Tag: ಚನ್ನೈ ಸೂಪರ್ ಕಿಂಗ್ಸ್

  • ಜಿಯೋ ಸಿನಿಮಾದಲ್ಲಿ ದಾಖಲೆ ಬರೆದ ಧೋನಿಯ ಅವಳಿ ಸಿಕ್ಸರ್

    ಜಿಯೋ ಸಿನಿಮಾದಲ್ಲಿ ದಾಖಲೆ ಬರೆದ ಧೋನಿಯ ಅವಳಿ ಸಿಕ್ಸರ್

    ಚೆನ್ನೈ: ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ (MA Chidambaram Stadium) ಸೋಮವಾರ ನಡೆದ ಚನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ವಿರುದ್ಧದ ಐಪಿಎಲ್‍ನ (IPL) ಆರನೇ ಪಂದ್ಯದಲ್ಲಿ ಧೋನಿ (MS Dhoni) ಸಿಡಿಸಿದ ಅವಳಿ ಸಿಕ್ಸರ್‌ಗಳು ಜಿಯೋ ಸಿನಿಮಾದಲ್ಲಿ 1.7 ಕೋಟಿ ವೀಕ್ಷಣೆ ಕಂಡಿದ್ದು ನೂತನ ದಾಖಲೆ ನಿರ್ಮಿಸಿದೆ.

    ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಬ್ಯಾಟಿಂಗ್‍ನಲ್ಲಿ ಅಬ್ಬರಿಸಿದ್ದ ಧೋನಿ ಆಟವನ್ನು ಜಿಯೋ ಸಿನಿಮಾದಲ್ಲಿ 1.6 ಕೋಟಿ ಮಂದಿ ವೀಕ್ಷಣೆ ಮಾಡಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಜಿಯೋ ಸಿನಿಮಾದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡಿದ್ದ ಪಂದ್ಯವಾಗಿತ್ತು. ಆದರೆ ಈಗ ಈ ದಾಖಲೆಯನ್ನು ಸೋಮವಾರ ನಡೆದ ಪಂದ್ಯ ಮುರಿದಿದೆ. ಇದನ್ನೂ ಓದಿ: ಗಾಯಕ್ವಾಡ್‌ ಭರ್ಜರಿ ಬ್ಯಾಟಿಂಗ್‌, ಮೊಯಿನ್‌ ಅಲಿ ಮಾರಕ ಬೌಲಿಂಗ್‌ – ತವರಿನಲ್ಲಿ ಚೆನ್ನೈಗೆ 12 ರನ್‌ಗಳ ಜಯ

    ಲಕ್ನೋ ವಿರುದ್ಧದ ಪಂದ್ಯದಲ್ಲಿ 20ನೇ ಓವರ್‍ನ ಮೊದಲ ಎಸೆತಕ್ಕೆ ರವೀಂದ್ರ ಜಡೇಜಾ ಔಟಾದ ಬಳಿಕ ಕ್ರೀಸ್‍ಗೆ ಆಗಮಿಸಿದ ಧೋನಿ ಎದುರಾಳಿ ತಂಡದ ವೇಗಿ ಮಾರ್ಕ್‍ವುಡ್ ಎಸೆದ 3 ಎಸೆತಗಳಿಗೆ ಎರಡು ಸಿಕ್ಸರ್ ಬಾರಿಸಿದರು. 148 ಕಿ.ಮೀ ವೇಗವಾಗಿ ಧೋನಿಯತ್ತ ನುಗ್ಗಿದ ಚೆಂಡು ಬ್ಯಾಟ್ ಪ್ರಹಾರಕ್ಕೆ 89 ಮೀಟರ್ ದೂರಕ್ಕೆ ಹೋಗಿತ್ತು. ನಂತರದ ಎಸೆತವನ್ನು ಧೋನಿ ಸಿಕ್ಸರ್‌ಗೆ ಅಟ್ಟುವ ಪ್ರಯತ್ನ ಮಾಡಿದ್ದರು. ಆದರೆ ಈ ಪ್ರಯತ್ನ ವಿಫಲವಾಗಿ ಕ್ಯಾಚ್ ನೀಡಿ ಅಂಗಳ ತೊರೆದರು.

    ಸಿಎಸ್‍ಕೆ 7 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿದರೆ ಲಕ್ನೋ 7 ವಿಕೆಟ್ ನಷ್ಟಕ್ಕೆ 205 ರನ್ ಪೇರಿಸಿತು. ಈ ಮೂಲಕ ಚೆನ್ನೈ 12 ರನ್‍ಗಳ ಜಯದೊಂದಿಗೆ ಐಪಿಎಲ್‍ನಲ್ಲಿ ಮೊದಲ ಗೆಲುವು ಸಾಧಿಸಿತು. ಇದನ್ನೂ ಓದಿ: IPL 2023 – ಚಿಯರ್‌ ಗರ್ಲ್ಸ್‌ ಝಲಕ್‌ ನೋಡಿ

  • ದೀಪಕ್ ಚಹರ್ ಮಾರಕ ಬೌಲಿಂಗ್‍ಗೆ ಪಂಜಾಬ್ ಬಲಿ – ಚೆನ್ನೈಗೆ 6 ವಿಕೆಟ್‍ಗಳ ಭರ್ಜರಿ ಜಯ

    ದೀಪಕ್ ಚಹರ್ ಮಾರಕ ಬೌಲಿಂಗ್‍ಗೆ ಪಂಜಾಬ್ ಬಲಿ – ಚೆನ್ನೈಗೆ 6 ವಿಕೆಟ್‍ಗಳ ಭರ್ಜರಿ ಜಯ

    ಮುಂಬೈ: ಪಂಜಾಬ್ ಕಿಂಗ್ಸ್ ವಿರದ್ಧ 6 ವಿಕೆಟ್ ಗಳ ಭರ್ಜರಿ ಜಯದೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್‍ನಲ್ಲಿ ಶುಭಾರಂಭ ಮಾಡಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ದೀಪಕರ್ ಚಹರ್ ಅವರ ಮಾರಕ ಬೌಲಿಂಗ್‍ಗೆ ತತ್ತರಿಸಿ 8 ವಿಕೆಟ್ ನಷ್ಟಕ್ಕೆ 106 ರನ್‍ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಚೈನ್ನೈ 15.4 ಓವರ್‍ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 107 ರನ್ ಹೊಡೆದು ಜಯ ಸಾಧಿಸಿತು.

    ಚೆನ್ನೈ ಪರ ಆರಂಭಿಕ ಆಟಗಾರ ಫಾ ಡುಪ್ಲೆಸಿಸ್ ಔಟಾಗದೇ 36 ರನ್(33 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದರೆ, ಮೊಯಿನ್ ಆಲಿ 46 ರನ್(31 ಎಸೆತ, 7 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.

    ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತ್ತು. ಆರಂಭಿಕ ಬ್ಯಾಟ್ಸ್ ಮ್ಯಾನ್ ಕನ್ನಡಿಗ ಮಯಾಂಕ್ ಅಗರ್‍ ವಾಲ್ ಶೂನ್ಯಕ್ಕೆ ಔಟಾದರೆ ಇನ್ನೂರ್ವ ಕನ್ನಡಿಗ ಕೆ.ಎಲ್ ರಾಹುಲ್ 5 ರನ್ ಗಳಿಸಿದ್ದಾಗ ರನೌಟ್ ಆದರು. ಕಳೆದ ಪಂದ್ಯದ ಹೀರೋಗಳಾದ ಕ್ರೀಸ್ ಗೇಲ್ 10 ರನ್(10 ಎಸೆತ, 2 ಬೌಂಡರಿ) ಬಾರಿಸಿ ಔಟ್ ಆದರೆ ಅವರ ಹಿಂದೆಯೇ ದೀಪಕ್ ಹೂಡ 10 ರನ್ (15 ಎಸೆತ,1 ಬೌಂಡರಿ) ಬಾರಿಸಿ ಡಗೌಟ್ ಸೇರಿಕೊಂಡರು. ಇಷ್ಟುತ್ತಿಗಾಗಲೇ ಪಂಜಾಬ್ ತಂಡ 19 ರನ್‍ಗಳಿಗೆ 4 ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೆಳಕ್ರಮಾಂಕದಲ್ಲಿ ಬಂದ ಯಾವೊಬ್ಬ ಬ್ಯಾಟ್ಸ್ ಮ್ಯಾನ್ ಕೂಡ ಪಂಜಾಬ್ ಸ್ಕೋರ್ ಹೆಚ್ಚಿಸಲು ಮುಂದಾಗಲಿಲ್ಲ.

    ಶಾರೂಕ್ ಖಾನ್ ಅವರು 47 ರನ್( 36 ಎಸೆತ, 4 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡದ ಮೊತ್ತ 100 ರನ್‍ಗಳ ಗಡಿ ದಾಟುವಂತೆ ಮಾಡಿದರು.

    ದೀಪಕ್ ಚಹರ್ 4 ಓವರ್ ಎಸೆದು 13 ರನ್ ನೀಡಿ 4 ವಿಕೆಟ್ ಪಡೆದಿದ್ದು ಚೆನ್ನೈ ತಂಡಕ್ಕೆ ನೆರವಾಗಿತ್ತು. ಮಯಾಂಕ್ ಅಗರ್‍ ವಾಲ್, ಕ್ರೀಸ್ ಗೇಲ್, ದೀಪಕ್ ಹೂಡಾ, ನಿಕೊಲಸ್ ಪೂರನ್ ಅವರನ್ನು ಔಟ್ ಮಾಡಿದ್ದು ಮಾತ್ರವಲ್ಲೇ ಒಂದು ಓವರ್ ಮೇಡನ್ ಎಸೆದು ಪಂಜಾಬ್ ತಂಡವನ್ನು ಯಶಸ್ವಿಯಾಗಿ ನಿಯಂತ್ರಿಸಿದರು.