ಜಿಲ್ಲೆಯ ಮಳವಳ್ಳಿಯ ಹಲಗೂರಿನಲ್ಲಿ ಬರ ಅಧ್ಯಯನ ವೇಳೆ ಮಾತನಾಡಿದ ಅವರು, ಕುಮಾರಸ್ವಾಮಿಗೆ ಈ ರಾಜ್ಯದ ಜವಾಬ್ದಾರಿ ಹಾಗೂ ಜನರ ಸಮಸ್ಯೆ ಮುಖ್ಯ ಅಲ್ಲ. ಕುಮಾರಸ್ವಾಮಿ ಯಾವತ್ತೂ ಜನರ ಸಮಸ್ಯೆ ಬಗ್ಗೆ ಮಾತನಾಡಿಲ್ಲ. ಎರಡು ಮೂರು ತಿಂಗಳಿನಿಂದ ಹಿಡಿತ ಇಲ್ಲದೆ ಮಾತನಾಡುತ್ತಿದ್ದಾರೆ. ಅವರ ರೀತಿ ಮಾತನಾಡುವುದು ಸರಿ ಅಂದರೆ ನಾನು ಅವರಪ್ಪನ ರೀತಿ ಮಾತಾಡುತ್ತೇನೆ ಎಂದು ಹರಿಹಾಯ್ದರು. ಇದನ್ನೂ ಓದಿ: ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಸತೀಶ್ ಜಾರಕಿಹೊಳಿ ಸಿಎಂ ಆಗುವುದು ಅಷ್ಟೇ ಸತ್ಯ: ಸವದತ್ತಿ ಶಾಸಕ
ಅವರಿಗೆ ಯಾವ ಸಚಿವರು ಕರೆ ಮಾಡಿದ್ದಾರೆ ಅಂತಾ ದಾಖಲೆ ಬಿಡುಗಡೆ ಮಾಡಲಿ. ಅವರ ಬಳಿ ಪೆನ್‌ಡ್ರೈವ್ (Pendrive) ಬಿಡುಗಡೆ ಮಾಡಿ ಅಂತಾ ಹೇಳಿದ್ದೆವು. ಆದರೆ ಈಗ ಮಂತ್ರಿಗಳು ಕರೆ ಮಾಡಿ ಬಿಡುಗಡೆ ಮಾಡಬೇಡಿ ಅಂತಾ ಹೇಳಿದ್ದಾರೆ ಎನ್ನುತ್ತಾರೆ. ಅದ್ಯಾವ ಮಂತ್ರಿ ಅಂತಾ ಹೇಳಲಿ. ಅವರ ಹತ್ತಿರ ಇರೋದು ಪೆನ್‌ಡ್ರೈವ್ ಅಲ್ಲ, ಪೆನ್ಸಿಲ್‌ಡ್ರೈವ್ ಇರೋದು ಅಳಿಸಿ ಹೋಗಿದೆ. ಕುಮಾರಸ್ವಾಮಿ ಉಪಯೋಗಿಸುವ ಭಾಷೆ ಸರಿ ಇದೆಯಾ ಹೇಳಿ? ಮೊನ್ನೆ ಕುಮಾರಸ್ವಾಮಿ ನಾವು ಜಾತ್ಯತೀತ ಅಂದರು. ಮುಸ್ಲಿಂ, ದಲಿತ, ಹಿಂದುಳಿದವರ ಪರ ಅಂದು ಜಾತ್ಯತೀತ ಅಂತಾ ಹೆಸರಿಟ್ಟುಕೊಂಡಿದ್ದರು. ಈಗ ದತ್ತ ಮಾಲೆ ಹಾಕುತ್ತೀನಿ ಎನ್ನುತ್ತಾರೆ. ಯಾವುದನ್ನು ಹಾಕಿಕೊಳ್ಳುತ್ತಾರೋ ಯಾರ ಪರ, ಯಾವ ಸಮಾಜದ ಪರ ನಿಲ್ಲುತ್ತಾರೋ ನಮಗೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಸೆಬಿಯಲ್ಲಿರುವ ಸಹಾರಾ ಗ್ರೂಪ್‌ನ 25,000 ಕೋಟಿ ಹಣ ಯಾರಿಗೆ ಸೇರುತ್ತೆ?
ಕುಮಾರಸ್ವಾಮಿ ಈಗ ಬಿಜೆಪಿ ಏನು ಹೇಳಿದರೂ ಕೇಳುತ್ತಾರೆ. ಚಡ್ಡಿ ಹಾಕಿಕೊಳ್ಳಲು ರೆಡಿ ಇದ್ದಾರೆ, ದತ್ತ ಮಾಲೆ ಹಾಕಿಕೊಳ್ಳಲು ರೆಡಿ ಇದ್ದಾರೆ. ಅದರಿಂದ ನಮಗೆ ಏನು ಬೇಜಾರಿಲ್ಲ. ಅವರು ಚಡ್ಡಿ ಹಾಕಿಕೊಂಡರೂ ಸಂತೋಷ. ದತ್ತ ಮಾಲೆ ಹಾಕಿಕೊಂಡರೂ ಸಂತೋಷ. ಅದು ಅವರ ರಾಜಕಾರಣ, ಅವರು ಮಾಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: Exclusive: ನಾನು ಬ್ಲೂ ಫಿಲಂ ತೋರಿಸಿದ್ರೆ ರಾಜಕೀಯ ನಿವೃತ್ತಿ: ಡಿಕೆಶಿ
ಮಂಡ್ಯ: ಒಬ್ಬ ಮಾಜಿ ಎಂಎಲ್‌ಎ ರಾಜಕೀಯವಾಗಿ ಭಾಗಿಯಾಗೋದು ಹಾಗೂ ಸಾರ್ವಜನಿಕ ಸೇವೆಯಲ್ಲಿ ಇರೋದು ಅಪರಾಧವಲ್ಲ ಎನ್ನುವ ಮೂಲಕ ಸಚಿವ ಚಲುವರಾಯಸ್ವಾಮಿ (Chaluvaraya Swamy) ಯತೀಂದ್ರ (Yathindra Siddaramaiah) ಪರ ಬ್ಯಾಟಿಂಗ್ ಮಾಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ಬೇರೆ ಅವರ ಕುಟುಂಬದಲ್ಲಿ ರಾಜಕೀಯ ಮಾಡುವಾಗ ಓಡಾಡುತ್ತಾ ಇರಲಿಲ್ವಾ? ಯತೀಂದ್ರ ಒಬ್ಬರು ಮಾಜಿ ಎಂಎಲ್‌ಎ, ಖಾಲಿ ಮನುಷ್ಯ ಅಲ್ಲ. ಸಿದ್ದರಾಮಯ್ಯ ಅವರು ವರುಣಾದಲ್ಲಿ ನಿಂತ ಕಾರಣ ಅವರು ನಿಲ್ಲಲು ಆಗಲಿಲ್ಲ. ಮೈಸೂರು ಜಿಲ್ಲೆಯಲ್ಲಿ, ಪಕ್ಷದಲ್ಲಿ ಯತೀಂದ್ರ ಪ್ರಮುಖವಾದ ಲೀಡರ್. ಮಾಜಿ ಎಂಎಲ್‌ಎಗಳು ಕೆಲಸ ಮಾಡೋದನ್ನು ತಪ್ಪು ಎನ್ನೋದಕ್ಕೆ ಆಗುತ್ತಾ? ಇಂತವರು ಲಿಸ್ಟ್ ಆಗಬೇಕು ಎನ್ನುವ ನೇಚರ್ ಯತೀಂದ್ರ ಅವರದಲ್ಲ ಎಂದರು.
ವೀಡಿಯೋದಲ್ಲಿ ಯಾವ ವಿಚಾರ ಹೇಳಿದ್ರೋ ಏನೋ ಗೊತ್ತಿಲ್ಲ. ಯಾರು ಆ ವೀಡಿಯೋ ಕಟ್ ಆಂಡ್ ಪೇಸ್ಟ್ ಮಾಡಿದ್ರೋ ಗೊತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕಟ್ ಆಂಡ್ ಪೇಸ್ಟ್ ಮಾಡುತ್ತಾರೆ. ಮಾತಾಡಿದ ರೀತಿ ಬೇರೆ ಇರುತ್ತೆ, ತೋರಿಸೋದು ಬೇರೆ ಇರುತ್ತೆ. ಯತೀಂದ್ರ ಒಬ್ಬರು ಒಳ್ಳೆಯ ವ್ಯಕ್ತಿ ಎಂದು ಹೇಳಿದರು. ಇದನ್ನೂ ಓದಿ: ಅಪ್ಪ-ಮಗ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ: ಹೆಚ್‌ಡಿಕೆ
ತಂದೆಯ ಬಳಿ ಯತೀಂದ್ರ ಆ ರೀತಿ ಮಾತಾಡೋದು ಎಲ್ಲಿಯೂ ನಾನು ನೋಡಿಲ್ಲ. ರಾಜಕೀಯವಾಗಿ ಭಾಗಿಯಾಗೋದು, ಸಾರ್ವಜನಿಕ ಸೇವೆಯಲ್ಲಿ ಇರೋದು ಅಪರಾಧವಲ್ಲ. ವರುಣಾ ಅಲ್ಲ ಇಡೀ ರಾಜ್ಯದಲ್ಲಿ ಕೆಲಸ ಮಾಡಲಿ ಬಿಡಿ, ಅದ್ರಲ್ಲಿ ತಪ್ಪೇನಿದೆ? ನಮ್ಮ ಕಾಂಗ್ರೆಸ್ ಮುಖಂಡರು ಕೆಲ ಸಮಸ್ಯೆ ಗಮನಕ್ಕೆ ತಂದರೆ ತಪ್ಪೇನಿದೆ? ನಮ್ಮಲ್ಲೂ ಕೆಲ ಕಡೆ ಪಿಡಿಒ ಸರಿ ಇಲ್ಲ, ಬೇರೆ ಹಾಕಿ ಎನ್ನುತ್ತಾರೆ. ಅದನ್ನು ನಾವು ತಪ್ಪು ಎನ್ನೋದಕ್ಕೆ ಆಗುತ್ತಾ? ಸಲಹೆ ಕೊಡುವುದರಲ್ಲಿ ತಪ್ಪೇನಿಲ್ಲ ಎನ್ನುವ ಮೂಲಕ ಯತೀಂದ್ರ ಸಿದ್ದರಾಮಯ್ಯರನ್ನು ಸಚಿವ ಚಲುವರಾಯಸ್ವಾಮಿ ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಿಎಂ ಪುತ್ರನ ಎಡವಟ್ಟು – ಯತೀಂದ್ರ ಹೇಳಿದ ಮಹದೇವ್ ಯಾರು?
ರಾಯಚೂರು: ಪಾಪ ಹೆಚ್‌ಡಿ ಕುಮಾರಸ್ವಾಮಿ (HD Kumaswamy) ಅವರು ಬರಗಾಲ ಹಿನ್ನೆಲೆ ಯಾತ್ರೆ ಮಾಡಲೇಬೇಕು. ಅವರು ಅಧಿಕಾರದಲ್ಲಿದ್ದಾಗ ಏನೂ ಮಾಡಲು ಆಗಲಿಲ್ಲ. ಲೋಕಸಭಾ ಚುನಾವಣೆ ಸಮಯದಲ್ಲಿ ಯಜಮಾನ್ರು ಫ್ರೀಯಾಗಿದ್ದಾರಲ್ಲಾ, ಸುತ್ತಾಡಲಿ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ (Chaluvaraya Swamy) ಲೇವಡಿ ಮಾಡಿದ್ದಾರೆ.
ರಾಯಚೂರಿನಲ್ಲಿ (Raichur) ಮಾತನಾಡಿದ ಚೆಲುವರಾಯಸ್ವಾಮಿ, ಹೆಚ್‌ಡಿಕೆ ಸಿಎಂ ಆಗಿದ್ದಾಗ ಕೋಆಪರೇಟಿವ್‌ನಲ್ಲಿ ಸಾಲ ಮನ್ನಾ ಎಂದು ಹಲವಾರು ಕಂಡೀಷನ್ ಹಾಕಿದ್ರು. ಹಣಕಾಸು ಇಲಾಖೆಯಿಂದ ಒಂದು ರೂಪಾಯಿ ಬಿಡುಗಡೆ ಆಗಲಿಲ್ಲ. ಬೊಮ್ಮಾಯಿ ಬಂದಾಗ ಏನೋ ಸ್ವಲ್ಪ ಮಾಡಿದ್ದಾರೆ ಎಂದು ಹೇಳಿದರು.
ರೈತರು ಯಾರು ಸಾಲ ತಗೊಳಂಗಿಲ್ಲಾ ಅವರೆಲ್ಲಾ ಸುಸ್ತಿಯಲ್ಲಿದ್ದಾರೆ. ರೈತರ ಸಮಸ್ಯೆಗಳೆಲ್ಲಾ ಹೆಚ್‌ಡಿಕೆಗೆ ಗೊತ್ತಿದೆ. ಲೋಕಸಭಾ ಚುನಾವಣೆ ಬಂದಿದೆ, ಓಡಾಡಲಿ. ಅವರು ಒಳ್ಳೆಯ ಸಲಹೆಗಳನ್ನು ಕೊಟ್ಟರೆ ತೆಗೆದುಕೊಳ್ಳೋಣ. ಹಿಂದೆ 2 ಬಾರಿ ಅಧಿಕಾರದಲ್ಲಿದ್ದಾಗ ಯಜಮಾನ್ರು ಏನು ಮಾಡಿದ್ದಾರೆ ಅನ್ನೋದನ್ನು ನೋಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಅಧಿಕಾರಿ ಹತ್ಯೆಗೆ ಸರ್ಕಾರದ ವೈಫಲ್ಯವೇ ಕಾರಣ: ಹೆಚ್‌ಡಿಕೆ
ಸಿಎಂ ಕುರ್ಚಿ ವಿಚಾರದ ಬಗ್ಗೆ ಯಾರು ಯಾವಾಗ ಏನು ಅಂತ ನಿರ್ಧಾರ ಮಾಡೋದಕ್ಕೆ ಕಾಂಗ್ರೆಸ್ ಪಕ್ಷವಿದೆ. ಕುಮಾರಸ್ವಾಮಿಯವರಿಗೆ ಚಿಂತೆ ಬೇಡ. ಹೆಚ್‌ಡಿಕೆ ಹೇಳಿಕೆಗೆ ಕಾಂಗ್ರೆಸ್ ಸೇರ್ಪಡೆಯಾಗಿ ಅಂತ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕುಮಾರಸ್ವಾಮಿ ಈಗಾಗಲೇ ಬಿಜೆಪಿಗೆ ಹೋಗಿದ್ದಾರೆ. ಬಿಜೆಪಿಯಲ್ಲಿ ಅವರಿಗೆ ಸರಿಯಾದ ಮಾನ್ಯತೆ ಸಿಗದೇ ಇದ್ದರೆ ಈ ಕಡೆ ತಿರುಗಿ ನೋಡ್ತಾರೆ ಅಂತ ಕಾಣುತ್ತೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು. ಇದನ್ನೂ ಓದಿ: ಗೋಮಾಂಸ ರಫ್ತು ಮಾಡುವುದರಲ್ಲಿ ಭಾರತಕ್ಕೆ 2ನೇ ಸ್ಥಾನ, ಇದರ ಶ್ರೇಯಸ್ಸು ಮೋದಿಗೆ ಸಲ್ಲಬೇಕು: ಲಾಡ್ ಟೀಕೆ
ಬೆಂಗಳೂರು: ನೀರಿಗಾಗಿ ರೈತರು ಪ್ರತಿಭಟನೆ ಮಾಡಿ ಸಮಸ್ಯೆ ಸರ್ಕಾರದ ಗಮನಕ್ಕೆ ತರುತ್ತಿದ್ದಾರೆ, ಒಳ್ಳೆಯದು ಎಂದು ಸಚಿವ ಚಲುವರಾಯಸ್ವಾಮಿ (Chaluvarayswamy) ಹೇಳಿದ್ದಾರೆ.
ವಿಧಾನಸೌಧದಲ್ಲಿ (Vidhanasoudha) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು (Cauvery Water) ಬಿಡುಗಡೆ ವಿಚಾರವಾಗಿ ರೈತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದರು. ನೀರಿಗಾಗಿ ರೈತರು ಪ್ರತಿಭಟನೆ ಮಾಡಿ ಸಮಸ್ಯೆ ಸರ್ಕಾರದ ಗಮನಕ್ಕೆ ತರುತ್ತಿದ್ದಾರೆ. ಒಳ್ಳೆಯದು ಆದರೆ ಬಿಜೆಪಿ ಪ್ರತಿಭಟನೆ ಬಗ್ಗೆ ಏನು ಹೇಹಬೇಕು ಅಂತ ಗೊತ್ತಾಗ್ತಿಲ್ಲ ಎಂದರು.
ತಮಿಳುನಾಡು (Tamilnadu) ಕಳೆದ ಎರಡು ತಿಂಗಳು ನೀರು ಬೇಕು ಅಂತ ಕೇಳ್ತಿದ್ದಾರೆ. ಅಂತಿಮವಾಗಿ 15 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಅಂತ ಹೇಳಿದ್ರು. ಆಗದೇ ಇದ್ದಾಗ 10 ಸಾವಿರ ಕ್ಯೂಸೆಕ್ ನೀರು ಬೀಡಲಾಗಿದೆ. ಬಿಜೆಪಿ (BJP) ಸಂಸದರು ಹೈಕಮಾಂಡ್ ನಾಯಕರಿಗೆ ತಿಳುವಳಿಕೆ ಇಲ್ಲ ಅನ್ಸುತ್ತೆ.ನಾವು ತಮಿಳುನಾಡಿನ ರಾಜಕೀಯವಾಗಿ ಹೊಂದಾಣಿಕೆ ಇರಬಹುದು. ಆದರೆ ಕಾವೇರಿ ನೀರಿಗಾಗಿ ನಾವು ಹೋರಾಟ ಮಾಡುತ್ತೇವೆ. ಅವರು ಹೋರಾಟ ಮಾಡ್ತಿದ್ದಾರೆ. ಮಳೆ ಇಲ್ಲದೆ ಕಾವೇರಿ ನೀರಿನ ಮಟ್ಟ ಕಡಿಮೆ ಆಗಿದೆ. ನಾಳೆ all party meeting ಕರೆದಿದ್ದಾರೆ. ನಾಳೆ ಅಂತಿಮವಾಗಿ ಏನು ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಜೆಡಿಎಸ್ (JDS) ಆಗ್ಲಿ, ಬಿಜೆಪಿ ಆಗ್ಲಿ ನೀರಿನ ಮೇಲೆ ರಾಜಕೀಯ ಮಾಡಬಾರದು. ತಮಿಳುನಾಡಿನ ಪರವಾಗಿ ವಾದ ಬಂದರೆ 20 ಸಾವಿರ ಕ್ಯೂಸೆಕ್ ನೀರಿನ ಬಿಡಬೇಕಿತ್ತು. ಹೀಗಾಗಿ 10 ಸಾವಿರ ಕ್ಯೂಸೆಕ್ ಅಷ್ಟೇ ನೀರು ಬಿಟ್ಟಿದ್ದು ಇವರು ಮಹಾದಾಯಿ ವಿಚಾರ ಗೋವಾ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇತ್ತಲ್ವಾ..?. ಹಾಗಾದರೆ ಮಹದಾಯಿ ಸಮಸ್ಯೆ ಯಾಕೆ ಬಗೆಹರೆದಿಲ್ಲ..? ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: BJPಯಲ್ಲಿ ಅನಿವಾರ್ಯವಾಗಿ ಹೊಂದಿಕೊಂಡು ಹೋಗ್ತಿದ್ದೀನಿ – ಎಸ್.ಟಿ ಸೋಮಶೇಖರ್
ಇದೇ ವೇಳೆ ನೈಸ್ ಅಕ್ರಮದ ಬಗ್ಗೆ ಹೆಚ್‍ಡಿಕೆ (HD Kumaraswamy) ಆರೋಪದ ಬಗ್ಗೆಯು ಪ್ರತಿಕ್ರಿಯಿಸಿ, ಕೃಷಿ ಇಲಾಖೆ ಭ್ರಷ್ಟಾಚಾರದ ಆರೋಪ ತನಿಖೆಯಲ್ಲಿ ಇಬ್ಬರು ಕೃಷಿ ಅಧಿಕಾರಿಗಳು ಅರೆಸ್ಟ್ ಆಗಿದ್ದಾರೆ. ಇದಕ್ಕೆ ಯಾರು ಕಾರಣ ಹಿನ್ನೆಲೆ ಏನು ಗೊತ್ತಿಲ್ಲ. ಆ ಲೆಟರ್ ನಲ್ಲಿ ಜೆಡಿಎಸ್ (JDS) ಹೆಸರಿರೋದು, ಕುಮಾರಸ್ವಾಮಿ ಹೆಸರಿರೋದು ನಿಮಗೆ ಗೊತ್ತಿದೆ. ಈ ತರದ್ದೆಲ್ಲ ಎಷ್ಟು ನಡೆಸ್ತಾರೋ ನಡೆಸಲಿ ಎಂದು ತಿರುಗೇಟು ಕೊಟ್ಟರು.
ನೈಸ್ ವಿಚಾರದಲ್ಲಿ ಅವರು ಸಿಎಂ ಆಗಿರಲಿಲ್ವಾ? ನೈಸ್ ಯೋಜನೆ ತಂದವರು ಯಾರು? ಸ್ಟಾರ್ಟ್ ಮಾಡಿದವರು ಯಾರು? ಯೋಜನೆ ಪ್ರಾರಂಭ ಮಾಡಿದವರು ಯಾರು ಎಂಬುದೂ ಕೂಡ ಚರ್ಚೆಯಾಗಬೇಕಲ್ಲ. ರಾಜ್ಯದಲ್ಲಿ ಬೇರೆ ಎಲ್ಲ ರಸ್ತೆಗಳಿವೆ, ಟೋಲ್ ವಿಷಯಗಳಿವೆ. ಅವೆಲ್ಲವನ್ನೂ ಬಿಟ್ಟು ನೈಸ್ ರೋಡ್ ಮಾತ್ರ ಯಾಕೆ ಹಿಡಿದುಕೊಂಡಿದ್ದಾರೆ. ನೈಸ್ ವಿಚಾರ ಮಾತ್ರ ಇವರಿಗೆ ಸಾರ್ವಜನಿಕ ಹಿತದೃಷ್ಟಿಯ ವಿಚಾರವಾಯ್ತಾ…?. ನಮ್ಮ ಕಾಂಗ್ರೆಸ್ ಸರ್ಕಾರ ನೈಸ್ ಪರವಾಗಿ ಇಲ್ಲ ಎಂದಿದ್ದಾರೆ.
ಮಂಡ್ಯ: ಸಚಿವ ಸಂಪುಟದ ಸಚಿವರಿಬ್ಬರ ನಡುವೆ ಹಲವು ತಿಂಗಳುಗಳಿಂದ ಮಾತಿಲ್ಲ. ದೋಸ್ತಿಗಳಿಬ್ಬರ ನಡುವೆ ಮಹಾ ಬಿರುಕು ಬಿಟ್ಟಿದೆ ಎನ್ನುವ ಸ್ಫೋಟಕ ಮಾಹಿತಿಯನ್ನು ಮಾಜಿ ಶಾಸಕ ಸುರೇಶ್ ಗೌಡ (Suresh Gowda) ಬಿಚ್ಚಿಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸುರೇಶ್ ಗೌಡ, ಸಚಿವರಾದ ಜಮೀರ್ (Zameer Ahmed Khan), ಚಲುವರಾಯಸ್ವಾಮಿ (Chaluvaraya Swamy) ಕಳೆದ 7-8 ತಿಂಗಳಿಂದ ಮಾತನಾಡುತ್ತಿಲ್ಲ. ಚಲುವರಾಯಸ್ವಾಮಿ ಪರ ಕ್ಯಾಂಪೇನ್‌ಗೂ ಬರಲಿಲ್ಲ. ಮುನಿಸಿಗೆ ಕಾರಣ ಏನೆಂದು ಚೆಲುವರಾಯಸ್ವಾಮಿ ಉತ್ತರ ಕೊಡ್ತಾರಾ? ಕುಮಾರಸ್ವಾಮಿ ಫಾರೀನ್‌ಗೆ ಹೋಗುವ ಬಗ್ಗೆ ಮಾತನಾಡುತ್ತಾನೆ. ಕುಮಾರಣ್ಣ ಯಾವುದಾದರೂ ಕ್ಯಾಸಿನೋಗೆ ಇಸ್ಪಿಟ್ ಆಡೋಕೆ ಹೋಗಿದ್ರಾ? ಆದರೆ ಚಲುವರಾಯಸ್ವಾಮಿ ಆ ಕೆಲಸ ಮಾಡುತ್ತಾನೆ. ಎಲ್ಲೆಲ್ಲಿ ಜಮೀರ್ ಹೆಸರು ದುರ್ಬಳಕೆ ಆಗಿತ್ತು, ಏನೇನಾಗಿತ್ತು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಜೊತೆಯಲ್ಲಿ ವ್ಯಾಪಾರ ಮಾಡಿಕೊಂಡು ಹೋದವರು. ಜಮೀರ್, ಚಲುವರಾಯಸ್ವಾಮಿ, ಆಪ್ತಮಿತ್ರರು. ಒಂದು ಬಾರಿಯಾದರೂ ಮಾತಾಡೋದು ನೋಡಿದ್ದೀರಾ ಟಿವಿಯಲ್ಲಿ? ಅವರು ಈಗ್ಯಾಕೆ ಮಾತನಾಡುತ್ತಿಲ್ಲ? ಒಂದು ಕಾಲದಲ್ಲಿ ಜಮೀರ್ ಸಾಹೇಬ್ರು ಆತನಿಗೆ ನೆಂಟರಲ್ವಾ? ಈಗ್ಯಾಕೆ ಇಲ್ಲ? ಈತ ಸ್ನೇಹದ್ರೋಹಿ, ಮಿತ್ರದೋಹಿ ಕೆಲಸವನ್ನು ಕರಗತ ಮಾಡ್ಕೊಂಡಿರೋನು. ಇವನು ಕುಮಾರಣ್ಣನ ಬಗ್ಗೆ ಮಾತನಾಡ್ತಾನೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಸುರೇಶ್ ಗೌಡ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿಗೆ ಮೊದಲ ಸ್ಥಾನ ನೀಡಬೇಕು. ಚಲುವರಾಯಸ್ವಾಮಿ 300-400 ಕೋಟಿ ರೂ. ಲೂಟಿ ಹೊಡೆದಿದ್ದಾನೆ. ಮಂಡ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡಿ ದುಡ್ಡನ್ನು ಏರ್‌ಲಿಫ್ಟ್ ಮಾಡುತ್ತಿದೆ. ಹಿಂದಿನ ಸರ್ಕಾರದಲ್ಲಿ ಜೆಸಿಬಿಯಲ್ಲಿ ಹಣ ತುಂಬುತ್ತಿದ್ದಾರೆ ಎನ್ನುತ್ತಿದ್ದರು. ಆದರೆ ಈ ಸರ್ಕಾರ ಭ್ರಷ್ಟ ಹಣವನ್ನು ಏರ್‌ಲಿಫ್ಟ್ ಮಾಡುತ್ತಿದೆ. ರಾಜ್ಯವನ್ನೇ ಲೂಟಿ ಹೊಡೆಯುತ್ತಿದ್ದಾರೆ ಎಂದರು.
ಅಧಿಕಾರ ಸಿಕ್ಕಾಗ ಜನರಿಗೆ ಒಳ್ಳೆಯದು ಮಾಡಬೇಕು. ಕಡಿಮೆ ಎಂದರೂ ಇಲ್ಲಿಯವರೆಗೆ 300-400 ಕೋಟಿ ರೂ. ಲೂಟಿ ಹೊಡೆದಿದ್ದಾನೆ. ಟ್ರಾನ್ಸ್‌ಫರ್‌ನಲ್ಲಿ 150 ಕೋಟಿ, ಜಲಧಾರೆ ಯೋಜನೆಯಲ್ಲಿ 100 ಕೋಟಿ, ಅಧಿಕಾರಿಗಳ ಬಳಿ ಲೂಟಿ ಸೇರಿ 300 ಕೋಟಿ ರೂ. ಚಲುವರಾಯಸ್ವಾಮಿ ಒಬ್ಬರೇ ಮಾಡಿದ್ದಾರೆ. ಇಡೀ ಕಾಂಗ್ರೆಸ್ ಹಣ ಏರ್‌ಲಿಫ್ಟ್ ಮಾಡುತ್ತಿದೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಿಂದ ಫಂಡ್ ಹೋಗುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸೇತುವೆ ನಿರ್ಮಿಸಿಕೊಡಿ ಪ್ಲೀಸ್: ಪ್ರಧಾನಿ ಮೋದಿಗೆ ಮಕ್ಕಳ ಪತ್ರ
ಚಲುವರಾಯಸ್ವಾಮಿಗೆ ಬ್ರೈನ್ ಮ್ಯಾಪಿಂಗ್ ಮಾಡಬೇಕು. ಎಲ್ಲೆಲ್ಲಿ ಎಷ್ಟೆಷ್ಟು ತಿಂದಿದ್ದಾನೆ ಗೊತ್ತಾಗುತ್ತದೆ. ಬೆಂಗಳೂರಿನಲ್ಲಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಇದೆ. ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷನದು. ಅಲ್ಲಿ ಚಲುವರಾಯಸ್ವಾಮಿ ಎಷ್ಟು ಬ್ಲ್ಯಾಕ್ ಮನಿ ವೈಟ್ ಮಾಡಿದ್ದಾನೆ? ಅದೆಲ್ಲವೂ ಆಚೆ ಬರುತ್ತವೆ. ಇಡಿ ಕಣ್ಣು ಬಿಡಲಿದೆ. ಬೆಳ್ಳೂರು ಕ್ರಾಸ್‌ನಲ್ಲಿ ಪೆಟ್ರೋಲ್ ಬ್ಯಾಂಕ್ ಮಾಲೀಕರತ್ರ ಎಷ್ಟು ಕಲೆಕ್ಷನ್ ಮಾಡ್ತಿದಾನೆ, ಎಲ್ಲವೂ ಜನರಿಗೆ ಗೊತ್ತಿದೆ. ಮೆಜೆಸ್ಟಿಕ್‌ನಲ್ಲಿರುವ ಕೋ ಆಪರೇಟಿವ್ ಸೊಸೈಟಿ ಸರಿಯಾಗಿ ತನಿಖೆ ನಡೆಸಿದರೆ ಸಾಕು. ಸಿದ್ದರಾಮಯ್ಯ ತನಿಖೆ ಮಾಡಿಸಿದರೆ ಬ್ಲ್ಯಾಕ್ ಹೇಗೆ ವೈಟ್ ಆಗುತ್ತಿದೆ. ಯಾವ ಯಾವ ಥಿಯೇಟರ್ ತೆಗೆದುಕೊಳ್ಳದ್ದಕ್ಕೆ ಸಹಾಯ ಆಗಿದೆ ಗೊತ್ತಾಗುತ್ತದೆ. ತಿಂದವನು ಕಕ್ಕಲೇ ಬೇಕು. ಎಲ್ಲಾ ಮುಂದೆ ಗೊತ್ತಾಗುತ್ತದೆ ಎಂದು ಟಾಂಗ್ ನೀಡಿದರು.
ಅಧಿಕಾರಿಗಳು ಪತ್ರ ಬರೆದದ್ದು ಸತ್ಯ. ಬೆಂಗಳೂರಿನ 37 ಕ್ರಸೆಂಟ್ ಹೋಟೆಲ್‌ಗೆ ಕರೆಸಿಕೊಂಡು ಅಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ. ಎಲ್ಲಾ ಬಿಗಿ ಭದ್ರತೆ ಮಾಡಿಕೊಂಡು, ಅಧಿಕಾರಿಗಳ ಬಳಿ ಪತ್ರ ಬರೆದಿಲ್ಲ ಎಂದು ಸುಳ್ಳು ಹೇಳಿದ್ದಾರೆ. 37 ಕ್ರಸೆಂಟ್ ಹೋಟೆಲ್ ಹಾಗೂ ಆ ರಸ್ತೆಯ ಸಿಸಿಟಿವಿ ದೃಶ್ಯ ತೆಗೆಸಿ. ಆಗ ಯಾವ ಎಡಿ, ಜೆಡಿ ಯಾರೆಲ್ಲಾ ಹೋಗಿದ್ರು ತಿಳಿಯುತ್ತದೆ. ಪೊಲೀಸರು ಇವರನ್ನು ಕೇಳಿ ತನಿಖೆ ಮಾಡುತ್ತಾರೆ. ಅಮಾಯಕರನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಾರೆ. ಜೆಡಿ, ಎಡಿಗಳನ್ನು ಬ್ರೈನ್ ಮ್ಯಾಪಿಂಗ್ ಮಾಡಿದರೆ ಎಷ್ಟು ದುಡ್ಡು ಕೊಟ್ಟಿದ್ದಾರೆ ಅಂತ ಬಾಯಿ ಬಿಡ್ತಾರೆ. ಬ್ರೈನ್ ಮ್ಯಾಪಿಂಗ್ ನಮಗಲ್ಲ, ಚಲುವರಾಯಸ್ವಾಮಿಗೆ. ಎಲ್ಲೆಲ್ಲಿ ಎಷ್ಟೆಷ್ಟು ತಿಂದಿದ್ದಾನೆ ತಿಳಿಯಬೇಕು ಅಲ್ವಾ? ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಬಟ್ಟೆ ವ್ಯಾಪಾರಿಯ ಹಣ ಎಗರಿಸಿದ್ದ ಆರೋಪಿ 24 ಗಂಟೆಯಲ್ಲಿ ಅರೆಸ್ಟ್
ಮಂಡ್ಯ: ಮಂತ್ರಿ ಸ್ಥಾನ ಸ್ವೀಕಾರ ಮಾಡಿದಾಗಿನಿಂದ ಕೃಷಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಒಂದಲ್ಲ ಒಂದು ವಿಚಾರಕ್ಕೆ ರಾಜಕೀಯ ಪಡಸಾಲೆಯಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ. ಬಿಜೆಪಿ (BJP) ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ ಪೇಸಿಎಂ ಅಭಿಯಾನ ಮಾಡಿ ದೊಡ್ಡ ಮಟ್ಟದ ಏಟನ್ನು ನೀಡಿತ್ತು. ಇದೀಗ ಚಲುವರಾಯಸ್ವಾಮಿಯ ಮೂಲಕ ಕಾಂಗ್ರೆಸ್‍ಗೆ ಪೆಟ್ಟು ಕೊಡಲು ಬಿಜೆಪಿ ಅಂತಹದ್ದೇ ಒಂದು ಅಭಿಯಾನಕ್ಕೆ ಮುಂದಾಗಿದೆ.
ನಾಗಮಂಗಲ ಶಾಸಕ ಹಾಗೂ ಕೃಷಿ ಸಚಿವ ಸಿ.ಎಸ್.ಚಲುವರಾಯಸ್ವಾಮಿ ವಿರುದ್ಧ ಕೇಳಿಬಂದಿದ್ದ ಲಂಚ ಆರೋಪ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ (Congress) ಪೇಸಿಎಂ ಅಭಿಯಾನ ಮಾಡಿ ದೊಡ್ಡ ಮಟ್ಟದ ಏಟನ್ನು ನೀಡಿತ್ತು. ಇದೀಗ ಚಲುವರಾಯಸ್ವಾಮಿಯ ಮೂಲಕ ಕಾಂಗ್ರೆಸ್‍ಗೆ ಪೆಟ್ಟು ಕೊಡಲು ಬಿಜೆಪಿ ಪೇಸಿಎಸ್ ಅಭಿಯಾನಕ್ಕೆ ಮುಂದಾಗಿದೆ.
ಕಂಡಕ್ಟರ್ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣ ಕ್ಲೀನ್‍ಚಿಟ್ ಬೆನ್ನಲ್ಲೇ ಕೃಷಿ ಇಲಾಖೆಯ ಲಂಚಕ್ಕೆ ಒತ್ತಡ ಹಾಕಿರುವ ಆರೋಪ ಚಲುವರಾಯಸ್ವಾಮಿ ಬೆನ್ನಿಗೆ ಬಿದ್ದಿದೆ. ಕಳೆದ ತಿಂಗಳು ಕಂಡಕ್ಟರ್ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣದ ಸಿಐಡಿ ತನಿಖೆಯನ್ನು ಚಲುವರಾಯಸ್ವಾಮಿ ಎದುರಿಸಿದ್ದರು. ಆ ಪ್ರಕರಣದಲ್ಲಿ ಚಲುವರಾಯಸ್ವಾಮಿಗೆ ಕ್ಲೀನ್‍ಚೀಟ್ ಸಿಕ್ಕಿತ್ತು. ಈ ಬೆನ್ನಲ್ಲೇ ಕೃಷಿ ಇಲಾಖೆಯ ಅಧಿಕಾರಿಗಳ ಬಳಿ ಲಂಚ ಬೇಡಿಕೆ ಆರೋಪದಡಿ ಸಿಐಡಿ ತನಿಖೆಯನ್ನು ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಯುವತಿ ಮದ್ವೆಗೆ ಒಪ್ಪಿಲ್ಲ ಅಂತ 850 ಅಡಿಕೆ ಗಿಡ ನಾಶ ಮಾಡಿದ ಕಿರಾತಕ
ಇನ್ನೊಂದೆಡೆ ಬಿಜೆಪಿ ಪೇಸಿಎಸ್ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡ್ತಾ ಇದೆ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ ಪೇಸಿಎಂ ಎಂಬ ಅಭಿಯಾನ ಮಾಡಿ ಬಿಜೆಪಿಗೆ ತೀವ್ರ ಮುಜುಗರ ತಂದಿತ್ತು. ಇದ್ದನ್ನೇ ಇದೀಗ ಅಸ್ತ್ರವನ್ನು ಮಾಡಿಕೊಂಡಿರುವ ಬಿಜೆಪಿ, ಸಾಮಾಜಿಕ ಜಾಲ ತಾಣದಲ್ಲಿ ಕ್ಯೂಆರ್ ಕೋಡ್ ಬಳಕೆ ಮಾಡಿಕೊಂಡು ಪೇಸಿಎಸ್ ಎಂದು ಮಾಡಿ 6 ರಿಂದ 8 ಲಕ್ಷ ರೂಪಾಯಿಯನ್ನು ಇಲ್ಲಿ ಪಡೆಯಲಾಗುತ್ತದೆ ಎಂದು ಹಾಕಲಾಗಿದೆ. ಜೊತೆಗೆ ಟ್ಯಾಗ್‍ಲೈನ್‍ನಲ್ಲಿ ಸ್ಕ್ಯಾನ್ ಮಾಡಿ ಚಲುವರಾಯಸ್ವಾಮಿಯ ಭ್ರಷ್ಟಾಚಾರ ಹೊರ ಬರುತ್ತೆ ನೋಡಿ ಎಂದು ಹಾಕಿದ್ದಾರೆ. ಈ ಪೇಸಿಎಸ್ ಮೂಲಕ ಕೃಷಿ ಇಲಾಖೆಯ ಟ್ರಾನ್ಸ್ ಫರ್ ಗೆ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಬರೆದ ಪ್ರಕರಣದ ಸಂಬಂಧ ಸಚಿವ ಚಲುವರಾಯಸ್ವಾಮಿ ರಾಜಭವನಕ್ಕೆ ಭೇಟಿ ಕೊಟ್ಟು ರಾಜ್ಯಪಾಲರಿಗೆ ಸಮಜಾಯಿಷಿ ನೀಡಿದ್ದಾರೆ. ನಕಲಿ ಪತ್ರದ ವಿರುದ್ಧ ರಾಜ್ಯ ಪಾಲರಿಗೆ ದೂರು ನೀಡಿದ್ದಾರೆ. ಮಂಡ್ಯದಲ್ಲಿ ಆರು ಸ್ಥಾನ ಗೆದ್ದಿರೋದಕ್ಕೆ ಸಹಿಸ್ತಿಲ್ಲ. ಪತ್ರದಲ್ಲಿ ಕುಮಾರಸ್ವಾಮಿ ನಮ್ಮ ನಾಯಕರು ಅಂತಾ ಮೆನ್ಷನ್ ಮಾಡಿದ್ದಾರೆ. ಜನತಾದಳದವರೇ ಇದನ್ನ ಕ್ರಿಯೇಟ್ ಮಾಡಿದ್ದಾರೆ ಅಂತ ಸಚಿವ ಚಲುವರಾಯಸ್ವಾಮಿ ಆರೋಪಿಸಿದ್ದಾರೆ.
ಸದ್ಯ ರಾಜ್ಯ ರಾಜಕಾರಣದಲ್ಲಿ ಪೇಸಿಎಸ್ ಭಾರೀ ಸದ್ದು ಮಾಡ್ತಿದೆ. ಸರ್ಕಾರ ವರ್ಸಸ್ ವಿಪಕ್ಷಗಳ ವಾಕ್ಸಮರಕ್ಕೆ ಕಾರಣವಾಗಿದೆ.
ಬೆಂಗಳೂರು/ಮಂಡ್ಯ: ಕೃಷಿ ಮಂತ್ರಿ ಸಚಿವ ಚಲುವರಾಯಸ್ವಾಮಿ (N. Chaluvaraya Swamy) ವಿರುದ್ಧ ಲಂಚದ (Corruption) ಬೇಡಿಕೆಯ ಆರೋಪ ಕೇಳಿಬಂದಿದೆ. ಕೃಷಿ ಸಚಿವರು ಲಂಚಕ್ಕೆ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿ ಮಂಡ್ಯ ಕೃಷಿ ಇಲಾಖೆಯ (Agriculture Department Mandya) ಐವರು ಅಧಿಕಾರಿಗಳು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರಿಗೆ ನೇರವಾಗಿ ಪತ್ರ ಬರೆದಿದ್ದಾರೆ.
ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ತಲಾ 6 ರಿಂದ 8 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಜಂಟಿ ನಿರ್ದೇಶಕರ ಮೂಲಕ ಒತ್ತಡ ಹೇರುತ್ತಿದ್ದಾರೆ. ಈ ಟಾರ್ಚರ್ ತಡೆಯಲು ಸಾಧ್ಯವಾಗುತ್ತಿಲ್ಲ. ತಾವು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಕುಟುಂಬದ ಜೊತೆ ನಾವು ವಿಷ ಕುಡಿಯುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ರೈತರ ದ್ರೋಹಿ ಯಾರಾದ್ರೂ ಇದ್ರೆ ಅದು ಸಿದ್ದರಾಮಯ್ಯ – ಈಶ್ವರಪ್ಪ ಕಿಡಿ
ಈ ಪತ್ರಕ್ಕೆ ಸ್ಪಂದಿಸಿದ ರಾಜ್ಯಪಾಲರು ಕ್ರಮ ಕೈಗೊಳ್ಳುವಂತೆ ಸೂಚಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ದೂರಿನ ಈ ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ, ಸೂಕ್ತ ಕ್ರಮವಹಿಸಿ ಎಂದು ನಿರ್ದೇಶನ ನೀಡಿದ್ದಾರೆ. ಈ ಬೆನ್ನಲ್ಲೇ ಮಂಡ್ಯ ಹೆಚ್ಚುವರಿ ಎಸ್‍ಪಿ ಕೃಷಿ ಇಲಾಖೆಗೆ ಭೇಟಿ ನೀಡಿ ಜಂಟಿ ನಿರ್ದೇಶಕರಿಂದ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದರು. ಇದು ಸರ್ಕಾರಕ್ಕೆ ತೀವ್ರ ಮುಜುಗರ ತಂದಿದೆ. ಇದು ವಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿ ಸಿಕ್ಕಿದೆ.
ಬ್ರಹ್ಮಾಂಡ ಭ್ರಷ್ಟಾಚಾರದ ಪಿತಾಮಹರಾದ @siddaramaiahರವರೆ, ನಿಮ್ಮದೇ ಸಂಪುಟದ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಭ್ರಷ್ಟಾಚಾರ ಮಾಡಿ ಸಿಕ್ಕಿಬಿದ್ದಿದ್ದಾರೆ.
ಶಾಸಕರ ಪತ್ರ ನಕಲು ಎಂದಿದ್ದ ನೀವು, ಈಗ ನಿಮ್ಮ ಸಚಿವರ ಕರ್ಮಕಾಂಡ ಬಯಲು ಮಾಡುವ ಪತ್ರವೂ ನಕಲು ಎನ್ನುತ್ತಿರೋ ಹೇಗೆ..?
ಬಿಜೆಪಿ ಟ್ವೀಟ್ ಮಾಡಿ, ಬ್ರಹ್ಮಾಂಡ ಭ್ರಷ್ಟಾಚಾರದ ಪಿತಾಮಹ ಸಿದ್ದರಾಮಯ್ಯನವರೇ (Siddaramaiah) ನಿಮ್ಮದೇ ಸಂಪುಟದ ಕೃಷಿ ಮಂತ್ರಿ ಚಲುವರಾಯಸ್ವಾಮಿ ಭ್ರಷ್ಟಾಚಾರ (Corruption) ಮಾಡಿ ಸಿಕ್ಕಿಬಿದ್ದಿದ್ದಾರೆ. ಶಾಸಕರ ಪತ್ರ ನಕಲು ಎಂದಿದ್ದ ನೀವು ಈಗ ನಿಮ್ಮ ಸಚಿವರ ಕರ್ಮಕಾಂಡ ಬಯಲು ಮಾಡುವ ಪತ್ರವೂ ನಕಲು ಎನ್ನುತ್ತಿರೋ ಹೇಗೆ? ನೀವು ಈ ಕೂಡಲೇ ಭ್ರಷ್ಟ ಸಚಿವರ ರಾಜೀನಾಮೆ ಪಡೆದುಕೊಳ್ಳಬೇಕು ಅಥವಾ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿದೆ.
ತಮ್ಮ ವಿರುದ್ಧ ಆರೋಪ ಕೇಳಿಬಂದ ಕೂಡಲೇ ಮಂಡ್ಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಮತ್ತು ಎಸ್‍ಪಿ ಜೊತೆ ಸಚಿವ ಚಲುವರಾಯಸ್ವಾಮಿ ಗೌಪ್ಯ ಸಭೆ ನಡೆಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದ ವೇಳೆ ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ಹೊರಕ್ಕೆ ಕರೆದು ವೇದಿಕೆ ಹಿಂಭಾಗ ಗುಪ್ತ ಸಭೆ ನಡೆಸಿದರು.
ಈ ಸಭೆಯ ವಿಡಿಯೋ ಮಾಡದಂತೆ ಕೃಷಿ ಮಂತ್ರಿಯ ಬೆಂಬಲಿಗರು ತಾಕೀತು ಮಾಡಿದರು. ಗೌಪ್ಯಸಭೆ ಬಳಿಕ ಮಾತನಾಡಿದ ಚಲುವರಾಯಸ್ವಾಮಿ, ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿ ರಾಜ್ಯಪಾಲರಿಗೆ ಬರೆದ ಪತ್ರವೇ ನಕಲಿ ಎಂದರು. ತಮ್ಮನ್ನು ಕೆಲವರು ಟಾರ್ಗೆಟ್ ಮಾಡಿದ್ದು, ಬೇಕಂತಲೇ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಅವರು ನನ್ನನ್ನು ಟಾರ್ಗೆಟ್ ಮಾಡಿದಷ್ಟು ಇನ್ನಷ್ಟು ಪ್ರಕಾಶಮಾನವಾಗಿ ಬೆಳಗುತ್ತೇನೆ. ಈ ಬಗ್ಗೆ ತನಿಖೆ ಮಾಡಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.