Tag: ಚಪ್ಪಲಿ

  • ಸಲ್ಮಾನ್ ಮದ್ವೆ ಆಗೋವರೆಗೂ ಚಪ್ಪಲಿ ಹಾಕಲ್ಲ ಎಂದ ರಾಖಿ ಸಾವಂತ್

    ಸಲ್ಮಾನ್ ಮದ್ವೆ ಆಗೋವರೆಗೂ ಚಪ್ಪಲಿ ಹಾಕಲ್ಲ ಎಂದ ರಾಖಿ ಸಾವಂತ್

    ಬಾಲಿವುಡ್ ನಟ ಸಲ್ಮಾನ್ ಖಾನ್ ಮೇಲೆ ನಟಿ ರಾಖಿ ಸಾವಂತ್ (Rakhi Sawant) ಗೆ ಎಲ್ಲಿಲ್ಲದ ಅಭಿಮಾನ ಮತ್ತು ಪ್ರೀತಿ. ರಾಖಿಯ ಕಷ್ಟದ ದಿನಗಳಲ್ಲಿ ಸಲ್ಮಾನ್ (Salman Khan) ಕೈ ಹಿಡಿದಿದ್ದರು ಎನ್ನುವ ಕಾರಣಕ್ಕಾಗಿ ಸಲ್ಮಾನ್ ಪರ ಬ್ಯಾಟಿಂಗ್ ಮಾಡುತ್ತಲೇ ಇರುತ್ತಾರೆ. ಈ ಬಾರಿ ಸಲ್ಮಾನ್ ಮದುವೆ ಕುರಿತಾಗಿ ರಾಖಿ ಮಾತನಾಡಿದ್ದಾರೆ.

    ವಿಮಾನ ನಿಲ್ದಾಣಕ್ಕೆ ಬರಿಗಾಲಿನಲ್ಲಿ ಆಗಮಿಸಿದ್ದ ರಾಖಿ ಸಾವಂತ್, ಏಕೆ ಹೀಗೆ ಎಂಬ ಪ್ರಶ್ನೆ ಎದುರಾಯಿತು. ಯಾಕೆ ಚಪ್ಪಲಿ (Chappali) ಹಾಕಿಲ್ಲ ಎಂಬ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿರುವ ರಾಖಿ, ‘ನಾನು ಸಲ್ಮಾನ್ ಖಾನ್ ಮದುವೆ ಆಗೋವರೆಗೂ ಚಪ್ಪಲಿ ಹಾಕಬಾರದು ಎನ್ನುವ ನಿರ್ಧಾರಕ್ಕೆ ಬಂದಿರುವೆ.  ಆ ರೀತಿ ಶಪಥ ಮಾಡಿರುವೆ’ ಎಂದಿದ್ದಾರೆ. ಈ ಮೂಲಕ ಅಚ್ಚರಿ ಮೂಡಿಸಿದ್ದಾರೆ.  ಇದನ್ನೂ ಓದಿ:ಕೊನೆಗೂ ತನ್ನ ಮಗುವಿನ ತಂದೆ ಬಗ್ಗೆ ಗುಟ್ಟು ರಟ್ಟು ಮಾಡಿದ ಇಲಿಯಾನಾ

    ಸಲ್ಮಾನ್ ಖಾನ್ ಪರವಾಗಿ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ ಎನ್ನುವ ಕಾರಣಕ್ಕಾಗಿ ಲಾರೆನ್ಸ್ ಬಿಷ್ಣೋಯ್ ಟೀಮ್ ನಿಂದ ತಮಗೆ ಬೆದರಿಕೆ ಕರೆ ಬಂದಿದೆ ಎಂದು ರಾಖಿ ಹೇಳಿದ್ದರು. ಈ ಕುರಿತು  ಅವರು ಮಾಹಿತಿಯನ್ನು ಹಂಚಿಕೊಂಡಿದ್ದರು. ಸಲ್ಮಾನ್ ವಿಚಾರವಾಗಿ ಮೂಗು ತೂರಿಸಿದಂತೆ ರಾಖಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಎಚ್ಚರಿಕೆ ನೀಡಿದೆ ಎಂದು ರಾಖಿ ಹೇಳಿಕೊಂಡಿದ್ದರು.

     

    ಸಲ್ಮಾನ್ ಖಾನ್ ಬೆಂಬಲಿಸಿದ್ದರ ಪರಿಣಾಮ ತಮಗೆ ಜೀವ ಬೆದರಿಕೆಯಿದ್ದು, ತಾವು ಹೆಲ್ಮೆಟ್ ಧರಿಸಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ ಎಂದು ರಾಖಿ ಹೇಳಿಕೊಂಡಿದ್ದರು. ಹೆಲ್ಮೆಟ್ ಧರಿಸಿಯು ರಸ್ತೆಗೆ ಇಳಿದಿದ್ದರು. ಇದೀಗ ಮದುವೆ ವಿಚಾರವಾಗಿ ಮಾತನಾಡಿದ್ದಾರೆ. ಈ ಮಾತನ್ನು ಎಷ್ಟು ದಿನ ಉಳಿಸಿಕೊಳ್ಳುತ್ತಾರೋ ಸಲ್ಮಾನ್ ಖಾನ್‍ ನೇ ಬಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಪ್ಪಲಿಯಲ್ಲಿ 1 ಕೆಜಿ ಚಿನ್ನ ತಂದು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ

    ಚಪ್ಪಲಿಯಲ್ಲಿ 1 ಕೆಜಿ ಚಿನ್ನ ತಂದು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ

    ಬೆಂಗಳೂರು: ಚಪ್ಪಲಿಯಲ್ಲಿ (Slipper) ಅಕ್ರಮವಾಗಿ ಬರೋಬ್ಬರಿ 1.2 ಕೆ.ಜಿ ತೂಕದ ಚಿನ್ನವನ್ನು (Gold) ತಂದಿದ್ದ ವ್ಯಕ್ತಿಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Bengaluru Airport) ಬಂಧಿಸಲಾಗಿದೆ.

    ಚಪ್ಪಲಿಯಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದನ್ನು ಕಂಡು ಕಸ್ಟಮ್ಸ್ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಇಂಹ ಉಪಾಯಗಳನ್ನು ಬಳಸಿ ಮತ್ತೆ ಕಳ್ಳಸಾಗಣೆ (Gold Smuggling) ನಡೆಯದಂತೆ ಅಧಿಕಾರಿಗಳು ಇದೀಗ ವಿಮಾನದಲ್ಲಿ ಪ್ರಯಾಣಿಸುವವರ ಚಪ್ಪಲಿಗಳನ್ನು ಅತ್ಯಂತ ಜಾಗರೂಕರಾಗಿ ಪರಿಶೀಲಿಸುತ್ತಿದ್ದಾರೆ.

    ವರದಿಗಳ ಪ್ರಕಾರ ಮಾರ್ಚ್ 12 ರಂದು ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನನ್ನು ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ಅಧಿಕಾರಿಗಳು ತಡೆದಿದ್ದರು. ಆತನ ಬಳಿ ಪ್ರಯಾಣದ ಉದ್ದೇಶವನ್ನು ಕೇಳಿದಾಗ ಆತ ವೈದ್ಯಕೀಯ ಉದ್ದೇಶಕ್ಕೆ ಪ್ರಯಾಣಿಸುತ್ತಿರುವುದಾಗಿ ತಿಳಿಸಿದ್ದ. ಇದನ್ನೂ ಓದಿ:  ಯುವಕನ ಹೊಟ್ಟೆಯಿಂದ 56 ಬ್ಲೇಡ್‍ಗಳನ್ನು ಹೊರತೆಗೆದ ವೈದ್ಯರು!

    ಈ ವ್ಯಕ್ತಿ ಯಾವುದೇ ವೈದ್ಯಕೀಯ ದಾಖಲೆಗಳನ್ನು ನೀಡಲು ವಿಫಲನಾಗಿದ್ದಾನೆ. ಇದರಿಂದ ಅನುಮಾನಗೊಂಡ ಅಧಿಕಾರಿಗಳು ಆತನನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆತನ ಚಪ್ಪಲಿಯಲ್ಲಿ ಗುಳಿಗಳನ್ನು ರಚಿಸಿ, ಚಿನ್ನದ ಗಟ್ಟಿಗಳನ್ನು ಹುದುಗಿಸಿಟ್ಟಿರುವುದು ಕಂಡುಬಂದಿದೆ. ಅಧಿಕಾರಿಗಳು ಒಂದು ಜೊತೆ ಚಪ್ಪಲಿಯಲ್ಲಿ ಒಟ್ಟು 4 ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.

    ಅಧಿಕಾರಿಗಳು ವ್ಯಕ್ತಿಯ ಬಳಿಯಿಂದ ಒಟ್ಟು 69.40 ಲಕ್ಷ ರೂ. ಮೌಲ್ಯದ 24 ಕ್ಯಾರೆಟ್ ಶುದ್ಧತೆಯ ಸುಮಾರು 1.2 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಶಾಸಕ ಅಭಯ್ ಪಾಟೀಲ್‍ರಿಂದ ಶಾಲಾ ಮಕ್ಕಳಿಗೆ ಐಸ್‍ಕ್ರೀಂ ವಿತರಣೆ

  • ಮನೆ ಮುಂದೆ ಚಪ್ಪಲಿ ಇಟ್ಟಿದ್ದಕ್ಕೆ ದಂಪತಿಯಿಂದ ವ್ಯಕ್ತಿ ಕೊಲೆ

    ಮನೆ ಮುಂದೆ ಚಪ್ಪಲಿ ಇಟ್ಟಿದ್ದಕ್ಕೆ ದಂಪತಿಯಿಂದ ವ್ಯಕ್ತಿ ಕೊಲೆ

    ಮುಂಬೈ: ನೆರೆ ಮನೆಯ ವ್ಯಕ್ತಿಯೊಬ್ಬ (Neighbour) ತಮ್ಮ ಮನೆಯ ಬಾಗಿಲ (Door) ಬಳಿ ಚಪ್ಪಲಿ ಇಟ್ಟಿದ್ದಕ್ಕೆ ದಂಪತಿ ಸೇರಿ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಥಾಣೆಯ ನಯಾ ನಗರದಲ್ಲಿ ನಡೆದಿದೆ.

    ಅಪ್ಸರ್ ಖಾತ್ರಿ (54) ಮೃತ ವ್ಯಕ್ತಿ. ಮನೆಯ ಬಾಗಿಲ ಬಳಿ ಚಪ್ಪಲಿಗಳನ್ನು (Slipper) ಇಡುತ್ತಿದ್ದಾರೆ ಎಂದು ದಂಪತಿ ಹಾಗೂ ಅಪ್ಸರ್ ಖಾತ್ರಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದು ಅತಿರೇಕಕ್ಕೆ ಹೋಗಿ ಅಪ್ಸರ್ ಹಾಗೂ ದಂಪತಿ ಮಧ್ಯೆ ಹೊಡೆದಾಟ ನಡೆದಿದೆ.

    ಘಟನೆ ವೇಳೆ ಗಂಭೀರ ಗಾಯಗೊಂಡಿದ್ದ ಅಪ್ಸರ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್ ಮಾಡಲು ಮನೆಗೆ ಹೋದ ಪೊಲೀಸರು – ಎಷ್ಟು ಹುಡುಕಿದ್ರೂ ಪತ್ತೆಯಾಗ್ಲಿಲ್ಲ ಪಾಕ್ ಮಾಜಿ ಪಿಎಂ

    ಘಟನೆಗೆ ಸಂಬಂಧಿಸಿ ನಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಕೊಲೆ ಮಾಡಿರುವ ಆರೋಪಿ ಪರಾರಿಯಾಗಿದ್ದು, ಆರೋಪಿ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಪತ್ರ ಬರೆದ 8 ಪಕ್ಷಗಳು – ಏನಿದೆ ಅದರಲ್ಲಿ? – ಪತ್ರ ಬರೆದವರಿಂದ ದೂರ ಉಳಿದ ಕಾಂಗ್ರೆಸ್‌

  • 1.77 ಕೋಟಿಗೆ ಸೇಲ್ ಆಯ್ತು 1970ರ ದಶಕದ ಸ್ಟೀವ್ ಜಾಬ್ಸ್ ಚಪ್ಪಲಿ

    1.77 ಕೋಟಿಗೆ ಸೇಲ್ ಆಯ್ತು 1970ರ ದಶಕದ ಸ್ಟೀವ್ ಜಾಬ್ಸ್ ಚಪ್ಪಲಿ

    ವಾಷಿಂಗ್ಟನ್: ಆಪಲ್ ಕಂಪನಿಯ ಸಹ-ಸಂಸ್ಥಾಪಕ (Apple co-founder) ಸ್ಟೀವ್ ಜಾಬ್ಸ್ (Steve Jobs) ಅವರು ಧರಿಸುತ್ತಿದ್ದ ಕಂದು ಬಣ್ಣದ ಲೆದರ್ ಚಪ್ಪಲಿ 1.77 ಕೋಟಿಗೆ ($218,750) ಮಾರಾಟವಾಗಿದೆ ಎಂದು ಹರಾಜು (Auctions) ಕಂಪನಿ ಜೂಲಿಯನ್ಸ್ (Julien’s) ತಿಳಿಸಿದೆ.

    ನವೆಂಬರ್ 11 ರಿಂದ ನೇರ ಪ್ರಸಾರವಾದ ಹರಾಜು ಪ್ರಕ್ರಿಯೆ ನವೆಂಬರ್ 13ಕ್ಕೆ ಮುಕ್ತಾಯವಾಯಿತು. ಒಂದು ಜೊತೆ ಕಂದು ಬಣ್ಣದ (Brown Suede) ಸ್ಯೂಡ್ ಲೆದರ್ ಬರ್ಕೆನ್‍ಸ್ಟಾಕ್ ಅರಿಜೋನಾ ಚಪ್ಪಲಿಯನ್ನು (Leather Birkenstock Arizona sandals) ಸ್ಟೀವ್ ಜಾಬ್ಸ್ ಅವರು ಧರಿಸುತ್ತಿದ್ದರು. 1970ರ ಮತ್ತು 1980ರ ದಶಕದಲ್ಲಿ ಸ್ಟೀವ್ ಜಾಬ್ಸ್ ಈ ಚಪ್ಪಲಿಯನ್ನು ಧರಿಸುತ್ತಿದ್ದರು. ಈ ಒಂದು ಜೊತೆ ಚಪ್ಪಲಿ, ಹಿಂದೆ ಸ್ಟೀವ್ ಜಾಬ್ಸ್ ಅವರ ಮನೆ ನಿರ್ವಾಹಕ ಆಗಿದ್ದ ಮಾರ್ಕ್ ಶೆಫ್ ಅವರ ಬಳಿ ಇತ್ತು.

    ಹರಾಜು ಮನೆಯ ವೆಬ್‍ಸೈಟ್‍ನಲ್ಲಿನ ವಿವರಗಳ ಪ್ರಕಾರ, ಆಪಲ್ ಕಂಪನಿಯ ಇತಿಹಾಸದಲ್ಲಿ ಅನೇಕ ಪ್ರಮುಖ ಕ್ಷಣಗಳಲ್ಲಿ ಸ್ಟೀವ್ ಜಾಬ್ಸ್ ಈ ಚಪ್ಪಲಿಗಳನ್ನು ಧರಿಸಿದ್ದರು. 1976ರಲ್ಲಿ ಲಾಸ್ ಆಲ್ಟೋಸ್ ಗ್ಯಾರೇಜ್‍ನಲ್ಲಿ ಆಪಲ್ ಕಂಪ್ಯೂಟರ್ ಅನ್ನು ಆನ್ ಮಾಡುವ ಸಂದರ್ಭದಲ್ಲಿ ಸ್ಟೀವ್ ಜಾಬ್ಸ್ ಇದೇ ಚಪ್ಪಲಿಯನ್ನು ಧರಿಸಿದ್ದರು. ಜಾಬ್ಸ್ ಬಿರ್ಕೆನ್‍ಸ್ಟಾಕ್ಸ್‌ನ ಜಾಣ್ಮೆ ಮತ್ತು ಪ್ರಾಯೋಗಿಕತೆಯನ್ನು ಕಂಡು ಜನ ಬೆರಗಾಗಿದ್ದರು. ಇದನ್ನೂ ಓದಿ: ಯಾರಿಗೂ ನಂಬಿಕೆ ದ್ರೋಹ ಮಾಡ್ಬೇಡಿ- ಗೆಳತಿಯ ಕತ್ತು ಸೀಳಿ ವೀಡಿಯೋ ಹಂಚಿಕೊಂಡ ಕ್ರೂರಿ

    ಈ ಚಪ್ಪಲಿಯನ್ನು ಇಟಲಿಯ ಮಿಲಾನೊದಲ್ಲಿನ ಸಲೋನ್ ಡೆಲ್ ಮೊಬೈಲ್‍ನಲ್ಲಿ ಮಾತ್ರವಲ್ಲದೇ, 2017 ರಲ್ಲಿ ಜರ್ಮನಿಯ ರಹ್ಮ್ಸ್‍ನಲ್ಲಿರುವ ಬರ್ಕೆನ್‍ಸ್ಟಾಕ್ ಪ್ರಧಾನ ಕಚೇರಿಯಲ್ಲಿ, ನ್ಯೂಯಾರ್ಕ್‍ನ ಸೋಹೋದಲ್ಲಿನ ಬಿರ್ಕೆನ್‍ಸ್ಟಾಕ್‍ನಲ್ಲಿ, ಯುನೈಟೆಡ್ ಸ್ಟೇಟ್ಸ್ ಶಾಪ್ಸ್‍ಗಳು ಸೇರಿದಂತೆ ಹಲವೆಡೆ ಪ್ರದರ್ಶನಕ್ಕೆ ಇಡಲಾಗಿತ್ತು. ಕೊಲ್ನ್, ಜರ್ಮನಿಯ ಕಲೋನ್‍ನಲ್ಲಿ ಪೀಠೋಪಕರಣ ಮೇಳ, 2018 ರಲ್ಲಿ ಡೈ ಝೀಟ್ ಮ್ಯಾಗಜೀನ್‍ಗಾಗಿ ಝೀಟ್ ಈವೆಂಟ್ ಬರ್ಲಿನ್ ಮತ್ತು ಇತ್ತೀಚೆಗೆ ಜರ್ಮನಿಯ ಸ್ಟಟ್‍ಗಾರ್ಟ್‍ನಲ್ಲಿರುವ ಹಿಸ್ಟರಿ ಮ್ಯೂಸಿಯಂನಲ್ಲೂ ಇಡಲಾಗಿತ್ತು. ಇದನ್ನೂ ಓದಿ: ಮೆಟ್ಟಿಲು ಹತ್ತುವಾಗ ಎಡವಿದ ಜೋ ಬೈಡನ್ – ಮುಂದೇನಾಯ್ತು ಗೊತ್ತಾ?

    Live Tv
    [brid partner=56869869 player=32851 video=960834 autoplay=true]

  • ದಲಿತರಿಗೆ ಚಪ್ಪಲಿ ಕಾಯುವ ಕೆಲಸ – ಇದು ಸಿದ್ದು ಸರ್ಕಾರದ ಆದೇಶ ಎಂದ ಬಿಜೆಪಿ

    ದಲಿತರಿಗೆ ಚಪ್ಪಲಿ ಕಾಯುವ ಕೆಲಸ – ಇದು ಸಿದ್ದು ಸರ್ಕಾರದ ಆದೇಶ ಎಂದ ಬಿಜೆಪಿ

    ಬೆಂಗಳೂರು: ಬಸವನಗುಡಿಯಲ್ಲಿರುವ ದೊಡ್ಡಗಣಪತಿ(Basavanagudi Dodda Ganapathi Temple) ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್‌ ಟೆಂಡರ್‌(Tender) ಅನ್ನು ಪರಿಶಿಷ್ಟರಿಗೆ ಮೀಸಲಿಟ್ಟ ವಿಚಾರಕ್ಕೆ ಸಂಬಧಿಸಿದಂತೆ ಈಗ ಕಾಂಗ್ರೆಸ್‌(Congress) ಮತ್ತು ಬಿಜೆಪಿ(BJP) ಮಧ್ಯೆ ಕಿತ್ತಾಟ ಶುರುವಾಗಿದೆ. ಈ ಆರೋಪಕ್ಕೆ ಬಿಜೆಪಿ ಪ್ರತಿಕ್ರಿಯಿಸಿ ಕಾಂಗ್ರೆಸ್‌ ಸರ್ಕಾರದಲ್ಲಿರುವಾಗಲೇ ಈ ರೀತಿಯ ಟೆಂಡರ್‌ ಕರೆಯಲಾಗಿತ್ತು ಎಂದು ಹೇಳಿ ಸಿದ್ದರಾಮಯ್ಯ ಸರ್ಕಾರವನ್ನು ದೂರಿದೆ.

    ಮುಜರಾಯಿ ದೇವಾಲಯಗಳಲ್ಲಿ ಮಿಕ್ಕೆಲ್ಲ ಟೆಂಡರ್ ಸಾಮಾನ್ಯ ವರ್ಗಕ್ಕೆ, ಚಪ್ಪಲಿ ಕಾಯುವುದು ಮಾತ್ರ ದಲಿತರಿಗೆ. ಇದು ಸರ್ಕಾರಿ ಅಸ್ಪೃಶ್ಯತೆ ಆಚರಣೆ, ದಲಿತರನ್ನು ಚಪ್ಪಲಿ ಕಾಯಲು ಸೀಮಿತಗೊಳಿಸಿ ಮನುಸ್ಮೃತಿ ಪಾಲಿಸುತ್ತಿದೆ ಬಿಜೆಪಿ ಸರ್ಕಾರ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ದೂರಿದ್ದರು.

    ಈ ಆರೋಪಕ್ಕೆ ಪ್ರತಿಕ್ರಿಯಿಸಿದ  ಬಿಜೆಪಿ ಕರ್ನಾಟಕ, ಈ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಆದೇಶ ಹೊರಡಿಸಲಾಗಿದೆ ಎಂದು ಆದೇಶ ಹೊರಡಿಸುವಾಗ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದರು. ಬಿಜೆಪಿ ಸರ್ಕಾರ ಈ ಆದೇಶವನ್ನು ಹಿಂದಕ್ಕೆ ತೆಗೆದುಕೊಂಡಿದೆ, ಹಾಗಾದರೆ ದಲಿತರನ್ನು ಚಪ್ಪಲಿ ಕಾಯಲು ಸೀಮಿತಗೊಳಿಸಿದ್ದು ಯಾರು ಪ್ರಿಯಾಂಕ್‌ ಖರ್ಗೆ ಅವರೇ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಭಾರತಮಾತೆ ವಿಧವೆಯಲ್ಲ – ಹಣೆಗೆ ಬೊಟ್ಟು ಇಡದ ಪತ್ರಕರ್ತೆಗೆ ಪ್ರತಿಭಟನಾಕಾರನಿಂದ ತರಾಟೆ

    ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿ, ಈ ರೀತಿ ಟೆಂಡರ್‌ ಪ್ರಕಟಿಸಬಾರದಿತ್ತು. 2016ರಲ್ಲೇ ಈ ರೀತಿಯ ಆದೇಶ ಪ್ರಕಟವಾಗಿತ್ತು. ಈ ಹಿಂದೆಯೇ ಇಂಥ ಪದ್ದತಿ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೆಂಡರ್ ಕರೆದ ಅಧಿಕಾರಿಗೆ ನೋಟಿಸ್‌ ನೀಡಲಾಗುವುದು. ಮುಂದಿನ ದಿನಗಳಲ್ಲಿ ಇಂಥ ತಪ್ಪು ಆಗದ ರೀತಿ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.

    ಏನಿದು ವಿವಾದ?
    ದೊಡ್ಡ ಗಣಪತಿ ದೇವಸ್ಥಾನದ ಆಡಳಿತ ಮಂಡಳಿ ಕರೆದ ಟೆಂಡರ್‌ನಲ್ಲಿ(Tender) ಇಂಥಾದ್ದೇ ಸಮುದಾಯದವರು ಭಾಗವಹಿಸಬೇಕು ಎಂಬ ಅಂಶವಿದೆ. ಬರುವ ಭಕ್ತರ ಪಾದರಕ್ಷೆ ಕಾಯಲು ಟೆಂಡರ್ ಆಹ್ವಾನಿಸಿದ್ದು, ಪರಿಶಿಷ್ಟ ವರ್ಗದವರು ಮಾತ್ರ ಪಾಲ್ಗೊಳ್ಳಬೇಕು ಎಂದು ಪ್ರಕಟಿಸಿದೆ. ಜೊತೆಗೆ ಪೂಜಾ ಸಾಮಾಗ್ರಿ ಮಾರಾಟ, ಈಡುಗಾಯಿ ಆಯ್ದುಕೊಳ್ಳುವ ಹಕ್ಕಿನ ಟೆಂಡರ್, ಎಳನೀರು ಮಾರಾಟದ ಟೆಂಡರ್ ಅನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.

    ದೇವಸ್ಥಾನದ ಈ ಟೆಂಡರ್ ಪ್ರಕಟಣೆಗೆ ವ್ಯಾಪಕ ಟೀಕೆಗೆ ವ್ಯಕ್ತವಾಗಿದೆ. ಇದು ವಿವಾದ ಆಗುತ್ತಿದ್ದಂತೆ ಎಚ್ಚೆತ್ತ ದೊಡ್ಡ ಗಣೇಶ ದೇಗುಲದ ಆಡಳಿತ ಮಂಡಳಿ, ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಪ್ರಕಟಣೆ ಹೊರಡಿಸಿದೆ. ಮುಜರಾಯಿ ಇಲಾಖೆ ತಹಶೀಲ್ದಾರರು ಈಗ ಈ ರೀತಿಯಾಗಿ ಹೇಗೆ ಟೆಂಡರ್ ಕರೆದಿದ್ದೀರಿ ವಿವರಣೆ ನೀಡಿ ಎಂದು ದೊಡ್ಡ ಗಣೇಶ ದೇಗುಲದ ಆಡಳಿತ ಮಂಡಳಿಗೆ ನೋಟಿಸ್‌ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾತ್‍ರೂಮ್ ಚಪ್ಪಲಿಗೆ 54% ಆಫರ್ ನೀಡಿದ್ರೂ 8,990 ರೂ. ಬೆಲೆ – ಫೋಟೋ ವೈರಲ್

    ಬಾತ್‍ರೂಮ್ ಚಪ್ಪಲಿಗೆ 54% ಆಫರ್ ನೀಡಿದ್ರೂ 8,990 ರೂ. ಬೆಲೆ – ಫೋಟೋ ವೈರಲ್

    ನವದೆಹಲಿ: ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಹ್ಯೂಗೋ ಬಾಸ್ ಕಂಪನಿ ಬಿಡುಗಡೆ ಮಾಡಿರುವ ನೀಲಿ ಬಣ್ಣದ ಚಪ್ಪಲಿಯನ್ನು (Slippers) 54% ರಿಯಾಯಿತಿಯೊಂದಿಗೆ 8,990 ರೂ. ಮೌಲ್ಯಕ್ಕೆ ಮಾರಾಟಕ್ಕಿಟ್ಟಿರುವ ಫೋಟೋ (Photo) ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ವೈರಲ್ ಆಗುತ್ತಿದೆ.

    ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಬ್ರ್ಯಾಂಡ್‍ಗಳು ತಮ್ಮ ಉತ್ಪನ್ನಗಳನ್ನು ವಿಶಿಷ್ಟ ಆಲೋಚನೆಯೊಂದಿಗೆ ಬಿಡುಗಡೆ ಮಾಡಿ ಹೆಚ್ಚು ಪ್ರಚಾರವನ್ನು ಗಿಟ್ಟಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲದೇ ವಿವಿಧ ರೀತಿಯ ಆಕರ್ಷಕ ಬೆಲೆಯನ್ನು ಇಡುವ ಮೂಲಕ ಪ್ರಚಾರ ಪಡೆಯುತ್ತಿದೆ. ಅದೇ ರೀತಿ ಹ್ಯೂಗೋ ಬಾಸ್ ಬಿಡುಗಡೆ ಮಾಡಿರುವ ಚಪ್ಪಲಿ ನೋಡಲು ಬಾತ್‍ರೂಮ್ ಚಪ್ಪಲಿ ರೀತಿ ಇದ್ದು, 100ರಿಂದ 150 ರೂ. ಮೌಲ್ಯದ ರೀತಿ ಕಾಣುತ್ತಿದೆ. ಆದರೆ ಕಂಪನಿಯು ಈ ಚಪ್ಪಲಿಗೆ 54% ರಿಯಾಯಿತಿ ನೀಡಿ, 8,990 ರೂ.ಗೆ ಮಾರಾಟ ಮಾಡುತ್ತಿದೆ. ಆದರೆ ಇದರ ನಿಜವಾದ ಬೆಲೆ 19,500 ರೂ. ಆಗಿದೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿಭಿನ್ನ ರೀತಿಯ ಕಾಮೆಂಟ್ ಮಾಡಿದ್ದಾರೆ.

    ನೆಟ್ಟಿಗನೊಬ್ಬ ಇದಕ್ಕೆ ಕಾಮೆಂಟ್ ಮಾಡಿ ಈ ಚಪ್ಪಲಿ 100 ರಿಂದ 150 ಕ್ಕಿಂತ ಹೆಚ್ಚು ಬೆಲೆ ಬಾಳುವುದಿಲ್ಲ. ಈ ಚಪ್ಪಲಿಗಿಂತಲೂ ಬೇರೆ ಚಪ್ಪಲಿಯೇ ಉತ್ತಮವಾಗಿ ಕಾಣುತ್ತದೆ ಎಂದು ಹೇಳಿದ್ದಾರೆ. ಇದು ಬಾತ್‍ರೂಮ್ ಚಪ್ಪಲಿ, ಸಣ್ಣ ಪುಟ್ಟ ಬಜಾರ್‌ಗಳಲ್ಲಿ ಜನರು 50 ರೂ.ಗೆ ಈ ಚಪ್ಪಲಿಯನ್ನು ಪಡೆಯಬಹುದು ಎಂದು ಮತ್ತೊಬ್ಬ ಕಾಮೆಂಟ್ ಮಾಡಿದ್ದಾನೆ. ಇದನ್ನೂ ಓದಿ: ಅ. 21ರಂದು ಹುಕ್ಕೇರಿಯಲ್ಲಿ ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶ

    ಈ ಹಿಂದೆ ಬಾಲೆನ್ಸಿಯಗ ಕಂಪನಿ ಬಿಡುಗಡೆ ಮಾಡಿದ್ದ 1,42,652 ರೂ. ಮೌಲ್ಯದ ಕಸದ ಚೀಲ ವೈರಲ್ ಆಗಿತ್ತು. ಇದನ್ನೂ ಓದಿ: ಪ್ರೇಮಿಗಳನ್ನು ಒಂದು ಮಾಡುವುದಾಗಿ ನಂಬಿಸಿ ಕರೆದೊಯ್ದು ಮರ್ಯಾದಾ ಹತ್ಯೆ

    Live Tv
    [brid partner=56869869 player=32851 video=960834 autoplay=true]

  • ದಂಡ ಹಾಕಿದ್ದಕ್ಕೆ ಜಡ್ಜ್ ಮೇಲೆ ಚಪ್ಪಲಿ ತೂರಿದ ವ್ಯಕ್ತಿ ಅಂದರ್

    ದಂಡ ಹಾಕಿದ್ದಕ್ಕೆ ಜಡ್ಜ್ ಮೇಲೆ ಚಪ್ಪಲಿ ತೂರಿದ ವ್ಯಕ್ತಿ ಅಂದರ್

    ಚಿಕ್ಕಮಗಳೂರು: ದಂಡ ಹಾಕಿದ್ದಕ್ಕೆ (Fine) ವ್ಯಕ್ತಿಯೊಬ್ಬ ಜಡ್ಜ್ (Judge) ಮೇಲೆ ಚಪ್ಪಲಿ (Slippers) ತೂರಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲಾ ನ್ಯಾಯಾಲಯದ 1ನೇ ಹೆಚ್ಚುವರಿ ಕಿರಿಯ ಶ್ರೇಣಿಯ ವಿಭಾಗದಲ್ಲಿ ನಡೆದಿದೆ. ನ್ಯಾಯಧೀಶರ ಮೇಲೆ ಚಪ್ಪಲಿ ತೂರಿದ ಅರವಿಂದ ನಗರ ನಿವಾಸಿ ಲೋಕೇಶ್‌ನನ್ನು ನಗರ ಪೊಲೀಸರು ಬಂಧಿಸಿದ್ದಾರೆ.

    ಕಳೆದ 1 ತಿಂಗಳ ಹಿಂದೆ ಕುಡಿದು ವಾಹನ ಚಲಾಯಿಸುತ್ತಿದ್ದ ವೇಳೆ ಲೋಕೇಶ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಬಳಿಕ ಪೊಲೀಸರು ಆತನಿಗೆ ಕೋರ್ಟ್‌ನಲ್ಲಿ ದಂಡ ಕಟ್ಟುವಂತೆ ಸೂಚಿಸಿದ್ದರು. ಇದಕ್ಕೆ ಆರೋಪಿ ಲೋಕೇಶ್ ದಂಡ ಕೂಡ ಕಟ್ಟಿದ್ದ. ದಂಡ ಕಟ್ಟಿದ ತಿಂಗಳ ಬಳಿಕ ಲೋಕೇಶ್ ಇಂದು ಕೋರ್ಟ್‌ಗೆ ಕುಡಿದು ಬಂದು, ಜಡ್ಜ್ ಮೇಲೆ ಚಪ್ಪಲಿ ತೂರಿದ್ದಾನೆ. ಇದನ್ನೂ ಓದಿ: ರಟ್ಟೀಹಳ್ಳಿ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು RSS ಪಥಸಂಚಲನ

    ಕೂಡಲೇ ಅಲ್ಲೇ ಇದ್ದ ನಗರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೋರ್ಟ್‌ನಲ್ಲಿ ಆತ, ನಾನು ಏನು ತಪ್ಪು ಮಾಡಿದ್ದೇನೆ ಅಂತ ದಂಡ ಹಾಕಿದ್ದೀರಾ ಎಂದು ಕೂಗಾಡಿದ್ದಾನೆ. ಲೋಕೇಶ್‌ನ ಈ ವರ್ತನೆ ನೋಡಿದ ಕೂಡಲೇ ಕೋರ್ಟ್‌ನಲ್ಲಿದ್ದ ವಕೀಲರು ಕೂಡಾ ಆತನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ನಿವೃತ್ತ ಪ್ರೊಫೆಸರ್‌ಗೆ ಯುವತಿ ಕಾಲ್ – ಅಶ್ಲೀಲ ವೀಡಿಯೋ ಮಾಡಿ 21 ಲಕ್ಷ ನಾಮ ಹಾಕಿದ್ಲು

    Live Tv
    [brid partner=56869869 player=32851 video=960834 autoplay=true]

  • ಚುಡಾಯಿಸಿದವನಿಗೆ 20 ಸೆಕೆಂಡ್‌ನಲ್ಲಿ 40 ಬಾರಿ ಚಪ್ಪಲಿಯಲ್ಲಿ ಬಾರಿಸಿದ್ಲು

    ಚುಡಾಯಿಸಿದವನಿಗೆ 20 ಸೆಕೆಂಡ್‌ನಲ್ಲಿ 40 ಬಾರಿ ಚಪ್ಪಲಿಯಲ್ಲಿ ಬಾರಿಸಿದ್ಲು

    ಲಕ್ನೋ: ರಸ್ತೆಯಲ್ಲಿ ಹೋಗುತ್ತಿದ್ದಾಗ ಚುಡಾಯಿಸಿದ್ದಕ್ಕೆ ವ್ಯಕ್ತಿಯೋರ್ವನಿಗೆ ಮಹಿಳೆಯೊಬ್ಬಳು ಚಪ್ಪಲಿಯಿಂದ (slippers) ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಉತ್ತರ ಪ್ರದೇಶದ (Uttar Pradesh) ಜಲೌನ್ ಜಿಲ್ಲೆಯ (Jalaun district) ಓರೈ ನಗರದ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕುಡಿತ ಮತ್ತಿನಲ್ಲಿ ವ್ಯಕ್ತಿ ಮಹಿಳೆಯನ್ನು ಅಸಭ್ಯವಾಗಿ ಚುಡಾಯಿಸಿದ್ದಾನೆ. ಇದರಿಂದ ಚಪ್ಪಲಿಯಿಂದ ಮಹಿಳೆ (Women)  ರಪರಪನೇ ಬಾರಿಸಿದ್ದಾಳೆ. ಇದನ್ನೂ ಓದಿ: ಟೆಕ್‍ಆಫ್ ಆಗಿದ್ದ ವಿಮಾನದಲ್ಲಿ ಕಿಟಕಿ ಒದ್ದು ದಾಂಧಲೆ- ಪಾಕ್‌ ಪ್ರಯಾಣಿಕ ಅರೆಸ್ಟ್‌

    ವೀಡಿಯೋದಲ್ಲಿ ಆರೋಪಿ ಕುಕ್ಕರುಗಾಲಿನಲ್ಲಿ ಕುಳಿತಿದ್ದು, ಮಹಿಳೆ ತನ್ನ ಎರಡು ಕಾಲಿನ ಚಪ್ಪಲಿಯನ್ನು ಎರಡು ಕೈಯಲ್ಲಿ ಹಿಡಿದು ಬಿಟ್ಟುಬಿಡದೇ ಆತನ ಮುಖಕ್ಕೆ ಹೊಡೆದಿದ್ದಾಳೆ. 20 ಸೆಕೆಂಡ್ ಇರುವ ವೀಡಿಯೋದಲ್ಲಿ ಮಹಿಳೆ 40 ಬಾರಿ ಚಪ್ಪಲಿಯಿಂದ ಆತನಿಗೆ ಬಾರಿಸಿರುವುದನ್ನು ಕಾಣಬಹುದಾಗಿದೆ. ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ-ಪಿಯು ಮಂಡಳಿ ವಿಲೀನಕ್ಕೆ ನಿರ್ಧಾರ – ಸಂಪುಟ ಸಭೆಯಲ್ಲಿ ಅನುಮೋದನೆ

    ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಸುಮಾರು 50,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 530ಕ್ಕೂ ಹೆಚ್ಚು ರೀ ಟ್ವೀಟ್‍ಗಳು ಬಂದಿದೆ. ಅನೇಕ ಮಂದಿ ಮಹಿಳೆಯ ಧೈರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ಆರೋಪಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಣಪತಿ ವಿಸರ್ಜನೆ ಬಳಿಕ 6 ಟ್ರಕ್ ತುಂಬುವಷ್ಟು ಚಪ್ಪಲಿಗಳನ್ನು ಸಂಗ್ರಹಿಸಿದ ಘನತ್ಯಾಜ್ಯ ಇಲಾಖೆ

    ಗಣಪತಿ ವಿಸರ್ಜನೆ ಬಳಿಕ 6 ಟ್ರಕ್ ತುಂಬುವಷ್ಟು ಚಪ್ಪಲಿಗಳನ್ನು ಸಂಗ್ರಹಿಸಿದ ಘನತ್ಯಾಜ್ಯ ಇಲಾಖೆ

    ಮುಂಬೈ: ಗಣಪತಿ ವಿಸರ್ಜನೆ ಬಳಿಕ ಪುಣೆಯ ಮುನ್ಸಿಪಲ್ ಕಾರ್ಪೊರೆಷನ್(ಪಿಎಂಸಿ) ಘನತ್ಯಾಜ ಇಲಾಖೆ(ಎಸ್‌ಡಬ್ಲ್ಯುಎಂ) ನಗರದಲ್ಲಿ ಸುಮಾರು 21 ಟನ್‌ಗಳಷ್ಟು ಕಸವನ್ನು ಸಂಗ್ರಹಿಸಿದೆ. ಇದರಲ್ಲಿ ಸುಮಾರು 6 ಮಿನಿ ಟ್ರಕ್‌ಗಳಲ್ಲಿ ತುಂಬಲಾಗುವಷ್ಟು ಚಪ್ಪಲಿಗಳೇ ದೊರೆತಿವೆ ಎಂದು ವರದಿಯಾಗಿದೆ.

    ಪುಣೆಯಲ್ಲಿ ನಡೆದ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ 5 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಹಬ್ಬ ಕಳೆದ ಬಳಿಕ ಸುಮಾರು 1,037 ಪಿಎಂಸಿ ಸಿಬ್ಬಂದಿ ಬೀದಿಗಿಳಿದು ಕಸವನ್ನು ಸಂಗ್ರಹಿಸಿದ್ದಾರೆ. ಸ್ವಚ್ಛ ಸಂಸ್ಥೆ, ಜನವಾಣಿ ಸಂಸ್ಥೆ, ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ, ರೋಟರಿ ಕ್ಲಬ್, ಮರಾಠವಾಡ ಕಾಲೇಜು ಹಾಗೂ ಇತರ ಸಂಸ್ಥೆಗಳ ಸುಮಾರು 650 ಸ್ವಯಂ ಸೇವಕರು ಈ ಸ್ವಚ್ಛ ನಗರ ಅಭಿಯಾನಕ್ಕೆ ಕೈ ಜೋಡಿಸಿದ್ದರು ಎಂದು ಎಸ್‌ಡಬ್ಲ್ಯುಎಂ ಉಪ ಆಯುಕ್ತ ಆಶಾ ರಾವತ್ ತಿಳಿಸಿದರು. ಇದನ್ನೂ ಓದಿ: ಕೊನೆಗೂ ತೇಜಸ್ವಿ ನಿವಾಸಕ್ಕೆ ತಲುಪಿತು ಕಾಂಗ್ರೆಸ್ ದೋಸೆ – ಡೆಲಿವರಿ ಬಾಯ್ ಪೊಲೀಸರ ವಶಕ್ಕೆ

    ಗಣಪತಿ ವಿಸರ್ಜನೆ ಮೆರವಣಿಗೆ ಲಕ್ಷ್ಮಿ ರಸ್ತೆ, ತಿಲಕ್ ರಸ್ತೆ, ಕುಮ್ಟೇಕರ್ ರಸ್ತೆ, ನಾರಾಯಣ ಪೇಠ ರಸ್ತೆ, ಬಾಜಿರಾವ್ ರಸ್ತೆ, ಶಿವಾಜಿ ರಸ್ತೆ, ಅಲ್ಕಾ ಚೌಕ್, ಖಂಡುಜಿ ಬಾಬಾ ಚೌಕ್, ಕರವೇ ರಸ್ತೆ, ಜಂಗ್ಲಿ ಮಹಾರಾಜ್ ರಸ್ತೆ, ಸೇನಾಪತಿ ಬಾಪಟ್ ರಸ್ತೆ, ಗಣೇಶಖಿಂಡ್ ರಸ್ತೆ, ಫರ್ಗುಸನ್ ಕಾಲೇಜು ರಸ್ತೆ, ಪ್ರಭಾತ್ ಮಾರ್ಗವಾಗಿ ಸಾಗಿದೆ ಎಂದು ವರದಿಗಳು ತಿಳಿಸಿವೆ.

    ಮೆರವಣಿಗೆ ಸಾಗಿದ ಪ್ರದೇಶದಲ್ಲಿ ಕಸ ಸಂಗ್ರಹಿಸಲು ಪಿಎಂಸಿ 9 ಕಾಂಪ್ಯಾಕ್ಟರ್‌ಗಳು, 13 ಸಣ್ಣ ವಾಹನಗಳು, 6 ಟೆಂಪೋಗಳು, 8 ಟಿಪ್ಪರ್‌ಗಳು ಮತ್ತು 8 ಇತರ ವಾಹನಗಳನ್ನು ಬಳಸಿದೆ ಎನ್ನಲಾಗಿದೆ. ಇದನ್ನೂ ಓದಿ: ಕುಂಬಳಕಾಯಿ 47,000 ರೂ.ಗೆ ಹರಾಜು

    Live Tv
    [brid partner=56869869 player=32851 video=960834 autoplay=true]

  • ರಾಕಿ ಯಾರ ಜೊತೆಗಾದ್ರೂ ಮಾತಾಡ್ಲಿ ಚೈತ್ರಾ ಜೊತೆ ಬಿಟ್ಟು – ಯಾಕೆಂದ್ರೆ ಅದು ವಯಸ್ಸಿನ ಮ್ಯಾಟರ್ ಅಂತೆ ಸೋನುಗೆ..!

    ರಾಕಿ ಯಾರ ಜೊತೆಗಾದ್ರೂ ಮಾತಾಡ್ಲಿ ಚೈತ್ರಾ ಜೊತೆ ಬಿಟ್ಟು – ಯಾಕೆಂದ್ರೆ ಅದು ವಯಸ್ಸಿನ ಮ್ಯಾಟರ್ ಅಂತೆ ಸೋನುಗೆ..!

    ಬಿಗ್‍ಬಾಸ್ ಮನೆಯಲ್ಲಿ ಹಿಂಗೆ ಕಿತ್ತಾಡಿ ಹಂಗೆ ಒಂದಾಗುವವರು ಯಾರು ಎಂದರೆ ಅದು ಸೋನು ಮತ್ತು ರಾಕೇಶ್ ಅಂತಾನೇ ಹೇಳಬಹುದು. ಸೋನು ಬಾಯಿ ಸರಿ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲವೊಂದು ಸಲ ಬೀಪ್ ಸೌಂಡ್ ಶಬ್ಧಗಳೇ ಹೆಚ್ಚು ಬರುತ್ತವೆ. ಇನ್ನು ಕೆಲವೊಂದು ಸಲ ಮನಸ್ಸಿಗೆ ನಾಟುವಂತ ಶಬ್ಧಗಳು ಬರುತ್ತವೆ. ಇತ್ತೀಚೆಗೆ ಇದು ರಾಕಿಯನ್ನು ಬಿಟ್ಟಿಲ್ಲ. ಕಳೆದ ವಾರ ರಾಕಿ ನಾನೇನು ನಿಮ್ಮ ಮನೆ ಆಳ. ಇದೆಲ್ಲ ನನ್ನತ್ರ ಇಟ್ಟುಕೊಳ್ಳಬೇಡ ಅಂತ ಸೋನು ಮೇಲೆ ಎರಡು ಸಲ ರೇಗಿದ್ದರು. ಆಗ ನೋಡಿದವರು ಓ ಸೋನು ಅಂಡ್ ರಾಕಿ ಫ್ರೆಂಡ್ಶಿಪ್ ಇಲ್ಲಿಗೆ ಕಟ್ ಅಂತ ಎಂದುಕೊಂಡಿದ್ದರು. ಆಗಲೂ ಏನು ಆಗಲಿಲ್ಲ. ಇಬ್ಬರು ಮಾಮೂಲಿ ದೋಸ್ತರಾಗಿಯೇ ಮುಂದುವರೆದಿದ್ದರು.

    ಇತ್ತೀಚೆಗೆ ಅಕ್ಷತಾ ಮತ್ತು ರಾಕಿ ಇಬ್ಬರು ಇದ್ದಾಗಲು ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಸೋನು ಹೇಳಿದ್ದರು. ಆಗ ದೊಡ್ಡ ಮನಸ್ತಾಪವೇ ಬಂದಿತ್ತು. ರಾಕಿ, ಅಕ್ಷತಾಗೆ ಸಮಾಧಾನ ಮಾಡಿದ್ದರು. ಆಗಲೂ ಇನ್ನು ಮುಂದೆ ಇವರಿಬ್ಬರು ಅಷ್ಟೇ ಅಂದುಕೊಂಡಿದ್ದರು. ಆದರೆ ಅದೇನೋ ಗೊತ್ತಿಲ್ಲ. ಅದೆಷ್ಟೇ ಮಾತು ಕತೆಗಳು ನಡೆದರೂ ಸೋನು ಹಾಗೂ ರಾಕಿಯನ್ನು ದೂರ ಮಾಡಲು ಆಗುತ್ತಿಲ್ಲ. ಇಬ್ಬರು ಮತ್ತೆ ಮತ್ತೆ ಬರೀ ಒಂದಾಗುವುದಲ್ಲ, ಕ್ಲೋಸ್ ಕೂಡ ಆಗುತ್ತಿದ್ದಾರೆ. ಈ ಮಧ್ಯೆ ರಾಕಿಗೆ ಸೋನು ಯಾಕೆ ಚೈತ್ರಾ ಬಳಿ ಮಾತನಾಡಿದರೆ ಸಹಿಸುವುದಿಲ್ಲ ಎಂಬ ಅನುಮಾನ ಮೂಡಿದೆ. ಇದನ್ನೂ ಓದಿ: ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

    ಈ ಪ್ರಶ್ನೆ ಈ ಥಿಂಕ್ ರಾಕಿಗೆ ಇಂದು ನಿನ್ನೆ ಬಂದಿರುವ ಪ್ರಶ್ನೆಯಲ್ಲ. ಸುಮಾರು ದಿನದ ಪ್ರಶ್ನೆ ಈಗ ಉತ್ತರ ಕಂಡುಕೊಳ್ಳಲು ಯೋಚಿಸಿದ್ದಾರೆ ಎನಿಸುತ್ತದೆ. ಬೆಡ್ ಮೇಲೆ ರಾಕಿ ಮಲಗಿದ್ದರು. ರಾಕಿ ಮೇಲೆ ಕುಳಿತು ಸೋನು ಮಸಾಜ್ ಮಾಡುತ್ತಾ ಇದ್ದರು. ಆಗ ನಿಧಾನವಾಗಿ ರಾಕಿ, ಇಲ್ಲಿ ಯಾರು ಇಲ್ಲ ಅಲ್ವಾ ಅಂತ ಕನ್ಫರ್ಮ್ ಮಾಡಿಕೊಂಡಿದ್ದಾರೆ. ಇಲ್ಲ ಎಂದಾಗ. ನಂಗೆ ಒಂದು ಸತ್ಯ ಹೇಳು ನಾನು ಯಾರಿಗೂ ಹೇಳಲ್ಲ. ನಾನು ಯಾರ ಜೊತೆ ಮಾತನಾಡಿದರು ನೀನು ಏನು ಅನ್ನಲ್ಲ. ಆದರೆ ಚೈತ್ರಾ ಅಕ್ಕ ಜೊತೆ ಮಾತನಾಡಿದರೆ ನಿನಗೆ ಇಷ್ಟವಾಗಲ್ಲ ಯಾಕೆ ಎಂದು ಕೇಳಿದ್ದಾರೆ. ಅದಕ್ಕೆ ಸೋನು, ಅದೇ ನನಗೂ ಗೊತ್ತಾಗುತ್ತಿಲ್ಲ. ಅವತ್ತೆ ಕೂತು ನಾನು ಕೂಡ ಥಿಂಕ್ ಮಾಡಿದ್ದೇನೆ. ಯಾರೇ ಆಗಲಿ ಅವರು ವಯಸ್ಸಿನ ತಕ್ಕಂತೆ ನಡೆದುಕೊಳ್ಳಬೇಕು. ನೀನು ಇನ್ನು ಯಂಗ್ ಹುಡುಗ. ಬೇರೆ ಹುಡುಗಿಯರ ಜೊತೆ ಇರುವುದು ಕಾಮನ್. ಹಾಗಂತ ಅವರು ಹಂಗೆ ಇರಬೇಕು ಅಂದರೆ ಎಂದು ಈ ಪ್ರಶ್ನೆ ಬೇಡ ಅಂತ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

    ಆದರೆ ರಾಕಿಗೆ ಅದನ್ನು ತಿಳಿಯುವ ಕುತೂಹಲ. ಪ್ಲೀಸ್ ಪ್ಲೀಸ್ ಹೇಳು. ನನ್ನ ಬಗ್ಗೆ ಅವರು ಹೊರಗಡೆ ಏನೋ ಅಂದಿರುತ್ತಾರೆ. ಅದಕ್ಕೆ ನೀನು ಈ ಥರ ನಡೆದುಕೊಳ್ಳುತ್ತಾ ಇದ್ದೀಯಾ ಎಂದಾಗ, ಎಲ್ಲರ ಬಗ್ಗೆಯೂ ಮಾತನಾಡುತ್ತಾರೆ, ಎಲ್ಲರ ಜೊತೆಗೂ ಚೆನ್ನಾಗಿಯೇ ಇರುತ್ತಾರೆ. ಅವತ್ತೇ ನೋಡು ಸ್ಲಿಪ್ಪರ್ ಕೊಡುವ ಅವಶ್ಯಕತೆಯೇ ಇರಲಿಲ್ಲ. ಅಚ್ಚಚ್ಚೋ ನನ್ನ ಮುದ್ದು, ನನ್ನ ಗುಂಡು, ನೀನ್ ನನ್ನ ಮಕ್ಕಳ ಥರ ಅಂತೆಲ್ಲಾ ಅಂದ್ರು ಉರಿದು ಹೋಗಿಬಿಟ್ಟಿತು. ಈಗ ಅದೇ ಸೈಜಿನ ಹವಾಯ್ ಚಪ್ಪಲಿ ತೆಗೆದುಕೊಂಡು ಬಂದು ವಾಶ್ ರೂಮಿಗೆ ಯೂಸ್ ಮಾಡುತ್ತೇನೆ ನೋಡು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]