Tag: ಚಪ್ಪಲಿ

  • ತಮಿಳುನಾಡು ಸಚಿವರ ಕಾರಿಗೆ ಚಪ್ಪಲಿ ಎಸೆತ – 5 ಬಿಜೆಪಿ ಕಾರ್ಯಕರ್ತರ ಬಂಧನ

    ತಮಿಳುನಾಡು ಸಚಿವರ ಕಾರಿಗೆ ಚಪ್ಪಲಿ ಎಸೆತ – 5 ಬಿಜೆಪಿ ಕಾರ್ಯಕರ್ತರ ಬಂಧನ

    ಚೆನ್ನೈ: ತಮಿಳುನಾಡಿನ ಹಣಕಾಸು ಸಚಿವ ಪಳನಿವೇಲ್ ತ್ಯಾಗ ರಾಜನ್ ಅವರ ಕಾರಿಗೆ ಚಪ್ಪಲಿ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಬಿಜೆಪಿ ಕಾರ್ಯಕರ್ತರನ್ನು ಶನಿವಾರ ಬಂಧಿಸಲಾಗಿದೆ.

    ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರ ದಾಳಿಗೆ ಹುತಾತ್ಮರಾದ ರೈಫಲ್‌ಮನ್ ಡಿ ಲಕ್ಷ್ಮಣನ್ ಅವರಿಗೆ ಗೌರವ ಸಲ್ಲಿಸಲು ಸಚಿವರು ಮಧುರೈಗೆ ಬಂದಿದ್ದರು. ಈ ವೇಳೆ ಸಚಿವರ ಕಾರಿಗೆ ಕೆಲವರು ಚಪ್ಪಲಿಗಳನ್ನು ಎಸೆದು ಅಗೌರವ ತೋರಿದ್ದರು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದ್ದು, ಐವರೂ ಬಿಜೆಪಿ ಕಾರ್ಯಕರ್ತರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಿಎಂ ಚಾಲನೆ – ಭವ್ಯ ಭಾರತ ಕಟ್ಟಲು ಯುವಜನತೆ ಸನ್ನದ್ಧರಾಗುವಂತೆ ಕರೆ

    ಹುತಾತ್ಮರಿಗೆ ಗೌರವ ಸೂಚಿಸಲು ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಮಲೈ ಕೂಡಾ ಬರುವವರಿದ್ದರು. ಈ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಅವರನ್ನು ಸ್ವಾಗತಿಸಲು ಸ್ಥಳದಲ್ಲಿ ನೆರೆದಿದ್ದರು. ಆದರೆ ಆ ವೇಳೆ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಸಚಿವ ಆಗಮಿಸಿರುವುದನ್ನು ಕಂಡ ಕಾರ್ಯಕರ್ತರು ಅವರ ಕಾರಿನ ಮೇಲೆ ಚಪ್ಪಲಿಗಳನ್ನು ಎಸೆದು, ಅವರ ವಿರುದ್ಧ ಘೋಷಣೆಗಳನ್ನು ಕೂಗಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ತಿರಂಗಮಯವಾದ ಸುಪ್ರಸಿದ್ಧ ಮುಗಳಖೋಡ ಶ್ರೀಮಠ

    ವೈರಲ್ ಆಗಿರುವ ವೀಡಿಯೋ ಒಂದರಲ್ಲಿ ಮಹಿಳೆಯೊಬ್ಬರು ಸಚಿವರ ಕಾರಿಗೆ ಚಪ್ಪಲಿಯನ್ನು ಎಸೆದಿರುವುದು ಕಂಡುಬಂದಿದೆ. ಕಾರಿನ ಮುಂಭಾಗ ಅಳವಡಿಸಲಾಗಿದ್ದ ರಾಷ್ಟ್ರಧ್ವಜದ ಸಮೀಪ ಕಾರಿನ ಗಾಜಿನ ಮೇಲೆ ಚಪ್ಪಲಿ ಬಿದ್ದಿರುವುದು ಕಂಡುಬಂದಿತ್ತು.

    Live Tv
    [brid partner=56869869 player=32851 video=960834 autoplay=true]

  • ನಡು ರಸ್ತೆಯಲ್ಲಿ ಮಾವನಿಗೆ ಚಪ್ಪಲಿಯಿಂದ ಹೊಡೆದ ಸೊಸೆ

    ನಡು ರಸ್ತೆಯಲ್ಲಿ ಮಾವನಿಗೆ ಚಪ್ಪಲಿಯಿಂದ ಹೊಡೆದ ಸೊಸೆ

    ಲಕ್ನೋ: ನಡುರಸ್ತೆಯಲ್ಲಿ ಮಹಿಳೆಯೊಬ್ಬಳು ತನ್ನ ಮಾವನಿಗೆ ನಿಷ್ಕರುಣೆಯಿಂದ ಚಪ್ಪಲಿಯಿಂದ ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಮಹಿಳೆ ತನ್ನ ತಂದೆ ಹಾಗೂ ಸಹೋದರನೊಂದಿಗೆ ಮಾವನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ. ಚಪ್ಪಲಿಯಲ್ಲಿ ಥಳಿಸಿದ್ದಲ್ಲದೇ ಕಿಂಚಿತ್ತು ಕರುಣೆ ತೋರದೇ ಮೂವರು ಸೇರಿಕೊಂಡು ವೃದ್ಧನನ್ನು ರಸ್ತೆಯಲ್ಲಿ ಧರಧರನೇ ಎಳೆದೊಯ್ದಿದ್ದಾರೆ. ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ: ಈಶ್ವರ ಖಂಡ್ರೆ ವಾಗ್ದಾಳಿ

    ಈ ಸಂಪೂರ್ಣ ಘಟನೆಯು ಹೆದ್ದಾರಿಯ ನಡುವಿನ ಛೇದಕದಲ್ಲಿ ಪೊಲೀಸ್ ಚೌಕಿಯ ಸಮೀಪ ಸಂಭವಿಸಿದೆ. ವೀಡಿಯೋದಲ್ಲಿ ಸಹೋದರ ನನ್ನ ಸಹೋದರಿಯ ತಪ್ಪು ಏನಿದೆ. ಅವಳನ್ನೆ ಏಕೆ ಹೊಡೆದೆ ಎಂದು ಪದೇ, ಪದೇ ಕೇಳುತ್ತಾ ಹೊಡೆದಿದ್ದಾನೆ. ಈ ವೇಳೆ ಅಸಹಾಯಕನಾದ ವೃದ್ಧ, ತನಗೆ ಬಿಡುವಂತೆ ಅಂಗಲಾಚಿ ಬೇಡಿಕೊಳ್ಳುತ್ತಿದ್ದರು. ಮೂವರು ಸೇರಿಕೊಂಡು ವೃದ್ಧನಿಗೆ ಹೊಡೆದು ಮತ್ತು ಕಾಲಿನಿಂದ ಒದ್ದಿದ್ದಾರೆ.

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಮಹಿಳೆ ಮತ್ತು ಆಕೆಯ ತಂದೆಯನ್ನು ವಶಕ್ಕೆ ಪಡೆದಿದ್ದು, ತಲೆ ಮರೆಸಿಕೊಂಡಿರುವ ಆಕೆಯ ಸಹೋದರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದೀಗ ಗಾಯಗೊಂಡಿರುವ ವೃದ್ಧನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮೈಸೂರು ಉದ್ಯಮಿಯ ಕೊಲೆಗೆ ಕೇಸ್‍ಗೆ ಟ್ವಿಸ್ಟ್ – ತಂದೆಯನ್ನೇ ಬರ್ಬರ ಹತೈಗೈದ 16ರ ಮಗ!

    ಘಟನೆ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಗಾಯಾಳು ಸುಖದೇವ್ ಸಿಂಗ್ ಯಾದವ್ ಅವರ ಪುತ್ರ ಬಬ್ಲು ಯಾದವ್ ಅವರು, ತಮ್ಮ ಕಿರಿಯ ಸಹೋದರ ಕೆಲವು ತಿಂಗಳ ಹಿಂದೆ ಸಾವನ್ನಪ್ಪಿದ್ದು, ಅವರ ಪತ್ನಿ ಪುಷ್ಪಾ, ಸಹೋದರ ಕಮಲೇಶ್ ಮತ್ತು ಅವರ ತಂದೆ ರಾಮ್ ವಿಲಾಸ್ ನಮ್ಮ ತಂದೆಗೆ ಸಂಪೂರ್ಣ ಆಸ್ತಿಯನ್ನು ಪುಷ್ಪಾ ಅವರ ಹೆಸರಿಗೆ ಮಾಡುವಂತೆ ಒತ್ತಾಯಿಸಿದ್ದರು. ನಂತರ ಆಸ್ತಿಯನ್ನು ಹಂಚುವಂತೆ ಒತ್ತಡ ಹೇರಿದ್ದಕ್ಕೆ ನಾನು ಆಸ್ತಿಯನ್ನು ಹಂಚಲು ಸಿದ್ಧನಿಲ್ಲ ಎಂದು ತಿಳಿಸಿದ್ದರು. ಅಲ್ಲದೇ ಆಕೆಗೆ ಇರಲು ಒಂದು ಕೋಣೆಯನ್ನು ಸಹ ನೀಡಲಾಗಿತ್ತು. ಆದರೆ ಅಷ್ಟಕ್ಕೆ ತೃಪ್ತಿ ಕಾಣದೇ, ಮಹಿಳೆ ತನ್ನ ತಂದೆ ಮತ್ತು ಕುಟುಂಬಸ್ಥರನ್ನು ಕರೆಸಿ ನಮ್ಮ ತಂದೆಗೆ ಹೊಡೆಸಿದ್ದಾಳೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆ

    ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆ

    ಕೋಲ್ಕತ್ತಾ: ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಮಹಿಳೆಯೊಬ್ಬರು ಚಪ್ಪಲಿ ಎಸೆದಿರುವ ಘಟನೆ ಇಎಸ್‍ಐ ಆಸ್ಪತ್ರೆಯ ಹೊರಗೆ ನಡೆದಿದೆ.

    ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಪಾರ್ಥ ಮತ್ತು ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಜೋಕಾದಲ್ಲಿರುವ ಆಸ್ಪತ್ರೆಗೆ ಕರೆದೊಯ್ದ ವೇಳೆ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಅಭಿಮಾನಿಯಿಂದ ಒಂದೂವರೆ ಕೆ.ಜಿ ತೂಕದ ಬೆಳ್ಳಿ ಮೂರ್ತಿ ಗಿಫ್ಟ್!

    ಚಪ್ಪಲಿ ಎಸೆದ ನಂತರ ಇಂತಹ ನಾಯಕರು ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ನಾನು ಶೂ ಎಸೆದಿದ್ದೇನೆ. ಔಷಧಿ ಖರೀದಿಸಕಲು ನಾನು ಇಲ್ಲಿಗೆ ಬಂದಿದ್ದೇನೆ. ಆದರೆ ಇವರು ಫ್ಲಾಟ್‍ಗಳು ಮತ್ತು ಎಸಿ ಕಾರುಗಳನ್ನು ಖರೀಸಲು ಬಡವರ ಹಣ ಲೂಟಿ ಮಾಡುತ್ತಿದ್ದಾರೆ. ಅವನನ್ನು ಕಟ್ಟಿ ಹಾಕಿ ಬೀದಿಗೆ ಎಳೆಯಬೇಕು. ಈಗ ನಾನು ನನ್ನ ಬೂಟುಗಳಿಲ್ಲದೇ ಮನೆಗೆ ಹೋಗುತ್ತೇನೆ ಎಂದಿದ್ದಾರೆ.

    ಸೋಮವಾರ ತಮ್ಮ ಫ್ಲಾಟ್‍ನಲ್ಲಿ ದೊರೆತ ಹಣದ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅರ್ಪಿತಾ ಮುಖರ್ಜಿ ಅವರು, ಹಣ ನನ್ನದಲ್ಲ. ಆದರೆ ನನ್ನ ಅನುಪಸ್ಥಿತಿಯಲ್ಲಿ ಹಣವನ್ನು ಅಲ್ಲಿ ಇರಿಸಲಾಗಿತ್ತು ಎಂದು ತಿಳಿಸಿದ್ದರು. ಇದನ್ನೂ ಓದಿ: ಅಲ್‌ಖೈದಾ ಮುಖ್ಯಸ್ಥನ ಹತ್ಯೆ – ಅಮೆರಿಕದ ಡ್ರೋನ್‌ ದಾಳಿ ಖಂಡಿಸಿದ ತಾಲಿಬಾನ್‌

    ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಫ್ಲ್ಯಾಟ್‍ಗಳಲ್ಲಿ 50 ಕೋಟಿಯಷ್ಟು ನಗದು ಪತ್ತೆಯಾಗಿದ್ದು ಇಬ್ಬರನ್ನೂ ಬಂಧಿಸಲಾಗಿದೆ. ಆದರೆ ಪಾರ್ಥ ಅವರು ಹಣ ತಮ್ಮದಲ್ಲ ಎಂದು ಪಟ್ಟು ಹಿಡಿದು ನಿಂತಿದ್ದಾರೆ. ಬಂಗಾಳದ ವಜಾಗೊಂಡ ಸಚಿವ ಪಾರ್ಥ ಚಟರ್ಜಿ ಭಾನುವಾರ ತಮ್ಮ ಆಪ್ತೆ ಅರ್ಪಿತಾ ಮುಖರ್ಜಿಯ ಎರಡು ಅಪಾರ್ಟ್‍ಮೆಂಟ್‍ಗಳಿಂದ ವಶಪಡಿಸಿಕೊಂಡ ಸುಮಾರು 50 ಕೋಟಿ ರೂಪಾಯಿ ಹಣವನ್ನು ನಾಟಕೀಯವಾಗಿ ಅಮರ್ ನೋಯ್, ಅಮರ್ ನಾಯ್, ಅಮರ್ ನೋಯ್ (ನನ್ನದಲ್ಲ, ನನ್ನದಲ್ಲ, ನನ್ನದಲ್ಲ, ನನ್ನದಲ್ಲ) ಎಂದು ನಿರಾಕರಿಸಿದ್ದಾರೆ.

    ಇದೀಗ ಕೋಲ್ಕತ್ತಾದಲ್ಲಿರುವ ಅರ್ಪಿತಾ ಮನೆಯಿಂದ ಜಾರಿ ನಿರ್ದೇಶನಾಲಯ (ಇಡಿ) 50ಕ್ಕೂ ಹೆಚ್ಚು ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದು, ಪಶ್ಚಿಮ ಬಂಗಾಳದ ಎಸ್‍ಎಸ್‍ಸಿ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಥ ಮತ್ತು ಅರ್ಪಿತಾ ಇಬ್ಬರನ್ನೂ ಆಗಸ್ಟ್ 3 ರವರೆಗೆ ಇಡಿ ಕಸ್ಟಡಿಗೆ ಕಳುಹಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬಂಡಿ ಎಳೆಯುವವನಿಗೆ ಹೊಸ ಚಪ್ಪಲಿ ಗಿಫ್ಟ್ ಕೊಟ್ಟ ಪೊಲೀಸ್ – ವೀಡಿಯೋ ನೋಡಿ ನೆಟ್ಟಿಗರು ಫುಲ್ ಖುಷ್

    ಬಂಡಿ ಎಳೆಯುವವನಿಗೆ ಹೊಸ ಚಪ್ಪಲಿ ಗಿಫ್ಟ್ ಕೊಟ್ಟ ಪೊಲೀಸ್ – ವೀಡಿಯೋ ನೋಡಿ ನೆಟ್ಟಿಗರು ಫುಲ್ ಖುಷ್

    ನವದೆಹಲಿ: ಪೊಲೀಸ್‌ ಅಧಿಕಾರಿಯೊಬ್ಬರು ಬಂಡಿ ಎಳೆಯುವವನಿಗೆ ಹೊಸ ಚಪ್ಪಲಿಗಳನ್ನು ಉಡುಗೊರೆಯಾಗಿ ನೀಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.

    ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿ ಶಿವಂಗ್ ಶೇಖರ್ ಗೋಸ್ವಾಮಿ ಈ ಕ್ಲಿಪ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ, ಬಂಡಿ ಎಳೆಯುವವನು ರಸ್ತೆಯಲ್ಲಿ ಬರಿಗಾಲಿನಲ್ಲಿ ನಡೆಯುತ್ತಿರುತ್ತಾನೆ. ಕೆಲವು ಸೆಕೆಂಡುಗಳ ನಂತರ, ಪೊಲೀಸ್ ಅಧಿಕಾರಿಯೊಬ್ಬರು ಆ ವ್ಯಕ್ತಿಗೆ ಹೊಸ ಚಪ್ಪಲಿಗಳನ್ನು ಉಡುಗೊರೆಯಾಗಿ ನೀಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಟ್ರೈನಿ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – IAS ಅಧಿಕಾರಿ ವಶ 

    ವೀಡಿಯೋ ಕೊನೆಯಲ್ಲಿ, ಬಂಡಿ ಎಳೆಯುವವನು ಚಪ್ಪಲಿಯನ್ನು ಹಾಕಿಕೊಂಡು ಪೊಲೀಸ್‍ಗೆ ಧನ್ಯವಾದ ಹೇಳುತ್ತಾನೆ. ಈ ಪೋಸ್ಟ್ ನೋಡಿದ ನೆಟ್ಟಿಗರು, ‘ತುಂಬಾ ಒಳ್ಳೆಯ ಕೆಲಸ,’ ‘ಪೊಲೀಸ್‍ಗೆ ವಂದನೆಗಳು’, ‘ಮಾನುಕುಲಕ್ಕೆ ಸೇವೆ ಸಲ್ಲಿಸುವುದು ಶ್ರೇಷ್ಠವಾಗಿದೆ’, ‘ಗ್ರೇಟ್ ಹ್ಯುಮಾನಿಟಿ ಸರ್. ನಿನಗೆ ನಮಸ್ಕಾರ’ ಎಂದು ಕಾಮೆಂಟ್‍ಗಳ ಸುರಿಮಳೆಯೇ ಬರುತ್ತಿದೆ. ಇನ್ನೂ ಕೆಲವರು ಹಾರ್ಟ್ ಎಮೋಜಿಗಳನ್ನು ಕಾಮೆಂಟ್ ಮಾಡಿದ್ದು, ಪೊಲೀಸ್ ಅಧಿಕಾರಿಯ ಔದಾರ್ಯಯನ್ನು ಹೊಗಳಿದ್ದಾರೆ.

    ಈ ವೀಡಿಯೋ ಟ್ವಿಟ್ಟರ್‌ನಲ್ಲಿ 2,57,000ಕ್ಕೂ ಹೆಚ್ಚು ವ್ಯೂ ಮತ್ತು 17,000ಕ್ಕೂ ಹೆಚ್ಚು ಲೈಕ್‌ಗಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸೀರೆ, ಚಪ್ಪಲಿ ಹರಾಜು?

    ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸೀರೆ, ಚಪ್ಪಲಿ ಹರಾಜು?

    ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಅಕ್ರಮ ಆಸ್ತಿ ಜಪ್ತಿ ಮಾಡಿ 26 ವರ್ಷ ಆಗುತ್ತಿದೆ. ಕರ್ನಾಟಕದ ಖಜಾನೆಯಲ್ಲಿ ಈಗಲೂ ಸೀರೆ, ಚಪ್ಪಲಿ, ಚಿನ್ನಾಭರಣ ಸೇರಿದಂತೆ ಅನೇಕ ವಸ್ತುಗಳಿವೆ. ಈಗ ಜಯಲಲಿತಾ ಅವರ ಸೀರೆ, ಚಪ್ಪಲಿ, ಶಾಲು ಹರಾಜಿಗೆ ಇಡಬೇಕು ಅಂತಾ ಕರ್ನಾಟಕದ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ದಿವಂಗತ ಜಯಲಲಿತಾ ಅವರ ಸೀರೆ, ಚಪ್ಪಲಿ ಎಷ್ಟು ಇತ್ತು? ಹರಾಜಿಗೆ ಇಟ್ಟರೆ ಏನು ಅನುಕೂಲ ಆಗುತ್ತದೆ ಈ ಎಲ್ಲದರ ಮಾಹಿತಿ ಈ ಕೆಳಗಿನಂತಿದೆ.

    karnataka highcourt

    ತಮಿಳುನಾಡಿನ ಮಾಜಿ ಸಿಎಂ ದಿವಂಗತೆ ಜಯಲಲಿತಾ ಮೃತರಾಗಿ ಇಂದಿಗೆ ಆರು ವರ್ಷ. ಮೃತರಾದ ಆರು ವರ್ಷದ ಬಳಿಕ ಅಕ್ರಮ ಆಸ್ತಿ ಗಳಿಕೆಯಲ್ಲಿ ಅವರಿಂದ ವಶಪಡಿಸಿಕೊಂಡಿದ್ದ ವಸ್ತುಗಳು ಈಗ ಚರ್ಚೆಗೆ ಬಂದಿವೆ. ಜಯಲಲಿತಾ ಅವರು 1991-96ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಅಂತ ಆರೋಪಿಸಿ ವಕೀಲ ಸುಬ್ರಮಣಿಯಮ್ ಸ್ವಾಮಿ ದೂರು ನೀಡಿದ್ದರು. ಸಿಬಿಐ 1997ರಲ್ಲಿ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಬಳಿಕ ಆಕ್ರಮ ಆಸ್ತಿಯನ್ನು ಜಪ್ತಿ ಮಾಡಲಾಯಿತು. ರಾಷ್ಟ್ರೀಯ ಸಂಪತ್ತು ಅಂತಾ ಘೋಷಣೆ ಮಾಡಿ ಕರ್ನಾಟಕದ ಖಜಾನೆಯಲ್ಲಿ ಇಡಲಾಯಿತು. 26 ವರ್ಷಗಳಿಂದ ಅವರ ಅವರ ವಸ್ತುಗಳು ಖಜಾನೆಯಲ್ಲಿ ಕೊಳೆಯುತ್ತಾ ಇದ್ದು ನಿಷ್ಪ್ರಯೋಜಕ ಆಗುವುದು ಬೇಡ ಹರಾಜಿಗೆ ಇಟ್ಟರೆ ಅಭಿಮಾನಿಗಳು ತೆಗೆದುಕೊಳ್ಳುತ್ತಾರೆ. ಹರಾಜಿಗೆ ಇಡಲು ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ವಕೀಲ ನರಸಿಂಹ ಮೂರ್ತಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪ್ರೇಯಸಿ ದೂರಾಗಿದ್ದಕ್ಕೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದು ಪ್ರಾಣ ಬಿಟ್ಟ!

    ವಿಧಾನಸೌಧದ ಖಜಾನೆಯಲ್ಲಿ ಜಯಲಲಿತಾರ 11,344 ಸೀರೆ, 750 ಜೊತೆ ಚಪ್ಪಲಿ ಮತ್ತು ೨೫೦ ಶಾಲುಗಳು 26 ವರ್ಷಗಳಿಂದ ಕೊಳೆಯುತ್ತಿವೆ. ಇದನ್ನು ಹಾಗೇ ಬಿಟ್ಟರೆ ನ್ಯಾಷನಲ್ ವ್ಯರ್ಥ ಆಗುತ್ತದೆ. ಇದನ್ನು ಹರಾಜಿಗೆ ಇಟ್ಟರೆ ಅವರ ಅಭಿಮಾನಿಗಳು ಒಂದು ಸಾವಿರ ಅಥವಾ ಹತ್ತು ಸಾವಿರ ಕೊಟ್ಟು ಕೊಂಡುಕೊಳ್ಳುತ್ತಾರೆ. ಇದರಿಂದ ಸರ್ಕಾರಕ್ಕೆ ಆದಾಯ ಬರುತ್ತದೆ. ಏಕೆಂದರೆ ಜಯಲಲಿತಾ ಅವರು ಬದುಕಿಲ್ಲ. ಕೇಸ್ ಇದ್ದರೂ ಕೂಡ ಅವರಿಲ್ಲದ ಕಾರಣ ಏನು ಆಗುವುದಿಲ್ಲ. ಅವರ ಸೀರೆ, ಚಪ್ಪಲಿ, ಶಾಲು ಹರಾಜಿಗೆ ಇಟ್ಟರೆ ಪ್ರಯೋಜನಕ್ಕೆ ಬರುತ್ತದೆ. ಹಾಗಾಗಿ ನಿರ್ದೇಶನಕ್ಕೆ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದೇನೆ. ಆದೇಶ ನೀಡಿದರೆ ಅನುಕೂಲ ಆಗುತ್ತದೆ ಎಂದು ವಕೀಲ ನರಸಿಂಹಮೂರ್ತಿ ಹೇಳಿದ್ದಾರೆ.

    ಅಕ್ರಮ ಆಸ್ತಿ ಕೇಸ್ ವಿಚಾರಣೆಯನ್ನು ಹೊರ ರಾಜ್ಯದಲ್ಲಿ ಮಾಡಿಸಬೇಕು ಅಂತಾ ದೂರುದಾರರು ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಆಗಾಗಿ ಕರ್ನಾಟಕ ರಾಜ್ಯದ ಖಜಾನೆಯಲ್ಲಿ ವಸ್ತುಗಳನ್ನು ಇಟ್ಟು ವಿಚಾರಣೆ ಮಾಡುತ್ತಿದ್ದರು. ವಿಚಾರಣೆ ಹಂತದಲ್ಲಿ ಇರುವಾಗಲೇ ಮೃತರಾದ ಕಾರಣ ವಸ್ತುಗಳನ್ನ ತಮಿಳುನಾಡು ಅಥವಾ ಕರ್ನಾಟಕ ಯಾವ ರಾಜ್ಯದಲ್ಲಾದರೂ ಹರಾಜಿಗೆ ಇಡಲು ಅವಕಾಶ ಮಾಡಿಕೊಡಬೇಕು. ಇದರಿಂದ ಅನುಕೂಲ ಇದೆ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡೀಸೆಲ್ ಕೊರತೆ- ಇಂದು ಸಂಜೆಯೊಳಗೆ ಸಮಸ್ಯೆ ಬಗೆಹರಿಸುತ್ತೇವೆ: BMTC ಎಂಡಿ ಸ್ಪಷ್ಟನೆ

     ಒಟ್ಟಾರೆ ಜಯಲಲಿತಾ ಮೃತಪಟ್ಟಿದ್ದಾರೆ. 26 ವರ್ಷಗಳಿಂದ ಅವರ ವಸ್ತುಗಳು ಖಜಾನೆಯಲ್ಲಿ ಕೊಳೆಯುತ್ತಿವೆ. ನಿಷ್ಪ್ರಯೋಜಕ ಆಗದೇ ಪ್ರಯೋಜನ ಆಗಲಿ ಅಂತಾ ವಸ್ತುಗಳ ಹರಾಜಿಗೆ ವಕೀಲರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ. ಈ ವಕೀಲರ ಮನವಿಯನ್ನು ಪುರಸ್ಕರಿಸಿ ಹರಾಜಿಗೆ ನಿರ್ದೇಶನ ನೀಡುತ್ತಾರಾ ಅಥವಾ ತಟಸ್ಥ ಕಾಯ್ದುಕೊಳ್ಳುತ್ತಾರಾ, ಕಾದು ನೋಡಬೇಕಿದೆ.

    Live Tv

  • ಕುಡಿಯೋಕೆ ಹಣ ಕೊಟ್ಟಿಲ್ಲವೆಂದು ಕೊಲೆ- ಚಪ್ಪಲಿ ಕೊಟ್ಟಿತ್ತು ಹಂತಕರ ಸುಳಿವು

    ಕುಡಿಯೋಕೆ ಹಣ ಕೊಟ್ಟಿಲ್ಲವೆಂದು ಕೊಲೆ- ಚಪ್ಪಲಿ ಕೊಟ್ಟಿತ್ತು ಹಂತಕರ ಸುಳಿವು

    ಕಲಬುರಗಿ: ಕೊಲೆ ಮಾಡಿ ಪರರಿಯಾದ ಹಂತಕರ ಸುಳಿವನ್ನು ಚಪ್ಪಲಿಯೊಂದು ನೀಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಆರೋಪಿಗಳನ್ನು ಜಿತೇಶ್, ಕೇವಲ ಹಾಗೂ ಪ್ರೇಮ್ ಎಂದು ಗುರುತಿಸಲಾಗಿದೆ. ಕೊಲೆ ಮಾಡಿ ಚಪ್ಪಲಿ ಬಿಟ್ಟು ಹೋಗಿ ಲಾಕ್ ಇದೀಗ ಇವರು ಆಗಿದ್ದಾರೆ. ಈ ಮೂವರು ಆರೋಪಿಗಳನ್ನು ಎಮ್ ಬಿ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕುಡಿಯೋಕೆ ದುಡ್ಡು ಕೊಟ್ಟಿಲ್ಲ ಅಂತಾ ಮಹಮದ್ ಕರೀಮ್‍ನನ್ನ ಕೊಲೆ ಮಾಡಿದ್ದರು. ಇದನ್ನೂ ಓದಿ: ಪತಿ ಜೊತೆ ಬಳೆ ಖರೀದಿಸಲು ಹೋದವಳು ಲವ್ವರ್ ಜೊತೆ ಜೂಟ್

    ಜೂನ್ 11 ರಂದು ಗುಬ್ಬಿ ಕಾಲೋನಿಯ ಕೋಸಗಿ ಲೇಔಟ್ ನಲ್ಲಿ ಮಹಮದ್ ಕರೀಂ ನನ್ನ ಕೊಲೆ ಮಾಡಲಾಗಿತ್ತು. ಜೂನ್ 10 ರ ರಾತ್ರಿ ಕಂಠಪೂರ್ತಿ ಕುಡಿದಿದ್ದ ಜಿತೇಶ್, ಕೇವಲ ಹಾಗೂ ಪ್ರೇಮ್ ಮತ್ತೆ ಕುಡಿಯೋಕೆ ಹಣ ಇಲ್ಲದೆ ಇದ್ದಾಗ ರಸ್ತೆಯಲ್ಲಿ ಹೋಗುವವರ ಬಳಿ ಸುಲಿಗೆ ಮಾಡೋದಕ್ಕೆ ಮುಂದಾಗಿದ್ದರು. ಇದೇ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಮೊಹಮ್ಮದ್ ಕರೀಂನನ್ನ ಹಿಡಿದು ಹಣ ನೀಡುವಂತೆ ಪೀಡಿಸಿದ್ದಾರೆ. ಹಣ ಕೊಡದೆ ಇದ್ದಾಗ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು.

    ಕೊಲೆ ಮಾಡಿದ ಬಳಿಕ ಹಂತಕ ಜಿತೇಶ್ ಚಪ್ಪಲಿ ಶವದ ಪಕ್ಕದಲ್ಲೇ ಬಿಟ್ಟು ಹೋಗಿದ್ದ. ಅಪರಿಚಿತ ಶವದ ಪತ್ತೆಗಾಗಿ ಹುಡುಕಾಡುವಾಗ ಹಂತಕರು ಸುಳಿವನ್ನು ಚಪ್ಪಲಿ ನೀಡಿದೆ. ಕೊಲೆಯ ಹಿಂದಿನ ದಿನ ಬಾರ್ ವೊಂದರಲ್ಲಿ ಜಿತೇಶ್ ಚಪ್ಪಲಿ ಧರಿಸಿ ಹೋಗಿದ್ದನು. ಇದನ್ನೂ ಓದಿ: ಸ್ಕೂಲ್ ಡೇಸ್‍ನಿಂದ ಪ್ರೀತಿಸಿದವಳ ಮೇಲೆ ಗುಂಡು ಹಾರಿಸಿದ – ಯುವತಿಗೆ ಗಂಭೀರ ಗಾಯ

    ಕೊಲೆಯ ಬಳಿಕ ಸಿಸಿಟವಿ ದೃಶ್ಯ ಪರಿಶೀಲಿಸುವ ವೇಳೆ ಕೊಲೆಯಾದ ಸ್ಥಳದಲ್ಲಿ ಸಿಕ್ಕ ಚಪ್ಪಲಿ ಧರಿಸಿ ಬಾರ್ ಒಳಗೆ ಹೋಗುತ್ತಿರುವ ವ್ಯಕ್ತಿಯ ಚಹರೆ ಗುರುತು ಹಿಡಿದು ಆರೋಪಿಗಳನ್ನು ಬಂಧಿಸಲಾಗಿದೆ.

    Live Tv

  • ಐಪಿಎಲ್‍ನಿಂದ ಔಟ್ ಆಗಿದ್ದ ಅಂಪೈರ್ ಅಸಾದ್ ರೌಫ್ ಇದೀಗ ಪಾಕ್‍ನಲ್ಲಿ ಚಪ್ಪಲಿ ವ್ಯಾಪಾರಿ

    ಐಪಿಎಲ್‍ನಿಂದ ಔಟ್ ಆಗಿದ್ದ ಅಂಪೈರ್ ಅಸಾದ್ ರೌಫ್ ಇದೀಗ ಪಾಕ್‍ನಲ್ಲಿ ಚಪ್ಪಲಿ ವ್ಯಾಪಾರಿ

    ಇಸ್ಲಾಮಾಬಾದ್: ಐಸಿಸಿಯ ಎಲೈಟ್ ಪ್ಯಾನೆಲ್ ಅಂಪೈರ್ ಆಗಿ ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿದ್ದ ಪಾಕಿಸ್ತಾನದ ಅಸಾದ್ ರೌಫ್ ಇದೀಗ ಲಾಹೋರ್‌ನ ಲಾಂಡಾ ಬಜಾರ್‌ನಲ್ಲಿ ಚಪ್ಪಲಿ, ಬಟ್ಟೆ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿರುವ ಬಗ್ಗೆ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

    ರೌಫ್ ಅಂತಾರಾಷ್ಟ್ರೀಯ ಪಂದ್ಯಗಳ ಅಂಪೈರ್ ಅಲ್ಲದೇ ಐಪಿಎಲ್‍ನಲ್ಲೂ ಕೂಡ ಅಂಪೈರ್ ಆಗಿ ಕೆಲಸ ನಿರ್ವಹಿಸಿದ್ದರು. ಆದರೆ ಸುಮ್ಮನೆ ಅಂಪೈರಿಂಗ್ ಮಾಡುತ್ತಿದ್ದರೇ ಅಸಾದ್ ರೌಫ್‍ಗೆ ಇದೀಗ ಈ ಪರಿಸ್ಥಿತಿ ಬರುತ್ತಿರಲಿಲ್ಲ. ರೌಫ್ 2013ರ ಐಪಿಎಲ್‍ನಲ್ಲಿ ಬುಕ್ಕಿಗಳೊಂದಿಗೆ ಸಂಪರ್ಕಿಸಿ ದುಬಾರಿ ಉಡುಗೊರೆ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಬಳಿಕ ವಿಚಾರಣೆ ನಡೆಸಿದ ಐಸಿಸಿಯ ಶಿಸ್ತು ಸಮಿತಿ ಆರೋಪ ಸಾಭೀತಾದ ಬಳಿಕ ರೌಫ್‍ರನ್ನು 2016ರ ನಂತರ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಪಂದ್ಯಗಳ ಅಂಪೈರಿಂಗ್‍ಗೆ ನಿಷೇಧ ಹೇರಿತ್ತು. ಈ ಮೂಲಕ ಅಸಾದ್ ರೌಫ್ ಅಂಪೈರ್ ವೃತ್ತಿ ಅಂತ್ಯ ಕಂಡಿತು. ಇದನ್ನೂ ಓದಿ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ರಣಜಿ ಟ್ರೋಫಿಯಲ್ಲಿ DRS ಬಳಸಲು ಹಣವಿಲ್ಲ!

    ಈ ಮೊದಲು ಮುಂಬೈ ಮೂಲದ ಮಾಡೆಲ್‍ಗೆ ಲೈಗಿಂಕ ಕಿರುಕುಳ ನೀಡಿ ಮದುವೆ ಆಗುವುದಾಗಿ ಮೋಸ ಮಾಡಿದ್ದಾರೆ ಎಂಬ ಆರೋಪ ಕೂಡ ರೌಫ್ ಮೇಲೆ ಕೇಳಿಬಂದಿತ್ತು. ರೌಫ್‌ ಈ ಆರೋಪ ಸುಳ್ಳು ಎಂದು ಅಲ್ಲಗಳೆದಿದ್ದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ಹಿಟ್‌ಮ್ಯಾನ್ – ಭಾವುಕ ಪತ್ರ ಬರೆದ ರೋಹಿತ್ ಶರ್ಮಾ

    ಅಸಾದ್ ರೌಫ್ 2000 ರಿಂದ 2013 ರವರೆಗೆ 49 ಟೆಸ್ಟ್, 98 ಏಕದಿನ ಪಂದ್ಯ ಮತ್ತು 23 ಟಿ20 ಪಂದ್ಯಗಳು ಸೇರಿ ಒಟ್ಟು 170 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಅಂಪೈರ್ ವೃತ್ತಿ ತೊರೆದು ಲಾಹೋರ್‌ನ ಲಾಂಡಾ ಬಜಾರ್‌ನಲ್ಲಿ ಅಂಗಡಿಯನ್ನು ತೆರೆದು ಬಟ್ಟೆ, ಚಪ್ಪಲಿ, ಶೂ ವ್ಯಾಪಾರ ಮಾಡುತ್ತಿದ್ದಾರೆ.

    ಲಾಹೋರ್‌ನಲ್ಲಿ ಲಾಂಡಾ ಬಜಾರ್ ಕಡಿಮೆ ಬೆಲೆಗೆ ಬಟ್ಟೆ, ಚಪ್ಪಲಿಗಳು ಮತ್ತು ಇತರ ಸರಕುಗಳು ಸಿಗುವ ಸ್ಥಳವಾಗಿದೆ. ಲಾಂಡಾ ಬಜಾರ್‌ನಲ್ಲಿರುವ ಕೆಲವು ಅಂಗಡಿಗಳು ಸೆಕೆಂಡ್ ಹ್ಯಾಂಡ್ ಸರಕುಗಳ ಮಾರಾಟಕ್ಕೆ ಪ್ರಸಿದ್ಧಿ ಪಡೆದಿದೆ. ಇದೀಗ ಈ ಸ್ಥಲದಲ್ಲಿ ಅಸಾದ್ ರೌಫ್ ಬಟ್ಟೆ, ಚಪ್ಪಲಿ, ಶೂಗಳನ್ನು ಮಾರಾಟ ಮಾಡುವ ಅಂಗಡಿ ಇಟ್ಟಿದ್ದಾರೆ.

    Live Tv

  • ಕಾರ್ಯವೈಖರಿ ಪ್ರಶ್ನಿಸಿದ ಗ್ರಾಮಸ್ಥರ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಮುಂದಾದ ಗ್ರಾ.ಪ ಅಧ್ಯಕ್ಷೆ

    ಕಾರ್ಯವೈಖರಿ ಪ್ರಶ್ನಿಸಿದ ಗ್ರಾಮಸ್ಥರ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಮುಂದಾದ ಗ್ರಾ.ಪ ಅಧ್ಯಕ್ಷೆ

    ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ತೋರಣದಿನ್ನಿ ಗ್ರಾಮ ಪಂಚಾಯತಿ ಅಧ್ಯಕ್ಷೆ ತಮ್ಮ ಕಾರ್ಯವೈಖರಿಯನ್ನು ಪ್ರಶ್ನೆ ಮಾಡಿದ್ದಕ್ಕೆ ಗ್ರಾಮಸ್ಥರ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಲು ಮುಂದಾದ ಘಟನೆ ನಡೆದಿದೆ.

    ಗ್ರಾಮದ ಕಸ ವಿಲೆವಾರಿ ವಾಹನದ ಚಾಲಕ ಹುದ್ದೆ ನೇಮಕ ವಿಚಾರದಲ್ಲಿ ಗಲಾಟೆ ನಡೆದಿದೆ. ಅಧ್ಯಕ್ಷೆ ಚಂದಮ್ಮ ತಮ್ಮ ಸಂಬಂಧಿಯನ್ನೇ ಅನಧಿಕೃತವಾಗಿ ನೇಮಿಸಿಕೊಂಡಿದ್ದಕ್ಕೆ ಗ್ರಾಮಸ್ಥರು ಪ್ರಶ್ನಿಸಿದ್ದರು. ಇದಕ್ಕೆ ಸಿಟ್ಟಾದ ಅಧ್ಯಕ್ಷೆ ಚಂದಮ್ಮ ಗ್ರಾಮ ಪಂಚಾಯತಿ ಕಚೇರಿ ಹೊರಗಡೆಯೇ ಚಪ್ಪಲಿ ಹಿಡಿದು ಜಗಳ ಮಾಡಿದ್ದಾರೆ. ಪ್ರಶ್ನೆ ಮಾಡಿದ ಬಸವರಾಜ್ ಅವರ ಕಾಲರ್ ಹಿಡಿದು ದರ್ಪ ಮೆರೆದಿದ್ದಾರೆ. ಇದನ್ನೂ ಓದಿ: 6 ವರ್ಷದ ಹಿಂದೆ ಮದುವೆ- 4ನೇ ಪತ್ನಿಗೆ ಡಿವೋರ್ಸ್ ಕೊಟ್ಟ 91ರ ರೂಪರ್ಟ್ ಮುರ್ಡೋಕ್

    ಗ್ರಾಮ ಪಂಚಾಯಿತಿ ಅಧ್ಯಕ್ಷರು ಪತಿಯೊಂದಿಗೆ ಸೇರಿ ಸಾರ್ವಜನಿಕರ ಮೇಲೆ ಅಧಿಕಾರ ದರ್ಪ ತೋರಿಸುತ್ತಿದ್ದಾರೆ. ತಮ್ಮ ಅಧಿಕಾರವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಂತ ಇದೀಗ ಗ್ರಾಮಸ್ಥರು ಆರೋಪಿಸಿ ಗ್ರಾಮ ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಇದನ್ನೂ ಓದಿ: ಹೊಳೆನರಸೀಪುರ ತಾಲೂಕಿನಲ್ಲಿ 3.4 ತೀವ್ರತೆಯ ಭೂಕಂಪ – ಭಯಪಡುವ ಅಗತ್ಯವಿಲ್ಲ ಎಂದ KSNDMC

    Live Tv

  • ಮೈ ಮೇಲೆ ಕೆಸರು ಹಾರಿಸಿದ್ದಕ್ಕೆ ಬಸ್ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ

    ಮೈ ಮೇಲೆ ಕೆಸರು ಹಾರಿಸಿದ್ದಕ್ಕೆ ಬಸ್ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ

    ರಾಯಚೂರು: ಕೆಸರು ಮೈ ಮೇಲೆ ಹಾರಿದೆ ಎಂದು ಬಸ್ ಚಾಲಕನ  ಮೇಲೆ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಹಲ್ಲೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

    ರಾಯಚೂರಿನ ಮಸ್ಕಿ ತಾಲೂಕಿನ ಪರಸಾಪುರ ಬಳಿ ಬಸ್ ಚಾಲಕ ಕೆಸರಿದ್ದ ರಸ್ತೆ ಮೇಲೆ ಬಸ್ ಚಲಾಯಿಸಿದ ವೇಳೆ ಅಲ್ಲೇ ಇದ್ದ ಪಿ.ಗೌಡರ ಮೇಲೆ ಕೆಸರು ಹಾರಿದೆ. ಇದರಿಂದ ಸಿಟ್ಟಿಗೆದ್ದ ಗೌಡ, ಕೆಸರಿನ ಮೇಲೆ ಬಸ್ ಚಲಾಯಿಸಿದ್ದಕ್ಕೆ ಕೆಸರು ತನ್ನ ಬಟ್ಟೆಗೆಲ್ಲಾ ಮೆತ್ತಿದೆ ಎಂದು ಗಲಾಟೆ ಮಾಡಿದ್ದಾನೆ.

    ಮಾತಿಗೆ ಮಾತು ಬೆಳೆದು ಗೌಡ ತನ್ನ ಚಪ್ಪಲಿಯಿಂದ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ರಾಯಚೂರು ವಿಭಾಗದ ಮಸ್ಕಿ ಘಟಕದ ಬಸ್ ಇದಾಗಿದ್ದು, ಸಾರ್ವಜನಿಕರ ಎದುರೇ ಚಪ್ಪಲಿಯಿಂದ ಚಾಲಕನ ಮೇಲೆ ಹಲ್ಲೆ ನಡೆದಿದೆ. ಇದನ್ನೂ ಓದಿ: ಆಜಾನ್ ವಿರುದ್ಧ ಆರತಿ, ಹನುಮಾನ್ ಚಾಲೀಸಾ ಪಠಿಸಲು ಹಿಂದೂಪರ ಸಂಘಟನೆಗಳ ನಿರ್ಧಾರ

    ಘಟನೆಯಿಂದ ಅವಮಾನಿತನಾದ ಬಸ್ ಚಾಲಕ ಮಸ್ಕಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಆದರೆ ಪೊಲೀಸರು ಇಬ್ಬರಿಗೂ ರಾಜಿ ಮಾಡಿಸಿ ದೂರು ದಾಖಲಿಸಿಕೊಂಡಿಲ್ಲ. ಇದರಿಂದ ಚಾಲಕ ಬೇಸರ ವ್ಯಕ್ತಪಡಿಸಿದ್ದಾರೆ.

  • ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ಮೇಲೆಯೇ ಚಪ್ಪಲಿ ಎಸೆದ ಅತ್ಯಾಚಾರ ಅಪರಾಧಿ!

    ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ಮೇಲೆಯೇ ಚಪ್ಪಲಿ ಎಸೆದ ಅತ್ಯಾಚಾರ ಅಪರಾಧಿ!

    ಗಾಂಧೀನಗರ: ಅತ್ಯಾಚಾರ ಹಾಗೂ ಕೊಲೆ ಆರೋಪ ಸಾಬೀತಾದ ಹಿನ್ನೆಲೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ಮೇಲೆಯೇ ಅಪರಾಧಿ ಚಪ್ಪಲಿ ಎಸೆದ ಘಟನೆ ಗುಜರಾತ್‌ನ ಸೂರತ್‌ ಕೋರ್ಟ್‌ನಲ್ಲಿ ನಡೆದಿದೆ.

    ವಿಶೇಷ ಪೋಕ್ಸೊ ನ್ಯಾಯಾಧೀಶ ಪಿ.ಎಸ್‌.ಕಾಳ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟಿಸುತ್ತಿದ್ದರು. ಈ ವೇಳೆ ಕೋಪಗೊಂಡ ಅಪರಾಧಿ ಸುಜಿತ್‌ ಸಾಕತ್‌, ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿದ್ದಾನೆ. ಗುರಿ ತಪ್ಪಿದ ಚಪ್ಪಲಿ ಸಾಕ್ಷಿ ಪೆಟ್ಟಿಗೆ ಬಳಿ ಬಿದ್ದಿದೆ. ಇದನ್ನೂ ಓದಿ: ವಿಮಾನ ಮತ್ತು ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತ ಬಳಸಿ – ಸರ್ಕಾರ ಆದೇಶ

    ಅಪರಾಧಿ ಮಧ್ಯಪ್ರದೇಶ ಮೂಲದವನಾಗಿದ್ದು, ಏ.30 ರಂದು ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಕೊಲೆಯಾದ ಬಾಲಕಿ ವಲಸೆ ಕಾರ್ಮಿಕರ ಮಗಳಾಗಿದ್ದಳು. ಮನೆಯಲ್ಲಿ ಒಬ್ಬಳೇ ಇದ್ದಾಗ ಚಾಕೊಲೇಟ್‌ ಕೊಡಿಸುವ ಆಸೆ ತೋರಿಸಿ ಬಾಲಕಿಯನ್ನು ಅಪಹರಿಸಿದ್ದ.

    jail

    ಜನನಿಬಿಡ ಪ್ರದೇಶಕ್ಕೆ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸಾಕ್ಷಿಗಳನ್ನು ಆಧರಿಸಿ ಅಪರಾಧಿಗೆ ಕೋರ್ಟ್‌ ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ದೆಹಲಿ, ಮುಂಬೈನಲ್ಲಿ ಶುರುವಾಯ್ತಾ ಕೊರೊನಾ ಮೂರನೇ ಅಲೆ?