Tag: ಚನ್ನಗಿರಿ ಶಾಸಕ

  • ಮಾಡಾಳ್ ಕುಟುಂಬದಿಂದ ಖತರ್ನಾಕ್ ಪ್ಲಾನ್- ಲೋಕಾಯುಕ್ತ ಬರುತ್ತೆ ಅಂತ ಸಿಸಿಟಿವಿ ಆಫ್!

    ಮಾಡಾಳ್ ಕುಟುಂಬದಿಂದ ಖತರ್ನಾಕ್ ಪ್ಲಾನ್- ಲೋಕಾಯುಕ್ತ ಬರುತ್ತೆ ಅಂತ ಸಿಸಿಟಿವಿ ಆಫ್!

    ದಾವಣಗರೆ: ಶಾಸಕ ಮಾಡಾಳು ವಿರೂಪಾಕ್ಷಪ್ಪ (Madal Virupakshappa) ಚನ್ನಗಿರಿ ಮನೆಯ ಮೇಲೂ ಲೋಕಾಯುಕ್ತ ದಾಳಿ ನಡೆಸಿದೆ. ಲೋಕಾಯುಕ್ತ (Lokayukta) ಅಧಿಕಾರಿಗಳು ಬರುತ್ತಿರುವ ವಿಚಾರ ತಿಳಿಯುತ್ತಿದ್ದಂತೆಯೇ ಮಾಡಾಳು ಕುಟುಂಬಸ್ಥರು ಖತರ್ನಾಕ್ ಪ್ಲಾನ್ ಮಾಡಿದ್ದಾರೆ.

    ಹೌದು. ಲೋಕಾಯುಕ್ತ ಅಧಿಕಾರಿಗಳು ಬರುತ್ತಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಕುಟುಂಬಸ್ಥರು ಮನೆಯ ಸಿಸಿಟಿವಿ ಆಫ್ ಮಾಡಿದ್ದರು. ಅಲ್ಲದೆ ಸಿಸಿಟಿವಿ ಆಫ್ ಮಾಡಿ ಹಣ ಸಾಗಾಟ ಮಾಡಿರೋ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದಿದ್ದಾರೆ.

    ಚನ್ನಗಿರಿ ಮನೆಯಲ್ಲಿ ಅಲ್ಪ ಪ್ರಮಾಣದ ಹಣ ಮತ್ತು ಚಿನ್ನಾಭರಣ ಮಾತ್ರ ಪತ್ತೆಯಾಗಿದೆ. ಇನ್ನೂ 16 ಲಕ್ಷದ 47 ಸಾವಿರ ಹಣವನ್ನು ಕೂಡ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪುತ್ರ ಸಿಕ್ಕಿಬಿದ್ದ ಬೆನ್ನಲ್ಲೇ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ನಾಪತ್ತೆ

    ಶಾಸಕರು ನಾಪತ್ತೆ: ಇತ್ತ ಲೋಕಾಯುಕ್ತ ಅಧಿಕಾರಿಗಳ ಪುತ್ರ ಬಲೆಗೆ ಬೀಳುತ್ತಿದ್ದಂತೆಯೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಶಾಸಕರ ದಾವಣಗೆರೆಯ ಮನೆ ಮೇಲೂ ರೇಡ್- ಇಂದು ಬೇನಾಮಿ ಆಸ್ತಿ ಮೇಲೂ ದಾಳಿ ಸಾಧ್ಯತೆ

    ಲೋಕಾಯುಕ್ತ ದಾಳಿ ವೇಳೆ 40 ಲಕ್ಷ ಪಂಚ ಪಡೆಯುವಾಗ ಹಾಗೂ ಅಪಾರ ಪ್ರಮಾಣದ ನಗದು ಸಿಕ್ಕ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಎಫ್‍ಐಆರ್ ನಲ್ಲಿ A1 ಆರೋಪಿ. ಹೀಗಾಗಿ ಬಂಧನ ಭೀತಿ ಹಿನ್ನೆಲೆಯಲ್ಲಿ ಶಾಸಕರು ಅಜ್ಞಾತ ಸ್ಥಳದಲ್ಲಿದ್ದು, ಈಗಾಗಲೇ ಕಾನೂನು ತಜ್ಞರ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಮುಂದಿನ ಕಾನೂನು ಹೋರಾಟದ ಬಗ್ಗೆ ತಜ್ಞರಿಂದ ಅಜ್ಞಾತ ಸ್ಥಳದಿಂದ ಮಾಡಾಳ್ ವಿರೂಪಾಕ್ಷಪ್ಪ ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

  • ನೀವೇನು ವೋಟ್ ಹಾಕದಿದ್ರೆ ಪ್ರಪಂಚ ಮುಳುಗಿ ಹೋಗಲ್ಲ: ಮಾಡಾಳ್ ವಿರೂಪಾಕ್ಷಪ್ಪ

    ನೀವೇನು ವೋಟ್ ಹಾಕದಿದ್ರೆ ಪ್ರಪಂಚ ಮುಳುಗಿ ಹೋಗಲ್ಲ: ಮಾಡಾಳ್ ವಿರೂಪಾಕ್ಷಪ್ಪ

    – ಶಾಸಕರಿಗೆ ಬುದ್ಧಿ ಕಲಿಸುತ್ತೇವೆ ಎಂದ ಗ್ರಾಮಸ್ಥರು

    ದಾವಣಗೆರೆ: ನೀವೇನು ವೋಟ್ ಹಾಕದಿದ್ದರೆ ಪ್ರಪಂಚ ಮುಳುಗಿ ಹೋಗಲ್ಲ ಎಂದು ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ತಮ್ಮ ಕ್ಷೇತ್ರದ ಎನ್.ಬಸವನಹಳ್ಳಿ ಗ್ರಾಮಸ್ಥರ ಮೇಲೆ ದರ್ಪ ಮೆರೆದಿದ್ದಾರೆ.

    ಮೂಲ ಸೌಕರ್ಯ ಒದಗಿಸದ ಹಿನ್ನಲೆಯಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣಾ ಮತದಾನವನ್ನು ಎನ್.ಬಸವನಹಳ್ಳಿ ಗ್ರಾಮಸ್ಥರು ಬಹಿಷ್ಕರಿಸಿದ್ದರು. ಇಂದು ಗ್ರಾಮಸ್ಥರ ಮನವೊಲಿಸಲು ಬಂದಿದ್ದಾಗ ಶಾಸಕರು ದರ್ಪ ಮೆರೆದಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿಯೇ ಇದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ಓದಿ: 387 ಮತದಾರರಿರುವ ಗ್ರಾಮದಲ್ಲಿ ಒಂದೇ ಮತ ಚಲಾವಣೆ

    ಶಾಸಕರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿದ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಸರಿಯಾಗಿ ಬುದ್ಧಿ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಎನ್.ಬಸವನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಕುಸಿದು ಬಿದ್ದಿದೆ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಡುವಂತಾಗಿದ್ದು, ಇಂತ ಕಟ್ಟಡದಲ್ಲಿಯೇ ಮಕ್ಕಳಿಗೆ ಬಿಸಿಯೂಟದ ತಯಾರಿಸಿ ಕೊಡಲಾಗುತ್ತಿದೆ. ಈ ಕುರಿತು ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಅವರು ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ಗ್ರಾಮದ ಯುವಕ ಆರೋಪಿಸಿದ್ದಾನೆ.