Tag: ಚಡೀಘಡ

  • ಪಂಜಾಬ್| ಹೆರಾಯಿನ್, ಪಿಸ್ತೂಲ್ ಸಾಗಿಸುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

    ಪಂಜಾಬ್| ಹೆರಾಯಿನ್, ಪಿಸ್ತೂಲ್ ಸಾಗಿಸುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

    ಚಂಡೀಘಡ: ಪಂಜಾಬ್‌ನ (Punjab) ಫಿರೋಜ್‌ಪುರದಲ್ಲಿ ಹೆರಾಯಿನ್ ಮತ್ತು ಪಿಸ್ತೂಲ್ ಸಾಗಿಸುತ್ತಿದ್ದ ಪಾಕಿಸ್ತಾನದ (Pakistan) ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

    ಚೀನಾದಲ್ಲಿ ತಯಾರಾದ ಡಿಜೆಐ ಮಾವಿಕ್ 3 ಕ್ಲಾಸಿಕ್ ಡ್ರೋನ್ 500 ಗ್ರಾಂ ಹೆರಾಯಿನ್, ಪಿಸ್ತೂಲ್ ಹೊತ್ತೊಯ್ಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ‘ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸಿದ ಪಾಕಿಸ್ತಾನದ ಡ್ರೋನ್ ಅನ್ನು ಬಿಎಸ್‌ಎಫ್ ಪಂಜಾಬ್ ಪೊಲೀಸ್ ಪಡೆ ತಡೆದಿವೆ. ಬಿಎಸ್‌ಎಫ್ ಸಿಬ್ಬಂದಿ ತಕ್ಷಣವೇ ಡ್ರೋನ್ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ತಾಂತ್ರಿಕ ಕ್ರಮಗಳನ್ನು ಬಳಸಿಕೊಂಡು ಅದನ್ನು ಕೆಳಗಿಳಿಸಿದರು’ ಎಂದು ಬಿಎಸ್‌ಎಫ್ ಪಂಜಾಬ್ ಫ್ರಾಂಟಿಯರ್ ಟ್ವೀಟ್ ಮಾಡಿದೆ. ಇದನ್ನೂ ಓದಿ: ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ 7 ಬಾಂಗ್ಲಾ ಪ್ರಜೆಗಳು ಅರೆಸ್ಟ್‌

    ಬಿಎಸ್‌ಎಫ್ ಈ ಹಿಂದೆ ಪಂಜಾಬ್‌ನಲ್ಲಿ ಹಲವು ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಮಾರ್ಚ್‌ನಲ್ಲಿ  ಅಮೃತಸರ ಬಳಿ ಪಂಜಾಬ್ ಪೊಲೀಸರು ಎರಡು ಪಾಕಿಸ್ತಾನಿ ನಿರ್ಮಿತ ಡ್ರೋನ್‌ಗಳನ್ನು ವಶಪಡಿಸಿಕೊಂಡಿದ್ದರು. ಫೆಬ್ರವರಿಯಲ್ಲಿ ಗುರುದಾಸ್‌ಪುರ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯ ಬಳಿ ಚೀನಾ ನಿರ್ಮಿತ ಮತ್ತೊಂದು ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ. ಇದನ್ನೂ ಓದಿ: ಬಾಲಸೋರ್ ಅಪಘಾತದ ಬಳಿಕವೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ: ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ಕಿಡಿ

  • ಇನ್ ಸ್ಟಾಗ್ರಾಂನಲ್ಲಿ ಲೈವ್ ಮಾಡಿ ಆತ್ಮಹತ್ಯೆಗೆ ಶರಣಾದ ಯುವತಿ

    ಇನ್ ಸ್ಟಾಗ್ರಾಂನಲ್ಲಿ ಲೈವ್ ಮಾಡಿ ಆತ್ಮಹತ್ಯೆಗೆ ಶರಣಾದ ಯುವತಿ

    ಚಂಡೀಘಡ: ಪ್ರೇಮಿಯಿಂದ ಮೋಸ ಹೋದ ಬಳಿಕ 18 ವರ್ಷದ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ.

    ಪಂಜಾಬ್‍ನ ಸತ್ನಂಪುರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹಾಶಿಯಾರ್ಪುರ್ ಜಿಲ್ಲೆಯ ನಿವಾಸಿ ಮನಿಷಾ(18) ಮೃತ ಯುವತಿ. ಈಕೆ ಫಾಗ್ವಾರಾದಲ್ಲಿ ಮಾನ್ಸಾ ದೇವಿ ನಗರ್ ಮೋಹಲ್ಲಾದಲ್ಲಿ ವಸತಿಯಲ್ಲಿ ಬಾಡಿಗೆ ಇದ್ದಳು. ಮನಿಷಾ ಕೆಲಸ ಹುಡುಕಿಕೊಂಡು ಪಂಜಾಬಿಗೆ ಬಂದಿದ್ದಳು. ಎಂದು ಸತ್ನಾಂಪುರಾ ಪೊಲೀಸ್ ಠಾಣೆಯ ಎಸ್.ಎಸ್. ಪಟ್ಟಾರ್ ತಿಳಿಸಿದ್ದಾರೆ.

    ಗುರುವಾರ ರಾತ್ರಿ ಮನಿಷಾ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅದನ್ನು ಇನ್ ಸ್ಟಾಗ್ರಾಂನಲ್ಲಿ ಲೈವ್ ಮಾಡಿದ್ದಾಳೆ ಎಂದು ಪಟ್ಟಾರ್ ಹೇಳಿದ್ದಾರೆ.

    ಆತ್ಮಹತ್ಯೆ ಮಾಡಿಕೊಂಡ ರೂಮಿನಲ್ಲಿ ಒಂದು ಪತ್ರ ಸಿಕ್ಕಿದ್ದು, ಅದರಲ್ಲಿ ಪ್ರಿಯಕರನ ಹೆಸರು ಮತ್ತು ಪ್ರೀತಿಯಿಂದ ಮೋಸ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾಳೆ. ಆತನ ಹೆಸರು ಇಂದರ್ ಎಂದು ಉಲ್ಲೇಖಿಸಿದ್ದಾಳೆ. ಅಷ್ಟು ಬಿಟ್ಟು ಆತನ ವಿಳಾಸವನ್ನು ತಿಳಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಮೃತ ಮನಿಷಾ ತಂದೆ ಫ್ರಾನ್ಸ್ ನಲ್ಲಿದ್ದು, ತಾಯಿ ಮೃತಪಟ್ಟಿದ್ದಾರೆ. ಈ ಘಟನೆ ಬಗ್ಗೆ ತಂದೆಗೆ ತಿಳಿಸಲಾಗಿದೆ. ಸದ್ಯಕ್ಕೆ ಮನಿಷಾ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮನಿಷಾ ಪ್ರಿಯಕರ ಇಂದರ್ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಆಕೆಯ ಮೊಬೈಲ್ ಕರೆಗಳ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬರುತ್ತದೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಟ್ಟಾರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೊಬೈಲ್ ವ್ಯಾಲೆಟ್ ಮೊಬಿ ಕ್ವಿಕ್ ಅಕೌಂಟ್‍ನಿಂದ 19 ಕೋಟಿ ರೂ. ನಾಪತ್ತೆ!

    ಮೊಬೈಲ್ ವ್ಯಾಲೆಟ್ ಮೊಬಿ ಕ್ವಿಕ್ ಅಕೌಂಟ್‍ನಿಂದ 19 ಕೋಟಿ ರೂ. ನಾಪತ್ತೆ!

    ಚಂಡೀಘಡ: ಡಿಜಿಟಲ್ ಮೊಬೈಲ್ ವ್ಯಾಲೆಟ್ ಮೊಬಿಕ್ವಿಕ್ ಸಂಸ್ಥೆಯ ಖಾತೆಯಿಂದ ಸುಮಾರು 19 ಕೋಟಿ ರೂ. ಹಣ ನಾಪತ್ತೆಯಾಗಿದೆ.

    ಮೊಬಿಕ್ವಿಕ್ ಸಂಸ್ಥೆಯ ಖಾತೆಗಳನ್ನು ಪರೀಶಿಲನೆಯನ್ನು ಮಾಡಿದ ನಂತರ ಭಾರೀ ಮೊತ್ತದ ಹಣವು ನಾಪತ್ತೆಯಾಗಿರುವ ಮಾಹಿತಿ ಹೊರಬಂದಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ನಂತರ ಸಂಸ್ಥೆಯ ಅಧಿಕಾರಿಗಳು ಹಣ ನಾಪತ್ತೆಯಾಗಿರುವ ಕುರಿತು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಮೊಬಿಕ್ವಿಕ್ ಸಿಸ್ಟಮ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಗ್ರಾಹಕರ ಖಾತೆಗಳಿಂದ ಕಡಿತವಾಗಬೇಕಿದ್ದ ಹಣ ಸಂಸ್ಥೆಯ ವೈಯಕ್ತಿಕ ಖಾತೆಯಿಂದ ಕಡಿತಗೊಳಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

    ಗುರುಗಾಂವ್ ಸೆಕ್ಟರ್ 53ರ ಪೊಲೀಸ್ ಠಾಣೆಯ ಸೈಬರ್ ಕ್ರೈಮ್ ವಿಭಾಗದಲ್ಲಿ ಐಪಿಸಿ ಸೆಕ್ಷನ್ 420(ವಂಚನೆ) ಮತ್ತು 406(ಕ್ರಿಮಿನಲ್ ಅಪರಾಧ)ರ ಪ್ರಕಾರ ದೂರು ದಾಖಲಾಗಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪ್ರಕರಣವನ್ನು ಇಂದು ದಾಖಲು ಮಾಡಿಕೊಳ್ಳಲಾಗಿದ್ದು, ದೂರಿನಲ್ಲಿ ನೀಡಿರುವ ಮಾಹಿತಿಯನ್ನು ಪರಿಶೀಲನೆಯನ್ನು ಮಾಡುತ್ತಿದ್ದೇವೆ. ಸುಮಾರು 19 ಕೋಟಿ ರೂ. ಹಣ ನಾಪತ್ತೆಯಾಗಿರುವ ಕುರಿತು ದೂರಿನಲ್ಲಿ ಮಾಹಿತಿಯನ್ನು ನೀಡಲಾಗಿದೆ. ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಸೈಬರ್ ಕ್ರೈಮ್ ವಿಭಾಗದ ಅಧಿಕಾರಿ ಅನಂದ್ ಯಾದವ್ ತಿಳಿಸಿದ್ದಾರೆ.

    ಸಂಸ್ಥೆಯ ಸಿಬ್ಬಂದಿ ಉದ್ದೇಶಪೂರ್ವವಾಗಿಯೇ ಲೋಪ ಎಸಗಿದ್ದಾರೋ ಅಥವಾ ಯಾವುದೋ ಬಗ್ ನಿಂದ ಹಣ ನಾಪತ್ತೆಯಾಗಿದೆಯೋ ಎನ್ನುವುದು ತಿಳಿದು ಬಂದಿಲ್ಲ. ಪ್ರಕರಣ ತನಿಖೆ ಪೂರ್ಣಗೊಳಿಸಿದ ನಂತರವಷ್ಟೇ ಸತ್ಯಾಂಶ ಹೊರಬರಲಿದೆ ಎಂದು ಯಾದವ್ ಪ್ರತಿಕ್ರಿಯಿಸಿದ್ದಾರೆ.

    ಸಂಸ್ಥೆಯ ಹಣವು ನಾಪತ್ತೆಯಾದ ತಕ್ಷಣ ಗುರುಗಾಂವ್ ಸೈಬರ್ ಕ್ರೈಂ ವಿಭಾಗಕ್ಕೆ ದೂರನ್ನು ನೀಡಿದ್ದೇವೆ. ಅಲ್ಲದೇ ಸಂಸ್ಥೆಯ ಖಾತೆಗಳಿಗೆ ಸೂಕ್ತ ರಕ್ಷಣೆಯನ್ನು ನೀಡಲಾಗಿದೆ ಎಂದು ಮೊಬಿಕ್ವಿಕ್ ಸಂಸ್ಥೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.

    ಇಚ್ಚಿಗೆ ಅಂತರ್ಜಾಲದಲ್ಲಿ ಹಣವನ್ನು ವಂಚನೆ ಮಾಡುವ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, 2016ರ ನಂತರ ನಗರದಲ್ಲಿ ಸುಮಾರು 2,270 ಪ್ರಕರಣಗಳು ಸೈಬರ್ ವಂಚನೆ ಅಪರಾಧ ಅಡಿಯಲ್ಲಿ ದಾಖಲಾಗಿವೆ. 2015ರಲ್ಲಿ ವರ್ಷದಲ್ಲಿ ಸುಮಾರು 1,963 ಪ್ರಕರಣಗಳು ದಾಖಲಾಗಿದ್ದು, ಸುಮಾರು 15% ರಷ್ಟು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಪ್ರಸ್ತುತ ವರ್ಷದಲ್ಲಿ ಇದುವರೆಗೆ ಸುಮಾರು 1,260 ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಪ್ರಕರಣಗಳು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಆನ್‍ಲೈನ್ ಬ್ಯಾಂಕಿಂಗ್ ಮಾಡುವ ಸಮಯದಲ್ಲಿ ವಂಚನೆಗೊಳಗಾಗಿರುವ ಪ್ರಕರಣಕ್ಕೆ ಸಂಬಂಧಿಸಿವೆ ಎಂದು ಪೊಲೀಸ್ ಅಧಿಕಾರಿ ಮಾಹಿತಿಯನ್ನು ನೀಡಿದ್ದಾರೆ.