ಈಗ ಬಂಧಿಸಲಾ ಮೂವರು ಆರೋಪಿಗಳು ಅಕ್ರಮವಾಗಿ ಪಿಸ್ತೂಲ್ ಪೂರೈಕೆ ಹಾಗೂ ಕೃತ್ಯಕ್ಕೆ ಸಹಕಾರ ನೀಡಿದ್ದರು. ಮತ್ತೋರ್ವ ಆರೋಪಿ ಮಹಾರಾಷ್ಟ್ರ ರಾಜ್ಯದ ಪ್ರಮುಖ ಆರೋಪಿಯಾಗಿದ್ದು, ಅ.7ರಂದೇ ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿತ್ತು. ಆದ್ರೆ ಆತನ ಹೆಸರನ್ನ ಬಹಿರಂಗಪಡಿಸಿಲ್ಲ.
ಏನಿದು ಕೇಸ್?
ಜಿಲ್ಲೆಯ ಚಡಚಣ ಎಸ್‌ಬಿಐ ಬ್ಯಾಂಕ್‌ನಲ್ಲಿ 1 ಕೋಟಿ ರೂ. ನಗದು, 12 ರಿಂದ 13 ಕೆ.ಜಿ ಚಿನ್ನ ದರೋಡೆಯಾಗಿದೆ. ಸಾಲಕ್ಕಾಗಿ ಅಡವಿಟ್ಟಿದ್ದ 12-13 ಕೆಜಿ ಚಿನ್ನ ದರೋಡೆಯಾಗಿರುವುದಾಗಿ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರಾಥಮಿಕ ಮಾಹಿತಿ ನೀಡಿದ್ದರು.
ಐದಕ್ಕೂ ಹೆಚ್ಚು ಮಂದಿ ಮುಸುಕುಧಾರಿ ದರೋಡೆಕೋರರಿಂದ ಕೃತ್ಯ ನಡೆದಿತ್ತು. ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿನ ಮ್ಯಾನೇಜರ್, ಕ್ಯಾಶಿಯರ್ ಹಾಗೂ ಇತರೆ ಸಿಬ್ಬಂದಿ ಕೈಕಾಲು ಕಟ್ಟಿ ಹಾಕಿ ಕೂಡಿ ಹಾಕಿ ದರೋಡೆ ನಡೆಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಬ್ಯಾಂಕ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾ, ಹಾರ್ಡ್ ಡಿಸ್ಕ್ ವಶಕ್ಕೆ ಪಡೆದು ತೀವ್ರ ತಪಾಸಣೆ ನಡೆಸಿದ್ದರು. ಇದನ್ನೂ ಓದಿ: ಉ.ಕರ್ನಾಟಕದಲ್ಲಿ ಪ್ರವಾಹ – ಕೇಂದ್ರದಿಂದ ನೆರೆಪೀಡಿತ ಜಿಲ್ಲೆಗಳಿಗೆ ಪರಿಹಾರ ನೀಡುವಂತೆ ಮೋದಿಗೆ ಯತ್ನಾಳ್ ಪತ್ರ
ವಿಜಯಪುರ: ಚಡಚಣ ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆಯಾಗಿದ್ದು, ದರೋಡೆಕೋರರು ಮಹಾರಾಷ್ಟ್ರಕ್ಕೆ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಇತ್ತ ಬ್ಯಾಂಕ್‌ನಲ್ಲಿ ಠೇವಣಿ, ಚಿನ್ನಾಭರಣ ಇಟ್ಟ ಗ್ರಾಹಕರು ಕಂಗಾಲಾಗಿದ್ದಾರೆ.
ಬ್ಯಾಂಕ್‌ನಲ್ಲಿ 1 ಕೋಟಿ ನಗದು, 12 ರಿಂದ 13 ಕೆ.ಜಿ ಚಿನ್ನ ದರೋಡೆಯಾಗಿದೆ. ಸಾಲಕ್ಕಾಗಿ ಅಡವಿಟ್ಟಿದ್ದ 12-13 ಕೆಜಿ ಚಿನ್ನ ದರೋಡೆಯಾಗಿರುವ ಸಾಧ್ಯತೆ ಇದೆ ಎಂದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಮೂಲಗಳಿಂದ ಮಾಹಿತಿ ಸಿಗಬೇಕಿದೆ ಎಂದು ತಿಳಿಸಿದ್ದಾರೆ.
ಐದಕ್ಕೂ ಅಧಿಕ ಮುಸುಕುಧಾರಿ ದರೋಡೆಕೋರರಿಂದ ಕೃತ್ಯ ನಡೆದಿದೆ. ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿನ ಮ್ಯಾನೇಜರ್, ಕ್ಯಾಶಿಯರ್ ಹಾಗೂ ಇತರೆ ಸಿಬ್ಬಂದಿ ಕೈಕಾಲು ಕಟ್ಟಿ ಹಾಕಿ ಕೂಡಿ ಹಾಕಿ ದರೋಡೆ ನಡೆಸಲಾಗಿದೆ. ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಆಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಘಟನೆ ಕುರಿತು ಪೊಲೀಸ್ ಅಧಿಕಾರಿಗಳಿಗೆ ಮ್ಯಾನೇಜರ್ ಹಾಗೂ ಇತರರು ಮಾಹಿತಿ ನೀಡಿದ್ದಾರೆ. ಬ್ಯಾಂಕ್‌ನಲ್ಲಿದ್ದ ನಗದು ಹಣ, ಚಿನ್ನಾಭರಣಗಳ ಕುರಿತು ಮೇಲಧಿಕಾರಿಗಳು ಬಂದ ಬಳಿಕ ಮಾಹಿತಿ ನೀಡುವುದಾಗಿ ಮ್ಯಾನೇಜರ್ ಹೇಳಿದ್ದಾರೆ.
ರಜೆಯಲ್ಲಿದ್ದ ಬ್ಯಾಂಕ್ ಸೆಕ್ಯುರಿಟಿ
ಬ್ಯಾಂಕ್ ಸೆಕ್ಯುರಿಟಿ ಮೂರು ತಿಂಗಳಿಂದ ರಜೆಯಲ್ಲಿದ್ದಾರೆ. ಬ್ಯಾಂಕ್ ಪಕ್ಕದಲ್ಲೇ ಇರುವ ಎಟಿಎಂ ಸೆಕ್ಯುರಿಟಿಯನ್ನು ಕೂಡ ಒಳಗಡೆ ಲಾಕ್ ಮಾಡಿದ್ದರು. ಐದು ಜನ ದರೋಡೆಕೋರರು ಬಂದಿದ್ದರು. ಇಬ್ಬರು ಬ್ಯಾಂಕ್ ಹೊರಗಡೆ ನಿಂತರೆ, ಮೂವರು ಬ್ಯಾಂಕ್ ಒಳಗಡೆ ಹೋಗಿ ದರೋಡೆ ಮಾಡಿದ್ದಾರೆ. ಬ್ಯಾಂಕ್‌ಗೆ ಎಂಟ್ರಿ ಕೊಡ್ತಿದ್ದಂತೆ ಮೊದಲು ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ. ನಂತರ ಬ್ಯಾಂಕ್‌ನ ಎಲ್ಲ ಸಿಬ್ಬಂದಿ ಹಾಗೂ ಎಟಿಎಂ ಸೆಕ್ಯುರಿಟಿಯನ್ನ ಒಂದು ಕೋಣೆಯಲ್ಲಿ ಕೂಡ ಹಾಕಿ, ಕೈ-ಕಾಲು ಕಟ್ಟಿ ದರೋಡೆ ಮಾಡಿದ್ದಾರೆ. ಹುಲ್ಲಜಂತಿ ಗ್ರಾಮದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಇದಕ್ಕೂ ಮುನ್ನ ಬ್ಯಾಂಕ್‌ಗೆ ಮೂರು ದಿನದಿಂದ ಭೇಟಿ ಕೊಟ್ಟಿದ್ದರು. ಆಗ ಮುಖಕ್ಕೆ ಮಾಸ್ಕ್ ಕಟ್ಟಿಕೊಂಡೆ ಬ್ಯಾಂಕ್‌ಗೆ ಎಂಟ್ರಿ ಕೊಟ್ಟಿದ್ದರು. ಮೂರು ದಿನಗಳಿಂದ ಬ್ಯಾಂಕ್ ಸಿಬ್ಬಂದಿ ಚಲನವಲನದ ಮೇಲೆ ಕಣ್ಣಿಟ್ಟಿದ್ದರು. ಈ ಮುಸುಕುಧಾರಿ ದರೋಡೆಕೋರರನ್ನು ಎಟಿಎಂ ಸೆಕ್ಯುರಿಟಿ ಗುರುತಿಸಿದ್ದಾರೆ.
ಬ್ಯಾಂಕ್‌ನಲ್ಲಿದ್ದ ಸಿಸಿ ಕ್ಯಾಮೆರಾ, ಹಾರ್ಡ್ ಡಿಸ್ಕ್ ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸುತ್ತಮುತ್ತಲ ಸಿಸಿ ಕ್ಯಾಮೆರಾಗಳ ಪರಿಶೀಲನೆಯಲ್ಲಿ ಖಾಕಿ ಪಡೆ ನಿರತವಾಗಿದೆ. ಸ್ಥಳಕ್ಕೆ ಹೆಚ್ಚಿನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಸ್ತು ನಡೆಸುತ್ತಿದ್ದಾರೆ. ಮಹಾರಾಷ್ಟ್ರ ಸಂಪರ್ಕಿಸುವ ಹಾಗೂ ಚಡಚಣದ ಇತರೆ ರಸ್ತೆಗಳಿಗೂ ನಾಕಾ ಬಂದಿ ಹಾಕಿದ್ದಾರೆ. ಮಹಾರಾಷ್ಟ್ರದ ದರೋಡೆಕೋರರ ಗ್ಯಾಂಗ್‌ನಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ದರೋಡೆಕೋರರಲ್ಲಿ ಓರ್ವ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಹುಲಜಂತಿ ಗ್ರಾಮದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಹುಲ್ಲಜಂತಿ ಗ್ರಾಮದಲ್ಲಿ ದರೋಡೆಕೋರರು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ದರೋಡೆಕೋರನನ್ನು ಬೈಕ್ ಸವಾರ ಹಾಗೂ ಗ್ರಾಮಸ್ಥರು ಬೆನ್ನುಹತ್ತಿದ್ದರು. ಗ್ರಾಮದಲ್ಲೇ ವಾಹನ ಚಲಾಯಿಸಿ ರಸ್ತೆ ಬಂದ್ ಆದ ಕಾರಣ ಗ್ರಾಮಸ್ಥರ ಮಧ್ಯೆ ಲಾಕ್ ಆಗಿದ್ದರು. ಗ್ರಾಮಸ್ಥರಿಗೆ ಪಿಸ್ತೂಲ್ ತೋರಿಸಿ ವಾಹನ ಬಿಟ್ಟು ದರೋಡೆ ಮಾಡಿದ ನಗದು, ಚಿನ್ನಾಭರಣದ ಮೂಟೆ ಹೊತ್ತು ದರೋಡೆಕೋರರು ಪರಾರಿಯಾಗಿದ್ದಾರೆ. ಪರಾರಿಯಾಗಿರುವ ದರೋಡೆಕೋರರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ದರೋಡೆ ನಂತರ ದರೋಡೆಕೋರರು ಬೇರೆ ಬೇರೆಯಾಗಿ ಪರಾರಿಯಾಗಿದ್ದಾರೆ. ಪೊಲೀಸರು ಪರಿಶೀಲನೆ ಮುಂದುವರಿಸಿದ್ದಾರೆ.
ಗ್ರಾಹಕರಲ್ಲಿ ಆತಂಕ
ಬ್ಯಾಂಕ್‌ನಲ್ಲಿ ಚಿನ್ನಾಭರಣ ಇಟ್ಟ ಗ್ರಾಹಕರಲ್ಲಿ ಆತಂಕ ಮನೆ ಮಾಡಿದೆ. ದರೋಡೆಕೋರನ ಕೃತ್ಯಕ್ಕೆ ಹುಲಜಂತಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸದ್ಯ ವಾಹನ ಬಿಟ್ಟ ಸ್ಥಳ ಹಾಗೂ ಬ್ಯಾಂಕ್ ಹತ್ತಿರ ಪೊಲೀಸರ ಕಣ್ಗಾವಲು ಇಡಲಾಗಿದೆ. ವಾಹನ ಬಿಟ್ಟಲ್ಲಿ ಹಾಗೂ ಬ್ಯಾಂಕ್‌ನಲ್ಲಿ ಶ್ವಾನದಳ, ಬೆರಳಚ್ಚು ತಜ್ಞರಿಂದ ತಪಾಸಣೆ ನಡೆಸಿದ್ದಾರೆ.
ಬ್ಯಾಂಕ್ ಲಾಕರ್‌ನಲ್ಲಿ ಚಿನ್ನಾಭರಣ ಇಟ್ಟ ಗ್ರಾಹಕರು ಕಂಗಾಲಾಗಿದ್ದಾರೆ. ‘ಲಾಕರ್‌ನಲ್ಲಿ 100 ಗ್ರಾಂ ಚಿನ್ನದ ಆಭರಣ, ಅರ್ಧ ಕೆಜಿ ಬೆಳ್ಳಿ ಇಟ್ಟಿದ್ದೆ. 40 ಗ್ರಾಂ ಚಿನ್ನಾಭರಣ ಪ್ಲಜ್ ಮಾಡಿ 2.5 ಲಕ್ಷ ಲೋನ್ ಪಡದಿದ್ದೆ. ಇದೀಗ ದರೋಡೆ ಸುದ್ದಿ ಕೇಳಿ ಆತಂಕ ಮೂಡಿದೆ ಎಂದು ಗ್ರಾಹಕ ಸಂಗಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್ ದರೋಡೆ ಸುದ್ದಿ ಕೇಳುತ್ತಿದ್ದಂತೆ ಎಲ್ಲರೂ ಜಮಾಯಿಸುತ್ತಿದ್ದಾರೆ. ನಮ್ಮ ಚಿನ್ನಾಭರಣ ಹೋಗಿದೆಯಾ ಅನ್ನೋದರ ಬಗ್ಗೆ ಮಾಹಿತಿ ಪಡೆಯಲು ಗ್ರಾಹಕರು ಬಂದಿದ್ದಾರೆ. ಮತ್ತೊಂದು ಕಡೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಆರೋಪಿಗಳಿಗಾಗಿ ತಲಾಷ್ ನಡೆಸಿದ್ದಾರೆ.
-ಗುಂಡು ಹಾರಿಸಿ, ತಲವಾರ್‌ನಿಂದ ಹಲ್ಲೆ ಮಾಡಿ ಗ್ರಾಮ ಪಂಚಾಯಿತಿ ಎದುರೇ ಕೊಲೆ
ವಿಜಯಪುರ: ಬೆಳ್ಳಂಬೆಳಗ್ಗೆ ಭೀಮಾತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷನ ಮೇಲೆ ಗುಂಡು ಹಾರಿಸಿ, ತಲವಾರ್‌ನಿಂದ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ಚಡಚಣ (Chadachan) ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ನಿಂಬರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮನಗೌಡ ಬಿರಾದಾರ (Bhimanagouda Biradar) ಎಂದು ಗುರುತಿಸಲಾಗಿದ್ದು, ಭೀಮಾತೀರದ ಮಹಾದೇವ ಸಾಹುಕಾರ್ ಭೈರಗೊಂಡ ಅವರ (Mahadeva Bhairagond) ಪರಮಾಪ್ತ, ಬಲಗೈ ಬಂಟನಾಗಿದ್ದರು ಎಂದು ತಿಳಿದುಬಂದಿದೆ.ಇದನ್ನೂ ಓದಿ: ಸಚಿವ ಜಮೀರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ – ಕೆಜಿಎಫ್ ಬಾಬುಗೆ ಲೋಕಾಯುಕ್ತ ನೋಟಿಸ್
ಬುಧವಾರ (ಸೆ.3) ಬೆಳಗ್ಗೆ ಮೃತ ಭೀಮನಗೌಡ ಅವರು ದೇವರ ನಿಂಬರಗಿ ಗ್ರಾಮದ ಕಟಿಂಗ್ ಶಾಪ್‌ಗೆ ಆಗಮಿಸಿದ್ದರು. ಈ ವೇಳೆ ಮೂರರಿಂದ ನಾಲ್ಕು ಜನ ಮುಸುಕುಧಾರಿಗಳು ಬಂದು ಕಟಿಂಗ್ ಮಾಡುವವರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಬಳಿಕ ಭೀಮನಗೌಡ ಅವರ ಮೇಲೆ ಫೈರಿಂಗ್ ನಡೆಸಿ, ತಲವಾರ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಸದ್ಯ ಭೀಮನಗೌಡ ಅವರ ಮೃತದೇಹವನ್ನು ವಿಜಯಪುರದ (Vijayapura) ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಹಳೆಯ ವೈಷಮ್ಯದ ಹಿನ್ನೆಲೆ ಗುಂಡು ಹಾರಿಸಿರುವ ಶಂಕೆ ವ್ಯಕ್ತವಾಗಿದೆ. ಆಪ್ತನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಹಾದೇವ ಭೈರಗೊಂಡ ಅವರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಚಡಚಣ ಪೊಲೀಸರು (Chadachan) ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಹಾಸನ | ಮಲೆನಾಡು ಭಾಗದಲ್ಲಿ ಭಾರಿ ಮಳೆ – ಬಿಸಿಲೆ ಘಾಟ್ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ
ಕುಮಾರ್‌ಗೌಡನ ಬಳಿ ವ್ಯಕ್ತಿಯೋರ್ವ 20 ಸಾವಿರ ರೂ. ಸಾಲ ಪಡೆದಿದ್ದ. ಇದೀಗ ಸಾಲದ ಹಣವನ್ನು ವಾಪಸ್ ಕೊಡದಿದ್ದಕ್ಕೆ ಆತನ ಕಾಲಿಗೆ ಸರಪಳಿ ಹಾಕಿ ಕಂಬಕ್ಕೆ ಕಟ್ಟಿ ಹಾಕಿದ್ದಾನೆ. ಕುಮಾರ್ ಗೌಡನ ಈ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಭಾರತೀಯ ವಿಮಾನಗಳಿಗೆ ವಾಯು ಮಾರ್ಗ ಬಂದ್ – ಆ.24ರವರೆಗೆ ವಿಸ್ತರಿಸಿದ ಪಾಕ್
ಶಿರನಾಳ ಗ್ರಾಮದ ಆಯುಷ್ ಆರೋಗ್ಯ ಮಂದಿರದಲ್ಲಿ ಹೆಲ್ತ್ ಇನ್ಸ್‌ಪೆಕ್ಟರ್ ಆಫೀಸರ್ (Health Inspector Officer) ಹುದ್ದೆಯಲ್ಲಿರುವ ನಾರಾಯಣ ರಾಠೋಡ ಕುಡಿದ ನಶೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರಂಪಾಟ ಮಾಡಿದ್ದಾನೆ. ಆಸ್ಪತ್ರೆಯ ಕಿಟಕಿ, ಗಾಜು ಪುಡಿ ಪುಡಿ ಮಾಡಿ ಧ್ವಂಸ ಮಾಡಿದ್ದಾನೆ. ಆಸ್ಪತ್ರೆಯ ಟೇಬಲ್, ಕುರ್ಚಿಗಳೆಲ್ಲ ಪುಡಿಪುಡಿಯಾಗಿವೆ. ಅಷ್ಟಲ್ಲದೇ ನಶೆಯಲ್ಲೇ ರೋಗಿಗಳಿಗೆ ಚಿಕಿತ್ಸೆ ಕೂಡ ನೀಡಿದ್ದಾನೆ. ವೈದ್ಯನ ಅವತಾರ ಕಂಡು ಗ್ರಾಮದ ಜನ ಹಿಡೀ ಶಾಪ ಹಾಕಿದ್ದಾರೆ.
ಕುಡಿತದ ಕಾರಣದಿಂದ ಮೂರು ತಿಂಗಳ ಹಿಂದೆ ನಾರಾಯಣ ರಾಠೋಡನನ್ನ ಅಮಾನತು ಮಾಡಲಾಗಿತ್ತು. ಬರಡೋಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದಾಗ ಮಹಿಳಾ ರೋಗಿಗಳು ಬಂದರೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದ ಹಿನ್ನೆಲೆ ಅಮಾನತು ಮಾಡಲಾಗಿತ್ತು.ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡ ‘ಲಕ್ಷ್ಮಿ ಬಾರಮ್ಮ’ ನಟಿಯರು
ವಾರದ ಹಿಂದಷ್ಟೇ ಮತ್ತೇ ಕರ್ತವ್ಯಕ್ಕೆ ಹಾಜರಾಗಿದ್ದ ವೈದ್ಯ ಇದೀಗ ಮತ್ತೆ ಅದೇ ರೀತಿ ರಂಪಾಟ ಮಾಡಿದ್ದಾನೆ. ಸದ್ಯ ವೈದ್ಯನ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು, ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.
ವಿಜಯಪುರ: ಭೀಮಾತೀರದ ನಟೋರಿಯಸ್ ಮಹಾದೇವ ಸಾಹುಕಾರ್ ಹುಟ್ಟುಹಬ್ಬದ ದಿನದಂದೆ ಪೊಲೀಸರ ಅತಿಥಿಯಾಗಿದ್ದಾನೆ. ಜಿಲ್ಲೆಯ ಇಂಡಿ ತಾಲೂಕಿನ ಉದ್ಯಮಿಗೆ 5 ಕೋಟಿ ನಗದು ಅಥವಾ 3 ಕೆ.ಜಿ. ಚಿನ್ನಕ್ಕೆ ಬೇಡಿಕೆ ಇಟ್ಟಿದ ಆರೋಪದಡಿ ಬಂಧನವಾಗಿದ್ದಾನೆ.
ನಾಮದೇವ್ ಡಾಂಗೆ
ಚಿನ್ನಾಭರಣದ ವ್ಯಾಪಾರಿಯಾಗಿರುವ ನಾಮದೇವ್ ಡಾಂಗೆ ಎಂಬವರಿಗೆ ಬೇಡಿಕೆ ಇಟ್ಟಿದ್ದನು. 5 ಕೋಟಿ ಕೊಡದೇ ಇದ್ರೇ ಕಾಲು, ತಲೆ ಕಟ್ ಮಾಡ್ತೀನಿ. ಯಾರಿಗಾದ್ರೂ ಹೇಳಿದ್ರೆ ಮನೆಗೆ ಹೊಕ್ಕು ತಲೆಗೆ ಗುಂಡು ಹೊಡೆಯುತ್ತೇನೆಂದು ಧಮ್ಕಿ ಹಾಕಿದ್ದನು. ಇನ್ನು ಈ ವೇಳೆ ಮಹಾದೇವ ಸಾಹುಕಾರ್ ಜೊತೆ ಭೀಮಾತೀರದ ಮತ್ತೊಬ್ಬ ನಟೋರಿಯಸ್ ಹಂತಕ ಬಾಗಪ್ಪ ಹರಿಜನ ಮತ್ತು ಆಪ್ತ ಲಕ್ಷ್ಮಿಕಾಂತ್ ಪಾಟೀಲ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆಂದು ನಾಮದೇವ್ ದೂರು ದಾಖಲಿಸಿದ್ದರು.
ಬಾಗಪ್ಪ ಹರಿಜನ
ಸದ್ಯ ಚಡಚಣ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 384, 511, 504, 506 ಮತ್ತು ರೇ/ವು 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಾಗಪ್ಪ ಹಾಗೂ ಲಕ್ಷ್ಮಿಕಾಂತ್ ನಾಪತ್ತೆಯಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಬೆಂಗಳೂರು: ಕೊಲೆ ಮಾಡಲು ಪೊಲೀಸರೇ ಸುಪಾರಿ ತೆಗೆದುಕೊಳ್ಳುತ್ತಾರಾ? ಕರ್ನಾಟಕ ಪೊಲೀಸ್ ಎಂದರೆ ಎಷ್ಟು ಮರ್ಯಾದೆ ಇತ್ತು. ಆದರೆ ಪೊಲೀಸ್ ಇಲಾಖೆಯ ಮರ್ಯಾದೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುತ್ತಿದ್ದೀರಾ ಎಂದು ಪ್ರಶ್ನಿಸಿ ಸಿಎಂ ಕುಮಾರಸ್ವಾಮಿ ಅವರು ಪೊಲೀಸ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ರಾಜ್ಯ ಪೊಲೀಸ್ ಇಲಾಖೆಯ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು. ಈ ವೇಳೆ ರಾಜ್ಯದಲ್ಲಿ ನಡೆದಿರುವ ಕೆಲ ಘಟನೆಗಳನ್ನು ಉದಾಹರಿಸಿದ ಸಿಎಂ ಈ ಕುರಿತು ಮಾಹಿತಿ ನೀಡುವಂತೆ ಐಜಿಪಿ ರಾಮಚಂದ್ರರಾವ್ ಸೇರಿದಂತೆ ಇತರೇ ಅಧಿಕಾರಿಗಳನ್ನು ಪ್ರಶ್ನಿಸಿದರು.
ಸಮ್ಮಿಶ್ರ ಸರ್ಕಾರ ರಚನೆ ಬಳಿಕ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಡಿಸಿಎಂ ಹಾಗೂ ಗೃಹಸಚಿವ ಪರಮೇಶ್ವರ್, ಡಿಜಿ ಐಜಿಪಿ ನೀಲಮಣಿರಾಜು ಸೇರಿದಂತೆ ಎಲ್ಲಾ ಐಪಿಎಸ್ ಅಧಿಕಾರಿಗಳು, ಎಡಿಜಿಪಿಗಳು, ಐಜಿಪಿಗಳು, ಡಿಐಜಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಮುಖ್ಯವಾಗಿ ಕಾನೂನು ಸುವ್ಯವಸ್ಥೆ, ಗೌರಿಲಂಕೇಶ್ ಹತ್ಯೆ ಪ್ರಕರಣ, ಭೀಮಾತೀರದ ನಕಲಿ ಎನ್ ಕೌಂಟರ್ ನಲ್ಲಿ ಪೊಲೀಸರ ಭಾಗಿ ಕುರಿತಂತೆ ಚರ್ಚೆ ನಡೆಸಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದೇ ವೇಳೆ ಬೆಂಗಳೂರು ನಗರದ ಅಪರಾಧ ಪ್ರಕರಣಗಳು, ಅಕ್ರಮ ಲೈವ್ ಬ್ಯಾಂಡ್ ಗಳ ಬಗ್ಗೆ ಚರ್ಚೆ ನಡೆಸಿದ ಅವರು ರಾಜಧಾನಿಯಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಿಗೆ ಬ್ರೇಕ್ ಹಾಕುವಂತೆ ಸೂಚನೆ ನೀಡಿದರು.
ಮುಲಾಜಿಲ್ಲದೆ ಕಾರ್ಯನಿರ್ವಹಿಸಿ:
ಇದೇ ವೇಳೆ ಪೊಲೀಸರ ಮೇಲೆ ಉಂಟಾಗುವ ಒತ್ತಡದ ಕುರಿತು ಮಾತನಾಡಿದ ಸಿಎಂ, ಸಮ್ಮಿಶ್ರ ಸರ್ಕಾರ ನಿಮಗೆ ಸಾಕಷ್ಟು ಒತ್ತಡ ಆಗಬಹುದು. ಒತ್ತಡ ಸಹಿಸಿಕೊಂಡು ಕೆಲಸ ಮಾಡಬೇಕು. ಆದರೆ ಯಾರ ಒತ್ತಡ ಹಾಗೂ ಮುಲಾಜಿಗೂ ಒಳಗಾಗುವ ಅಗತ್ಯ ಇಲ್ಲ. ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ಕಾನೂನು ಸುವ್ಯವಸ್ಥೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದ ಸಲಹೆ ನೀಡಿದರು.
ಸಭೆಯಲ್ಲಿ ಹಿರಿಯ ಅಧಿಕಾರಿಗಳು 2017-18 ರ ಅವಧಿಯ ಕಾನೂನು ಸುವ್ಯವಸ್ಥೆ ವರದಿ ಮತ್ತು 2018ರ ಉಂಟಾಗಬಹುದಾದ ಕಾನೂನು ಸುವ್ಯವಸ್ಥೆಯ ನಿರೀಕ್ಷಿತ ವಿವರಗಳು ಸೇರಿದಂತೆ ಕಳೆದ ಮೂರು ವರ್ಷಗಳಿಂದ ಗೂಂಡಾ ಆಕ್ಟ್ ನಲ್ಲಿ ದಾಖಲಿಸಿರುವ ಪ್ರಕರಣಗಳ ವಿವರ, ರೌಡಿ ಮತ್ತು ಕೊಮುಗಲಭೆಗೆ ಸಂಬಂಧಪಟ್ಟ ಪ್ರಕರಣಗಳಿಗೆ ಕೈಗೊಂಡ ಕ್ರಮಗಳು, ಮೂರು ವರ್ಷಗಳ ಅವಧಿಯಲ್ಲಿ ಪತ್ತೆ ಹಚ್ಚಿರುವ ಪ್ರಮುಖ ಕೇಸ್ ಗಳ ವಿವರ ಮತ್ತು ಶಿಕ್ಷೆಯಾಗಿರುವ ಕೇಸ್ ಗಳು, ಪ್ರಕರಣ ಪ್ರಮಾಣವನ್ನು ವಿವರವಾಗಿ ಮಾಹಿತಿ ನೀಡಿದರು.
ಸದ್ದು ಮಾಡಿದ ಫೇಕ್ ಎನ್ ಕೌಂಟರ್: ಸಭೆಯಲ್ಲಿ ಪ್ರಮುಖವಾಗಿ ಸಿಎಂ ಕುಮಾರಸ್ವಾಮಿ ಅವರು ಚಡಚಣದಲ್ಲಿ ಪೊಲೀಸ್ ಅಧಿಕಾರಿಗಳೇ ಮಾಡಿದ್ದ ಫೇಕ್ ಎನ್ ಕೌಂಟರ್ ಕುರಿತು ಪ್ರಸ್ತಾಪ ಮಾಡಿ ಪ್ರಶ್ನಿಸಿದರು. ಈ ಕುರಿತು ಐಜಿಪಿ ರಾಮಚಂದ್ರರಾವ್ ಅವರಿಗೆ ಪ್ರಶ್ನೆ ಕೇಳಿದ ಕುಮಾರಸ್ವಾಮಿ ಅವರು, ಪೊಲೀಸರೇ ಕೊಲೆ ಮಾಡಲು ಸುಪಾರಿ ಪಡೆಯುತ್ತರಾ ಎಂದು ಪ್ರಶ್ನಿಸಿದರು. ಈ ವೇಳೆ ಸಿಎಂ ಅವರ ಪ್ರಶ್ನೆಗೆ ಸರಿಯಾದ ಉತ್ತರ ನೀಡಲು ಒದ್ದಾಡಿದರು. ಇದರಿಂದ ಮತ್ತಷ್ಟು ಗರಂ ಆದ ಸಿಎಂ ಕರ್ನಾಟಕ ಪೊಲೀಸ್ ಎಂದರೆ ಎಷ್ಟು ಮರ್ಯಾದೆ ಇತ್ತು. ಪೊಲೀಸ್ ಇಲಾಖೆಯ ಮರ್ಯಾದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜು ಆಗುತ್ತಿದೆ. ಒಬ್ಬ ಕೊಲೆಗಾರ ಪೊಲೀಸರಿಗೆ ಮತ್ತೊಂದು ಕೊಲೆ ಮಾಡಲು ಸುಪಾರಿ ನೀಡುತ್ತಾನೆ ಅಂದರೆ ನೀವೆಷ್ಟು ಬಲಿಷ್ಟರು ಎನ್ನುವುದು ತಿಳಿಯುತ್ತದೆ ಎಂದು ಪ್ರಶ್ನಿಸಿದರು.