Tag: ಚರಣ್ ತೇಜ್

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಿಯಾಲಿಟಿ ಶೋ ವಿನ್ನರ್ ‘ನಯನ’

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಿಯಾಲಿಟಿ ಶೋ ವಿನ್ನರ್ ‘ನಯನ’

    ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್‍ವುಡ್ ನಲ್ಲಿ ತಾರೆಯರ ಮದುವೆಗಳು ನಡೆಯುತ್ತಲೇ ಇದೆ. ಸೋಮವಾರ ನಟ ಸುನೀಲ್ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ರಿಯಾಲಿಟಿ ಶೋ ವಿನ್ನರ್ ಕೂಡ ನಿನ್ನೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ವಿನ್ನರ್ ಆಗಿದ್ದ ನಯನ ಪುಟ್ಟಸ್ವಾಮಿ ಸೋಮವಾರ ಚರಣ್ ತೇಜ್ ಎಂಬ ಯುವಕನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಮೂಲತಃ ಹೈದರಾಬಾದ್ ಮೂಲದ ಚರಣ್ ತೇಜ್ ಜೊತೆ ನಯನ ನಿಶ್ಚಿತಾರ್ಥ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ನಡೆದಿತ್ತು. ಇದೀಗ ಸೋಮವಾರ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಹೊಸ ಜೀವನ ಆರಂಭಿಸಲು ಅಣಿಯಾಗಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಸುನೀಲ್ ರಾವ್!

    ರಿಯಾಲಿಟಿ ಶೋ ವಿನ್ನರ್ ಆದ ಬಳಿಕ ನಯನ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟರು. ವಿನಯ್ ರಾಜ್‍ಕುಮಾರ್ ಅಭಿನಯಿಸಿದ ‘ಸಿದ್ಧಾರ್ಥ್’ ಚಿತ್ರದಲ್ಲಿ ನಾಯಕನ ಗೆಳತಿಯಾಗಿ ನಯನ ನಟಿಸಿದ್ದರು. ಈ ಸಿನಿಮಾ ಜೊತೆಗೆ ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರದಲ್ಲಿ ನಯನ ಮಿಂಚಿದ್ದಾರೆ.

    ಇನ್ನೂ ನಯನ ಮದುವೆಗೆ ನಟ ವಿನಯ್ ರಾಜ್‍ಕುಮಾರ್ ಭೇಟಿ ನೀಡಿ ಹೊಸ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.