Tag: ಚಲನ್

  • ದ್ವಿಚಕ್ರ ವಾಹನ ಸವಾರನಿಗೆ ಸೀಟ್ ಬೆಲ್ಟ್ ಹಾಕಿಲ್ಲ ಅಂತ ದಂಡ!

    ದ್ವಿಚಕ್ರ ವಾಹನ ಸವಾರನಿಗೆ ಸೀಟ್ ಬೆಲ್ಟ್ ಹಾಕಿಲ್ಲ ಅಂತ ದಂಡ!

    ಪಾಟ್ನಾ: ದ್ವಿಚಕ್ರ ವಾಹನ (2-Wheeler) ಸವಾರನೊಬ್ಬ ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ ಟ್ರಾಫಿಕ್ ನಿಯಮವನ್ನು (Traffic Violation) ಪಾಲಿಸದ್ದಕ್ಕೆ ಪೊಲೀಸರು ಚಲನ್‍ನನ್ನು ಕಳುಹಿಸಿದ ವಿಚಿತ್ರ ಘಟನೆ ಬಿಹಾರದಲ್ಲಿ (Bihar) ನಡೆದಿದೆ.

    ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದಿದ್ದರೇ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ ಚಲನ್ (Challan) ಬರುವುದು ಸಾಮಾನ್ಯ. ಆದರೆ ಬಿಹಾರದ ಸಮತಿಪುರದಲ್ಲಿ ಬೈಕ್ ಸವಾರ ಕೃಷ್ಣಕುಮಾರ್ ಝಾ ಎಂಬಾತನಿಗೆ ಚಲನ್ ಬಂದಿದೆ. ಕೃಷ್ಣಕುಮಾರ್ ಝಾ ಎಂಬಾತ ಸ್ಕೂಟಿಯಲ್ಲಿ ಬನಾರಸ್‌ಗೆ ಹೋಗುತ್ತಿದ್ದರು. ಈ ವೇಳೆ ಅವರ ಮೊಬೈಲ್‍ಗೆ 1,000 ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೇ ಈ ಹಣವನ್ನು ಈಗಾಗಲೇ ಪಾವತಿಸಲಾಗಿದೆ ಎನ್ನುವುದರ ಕುರಿತು ಚಲನ್ ಬಂದಿದೆ. ಆ ಚಲನ್‍ನಲ್ಲಿ 2020ರ ಅಕ್ಟೋಬರ್‌ನಲ್ಲಿ ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಎಂದು ಉಲ್ಲೇಖಿಸಲಾಗಿದೆ.

    ಇದನ್ನು ನೋಡಿದ ಕೃಷ್ಣಕುಮಾರ್ ಒಮ್ಮೆಲೇ ಶಾಕ್ ಆಗಿದ್ದಾರೆ. ಬೈಕ್‍ನಲ್ಲಿ ಹೋಗಿರುವುದಕ್ಕೆ ಸೀಟ್ ಬೇಲ್ಟ್ ಯಾಕೆ ಧರಿಸಬೇಕು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಪೊಲೀಸರು ತಾಂತ್ರಿಕ ದೋಷದಿಂದಾಗಿ ಕೆಲವೊಮ್ಮೆ ಈ ರೀತಿಯಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಾನು ಹಿಂದೂ, ನಾನು ಆಂಜನೇಯನ ಭಕ್ತ, ರಾಮನ ಭಕ್ತ, ಶಿವಭಕ್ತ – ಡಿಕೆಶಿ

    ಕೃಷ್ಣಕುಮಾರ್ ಝಾ ಸ್ವೀಕರಿಸಿದ ಚಲನ್ ಅನ್ನು ಮ್ಯಾನುವಲ್‌ನಿಂದ ನೀಡಲಾಗಿದೆ. ಈಗ, ನಾವು ಇವೆಲ್ಲವನ್ನೂ ಇ-ಚಲನ್‍ಗಳಾಗಿ ಮುಚ್ಚಿಡುವ ಪ್ರಕ್ರಿಯೆಯಲ್ಲಿದ್ದೇವೆ. ದೋಷ ಎಲ್ಲಿ ಸಂಭವಿಸಿದೆ ಎಂದು ನಾನು ಪರಿಶೀಲಿಸುತ್ತೇನೆ ಎಂದು ಬಿಹಾರ ಟ್ರಾಫಿಕ್ ಪೊಲೀಸ್ ಅಧಿಕಾರಿ ಬಲ್ಬೀರ್ ದಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಸಾಕಿದ್ದ ಮುದ್ದಿನ ಗಿಳಿ ಸಾವು – ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ

  • ನಿಮ್ಮನ್ನು ನೋಡಿ ದುರ್ಘಟನೆ ಸಂಭವಿಸಬಹುದು ಎಂದು ಚಲನ್ ಕೊಟ್ಟ ಟ್ರಾಫಿಕ್ ಪೊಲೀಸ್

    ನಿಮ್ಮನ್ನು ನೋಡಿ ದುರ್ಘಟನೆ ಸಂಭವಿಸಬಹುದು ಎಂದು ಚಲನ್ ಕೊಟ್ಟ ಟ್ರಾಫಿಕ್ ಪೊಲೀಸ್

    ಉರುಗ್ವೆ: ರೋಡಿನಲ್ಲಿ ಹೋಗುವ ಜನರು ನಿಮ್ಮತ್ತ ಗಮನ ಹರಿಸಿದರೆ ದುರ್ಘಟನೆ ಸಂಭವಿಸಬಹುದು ಎಂದು ಟ್ರಾಫಿಕ್ ಪೊಲೀಸ್ ಚಲನ್ ಬರೆದುಕೊಟ್ಟ ವಿಚಿತ್ರ ಪ್ರಕರಣವೊಂದು ದಕ್ಷಿಣ ಅಮೆರಿಕದ ಉರುಗ್ವೆಯಲ್ಲಿ ನಡೆದಿದೆ.

    ಯವತಿ ತನ್ನ ಬೈಕಿನಲ್ಲಿ ಹೋಗುತ್ತಿದ್ದಾಗ ಟ್ರಾಫಿಕ್ ಪೊಲೀಸ್ ಆಕೆಯನ್ನು ತಡೆದಿದ್ದಾರೆ. ಬಳಿಕ ರೋಡಿನಲ್ಲಿ ಹೋಗುವ ಜನರು ನಿಮ್ಮತ್ತ ಗಮನ ಹರಿಸಿದರೆ ದುರ್ಘಟನೆ ಸಂಭವಿಸುತ್ತದೆ ಎಂದು ಹೇಳಿ ಯುವತಿಗೆ ಚಲನ್ ನೀಡಿದ್ದಾರೆ.

    ಪೊಲೀಸ್ ಅಧಿಕಾರಿ ಚಲನ್‍ನಲ್ಲಿ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಅಲ್ಲದೆ ಸ್ಪ್ಯಾನೀಶ್ ಭಾಷೆಯಲ್ಲಿ ಟಿ ಆಮೋ ಅಂದರೆ ಐ ಲವ್ ಯೂ ಎಂದು ಬರೆಯುವ ಮೂಲಕ ಯುವತಿ ಬಳಿ ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ.

    ಯುವತಿ ಪೊಲೀಸ್ ಕೊಟ್ಟ ಚಲನ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾಳೆ. ಇದನ್ನು ನೋಡಿದ ಜನರು ಆಶ್ಚರ್ಯಗೊಂಡಿದ್ದಾರೆ. ಕೆಲವರು ಪೊಲೀಸ್‍ಗೆ ಫ್ಲರ್ಟ್ ಎಂದು ಕರೆದರೆ, ಮತ್ತೆ ಕೆಲವರು ಈ ವ್ಯಕ್ತಿಯನ್ನು ಕೆಲಸದಿಂದ ತೆಗೆಯಿರಿ ಎಂದು ಹೇಳಿ ಕಮೆಂಟ್ ಮಾಡಿದ್ದಾರೆ.

    ಈ ವಿಷಯ ತಿಳಿದ ಹಿರಿಯ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಟ್ರಾಫಿಕ್ ಪೊಲೀಸ್ ತಪ್ಪು ಮಾಡಿದ್ದಾರೆ ಎಂದು ಸಾಬೀತಾದಲ್ಲಿ ಅವರನ್ನು ಕೆಲಸದಿಂದ ತೆಗೆಯಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

  • ಕನ್ನಡದಲ್ಲಿ ಚಲನ್ ಕೇಳಿದ್ದಕ್ಕೆ ಗ್ರಾಹಕನ ಮೇಲೆಯೇ ದರ್ಪ ತೋರಿದ ಬ್ಯಾಂಕ್ ಅಧಿಕಾರಿ!

    ಕನ್ನಡದಲ್ಲಿ ಚಲನ್ ಕೇಳಿದ್ದಕ್ಕೆ ಗ್ರಾಹಕನ ಮೇಲೆಯೇ ದರ್ಪ ತೋರಿದ ಬ್ಯಾಂಕ್ ಅಧಿಕಾರಿ!

    ಕೋಲಾರ: ಗ್ರಾಹಕರು ಕನ್ನಡದಲ್ಲಿ ಚಲನ್ ನೀಡುವಂತೆ ಕೇಳಿದಾಗ ಬ್ಯಾಂಕ್ ಅಧಿಕಾರಿಯೂ ಕನ್ನಡದಲ್ಲಿ ಚಲನ್ ಸಿಗುವುದಿಲ್ಲವೆಂದು ದರ್ಪದಿಂದ ನಡೆದುಕೊಂಡ ಘಟನೆ ಜಿಲ್ಲೆಯ ಬಂಗಾರಪೇಟೆಯಲ್ಲಿ ನಡೆದಿದೆ.

    ರಾಜ್ಯದ ಹಲವು ಬ್ಯಾಂಕ್‍ಗಳಲ್ಲಿ ಕನ್ನಡಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ಇರುವುದು ಈಗ ಮತ್ತೊಮ್ಮೆ ಸಾಬೀತಾಗಿದ್ದು, ಜಿಲ್ಲೆಯ ಬಂಗಾರಪೇಟೆಯ ಕೆನರಾ ಬ್ಯಾಂಕ್‍ನಲ್ಲಿ ಅಧಿಕಾರಿ ಹಿಂದಿಯಲ್ಲೇ ಮಾತಾಡುವಂತೆ ಗ್ರಾಹಕರ ಮೇಲೆ ದಬ್ಬಾಳಿಕೆ ನಡೆಸಿದ್ದಾನೆ.

    ಬಂಗಾರಪೇಟೆಯ ನಿವಾಸಿ ಗ್ರಾಹಕ ಪ್ರಸನ್ನಕುಮಾರ್ ಹಣ ಪಾವತಿಸಲು ಬ್ಯಾಂಕಿಗೆ ತೆರಳಿದ್ದರು. ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಚಲನ್ ಮುದ್ರಿಸಿದ ಹಿನ್ನೆಲೆಯಲ್ಲಿ ಪ್ರಸನ್ನರವರು ಬ್ಯಾಂಕ್ ಸಿಬ್ಬಂದಿಗೆ ಕನ್ನಡದಲ್ಲಿ ಚಲನ್ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿ ಹಿಂದಿಯಲ್ಲೇ ಮಾತನಾಡುವಂತೆ ಪ್ರಸನ್ನರಿಗೆ ತಾಕೀತು ಮಾಡಿದ್ದಾರೆ.

    ಈ ವೇಳೆ ಅಲ್ಲೇ ಇದ್ದ ಬ್ಯಾಂಕ್ ಅಧಿಕಾರಿ ನಿನಗೆ ಏನೇ ಬೇಕಾದರೂ ಹಿಂದಿಯಲ್ಲೇ ಕೇಳು, ಹಿಂದಿ ನ್ಯಾಷನಲ್ ಭಾಷೆ ನಾನು ಅದರಲ್ಲೇ ಉತ್ತರಿಸುತ್ತೇನೆ ಎಂದು ಗ್ರಾಹಕನ ಮೇಲೆ ದರ್ಪ ಮೆರೆದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಗ್ರಾಹಕ ನೀವು ಇರುವುದು ಕರ್ನಾಟಕದಲ್ಲಿ, ಮೊದಲು ನೀವು ಕನ್ನಡ ಕಲಿಯಿರಿ ಎಂದು ಹೇಳಿದ್ದಾರೆ. ಬ್ಯಾಂಕ್ ಸಿಬ್ಬಂದಿ ದರ್ಪ ನಡೆಸಿದರ ಸಂಬಂಧ ಗ್ರಾಹಕ ಪ್ರಸನ್ನರವರು ಬಂಗಾರಪೇಟೆ ಪೊಲೀಸರಿಗೆ ಈಗ ದೂರು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews