Tag: ಚರಂಡಿ

  • ಬಳ್ಳಾರಿ | ಚರಂಡಿಗೆ ಬಿದ್ದು 4 ವರ್ಷದ ಬಾಲಕ ಸಾವು

    ಬಳ್ಳಾರಿ | ಚರಂಡಿಗೆ ಬಿದ್ದು 4 ವರ್ಷದ ಬಾಲಕ ಸಾವು

    – ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರ ಆಕ್ರೋಶ

    ಬಳ್ಳಾರಿ: ಚರಂಡಿ ಗುಂಡಿಗೆ (Drain) ಬಿದ್ದು ಬಾಲಕ ದಾರುಣವಾಗಿ ಮೃತಪಟ್ಟಿರುವ ಘಟನೆ ಬಳ್ಳಾರಿ (Ballari) ಜಿಲ್ಲೆ ಸಂಡೂರು (Sandur) ತಾಲೂಕಿನ ಕುರೇಕುಪ್ಪ ಗ್ರಾಮದಲ್ಲಿ ನಡೆದಿದೆ.

    ಕುರೇಕುಪ್ಪದ 6ನೇ ವಾರ್ಡ್‌ನ ಪಿ ಅರವಿಂದ್ (4) ಮೃತ ಬಾಲಕ. ಸಂಜೆ ಆಟವಾಡುತ್ತಾ ತಾತನ ಮನೆಗೆ ಹೊರಟಿದ್ದ ಬಾಲಕ, ಕಾಲು ಜಾರಿ ಚರಂಡಿ ನೀರು ತುಂಬಿದ್ದ ಗುಂಡಿಗೆ ಬಿದ್ದಿದ್ದಾನೆ. ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಗಾಬರಿಗೊಂಡ ಪೋಷಕರು ಹುಡುಕಾಡಿದ್ದಾರೆ. ತಡರಾತ್ರಿ ಚರಂಡಿ ನೀರಿನಲ್ಲಿ ಬಾಲಕನ ಮೃತದೇಹ ತೇಲಿದೆ. ಕೂಡಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನನ್ನ ಜಿಂದಾಲ್ ಆಸ್ಪತ್ರೆಗೆ ಪೋಷಕರು ದಾಖಲಿಸಿದರು. ನೀರಿನಲ್ಲೇ ಮಗು ಮೃತಪಟ್ಟಿದ್ದ ಬಗ್ಗೆ ವೈದ್ಯರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಲ್ಲೇಶ್ವರಂ | ಫರ್ನಿಚರ್ ಶಾಪ್‍ನಲ್ಲಿ ಭಾರೀ ಅಗ್ನಿ ಅವಘಡ – 5 ಕೋಟಿ ಮೌಲ್ಯದ ವಸ್ತುಗಳು ಭಸ್ಮ

    ಕೊನೇ ಕ್ಷಣದಲ್ಲಿ ಮಗು ಚರಂಡಿ ನೀರಿನಲ್ಲಿ ಬಿದ್ದು ಒದ್ದಾಡುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನೂ ಮಗು ಸಾವಿಗೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಬಾಲಕನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಪುಂಡರ ಅಟ್ಟಹಾಸ – ಸಿಕ್ಕಸಿಕ್ಕ ಲಾರಿಗಳನ್ನ ಅಡ್ಡಹಾಕಿ ಲಾಂಗ್‌ ತೋರಿಸಿ ಹಣ ವಸೂಲಿ

  • ನವಜಾತ ಗಂಡು ಶಿಶುವನ್ನು ಚರಂಡಿಗೆ ಎಸೆದು ಪಾಪಿ ತಾಯಿ ಎಸ್ಕೇಪ್!‌

    ನವಜಾತ ಗಂಡು ಶಿಶುವನ್ನು ಚರಂಡಿಗೆ ಎಸೆದು ಪಾಪಿ ತಾಯಿ ಎಸ್ಕೇಪ್!‌

    ವಿಜಯಪುರ: ಮಕ್ಕಳಿಲ್ಲವೆಂದು ಎಷ್ಟೋ ಮಂದಿ ಕೊರಗುತ್ತಾರೆ. ಈ ನಡುವೆ ಮಹಿಳೆಯೊಬ್ಬಳು ನವಜಾತ ಶಿಶುವನ್ನು ಚರಂಡಿಗೆ ಎಸೆದು ಹೋಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

    ವಿಜಯಪುರ (Vijayapura) ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಲಕೊಪ್ಪರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಮಕ್ಕಳ ದಾರುಣ ಸಾವು

    ಮಹಿಳೆ ಮೃತಪಟ್ಟ ನವಜಾತ ಶಿಶುವನ್ನು ಪ್ಲಾಸ್ಟಿಲ್ ಹಾಳೆಯಲ್ಲಿ ಸುತ್ತಿ ಚರಂಡಿಗೆ ಎಸೆದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾಳೆ. ಇತ್ತ ಶಿಶುವನ್ನು ಗಮನಿಸಿದ ಗ್ರಾಮಸ್ಥರು ಚರಂಡಿಯಿಂದ ಗಂಡು ಮಗುವನ್ನು ಮೇಲಕ್ಕೆತ್ತಿದ್ದಾರೆ. ಅಲ್ಲದೇ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ದೌಡಾಯಿಸಿದ ಮುದ್ದೇಬಿಹಾಳ ಪೊಲೀಸರು ತಾಯಿಗಾಗಿ ಶೋಧ ನಡೆಸಿದ್ದಾರೆ.

  • ವೀಡಿಯೋ: ಯಾರಿಗೆ ಹೇಳಿದ್ರೂ ನೋ ಯೂಸ್‌, ಸ್ವತಃ ಚರಂಡಿಗಿಳಿದು ಕ್ಲೀನ್‌ ಮಾಡಿದ ಬಿಜೆಪಿ ಕೌನ್ಸಿಲರ್!

    ವೀಡಿಯೋ: ಯಾರಿಗೆ ಹೇಳಿದ್ರೂ ನೋ ಯೂಸ್‌, ಸ್ವತಃ ಚರಂಡಿಗಿಳಿದು ಕ್ಲೀನ್‌ ಮಾಡಿದ ಬಿಜೆಪಿ ಕೌನ್ಸಿಲರ್!

    ಭೋಪಾಲ್: ‌ಮಧ್ಯಪ್ರದೇಶದ ಗ್ವಾಲಿಯರ್ (Gwalior) ಜಿಲ್ಲೆಯ ಬಿಜೆಪಿ ಕೌನ್ಸಿಲರ್ (BJP Councillor Devendra Rathore) ಒಬ್ಬರು ತಮ್ಮ ಪ್ರದೇಶದಲ್ಲಿ ಬಂದ್‌ ಆಗಿ ಗಬ್ಬು ನಾರುತ್ತಿದ್ದ ಚರಂಡಿಯನ್ನು ಸ್ವತಃ ತಾವೇ ಕ್ಲೀನ್‌ ಮಾಡಿದ ಪ್ರಸಂಗವೊಂದು ನಡೆದಿದೆ.

    ನಗರದ ಬಿರ್ಲಾನಗರದಲ್ಲಿರುವ ಚರಂಡಿಯನ್ನು ವಾರ್ಡ್ 15ರ ಪಾಲಿಕೆ ಸದಸ್ಯ ದೇವೇಂದ್ರ ರಾಠೋಡ್ ಸ್ವಚ್ಛಗೊಳಿಸಿದವರು. ಇವರು ಈ ಸಂಬಂಧ ಹಲವಾರು ಬಾರಿ ದೂರು ನೀಡಿದರೂ ಮುನ್ಸಿಪಲ್ ಕಾರ್ಪೊರೇಷನ್ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಸ್ವತಂ ರಾಠೋಡ್‌ ಅವರೇ ಗುಂಡಿಗೆ ಇಳಿದು ಕ್ಲೀನ್‌ ಮಾಡಲು ಪ್ರಯತ್ನಿಸಿದ್ದಾರೆ. ಘಟನೆಯ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಂತರ ನಗರ ಪಾಲಿಕೆ ತಂಡ ಸ್ಥಳಕ್ಕೆ ಆಗಮಿಸಿ ಸ್ವಚ್ಛಗೊಳಿಸಿದರು.

    ಘಟನೆ ವಿವರ: ವಾರ್ಡ್ ಸಂಖ್ಯೆ 15ರಲ್ಲಿ ದೊಡ್ಡ ಚರಂಡಿಯೊಂದಿದೆ. ಈ ಚರಂಡಿ ಬಂದ್‌ ಆಗಿ ನೀರು ಹೋಗಲು ಸಾಧ್ಯವಾಗದೇ ಸ್ಥಳೀಯ ನಿವಾಸಿಗಳ ಮನೆಗಳಿಗೆ ಗಲೀಜು ನೀರು ನುಗ್ಗಿತ್ತು. ಈ ಬಗ್ಗೆ ಪಾಲಿಕೆಯ ಗಮನಕ್ಕೆ ತಂದರೂ ಯಾರೂ ಗಮನ ಹರಿಸಿಲ್ಲ. ಈ ಬಗ್ಗೆ ಆಯುಕ್ತರಿಗೆ, ಮೇಯರ್‌ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಕೌನ್ಸಿಲ್‌ನಲ್ಲಿ ವಿಷಯ ಪ್ರಸ್ತಾಪಿಸಿದರೂ ಸಮಸ್ಯೆ ಮಾತ್ರ ಪರಿಹರಿಸಲು ಯಾರೂ ಮುಂದಾಗಲಿಲ್ಲ. ಹೀಗಾಗಿ ನಾನೇ ಪರಿಹರಿಸಬೇಕು ಎಂದು ಅರಿತುಕೊಂಡೆ ಎಂದು ದೇವೇಂದ್ರ ರಾಥೋಡ್ ತಿಳಿಸಿದರು.

    ಜನರು ನನಗೆ ಮತ ನೀಡಿದ್ದಾರೆ, ಅವರ ಮತಕ್ಕೆ ಬೆಲೆ ನೀಡಬೇಕು. ಆದ್ದರಿಂದ ನಾನೇ ಚರಂಡಿಯನ್ನು ಸ್ವಚ್ಛಗೊಳಿಸಿದ್ದೇನೆ. ನಾನು ಸ್ವಚ್ಛಗೊಳಿಸಿದ ನಂತರ ನಗರಸಭೆ ನೌಕರರು ಸಹ ಬಂದು ಸ್ವಚ್ಛಗೊಳಿಸಲು ಪ್ರಾರಂಭಿಸಿದರು. ಇನ್ನು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಎಲ್ಲಿಗೂ ಹೋಗಬಾರದು ಅಥವಾ ಅಧಿಕಾರಿಗಳೊಂದಿಗೆ ಮಾತನಾಡಬಾರದು ಎಂದು ಆಯುಕ್ತರು ನನಗೆ ಹೇಳಿದರು. ನನಗೆ ಯಾವ ಆಯ್ಕೆ ಇದೆ? ನನ್ನ ಬಳಿ ಇದ್ದ ಏಕೈಕ ಪರಿಹಾರವೆಂದರೆ ನಾನೇ ಚರಂಡಿಗೆ ಇಳಿದು ಸ್ವಚ್ಛಗೊಳಿಸುವುದಾಗಿತ್ತು ಎಂದು ಅವರು ಹೇಳಿದರು.

    ಇದೇ ವೇಳೆ ಮೇಯರ್ ಶೋಭಾ ಸಿಕರ್ವಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಇಲ್ಲಿನ ಮಹಾನಗರ ಪಾಲಿಕೆ ಕಾಂಗ್ರೆಸ್ ಅಧೀನದಲ್ಲಿದೆ. ಇಲ್ಲಿನ ಪುರಸಭೆ ಕಾಂಗ್ರೆಸ್‌ನ ಅಧೀನದಲ್ಲಿದೆ. ರಾಜ್ಯದಲ್ಲಿ ನಮ್ಮ ಸರ್ಕಾರವಿದೆ. ಆದರೆ ಇಲ್ಲಿ ನಾವು ಕಾಂಗ್ರೆಸ್‌ನ ಮೇಯರ್ ಶೋಭಾ ಸಿಕರ್ವಾರ್ ಅಡಿಯಲ್ಲಿ ಕೆಲಸ ಮಾಡುತ್ತಿದ್ದರೂ ಅವರು ಮೌನವಾಗಿದ್ದಾರೆ ಎಂದು ಕಿಡಿಕಾರಿದರು.

    ಈ ಸಂಬಂಧ ಗ್ವಾಲಿಯರ್ ಮುನ್ಸಿಪಲ್ ಕಾರ್ಪೊರೇಶನ್‌ನ ಹೆಚ್ಚುವರಿ ಆಯುಕ್ತ ಮುನೀಶ್ ಸಿಂಗ್ ಸಿಕರ್ವಾರ್ ಮಾತನಾಡಿ, ಎಲ್ಲೆಲ್ಲಿ ಒಳಚರಂಡಿ ಸಂಬಂಧಿತ ಸಮಸ್ಯೆಗಳು ಉದ್ಭವಿಸಿದರೂ ಅವುಗಳನ್ನು ತಕ್ಷಣವೇ ಪರಿಹರಿಸಲಾಗಿದೆ. ಆ ವಾರ್ಡ್‌ನಲ್ಲಿಯೂ ನಗರಸಭೆಯಿಂದ ಚರಂಡಿ ಪಕ್ಕದಲ್ಲಿ ಕಾಮಗಾರಿ ನಡೆಯುತ್ತಿದ್ದು, ಅಂತಹ ಮಾಹಿತಿ ಬಂದಿದ್ದರೆ ಅದನ್ನೂ ಪರಿಹರಿಸಲಾಗುತ್ತಿತ್ತು ಎಂದು ಹೇಳಿದರು.

  • ಚರಂಡಿ ಸ್ವಚ್ಛಗೊಳಿಸುತ್ತಿದ್ದಾಗ ಉಸಿರುಗಟ್ಟಿ ಒಂದೇ ಕುಟುಂಬದ 5 ಕಾರ್ಮಿಕರು ಸಾವು

    ಚರಂಡಿ ಸ್ವಚ್ಛಗೊಳಿಸುತ್ತಿದ್ದಾಗ ಉಸಿರುಗಟ್ಟಿ ಒಂದೇ ಕುಟುಂಬದ 5 ಕಾರ್ಮಿಕರು ಸಾವು

    ಮುಂಬೈ: ಚರಂಡಿ ಸ್ವಚ್ಛಗೊಳಿಸುತ್ತಿದ್ದ ವೇಳೆ ಉಸಿರುಗಟ್ಟಿ ಒಂದೇ ಕುಟುಂಬದ ಐವರು ಕಾರ್ಮಿಕರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ (Maharashtra) ಪರ್ಭಾನಿ (Parbhani) ಜಿಲ್ಲೆಯಲ್ಲಿ ನಡೆದಿದೆ.

    ವರದಿಗಳ ಪ್ರಕಾರ ಗುರುವಾರ ಮಧ್ಯಾಹ್ನ 6 ಕಾರ್ಮಿಕರು ಭೌಚಾ ತಾಂಡಾ ಪ್ರದೇಶದ ಜಮೀನಿನಲ್ಲಿದ್ದ ಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದರು. ಚರಂಡಿಗೆ ಇಳಿದವರು ಸ್ವಲ್ಪ ಹೊತ್ತಿನಲ್ಲಿ ಒಬ್ಬೊಬ್ಬರಂತೆ ಅಸ್ವಸ್ಥರಾಗಿದ್ದು ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಅಸ್ವಸ್ಥಗೊಂಡಿದ್ದ 6 ಜನರ ಪೈಕಿ ಐವರು ಸಾವನ್ನಪ್ಪಿದ್ದಾರೆ.

    ಮೃತರೆಲ್ಲರನ್ನೂ ಗುರುತಿಸಲಾಗಿದ್ದು, ಒಂದೇ ಕುಟುಂಬದ ಸದಸ್ಯರು ಎಂಬುದು ತಿಳಿದುಬಂದಿದೆ. ಎಲ್ಲರ ಶವಗಳನ್ನೂ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅವರ ಜೊತೆಗಿದ್ದ ಇನ್ನೊಬ್ಬ ಕಾರ್ಮಿಕನ ಸ್ಥಿತಿಯೂ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಲಿಗೆ ಮೊಬೈಲ್‌ ಕಟ್ಟಿಕೊಂಡು, ಕೇಸರಿ ಶಾಲು ಹಾಕ್ಕೊಂಡು ಮತ ಎಣಿಕೆಗೆ ಬಂದಿದ್ದ ಏಜೆಂಟ್‌ ವಾಪಸ್‌

    ಚರಂಡಿ ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ಕಾರ್ಮಿಕರು ವಿಷಕಾರಿ ಗಾಳಿ ಸೇವಿಸಿ ಬಳಿಕ ಉಸಿರುಗಟ್ಟಿದ್ದರಿಂದ ಅಸ್ವಸ್ಥರಾಗಿ ಸಾವನ್ನಪ್ಪಿದ್ದಾರೆ ಎಂಬುದು ತಿಳಿದುಬಂದಿದೆ. ಕಾರ್ಮಿಕರ ಆಕಸ್ಮಿಕ ಸಾವಿನ ಕುರಿತಾಗಿ ಸೋನ್‌ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ತನಿಖೆಯನ್ನು ಮುಂದುವರಿಸಲಾಗಿದೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ – 114, ಬಿಜೆಪಿ – 83, ಜೆಡಿಎಸ್‌ – 24 ಮುನ್ನಡೆ LIVE Updates

  • ಯುಗಾದಿ ಮುನ್ನಾ ದಿನವೇ 2 ಜೀವ ಬಲಿ – ಚರಂಡಿ ಸ್ವಚ್ಛಗೊಳಿಸುವಾಗ ವಿಷಕಾರಿ ಗಾಳಿ ಸೇವಿಸಿ ಪೌರಕಾರ್ಮಿಕರಿಬ್ಬರು ಸಾವು

    ಯುಗಾದಿ ಮುನ್ನಾ ದಿನವೇ 2 ಜೀವ ಬಲಿ – ಚರಂಡಿ ಸ್ವಚ್ಛಗೊಳಿಸುವಾಗ ವಿಷಕಾರಿ ಗಾಳಿ ಸೇವಿಸಿ ಪೌರಕಾರ್ಮಿಕರಿಬ್ಬರು ಸಾವು

    ದಾವಣಗೆರೆ: ಚರಂಡಿ ಸ್ವಚ್ಛಗೊಳಿಸುವ ವೇಳೆ ವಿಷಕಾರಿ ಗಾಳಿ ಸೇವಿಸಿ ಪೌರಕಾರ್ಮಿಕರು (Pourakarmikas) ಇಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿಯಾಗಿವೆ ಎಂಬ ಆರೋಪ ಕೇಳಿಬಂದಿದೆ.

    ದಾವಣಗೆರೆ (Davanagere) ಜಿಲ್ಲೆಯ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸತ್ಯಪ್ಪ (45) ಹಾಗೂ ಮೈಲಪ್ಪ (42) ಸಾವನ್ನಪ್ಪಿದ ಪೌರಕಾರ್ಮಿಕರು. ಇದನ್ನೂ ಓದಿ: ಬಿಜೆಪಿಯ ಮತ್ತೊಂದು ವಿಕೆಟ್ ಪತನ- ಎಂಎಲ್‍ಸಿ ಸ್ಥಾನಕ್ಕೆ ಚಿಂಚನಸೂರ್ ರಾಜೀನಾಮೆ

    ಯುಗಾದಿ ಹಬ್ಬದ ಹಿನ್ನೆಲೆ ಬಹುದಿನಗಳಿಂದ ತುಂಬಿದ್ದ ಚರಂಡಿ ಸ್ವಚ್ಛತೆಗೆ ಬಸವನಕೋಟೆ ಗ್ರಾಪಂ ಪಿಡಿಓ ಶಶಿಧರ ಪಾಟೀಲ್ ಆದೇಶ ಹೊರಡಿಸಿದ್ದರು. ಪಿಡಿಓ ಅದೇಶದ ಹಿನ್ನೆಲೆ ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೆ ಸತ್ಯಪ್ಪ ಮತ್ತು ಮೈಲಪ್ಪ ಚರಂಡಿ ಸ್ವಚ್ಛತೆ ಮಾಡಿದ್ದಾರೆ.

    ಚರಂಡಿ ಸ್ವಚ್ಛಗೊಳಿಸುವಾಗ ವಿಷ ಗಾಳಿ ಸೇವಿಸಿ ಇಬ್ಬರೂ ಅಸ್ವಸ್ಥರಾಗಿದ್ದರು. ತೀವ್ರ ಅಸ್ವಸ್ಥಗೊಂಡ ಕಾರ್ಮಿಕರನ್ನು ಹತ್ತಿರದ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಸ್ಥಿತಿ ಗಂಭೀರವಾದ ಹಿನ್ನೆಲೆ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು. ಇದನ್ನೂ ಓದಿ: ಕುಡಿದು ಗಲಾಟೆ ಮಾಡುತ್ತಿದ್ದವನ ಪ್ರಶ್ನೆ ಮಾಡಿದ ಸಂಬಂಧಿಯನ್ನೇ ಕೊಂದ- ಮತ್ತೋರ್ವನಿಗೆ ಗಾಯ

    ಚಿಕಿತ್ಸೆ ಫಲಕಾರಿ ಆಗದೇ ಇಬ್ಬರೂ ಪೌರಕಾರ್ಮಿಕರು ಮೃತಪಟ್ಟಿದ್ದಾರೆ. ಬೀಳಚೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ನನ್‌ ಗರ್ಲ್‍ಫ್ರೆಂಡ್ ಜೊತೆ ಮಾತಡ್ಬೇಡ – ಸ್ನೇಹಿತನನ್ನೇ ಹತ್ಯೆಗೈದು ಚರಂಡಿಗೆ ಎಸೆದ

    ನನ್‌ ಗರ್ಲ್‍ಫ್ರೆಂಡ್ ಜೊತೆ ಮಾತಡ್ಬೇಡ – ಸ್ನೇಹಿತನನ್ನೇ ಹತ್ಯೆಗೈದು ಚರಂಡಿಗೆ ಎಸೆದ

    ನವದೆಹಲಿ: ತನ್ನ ಗರ್ಲ್‍ಫ್ರೆಂಡ್ ಜೊತೆ ಮಾತನಾಡಿದ್ದಕ್ಕೆ ಯುವಕನೋರ್ವನ ಹತ್ಯೆಗೈದು ಶವವನ್ನು ಚರಂಡಿಗೆ ಎಸೆದ ಆರೋಪದಡಿ ಇಬ್ಬರು ದುಷ್ಕರ್ಮಿಗಳನ್ನು ದೆಹಲಿ ( Delhi) ಪೊಲೀಸರು ಬಂಧಿಸಿದ್ದಾರೆ.

    ಗಾಂಧಿನಗರ (Gandhi Nagar) ನಿವಾಸಿ ಮನೀಶ್ ಅಲಿಯಾಸ್ ವಿಷ್ಣು ಮೃತ ದುರ್ದೈವಿಯಾಗಿದ್ದು, ಆರೋಪಿಗಳನ್ನು ಸೀತಾರಾಮ್ ಸುತಾರ್ (21) ಮತ್ತು ಸಂಜಯ್ ಬುಚ್ಚಾ (22) ಎಂದು ಗುರುತಿಸಲಾಗಿದೆ.

    ಅಕ್ಟೋಬರ್ 22 ರಂದು ಮನೀಷ್ ಕಾಣೆಯಾಗಿರುವುದಾಗಿ ಅವರ ತಂದೆ ಭಗೀರಥ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಕರೋಲ್‍ಬಾಗ್‍ನ ಗಫಾರ್ ಮಾರುಕಟ್ಟೆಯ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಮಗ ಅಕ್ಟೋಬರ್ 21 ರಿಂದ ನಾಪತ್ತೆಯಾಗಿದ್ದಾನೆ. ಅಲ್ಲದೇ ನನ್ನ ಮಗನ ಕಾರು ದೆಹಲಿಯ ಕ್ಯಾಂಟ್ ಪ್ರದೇಶದಲ್ಲಿ ರಕ್ತದ ಕಲೆಗಳೊಂದಿಗೆ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ದೂರು ನೀಡಿದ್ದರು.

    ಈ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು, ಮನೀಶ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ರಾಜಸ್ಥಾನದ ಚುರುವಿನ  (Rajasthan’s Churu) ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಬ್ಬರೂ ಮನೀಶ್‍ನನ್ನು ಕೊಂದು ಶವವನ್ನು ಚರಂಡಿಗೆ ಎಸೆದಿರುವ ವಿಚಾರ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: KPCC ಯಲ್ಲಿ ಭಿನ್ನಮತ ಸ್ಫೋಟ – ಪುಷ್ಪಾ ಅಮರನಾಥ್ ವಜಾಕ್ಕೆ ಆಗ್ರಹ

    crime

    ಆರೋಪಿ ಸಂಜಯ್ ಬುಚ್ಚಾ ಕೋಲ್ಕತ್ತಾದಲ್ಲಿ ಷೇರು ದಲ್ಲಾಳಿಯೊಂದಿಗೆ ಕೆಲಸ ಮಾಡುತ್ತಿದ್ದನು. ಮನೀಶ್ ತನ್ನ ಗೆಳತಿಯನ್ನು ಭೇಟಿಯಾದ ವಿಚಾರ ತಿಳಿದ ಸಂಜಯ್ ಬುಚ್ಚಾ ಆಕೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಸಂಶಯ ಹೊಂದಿದ್ದನು. ಇದರಿಂದ ತನ್ನ ಗೆಳತಿಯೊಂದಿಗೆ ಮಾತನಾಡುವುದನ್ನು ನಿಲ್ಲಿಸುವಂತೆ ಮನೀಶ್‍ಗೆ ವಾರ್ನ್ ಮಾಡಿದ್ದನು. ಆದರೂ ಆತನ ಮಾತನ್ನು ನಿರಾಕರಿಸಿದ್ದರಿಂದ ಮನೀಶ್ ಅನ್ನು ಹತ್ಯೆಗೈಯ್ಯಲು ಸಂಜಯ್ ನಿರ್ಧರಿಸಿದನು. ಇದನ್ನೂ ಓದಿ: 2023ರ ವೇಳೆಗೆ ಚೀನಾ, ಪಾಕಿಸ್ತಾನಕ್ಕಿಂತ ಉತ್ತಮ ಸಂಬಳ ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ ಭಾರತ

    ಅಕ್ಟೋಬರ್ 21 ರಂದು ದೆಹಲಿಯಲ್ಲಿ ಭೇಟಿಯಾಗುವಂತೆ ಮನೀಶ್‍ಗೆ ಸಂಜಯ್ ತಿಳಿಸಿದ್ದನು. ಇದೇ ವೇಳೆ ಸಂಜಯ್ ತನ್ನ ನೆರೆಮನೆಯ ಸೀತಾರಾಮ್ ಅನ್ನು ಕರೆಸಿಕೊಂಡು ಇಬ್ಬರೂ ಸೇರಿಕೊಂಡು ಮನೀಶ್‍ಗೆ ಮದ್ಯ ಕುಡಿಸಿದ್ದಾರೆ. ಬಳಿಕ ಸಂಜಯ್ ತನ್ನ ಗೆಳತಿಯ ನಂಬರ್ ಮತ್ತು ಫೋಟೋಗಳನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾನೆ. ಆದರೆ ಇದಕ್ಕೆ ಮನೀಶ್ ನಿರಾಕರಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಸಂಜಯ್ ಹಾಗೂ ಸೀತಾರಾಮ್ ಕಾರಿನೊಳಗೆ ಹಗ್ಗದ ಸಹಾಯದಿಂದ ಮನೀಶ್ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

    ಬಳಿಕ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡಲು ಯತ್ನಿಸಿದರೂ, ದೀಪಾವಳಿ ಹಬ್ಬದ ಹಿನ್ನೆಲೆ ಎಲ್ಲೆಡೆ ಟ್ರಾಫಿಕ್ ಇದ್ದಿದ್ದರಿಂದ ಸುಮಾರು 2 ಗಂಟೆಗಳ ಕಾಲ ಮೃತದೇಹದೊಂದಿಗೆ ಕಾರಿನಲ್ಲಿಯೇ ತಿರುಗಾಡಿದ್ದಾರೆ. ಕೊನೆಗೆ ದೆಹಲಿಯ ಕ್ಯಾಂಟ್ ಪ್ರದೇಶದ ಚರಂಡಿಯೊಂದಕ್ಕೆ ಶವವನ್ನು ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಸ್ತೆ ಪಕ್ಕದ ಚರಂಡಿಗೆ ಬಿದ್ದು ಯುವತಿ ದುರ್ಮರಣ

    ರಸ್ತೆ ಪಕ್ಕದ ಚರಂಡಿಗೆ ಬಿದ್ದು ಯುವತಿ ದುರ್ಮರಣ

    ಬೆಂಗಳೂರು: ರಸ್ತೆ ಪಕ್ಕದಲ್ಲಿದ್ದ ಡ್ರೈನೇಜ್‍ (Drainage) ಗೆ ಬಿದ್ದು ಯುವತಿಯೊಬ್ಬಳು ದುರ್ಮರಣಕ್ಕೀಡಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    23 ವರ್ಷದ ತಾರಾ ಬಡಾಯಿಕ್ ಸಾವನ್ನಪ್ಪಿದ ದುರ್ದೈವಿ. ಈ ಘಟನೆ ಎಚ್ ಬಿ ಆರ್ ಲೇಔಟ್ ನ ಅಶ್ವಥ್ ನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಇದನ್ನೂ ಓದಿ: `ಲೈಗರ್’ ಚಿತ್ರದ ಸೋಲಿನ ಬೆನ್ನಲ್ಲೇ ನಿರ್ದೇಶಕ ಪುರಿ ಜಗನ್ನಾಥ್ ಆಪ್ತ ಆತ್ಮಹತ್ಯೆ

    ತಾರಾ ರಾತ್ರಿ 12.30 ರ ಸುಮಾರಿಗೆ ಡಿಯೊ ಸ್ಕೂಟರ್ ನಲ್ಲಿ ಹೋಗ್ತಿದ್ದಳು. ಈಕೆಯ ಹಿಂಬದಿಯಲ್ಲಿ 38 ವರ್ಷದ ದಿಲೀಪ್ ಕುಳಿತಿದ್ದರು. ಈ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಡ್ರೈನೇಜ್ ಗೆ ಬಿದ್ದಿದ್ದಾಳೆ.

    ಚರಂಡಿಗೆ ಬಿದ್ದರಿಂದ ಯುವತಿ ತೊಡೆಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಬಾಣಸವಾಡಿ (Banasavadi) ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕುಡಿದ ಮತ್ತಿನಲ್ಲಿ ಚರಂಡಿಯೊಳಗೆ ಬಿದ್ದ ವೃದ್ಧ

    ಕುಡಿದ ಮತ್ತಿನಲ್ಲಿ ಚರಂಡಿಯೊಳಗೆ ಬಿದ್ದ ವೃದ್ಧ

    ಆನೇಕಲ್: ಕಂಠಪೂರ್ತಿ ಕುಡಿದಿದ್ದ ವೃದ್ಧ ಭಾರೀ ಮಳೆಗೆ ಜಲಾವೃತವಾಗಿದ್ದ ರಸ್ತೆಯ ಬದಿಯಲ್ಲಿದ್ದ ತೆರೆದ ಚರಂಡಿಯೊಳಗೆ ಬಿದ್ದು, ಗಾಯಗೊಂಡಿರುವ ಘಟನೆ ಅತ್ತಿಬೆಲೆ ಗಡಿ ಹೊಸೂರಿನಲ್ಲಿ ನಡೆದಿದೆ.

    ಕಂಠಪೂರ್ತಿ ಕುಡಿದು ರಸ್ತೆ ಬದಿಯಲ್ಲಿ ವಾಹನ ಸವಾರರಿಗೆ ಕಿರಿಕಿರಿ ಮಾಡುತ್ತಿದ್ದ ವೃದ್ಧ ಭಾರೀ ಮಳೆಗೆ ಜಲಾವೃತವಾಗಿದ್ದ ರಸ್ತೆ ಬದಿ ಇದ್ದ ಚರಂಡಿಗೆ ಬಿದ್ದಿದ್ದಾನೆ. ಟ್ರಾಫಿಕ್ ಜಾಮ್‌ನಲ್ಲಿ ವೃದ್ಧ ವಾಹನ ಸವಾರರಿಗೆ ಕಿರಿಕಿರಿ ಮಾಡುತ್ತಿದ್ದುದನ್ನು ಸ್ಥಳೀಯರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿಯುತ್ತಿದ್ದರು. ಈ ವೇಳೆ ವೃದ್ಧ ಚರಂಡಿಯೊಳಗೆ ಬಿದ್ದಿದ್ದು, ಈ ದೃಶ್ಯವೂ ಸೆರೆಯಾಗಿದೆ. ಇದನ್ನೂ ಓದಿ: ಸಿಮ್ ಕಾರ್ಡ್ ಇಲ್ಲದ ಮೊಬೈಲ್, ಖಾಲಿ ಹಾಳೆ ಕೈಗಿತ್ತು ಹೆತ್ತಮ್ಮನನ್ನೇ ಬಿಟ್ಟು ಹೋದ

    ಚರಂಡಿಯೊಳಗೆ ಬಿದ್ದಿದ್ದ ವೃದ್ಧ ಮಳೆಯ ಆರ್ಭಟಕ್ಕೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ. ಸದ್ಯ ಸ್ಥಳೀಯರ ಸಮಯಪ್ರಜ್ಞೆಯಿಂದ ವೃದ್ಧ ಬದುಕುಳಿದಿದ್ದಾನೆ. ವೃದ್ಧ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವೇಳೆ ಸಾರ್ವಜನಿಕರು ಆತನನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ಸಚಿವರ ಹಿಂಬಾಲಕರಿಂದ ನಡೀತಿದ್ಯಾ ವರ್ಗಾವಣೆ ದಂಧೆ..?

    ಘಟನೆಯಲ್ಲಿ ವೃದ್ಧನ ತಲೆಗೆ ಗಾಯವಾಗಿ ರಕ್ತ ಬರುತ್ತಿದ್ದರೂ ಬಳಿಕ ಬಂದ ಪೊಲೀಸರ ಜೊತೆಗೂ ತಾನು ಆಸ್ಪತ್ರೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಕೊನೆಗೆ ವೃದ್ಧನ ಮನವೊಲಿಸಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಚರಂಡಿಗೆ ಬಿದ್ದ 20ಕ್ಕೂ ಅಧಿಕ ಮಕ್ಕಳಿದ್ದ ಶಾಲಾ ಬಸ್

    ಚರಂಡಿಗೆ ಬಿದ್ದ 20ಕ್ಕೂ ಅಧಿಕ ಮಕ್ಕಳಿದ್ದ ಶಾಲಾ ಬಸ್

    ಭೋಪಾಲ್: ಭಾರೀ ಮಳೆಯಿಂದಾಗಿ 20ಕ್ಕೂ ಅಧಿಕ ಮಕ್ಕಳಿದ್ದ ಶಾಲಾ ಬಸ್‍ವೊಂದು ಚರಂಡಿಗೆ ಬಿದ್ದ ಘಟನೆ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ನಡೆದಿದೆ.

    ಗ್ರಾಮಸ್ಥರ ಗುಂಪು ಟ್ರ್ಯಾಕ್ಟರ್ ಮತ್ತು ಹಗ್ಗವನ್ನು ಬಳಸಿ ಚರಂಡಿಯಲ್ಲಿ ಸಿಲುಕಿದ್ದ ಬಸ್‌ನ್ನು ಹೊರತೆಗೆದರು. ಘಟನೆ ಸಂಬಂಧಿಸಿ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಒಕ್ಕಲಿಗ ಸಮರ – ಜಮೀರ್ ವಿರುದ್ಧ ಆಪ್ತ ಚೆಲುವರಾಯಸ್ವಾಮಿ ಸಂಧಾನ, ಸಿದ್ದು ಸೈಲೆಂಟ್

    ಈ ವೀಡಿಯೋದಲ್ಲಿ ಬಸ್ ಚರಂಡಿಯಲ್ಲಿ ಸಿಲುಕಿದೆ. ಈ ಸಂದರ್ಭದಲ್ಲಿ ನೀರೆಲ್ಲವೂ ಬಸ್‍ನೊಳಗೆ ಬರುತ್ತಿದ್ದಂತೆ ಸಹಾಯಕ್ಕಾಗಿ ಬಸ್‍ನಲ್ಲಿದ್ದ ಮಕ್ಕಳು ಕೂಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲೇ ಇದ್ದ ಗ್ರಾಮಸ್ಥರು ಬಂದು ಬಸ್‍ನಲ್ಲಿದ್ದ ಮಕ್ಕಳನ್ನು ಕಾಪಾಡಿದ್ದಾರೆ. ಇದನ್ನೂ ಓದಿ: ಗಬ್ಬೆದ್ದು ನಾರುತ್ತಿದೆ ಬೆಂಗಳೂರಿನ ಚೆಂದದ ಹಲಸೂರು ಕೆರೆ..!

    ಮಧ್ಯಪ್ರದೇಶದ ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ಮಧ್ಯಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ಎಚ್ಚರಿಕೆಯನ್ನು ಆರೆಂಜ್ ಅಲರ್ಟ್ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಮಳೆಯಿಂದ ರಸ್ತೆಯೆಲ್ಲಾ ಜಲಾವೃತ – ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಪೊಲೀಸ್ ಹಾಗೂ ಪತ್ನಿ ಡ್ರೈನೇಜ್ ಗುಂಡಿಗೆ

    ಮಳೆಯಿಂದ ರಸ್ತೆಯೆಲ್ಲಾ ಜಲಾವೃತ – ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಪೊಲೀಸ್ ಹಾಗೂ ಪತ್ನಿ ಡ್ರೈನೇಜ್ ಗುಂಡಿಗೆ

    ಲಕ್ನೋ: ಮಳೆ ನೀರಿನಿಂದ ಜಲಾವೃತವಾದ ರಸ್ತೆಗಳಲ್ಲಿ ಚಲಿಸುವುದು ಎಷ್ಟು ಅಪಾಯಕಾರಿ ಎಂಬುದು ಈ ಘಟನೆಯೇ ಸಾಕ್ಷಿ. ದಾರಿಯೇ ಕಾಣದ ರಸ್ತೆಯಲ್ಲಿ ಪ್ರಯಣಿಸುತ್ತಿದ್ದ ಪೊಲೀಸ್ ಹಾಗೂ ಪತ್ನಿ ಸ್ಕೂಟರ್ ಸಮೇತವಾಗಿ ತೆರೆದ ಚರಂಡಿಗೆ ಬಿದ್ದಿದ್ದಾರೆ.

    ನೀರಿನಿಂದ ಜಲಾವೃತವಾಗಿ ರಸ್ತೆಯೇ ಕಾಣದ ದಾರಿಯಲ್ಲಿ ಸಾಗುತ್ತಿದ್ದ ದಂಪತಿ ಸ್ಕೂಟರ್ ಸಮೇತವಾಗಿ ಡ್ರೈನೇಜ್ ಗುಂಡಿಗೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಘಟನೆಯಿಂದ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕಾಬೂಲ್ ಗುರುದ್ವಾರ ದಾಳಿ: 3 ಗಂಟೆಗಳ ಕಾಲ ದೇವಾಲಯ ರಕ್ಷಿಸಲು ಹೋರಾಡಿದ ತಾಲಿಬಾನ್

    ಡ್ರೈನೇಜ್‌ಗೆ ಬಿದ್ದ ದಂಪತಿಯನ್ನು ಸ್ಥಳೀಯರು ತಕ್ಷಣವೇ ರಕ್ಷಿಸಲು ಧಾವಿಸಿದ್ದಾರೆ. ದಂಪತಿ ಗುಂಡಿಗೆ ಬೀಳುವ ವೀಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ನಿವೃತ್ತ ಐಎಎಸ್ ಅಧಿಕಾರಿ ಸೂರ್ಯ ಪ್ರತಾಪ್ ಸಿಂಗ್ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಯುಪಿಯ ಸ್ಮಾರ್ಟ್ ಸಿಟಿ ಅಲಿಗಢ, ಇದಕ್ಕೆ ಯಾರಿಗೆ ಧನ್ಯವಾದ ಹೇಳಬೇಕು? ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಪ್ರತಿಭಟನೆಗಳ ನಡುವೆ, ಅಗ್ನಿವೀರರಿಗೆ ಆನಂದ್ ಮಹೀಂದ್ರಾ ಕೊಟ್ರು ಬಿಗ್ ಆಫರ್

    ಘಟನೆ ಬಗ್ಗೆ ವಿವರಿಸಿದ ಪೊಲೀಸ್ ಅಧಿಕಾರಿ ದಯಾನಂದ್ ಸಿಂಗ್, ನಾವು ಸ್ಕೂಟರ್‌ನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದೆವು. ಮಳೆ ನೀರಿನಿಂದ ರಸ್ತೆ ತುಂಬಿದ್ದು, ನಮ್ಮ ಎದುರು ಚರಂಡಿ ಇದ್ದ ವಿಷಯ ತಿಳಿದಿರಲಿಲ್ಲ. ಹೀಗಾಗಿ ಸ್ಕೂಟರ್ ಸಮೇತ ಚರಂಡಿಯಲ್ಲಿ ಬಿದ್ದೆವು, ನಮಗೆ ಸ್ವಲ್ಪ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

    Live Tv