Tag: ಚಕ್ರವರ್ತಿ ಸೂಲಿಬೆಲೆ

  • ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್‌ ದಾಖಲು

    ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್‌ ದಾಖಲು

    ಶಿವಮೊಗ್ಗ: ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarty Sulibele) ವಿರುದ್ಧ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಎಫ್‌ಐಆರ್‌ (FIR) ದಾಖಲಾಗಿದೆ.

    ಎನ್‌ಎಸ್‌ಯುಐ (NSUI) ಕಾರ್ಯಕರ್ತರು ನೀಡಿದ ದೂರಿನ ಆಧಾರದಲ್ಲಿ ಸಿಆರ್‌ಪಿಸಿ ಕಲಂ 157 ಅಡಿ ಎಫ್‌ಐಆರ್‌ ದಾಖಲಾಗಿದೆ. ಎಸ್‌ಎಸ್‌ಎಲ್‌ಸಿ (SSLC) ಪೂರ್ವ ಸಿದ್ದತಾ ಪರೀಕ್ಷೆ ವೇಳಾಪಟ್ಟಿ ವಿಷಯದಲ್ಲಿ ಧಾರ್ಮಿಕ ಭಾವನೆ ಕೆರಳಿಸಿರುವ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಇದನ್ನೂ ಓದಿ: ಸೂಲಿಬೆಲೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಅಡ್ಡಿ – ವಿರೋಧದ ನಡ್ವೆ ಯಶಸ್ವಿಯಾದ ನಮೋ ಭಾರತ್‌

    ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದೆ. ಫೆ.26 ರಿಂದ ಆರಂಭವಾಗುವ ಪರೀಕ್ಷೆ ಮಾರ್ಚ್‌ 2 ರವರೆಗೆ ನಡೆಯಲಿದೆ.

    ಐದು ವಿಷಯಗಳು ಬೆಳಗ್ಗೆ 10:15ಕ್ಕೆ ಆರಂಭವಾದರೆ ಮಾರ್ಚ್‌ 1ರ ವಿಜ್ಞಾನ ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಮಾರ್ಚ್‌ 1 ಶುಕ್ರವಾರ ಒಂದೇ ದಿನ ಮಧ್ಯಾಹ್ನದ ನಂತರ ಪರೀಕ್ಷೆ ನಡೆಸುತ್ತಿರುವುದು ಯಾಕೆ ಎನ್ನುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿತ್ತು.

    ಸೂಲಿಬೆಲೆ ಹೇಳಿದ್ದೇನು?
    ​ಕರ್ನಾಟಕ ರಾಜ್ಯ 10ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಶುಕ್ರವಾರ ಹೊರತು ಪಡಿಸಿ ಎಲ್ಲಾ ಪರೀಕ್ಷೆಗಳು ಬೆಳಗಿನ ಅವಧಿಯಲ್ಲಿ ನಡೆಯಲಿದೆ. ಯಾಕೆ ನಮಾಜ್‌ ಸಮಯಕ್ಕಾ ಎಂದು ಸಾಮಾಜಿಕ ಜಾಲತಾಣದಲ್ಲಿ ಸೂಲಿಬೆಲೆ ಪ್ರಶ್ನಿಸಿದ್ದರು.

  • ಸೂಲಿಬೆಲೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಅಡ್ಡಿ – ವಿರೋಧದ ನಡ್ವೆ ಯಶಸ್ವಿಯಾದ ನಮೋ ಭಾರತ್‌

    ಸೂಲಿಬೆಲೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಅಡ್ಡಿ – ವಿರೋಧದ ನಡ್ವೆ ಯಶಸ್ವಿಯಾದ ನಮೋ ಭಾರತ್‌

    ಚಿಕ್ಕಮಗಳೂರು: ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆಯ ನಮೋ ಭಾರತ್ ಕಾರ್ಯಕ್ರಮಕ್ಕೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು ಗಲಾಟೆ ಮಧ್ಯೆಯೇ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಗಿದೆ.

    ನಗರದ ವಿಜಯಪುರದಲ್ಲಿ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರ ನಮೋ ಭಾರತ್‌ (Namo Bharat) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಯುಪಿಎ 10 ವರ್ಷಗಳಲ್ಲಿ ಆರ್ಥಿಕತೆಯನ್ನು ನಿಷ್ಕ್ರಿಯಗೊಳಿಸಿತ್ತು: ಶ್ವೇತಪತ್ರ ಹೊರಡಿಸಿದ ಮೋದಿ ಸರ್ಕಾರ

    ಚಕ್ರವರ್ತಿ ಸೂಲಿಬೆಲೆ ಬರುವ ಮಾರ್ಗದಲ್ಲೇ 17 ಯೂತ್ ಕಾಂಗ್ರೆಸ್ (Youth Congress) ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರೆ, ಇನ್ನೊಂದು ತಂಡ ರಸ್ತೆ ಮಧ್ಯೆ ಅರೆ ಬೆತ್ತಲೆಯಾಗಿಯಾಗಿ ಪ್ರತಿಭಟಿಸಿತು. ಮತ್ತೊಂದು ತಂಡ ಕಾರ್ಯಕ್ರಮದ ವೇದಿಕೆಯ ಹಿಂಭಾಗ ಚಕ್ರವರ್ತಿ ಸೂಲಿಬೆಲೆ ಭಾಷಣದ ಮೇಲೆ ಮಹಡಿ ಮೇಲಿನಿಂದ ಕಪ್ಪು ಬಾವುಟದಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅವಹೇಳನಕಾರಿಯಾಗಿ ಬರೆದು  ಜೋತುಬಿಟ್ಟರು.  ಇದನ್ನೂ ಓದಿ: ಮತ್ತೆ ಮೋದಿ ಸರ್ಕಾರ; ಎನ್‌ಡಿಎಗೆ 335, ಇಂಡಿಯಾ ಮೈತ್ರಿಕೂಟಕ್ಕೆ 166

    ಕ್ಷಣಾರ್ಧದಲ್ಲಿ ನೋಡ ನೋಡುತ್ತಿದ್ದಂತೆ ವೇದಿಕೆ ಹಿಂಭಾಗದಲ್ಲಿ ಉದ್ವಿಗ್ನದ ಪರಿಸ್ಥಿತಿ ನಿರ್ಮಾಣವಾಯ್ತು. ಕಾಂಗ್ರೆಸ್ ಕಾರ್ಯಕರ್ತರು ಬಾವುಟವನ್ನು ಜೋತು ಬಿಡುತ್ತಿದ್ದಂತೆ 200ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಮಹಡಿ ಮೇಲೆ ಹತ್ತಲು, ಕಾಂಗ್ರೆಸ್ ಕಾರ್ಯಕರ್ತರಿಗೆ ಧರ್ಮದೇಟು ನೀಡಲು ಯತ್ನಿಸಿದರು. ಆದರೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

    ಮಾಜಿ ಶಾಸಕ ಸಿಟಿ ರವಿ (CT Ravi) ಕೂಡ ವೇದಿಕೆ ಮುಂಭಾಗದಿಂದ ಬಂದು ಬಾವುಟ ಪ್ರದರ್ಶಿಸಿದವರ ವಿರುದ್ಧ ಅಸಮಾಧಾನ ಹೊರ ಹಾಕಿದರು. ಸುಮಾರು ಅರ್ಧ ಗಂಟೆಗಳ ಕಾಲ ಸ್ಥಳದಲ್ಲಿ ಉದ್ವಿಗ್ನತೆಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಸರ್ಪಗಾವಲಿನಲ್ಲಿ ಬಾವುಟ ಪ್ರದರ್ಶಿಸಿದ ಮೂವರು ಯುವಕರನ್ನು ಕರೆದೊಯ್ದರು.

    ಕಾರ್ಯಕ್ರಮದ ಬಳಿಕ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ನನಗೆ ಇದೇನೋ ಹೊಸದಲ್ಲ. ಕಾಂಗ್ರೆಸ್ಸಿಗರ ಆರೋಪಕ್ಕೆ ನಾನು ಉತ್ತರ ನೀಡಿದ್ದೇನೆ. ನನ್ನ ಉತ್ತರ ಕಾಂಗ್ರೆಸ್‌ಗಳಿಗೆ ಭಯ ತರಿಸಿದೆ. ಕಾಂಗ್ರೆಸ್ಸಿಗರು ಹೆಚ್ಚು ಆರೋಪ ಮಾಡಿದಷ್ಟು ನಮಗೆ ಲಾಭ. ಪ್ರಿಯಾಂಕ್‌ ಖರ್ಗೆ ಹಾಗೂ ಮಧು ಬಂಗಾರಪ್ಪ ಈ ರೀತಿಯ ಮಾತುಗಳನ್ನು ಆಡಿದ್ದಾರೆ. ಅವರ ಹೇಳಿಕೆಗಳು ನನಗೆ ಖುಷಿ ಕೊಡುತ್ತೆ.‌ ನಾಳೆಯಿಂದ ಇಡೀ ರಾಜ್ಯದ ಪ್ರವಾಸ ಮಾಡುತ್ತೇನೆ ಎಂದು ಹೇಳಿದರು.

     

  • ಖರ್ಗೆ ವಿರುದ್ಧ ಅವಹೇಳನ; ಚಕ್ರವರ್ತಿ ಸೂಲಿಬೆಲೆ ವಿರುದ್ಧದ ಪ್ರಕರಣಕ್ಕೆ ಕೋರ್ಟ್‌ ಮಧ್ಯಂತರ ತಡೆ

    ಖರ್ಗೆ ವಿರುದ್ಧ ಅವಹೇಳನ; ಚಕ್ರವರ್ತಿ ಸೂಲಿಬೆಲೆ ವಿರುದ್ಧದ ಪ್ರಕರಣಕ್ಕೆ ಕೋರ್ಟ್‌ ಮಧ್ಯಂತರ ತಡೆ

    – ತಡೆಯಾಜ್ಞೆ ಬೆನ್ನಲ್ಲೇ ‘ಅಯೋಗ್ಯ’ ಎಂದು ಪೋಸ್ಟ್‌ ಹಾಕಿದ ಸೂಲಿಬೆಲೆ

    ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿದ ಪ್ರಕರಣದಲ್ಲಿ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಕಲಬುರಗಿ ವಿಭಾಗೀಯ ಪೀಠ ಮಧ್ಯಂತರ ತಡೆ ನೀಡಿದೆ.

    ನ್ಯಾ.ರಾಜೇಂದ್ರ ಬಾದಾಮಿ ಅವರು ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದಾರೆ. ಬಲವಂತದ ಕ್ರಮವನ್ನು ಜರುಗಿಸಬಾರದು ಎಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಖರ್ಗೆ ವಿರುದ್ಧ ಅವಹೇಳನಕಾರಿ ಪದ ಬಳಕೆ – ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್

    ಮಲ್ಲಿಕಾರ್ಜುನ ಖರ್ಗೆ ಅವರು ದೂರು ನೀಡಿಲ್ಲ. ರಾಜಕೀಯ ವ್ಯಕ್ತಿ ದೂರು ನೀಡಿರುವುದು. ಜಾತಿನಿಂದನೆ ಮಾಡಿಲ್ಲ. ಜಾತಿನಿಂದನೆ ಹಾಕಲು ಸಾಧ್ಯವಿಲ್ಲ ಎಂದು ವಕೀಲ ಅರುಣ್ ಶಾಂ ವಾದ ಮಂಡಿಸಿದ್ದರು. ವಾದ ಆಲಿಸಿದ ಕೋರ್ಟ್‌ ಪ್ರಕರಣಕ್ಕೆ ತಡೆ ನೀಡಿದೆ.

    ‘ಅಯೋಗ್ಯ’ ಎಂದು ಸೂಲಿಬೆಲೆ ಪೋಸ್ಟ್‌
    ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ಚಕ್ರವರ್ತಿ ಸೂಲಿಬೆಲೆ ಅವರು, ‘ಅಯೋಗ್ಯ’ ಎಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ. ಇದನ್ನೂ ಓದಿ: ರಾಮ ಮಂದಿರ ಕಟ್ಟಿದ್ದಕ್ಕೆ ಸೇಡು, ಮುಸ್ಲಿಮರ ಓಲೈಕೆಗಾಗಿ ಕರಸೇವಕರ ಬಂಧನ: ಸೂಲಿಬೆಲೆ ಕಿಡಿ

  • ಖರ್ಗೆ ವಿರುದ್ಧ ಅವಹೇಳನಕಾರಿ ಪದ ಬಳಕೆ – ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್

    ಖರ್ಗೆ ವಿರುದ್ಧ ಅವಹೇಳನಕಾರಿ ಪದ ಬಳಕೆ – ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್

    ಬೆಂಗಳೂರು: ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ(Chakravarti Sulibele) ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ರಾಯಚೂರು  ಪೊಲೀಸರು (Raichur Police)  ಎಫ್‌ಐಆರ್ ದಾಖಲಿಸಿದ್ದಾರೆ.

    ಮಲ್ಲಿಕಾರ್ಜುನ ಖರ್ಗೆ (Priyank Kharge) ವಿರುದ್ಧ ಚಕ್ರವರ್ತಿ ಸೂಲಿಬೆಲೆ, ಅಯೋಗ್ಯ ಪದವನ್ನು ಬಳಕೆ ಮಾಡಿದ್ದರು. ಇದೇ ಪ್ರಕರಣದಲ್ಲಿ ರಾಯಚೂರು ಪೊಲೀಸರು ಅವರ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಇಂದು ಸಂಜೆ 5 ಕ್ಕೆ ಬಿಹಾರ ಸಿಎಂ ಆಗಿ ನಿತೀಶ್‌ ಕುಮಾರ್‌ ಪ್ರಮಾಣ ವಚನ – BJPಯ ಇಬ್ಬರು ಡಿಸಿಎಂ

    ಕಳೆದ ನಾಲ್ಕು ದಿನಗಳ ಹಿಂದೆ ರಾಯಚೂರಿನ ಪೊಲೀಸರು ಸೂಲಿಬೆಲೆ ಅವರಿಗೆ ನೋಟಿಸ್ ನೀಡಲೆಂದು ಬೆಂಗಳೂರಿಗೆ ಬಂದಿದ್ದರು. ಬಸವೇಶ್ವರ ನಗರದಲ್ಲಿರುವ ಅವರ ನಿವಾಸಕ್ಕೆ ತೆರಳಿ ನೋಟಿಸ್ ನೀಡಬೇಕೆಂದು ಬಂದಿದ್ದರು. ಆದರೆ ಈ ಸಮಯದಲ್ಲಿ ಅವರು ಮನೆಯಲ್ಲಿ ಇರಲಿಲ್ಲ. ರಾಮಮಂದಿರ ಉದ್ಘಾನೆಯ ಹಿನ್ನಲೆ ಅವರು ಅಯೋಧ್ಯೆಗೆ ಹೋಗಿದ್ದರು. ಚಕ್ರವರ್ತಿ ಅಯೋಧ್ಯೆಯಲ್ಲಿ ಇದ್ದಿದ್ದರಿಂದ ಅವರ ಮನೆಗೆ ನೋಟಿಸ್ ನೀಡಿ ಪೊಲೀಸರು ರಾಯಚೂರಿಗೆ ವಾಪಸ್ ಆಗಿದ್ದರು. ಇದೀಗ ಅವರ ವಿರುದ್ಧ ರಾಯಚೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರ ಧ್ವಜ ಹಾರಿಸೋ ಬದಲು ಹನುಮ ಧ್ವಜ ಹಾರಿಸಿದ್ದು ಸರಿಯಲ್ಲ – ಸಿದ್ದರಾಮಯ್ಯ

    ಚಕ್ರವರ್ತಿ ಸೂಲಿಬೆಲೆ ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಲು ಮುಂದಾಗಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ವಿಜಯೇಂದ್ರ

  • ಗಾಂಧಿ ಕೊಂದ ವಿಚಾರ ಬಿಟ್ಟರೆ ಗೋಡ್ಸೆಯ ಹಿಂದುತ್ವದ ಆಲೋಚನೆಯನ್ನು ಸಂಭ್ರಮಿಸಬಹುದು: ಸೂಲಿಬೆಲೆ

    ಗಾಂಧಿ ಕೊಂದ ವಿಚಾರ ಬಿಟ್ಟರೆ ಗೋಡ್ಸೆಯ ಹಿಂದುತ್ವದ ಆಲೋಚನೆಯನ್ನು ಸಂಭ್ರಮಿಸಬಹುದು: ಸೂಲಿಬೆಲೆ

    ಹುಬ್ಬಳ್ಳಿ:ಗೋಡ್ಸೆಯ ಹಿಂದೂ ಧರ್ಮದ ಬಗೆಗಿನ ಆಲೋಚನೆಗಳನ್ನು ಸಂಭ್ರಮಿಸಬಹುದು ಎಂದು ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarty Sulibele) ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು ಔರಂಗಜೇಬನ ಅಖಂಡ ಭಾರತ ಹಾಗೂ ಟಿಪ್ಪು ಸುಲ್ತಾನ್ ಖಡ್ಗ ಹಿಡಿದು ಸಂಭ್ರಮಿಸುವವರನ್ನು ಸರ್ಕಾರ ಓಲೈಸುವುದು ಅತ್ಯಂತ ನೀಚ ಕೃತ್ಯ. ಗೋಡ್ಸೆ ಗಾಂಧಿ ಕೊಂದ ವಿಚಾರ ಬಿಟ್ಟರೆ ಎಲ್ಲಾ ವಿಚಾರಗಳನ್ನು ಸಂಭ್ರಮಿಸಬಹುದು ಎಂದಿದ್ದಾರೆ. ಇದನ್ನೂ ಓದಿ: ಯುಜಿಆಯುಷ್-2023: ಕೊನೆ ಸುತ್ತಿನ ಸೀಟು ಹಂಚಿಕೆ ಅ.13ಕ್ಕೆ ದಾಖಲೆ ಪರಿಶೀಲನೆ

    ಪ್ಯಾಲೆಸ್ಟೈನ್ ಮಾಡಿದ ಹೇಯ ಕೃತ್ಯ ಜಗತ್ತಿಗೆ ತಿಳಿದಿದೆ. ಇದು ಮನುಷ್ಯರು ಮಾಡುವ ಕೃತ್ಯ ಅಲ್ಲ, ರಾಕ್ಷಸರು ಮಾಡುವ ಕೃತ್ಯವಾಗಿದೆ. ಇದಕ್ಕೆ ಕಾಂಗ್ರೆಸ್ (Congress) ಬೆಂಬಲ ನೀಡುತ್ತಿದೆ. ಇದು ಭಾರತದ ಇತಿಹಾಸದ ಪಾಲಿಗೆ ಕಪ್ಪು ಚುಕ್ಕಿಯಾಗಿದೆ. ಗಲಭೆಕೋರರು ಕಾಂಗ್ರೆಸ್ ಬ್ರದರ್ಸ್ ಎನ್ನುವುದು ಅವರ ನೀತಿ. ಅದು ಮಹಿಷ ಆಗಿರಲಿ ಇಲ್ಲವೇ ಹಮಾಸ್ ಉಗ್ರರಾಗಿರಲಿ ಅವರ ಪರ ನಿಲ್ಲುತ್ತದೆ. ಕಾಂಗ್ರೆಸ್‍ಗೆ ಅವಕಾಶ ಸಿಕ್ಕರೆ ಹಮಾಸ್ ಪರವಾಗಿ ಜಯಂತಿ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಪುನೀತ್ ಕೆರಹಳ್ಳಿ ಮೇಲೆ ಆತ್ಮಹತ್ಯೆ ಯತ್ನ ಕೇಸ್ ದಾಖಲು ವಿಚಾರವಾಗಿ, ಯಾವ ಕಾಂಗ್ರೆಸ್ ಗಾಂಧಿ ಪರಿವಾರದಿಂದ ಆಡಳಿತ ನಡೆಸುತ್ತಿದೆಯೋ ಅದೇ ಕಾಂಗ್ರೆಸ್ ಇಂದು ಕೇಸ್ ಹಾಕಿದೆ. ಬ್ರಿಟಿಷರ ವಿರುದ್ಧ ಎಷ್ಟು ಬಾರಿ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ ಅಷ್ಟು ಬಾರಿ ಕೇಸ್ ಹಾಕಬೇಕಿತ್ತು ಎಂದು ಅವರು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ರಾಜ್ಯದ ರೈತರಿಗೆ ಆತ್ಮಹತ್ಯೆ ಗ್ಯಾರಂಟಿ: ಬಿ.ಸಿ.ಪಾಟೀಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿದ್ದರಾಮಯ್ಯ ಸರ್ಕಾರ ಬಂದ್ಮೇಲೆ ಮುಸ್ಲಿಮರು ಚಿಗುರಿಕೊಂಡಿದ್ದಾರೆ: ಚಕ್ರವರ್ತಿ ಸೂಲಿಬೆಲೆ

    ಸಿದ್ದರಾಮಯ್ಯ ಸರ್ಕಾರ ಬಂದ್ಮೇಲೆ ಮುಸ್ಲಿಮರು ಚಿಗುರಿಕೊಂಡಿದ್ದಾರೆ: ಚಕ್ರವರ್ತಿ ಸೂಲಿಬೆಲೆ

    ಯಾದಗಿರಿ: ಸಿದ್ದರಾಮಯ್ಯನವರ (Siddaramaiah) ಸರ್ಕಾರದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿರಲ್ಲಿಲ್ಲ. ಸಿದ್ದರಾಮಯ್ಯರ ಸರ್ಕಾರ ಬಂದ್ಮೇಲೆ ಮುಸ್ಲಿಮರು ಚಿಗುರಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ವಾಗ್ದಾಳಿ ನಡೆಸಿದ್ರು.

    ಬೈಕ್ ರ‍್ಯಾಲಿ ಮೂಲಕ ನಮೋ ಬ್ರಿಗೇಡ್ 2.0 (Namo Brigade 2.o ಯಾದಗಿರಿಗೆ ಆಗಮಿಸಿದ್ದ ವೇಳೆ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಮತ್ತೊಮ್ಮೆ ಈ ದೇಶಕ್ಕೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಅಂತಾ ಹೇಳಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ಹಿಂದಿನ ಆಡಳಿತ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ ನಾವು ನೋಡಿದ್ದೇವೆ. ಹಿಂದೂ ಕಾರ್ಯಕರ್ತರ ಹತ್ಯೆ ಅಷ್ಟೇ ಅಲ್ಲ. ದನಗಳ ಕಳ್ಳ ಸಾಗಾಣಿಕೆ ಮಾಡುವಾಗ ಸಿಕ್ಕಾಕೊಂಡು ಮೃತಪಟ್ಟವರಿಗೆ ಹತ್ತತ್ತು ಲಕ್ಷ ಪರಿಹಾರ ಕೊಟ್ಟಿದ್ದೂ ನೆನಪಿದೆ ಎಂದು ಹೇಳಿದರು. ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್‌ನ್ಯೂಸ್- ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

    ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಅನೇಕ ಕಡೆಗಳಲ್ಲಿ ಧಂಗೆಯ ರೂಪದ ವ್ಯವಸ್ಥೆ ಮಾಡಲಿಕ್ಕೆ ಹೊರಟ್ಟಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಸರ್ಕಾರದ ಮೇಲೆ ಯಾವುದೇ ನಿರೀಕ್ಷೆ ಇಲ್ಲ ಎಂದ ಚಕ್ರವರ್ತಿ ಸೂಲಿಬೆಲೆ ಅವರು ಶಿವಮೊಗ್ಗ ಕಲ್ಲೂ ತೂರಾಟ ಪ್ರಕರಣಕ್ಕೂ ಕಿಡಿ ಕಾರಿದ್ರು. ಸಿದ್ದರಾಮಯ್ಯನವರು ಮುಸ್ಲಿಮರ ಓಲೈಕೆ, ತುಷ್ಠಿಕರಣದಲ್ಲಿ ತೊಡಗಿದ್ದಾರೆ. ಅಲ್ಲಾನ ಕೃಪೆಯಿಂದ ಈ ಸರ್ಕಾರ ಬಂದಿದೆ ಅಂತ ಗೃಹ ಸಚಿವರೇ ಹೇಳಿದ್ದಾರೆ. ಹಾಗಾಗಿ ಅವರಿಂದ ಈ ಕೃತ್ಯ ಆಗಿರೋದ್ರಿಂದ ಅವರಿಗೆ ಪೂರಕವಾದ ಸರ್ಕಾರ ನಡೆಸುತ್ತಿದ್ದಾರೆ. ಇದು ಹಿಂದೂಗಳಿಗೆ ಮಾಡಿದ ದ್ರೋಹವಾಗಿದೆ. ಸಿದ್ದರಾಮಯ್ಯ, ಸರ್ಕಾರ ಹಿಂದೂಗಳಿಗೆ ಏನ್ ದ್ರೋಹ ಮಾಡ್ತಿದೆಯೋ ಅದಕ್ಕೆ ಸರಿಯಾದ ಶಾಸ್ತಿ ಅನುಭವಿಸುತ್ತೆ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಸ್ಲಿಮರು ಹಿಂದೂ ಸಮಾಜವನ್ನ ಹೇಡಿ ಸಮಾಜ ಎಂದು ತೋರಿಸುವ ಪ್ರಯತ್ನ ಮಾಡ್ತಿದ್ದಾರೆ: ಚಕ್ರವರ್ತಿ ಸೂಲಿಬೆಲೆ

    ಮುಸ್ಲಿಮರು ಹಿಂದೂ ಸಮಾಜವನ್ನ ಹೇಡಿ ಸಮಾಜ ಎಂದು ತೋರಿಸುವ ಪ್ರಯತ್ನ ಮಾಡ್ತಿದ್ದಾರೆ: ಚಕ್ರವರ್ತಿ ಸೂಲಿಬೆಲೆ

    ಕಾರವಾರ: ರಾಜ್ಯ ಕಾಂಗ್ರೆಸ್‌ ಸರ್ಕಾರವೇ (Congress Government) ಶಿವಮೊಗ್ಗ ಗಲಭೆಗೆ ಮುಖ್ಯಕಾರಣ. ಈ ಸರ್ಕಾರ ಇರುವ ವರೆಗೆ ಏನು ಮಾಡಬೇಕೋ ಅದನ್ನು ಮಾಡಿ ಹೋಗಬೇಕು ಎಂದು ಮುಸ್ಲಿಮರು ತೀರ್ಮಾನಿಸಿದ್ದಾರೆ. ಹಿಂದೂ ಸಮಾಜವನ್ನು ಹೇಡಿ ಸಮಾಜವೆಂದು ತೋರಿಸುವ ಪ್ರಯತ್ನ ಅವರು ಮಾಡುತ್ತಿದ್ದಾರೆ. ಸಾಮೂಹಿಕ ದಂಗೆಗೆ ಪ್ರಚೋದನೆ ಕೊಡುತ್ತಿದ್ದಾರೆ ಎಂದು ಹಿಂದೂಪರ ಹೋರಾಟಗಾರ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಕಿಡಿಕಾರಿದ್ದಾರೆ.

    ಕಾರವಾರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂತ್ರಿಗಳು, ರಾಜ್ಯ ಸರ್ಕಾರದ ಪ್ರತಿನಿಧಿಗಳು ಮುಸ್ಲಿಮರಿಗೆ (Muslims) ತಾನು ಹತ್ತಿರ ಎಂದು ತೋರಿಸಿಕೊಳ್ಳುವ ಪ್ರಯತ್ನದ ಪ್ರತಿಫಲವಾಗಿ ಊರೂರಿನಲ್ಲೂ ದಂಗೆಯ ವಾತಾವರಣ ಸೃಷ್ಟಿಯಾಗಿದೆ. ಗಲಭೆಗೆ ಸರ್ಕಾರದ ಬೆಂಬಲವಿದೆ. ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೋ ಅಲ್ಲಲ್ಲಿ ಮುಸ್ಲಿಮರು ಸ್ಕಾಟ್ ಫ್ರೀ ಯಾಗಿ ತಿರುಗುತಿದ್ದಾರೆ. ಅವರಿಗೆ ಸರ್ಕಾರ ಏನೂ ಮಾಡುವುದಿಲ್ಲ ಎಂಬ ಧೈರ್ಯವಿದೆ. ಕರ್ನಾಟಕದಲ್ಲಿ ಮುಂಬರುವ ದಿನಗಳು ಭಯಾನಕವಾಗಿರಲಿದೆ ಎಂದು ತೋರಿಸಿಕೊಡುತ್ತಿದ್ದಾರೆ. ಎಚ್ಚರಿಕೆಯ ವಾತಾವರಣ ರೂಪಿಸುತಿದ್ದಾರೆ, ನೀವು ಎಚ್ಚರಿಕೆಯಿಂದಿರಿ ಕರ್ನಾಟಕಕ್ಕೆ ಬೆಂಕಿ ಹಚ್ಚುತ್ತೇವೆ ಎಂಬ ಹೇಳಿಕೆ ಕೊಡಲು ಸಿದ್ದರಾಮಯ್ಯ (Siddaramaiah) ಅವರೇ ಕಾರಣ ಆಗುವುದನ್ನು ಮುಂದಿನ ದಿನಗಳಲ್ಲಿ ನೋಡುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ರಾಜ್ಯದಲ್ಲೇ ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡವಾಗಿದೆ. ಮಂಗಳೂರಿನಲ್ಲಿ ಏನು ಮಾಡಲಾಗಿಲ್ಲವೋ ಅದೆಲ್ಲವನ್ನು ಶಿವಮೊ‌ಗ್ಗಕ್ಕೆ ಸ್ಥಳಾಂತರ ಮಾಡಿದ್ದಾರೆ. ಶಿವಮೊಗ್ಗ ಅವರ ಬ್ರೀಡಿಂಗ್ ಸೆಂಟರ್ ಆಗುತ್ತಿದೆ. ನಾಳೆ ದಿನ ಐಸಿಸ್, ಎಲ್‌ಇಟಿಗೆ ಶಿವಮೊಗ್ಗ ದಿಂದ ರಿಕ್ರೂಪ್ಮೆಂಟ್ ಆಗಿ ಹೋದರೂ ಆಶ್ಚರ್ಯವಿಲ್ಲ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಅ. 10ರೊಳಗೆ 40 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಿ- ಕೆನಡಾಗೆ ಭಾರತ ಗಡುವು

    ಶಿವಮೊಗ್ಗ ಕುದಿಯುತ್ತಿರುವ ಲಾವದಮೇಲೆ ಕುಳಿತಿದೆ: ರಾಜ್ಯ ಕಾಂಗ್ರೆಸ್‌ ಸರ್ಕಾರವೇ ಶಿವಮೊಗ್ಗ ಗಲಭೆಗೆ ಮುಖ್ಯಕಾರಣ. ಈ ಸರ್ಕಾರ ಇರುವ ವರೆಗೇ ಏನು ಮಾಡಬೇಕೋ ಅದನ್ನು ಮಾಡಿ ಹೋಗಬೇಕು ಎಂದು ಮುಸ್ಲಿಮರು ತೀರ್ಮಾನಿಸಿದ್ದಾರೆ. ಮುಸ್ಲಿಮರು ಹಿಂದೂ ಸಮಾಜವನ್ನು ಹೇಡಿ ಸಮಾಜವೆಂದು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಾಮೂಹಿಕ ದಂಗೆಗೆ ಪ್ರೇರೇಪಣೆ ಕೊಡುತಿದ್ದಾರೆ‌. ಹಿಂದೂಗಳನ್ನು ಯುದ್ಧಕ್ಕೆ ಬರುವಂತೆ ಪ್ರಚೋದನೆ ಮಾಡುತ್ತಿದ್ದಾರೆ. ಯಾವಾಗ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದರೂ ಆಗೆಲ್ಲಾ ಹಿಂದೂಗಳು ಬದುಕುವುದೇ ಕಷ್ಟವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಸಿದ್ದರಾಮಯ್ಯ ಮುಸ್ಲಿಮರಿಗೆ ನಾನಿದ್ದೇನೆ ಎಂದು ಅಭಯ ಕೊಟ್ಟಿದ್ದಾರೆ. ಎಲ್ಲಿಯವರೆಗೆ ನಾನಿದ್ದೇನೆ ಎಂದು ಹೇಳುತ್ತಾರೋ ಅಲ್ಲಿಯವರೆಗೂ ಈ ದಂಗೆಗಳು ನಿರಂತರವಾಗಿ ಇರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಹಾರ ಜಾತಿ ಸಮೀಕ್ಷೆ ವರದಿ ಬಿಡುಗಡೆ; ಜಾತಿ ಹೆಸರಲ್ಲಿ ದೇಶ ವಿಭಜಿಸುವ ಪ್ರಯತ್ನವೆಂದು ಮೋದಿ ವಾಗ್ದಾಳಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾವೇರಿ ಹೋರಾಟಕ್ಕೆ ಬೆಂಬಲ ನೀಡಲು ಬೈಕ್ ರ‍್ಯಾಲಿ – ಪ್ರತಿಭಟನೆಯಲ್ಲಿ ಭಾಗಿಯಾದ ಚಕ್ರವರ್ತಿ ಸೂಲಿಬೆಲೆ

    ಕಾವೇರಿ ಹೋರಾಟಕ್ಕೆ ಬೆಂಬಲ ನೀಡಲು ಬೈಕ್ ರ‍್ಯಾಲಿ – ಪ್ರತಿಭಟನೆಯಲ್ಲಿ ಭಾಗಿಯಾದ ಚಕ್ರವರ್ತಿ ಸೂಲಿಬೆಲೆ

    ರಾಮನಗರ: ನಮೋ ಯುವ ಬ್ರಿಗೇಡ್ 2.0 ಬೈಕ್ ರ‍್ಯಾಲಿ ಹಿನ್ನೆಲೆ ಇಂದು (ಶುಕ್ರವಾರ) ರಾಮನಗರಕ್ಕೆ ಬೈಕ್ ರ‍್ಯಾಲಿ (Bike Rally) ಮೂಲಕ ಆಗಮಿಸಿದ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಕರ್ನಾಟಕ ಬಂದ್‌ಗೆ (Karnataka Bandh) ಬೆಂಬಲ ವ್ಯಕ್ತಪಡಿಸಿದ್ದಾರೆ.

    ಚನ್ನಪಟ್ಟಣದಲ್ಲಿ ಕನ್ನಡಪರ ಸಂಘಟನೆಗಳ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾದ ಸೂಲಿಬೆಲೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಚನ್ನಪಟ್ಟಣದ ಗಾಂಧಿ ವೃತ್ತದಲ್ಲಿ ಕನ್ನಡಪರ ಹಾಗೂ ರೈತ ಸಂಘಟನೆಗಳ ಜೊತೆ ರಸ್ತೆಯಲ್ಲಿ ಕೂತು ಪ್ರತಿಭಟನೆಗೆ ಬೆಂಬಲ ನೀಡಿದರು.

    ಇದೇ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಾವೇರಿ ಹೋರಾಟಕ್ಕೆ ನಮೋ ಬ್ರಿಗೇಡ್ ಸಂಪೂರ್ಣ ಬೆಂಬಲ ನೀಡಿದೆ. ಇಂದು ಬೈಕ್ ರ‍್ಯಾಲಿ ಮೂಲಕ ಚನ್ನಪಟ್ಟಣ, ಮಂಡ್ಯ, ಚಾಮರಾಜನಗರದ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದೇನೆ. ಹೋರಾಟದಲ್ಲಿ ಭಾಗಿಯಾಗಿ ನೀರು ನಿಲ್ಲಿಸಬೇಕು ಎಂದು ಆಗ್ರಹ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿಯವರು ಕರ್ನಾಟಕವನ್ನ ಪಾಕಿಸ್ತಾನದಲ್ಲಿದೆ ಎಂದು ತಿಳಿದಿದ್ದಾರಾ: ಕಾಂಗ್ರೆಸ್‌ ಪ್ರಶ್ನೆ

    ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ದೃಢ ನಿಲುವು ಮಾಡಿಲ್ಲ. ಸಂಪೂರ್ಣವಾಗಿ ನೀರು ನಿಲ್ಲಿಸುವ ಕೆಲಸ ಮಾಡಿಲ್ಲ. ಸಿಎಂ, ಡಿಸಿಎಂ ಅವರ ಹೇಳಿಕೆ ಗಮನಿಸಿದ್ದೇನೆ. ಅವರ ವೈಯಕ್ತಿಕ ಹಿತಾಸಕ್ತಿಗೆ ರಾಜ್ಯದ ಜನರ ಹಿತಾಸಕ್ತಿ ಬಲಿಯಾಗುವ ಆತಂಕ ಇದೆ. ರಾಜ್ಯ ಸರ್ಕಾರ ನೀರು ಬಿಡಲ್ಲ ಎಂದಾಗ ತಮಿಳುನಾಡು ಸರ್ಕಾರ ನೀರು ಬೇಕು ಅಂತ ಹೋರಾಟ ಮಾಡಿದರೆ ಮಾತ್ರ ಕೇಂದ್ರ ಮಧ್ಯ ಪ್ರವೇಶ ಮಾಡಬಹುದು. ಆದರೆ ಅವರು ಕೇಳೋಕು ಮುಂಚೆಯೇ ನೀರು ಬಿಡುತ್ತಿದ್ದಾರೆ ಎಂದರು.

    ಇಂಡಿಯಾ ಒಕ್ಕೂಟವನ್ನು ಓಲೈಸಲು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಂದ್ ಬಿಸಿ – 60 ವಿಮಾನ ರದ್ದು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೋವಿಂದ ಬಾಬು ಪೂಜಾರಿಗೆ ಬೈದಿದ್ದೇನೆ: ಸೂಲಿಬೆಲೆ ಫಸ್ಟ್ ರಿಯಾಕ್ಷನ್

    ಗೋವಿಂದ ಬಾಬು ಪೂಜಾರಿಗೆ ಬೈದಿದ್ದೇನೆ: ಸೂಲಿಬೆಲೆ ಫಸ್ಟ್ ರಿಯಾಕ್ಷನ್

    ಬೆಂಗಳೂರು: ವಂಚಕಿ ಚೈತ್ರಾ ಕುಂದಾಪುರ (Chaitra Kundapura) ಹಾಗೂ ಗ್ಯಾಂಗ್ ಡೀಲ್‍ನಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆಯನ್ನು (Chakravarthy Sulibele) ಥಳಕು ಹಾಕುವ ಪ್ರಯತ್ನ ನಡೆಯುತ್ತಿರುವ ಬಗ್ಗೆ ಸೂಲಿಬೆಲೆ ಪಬ್ಲಿಕ್ ಟಿವಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ಉದ್ಯಮಿ ಗೋವಿಂದ ಬಾಬು ಪೂಜಾರಿ (Govinda Babu Poojary) ಮೂಲಕ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಎರಡು ಬಾರಿ ಕರೆ ಮಾಡಿದ್ರು. ಗೋವಿಂದ ಬಾಬು ಪೂಜಾರಿಯವರ ಜೊತೆ ಯಾಕೆ ಹೀಗೆ ದುಡ್ಡು ಕೊಟ್ರಿ ಅಂತಾ ಜಗಳವಾಡಿದ್ದೆ. ಹಾಲಾಶ್ರೀ ಸ್ವಾಮೀಜಿ ಜೊತೆ ಸೇರಿದಂತೆ ಅನೇಕ ಸ್ವಾಮೀಜಿಗಳ ಜೊತೆ ಸಂಪರ್ಕ ಇದೆ. ಹಾಗಂತ ಈ ಪ್ರಕರಣದಲ್ಲಿ ಥಳಕು ಹಾಕೋದು ಬೇಡ ಎಂದರು.

    ನನ್ನ ಹೆಸರನ್ನು ಥಳಕು ಹಾಕುವ ಪ್ರಯತ್ನ ನಡೆಯುತ್ತಿದೆ. ಆದರೆ ಇದನ್ನು ಗಂಭೀರವಾಗಿ ನಾನು ತೆಗೆದುಕೊಳ್ಳಲ್ಲ. ಗೋವಿಂದ ಬಾಬು ಪೂಜಾರಿ ನನ್ನ ಆತ್ಮೀಯರು ಎಂದರು. ಇದನ್ನೂ ಓದಿ: ಹೈದರಾಬಾದ್‍ನಲ್ಲಿ ಹಾಲಶ್ರೀ ಅಡಗಿರುವ ಶಂಕೆ – ಬಂಧನಕ್ಕೆ ತೆರಳಿದ ಸಿಸಿಬಿ ಟೀಂ

    ಸಿಟಿ ರವಿ ಕೂಡ ತುಂಬಾ ಸಲ ಹೇಳಿದ್ರು ಬಿಜೆಪಿಯಲ್ಲಿ ದುಡ್ಡು ಕೊಟ್ಟು ಟಿಕೇಟ್ ಪಡೆಯುವಂತಿಲ್ಲ. ನಾನು ಕೂಡ ಇದನ್ನೇ ಹೇಳಿದ್ದೇನೆ. ಗೋವಿಂದ ಬಾಬು ಪೂಜಾರಿಗೆ ಬೈದಿದ್ದೇನೆ ಎಂದು ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇದು ಪುಕ್ಕಲು ಸರ್ಕಾರ, ಬೆದರಿಕೆಗೆ ಜಗ್ಗುವುದಿಲ್ಲ: ಚಕ್ರವರ್ತಿ ಸೂಲಿಬೆಲೆ

    ಇದು ಪುಕ್ಕಲು ಸರ್ಕಾರ, ಬೆದರಿಕೆಗೆ ಜಗ್ಗುವುದಿಲ್ಲ: ಚಕ್ರವರ್ತಿ ಸೂಲಿಬೆಲೆ

    ಶಿವಮೊಗ್ಗ: ರಾಜ್ಯ ಸರ್ಕಾರ ಪುಕ್ಕಲು ಸರ್ಕಾರ. ಧೈರ್ಯವಾಗಿ ಇರುವಂತಹ ಧ್ವನಿಯನ್ನು, ಕೇಳಿರುವ ಪ್ರಶ್ನೆಯನ್ನು, ಕೇಳಿರುವ ಮಾತುಗಳನ್ನು ಎದುರಿಸಲು ಸಾಧ್ಯವಾಗದಿರುವ ಸರ್ಕಾರ ಎಂದು ಯುವ ಬ್ರಿಗೇಡ್ (Yuva Brigade) ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarthi Sulibele) ಕಾಂಗ್ರೆಸ್ (Congress) ವಿರುದ್ಧ ಗುಡುಗಿದ್ದಾರೆ.

    ಫೇಸ್‌ಬುಕ್‌ನಲ್ಲಿ (Facebook) ಮಹಿಳೆಗೆ ಅವಹೇಳನ ಮಾಡಿದ ಆರೋಪ ಸಂಬಂಧ ಪ್ರಕರಣ ದಾಖಲಾಗಿರುವ ಹಿನ್ನೆಲೆ ಚಕ್ರವರ್ತಿ ಸೂಲಿಬೆಲೆ ವಿನೋಬನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಈ ವೇಳೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಠಾಣೆ ಮುಂದೆ ಜಮಾಯಿಸಿ ಘೋಷಣೆ ಕೂಗಿದರು. ಇದನ್ನೂ ಓದಿ: ಸುಧಾರಿಸಿದ ಹೆಚ್‌ಡಿಕೆ ಆರೋಗ್ಯ – ಐಸಿಯುನಿಂದ ವಾರ್ಡ್‌ಗೆ ಶಿಫ್ಟ್

    ಈ ವೇಳೆ ಮಾಧ್ಯಮಗಳ ಜೊತೆ ಮಾತಾಡಿದ ಚಕ್ರವರ್ತಿ ಸೂಲಿಬೆಲೆ, ಇಂತಹ ಬೆದರಿಕೆಗಳಿಗೆ ಜಗ್ಗುವುದಿಲ್ಲ, ಬಗ್ಗುವುದೂ ಇಲ್ಲ. ಇದು ದೂರು ದಾಖಲಿಸಿಕೊಳ್ಳುವ ಸಂಗತಿಯೇ ಅಲ್ಲ. ಪ್ರಿಯಾಂಕ್ ಖರ್ಗೆ ಅವರು ಠಾಣೆ ಮೆಟ್ಟಿಲು ಹತ್ತಿಸುತ್ತೇನೆ ಎಂದಿದ್ದರು. ಸುಳ್ಳು ದೂರು ಕೊಡಿಸಿ ಠಾಣೆ ಮೆಟ್ಟಿಲು ಹತ್ತಿಸಿದ್ದಾರೆ. ದೂರಿಗೆ ನನ್ನ ಹೇಳಿಕೆಯನ್ನು ದಾಖಲಿಸಿದ್ದೇನೆ ಎಂದರು. ಇದನ್ನೂ ಓದಿ: ಸೆ.3 ರಂದು ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಮತ್ತೆ ಚಾಲನೆ: ಜಯಮೃತ್ಯುಂಜಯ ಸ್ವಾಮೀಜಿ

    ರಾಜ್ಯ ಸರ್ಕಾರ ಇದು ಪುಕ್ಕಲು ಸರ್ಕಾರ. ಧೈರ್ಯವಾಗಿ ಇರುವಂತಹ ಧ್ವನಿಯನ್ನು, ಕೇಳಿರುವ ಪ್ರಶ್ನೆಯನ್ನು, ಕೇಳಿರುವ ಮಾತುಗಳನ್ನು ಎದುರಿಸಲು ಸಾಧ್ಯವಾಗದಿರುವ ಪುಕ್ಕಲು ಸರ್ಕಾರ. ಈ ಮೂಲಕ ಹೋರಾಟಗಾರರನ್ನು ಬೆದರಿಸಲು ಸಾಧ್ಯವಿಲ್ಲ. ಸರ್ಕಾರ ಸಣ್ಣ ಪ್ರಕರಣವನ್ನು ಮುಂದಿಟ್ಟುಕೊಂಡು ದೊಡ್ಡ ಹೆಜ್ಜೆ ಇಟ್ಟಿದೆ. ಈ ಬಗ್ಗೆ ನನಗೆ ಬೇಸರ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ರೈಲಿಗೆ ಬೆಂಕಿ ಆಕಸ್ಮಿಕ ಅಲ್ಲ, ಮಾನವ ಕೃತ್ಯದ ಶಂಕೆ

    ಬುಧವಾರ ರಾತ್ರಿ ಶಾಸಕ ಎಸ್.ಎನ್.ಚನ್ನಬಸಪ್ಪ ಅವರೊಂದಿಗೆ ಚಕ್ರವರ್ತಿ ಸೂಲಿಬೆಲೆ ವಿನೋಬನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಕಾಂಗ್ರೆಸ್ ಕಾರ್ಯಕರ್ತೆ ಸೌಗಂಧಿಕ ದಾಖಲಿಸಿರುವ ದೂರಿನ ಸಂಬಂಧ ಹೇಳಿಕೆ ನೀಡಿದರು. ಠಾಣೆಗೆ ತೆರಳಿದ ಚಕ್ರವರ್ತಿ ಸೂಲಿಬೆಲೆ ಅವರೊಂದಿಗೆ ವಿವಿಧ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಗಮಿಸಿದ್ದರು. ಠಾಣೆ ಹೊರಗೆ ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರ, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುಳ್ಳು ದೂರು ದಾಖಲು ಮಾಡಿರುವುದಾಗಿ ಆರೋಪಿಸಿ ಘೋಷಣೆ ಕೂಗಿದರು. ಇದನ್ನೂ ಓದಿ: ಪ್ರವಾಸಿಗರೇ ಎಚ್ಚರ, ಕಾಫಿನಾಡ ನಾನ್ ವೆಜ್ ಹೋಟೆಲ್‍ನಲ್ಲಿ ಕುರಿ ಬದಲು ದನದ ಮಾಂಸದ ಬಿರಿಯಾನಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]