Tag: ಚನ್ನಿಗಪ್ಪ

  • ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನಿಲ್ತಾರ ನಿಖಿಲ್ ಕುಮಾರಸ್ವಾಮಿ?

    ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನಿಲ್ತಾರ ನಿಖಿಲ್ ಕುಮಾರಸ್ವಾಮಿ?

    ತುಮಕೂರು: ನಟ ನಿಖಿಲ್ ಕುಮಾರಸ್ವಾಮಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸ್ತಾರಾ? ಮಾಜಿ ಸಚಿವ ಹಾಗೂ ತುಮಕೂರು ಜೆಡಿಎಸ್ ಜಿಲ್ಲಾಧ್ಯಕ್ಷ ಚೆನ್ನಿಗಪ್ಪನವರು ನೀಡಿದ ಹೇಳಿಕೆಯಿಂದ ಈ ಪ್ರಶ್ನೆ ಈಗ ಎದ್ದಿದೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಗೌಡರನ್ನು ತುಮಕೂರು ಕ್ಷೇತ್ರದಿಂದ ಕಣಕ್ಕಿಳಿಸುವಂತೆ ಮನವಿ ಮಾಡಿಕೊಂಡಿದ್ದೇವೆ. ನಿಖಿಲ್ ಗೌಡರಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವೇದಿಕೆಯಲ್ಲಿ ಗಳಗಳನೇ ಕಣ್ಣೀರಿಟ್ಟ ಜೆಡಿಎಸ್ ಮಾಜಿ ಸಚಿವ ಚನ್ನಿಗಪ್ಪ

    ಒಂದು ವೇಳೆ ಭವಾನಿ ರೇವಣ್ಣಗೆ ಟಿಕೆಟ್ ಕೊಟ್ಟರೆ ಹೇಗೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಭವಾನಿ ರೇವಣ್ಣಗೆ ಕೊಟ್ಟರೂ ಅಡ್ಡಿಯಿಲ್ಲ. ಯಾರದರೂ ಇರಲಿ ನಮ್ಮ ಪಾರ್ಟಿ ಇರಬೇಕು. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧ. ದೇವೇಗೌಡರಿಗೆ ನೋವಾಗಬಾರದು ಎಂದರು.

    ಇದೇ ವೇಳೆ ಮೈತ್ರಿ ಸರ್ಕಾರದ ಕುರಿತು ಮಾತನಾಡಿದ ಚೆನ್ನಿಗಪ್ಪ, ಮೈತ್ರಿ ಸರ್ಕಾರ ಐದು ವರ್ಷ ಪೂರೈಸುತ್ತದೆ. ಸಿಎಂ ಕುಮಾರಸ್ವಾಮಿ ಸ್ವಭಾವ ವರ್ಣಿಸಿದ ಚೆನ್ನಿಗಪ್ಪ ಕುಮಾರಣ್ಣ ಎಲ್ಲಾ ಪಕ್ಷದವರೊಂದಿಗೂ ಉತ್ತಮ ಸಂಬಂಧ ಇಟ್ಟುಕೊಂಡು ಸೌಜನ್ಯದಿಂದ ನಡೆದುಕೊಳ್ಳುತ್ತಾರೆ ಎಂದರು.

  • ನಮ್ಮ ತಂಟೆಗೆ ಬಂದ್ರೆ ನಿನ್ ಕಥೆ ಅಷ್ಟೆ – ಸುರೇಶ್‍ಗೌಡಗೆ ಚನ್ನಿಗಪ್ಪ ಅವಾಜ್

    ನಮ್ಮ ತಂಟೆಗೆ ಬಂದ್ರೆ ನಿನ್ ಕಥೆ ಅಷ್ಟೆ – ಸುರೇಶ್‍ಗೌಡಗೆ ಚನ್ನಿಗಪ್ಪ ಅವಾಜ್

    ತುಮಕೂರು: ಮಾಜಿ ಸಚಿವ ಚನ್ನಿಗಪ್ಪ ಅವರು ಪರಾಜಿತ ಅಭ್ಯರ್ಥಿ ಸುರೇಶ್ ಗೌಡಗೆ ಆವಾಜ್ ಹಾಕಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಎಲೆಕ್ಷನ್‍ನಲ್ಲಿ ಸೋತಿದ್ದಿಯಾ. ಮುಚ್ಕೊಂಡು ನಡಿಯಲೋ ಕಂಡಿದ್ದೀನಿ. ಏಯ್ ಹುಷಾರ್. ನಮ್ಮ ತಂಟೆಗೆ ಬಂದರೆ ಬಂದ್ರೆ ಅಷ್ಟೇ ನಿನ್ ಕಥೆ ಅಂತ ಧಮ್ಕಿ ಹಾಕಿದ್ದಾರೆ. ಇದೀಗ ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದೆ.

    ಸುರೇಶ್ ಗೌಡರನ್ನ ಮೆಂಟಲ್ ಸುರೇಶ್ ಗೌಡ ಅಂತಾರೇ. ಸುರೇಶ್ ಗೌಡನಂತ ದಬ್ಬಾಳಿಕೆ ನಾನೂ ಮಾಡಿಲ್ಲ. ಯೂನಿವರ್ಸಿಟಿಯಲ್ಲಿ ನಕಲಿ ಅಂಕಪಟ್ಟಿ, ನಕಲಿ ಟಿಸಿ ಮಾರಾಟ ಮಾಡಿಸಿದವರು. ಸರ್ಕಾರಿ ಮೈದಾನಕ್ಕೆ ಬರ್ಲಿ. ನಾನು ಮಾತಾಡ್ತೆನೆ, ಅವನು ಮಾತಾಡಲಿ. ಅವನ ತಾಕತ್ ಪ್ರದರ್ಶನ ಮಾಡಲಿ ಅಂತ ಸುರೇಶ್‍ಗೌಡಗೆ ಚೆನ್ನಿಗಪ್ಪ ಓಪನ್ ಚಾಲೆಂಜ್ ಹಾಕಿದ್ದಾರೆ.