Tag: ಚಲುವರಾಯಸ್ವಾಮಿ

  • 100 ವರ್ಷ ಸಮೀಪಿಸುತ್ತಿರುವ ಕೆಆರ್‌ಎಸ್ ಡ್ಯಾಂ ಸುಭದ್ರವಾಗಿದೆ: ಚಲುವರಾಯಸ್ವಾಮಿ

    100 ವರ್ಷ ಸಮೀಪಿಸುತ್ತಿರುವ ಕೆಆರ್‌ಎಸ್ ಡ್ಯಾಂ ಸುಭದ್ರವಾಗಿದೆ: ಚಲುವರಾಯಸ್ವಾಮಿ

    ಮಂಡ್ಯ: 100 ವರ್ಷಗಳು ಸಮೀಪಿಸುತ್ತಿರುವ ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಅಣೆಕಟ್ಟು (KRS Dam) ಸುಭದ್ರವಾಗಿದೆ. ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ (N Chaluvarayaswamy) ಹೇಳಿದ್ದಾರೆ.

    ಈ ಕುರಿತು ಮಂಡ್ಯದಲ್ಲಿ (Mandya) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಬಿ ಡ್ಯಾಂನ ಕ್ರಸ್ಟ್ ಗೇಟ್ ಕಿತ್ತು ಬಂದಿರುವ ಬೆನ್ನಲ್ಲೇ ರಾಜ್ಯದ ಎಲ್ಲಾ ಡ್ಯಾಂಗಳ ನಿರ್ವಹಣೆ ಮತ್ತು ಸ್ಥಿತಿಗತಿ ಹರಿಯಲು ಮುಖ್ಯಮಂತ್ರಿಗಳು ಸಮಿತಿಯನ್ನು ರಚನೆ ಮಾಡಿದ್ದಾರೆ. ಈಗಾಗಲೇ ನಾವು ಕೆಆರ್‌ಎಸ್ ಡ್ಯಾಂ ವಿಚಾರವಾಗಿ ಒಂದು ಸಮಿತಿ ಮಾಡಿದ್ದು, ಆ ಸಮಿತಿ ಈಗಾಗಲೇ ನಮಗೆ ವರದಿ ನೀಡಿದೆ. 100 ವರ್ಷ ಸಮೀಪಿಸುತ್ತಿರುವ ಕೆಆರ್‌ಎಸ್ ಡ್ಯಾಂ ಸುಭದ್ರ ಸ್ಥಿತಿಯಲ್ಲಿದೆ. ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಈಗ ನೀರು ಹರಿಸಿದ್ರೂ ಅಕ್ಟೋಬರ್‌ ವೇಳೆಗೆ ಡ್ಯಾಂ ತುಂಬುವ ಸಾಧ್ಯತೆಯಿದೆ – ಸಿದ್ದರಾಮಯ್ಯ ವಿಶ್ವಾಸ

    ಇನ್ನೂ ಟಿಬಿ ಡ್ಯಾಂನ ಕ್ರಸ್ಟ್ ಗೇಟ್ ಕಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನನಗೆ ಇದರ ಸಂಪೂರ್ಣ ಮಾಹಿತಿ ಇಲ್ಲ. ಆರೋಗ್ಯದ ವ್ಯತ್ಯಾಸದಿಂದ ಯಾರ ಬಳಿಯೂ ಮಾತನಾಡಿಲ್ಲ. ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ. ರಿಪೋರ್ಟ್ ಬಂದ ನಂತರ ಮಾತನಾಡುತ್ತೇನೆ. ಸಮಿತಿ ರಿಪೋರ್ಟ್ ಬರೋವರೆಗೂ ಎಲ್ಲರೂ ಸುಮ್ಮನಿದ್ದರೆ ಒಳ್ಳೆಯದು. ಇದರಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲ ಹಳದಿ ಅಂತಾರಲ್ಲ ಹಾಗೆ ಆಗಿದೆ. ಬಿಜೆಪಿಯವರಿಗೆ ದೇಶವೆಲ್ಲ ಹಳದಿಯಾಗಿ ಕಾಣುತ್ತಿದೆ. ಇದು ರಾಜಕೀಯ ಮಾಡುವ ಸಂದರ್ಭವಲ್ಲ ಎಂದರು. ಇದನ್ನೂ ಓದಿ: ಡ್ಯಾಂ ವಿಚಾರದಲ್ಲಿ ರಾಜಕೀಯ ಬೆರಸಬಾರದು – ಸಚಿವ ಪ್ರಿಯಾಂಕ್ ಖರ್ಗೆ

  • ಅಂದುಕೊಂಡಷ್ಟು ಮಳೆಯಾಗಿಲ್ಲ, ಕೃಷಿಗೆ ಸದ್ಯಕ್ಕೆ ನೀರು ಹರಿಸೋದಿಲ್ಲ: ಸಚಿವ ಚಲುವರಾಯಸ್ವಾಮಿ

    ಅಂದುಕೊಂಡಷ್ಟು ಮಳೆಯಾಗಿಲ್ಲ, ಕೃಷಿಗೆ ಸದ್ಯಕ್ಕೆ ನೀರು ಹರಿಸೋದಿಲ್ಲ: ಸಚಿವ ಚಲುವರಾಯಸ್ವಾಮಿ

    ಬೆಂಗಳೂರು: ಅಂದುಕೊಂಡಷ್ಟು ಮಳೆಯಾಗಿಲ್ಲ. ಕೃಷಿಗೆ ಸದ್ಯಕ್ಕೆ ನೀರು ಹರಿಸುವುದಿಲ್ಲ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ತಿಳಿಸಿದರು.

    ವಿಧಾನಸೌಧದಲ್ಲಿ ಕೃಷ್ಣರಾಜಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 15 ದಿನದಿಂದ ಕೆಆರ್‌ಎಸ್‌ನಿಂದ (KRS) ವಿಸಿ ನಾಲೆಗೆ ನೀರು ಬಿಡಬೇಕು ಎಂಬ ಒತ್ತಡ ಇತ್ತು. ಈಗ ಅಲ್ಲಿ ನೀರು ಹೆಚ್ಚಾಗಿದೆ. ಮಾರ್ಚ್, ಏಪ್ರಿಲ್, ಮೇನಲ್ಲಿ ನೀರು ಬಿಡದಿರೋದ್ರಿಂದ ಜಾನುವಾರು ಹಾಗೂ ಪಕ್ಷಿಗಳಿಗೆ ಸಮಸ್ಯೆ ಆಗಿತ್ತು. ಹೀಗಾಗಿ ನೀರು ಬಿಡಬೇಕು ಎಂದು ಒತ್ತಾಯ ಬಂದಿತ್ತು. ಜುಲೈ 8 ರ ಸಂಜೆಯಿಂದ ವಿಸಿ ನಾಲೆಗೆ 15 ದಿನ ನೀರು ಬಿಡಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬೇಬಿ ಬೆಟ್ಟದ ಟ್ರಯಲ್ ಬ್ಲಾಸ್ಟ್‌ಗೆ ತಾತ್ಕಾಲಿಕ ಬ್ರೇಕ್

    ನೀರು ಬಿಡಬೇಕು ಎಂದು ಅಲ್ಲಿನ ಶಾಸಕರು ಒತ್ತಾಯ ಮಾಡಿದ್ದರು. ಕುಡಿಯುವ ನೀರು ಹಾಗೂ ಜಾನುವಾರುಗಳಿಗಾಗಿ ಮಾತ್ರ ನೀರು ಬಿಡುತ್ತೇವೆ. ಕೃಷಿಗೆ ಸದ್ಯಕ್ಕೆ ನೀರು ಹರಿಸೋದಿಲ್ಲ. ಸದ್ಯಕ್ಕೆ ಅಂದುಕೊಂಡಷ್ಟು ಮಳೆಯಾಗಿಲ್ಲ. ಜುಲೈ ಅಂತ್ಯಕ್ಕೆ ಪೂರ್ಣ ಪ್ರಮಾಣದ ಕ್ಲಾರಿಟಿ ಸಿಗುತ್ತೆ. ನಿತ್ಯ 3,000 ಕ್ಯೂಸೆಕ್ ನೀರು ಬಿಡುವ ಚಿಂತನೆ ಇದೆ ಎಂದರು.

    ನಾನು ಕುಮಾರಸ್ವಾಮಿ (H.D.Kumaraswamy) ಅವರಿಗೆ ಗೈಡ್ ಮಾಡುವಷ್ಟು ದೊಡ್ಡವ ಅಲ್ಲ. ರಾಜಕಾರಣ ಇಷ್ಟೊಂದು ಮಾಡೋದು ಬೇಡ. ಅವರ ಜೊತೆ ಕೂಡ ಕೆಲಸ ಮಾಡಿದ್ದೀನಿ. ನನಗೆ ಟಾಂಗ್ ಕೊಡೋಕೆ ಏನ್ ಬೇಕಾದ್ರೂ ಮಾಡಲಿ. ನಮ್ಮಪ್ಪ ಮಾಜಿ ಪ್ರಧಾನಿ ಅಲ್ಲವಲ್ಲ. ಅವರು ಕೇವಲ ಮಂಡ್ಯಗೆ ಮಾತ್ರ ಸೀಮಿತವಲ್ಲ. ಇಡೀ ದೇಶಕ್ಕೆ ಅವರು ಮಂತ್ರಿಯಾಗಿದ್ದಾರೆ. ಕಾವೇರಿ ವಿಚಾರದಲ್ಲಿ ಕರೆದ್ರೆ, ನಮ್ಮಿಂದ ಮಾಹಿತಿ ಬೇಕು ಅಂದ್ರೆ ನಾವು ಕೊಡ್ತೀವಿ. ನೀರಾವರಿ ಯೋಜನೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಿ. ಕಾವೇರಿ ವಿಚಾರದಲ್ಲಿ ಯಾವಾಗ ಕರೀತಾರೆ ಅವಾಗ ನಾನು ಹೋಗುತ್ತೇನೆ. ರಾಷ್ಟ್ರದಲ್ಲಿ ಕೈತುಂಬಾ ಕೆಲಸ ಇದ್ದಾವೆ. ಅದನ್ನ ಮಾಡೋದನ್ನ ಬಿಟ್ಟು ರಾಜಕಾರಣ ಮಾಡೋದು ಬಿಡಲಿ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಅಯೋಧ್ಯೆಯಂತೆ ಗುಜರಾತ್‌ನಲ್ಲೂ ಬಿಜೆಪಿ ಸೋಲಿಸುತ್ತೇವೆ: ರಾಹುಲ್‌ ಗಾಂಧಿ ಶಪಥ

    ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿ, ನಮಗೆ ಅದ್ಯಾವುದು ವಿಷ್ಯ ಗೊತ್ತಿಲ್ಲ. ಸಿಎಂ ಹಾಗೂ ಡಿಸಿಎಂ ಅನ್ಯೋನ್ಯವಾಗಿದ್ದಾರೆ. ಏನೇ ಇದ್ರೂ ಸುರ್ಜೇವಾಲಾ ಕುಳಿತು ಬಗೆಹರಿಸುತ್ತಾರೆ. ಈಗ ನಮ್ಮಲ್ಲಿ ಯಾವುದೇ ಸಮಸ್ಯೆ ಕಾಣುತ್ತಿಲ್ಲ. ಅದರ ಅವಶ್ಯಕತೆ ಇಲ್ಲ. ಪಾಪಾ.. ಕುಮಾರಸ್ವಾಮಿ ಏನೋ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಡಿಕೆ ಸಂಚು ಮಾಡ್ತಾ ಇದ್ದಾರೆಂದು. ಕೇಂದ್ರದ ಮಂತ್ರಿ ಆದ್ಮೇಲೂ ಈ ರೀತಿಯ ರಾಜಕಾರಣ ಬೇಕಾ ಅವರಿಗೆ? ಇದು ನನಗೆ ಗೊತ್ತಾಗಲ್ಲ ಎಂದು ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

    ಮುಡಾ ಹಗರಣ ವಿಚಾರ ಕುರಿತು ಪ್ರತಿಕ್ರಿಯಿಸಿ, ಈ ಕುರಿತು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಸಿಎಂ ಪತ್ನಿಗೆ ಜಮೀನು ಕೂಡ ಕೊಟ್ಟಿದ್ದೇ ಬಿಜೆಪಿ ಸರ್ಕಾರ ಇದ್ದಾಗ. ಕಾಂಗ್ರೆಸ್ ಸರ್ಕಾರ ಇದ್ದಾಗ ಜಮೀನು ಕೊಟ್ಟಿದ್ದಲ್ಲ. ಸಿಎಂ ಹೆಸರು ಹೇಳಿದ್ರೆ ಬಿಜೆಪಿ ಸರ್ಕಾರದಲ್ಲಿ ಮಾಡಿರೋ ಹಗರಣ ಮುಚ್ಚಿ ಹೋಗ್ತಾವೆ ಅನ್ನೋ ಕಾರಣಕ್ಕೆ ಹೇಳಿದ್ದಾರೆ ಅಂತಾ ಕಾಣುತ್ತೆ. ಮುಖ್ಯಮಂತ್ರಿ ಕುಟುಂಬದಿಂದ ಯಾವುದೇ ತಪ್ಪು ಆಗಿಲ್ಲ. ಕುಮಾರಸ್ವಾಮಿ ಕೆಲಸ ಮಾಡಲಿ. ಸಿಎಂ, ಡಿಕೆ ಮತ್ತು ಚೆಲುವರಾಯಸ್ವಾಮಿ ಬಿಟ್ಟು ಕೆಲಸ ಮಾಡಲಿ. ಒಂದೊಳ್ಳೆ ಅವಕಾಶ ಸಿಕ್ಕಿದೆ. ಕೆಲಸ ಮಾಡಲಿ ಚಾಟಿ ಬೀಸಿದರು.

  • ಬೇಬಿ ಬೆಟ್ಟದ ಟ್ರಯಲ್ ಬ್ಲಾಸ್ಟ್‌ಗೆ ತಾತ್ಕಾಲಿಕ ಬ್ರೇಕ್

    ಬೇಬಿ ಬೆಟ್ಟದ ಟ್ರಯಲ್ ಬ್ಲಾಸ್ಟ್‌ಗೆ ತಾತ್ಕಾಲಿಕ ಬ್ರೇಕ್

    ಮಂಡ್ಯ: ಜಿಲ್ಲೆಯ ಬೇಬಿ ಬೆಟ್ಟದಲ್ಲಿ (Baby Hills) ಟ್ರಯಲ್ ಬ್ಲಾಸ್ಟ್ (Trial Blast) ನಡೆಸಿದರೆ ಹಳೆ ಮೈಸೂರು ಭಾಗದ ಜೀವನಾಡಿಯಾದ ಕೆಆರ್‌ಎಸ್ (KRS) ಅಣೆಕಟ್ಟೆಗೆ ಅಪಾಯ ಎದುರಾಗುತ್ತೆ ಎಂದು ಬೇಬಿ ಬೆಟ್ಟದಲ್ಲಿನ ಟ್ರಯಲ್ ಬ್ಲಾಸ್ಟ್‌ಗೆ ರೈತ ಸಂಘಟನೆಗಳು ವಿರೋಧಿಸಿದ ಬೆನ್ನಲ್ಲೇ ಇದೀಗ ಟ್ರಯಲ್ ಬ್ಲಾಸ್ಟ್‌ಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ.

    ಇಂದು ಬೇಬಿ ಬೆಟ್ಟದ ಟ್ರಯಲ್ ಬ್ಲಾಸ್ಟ್ ವಿಚಾರ ಸಂಬಂಧ ಸಚಿವ ಚಲುವರಾಯಸ್ವಾಮಿ (Chaluvarayaswamy) ಮಂಡ್ಯ (Mandya) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ಕರೆದಿದ್ದರು. ಈ ಸಭೆಯಲ್ಲಿ ಜನಪ್ರತಿನಿಧಿಗಳು, ರೈತ ಸಂಘಟನೆಯ ಮುಖಂಡರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭಾಗಿಯಾಗಿದ್ದರು. ಆರಂಭದಲ್ಲಿ ಟ್ರಯಲ್ ಬ್ಲಾಸ್ಟ್ ಸಂಬಂಧ ರೈತ ಸಂಘಟನೆಗಳ ಮುಖಂಡರು ಈ ಬಗ್ಗೆ ಮಾತನಾಡಿದರು. ಇದನ್ನೂ ಓದಿ: ಜು.23 ರಂದು ʼಮೋದಿ 3.0ʼ ಬಜೆಟ್‌ ಮಂಡನೆ

    ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಯನ್ನು ಮತ್ತೆ ಮಾಡಲು ಅವಕಾಶ ನೀಡಿದರೆ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯ ಎದುರಾಗೋದು ನಿಶ್ಚಿತವಾಗಿದೆ. ಕೆಆರ್‌ಎಸ್ ಡ್ಯಾಂ ಅನ್ನು ಲಕ್ಷಾಂತರ ಜನರು ಅವಲಂಬಿಸಿದ್ದಾರೆ. ಮೈಸೂರು ಮಹಾರಾಜರು ನಮಗೆ ನೀಡಿರುವ ಅಮೂಲ್ಯ ಕೊಡುಗೆ ಕೆಆರ್‌ಎಸ್ ಡ್ಯಾಂ ಆಗಿದೆ. ಇದೀಗ ಇಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಿ ಮುಂದೆ ಗಣಿಗಾರಿಕೆಗೆ ಅನುಮತಿ ನೀಡಿದ್ರೆ ಡ್ಯಾಂಗೆ ಹಾನಿಯಾಗುತ್ತದೆ. ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡದೆ ಸುಗ್ರೀವಾಜ್ಞೆ ಜಾರಿಗೆ ತರಬೇಕೆಂದು ರೈತ ಸಂಘಟನೆಗಳ ಮುಖಂಡರು ಆಗ್ರಹ ಮಾಡಿದರು. ಇದನ್ನೂ ಓದಿ: ಕೀರ್ತಿ ಚಕ್ರ; ಪತಿಯ ಮರಣೋತ್ತರ ಪ್ರಶಸ್ತಿ ಸ್ವೀಕರಿಸುವಾಗ ಕ್ಯಾ.ಅನ್ಶುಮನ್‌ ಸಿಂಗ್‌ ಪತ್ನಿ ಭಾವುಕ

    ಬಳಿಕ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಈ ಸಂಬಂಧ ಜುಲೈ 15ಕ್ಕೆ ಹೈಕೋರ್ಟ್ ವಿಚಾರಣೆ ಮುಂದೂಡಿದೆ. ಹೀಗಾಗಿ 15ರ ವರೆಗೆ ಟ್ರಯಲ್ ಬ್ಲಾಸ್ಟ್ ವಿಚಾರವನ್ನು ಮುಂದೂಡಲಾಗಿದೆ. ನಾವು ಸಹ ಕೋರ್ಟ್‌ಗೆ ಸರ್ಕಾರದಿಂದ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಿದ್ದೇವೆ. ಟ್ರಯಲ್ ಬ್ಲಾಸ್ಟ್ ಸಂಬಂಧ ತಜ್ಞರ ವರದಿ, ಇಲ್ಲಿನ ರೈತರ ಅಭಿಪ್ರಾಯಗಳನ್ನು ನ್ಯಾಯಲಯಕ್ಕೆ ತಿಳಿಸಿ ಮನದಟ್ಟು ಮಾಡುವ ಕೆಲಸ ಮಾಡುತ್ತೇವೆ. ನಮಗೂ ಸಹ ಗಣಿಗಾರಿಕೆ ಮೇಲೆ ಆಸಕ್ತಿ ಇಲ್ಲ. ಕೆಆರ್‌ಎಸ್ ಡ್ಯಾಂ ಉಳಿಸಿಕೊಳ್ಳುವುದೆ ನಮ್ಮ ನಿಲುವಾಗಿದೆ. ಜು.15ರವರೆಗೆ ಯಾವುದೇ ಟ್ರಯಲ್ ಬ್ಲಾಸ್ಟ್ ಮಾಡೋದಿಲ್ಲ ಎಂದು ಸಭೆ ಬಳಿಕ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಇದನ್ನೂ ಓದಿ: ಮಾಜಿ ಉಪ ಪ್ರಧಾನಿ ಎಲ್.ಕೆ ಅಡ್ವಾಣಿ ಆರೋಗ್ಯ ಸ್ಥಿರ – ಆಸ್ಪತ್ರೆಯಿಂದ ಡಿಸ್ಚಾರ್ಜ್

  • ಜು.8 ರಿಂದ ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಬಿಡುಗಡೆ: ಚಲುವರಾಯಸ್ವಾಮಿ

    ಜು.8 ರಿಂದ ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಬಿಡುಗಡೆ: ಚಲುವರಾಯಸ್ವಾಮಿ

    ಮಂಡ್ಯ: ಜುಲೈ 8 ರಿಂದ ಕೆಆರ್‌ಎಸ್‌ನಿಂದ (KRS) ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ (Chaluvarayaswamy) ತಿಳಿಸಿದರು.

    ಕಾವೇರಿ (Cauvery) ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯದ ಮಟ್ಟ 100 ಅಡಿಗಿಂತ ಹೆಚ್ಚುವರಿಯಾಗಿರುವುದರಿಂದ ಜು.6 ರಂದು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ಜು.8 ರಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಪೋಕ್ಸೋ ಪ್ರಕರಣದಲ್ಲಿ ಬಿಎಸ್‍ವೈಗೆ ಮತ್ತೆ ಸಮನ್ಸ್

    ಕಳೆದ ಸಾಲಿನಲ್ಲಿ ಬರಗಾಲದ ಹಿನ್ನೆಲೆ ರೈತರ ಬೇಡಿಕೆಯಂತೆ ನೀರು ಹರಿಸಲು ಸಾಧ್ಯವಾಗಿರಲಿಲ್ಲ. ಜಲಾಶಯದಲ್ಲಿ ನೀರಿನ ಮಟ್ಟ 100 ಅಡಿ ತಲುಪಿದ ನಂತರ ನೀರು ಹರಿಸುವುದಾಗಿ ಭರವಸೆ ನೀಡಲಾಗಿತ್ತು. ವಿ.ಸಿ.ನಾಲೆ ಆಧುನೀಕರಣ ಕಾಮಗಾರಿ ನಡೆಯುತ್ತಿದ್ದು, ರೈತರಿಗೆ ನೀರು ನೀಡಲು ತೊಂದರೆಯಾಗುತ್ತದೆ ಎಂದು ಹಲವಾರು ದೂರುಗಳು ಕೇಳಿ ಬಂದಿತ್ತು. ಇತ್ತೀಚೆಗೆ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಾಲೆಗಳಿಗೆ ನೀರು ಹರಿಸಲು ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲಾಗಿದೆ ಎಂದರು.

    ಜು.6 ರಂದು ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಜು.8 ರಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿ ಕೊಂಡು ಉತ್ತಮ ಬೆಳೆ ಬೆಳೆಯಿರಿ. ರೈತರೊಂದಿಗೆ ಸರ್ಕಾರ ಸದಾ ಇದ್ದು, ಅವರ ಶ್ರೇಯೋಭಿವೃದ್ದಿಗೆ ಸದಾ ಚಿಂತಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಹಿಷ್ಣು ಆಗಿರುವವರನ್ನು ಕೆದಕುವುದು ಕೆಲವರ ಚಾಳಿ – ರಾಹುಲ್ ಹೇಳಿಕೆಗೆ ಪೇಜಾವರ ಶ್ರೀ ಕಿಡಿ

  • ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ: ಚಲುವರಾಯಸ್ವಾಮಿ

    ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ: ಚಲುವರಾಯಸ್ವಾಮಿ

    ಬೆಂಗಳೂರು: ಹೆಚ್ಚುವರಿ ಡಿಸಿಎಂ ಮಾಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇದರ ಬಗ್ಗೆ ನಾನು ಮಾತಾಡೊಲ್ಲ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ತಿಳಿಸಿದರು.

    3 ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಡಿಸಿಎಂ ಮಾಡುವ‌ ಬಗ್ಗೆ ಹೈಕಮಾಂಡ್ ನೋಡಿಕೊಳ್ಳುತ್ತದೆ. ಹೈಕಮಾಂಡ್‌ಗೆ ತೀರ್ಮಾನ ಮಾಡೋ ಶಕ್ತಿ ಇದೆ. ಯಾರ ಬೇಡಿಕೆ ಸರಿ ತಪ್ಪು, ಯಾರ ಬೇಡಿಕೆ ಈಡೇರಿಸಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆ ವಿಚಾರಕ್ಕೆ ನಾವು ಮಧ್ಯೆ ಹೋಗೋದು ಸರಿಯಲ್ಲ. ನನ್ನ ಅಭಿಪ್ರಾಯ ಈ ವಿಚಾರದಲ್ಲಿ ‌ಇಲ್ಲ. ಹೈಕಮಾಂಡ್ ತೀರ್ಮಾನವೇ ನಮ್ಮ ತೀರ್ಮಾನ ಆಗುತ್ತದೆ ಎಂದರು. ಇದನ್ನೂ ಓದಿ: ನಿಗಮಗಳ ನಿರ್ದೇಶಕರು, ಸದಸ್ಯರ ಆಯ್ಕೆ; ಸಿಎಂ ವಹಿಸಿರುವ ಜವಾಬ್ದಾರಿ ನಿಭಾಯಿಸುವೆ: ಪರಮೇಶ್ವರ್

    ನನ್ನ ಸಹೋದ್ಯೋಗಿಗಳೇ ಹೇಳಿದ್ರೆ ಅದಕ್ಕೆ ನಾನೇನು ಹೇಳೋಕೆ ಆಗುತ್ತದೆ. ಸಿಎಂ, ಅಧ್ಯಕ್ಷರು, ಎಐಸಿಸಿ ನಾಯಕರು ಇದನ್ನ ತೀರ್ಮಾನ ಮಾಡಬೇಕು. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ಹೇಳಿದರು.

    ಚುನಾವಣೆ ಮುಂಚೆ ಸಿದ್ದರಾಮಯ್ಯ, ಡಿಕೆ ಬಣ ಅಂತಾ ನೀವೇ ಹೇಳಿದ್ರಿ. ಆದರೆ ಅದು ಆಗಲಿಲ್ಲ. ಸಿಎಂ ಆಗೋವಾಗಲೂ ಹೇಳಿದ್ರಿ. ಪಾಪ ನಮ್ಮ ಮೇಲೆ ಪ್ರೀತಿ ಮತ್ತು ಬೇರೆಯವರ ಒತ್ತಡ ನಿಮ್ಮ ಮೇಲೆ ಇದೆ. ಲೋಕಸಭೆ ‌ಚುನಾವಣೆಗೆ ಕಿತ್ತಾಡುತ್ತೀರಾ ಅಂತಾ ಹೇಳಿದ್ರಿ.‌ 9 ಸೀಟು ಗೆದ್ದು ಆಯ್ತು. ನಮ್ಮಲ್ಲಿ ಗುಂಪುಗಾರಿಕೆ ಇಲ್ಲ. ಎಲ್ಲರು ಚೆನ್ನಾಗಿ ಇದ್ದಾರೆ. ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಕೂಡಾ ಒಟ್ಟಾಗಿ ಇದ್ದಾರೆ. ರಾಜಣ್ಣ ಹೇಳಿಕೆ ವಿಚಾರ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಂ ಮತಗಳಿಂದ್ಲೇ ಸಾಗರ್‌ ಖಂಡ್ರೆ ಗೆದ್ದಿರೋದು: ಜಮೀರ್ ವಿವಾದ

  • ಸೂರಜ್ ಪ್ರಕರಣ ನಮಗೂ ಮುಜುಗರ ತಂದಿದೆ – ಚಲುವರಾಯಸ್ವಾಮಿ

    ಸೂರಜ್ ಪ್ರಕರಣ ನಮಗೂ ಮುಜುಗರ ತಂದಿದೆ – ಚಲುವರಾಯಸ್ವಾಮಿ

    ಮಂಡ್ಯ: ಸೂರಜ್ ರೇವಣ್ಣ (Suraj Revanna) ಕೇಸ್ ವಿಚಾರ ನಮಗೂ ಮುಜುಗರ ತಂದಿದೆ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ಹೇಳಿದ್ದಾರೆ.

    ಈ ಕುರಿತು ಮಂಡ್ಯದಲ್ಲಿ (Mandya) ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಇದೆ, ಕೋರ್ಟ್ ಇದೆ. ಇದು ಬಹಿರಂಗವಾಗಿ ಚರ್ಚೆ ಮಾಡುವ ವಿಚಾರವಲ್ಲ. ನಮಗೂ ಇದರ ಬಗ್ಗೆ ಮುಜುಗರ ಇದೆ ಎಂದರು. ಇದನ್ನೂ ಓದಿ: ಆಸ್ತಿಗಾಗಿ ಮಾಲೂರು ಶ್ರೀಗಳಿಂದ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ ಹತ್ಯೆ – ಇಬ್ಬರು ಶ್ರೀಗಳು ಸೇರಿ ಮೂವರು ಅರೆಸ್ಟ್‌!

    ಪ್ರಕರಣದ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂಬ ಸೂರಜ್ ಆರೋಪಕ್ಕೆ ಪ್ರತಿಕ್ರಿಯಿಸಿ, ನಾವು ಏನು ಮಾಡುವುದು. ಇದು ನಮ್ಮ ಕೈಯಲ್ಲಿ ಇದಿಯಾ? ಇದನ್ನ ಸರಿಪಡಿಸುವುದು ನಮ್ಮ ಕೈಯಲ್ಲಿ ಇಲ್ಲ. ಇಬ್ಬರು ದೂರು ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ಆಗುತ್ತೆ. ಕೇಸ್ ಅಂಡ್ ಕೌಂಟರ್ ಕೇಸ್ ಆಗಿದೆ. ಇದರಲ್ಲಿ ರಾಜಕೀಯ ಏನು ಬರುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸೂರಜ್ ರೇವಣ್ಣ ಬಂಧನ – ಸಿಎಂ ಪುತ್ರ ಯತೀಂದ್ರ ಹೇಳಿದ್ದೇನು?

    ಅವರ ಮನೆತನವೇ ರಾಜಕಾಣದಲ್ಲಿ ಬೆಳೆದಿದೆ. ಈ ಪರಿಸ್ಥಿತಿ ನಿರ್ಮಾಣಕ್ಕೆ ಅವರೇ ಕಾರಣ. ನಾವು ಏನು ಮಾಡಲು ಸಾಧ್ಯ? ನಮ್ಮ ಬಳಿ ಪೆನ್‌ಡ್ರೈವ್ ಇದೆ ಅಂತಾ ನಾವು ಹೇಳಿದ್ದೇವಾ? ಬಡವರ ಮಕ್ಕಳು ಇರಬಾರದಾ? ಇವತ್ತು ದೇವೇಗೌಡರನ್ನು ನಮ್ಮ ನಾಯಕರು ಎನ್ನುತ್ತೇವೆ. ಯಾವುದೇ ಪಕ್ಷದಲ್ಲಿ ಇದ್ದರೂ ವೈಯಕ್ತಿಕ ಟೀಕೆ ಟಿಪ್ಪಣಿ ಕಡಿಮೆ ಮಾಡಿ ಅಭಿವೃದ್ಧಿ ಕಡೆಗೆ ಗಮನಹರಿಸಲಿ ಎಂದು ಹೇಳಿದರು. ಇದನ್ನೂ ಓದಿ: ಪ್ರೀತಿಗೆ ಕುಟುಂಬದಿಂದ ವಿರೋಧ; ವಿವಾಹಿತ ಪುರುಷನೊಂದಿಗೆ ವಿದ್ಯಾರ್ಥಿನಿ ಆತ್ಮಹತ್ಯೆ!

  • ಗ್ಯಾರಂಟಿ ಪರ ಜನ ನಿಂತಿಲ್ಲ ಅನ್ನಿಸುತ್ತೆ.. ಗ್ಯಾರಂಟಿಗಳಿಗೆ ಹಿನ್ನಡೆಯಾಗಿದೆ: ಸಚಿವ ಚಲುವರಾಯಸ್ವಾಮಿ

    ಗ್ಯಾರಂಟಿ ಪರ ಜನ ನಿಂತಿಲ್ಲ ಅನ್ನಿಸುತ್ತೆ.. ಗ್ಯಾರಂಟಿಗಳಿಗೆ ಹಿನ್ನಡೆಯಾಗಿದೆ: ಸಚಿವ ಚಲುವರಾಯಸ್ವಾಮಿ

    ಬೆಂಗಳೂರು: ಗ್ಯಾರಂಟಿ (Congress Guarantee) ಪರ ಜನ ನಿಂತಿಲ್ಲ ಅನಿಸುತ್ತೆ. ಜೆಡಿಎಸ್-ಬಿಜೆಪಿಗೆ (BJP-JDS) ಗ್ಯಾರಂಟಿ ಬೇಕಿರಲಿಲ್ಲ. ಒಟ್ಟಾರೆ ಗ್ಯಾರಂಟಿಗಳಿಗೆ ಹಿನ್ನಡೆಯಾಗಿದೆ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ಅಭಿಪ್ರಾಯಪಟ್ಟರು.

    ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಫಲಿತಾಂಶದ ಕುರಿತು ಮಾತನಾಡಿದ ಅವರು, ಸ್ಟಾರ್ ಚಂದ್ರು ಭೇಟಿಗೆ ನಾವು ಹೋಗಿದ್ದೆವು. ಅವರ ಜೊತೆ ಡಿ.ಕೆ.ಸುರೇಶ್ ಅವರನ್ನೂ ಭೇಟಿಯಾಗಿದ್ದೆವು. ನಂತರ ಡಿಕೆಶಿಯನ್ನೂ ಭೇಟಿ ಮಾಡಿ ಮಾತನಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲುವು, ಕಾಂಗ್ರೆಸ್ ಸೋಲಿಗೆ ಕಾರಣಗಳೇನು?

    ಮಂಡ್ಯ ಸೋಲು ನಾವು ನಿರೀಕ್ಷಿಸಿರಲಿಲ್ಲ. ಬಹಳ ದೊಡ್ಡ ಪ್ರಮಾಣದಲ್ಲಿ ಪೋಲಾಗಿದೆ. ಜನರ ತೀರ್ಪಿಗೆ ನಾವು ತಲೆ ಬಾಗಬೇಕಿದೆ. ಯಾಕೆ ಸೋಲಿಸಿದ್ರು ಎಂದು ವಿಮರ್ಶಿಸಬೇಕಿದೆ. ಜನರ ತೀರ್ಪನ್ನ ನಾವು ಸ್ವಾಗತ ಮಾಡ್ತೇವೆ. ಅವರ ಮೈತ್ರಿಗೆ ಮತ ಹಾಕಿದರೋ, ಸಮುದಾಯ ನೋಡಿ ಜನ ವೋಟ್ ಹಾಕಿದರೋ, ಯಾವ್ಯಾವ ಕಾರಣಕ್ಕೆ ವೋಟು ಹಾಕಿದ್ರು ಗೊತ್ತಿಲ್ಲ ಎಂದರು.

    ಗ್ಯಾರೆಂಟಿ ಪರ ಜನ ನಿಂತಿಲ್ಲ ಅನ್ನಿಸುತ್ತೆ. ಜೆಡಿಎಸ್, ಬಿಜೆಪಿಗೆ ಗ್ಯಾರಂಟಿ ಬೇಕಿರಲಿಲ್ಲ. ಟೋಟಲಿ ಗ್ಯಾರಂಟಿಗಳಿಗೆ ಹಿನ್ನಡೆಯಾಗಿದೆ. ಸೋಲು ಗೆಲುವಿನ ಮೇಲೆ ಡಿಸೈಡ್ ಮಾಡಲಾಗಲ್ಲ. ನಮಗೆ ಜನ ಅಸೆಂಬ್ಲಿಯಲ್ಲಿ ಮ್ಯಾಂಡೇಟ್‌ ಕೊಟ್ಟಿದ್ದಾರೆ. ನಾವು ಒಂದರಿಂದ ಒಂಬತ್ತಕ್ಕೆ ಬಂದಿದ್ದೇವೆ. ನಮಗೆ ಹಳೆ ಮೈಸೂರು ಭಾಗದಲ್ಲಿ ಹಿನ್ನಡೆಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕೃಷಿ ಕ್ಷೇತ್ರದಲ್ಲಿ ನನಗೆ ಆಸಕ್ತಿ ಇದೆ: ಹೆಚ್‍ಡಿಕೆ

    2019ರಲ್ಲಿ ಅವರು ಓವರ್ ಕಾನ್ಫಿಡೆಂಟ್ ಇದ್ರು. ನಾವು ಏಳು ಜನ ಇದ್ರೂ ಆ ರೀತಿ ಇರಲಿಲ್ಲ. ಡೌನ್ ಟು ಅರ್ಥ್ ನಾವು ಕೆಲಸ ಮಾಡಿದ್ದೆವು. ಆದರೂ ನಮಗೆ ಸೋಲಾಗಿದೆ. ಸೋಲಿನ ಹೊಣೆಯನ್ನ ಸಾಮೂಹಿಕವಾಗಿ ಒಪ್ಪಿಕೊಳ್ತೇವೆ. ರಿಸಲ್ಟ್ ಮೇಲೆ ಹೊಣೆ ಹೊರೋಕೆ ಆಗಲ್ಲ. ಎಲ್ಲರೂ‌ ಪಕ್ಷಕ್ಕಾಗಿ ಕೆಲಸ ಮಾಡಿದ್ದೆವು. ಸಿಎಂ, ಡಿಸಿಎಂ ಇಬ್ಬರೂ ಕೆಲಸ ಮಾಡಿದ್ರು. ಡಿಸಿಎಂ ಬಗ್ಗೆ ನಾನು ಮಾತನಾಡಲ್ಲ. ಪಕ್ಷ ಹೈಕಮಾಂಡ್ ಇದೆ ತೀರ್ಮಾನಿಸ್ತಾರೆ ಎಂದರು.

  • ದೇವರಾಜೇಗೌಡ ಪರಿಚಯವೇ ನನಗೆ ಇಲ್ಲ, ಬೌರಿಂಗ್ ಕ್ಲಬ್‌ಗೆ ಊಟಕ್ಕೆ ಹೋಗಿದ್ದೆ: ಸಚಿವ ಚಲುವರಾಯಸ್ವಾಮಿ

    ದೇವರಾಜೇಗೌಡ ಪರಿಚಯವೇ ನನಗೆ ಇಲ್ಲ, ಬೌರಿಂಗ್ ಕ್ಲಬ್‌ಗೆ ಊಟಕ್ಕೆ ಹೋಗಿದ್ದೆ: ಸಚಿವ ಚಲುವರಾಯಸ್ವಾಮಿ

    ಬೆಂಗಳೂರು: ದೇವರಾಜೇಗೌಡ (Devarajegowda) ಪರಿಚಯವೇ ನನಗೆ ಇಲ್ಲ. ಬೌರಿಂಗ್‌ ಕ್ಲಬ್‌ಗೆ ಊಟಕ್ಕೆ ಹೋಗಿದ್ದೆ ಎಂದು ಸಚಿವ ಚಲುವರಾಯಸ್ವಾಮಿ (Chaluvaraya Swamy) ತಿಳಿಸಿದರು.

    ಬೆಂಗಳೂರಿನಲ್ಲಿ (Bengaluru) ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಡಿಕೆಶಿ ನಮ್ಮ ಜೊತೆ ಮಾತಾಡಿಯೂ ಇಲ್ಲ. ದೇವರಾಜೇಗೌಡಗೂ ನನಗೂ ಸಂಬಂಧ ಇಲ್ಲ. ನಮ್ಮ ಬಗ್ಗೆ ಮಾತಾನಾಡುವ ನೈತಿಕ ಹಕ್ಕಿಲ್ಲ. ದೇವರಾಜೇಗೌಡ ಗೌರವಸ್ಥ ಅಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ದೇವರಾಜೇಗೌಡ ಸಕ್ರಿಯ ಬಿಜೆಪಿ ಕಾರ್ಯಕರ್ತ, ಅವರ ಆರೋಪ ರಾಜಕೀಯ ಪ್ರೇರಿತ: ರಾಮಲಿಂಗಾರೆಡ್ಡಿ

    ದೇವರಾಜೇಗೌಡ ಮುಖವನ್ನು ನಾನು ಟಿವಿಯಲ್ಲೇ ನೋಡಿದ್ದು. ಈ ಮೊದಲು ದೇವರಾಜೇಗೌಡ, ಗೌಡರ ಕುಟುಂಬದ ವಿರುದ್ಧ ಹೋರಾಡಿದ್ದ. ಈಗ ಪರ ಮಾತಾಡ್ತಿದ್ದಾನೆ ಅಂದ್ರೆ ಏನು? ನಾನು ಬೌರಿಂಗ್ ಕ್ಲಬ್‌ಗೆ ಊಟಕ್ಕೆ ಒಂದು ಸಲ ಹೋಗಿದ್ದೆ. ಅದು ಎಲೆಕ್ಷನ್‌ಗೂ ಮುಂಚೆ ಫೆಬ್ರವರಿಯಲ್ಲಿ ಹೋಗಿದ್ದೆ. ಗೋಪಾಲಸ್ವಾಮಿ ನಮ್ಮ ಪಕ್ಷದ ಮಾಜಿ ಎಂಎಲ್‌ಸಿ, ದೇವರಾಜೇಗೌಡ ಆರೋಪದ ತನಿಖೆ ಬಗ್ಗೆ ಮಾತಾಡೋದಕ್ಕೆ ನಾನು ಗೃಹ ಸಚಿವ ಅಲ್ಲ, ಸಿಎಂ ಕೂಡ ಅಲ್ಲ. ಹಾಗಾಗಿ ಎಸ್‌ಐಟಿ ತನಿಖೆ ಮಾಡಲಿ ಎಂದು ಆಗ್ರಹಿಸಿದರು. ಇದೇ ವೇಳೆ, ದೇವರಾಜೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ ಎಂದು ಹೇಳಿದರು.

    ಶಿವರಾಮೇಗೌಡ, ದೇವರಾಜೇಗೌಡಗೆ ಕರೆ ಮಾಡಿದ್ದು ನನಗೆ ಸಂಬಂಧ ಇಲ್ಲ. ಅದನ್ನೂ ಕೂಡ ನಾನು ಒಪ್ಪುವುದಿಲ್ಲ. ಶಿವರಾಮೇಗೌಡ ಫೋನ್ ಕೊಟ್ಟಾಗ ಡಿಕೆಶಿ ಮಾತಾಡಿದ್ದು ಸೂಕ್ತ ಅಲ್ಲ. ಒಬ್ಬ ಜವಾಬ್ದಾರಿಯುತ ಡಿಸಿಎಂ ಆ ಪರಿಸ್ಥಿತಿಯಲ್ಲಿ ಫೋನ್ ತೆಗೆದುಕೊಂಡಿರಬಹುದು. ಶಿವರಾಮೇಗೌಡ ಹಾಗೂ ದೇವರಾಜೇಗೌಡ ಇಬ್ಬರೂ ನನಗೆ ಸಂಬಂಧ ಇಲ್ಲದೋರು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊಲೆ, ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಿ – ಬಿಜೆಪಿಯಿಂದ ಡಿಜಿಪಿಗೆ ದೂರು

    ಕುಮಾರಸ್ವಾಮಿ ಅವರು ದಿನಾ ಮಾತಾಡೋದನ್ನ ಬಿಡಲಿ. ಮೊದಲು ಪ್ರಜ್ವಲ್ ರೇವಣ್ಣ ಕರೆಸಲಿ. ದೇವೇಗೌಡರಿಗೆ ನೋವಾದರೆ, ಮಗ ಆಗಿ ಅವರಿಗೆ ಮಾತ್ರ ನೋವಾಗಲ್ಲ. ನಮಗೂ ನೋವಾಗಿದೆ. ಕುಮಾರಸ್ವಾಮಿ, ರೇವಣ್ಣ ಅವರು ಮೊದಲು ಪ್ರಜ್ವಲ್ ಕರೆಸಲಿ. ರೇವಣ್ಣ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೀತಾ ಇದೆ. ಆರೋಪ ಮುಕ್ತವಾದ್ರೆ ನಮ್ಮದೇನೂ ತಕರಾರು ಇಲ್ಲ ಎಂದರು.

  • ಸುಮಲತಾ ಅವರಷ್ಟು ಬುದ್ಧಿವಂತ ನಾನಲ್ಲ: ಚಲುವರಾಯಸ್ವಾಮಿ ಟಾಂಗ್

    ಸುಮಲತಾ ಅವರಷ್ಟು ಬುದ್ಧಿವಂತ ನಾನಲ್ಲ: ಚಲುವರಾಯಸ್ವಾಮಿ ಟಾಂಗ್

    ಮಂಡ್ಯ: ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ಅವರಷ್ಟು ಬುದ್ಧಿವಂತ ನಾನಲ್ಲ. ಅವರು ತುಂಬಾ ಬುದ್ಧಿವಂತರು ಎನ್ನುವ ಮೂಲಕ ಚಲುವರಾಯಸ್ವಾಮಿ (Chaluvarayaswamy) ಟಾಂಗ್ ನೀಡಿದ್ದಾರೆ.

    ಚಲುವಣ್ಣ ನಾಟಿಯನ್ನು ಅಡುಗೆಯಲ್ಲಿ ಇಟ್ಟುಕೊಳ್ಳಬೇಕೆಂಬ ಸುಮಲತಾ ಹೇಳಿಕೆ ವಿಚಾರವಾಗಿ ಮಂಡ್ಯದಲ್ಲಿ (Mandya) ಪ್ರತಿಕ್ರಿಯೆ ನೀಡಿದ ಅವರು, ನಾನು ನಮ್ಮ ಜಿಲ್ಲೆಯ, ಮಣ್ಣಿನ ಒಬ್ಬರನ್ನು ಅಭ್ಯರ್ಥಿ ಮಾಡುತ್ತೇವೆ ಎಂದಿದ್ದೆ. ಅದಕ್ಕೆ ಸುಮಲತಾ ಅವರು ಏನು ವಿವರಣೆ ಕೊಡುತ್ತಾರೆ ಕೊಡಲಿ. ಅವರು ಸಂಸದರು, ರಾಷ್ಟ್ರೀಯ ಪಕ್ಷದಲ್ಲಿ ಟಿಕೆಟ್‌ಗೆ ಫೈಟ್ ಮಾಡುತ್ತಿದ್ದಾರೆ ಒಳ್ಳೆಯದಾಗಲಿ ಎಂದರು. ಇದನ್ನೂ ಓದಿ: ಹ್ಯಾರಿಸ್‍ಗೆ ಸಂಕಷ್ಟ – ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಹೈಕೋರ್ಟ್ ಅಸ್ತು

    ಇನ್ನೂ ಪಾರ್ಲಿಮೆಂಟ್‌ಗೆ (Parliament) ಯಾರು ಯಾವಾಗ ಸೂಟ್ ಹಾಕುತ್ತಾರೆ ಎಂದು ನಿರ್ಧಾರ ಮಾಡೋದು ಜನ. ನಾನು, ಸುಮಲತಾ, ಕುಮಾರಸ್ವಾಮಿ ಒಬ್ಬರ ಹೆಸರನ್ನು ಬರೆದು ಘೋಷಣೆ ಮಾಡುವ ಕಾಲ ಅಲ್ಲ. ಇದು ಪ್ರಜಾಪ್ರಭುತ್ವದ ಕಾಲ. ಈ ಜಿಲ್ಲೆಯ ಜನರೇ ತೀರ್ಮಾನ ಮಾಡಬೇಕಾಗಿದೆ. ಪಾರ್ಲಿಮೆಂಟ್ ಸ್ಟ್ರಾಂಗ್ ಇದ್ದವರು ಹೋಗಬೇಕೆಂದು ಅವರು ಹೇಳಿದ್ದಾರೆ. ಯಾರು ಯಾವ ಕಾಲದಲ್ಲಿ ಪಾರ್ಲಿಮೆಂಟ್‌ಗೆ ಹೋಗಿ ಸ್ಟ್ರಾಂಗ್ ಆಗಿದ್ದಾರೆ ಎಂಬ ಇತಿಹಾಸ ಗೊತ್ತಿದೆ. ಜನರು ಯಾರು ಹೋಗಬೇಕೆಂದು ತೀರ್ಮಾನ ಮಾಡುತ್ತಾರೆ. ಜನರು ತೀರ್ಮಾನ ಮಾಡುವವರೆಗೆ ತಡೆದುಕೊಂಡು ಇರಬೇಕು ಎಂದು ಹೇಳಿದರು. ಇದನ್ನೂ ಓದಿ: ಗಮನಿಸಿ: ಬೆಂಗಳೂರಿನಲ್ಲಿ 2 ದಿನ ನೀರು ಪೂರೈಕೆ ಇರಲ್ಲ

  • ಚಲುವರಾಯಸ್ವಾಮಿ ನನಗೆ ಎದುರಾಳಿಯೇ? ಆತನ ಬಗ್ಗೆ ಚರ್ಚೆ ಅಪ್ರಸ್ತುತ: ಹೆಚ್‌ಡಿಕೆ

    ಚಲುವರಾಯಸ್ವಾಮಿ ನನಗೆ ಎದುರಾಳಿಯೇ? ಆತನ ಬಗ್ಗೆ ಚರ್ಚೆ ಅಪ್ರಸ್ತುತ: ಹೆಚ್‌ಡಿಕೆ

    ರಾಮನಗರ: ಸಚಿವ ಚಲುವರಾಯಸ್ವಾಮಿ (Chaluvaraya Swamy) ನನಗೇನು ಎದುರಾಳಿನಾ, ಅವರ ಬಗ್ಗೆ ಚರ್ಚೆ ಅಪ್ರಸ್ತುತ ಎಂದು ಮಾಜಿ ಸಿಎಂ ಕುಮಾರಸ್ವಾಮಿ (H.D. Kumaraswamy) ತಿರುಗೇಟು ನೀಡಿದ್ದಾರೆ.

    ಚಲುವರಾಯಸ್ವಾಮಿ ಸ್ಪರ್ಧೆಯ ಕುರಿತು ಬಿಡದಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಸೋಲಿನ ಬಗ್ಗೆ ಮಾತನಾಡುವವರು ಇವರೇಕೆ ಸೋತಿದ್ರು. ಮಂತ್ರಿ ಆಗಿದ್ದರೂ ಕೂಡಾ ಚಲುವರಾಯಸ್ವಾಮಿ ಸೋತಿದ್ರಲ್ಲ. ಈಗ ದೇವೇಗೌಡರ ಮುಖ ನೋಡಿಕೊಂಡು ಸುಮ್ಮನಿದ್ದೀನಿ ಅಂದ್ರಲ್ಲಾ? ಇಲ್ಲ ಅಂದರೆ ಏನು ಮಾಡ್ತಿದ್ರಿ. ನಿಮ್ಮ ಮಾತಿನ ಅರ್ಥ ಏನು. ನಾನು ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೀನಿ. ಅವರು ನನಗೇನು ಎದುರಾಳಿನಾ? ಅವರ ಬಗ್ಗೆ ಚರ್ಚೆ ಅಪ್ರಸ್ತುತ. ಅದೇನು ಮಾಡ್ತಿರೋ ಮಾಡಿ ನೋಡೊಣ ಎಂದು ಚಲುವರಾಯಸ್ವಾಮಿಗೆ ಹೆಚ್‌ಡಿಕೆ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ರಾಷ್ಟ್ರ ವಿಭಜನೆಯ ಮಾತೇ ಅಪರಾಧ – ಸುರೇಶ್ ದೇಶದ ಕ್ಷಮೆ ಕೋರಲಿ ಸುನೀಲ್‍ಕುಮಾರ್

    ರಾಮಕೃಷ್ಣ ಹೆಗಡೆ ಮತ್ತು ಜೆ.ಹೆಚ್.ಪಟೇಲರನ್ನು ಹೊರಹಾಕಿದ್ದು ಹೆಚ್‌ಡಿಕೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಅವರನ್ನ ಹೊರಹಾಕಿದ್ನಾ? ರಾಮಕೃಷ್ಣ ಹೆಗಡೆಯವರು ನಮ್ಮ ಪಕ್ಷದಲ್ಲಿದಾಗ, ಆಗಿನ್ನೂ ನಾನು ಚಿಕ್ಕ ಹುಡುಗ. ಚಲುವರಾಯಸ್ವಾಮಿ ಅವರಿಗೆ ಇಷ್ಟೂ ಗೊತ್ತಿಲ್ವಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಹುಲ್ ಭಾರತ್ ಜೋಡೋ ಅಂತಾರೆ, ಸುರೇಶ್ ತೋಡೋ ಅಂತಾರೆ – ಕಾಂಗ್ರೆಸ್‍ಗೆ ಬುದ್ಧಿ ಭ್ರಮಣೆ ಎಂದ ರವಿಕುಮಾರ್

    ಕಾಂಗ್ರೆಸ್‌ನಲ್ಲೂ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಕಾಂಗ್ರೆಸ್‌ನ ಮಾಜಿ ಸಚಿವ ಎಂ.ಸಿ.ಶಿವರಾಂ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ 40 ಪರ್ಸೆಂಟ್ ಇತ್ತು. ಕಾಂಗ್ರೆಸ್‌ನಲ್ಲಿ 59 ಪರ್ಸೆಂಟ್ ಇದೆ ಅಂತ ಮಾಜಿ ಸಚಿವರು ಹೇಳಿದ್ದಾರೆ. ಬಿಜೆಪಿಗಿಂತಲೂ ಕಾಂಗ್ರೆಸ್‌ನಲ್ಲಿ ಪರ್ಸೆಂಟ್ ಜಾಸ್ತಿ ಇದೆ ಅಂತ ತಲೆ ಚಚ್ಚಿಕೊಂಡಿದ್ದಾರೆ. ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣನ ನಮ್ಮ ಮಾರ್ಗದರ್ಶರು ಅಂತಿದರು. ಆದರೆ ಅವರೇ ಬಾಣಲಿಯಿಂದ ಬೆಂಕಿಗೆ ಬಿದ್ದಾಹಾಗಾಗಿದೆ ಅಂತ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಮುಂದಿನ ಪೀಳಿಗೆ ಬಗ್ಗೆ ಆಲೋಚನೆ ಮಾಡ್ತಾರೆ.. ಅದಕ್ಕೆ ಉಚಿತ ಕೊಡುಗೆ ಕೊಟ್ಟಿಲ್ಲ: ವಿಜಯೇಂದ್ರ

    ಇದನ್ನೆಲ್ಲಾ ಕುಮಾರಸ್ವಾಮಿ ಪ್ರಶ್ನೆ ಮಾಡಿದರೆ ಅವರಿಗೆ ಅಸಹನೆ, ಮೆಂಟಲ್ ಬ್ಯಾಲೆನ್ಸ್ ತಪ್ಪಿದೆ ಅಂತಾರೆ. ಪ್ರತಿನಿತ್ಯ ವರ್ಗಾವಣೆ ಮಾಡೋ ಕೆಲಸವೇ ಆಗಿದೆ. ನಿನ್ನೆ ಸಿದ್ದರಾಮಯ್ಯ ಮೋದಿ ಬಗ್ಗೆ ಕಮೆಂಟ್ ಮಾಡಿದ್ದಾರೆ. ಮೊದಲು ನಿಮ್ಮ ಸ್ಥಿತಿ ನೋಡಿಕೊಳ್ಳಿ ಎಂದು ಬಿಡದಿಯಲ್ಲಿ ಹೆಚ್‌ಡಿಕೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:  ಗ್ಯಾರಂಟಿ ರದ್ದು ಹೇಳಿಕೆ; ‘ಕೈ’ ಶಾಸಕನ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್‌ ದೂರು