Tag: ಚಮ್ಮಾರ

  • ಚಮ್ಮಾರನಿಗೆ ಹೊಲಿಗೆ ಯಂತ್ರ ಕೊಡಿಸಿ ಮಾನವೀಯತೆ ಮೆರೆದ ರಾಗಾ

    ಚಮ್ಮಾರನಿಗೆ ಹೊಲಿಗೆ ಯಂತ್ರ ಕೊಡಿಸಿ ಮಾನವೀಯತೆ ಮೆರೆದ ರಾಗಾ

    ಲಕ್ನೋ: ಲೋಕಸಭೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಉತ್ತರಪ್ರದೇಶದ (Uttar Pradesh) ಸುಲ್ತಾನಪುರದಲ್ಲಿರುವ ಚಪ್ಪಲಿ ಹೊಲಿಯುವ ಚಮ್ಮಾರನನ್ನು (Cobbler) ಭೇಟಿ ಮಾಡಿದ ಮರುದಿನವೇ ಅವರಿಗೆ ಶೂ ಹೊಲಿಯುವ ಯಂತ್ರವೊಂದನ್ನು (Shoe Stiching Machine) ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

    ಶುಕ್ರವಾರವಷ್ಟೇ ರಾಹುಲ್ ಗಾಂಧಿ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಲಕ್ನೋಗೆ ತೆರಳುವ ವೇಳೆ ಸುಲ್ತಾನ್‌ಪುರದ ಬೀದಿಬದಿಯಲ್ಲಿದ್ದ ಚಮ್ಮಾರ ರಾಮ್ ಚೈತ್ ಎಂಬವರ ಅಂಗಡಿಗೆ ಭೇಟಿ ನೀಡಿ ಕಷ್ಟಸುಖ ಆಲಿಸಿದ್ದರು. ಅಲ್ಲದೇ ತಾವೂ ಚಪ್ಪಲಿ ಸರಿಪಡಿಸುವ ವಿಧಾನವನ್ನು ಕಲಿತಕೊಂಡು ಚಪ್ಪಲಿ ಸರಿಪಡಿಸಲು ಪ್ರಯತ್ನಿಸಿದ್ದರು. ಇದನ್ನೂ ಓದಿ:  ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ 14 ದಿನ ನ್ಯಾಯಾಂಗ ಬಂಧನ

    ಈ ವೇಳೆ ಚಮ್ಮಾರ ರಾಮ್ ಚೈತ್ ತಮ್ಮ ಕಷ್ಟಗಳನ್ನು ರಾಹುಲ್ ಗಾಂಧಿ ಬಳಿ ತೋಡಿಕೊಂಡು ತನಗೆ ನೆರವಾಗುವಂತೆ ಕೇಳಿಕೊಂಡಿದ್ದರು. ಇದಕ್ಕೆ ರಾಹುಲ್ ಗಾಂಧಿ ಅವರಿಗೆ ಸಹಾಯ ಮಾಡುವ ಭರವಸೆಯನ್ನು ನೀಡಿದ್ದರು. ಈ ಹಿನ್ನೆಲೆ ಶನಿವಾರ (ಜು.27) ಶೂ ಹೊಲಿಯುವ ಯಂತ್ರವೊಂದನ್ನು ರಾಮ್ ಚೈತ್ ಅವರಿಗೆ ಕಳುಹಿಸಿಕೊಟ್ಟು ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ತಲೆ ಎತ್ತಲಿದೆ ಸ್ಕೈ ಡೆಕ್ – 12 ಸಾವಿರ ಕೋಟಿ ವೆಚ್ಚದಲ್ಲಿ 100 ಕಿಮೀ ಫ್ಲೈಓವರ್‌ ನಿರ್ಮಿಸಲು ಪ್ಲ್ಯಾನ್‌!

    ಚಮ್ಮಾರ ರಾಮ್ ಚೈತ್ ಅವರಿಗೆ ಶನಿವಾರ ಬೆಳಗ್ಗೆ ಫೋನ್ ಕರೆ ಬಂದಿದ್ದು, ರಾಹುಲ್ ಗಾಂಧಿ ನಿಮಗೆ ಶೂ ಹೊಲಿಗೆ ಯಂತ್ರವನ್ನು ಕಳುಹಿಸಿದ್ದಾರೆ ಎಂದು ತಿಳಿಸಿದ್ದರು. ಮಧ್ಯಾಹ್ನದ ನಂತರ ರಾಹುಲ್ ಗಾಂಧಿ ತಂಡದ ಸದಸ್ಯರು ಯಂತ್ರವನ್ನು ವಿತರಿಸಲು ಪೊಲೀಸ್ ಜೀಪಿನಲ್ಲಿ ರಾಮ್ ಚೈತ್ ಅವರ ಅಂಗಡಿಗೆ ಆಗಮಿಸಿದರು. ಇದನ್ನೂ ಓದಿ: ಪ್ರೇಯಸಿಯನ್ನೇ ಬರ್ಬರವಾಗಿ ಇರಿದು ಕೊಂದ ಪ್ರಿಯಕರ – ಶವವನ್ನು ಪೊದೆಗೆ ಎಸೆದು ಎಸ್ಕೇಪ್

    ಇದರಿಂದ ಅತೀವ ಸಂತಸಗೊಂಡ ರಾಮ್ ಚೈತ್ ರಾಹುಲ್ ಗಾಂಧಿಗೆ ಧನ್ಯವಾದ ಸೂಚಿಸಲು ಎರಡು ಜೊತೆ ಶೂಗಳನ್ನು ಕಳುಹಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಲ್ಲದೇ ತಂಡದ ಕೆಲವು ತಜ್ಞರು ರಾಮ್ ಚೈತ್ ಅವರಿಗೆ ಯಂತ್ರವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಮಾಹಿತಿ ಒದಗಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ಟಿಕೆಟ್, OTT ಸಬ್‌ಸ್ಕ್ರಿಪ್ಶನ್ ಮೇಲೆ ಸೆಸ್‌ ವಿಧಿಸಲು ತೀರ್ಮಾನ – ಫಿಲ್ಮ್‌ ಚೇಂಬರ್‌ ಅಸಮಾಧಾನ

    ಇನ್ನು ಈ ಕುರಿತು ಕಾಂಗ್ರೆಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ನಿನ್ನೆ ನಮ್ಮ ನಾಯಕ ರಾಹುಲ್ ಗಾಂಧಿಯವರು ಸುಲ್ತಾನ್‌ಪುರದಲ್ಲಿ (ಯುಪಿ) ಚಮ್ಮಾರ ರಾಮ್ ಚೈತ್ ಅವರನ್ನು ಭೇಟಿಯಾಗಿ ಅವರ ಕೆಲಸದ ವಿವರಗಳ ಬಗ್ಗೆ ತಿಳಿದುಕೊಂಡರು. ಅವರನ್ನು ಬೆಂಬಲಿಸಲು ಇಂದು ರಾಹುಲ್ ಗಾಂಧಿ ಅವರು ಶೂ ಹೊಲಿಯುವ ಯಂತ್ರವನ್ನು ಕಳುಹಿಸಿದ್ದಾರೆ. ಅದು ಅವರ ಕೆಲಸವನ್ನು ಸುಲಭಗೊಳಿಸುತ್ತದೆ. ರಾಹುಲ್ ಗಾಂಧಿ ನಿಜವಾಗಿಯೂ ಎಲ್ಲರಿಗೂ ನಾಯಕ ಎಂದು ಬರೆದುಕೊಂಡಿದೆ. ಇದನ್ನೂ ಓದಿ: ಕಬಿನಿ, ಕೆಆರ್‌ಎಸ್‌ ಜಲಾಶಯಗಳು ಭರ್ತಿ – ಸೋಮವಾರ ಸಿದ್ದರಾಮಯ್ಯ, ಡಿಕೆಶಿ ಬಾಗಿನ ಅರ್ಪಣೆ

  • ಉತ್ತರ ಪ್ರದೇಶ: ಚಪ್ಪಲಿ ಹೊಲಿಯುವ ಚಮ್ಮಾರನ ಅಂಗಡಿಗೆ ರಾಗಾ ದಿಢೀರ್ ಭೇಟಿ

    ಉತ್ತರ ಪ್ರದೇಶ: ಚಪ್ಪಲಿ ಹೊಲಿಯುವ ಚಮ್ಮಾರನ ಅಂಗಡಿಗೆ ರಾಗಾ ದಿಢೀರ್ ಭೇಟಿ

    ಲಕ್ನೋ: ಕಾಂಗ್ರೆಸ್ ಸಂಸದ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಶುಕ್ರವಾರ ಉತ್ತರ ಪ್ರದೇಶದಲ್ಲಿ (Uttar Pradesh) ಚಪ್ಪಲಿ ಹೊಲಿಯುವ ಚಮ್ಮಾರನ (Cobbler) ಅಂಗಡಿಗೆ ಭೇಟಿ ನೀಡುವ ಮೂಲಕ ಮತ್ತೊಮ್ಮೆ ಗಮನಸೆಳೆದಿದ್ದಾರೆ.

    ಶುಕ್ರವಾರ ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿರುವ ಸಂಸದರು ಮತ್ತು ಶಾಸಕರ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಲಕ್ನೋಗೆ ತೆರಳುವ ವೇಳೆ ರಸ್ತೆ ಬದಿಯಲ್ಲಿದ್ದ ಚಮ್ಮಾರ ರಾಮ್ ಚೈತ್ ಎಂಬವರ ಅಂಗಡಿಗೆ ರಾಗಾ ದಿಢೀರ್ ಭೇಟಿ ನೀಡಿದ್ದಾರೆ. ಅಲ್ಲದೇ ಚಮ್ಮಾರನ ನಿರ್ದೇಶನದಂತೆ ಚಪ್ಪಲಿಯನ್ನು ಸರಿಪಡಿಸುವ ಪ್ರಯತ್ನವನ್ನೂ ರಾಹುಲ್ ಗಾಂಧಿ ಮಾಡಿದ್ದಾರೆ. ಇದನ್ನೂ ಓದಿ: ಬಜೆಟ್‌ನಲ್ಲಿ ಯಾವ ರಾಜ್ಯಕ್ಕೂ ಏನನ್ನೂ ನಿರಾಕರಿಸಿಲ್ಲ, ಹಣ ತರಬೇಕೆಂದು ತೆರಿಗೆ ಹೆಚ್ಚಿಸಿಲ್ಲ: ನಿರ್ಮಲಾ ಸೀತಾರಾಮನ್‌

    ಚಮ್ಮಾರ ರಾಮ್ ಚೈತ್ ಈ ಅಂಗಡಿಯಲ್ಲಿ ಕಳೆದ 40 ವರ್ಷಗಳಿಂದ ಪಾದರಕ್ಷೆಗಳನ್ನು ತಯಾರಿಸುತ್ತಿದ್ದಾರೆ. ರಾಹುಲ್ ಗಾಂಧಿ ಈ ಅಂಗಡಿಯಲ್ಲಿ ಸುಮಾರು 30 ನಿಮಿಷಗಳ ಕಾಲ ರಾಮ್ ಚೈತ್ ಜೊತೆ ಕಾಲ ಕಳೆದು ಮಾತುಕತೆ ನಡೆಸಿದ್ದಾರೆ. ಅಲ್ಲದೇ ಕಷ್ಟಸುಖಗಳನ್ನೂ ಆಲಿಸಿದ್ದಾರೆ. ಇದಾದ ಬಳಿಕ ಇಬ್ಬರೂ ಪಾನೀಯ ಸೇವಿಸಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ರಾಮ್ ಚೈತ್ ಅವರ ಸಮಸ್ಯೆಗಳನ್ನು ಪರಿಹರಿಸಲು ಬೇಕಾಗುವ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಮೆಟ್ರೊಪಾಲಿಟನ್ ಸಿಟಿಗಳ ಪೈಕಿ ಬೆಂಗಳೂರಿನಲ್ಲಿ ಹೆಚ್ಚು ವಾಹನಗಳಿವೆ: ಪರಮೇಶ್ವರ್

    ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಮ್ ಚೈತ್, ನಾನು ರಾಹುಲ್ ಅವರೊಂದಿಗೆ ನನ್ನ ಕೆಲಸದ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದೇನೆ ಮತ್ತು ಅವರಿಂದ ನನ್ನ ಕುಟುಂಬಕ್ಕೆ ಹಣಕಾಸಿನ ನೆರವು ಕೋರಿದ್ದೇನೆ ಎಂದು ತಿಳಿಸಿದ್ದಾರೆ. ಮಾತ್ರವಲ್ಲದೇ ಅಂಗಡಿಗೆ ಭೇಟಿ ನೀಡಿದ ಸಂದರ್ಭ ಪಾದರಕ್ಷೆಗಳನ್ನು ಸರಿಪಡಿಸುವ ವಿಧಾನವನ್ನು ಕಲಿತುಕೊಂಡು ಚಪ್ಪಲಿಯನ್ನು ಸರಿಪಡಿಸಲು ಪ್ರಯತ್ನಿಸಿದ್ದಾರೆ ಎಂದರು. ಇಷ್ಟು ಮಾತ್ರವಲ್ಲದೇ ವೃತ್ತಿ ಹೇಗೆ ನಡೆಯುತ್ತಿದೆ ಎಂಬ ಬಗ್ಗೆಯೂ ಚರ್ಚಿಸಿರುವುದಾಗಿ ರಾಮ್ ಚೈತ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಮ ಅಲ್ಲೇ ಇರ್ತಾನೆ, ರಾಮನಗರವೂ ಅಲ್ಲೇ ಇರುತ್ತೆ – ಪರಮೇಶ್ವರ್ ತಿರುಗೇಟು

    ಈ ಕುರಿತು ಕಾಂಗ್ರೆಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ದಾರಿಯಲ್ಲಿ ಕಾರನ್ನು ನಿಲ್ಲಿಸಿ ಚಮ್ಮಾರರ ಕುಟುಂಬವನ್ನು ಭೇಟಿಯಾದರು. ಈ ಶ್ರಮಜೀವಿಗಳ ಹಕ್ಕುಗಳಿಗಾಗಿ ನಾವು ನಿರಂತರವಾಗಿ ಹೋರಾಡುತ್ತಿದ್ದೇವೆ. ಬೀದಿಗಳಿಂದ ಸಂಸತ್ತಿನವರೆಗೆ ಧ್ವನಿ ಎತ್ತುತ್ತಿದ್ದೇವೆ. ಅವರ ಪ್ರಸ್ತುತ ಸುರಕ್ಷಿತ ಮತ್ತು ಭವಿಷ್ಯವನ್ನು ಸಮೃದ್ಧಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಕಾಂಗ್ರೆಸ್ ಎಕ್ಸ್‌ನಲ್ಲಿ ಬರೆದುಕೊಂಡಿದೆ. ಇದನ್ನೂ ಓದಿ: 40 ವರ್ಷವಾದರೂ ನನಗೆ ಬದಲಿ ನಿವೇಶನ ಸಿಕ್ಕಿಲ್ಲ – ಕೇಂದ್ರ ಸಚಿವ ಹೆಚ್‌ಡಿಕೆ

    ಇತ್ತೀಚಿಗಷ್ಟೇ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಯ್ ಬರೇಲಿಯಲ್ಲಿರುವ ಕ್ಷೌರಿಕನ ಅಂಗಡಿಗೆ ರಾಹುಲ್ ಗಾಂಧಿ ಭೇಟಿ ನೀಡಿ ಕ್ಷೌರ  ಮಾಡಿಸಿಕೊಂಡು ತಮ್ಮ ಗಡ್ಡವನ್ನು ಕೂಡ ಟ್ರಿಮ್ ಮಾಡಿಸಿಕೊಂಡಿದ್ದರು. ಅಲ್ಲದೇ ಟ್ರೆಂಡ್ ಆಗುತ್ತಿರುವ ಫೈಯರಿ ಹೇರ್‌ಕಟ್ ಬಗ್ಗೆ ಕೂಡ ಮಾಹಿತಿ ತಿಳಿದುಕೊಂಡಿದ್ದರು. ಇದನ್ನೂ ಓದಿ: 2028ರೊಳಗೆ ಮತ್ತೆ ರಾಮನಗರ ಅಂತ ಬರುತ್ತೆ – ರಾಮನ ಹೆಸರು ತೆಗೆಯಲು ಸಾಧ್ಯವಿಲ್ಲ: ಹೆಚ್‌ಡಿಕೆ ತಿರುಗೇಟು

  • ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ನಿಧನ

    ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ನಿಧನ

    ಮ್ಯಾಡ್ರಿಡ್: ವಿಶ್ವದ ಹಿರಿಯ ವ್ಯಕ್ತಿ ಎಂದು ಗಿನ್ನಿಸ್ ರೆಕಾರ್ಡ್ ದಾಖಲಿಸಿದ ಸ್ಪೇನ್ ನ 112 ವರ್ಷದ ಸ್ಯಾಟಿರ್ನಿನೊ ಡೆ ಲಾ ಫ್ಯೂಯೆಂಟ್ ಮಂಗಳವಾರ ತಮ್ಮ ನಿವಾಸದಲ್ಲಿ ನಿಧನರಾದರು.

    1909ರ ಫೆಬ್ರವರಿ 11ರಂದು ಲಿಯಾನ್‍ನ ಪುಯೆಂಟೆ ಅವರು ಕ್ಯಾಸ್ಟ್ರೋದಲ್ಲಿ ಜನಿಸಿದ್ದರು. ಮಂಗಳವಾರ ವಾಯುವ್ಯ ಸ್ಪೇನ್‍ನ ಲಿಯೋನ್‍ನಲ್ಲಿರುವ ಮನೆಯಲ್ಲಿ ನಿಧನರಾದರು. ಕಳೆದ ಸಪ್ಟೆಂಬರ್‍ನಲ್ಲಿ ಡೆ ಲಾ ಫ್ಯೂಯೆಂಟೆಯನ್ನು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗಿನ್ನಿಸ್ ರೆಕಾರ್ಡ್‍ನಲ್ಲಿ ದಾಖಲಿಸಲಾಗಿತ್ತು.

    ಡೆ ಲಾ ಫ್ಯೂಯೆಂಟ್ ಅವರು ವ್ಯಾಪಾರದಲ್ಲಿ ಚಮ್ಮಾರರಾಗಿದ್ದರು. ತಮ್ಮ 13ನೇ ವಯಸ್ಸಿನಲ್ಲಿ ಶೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು. ಆಂಟೋನಿನಾ ಅವರ ಪತ್ನಿ. ದಂಪತಿಗೆ 8 ಮಕ್ಕಳು, 14 ಮೊಮ್ಮಕ್ಕಳು ಮತ್ತು 22 ಮರಿ ಮೊಮ್ಮಕ್ಕಳು ಇದ್ದಾರೆ. ಅವರನ್ನು ಸ್ಥಳೀಯ ಸ್ಮಶಾನದಲ್ಲಿ ಇಂದು ಅಂತ್ಯಸಂಸ್ಕಾರ ಮಾಡಲಾಯಿತು.  ಇದನ್ನೂ ಓದಿ:  ಚರಣ್​ಜಿತ್ ಸಿಂಗ್ ಚೆನ್ನಿ ಸಂಬಂಧಿ ಮನೆಯ ಮೇಲೆ ಇಡಿ ದಾಳಿ

  • 60 ಸೆಕೆಂಡ್‍ನಲ್ಲಿ ಮುರಿದ ಜಿಪ್ ಸರಿಮಾಡಿದ ವ್ಯಕ್ತಿ – ವಿಡಿಯೋ ವೈರಲ್

    60 ಸೆಕೆಂಡ್‍ನಲ್ಲಿ ಮುರಿದ ಜಿಪ್ ಸರಿಮಾಡಿದ ವ್ಯಕ್ತಿ – ವಿಡಿಯೋ ವೈರಲ್

    ಲಂಡನ್: ವ್ಯಕ್ತಿಯೊಬ್ಬ ಕೇವಲ 60 ಸೆಕೆಂಡುಗಳಲ್ಲಿ ಮುರಿದು ಹೋಗಿರುವ ಜಿಪ್‍ನನ್ನು ಸರಿಪಡಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

    ಕಿತ್ತು ಹೋಗಿರುವ ಜಿಪ್‍ನನ್ನು ಸುಲಭವಾಗಿ ಸರಿಪಡಿಸಿಕೊಳ್ಳಲು ತಿಳಿಯದೇ ಗ್ರಾಹಕರು ಹೊಸ ಜಿಪ್ ಹಾಕಲು ಕೇಳುತ್ತಾರೆ. ಅಲ್ಲದೆ ಮುರಿದು ಹೋದ ಹಲವಾರು ರೀತಿಯ ಜಿಪ್‍ಗಳನ್ನು ನೀವು ಮನೆಯಲ್ಲಿರುವ ಕೆಲವು ಸಾಧನಗಳ ಉಪಯೋಗಿಸುವ ಮೂಲಕ ಸರಿಪಡಿಸಿಕೊಳ್ಳಬಹುದು.

    ಕಿತ್ತು ಹೋಗಿರುವ ಜೋಡಿ ಬೂಟ್‍ಗಳನ್ನು ಹಿಡಿದು ಜಿಪ್‍ಗಳನ್ನು ಕಟಿಂಗ್ ಪ್ಲೇಯರ್ ಹಾಗೂ ಸುತ್ತಿಗೆ ಬಳಸಿ ಸರಿ ಮಾಡಿದ್ದಾನೆ. ಈ ವಿಡಿಯೋವನ್ನು ಕೆಂಟ್ ವ್ಯಕ್ತಿಯೊಬ್ಬ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆಯೇ 3 ಲಕ್ಷಕ್ಕೂ ಅಧಿಕ ವಿವ್ಸ್ ಪಡೆದಿದೆ.

    https://youtu.be/HTZQyt5SzM0