Tag: ಚರ್ಚ್ ಫಾದರ್

  • ಲೈಂಗಿಕ ಕಿರುಕುಳ ಆರೋಪ- ಚರ್ಚ್ ಫಾದರ್ ವಿರುದ್ಧ ಎಫ್‍ಐಆರ್

    ಲೈಂಗಿಕ ಕಿರುಕುಳ ಆರೋಪ- ಚರ್ಚ್ ಫಾದರ್ ವಿರುದ್ಧ ಎಫ್‍ಐಆರ್

    ಬೆಂಗಳೂರು: ಚರ್ಚ್ ಫಾದರ್ (Church Father) ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ (Banasavadi Police Station) ಎಫ್‍ಐಆರ್ ದಾಖಲಾಗಿದೆ. ಲೈಂಗಿಕ ಕಿರುಕುಳ ಆರೋಪದಡಿ ಕಮ್ಮನಹಳ್ಳಿಯ ಸೆಂಟ್ ಪಿಯೂಸ್ ಚರ್ಚ್ ಪಾದ್ರಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಚರ್ಚ್ ಫಾದರ್ ಜಯಕರನ್ ವಿರುದ್ಧ ಮಹಿಳೆ ದೂರು ದಾಖಲು ಮಾಡಿದ್ದಾರೆ. ಲೈಂಗಿಕ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆಂದು ದೂರು ದಾಖಲಿಸಿದ್ದಾರೆ. ಫಾದರ್ ಜಯಕರನ್ ಅನುಯಾಯಿಗಳಿಂದಲೂ ಬೆದರಿಕೆ ಕರೆಗಳು ಬರುತ್ತಿದೆ ಎಂದು ಸಂತ್ರಸ್ತ ಮಹಿಳೆ ಆರೋಪ ಮಾಡಿದ್ದಾರೆ. ಘಟನೆ ಬಗ್ಗೆ ಚರ್ಚ್‍ನ ಆಂತರಿಕ ಸಮಿತಿಗೂ ದೂರು ನೀಡಿದ್ರೂ ಕ್ರಮ ಇಲ್ಲ ಎಂದು ಆರೋಪ ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

    ಮಹಿಳೆ ವಿರುದ್ಧ ಚರ್ಚ್ ಫಾದರ್ ಕೂಡ ಪ್ರತಿ ದೂರು ದಾಖಲಿಸಿದ್ದು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಚರ್ಚ್ ಹಣಕಾಸಿನ ವಿಚಾರಕ್ಕೆ ಸುಳ್ಳು ಆರೋಪ ಮಾಡಿದ್ದಾರೆಂದು ಮಹಿಳೆ ಸೇರಿದಂತೆ 9 ಮಂದಿ ವಿರುದ್ಧ ಚರ್ಚ್ ಫಾದರ್ ದೂರು ಸಲ್ಲಿಸಲಾಗಿದೆ. ತಾನು ಚರ್ಚ್ ಫಾದರ್ ಆಗಿ ಅಧಿಕಾರ ವಹಿಸಿಕೊಳ್ಳದಂತೆ ಕಿರುಕುಳ ನೀಡಿದರು. ಆರೋಪಿಗಳು ಚರ್ಚ್ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಚಂದ್ರಯಾನ ಸಾಫ್ಟ್ ಲ್ಯಾಂಡಿಗ್‌ಗಾಗಿ ಅಯ್ಯಪ್ಪಸ್ವಾಮಿ ಮೊರೆಹೋದ ಇಸ್ರೋ ಅಧ್ಯಕ್ಷ

    ಹಣದ ಲೆಕ್ಕ ಕೇಳಿದ್ದಕ್ಕೆ ಈ ರೀತಿ ಸುಳ್ಳು ಆರೋಪ ಮಾಡಿ ನನ್ನ ವಿರುದ್ಧ ದೂರು ನೀಡಿದ್ದಾರೆಂದು ಫಾದರ್ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.ಬಾಣವಾಡಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಮೀರ್ ಸಿಎಂ ಆಗ್ತಾರೆ ಎಂದ ಚರ್ಚ್ ಫಾದರ್

    ಜಮೀರ್ ಸಿಎಂ ಆಗ್ತಾರೆ ಎಂದ ಚರ್ಚ್ ಫಾದರ್

    ಬೆಂಗಳೂರು: ಚಾಮರಾಜಪೇಟೆಯ ರಾಯಪುರಂನಲ್ಲಿರುವ ಸಂತ ಪೀಟರ್ ಪೌಲ್ ಚರ್ಚ್‍ನ ಫಾದರ್ (Saint Peter Paul Church Father) ಡೊಮಿನಿಕ್ ಝೇವಿಯರ್ ಪರಿಶ್‍ರನ್ನು(Dominic Xavier Parish) ಭೇಟಿಯಾದ ಶಾಸಕ ಜಮೀರ್‌ಗೆ ಮುಂದಿನ ದಿನಗಳಲ್ಲಿ ಸಿಎಂ ಆಗುವಂತೆ ಆಶೀರ್ವಾದಿಸಿದ್ದಾರೆ.

    ಚಾಮರಾಜಪೇಟೆಯಾದ್ಯಂತ(Chamarajpet) ನಡೆಯುತ್ತಿರುವ ಮದರ್ ಮೇರಿ ಫೆಸ್ಟಿವಲ್‍ನಲ್ಲಿ (Mother Mary Festival) ಜಮೀರ್ (Zameer) ಭಾಗಿ ಆಗಿದ್ದ ವೇಳೆ ಫಾದರ್ ಹಾರೈಸಿದ್ದಾರೆ. 2005ರಿಂದ ಸತತವಾಗಿ ಶಾಸಕರಾಗಿ, ಸಚಿವರಾಗಿ ಸಾಕಷ್ಟು ಜನಪರ ಕಾರ್ಯಗಳು, ಸಾಮಾಜಿಕ ಚಟುವಟಿಕೆಗಳು, ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂದು ಬ್ರಿಟನ್ ರಾಣಿ ಎಲಿಜಬೆತ್-2 ಅಂತ್ಯಕ್ರಿಯೆ – ದ್ರೌಪದಿ ಮುರ್ಮು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗಿ

    ಕ್ಷೇತ್ರವಷ್ಟೇ ಅಲ್ಲದೇ ರಾಜ್ಯಮಟ್ಟದ ನಾಯಕರಾಗಿ ಬೆಳೆದಿದ್ದಾರೆ. ಭಾವೈಕ್ಯತೆ, ಸಾಮರಸ್ಯದ ಮನೋಭಾವ ಹೊಂದಿರುವ ಶಾಸಕ ಜಮೀರ್‌ ಅವರಲ್ಲಿ ಮುಖ್ಯಮಂತ್ರಿಗಳಾಗುವ(Chief Minister) ಎಲ್ಲ ಅರ್ಹತೆಗಳೂ ಇವೆ. ಹಾಗಾಗಿ, ಮುಂದಿನ ದಿನಗಳಲ್ಲಿ ಅವರು ಈ ರಾಜ್ಯದ ಸಿಎಂ ಆಗಲಿ ಎಂದು ಪ್ರಾರ್ಥಿಸಿದರು. ಅಲ್ಲದೇ ಅಲ್ಲೇ ಇದ್ದ ಮತ್ತೋರ್ವ ಫಾದರ್ ಲೂಕಸ್ ತಂದೆಗೆ ಹುಷಾರಿಲ್ಲ ಎಂದು ತಿಳಿದ ಜಮೀರ್ ಅಹ್ಮದ್ ಖಾನ್ 50 ಸಾವಿರ ಧನಸಹಾಯ ಮಾಡಿದರು. ಇದನ್ನೂ ಓದಿ: ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್‌ ಕೇಸ್‌ – ಹುಡುಗಿಯ ಬಾಯ್‌ಫ್ರೆಂಡ್‌ ಸಹ ಅರೆಸ್ಟ್‌

    Live Tv
    [brid partner=56869869 player=32851 video=960834 autoplay=true]

  • ತಲ್ವಾರ್‌ನಿಂದ ಚರ್ಚ್ ಫಾದರ್ ಮೇಲೆ ಹಲ್ಲೆಗೆ ಯತ್ನ

    ತಲ್ವಾರ್‌ನಿಂದ ಚರ್ಚ್ ಫಾದರ್ ಮೇಲೆ ಹಲ್ಲೆಗೆ ಯತ್ನ

    ಬೆಳಗಾವಿ: ಚರ್ಚ್ ಫಾದರ್ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ತಲ್ವಾರ್‌ನಿಂದ ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.

    ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿರುವ ಜೋಸೆಫ್ ದಿ ವರ್ಕರ್ ಚರ್ಚ್ ಫಾದರ್ ಫ್ರಾನ್ಸಿಸ್‌ ಮೇಲೆ ಹಲ್ಲೆಗೆ ಯತ್ನ ನಡೆಸಲಾಗಿದ್ದು, ಘಟನೆಯಲ್ಲಿ ಫಾದರ್ ಫ್ರಾನ್ಸಿಸ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಪತಿಗೆ ಡೈವೋರ್ಸ್ ಕೊಡು, ಮುಸ್ಲಿಂ ಯುವಕನ ಜೊತೆ ಮದುವೆ ಮಾಡಿಸ್ತೀನಿ – ನೂರ್ ಜಹಾನ್ ಅರೆಸ್ಟ್

    ಚರ್ಚ್‍ಗೆ ಸೇರಿದ ಮನೆಯಲ್ಲಿ ತಂಗಿದ್ದ ಫಾದರ್ ಮನೆಯಿಂದ ಹೊರಗೆ ಬರುವ ವೇಳೆ ಕಾಂಪೌಂಡ್ ಜಿಗಿದು ಮೊದಲ ಮಹಡಿಯ ಮನೆ ಎದುರು ಬಂದಿದ್ದ ದುಷ್ಕರ್ಮಿ ಫಾದರ್ ಬಾಗಿಲು ತೆರೆಯುತ್ತಿದ್ದಂತೆಯೇ ತಲ್ವಾರ್‌ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಇದನ್ನೂ ಓದಿ: ನಡುರಾತ್ರಿ ಕಾರು ಹಿಂಬಾಲಿಸಿ ಅಪರಿಚಿತನ ಕಿರಿಕ್ – ಪುಂಡನ ಪುಂಡಾಟಕ್ಕೆ ಇಡೀ ಕುಟುಂಬ ಹೈರಾಣು

    ಬಳಿಕ ದುಷ್ಕರ್ಮಿಯಿಂದ ಪಾರಾದ ಫಾದರ್ ಕೆಳಗಿಳಿದು ಹೊರಗೆ ಬಂದಿದ್ದಾರೆ. ನಂತರ ಫಾದರ್ ರಕ್ಷಣೆಗೆ ಸ್ಥಳೀಯರು ಧಾವಿಸುತ್ತಿದ್ದಂತೆ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನೂ ದುಷ್ಕರ್ಮಿಯ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಘಟನೆ ಕುರಿತಂತೆ ಫಾದರ್ ಫ್ರಾನ್ಸಿಸ್‌ ಅವರಿಂದ ಮಾಹಿತಿ ಪಡೆದಿದ್ದಾರೆ.