Tag: ಚಟ್ನಿ

  • ಊಟದೊಂದಿಗೆ ಸಖತ್ ಟೇಸ್ಟ್‌ ನೀಡುವ ಬೆಳ್ಳುಳ್ಳಿ ಚಟ್ನಿ ಮಾಡಿ

    ಊಟದೊಂದಿಗೆ ಸಖತ್ ಟೇಸ್ಟ್‌ ನೀಡುವ ಬೆಳ್ಳುಳ್ಳಿ ಚಟ್ನಿ ಮಾಡಿ

    ಡ್ಲಿ, ದೋಸೆಯೊಂದಿಗೆ ಬೇಕೇ ಬೇಕು ಚಟ್ನಿ. ದಕ್ಷಿಣ ಭಾರತದಲ್ಲಿ ಊಟದಲ್ಲೂ ಸೈಡ್ ಡಿಶ್ ಆಗಿ ತಯಾರಿಸಲಾಗುವ ಚಟ್ನಿಯನ್ನು ರುಚಿರುಚಿಯಾಗಿ ವಿವಿಧ ಪದಾರ್ಥಗಳಿಂದ ಮಾಡಲಾಗುತ್ತದೆ. ಇಂದು ನಾವು ಊಟದೊಂದಿಗೆ ನಾಲಿಗೆ ಚಪ್ಪರಿಸಲು ರುಚಿಕರವಾದ ಬೆಳ್ಳುಳ್ಳಿ ಚಟ್ನಿ (Garlic Chutney) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ನೀವೂ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಒಗ್ಗರಣೆಗೆ:
    ತುಪ್ಪ – ಕಾಲು ಕಪ್
    ಸಾಸಿವೆ – 1 ಟೀಸ್ಪೂನ್
    ಉದ್ದಿನ ಬೇಳೆ – 1 ಟೀಸ್ಪೂನ್
    ಹಿಂಗ್ – ಚಿಟಿಕೆ
    ಹೆಚ್ಚಿದ ಬೆಳ್ಳುಳ್ಳಿ – ಮುಕ್ಕಾಲು ಕಪ್
    ಪೇಸ್ಟ್ ತಯಾರಿಸಲು:

    ತುರಿದ ತೆಂಗಿನಕಾಯಿ – ಕಾಲು ಕಪ್
    ಸಾಸಿವೆ – ಒಂದೂವರೆ ಟೀಸ್ಪೂನ್
    ಹೆಚ್ಚಿದ ಟೊಮೆಟೊ – 1
    ಒಣ ಕೆಂಪು ಮೆಣಸಿನಕಾಯಿ – 4
    ಇತರ ಪದಾರ್ಥಗಳು:
    ಹುಣಸೆಹಣ್ಣಿನ ಸಾರ – 1 ಕಪ್
    ಅರಿಶಿನ – ಕಾಲು ಟೀಸ್ಪೂನ್
    ಉಪ್ಪು – ಮುಕ್ಕಾಲು ಟೀಸ್ಪೂನ್
    ಬೆಲ್ಲ – ಅರ್ಧ ಟೀಸ್ಪೂನ್ ಇದನ್ನೂ ಓದಿ: ಆರೋಗ್ಯಕರ ಮೊಳಕೆ ಬರಿಸಿದ ಹೆಸರುಕಾಳಿನ ಪಲ್ಯ

    ಮಾಡುವ ವಿಧಾನ:
    * ಮೊದಲಿಗೆ, ಪ್ಯಾನ್‌ನಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಉದ್ದಿನ ಬೇಳೆ ಮತ್ತು ಹಿಂಗ್ ಹಾಕಿ.
    * ಮುಕ್ಕಾಲು ಕಪ್ ಬೆಳ್ಳುಳ್ಳಿ ಸೇರಿಸಿ ಕಡಿಮೆ ಉರಿಯಲ್ಲಿ ಹುರಿಯಿರಿ.
    * ಬೆಳ್ಳುಳ್ಳಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಪಕ್ಕಕ್ಕೆ ಇರಿಸಿ.
    * ಈಗ ಮಿಕ್ಸರ್ ಜಾರ್‌ಗೆ ತೆಂಗಿನ ತುರಿ, ಸಾಸಿವೆ, ಟೊಮೆಟೊ ಮತ್ತು ಒಣ ಕೆಂಪು ಮೆಣಸಿನಕಾಯಿ ಹಾಕಿ, ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಪಕ್ಕಕ್ಕೆ ಇರಿಸಿ.
    * ಈಗ ಒಂದು ದೊಡ್ಡ ಕಡಾಯಿಯಲ್ಲಿ ಹುಣಸೆಹಣ್ಣಿನ ಸಾರ, ಅರಿಶಿನ, ಉಪ್ಪು ಮತ್ತು ಬೆಲ್ಲ ಹಾಕಿ, 5 ನಿಮಿಷ ಕುದಿಸಿ.
    * ತಯಾರಿಸಿಟ್ಟ ಪೇಸ್ಟ್ ಅನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
    * ಇದೀಗ ಹುರಿದ ಬೆಳ್ಳುಳ್ಳಿ ಸೇರಿಸಿ, ಮಿಕ್ಸ್ ಮಾಡಿ.
    * 7 ನಿಮಿಷಗಳ ಕಾಲ ಅಥವಾ ಎಣ್ಣೆ ಬೇರ್ಪಡುವವರೆಗೆ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.
    * ಇದೀಗ ರುಚಿಕರವಾದ ಬೆಳ್ಳುಳ್ಳಿ ಚಟ್ನಿ ತಯಾರಾಗಿದ್ದು, ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ಹೀಗೆ ಮಾಡಿ ಆರೋಗ್ಯಕರ ಹೆಸರು ಬೇಳೆ ದೋಸೆ

    Live Tv
    [brid partner=56869869 player=32851 video=960834 autoplay=true]

  • ಈರುಳ್ಳಿ ಚಟ್ನಿ ಮಾಡೋದು ಹೇಗೆ ಗೊತ್ತಾ?

    ಈರುಳ್ಳಿ ಚಟ್ನಿ ಮಾಡೋದು ಹೇಗೆ ಗೊತ್ತಾ?

    ಪ್ರತಿ ಬಾರಿಯೂ ದೋಸೆ, ಇಡ್ಲಿಯೊಂದಿಗೆ ಶೇಂಗಾ, ತೆಂಗಿಕಾಯಿ ಚಟ್ನಿ ತಿಂದು ಬೋರ್ ಆಗಿ ಹೋಗಿದ್ದರೆ, ಈರುಳ್ಳಿ ಚಟ್ನಿ ಒಮ್ಮೆ ಟ್ರೈ ಮಾಡಿ ನೋಡಿ. ಸೂಪರ್ ಸುವಾಸನೆಯುಕ್ತ ಟ್ಯಾಂಗಿ ಈರುಳ್ಳಿ ಚಟ್ನಿಯ ರುಚಿ ಒಮ್ಮೆ ನೋಡಿದರೆ, ಮತ್ತೆ ಮತ್ತೆ ಸವಿಯುವ ಮನಸಾಗುವುದಂತೂ ಖಂಡಿತಾ. ಸಿಂಪಲ್ ಆದ ಈರುಳ್ಳಿ ಚಟ್ನಿ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಎಣ್ಣೆ – 2 ಟೀಸ್ಪೂನ್
    ಉದ್ದಿನ ಬೇಳೆ – 1 ಟೀಸ್ಪೂನ್
    ಕಡಲೆ ಬೇಳೆ – 1 ಟೀಸ್ಪೂನ್
    ಒಣ ಕಾಶ್ಮೀರಿ ಕೆಂಪು ಮೆಣಸು – 4
    ಸಣ್ಣಗೆ ಹೆಚ್ಚಿದ ಈರುಳ್ಳಿ – 1
    ಹುಣಿಸೇಹಣ್ಣು – ಸಣ್ಣ ತುಂಡು
    ಬೆಲ್ಲ – ಅರ್ಧ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ನೀರು – ಕಾಲು ಕಪ್

    ಒಗ್ಗರಣೆಗೆ:
    ಎಣ್ಣೆ – 2 ಟೀಸ್ಪೂನ್
    ಸಾಸಿವೆ – 1 ಟೀಸ್ಪೂನ್
    ಉದ್ದಿನ ಬೇಳೆ – 1 ಟೀಸ್ಪೂನ್
    ಇಂಗ್ – ಚಿಟಿಕೆ
    ಒಣ ಕೆಂಪು ಮೆಣಸಿನಕಾಯಿ – 1
    ಕರಿಬೇವಿನ ಎಲೆಗಳು – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಹಾಕಿ, ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಒಣ ಕಾಶ್ಮೀರಿ ಕೆಂಪು ಮೆಣಸಿನಕಾಯಿಯನ್ನು ಕಡಿಮೆ ಉರಿಯಲ್ಲಿ ಹುರಿಯಿರಿ.
    * ಸಣ್ಣಗೆ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ, ಸ್ವಲ್ಪ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
    * ಅದನ್ನು ಪಕ್ಕಕ್ಕಿಟ್ಟು, ಸಂಪೂರ್ಣ ತಣ್ಣಗಾದ ಬಳಿಕ ಮಿಕ್ಸರ್ ಜಾರ್‌ಗೆ ಹಾಕಿ. ಹುಣಿಸೇಹಣ್ಣು, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ನೀರು ಹಾಕಿ ನಯವಾಗಿ ಬ್ಲೆಂಡ್ ಮಾಡಿ.
    * ಒಗ್ಗರಣೆಗೆ ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆ ಹಾಕಿ, ಸಾಸಿವೆ, ಉದ್ದಿನ ಬೇಳೆ, ಹಿಂಗ್, ಒಣ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ. ಒಗ್ಗರಣೆ ಸಿಡಿಯಲು ಬಿಡಿ.
    * ಕೊನೆಯದಾಗಿ ಈರುಳ್ಳಿ ಚಟ್ನಿ ಮೇಲೆ ಒಗ್ಗರಣೆ ಹಾಕಿ, ಇಡ್ಲಿ ಅಥವಾ ದೋಸೆಯೊಂದಿಗೆ ಬಡಿಸಿ.

    Live Tv
    [brid partner=56869869 player=32851 video=960834 autoplay=true]

  • ಗಂಜಿ ಜೊತೆ ಸೂಪರ್ ಆಗಿರುತ್ತೆ ಸಿಗಡಿ ಚಟ್ನಿ

    ಗಂಜಿ ಜೊತೆ ಸೂಪರ್ ಆಗಿರುತ್ತೆ ಸಿಗಡಿ ಚಟ್ನಿ

    ರಾವಳಿ ಭಾಗದಲ್ಲಿ ಅತ್ಯಂತ ಫೇಮಸ್ ಈ ಸಿಗಡಿ ಚಟ್ನಿ. ಉಪ್ಪು, ಹುಳಿ ಖಾರದೊಂದಿಗಿನ ಸ್ವಾದ ಯಾವ ರೆಸ್ಟೊರೆಂಟ್‌ನ ರುಚಿಯನ್ನೂ ಹಿಂದಿಕ್ಕಬಲ್ಲದು. ಕುಚಿಲಕ್ಕಿಯ ಗಂಜಿಯೊಂದಿಗಂತೂ ಈ ಚಟ್ನಿ ಇದ್ದರೆ ಬೇರೇನೂ ಬೇಡ. ನಿಮಿಷಗಳಲ್ಲಿ ನಿಮ್ಮ ಬಟ್ಟಲು ಖಾಲಿ ಆಗೋದು ಗ್ಯಾರೆಂಟಿ. ನಾನ್‌ವೆಜ್ ಪ್ರಿಯರು ಟ್ರೈ ಮಾಡಲೇ ಬೇಕಾದ ಸಿಗಡಿ ಚಟ್ನಿಯ ರೆಸಿಪಿ ಇಲ್ಲಿದೆ ನೋಡಿ.

    ಬೇಕಾಗುವ ಪದಾರ್ಥಗಳು:
    * ಎಳೆ ಹಾಗೂ ಒಣ ಸಿಗಡಿ – 1 ಕಪ್
    * ತೆಂಗಿನಕಾಯಿ – 1
    * ಈರುಳ್ಳಿ – 1
    * ಬೆಳ್ಳುಳ್ಳಿ, ಲವಂಗ – 8 ರಿಂದ 10
    * ಅರಿಶಿನ ಪುಡಿ – 4 ಟೀಸ್ಪೂನ್
    * ಕೆಂಪು ಮೆಣಸಿನಕಾಯಿ – 2
    * ಎಣ್ಣೆ – 2 ಟೀಸ್ಪೂನ್
    * ಕರಿಬೇವಿನ ಎಲೆ

    ಮಾಡುವ ವಿಧಾನ:
    * ಎಳೆಯ ಹಾಗೂ ಒಣ ಸಿಗಡಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ತೊಳೆದು ಒಣಗಿಸಿ.
    * ಸಣ್ಣ ಉರಿಯಲ್ಲಿ 1/4 ಟೀಸ್ಪೂನ್ ಅರಿಶಿನ ಪುಡಿಯನ್ನು ತವಾದಲ್ಲಿ ಹಾಕಿ, ಒಂದೆರಡು ನಿಮಿಷಗಳ ಕಾಲ ಸುವಾಸನೆ ಬರುವವರೆಗೂ ಹುರಿಯಿರಿ.
    * ಒಂದು ಪ್ಯಾನ್ ತೆಗೆದುಕೊಂಡು, 1 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ, ಈರುಳ್ಳಿ, ಬೆಳ್ಳುಳ್ಳಿ, ಸ್ವಲ್ಪ ಕರಿಬೇವಿನ ಎಲೆಗಳು, 2 ಕೆಂಪು ಮೆಣಸಿನಕಾಯಿ ಹಾಕಿ ಹುರಿಯಿರಿ. ಈರುಳ್ಳಿ ಮೃದುವಾದ ಮೇಲೆ ಪಕ್ಕಕ್ಕೆ ಸರಿಸಿ.
    * ಹುರಿದ ಪದಾರ್ಥಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ, ಅದಕ್ಕೆ 2 ಟೀಸ್ಪೂನ್ ನೀರನ್ನು ಹಾಕಿ ಒರಟಾದ ಪೇಸ್ಟ್ ಆಗುವತನಕ ರುಬ್ಬಿ.
    * ಬಾಣಲೆಗೆ 2 ಟೀಸ್ಪೂನ್ ಎಣ್ಣೆ ಹಾಕಿ, ತೆಂಗಿನ ತುರಿ ಸೇರಿಸಿ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
    * ಅದಕ್ಕೆ ಹುಣಸೆ ಹಣ್ಣಿನ ರಸ, ರುಬ್ಬಿದ ಮಿಶ್ರಣ, ಹಾಗೂ ಒಣಗಿಸಿದ ಸಿಗಡಿಯನ್ನು ಹಾಕಿ ಮಿಕ್ಸ್ ಮಾಡಿ. ತೇವಾಂಶ ಆರುವವರೆಗೂ ಹುರಿಯಿರಿ.

    – ಇದೀಗ ಒಣ ಸಿಗಡಿ ಚಟ್ನಿ ಸಿದ್ಧವಾಗಿದ್ದು, ಬಿಸಿ ಬಿಸಿ ಗಂಜಿಯೊಂದಿಗೆ ಬಡಿಸಿ, ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ದಕ್ಷಿಣ ಭಾರತೀಯ ಜನಪ್ರಿಯ ಉಪಹಾರ ‘ಪುಡಿ ದೋಸೆ’ ಮಾಡಿ

    ದಕ್ಷಿಣ ಭಾರತೀಯ ಜನಪ್ರಿಯ ಉಪಹಾರ ‘ಪುಡಿ ದೋಸೆ’ ಮಾಡಿ

    ದೋಸೆ ಎಂದರೆ ಯಾರಿಗೆ ಇಷ್ಟವಾಗುವುದಿಲ್ಲ. ದೋಸೆಯನ್ನು ಹಲವು ಶೈಲಿಯಲ್ಲಿ ಮಾಡಬಹುದು. ಮಸಾಲಾ ದೋಸೆ, ಈರುಳ್ಳಿ ದೋಸೆ ರೆವೆ ದೋಸೆ ಮತ್ತು ರಾಗಿ ದೋಸೆ ಇದೇ ರೀತಿ ಹಲವು ವಿಧಗಳಿವೆ. ಆದರೆ ಇತ್ತೀಚೆಗೆ ಹೆಚ್ಚು ಟ್ರೆಂಡ್ ಕ್ರಿಯೇಟ್ ಮಾಡಿರುವ ‘ಪುಡಿ ದೋಸೆ’ ಮಾಡುವ ವಿಧಾನವನ್ನು ನಾವು ಇಂದು ಹೇಳಿಕೊಡುತ್ತಿದ್ದೇವೆ. ನೀವು ಮನೆಯಲ್ಲಿ ಮಾಡಿ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    * ಎಳ್ಳು – 2 ಟೇಬಲ್ಸ್ಪೂನ್
    * ಎಣ್ಣೆ – 1 ಟೀಸ್ಪೂನ್
    * ಉದ್ದಿನ ಬೇಳೆ – ಅರ್ಧ ಕಪ್
    * ಕಡ್ಲೆ ಬೇಳೆ – ಅರ್ಧ ಕಪ್
    * ಒಣಗಿದ ಕೆಂಪು ಮೆಣಸಿನಕಾಯಿ – 6


    * ಕರಿ ಬೇವಿನ ಎಲೆಗಳು – 6 ರಿಂದ 10
    * ಕೊಬ್ಬರಿ ತುರಿ – 2 ಟೇಬಲ್ಸ್ಪೂನ್
    * ಹುಣಿಸೇಹಣ್ಣು – 50 ಗ್ರಾಂ
    * ಅರಿಶಿನ – ಅರ್ಧ ಟೀಸ್ಪೂನ್
    * ಉಪ್ಪು – 1 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ, ದೊಡ್ಡ ತವಾ ಮೇಲೆ ಬಿಳಿ ಎಳ್ಳನ್ನು ಕಡಿಮೆ ಉರಿಯಲ್ಲಿ ಹುರಿದು ಪಕ್ಕಕ್ಕೆ ಇಡಿ.
    * ಅದೇ ತವಾ ಮೇಲೆ ಎಣ್ಣೆಯನ್ನು ಬಿಸಿ ಮಾಡಿ, ಉದ್ದಿನ ಬೇಳೆ, ಕಡ್ಲೆ ಬೇಳೆಯನ್ನು ಹಾಕಿ ಫ್ರೈ ಮಾಡಿ. ಇದಲ್ಲದೆ, ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿ ಬೇವಿನ ಎಲೆಗಳನ್ನು ಕಡಿಮೆ ಉರಿಯಲ್ಲಿ ಹುರಿಯಿರಿ.
    * ಈಗ ಒಣ ತೆಂಗಿನಕಾಯಿ ಸೇರಿಸಿ ತೆಂಗಿನಕಾಯಿ ಗೋಲ್ಡನ್ ಬ್ರೌನ್ ಆಗುವ ತನಕ ಹುರಿಯಿರಿ. ಈ ಎಲ್ಲ ಮಿಶ್ರಣವನ್ನು ಸಂಪೂರ್ಣವಾಗಿ ತಣ್ಣಗಾಗಿಸಿ ಮಿಕ್ಸಿಗೆ ವರ್ಗಾಯಿಸಿ. ರುಬ್ಬಿಕೊಳ್ಳಿ.
    * ಅದಕ್ಕೆ ಹುಣಿಸೇಹಣ್ಣು, ಅರಿಶಿನ ಮತ್ತು ಉಪ್ಪು ಸೇರಿಸಿ. ಯಾವುದೇ ನೀರನ್ನು ಸೇರಿಸದೆ ಒರಟಾದ ಪುಡಿಗೆ ರುಬ್ಬಿಕೊಳ್ಳಿ.
    * ನಂತರ ತವವನ್ನು ಬಿಸಿ ದೋಸೆ ಹಿಟ್ಟನ್ನು ಹಾಕಿ. ಅದರ ಮೇಲೆ ತಯಾರಾದ ಪೆÇಡಿಯನ್ನು ಹಾಕಿ 1-2 ಟೀಸ್ಪೂನ್ ತುಪ್ಪವನ್ನು ಹಾಕಿ ಬೇಯಿಸಿ.
    * 30 ಸೆಕೆಂಡುಗಳ ಕಾಲ ದೋಸೆಯು ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿ.

    – ಅಂತಿಮವಾಗಿ, ಚಟ್ನಿ ಮತ್ತು ಸಾಂಬಾರ್‍ನೊಂದಿಗೆ ‘ಪುಡಿ ದೋಸೆ’ಯನ್ನು ಆನಂದಿಸಿ.

    Live Tv
    [brid partner=56869869 player=32851 video=960834 autoplay=true]

  • ಬೆಳ್ಳುಳ್ಳಿ ಚಟ್ನಿ ಮಾಡಿ ಅಕ್ಕಿ ರೊಟ್ಟಿ ಜೊತೆ ಸವಿಯಿರಿ

    ಬೆಳ್ಳುಳ್ಳಿ ಚಟ್ನಿ ಮಾಡಿ ಅಕ್ಕಿ ರೊಟ್ಟಿ ಜೊತೆ ಸವಿಯಿರಿ

    ಬೇಕಾಗುವ ಸಾಮಗ್ರಿಗಳು:
    * ಬೆಳ್ಳುಳ್ಳಿ, ಪುಡಿಮಾಡಲಾಗಿದೆ- 4
    * ಅಡುಗೆ ಎಣ್ಣೆ- ಅರ್ಧ ಕಪ್
    * ಕಡಲೆಕಾಯಿ- ಸ್ವಲ್ಪ
    * ಎಳ್ಳು- 2 ಚಮಚ
    * ಜೀರಿಗೆ- 1 ಚಮಚ
    * ದನಿಯಾ- ಸ್ವಲ್ಪ
    * ಮೆಂತ್ಯ- ಸ್ವಲ್ಪ
    * ಒಣ ತೆಂಗಿನಕಾಯಿ- ಸ್ವಲ್ಪ
    * ಕೆಂಪು ಮೆಣಸಿನ ಪುಡಿ- 1 ಚಮಚ
    * ಅರಿಶಿಣ- 1 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಬಾಣಲೆಗೆ ಅಡುಗೆ ಎಣ್ಣೆಯನ್ನು ಬಿಸಿ ಮಾಡಿ ಬೆಳ್ಳುಳ್ಳಿ, ಕಡಲೆಕಾಯಿ, ಎಳ್ಳು, ಜೀರಿಗೆ, ದನಿಯಾ, ಮೇಥಿ, ಒಣ ತೆಂಗಿನಕಾಯಿ ಸೇರಿಸಿ ಹುರಿಯಿರಿ.

    * ಹುರಿದ ಮಸಾಳೆಯಲ್ಲಿ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    * ಮೆಣಸಿನ ಪುಡಿ, ಅರಿಶಿಣ, ಉಪ್ಪುನ್ನು ಈಗಾಲೇ ಪುಡಿ ಮಾಡಿದ ಚಟ್ನಿ ಮಸಾಲೆಗೆ ಸೇರಿಸಿ. ನೀರಿನಲ್ಲಿ ಸೇರಿಸಿಕೊಳ್ಳಬೇಡಿ.
    * ರುಚಿಯಾದ ಚಟ್ನಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:  ಕುಚ್ಚಲಕ್ಕಿ ದೋಸೆ ಸಖತ್ ಟೇಸ್ಟ್ – ನೀವೂ ಒಮ್ಮೆ ಟ್ರೈ ಮಾಡಿ

     

  • ಬೇರೆಲ್ಲಾ ಚಟ್ನಿಗಳಿಗಿಂತ ವಿಭಿನ್ನ ಮೊಸರು ಚಟ್ನಿ

    ಬೇರೆಲ್ಲಾ ಚಟ್ನಿಗಳಿಗಿಂತ ವಿಭಿನ್ನ ಮೊಸರು ಚಟ್ನಿ

    ಭಾರತೀಯ ಅಡುಗೆಗಳಲ್ಲಿ ಚಟ್ನಿಗೆ ವಿಶೇಷ ಸ್ಥಾನವಿದೆ. ಅಡುಗೆ ಪರಿಣಿತರ ಪ್ರತಿಭೆಯಿಂದಾಗಿ ಕೆಲವೇ ಪದಾರ್ಥಗಳನ್ನು ಬಳಸಿ ಮಾಡುವ ಈ ಚಟ್ನಿ ಬಾಯಲ್ಲಿ ನೀರೂರಿಸುವಂತಿರುತ್ತದೆ. ದೋಸೆ, ಚಪಾತಿ, ರೊಟ್ಟಿಗೆ ಮೊಸರು ಚಟ್ನಿ ಮಾಡಿ.

    ಬೇಕಾಗುವ ಸಾಮಗ್ರಿಗಳು:
    * ಕೊತ್ತಂಬರಿ- ಸ್ವಲ್ಪ
    * ಪುದಿನಾ – ಸ್ವಲ್ಪ
    * ಹಸಿಮೆಣಸಿನಕಾಯಿ- 3
    * ಬೆಳ್ಳುಳ್ಳಿ- 1
    * ಶುಂಠಿ- ಸ್ವಲ್ಪ
    * ಮೊಸರು – 2 ಕಪ್
    * ಜೀರಿಗೆ ಪುಡಿ- ಸ್ವಲ್ಪ
    * ನಿಂಬೆ ರಸ- 1 ಚಮಚ
    * ಚಾಟ್ ಮಸಾಲಾ- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲಿಗೆ ಒಂದು ಮಿಕ್ಸಿ ಜಾರ್‌ನಲ್ಲಿ ಕೊತ್ತಂಬರಿ, ಪುದಿನಾ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ನಿಂಬೆ ರಸವನ್ನು ಹಾಕಿ
    * ಅಗತ್ಯವಿದ್ದರೆ ಮಾತ್ರ ನೀರನ್ನು ಸೇರಿಸಿ ರುಬ್ಬಿಕೊಳ್ಳಬೇಕು. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ರುಬ್ಬಿದ ಮಿಶ್ರಣ, ಮೊಸರು, ಜೀರಿಗೆ ಪುಡಿ, ಚಾಟ್ ಮಸಾಲಾ, ಉಪ್ಪನ್ನು ಸೇರಿಸಿದರೆ ರುಚಿಯಾದ ಮೊಸರು ಚಟ್ನಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

  • ಟೊಮೆಟೋ ಚಟ್ನಿ ಮಾಡುವಾಗ ಹಾವನ್ನೂ ಸೇರಿಸಿ ರುಬ್ಬಿದ ಮಹಿಳೆ – ತಿನ್ನುವಾಗ ಬಾಲ ನೋಡಿ ಹೌಹಾರಿದ ಮಗ

    ಟೊಮೆಟೋ ಚಟ್ನಿ ಮಾಡುವಾಗ ಹಾವನ್ನೂ ಸೇರಿಸಿ ರುಬ್ಬಿದ ಮಹಿಳೆ – ತಿನ್ನುವಾಗ ಬಾಲ ನೋಡಿ ಹೌಹಾರಿದ ಮಗ

    ಮೆಹಬೂಬ್‍ನಗರ್: ಟೊಮೆಟೋ ಚಟ್ನಿ ಮಾಡುವ ವೇಳೆ ಮಹಿಳೆಯೊಬ್ಬರು ಹಾವನ್ನೂ ಸೇರಿಸಿ ರುಬ್ಬಿದ ಘಟನೆ ತೆಲಂಗಾಣದ ವಾನಪರ್ತಿಯಲ್ಲಿ ನಡೆದಿದೆ.

    ಹೌದು. ನಂಬಲು ವಿಚಿತ್ರವಾದ್ರೂ ಇದು ಸತ್ಯ. ಇಲ್ಲಿನ ಖಿಲ್ಲಾ ಘಾನ್‍ಪುರ್ ನಿವಾಸಿಯಾದ ಗೊಲ್ಲ ರಾಜಮ್ಮ ಎಂಬವರು ಟೊಮೆಟೋ ಚಟ್ನಿ ಮಾಡಲು ಸಿದ್ಧತೆ ಮಾಡಿಕೊಂಡಿದ್ರು. ಟೊಮೆಟೋವನ್ನ ಬೇಯಿಸಿ ಇತರೆ ಸಾಮಗ್ರಿಗಳನ್ನ ತೆಗೆದುಕೊಂಡು ಒರಳುಕಲ್ಲಿನ ಬಳಿ ರುಬ್ಬಲು ಅಣಿ ಮಾಡಿಕೊಂಡ್ರು. ಆದ್ರೆ ಒಳರುಕಲ್ಲಿನ ಒಳಗೆ ಹಾವು ಇದ್ದಿದ್ದನ್ನು ಗಮನಿಸದೆ ಚಟ್ನಿಗೆ ತಯಾರಿಸಿಕೊಂಡಿದ್ದ ಸಾಮಗ್ರಿಗಳನ್ನ ಹಾಕಿ ಹಾವನ್ನೂ ಸೇರಿಸಿ ರುಬ್ಬಿದ್ದಾರೆ.

    ಇದನ್ನೂ ಓದಿ: ದೇಶದಲ್ಲಿ ಪತ್ತೆಯಾಯ್ತು ಕಾಲು & ಉಗುರುಳ್ಳ ಹಾವು- ವಿಡಿಯೋ ನೋಡಿ

    ಮೊದಲಿಗೆ ರಾಜಮ್ಮ, ಅವರ ಚಿಕ್ಕ ಮಗ ಮತ್ತು ಅವರ ಮಗಳು ಕೃಷ್ಣವೇಣಿ ಬೆಳಗ್ಗಿನ ತಿಂಡಿಗೆ ಚಟ್ನಿಯನ್ನ ಸೇವಿಸಿದ್ದಾರೆ. ನಂತರ ಜಮೀನಿನಲ್ಲಿದ್ದ ದೊಡ್ಡ ಮಗ ಸಾಯಿಗೆ ಊಟ ತೆಗೆದುಕೊಂಡು ಹೋಗಿದ್ದಾರೆ. ಊಟ ಮಾಡುವಾಗ ಸಾಯಿ ಹಾವಿನ ಬಾಲವನ್ನು ನೋಡಿ ಹೌಹಾರಿದ್ದಾರೆ. ನಂತರ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹಾವಿನ ಚಿಕ್ಕ ಚಿಕ್ಕ ಪೀಸ್‍ಗಳು ಇದ್ದಿದ್ದನ್ನು ನೋಡಿದ್ದಾರೆ.

    ಇದನ್ನೂ ಓದಿ:  ಬಾಯಲ್ಲಿ ಇಲಿ ಹಿಡಿದು ಎಸಿಯಿಂದ ಕೆಳಗೆ ನೇತಾಡ್ತಿತ್ತು ಹಾವು- ವಿಡಿಯೋ ವೈರಲ್

    ನಂತರ ಅಯ್ಯೋ ನಾವು ಚಟ್ನಿ ಜೊತೆ ಹಾವು ತಿಂದಿದ್ದೇವೆ ಎಂದು ತಿಳಿದು ಎದ್ನೋ ಬಿದ್ನೋ ಅಂತ ಆಸ್ಪತ್ರೆಗೆ ಓಡಿದ್ದಾರೆ. ವೈದ್ಯರು ಇವರನ್ನ ತಪಾಸಣೆ ಮಾಡಿದ್ದು, ಯಾವುದೇ ತೊಂದರೆಯಿಲ್ಲ ಅಂತ ತಿಳಿಸಿದ್ದಾರೆ. ಇನ್ಮುಂದೆ ಚಟ್ನಿ ಮಾಡುವಾಗ ಒಂದಲ್ಲ ಹತ್ತು ಬಾರಿ ಒರಳುಕಲ್ಲನ್ನ ನೋಡಿ, ಸ್ವಚ್ಛ ಮಾಡಿ, ರುಬ್ಬಬೇಕು ಅನ್ನೋದು ಆ ಮಹಿಳೆಗೆ ಈಗ ಅರ್ಥವಾಗಿರಬಹುದು.

    https://www.youtube.com/watch?v=23e5Ur5e-qs

    https://www.youtube.com/watch?v=lgah6v0kuQg

    https://www.youtube.com/watch?v=k0FYf5MPdOU

    ಇದನ್ನೂ ಓದಿ:ತಲೆದಿಂಬಿನ ಕವರ್‍ನಲ್ಲೇ ದೈತ್ಯ ಹಾವು ಹಿಡಿದ ಮಹಿಳೆ!- ಮೈ ಜುಮ್ಮೆನಿಸೋ ವೈರಲ್ ವಿಡಿಯೋ ನೋಡಿ