Tag: ಚಲುವರಾಯಸ್ವಾಮಿ

  • ಮಂಡ್ಯ ಕ್ಷೇತ್ರವನ್ನ ಜೆಡಿಎಸ್‍ಗೆ ಕೊಡಬೇಕು ಅನ್ನೋದು ಕಾನೂನೇನು ಆಗಿಲ್ಲ: ಚಲುವರಾಯಸ್ವಾಮಿ

    ಮಂಡ್ಯ ಕ್ಷೇತ್ರವನ್ನ ಜೆಡಿಎಸ್‍ಗೆ ಕೊಡಬೇಕು ಅನ್ನೋದು ಕಾನೂನೇನು ಆಗಿಲ್ಲ: ಚಲುವರಾಯಸ್ವಾಮಿ

    ಮಂಡ್ಯ: ಲೋಕಸಭೆಗೆ ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಪಕ್ಷ ಹಾಗೂ ಕಾರ್ಯಕರ್ತರ ಹಿತ ದೃಷ್ಟಿಯಿಂದ ಜಿಲ್ಲೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳದಿರುವುದು ಒಳ್ಳೆಯದು ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

    ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಅಭ್ಯರ್ಥಿಯಾಗಲ್ಲ. ಆದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಚುನಾವಣಾ ಆಯೋಗ ನಿನ್ನೆಯಷ್ಟೇ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ನಮ್ಮ ಪಕ್ಷದ ಮುಖಂಡರು ಇನ್ನು ಸಭೆ ಕರೆದಿಲ್ಲ. ಪಕ್ಷದ ಮುಖಂಡರು ಈ ಕುರಿತು ತೀರ್ಮಾನ ಮಾಡುತ್ತಾರೆ. ಆದರೆ ಕ್ಷೇತ್ರದ ಜನರ ಅಭಿಪ್ರಾಯವನ್ನು ನಾನು ಮುಖಂಡರಿಗೆ ತಿಳಿಸುತ್ತೇನೆ ಎಂದರು.

    ದೇವೇಗೌಡರೇ ಹೇಳಿರುವಂತೆ ಹೊಂದಾಣಿಕೆ ಅನ್ನುವುದು ವಿಧಾನಸೌಧಕ್ಕೆ ಮಾತ್ರ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೇ ಈ ಹಿಂದೆ ನಡೆದ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಅವರೇ ಮುಂದೆ ನಿಂತು ಪ್ರಚಾರ ಮಾಡಿದ್ದಾರೆ. ಅಲ್ಲದೇ ಸ್ನೇಹಯುತ ಸ್ಪರ್ಧೆ ಮಾಡುವುದರಿಂದ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ. ಜಿಲ್ಲೆಯಲ್ಲಿ 7 ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇದ್ದರೂ ಕೂಡ ಕಾಂಗ್ರೆಸ್ ಪಕ್ಷ ಹೋರಾಟ ಮಾಡಲಿದೆ. ಚುನಾವಣೆಯಲ್ಲಿ ಯಾರೇ ಗೆದ್ದರೂ 5 ರಿಂದ 10 ಸಾವಿರ ಮತಗಳ ಅಂತರದಿಂದ ಗೆಲ್ಲಬಹುದು ಅಷ್ಟೇ ಎಂದು ತಿಳಿಸಿದರು.

    ಜೆಡಿಎಸ್ ಮುಖಂಡರ ವಿರುದ್ಧ ಅಕ್ರೋಶ: ಕಾಂಗ್ರೆಸ್ ಅವರು 80 ಜನ ಇಟ್ಟುಕೊಂಡು ನಮಗೆ ಮುಖ್ಯಮಂತ್ರಿ ಕೊಟ್ಟಿದ್ದಾರೆ ಎಂಬ ನಡವಳಿಕೆ ವಿಧಾನಸೌಧದಲ್ಲೂ ನಡೆಯುತ್ತಿಲ್ಲ, ರಾಜ್ಯದಲ್ಲೂ ನಡೆಯುತ್ತಿಲ್ಲ. ಪಕ್ಷ ತೀರ್ಮಾನ ಮಾಡಿದೆ ಎಂದು ನಾವು ಎಲ್ಲೂ ಮಾತನಾಡುತ್ತಿಲ್ಲ ಎಂದು ಜೆಡಿಎಸ್ ಪಕ್ಷದ ನಡವಳಿಕೆ ವಿರುದ್ಧ ಆಕ್ರೋಶ ಹೊರಹಾಕಿದರು.

    ಕ್ಷೇತ್ರದ ಜನ ಮತ್ತು ಕಾರ್ಯಕರ್ತರು ಹೊಂದಾಣಿಕೆ ಬೇಡ ಎನ್ನುತ್ತಿದ್ದಾರೆ. ಆದರೆ ಮೈತ್ರಿ ಬಗ್ಗೆ ಅಂತಿಮವಾಗಿ ಪಕ್ಷದ ವರಿಷ್ಠರು ನಿರ್ಧಾರ ಮಾಡಲಿದ್ದಾರೆ. ಮಂಡ್ಯ ಕ್ಷೇತ್ರವನ್ನ ಜೆಡಿಎಸ್‍ಗೆ ಕೊಡಬೇಕು ಎಂಬ ಕಾನೂನು ಆಗಿಲ್ಲ. ಜೆಡಿಎಸ್ ಅವರು ಕೇಳುವುದು ಮಾಮೂಲಿ ಕೇಳುತ್ತಾರೆ. ಪಕ್ಷ ಹಾಗೂ ಕಾರ್ಯಕರ್ತರ ಹಿತ ದೃಷ್ಟಿಯಿಂದ ಹೊಂದಾಣಿಕೆ ಅಗತ್ಯವಿಲ್ಲ ಎಂಬುವುದು ನನ್ನ ಅಭಿಪ್ರಾಯ.

    ಇದೇ ವೇಳೆ ಚುನಾವಣಾ ಆಯೋಗದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸಂವಿಧಾನ ಪೀಠದಲ್ಲಿರುವವರು ನೈಸರ್ಗಿಕ ನ್ಯಾಯದ ಬಗ್ಗೆಯೂ ಚಿಂತನೆ ಮಾಡಬೇಕು. ಚುನಾವಣೆ 6 ತಿಂಗಳಿಗಿಂತ ಹೆಚ್ಚು ದಿನ ಖಾಲಿ ಇರಬಾರದು ಎಂದಿದೆ. ಈಗಿನ ಚುನಾವಣೆ ಘೋಷಣೆ ಪ್ರಕಾರ ಡಿಸೆಂಬರ್ 12 ಕ್ಕೆ ಫಲಿತಾಂಶ ಬರುತ್ತದೆ. ಆಗಿನಿಂದ ಮಾರ್ಚ್ ವರೆಗೆ ಮಾತ್ರ ಸಂಸದರಾಗಿರುತ್ತಾರೆ. ಆದ್ದರಿಂದ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಇದ್ದಾಗ ಮತ್ತು ಅಗತ್ಯ ಇರುವ ಕಡೆ ಮಾತ್ರ ಚುನಾವಣೆ ನಡೆಸುವ ಬಗೆಗೆ ಸಂವಿಧಾನ ತಿದ್ದುಪಡಿ ಮಾಡಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಧ್ಯಮಗಳನ್ನು ಟೀಕಿಸಿ ಎಚ್‍ಡಿಡಿಗೆ ಟಾಂಗ್ ಕೊಟ್ಟ ಚಲುವರಾಯಸ್ವಾಮಿ

    ಮಾಧ್ಯಮಗಳನ್ನು ಟೀಕಿಸಿ ಎಚ್‍ಡಿಡಿಗೆ ಟಾಂಗ್ ಕೊಟ್ಟ ಚಲುವರಾಯಸ್ವಾಮಿ

    ಮಂಡ್ಯ: ಬಸ್ ದರ ಏರಿಕೆ ವಿಚಾರವಾಗಿ ರಾಷ್ಟ್ರೀಯ ನಾಯಕರು ಅಷ್ಟೊಂದು ತುಚ್ಛವಾಗಿ ಹೇಳಿರಲ್ಲ, ಮಾಧ್ಯಮದವರು ಉಪ್ಪು ಖಾರ ಸೇರಿಸಿ ಹೇಳಿದ್ದಾರೆ ಎಂದು ಟೀಕಿಸಿ ತೈಲ ಬೆಲೆ ಏರಿಕೆಯಾದರೆ ನೀರಲ್ಲಿ ಓಡಿಸಲಾಗುತ್ತಾ ಎಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಗೆ ಮಾಜಿ ಸಚಿವ ಚಲುವರಾಯಸ್ವಾಮಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

    ತೈಲ ಬೆಲೆ ಏರಿಕೆ ವಿರೋಧಿಸಿ ಬಂದ್‍ನಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಮಿಸಿದ ವೇಳೆ ಮಾತನಾಡಿದ ಅವರು ತೈಲ ಬೆಲೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಬೆಂಗಳೂರು ಮೈಸೂರು ಹೆದ್ದಾರಿ ಸೇರಿದಂತೆ ಮಂಡ್ಯ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೇಂದ್ರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಇದನ್ನು ಓದಿ: ದರ ಇಳಿಸಿ ಅಂದ್ರೆ ನೀರಲ್ಲಿ ಬಸ್ ಓಡಿಸುವುದಕ್ಕೆ ಸಾಧ್ಯವಾಗುತ್ತಾ..?- ಎಚ್‍ಡಿಡಿ

    ಡಿಕೆ ಶಿವಕುಮಾರ್ ಅವರ ವಿಚಾರಕ್ಕೆ ಪ್ರತಿಕ್ರಿಯಿಸಿ ಕರ್ನಾಟಕದಲ್ಲಿ ಪ್ರಭಾವಿ ನಾಯಕರಾಗಿದ್ದು, ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಅವರ ಮೇಲೆ ಐಟಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಐಟಿ ದಾಳಿ ಸರ್ಕಾರದ ಮೇಲೂ ಪರಿಣಾಮ ಬೀರಲ್ಲ. ಡಿಕೆ ಶಿವಕುಮಾರ್ ಮೇಲೂ ಪರಿಣಾಮ ಬೀರಲ್ಲ. ಬಿಜೆಪಿ ಅನೇಕ ಕಡೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಆತಂಕ ಬೇಡ. ನಾವೆಲ್ಲರೂ ಡಿಕೆ ಶಿವಕುಮಾರ್ ಜೊತೆ ಇದ್ದೇವೆ. ಅವರೂ ಕೂಡ ಐಟಿ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಾರೆ ಎಂದರು.

    ಪ್ರಧಾನಿ ವಿರುದ್ಧವೂ ಹರಿಹಾಯ್ದ ಅವರು ಮೋದಿ ನೀಡಿದ ಒಂದೊಂದು ಭರವಸೆಯೂ ಹುಸಿಯಾಗಿದೆ. ಆರು ತಿಂಗಳಲ್ಲಿ ಚುನಾವಣೆ ಇರುವುದರಿಂದ ಇಲ್ಲದ್ದನ್ನು ಗಿಮಿಕ್ ಮಾಡುತ್ತಿದ್ದಾರೆ ಎಂದು ದೂರಿದರು.

    ಪ್ರತಿಭಟನೆಯ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕೆಲವೊಂದು ಅಂಗಡಿಗಳನ್ನು ಬಲವಂತವಾಗಿ ಬಾಗಿಲು ಹಾಕಿಸಿದ್ದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅವರು ಏನೇನು ಮಾಡ್ತಾರೋ ಮಾಡಲಿ ನೋಡೋಣ: ಜೆಡಿಎಸ್ ವರಿಷ್ಠರ ವಿರುದ್ಧ ಚಲುವರಾಯಸ್ವಾಮಿ ಕಿಡಿ

    ಅವರು ಏನೇನು ಮಾಡ್ತಾರೋ ಮಾಡಲಿ ನೋಡೋಣ: ಜೆಡಿಎಸ್ ವರಿಷ್ಠರ ವಿರುದ್ಧ ಚಲುವರಾಯಸ್ವಾಮಿ ಕಿಡಿ

    ಮಂಡ್ಯ: ಜಿಲ್ಲೆಯ ವಿಷಯ ಬಂದಾಗ ದ್ವೇಷದ ರಾಜಕಾರಣ ಮಾಡುತ್ತಲೇ ಬಂದಿದ್ದಾರೆ. ಅವರು ಏನೇನು ಮಾಡುತ್ತಾರೋ ಮಾಡಲಿ ನೋಡೋಣ ಎಂದು ಜೆಡಿಎಸ್ ವರಿಷ್ಠರ ವಿರುದ್ಧ ಮಾಜಿ ಶಾಸಕ ಚಲುವರಾಯಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ನಾಗಮಂಗಲ ತಾಲೂಕಿನ, ಬೆಳ್ಳೂರು ಪಟ್ಟಣ ಪಂಚಾಯತ್ ಒಟ್ಟು 13 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್ ಪಕ್ಷದ ಏಳು ಸದಸ್ಯರು ಗೆಲುವು ಸಾಧಿಸಿದ್ದಾರೆ. ಆದರೆ ಬೆಳ್ಳೂರು ಪಟ್ಟಣ ಪಂಚಾಯತ್ ಅಧ್ಯಕ್ಷ ಸ್ಥಾನ ಎಸ್‍ಟಿಗೆ ಮೀಸಲಾಗಿದೆ. ಪಕ್ಷೇತರಾಗಿ ಸ್ಪರ್ಧಿಸಿ ಗೆಲುವು ಸ್ಪರ್ಧಿಸಿರುವ ರಾಮಲಿಂಗಯ್ಯ ಮಾತ್ರ ಎಸ್‍ಟಿ ಪಂಗಡಕ್ಕೆ ಸೇರಿದವರಾಗಿದ್ದು, ಬಹುಮತ ಪಡೆದ ಕಾಂಗ್ರೆಸ್ ಸದಸ್ಯರು ಅಧ್ಯಕ್ಷ ಸ್ಥಾನದಿಂದ ವಂಚಿತರಾಗುತ್ತಿದ್ದಾರೆ. ಅಷ್ಟೇ ಅಲ್ಲದೆ ರಾಮಲಿಂಗಯ್ಯ ಜೆಡಿಎಸ್ ಶಾಸಕ ಸುರೇಶ್‍ಗೌಡ ಬೆಂಬಲಿಗರಾಗಿದ್ದು ಪರೋಕ್ಷವಾಗಿ ಜೆಡಿಎಸ್ ಅಧಿಕಾರ ಹಿಡಿದಂತಾಗುತ್ತಿದೆ ಎಂದರು.

    ತಮ್ಮ ಸ್ವಕ್ಷೇತ್ರ ನಾಗಮಂಗಲದಲ್ಲಿ ತಮ್ಮ ಬೆಂಬಲಿಗರಿಗೆ ಆಗುತ್ತಿರುವ ಅನ್ಯಾಯದಿಂದ ಬೇಸರಗೊಂಡ ಅವರು ಜಿಲ್ಲೆಯ ವಿಷಯ ಬಂದಾಗ ದ್ವೇಷದ ರಾಜಕಾರಣ ಮಾಡುತ್ತಲೇ ಬಂದಿದ್ದಾರೆ. ಇದೇನು ನಮಗೆ ಹೊಸದಲ್ಲ. ಪರಿಸ್ಥಿತಿ ಗೊತ್ತಿರುವುದರಿಂದ ನಾವೇನು ಮಾಡುವಂತಿಲ್ಲ. ಅವರು ಏನೇನು ಮಾಡ್ತಾರೋ ಮಾಡಲಿ ನೋಡೋಣ ಎಂದು ಕಿಡಿಕಾರಿದ್ದಾರೆ.

    ಜೆಡಿಎಸ್‍ನವರು ನಾಲ್ಕು ಜನ ಗೆದ್ದಿದ್ದಾಗ ಎಸ್‍ಟಿ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ಮಾಡಿಸಿಕೊಂಡು ಬರುತ್ತಾರೆ ಅಂದರೆ ಅದರಲ್ಲಿ ರಹಸ್ಯ ಏನಿಲ್ಲ. ಇದನ್ನೆಲ್ಲ ಜನ ನೋಡಲಿ. ನಾವು ಅವರಿಗೆ ಏನು ಕೇಳಲು ಹೋಗಲ್ಲ. ಬೇಡಿಕೆಯನ್ನೂ ಸಲ್ಲಿಸುವುದಿಲ್ಲ. ಜಿಲ್ಲೆ ವಿಚಾರ ಬಂದಾಗ ಜನತಾದಳ ಸರ್ಕಾರ, ಮಂತ್ರಿಗಳು, ಶಾಸಕರು ಏನು ಬೇಕಾದರು ತೀರ್ಮಾನ ತೆಗೆದುಕೊಳ್ಳಬಹುದು. ಅಷ್ಟೇ ಅಲ್ಲದೇ ಈಗ ಆಗಿರುವ ಬೆಳವಣಿಗೆ ಬಗ್ಗೆ ನಾನು ಯಾರ ಗಮನಕ್ಕೂ ತರುವುದಿಲ್ಲ. ಸ್ವತಂತ್ರ ಅಭ್ಯರ್ಥಿ ರಾಮಲಿಂಗಯ್ಯ ಕೂಡ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿದ್ರಾಮಯ್ಯ ಒಂಟಿಯಲ್ಲ, ಮಂಡ್ಯದಲ್ಲಿ ಕಾಂಗ್ರೆಸ್ಸಿನಿಂದ ಜೆಡಿಎಸ್ ಟಾರ್ಗೆಟ್: ಚೆಲುವರಾಯಸ್ವಾಮಿ

    ಸಿದ್ರಾಮಯ್ಯ ಒಂಟಿಯಲ್ಲ, ಮಂಡ್ಯದಲ್ಲಿ ಕಾಂಗ್ರೆಸ್ಸಿನಿಂದ ಜೆಡಿಎಸ್ ಟಾರ್ಗೆಟ್: ಚೆಲುವರಾಯಸ್ವಾಮಿ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಒಂಟಿಯಲ್ಲ ಎಂದು ಮಾಜಿ ಶಾಸಕ ಚೆಲುವರಾಯಸ್ವಾಮಿ ಹೇಳಿದ್ದಾರೆ.

    ಸಿದ್ದರಾಮಯ್ಯ ಅವರನ್ನು ಇಂದು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಒಂಟಿಯಲ್ಲ. ಒಂಟಿ ಅಂತಾ ಯಾರಾದ್ರೂ ಅನ್ಕೊಂಡ್ರೆ ಅವರಷ್ಟು ದಡ್ಡರು ಮತ್ಯಾರು ಇಲ್ಲ. ಎಲ್ಲ ಶಾಸಕರು, ಮಾಜಿ ಶಾಸಕರು, ಸಚಿವರು, ಸಂಸದರು ಸಿದ್ದರಾಮಯ್ಯ ಜೊತೆಗಿದ್ದಾರೆ ಅಂದ್ರು.

    ನಾನು ಯಾವುದೇ ಕಾರಣಕ್ಕೂ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಲ್ಲ. ಎಂಪಿಗೆ ನಾನು ಸ್ಪರ್ಧಿಸಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನ ಜೆಡಿಎಸ್ ನವರು ಟಾರ್ಗೆಟ್ ಮಾಡಿದ್ದಾರೆ ಇದು ಸತ್ಯ. ಇದು ಎಲ್ಲ ನಾಯಕರಿಗೂ ಗೊತ್ತಿರೋ ವಿಚಾರವಾಗಿದೆ. ಆದರೂ ನಾವು ಸಹಿಸ್ಕೊಂಡು ಇರಬೇಕಾಗಿದೆ ಅಂದ್ರು. ಇದನ್ನೂ ಓದಿ: ಸಿದ್ದರಾಮಯ್ಯ ಏಕಾಂಗಿ ಅಲ್ಲ, ಅವರು ಮಾಸ್ ಲೀಡರ್: ಹೆಚ್.ಎಂ.ರೇವಣ್ಣ

    ಸಿದ್ದರಾಮಯ್ಯ ಮತ್ತೆ ಸಿಎಂ ಅನ್ನೋ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಅವರು, ಅವರು ಬೇರೆ ಅರ್ಥದಲ್ಲಿ ಹೇಳಿದ್ದಾರೆ ನೀವು ಬೇರೆಯದಾಗೇ ತಿಳಿದುಕೊಂಡಿದ್ದೀರಿ. ಸರ್ಕಾರದಲ್ಲಿ ಪಕ್ಷದ ಪರವಾಗಿ ಡಿಸಿಎಂ ಪರಮೇಶ್ವರ್, ಸಚಿವ ಡಿಕೆ ಶಿವಕುಮಾರ್ ಇದ್ದಾರೆ. ಎಲ್ಲದರ ಬಗ್ಗೆ ಅವರೇ ಮಾತಾಡ್ತಾರೆ. ಲೋಕಸಭೆಯಲ್ಲಿ ಮೈತ್ರಿ ವಿಚಾರ ಹೈಕಮಾಂಡ್ ಗೆ ಬಿಟ್ಟದ್ದು ಅಂತ ತಿಳಿಸಿದ್ರು. ಇದನ್ನೂ ಓದಿ: ನಾನು ಮತ್ತೆ ಮುಖ್ಯಮಂತ್ರಿ ಆಗ್ತೀನಿ-ಸಿದ್ದರಾಮಯ್ಯ

    ಕಾಂಗ್ರೆಸ್‍ನಲ್ಲಿದ್ದೀವಿ. ಸೋತಿದ್ದೀವಿ, ಅವರು ಗೆದ್ದಿದ್ದಾರೆ. ಮುಂದೆ ನಾವು ಗೆಲ್ತೀವಿ, ಅವರು ಸೋಲ್ತಾರೆ ನೋಡೋಣ ಅಂದ ಮಾಗಡಿ ಕ್ಷೇತ್ರದಲ್ಲಿ ಜೆಡಿಎಸ್ ದಬ್ಬಾಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಮಾಜಿ ಶಾಸಕ ಬಾಲಕೃಷ್ಣ, ಕಾಲಚಕ್ರ ಉರುಳುತ್ತದೆ. ನಾನು ನಾಲ್ಕು ಬಾರಿ ಗೆದ್ದಿದ್ದೇನೆ. ಈ ಬಾರಿ ಸೋತಿದ್ದೇನೆ, ಗೆದ್ದವರು ಸೋಲ್ತಾರೆ, ಸೋತೋರು ಗೆಲ್ತಾರೆ ಅಂದ್ರು. ಇದನ್ನೂ ಓದಿ: ನಾನು ಸಿಎಂ ಆಗ್ಬೇಕು ಅನ್ನೋದು ಜನರ ಇಚ್ಛೆ, ನನ್ನ ಆಸೆ ಅಲ್ಲ: ಸಿದ್ದರಾಮಯ್ಯ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ಷೇತ್ರದಲ್ಲಿ ನನ್ನ ನಾಯಕತ್ವವನ್ನ ತಿರಸ್ಕರಿಸಿರೋದನ್ನ ನಾನು ಒಪ್ಪಿಕೊಳ್ತೀನಿ: ಚಲುವರಾಯಸ್ವಾಮಿ

    ಕ್ಷೇತ್ರದಲ್ಲಿ ನನ್ನ ನಾಯಕತ್ವವನ್ನ ತಿರಸ್ಕರಿಸಿರೋದನ್ನ ನಾನು ಒಪ್ಪಿಕೊಳ್ತೀನಿ: ಚಲುವರಾಯಸ್ವಾಮಿ

    ಮಂಡ್ಯ: ಕ್ಷೇತ್ರದಲ್ಲಿ ಜನ ನನ್ನ ನಾಯಕತ್ವವನ್ನ ತಿರಸ್ಕರಿಸಿರೋದನ್ನ ನಾನು ಒಪ್ಪಿಕೊಳ್ಳುತ್ತೇನೆ. ಮತದಾರರ ತೀರ್ಪಿಗೆ ನಾನು ತಲೆ ಬಾಗುತ್ತೇನೆ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ.

    ಬೇರೆ ಕ್ಷೇತ್ರದವರ ಸೋಲಿಗೆ ಕಾರಣ ನನಗೆ ಗೊತ್ತಿಲ್ಲ. ಜಾತಿ ಆಧಾರದ ಮೇಲೆ ಈ ಬಾರಿ ರಾಜ್ಯದಲ್ಲಿ ಚುನಾವಣೆ ನಡೆದಿದೆ. ಜಿಲ್ಲೆಯ ಅಭಿವೃದ್ಧಿ ಮಾಡಲಿ ಅಂತ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಜೆಡಿಎಸ್ ಗೆ ಮತ ಹಾಕಿದ್ದಾರೆ. ಆ ಭರವಸೆಯನ್ನ ಅವರು ಉಳಿಸಿಕೊಳ್ಳಲಿ ಎಂದು ಸವಾಲು ಹಾಕಿದರು.

    ಕಾಂಗ್ರೆಸ್ ಜೆಡಿಎಸ್ ಮೈತ್ರಿ ಕುರಿತು ಮಾತನಾಡಿದ ಅವರು, ರಾಷ್ಟ್ರದ ಹಾಗೂ ಮುಂಬರುವ ಚುನಾವಣೆ ದೃಷ್ಟಿಯಿಂದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. 120 ಸೀಟು ಬರಲ್ಲ ಅಂತ ಕುಮಾರಸ್ವಾಮಿ ಅವರಿಗೆ ಗೊತ್ತಿತ್ತು. ಗೊತ್ತಿಲ್ಲದಿರುವಷ್ಟು ಅವರು ಮುಗ್ದರಲ್ಲ. ಕಾಂಗ್ರೆಸ್ ಮಂತ್ರಿಗಳ ಬಗ್ಗೆ ಜೆಡಿಎಸ್ ಎಲ್ಲಿಯೂ ಹಸ್ತಕ್ಷೇಪ ಮಾಡಿಲ್ಲ. ಜಮೀರ್ ಮಂತ್ರಿ ಸ್ಥಾನದ ಬಗ್ಗೆ ಜೆಡಿಎಸ್ ಹಸ್ತಕ್ಷೇಪವಿರುವುದಿಲ್ಲ. ನಾವು ಹೇಳಿದ್ದೆ ನಡೆಯಬೇಕು ಅಂತ ಮೈತ್ರಿ ಬಗ್ಗೆ ಕುಮಾರಸ್ವಾಮಿ ಆಗಲಿ ದೇವೇಗೌಡರಾಗಲಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

  • Income Tax ಸವಾಸ ಗೊತ್ತಿಲ್ಲ ನಿಂಗೆ – ಚಲುವರಾಯಸ್ವಾಮಿಗೆ ಡಿಕೆಶಿ ಬಹಿರಂಗ ಹಿತನುಡಿ

    Income Tax ಸವಾಸ ಗೊತ್ತಿಲ್ಲ ನಿಂಗೆ – ಚಲುವರಾಯಸ್ವಾಮಿಗೆ ಡಿಕೆಶಿ ಬಹಿರಂಗ ಹಿತನುಡಿ

    ಮಂಡ್ಯ: ಶಾಸಕ ಚಲುವರಾಯಸ್ವಾಮಿ ನಿಮಗೆ ಗೊತ್ತಿಲ್ಲ ಇನ್‍ಕಮ್ ಟ್ಯಾಕ್ಸ್ ಸವಾಸ, ನನಗೆ ಗೊತ್ತಿದೆ ಎಂದು ನಗುನಗುತ್ತಲೇ ಸಾವಿರಾರು ಜನರೆದುರು ಐಟಿ ಸಂಕಷ್ಟವನ್ನು ಇಂಧನ ಸಚಿವ ಡಿಕೆ.ಶಿವಕುಮಾರ್ ಬಿಚ್ಚಿಟ್ಟಿದ್ದಾರೆ.

    ನಾಗಮಂಗಲದಲ್ಲಿ ಶುಕ್ರವಾರ ಚಲುವರಾಯಸ್ವಾಮಿ ಪರವಾಗಿ ಸಮಾವೇಶದಲ್ಲಿ ಪಾಲ್ಗೊಂಡ ಅವರು, ತಾವೆದುರಿಸಿದ ಐಟಿ ಸಂಕಷ್ಟವನ್ನು ಬಹಿರಂಗಪಡಿಸಿದ್ದಾರೆ. ಚಲುವರಾಯಸ್ವಾಮಿ ಸಮಾರಂಭ ಮಾಡುವ ಕಷ್ಟ ಹೇಳಿಕೊಂಡು, ಪದೇ ಪದೇ ಸಭೆ ಮಾಡಿ ಎಂದು ಕೇಳಬೇಡಿ ಅಂತಾ ಭಾಷಣ ಮಾಡುತ್ತಿದ್ದರು.

    ಈ ವೇಳೆ ಚಲುವರಾಯಸ್ವಾಮಿ ಇದ್ದಲ್ಲಿಗೆ ಎದ್ದು ಬಂದ ಡಿಕೆಶಿ ಪದೇ ಪದೇ ಸಭೆ ಮಾಡಲು ಆಗಲ್ಲ. ನೀವು ಕಾಂಗ್ರೆಸ್ ಚಿಹ್ನೆ ಹಾಕಿಕೊಂಡು ಓಡಾಡಿದರೂ ಚಲುವರಾಯಸ್ವಾಮಿ ಲೆಕ್ಕಕ್ಕೆ ಬರೀತಾರೆ. ಐಟಿ ಸಂಕಷ್ಟ ನನಗೆ ಗೊತ್ತಿದೆ ಎಂದು ನಗು ನಗುತ್ತಲೇ ಡಿ.ಕೆ. ಶಿವಕುಮಾರ್ ಕಾರ್ಯಕರ್ತರೆದುರು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.

  • ದೇವೇಗೌಡ, ಕುಮಾರಸ್ವಾಮಿ ಕಣ್ಣೀರಿಗೆ ತಲೆಕೆಡಿಸಿಕೊಳ್ಳಬೇಡಿ: ಚಲುವರಾಯಸ್ವಾಮಿ

    ದೇವೇಗೌಡ, ಕುಮಾರಸ್ವಾಮಿ ಕಣ್ಣೀರಿಗೆ ತಲೆಕೆಡಿಸಿಕೊಳ್ಳಬೇಡಿ: ಚಲುವರಾಯಸ್ವಾಮಿ

    ಮಂಡ್ಯ: ಎಲ್ಲರೂ ನಮ್ಮ ವಿರುದ್ಧ ಇದ್ದಾಗಲೇ ಚುನಾವಣೆ ಎದುರಿಸಿದ್ದೇವೆ. ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಕಣ್ಣೀರಿಗೆ ತಲೆಕೆಡಿಸಿಕೊಳ್ಳಬೇಡಿ. ಅವರಿಗೆ ಕೊಡುವ ಗೌರವವನ್ನು ಕೊಟ್ಟಿದ್ದೇವೆ ಎಂದು ಶಾಸಕ ಎನ್ ಚಲುವರಾಯಸ್ವಾಮಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

    ಹೆಚ್‍ಡಿಕೆ ಮತ್ತು ಹೆಚ್‍ಡಿಡಿ ಅವರಿಗೆ ಕೊಡಬೇಕಾದ ಸ್ಥಾನವನ್ನ ಈ ಸಮಾಜ ಕೊಟ್ಟಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದ ಆದಿ ಚುಂಚನಗಿರಿ ಮಠಕ್ಕೆ ಅವರು ಗೌರವ ಕೊಟ್ಟಿಲ್ಲ. ರಾಜಕಾರಣದ ಆರವತ್ತು ವರ್ಷಗಳಲ್ಲಿ ಒಬ್ಬ ಒಕ್ಕಲಿಗ ವ್ಯಕ್ತಿಯನ್ನು ಒಂದು ಒಳ್ಳೆಯ ಸ್ಥಾನಕ್ಕೆ ತಂದಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಬೇಕಿದೆ. ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆದ ಚುಂಚನಗಿರಿ ಮಠಕ್ಕೆ ಅವರು ಗೌರವ ಕೊಟ್ಟಿಲ್ಲ ಅಂತಾ ವಾಗ್ದಾಳಿ ನಡೆಸಿದ್ರು.

    ಒಂದು ಉತ್ತಮ ಸ್ಥಾನವನ್ನು ಒಬ್ಬ ರೈತ, ಉದ್ಯೋಗಸ್ಥ, ಅಧಿಕಾರಿ, ರಾಜಕಾರಣಿ ಯಾರದ್ದಾದರೂ ಒಂದು ಹೆಸರು ಹೇಳಲು ಹೇಳಲಿ. ಇಂದು ನಮ್ಮ ನಮ್ಮ ಬದುಕನ್ನು ನಾವೇ ನೋಡಿಕೊಳ್ಳಬೇಕಿದೆ. ಹಾಗಾಗಿ ನಮ್ಮ ತಾಲೂಕಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಮೂಲಕ ನಮ್ಮೆಲ್ಲರ ಅಭಿವೃದ್ಧಿ ಮಾಡಿಕೊಳ್ಳಬೇಕಿದೆ. ಚುನಾವಣೆ ಮುಗಿಯುವವರೆಗೂ ಮೂವತ್ತು ದಿವಸ ಎಲ್ಲ ಕೆಲಸ ಬಿಟ್ಟು ಚುನಾವಣೆ ಕಡೆ ಕೇಂದ್ರೀಕರಿಸಿ ಅಂತಾ ಕಾರ್ಯಕರ್ತರಿಗೆ ಕರೆ ಕೊಟ್ಟರು.

  • ಕಾಲಭೈರವನ ಸನ್ನಿಧಿಯಲ್ಲಿ ರೆಬೆಲ್ ಶಾಸಕರಿಂದ ಅಮಾವಾಸ್ಯೆ ಪೂಜೆ

    ಕಾಲಭೈರವನ ಸನ್ನಿಧಿಯಲ್ಲಿ ರೆಬೆಲ್ ಶಾಸಕರಿಂದ ಅಮಾವಾಸ್ಯೆ ಪೂಜೆ

    ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ನಂತರ ಇದೀಗ ಜೆಡಿಎಸ್ ಬಂಡಾಯ ಶಾಸಕರಾದ ಚಲುವರಾಯಸ್ವಾಮಿ, ರಮೇಶ್‍ಬಾಬು ಬಂಡಿಸಿದ್ದೇಗೌಡ ಹಾಗೂ ಬಾಲಕೃಷ್ಣ ಆದಿಚುಂಚನಗಿರಿ ಕಾಲಭೈರವೇಶ್ವರ ಕ್ಷೇತ್ರಾದಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

    ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಆಗಮಿಸಿರುವ ಜೆಡಿಎಸ್ ಬಂಡಾಯ ಶಾಸಕರು, ಮೊದಲು ಹೋಮದಲ್ಲಿ ಪಾಲ್ಗೊಂಡ್ರು. ಸ್ವತಃ ನಿರ್ಮಲಾನಂದನಾಥ ಸ್ವಾಮೀಜಿಗಳೇ ಮುಂದೆ ನಿಂತು ಪೂಜೆ ನೆರವೇರಿಸಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಸಕ ರೇವಣ್ಣ ದಂಪತಿ ಆಗಮಿಸಿ ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಅಮವಾಸ್ಯೆ ಪೂಜೆ ಸಲ್ಲಿಸಿದ್ರು.

    ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಸತತ ಮೂರು ಅಮವಾಸ್ಯೆ ಪೂಜೆ ಸಲ್ಲಿಸಿದ್ರೆ ಇಷ್ಟಾರ್ಥ ಸಿದ್ಧಿ ಆಗುತ್ತೆ ಎಂಬ ಪ್ರಬಲವಾದ ನಂಬಿಕೆಯಿದೆ. ಹೀಗಾಗಿ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಮೂವರು ಪ್ರತ್ಯೇಕವಾಗಿ ಪತ್ನಿ ಸಮೇತರಾಗಿ ಆಗಮಿಸಿ ಮೂರು ಅಮವಾಸ್ಯೆ ಪೂಜೆ ನೆರವೇರಿಸಿದ್ರು. ರಾಜ್ಯದ ಜನರಿಗೆ ಒಳಿತಾಗಲಿ, ಜೆಡಿಎಸ್ ಅಧಿಕಾರಕ್ಕೆ ಬರಲಿ ಎಂದು ಕಾಲಭೈರವೇಶ್ವರ ಸ್ವಾಮಿಯಲ್ಲಿ ಕೇಳಿಕೊಂಡಿದ್ರು. ಇದೀಗ ಬಂಡಾಯ ಶಾಸಕರು ತಮ್ಮ ಪತ್ನಿ ಸಮೇತರಾಗಿ ಬಂದು ಪೂಜೆ ಸಲ್ಲಿಸುತ್ತಿದ್ದಾರೆ.

    ಈ ಹಿಂದೆ ನಾನು ಜೆಡಿಎಸ್ ಪಕ್ಷಕ್ಕೆ, ವರಿಷ್ಠರಿಗೆ ಅನ್ಯಾಯ ಮಾಡಿಲ್ಲ. ಈ ಬಗ್ಗೆ ಮುಂದೊಂದು ದಿನ ಕಾಲಭೈರವೇಶ್ವರ ಸನ್ನಿಧಿಯಲ್ಲಿ ಪ್ರಮಾಣ ಕೂಡ ಮಾಡುತ್ತೇನೆ ಎಂದು ಚಲುವರಾಯಸ್ವಾಮಿ ಹೇಳಿದ್ರು. ಹೀಗಾಗಿ ಪೂಜೆ ನಂತ್ರ ಚಲುವರಾಯಸ್ವಾಮಿ ಪ್ರಮಾಣ ಮಾಡುತ್ತಾರಾ ಎಂಬ ಕುತೂಹಲವೂ ಮೂಡಿದ್ದು, ಬಂಡಾಯ ಶಾಸಕರ ಪೂಜೆ ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ.

     

  • ಜೆಡಿಎಸ್‍ನಿಂದ ಅಮಾನತ್ತಾದ ಶಾಸಕರು ಮದುವೆಗಿಂತ ಮುಂಚೆಯೇ ಪ್ರಸ್ಥ ಮಾಡ್ಕೊಳ್ತಿದ್ದಾರೆ- ಮಾಜಿ ಶಾಸಕ ಸುರೇಶ್ ಗೌಡ

    ಜೆಡಿಎಸ್‍ನಿಂದ ಅಮಾನತ್ತಾದ ಶಾಸಕರು ಮದುವೆಗಿಂತ ಮುಂಚೆಯೇ ಪ್ರಸ್ಥ ಮಾಡ್ಕೊಳ್ತಿದ್ದಾರೆ- ಮಾಜಿ ಶಾಸಕ ಸುರೇಶ್ ಗೌಡ

    ಮಂಡ್ಯ: ಜೆಡಿಎಸ್‍ನಿಂದ ಅಮಾನತ್ತಾದ ಶಾಸಕರು ಒಂದು ರೀತಿಯ ಆಧುನಿಕ ಶಾಸಕರಾಗಿದ್ದಾರೆ. ಅವರೀಗ ಲಿವ್ ಇನ್ ಟುಗೇದರ್ ಮಾಡುತ್ತಿದ್ದಾರೆ. ಮದುವೆಗಿಂತ ಮುಂಚೆಯೇ ಅವರು ಪ್ರಸ್ಥ ಮಾಡಿಕೊಳ್ಳುತ್ತಾರೆ ಎಂದು ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಸುರೇಶ್‍ಗೌಡ ವಾಗ್ದಾಳಿ ನಡೆಸಿದ್ದಾರೆ.

    ಜಮೀರ್ ಅಹಮದ್ ಜೊತೆಯಲ್ಲಿ ಚಲುವರಾಯಸ್ವಾಮಿ ನಾಗಮಂಗಲದಲ್ಲಿ ಬೈಕ್ ಜಾಥಾ ನಡೆಸಿದ್ರು. ಈ ವೇಳೆ ಕಾರ್ಯಕರ್ತರು ತಮ್ಮ ಕೈಯಲ್ಲಿ ಕಾಂಗ್ರೆಸ್ ಬಾವುಟ ಹಿಡಿದು ಬೈಕ್ ಜಾಥಾದಲ್ಲಿ ಪಾಲ್ಗೊಂಡಿದ್ರು. ಈ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಶಾಸಕ ಸುರೇಶ್ ಗೌಡ, ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಸೇರದೇ ಇದ್ದರೂ ಹಣಕ್ಕಾಗಿ ಯಾವ ಆಟ ಬೇಕಾದ್ರೂ ಆಡುತ್ತಾರೆ ಎಂದು ಟೀಕಿಸಿದರು.

    ಶಿಖಂಡಿ ರಾಜಕಾರಣಿ: ಸಿದ್ದರಾಮಯ್ಯ ಅವರ ಕೈಯಲ್ಲಿ ಅಧಿಕಾರ ಇರುವವರೆಗೂ ಅವರು ಅಲ್ಲಿರುತ್ತಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ವೀಕ್ ಆದ ನಂತರ ಬೇರೆ ಪಕ್ಷ ನೋಡುತ್ತಾರೆ. ಇವರಿಗೆ ನಿಯತ್ತು ನಂಬಿಕೆ ಇಲ್ಲ. ಚಲುವರಾಯಸ್ವಾಮಿಗೆ ಚಾಲೆಂಜ್ ಮಾಡುತ್ತೇನೆ. ಎಚ್‍ಎಎಲ್ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನನ್ನ ಮೇಲಿನ ಆರೋಪ ಸಾಬೀತು ಪಡಿಸಿದ್ರೆ ರಾಜಕೀಯ ಬಿಟ್ಟು ಹೋಗ್ತೀನಿ. ಇಲ್ಲದಿದ್ದರೆ ಅವನು ಬಿಟ್ಟು ಹೋಗ್ತಾನೆ. ಸಿದ್ದರಾಮಯ್ಯ ಇದ್ದಾರೆ ಎಂದು ನನ್ನ ಮೇಲೆ ಇಲ್ಲ ಸಲ್ಲದ ಕೇಸ್ ಹಾಕಿಸಿದ್ದಾರೆ. ಅವನೊಬ್ಬ ಶಿಖಂಡಿ ರಾಜಕಾರಣಿ ಎಂದು ಆಕ್ರೋಶ ಹೊರಹಾಕಿದ್ರು.

    ಚಲುವರಾಯಸ್ವಾಮಿ ಯಾವಾಗಲೂ ಹಿಂದಿನಿಂದ ಯುದ್ಧ ಮಾಡ್ತಾನೆ. ಶಿಖಂಡಿ ಆಗಲಿ ಯಾರೇ ಆಗಲಿ ನಮ್ಮೆದುರು ಬಂದಾಗ ತೀರಿಸಬೇಕಾಗುತ್ತೆ. ರಾಜಕೀಯವಾಗಿ ಚಲುವರಾಯಸ್ವಾಮಿಯನ್ನು ತೀರಿಸುವವನೇ ನಾನು. ನನ್ನದು ಒಂದೇ ಗುರಿ, ಒಂದೇ ಶಪಥ ಚಲುವರಾಯಸ್ವಾಮಿ ಸೋಲುವವರೆಗೂ ನಾನು ವಿರಮಿಸುವುದಿಲ್ಲ. ಚಲುವರಾಯಸ್ವಾಮಿ ಒಬ್ಬ ದುಷ್ಠ ವ್ಯಕ್ತಿ. ವೈಯಕ್ತಿಕವಾಗಿ ರಾಜಕೀಯವಾಗಿ ನಾನು ಚಲುವರಾಯಸ್ವಾಮಿ ದ್ವೇಷಿ ಎಂದು ಸುರೇಶ್‍ಗೌಡ ಹೇಳಿದರು.

  • ಕುಮಾರಸ್ವಾಮಿಗೆ ನಂಬಿಕೆದ್ರೋಹ ಮಾಡಿದ್ದು ನಾವಲ್ಲ, ಬಿಎಸ್‍ವೈಗೆ ಹೆಚ್‍ಡಿಕೆಯಿಂದ ದ್ರೋಹ: ಚೆಲುವರಾಯಸ್ವಾಮಿ

    ಕುಮಾರಸ್ವಾಮಿಗೆ ನಂಬಿಕೆದ್ರೋಹ ಮಾಡಿದ್ದು ನಾವಲ್ಲ, ಬಿಎಸ್‍ವೈಗೆ ಹೆಚ್‍ಡಿಕೆಯಿಂದ ದ್ರೋಹ: ಚೆಲುವರಾಯಸ್ವಾಮಿ

    – ಮುಂದಿನ ಚುನಾವಣೆಗೆ ನಾಗಮಂಗಲದಿಂದಲೇ ಸ್ಪರ್ಧೆ

    ಬೆಂಗಳೂರು: ಕುಮಾರಸ್ವಾಮಿ ಅವರಿಗೆ ದ್ರೋಹ ಮಾಡಿದ್ದು ನಾವಲ್ಲ. ಯಡಿಯೂರಪ್ಪಗೆ ಕುಮಾರಸ್ವಾಮಿ ದ್ರೋಹ ಮಾಡಿದ್ದು ಎಂದು ಜೆಡಿಎಸ್ ರೆಬಲ್ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ.

    ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಚಲುವರಾಯಸ್ವಾಮಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕುಮಾರಸ್ವಾಮಿಯವರಿಗೆ ನಂಬಿಕೆ ದ್ರೋಹ ಮಾಡಿದ್ದು ನಾವಲ್ಲ. ರಾಮಕೃಷ್ಣ ಹೆಗಡೆ ಬೊಮ್ಮಯ್ಯ ಜೆಡಿಎಸ್ ಪಕ್ಷದಲ್ಲಿ ಏನಾಯ್ತು. ಯಡಿಯೂರಪ್ಪರಿಗೆ ನಂಬಿಕೆ ದ್ರೋಹ ಮಾಡಿದ್ದು ಕುಮಾರಸ್ವಾಮಿ. ಬಿಜೆಪಿ ಬೆಂಬಲ ಇಲ್ಲದೆ ಕುಮಾರಸ್ವಾಮಿ ಸಿಎಂ ಆಗ್ತಿದ್ರಾ? ದೇವೇಗೌಡರು ಸಿಎಂ ಆಗೋಕೆ ಬೆಂಬಲ ನೀಡಿದ್ದು ಯಾರು? ಬಿಎಸ್‍ವೈ ಗೆ 20 ತಿಂಗಳು ಅಧಿಕಾರ ಕೊಡದೆ ದ್ರೋಹ ಮಾಡಿದ್ದು ಯಾರು? ನಂಬಿಕೆ ದ್ರೋಹ ಮಾಡಿದ್ದು ಯಾರು ಮೊದಲು ಅರ್ಥ ಮಾಡಿಕೊಳ್ಳಲಿ ಅಂದ್ರು.

    ಮುಂದಿನ ಚುನಾವಣೆಯಲ್ಲಿ ನಾಗಮಂಗಲದಿಂದಲೇ ಸ್ಪರ್ಧೆ ಮಾಡುತ್ತೇನೆ. ಜೆಡಿಎಸ್ ಪಕ್ಷದಿಂದ ನಿಲ್ಲೋದಿಲ್ಲ. ಯಾವ ಪಕ್ಷ ಅಂತ ಮುಂದೆ ಗೊತ್ತಾಗುತ್ತೆ. ಯಾವ ಪಕ್ಷ ಅಂತ ಆದಷ್ಟು ಬೇಗ ನಿರ್ಧಾರ ಮಾಡ್ತೀನಿ. ಬಿಜೆಪಿ ಜೊತೆ ಮಾತುಕತೆ ಆಗಿಲ್ಲ. ಎಸ್.ಎಂ.ಕೃಷ್ಣ ಜೊತೆ ನಾನು ಮಾತಾಡಿಲ್ಲ. ಬಿಜೆಪಿಯ ಯಾವ ನಾಯಕರ ಜೊತೆ ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಡಿಕೆ ಶಿವಕುಮಾರ್, ಪರಮೇಶ್ವರ್ ಮಾತಿಗೂ ನಮಗೂ ಸಂಬಂಧವಿಲ್ಲ. ಅವರೊಂದಿಗೆ ನಾವು ಚರ್ಚೆ ಮಾಡಿಲ್ಲ. ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ನಾವು ತೀರ್ಮಾನ ಮಾಡ್ತೀವಿ. ಆದಷ್ಟು ಬೇಗ ರಾಜಕೀಯ ನಿರ್ಧಾರ ಪ್ರಕಟ ಮಾಡ್ತೀವಿ ಅಂದ್ರು.