Tag: ಚನ್ನಗಿರಿ

  • ಸಭೆಗೆ ಬರೋಕಷ್ಟೇ ಪ್ರೆಗ್ನೆಂಟ್ ಇರ್ತಾರೆ, ಗಿಂಬಳ ತಗೊಳ್ಳುವಾಗ ಇರಲ್ವಾ – ಮಹಿಳಾ ಅಧಿಕಾರಿ ವಿರುದ್ಧ `ಕೈ’ ಶಾಸಕ ನಿಂದನೆ

    ಸಭೆಗೆ ಬರೋಕಷ್ಟೇ ಪ್ರೆಗ್ನೆಂಟ್ ಇರ್ತಾರೆ, ಗಿಂಬಳ ತಗೊಳ್ಳುವಾಗ ಇರಲ್ವಾ – ಮಹಿಳಾ ಅಧಿಕಾರಿ ವಿರುದ್ಧ `ಕೈ’ ಶಾಸಕ ನಿಂದನೆ

    ದಾವಣಗೆರೆ: ಸಭೆಗೆ ಬರೋಕೆ ಮಾತ್ರ ಪ್ರೆಗ್ನೆಂಟ್ ಇರ್ತಾರೆ, ಗಿಂಬಳ ತೆಗೆದುಕೊಳ್ಳುವಾಗ ಪ್ರೆಗ್ನೆಂಟ್ ಇರಲ್ವಾ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ (Shivaganga Basavaraj) ಮಹಿಳಾ ಅಧಿಕಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

    ಚನ್ನಗಿರಿಯಲ್ಲಿ (Channagiri) ನಡೆದ ತ್ರೈಮಾಸಿಕ ಕೆಡಿಪಿ ಸಭೆಗೆ ವಲಯ ಅರಣ್ಯಾಧಿಕಾರಿ ಶ್ವೇತಾ ಗೈರಾಗಿದ್ದರು. ಈ ಹಿನ್ನೆಲೆ ಮಹಿಳಾ ಅಧಿಕಾರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಮೀಟಿಂಗ್ ಬನ್ನಿ ಅಂದ್ರೆ ಪ್ರೆಗ್ನೆಂಟ್ ಇದೀನಿ ಅಂತಾ ಹೇಳ್ತಾರೆ. ಅದೇ ಗಿಂಬಳ ಪಡೆಯುವಾಗ, ಕಲೆಕ್ಷನ್ ಮಾಡುವಾಗ ಪ್ರೆಗ್ನೆಂಟ್ ಇರಲ್ವಾ ಎಂದು ಪ್ರಶ್ನಿಸಿದ್ದಾರೆ. ಪ್ರತಿ ಬಾರಿ ಚಕಪ್‌ಗೆ ಹೋಗಿದೀನಿ, ಅಲ್ಲಿ ಹೋಗಿದೀನಿ, ಇಲ್ಲಿ ಹೋಗಿದೀನಿ ಎಂದು ಹೇಳ್ತಾರೆ. ಪ್ರೆಗ್ನೆಂಟ್ ಇದ್ದರೆ ರಜೆ ತೆಗೆದುಕೊಳ್ಳಿ. ಈ ತರ ಹೇಳೋಕೆ ನಿಮಗೆ ನಾಚಿಕೆ ಆಗೋದಿಲ್ವಾ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: Mandya | 60 ವರ್ಷದ ಹಿಂದೂ ಸ್ಮಶಾನ ಈಗ ಮುಸ್ಲಿಂ ಮಕಾನ್

    ಡೆಲಿವರಿ ಲಾಸ್ಟ್ ಡೇಟ್‌ವರೆಗೂ ಡ್ಯೂಟಿ ಬೇಕು, ಸಂಬಳ ಬೇಕು, ಗಿಂಬಳ ಬೇಕು. ಆದರೆ ಡ್ಯೂಟಿ ಮಾಡಕ್ಕೆ ಆಗಲ್ಲ. ಮಾತು ಎತ್ತಿದ್ರೆ ಪ್ರೆಗ್ನೆಂಟ್ ಅಂತೀರಾ, ನಾಚಿಕೆ ಆಗಲ್ವಾ? ರಜೆ ಹಾಕ್ಕೊಳ್ಳಿ, ಪ್ರೆಗ್ನೆನ್ಸಿ ರಜೆ ಇದೆಯಲ್ಲ. ಇದಕ್ಕೆ ಇಮಿಡಿಯಟ್ ಆಕ್ಷನ್ ತಗೋಬೇಕು, ನೋಟಿಸ್ ಕಳುಹಿಸಿ ಎಂದು ಸೂಚನೆ ನೀಡಿದ್ದಾರೆ.

    ಸದ್ಯ ಶಾಸಕ ಶಿವಗಂಗಾ ಬಸವರಾಜ್ ಅವರ ವರ್ತನೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗರ್ಭಿಣಿ ಅಧಿಕಾರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.ಇದನ್ನೂ ಓದಿ:ಕೊಪ್ಪಳ | KPCC ಕಾರ್ಮಿಕ ವಿಭಾಗದ ಕಾರ್ಯದರ್ಶಿ ಮೇಲೆ ಹಲ್ಲೆ – ಪಿಎಸ್‌ಐ ಸಸ್ಪೆಂಡ್

  • Davanagere | ಗೋಲ್ಡ್ ಲೋನ್ ರಿನಿವಲ್ ಮಾಡಲು ಬಂದಿದ್ದ ಮಹಿಳೆಯ 3.5 ಲಕ್ಷ ಹಣ ಎಗರಿಸಿದ ಕಳ್ಳಿಯರು

    Davanagere | ಗೋಲ್ಡ್ ಲೋನ್ ರಿನಿವಲ್ ಮಾಡಲು ಬಂದಿದ್ದ ಮಹಿಳೆಯ 3.5 ಲಕ್ಷ ಹಣ ಎಗರಿಸಿದ ಕಳ್ಳಿಯರು

    ದಾವಣಗೆರೆ: ಬಂಗಾರದ ಲೋನ್ ರಿನಿವಲ್ (Gold Loan Renewal) ಮಾಡಲು ಬಂದಿದ್ದ ಮಹಿಳೆಯ ಹಣ ಎಗರಿಸಿ ಕಳ್ಳಿಯರು ಎಸ್ಕೇಪ್ ಆದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ಸಂತೆಬೆನ್ನೂರು ಕೆನರಾ ಬ್ಯಾಂಕ್‌ನಲ್ಲಿ ನಡೆದಿದೆ.

    ಚನ್ನಗಿರಿ ತಾಲೂಕಿನ ತಣಿಗೆರೆ ಗ್ರಾಮದ ಲತಾ ಬಂಗಾರದ ಸಾಲ ನವೀಕರಣಕ್ಕೆಂದು ಪತಿಯೊಂದಿಗೆ ಬ್ಯಾಂಕ್‌ಗೆ ಬಂದಿದ್ದರು. ಈ ವೇಳೆ ಪೆನ್ ನೀಡುವ ನೆಪದಲ್ಲಿ ಲತಾ ಬಳಿ ಇದ್ದ 3.5 ಲಕ್ಷ ರೂ. ಅನ್ನು ಖತರ್ನಾಕ್ ಕಳ್ಳಿಯರು ಎಗರಿಸಿದ್ದಾರೆ. ಕಳ್ಳಿಯರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ:  ವಿದೇಶಗಳಲ್ಲಿ ಆಸ್ತಿ ಮಾಡಿದ್ರೆ ಸರ್ಕಾರಕ್ಕೆ ಬರೆದುಕೊಡುವೆ – ಇಡಿ ದಾಳಿಗೊಳಗಾಗಿದ್ದ ಶಾಸಕ ಸುಬ್ಬಾರೆಡ್ಡಿ ಸವಾಲ್‌

    ಹಣ ಕಳುವಾಗಿದೆ ಎಂದು ಅರಿತುಕೊಂಡ ಲತಾ ದಂಪತಿ ಕೂಡಲೇ ಎಚ್ಚೆತ್ತುಕೊಂಡು ಮದ್ಯ ಪ್ರದೇಶ ಮೂಲದ ಇಬ್ಬರನ್ನು ಹಿಡಿದು ಅವರ ಬಳಿ ಇದ್ದ ಎರಡೂವರೆ ಲಕ್ಷ ರೂ. ಹಣ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಒಂದು ಲಕ್ಷ ರೂ.ನೊಂದಿಗೆ ಮತ್ತೊಬ್ಬ ಕಳ್ಳಿ ಎಸ್ಕೇಪ್ ಆಗಿದ್ದಾಳೆ. ಸಂತೆಬೆನ್ನೂರು ಪೊಲೀಸರು ಇಬ್ಬರು ಮಹಿಳೆಯರ ವಿಚಾರಣೆ ನಡೆಸುತ್ತಿದ್ದು, ಮತ್ತೊಬ್ಬಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  ಇದನ್ನೂ ಓದಿ: ರಾಯಚೂರಿನಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ – ಜಮೀನಿನಲ್ಲಿ ಕುಸಿದು ಬಿದ್ದು ರೈತ ಸಾವು

  • ದಾವಣಗೆರೆ| ಬಟ್ಟೆ ತೊಳೆಯಲು ಹೋಗಿದ್ದ ಮೂವರು ಮಹಿಳೆಯರು ನೀರಿನಲ್ಲಿ ಮುಳುಗಿ ಸಾವು

    ದಾವಣಗೆರೆ| ಬಟ್ಟೆ ತೊಳೆಯಲು ಹೋಗಿದ್ದ ಮೂವರು ಮಹಿಳೆಯರು ನೀರಿನಲ್ಲಿ ಮುಳುಗಿ ಸಾವು

    ದಾವಣಗೆರೆ: ಬಟ್ಟೆ ತೊಳೆಯಲು (Cloth Wash) ಹೋಗಿದ್ದ ಮೂವರು ಮಹಿಳೆಯರು ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ.

    ದೀಪಾ (28), ಚಂದನಾ (19), ದೀಪಾ (23) ಸಾವನ್ನಪ್ಪಿದ ಮಹಿಳೆಯರು. ಮಹಿಳೆಯರು ಲಕ್ಷ್ಮೀ ಸಾಗರ ಗ್ರಾಮದ ಹೊಸ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ಚನ್ನಗಿರಿ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಕೆರೆಯಿಂದ ಮೇಲೆತ್ತಿದ್ದಾರೆ. ಇದನ್ನೂ ಓದಿ: ಹಳೆ ವೈಷಮ್ಯಕ್ಕೆ ಚಾಕುವಿನಿಂದ 30 ಬಾರಿ ಇರಿದು ಹತ್ಯೆ – ಬಳಿಕ ಪೊಲೀಸರಿಗೆ ಶರಣಾದ ಆರೋಪಿಗಳು

    ಸ್ಥಳಕ್ಕೆ ತಹಶೀಲ್ದಾರ್ ನಾಗರಾಜ್ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಅಪ್ಪು ಮಾಮ ಎಲ್ಲೇ ಇದ್ರೂ ನಗು ನಗುತ್ತಾ ಚೆನ್ನಾಗಿರು: ಶ್ರೀಮುರಳಿ

  • 15 ಎಕರೆ ಒತ್ತುವರಿ ಭೂಮಿ ವಶಕ್ಕೆ ಪಡೆದ ಅರಣ್ಯ ಇಲಾಖೆ: 3 ಸಾವಿರ ಅಡಿಕೆ ಮರಕ್ಕೆ ಕೊಡಲಿ

    15 ಎಕರೆ ಒತ್ತುವರಿ ಭೂಮಿ ವಶಕ್ಕೆ ಪಡೆದ ಅರಣ್ಯ ಇಲಾಖೆ: 3 ಸಾವಿರ ಅಡಿಕೆ ಮರಕ್ಕೆ ಕೊಡಲಿ

    ದಾವಣಗೆರೆ: ಚನ್ನಗಿರಿ (Channagiri) ತಾಲೂಕಿನ ಶಾಂತಿಸಾಗರದಲ್ಲಿ ಅರಣ್ಯ ಭೂಮಿ (Forest Land) ಒತ್ತುವರಿ ಮಾಡಿದವರಿಗೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಶಾಕ್ ನೀಡಿದ್ದಾರೆ. ಒತ್ತುವರಿ ಮಾಡಿದ್ದ 15 ಎಕರೆ ಅರಣ್ಯ ಪ್ರದೇಶವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಶಾಂತಿಸಾಗರದ ಗುಡುಂಘಟ್ಟದ ಸರ್ವೇ ನಂ.43 ರಲ್ಲಿ 15 ಎಕರೆ ಜಾಗವನ್ನು ವಶಕ್ಕೆ ಪಡೆಯಲಾಗಿದೆ. ಈ ಭಾಗದಲ್ಲಿ ಜನರು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಆ ಜಾಗದಲ್ಲಿ ಅಡಿಕೆ ಮತ್ತು ಬಾಳೆ ಬೆಳೆದಿದ್ದರು. ಅಧಿಕಾರಿಗಳು 3 ಸಾವಿರ ಅಡಿಕೆ ಮತ್ತು ಬಾಳೆ ಗಿಡಗಳನ್ನು ತೆರವು ಮಾಡಿ, ಜಾಗವನ್ನು ವಶಕ್ಕೆ ಪಡೆದಿದ್ದಾರೆ.

    ಸುಮಾರು ವರ್ಷಗಳಿಂದ ರೈತರು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಸಾಗುವಳಿ ಮಾಡಿಕೊಂಡು ಬಂದಿದ್ದರು. ಬಳಿಕ ಜಾಗದಲ್ಲಿ ಅಡಿಕೆ ತೋಟ ಮಾಡಿದ್ದರು. ಅಡಿಕೆ, ಬಾಳೆಗಿಡಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಿಬ್ಬಂದಿ ತೆರವು ಮಾಡಿದ್ದಾರೆ.

  • ತನ್ನ ಮನೆಯಲ್ಲೇ ಚಿನ್ನಾಭರಣ ಕಳ್ಳತನಕ್ಕೆ ಸಾಥ್ – ಯುವತಿ ಸೇರಿ ಇಬ್ಬರು ಅರೆಸ್ಟ್

    ತನ್ನ ಮನೆಯಲ್ಲೇ ಚಿನ್ನಾಭರಣ ಕಳ್ಳತನಕ್ಕೆ ಸಾಥ್ – ಯುವತಿ ಸೇರಿ ಇಬ್ಬರು ಅರೆಸ್ಟ್

    ದಾವಣಗೆರೆ: ತನ್ನ ಮನೆಯಲ್ಲೇ ಚಿನ್ನಾಭರಣ ಕಳ್ಳತನ ಮಾಡಲು ವ್ಯಕ್ತಿಯೊಬ್ಬನಿಗೆ ಸಹಕರಿಸಿ ದರೋಡೆಯ ಕತೆ ಕಟ್ಟಿದ್ದ ಯುವತಿ ಸೇರಿದಂತೆ ಇಬ್ಬರನ್ನು ಚನ್ನಗಿರಿ (Channagiri) ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತರನ್ನು ತಸ್ಮೀಯಖಾನಂ ಹಾಗೂ ಮುಜೀಬುಲ್ಲಾ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಸುಮಾರು 10.77 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: Bellary | ಈಜಲು ತೆರಳಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವು

    ಚನ್ನಗಿರಿ ತಾಲೂಕಿನ ಅಗರಬನ್ನಿಹಟ್ಟಿ ಗ್ರಾಮದ ಅಮಾನುಲ್ಲಾ ಎಂಬವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಅಮಾನುಲ್ಲಾ ಅವರ ಪುತ್ರಿ ತಸ್ಮೀಯಖಾನಂ ಮನೆಯಲ್ಲಿ ಒಬ್ಬಳೇ ಇದ್ದಾಗ ಈ ಘಟನೆ ನಡೆದಿತ್ತು. ಒಂಟಿಯಾಗಿದ್ದಾಗ ನೀರು ಹಾಕಿ ಪ್ರಜ್ಞೆ ತಪ್ಪಿಸಿ, ಕಳ್ಳತನ ಮಾಡಿದ್ದಾರೆ ಎಂದು ಯುವತಿ ಕತೆ ಕಟ್ಟಿದ್ದಳು.

    ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಾಗ ಸತ್ಯಾಂಶ ಬಯಲಿಗೆ ಬಂದಿತ್ತು. ತನಿಖೆ ನಡೆಸಿದ ತಂಡಕ್ಕೆ ಎಸ್‍ಪಿ ಉಮಾ ಪ್ರಶಾಂತ್ ಬಹುಮಾನ ಘೋಷಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ಕೆಣಕಿ ತಪ್ಪು ಮಾಡಿತೇ ಇರಾನ್‌? – ಉಭಯ ರಾಷ್ಟ್ರಗಳ ಸೇನಾ ಸಾಮರ್ಥ್ಯ ನೋಡಿದ್ರೆ ಮೈ ನಡುಗುತ್ತೆ!

  • ಚನ್ನಗಿರಿ ಗಲಭೆ ಕೇಸ್‌ – ಬಂಧನ ಭೀತಿಯಿಂದ ಗ್ರಾಮವನ್ನೇ ತೊರೆದ ಜನ

    ಚನ್ನಗಿರಿ ಗಲಭೆ ಕೇಸ್‌ – ಬಂಧನ ಭೀತಿಯಿಂದ ಗ್ರಾಮವನ್ನೇ ತೊರೆದ ಜನ

    ದಾವಣಗೆರೆ: ಚನ್ನಗಿರಿ (Channagiri Violence) ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಿಂದ ಹೊನ್ನೆಬಾಗಿ ಗ್ರಾಮದಲ್ಲಿ ಬಹುತೇಕ ಜನರು ಮನೆ ಖಾಲಿ ಮಾಡಿದ್ದಾರೆ.

    ಈಗಾಗಲೇ 39 ಜನರನ್ನು ಬಂಧನ (Arrest) ಮಾಡಿದ ಬೆನ್ನಲ್ಲೇ ಮತ್ತಷ್ಟು ಜನರನ್ನು ಪೊಲೀಸರು (Police) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ತನ್ನನ್ನು ಬಂಧಿಸಬಹುದು ಎಂಬ ಭೀತಿಯಿಂದ ಕೆಲ ಪುರುಷರು ಗ್ರಾಮವನ್ನೇ ಬಿಟ್ಟು ಹೋಗಿದ್ದಾರೆ. ಕೆಲ ಮನೆಗಳಿಗ ಬೀಗ ಬಿದ್ದಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 87 ಕೋಟಿ ಗೋಲ್ಮಾಲ್ – ಏನಿದು ಹಗರಣ? ಅಕ್ರಮ ಹಣ ವರ್ಗಾವಣೆ ಆಗಿದ್ದು ಯಾಕೆ?

    ಮಾವಿನ ಹಣ್ಣು ವ್ಯಾಪಾರಕ್ಕೆ ತುಮಕೂರಿನ ಗುಬ್ಬಿಗೆ ಹೋಗಿದ್ದ ಸೈಯ್ಯದ್ ತನ್ವೀರ್‌ನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಗಲಾಟೆಗೂ ಆತನಿಗೂ ಸಂಬಂಧ ಇಲ್ಲದಿದ್ದರೂ ಕೂಡ ಬಂಧನ ಮಾಡಿದ್ದಾರೆ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

    ಸೈಯ್ಯದ್‌ ತನ್ವೀರ್‌ನ ಒಂದೂವರೆ ವರ್ಷದ ಪುತ್ರನಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಇನ್ನು ಎರಡು ದಿನಗಳಲ್ಲಿ ಬೆಂಗಳೂರು ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲು ಮಾಡಬೇಕಿದೆ. ಆದರೆ ತಂದೆ ಜೈಲು ಸೇರಿದ ಹಿನ್ನಲೆ ಕುಟುಂಬಸ್ಥರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.  ಕಲ್ಲು ಹೊಡೆದವರನ್ನು ಬಿಟ್ಟು ಕಷ್ಟ ಪಟ್ಟು ದುಡಿಯುತ್ತಿರುವರನ್ನು ಬಂಧನ ಮಾಡಿದ್ದಾರೆ. ದಾಂಧಲೆ ಮಾಡಿದ ಕಿಡಿಗೇಡಿಗಳನ್ನು ಬಂಧನ ಮಾಡಿ, ಆದರೆ ಅಮಾಯಕರಿಗೆ ಕಿರುಕುಳ ನೀಡಿಬೇಡಿ ಎಂದು ಬಂಧನಕ್ಕೆ ಒಳಗಾದ ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

     

  • ಚನ್ನಗಿರಿ ಗಲಭೆ ಕೇಸ್‌ – ಮತ್ತೆ 3 ಎಫ್‌ಐಆರ್‌ ಸೇರ್ಪಡೆ, ಎಸ್‌ಐ ಸಸ್ಪೆಂಡ್‌

    ಚನ್ನಗಿರಿ ಗಲಭೆ ಕೇಸ್‌ – ಮತ್ತೆ 3 ಎಫ್‌ಐಆರ್‌ ಸೇರ್ಪಡೆ, ಎಸ್‌ಐ ಸಸ್ಪೆಂಡ್‌

    ದಾವಣಗೆರೆ: ಚನ್ನಗಿರಿ ಗಲಭೆ ಪ್ರಕರಣದ (Channagiri violence) ಸಿಐಡಿ ತನಿಖೆ ಚುರುಕಾಗಿದ್ದು ಡಿಜೆ ಹಳ್ಳಿ, ಕೆ.ಜಿ.ಹಳ್ಳಿ ಮಾದರಿ ಗಲಭೆಗೆ ಸಂಚು ರೂಪಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಮತ್ತೆ ಮೂರು ಎಫ್‌ಐಆರ್ (FIR) ಹಾಕಿದ್ದಾರೆ. ಇದರೊಂದಿಗೆ ಎಫ್‌ಐಆರ್‌ಗಳ ಸಂಖ್ಯೆ ಏರಕ್ಕೇರಿದೆ.

    ಬಂಧಿತ 25 ಕಿಡಿಗೇಡಿಗಳ ವಿರುದ್ಧ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಕೊಲೆ ಯತ್ನ ಸೆಕ್ಷನ್‌ಗಳನ್ನು ಸೇರಿಸಿದ್ದಾರೆ. ಸದ್ಯ 30ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆಗಳಿವೆ.  ಇದನ್ನೂ ಓದಿ: ಗೌತಮ್‌ ಗಂಭೀರ್‌ಗೆ ಬ್ಲ್ಯಾಂಕ್‌ ಚೆಕ್‌ ಆಫರ್‌ ಕೊಟ್ಟಿದ್ದೇಕೆ ಶಾರುಖ್‌?

    ಹಲ್ಲೆಗೊಳಗಾದ ಪೊಲೀಸರನ್ನು, ಗಲಭೆಗೆ ಸಾಕ್ಷಿಯಾಗಿದ್ದ ಪೊಲೀಸ್ ಸಿಬ್ಬಂದಿಯನ್ನು ಸಿಐಡಿ ವಿಚಾರಣೆಗೆ ಒಳಪಡಿಸಿದೆ. ಠಾಣೆಯ ಸಿಸಿಟಿವಿಯನ್ನು ವಶಕ್ಕೆ ಪಡೆಯಲಾಗಿದೆ.

    ಇದೇ ವೇಳೆ ಎಸ್‌ಐ ಅಖ್ತರ್‌ ಅವರನ್ನು ಸರ್ಕಾರ ಅಮಾನತು (Suspend) ಮಾಡಿದೆ. ಮೊನ್ನೆಯಷ್ಟೇ ಡಿವೈಎಸ್‌ಪಿ ಪ್ರಶಾಂತ್, ಸಿಪಿಐ ನಿರಂಜನ್‌ರನ್ನು ಸರ್ಕಾರ ಸಸ್ಪೆಂಡ್ ಮಾಡಿತ್ತು. ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.  ಇದನ್ನೂ ಓದಿ: ಅದಾನಿ ಗ್ರೂಪ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಮೋದಿ, ರಾಹುಲ್‌ಗೆ ನಿರ್ದೇಶಿಸಿ: ಕೋರ್ಟ್‌ಗೆ ಅರ್ಜಿ ಸಲ್ಲಿಕೆ

    ಚನ್ನಗಿರಿ ಗಲಭೆ ಖಂಡಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕಿಡಿಗೇಡಿಗಳು ಮಾಡಿದ ಕೃತಕ್ಕೆ ಅಧಿಕಾರಿಗಳನ್ನು ತಲೆದಂಡ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರದ ಅತಿಯಾದ ತುಷ್ಟೀಕರಣದಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

     

  • ಕಲ್ಲು ತೂರಾಟ ನಡೆಸಿದವರ ಸವಲತ್ತು ವಾಪಸ್‍ಗೆ ಯತ್ನಾಳ್ ಆಗ್ರಹ

    ಕಲ್ಲು ತೂರಾಟ ನಡೆಸಿದವರ ಸವಲತ್ತು ವಾಪಸ್‍ಗೆ ಯತ್ನಾಳ್ ಆಗ್ರಹ

    ಬೆಂಗಳೂರು: ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ಪೊಲಿಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದವರಿಗೆ ಸರ್ಕಾರದಿಂದ ನೀಡಲಾದ ಸವಲತ್ತುಗಳನ್ನು ವಾಪಸ್ ಪಡೆಯಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.

    ಪೊಲೀಸ್ (Police) ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ ವಿಚಾರವಾಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಚನ್ನಗಿರಿಯಲ್ಲಿ ಬಾಂಧವರ ಗುಂಪೊಂದು ಪೊಲೀಸ್ ಠಾಣೆಗೆ ಕಲ್ಲು ತೂರಾಟ ನಡೆಸಿದೆ. ಪೊಲೀಸ್ ವಾಹನಗಳಿಗೆ ಬೆಂಕಿ ಇಟ್ಟಿದೆ. ಈ ಘಟನೆ ಅವರ ಮನಃಸ್ಥಿತಿ ಎಂತದ್ದು ಎಂಬುದು ತೋರಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಚನ್ನಗಿರಿ ಠಾಣೆಯ ಮೇಲೆ ಕಲ್ಲು ತೂರಾಟ – 11 ಮಂದಿ ವಶಕ್ಕೆ

    ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದವರ ಮೇಲೆ ಕೇಸ್ ದಾಖಲಿಸಬೇಕು. ಸರ್ಕಾರಕ್ಕೆ ನಷ್ಟ ಮಾಡಿರುವ ಅಷ್ಟು ವೆಚ್ಚವನ್ನು ಅವರಿಂದ ಭರಿಸಬೇಕು. ಅಲ್ಲದೇ, ಸ್ಥಳೀಯ ಡಿವೈಎಸ್‍ಪಿ ಮನವಿ ಮಾಡಿದರೂ ಸಹ ಚದುರದ ಗುಂಪಿನ ಮುಖ್ಯಸ್ಥ ಹಾಗೂ ಪ್ರಚೋದನೆ ಮಾಡಿದವರ ಮೇಲೆ ಕೇಸ್ ದಾಖಲಿಸಬೇಕು. ಅವರಿಗೆ ಸರ್ಕಾರ ನೀಡಿರುವ ಎಲ್ಲಾ ರೀತಿಯ ಸವಲತ್ತನ್ನು ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಏನಿದು ಪ್ರಕರಣ? ಶುಕ್ರವಾರ ರಾತ್ರಿ ಚನ್ನಗಿರಿ ಪೊಲೀಸ್ ಠಾಣೆ ಮುಂಭಾಗ ರಣರಂಗವಾಗಿ ಸೃಷ್ಟಿಯಾಗಿತ್ತು. ಚನ್ನಗಿರಿ ಪಟ್ಟಣದ ಟಿಪ್ಪು ನಗರದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಅದಿಲ್‌ನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದರು. ಅದೇ ಸಂದರ್ಭದಲ್ಲಿ ಅದಿಲ್ ಲೋ ಬಿಪಿಯಿಂದ ಕುಸಿದು ಬಿದ್ದಿದ್ದ. ಕೂಡಲೇ ತಾಲೂಕು ಆಸ್ಪತ್ರೆಗೆ ಪೊಲೀಸರು ಆತನನನ್ನು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದಿಲ್ ಸಾವನ್ನಪ್ಪಿದ್ದ.

    ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಕ್ರೋಶಗೊಂಡ ಅದಿಲ್ ಕುಟುಂಬಸ್ಥರು ಮೃತದೇಹವನ್ನು ಪೊಲೀಸ್ ಠಾಣೆಯ ಮುಂದಿಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ನಂತರ ಆದಿಲ್‌ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆ ನಡೆಸುತ್ತಿದ್ದಾಗ ಕೆಲ ಕಿಡಿಗೇಡಿಗಳ ಗುಂಪು ಏಕಾಏಕಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿತ್ತು. ಠಾಣೆಯ ಮುಂಭಾಗ ಇರುವ ವಾಹನಗಳು, ಗಿಡ, ಕಿಟಕಿ ಗಾಜುಗಳನ್ನು ಧ್ವಂಸ ಮಾಡಿತ್ತು. ಏಕಾಏಕಿ ನಡೆಸಿದ ಕಲ್ಲು ತೂರಾಟದ ವೇಳೆ 11 ಜನ ಪೊಲೀಸ್ ಸಿಬ್ಬಂದಿಗೆ ಗಾಯಗಾಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಹಣ ಡಬಲ್ ಮಾಡೋದಾಗಿ 30 ಕೋಟಿ ರೂ. ವಂಚಿಸಿದ ದಂಪತಿ

  • ಚನ್ನಗಿರಿ ಠಾಣೆಯ ಮೇಲೆ ಕಲ್ಲು ತೂರಾಟ – 11 ಮಂದಿ ವಶಕ್ಕೆ

    ಚನ್ನಗಿರಿ ಠಾಣೆಯ ಮೇಲೆ ಕಲ್ಲು ತೂರಾಟ – 11 ಮಂದಿ ವಶಕ್ಕೆ

    – ಸಿಸಿಟಿವಿ, ಮೊಬೈಲ್‌ ದೃಶ್ಯ ಆಧಾರಿಸಿ ಪತ್ತೆ
    – ಈಗಾಗಲೇ 40ಕ್ಕೂ ಹೆಚ್ಚು ಮಂದಿಯನ್ನು ಗುರುತಿಸಿದ ಪೊಲೀಸರು

    ದಾವಣಗೆರೆ: ಚನ್ನಗಿರಿ ಪೊಲೀಸ್‌ ಠಾಣೆಯ (Channagiri Police Station) ಮೇಲೆ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮೊಬೈಲ್  ವಿಡಿಯೋ, ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿ ಕಿಡಿಗೇಡಿಗಳನ್ನು ಗುರುತಿಸಲಾಗಿದೆ. ಅದಿಲ್‌ (Adil) ಅಂತ್ಯಸಂಸ್ಕಾರ ಬಳಿಕ ಪೋಲೀಸರು, ಕಿಡಿಗೇಡಿಗಳ ಹೆಡೆಮುರಿ ಕಟ್ಟಲು ಮುಂದಾಗಿದ್ದಾರೆ. ಇದನ್ನೂ ಓದಿ: ಸಿಎಂ, ಡಿಸಿಎಂ ಧರ್ಮಸ್ಥಳ ಪ್ರವೇಶಿಸ್ತಿದ್ದಂತೆಯೇ ಜೈ ಶ್ರೀರಾಮ್ ಘೋಷಣೆ ಕೂಗಿದ ಭಕ್ತರು!

    ವಿಡಿಯೋ ಪರಿಶೀಲನೆ ವೇಳೆ 40ಕ್ಕೂ ಹೆಚ್ವು ಕಿಡಿಗೇಡಿಗಳನ್ನು ಈಗಾಗಲೇ ಗುರುತಿಸಲಾಗಿದ್ದು ಪ್ರಮುಖ ಹತ್ತು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕುರಾನ್ ಸತ್ಯವಾಗಿ ನನ್ನ ಗಂಡನಿಗೆ ಯಾವ್ದೇ ರೋಗ ಇರಲಿಲ್ಲ, ಪೊಲೀಸರೇ ಹೊಡೆದು ಕೊಂದಿದ್ದಾರೆ: ಮೃತ ಆದಿಲ್ ಪತ್ನಿ

    ಗಲಾಟೆ ಹೇಗಾಯ್ತು?
    ಶುಕ್ರವಾರ ರಾತ್ರಿ ಚನ್ನಗಿರಿ ಪೊಲೀಸ್ ಠಾಣೆ ಮುಂಭಾಗ ರಣರಂಗವಾಗಿ ಸೃಷ್ಟಿಯಾಗಿತ್ತು. ಚನ್ನಗಿರಿ ಪಟ್ಟಣದ ಟಿಪ್ಪು ನಗರದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಅದಿಲ್‌ನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದರು. ಅದೇ ಸಂದರ್ಭದಲ್ಲಿ ಅದಿಲ್ ಲೋ ಬಿಪಿಯಿಂದ ಕುಸಿದು ಬಿದ್ದಿದ್ದ. ಕೂಡಲೇ ತಾಲೂಕು ಆಸ್ಪತ್ರೆಗೆ ಪೊಲೀಸರು ಆತನನನ್ನು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದಿಲ್ ಸಾವನ್ನಪ್ಪಿದ್ದ.

     

    ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಕ್ರೋಶಗೊಂಡ ಅದಿಲ್ ಕುಟುಂಬಸ್ಥರು ಮೃತದೇಹವನ್ನು ಪೊಲೀಸ್ ಠಾಣೆಯ ಮುಂದಿಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ನಂತರ ಆದಿಲ್‌ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆ ನಡೆಸುತ್ತಿದ್ದಾಗ ಕೆಲ ಕಿಡಿಗೇಡಿಗಳ ಗುಂಪು ಏಕಾಏಕಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿತ್ತು. ಠಾಣೆಯ ಮುಂಭಾಗ ಇರುವ ವಾಹನಗಳು, ಗಿಡ, ಕಿಟಕಿ ಗಾಜುಗಳನ್ನು ಧ್ವಂಸ ಮಾಡಿತ್ತು. ಏಕಾಏಕಿ ನಡೆಸಿದ ಕಲ್ಲು ತೂರಾಟದ ವೇಳೆ 11 ಜನ ಪೊಲೀಸ್ ಸಿಬ್ಬಂದಿಗೆ ಗಾಯಗಾಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

  • ಅಲ್ಪಸಂಖ್ಯಾತರು ಗಲಭೆ ಮಾಡಿದ್ರೆ ಯಾಕೆ ಖಂಡನೆ ಮಾಡೋದಿಲ್ಲ – ಸಿಎಂಗೆ ಜೋಶಿ ಪ್ರಶ್ನೆ!

    ಅಲ್ಪಸಂಖ್ಯಾತರು ಗಲಭೆ ಮಾಡಿದ್ರೆ ಯಾಕೆ ಖಂಡನೆ ಮಾಡೋದಿಲ್ಲ – ಸಿಎಂಗೆ ಜೋಶಿ ಪ್ರಶ್ನೆ!

    – ಚನ್ನಗಿರಿ ಪ್ರಕರಣದಲ್ಲಿ ಮಾತ್ರ ಪೊಲೀಸರ ಮೇಲೆ ಕ್ರಮ ಯಾಕೆ?
    – ರಾಜ್ಯ ಸರ್ಕಾರದ ವಿರುದ್ಧ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

    ಹುಬ್ಬಳ್ಳಿ: ಯಾರು ಎಲ್ಲೇ ಗಲಭೆ ಮಾಡಿದರೂ ತಪ್ಪು, ಅದನ್ನು ಖಂಡಿಸಬೇಕು. ಆದ್ರೆ ಅಲ್ಪಸಂಖ್ಯಾತರು ಗಲಭೆ ಮಾಡಿದ್ರೆ ಯಾಕೆ ಖಂಡನೆ ಮಾಡೋದಿಲ್ಲ? ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಅವರು ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನ ಪ್ರಶ್ನೆ ಮಾಡಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಗಿರಿ ಲಾಕಪ್‌ ಡೆತ್ (Channagiri Lockup Death) ವಿಚಾರದಲ್ಲಿ ಸಿದ್ದರಾಮಯ್ಯನವರು ತೆಗೆದುಕೊಂಡ ನಿರ್ಧಾರವನ್ನು ಈ ಹಿಂದೆ ನಡೆದ ಯಾವುದೇ ವಿಚಾರದಲ್ಲಿಯೂ ತೆಗೆದುಕೊಂಡಿಲ್ಲ. ಅಂಜಲಿ, ನೇಹಾ ಹಿರೇಮಠ ಪ್ರಕರಣದಲ್ಲಿ ಪೊಲೀಸರ ಮೇಲೆ ಕ್ರಮ ಆಗಿಲ್ಲ. ಆದರೆ ಈ ಪ್ರಕರಣದಲ್ಲಿ ಪೊಲೀಸರ ಮೇಲೆ ಕ್ರಮ ಯಾಕೆ ಅಂತ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜಗತ್ತನ್ನೇ ಬೆಚ್ಚಿ ಬೀಳಿಸಿದ ಸೋಂಕಿತ ರಕ್ತ ಹಗರಣ – ಯುಕೆಯಲ್ಲಿ ಡೆಡ್ಲಿ ಚಿಕಿತ್ಸೆ ತಂದ ವಿಪತ್ತು; ಏನಿದು ಹಗರಣ?

    ಒತ್ತಡ ಹಾಕಿದ್ರೆ ಪೊಲೀಸರೇ ಓಡಿ ಹೋಗ್ತಾರೆ:
    ಸಿದ್ದರಾಮಯ್ಯನವರೇ ನೀವು ಎಷ್ಟು ತುಷ್ಟೀಕರಣದ ರಾಜಕೀಯ ಮಾಡುತ್ತಿದ್ದೀರಿ, ನಿಮ್ಮ ಈ ತುಷ್ಟಿಕರಣ ರಾಜಕೀಯದಿಂದ ಅರಾಜಕತೆ ಸೃಷ್ಟಿ ಆಗುತ್ತದೆ. ಅಲ್ಪಸಂಖ್ಯಾತರು ಗಲಭೆ ಮಾಡಿದ್ರೆ ಯಾಕೆ ಖಂಡನೆ ಮಾಡೋದಿಲ್ಲ? ಯಾರೇ ಗಲಭೆ ಮಾಡಿದ್ರೂ ತಪ್ಪು, ಅದನ್ನು ಖಂಡಿಸಲೇಬೇಕು. ಆದ್ರೆ ಈ ವಿಚಾರದಲ್ಲಿ ಪೊಲೀಸರ ನೈತಿಕತೆ ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ, ಠಾಣೆ ಬಿಟ್ಟು ಓಡಿಹೋಗ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಇನ್ನೂ ಪೊಲೀಸರು ಪ್ರತಿ 2 ಗಂಟೆಗೆ ಡ್ರಿಲ್‌ ಮಾಡಬೇಕು ಎಂಬ ಸಿಎಂ ಆದೇಶ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊದಲು ಸಿಎಂಗೆ ಮತ್ತು ಗೃಹಸಚಿವರಿಗೆ ಡ್ರಿಲ್‌ ಮಾಡಿಸಬೇಕು. ರಾಜ್ಯ ಪೊಲೀಸರಿಂದು ಒತ್ತಡದಲ್ಲಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಔರಾಧ್ ಕರ್ ವರದಿಯನ್ನೇ ಇನ್ನೂ ಜಾರಿ ಮಾಡಿಲ್ಲ, 2 ಗಂಟೆಗೊಮ್ಮೆ ಡ್ರಿಲ್‌ ಮಾಡಿ ಅಂದರೆ ಅವರು ಎಲ್ಲಿಂದ ಮಾಡಬೇಕು? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆಯ ಧ್ವನಿಯಲ್ಲಿ ಮಾತನಾಡಿ 7 ವಿದ್ಯಾರ್ಥಿನಿಯರ ಅತ್ಯಾಚಾರ – ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ

    ಪೊಲೀಸರು ಹುಚ್ಚರಂತೆ ರಸ್ತೆಯಲ್ಲಿ ಓಡಾಡಬೇಕಾ? ಹೀಗೆ ಮಾಡಿದರೆ ಜನ ಏನು ಹೇಳತ್ತಾರೆ? ಕರ್ನಾಟಕ ಸರ್ಕಾರ ಮತಿಭ್ರಮಣೆಗೊಂಡಿದೆ. ಆದೇಶ ಮಾಡುವುದಕ್ಕೂ ಮುನ್ನ ಯೋಚನೆ ಮಾಡುತ್ತಿಲ್ಲ. ಪೊಲೀಸರಿಗೆ ಹೊರಡಿಸಿರುವ ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.  ಇದನ್ನೂ ಓದಿ: ಕುರಾನ್ ಸತ್ಯವಾಗಿ ನನ್ನ ಗಂಡನಿಗೆ ಯಾವ್ದೇ ರೋಗ ಇರಲಿಲ್ಲ, ಪೊಲೀಸರೇ ಹೊಡೆದು ಕೊಂದಿದ್ದಾರೆ: ಮೃತ ಆದಿಲ್ ಪತ್ನಿ