Tag: ಚಲವರಾಯಸ್ವಾಮಿ

  • ಸರ್ಕಾರ ರಾಜಕೀಯ ತೆವಲಿಗಾಗಿ ಜೀವದ ಜೊತೆ ಚೆಲ್ಲಾಟವಾಡ್ತಿದೆ – KSRTC ನೌಕರನ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ

    ಸರ್ಕಾರ ರಾಜಕೀಯ ತೆವಲಿಗಾಗಿ ಜೀವದ ಜೊತೆ ಚೆಲ್ಲಾಟವಾಡ್ತಿದೆ – KSRTC ನೌಕರನ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ

    – ಕೃಷಿ ಸಚಿವರ ವಜಾಗೊಳಿಸಿ ತನಿಖೆ ನಡೆಸಲು ಹೆಚ್‌ಡಿಕೆ ಆಗ್ರಹ

    ಮೈಸೂರು: ಬೆಳ್ಳಂಬೆಳಗ್ಗೆ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಆತ್ಮಹತ್ಯೆಗೆ ಯತ್ನಿಸಿದ ನಾಗಮಂಗಲ ಡಿಪೋ (Nagamangala Bus Depot) ಸಾರಿಗೆ ನೌಕರ ಜಗದೀಶ್ ಆರೋಗ್ಯ ವಿಚಾರಿಸಿದ್ದಾರೆ.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಹೆಚ್‌ಡಿಕೆ, ಆತ್ಮಹತ್ಯೆ ಯತ್ನಿಸಿದ KSRTC ನೌಕರ ವೆಂಟಿಲೇಟರ್‌ನಲ್ಲಿದ್ದಾರೆ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಇನ್ನೂ 48 ಗಂಟೆ ಐಸಿಯುನಲ್ಲೇ ಇಡಬೇಕಾಗುತ್ತದೆ ಅಂತಾ ವೈದ್ಯರು ಹೇಳಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬಂದು 50 ದಿನ ಆಗಿಲ್ಲ. ಆಗಲೇ ಇಷ್ಟು ದ್ವೇಷದ ರಾಜಕಾರಣ ಶುರುವಾಗಿದೆ. ದುಡ್ಡು ತೆಗೆದುಕೊಂಡು ವರ್ಗಾವಣೆ ಮಾಡ್ತಿದ್ದಾರೆ. ಚುನಾವಣೆಗೆ ಖರ್ಚು ಮಾಡಿದ ಹಣ ಮತ್ತೆ ವಾಪಸ್ ಪಡೆಯೋದಕ್ಕೆ ವರ್ಗಾವಣೆ ದಂಧೆ ಶುರುಮಾಡಿದ್ದಾರೆ. ಆದ್ರೆ ಜೀವಗಳ ಜೊತೆ ಚೆಲ್ಲಾಟ ಆಡುವ ಇಂತಹ ಚಿಲ್ಲರೆ ರಾಜಕಾರಣ ಮಾಡೋದು ಸರಿಯಲ್ಲ. ಇದನ್ನ ಸುಮ್ಮನೆ ಬಿಡಲ್ಲ. ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಲುವರಾಯಸ್ವಾಮಿ ನೆರಳಲ್ಲಿ ವರ್ಗಾವಣೆ ಆರೋಪ- KSRTC ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

    ಕಾಂಗ್ರೆಸ್ ಶಾಸಕರಿಂದ ಒತ್ತಡ:
    ಆತ್ಮಹತ್ಯೆಗೆ ಯತ್ನಿಸಿರುವ ಜಗದೀಶ್ ಕುಟುಂಬ JDS ನಿಷ್ಠಾವಂತ ಕಾರ್ಯಕರ್ತ. ಜಗದೀಶ್ ಪತ್ನಿ ಪಂಚಾಯಿತಿ ಸದಸ್ಯೆ. ಹೀಗಾಗಿ ಕಿರುಕುಳ ನೀಡಿದ್ದಾರೆ. ಈ ಸರ್ಕಾರ ಏನು ಶಾಶ್ವತನಾ? ಅಧಿಕಾರದ ದರ್ಪ ಈ ಮಟ್ಟಕ್ಕೆ ಹೋಗಬಾರದು. ಕೃಷಿ ಸಚಿವರ ಛೇಲಾ ಅವನೂ ಕೂಡ ರೌಡಿ ಅಂತೆ. ಅವನಿಂದ ಜಗದೀಶ್ ಕುಟುಂಬದ ಮೇಲೆ ಒತ್ತಡವಿದೆ. ಜಗದೀಶ್ ಪತ್ನಿಗೆ ಕಾಂಗ್ರೆಸ್‌ಗೆ ಬೆಂಬಲಿಸಲು ಒತ್ತಡ ಹಾಕಿದ್ದಾರೆ. ಡೆತ್‌ನೋಟ್ ನಲ್ಲಿ ನಾಗಮಂಗಲದ ಶಾಸಕರ ಒತ್ತಡವೇ ಕಾರಣ ಅಂತಾ ಬರೆದಿದ್ದಾನೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಇಂತಹ ಮಂತ್ರಿಯನ್ನ ಸರ್ಕಾರದಿಂದ ವಜಾಗೊಳಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: 80 ಅಡಿ ಆಳದ ಕಂದಕಕ್ಕೆ ಉರುಳಿದ ಬಸ್‌ – 27 ಮಂದಿ ದಾರುಣ ಸಾವು, 17 ಮಂದಿಗೆ ಗಾಯ

    ಕೃಷಿ ಮಂತ್ರಿಯನ್ನ ವಜಾಗೊಳಿಸಿ:
    ಪೊಲೀಸ್ ಅಧಿಕಾರಿಯನ್ನ FIR ದಾಖಲಿಸಿದ್ರಾ ಅಂತಾ ಕೇಳಿದ್ರೆ, ಜಗದೀಶ್ ಇನ್ನೂ ಸತ್ತಿಲ್ಲ ಅದಕ್ಕೆ ಎಫ್‌ಐಆರ್ ಹಾಕಿಲ್ಲ ಅಂತಾರೆ. ಹಣದ ದಂಧೆ ಆಯ್ತು. ಈಗ ರಾಜಕೀಯದ ತೇವಲುಗಳಿಗೆ ಜೀವದ ಜೊತೆ ಚೆಲ್ಲಾಟ ಶುರು ಮಾಡಿದ್ದಾರೆ. ಉದ್ಧಟತನದ ಕೃಷಿ ಮಂತ್ರಿಯನ್ನ ತಕ್ಷಣವೇ ಸರ್ಕಾರದಿಂದ ವಜಾಗೊಳಿಸಬೇಕು. ಈ ಬಗ್ಗೆ ಇವತ್ತು ವಿಧಾನಸಭೆಯಲ್ಲಿ ಚರ್ಚಿಸುತ್ತೇನೆ. ಇದಕ್ಕಿಂತಾ ಮುಖ್ಯ ವಿಚಾರ ಇನ್ನೇನಿದೆ ಹೇಳಿ? ಮಂತ್ರಿಗಳನ್ನು ಮೊದಲು ಹದ್ದು ಬಸ್ತಿನಲ್ಲಿ ಇಟ್ಟುಕೊಂಡು ಅಧಿಖಾರಿಗಳು ಮುಕ್ತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕಿದೆ ಎಂದು ಹೇಳಿದ್ದಾರೆ.

    ಶಾಸಕರಿಗೆ ಗೌರವ ಸಿಗುತ್ತಿಲ್ಲ:
    ವಿರೋಧ ಪಕ್ಷದ ಶಾಸಕರು ಇರುವ ಸ್ಥಳಗಳಲ್ಲಿ ಯಾರೂ ಅವರಿಗೆ ಮರ್ಯಾದೆ ಕೊಡುತ್ತಿಲ್ಲ. ಕಾಂಗ್ರೆಸ್ ಶಾಸಕರ ಪಾಡೋ ಏನೇನೋ ಆಗಿದೆ. ಕೆಲವರು ನಮ್ಮ ಬಳಿಯೇ ನೋವನ್ನ ಹೇಳಿಕೊಂಡಿದ್ದಾರೆ. ವರ್ಗಾವಣೆಗೆ ಸ್ಥಳೀಯ ಶಾಸಕರ ಶಿಫಾರಸು ಇದ್ದರೆ ಸಾಲಲ್ಲ. ಹಣ ಕೊಡಲೇಬೇಕಾಗಿದೆ. ಇದುವರೆಗೂ ಆಗಿರುವ ಬಹುತೇಕ ವರ್ಗಾವಣೆಗಳಲ್ಲೂ ಹಣದ ವ್ಯವಹಾರ ನಡೆದಿದೆ. ಎಲ್ಲಾ ವರ್ಗಾವಣೆ ಗೂ ಹಣದ ರೇಟ್ ಫಿಕ್ಸ್ ಆಗಿದೆ ಎಂದು ಆರೋಪಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಲುವರಾಯಸ್ವಾಮಿ ನೆರಳಲ್ಲಿ ವರ್ಗಾವಣೆ ಆರೋಪ- KSRTC ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

    ಚಲುವರಾಯಸ್ವಾಮಿ ನೆರಳಲ್ಲಿ ವರ್ಗಾವಣೆ ಆರೋಪ- KSRTC ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

    ಮಂಡ್ಯ: ಜಿಲ್ಲೆಯ ಕೆಎಸ್‍ಆರ್ ಟಿಸಿ ನಾಗಮಂಗಲ ಡಿಪೋದ (Nagamangala Bus Depot) ಚಾಲಕ, ಸಚಿವ ಚಲುವರಾಯಸ್ವಾಮಿ (Chaluvarayaswamy) ಸೂಚನೆಯಂತೆ ವರ್ಗಾವಣೆ ಮಾಡಿದ್ದಾರೆಂದು ಆರೋಪಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

    ತೀವ್ರ ಅಸ್ವಸ್ಥಗೊಂಡಿರುವ ಜಗದೀಶ್‍ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆತ್ಮಹತ್ಯೆ ಯತ್ನಕ್ಕೂ ಮುನ್ನ ಬರೆದಿಟ್ಟಿದ್ದ ಡೆತ್‍ನೋಟ್ ಬೆಳಕಿಗೆ ಬಂದಿದೆ. ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಚಾಲಕ ಕಮ್ ನಿರ್ವಾಹಕ ಜಗದೀಶ್ ಡೆತ್‍ನೋಟ್ ಬರೆದಿದ್ರು. ಇದನ್ನೂ ಓದಿ: ಕಾಲುವೆಗೆ ಬಿಟ್ಟಿರುವ ಕುಡಿಯುವ ನೀರಿಗೂ ಕನ್ನ – ಅಧಿಕಾರಿಗಳ ನಿರ್ಲಕ್ಷ್ಯ

    ಡೆತ್‍ನೋಟ್‍ನಲ್ಲೇನಿದೆ..?: ನನ್ನ ವರ್ಗಾವಣೆಗೆ ಕಾರಣ ಏನೆಂದು ಡಿಪೋ ಮ್ಯಾನೇಜರ್ ಕೇಳಿದೆ. ನಿಯಂತ್ರಣಾಧಿಕಾರಿಗಳು ವರ್ಗಾವಣೆ ಮಾಡಿದ್ದಾರೆ ಎಂದರು. ಅವರನ್ನ ಕೇಳಿದಾಗ ಕೃಷಿ ಸಚಿವರ ಆದೇಶದ ಮೇರೆಗೆ ವರ್ಗಾವಣೆ (Bus Driver Jagadeesh Transfer) ಎಂದರು. ನನ್ನ ಮೇಲೆ ಸಚಿವರಿಗೆ ಯಾಕಿಷ್ಟು ಕೋಪವೆಂದು ತಿಳಿಯದೆ ನೊಂದಿದ್ದೇನೆ. ಈ ಒತ್ತಡ, ಅವಮಾನ ಸಹಿಸಲು ನನ್ನಿಂದ ಆಗುತ್ತಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡುವಂತೆ ಜಗದೀಶ್ ಪತ್ರ ಬರೆದಿದ್ದಾರೆ.

    ನನ್ನ ಆತ್ಮಹತ್ಯೆಗೆ ಶಾಸಕರೇ ಕಾರಣ ಎಂದು ಡೆತ್‍ನೋಟ್‍ನಲ್ಲಿ ಆರೋಪಿಸಿದ್ದಾರೆ. ಸದ್ಯ ತೀವ್ರ ಅಸ್ವಸ್ಥಗೊಂಡಿರುವ ಜಗದೀಶ್‍ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇತ್ತ ಈ ಸಂಬಂಧ ಕರ್ತವ್ಯಕ್ಕೆ ಹಾಜರಾಗದೆ ಸಾರಿಗೆ ಸಿಬ್ಬಂದಿ ಆಕ್ರೋಶ ಹೊರಹಾಕುತ್ತಿದ್ದಾರೆ. ನಾಗಮಂಗಲದ ಡಿಪೋದಿಂದ ಯಾವುದೇ ಕೆಎಸ್‍ಆರ್‍ಟಿಸಿ ಬಸ್‍ಗಳು ಇನ್ನೂ ಹೊರಟಿಲ್ಲ. ಹೀಗಾಗಿ 60ಕ್ಕೂ ಹೆಚ್ಚು ಬಸ್‍ಗಳು ನಿಂತಲ್ಲೇ ನಿಂತಿವೆ. ಬಸ್ ಸಂಚಾರ ಸ್ಥಗಿತ ಹಿನ್ನೆಲೆಯ್ಲಲಿ ನಿಲ್ದಾಣ ಪ್ರಯಾಣಿಕರಿಲ್ಲದೆ ಖಾಲಿ ಖಾಲಿ ಎನಿಸುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]