Tag: ಚರಣ್ ರಾಜ್

  • ದುನಿಯಾ ವಿಜಯ್ ನಿರ್ದೇಶನದ ಭೀಮನ ‘ಸೈಕ್ ಸಾಂಗ್’ ರಿಲೀಸ್

    ದುನಿಯಾ ವಿಜಯ್ ನಿರ್ದೇಶನದ ಭೀಮನ ‘ಸೈಕ್ ಸಾಂಗ್’ ರಿಲೀಸ್

    ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಭೀಮ ಸಿನಿಮಾದ ‘ಸೈಕ್ ಸಾಂಗ್’ (Saik Song) ಇಂದು ಬಿಡುಗಡೆ ಆಗಿದೆ. ಬ್ಯಾಡ್ ಬಾಯ್ಸ್ ಆನ್ ದಿ ಸ್ಟ್ರೀಟ್ ಎಂದು ಶುರುವಾಗುವ ಗೀತೆಯಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಪದಗಳನ್ನು ಮಿಕ್ಸ್ ಮಾಡಿ ರಾಪ್ ಮಾಡಲಾಗಿದೆ. ಇದೊಂದು ವಿಜಯ್ ಅವರ ಇಂಟ್ರಡಕ್ಷನ್ ಸಾಂಗ್ ಆಗಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿ ಬಂದಿದೆ.

    ರಾಪರ್ ಗಳಾದ ರಾಹುಲ್ ಡಿಟ್ಟೋ, ನಾಗಾರ್ಜುನ್ ಶರ್ಮಾ ಮತ್ತು ಎಂ.ಸಿ.ಬಿಜ್ಜು ಈ ಹಾಡನ್ನು ಬರೆದಿದ್ದು, ರಾಹುಲ್ ಮತ್ತು ಬಿಜ್ಜು ಈ ಗೀತೆಯನ್ನು ಹಾಡಿದ್ದಾರೆ. ಕ್ಯಾಚಿ ಎನಿಸುವಂತಹ ಅನೇಕ ಪದಗಳನ್ನು ಇಲ್ಲಿ ಬಳಸಲಾಗಿದೆ. ಕೆಲ ಬೈಗಳುಗಳನ್ನು ಕೂಡ ಈ ಹಾಡಿನಲ್ಲಿ ಕೇಳಬಹುದು.

    ಭೀಮ (Bheem) ಸೆಟ್ಟೇರಿದಾನಿಂದಲೂ ದೊಡ್ಡ ಮಟ್ಟದ ಹೈಪ್, ಕ್ರೇಜ್ ಹುಟ್ಟಿಸಿರೋ ಸಿನಿಮಾ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾ. ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್ (Duniya Vijay) ನಿರ್ದೇಶನದಲ್ಲಿ ಮೂಡಿ ಬರ್ತಿರೋ ಮತ್ತೊಂದು ಮಾಸ್ ಕಮರ್ಷಿಯಲ್ ಎಂಟ್ರಟೈನರ್. ಸಲಗದಂತಹ ಬ್ಲಾಕ್ ಬಸ್ಟರ್ ಕೊಟ್ಮೇಲೆ ದುನಿಯಾ ವಿಜಯ್ ಮತ್ತೆ ಆಕ್ಷನ್ ಕಟ್ ಹೇಳೋದ್ರೊಂದಿಗೆ ಲೀಡ್ ರೋಲ್ ಪ್ಲೇ ಮಾಡಿರೋ ಸಿನಿಮಾ. ಪ್ರಚಂಡ ಪ್ರತಿಭಾವಂತರ ದಂಡುಕಟ್ಟಿಕೊಂಡು ವಿಜಯ್ ಈ ಸಲ ಮತ್ತೊಂದು ಔಟ್ ಅಂಡ್ ಔಟ್ ಎಂಟ್ರಟೈನ್ಮೆಂಟ್ ಪ್ಯಾಕೇಜ್ ಮಾಡಿದ್ದಾರೆ.

     

    ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಜಂಟಿಯಾಗಿ ನಿರ್ಮಿಸಿರೋ ಈ ಚಿತ್ರಕ್ಕೆ ಶಿವಸೇನಾ ಕ್ಯಾಮೆರಾ ವರ್ಕ್ ಇದೆ. ಭೀಮ ಈಗಾಗ್ಲೇ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿರೋ ಚಿತ್ರತಂಡ, ಇದೀಗ ಒಂದೊಂದೇ ಹಾಡನ್ನ ರಿಲೀಸ್ ಮಾಡೋದಕ್ಕೆ ಸಜ್ಜಾಗಿದೆ. ಅದ್ರಂತೆ, ಮೊದಲ ಹಾಡನ್ನ ಇದೇ 18ನೇ ತಾರೀಖು ಸೋಮವಾರ ಗೌರಿ ಗಣೇಶ ಹಬ್ಬದ ಪ್ರಯುಕ್ತ ರಿಲೀಸ್ ಮಾಡ್ತಿದ್ದಾರೆ.  ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ (Charan Raj) ಜೊತೆಗೆ ವಿಜಯ್ ಸಲಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ರು. ಆದಾದ ಮೇಲೆ ಭೀಮ ಮೂಲಕ ಮತ್ತೆ ಸಂಚಲ ಸೃಷ್ಟಿಸೋದಕ್ಕೆ ಸಜ್ಜಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೌರಿ ಗಣೇಶ ಹಬ್ಬಕ್ಕೆ ‘ಭೀಮ’ನ ಬ್ಯಾಡ್ ಬಾಯ್ಸ್ ಸಾಂಗ್  ರಿಲೀಸ್

    ಗೌರಿ ಗಣೇಶ ಹಬ್ಬಕ್ಕೆ ‘ಭೀಮ’ನ ಬ್ಯಾಡ್ ಬಾಯ್ಸ್ ಸಾಂಗ್ ರಿಲೀಸ್

    ಭೀಮ (Bheem) ಸೆಟ್ಟೇರಿದಾನಿಂದಲೂ ದೊಡ್ಡ ಮಟ್ಟದ ಹೈಪ್, ಕ್ರೇಜ್ ಹುಟ್ಟಿಸಿರೋ ಸಿನಿಮಾ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾ. ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್ (Duniya Vijay) ನಿರ್ದೇಶನದಲ್ಲಿ ಮೂಡಿ ಬರ್ತಿರೋ ಮತ್ತೊಂದು ಮಾಸ್ ಕಮರ್ಷಿಯಲ್ ಎಂಟ್ರಟೈನರ್. ಸಲಗದಂತಹ ಬ್ಲಾಕ್ ಬಸ್ಟರ್ ಕೊಟ್ಮೇಲೆ ದುನಿಯಾ ವಿಜಯ್ ಮತ್ತೆ ಆಕ್ಷನ್ ಕಟ್ ಹೇಳೋದ್ರೊಂದಿಗೆ ಲೀಡ್ ರೋಲ್ ಪ್ಲೇ ಮಾಡಿರೋ ಸಿನಿಮಾ. ಪ್ರಚಂಡ ಪ್ರತಿಭಾವಂತರ ದಂಡುಕಟ್ಟಿಕೊಂಡು ವಿಜಯ್ ಈ ಸಲ ಮತ್ತೊಂದು ಔಟ್ ಅಂಡ್ ಔಟ್ ಎಂಟ್ರಟೈನ್ಮೆಂಟ್ ಪ್ಯಾಕೇಜ್ ಮಾಡಿದ್ದಾರೆ.

    ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಜಂಟಿಯಾಗಿ ನಿರ್ಮಿಸಿರೋ ಈ ಚಿತ್ರಕ್ಕೆ ಶಿವಸೇನಾ ಕ್ಯಾಮೆರಾ ವರ್ಕ್ ಇದೆ. ಭೀಮ ಈಗಾಗ್ಲೇ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿರೋ ಚಿತ್ರತಂಡ, ಇದೀಗ ಒಂದೊಂದೇ ಹಾಡನ್ನ ರಿಲೀಸ್ ಮಾಡೋದಕ್ಕೆ ಸಜ್ಜಾಗಿದೆ. ಅದ್ರಂತೆ, ಮೊದಲ ಹಾಡನ್ನ ಇದೇ 18ನೇ ತಾರೀಖು ಸೋಮವಾರ ಗೌರಿ ಗಣೇಶ ಹಬ್ಬದ ಪ್ರಯುಕ್ತ ರಿಲೀಸ್ ಮಾಡ್ತಿದ್ದಾರೆ.  ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ (Charan Raj) ಜೊತೆಗೆ ವಿಜಯ್ ಸಲಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ರು. ಆದಾದ ಮೇಲೆ ಭೀಮ ಮೂಲಕ ಮತ್ತೆ ಸಂಚಲ ಸೃಷ್ಟಿಸೋದಕ್ಕೆ ಸಜ್ಜಾಗಿದ್ದಾರೆ.

     

    ಈಗಾಗ್ಲೇ ರಿಲೀಸ್ ಆಗಿರೋ ಟೀಸರ್ ಬಿಟ್ ನಲ್ಲೇ ವಿಜಯ್ ಚರಣ್ ಮ್ಯೂಸಿಕ್ ಝಲಕ್ ನ ಬಿಟ್ಟು ಕುತೂಹಲ ಹುಟ್ಟಿಸಿದ್ರು. ಹಾಗಾಗಿ ಈಗ ಗೌರಿ ಗಣೇಶನ ಹಬ್ಬಕ್ಕೆ ರಿಲೀಸ್ ಆಗ್ತಿರೋ ಬ್ಯಾಡ್ ಬಾಯ್ಸ್ ಮೇಲೆ ಸಿಕ್ಕಾಪಟ್ಟೆ ಕುತೂಹಲ  ನಿರೀಕ್ಷೆ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏ.18ಕ್ಕೆ ದುನಿಯಾ ವಿಜಯ್ ನಿರ್ದೇಶನದ ‘ಭೀಮ’ನಿಗೆ ಮುಹೂರ್ತ

    ಏ.18ಕ್ಕೆ ದುನಿಯಾ ವಿಜಯ್ ನಿರ್ದೇಶನದ ‘ಭೀಮ’ನಿಗೆ ಮುಹೂರ್ತ

    ದುನಿಯಾ ವಿಜಯ್ ನಿರ್ದೇಶನದ ಎರಡನೇ ಚಿತ್ರಕ್ಕೆ ಎಪ್ರಿಲ್ 18ರಂದು ಮುಹೂರ್ತ ಫಿಕ್ಸ್ ಆಗಿದೆ. ಈ ಸಿನಿಮಾಗೆ ಈಗಾಗಲೇ ‘ಭೀಮ’ ಎಂದು ಹೆಸರಿಡಲಾಗಿದ್ದು, ಭೀಮನ ಜತೆ ಯಾರೆಲ್ಲ ಸೇರಿಕೊಂಡಿದ್ದಾರೆ ಎನ್ನುವುದು ಮುಹೂರ್ತದ ದಿನದಂದು ಗೊತ್ತಾಗಲಿದೆ. ಚಿತ್ರದ ಪೋಸ್ಟರ್ ಮತ್ತು ಟೈಟಲ್ ಲಾಂಚ್ ಅನ್ನು ವಿಭಿನ್ನವಾಗಿ ಮಾಡಿರುವ ದುನಿಯಾ ವಿಜಯ್, ಇದೀಗ ಮುಹೂರ್ತವನ್ನು ಸರಳವಾಗಿ ಮತ್ತು ವಿಶೇಷವಾಗಿ ಪ್ಲ್ಯಾನ್ ಮಾಡಿದ್ದಾರೆ. ಬೆಂಗಳೂರಿನ ಬಂಡೆ ಮಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ. ಅವರ ಮೊದಲ ನಿರ್ದೇಶನದ ಚಿತ್ರ ಸಲಗದ ಮುಹೂರ್ತ ಕೂಡ ಇದೇ ದೇವಸ್ಥಾನದಲ್ಲೇ ನಡೆದಿತ್ತು. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್

    ಮೊದಲನೇ ನಿರ್ದೇಶನದಲ್ಲೇ ಯಶಸ್ಸು ಕಂಡಿರುವ ದುನಿಯಾ ವಿಜಯ್, ಎರಡನೇ ಸಿನಿಮಾದಲ್ಲೂ ಅಂಥದ್ದೊಂದು ಭರವಸೆ ಮೂಡಿಸಿದ್ದಾರೆ. ಈಗಾಗಲೇ ಸಿನಿಮಾದ ಆಡಿಯೋ ರೈಟ್ಸ್ ಸೇಲ್ ಆಗಿದ್ದು, ಸಿನಿಮಾ ಶುರುವಾಗುವ ಮುನ್ನವೇ ವಿಜಯ್ ಅವರಿಗೆ ಕೈ ತುಂಬಾ ಹಣ ನೀಡಿದೆ. ಇದನ್ನೂ ಓದಿ : EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್

    ಸಲಗ ಸಿನಿಮಾದ ಬಹುತೇಕ ಹಾಡುಗಳು ಹಿಟ್ ಆಗಿದ್ದರೆ, ಭೀಮ ಸಿನಿಮಾದ ಹಾಡುಗಳ ಬಗ್ಗೆಯೂ ನಿರೀಕ್ಷೆ ಮೂಡಿದೆ. ಈ ಸಿನಿಮಾದಲ್ಲಿ ಮತ್ತೆ ವಿಜಯ್ ಮತ್ತು ಚರಣ್ ರಾಜ್ ಕಾಂಬಿನೇಷನ್ ಮುಂದುವರೆದಿದೆ. ಈ ಚಿತ್ರವನ್ನು ಕೃಷ್ಣ ಸಾರ್ಥಕ್ ಹಾಗೂ ವಿತರಕ ಜಗದೀಶ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಸದ್ಯದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ.

  • ‘ಸಲಗ’ ಕ್ರೇಜ್ ಭಲೇ ಜೋರು- ಭಕ್ತಗಣಕ್ಕೆ ಶರಣೆಂದ ಬ್ಲ್ಯಾಕ್ ಕೋಬ್ರಾ

    ‘ಸಲಗ’ ಕ್ರೇಜ್ ಭಲೇ ಜೋರು- ಭಕ್ತಗಣಕ್ಕೆ ಶರಣೆಂದ ಬ್ಲ್ಯಾಕ್ ಕೋಬ್ರಾ

    ಬೆಂಗಳೂರು: ಗಾಂದೀನಗರದ ಗಲ್ಲಿ ಗಲ್ಲಿಗಳಲ್ಲಿ, ವಿಜಿ ಅಭಿಮಾನಿ ದೇವರುಗಳಲ್ಲೀಗ ಸಲಗ ಜಪ ಶುರುವಾಗಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಕುಂತ್ರು, ನಿಂತ್ರು ಸಲಗ ಸಲಗ ಅಂತಿದ್ದಾರೆ. ಸೆಟ್ಟೇರಿದ ದಿನವೇ ಒಂದು ಬಝ್ ಕ್ರಿಯೇಟ್ ಮಾಡಿದ್ದ ಸಿನಿಮಾ ಈಗ ವಿಜಿ ಭಕ್ತಗಣದಲ್ಲಿ ಹೈವೋಲ್ಟೇಜ್ ಕ್ರೇಜ್ ಕ್ರಿಯೇಟ್ ಮಾಡಿದೆ. ಒಂಟಿ ಸಲಗದಂತೆ ಎಲ್ಲಾ ಅಡೆತಡೆಗಳನ್ನು ದಾಟಿ ಫೈನಲಿ ನಾಡ ಹಬ್ಬಕ್ಕೆ ಚಿತ್ರಮಂದಿರಕ್ಕೆ ಭರ್ಜರಿ ಎಂಟ್ರಿ ಕೊಡೋಕೆ ‘ಸಲಗ’ ಸಕಲ ಸಜ್ಜಾಗಿದೆ.

    ವಿಜಿ ನಿರ್ದೇಶನದ ಸಲಗ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ಟೀಸರ್, ಹಾಡುಗಳು ಸೋಶಿಯಲ್ ಮೀಡಿಯಾಗಳಲ್ಲಿ ಧೂಳ್ ಎಬ್ಬಿಸಿ ಸಿನಿರಸಿಕರ ಕಿಕ್ಕೇರಿಸಿವೆ. ಒಂದು ಕಡೆ ವಿಜಿ ಚೊಚ್ಚಲ ನಿರ್ದೇಶನ, ಇನ್ನೊಂದು ಕಡೆ ಮಾಸ್ ಸಬ್ಜೆಕ್ಟ್, ಇದಕ್ಕೂ ಮೀರಿ ದುನಿಯಾ ವಿಜಿ ಡಾಲಿಯ ಹೈವೋಲ್ಟೇಜ್ ಕಾಂಬಿನೇಷನ್, ಇವೆಲ್ಲವೂ ಚಿತ್ರದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ದುಪ್ಟಟ್ಟು ಮಾಡಿದ್ದು, ಬ್ಲ್ಯಾಕ್ ಕೋಬ್ರಾ ಚಿತ್ರಮಂದಿರದಲ್ಲಿ ಗೆದ್ದು ಬೀಗೋದೊಂದೇ ಬಾಕಿ ಇದೆ.ಇದನ್ನೂ ಓದಿ: ನಟ ದುನಿಯಾ ವಿಜಯ್ ನೋಡಲು ಮುಗಿಬಿದ್ದ ಅಭಿಮಾನಿಗಳು!

    ‘ಸಲಗ’ ಮೇಲೆ ವಿಜಿ ಭಕ್ತಗಣ ತೋರುತ್ತಿರುವ ಪ್ರೀತಿ ಮತ್ತೊಂದು ದುನಿಯಾ ವಿಜಿ ಮುಂದೆ ಸೃಷ್ಟಿಯಾಗುವ ಮಟ್ಟಿಗಿದೆ. ಅಭಿಮಾನಿಗಳ ಪ್ರೀತಿ ಕಂಡು ಸ್ವತಃ ವಿಜಿಯೇ ಮೂಕವಿಸ್ಮಿತರಾಗಿದ್ದಾರೆ. ಸಾಮಾಜಿಕ ಜಾಲತಾಣದ ಅಂಗಳದಲ್ಲಂತೂ ಸಲಗ ಹವಾ ಜೋರಾಗಿದೆ. ಚಿತ್ರದ ಪ್ರತಿ ಅಪ್ಡೇಟ್‍ನ್ನೂ ಅಭಿಮಾನಿಗಳು ತೇರು ಹೊತ್ತು ಸಂಭ್ರಮಿಸುವ ರೀತಿ ಸಂಭ್ರಮಿಸುತ್ತಿದ್ದಾರೆ. ಇಷ್ಟಕ್ಕೆ ಈ ಅಭಿಮಾನ ಮುಗಿಯಲಿಲ್ಲ, ವಿಜಿ ಡೈ ಹಾರ್ಡ್ ಫ್ಯಾನ್ಸ್ ಅಂತೂ ಕೇಳೋದೇ ಬೇಡ, ಕೈ ಮೇಲೆ, ಎದೆ ಮೇಲೆ ಸಲಗ ಟ್ಯಾಟೂ ಹಾಕಿಸಿಕೊಂಡು ಆರಾಧಿಸುತ್ತಿದ್ದಾರೆ. ಕೆಲವರಂತೂ ಹೇರ್ ಸ್ಟೈಲ್ ನಲ್ಲೂ ಸಲಗ ಎಂದು ಡಿಸೈನ್ ಮಾಡಿಸಿಕೊಂಡಿದ್ದಾರೆ. ಈ ಪ್ರೀತಿ, ಅಭಿಮಾನ ಕಂಡು ಖುದ್ದು ವಿಜಿಯೇ ಶರಣು ಶರಣೆಂದಿದ್ದಾರೆ. ಈ ಕ್ರೇಜ್ ಕೇವಲ ಗಾಂದೀನಗರದ ಗಲ್ಲಿಗಳಲ್ಲಿ ಮಾತ್ರವಲ್ಲ, ಕರುನಾಡಿನ ಮನೆ ಮನದಲ್ಲೂ ಶುರುವಾಗಿದೆ ಅನ್ನೋದೇ ಬಲು ವಿಶೇಷ.

    ‘ಸಲಗ’ ಚಿತ್ರಮಂದಿರಕ್ಕೆ ಬರೋದನ್ನೇ ಕಾದು ಕುಳಿತಿರುವ ಭಕ್ತಗಣಕ್ಕೆ ಹೈವೋಲ್ಟೇಜ್ ಟ್ರೇಲರ್ ಸದ್ಯದಲ್ಲೇ ಉಡುಗೊರೆಯಾಗಿ ನೀಡಲಿದೆ ಚಿತ್ರತಂಡ. ರೌಡಿಸಂ ಕಥಾನಕ, ಚರಣ್ ರಾಜ್ ಸಂಗೀತ ನಿರ್ದೇಶನ, ಮಾಸ್ತಿ ಸಂಭಾಷಣೆ, ವಿಜಿ ಮಾಸ್ ಅವತಾರ, ಡಾಲಿಯ ಖಾಕಿ ಖದರ್ ಎಲ್ಲವೂ ಮೇಳೈಸಿರುವ ಸಲಗ ನಾಡಹಬ್ಬಕ್ಕೆ ಥಿಯೇಟರ್ ನಲ್ಲಿ ದರ್ಬಾರ್ ಶುರುಮಾಡಲಿದೆ. ಇದನ್ನೂ ಓದಿ: 10 ವರ್ಷದ ಹಿಂದಿನ ಫೋಟೋ ಹಂಚಿಕೊಂಡು ಪತಿಗೆ ಪ್ರೇರಣಾ ವಿಶ್

  • ಕಿಕ್ ಕೊಡ್ತಿದೆ ‘ಸೂರಿ ಅಣ್ಣನ’ ಹಾಡು

    ಕಿಕ್ ಕೊಡ್ತಿದೆ ‘ಸೂರಿ ಅಣ್ಣನ’ ಹಾಡು

    ಸ್ಯಾಂಡಲ್‍ವುಡ್ ನಲ್ಲಿ ಸಖತ್ ಕ್ರೇಜ್ ಹುಟ್ಟಿಸಿರೋ ಸಿನಿಮಾ ಸಲಗ. ದುನಿಯಾ ವಿಜಿ ನಿರ್ದೇಶಿಸಿ ನಟಿಸುತ್ತಿರುವ ಈ ಚಿತ್ರದ ಫಸ್ಟ್ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಂಗ್ ರಿಲೀಸ್ ಮಾಡಿದ್ದಾರೆ. ಸದ್ಯ ‘ಸೂರಿ ಅಣ್ಣ’ ಹಾಡು ಸೆನ್ಸೇಷನಲ್ ಕ್ರಿಯೇಟ್ ಮಾಡಿದ್ದು ಸಖತ್ ಕಿಕ್ ಕೊಡುತ್ತಿದೆ. ಟಗರು ಚಿತ್ರದ ಟೈಟಲ್ ಟ್ರ್ಯಾಕ್ ಹಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಆಂಟೋನಿ ದಾಸ್ ‘ಸೂರಿ ಅಣ್ಣ’ ಸಾಂಗ್ ಗೆ ಧ್ವನಿಯಾಗಿ ಮತ್ತೆ ಸ್ಯಾಂಡಲ್‍ವುಡ್ ನಲ್ಲಿ ಮನೆ ಮಾತಾಗಿದ್ದಾರೆ.

    ಟಗರು ಖ್ಯಾತಿಯ ಚರಣ್ ರಾಜ್ ಮಾಸ್ ಮ್ಯೂಸಿಕ್ ಮತ್ತೆ ಮ್ಯಾಜಿಕ್ ಕ್ರಿಯೇಟ್. ಅಲ್ಲದೇ ಚರಣ್ ರಾಜ್ ಹಾಗೂ ಆಂಟೋನಿ ದಾಸ್ ಕಾಂಬಿನೇಷನ್ ಮತ್ತೊಂದು ಹಿಟ್ ಸಾಂಗ್ ನೀಡುವಲ್ಲಿ ಯಶಸ್ವಿಯಾಗಿದೆ.

    ‘ಸಲಗ’ ಮೂಲಕ ನಿರ್ದೇಶಕನಾಗಿ ಬಡ್ತಿ ಹೊಂದಿರುವ ಬ್ಲ್ಯಾಕ್ ಕೋಬ್ರಾ ಮೇಕಿಂಗ್ ನಲ್ಲಿ ತಮ್ಮ ನಿರ್ದೇಶನದ ಝಲಕ್ ತೋರಿಸಿದ್ರು. ಈಗ ಚಿತ್ರದ ಹಾಡು ಕೂಡ ಹಿಟ್ ಆಗಿದ್ದು ಮೊದಲ ನಿರ್ದೇಶನದಲ್ಲೆ ಜಯಭೇರಿ ಬಾರಿಸೋ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಒಟ್ನಲ್ಲಿ ಚಿತ್ರಕ್ಕೆ ಹುಟ್ಟಿರೋ ಕ್ರೇಜ್ ನೋಡಿ ವಿಜಿ ಅಭಿಮಾನಿಗಳು ಹಾಗೂ ಚಿತ್ರತಂಡ ಸಖತ್ ಥ್ರಿಲ್ ಆಗಿದ್ದಾರೆ.

    ಟಗರು ಖ್ಯಾತಿಯ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸಂಜನಾ ಆನಂದ್ ನಾಯಕಿಯಾಗಿ ವಿಜಿ ಜೊತೆ ಸ್ಕೀನ್ ಶೇರ್ ಮಾಡಿದ್ದಾರೆ. ಫಸ್ಟ್ ಲುಕ್, ಮೇಕಿಂಗ್ ಮತ್ತು ಹಾಡುಗಳು ಮೂಲಕ ಬಝ್ ಕ್ರಿಯೇಟ್ ಮಾಡಿರೋ ಸಲಗ ಸದ್ಯದಲ್ಲೆ ಟೀಸರ್, ಟ್ರೇಲರ್ ಮೂಲಕ ಮಾಸ್ ಪ್ರಿಯರ ಮನತಣಿಸಲಿದೆ.

  • ಘೀಳಿಡಲು ರೆಡಿಯಾದ ‘ಸಲಗ’ದೊಂದಿಗೆ ಗುಟುರು ಹಾಕಿತು ಟಗರು ಟೀಮ್!

    ಘೀಳಿಡಲು ರೆಡಿಯಾದ ‘ಸಲಗ’ದೊಂದಿಗೆ ಗುಟುರು ಹಾಕಿತು ಟಗರು ಟೀಮ್!

    ಬೆಂಗಳೂರು: ಕಳೆದ ವರ್ಷದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸಿದ್ದ ಚಿತ್ರ ದುನಿಯಾ ಸೂರಿ ನಿರ್ದೇಶನದ ಟಗರು. ತಾಂತ್ರಿಕವಾಗಿಯೂ ಸೇರಿದಂತೆ ಎಲ್ಲ ರೀತಿಯಲ್ಲಿಯೂ ಭಾರೀ ಸದ್ದು ಮಾಡಿದ್ದ ಈ ಚಿತ್ರದ ತಂಡವೇ ಮತ್ತೊಂದು ಚಿತ್ರಕ್ಕೆ ಸಾಥ್ ನೀಡಿದೆ ಅಂದರೆ ಅದರ ಬಗ್ಗೆ ಕುತೂಹಲ ಹುಟ್ಟದಿರಲು ಸಾಧ್ಯವೇ? ಸದ್ಯಕ್ಕೆ ದುನಿಯಾ ವಿಜಯ್ ನಾಯಕನಾಗಿ ನಟಿಸುತ್ತಿರೋ ಸಲಗ ಚಿತ್ರವೂ ಕೂಡಾ ಇಂಥಾ ಕಾರಣದಿಂದಲೇ ಮತ್ತೆ ಸದ್ದು ಮಾಡಿದೆ!

    ಸಲಗ ಎಂಬ ಶೀರ್ಷಿಕೆಯಲ್ಲಿಯೇ ಒಂದು ಫೋರ್ಸ್ ಇದೆ. ಅದು ದುನಿಯಾ ವಿಜಯ್ ಅವರ ಇಮೇಜಿಗೆ ಹೇಳಿ ಮಾಡಿಸಿದಂತಿದೆ ಅನ್ನೋ ವಿಚಾರ ಆರಂಭದಿಂದಲೇ ಕೇಳಿ ಬಂದಿತ್ತು. ಅದಾದ ನಂತರದಲ್ಲಿ ಈ ಸಿನಿಮಾ ಬಗ್ಗೆ ಗಂಭೀರವಾಗಿ ತಯಾರಿ ನಡೆಸಿದ್ದ ವಿಜಯ್ ಅವರು ಇದೀಗ ಎಲ್ಲವನ್ನೂ ಅಂತಿಮ ಹಂತಕ್ಕೆ ತಂದಿದ್ದಾರೆ. ಟಗರು ಚಿತ್ರತಂಡ ಸಲಗಕ್ಕೆ ಸಾಥ್ ನೀಡಿರೋ ರೋಚಕ ಸುದ್ದಿಯೊಂದರ ಮೂಲಕ ವಿಜಯ್ ಸಂಚಲನ ಸೃಷ್ಟಿಸಿದ್ದಾರೆ.

    ಅಂದಹಾಗೆ, ನಿರ್ದೇಶಕ ಸೂರಿಯವರನ್ನು ಹೊರತು ಪಡಿಸಿ ಒಂದಿಡೀ ಟಗರು ಟೀಮು ಸಲಗ ಚಿತ್ರವನ್ನು ರೂಪಿಸಲು ಪಣ ತೊಟ್ಟ ನಿಂತಿದೆ. ಟಗರು ಚಿತ್ರಕ್ಕೆ ಹೊಸ ಶೈಲಿಯ ಸಂಭಾಷಣೆ ಬರೆದಿದ್ದ ಮಾಸ್ತಿ ಮಂಜು, ಅಭಿ ಮಲ್ಲ ಸೇರಿದಂತೆ ಪ್ರತಿಭಾವಂತರ ದಂಡು ಸಲಗಕ್ಕೆ ಸಾಥ್ ನೀಡಿದೆ. ವಿಶೇಷವೆಂದರೆ ಟಗರು ನಿರ್ಮಾಪಕರಾಗಿದ್ದ ಕೆ.ಪಿ ಶ್ರೀಕಾಂತ್ ಅವರೇ ಸಲಗಕ್ಕೂ ಬಂಡವಾಳ ಹೂಡಲು ಮುಂದಾಗಿದ್ದಾರೆ. ಯಾವುದೇ ಚಿತ್ರ ಮಾಡುವಾಗಲೂ ಕಥೆಯೂ ಸೇರಿದಂತೆ ಪ್ರತಿಯೊಂದನ್ನೂ ಕೂಲಂಕಷವಾಗಿ ಪರಿಶೀಲಿಸೋ ಶ್ರೀಕಾಂತ್ ಅವರಿಗೆ ಸಲಗದ ಕಥೆ ತುಂಬಾ ಹಿಡಿಸಿದೆ. ಪಟ್ಟಾಗಿ ಪರಿಶ್ರಮ ಹಾಕಿದರೆ ಟಗರು ಚಿತ್ರದಂಥಾದ್ದೇ ಭರಪೂರ ಯಶಸ್ಸನ್ನು ಸಲಗವೂ ತನ್ನದಾಗಿಸಿಕೊಳ್ಳಲಿದೆ ಎಂಬ ಭರವಸೆಯೂ ಶ್ರೀಕಾಂತ್ ಅವರಿಗಿದೆ.

    ಡಾಲಿ, ಕಾಕ್ರೋಚ್ ಪಾತ್ರಧಾರಿಗಳೂ ಇರುತ್ತಾರೆ!: ಹಾಗಾದ್ರೆ, ಟಗರು ಚಿತ್ರದಲ್ಲಿ ಟ್ರೆಂಡ್ ಸೆಟ್ ಮಾಡಿದ್ದ ಪಾತ್ರಗಳಲ್ಲಿ ಮಿಂಚಿದ್ದ ಪಾತ್ರಗಳನ್ನು ನಿರ್ವಹಿಸಿದ್ದ ಕಲಾವಿದರೂ ಸಲಗದಲ್ಲಿರುತ್ತಾರಾ ಎಂಬ ಪ್ರಶ್ನೆ ಕಾಡುತ್ತೆ. ಅದರಲ್ಲಿಯೂ ಬ್ರ್ಯಾಂಡ್ ಆಗಿ ಬಿಟ್ಟಿದ್ದ ಡಾಲಿ ಮತ್ತು ಕಾಕ್ರೋಚ್ ಪಾತ್ರಧಾರಿಗಳಾಗಿದ್ದ ಧನಂಜಯ್ ಮತ್ತು ಸುಧಿಯಂಥವರೂ ಜೊತೆಯಾಗ್ತಾರಾ ಎಂಬ ಕುತೂಹಲವೂ ಕಾಡುತ್ತೆ. ಇದಕ್ಕೆ ಸಿಕ್ಕ ಉತ್ತರ ಪ್ರೇಕ್ಷಕರನ್ನು ಥ್ರಿಲ್ ಆಗಿಸುವಂತಿದೆ. ಯಾಕಂದ್ರೆ, ಸಲಗ ಚಿತ್ರದಲ್ಲಿಯೂ ಧನಂಜಯ್ ಮತ್ತು ಸುಧಿ ಪಾತ್ರ ನಿರ್ವಹಿಸಲಿದ್ದಾರೆ. ಆ ಪಾತ್ರಗಳೂ ಕೂಡಾ ಟಗರು ಪಾತ್ರಗಳಂತೆಯೇ ತೀರಾ ಭಿನ್ನವಾಗಿರಲಿವೆ!

    ಇನ್ನುಳಿದಂತೆ ಟಗರುವಿನಂಥಾ ಸೂಪರ್ ಹಿಟ್ ಚಿತ್ರದ ತಂಡವೇ ತಮ್ಮ ಚಿತ್ರಕ್ಕೆ ಸಾಥ್ ನೀಡಿರೋದರಿಂದ ದುನಿಯಾ ವಿಜಯ್ ಕೂಡಾ ಖುಷಿಗೊಂಡಿದ್ದಾರೆ. ಅದ್ಭುತವಾದೊಂದು ಕಥೆಯ ಮೂಲಕ ತೆರೆ ಮೇಲೆ ಬರುವ ಭರವಸೆಯ ಮಾತುಗಳನ್ನೂ ಅವರಾಡಿದ್ದಾರೆ. ಇನ್ನೂ ಮುಖ್ಯ ಸಂಗತಿಯೆಂದರೆ, ಟಗರು ಚಿತ್ರದ ಮೂಲಕ ಭಿನ್ನವಾದ ಸಂಗೀತದ ತರಂಗಗಳನ್ನೆಬ್ಬಿಸಿದ್ದ ಚರಣ್ ರಾಜ್ ಸಲಗಕ್ಕೆ ಹಿನ್ನೆಲೆ ಸಂಗೀತ ನೀಡಲಿದ್ದಾರೆ. ನವೀನ್ ಸಜ್ಜು ಸಂಗೀತ ನಿರ್ದೇಶಕರಾಗಿ ಹೊಸ ಟ್ರೆಂಡ್ ಸೆಟ್ ಮಾಡಲು ತಯಾರಿ ಆರಂಭಿಸಿದ್ದಾರೆ.

    ಆದರೆ ಸಲಗ ಚಿತ್ರದ ನಿರ್ದೇಶಕರು ಯಾರೆಂಬುದನ್ನು ಮಾತ್ರ ಗೌಪ್ಯವಾಗಿಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರತಂಡ ಅದನ್ನೂ ರಿವೀಲ್ ಮಾಡಲಿದೆ. ಇದೀಗ ಭರದಿಂದ ಸಲಗಕ್ಕಾಗಿ ತಯಾರಿಗಳು ನಡೆಯುತ್ತಿವೆ. ಈ ತಿಂಗಳಲ್ಲಿಯೇ ಎಲ್ಲ ಪೂರ್ವಭಾವಿ ಕೆಲಸ ಕಾರ್ಯಗಳನ್ನೂ ಮುಗಿಸಿಕೊಂಡು ಮುಂದಿನ ತಿಂಗಳಿಂದ ಸಲಗ ಚಿತ್ರೀಕರಣ ಶುರುವಾಗೋ ಲಕ್ಷಣಗಳಿವೆ.

  • ನಂಗೆ ಮನೆ ಕೊಟ್ಟ ದೇವ್ರು ಇಂದು ನಮ್ಮ ಜೊತೆ ಇಲ್ಲ: ಬಹುಭಾಷಾ ನಟ ಚರಣ್ ರಾಜ್ ಕಂಬನಿ

    ನಂಗೆ ಮನೆ ಕೊಟ್ಟ ದೇವ್ರು ಇಂದು ನಮ್ಮ ಜೊತೆ ಇಲ್ಲ: ಬಹುಭಾಷಾ ನಟ ಚರಣ್ ರಾಜ್ ಕಂಬನಿ

    ಧಾರವಾಡ: ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಅವರ ನಿಧನಕ್ಕೆ ಬಹುಭಾಷಾ ನಟ ಚರಣರಾಜ್ ಕೂಡಾ ಸಂತಾಪ ವ್ಯಕ್ತ ಪಡಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ಶ್ರೀಮಂತ ಸಿನೆಮಾ ಶೂಟಿಂಗ್‍ನಲ್ಲಿರುವ ಚರಣ್‍ರಾಜ್ ವಿಡಿಯೊ ಮಾಡಿ ಕಂಬನಿ ಮಿಡಿದಿದ್ದು, ಕರುಣಾನಿಧಿ ಜೊತೆ ಕೆಲಸ ಮಾಡಿದ ದಿನಗಳನ್ನು ಸ್ಮರಿಸಿದ್ದಾರೆ.

    ತೆಲುಗು ಸಿನಿಮಾ ಮಾಡಿ ನಾನು ಮದ್ರಾಸ್ ಅಲ್ಲಿ ಸೆಟ್ಲ್ ಆಗಿದ್ದೆ. ಅಲ್ಲಿ ನನಗೆ ಇರೋದಿಕ್ಕೆ ಮನೆ ಇರಲಿಲ್ಲ. ಆ ಸಂದರ್ಭದಲ್ಲಿ ಕರುಣಾನಿಧಿ ಅವರು ಮುಖ್ಯಮಂತ್ರಿ ಆಗಿದ್ದರು. ಹೀಗಾಗಿ ಅವರ ಬಳಿ ಹೋಗಿ ಮನೆ ಬೇಕು ಅಂತ ಕೇಳಿದ್ದೆನು. ಆವಾಗ ಅವರು ನನ್ನ ದೊಡ್ಡ ಮಗ ಅಳಗಿರಿಯ ಮನೆ ಇದೆ ಬೇಕಾದ್ರೆ ತಗೋ ಅಂತ ಹೇಳಿದ್ದರು. ಈ ಮಾತು ಕೇಳುತ್ತಿದ್ದಂತೆಯೇ ನನಗೆ ಕಣ್ಣಲ್ಲಿ ನೀರು ಬಂತು. ಆ ಮನೆಗೆ ಅವರು ಹಣ ತಗೊಂಡಿಲ್ಲ. ಆದ್ರೆ ಅದನ್ನು ನನ್ನ ಹೆಸರಿಗೆ ರಿಜಿಸ್ಟಾರ್ ಮಾಡಿಕೊಟ್ರು. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ನನಗೆ ಮನೆ ಕೊಟ್ಟ ದೇವರು ಕರುಣಾ ನಿಧಿ ಎಂದರು.

    ಇಂದು ಕರುಣಾನಿಧಿಯವರು ನಮ್ಮನ್ನು ಅಗಲಿದ್ದಾರೆ ಎಂಬುದು ನಂಬಲು ಅಸಾಧ್ಯವಾದ ವಿಷಯವಾಗಿದೆ. ನಮ್ಮೆಲ್ಲರ ಆತ್ಮೀಯ ರಾಜಕೀಯ ನಾಯಕರರಾಗಿದ್ದಾರೆ. ಅವರು 10 ವರ್ಷ ಇರುತ್ತಾರೆ. ಮತ್ತೆ ನಮ್ಮ ಮುಖ್ಯಮಂತ್ರಿ ಆಗುತ್ತಾರೆ ಅಂತ ಅಂದುಕೊಂಡಿದ್ದೆವು. ಅವರ ಸೇವೆ ಬರೀ ರಾಜಕೀಯ ಮಾತ್ರವಲ್ಲದೇ ಸಿನಿಮಾ ರಂಗಕ್ಕೂ ಇದೆ. ತಮಿಳಿನ ನನ್ನ ಮೊದಲ ಸಿನಿಮಾ ನೀತಿಕ್ಕು ತಂಡನೈಗೆ ಕರುಣಾನಿಧಿಯವರೇ ಡೈಲಾಗ್ಸ್ ಬರೆದಿದ್ದರು. ಹೀಗಾಗಿ ಸ್ನೇಹಿತರು ನೀನು ತುಂಬಾನೇ ಲಕ್ಕಿ ಅಂತ ಹೇಳುತ್ತಿದ್ದರು. ಯಾಕಂದ್ರೆ ಶಿವಾಜಿ ಗಣೇಶ್ ಅವರ ಮೊದಲನೇ ಸಿನಿಮಾ ಪರಾಶಕ್ತಿಗೆ ಇವರೇ ಡೈಲಾಗ್ ಬರೆದಿದ್ದಂತೆ. ಅವರಿಗೆ ಇವರು ಮೊದಲನೇ ಬರಹಗಾರರಂತೆ. ಇದೀಗ ನಿನಗೂ ಇವರೇ ಮೊದಲನೇ ಬರಹಗಾರ. ಮುಂದೆ ತುಂಬಾನೇ ಚೆನ್ನಾಗಿರ್ತಿಯಾ ಅಂತ ಹೇಳುತ್ತಿದ್ದರು. ಅವರು ಹೇಳಿದಂಗೆ ಆ ಸಿನಿಮಾ ನೂರು ದಿನ ಓಡಿತ್ತು. ಇದೇ ಸಿನಿಮಾವನ್ನು ಹಿಂದಿಯಲ್ಲಿಯೂ ಮಾಡಿದ್ವಿ. ಅಲ್ಲಿ ಕೂಡ 25 ವಾರ ಓಡಿತ್ತು ಅಂತ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಗದ್ಗದಿತರಾದ್ರು.

    ನನಗೆ ಮನೆ ಕೊಟ್ಟ ದೇವರು ಇಂದು ನಮ್ಮ ಜೊತೆ ಇಲ್ಲ. ಅವರ ಅಂತಿಮ ದರ್ಶನ ಮಾಡಬೇಕೆಂಬ ಆಸೆ ಇತ್ತು. ಆದ್ರೆ ಶೂಟಿಂಗ್ ಇರುವುದರಿಂದ ಸಾಧ್ಯವಾಗಿಲ್ಲ. ಒಟ್ಟಿನಲ್ಲಿ ಒಬ್ಬ ಮಹಾನ್ ವ್ಯಕ್ತಿ ಇಂದು ದೇವರ ವಶವಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಸಂತಾಪ ಸೂಚಿಸಿದ್ರು.