Tag: ಚಪ್ಪಲಿ

  • ಕಾಲ್ನಡಿಗೆಯಲ್ಲಿ ತೆರಳ್ತಿದ್ದವರಿಗೆ ಆಹಾರದ ಜೊತೆ ಪಾದರಕ್ಷೆ ನೀಡಿದ ಪೊಲೀಸರು

    ಕಾಲ್ನಡಿಗೆಯಲ್ಲಿ ತೆರಳ್ತಿದ್ದವರಿಗೆ ಆಹಾರದ ಜೊತೆ ಪಾದರಕ್ಷೆ ನೀಡಿದ ಪೊಲೀಸರು

    ಜೈಪುರ: ಕೊರೊನಾ ಲಾಕ್‍ಡೌನ್ ಸಡಿಲಿಕೆ ಮಾಡಿದ ನಂತರ ಅನೇಕ ಪ್ರವಾಸಿ ಕಾರ್ಮಿಕರು ಬೇರೆ ದಾರಿಯಿಲ್ಲದೆ ನಡೆದುಕೊಂಡೇ ತಮ್ಮ ತಮ್ಮ ಗ್ರಾಮಗಳಿಗೆ ತಲುಪುತ್ತಿದ್ದಾರೆ. ಇದೀಗ ಕಾಲ್ನಡಿಗೆಯಲ್ಲಿ ತಮ್ಮ ಮನೆಗಳಿಗೆ ಮರಳುತ್ತಿದ್ದ ಪ್ರವಾಸಿ ಕಾರ್ಮಿಕರಿಗೆ ರಾಜಸ್ಥಾನ ಪೊಲೀಸರು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಕಾಲ್ನಡಿಗೆ ಮೂಲಕ ಹೋಗುವ ಕಾರ್ಮಿಕರಿಗೆ ಅನೇಕರು ಊಟ, ನೀರಿನ ಸಹಾಯ ಮಾಡಿದ್ದಾರೆ. ಇದೀಗ ರಾಜಸ್ಥಾನ ಪೊಲೀಸರ ತಂಡವೊಂದು ಕಾರ್ಮಿಕರಿಗೆ ಬಿಸ್ಕೆಟ್ ಮತ್ತು ನೀರಿನ ಬಾಟಲಿಗಳ ಪ್ಯಾಕೆಟ್‍ಗಳನ್ನು ನೀಡಿದ್ದಾರೆ. ಜೊತೆಗೆ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಚಪ್ಪಲಿಯನ್ನು ಪೂರೈಕೆ ಮಾಡಿದ್ದಾರೆ.

    ಲಾಕ್‍ಡೌನ್‍ನಿಂದ ಉದ್ಯೋಗ ಮತ್ತು ಹಣವಿಲ್ಲದ ಕಾರಣ ಸಾವಿರಾರು ಪ್ರವಾಸಿ ಕಾರ್ಮಿಕರು ಜೈಪುರ-ಆಗ್ರಾ ಹೆದ್ದಾರಿ ಮೂಲಕ ತಮ್ಮ ರಾಜ್ಯಗಳಿಗೆ ಮರಳುತ್ತಿದ್ದರು. ಅದರಲ್ಲೂ ಇಂತಹ ಬಿಸಿಲಿನಲ್ಲಿ ಕಾರ್ಮಿಕರು ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದರು.

    ಈ ವೇಳೆ ಪೊಲೀಸರ ಗುಂಪೊಂದು ಹೆದ್ದಾರಿಯಲ್ಲಿ ನಿಂತು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರಿಗೆ ಹೊಸ ಚಪ್ಪಲಿಗಳನ್ನು ಒದಗಿಸಿದೆ. ಪೊಲೀಸ್ ತಂಡದ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಚಪ್ಪಲಿಯನ್ನು ಚಪ್ಪರಿಸಿ ತಿಂದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

    ಚಪ್ಪಲಿಯನ್ನು ಚಪ್ಪರಿಸಿ ತಿಂದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

    ಮುಂಬೈ: ಬಾಲಿವುಡ್‍ನ ಹಾಟ್ ಸುಂದರಿ ಮಂಗಳೂರಿನ ಮಗಳು ಶಿಲ್ಪಾ ಶೆಟ್ಟಿ ಚಪ್ಪಲಿಯನ್ನು ಚಪ್ಪರಿಸಿ ತಿಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಆರೇ ಶಿಲ್ಪಗೇ ಚಪ್ಪಲಿಯನ್ನು ತಿನ್ನುವಂತಹದ್ದು ಏನ್ ಆಗಿದೆ ಅಂತೀದಿದ್ದರಾ? ಶಿಲ್ಪ ತಿಂದಿರುವುದು ಚಪ್ಪಲಿಯನ್ನಲ್ಲ ಬದಲಿಗೆ ಚಪ್ಪಲಿ ಆಕಾರದಲ್ಲಿರುವ ಚಾಕಲೇಟ್ ಕೇಕ್ ಅನ್ನು ಸವಿದಿದ್ದಾರೆ. ಅವರು ಚಪ್ಪಲಿ ರೀತಿಯಲ್ಲಿರುವ ಚಾಕಲೇಟ್ ಕೇಕ್ ಅನ್ನು ತಿನ್ನುತಿರುವ ವಿಡಿಯೋವನ್ನು ಸ್ವತಃ ಅವರೇ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    https://www.instagram.com/p/B8D3RUDBZ-A/

    ಯೋಗ ಮತ್ತು ಡಯೇಟ್ ಮಾಡಿ ಫಿಟ್ ಅಂಡ್ ಫೈನ್ ಆಗಿರುವ ಶಿಲ್ಪಾ ಅವರು ಚೆನ್ನಾಗಿ ತಿನ್ನುತ್ತಾರೆ. ಹಾಗಾಗಿ ಭಾನುವಾರ ವೀಕೆಂಡ್ ಎಂಜಾಯ್ ಮಾಡಿರುವ ಶಿಲ್ಪಾ ಶೆಟ್ಟಿ ಅವರು, ಚಪ್ಪಲಿ ರೀತಿಯಲ್ಲಿ ತಯಾರಾದ ಚಾಕಲೇಟ್ ಕೇಕ್ ಅನ್ನು ತಿಂದು ಅದನ್ನು ವಿಡಿಯೋ ಮಾಡಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಚಪ್ಪಲಿಯನ್ನು ತಿನ್ನುತ್ತೀರಾ? “ವಿಶೇಷ ಭಾನುವಾರ ವಿಶಿಷ್ಟ ಅಕಾರದ ಚಾಕಲೇಟ್ ಕೇಕ್‍ನೊಂದಿಗೆ” ಎಂದು ಬರೆದುಕೊಂಡಿದ್ದಾರೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ವಿಭಿನ್ನ ವಿಭಿನ್ನ ರೀತಿಯ ಚಾಕಲೇಟ್ ಕೇಕ್. ಆದರೆ ಇದು ಚಪ್ಪಲಿ ಆಕಾರದಲ್ಲಿರುವ ಚಾಕಲೇಟ್. ಇದಕ್ಕೆ ನಾನು ಚಪ್ಪಲಿಯನ್ನು ತಿನ್ನುತ್ತೀರಾ ಎಂದು ಪ್ರಶ್ನಿಸಿದ್ದೆ. ಇದನ್ನು ನಾವು ತಿನ್ನಬಹುದು. ತಿಂದು ನನಗೆ ಇಷ್ಟವಾಯಿತು ಎಂದು ಹೇಳಿ ಸಂಡೇ ಬೆಂಜ್ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

    ಕಳೆದ ತಿಂಗಳ 30 ರಂದು ತನ್ನ ಹುಟ್ಟೂರಿಗೆ ಬಂದಿದ್ದ ಶಿಲ್ಪಾ ಶೆಟ್ಟಿ ಅವರು, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾಗಿ ದೇವಿಯ ದರ್ಶನ ಪಡೆದಿದ್ದರು. ಈ ವೇಳೆ ಮಾತನಾಡಿದ್ದ ಅವರು, ಕ್ಷೇತ್ರಕ್ಕೆ ಬರಬೇಕು ಎಂದು ತುಂಬಾ ಆಸೆ ಇತ್ತು. ಕಟೀಲು ದೇವರ ಅನುಗ್ರಹದಿಂದ ನಾನು ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಯಿತು. ಹಾಗಾಗಿ ಬ್ರಹ್ಮಕಲಶದ ಈ ಸಂದರ್ಭದಲ್ಲಿ ದೇವಿಗೆ ಪೂಜೆ ಸಲ್ಲಿಸಲು ಬಂದಿದ್ದೇನೆ ಎಂದು ತುಳುವಿನಲ್ಲಿ ಹೇಳಿದ್ದರು.

    ಈ ವೇಳೆ ಕಟೀಲು ಕ್ಷೇತ್ರದ ವತಿಯಿಂದ ನಟಿ ಶಿಲ್ಪಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದಲ್ಲೇ ತನ್ನ ಮನೆಯಿರುವ ಶಿಲ್ಪಾ ಶೆಟ್ಟಿ ಅವರು ಕಟೀಲು ದುರ್ಗಾಪರಮೇಶ್ವರಿ ದೇವಿಯ ಪರಮ ಭಕ್ತೆಯಾಗಿದ್ದಾರೆ. ತನ್ನ ಹುಟ್ಟೂರಿಗೆ ಹಾಗೂ ಮಂಗಳೂರಿನ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬರುವಾಗ, ತಪ್ಪದೇ ಕಟೀಲು ಶ್ರೀ ದೇವಿಯ ದರ್ಶನ ಪಡೆಯುತ್ತಾರೆ. ಸದ್ಯ ಬಾಲಿವುಡ್‍ನಲ್ಲಿ ಬ್ಯುಸಿ ಇರುವ ಶಿಲ್ಪಾ ಎರಡು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶೆಟ್ಟಿ ನಟನೆಯ ನಿಕ್ಕಮ್ಮ ಮತ್ತು ಹಂಗಮಾ-2 ಸಿನಿಮಾಗಳು ಬಿಡುಗಡೆ ಸಿದ್ಧಗೊಳ್ಳುತ್ತಿವೆ.

  • ಪ್ರಶ್ನೆ ಕೇಳಿದ ವಿದ್ಯಾರ್ಥಿಗಳಿಗೆ ಚಪ್ಪಲಿಯಿಂದ ಥಳಿಸಿದ ಉಪನ್ಯಾಸಕ

    ಪ್ರಶ್ನೆ ಕೇಳಿದ ವಿದ್ಯಾರ್ಥಿಗಳಿಗೆ ಚಪ್ಪಲಿಯಿಂದ ಥಳಿಸಿದ ಉಪನ್ಯಾಸಕ

    ರಾಯಚೂರು: ಪರೀಕ್ಷೆಯಲ್ಲಿ ಅಂಕ ನೀಡುವ ವಿಚಾರವಾಗಿ ತಾರತಮ್ಯ ಯಾಕೆ ಮಾಡುತ್ತೀರಿ ಅಂತ ಪ್ರಶ್ನಿಸಿದ್ದಕ್ಕೆ ರಾಯಚೂರಿನ ಮಾನ್ವಿಯಲ್ಲಿ ಉಪನ್ಯಾಸಕನೋರ್ವ ವಿದ್ಯಾರ್ಥಿಗಳಿಗೆ ಚಪ್ಪಲಿಯಿಂದ ಥಳಿಸಿರುವ ಘಟನೆ ನಡೆದಿದೆ.

    ಮಾನ್ವಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಚಂದ್ರಶೇಖರ್ ವಿದ್ಯಾರ್ಥಿ ಪೃಥ್ವಿರಾಜ್ ಹಾಗೂ ಇತರರಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಏಕಾಏಕಿ ವಿದ್ಯಾರ್ಥಿಗಳಿಗೆ ಚಪ್ಪಲಿಯಿಂದ ಹೊಡೆದಿರುವ ದೃಶ್ಯವು ಕಾಲೇಜಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉಪನ್ಯಾಸಕನ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ.

    ಚಂದ್ರಶೇಖರ್ ಅವರು ಉದ್ದೇಶ ಪೂರ್ವಕವಾಗಿ ಕೆಲ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ಕಡಿಮೆ ನೀಡುತ್ತಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ಜೊತೆ ಅನುಚಿವಾಗಿ ವರ್ತಿಸುತ್ತಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತಿನಲ್ಲೆ ಉತ್ತರ ಕೊಟ್ಟು ಮುಗಿಸಬಹುದಾಗಿದ್ದನ್ನು ಚಪ್ಪಲಿ ಏಟಿನ ಮೂಲಕ ಬೆಳೆಸಿದ್ದಕ್ಕೆ ಎಂದು ಉಪನ್ಯಾಸಕರಿಗೆ ಪ್ರಾಂಶುಪಾಲರು ಛೀಮಾರಿ ಹಾಕಿದ್ದಾರೆ ಎನ್ನಲಾಗಿದೆ. ಜೊತೆಗೆ ವಿದ್ಯಾರ್ಥಿಗಳ ಪೋಷಕರು ಸಹ ಹಲ್ಲೆ ಮಾಡಿದ ಉಪನ್ಯಾಸಕ ಚಂದ್ರಶೇಖರ್ ಅವರ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ.

    ಕೊನೆಗೆ ಉಪನ್ಯಾಸಕ ಚಂದ್ರಶೇಖರ್ ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ್ದರಿಂದ ವಿದ್ಯಾರ್ಥಿಗಳು ಸುಮ್ಮನಾಗಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಚಪ್ಪಲಿಯಿಂದ ಹೊಡೆದ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

  • ‘ಬ್ರಾಂಡೆಡ್ ಶೂಗಳು ಕಳೆದು ಹೋಗಿದೆ, ಹುಡುಕಿ ಕೊಡಿ’ – ಠಾಣೆ ಮೆಟ್ಟಿಲೇರಿದ ಉದ್ಯಮಿ

    ‘ಬ್ರಾಂಡೆಡ್ ಶೂಗಳು ಕಳೆದು ಹೋಗಿದೆ, ಹುಡುಕಿ ಕೊಡಿ’ – ಠಾಣೆ ಮೆಟ್ಟಿಲೇರಿದ ಉದ್ಯಮಿ

    ಚೆನ್ನೈ: ಸಾಮಾನ್ಯವಾಗಿ ಚಿನ್ನ, ಬೆಳ್ಳಿ, ವಾಹನ ಅಥವಾ ವಸ್ತು ಕಳೆದು ಹೋಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡುತ್ತಾರೆ. ಆದರೆ ತಮಿಳುನಾಡಿನಲ್ಲಿ ಉದ್ಯಮಿಯೊಬ್ಬರು ಶೂಗಳು ಕಳೆದು ಹೋಗಿವೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

    ಹೌದು ವಿಚಿತ್ರ ಎನಿಸಿದರು ಇದು ನಿಜ. ಈ ದೂರಿನ ಬಗ್ಗೆ ಕೇಳಿ ಸ್ವತಃ ಪೊಲೀಸರೇ ದಂಗಾಗಿದ್ದಾರೆ. ಮನೆಯಲ್ಲಿ ಇಟ್ಟಿದ್ದ 10 ಜೊತೆ ಶೂಗಳು, ಚಪ್ಪಲಿಗಳು ಕಾಣೆಯಾಗಿದೆ ಎಂದು ಉದ್ಯಮಿ ದೂರು ನೀಡಿದ್ದಾರೆ. ಚೆನ್ನೈನ ದಿವಾನ್ ಬಹದ್ದೂರ್ ಷಣ್ಮುಗಮ್ ಬೀದಿಯ ನಿವಾಸಿ ಅಬ್ದುಲ್ ಹಫೀಜ್ ಪೊಲೀಸರಿಗೆ ದೂರು ನೀಡಿದ್ದಾರೆ.

    ತಮ್ಮ ಮನೆಯಲ್ಲಿ ಇಟ್ಟಿದ್ದ 10 ಜೊತೆ ಶೂಗಳು, ಚಪ್ಪಲಿಗಳು ಕಾಣೆಯಾಗಿವೆ. ದಯವಿಟ್ಟು ಹುಡುಕಿಕೊಡಿ. ಅವೆಲ್ಲಾ ಬಹಳ ಬೆಲೆಬಾಳುವ ಶೂಗಳು. ಎಲ್ಲಾ ಸೇರಿ ಬರೋಬ್ಬರಿ 76 ಸಾವಿರ ಮೌಲ್ಯದ ಶೂಗಳು ಕಳೆದು ಹೋಗಿದೆ ಎಂದು ಅಬ್ದುಲ್ ದೂರು ನೀಡಿದ್ದಾರೆ.

    ಶನಿವಾರ ಈ ಘಟನೆ ನಡೆದಿದೆ. ಮನೆಯಿಂದ ಹೊರಹೋಗುತ್ತಿದ್ದ ವೇಳೆ ಶೂಗಳು, ಚಪ್ಪಲಿಗಳು ಮನೆಯಲ್ಲಿ ಕಾಣಲಿಲ್ಲ. ಯಾರೋ ಮನೆಗೆ ಬಂದು ಶೂಗಳನ್ನು ಕದ್ದಿದ್ದಾರೆ ಎಂದು ಅಬ್ದುಲ್ ಪೊಲೀಸರ ಬಳಿ ಹೇಳಿದ್ದಾರೆ. ಅಲ್ಲದೆ ಅವರ ಅಕ್ಕಪಕ್ಕದ ಮನೆಯವರು ಕದ್ದಿರಬಹುದು ಎಂದು ಅಬ್ದುಲ್ ಶಂಕಿಸಿದ್ದಾರೆ. ಹಾಗೆಯೇ ಅವರ ಮನೆಯ ಪಕ್ಕದಲ್ಲಿ ಕೆಲ ಯುವಕರು ವಾಸವಾಗಿದ್ದಾರೆ, ಅವರೇ ಶೂಗಳನ್ನು ಕದ್ದಿರಬಹುದು ಎಂದು ಅಬ್ದುಲ್ ಅನುಮಾನ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸದ್ಯ ಉದ್ಯಮಿ ಅನುಮಾನ ವ್ಯಕ್ತಪಡಿಸಿದ ಯುವಕರು ಊರಿಗೆ ತೆರೆಳಿದ್ದು, ಅವರು ಮರುಳಿದ ಬಳಿಕ ವಿಚಾರಣೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಮನೆಯ ಅಕ್ಕಪಕ್ಕದ ಸಿಸಿಟಿವಿಗಳನ್ನು ಕೂಡ ಪರಿಶೀಲಿಸುವುದಾಗಿ ಪೊಲೀಸರು ಹೇಳಿದ್ದಾರೆ.

  • ಬೆಂಗಳೂರಿನಲ್ಲಿ ಚಪ್ಪಲಿ, ಶೂ ಕಳ್ಳರ ಹಾವಳಿ

    ಬೆಂಗಳೂರಿನಲ್ಲಿ ಚಪ್ಪಲಿ, ಶೂ ಕಳ್ಳರ ಹಾವಳಿ

    ಬೆಂಗಳೂರು: ಮನೆಯ ಮುಂದೆ ಬಿಟ್ಟಿರುವ ಚಪ್ಪಲಿ, ಶೂಗಳನ್ನು ಕಳ್ಳರು ಬಿಡುತ್ತಿಲ್ಲ. ಬೆಂಗಳೂರಿನಲ್ಲಿ ಚಪ್ಪಲಿ ಕಳ್ಳರ ಗ್ಯಾಂಗ್ ಪ್ರತ್ಯಕ್ಷವಾಗಿದ್ದು, ಮನೆಯ ಮುಂದೆ ಇರುವ ಬ್ರ್ಯಾಂಡೆಡ್ ಶೂ, ಚಪ್ಪಲಿಗಳನ್ನು ಕದಿಯುತ್ತಿದ್ದಾರೆ. ಈ ಎಲ್ಲ ದೃಶ್ಯಗಳು ಥಣಿಸಂದ್ರದ ಭುವನೇಶ್ವರಿ ನಗರದ ಅಪಾರ್ಟ್ ಮೆಂಟ್ ನಲ್ಲಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ಮಧ್ಯರಾತ್ರಿ ಆಟೋದಲ್ಲಿ ಬರುವ ಮೂವರು ಅಪಾರ್ಟ್ ಮೆಂಟ್ ನೊಳಗೆ ನುಗ್ಗಿದ್ದಾರೆ. ಮನೆಯ ಮುಂಭಾಗ ಇರಿಸಿರುವ ಕೇವಲ ಬ್ರ್ಯಾಂಡೆಡ್ ಶೂ ಮತ್ತು ಚಪ್ಪಲಿಗಳನ್ನು ಕದ್ದು ಮೂಟೆಯಲ್ಲಿ ತುಂಬಿಕೊಂಡಿದ್ದಾರೆ. ಎಲ್ಲವನ್ನು ಆಟೋದಲ್ಲಿ ಹಾಕಿಕೊಂಡು ಎಸ್ಕೇಪ್ ಆಗಿದ್ದಾರೆ.

    ಕಟ್ಟಡದಲ್ಲಿ ಸಿಸಿಟಿವಿ ಕಂಡ ಕಳ್ಳನೋರ್ವ ಕದ್ದ ಶೂಗಳನ್ನು ಮುಖಕ್ಕೆ ಹಿಡಿದುಕೊಂಡು ಎಸ್ಕೇಪ್ ಆಗಿದ್ದಾನೆ. ಮತ್ತೋರ್ವನ ಮುಖ ಚಹರೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕರ್ತವ್ಯದ ವೇಳೆ ಎಡವಿ ಬೀಳ್ತಿದ್ದ ಸಿಬ್ಬಂದಿ- ಚಪ್ಪಲಿಯನ್ನೇ ಬ್ಯಾನ್ ಮಾಡಿದ ಆಡಳಿತ ಮಂಡಳಿ

    ಕರ್ತವ್ಯದ ವೇಳೆ ಎಡವಿ ಬೀಳ್ತಿದ್ದ ಸಿಬ್ಬಂದಿ- ಚಪ್ಪಲಿಯನ್ನೇ ಬ್ಯಾನ್ ಮಾಡಿದ ಆಡಳಿತ ಮಂಡಳಿ

    ವಾಷಿಂಗ್ಟನ್: ಕರ್ತವ್ಯದಲ್ಲಿ ನಿರತರಾಗಿದ್ದ ವೇಳೆ ಫ್ಲಿಪ್ ಫ್ಲಾಪ್ ಚಪ್ಪಲಿಗಳನ್ನು ಹಾಕುತ್ತಿದ್ದ ಮುನಿಸಿಪಲ್ ಸಿಬ್ಬಂದಿ ಎಡವಿ ಬೀಳುತ್ತಿದ್ದರು. ಹೀಗಾಗಿ ಈ ತರಹದ ಚಪ್ಪಲಿಗಳನ್ನು ಅಮೆರಿಕಾದ ಕನಿಕ್ಟಿಕುಟ್ ನಗರದಲ್ಲಿ ಸಿಬ್ಬಂದಿ ಹಾಕುವಂತಿಲ್ಲ ಎಂದು ಮುನಿಸಿಪಲ್ ನಿಷೇಧ ಹೇರಿದೆ.

    ಹೌದು, ವಿಚಿತ್ರ ಏನಿಸಿದರು ಇದು ಸತ್ಯ. ಪದೇ ಪದೇ ಕೆಲಸದ ವೇಳೆ ಸಿಬ್ಬಂದಿ ಎಡವಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಕನಿಕ್ಟಿಕುಟ್ ಮುನಿಸಿಪಲ್ ಆಡಳಿತ ಮಂಡಳಿ ಸಿಬ್ಬಂದಿಗಳ ಹಿತದೃಷ್ಟಿಯಿಂದ ಫ್ಲಿಪ್ ಫ್ಲಾಪ್ ಚಪ್ಪಲಿಗಳನ್ನು ನಿಷೇಧಿಸಿದೆ. ಆದ್ದರಿಂದ ಜೂನ್‍ನಿಂದ ಈ ನಿಯಮ ಜಾರಿಗೆ ಬಂದಿದ್ದು, ಇನ್ನು ಮುಂದೆ ಸಿಬ್ಬಂದಿ ಈ ತರಹದ ಚಪ್ಪಲಿ ಹಾಕುವಂತಿಲ್ಲ ಎಂದು ಆದೇಶಿಸಿದೆ.

    ಆದರೆ ಈ ನಿಯಮದಲ್ಲೂ ಕೆಲ ಸಿಬ್ಬಂದಿಗೆ ವಿನಾಯಿತಿ ನೀಡಲಾಗಿದ್ದು, ಪ್ರಮುಖವಾಗಿ ಈಜುಕೊಳದಲ್ಲಿ ಅಥವಾ ಅದರ ಬಳಿ ಕೆಲಸ ಮಾಡುವ ಸಿಬ್ಬಂದಿ ಫ್ಲಿಪ್ ಫ್ಲಾಪ್ ಚಪ್ಪಲಿಗಳನ್ನು ಧರಿಸಬಹುದಾಗಿದೆ. ಮುನಿಸಿಪಲ್‍ನ ಈ ಹೊಸ ನಿಯಮವನ್ನು ಅನೇಕ ಸಿಬ್ಬಂದಿ ಸ್ವಾಗತಿಸಿದ್ದಾರೆ. ನಮಗಾಗಿ ಆಡಳಿಯ ಮಂಡಳಿ ಯೋಚಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ಜಪಾನ್‍ನ ಕಂಪನಿಯೊಂದರಲ್ಲಿ ಸಿಬ್ಬಂದಿ ಹೈ ಹೀಲ್ಸ್ ಧರಿಸುವಂತಿಲ್ಲ ಎಂದು ನಿಯಮ ತರಲಾಗಿತ್ತು. ಇದಕ್ಕೆ ಕುಟೂ ಅಭಿಯಾನ ಎಂದು ಹೆಸರಿಟ್ಟು ನಿಯಮವನ್ನು ಕಾರ್ಯರೂಪಕ್ಕೆ ತರಲಾಗಿತ್ತು.

  • ಸಿಲಿಕಾನ್ ಸಿಟಿ ಅಂಗಡಿ ಮಾಲೀಕರೇ ಹುಷಾರ್!

    ಸಿಲಿಕಾನ್ ಸಿಟಿ ಅಂಗಡಿ ಮಾಲೀಕರೇ ಹುಷಾರ್!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶೂ ಕಳ್ಳರ ಹಾವಳಿ ಶುರುವಾಗಿದ್ದು, ಪ್ರತಿಷ್ಠಿತ ಫೂಟ್ ವೇರ್ ಅಂಗಡಿಗಳನ್ನೇ ಕಳ್ಳರು ಟಾರ್ಗೆಟ್ ಮಾಡುತ್ತಿದ್ದಾರೆ.

    ಬೆಳ್ಳಂಬೆಳಗ್ಗೆ ಖರ್ತನಾಕ್ ಕಳ್ಳರ ಗ್ಯಾಂಗ್ ಬಂದು ಬೀಗ ಹೊಡೆದು ತಮ್ಮ ಕೈ ಚಳಕ ತೋರುತ್ತಿದ್ದಾರೆ. ಗರುಡ ಮಾಲ್ ಸುತ್ತಮುತ್ತ ಫೂಟ್ ವೇರ್ ಅಂಗಡಿಗಳಲ್ಲಿ ಕಳ್ಳರು ಶೂ ಕದ್ದು ಪರಾರಿಯಾಗಿದ್ದಾರೆ. ಈ ಘಟನೆ ಇದೇ ತಿಂಗಳ 18ರ ಮುಂಜಾನೆ ಸುಮಾರು 4 ಘಂಟೆಗೆ ನಡೆದಿದ್ದು, ಆರೋಪಿಗಳ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಒಂದೇ ದಿನ ಎರಡು ಫೂಟ್ ವೇರ್ ಅಂಗಡಿ ಬೀಗ ಹೊಡೆದು ಕಳ್ಳತನ ಮಾಡಿದ್ದಾರೆ. ಗರುಡ ಮಾಲ್ ಬಳಿಯ ಮೊಯಿನುದ್ದೀನ್ ಫೂಟ್ ವೇರ್ ಮತ್ತು ಸಿಮ್ಲಾ ಸ್ಟೋರ್‍ನಲ್ಲಿ ಖದೀಮರ ಕಳ್ಳತನ ಮಾಡಿದ್ದಾರೆ.

    ನಸುಕಿನ ಜಾವ ಆಟೋದಲ್ಲಿ ಕಳ್ಳರ ಗ್ಯಾಂಗ್ ಬಂದು ಅಂಗಡಿಯ ಬೀಗ ಹೊಡೆದಿದ್ದಾರೆ. ಬಳಿಕ ಎರಡು ಅಂಗಡಿಗಳಲ್ಲಿ ಬೆಲೆಬಾಳುವ ಬ್ರಾಂಡೆಂಡ್ ಶೂ ಹಾಗೂ ಸ್ಲಿಪ್ಪರ್ಸ್ ಎಗರಿಸಿದ್ದಾರೆ. ಸುಮಾರು 125 ಜೊತೆ ಶೂ ಹಾಗೂ 70 ಜೊತೆ ಚಪ್ಪಲಿ ಕದ್ದು ಅದನ್ನು ಆಟೋದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಇದೆಲ್ಲವೂ ಸಿಸಿಟಿಯಲ್ಲಿ ಸೆರೆಯಾಗಿದೆ.

    ಸದ್ಯಕ್ಕೆ ಈ ಕುರಿತು ಕಬ್ಬನ್ ಪಾರ್ಕ್ ಹಾಗೂ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ಪಕ್ಷೇತರ ಅಭ್ಯರ್ಥಿಗೆ ಚಪ್ಪಲಿ ಗುರುತು- ಗೊಂದಲದಲ್ಲಿ ಚುನಾವಣಾ ಸಿಬ್ಬಂದಿ!

    ಪಕ್ಷೇತರ ಅಭ್ಯರ್ಥಿಗೆ ಚಪ್ಪಲಿ ಗುರುತು- ಗೊಂದಲದಲ್ಲಿ ಚುನಾವಣಾ ಸಿಬ್ಬಂದಿ!

    ಕೊಪ್ಪಳ: 2ನೇ ಹಂತದ ಚುನಾವಣೆಗೆ ಇನ್ನೂ ಕೇವಲ ಒಂದು ದಿನ ಬಾಕಿ ಇರಬೇಕಾದರೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಸಿಬ್ಬಂದಿ ಗೊಂದಲದಲ್ಲಿದ್ದಾರೆ.

    ಹೌದು. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 14 ಜನ ಕಣದಲ್ಲಿದ್ದಾರೆ. ಆದರೆ ಒಬ್ಬ ಪಕ್ಷೇತರ ಅಭ್ಯರ್ಥಿಯ ಚಿಹ್ನೆ ಚಪ್ಪಲಿ ಗುರುತು ಇರುವುದರಿಂದ ಚುನಾವಣಾ ಸಿಬ್ಬಂದಿ ಚಪ್ಪಲಿ ಹಾಕಬೇಕಾ ಬೇಡವಾ ಎನ್ನುವ ಚಿಂತನೆಯಲ್ಲಿ ಇದ್ದಾರೆ.

    ಚುನಾವಣಾ ಆಯೋಗದ ಪ್ರಕಾರ ಮತಗಟ್ಟೆಯಿಂದ 100 ಮೀಟರ್ ವರೆಗೂ ಎಲ್ಲಿಯೂ ಅಭ್ಯರ್ಥಿಯ ಚಿಹ್ನೆ ಕಾಣುವಂತಿಲ್ಲ. ಆದರೆ ಪಕ್ಷೇತರ ಅಭ್ಯರ್ಥಿ ಪ.ಯ ಗಣೇಶ್ ಅವರ ಚಿಹ್ನೆ ಚಪ್ಪಲಿ ಇರುವುದರಿಂದ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರೇ ಇದಕ್ಕೆ ಏನು ಮಾಡೋದು ಎಂದು ಯೋಚನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

    ಸಿಬ್ಬಂದಿ ವಿಚಾರವಿರಲಿ ಮತಗಟ್ಟೆಗೆ ಮತ ಹಾಕಲು ಬರುವ ಮತದಾರರು ಚಪ್ಪಲಿ ಹಾಕಿಕೊಳ್ಳಬೇಕಾ ಅಥವಾ ಬಿಟ್ಟು ಬರಬೇಕಾ ಎನ್ನುವುದು ಇದೀಗ ಕೊಪ್ಪಳದಲ್ಲಿ ಜನರು ಚರ್ಚೆ ಮಾಡುವಂತಾಗಿದೆ.

  • ನನ್ ಎಕ್ಡ ಎನ್ನುತ್ತಿದ್ದ ಹುಚ್ಚ ವೆಂಕಟ್ ಈಗ ಬರಿಗಾಲಲ್ಲಿ ಓಡಾಟ!

    ನನ್ ಎಕ್ಡ ಎನ್ನುತ್ತಿದ್ದ ಹುಚ್ಚ ವೆಂಕಟ್ ಈಗ ಬರಿಗಾಲಲ್ಲಿ ಓಡಾಟ!

    ಬೆಂಗಳೂರು: ಯಾವಾಗಲೂ ಒಂದಲ್ಲ ಒಂದು ಹೇಳಿಕೆಯ ಮೂಲಕವೇ, ವಿವಾದಗಳ ಮೂಲಕವೇ ಜನಪ್ರಿಯತೆ ಗಳಿಸಿದ್ದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಚೆನ್ನೈನ ಬೀದಿ ಬೀದಿಗಳಲ್ಲಿ ಚಪ್ಪಲಿಯೇ ಇಲ್ಲದೇ ಓಡಾಡುತ್ತಿರೋ ದೃಶ್ಯ ಕಂಡುಬಂದಿದೆ.

    ಮಾತು ಮಾತಿಗೂ ‘ನನ್ ಎಕ್ಡ’ ಅನ್ನೋ ಡೈಲಾಗ್ ಹೊಡೆದುಕೊಂಡು ಪಂಚಿಂಗ್ ಮಾತುಗಳನ್ನು ಹುಚ್ಚ ವೆಂಕಟ್ ಹೇಳುತ್ತಿದ್ದರು. ಬಾಯಿ ಬಿಟ್ಟರೆ `ನನ್ ಎಕ್ಡ’ ಎಂದು ಹೇಳುತ್ತಿದ್ದ ವೆಂಕಟ್ ಈಗ ಚೆನ್ನೈ ಬೀದಿಯಲ್ಲಿ ಬರಿಗಾಲಲ್ಲಿ ಓಡಾಟ ನಡೆಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಕೆಲ ದಿನಗಳ ಹಿಂದೆ `ದುರಹಂಕಾರಿ ಹುಚ್ಚ ವೆಂಕಟ್’ ಚಿತ್ರದ ಪ್ರೋಮೋ ರಿಲೀಸ್ ಮಾಡಿ ಸಿನಿಮಾ ಮಾಡುತ್ತಿರುವುದಾಗಿ ಮಾಧ್ಯಮಗಳ ಮುಂದೆ ಹುಚ್ಚ ವೆಂಕಟ್ ಹೇಳಿಕೆ ನೀಡಿದ್ದರು. ಆದರೆ ಚೆನ್ನೈನ ಬೀದಿ ಬೀದಿಗಳಲ್ಲಿ ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ಅಲೆಯುತ್ತಿರುವುದನ್ನು ಕಂಡ ಕೆಲವರು ಅವರ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಓಡಿ ಹೋಗ್ತಿದ್ದ ಮಗ್ಳನ್ನು ತಡೆಯಲು ದೂರದಿಂದಲೇ ಚಪ್ಪಲಿ ಎಸೆದ ತಾಯಿ: ವಿಡಿಯೋ ವೈರಲ್

    ಓಡಿ ಹೋಗ್ತಿದ್ದ ಮಗ್ಳನ್ನು ತಡೆಯಲು ದೂರದಿಂದಲೇ ಚಪ್ಪಲಿ ಎಸೆದ ತಾಯಿ: ವಿಡಿಯೋ ವೈರಲ್

    ಮೆಕ್ಸಿಕೋ: ಓಡಿ ಹೋಗುತ್ತಿದ್ದ ಮಗಳನ್ನು ತಡೆಯಲು ತಾಯಿಯೊಬ್ಬರು ಕೋಪದಿಂದ ದೂರದಿಂದಲೇ ಆಕೆಯ ಮೇಲೆ ಚಪ್ಪಲಿ ಎಸೆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ತನ್ನ ಮಗಳು ಓಡಿ ಹೋಗುವುದನ್ನು ತಡೆಯಲು ತಾಯಿಯೂ ಕೂಡ ಆಕೆಯ ಹಿಂದೆ ಓಡಿ ಹೋಗಿದ್ದಾಳೆ. ಆದರೆ ಮಗಳು ತುಂಬಾ ದೂರ ಓಡಿ ಹೋಗಿದ ಕಾರಣ ಮಹಿಳೆ ಆಕೆಯನ್ನು ತಡೆಯಲು ತನ್ನ ಚಪ್ಪಲಿಯನ್ನು ಎಸೆದಿದ್ದಾಳೆ. ಚಪ್ಪಲಿ ನೇರವಾಗಿ ಮಗಳ ಮೇಲೆ ಬಿದ್ದು, ಆಕೆ ನೆಲಕ್ಕೆ ಉರುಳಿದ್ದಾಳೆ.

    ಮಗಳು ನೆಲಕ್ಕೆ ಬೀಳುತ್ತಿದ್ದಂತೆ ತಾಯಿ ಹಾಗೂ ಅಲ್ಲಿದ್ದ ಜನರು ಜೋರಾಗಿ ನಗಲು ಶುರು ಮಾಡಿದ್ದಾರೆ. ಅಲ್ಲದೇ ಮಹಿಳೆ ಮಗಳ ಮೇಲೆ ಚಪ್ಪಲಿ ಎಸೆಯಲು ಮುಂದಾದಾಗ ಅಲ್ಲಿದ್ದ ಜನರು ಹೊಡೆಯುವಂತೆ ಪ್ರೋತ್ಸಾಹಿಸುತ್ತಿದ್ದರು.

    ಚಪ್ಪಲಿ ನೇರವಾಗಿ ಮಗಳ ಮೇಲೆ ಬಿದ್ದು ಆಕೆ ನೆಲಕ್ಕೆ ಉರುಳಿದನ್ನು ನೋಡಿದ ತಾಯಿ ತನ್ನ ನಗುವನ್ನು ನಿಯಂತ್ರಿಸಲಾಗದೆ ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದುವರೆಗೂ 16 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv