Tag: ಚಪ್ಪಲಿ

  • ನೂತನ ಸಚಿವ ತುಕಾರಾಂ ದುರ್ವರ್ತನೆ

    ನೂತನ ಸಚಿವ ತುಕಾರಾಂ ದುರ್ವರ್ತನೆ

    ಬಳ್ಳಾರಿ: ನೂತನ ಸಚಿವರಾಗಿ ಸಂಪುಟ ಸೇರಿರುವ ಕಾಂಗ್ರೆಸ್ ಶಾಸಕ ತುಕಾರಾಂ ಅವರು ಇಂದು ಸಾರ್ವಜನಿಕವಾಗಿ ಸಂಬಂಧಿ ಯುವಕನಿಂದ ಶೂ ಹಾಕಿಸಿಕೊಳ್ಳುವ ಮೂಲಕ ಅಧಿಕಾರದ ದರ್ಪ ತೋರಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

    ಬಳ್ಳಾರಿಯ ಶ್ರೀ ಕನಕದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು ದೇವರ ದರ್ಶನ ಪಡೆದರು. ಬಳಿಕ ದೇವಾಲಯದಿಂದ ಹಿಂದಿರುಗುವ ವೇಳೆ ಕಾರಿನ ಹಿಂಭಾಗದ ಡಿಕ್ಕಿಯಲ್ಲಿದ್ದ ಸಚಿವರ ಶೂವನ್ನು ಸಂಬಂಧಿ ಹುಡುಗ ಕೈಯಲ್ಲೇ ತಂದು ಕಾರಿನ ಮುಂಭಾಗದ ಸೀಟಿನಲ್ಲಿ ಕೂತಿದ್ದ ತುಕಾರಾಂ ಬಳಿ ತೆರಳಿ ಕಾಲಿನ ಮುಂದೆ ಇರಿಸಿದರು.

    ಶಾಸಕರಾಗಿದ್ದ ವೇಳೆ ತಮ್ಮ ಸರಳ ಸಜ್ಜನಿಕೆಯಿಂದಲೇ ತುಕಾರಾಂ ಅವರು ಹೆಸರು ಪಡೆದಿದ್ದರು. ಆದರೆ ಸಚಿವ ಸ್ಥಾನ ಸ್ವೀಕರಸಿದ ಬಳಿಕ ಈ ರೀತಿಯ ವರ್ತನೆಯನ್ನು ಸಾರ್ವಜನಿಕವಾಗಿ ತೋರಿದ್ದು, ಅಧಿಕಾರ ಬಂದ ಕೂಡಲೇ ಬದಲಾಗುತ್ತಾರೆ ಎಂದ ಮಾತಿಗೆ ಸಾಕ್ಷಿಯಾಗಿ ಕಂಡಿತು.

    ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ವ್ಯಕ್ತಿಯಾದ ನನಗೆ ಹೈಕಮಾಂಡ್ ನನ್ನ ಕಾರ್ಯಗಳನ್ನು ಮೆಚ್ಚಿ ಸಚಿವ ಸ್ಥಾನ ನೀಡಿದೆ. ವೈದ್ಯಕೀಯ ಶಿಕ್ಷಣ ಸಚಿವರಾಗಿ ನನಗೆ ಅವಕಾಶ ನೀಡಿದ್ದು, ಯುವ ಜನಾಂಗ ಹಾಗೂ ಬಡ ಜನರ ಸೇವೆ ಮಾಡಲು ಅವಕಾಶ ಲಭಿಸಿದೆ. 3 ಬಾರಿ ಶಾಸಕನಾಗಿ ನಾನು ಮಾಡಿದ ಕಾರ್ಯಗಳೇ ಸಚಿವ ಸ್ಥಾನ ನೀಡಲು ಕಾರಣ. ನಗರಕ್ಕೆ ಬಂದಾಗ ದೇವಾಲಯಕ್ಕೆ ಭೇಟಿ ನೀಡುವುದು ನನ್ನ ನಂಬಿಕೆ, ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದ್ರು.

    ಚುನಾವಣಾ ನೀತಿ ಸಂಹಿತೆ ಬಂದ ಕಾರಣ ಹಂಪಿ ಉತ್ಸವ ಆಚರಣೆ ಮಾಡಿಲ್ಲ. ಆದರೆ ಈಗ ಚರ್ಚೆ ನಡೆಸಿ ಉತ್ಸವ ನಡೆಸುವ ಚಿಂತನೆ ಇದೆ. ಜಿಲ್ಲೆಯ ಜನರ ಭಾವನೆಗೆ ತಕ್ಕಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೂ ಭಾಗ್ಯ ಯೋಜನೆ ಜಾರಿ ಹಿಂದಿದೆ ಮನಕಲಕುವ ಕಥೆ: ಸಿದ್ದರಾಮಯ್ಯ ನೆನಪು

    ಶೂ ಭಾಗ್ಯ ಯೋಜನೆ ಜಾರಿ ಹಿಂದಿದೆ ಮನಕಲಕುವ ಕಥೆ: ಸಿದ್ದರಾಮಯ್ಯ ನೆನಪು

    ಬಾಗಲಕೋಟೆ: ತಾವು ಶಾಲಾ ದಿನಗಳ ಸಮಯದಲ್ಲಿ ಟೈರ್ ನಿಂದ ತಯಾರಿಸಿದ್ದ ಚಪ್ಪಲಿ ಧರಿಸಿ ಹೋಗುತ್ತಿದ್ದೇವು, ಈಗಿನ ಮಕ್ಕಳಿಗೆ ಇಂತಹ ತೊಂದರೆ ಆಗಬಾರದು ಎಂದು ಹೇಳಿ ಶೂ ಭಾಗ್ಯ ಯೋಜನೆ ಜಾರಿ ಮಾಡಿದ್ದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

    ಬಾದಾಮಿಯಲ್ಲಿ ಪುಸ್ತಕ ಪ್ರಾಧಿಕಾರದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಟೈರ್ ಚಪ್ಪಲಿ ಪ್ರಸಂಗ ನೆನೆಸಿಕೊಂಡರು. ನಾನು ಶಾಲೆಗೆ ಹೋಗುವಾಗ ಟೈರ್ ಚಪ್ಪಲಿ ಧರಿಸುತ್ತಿದ್ದೆ. ಇಂತಹ ತೊಂದರೆ ಬರಬಾರದೆಂದು ವಿದ್ಯಾರ್ಥಿಗಳಿಗೆ ಶೂ ಭಾಗ್ಯ ಜಾರಿಗೆ ತಂದಿದ್ದೇವೆ ಎಂದರು. ಇದೇ ವೇಳೆ ತಮ್ಮ ಅಧಿಕಾರ ಮತ್ತು ಸಂಪತ್ತು ಯಾವತ್ತೂ ಬಲಾಡ್ಯರ ಕೈಯಲ್ಲಿರಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೇ ನಾನು ಧರಿಸುತ್ತಿದ್ದ ಟೈರ್ ಚಪ್ಪಲಿ ಮೂರು ವರ್ಷ ಆದ್ರು ಹರಿದಿರಲಿಲ್ಲ ಎಂದು ನಗೆಚಟಾಕಿ ಹಾರಿಸಿದರು.

    ಬಾದಾಮಿಯ ಕನಕ ಜಯಂತಿ ಕಾರ್ಯಕ್ರಮದ ವೇಳೆ ಸಿದ್ದರಾಮಯ್ಯ ಅವರು ಸ್ವತಃ ಡೋಲು ಬಾರಿಸಿ ಗಮನ ಸೆಳೆದರು. ಆದರೆ ಆ ವೇಳೆ ಡೋಲು ಬಾರಿಸುವ ಕೋಲಿನ ಸಿಬಿರು ಚುಚ್ಚಿ ಸಿದ್ದರಾಮಯ್ಯ ಅವರ ಬೆರಳಿಗೆ ಗಾಯವಾಯಿತು. ಕೂಡಲೇ ಎಚ್ಚೆತ್ತ ಕಾರ್ಯಕರ್ತರು ಬೆರಳಿಗೆ ಚುಚ್ಚಿದ್ದ ಸಿಬಿರು ತೆಗೆದು ಪ್ರಥಮ ಚಿಕಿತ್ಸೆ ನೀಡಿದರು.

    ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಗಮಿಸಿದ್ದ ಸಿದ್ದರಾಮಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು. ಈ ವೇಳೆ ಸಿದ್ದರಾಮಯ್ಯನವರಿಗೆ ಮೈತ್ರಿ ಸರ್ಕಾರ ನಡೆಸುವ ಉದ್ದೇಶ ಇಲ್ಲ ಎಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆಗೆ ಪ್ರತಿಕ್ರಿಯೆ ನೀಡದ ಅವರು, ಹೊರಟ್ಟಿ ಹೇಳಿಕೆ ಕೊಟ್ಟಿದ್ದರೆ ತೋರಿಸಿ ಎಂದು ರಾಜ್ಯ ರಾಜಕಾರಣದ ಬಗ್ಗೆ ಮಾತನಾಡದೆ ತೆರಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೂ ಪಾಲಿಶ್ ಮಾಡಿ ಮತಯಾಚಿಸಿದ ಪಕ್ಷೇತರ ಅಭ್ಯರ್ಥಿ

    ಶೂ ಪಾಲಿಶ್ ಮಾಡಿ ಮತಯಾಚಿಸಿದ ಪಕ್ಷೇತರ ಅಭ್ಯರ್ಥಿ

    ಭೋಪಾಲ್: ಚುನಾವಣೆ ಪ್ರಚಾರದ ವೇಳೆ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಒಂದಿಲ್ಲೊಂದು ಹೊಸ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಈ ಬಾರಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಶೂ ಪಾಲಿಶ್ ಮಾಡುವ ಮೂಲಕ ಪ್ರಚಾರ ಮಾಡಿದ್ದಾರೆ.

    ರಾಷ್ಟ್ರೀಯ ಆಮ್‍ಜನ್ ಪಕ್ಷದ ಅಭ್ಯರ್ಥಿ ಶರದ್ ಸಿಂಗ್ ಕುಮಾರ್ ಅವರ ಮತದಾನದ ಚಿಹ್ನೆ ಶೂ. ಈ ಮೂಲಕ ಅವರು ಸಾರ್ವಜನಿಕರ ಶೂ ಪಾಲಿಶ್ ಮಾಡಿ ಸಖತ್ ಪ್ರಚಾರ ಮಾಡುತ್ತಿದ್ದಾರೆ.

    ಈ ಚಿಹ್ನೆ ಉಚಿತವಾಗಿದ್ದು, ಯಾರೊಬ್ಬರೂ ಆಯ್ಕೆಗೆ ಮುಂದಾಗುವುದಿಲ್ಲ. ಆದರೆ ನಾನು ಆಯ್ಕೆ ಮಾಡಿಕೊಂಡು, ಜನರ ಆಶೀರ್ವಾದ ಪಡೆಯುತ್ತಿರುವೆ. ಜಯ ಗಳಿಸಿ ಜನರ ಸೇವೆ ಮಾಡುತ್ತೇನೆ ಎಂದು ಶರದ್ ಸಿಂಗ್ ಕುಮಾರ್ ತಿಳಿಸಿದ್ದಾರೆ. ಇದನ್ನು ಓದಿ: ಅಭಿವೃದ್ಧಿ ಮಾಡದಿದ್ರೆ ಚಪ್ಪಲಿ ಸೇವೆ ಮಾಡಿ – ವಿಭಿನ್ನ ಪ್ರಚಾರ ಕೈಗೊಂಡ ಅಭ್ಯರ್ಥಿ

    ಇದಕ್ಕೂ ಮುನ್ನ ತೆಲಂಗಾಣ ಚುನಾವಣೆ ಪ್ರಚಾರದಲ್ಲಿ ಜಗ್ಟಿಯಲ್ ಜಿಲ್ಲೆಯ ಕೊರುಟ್ಲಾ ಕ್ಷೇತ್ರ ಅಭ್ಯರ್ಥಿ ಅಕುಲ ಹನುಮಂತ್ ಚಪ್ಪಲಿ ಹಂಚಿದ್ದರು. ಒಂದು ವೇಳೆ ಗೆದ್ದ ಬಳಿಕ ಕ್ಷೇತ್ರದ ಅಭಿವೃದ್ಧಿ ಮಾಡದಿದ್ದರೆ ನನಗೆ ಚಪ್ಪಲಿ ಸೇವೆ ಮಾಡಿ ಎಂದು ಹೇಳಿದ್ದರು. ಈ ಬೆನ್ನಲ್ಲೇ ಶರದ್ ಸಿಂಗ್ ಪ್ರಚಾರ ಮಾಡುತ್ತಿದ್ದಾರೆ. ಮಧ್ಯ ಪ್ರದೇಶದಲ್ಲಿ ಚುನಾವಣೆ ಪ್ರಚಾರ ರಂಗೇರುತ್ತಿದೆ.

    ಮಧ್ಯಪ್ರದೇಶದಲ್ಲಿ 28ರಂದು ಮತದಾನ ನಡೆಯಲಿದೆ. ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಡಿಸೆಂಬರ್ 11ರಂದು ಮತ ಎಣಿಕೆ ನಡೆಲಿದೆ. ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಕಮಲ್‍ನಾಥ್ ಹಾಗೂ ಬಿಜೆಪಿಯಿಂದ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಕಣಕ್ಕೆ ಇಳಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿವೃದ್ಧಿ ಮಾಡದಿದ್ರೆ ಚಪ್ಪಲಿ ಸೇವೆ ಮಾಡಿ – ವಿಭಿನ್ನ ಪ್ರಚಾರ ಕೈಗೊಂಡ ಅಭ್ಯರ್ಥಿ

    ಅಭಿವೃದ್ಧಿ ಮಾಡದಿದ್ರೆ ಚಪ್ಪಲಿ ಸೇವೆ ಮಾಡಿ – ವಿಭಿನ್ನ ಪ್ರಚಾರ ಕೈಗೊಂಡ ಅಭ್ಯರ್ಥಿ

    ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಪ್ರಚಾರದ ಅಬ್ಬರ ಹೆಚ್ಚಾಗಿದ್ದು, ಈ ನಡುವೆ ಪಕ್ಷೇತರ ಅಭ್ಯರ್ಥಿಯೊಬ್ಬರು ಮತದಾರರಿಗೆ ಚಪ್ಪಲಿ ಹಂಚಿಕೆ ಮಾಡುವ ಮೂಲಕ ವಿಭಿನ್ನ ಪ್ರಚಾರ ಕೈಗೊಂಡಿದ್ದಾರೆ.

    ಅಕುಲ ಹನುಮಂತ್ ಎಂಬವರು ಜಗ್ಟಿಯಲ್ ಜಿಲ್ಲೆಯ ಕೊರುಟ್ಲಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು, ಕ್ಷೇತ್ರದ ಮತದಾರರ ಪ್ರಚಾರ ನಡೆಸುವ ವೇಳೆ ಚಪ್ಪಲಿ ಹಂಚಿಕೆ ಮಾಡಿ ನನಗೆ ಮತ ನೀಡಿ ಎಂದು ಕೇಳುತ್ತಿದ್ದಾರೆ. ಗೆದ್ದ ಬಳಿಕ ಕ್ಷೇತ್ರದ ಅಭಿವೃದ್ಧಿ ಮಾಡದಿದ್ದರೆ ನನಗೆ ಚಪ್ಪಲಿ ಸೇವೆ ಮಾಡಿ ಎಂದು ಹೇಳಿ ಪ್ರಚಾರ ಮಾಡುತ್ತಿದ್ದಾರೆ.

    ಸದ್ಯ ಹನುಮನ್ ಅವರ ಈ ವಿಭಿನ್ನ ಪ್ರಚಾರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಎಲ್ಲಾ ರಾಜಕೀಯ ವ್ಯಕ್ತಿಗಳು ಈ ವಿಧಾನವನ್ನು ಬಳಸಿ ಎಂದು ಸಲಹೆ ನೀಡಿದ್ದಾರೆ.

    ಮನೆ ಮನೆ ಪ್ರಚಾರಕ್ಕೆ ತೆರಳುವ ಹನುಮಂತ್, ಕ್ಷೇತ್ರದ ಜನರ ಅಗತ್ಯಗಳನ್ನು ಪೂರೈಸಲು ಶ್ರಮವಹಿಸುವುದಾಗಿ ಆಶ್ವಾಸನೆ ನೀಡುತ್ತಿದ್ದು, ಇದರಲ್ಲಿ ವಿಫಲವಾದಲ್ಲಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಅಲ್ಲದೇ ಕೇವಲ ಪ್ರಚಾರ ಪಡೆಯಲು ಮಾತ್ರ ನಾನು ಈ ರೀತಿ ಮತ ಕೇಳುತ್ತಿಲ್ಲ ಎಂದು ತಿಳಿಸಿದ್ದಾರೆ.

    ಸದ್ಯ ಹನುಮಂತ್ ಅವರು ಸ್ಪರ್ಧೆ ಮಾಡುತ್ತಿರುವ ಕೊರುಟ್ಲಾ ಕ್ಷೇತ್ರದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯ ಪ್ರಮುಖ ನಾಯಕರಾದ ಶಾಸಕ ಕೆ ವಿದ್ಯಾ ಸಾಗರ್ ರಾವ್ ಸ್ಪರ್ಧೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬಿಜೆಪಿ ಶಾಸಕನಿಗೆ ಚಪ್ಪಲಿ ಹಾರ! ವೈರಲ್ ವಿಡಿಯೋ

    ಬಿಜೆಪಿ ಶಾಸಕನಿಗೆ ಚಪ್ಪಲಿ ಹಾರ! ವೈರಲ್ ವಿಡಿಯೋ

    ನಗಾಡಾ: ವಿಧಾನಸಭಾ ಚುಣಾವಣೆಯಲ್ಲಿ ಜನರ ಬಳಿ ಮತ ಕೇಳಲು ಬಂದಿದ್ದ ಶಾಸಕರೊಬ್ಬರಿಗೆ ಸಾರ್ವಜನಿಕವಾಗಿ ಚಪ್ಪಲಿ ಹಾರ ಹಾಕಿರುವ ಘಟನೆ ಮಧ್ಯಪ್ರದೇಶದ ನಗಾಡಾ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.

    ನಗಾಡಾ ಕ್ಷೇತ್ರದ ಬಿಜೆಪಿ ಪಕ್ಷದ ಹಾಲಿ ಶಾಸಕ ದಿಲೀಪ್ ಶೇಖಾವತ್ ಅವರಿಗೆ ಚಪ್ಪಲಿ ಹಾರ ಹಾಕಲಾಗಿದ್ದು, ಭಾನುವಾರ ಸಂಜೆ ವೇಳೆ ಕ್ಷೇತ್ರದ ಹಳ್ಳಿಯೊಂದರಲ್ಲಿ ಮತ ಕೇಳಲು ತೆರಳಿದ್ದ ವೇಳೆ ವ್ಯಕ್ತಿಯೊಬ್ಬ ಚಪ್ಪಲಿ ಹಾರ ಹಾಕಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕೈಗೊಂಡಿದ್ದ ಶಾಸಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಜನರ ಮಧ್ಯೆ ಬಂದ ಅವರಿಗೆ ಹಲವು ಅಭಿಮಾನಿಗಳು ಹೂವಿನ ಹಾರ ಹಾಕಿ ಸ್ವಾಗತಿಸುತ್ತಿದ್ದರು. ಆದರೆ ಈ ನಡುವೆ ಜನರ ಮಧ್ಯದಿಂದ ಬಂದ ವ್ಯಕ್ತಿಯೊಬ್ಬ ಶಾಸಕನಿಗೆ ಚಪ್ಪಲಿ ಹಾರ ಹಾಕಿದ. ಕೂಡಲೇ ಎಚ್ಚೆತ್ತಾ ಶಾಸಕ ಹಾರ ಕಿತ್ತುಹಾಕಿ ಆತನ ಮೇಲೆ ಕೋಪದಿಂದ ಹಲ್ಲೆ ನಡೆಸಲು ಮುನ್ನಡೆದಿದ್ದು ವಿಡಿಯೋದಲ್ಲಿ ಕಾರಣಬಹುದಾಗಿದೆ.

    ವಿಡಿಯೋದಲ್ಲಿ ಇರುವ ವ್ಯಕ್ತಿ ಬಿಜೆಪಿ ಪಕ್ಷದ ಟೋಪಿ, ಶಾಲು ಧರಿಸಿ ಜನರ ಮಧ್ಯೆ ಆಗಮಿಸಿದ್ದ. ಪ್ರಚಾರದ ಭಾಗವಾಗಿ ಜನರ ನಡುವೆ ಆಗಮಿಸಿದ್ದ ಶಾಸಕರು ಹತ್ತಿರ ಆಗಮಿಸುತ್ತಿದಂತೆ ಏಕಾಏಕಿ ಚಪ್ಪಲಿ ಹಾರ ಹಾಕಿದ್ದಾನೆ. ವರ್ಷದ ಆರಂಭದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುಣಾವಣೆ ವೇಳೆಯೂ ಬಿಜೆಪಿ ನಾಯಕರೊಬ್ಬರಿಗೆ ಚಪ್ಪಲಿ ಹಾರ ಹಾಕಿದ ಘಟನೆ ನಡೆದಿತ್ತು. ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗೆ ಮತದಾನ ನ.28 ರಂದು ನಡೆಯಲಿದ್ದು, ಡಿ. 11 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಿಎಂಗೆ ಖಾಲಿ ಮದ್ಯದ ಬಾಟಲಿ, ಮಹಿಳೆಯರ ಚಪ್ಪಲಿ ರವಾನೆ!

    ಸಿಎಂಗೆ ಖಾಲಿ ಮದ್ಯದ ಬಾಟಲಿ, ಮಹಿಳೆಯರ ಚಪ್ಪಲಿ ರವಾನೆ!

    ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮದ್ಯದ ಖಾಲಿ ಬಾಟಲಿಗಳು ಹಾಗೂ ಮಹಿಳೆಯರ ಚಪ್ಪಲಿಗಳನ್ನು ಪೋಸ್ಟ್ ಮಾಡುವ ಮೂಲಕ ರೈತರು ವಿನೂತನವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

    ಚಾಮರಾಜನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ರಸ್ತೆ ತಡೆದು ಪ್ರತಿಭಟಿಸಿದ ರೈತರು, ಮಣ್ಣಿನ ಮಗ ಎಂದು ಹೇಳಿಕೊಳ್ಳುವ ಸಿಎಂ ಕುಮಾರಸ್ವಾಮಿ ಕುಡಿದ ನಶೆಯಲ್ಲಿ ರೈತ ಮಹಿಳೆಯನ್ನು ಎಲ್ಲಿ ಮಲಗಿದ್ದೆ ಎಂದು ಕೇಳುತ್ತಾರೆ. ಪ್ರತಿಭಟನಾನಿರತ ರೈತರನ್ನು ಗೂಂಡಾಗಳು ಎಂದು ಹೀಯಾಳಿಸುತ್ತಾರೆ. ಇವರ ಹೇಳಿಕೆಯಿಂದ ಇಡೀ ರೈತ ಸಮುದಾಯಕ್ಕೆ ಹಾಗು ರೈತ ಮಹಿಳೆಯರಿಗೆ ಅವಮಾನವಾಗಿದ್ದು, ಕೂಡಲೇ ಅವರು ರೈತರ ಕ್ಷಮೆ ಕೇಳಬೇಕೆಂದು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಕೆ.ಗುರುಪ್ರಸಾದ್ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪಿಎಯಿಂದ ಚಪ್ಪಲಿ ತೊಡಿಸಿಕೊಂಡ ಪ್ರಕರಣಕ್ಕೆ ಸಚಿವ ಪುಟ್ಟರಂಗಶೆಟ್ಟಿ ಸ್ಪಷ್ಟನೆ

    ಪಿಎಯಿಂದ ಚಪ್ಪಲಿ ತೊಡಿಸಿಕೊಂಡ ಪ್ರಕರಣಕ್ಕೆ ಸಚಿವ ಪುಟ್ಟರಂಗಶೆಟ್ಟಿ ಸ್ಪಷ್ಟನೆ

    ಚಾಮರಾಜನಗರ: ಆಪ್ತ ಸಹಾಯಕನಿಂದ ಚಪ್ಪಲಿ ತೊಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

    ಕಾರಿನಲ್ಲಿದ್ದ ಚಪ್ಪಲಿಯನ್ನು ಆತ ನನ್ನ ಬಳಿ ತಂದಾಗ ಹಾಗೆ ತರಬಾರದು ಎಂದು ಹೇಳಿದೆ. ನನ್ನ ಚಪ್ಪಲಿ ಮುಟ್ಡಿದ್ದ ಆತನನ್ನು ಮುಟ್ಟಿ ನಮಸ್ಕರಿಸಿ ನಾನೇ ಚಪ್ಪಲಿ ಧರಿಸಿಕೊಂಡಿದ್ದೇನೆ. ನಾನು ಮಾನವೀಯತೆಗೆ ಬೆಲೆ ಕೊಡುವ ಮನುಷ್ಯ. ನಾನು ಯಾವುದೇ ತಪ್ಪು ಮಾಡಿಲ್ಲ. ಎಲ್ಲರನ್ನು ಸರಿಸಮನಾಗಿ ಕಾಣುವ ಗುಣ ನನ್ನದು. ಮಾಧ್ಯಮಗಳಲ್ಲಿ ಬಂದ ವರದಿಯಿಂದ ಮನ ನೊಂದಿದ್ದೇನೆ ಎಂದು ಪುಟ್ಟರಂಗಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

    ಆದರೆ ಪುಟ್ಟರಂಗಶೆಟ್ಟಿ ಚಪ್ಪಲಿ ಹಾಕಿಸಿಕೊಳ್ಳುವಾಗ ಪಿಎಗೆ ನಮಸ್ಕಾರ ಮಾಡಿಕೊಂಡಿಲ್ಲ. ಹೀಗಿದ್ದರೂ ಸಹ ನಾನು ನಮಸ್ಕಾರ ಮಾಡಿದ್ದೇನೆ ಎಂದು ಪುಟ್ಟರಂಗಶೆಟ್ಟಿ ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವಿಡಿಯೋ: ಚಪ್ಪಲಿ ಹಾಕೋದ್ದಕ್ಕೂ ಪಿಎ ಇಟ್ಟುಕೊಂಡ ಸಚಿವ ಸಿ.ಪುಟ್ಟರಂಗಶೆಟ್ಟಿ!

    ಸೋಮವಾರ ಚಾಮರಾಜನಗರದಲ್ಲಿ ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ತಮ್ಮ ಚಪ್ಪಲಿಯನ್ನು ಬಿಟ್ಟು ಎತ್ತಿನಗಾಡಿ ಏರಿದ್ದರು. ಎತ್ತಿನಗಾಡಿಯನ್ನು ಚಾಲನೆ ಮಾಡಿದ ನಂತರ ಅವರು ಕೆಳೆಗಿಳಿದು ನಡೆದು ಬರುತ್ತಿದ್ದಂತೆ ಅವರ ಆಪ್ತ ಸಹಾಯಕ ಪುಟ್ಟರಂಗಶೆಟ್ಟಿಗೆ ಚಪ್ಪಲಿ ತಂದು ತೊಡಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸಚಿವ ಸಿ. ಪುಟ್ಟರಂಗಶೆಟ್ಟಿ ಸೌಜನ್ಯಕ್ಕಾದರೂ ಚಪ್ಪಲಿ ತೊಡಿಸುವ ತಮ್ಮ ಆಪ್ತ ಸಹಾಯಕನಿಗೆ ಬೇಡ ಎನ್ನದೇ ಸರ್ವಾಧಿಕಾರಿಯಂತೆ ಚಪ್ಪಲಿ ತೊಡಿಸಿಕೊಂಡು ಏನೂ ಆಗಿಲ್ಲವಂತೆ ನಡೆದು ಮುಂದೆ ಸಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=lPjIVJAvrF8

  • ವಿಡಿಯೋ: ಚಪ್ಪಲಿ ಹಾಕೋದ್ದಕ್ಕೂ ಪಿಎ ಇಟ್ಟುಕೊಂಡ ಸಚಿವ ಸಿ.ಪುಟ್ಟರಂಗಶೆಟ್ಟಿ!

    ವಿಡಿಯೋ: ಚಪ್ಪಲಿ ಹಾಕೋದ್ದಕ್ಕೂ ಪಿಎ ಇಟ್ಟುಕೊಂಡ ಸಚಿವ ಸಿ.ಪುಟ್ಟರಂಗಶೆಟ್ಟಿ!

    ಚಾಮರಾಜನಗರ: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ತುಂಬಾ ಸರಳ ವ್ಯಕ್ತಿ ಎಂದೇ ಹೆಸರಾದವರು. ಆದರೆ ಯಾಕೋ ಸಚಿವರಾದ ನಂತರ ಅಧಿಕಾರದ ಮದದಿಂದ ವರ್ತಿಸುತ್ತಿದ್ದಾರಾ ಎನ್ನುವ ಅನುಮಾನ ಎದ್ದಿದೆ.

    ಇಂದು ಚಾಮರಾಜನಗರದಲ್ಲಿ ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಸಿ. ಪುಟ್ಟರಂಗಶೆಟ್ಟಿಗೆ ಅವರು ತಮ್ಮ ಚಪ್ಪಲಿಯನ್ನು ಬಿಟ್ಟು ಎತ್ತಿನಗಾಡಿ ಏರಿದ್ದರು. ಎತ್ತಿನಗಾಡಿಯನ್ನು ಚಾಲನೆ ಮಾಡಿದ ನಂತರ ಅವರು ಕೆಳೆಗಿಳಿದು ನಡೆದು ಬರುತ್ತಿದ್ದಂತೆ ಅವರ ಆಪ್ತ ಸಹಾಯಕ ಪುಟ್ಟರಂಗಶೆಟ್ಟಿಗೆ ಚಪ್ಪಲಿ ತಂದು ತೊಡಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಸಚಿವ ಸಿ. ಪುಟ್ಟರಂಗಶೆಟ್ಟಿ ಸೌಜನ್ಯಕ್ಕಾದರೂ ಚಪ್ಪಲಿ ತೊಡಿಸುವ ತಮ್ಮ ಆಪ್ತ ಸಹಾಯಕನಿಗೆ ಬೇಡ ಎನ್ನದೇ ಸರ್ವಾಧಿಕಾರಿಯಂತೆ ಚಪ್ಪಲಿ ತೊಡಿಸಿಕೊಂಡು ಏನೂ ಆಗಿಲ್ಲವಂತೆ ನಡೆದು ಮುಂದೆ ಸಾಗಿದ್ದಾರೆ.

    ಈ ದೃಶ್ಯವನ್ನು ನೋಡಿದ ಜನ ಶಾಸಕರಾಗಿದ್ದಾಗ ತುಂಬ ಸರಳವಾಗಿದ್ದ ಪುಟ್ಟರಂಗ ಶೆಟ್ಟಿ ಇದೀಗ ಸಚಿವರಾದ ಬಳಿಕ ಅಲ್ಪನಿಗೆ ಐಶ್ವರ್ಯ ಬಂದ ಹಾಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಮಾತನಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=lPjIVJAvrF8&feature=youtu.be

  • ಕ್ಷುಲ್ಲಕ ವಿಷಯಕ್ಕೆ ಜಗಳ- ಚಪ್ಪಲಿ ಧರಿಸಿ ದೇವಾಲಯ ಪ್ರವೇಶಿಸಿದ ಯುವಕರು

    ಕ್ಷುಲ್ಲಕ ವಿಷಯಕ್ಕೆ ಜಗಳ- ಚಪ್ಪಲಿ ಧರಿಸಿ ದೇವಾಲಯ ಪ್ರವೇಶಿಸಿದ ಯುವಕರು

    ಗದಗ: ಕಳೆದ ಎರಡು ದಿನಗಳ ಹಿಂದೆ ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಅನ್ಯಕೋಮಿನ ಯುವಕರು ಹಾಗೂ ದೇವಸ್ಥಾನದ ಪೂಜಾರಿ ನಡುವೆ ಕ್ಷುಲ್ಲಕ ವಿಷಯಕ್ಕೆ ಮಾತಿನ ಜಗಳವಾಗಿದೆ.

    ಈ ವೇಳೆ ಅನ್ಯಕೋಮಿನ ಐದಾರು ಜನ ಯುವಕರು ಚಪ್ಪಲಿ ಧರಿಸಿಕೊಂಡು ಮಲ್ಲಿಕಾರ್ಜುನ ದೇವಸ್ಥಾನದೊಳಗೆ ನುಗ್ಗಿ ಪೂಜಾರಿ ಕರಿಬಸಪ್ಪನನ್ನು ಚಪ್ಪಲಿಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.

    ಪೂಜಾರಿಗೆ ಚಪ್ಪಲಿಯಿಂದ ಹೊಡೆದಿರುವುದರಿಂದ ಅಪಚಾರವಾಗಿದೆ. ಶಾಸ್ತ್ರೋಕ್ತವಾಗಿ ಸರಿಪಡಿಸುವುಂತೆ ಸ್ಥಳೀಯ ಹಿರಿಯರು ಹಲ್ಲೆ ಮಾಡಿದ ಯುವಕರಿಗೆ ಎರಡು ದಿನ ಗಡುವು ನೀಡಿದರೂ ಸರಿಪಡಿಸಿಲ್ಲ. ಆದ್ದರಿಂದ ಹಲ್ಲೆ ಮಾಡಿರುವ ಯುವಕರನ್ನು ಬಂಧಿಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಊರಿನ ನೂರಾರು ಜನರು ರಾತ್ರೋರಾತ್ರಿ ಗದಗನ ಗ್ರಾಮೀಣ ಠಾಣೆಯ ಪೋಲಿಸರ ಮೊರೆ ಹೋಗಿದ್ದಾರೆ.

    ಈ ಹಿನ್ನೆಲೆಯಲ್ಲಿ ಊರಿನಲ್ಲಿ ಜರುಗಬೇಕಿದ್ದ ಮಲ್ಲಿಕಾರ್ಜುನ ದೇವರ ಜಾತ್ರೆ ನಿಂತು ಹೋಗಿದೆ. ಜಾತ್ರೆಯಲ್ಲಿ ಕರಿಬಸಪ್ಪನಿಗೆ ದೇವರು ಮೈಯಲ್ಲಿ ಬಂದು ಮಳೆ, ಬೆಳೆಗಳ ವಾಡಿಕೆ ಬಗ್ಗೆ ಈ ವರ್ಷ ಹೇಳದಿರುವುದು ಸಾಕಷ್ಟು ಆತಂಕ ಮೂಡಿದೆ. ಈ ಘಟನೆ ನಡೆಸಿರೋದು ನಮ್ಮ ಊರಿಗೆ ಅಪಚಾರವಾಗಿದೆ. ಊರಿಗೆ ಅನಾಹುತ ಕಾದಂತಿದೆ ಎಂದು ಸ್ಥಳೀಯ ಮಹಿಳೆಯರು ಕಣ್ಣೀರಿಟ್ಟಿದ್ದಾರೆ. ಅಲ್ಲದೇ ನ್ಯಾಯ ಸಿಗದೆ ಹೋದರೆ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಪ್ಪಲಿ ಕೊಳ್ಳಲು ಬಂದ ಯುವತಿ ಜೊತೆ ಅಸಭ್ಯ ವರ್ತನೆ!

    ಚಪ್ಪಲಿ ಕೊಳ್ಳಲು ಬಂದ ಯುವತಿ ಜೊತೆ ಅಸಭ್ಯ ವರ್ತನೆ!

    ಶಿವಮೊಗ್ಗ: ಚಪ್ಪಲಿ ಕೊಳ್ಳಲು ಬಂದ ಯುವತಿ ಜೊತೆ ಅಂಗಡಿ ಕೆಲಸಗಾರ ಅನುಚಿತವಾಗಿ ವರ್ತಿಸಿದ್ದು, ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ನಗರದ ಕಸ್ತೂರ ಬಾ ರಸ್ತೆಯಲ್ಲಿರುವ ಅಂಗಡಿಯಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪು ಚದುರಿಸಿದ್ರು.

    ಈ ವೇಳೆ ಮಾಲತೇಶ್ ಹಾಗೂ ಮಹ್ಮದ್ ಅಯಾಜ್ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv