Tag: ಚರಕ

  • ಸಬರಮತಿ ಆಶ್ರಮದಲ್ಲಿ ಚರಕ ಸುತ್ತಿ ನೂಲು ತೆಗೆದ ದ್ರೌಪದಿ ಮುರ್ಮು

    ಸಬರಮತಿ ಆಶ್ರಮದಲ್ಲಿ ಚರಕ ಸುತ್ತಿ ನೂಲು ತೆಗೆದ ದ್ರೌಪದಿ ಮುರ್ಮು

    ಗಾಂಧಿನಗರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೊಮವಾರ ಸಬರಮತಿ (Sabarmati) ಆಶ್ರಮದಲ್ಲಿ (Ashram) ಚರಕ (Charkha) ಹಿಡಿದು ನೂಲು ತೆಗೆದರು.

    ಎರಡು ದಿನಗಳ ಕಾಲ ದ್ರೌಪದಿ ಮುರ್ಮು (Droupadi Murmu) ಗುಜರಾತ್ ಪ್ರವಾಸದಲ್ಲಿದ್ದಾರೆ. ಈ ಮೂಲಕ ಅವರು ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಗುಜರಾತ್‍ಗೆ (Gujarat) ಭೇಟಿ ಕೊಟ್ಟಿದ್ದಾರೆ.

    ಸಬರಮತಿ ಆಶ್ರಮದ ಭೇಟಿಯ ಬಗ್ಗೆ ಟ್ವೀಟ್ ಮಾಡಿರುವ ಅವರು, ಆಶ್ರಮ ಭೇಟಿ ವರ್ಣಿಸಲು ಸಾಧ್ಯವಿಲ್ಲದ ಸ್ಫೂರ್ತಿಯಾಗಿದೆ. ಈ ಹಿಂದೆಯೂ ಚರಕವನ್ನು ತಿರುಗಿಸಿದ್ದೆ. ಆದರೆ ಸಬರಾಮತಿಯಲ್ಲಿರುವ ಬಾಪು ಆಶ್ರಮದಲ್ಲಿ ಚರಕ ತಿರುಗಿಸಿರುವುದು ಸಂತೋಷವನ್ನು ತಂದಿದೆ. ಮಹಾತ್ಮ ಗಾಂಧೀಜಿ ಅವರ ಸಬರಮತಿ ಆಶ್ರಮ, ಸ್ವಾತಂತ್ರ್ಯ ಚಳುವಳಿ ಸಂದರ್ಭದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಮಹಾತ್ಮರ ಕಾರ್ಯಕ್ಷೇತ್ರವಾಗಿತ್ತು. ನಂತರವೂ ಆಶ್ರಮದ ಪಾವಿತ್ರ್ಯತೆ ಹಾಗೂ ಗಾಂಧಿ ನೆನಪು ಅಚ್ಚಳಿಯದೆ ಉಳಿದಿದೆ ಎಂದು ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ರಾಷ್ಟ್ರಪತಿ ಮುರ್ಮು ಚರಕದ ಮುಂದೆ ಕುಳಿತಿದ್ದಾರೆ. ಅವರಿಗೆ ಮಹಿಳೆಯೊನ್ನರು ಮಾರ್ಗದರ್ಶನವನ್ನು ನೀಡುತ್ತಿದ್ದು, ಅದರ ಪ್ರಕಾರವಾಗಿಯೇ ಚರಕದಿಂದ ನೂಲು ತೆಗೆಯುತ್ತಿದ್ದಾರೆ. ಇದನ್ನೂ ಓದಿ: ದಸರಾ ಸಂಭ್ರಮ – 85 ದೇಶಗಳ 1.50 ಲಕ್ಷ ಭಕ್ತರಿಂದ ಪ್ರಾರ್ಥನೆ

    ಈ ವೇಳೆ ಆಶ್ರಮದ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಉಪಸ್ಥಿತರಿದ್ದರು. ಮುರ್ಮು ಅವರು ಗಾಂಧಿಯವರ ಜೀವನ ಮತ್ತು ದೇಶದ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಆರ್ಕೈವಲ್ ಪ್ರದರ್ಶನವನ್ನು ವೀಕ್ಷಿಸಿದರು. ಇದನ್ನೂ ಓದಿ: ರಕ್ಷಣಾ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್‍ಗೆ Z+ ಭದ್ರತೆ

    Live Tv
    [brid partner=56869869 player=32851 video=960834 autoplay=true]

  • ಗುಜರಾತ್‍ನಲ್ಲಿ ತಾಯಿ ಹೀರಾಬೆನ್‌ರನ್ನು ಭೇಟಿಯಾದ ಮೋದಿ

    ಗುಜರಾತ್‍ನಲ್ಲಿ ತಾಯಿ ಹೀರಾಬೆನ್‌ರನ್ನು ಭೇಟಿಯಾದ ಮೋದಿ

    ಗಾಂಧಿನಗರ: ಗುಜರಾತಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿ ಹೀರಾಬೆನ್ ಅವರನ್ನು ಶನಿವಾರ ಸಂಜೆ ಭೇಟಿಯಾಗಿದ್ದಾರೆ.

    ಎರಡು ದಿನಗಳ ಕಾಲ ಗುಜರಾತ್‍ಗೆ ಭೇಟಿ ನೀಡಿರುವ ಮೋದಿ ಅವರು ಶನಿವಾರ ಅಹಮದಾಬಾದ್‍ನಲ್ಲಿ ನಡೆದ ಖಾದಿ ಉತ್ಸವದಲ್ಲಿ ಭಾಗವಹಿಸಿದರು. ನಂತರ ಸಂಜೆ ಗಾಂಧಿನಗರದ ರೈಸನ್ ಪ್ರದೇಶದಲ್ಲಿರುವ ನಿವಾಸದಲ್ಲಿ ಹೀರಾಬೆನ್ ಅವರನ್ನು ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ಕಾಲ ಕಳೆದರು ಎಂದು ಅವರ ಕಿರಿಯ ಸಹೋದರ ಪಂಕಜ್ ಮೋದಿ ಹೇಳಿದ್ದಾರೆ.

    ಭಾನುವಾರ ಕಛ್ ಮತ್ತು ಗಾಂಧಿನಗರದಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಶನಿವಾರ ರಾತ್ರಿ ಗಾಂಧೀನಗರದಲ್ಲಿಯೇ ಕಳೆದಿದ್ದಾರೆ. ಇದನ್ನೂ ಓದಿ: ಮುಂಬರುವ ಹಬ್ಬಗಳಲ್ಲಿ ಖಾದಿ ಉತ್ಪನ್ನಗಳನ್ನೇ ಗಿಫ್ಟ್ ಕೊಡಿ – ಜನರಿಗೆ ಮೋದಿ ಕರೆ

    ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಖಾದಿ ಮಹತ್ವವನ್ನು ನೆನಪಿಸಿಕೊಳ್ಳುವ ಸಲುವಾಗಿ ಸಾಬರಮತಿ ನದಿ ತೀರದಲ್ಲಿಂದು ಆಯೋಜಿಸಿದ್ದ `ಖಾದಿ ಉತ್ಸವ’ದಲ್ಲಿ ಮಾತನಾಡಿದ ಅವರು, ಚರಕದೊಂದಿಗೆ ತಾವು ಹೊಂದಿದ್ದ ಸಂಬಂಧವನ್ನು ಮತ್ತು ತಮ್ಮ ಬಾಲ್ಯದ ದಿನಗಳಲ್ಲಿ ತಮ್ಮ ತಾಯಿ ಚರಕದಲ್ಲಿ ಕೆಲಸ ಮಾಡುತ್ತಿದ್ದದ್ದನ್ನು ನೆನಪಿಸಿಕೊಂಡರು.

    ಮುಂಬರುವ ಹಬ್ಬಗಳಲ್ಲಿ ಈ ಬಾರಿ ಖಾದಿ ಗ್ರಾಮೋದ್ಯೋಗದಲ್ಲಿ ತಯಾರಿಸಿದ ಖಾದಿ ಉತ್ಪನ್ನಗಳನ್ನೇ ಉಡುಗೊರೆಯಾಗಿ ಕೊಡಿ. ನೀವು ಹಲವು ರೀತಿಯ ಬಟ್ಟೆಗಳನ್ನು ಹೊಂದಿರಬಹುದು. ಆದರೆ ಖಾದಿಗೆ ಸ್ಥಾನ ನೀಡಿದರೆ `ವೋಕಲ್ ಫಾರ್ ಲೋಕಲ್’ ಅಭಿಯಾನಕ್ಕೆ ಮತ್ತಷ್ಟು ವೇಗ ಸಿಗಲಿದೆ ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಂಗಳೂರಿನಲ್ಲೂ ರಸ್ತೆಗುಂಡಿಗಳ ದರ್ಬಾರ್- ಹೊಂಡ ಫೋಟೋ ಕಳಿಸಿದ್ರೆ ಸಿಗುತ್ತೆ ಬಹುಮಾನ

    Live Tv
    [brid partner=56869869 player=32851 video=960834 autoplay=true]

  • ದೇಶದ ಅತಿ ಚಿಕ್ಕ ಚರಕಕ್ಕೆ ಏಷ್ಯನ್ ಬುಕ್ ಆಫ್ ರೆಕಾರ್ಡ್

    ದೇಶದ ಅತಿ ಚಿಕ್ಕ ಚರಕಕ್ಕೆ ಏಷ್ಯನ್ ಬುಕ್ ಆಫ್ ರೆಕಾರ್ಡ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪ್ರಸನ್ನ ಚಂದ್ರಕಾಂತ್ ಶೇಠ್ ಅವರು ಬಂಗಾರದಲ್ಲಿ ತಯಾರಿಸಿದ ಕಿರು ಪ್ರತಿಕೃತಿಗಳು ದೇಶದ ಪ್ರತಿಷ್ಠಿತ ದಾಖಲೆಗಳ ಪುಟ ಸೇರಿವೆ.

    ಮಹಾತ್ಮ ಗಾಂಧೀಜಿ ಅವರ 150ನೇ ಹುಟ್ಟುಹಬ್ಬದ ನಿಮಿತ್ತ ಪ್ರಸನ್ನ ಅವರು ಅತಿ ಸೂಕ್ಷ್ಮವಾಗಿ ತಯಾರಿಸಿದ 150 ಮಿಲಿ ಗ್ರಾಂ. ಚಿನ್ನದ ಚಾಲನೆಯಲ್ಲಿರುವ ‘ಚರಕ’ವನ್ನು ನಿರ್ಮಿಸಿದ್ದರು. ಇದೇ ಸಂದರ್ಭದಲ್ಲಿ  8 ಮಿ.ಗ್ರಾಂ ತೂಕದ ಚಿನ್ನದ ರಾಷ್ಟ್ರಧ್ವಜವನ್ನು ಸಿದ್ಧಪಡಿಸಿದ್ದರು.

    ಪ್ರಸನ್ನ ಅವರ ಈ ಅತೀ ಸೂಕ್ಷ್ಮ ಕಲೆಯು ‘ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್’ನ ಪುಟ ಸೇರಿದೆ. 150 ಮಿ.ಗ್ರಾ. ಚಿನ್ನದ ಚಾಲನೆ ಮಾಡಬಹುದಾದ ಅತಿ ಚಿಕ್ಕ ಚರಕವು ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ಮತ್ತು ‘ಏಷ್ಯನ್ ಬುಕ್ ಆಫ್ ರೆಕಾರ್ಡ್’ ಗಳಿಸಿಕೊಂಡಿದೆ. 8 ಮಿ.ಗ್ರಾಂ. ತೂಕದ ಚಿನ್ನದ ರಾಷ್ಟ್ರಧ್ವಜ ‘ಇಂಟರ್ ನಾಷನಲ್ ಬುಕ್ ಆಫ್ ರೆಕಾರ್ಡ್’ನ ಪುಟ ಸೇರಿ ವಿಶ್ವ ದಾಖಲೆಗೆ ಸೇರಿದೆ.

    ಪ್ರಸನ್ನ ಅವರು ಹೊನ್ನಾವರದ ಮಾರುತಿ ಪ್ರಸನ್ನ ಜ್ಯೂವೆಲ್ಲರಿಯ ಮಾಲೀಕ ಚಂದ್ರಕಾಂತ್ ಶೇಠ್ ಮತ್ತು ಶೋಭಾ ದಂಪತಿಯ ಪುತ್ರರಾಗಿದ್ದಾರೆ. ಅವರು ಹೊನ್ನಾವರದ ಎಸ್.ಡಿ.ಎಮ್ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸನ್ನ ಅವರು ವಿಶ್ವ ದಾಖಲೆ ಮಾಡುವ ಮೂಲಕ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ.