Tag: ಚಲುವರಾಯಸ್ವಾಮಿ

  • ಸಾವಿನಲ್ಲಿ ವಿಪಕ್ಷಗಳು ರಾಜಕೀಯ ಮಾಡೋದು ಬಿಡಲಿ: ಚಲುವರಾಯಸ್ವಾಮಿ

    ಸಾವಿನಲ್ಲಿ ವಿಪಕ್ಷಗಳು ರಾಜಕೀಯ ಮಾಡೋದು ಬಿಡಲಿ: ಚಲುವರಾಯಸ್ವಾಮಿ

    ಬೆಂಗಳೂರು: ಸಾವಿನಲ್ಲೂ ವಿಪಕ್ಷಗಳು ರಾಜಕೀಯ ಮಾಡೋದು ಬಿಡಬೇಕು ಎಂದು ಬಿಜೆಪಿ, ಜೆಡಿಎಸ್ ನಾಯಕರಿಗೆ ಸಚಿವ ಚಲುವರಾಯಸ್ವಾಮಿ (Chaluvaraya Swamy) ತಿರುಗೇಟು ನೀಡಿದ್ದಾರೆ.

    ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಘಟನೆ ಖಂಡಿಸಿ, ಮಂಗಳವಾರ ಬಿಜೆಪಿ ಪ್ರತಿಭಟನೆ ಮಾಡ್ತಿರೋ ವಿಚಾರವಾಗಿ ಮಾತನಾಡಿದ ಅವರು, ಚಿನ್ನಸ್ವಾಮಿ ಘಟನೆ ಬಗ್ಗೆ ದುಃಖ ಇದೆ. ಈ ಪ್ರಕರಣವು ಇಡೀ ಸರ್ಕಾರಕ್ಕೆ ನೋವು ತಂದಿದೆ. ಎಲ್ಲಿ ತಪ್ಪಾಗಿದೆ ಅಂತ ಕ್ರಮ ಆಗಿದೆ. 25 ಲಕ್ಷ ರೂ. ಪರಿಹಾರ ಕೊಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಭೀಮಾತೀರದ ನಕಲಿ ಎನ್‌ಕೌಂಟರ್ ಕೇಸ್ – ಜು.1ಕ್ಕೆ ವಿಚಾರಣೆ ಮುಂದೂಡಿಕೆ

    ಏನೇ ಫೆಲ್ಯೂರ್ ಆದ್ರೂ ಸರ್ಕಾರದ ಜವಾಬ್ದಾರಿ ಆಗುತ್ತದೆ. ಅಹಮದಾಬಾದ್ ವಿಮಾನ ಅಪಘಾತಕ್ಕೆ (Ahmedabad Plane Crash) ಯಾರು ಜವಾಬ್ದಾರಿ ತೆಗೆದುಕೊಳ್ತಾರೆ. ಉತ್ತರಪ್ರದೇಶದ ಕುಂಭಮೇಳದಲ್ಲಿ ಸಾವಾಗಿದಕ್ಕೆ ಯಾರು ಜವಾಬ್ದಾರಿ ತೆಗೆದುಕೊಂಡಿದ್ರು. ನಾವು ಅಭಿವೃದ್ಧಿ ಕೆಲಸ ಮಾಡ್ತಿದ್ದೇವೆ. ಬಿಜೆಪಿ ಅವರಿಗೆ ಏನು ಇಲ್ಲ. ಅದಕ್ಕೆ ಪ್ರತಿಭಟನೆ ಮಾಡ್ತಾರೆ. ಅವರು ಪ್ರತಿಭಟನೆ ಮಾಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: 2028ಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ: ಲಕ್ಷ್ಮಣ್ ಸವದಿ

    ಕಾಲ್ತುಳಿತ ಘಟನೆ ನಾವು ಒಪ್ಪಲ್ಲ. ಮುಂದೆ ಹೀಗೆ ಆಗದಂತೆ ಏನು ಮಾಡಬೇಕೋ ಅದನ್ನ ಸರ್ಕಾರ ಮಾಡುತ್ತದೆ. ಅನೇಕ ಕಡೆ ಇಂತಹ ಘಟನೆ ನಡೆದಿದೆ. ರಾಜ್ ಕುಮಾರ್ ಸಾವಿನ ಸಮಯದಲ್ಲಿ ಕಾಲ್ತುಳಿತ ಆಗಿದ್ದಾಗ ಕುಮಾರಸ್ವಾಮಿ ಹೊಣೆ ಹೊತ್ತರಾ? ವಿಪಕ್ಷಗಳು ಸಾವಿನಲ್ಲೂ ರಾಜಕೀಯ ಮಾಡ್ತಾರೆ ಅಂತ ನನಗೆ ಗೊತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.

  • Mandya | 39 ವರ್ಷ ಬಳಿಕ ನಡೆಯುತ್ತಿರುವ ಹಬ್ಬದಲ್ಲಿ ಸಿಎಂ ಭಾಗಿ

    Mandya | 39 ವರ್ಷ ಬಳಿಕ ನಡೆಯುತ್ತಿರುವ ಹಬ್ಬದಲ್ಲಿ ಸಿಎಂ ಭಾಗಿ

    ಮಂಡ್ಯ: 39 ವರ್ಷಗಳ ಬಳಿಕ ಮಂಡ್ಯದಲ್ಲಿ ನಡೆಯುತ್ತಿರುವ 14 ಕೂಟದ ದೇವರುಗಳ ದೊಡ್ಡ ಹಬ್ಬದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು ಭಾಗಿಯಾಗಲಿದ್ದಾರೆ.

    ಜಿಲ್ಲೆಯ ನಾಗಮಂಗಲ (Nagamangala) ತಾಲೂಕಿನ ದೊಡ್ಡಬಾಲ ಗ್ರಾಮದಲ್ಲಿ ಸೋಮವಾರದಿಂದ ಬೀರ ದೇವರುಗಳ ಜಾತ್ರಾ ಮಹೋತ್ಸವ ನಡೆಯುತ್ತಿದೆ. 14 ಕೂಟದ ದೇವರುಗಳ ಈ ಹಬ್ಬ 39 ವರ್ಷಗಳ ಬಳಿಕ ಜರುಗುತ್ತಿದೆ. ಇದನ್ನೂ ಓದಿ: ವಿಂಗ್ ಕಮಾಂಡರ್ ಹಣೆಯಲ್ಲಿ ರಕ್ತ ಸೋರಿದ್ದು ಹೇಗೆ?

    ಇಂದು ಬೆಳಗ್ಗೆ 11 ಗಂಟೆಗೆ ನಾಗಮಂಗಲದ ಹದ್ದಿಹಳ್ಳಿ ಹೆಲಿಪ್ಯಾಡ್‌ಗೆ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ. ಬಳಿಕ ಅಲ್ಲಿಂದ ನೇರವಾಗಿ ದೊಡ್ಡಬಾಲ ಗ್ರಾಮಕ್ಕೆ ತೆರಳಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಸಚಿವರಾದ ಚಲುವರಾಯಸ್ವಾಮಿ, ಭೈರತಿ ಸುರೇಶ್ ಸಿಎಂಗೆ ಸಾಥ್ ನೀಡಲಿದ್ದಾರೆ.

  • ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ಸಿದ್ಧ – ಚಲುವರಾಯಸ್ವಾಮಿ ಸವಾಲ್‌ಗೆ ಹೆಚ್‌ಡಿಕೆ ಪ್ರತಿಕ್ರಿಯೆ

    ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ಸಿದ್ಧ – ಚಲುವರಾಯಸ್ವಾಮಿ ಸವಾಲ್‌ಗೆ ಹೆಚ್‌ಡಿಕೆ ಪ್ರತಿಕ್ರಿಯೆ

    – ಚಲುವರಾಯಸ್ವಾಮಿಯನ್ನ ಮಂತ್ರಿ ಮಾಡಲು 50 ಜನ ಶಾಸಕರನ್ನ ಸೇರಿಸಿದ್ದು ನಾನು ಎಂದ ಕೇಂದ್ರ ಸಚಿವ

    ಮಂಡ್ಯ: ನಾನು ಸಿಎಂ ಆಗುವಾಗ ಚಲುವರಾಯಸ್ವಾಮಿ (Chaluvaraya Swamy) ನೋಡಿಕೊಂಡು ಎಂಎಲ್‌ಎಗಳು ಬಂದ್ರಾ? ಅಥವಾ ನನ್ನ ನೋಡಿಕೊಂಡು ಬಂದ್ರಾ? ಅನ್ನೋದಕ್ಕೆ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಲು ಸಿದ್ಧ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ಕುಮಾರಸ್ವಾಮಿ ಸಿಎಂ (Chief Minister) ಆಗಲು ನಾನು ಕಾರಣ ಇಲ್ಲ ಎಂದರೆ ಧರ್ಮಸ್ಥಳಕ್ಕೆ ಬಂದು ಆಣೆ-ಪ್ರಮಾಣ ಮಾಡಲಿ ಎಂದು ಸಚಿವ ಚಲುವರಾಯಸ್ವಾಮಿ ಸವಾಲು ಹಾಕಿದ್ದ ವಿಚಾರಕ್ಕೆ ಮಂಡ್ಯದಲ್ಲಿ ಮಾತನಾಡಿದ ಅವರು, ನಾನು ಆಣೆ ಮಾಡಲು ತಯಾರಿದ್ದೇನೆ. ನಾನು ಸಿಎಂ ಆಗುವಾಗ ಚಲುವರಾಯಸ್ವಾಮಿ ನೋಡಿ ಎಂಎಲ್‌ಎಗಳು ಬಂದ್ರಾ ಏನು ಅಂತ. ಇದು ಸುಳ್ಳು ಚಲುವರಾಯಸ್ವಾಮಿಯನ್ನ ಮಂತ್ರಿ ಮಾಡಲು ಶ್ರಮ ಹಾಕಿದ್ದೇನೆ ಎಂದು ತಿಳಿಸಿದ್ದಾರೆ.

    ತಾನು ಮಂತ್ರಿ ಆಗಲು ಚಲುವರಾಯಸ್ವಾಮಿ ಮಧ್ಯರಾತ್ರಿ ಮೂರು ಗಂಟೆವರೆಗೆ ನನ್ನನ್ನ ಬಿಟ್ಟಿಲ್ಲ. ಅವರನ್ನ ಮಂತ್ರಿ ಮಾಡಲು 50 ಜನ ಶಾಸಕರನ್ನು ಸೇರಿಸಿದ್ದೆ. ನಾನು ಪಟ್ಟಿರುವ ಶ್ರಮವನ್ನು ಚಲುವರಾಯಸ್ವಾಮಿ ಮರೆಯಬಾರದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಇದನ್ನೂ ಓದಿ: 64 ವರ್ಷಗಳ ಬಳಿಕ ಗುಜರಾತ್‌ನಲ್ಲಿ ಎಐಸಿಸಿ ಅಧಿವೇಶನ – ಹಲವು ಮಹತ್ವದ ನಿರ್ಣಯ ಸಾಧ್ಯತೆ

    ಇನ್ನೂ ಚಲುವರಾಯಸ್ವಾಮಿಗೆ ಇರುವ ಚಟಗಳು ನನಗೆ ಇಲ್ಲ, ಮಂಡ್ಯದಲ್ಲಿ (Mandya) ಕೇಳಿದ್ರೆ ಚಲುವರಾಯಸ್ವಾಮಿ ಚಟಗಳ ಬಗ್ಗೆ ಹೇಳುತ್ತಾರೆ. ಚಲುವರಾಯಸ್ವಾಮಿ ಎಷ್ಟು ಮನೆ ಹಾಳು ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ‌ ಎಂದು ವಾಗ್ದಾಳಿ ನಡೆಸಿದ್ದಾರೆ.  ಇದನ್ನೂ ಓದಿ: 2ನೇ ವಿಮಾನ ನಿಲ್ದಾಣಕ್ಕೆ ಬಿಡದಿಯಲ್ಲಿ 5,000 ಎಕ್ರೆ ಜಮೀನು ಕೊಟ್ರೆ ಆಗುತ್ತಾ? ಯಾರ ಒತ್ತಡ ಅನ್ನೋದು ಗೊತ್ತಿಲ್ಲ: ಪರಮೇಶ್ವರ್

    ಆಣೆ-ಪ್ರಮಾಣಕ್ಕೆ ಆಹ್ವಾನ:
    ಇದಕ್ಕೂ ಮುನ್ನ ಮಂಡ್ಯದಲ್ಲಿ ಮಾತನಾಡಿದ್ದ ಸಚಿವ ಚಲುವರಾಯಸ್ವಾಮಿ, ಕುಮಾರಸ್ವಾಮಿ ಅವರನ್ನು ಮೊದಲ ಬಾರಿಗೆ ಸಿಎಂ ಮಾಡಲು ನಾನು ಶ್ರಮಪಟ್ಟಿದ್ದೇನೆ. ಒಂದು‌ ವೇಳೆ ನಾನು ಶ್ರಮಪಡದೇ ಅವರ ಸ್ವಂತ ಶ್ರಮದಿಂದ ಸಿಎಂ ಆಗಿದ್ದೇನೆ ಎನ್ನುವುದಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಎಂದು ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದರು.

    ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಸಿಎಂ ಆಗುವಾಗ ನಾನು ಎಲ್ಲರನ್ನೂ ಒಗ್ಗೂಡಿಸಿದ್ದೇನೆ. ಸ್ವತಃ ದೇವೇಗೌಡರೇ (HD Devegowda) ನನ್ನ ಈ ವಿಚಾರವಾಗಿ ಬೈದಿದ್ದಾರೆ. ನಾನು ಕುಮಾರಸ್ವಾಮಿ ಸಿಎಂ ಆಗಲು ಶ್ರಮ ಪಟ್ಟಿದ್ದೇನೆ. ನಾವು ಅವರೊಟ್ಟಿಗೆ ರಾತ್ರಿ ಎಲ್ಲಾ ಇದ್ದಿದ್ದು, ಅವರನ್ನು ಸಿಎಂ‌ ಮಾಡಲು ಹೊರತು ಬೇರೆಯಾವ ವಿಚಾರಕ್ಕೂ ಅಲ್ಲ. ನಾನು ಅವರನ್ನು ಸಿಎಂ ಮಾಡಲು ಶ್ರಮ ಪಟ್ಟಿಲ್ಲ ಎನ್ನುವುದಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಅಂತ ಆಹ್ವಾನ ನೀಡಿದ್ದರು. ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ ರಿಸಲ್ಟ್: ಪಾಸಾದವರಿಗೆ ವಿಶ್ ಮಾಡಿ, ಫೇಲ್ ಆದವರಿಗೆ ಧೈರ್ಯ ತುಂಬಿದ ಸಿಎಂ

    ಮುಂದುವರೆದು‌.. ನನ್ನಿಂದ ಅವರ ಆರೋಗ್ಯ ಹಾಳಾಗಿಲ್ಲ. ಅವರ ವೈಯಕ್ತಿಕ ಸಮಸ್ಯೆಗಳಿಂದ ನಿದ್ದೆ ಮಾಡದೇ ಅವರ ಆರೋಗ್ಯ ಹಾಳಾಗಿದೆ. ಅವರ ಚಟಗಳ ಬಗ್ಗೆ ಆತ್ಮಸಾಕ್ಷಿ ಮಾಡಿಕೊಳ್ಳಲಿ. ಬೇಕಿದ್ದರೆ ಅವರು ಹಾಗೂ ನಾನು ಇಬ್ಬರೇ ಕೂತು ಸ್ವಚರಿತ್ರೆಗಳ ಬಗ್ಗೆ ಬಹಿರಂಗ ಚರ್ಚೆ ಮಾಡೋಣ ಬರಲು ಹೇಳಿ ಎಂದು ಚಲುವರಾಯಸ್ವಾಮಿ ಪಂಥ್ವಾಹನ ನೀಡಿದ್ದರು.  ಇದನ್ನೂ ಓದಿ: ಪಂಜಾಬ್‌ ಬಿಜೆಪಿ ನಾಯಕನ ಮನೆಯಲ್ಲಿ ಸ್ಫೋಟ ಕೇಸ್‌ – ಬಂಧಿತ ಆರೋಪಿಗೆ ಲಾರೆನ್ಸ್‌ ಬಿಷ್ಣೋಯ್‌ ಲಿಂಕ್‌

  • ಒತ್ತುವರಿ ತೆರವು ವಿಚಾರ; ನಾವು ಕುಮಾರಸ್ವಾಮಿ ರಾಜೀನಾಮೆ ಕೇಳಲ್ಲ: ಚಲುವರಾಯಸ್ವಾಮಿ ಟಾಂಗ್

    ಒತ್ತುವರಿ ತೆರವು ವಿಚಾರ; ನಾವು ಕುಮಾರಸ್ವಾಮಿ ರಾಜೀನಾಮೆ ಕೇಳಲ್ಲ: ಚಲುವರಾಯಸ್ವಾಮಿ ಟಾಂಗ್

    ಬೆಂಗಳೂರು: ಕುಮಾರಸ್ವಾಮಿ (HD Kumaraswamy) ಎಲ್ಲರ ರಾಜೀನಾಮೆ ಅವರು ಕೇಳ್ತಿದ್ರಲ್ವಾ? ಆದರೆ ನಾನು ಅವರ ರಾಜೀನಾಮೆ ಕೇಳಲ್ಲ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ಟಾಂಗ್ ಕೊಟ್ಟಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ಬಗ್ಗೆ ಒಂದು ಮಾಹಿತಿ ಲಭಿಸಿದೆ. ಬಿಡದಿ ತೋಟದ ಮನೆಯನ್ನು ಸರ್ವೆ ಮಾಡಿ, ಮಾರ್ಕಿಂಗ್ ಮಾಡಿ, ಅಕ್ರಮ ಆಗಿದ್ದರೆ ತೆರವು ಮಾಡಿ ಎಂದು ಕೋರ್ಟ್ ಹೇಳಿದೆ ಎಂದರು. ಇದನ್ನೂ ಓದಿ: ಮಿಡ್ಲ್ ಫಿಂಗರ್ ತೋರಿಸಿ ಅಸಭ್ಯ ವರ್ತಿಸಿದ್ದಾರೆ, ರೇವಣ್ಣನನ್ನು ಬಂಧಿಸಿ – ಕೈ ಕಾರ್ಯಕರ್ತೆ ನಂದಿನಿ

    ಕುಮಾರಸ್ವಾಮಿ ಅವರು ಸಚಿವರಾಗಿ ಕೆಲಸ ಮಾಡಲಿ. ಅವರ ಥರ ನನಗೆ ಹೊಟ್ಟೆ ಉರಿ ಇಲ್ಲ. ರಾಜೀನಾಮೆ ಕೇಳಲ್ಲ ಎಂದು ಹೇಳಿದರು. ಇದನ್ನೂ ಓದಿ: ಜಾರ್ಜ್ ಸೊರೊಸ್‌ಗೆ ಇಡಿ ಶಾಕ್‌ – ಓಪನ್ ಸೊಸೈಟಿ ಫೌಂಡೇಶನ್‌ ಕಚೇರಿ ಮೇಲೆ ದಾಳಿ

  • ಆಪ್, ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿಗೆ ಲಾಭ – ಸಚಿವ ಚಲುವರಾಯಸ್ವಾಮಿ

    ಆಪ್, ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿಗೆ ಲಾಭ – ಸಚಿವ ಚಲುವರಾಯಸ್ವಾಮಿ

    ಮಂಡ್ಯ: ಆಪ್, ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿ ಲಾಭ ಪಡೆದಿದೆ ಅಷ್ಟೇ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ಹೇಳಿದರು.

    ಮಂಡ್ಯದಲ್ಲಿ (Mandya) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ವಿಚಾರವಾಗಿ, ದೆಹಲಿ ಫಲಿತಾಂಶದಲ್ಲಿ ವಿಶೇಷ ಏನಿಲ್ಲ. ಕೇಜ್ರಿವಾಲ್ ಇಂಡಿಯಾ ಒಕ್ಕೂಟದ ಜೊತೆ ಹೋಗಿದ್ದರೆ ಬಿಜೆಪಿಗೆ ಗೆಲ್ಲುವ ಅವಕಾಶ ಇರಲಿಲ್ಲ. ಆದರೆ ಕೇಜ್ರಿವಾಲ್ ಸ್ವಲ್ಪ ದುಡುಕಿ ನಿರ್ಧಾರ ಮಾಡಿದರು. ಹೀಗಾಗಿ ಆಪ್, ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿ ಲಾಭ ಪಡೆದಿದೆ ಎಂದರು.ಇದನ್ನೂ ಓದಿ: ಸೋಲು ಒಪ್ಕೋತೀವಿ ಆದ್ರೆ ಇವಿಎಂ ಮೇಲೆ ಅನುಮಾನ ಇದೆ: ಶಿವರಾಜ್ ತಂಗಡಗಿ

    ರಾಜ್ಯ ಬಜೆಟ್ ವಿಚಾರ:
    ಕಳೆದ ಬಾರಿಯೂ ಕೃಷಿ ಇಲಾಖೆಗೆ ಹೊಸ ಕಾರ್ಯಕ್ರಮಗಳ ಮೂಲಕ ಉತ್ತೇಜನ ನೀಡಿದ್ದರು. ಈ ಬಾರಿಯೂ ಉತ್ತಮ ಕಾರ್ಯಕ್ರಮಗಳು ಸಿಗುವ ನಿರೀಕ್ಷೆ ಇದೆ. ಇನ್ನೂ ಸಚಿವಾಕಾಂಕ್ಷಿಗಳಿಗೆ ನಿಗಮ ಮಂಡಳಿ ನೀಡಿ ಸಮಾಧಾನಪಡಿಸಿರುವ ವಿಚಾರವಾಗಿ, ಸಚಿವಾಕಾಂಕ್ಷಿಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಲಿದೆ. ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಛೇರ್ಮನ್ ಒಳ್ಳೆಯ ಹುದ್ದೆಯಾಗಿದ್ದು, ರಾಜ್ಯಾದ್ಯಂತ ಕೆಲಸ ಮಾಡಲು ಉತ್ತಮ ಅವಕಾಶವಿದೆ. ನರೇಂದ್ರ ಸ್ವಾಮಿಯವರು ಎಂಜಿನಿಯರ್ ಆಗಿದ್ದರಿಂದ ಅವಕಾಶ ಸಿಕ್ಕಿದೆ ಎಂದರು.

    ಮಂಡ್ಯ ಮಿಮ್ಸ್ ಸಮಸ್ಯೆಯ ಆಗರ:
    ಮಿಮ್ಸ್‌ನಲ್ಲಿ (MIMS) ತುಂಬಾ ಸಮಸ್ಯೆ ಇದೆ. ಹೀಗಾಗಿ ಡಿಸಿ ಮೂಲಕ ಸಮಸ್ಯೆಗಳ ಪಟ್ಟಿ ಮಾಡಿಸಲಾಗಿದೆ. ಮಿಮ್ಸ್‌ಗೆ ಮೇಜರ್ ಸರ್ಜರಿ ಆಗಬೇಕು. ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಶೀಘ್ರವೇ ಸಭೆ ನಡೆಸುತ್ತೇನೆ ಎಂದು ತಿಳಿಸಿದರು.

    ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೇರಿದೆ. ಆದ್ರೆ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಆಪ್ ಸೋಲು ಕಂಡಿದ್ದರೆ, `ಕೈ’ ಪಾಳಯ ಸತತ 3ನೇ ಬಾರಿಗೆ ಶೂನ್ಯ ಸಂಪಾದನೆ ಮಾಡಿದೆ.ಇದನ್ನೂ ಓದಿ: ಡಿಬಾಸ್ ಫ್ಯಾನ್ಸ್‌ಗೆ ಸಿಹಿಸುದ್ದಿ- ಫೆ.16ರಂದು ರಿಲೀಸ್ ಆಗಲಿದೆ ‘ಡೆವಿಲ್’ ಚಿತ್ರದ ಟೀಸರ್

     

  • ಮೇಲುಕೋಟೆಗೆ ಸಚಿವ ಚಲುವರಾಯಸ್ವಾಮಿ ಕುಟುಂಬಸ್ಥರ ಭೇಟಿ – ಮನೆದೇವರಿಗೆ ವಿಶೇಷ ಪೂಜೆ

    ಮೇಲುಕೋಟೆಗೆ ಸಚಿವ ಚಲುವರಾಯಸ್ವಾಮಿ ಕುಟುಂಬಸ್ಥರ ಭೇಟಿ – ಮನೆದೇವರಿಗೆ ವಿಶೇಷ ಪೂಜೆ

    ಮಂಡ್ಯ: ರಥಸಪ್ತಮಿ ಹಿನ್ನೆಲೆ ಕೃಷಿ ಸಚಿವ ಚಲುವರಾಯಸ್ವಾಮಿ (Chaluvarayaswamy) ಅವರು ಕುಟುಂಬ ಸಮೇತರಾಗಿ ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಾಲಯಕ್ಕೆ (Melkote Temple) ಭೇಟಿ ನೀಡಿ, ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

    ಪಾಂಡವಪುರ ತಾಲೂಕಿನ ಶ್ರೀಕ್ಷೇತ್ರ ಮೇಲುಕೋಟೆ ಚಲುವನಾರಾಯಣಸ್ವಾಮಿ, ಯದುಗಿರಿ ಅಮ್ಮ ಸೇರಿ ಕ್ಷೇತ್ರಾಧಿ ದೇವತೆಗಳ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಬಾಣಂತಿಯರ ಸಾವಿನ ಸರಣಿ – 2 ದಿನಗಳ ಅಂತರದಲ್ಲಿ ಇಬ್ಬರು ಸಾವು!

    ಚಲುವನಾರಾಯಣಸ್ವಾಮಿ ರಥಸಪ್ತಮಿ ಆಚರಣೆ ಹಿನ್ನೆಲೆ ದೇವರಿಗೆ ಸೂರ್ಯ ಮಂಡಲೋತ್ಸವ ನಡೆಯಿತು. ಸೂರ್ಯಮಂಡಲ ವಾಹನದಲ್ಲಿ ದೇವರ ವೈಭವದ ಮೆರವಣಿಗೆ ನಡೆಯಿತು. ವಾಹನ ಮಂಟಪದಿಂದ ದೇಗುಲದ ಸುತ್ತ ಹಾಗೂ ರಾಜಬೀದಿಗಳಲ್ಲಿ ಸಾಗಿದ ಮೆರವಣಿಯಲ್ಲಿ ಸಚಿವ ಚಲುವರಾಯಸ್ವಾಮಿ, ಪತ್ನಿ ಧನಲಕ್ಷ್ಮಿ, ಪುತ್ರ ಸಚಿನ್, ಸೊಸೆ ಭಾಗಿಯಾಗಿದ್ದರು.

    ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ವತಿಯಿಂದ 26ನೇ ವರ್ಷದ ಅಂತರರಾಜ್ಯ ಮಟ್ಟದ ಜನಪದ ಕಲಾಮೇಳ ನಡೆಯಿತು. ಕಲಾಮೇಳಕ್ಕೆ ಸಚಿವ ಎನ್ ಚಲುವರಾಯಸ್ವಾಮಿ ಚಾಲನೆ ನೀಡಿ, ಶುಭ ಹಾರೈಸಿದರು. ಜನಪದ ಕಲಾಮೇಳದಲ್ಲಿ 50ಕ್ಕೂ ಹೆಚ್ಚು ಕಲಾ ತಂಡಗಳು ಭಾಗಿಯಾಗಿ ವಿವಿಧ ಜನಪದ ಕಲೆಗಳ ಪ್ರದರ್ಶನ ಮಾಡಿತು. ಇದನ್ನೂ ಓದಿ: Sweden shooting | ಶಾಲಾ ಆವರಣದಲ್ಲಿ ದುಷ್ಕರ್ಮಿಯಿಂದ ಗುಂಡಿನ ದಾಳಿ – 10 ಮಂದಿ ಸಾವು

    ಕಾರ್ಯಕ್ರಮದಲ್ಲಿ ಸ್ಥಾನೀಕಂ ಶ್ರೀನಿವಾಸನ್ ಗುರೂಜಿ, ಡಾ. ಸೆಲ್ವಪಿಳ್ಳೆ ಅಯ್ಯಂಗಾರ್, ಸಂತಾನರಾಮ ಸೇರಿ ಹಲವರು ಉಪಸ್ಥಿತಿರಿದ್ದರು.

  • ಖೋ ಖೋ ವಿಶ್ವಕಪ್ ವಿಜೇತರಿಗೆ ಸಿಎಂ ಸನ್ಮಾನ – ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ಬಹುಮಾನ

    ಖೋ ಖೋ ವಿಶ್ವಕಪ್ ವಿಜೇತರಿಗೆ ಸಿಎಂ ಸನ್ಮಾನ – ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ಬಹುಮಾನ

    ಬೆಂಗಳೂರು: 2025ರ ಪುರುಷರ ಹಾಗೂ ಮಹಿಳಾ ಖೋ ಖೋ ವಿಶ್ವಕಪ್‌ನಲ್ಲಿ (Kho Kho World Cup) ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದ ಭಾರತ ತಂಡಕ್ಕೆ ರಾಜ್ಯ ಸರ್ಕಾರ ಅಭಿನಂದನೆ ಸಲ್ಲಿಸಿದೆ.

    ಇದೇ ವೇಳೆ ಎರಡೂ ವಿಭಾಗದಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಲು ಕಾರಣರಾದ ಮಂಡ್ಯ ಜಿಲ್ಲೆಯ ಡಿ.ಮಲ್ಲಿಗೆರೆ ಗ್ರಾಮದ ಎಂ.ಕೆ ಗೌತಮ್ ಹಾಗೂ ಮೈಸೂರಿನ ತಿ.ನರಸೀಪುರದ ಕುರುಬೂರಿನ ಚೈತ್ರಾ (Chaitra) ಅವರನ್ನು ಸರ್ಕಾರ ಗೌರವಿಸಿತು. ಇದನ್ನೂ ಓದಿ: Kho Kho World Cup | ಭಾರತಕ್ಕೆ ಡಬಲ್‌ ಧಮಾಕ – ಮಹಿಳೆಯರು, ಪುರುಷರ ತಂಡಕ್ಕೆ ಖೋ ಖೋ ವಿಶ್ವಕಪ್‌ ಕಿರೀಟ

    ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿಂದು ಕ್ರೀಡಾಪಟುಗಳಿಗೆ ಸನ್ಮಾನಿಸಿ ಗೌರವಿಸಿದರು. ಇಬ್ಬರೂ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ. ಬಹುಮಾನ ಸಹ ಘೋಷಿಸಿದರು. ಇದನ್ನೂ ಓದಿ: ಖೋ ಖೋ ವಿಶ್ವಕಪ್; ಎಂಕೆ ಗೌತಮ್, ಚೈತ್ರಾರನ್ನು ಗೌರವಿಸಿದ ಹೆಚ್‌ಡಿಕೆ

    ಈ ಸಂದರ್ಭದಲ್ಲಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಮತ್ತು ಒಲಿಂಪಿಕ್ಸ್‌ ಅಸೋಸಿಯೇಷನ್ ಅಧ್ಯಕ್ಷರೂ ಆದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಉಪಸ್ಥಿತರಿದ್ದರು. ಇದನ್ನೂ ಓದಿ: IPL 2025 | ಲಕ್ನೋ ಸೂಪರ್‌ ಜೈಂಟ್ಸ್‌ಗೆ ರಿಷಬ್‌ ನೂತನ ಸಾರಥಿ

  • ರಾಜ್ಯದಲ್ಲಿ ಕೃಷಿ ಬಲವರ್ಧನೆ ನೆರವಿಗೆ ಸಚಿವ ಚಲುವರಾಯಸ್ವಾಮಿ ಮನವಿ: ಕೇಂದ್ರದಿಂದ ಸಮ್ಮತಿ

    ರಾಜ್ಯದಲ್ಲಿ ಕೃಷಿ ಬಲವರ್ಧನೆ ನೆರವಿಗೆ ಸಚಿವ ಚಲುವರಾಯಸ್ವಾಮಿ ಮನವಿ: ಕೇಂದ್ರದಿಂದ ಸಮ್ಮತಿ

    ಬೆಂಗಳೂರು: ರಾಜ್ಯದ ಕೃಷಿ (Agriculture) ಕ್ಷೇತ್ರದ ಬಲವರ್ಧನೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪೂರಕವಾಗಿ ಬೇಕಾಗಿರುವ ವಿವಿಧ ಸಹಾಯ ಮತ್ತು ಆರ್ಥಿಕ ಸಹಕಾರವನ್ನು ಶೀಘ್ರ ಒದಗಿಸುವಂತೆ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ (N Chaluvarayaswamy) ಕೇಂದ್ರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ನೆರವಿನ ಭರವಸೆಯನ್ನೂ ಸಹ ಪಡೆದಿದ್ದಾರೆ.

    ಬೆಂಗಳೂರಿನ (Bengaluru) ಕುಮಾರಕೃಪಾ ಅತಿಥಿ ಗೃಹದಲ್ಲಿ ಕಂದಾಯ ಸಚಿವರಾದ ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್‌ ಖರ್ಗೆ ಅವರೊಂದಿಗೆ ಕೇಂದ್ರ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು, ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರನ್ನು ಭೇಟಿ ಮಾಡಿ, ಮನವಿ ಅರ್ಪಿಸಿ ಚಲುವರಾಯಸ್ವಾಮಿರವರು ರಾಜ್ಯದ ಬೇಡಿಕೆಗಳನ್ನು ಮಂಡಿಸಿದರು. ಇದನ್ನೂ ಓದಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೋಲ್ಕತ್ತಾ ಟ್ರೈನಿ ವೈದ್ಯೆ ರೇಪ್‌ ಕೇಸ್‌ – ಸಂಜಯ್‌ ರಾಯ್‌ ದೋಷಿ

    ರಾಜ್ಯದಲ್ಲಿ ಕೃಷಿ ಇಲಾಖೆ ಶೇ.99 ರಷ್ಟು ಆರ್ಥಿಕ ಹಾಗೂ ಭೌತಿಕ ಗುರಿ ಸಾಧನೆ ಮಾಡಿದ್ದು, ಕೇಂದ್ರ ಪುರಸ್ಕೃತ ಯೋಜನೆಗಳಲ್ಲೂ ಶೇ.124ರಷ್ಟು ಅನುದಾನ ಬಳಸಿಕೊಂಡಿದೆ. ಈ ಹಿನ್ನಲೆಯಲ್ಲಿ ಈ‌ ಬಾರಿಯೂ ಇದೇ ರೀತಿ ಹಣಕಾಸಿನ ನೆರವು ಒದಗಿಸಬೇಕೆಂದು ಸಚಿವರು ಕೋರಿದರು. ಕೇಂದ್ರ ಕೃಷಿ ಸಚಿವರು ಇದಕ್ಕೆ ಮುಕ್ತ ಮನಸ್ಸಿನ ಸಮ್ಮತಿ ಸೂಚಿಸಿದರು.

    ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಿಂದ ರೈತರಿಗೆ ಕೃಷಿ ಯಾಂತ್ರಿಕರಣಕ್ಕೆ ಹೆಚ್ಚಿನ ಅನುಕೂಲವಾಗುತ್ತಿದ್ದು, ಈ ಭಾರಿ ಇನ್ನಷ್ಟು ಅಧಿಕ ಆರ್ಥಿಕ ನೆರವು ಒದಗಿಸುವಂತೆ ಮನವಿ ಮಾಡಿದ ಅವರು ಆನೇಕಲ್ ತಾಲ್ಲೂಕಿನ, ಕಾಚನಾಯಕನಹಳ್ಳಿ ಗ್ರಾಮದಲ್ಲಿ ಗುರುತಿಸಲಾಗಿರುವ 20 ಎಕರೆ ಪ್ರದೇಶದಲ್ಲಿ ಫೆಸ್ಟಿಸೈಡ್ಸ್ ಫಾರ್ಮುಲೇಷನ್ ಟೆಕ್ನಾಲಜಿ ಸಂಸ್ಥೆ ಪ್ರಾರಂಭಕ್ಕೆ ಅನುಮೋದನೆ ಒದಗಿಸುವಂತೆ ಕೋರಿದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಅಪ್ಪಂದಿರ ಮನೆಯಿಂದ ಈ ಸರ್ಕಾರ ಅನುದಾನ ಕೊಡ್ತಿಲ್ಲ – ಪ್ರಿಯಾಂಕ್ ಖರ್ಗೆ ವಿರುದ್ಧ ಅಶೋಕ್ ಕಿಡಿ

    ಸಾವಯವ, ಸಿರಿಧಾನ್ಯ ಉತ್ಪಾದನೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಮತ್ತು ಮಾರಾಟದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು ಇದನ್ನು ಇನ್ನಷ್ಟು ಉತ್ತಮಪಡಿಸಲು ಕೇಂದ್ರ ಸರ್ಕಾರದ ನೆರವು ಮತ್ತು ಪ್ರೋತ್ಸಾಹದ ಅಗತ್ಯವಿದೆ ಎಂದಿರುವ ಅವರು ಜ.23 ರಿಂದ 25ರ ವರೆಗೆ ನಗರದ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳದಲ್ಲಿ ಭಾಗವಹಿಸುವಂತೆ ಶಿವರಾಜ್ ಸಿಂಗ್ ಚೌಹಾಣ್‌ ರನ್ನ ಅಹ್ವಾನಿಸಿದರು.

    ಹಿಂಗಾರು ಜೋಳಕ್ಕೆ ನೀಡಲಾಗುತ್ತಿರುವ ಬೆಂಬಲ ಬೆಲೆ ಸೌಲಭ್ಯವನ್ನು ಮುಂಗಾರಿನಿಂದಲೇ ಅನುಷ್ಠಾನಗೊಳಿಸಲು ನಿರ್ದೇಶನ ನೀಡಬೇಕು. ರಾಗಿ, ಜೋಳದಂತೆ ಇತರೆ ಸಿರಿಧಾನ್ಯಗಳನ್ನ (ತೃಣ ಧಾನ್ಯಗಳು) ಕನಿಷ್ಠ ಬೆಂಬಲ ಬೆಲೆ ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕೆಂದು ಚಲುವರಾಯಸ್ವಾಮಿ ಅವರು ಕೇಂದ್ರ ಕೃಷಿ ಸಚಿವರಿಗೆ ಮನವಿ ಮಾಡಿದರು.

    ಈ ಹಿಂದೆ ಜಾರಿಗೆ ಬಂದ ಆತ್ಮ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಆದರೆ ರಾಜ್ಯದಲ್ಲಿ ನಂತರ ಹೆಚ್ಚುವರಿಯಾಗಿ 59 ತಾಲ್ಲೂಕುಗಳು ರಚನೆಯಾಗಿರುವುದರಿಂದ ಹೊಸದಾಗಿ 177 ಸಹಾಯಕ ತಾಂತ್ರಿಕ ನಿರ್ವಾಹಕರು ಅಗತ್ಯವಿದ್ದು ಅದಕ್ಕೆ ಮಂಜೂರಾತಿಯೊಂದಿಗೆ ಅನುದಾನ ಒದಗಿಸುವಂತೆ ಚಲುವರಾಯಸ್ವಾಮಿ ಕೋರಿದರು. ಇದನ್ನೂ ಓದಿ: ಭಾರತೀಯ ಆಟೋ ಕ್ಷೇತ್ರಕ್ಕೆ ಹಸಿರು ಬಲ – ಕೇಂದ್ರದ ಒತ್ತಾಸೆಯಿಂದ ಇವಿ ವಾಹನ ಮಾರಾಟ ಹೆಚ್ಚಳ: ಹೆಚ್‌ಡಿಕೆ

    ಗುಣಮಟ್ಟ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಾಲಿ ಇರುವ ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ತರುವುದು, ಬೀಜ ಕಾಯ್ದೆಯಡಿ ದಂಡ ಮತ್ತು ಪರವಾನಿಗೆ ಶುಲ್ಕ ಹೆಚ್ಚಳ ಕುರಿತು ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆ ಪಿಎಂಕೆಎಸ್‌ವೈ – ಪಿಡಿಎಂಸಿ ವ್ಯವಸ್ಥೆಗಳ ಸುಧಾರಣೆಗಳ ಬಗ್ಗೆ ಚಲುವರಾಯಸ್ವಾಮಿರವರು ಕೇಂದ್ರ ಸಚಿವರ ಗಮನ ಸೆಳೆದರು.

    ಅಲ್ಲದೇ ಜಲಾನಯನ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಈಗಾಗಲೇ ವಿಶ್ವಬ್ಯಾಂಕ್ ನೆರವಿನೊಂದಿಗೆ 567.98 ರೂ. ಕೋಟಿಗಳ ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಿದೆ. ರಾಜ್ಯದಲ್ಲಿ ಇನ್ನೂ 59.69 ಹೆಕ್ಟೇರ್ ಪ್ರದೇಶವನ್ನು ಜಲಾನಯನ ಅಭಿವೃದ್ಧಿ ಯೋಜನೆಯ ವ್ಯಾಪ್ತಿಗೆ ಸೇರಿಸಬೇಕಾಗಿದ್ದು, ಹೊಸದಾಗಿ 92 ಯೋಜನೆಗಳ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆ ಮತ್ತು ಅನುದಾನ ಒದಗಿಸುವಂತೆ ಮನವಿ ಮಾಡಿದರು. ಇದನ್ನೂ ಓದಿ: 60 ಜನ ಕಾಂಗ್ರೆಸ್‌ನವರು ನಮ್ಮೊಟ್ಟಿಗೆ ಬರಲು ರೆಡಿಯಾಗಿದ್ದರು – ಯತ್ನಾಳ್ ಬಾಂಬ್

    ಕರ್ನಾಟಕದ ಕೃಷಿ ಸಚಿವರು, ಕಂದಾಯ ಸಚಿವರು ಮತ್ತು ಗ್ರಾಮೀಣಾಭಿವೃದ್ಧಿ ಸಚಿವರ ಅಭಿಪ್ರಾಯ, ಮನವಿಗಳನ್ನು ಸ್ವೀಕರಿಸಿ ಚರ್ಚೆ ನಡೆಸಿದ ನಂತರ ಮಾತನಾಡಿದ ಕೇಂದ್ರ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯದ ಅಭಿವೃಧ್ಧಿಯ ದೃಷ್ಟಿಯಿಂದ ಒಟ್ಟಾಗಿ ಕಾರ್ಯನಿರ್ವಹಿಸೋಣ, ರಾಜ್ಯಕ್ಕೆ ಬೇಕಾದ ಎಲ್ಲಾ ರೀತಿಯ ನೆರವನ್ನು ಒದಗಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

    ಆರ್ಥಿಕ ವರ್ಷ ಕೊನೆಯಾಗುತ್ತಿದ್ದು, ಒದಗಿಸುವ ಅನುದಾನವನ್ನು ಸಂಪೂರ್ಣವಾಗಿ ವೆಚ್ಚ ಮಾಡಿ ಹಣ ಸದ್ಭಳಕೆ ಪ್ರಮಾಣ ಪತ್ರವನ್ನು ನೀಡಿದ ಕೂಡಲೇ ಕೃಷಿ ಹಾಗೂ ಇತರೆ ಇಲಾಖೆಗಳಿಗೆ ಹೆಚ್ಚುವರಿ ಅನುದಾನ ಒದಗಿಸಲಾಗುವುದು ಆತ್ಮ ಯೋಜನೆಯಡಿ ಅಗತ್ಯ ಪ್ರಮಾಣದ ಸಿಬ್ಬಂದಿಯನ್ನು ಸಹ ಒದಗಿಸಲಾಗುವುದು ಎಂದು ಶಿವರಾಜ್ ಸಿಂಗ್ ಚೌಹಾಣ್‌ ಅವರು ಹೇಳಿದರು.

    ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೂ ಸಹ ಈ ಸಭೆಯಲ್ಲಿ ಭಾಗವಹಿಸಿದ್ದರು.

  • ಮಂಡ್ಯದಲ್ಲಿ ಸಮಗ್ರ ಕೃಷಿ ವಿಶ್ವವಿದ್ಯಾಲಯಕ್ಕೆ ಸಚಿವ ಸಂಪುಟ ಅನಮೋದನೆ -ಸಾಕಾರಗೊಂಡ ದಶಕಗಳ ಕನಸು

    ಮಂಡ್ಯದಲ್ಲಿ ಸಮಗ್ರ ಕೃಷಿ ವಿಶ್ವವಿದ್ಯಾಲಯಕ್ಕೆ ಸಚಿವ ಸಂಪುಟ ಅನಮೋದನೆ -ಸಾಕಾರಗೊಂಡ ದಶಕಗಳ ಕನಸು

    ಮಂಡ್ಯ: ಜಿಲ್ಲೆಯ ನೂತನ ಸಮಗ್ರ ಕೃಷಿ ವಿಶ್ವವಿದ್ಯಾಲಯ (Agriculture University) ಸ್ಥಾಪಿಸಬೇಕೆನ್ನುವ ಬಹುದಿನದ ಕನಸು ನನಸಾಗುವ ಹಂತ ತಲುಪಿದೆ.

    ಸಮಗ್ರ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ ಸ್ಥಾಪನೆಯಿಂದ ರೈತರ ಅನೇಕ ಸಮಸ್ಯೆಗಳಿಗೆ ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಒಂದೇ ಮೂಲದಿಂದ ಪರಿಹಾರ ದೊರಕಿಸಬೇಕೆಂಬ ಮಹತ್ವಕಾಂಕ್ಷಿ ಕನಸನ್ನ ನನಸಾಗಿಸುವ ಉದ್ದೇಶವನ್ನು ಕೃಷಿ ಸಚಿವರು ಚಲುವರಾಯಸ್ವಾಮಿ (Chaluvarajaswamy) ಹೊಂದಿದ್ದರು.

    ಈಗಾಗಲೇ ರಾಜ್ಯದ ಶಿವಮೊಗ್ಗದಲ್ಲಿ (Shivamogga) ಸಸ್ಯಾಧಾರಿತ ಕೃಷಿ ವಿಜ್ಞಾನಗಳ ಸಮಗ್ರ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯವು 2013 ರಿಂದ ರೈತರ ಆಶೋತ್ತರಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ಮಾದರಿಯಲ್ಲೇ ಮಂಡ್ಯದಲ್ಲೂ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ದೊರೆತಿದೆ. ಇದನ್ನೂ ಓದಿ: ಕುಂಭಮೇಳದಲ್ಲಿ 7 ಅಡಿ ಎತ್ತರದ ರಷ್ಯಾದ ಬಾಬಾ – ‘ಪರಶುರಾಮನ ಅವತಾರ’ ಎಂದ ಭಕ್ತರು

    ನೂತನವಾಗಿ ಪ್ರಾರಂಭಿಸುವ ವಿಶ್ವವಿದ್ಯಾಲಯಕ್ಕೆ ಬೆಂಗಳೂರು ಕೃಷಿ ವಿವಿಯಿಂದ ಮಂಡ್ಯ ಕೃಷಿ ಕಾಲೇಜು (ವಿ.ಸಿ ಫಾರಂ), ಹಾಸನ ಕೃಷಿ ಕಾಲೇಜು ಹಾಗೂ ಚಾಮರಾಜನಗರ ಕೃಷಿ ಕಾಲೇಜುಗಳು ಹಾಗೂ ಶಿವಮೊಗ್ಗ ವಿಶ್ವವಿದ್ಯಾಲಯದಿಂದ ಪೊನ್ನಂಪೇಟೆ ಅರಣ್ಯ ಕಾಲೇಜು ಹಾಗೂ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಮೈಸೂರು ತೋಟಗಾರಿಕೆ ಕಾಲೇಜು ಮಂಡ್ಯ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಳ್ಳುತ್ತಿವೆ.

    ನೂತನವಾಗಿ ಪ್ರಾರಂಭಗೊಳ್ಳುವ ಮಂಡ್ಯ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳು ಸೇರ್ಪಡೆಗೊಳ್ಳುತ್ತವೆ. ಕಾರಣ ಈ ಜಿಲ್ಲೆಗಳಲ್ಲಿರುವ ಯಾವುದೇ ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಘಟಕಗಳು ಯಥಾವತ್ತಾಗಿ ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಳ್ಳುತ್ತವೆ.

    ಶಿವಮೊಗ್ಗ ತೋಟಗಾರಿಕೆ ಮತ್ತು ಕೃಷಿ ವಿಶ್ವವಿದ್ಯಾಲಯದ ಮಾದರಿಯಲ್ಲಿ ಮಂಡ್ಯದಲ್ಲಿ ಪ್ರಾರಂಭಿಸುವ ನೂತನ ಕೃಷಿ ವಿಶ್ವವಿದ್ಯಾಲಯವನ್ನು ಕೂಡಾ ಎಲ್ಲಾ ಸಸ್ಯ ಶಾಸ್ತ್ರಗಳ ಸಮನ್ವಯತೆಯನ್ನು ಸಾಧಿಸಿ ಮಂಡ್ಯ ಸಮಗ್ರ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: Aeroindia 2025| ಯಲಹಂಕ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡಗಳ ಕ್ರೇನ್ ಎತ್ತರ ಇಳಿಸಿ: ಬಿಬಿಎಂಪಿ

  • ಹೆಚ್‌ಡಿಕೆಯೇ ಕಾರು ಬೇಡ ಎಂದಿದ್ರು: ಚಲುವರಾಯಸ್ವಾಮಿ ಬಾಂಬ್‌ | ಏನಿದು ಕಾರ್‌ ಕಿರಿಕ್‌?

    ಹೆಚ್‌ಡಿಕೆಯೇ ಕಾರು ಬೇಡ ಎಂದಿದ್ರು: ಚಲುವರಾಯಸ್ವಾಮಿ ಬಾಂಬ್‌ | ಏನಿದು ಕಾರ್‌ ಕಿರಿಕ್‌?

    ಮಂಡ್ಯ: ರಾಜಕೀಯ ಹಾಗೂ ವೈಯಕ್ತಿಕ ಜೀವನದಲ್ಲಿ ಕುಚುಕುಗಳ ರೀತಿ ಇದ್ದ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹಾಗೂ ಚಲುವರಾಯಸ್ವಾಮಿ (Chaluvaraya Swamy) ಇದೀಗ ಬದ್ಧ ವೈರಿಗಳಾಗಿ ಬದಲಾಗಿದ್ದಾರೆ. ಇಬ್ಬರ ನಡುವೆ ಈಗ ಒಂದಲ್ಲ ಒಂದು ವಿಚಾರಕ್ಕೆ ಮಾತಿನ ಯುದ್ಧ ನಡೆಯುತ್ತಿದೆ. ಇದೀಗ ಕಾರಿನ (Car) ವಿಚಾರಕ್ಕೆ ಇಬ್ಬರ ನಡುವೆ ವಾಕ್ ಸಮರ ಆರಂಭವಾಗಿದೆ.

    ಎರಡು ದಿನಗಳ ಹಿಂದೆ ಕೇಂದ್ರ ಸಚಿಚ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಾರು ವಿಚಾರದ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ನಾನು ಒಬ್ಬ ಕೇಂದ್ರ ಸಚಿವನಾಗಿದ್ದರೂ ರಾಜ್ಯ ಸರ್ಕಾರ ದ್ವೇಷದ ರಾಜಕೀಯ ಮಾಡಿಕೊಂಡು ಶಿಷ್ಟಾಚಾರ (Protocol) ಪಾಲನೆ ಮಾಡುತ್ತಿಲ್ಲ ಎಂದು ದೂರಿದ್ದರು.

    ನಾನು ದೆಹಲಿಯಿಂದ (Delhi) ಬೆಂಗಳೂರಿಗೆ (Bengaluru) ಬಂದಾಗ ಪೋಟೋಕಾಲ್ ಪ್ರಕಾರ ಕಾರನ್ನು ಕಳಿಸಿಲ್ಲ. ಕೊನೆಗೆ ನಾನು ನನ್ನ ಇಲಾಖೆಯಾದ ಬೃಹತ್ ಕೈಗಾರಿಕೆ ಇಲಾಖೆಯ ಕಾರನ್ನು ತರಿಸಿಕೊಂಡು ಓಡಾಡುತ್ತಿದ್ದೇನೆ ಎಂದಿದ್ದರು. ಕಾಂಗ್ರೆಸ್‌ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ದೂರಿದ್ದರು.

    ಚಲುವರಾಯಸ್ವಾಮಿ ಹೇಳಿದ್ದೇನು?
    ಕುಮಾರಸ್ವಾಮಿ ಈ ಹೇಳಿಕೆಯ ಬೆನ್ನಲ್ಲೇ ಸಚಿವ ಚಲುವರಾಯಸ್ವಾಮಿ ಇನ್ನೊಂದು ಬಾಂಬ್‌ನ್ನು ಸಿಡಿಸಿದ್ದಾರೆ. ಕುಮಾರಸ್ವಾಮಿ ನನಗೆ ಕಾರು ಕೊಟ್ಟಿಲ್ಲ ಎಂದು ಹೇಳಿರೋದು ನೋಡಿದ್ರೆ ಅದನ್ನು ಕೇಳಲು ಆಗುತ್ತಿಲ್ಲ. ಕುಮಾರಸ್ವಾಮಿ ಮಾಜಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಬಳಸುತ್ತಿದ್ದ ಕಾರನ್ನು ನನಗೆ ಬೇಡ ಅಂದಿದ್ದಾರೆ. ನಾವು ಏನು ಮಾಡಲು ಸಾಧ್ಯ, ಸುಮಲತಾ ಬಳಸುತ್ತಿದ್ದ ಕಾರನ್ನು ಕುಮಾರಸ್ವಾಮಿ ಏಕೆ ಬೇಡ ಎಂದಿದ್ದಾರೆ ಗೊತ್ತಿಲ್ಲ. ನಾವು ಕಾರು ಕೊಡಲ್ಲ ಎಂದು ಹೇಳಿಲ್ಲ, ಅವರೇ ಕಾರು ಬೇಡ ಎಂದಿದ್ದಾರೆ ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಜನ ಕೋವಿಡ್‌ ವಿರುದ್ಧ ಹೋರಾಡುತ್ತಿರುವಾಗ ʻಶೀಷ್‌ ಮಹಲ್‌ʼ ನವೀಕರಣ – ಮೋದಿ ಮತ್ತೆ ಕಿಡಿ

     

    ನಮಗೂ ಸಹ ಹೊಸ ಕಾರು ಬರಲು ಒಂದು ವರ್ಷವಾಗಿದೆ. ಅಲ್ಲಿಯವರೆಗೆ ಹಿಂದೆ ಉಪಯೋಗಿಸುತ್ತಿದ್ದ ಸಚಿವರ ಕಾರನ್ನು ನಾನು ಬಳಸುತ್ತಿದ್ದೆ. ನಾನು ಸಂಸದನಾದ ಬಳಿಕ ಒಂದು ವರ್ಷ ಅಂಬರೀಶ್ ಅವರ ಕಾರನ್ನು ಬಳಸಿದ್ದೆ. ಆ ಮೇಲೆ ನನಗೆ ಹೊಸ ಕಾರು ಬಂತು. ಹೊಸ ಸಂಸದರಿಗೆ ಹಳೆ ಕಾರನ್ನು ಮೊದಲು ನೀಡುವುದು ವಾಡಿಕೆ. ಬಳಿಕ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಪಡೆದು ಹೊಸ ಕಾರು ಖರೀದಿಸಿ ಕೊಡಲಾಗುತ್ತದೆ. ಆದರೆ ಕುಮಾರಸ್ವಾಮಿ ನೋಡಿದರೆ ಸುಮಲತಾ ಅಂಬರೀಶ್ ಬಳಸಿದ ಕಾರನ್ನು ಬೇಡ ಅಂದಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

    ಕುಮಾರಸ್ವಾಮಿ ಸುಮಲತಾ ಅಂಬರೀಶ್ ಬಳಸಿದ ಕಾರನ್ನು ಅವರ ಮೇಲಿನ ಮುನಿಸಿನಿಂದ ಬೇಡಾ ಎಂದು ಹೇಳಿದ್ರಾ? ಅಥವಾ ರಾಜ್ಯ ಸರ್ಕಾರ ಪ್ರೋಟೋಕಾಲ್ ಪಾಲನೆ ಮಾಡದೇ ಇರುವುದನ್ನು ಮುಚ್ಚಿಕೊಳ್ಳಲು ಚಲುವರಾಯಸ್ವಾಮಿ ಹೀಗೆ ಮಾತಾಡಿದ್ದರಾ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.