Tag: ಚಪಾತಿ

  • ಚಪಾತಿ ನೀಡದ್ದಕ್ಕೆ ಚಿಂದಿ ಆಯುವವನ ಕೈಯಿಂದ ನಡೆಯಿತು ರಿಕ್ಷಾ ಚಾಲಕನ ಕೊಲೆ!

    ಚಪಾತಿ ನೀಡದ್ದಕ್ಕೆ ಚಿಂದಿ ಆಯುವವನ ಕೈಯಿಂದ ನಡೆಯಿತು ರಿಕ್ಷಾ ಚಾಲಕನ ಕೊಲೆ!

    ನವದೆಹಲಿ: ಚಪಾತಿ ನೀಡಲು ನಿರಾಕರಿಸಿದಕ್ಕೆ ರಿಕ್ಷಾ ಚಾಲಕನನ್ನು ವ್ಯಕ್ತಿಯೋರ್ವ ಬರ್ಬರವಾಗಿ ಹತ್ಯೆಗೈದಿರುವ ಘಟನೆ ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ನಡೆದಿದೆ.

    ಮುನ್ನಾ(40) ಮೃತವ್ಯಕ್ತಿಯಾಗಿದ್ದು, ಆರೋಪಿಯನ್ನು ಚಿಂದಿ ಆಯುವ ಫಿರೋಜ್ ಖಾನ್ ಎಂದು ಗುರುತಿಸಲಾಗಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 26ರ ಮಂಗಳವಾರ, ವ್ಯಕ್ತಿಯೋರ್ವ ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿ ನಂತರ ಸ್ಥಳೀಯರು ವ್ಯಕ್ತಿಯನ್ನು ಆಟೋದಲ್ಲಿ ಆರ್‍ಎಂಎಲ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ಮಾರ್ಗ ಮಧ್ಯದಲ್ಲಿಯೇ ವ್ಯಕ್ತಿ ಸಾವನ್ನಪ್ಪಿದ್ದಾನೆ.  ಇದನ್ನೂ ಓದಿ: ನೀವು ಊರಿಗೆ ಹಿರಿಯರು, ಕೋಳಿ ಅಂಗಡಿ ಉದ್ಘಾಟನೆಗೆ ತಂದೆಯನ್ನು ಆಹ್ವಾನಿಸಿದ್ದರು: ಪ್ರವೀಣ್ ಬಗ್ಗೆ ಆರೀಫ್ ಮಾತು

    ರಾತ್ರಿ 10 ಗಂಟೆ ಸುಮಾರಿಗೆ ವಿಷ್ಣು ಮಂದಿರ ಮಾರ್ಗದಲ್ಲಿ ಮುನ್ನಾ ಕುಳಿತಿದ್ದ. ಈ ವೇಳೆ ಹೋಟೆಲ್‍ನಿಂದ ತಂದಿದ್ದ ಚಪಾತಿಯನ್ನು ಮುನ್ನ ತಿನ್ನತೊಡಗಿದ. ನಂತರ ಅಲ್ಲಿಗೆ ಬಂದ ಕುಡುಕನೋರ್ವ ಚಪಾತಿ ತನಗೂ ನೀಡುವಂತೆ ಕೇಳಿದಾಗ ಮುನ್ನಾ ಚಪಾತಿ ಕೊಟ್ಟಿದ್ದಾನೆ. ನಂತರ ಆರೋಪಿ ಮತ್ತೊಂದು ಚಪಾತಿ ನೀಡುವಂತೆ ಕೇಳಿದ್ದಾನೆ. ಆಗ ಚಪಾತಿ ನೀಡಲು ನಿರಾಕರಿಸಿದ್ದಕ್ಕೆ ಹರಿತವಾದ ಚಾಕುವನ್ನು ಹೊರತಂದು ಮುನ್ನಾನನ್ನು ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ತಿಳಿಸಿದ್ದರು.

    ಬಳಿಕ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಿದ ಪೊಲೀಸರು, ಕೊನೆಗೆ ರಸ್ತೆ ಬದಿಯ ಪಾರ್ಕ್ ಒಂದರಲ್ಲಿ ತಂಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಜನರ ಕಣ್ಣೀರು ಒರೆಸುವುದು ಬಿಟ್ಟು ಗೃಹ ಸಚಿವರೇ ಕಣ್ಣೀರು ಹಾಕ್ತಿದ್ದಾರೆ – ರಾಜೀನಾಮೆ ಕೊಟ್ಟು ಹೊರಡಲಿ: ಶ್ರೀನಿವಾಸ್ ಬಿ.ವಿ

    Live Tv
    [brid partner=56869869 player=32851 video=960834 autoplay=true]

  • ಮಸಾಲಾ ಚಪಾತಿ ಸಖತ್ ರುಚಿಯಾಗಿದೆ ನೀವೂ ಒಮ್ಮೆ ಟ್ರೈ ಮಾಡಿ

    ಮಸಾಲಾ ಚಪಾತಿ ಸಖತ್ ರುಚಿಯಾಗಿದೆ ನೀವೂ ಒಮ್ಮೆ ಟ್ರೈ ಮಾಡಿ

    ತಂಪಾದ ವಾತಾವರಣಕ್ಕೆ ಏನಾದರೂ ಬಿಸಿಬಿಸಿ, ರುಚಿಯಾದ ಖಾದ್ಯ ತಿನ್ನಲಿದ್ದರೆ ಬಹಳ ಚೆನ್ನಾಗಿರುತ್ತದೆ ಎಂದು ಹೆಚ್ಚಿನವರಿಗೆ ಅನಿಸುವುದುಂಟು. ಆದರೆ ಅದೇ ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ, ಬಿಸಿ ಬಿಸಿಯಾದ ಮಸಾಲಾ ಚಪಾತಿ ಟ್ರೈ ಮಾಡಬಹುದು. ನೀವು ಇಷ್ಟು ದಿನ ಮಾಡುತ್ತಿದ್ದ ಚಪಾತಿಗಿಂತ ವಿಭಿನ್ನವಾಗಿತ್ತದೆ ಮತ್ತು ಸಖತ್ ರುಚಿಯಾಗಿರುತ್ತದೆ.

    ಬೇಕಾಗುವ ಸಾಮಗ್ರಿಗಳು:
    * ಈರುಳ್ಳಿ- ಅರ್ಧ ಕಪ್
    * ಎಲೆಕೋಸು- ಅರ್ಧ ಕಪ್
    * ಕ್ಯಾರೆಟ್- ಅರ್ಧಕಪ್
    * ಕ್ಯಾಪ್ಸಿಕಂ- ಕಾಲು ಕಪ್
    * ಹಸಿಮೆಣಸಿನಕಾಯಿ- 3
    * ಕರೀಬೇವು, ಕೊತ್ತಂಬರಿ ಸೊಪ್ಪು- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು
    * ಶುಂಠಿ ಪೇಸ್ಟ್- ಸ್ವಲ್ಪ
    * ದನಿಯಾ ಪುಡಿ- ಅರ್ಧ ಚಮಚ
    * ಖಾರದಪುಡಿ- ಅರ್ಧ ಚಮಚ
    * ಗರಂ ಮಸಾಲಾ- ಸ್ವಲ್ಪ
    * ಜೀರಿಗೆ ಪುಡಿ- ಸ್ವಲ್ಪ
    * ಗೋಧಿ ಹಿಟ್ಟು – 2 ಕಪ್
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ಒಂದು ಪಾತ್ರೆ ಈರುಳ್ಳಿ, ಎಲೆಕೋಸು, ಕ್ಯಾರೆಟ್, ಕ್ಯಾಪ್ಸಿಕಂ, ಹಸಿಮೆಣಸಿನಕಾಯಿ, ಕರೀಬೇವು, ಕೊತ್ತಂಬರಿ ಸೊಪ್ಪು, ಶುಂಠಿ ಪೇಸ್ಟ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಸ್ವಲ್ಪ ಮಿಶ್ರಣ ಮಾಡಿಕೊಳ್ಳಬೇಕು.
    * ನಂತರ ಅದೇ ಮಿಶ್ರಣಕ್ಕೆ ದನಿಯಾ ಪುಡಿ, ಖಾರದಪುಡಿ, ಗರಂ ಮಸಾಲಾ, ಜೀರಿಗೆ ಪುಡಿ ಹಾಗೂ ಗೋಧಿ ಹಿಟ್ಟು ಹಾಕಿ ನೀರನ್ನು ಸೇರಿಸುತ್ತಾ ಮೃದುವಾಗಿ ಮಿಶ್ರಣ ಮಾಡಿಕೊಳ್ಳಬೇಕು. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ಈಗ ಈ ಮಿಶ್ರಣವನ್ನು ಚಪಾತಿಯ ಆಕಾರದನ್ನು ಲಟ್ಟಿಸಿಕೊಂಡಿಟ್ಟುಕೊಂಡಿರಬೇಕು.
    * ನಂತರ ತವಾಗೆ ಅಡುಗೆ ಎಣ್ಣೆಯನ್ನು ಹಾಕಿ ಬಿಸಿಮಾಡಿ ಒಂದೊಂದೆ ಮಸಾಲಾ ಚಪಾತಿಯನ್ನು ಬೇಯಿಸಿಕೊಳ್ಳಬೇಕು. ಇದನ್ನೂ ಓದಿ:   ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

  • ತಣ್ಣಗಿರುವ ಚಪಾತಿ ಕೊಟ್ಟಿದ್ದಕ್ಕೆ ಡಾಬಾ ಮಾಲೀಕನ ಮೇಲೆ ಯುವಕರಿಂದ ಶೂಟೌಟ್

    ತಣ್ಣಗಿರುವ ಚಪಾತಿ ಕೊಟ್ಟಿದ್ದಕ್ಕೆ ಡಾಬಾ ಮಾಲೀಕನ ಮೇಲೆ ಯುವಕರಿಂದ ಶೂಟೌಟ್

    ಲಕ್ನೋ: ತಣ್ಣಗಿರುವ ಚಪಾತಿ ನೀಡಿದ್ದಕ್ಕೆ ರೊಚ್ಚಿಗೆದ್ದ ಯುವಕರಿಬ್ಬರು ಡಾಬಾ ಮಾಲೀಕನ ಮೇಲೆ ಶೂಟೌಟ್ ಮಾಡಿದ ಅಮಾನವೀಯ ಗಟನೆಯೊಮದು ಉತ್ತರಪ್ರದೇಶದಲ್ಲಿ ನಡೆದಿದೆ.

    ಡಾಬಾ ಮಾಲೀಕನನ್ನು ಅವದೇಶ್ ಯಾದವ್ ಎಂದು ಗುರುತಿಸಲಾಗಿದೆ. ರಾತ್ರಿ 11.30ರ ಸುಮಾರಿಗೆ ಯುವಕರಿಬ್ಬರು ಉತ್ತರಪ್ರದೇಶದ ಏಟಾ ಬಸ್ ನಿಲ್ದಾಣದ ಬಳಿಯ ರಸ್ತೆ ಬದಿಯಲ್ಲಿರುವ ಡಾಬಾಗೆ ಬಂದಿದ್ದಾರೆ. ಅಂತೆಯೇ ಆಹಾರ ಆರ್ಡರ್ ಮಾಡಿದ್ದಾರೆ. ಬಳಿಕ ತಮಗೆ ಕೊಟ್ಟ ಚಪಾತಿ ತಣ್ಣಗಿದೆ ಎಂದು ದೂರಿದ ಯುವಕರು ಡಾಬಾ ಮಾಲೀಕನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.

    ಈ ಜಗಳ ತಾರಕ್ಕೇರಿದ್ದು, ಇಬ್ಬರಲ್ಲಿ ಓರ್ವ ಯುವಕ ತನ್ನಲ್ಲಿದ್ದ ಪಿಸ್ತೂಲ್ ತೆಗೆದು ಮಾಲೀಕನ ಕಾಲಿಗೆ ಗುಂಡು ಹಾರಿಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದವರು ಮಾಲೀಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ತೊಡೆಯ ಭಾಗದಲ್ಲಿ ಸಿಲುಕಿದ್ದ ಗುಂಡನ್ನು ವೈದ್ಯರು ಹೊರತೆಗೆದಿದ್ದಾರೆ. ಸದ್ಯ ಮಾಲೀಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನೆ ಸಂಬಂಧಿಸಿದಂತೆ ಆರೋಪಿಗಳಾದ ಅಮಿತ್ ಚೌಹಾಣ್ ಹಾಗೂ ಕೌಸ್ತುಭ್ ಮಿಶ್ರಾ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ ಪಿಸ್ತೂಲ್ ಅನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ.

  • ತಿಂಡಿಗೆ 40 ಚಪಾತಿ, ಊಟಕ್ಕೆ 10 ಪ್ಲೇಟ್ ಅನ್ನ- ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ನೋಡಿ ಅಧಿಕಾರಿಗಳು ಸುಸ್ತು

    ತಿಂಡಿಗೆ 40 ಚಪಾತಿ, ಊಟಕ್ಕೆ 10 ಪ್ಲೇಟ್ ಅನ್ನ- ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ನೋಡಿ ಅಧಿಕಾರಿಗಳು ಸುಸ್ತು

    ಪಾಟ್ನಾ: ಕ್ವಾರಂಟೈನ್ ಕೇಂದ್ರದಲ್ಲಿರುವ ವ್ಯಕ್ತಿಯೊಬ್ಬ ತಿಂಡಿಗೆ 40 ಚಪಾತಿ, ಊಟಕ್ಕೆ 10 ಪ್ಲೇಟ್ ಅನ್ನವನ್ನು ತಿನ್ನುವುದನ್ನು ನೋಡಿ ಅಧಿಕಾರಿಗಳು ಸುಸ್ತುಗಿದ್ದಾರೆ.

    ಈ ರೀತಿ ತಿನ್ನುವ ವ್ಯಕ್ತಿಯನ್ನು ಅನುಪ್ ಓಜಾ ಎಂದು ಗುರುತಿಸಲಾಗಿದೆ. ಈತ ದಿನದಲ್ಲಿ ತಿಂಡಿಗೆ ಬರೋಬ್ಬರಿ 40 ಚಪಾತಿಗಳನ್ನು ತಿಂದಿದ್ದಾನೆ. ಜೊತೆಗೆ ಊಟದ ಸಮಯದಲ್ಲಿ ಹತ್ತು ಪ್ಲೇಟ್ ಅನ್ನವನ್ನು ತಿಂದಿದ್ದಾನೆ. ಈ ಅಧುನಿಕ ಬಕಾಸುರನನ್ನು ನೋಡಿದ ಅಲ್ಲಿ ಅಧಿಕಾರಿಗಳು ಗೊಂದಲಕ್ಕೊಳಗಾಗಿದ್ದಾರೆ.

    ಈ ಘಟನೆ ಬಿಹಾರದ ಬಕ್ಸಾರ್ ನಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ. ಅನುಪ್ ರಾಜಸ್ಥಾನದಿಂದ ಬಿಹಾರಕ್ಕೆ ಮರಳಿದ್ದ, ಆದ್ದರಿಂದ ಸರ್ಕಾರದ ನಿಮಯದಂತೆ ಆತನನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಈ ವೇಳೆ ಈತ ದಿನಕ್ಕೆ ತಿಂಡಿಯ ವೇಳೆಗೆ 40 ಚಪಾತಿಯನ್ನು ತಿಂದಿದ್ದಾನೆ. ನಂತರ ಊಟದ ವೇಳೆಗೆ ಸುಮಾರು 10 ಪ್ಲೇಟ್ ಅನ್ನವನ್ನು ತಿಂದಿದ್ದಾನೆ. ಇದನ್ನು ನೋಡಿದ ಅಲ್ಲಿನ ಸಿಬ್ಬಂದಿ ಥಂಡಾ ಹೊಡಿದಿದ್ದಾರೆ.

    ಒಬ್ಬ ವ್ಯಕ್ತಿ ಜಾಸ್ತಿ ಊಟ ತಿನ್ನುತ್ತಾನೆ ಎಂದು ಕ್ವಾರಂಟೈನ್ ಕೇಂದ್ರದ ಸಿಬ್ಬಂದಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರ ಇದನ್ನು ಕೇಳಿ ಅಶ್ಚರ್ಯಗೊಂಡು ಅಧಿಕಾರಿಗಳು, ಊಟದ ವೇಳೆಗೆ ಕ್ವಾರಂಟೈನ್ ಕೇಂದ್ರಕ್ಕೆ ಬಂದಿದ್ದಾರೆ. ಈ ವೇಳೆ ವ್ಯಕ್ತಿ ಬರೋಬ್ಬರಿ ಹತ್ತು ಜನರು ತಿನ್ನುವ ಆಹಾರವನ್ನು ಒಬ್ಬನೇ ತಿಂದಿದ್ದಾನೆ. ಇದನ್ನು ಕಂಡ ಅಧಿಕಾರಿಗಳು ಅಘಾತಕ್ಕೊಳಗಾಗಿದ್ದಾರೆ. ಈ ರೀತಿ ತಿಂದರೆ ಕ್ವಾರಂಟೈನ್ ಕೇಂದ್ರದಲ್ಲಿ ಆಹಾರದ ಸಮಸ್ಯೆ ಎದುರಾಗುತ್ತದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಬ್ಲಾಕ್ ಡೆವಲಪ್ಮೆಂಟ್ ಆಫೀಸರ್ (ಬಿಡಿಒ) ಎಕೆ ಸಿಂಗ್, ಒಂದು ದಿನ ಕ್ವಾರಂಟೈನ್ ಕೇಂದ್ರದಲ್ಲಿ ‘ಲಿಟ್ಟಿ’ (ಬಿಹಾರದ ಒಂದು ಬಗೆಯ ತಿಂಡಿ)ಯನ್ನು ಮಾಡಿದ್ದಾರೆ. ಈ ವೇಳೆ ಪವನ್ 85 ಲಿಟ್ಟಿಗಳನ್ನು ತಿಂದಿದ್ದಾನೆ. ಜೊತೆಗೆ ರೊಟ್ಟಿ ಮಾಡಿದರೆ ಒಬ್ಬನೇ 20 ಜನ ತಿನ್ನವ ಆಹಾರವನ್ನು ಒಬ್ಬನೇ ತಿನ್ನುತ್ತಾನೆ. ಕ್ವಾರಂಟೈನ್ ಕೇಂದ್ರದಲ್ಲಿ ಅಡುಗೆ ಮಾಡುವವರು ಕೂಡ ನಾವು ಅಡುಗೆ ಮಾಡುವುದಿಲ್ಲ ಎಂದು ಹಠ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಬಿಹಾರದಲ್ಲಿ ಒಟ್ಟು 3,061 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 15 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 1,083 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

  • ಬಿಸಿ ಬಿಸಿ ಚಪಾತಿ ನೀಡದ್ದಕ್ಕೆ ಅತ್ತೆಯನ್ನೇ ಕೊಂದ

    ಬಿಸಿ ಬಿಸಿ ಚಪಾತಿ ನೀಡದ್ದಕ್ಕೆ ಅತ್ತೆಯನ್ನೇ ಕೊಂದ

    ಭೋಪಾಲ್: ವ್ಯಕ್ತಿಯೊಬ್ಬ ಬಿಸಿ ಬಿಸಿ ಚಪಾತಿ ನೀಡಲು ನಿರಾಕರಿಸಿದ್ದಕ್ಕೆ ಅತ್ತೆಯನ್ನೇ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.

    ಮಧ್ಯಪ್ರದೇಶದ ಬಿಲ್ಲೋರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗುಜರ್ ಬಾಯಿ (55) ಮೃತ ಮಹಿಳೆ. ಆರೋಪಿಯನ್ನು ಸುರೇಶ್ (35) ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಅತ್ತೆ-ಮಾವನ ಮನೆಯಲ್ಲಿ ವಾಸಿಸುತ್ತಿದ್ದನು ಎಂದು ಪೊಲೀಸ್ ಅಧಿಕಾರಿ ಜಗದೀಶ್ ಪಾಟೀದಾರ್ ತಿಳಿಸಿದ್ದಾರೆ.

    ಆರೋಪಿ ಸುರೇಶ್ ಮಂಗಳವಾರ ಮಧ್ಯರಾತ್ರಿ ಮನೆಗೆ ಆಗಮಿಸಿದ್ದನು. ಆಗ ಅತ್ತೆ ಗುಜರ್ ಬಾಯಿ (55) ಆತನಿಗೆ ಊಟ ಬಡಿಸಿದ್ದರು. ಈ ವೇಳೆ ಆರೋಪಿ ಬಿಸಿ ಚಪಾತಿ ನೀಡುವಂತೆ ಕೇಳಿದ್ದಾನೆ. ಆದರೆ ಅತ್ತೆ ಬಿಸಿ ಚಪಾತಿ ನೀಡಲು ನಿರಾಕರಿಸಿದ್ದಾರೆ. ಆಗ ಇಬ್ಬರ ಮಧ್ಯೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಆರೋಪಿ ಸುರೇಶ್ ದೊಣ್ಣೆಯಿಂದ ಹೊಡೆದು ಅತ್ತೆಯನ್ನು ಕೊಲೆ ಮಾಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಗುಜರ್ ಬಾಯಿ ಕಿರುಚಾಟ ಕೇಳಿ ಉಳಿದ ಕುಟುಂಬದ ಸದಸ್ಯರು ಓಡಿ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಬಾಯಿ ಮೃತಪಟ್ಟಿದ್ದು, ಆರೋಪಿ ಕೊಲೆ ಮಾಡಿ ಪರಾರಿಯಾಗಿದ್ದನು. ನಂತರ ಈ ಕುರಿತು ಮಾವ ಆರೋಪಿ ಸುರೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.

    ಪೊಲೀಸರು ಮಾವ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿ ಸುರೇಶ್‍ನನ್ನು ಬಂಧಿಸಿದ್ದಾರೆ.

  • ಯಾರೋ ಎಸೆದ ಚಪಾತಿಯನ್ನು ನೀರಿನಲ್ಲಿ ತೊಳೆದು ತಿಂದ ವೃದ್ಧ

    ಯಾರೋ ಎಸೆದ ಚಪಾತಿಯನ್ನು ನೀರಿನಲ್ಲಿ ತೊಳೆದು ತಿಂದ ವೃದ್ಧ

    – ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

    ವೃದ್ಧರೊಬ್ಬರು ನೀರಿನಲ್ಲಿ ಚಪಾತಿಯನ್ನು ತೊಳೆದು ತಿನ್ನುತ್ತಿರುವ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಸಚಿನ್ ಕೌಶಿಕ್ ಎಂಬವರು ಫೆಬ್ರವರಿ 20ರಂದು ತಮ್ಮ ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಹಾಕಿ ಅದಕ್ಕೆ, ಒಬ್ಬರಿಗೆ ಹೊಟ್ಟೆ ತುಂಬಿದೆ. ಇನ್ನೊಬ್ಬರಿಗೆ ಹಸಿವಾಗಿದೆ. ಯಾರೋ ಎಸೆದ ಚಪಾತಿಯನ್ನು ವೃದ್ಧ ತೊಳೆದು ತಿನ್ನುತ್ತಿದ್ದಾರೆ. ಇದು ಬಹಳ ಮನಕಲಕುವ ವಿಡಿಯೋ ಎಂದು ಟ್ವೀಟ್ ಮಾಡಿದ್ದಾರೆ.

    https://twitter.com/upcopsachin/status/1230553356701028354?ref_src=twsrc%5Etfw%7Ctwcamp%5Etweetembed%7Ctwterm%5E1230553356701028354&ref_url=https%3A%2F%2Fnavbharattimes.indiatimes.com%2Fviral-adda%2Ftrending%2Fold-man-wash-roti-before-eating-video-goes-viral-37012%2F

    ಈ ವಿಡಿಯೋ ಯಾವುದೋ ರೈಲ್ವೆ ಸ್ಟೇಶನ್‍ನಲ್ಲಿ ಸೆರೆ ಹಿಡಿಯಲಾಗಿದ್ದು, ಇದರಲ್ಲಿ ವೃದ್ಧರೊಬ್ಬರು ಚಪಾತಿಯನ್ನು ನೀರಿನಲ್ಲಿ ತೊಳೆದು ತಿನ್ನುತ್ತಿದ್ದಾರೆ. ಈ ವಿಡಿಯೋ ಎಲ್ಲಿ ಹಾಗೂ ಯಾವಾಗ ಸೆರೆ ಹಿಡಿಯಲಾಗಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

    ನೆಟ್ಟಿಗರು ಈ ವಿಡಿಯೋ ನೋಡಿ, ದಯವಿಟ್ಟು ಯಾರು ಊಟವನ್ನು ವ್ಯರ್ಥ ಮಾಡಬೇಡಿ. ಏಕೆಂದರೆ ಈ ಪ್ರಪಂಚದಲ್ಲಿ ಹಲವು ಮಂದಿಗೆ ದಿನಕ್ಕೆ ಎರಡು ಹೊತ್ತು ಊಟ ಸಿಗುವುದಿಲ್ಲ. ಹೀಗಿರುವಾಗ ಯಾರು ಸಹ ಊಟವನ್ನು ವ್ಯರ್ಥ ಮಾಡಬೇಡಿ ಎಂದು ರೀ-ಟ್ವೀಟ್ ಮಾಡುವ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಇದುವರೆಗೂ ಈ ವಿಡಿಯೋಗೆ 400ಕ್ಕೂ ಹೆಚ್ಚು ವ್ಯೂವ್ಸ್ ಬಂದಿದ್ದು, 108ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಇದರ ಹೊರತಾಗಿ ಹಲವು ಮಂದಿ ಈ ವಿಡಿಯೋಗೆ ರೀ-ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

    https://twitter.com/sahab_dhiman/status/1230675524680404994?ref_src=twsrc%5Etfw%7Ctwcamp%5Etweetembed%7Ctwterm%5E1230675524680404994&ref_url=https%3A%2F%2Fnavbharattimes.indiatimes.com%2Fviral-adda%2Ftrending%2Fold-man-wash-roti-before-eating-video-goes-viral-37012%2F