Tag: ಚಕ್ರವರ್ತಿ ಸೂಲಿಬೆಲೆ

  • ಬುರುಡೆ ಪಿಐಎಲ್ ವಜಾ| ಇದೊಂದು ಬೇಜವಾಬ್ದಾರಿ ಸರ್ಕಾರ, ವಕೀಲ ಧನಂಜಯ್ ಕ್ಷಮೆಗೆ ಆಗ್ರಹಿಸಿದ ಸೂಲಿಬೆಲೆ

    ಬುರುಡೆ ಪಿಐಎಲ್ ವಜಾ| ಇದೊಂದು ಬೇಜವಾಬ್ದಾರಿ ಸರ್ಕಾರ, ವಕೀಲ ಧನಂಜಯ್ ಕ್ಷಮೆಗೆ ಆಗ್ರಹಿಸಿದ ಸೂಲಿಬೆಲೆ

    – ಸುಪ್ರೀಂನಲ್ಲಿ ಬುರುಡೆ ಗ್ಯಾಂಗ್ ಪಿಐಎಲ್ ವಜಾ
    – ವಿಷಯ ತಿಳಿಯದೇ ಇದ್ದರೆ ಇದೊಂದು ಬೇಜವಾಬ್ದಾರಿ ಸರ್ಕಾರ

    ಬೆಂಗಳೂರು: ಬುರುಡೆ ಗ್ಯಾಂಗ್‌ನ ಮುಖವಾಡ ಮತ್ತೊಮ್ಮೆ ಬಯಲಾಗಿದೆ. ಸುಪ್ರೀಂಕೋರ್ಟ್‌ನಲ್ಲಿ (Supreme Court) ಛೀಮಾರಿ ಹಾಕಿಸಿಕೊಂಡಿದ್ದ ವಿಚಾರವನ್ನು ಮುಚ್ಚಿಟ್ಟು ಸರ್ಕಾರವನ್ನೇ ಯಾಮಾರಿಸಿದ್ದ ಬುರುಡೆ ಗ್ಯಾಂಗ್ ಹಾಗೂ ಸುಪ್ರೀಂಕೋರ್ಟ್‌ ವಕೀಲ ಧನಂಜಯ್ ಇಡೀ ಸಮಾಜದ ಮುಂದೆ ಕ್ಷಮೆ ಕೇಳಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಆಗ್ರಹಿಸಿದ್ದಾರೆ.

    ಈ ವಿಚಾರವಾಗಿ `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಅವರು, ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಬುರುಡೆ ಗ್ಯಾಂಗ್ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಹಾಕಿತ್ತು. ಅದನ್ನು ಕೋರ್ಟ್ ವಜಾಗೊಳಿಸಿತ್ತು. ಅಷ್ಟು ಮಾತ್ರವಲ್ಲದೇ, ಇದು ವೈಯಕ್ತಿಕ ಹಿತಾಸಕ್ತಿಯ ಅರ್ಜಿ ಎಂದು ಛೀಮಾರಿ ಹಾಕಿತ್ತು. ಈ ವಿಚಾರವನ್ನು ಮುಚ್ಚಿಟ್ಟು ಬುರುಡೆ ಗ್ಯಾಂಗ್ ಸರ್ಕಾರವನ್ನೇ ಯಾಮಾರಿಸಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಸಿಕ್ಕ ಅಸ್ಥಿಪಂಜರ ಗುಬ್ಬಿ ಮೂಲದ ವ್ಯಕ್ತಿಯದ್ದು!

    ಈ ಬುರುಡೆ ಗ್ಯಾಂಗ್ ಮೊದಲ ದಿನದಿಂದಲೇ ಸತ್ಯವನ್ನು ಮುಚ್ಚಿಕೊಂಡು ಸುಳ್ಳಿನ ಸರಮಾಲೆಯನ್ನೇ ಕಟ್ಟಿಕೊಂಡು ಬಂದಿದೆ. ಮಾಧ್ಯಮಗಳೆಲ್ಲವು ಈ ವಿಚಾರವನ್ನು ಪ್ರಸಾರ ಮಾಡದೇ ಇರುತ್ತಿದ್ದರೆ, ಬುರುಡೆ ಗ್ಯಾಂಗ್‌ನ ನಿಜಬಣ್ಣ ಬಯಲಾಗುತ್ತಿರಲಿಲ್ಲ. ಸುಪ್ರೀಂ ಕೋರ್ಟ್‌ಯೇ ಬುರುಡೆ ಗ್ಯಾಂಗ್ ಅನ್ನು ಪೈಸಾ ಇಂಟರೆಸ್ಟ್ ಲಿಟಿಗೇಷನ್ ಎಂದು ಛೀಮಾರಿ ಹಾಕಿದ್ರೂ, ಇವರು ಸುಳ್ಳು ಹೇಳಿಕೊಂಡು ಇಲ್ಲಿವರೆಗೆ ಬಂದಿದ್ದಾರೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ | ರಾಜ್ಯ ಸರ್ಕಾರವನ್ನೇ ಯಾಮಾರಿಸಿದ ʻಬುರುಡೆʼ ಗ್ಯಾಂಗ್ – ಸುಪ್ರೀಂ ಆದೇಶ ಮುಚ್ಚಿಟ್ಟು ಮಹಾ ಮೋಸ

    ಧರ್ಮಸ್ಥಳ ವಿಚಾರದಲ್ಲಿ ಈ ಗ್ಯಾಂಗ್ ಷಡ್ಯಂತ್ರ ರೂಪಿಸಿತ್ತು. ಇದರಲ್ಲಿ ಕರ್ನಾಟಕ ಸರ್ಕಾರವೇ ಭಾಗಿಯಾಗಿದೆ ಎಂಬ ಅನುಮಾನ ಮೂಡುತ್ತಿದೆ. ಸುಪ್ರೀಂಗೆ ಪಿಐಎಲ್ ಹೋಗಿದೆ. ಅದು ಕರ್ನಾಟಕಕ್ಕೆ ಸಂಬಂಧಪಟ್ಟಿದ್ದು ಗಮನಿಸಬೇಕು ಅಂತ ಗೊತ್ತಿಲ್ಲ ಅಂದ್ರೆ ಇದು ಬೇಜಾವಾಬ್ದಾರಿ ಸರ್ಕಾರವಾಗಿದೆ. ಏನಾದ್ರೂ ನಡೆಯಲಿ, ನನ್ನ ಪಾಡಿಗೆ ನಾನು ಉಂಡ್ಕೊಂಡು, ತಿಂದ್ಕೊಂಡು ಹಾಯಾಗಿ ಇರುವಂತದ್ದ ಎಂದು ವಾಗ್ದಾಳಿ ನಡೆಸಿದ್ದಾರೆ.

    ಸಿದ್ದರಾಮಯ್ಯನವ್ರು ಹಾಗೆ ಮಾಡ್ತಾರೆ ಅಂದ್ರೆ ಅವ್ರು ಸಿಎಂ ಕುರ್ಚಿಯಿಂದ ಕೆಳಗಿಳಿದು ಬೇರೆ ಕೆಲಸ ಮಾಡಬೇಕು. ತಿಂದು, ಉಂಡು ಹಾಯಾಗಿ ಇರಬೇಕು ಅಂದ್ರೆ ಅವ್ರು ಬೇರೆ ಕೆಲಸಕ್ಕೆ ಹೋಗಬೇಕು. ಎಡಪಂಥೀಯ ಸಂಘಟನೆಗಳ ಒತ್ತಾಯಕ್ಕೆ ಎಸ್‌ಐಟಿ ರಚನೆ ಮಾಡುವಂತಾಯ್ತು ಅಂತ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ರು. ಆದ್ರೆ ಯಾವ ಸಂಘಟನೆಗಳು ಅಂತ ಬಹಿರಂಗಪಡಿಸಲಿಲ್ಲ. ಈ ವಿಚಾರದಲ್ಲಿ ಸರ್ಕಾರಕ್ಕೆ ಛೀಮಾರಿ ಹಾಕಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

    ಸರ್ಕಾರಕ್ಕೆ ಧರ್ಮಸ್ಥಳದ ವಿರುದ್ಧ ಒಂದಾದ್ರೂ ದಾಖಲೆ ಹುಡುಕಬೇಕು ಎಂದಿತ್ತು. ಆದ್ರೆ ಯಾವ ಸಾಕ್ಷ್ಯಗಳು ಸಿಗಲಿಲ್ಲ. ಸರ್ಕಾರ ಎಸ್‌ಐಟಿ ಬಳಿ ಮಧ್ಯಂತರ ವರದಿಯನ್ನು ಕೇಳಬೇಕಿತ್ತು. ತನಿಖೆಯ ವಿವರವನ್ನ ಸಮಾಜದ ಮುಂದಿಡಬೇಕಿತ್ತು. ಮಾಧ್ಯಮಗಳು ಬುರುಡೆ ಗ್ಯಾಂಗ್ ಹಿಂದೆ ಬೀಳದಿದ್ರೆ, ಅವರನ್ನು ಸರ್ಕಾರವೇ ರಕ್ಷಣೆ ಮಾಡ್ತಿತ್ತು ಎಂದು ಆರೋಪಿಸಿದ್ದಾರೆ.

    ಸುಪ್ರೀಂ ಕೋರ್ಟ್ನಲ್ಲಿ ಸೋತ ವಕೀಲ ಧನಂಜಯ್ ಒಂದು ಕಡೆಯೂ ಸೋತೆ ಅಂತ ಹೇಳಲಿಲ್ಲ. ಇದು ಬಹಳ ದುರಂತದ ವಿಚಾರ ಹಾಗೂ ಇದು ನೀವು ನಿಮ್ಮ ವೃತ್ತಿಗೆ ಮಾಡಿದ ಅವಮಾನ. ಸುಪ್ರೀಂನಿಂದ ಛೀಮಾರಿ ಹಾಕಿಸಿಕೊಂಡು, ಸುಳ್ಳುಗಳ ಮೇಲೆ ಸುಳ್ಳು ಹೇಳಿಕೊಂಡು ಬಂದಿದ್ದೀರಿ. ಧನಂಜಯ್ ಇಡೀ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

  • ಬುರುಡೆ ಗ್ಯಾಂಗ್ ಸಮೀರ್ ಹಿಂದೆ ಎಡಪಂಥೀಯರು, ಮಾವೋವಾದಿ, ಜಿಹಾದಿಗಳಿದ್ದಾರೆ: ಚಕ್ರವರ್ತಿ ಸೂಲಿಬೆಲೆ

    ಬುರುಡೆ ಗ್ಯಾಂಗ್ ಸಮೀರ್ ಹಿಂದೆ ಎಡಪಂಥೀಯರು, ಮಾವೋವಾದಿ, ಜಿಹಾದಿಗಳಿದ್ದಾರೆ: ಚಕ್ರವರ್ತಿ ಸೂಲಿಬೆಲೆ

    – ಮಸೀದಿಯಲ್ಲಿ ನಡೆಯೋ ಅತ್ಯಾಚಾರ ಕೇಸ್ ಬಗ್ಗೆ ಮಾತೆತ್ತದ ಮುಸಲ್ಮಾನ ಇಲ್ಲಿ ಯಾಕೆ ಬಂದ: ವಾಗ್ಮಿ ಪ್ರಶ್ನೆ
    – ದಸರಾ ಉದ್ಘಾಟನೆಗೆ ಮುಸಲ್ಮಾನರನ್ನು ಕರೆತಂದಿದ್ದಾರೆ: ಸರ್ಕಾರದ ವಿರುದ್ಧ ಟೀಕೆ

    ಕಾರವಾರ: ಬುರುಡೆ ಗ್ಯಾಂಗ್ ಸಮೀರ್ (Sameer) ಹಿಂದೆ ಎಡಪಂಥೀಯರು, ಮಾವೋವಾದಿಗಳು, ಜಿಹಾದಿಗಳು ಇದ್ದಾರೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಗಂಭೀರ ಆರೋಪ ಮಾಡಿದ್ದಾರೆ.

    ಸಿದ್ದಾಪುರ ತಾಲೂಕಿನ ಮಾವಿನಗುಂಡಿಯಲ್ಲಿ ಮಾತನಾಡಿದ ಅವರು, 2012 ರಲ್ಲಿ ಗಿರೀಶ್ ಮಟ್ಟಣ್ಣನವರ್ ಮೊದಲು ಸೌಜನ್ಯ ಪ್ರರಣದಲ್ಲಿ ಹಿಡಿದುಕೊಂಡು ಬಂದ ಆರೋಪಿಯನ್ನು ನಮಗೆ ಒಪ್ಪಿಸಿ ಎಂದು ಗಲಾಟೆ ಮಾಡಿದ್ದ. ಇದೇ 2013 ರಲ್ಲಿ ಹಿಡಿದುಕೊಂಡ ವ್ಯಕ್ತಿ ಆರೋಪಿ ಅಲ್ಲ ಎಂದು ಹೇಳುತ್ತಾನೆ. ಇದರಲ್ಲಿ ವೀರೇಂದ್ರ ಹೆಗ್ಗಡೆ ಪರಿವಾರದವರ ಹೆಸರು ಸೇರಿಸುತ್ತಾನೆ. ಧರ್ಮಸ್ಥಳವನ್ನು ಕಿತ್ತುಕೊಳ್ಳಬೇಕು ಎಂಬ ಹುಳ ಅವರಲ್ಲಿ ಹೊಕ್ಕಿದೆ. 2023 ಸಂತೋಷ್ ರಾವ್ ಹೊರ ಬರುತ್ತಾನೆ. ಸ್ಟ್ಯಾನ್ಲಿ ಒಡನಾಡಿ ಸಂಸ್ಥೆ ಮೂಲಕ ಎಂಟ್ರಿಯಾಗಿ ಮನೆ ಮನೆಗೂ ಹೋಗಿ ಪ್ರಚಾರ ಮಾಡುತ್ತಾನೆ. ಸೌಜನ್ಯ ಪ್ರಕರಣದಲ್ಲಿ ಔಟ್‌ಪುಟ್ ಹೊರಗೆ ಬರದೇ ಇದ್ದುದರಿಂದ ಮಾವೂ ವಾದಿಗಳ ಮುಖವಾಡ ಕಳಚಿ ಅವರ ಹಿಂದೆ ಬಂದು ಗಿರೀಶ್ ಮಟ್ಟಣ್ಣನವರ್ ಎಂಟ್ರಿಯಾಗುತ್ತದೆ. ಗಿರೀಶ್ ಮಟ್ಟಣ್ಣನವರ್ ಎಂಟ್ರಿ ಆದ್ಮೇಲೆ ಅವರ ಪೊಲೀಸ್ ಬುದ್ದಿ ಬಳಸಿಕೊಂಡು ಇಲ್ಲಿ ನಡೆಯುವ ಪ್ರತಿಯೊಂದು ಸಾವನ್ನೂ ಧರ್ಮಸ್ಥಳಕ್ಕೆ ಟ್ಯಾಗ್ ಮಾಡುವ ಪ್ರಯತ್ನ ಮಾಡುತ್ತಾರೆ. ಸೌಜನ್ಯ ಪ್ರಕರಣದಿಂದ ಹೊರಬಂದ ಸಂತೋಷ್ ರಾವ್ ಮುಂದಿಟ್ಟುಕೊಂಡು ಧರ್ಮಸ್ಥಳವನ್ನು ಮುಗಿಸುವ ಧಾವಂತ ಇತ್ತು. ಆಗ ಸಮೀರ್‌ನನ್ನು ಕರೆತಂದರು. ಅಲ್ಲಿಗೆ ಜಿಹಾದಿ ಎಲಿಮಿನೇಟ್‌ಗಳ ಎಂಟ್ರಿ ಆಗುತ್ತದೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ತಾವೇ ತೋಡಿದ ಹಳ್ಳಕ್ಕೆ ಬಿದ್ದರು, ಡಿಕೆಶಿ ಹೇಳಿಕೆ ವಾಪಸ್ ಪಡೆಯಲಿ: ವಿ.ಸೋಮಣ್ಣ

    ಒಬ್ಬ ಮುಸಲ್ಮಾನ ಬಂದ ಎಂದರೇ ಇದರಲ್ಲಿ ಏನೋ ಇರಬೇಕು. ಒಬ್ಬ ಮುಸಲ್ಮಾನ ತನ್ನ ಮಸೀದಿಯಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತೆತ್ತದವನು ಸೌಜನ್ಯ ಪ್ರಕರಣ ಹಿಡಿದುಕೊಂಡು ಇಲ್ಲಿಗೆ ಏಕೆ ಬಂದ? ಎಐ ವಿಡಿಯೋ ಮಾಡಲು ದುಡ್ಡು ಎಲ್ಲಿಂದ ಬಂತು? ಧರ್ಮಸ್ಥಳದ ಪರ ಹೋರಾಟಗಾರರು ಎಲ್ಲಿ ಬಂದರೂ, ಬೇರೆ ದಾರಿ ಇಲ್ಲದೇ ಎಸ್‌ಡಿಪಿಐ ಎಂಟ್ರಿ ಆಗಿದೆ. ಮೊದಲು ಎಡಪಂಥೀಯರು ಬಂದರು. ಅದರ ಹಿಂದೆ ಇವಾಂಜಿಲಿಸ್ಟ್‌ಗಳು ಬಂದರು, ಅವರ ಹಿಂದೆ ಜಿಹಾದಿಗಳು ಬಂದರು. ಜಿಹಾದಿ ಎಲಿಮಿನೇಟ್ ಮೂಲಕ ಮೊದಲ ಹೆಜ್ಜೆಯಾಗಿ ಸಮೀರ್ ಮುಂದಕ್ಕೆ ಬಂದಿದ್ದಾನೆ. ಸಮೀರ್‌ನ ಹಿಂದೆ ಪೂರ್ತಿ ಬ್ಯಾಕಪ್ ಎಡಪಂಥೀಯರದ್ದು ಇತ್ತು. ಸಮೀರ್ ವಿಡಿಯೋ ಆದ ನಂತರ ಎಲ್ಲರಿಗೂ ಹಂಚಲಾಗಿದೆ ಎಂದು ಆರೋಪಿಸಿದ್ದಾರೆ.

    ಜನರನ್ನು ಬಡಕಾಯಿಸುವುದು ಸಾಮಾನ್ಯ ಯೂಟ್ಯೂಬರ್ ತಲೆಯಲ್ಲ. ಇದರ ಹಿಂದೆ ಯಾರೋ ದೊಡ್ಡದಾಗಿ ಪ್ರಯತ್ನ ಮಾಡುತ್ತಿದ್ದವರು ಇದ್ದಾರೆ. ದಸರಾ ಉದ್ಘಾಟನೆಗೆ ಮುಸಲ್ಮಾನರನ್ನು ಕರೆದುಕೊಂಡು ಬಂದಿದ್ದಾರೆ. ದಸರಾ ಹಿಂದೂಗಳ ಧಾರ್ಮಿಕ ಹಬ್ಬವಾಗಿ ಸೆಲಬ್ರೇಟ್ ಮಾಡುತ್ತೇವೆ. ನಿಸಾರ್ ಅಹ್ಮದ್ ಬಂದಾಗ ಗಲಾಟೆ ಮಾಡಲಿಲ್ಲ. ಏಕೆಂದರೆ ನಿಸಾರ್ ಅಹ್ಮದ್ ಅವರನ್ನು ಬೇರೆಯವರು ಎಂದು ನಾವು ಗಮನಿಸಿಲ್ಲ. ನಮಗೆ ಹಿಂದೂ ಮುಸ್ಮಿಂ ಪ್ರಾಬ್ಲಮ್ ಅಲ್ಲ. ನಮಗೆ ಧರ್ಮ ಶ್ರದ್ಧೆಯನ್ನು ವಿರೋಧಿಸುವವರ ಕುರಿತು ಇರುವ ಪ್ರಾಬ್ಲಂ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿ ದೇವಸ್ಥಾನ ಎಲ್ಲರ ಆಸ್ತಿ ಅನ್ನೋದು ಸರಿ ಅಲ್ಲ, ಡಿಕೆಶಿ ಕ್ಷಮೆ ಕೇಳ್ಬೇಕು: ಆರ್.ಅಶೋಕ್

    ಕನ್ನಡ ಭಾಷೆಯನ್ನು ದೇವಿ ರೂಪದಲ್ಲಿ ನೋಡಿದರೆ ಸಹಿಸಲಾಗದವರು, ಚಾಮುಂಡಿ ತಾಯಿ ಪೂಜೆ ಎಂದರೆ ಹೇಗೆ ಸಹಿಸುತ್ತಾರೆ? ಹಿಂದೂಗಳನ್ನು ಅವಮಾನಿಸಬೇಕು, ಕಿರಿಕಿರಿ ಉಂಟು ಮಾಡಬೇಕು. ನೀವು ಕರ್ನಾಟಕದಲ್ಲಿ ಸೆಕೆಂಡರಿ ಸಿಟಿಜನ್ ಎಂದು ಪದೇ ಪದೇ ಹೇಳಬೇಕು. ನಿಮ್ಮ ವೋಟು ಅವಶ್ಯಕತೆ ಇಲ್ಲ ಎಂದು ಹೇಳುವ ಪ್ರಯತ್ನವನ್ನು ಸಿದ್ದರಾಮಯ್ಯ ಹಿಂದೆಯೂ ಮಾಡಿದ್ದಾರೆ. ಇಂದೂ ಸಹ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

  • ಸಮೀರ್ ಮುಲ್ಲಾನ ಕುತಂತ್ರಕ್ಕೆ ಕೊನೇ ಮೊಳೆ ಹೊಡೆಯೋಣ – ಚಕ್ರವರ್ತಿ ಸೂಲಿಬೆಲೆ

    ಸಮೀರ್ ಮುಲ್ಲಾನ ಕುತಂತ್ರಕ್ಕೆ ಕೊನೇ ಮೊಳೆ ಹೊಡೆಯೋಣ – ಚಕ್ರವರ್ತಿ ಸೂಲಿಬೆಲೆ

    – ಧರ್ಮಸ್ಥಳ ಪರ ಮಾತಾಡಿದ್ರೇ ಚಕ್ರವರ್ತಿಗೆ ಸೂಟ್ ಕೇಸ್ ಬಂದಿದೆ ಅಂತಾರೆ
    – ಅಣ್ಣಪ್ಪನ ನೆನೆದು ದೀಪ ಹಚ್ಚಿ ಕ್ಷಮೆ‌ ಕೇಳೋಣ ಎಂದ ಚಿಂತಕ

    ಬೆಂಗಳೂರು: ಧರ್ಮಸ್ಥಳ (Dharmasthala) ಉಳಿಸೋಣ ಹೆಸರಿನಲ್ಲಿ ʻಧರ್ಮ ರಕ್ಷಣೆʼ ಕಾರ್ಯಕ್ರಮ ಸಹಕಾರನಗರದ ರಾಘವೇಂದ್ರ ಮಠದಲ್ಲಿ ನಡೆಯಿತು.

    ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಇಂದು ವಿಜಯೋತ್ಸವದ ದಿನ, ಸುಳ್ಳುಗಳನ್ನೇ ಸತ್ಯ ಎಂದು ಎಲ್ಲರೂ ಅಂದುಕೊಂಡಿದ್ರು. ನಾನು ಈ ಪ್ರಕರಣದಲ್ಲಿ ವಿಚಾರ ಮಾಡದೇ ಬಂದಿಲ್ಲ. ಯಾವುದು ಸತ್ಯ ಅಂತ ತಿಳಿದೇ ಮೇಲೆಯೇ ಹೋರಾಟ ಮಾಡಿದ್ದು. ಸಮೀರ್ ಮುಲ್ಲಾನ (Sameer MD) ವಿಡಿಯೋಗಳನ್ನ ಗೊತ್ತಿಲ್ಲದೇ ಶೇರ್ ಮಾಡಿರ್ತೀರಾ. ಆದ್ದರಿಂದ ಮನೆಗೆ ಹೋಗಿ ಅಣ್ಣಪ್ಪನ ನೆನೆದು ದೀಪ ಹಚ್ಚಿ ಕ್ಷಮೆ‌ ಕೇಳೋಣ ಅಂದ್ರು. ಇದನ್ನೂ ಓದಿ: ʻಬುರುಡೆ ಚಿನ್ನಯ್ಯʼನ ಬಂಡವಾಳ ಬಯಲು – ಮುಸುಕುಧಾರಿಯ ಮುಖವಾಡ ಕಳಚಿದ್ದು ಹೇಗೆ?

    ಇನ್ನೂ ಸಮೀರ್ ಮುಲ್ಲಾನಿಂದ ಮಾಸ್ ಮೈಂಡ್ ವಾಷ್ ಆಗಿತ್ತು. ಆನೆ ಮಾವುತನ ಜಾಗ ಎಷ್ಟು? ಅಂತ ಆರೋಪ ಮಾಡೋರಿಗೆ ಗೊತ್ತಿಲ್ಲ. ಎರಡು ಸಾವಿರ ಅಡಿ ಜಾಗಕ್ಕೆ ಖಾವಂದರು ಕೊಲೆ ಮಾಡ್ತಾರಾ? ಚಕ್ರವರ್ತಿ ಸೂಲಿಬೆಲೆ ಉಜಿರೆಗೆ ಬಂದ್ರೇ ಚಪ್ಪಲಿಯಲ್ಲಿ ಹೊಡೀತಿನಿ ಎಂದು ಮಹೇಶ್ ಶೆಟ್ಟಿ ತಿಮರೊಡ್ಡಿ ಹೇಳಿದ್ದ. ಆದ್ರೇ ನಾವು ಉಜಿರೆಯ ತಿಮರೊಡ್ಡಿ ಮನೆ ಬಳಿಯೇ ಸಮಾವೇಶ ಮಾಡಿದ್ವಿ. ಧರ್ಮಸ್ಥಳದ ಆಟೋ ಚಾಲಕರು ನಮ್ಮಬೆಂಬಲಕ್ಕೆ ನಿಂತಿದ್ರು. ಇದನ್ನೂ ಓದಿ: ಧರ್ಮ ವಿಜಯ – ಧರ್ಮಸ್ಥಳ ದೇಗುಲದಿಂದ ಶಿವ ರುದ್ರತಾಂಡವದ ಫೋಟೋ ಅಪ್ಲೋಡ್‌

    ಜಡ್ಜ್ ವಿರೇಂದ್ರ ಹೆಗಡೆ ಚೇಲಾ ಅಂತ ಆರೋಪ ಮಾಡಿದ್ರು. ಆದ್ರೆ ಸರ್ಕಾರ ಅಂಥವರ ವಿರುದ್ಧ ಕ್ರಮ ಕೈಗೊಂಡಿಲ್ವಲ್ಲ. ಸೌಜನ್ಯಳಿಗೆ ನ್ಯಾಯ ಕೊಡಿಸೋದು ಇವರಿಗೆ ಬೇಕಿಲ್ಲ. ಜೇಬಲ್ಲಿ ಸಾಕ್ಷಿ ಇಟ್ಟುಕೊಂಡು ಯಾಕೆ ಓಡಾಡ್ತೀರಿ? ಯಾಕೆ ಅಂದ್ರೆ ಸೌಜನ್ಯ ಹೋರಾಟಕ್ಕೆ ನ್ಯಾಯ ಬೇಕಿಲ್ಲ ಇವರಿಗೆ, ಜೈನ ಸಮುದಾಯದವರು ಗೌಡ ಸಮುದಾಯದ ಸೌಜನ್ಯಳ ರೇಪ್ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ರು. ನಿಶ್ಚಲ್ ಜೈನ್ ಅಮೆರಿಕದಿಂದ ರೇಪ್ ಮಾಡೋಕೆ ಧರ್ಮಸ್ಥಳಕ್ಕೆ ಬಂದ್ರು ಅಂದ್ರು. ಆರೋಪ ಸುಳ್ಳು ಅಂತ ಸಾಬೀತಾದ್ರೂ ಓ ಅವ್ರು ದೊಡ್ಡ ಮನುಷ್ಯರು ಅದಕ್ಕೆ ಅಂದ್ರು. ಸಾಕ್ಷ್ಯ ಕೊಟ್ರೂ ಓ ಅವರು ದೊಡ್ಡೋರು ಅಂತಾರೆ. ಇದನ್ನೂ ಓದಿ: ಧರ್ಮಸ್ಥಳ ಷಡ್ಯಂತ್ರ ಕೇಸನ್ನ ರಾಜ್ಯ ಸರ್ಕಾರವೇ NIA ಗೆ ಕೊಡಬೇಕು: ಆರ್‌.ಅಶೋಕ್‌ ಆಗ್ರಹ

    ಇನ್ನೂ ಧರ್ಮಸ್ಥಳ ಪರ ಮಾತಾಡಿದ್ರೇ ಓ ಚಕ್ರವರ್ತಿಗೆ ಸೂಟ್ ಕೇಸ್ ಬಂದಿದೆ ಅಂತಾರೆ. ಸೌಜನ್ಯಳಿಗೆ ನ್ಯಾಯ ಕೊಡಿಸ್ತೀವಿ ಅಂತ ಬೇರೆ ಹೆಣ್ಣು ಮಕ್ಕಳ ಬಗ್ಗೆ ಮಾತಾಡ್ತಾರೆ. ಧರ್ಮಸ್ಥಳ ಪರ‌ ನಿಂತವರ ಮನೆಯ ಹೆಣ್ಣು ಮಕ್ಕಳ ಬಗ್ಗೆ ಮಾತಾಡ್ತಾರೆ. ತಲೆಗಳನ್ನ ತಗೊಂಡು ಹೋಗಿ ಮುಳ್ಳಂದಿ ಗೂಡಲ್ಲಿ ಇಡುತ್ತಂತೆ. ಗಿರೀಶ್ ಮಟ್ಟಣ್ಣ ಹೊಸ ಸಿದ್ಧಾಂತ ತಂದ. SIT ಯವರು ಗುಂಡಿ ತೆಗೆಯೋದು ಬಿಟ್ಟು ಮುಳ್ಳಂದಿ‌ ಗೂಡುಗಳನ್ನ ಅಗೆಯಬೇಕಿತ್ತಂತೆ. ಖಾವಾಂದರನ್ನ ಕಾಮಾಂಧರು ಅಂದ್ರಲ್ಲ ಅದು ಷಡ್ಯಂತ್ರ. ಸುಜಾತ ಭಟ್ ರನ್ನ ವಿರೇಂದ್ರ ಹೆಗಡರ ತಮ್ಮ ರೇಪ್ ಮಾಡಿದ್ರು ಅಂಥ ನಿನ್ನೆ ಹೊಸ ಕಥೆ ಕಟ್ಟಿದ್ರು. ಏನ್ ಹೇಳೋದು ಇಂತವರಿಗೆ. ನಾನು ಅಯೋಗ್ಯ ಅಂತ ಪದ ಬಳಕೆ‌ ಮಾಡಿದ್ದಕ್ಕೆ ನನ್ನನ್ನ ಸುಪ್ರೀಂ ವರೆಗೆ ಎಳೆದ್ರು. ಸುಪ್ರೀಂ ಕೋರ್ಟ್ ಅಯೋಗ್ಯ ಪದ ಜಾತಿ‌ನಿಂದನೆ ಅಲ್ಲ ಅಂತ ಹೇಳಿದೆ. ಇನ್ಮೇಲೆ ನಾನು ಅಯೋಗ್ಯ ಪದ ಬಳಕೆಗೆ ಯಾವುದೇ ಅಡತಡೆಯಿಲ್ಲದೇ ಬಳಸಬಹುದು ಎಂದ್ರು. ಇದನ್ನೂ ಓದಿ: ಒಂದೊಂದೇ ಸತ್ಯಗಳು ಹೊರಗೆ ಬರ್ತಿದೆ: ವೀರೇಂದ್ರ ಹೆಗ್ಗಡೆ

  • ಸೌಜನ್ಯ ತಾಯಿ ಷಡ್ಯಂತ್ರಕ್ಕೆ ಬಲಿಯಾಗಿರುವ ಸಾಧ್ಯತೆಯಿದೆ, ಅವರನ್ನು ವಿಚಾರಣೆ ಒಳಪಡಿಸಬೇಕು: ಸೂಲಿಬೆಲೆ

    ಸೌಜನ್ಯ ತಾಯಿ ಷಡ್ಯಂತ್ರಕ್ಕೆ ಬಲಿಯಾಗಿರುವ ಸಾಧ್ಯತೆಯಿದೆ, ಅವರನ್ನು ವಿಚಾರಣೆ ಒಳಪಡಿಸಬೇಕು: ಸೂಲಿಬೆಲೆ

    – ಮಾಧ್ಯಮಗಳು ಸುಜಾತ ಭಟ್‌ ವಿಚಾರಣೆ ನಡೆಸದೇ ಇದ್ದರೆ ಸತ್ಯ ಹೊರ ಬರುತ್ತಿರಲಿಲ್ಲ

    ಬೆಂಗಳೂರು: ಸೌಜನ್ಯ ತಾಯಿ (Soujanya Mother) ಕುಸುಮಾವತಿ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಹೇಳಿದ್ದಾರೆ.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಸುಜಾತ ಭಟ್‌ (Sujatha Bhat) ಅವರನ್ನು ಹೇಗೆ ಈ ಗುಂಪು ಷಡ್ಯಂತ್ರ ಮಾಡಿ ಧರ್ಮಸ್ಥಳದ (Dharmasthala) ವಿರುದ್ಧ ಅಪಪ್ರಚಾರ ಮಾಡಿತ್ತು. ಹೆಣ್ಣು ಮಕ್ಕಳ ವಿಚಾರ ಬಂದಾಗ ಸಮಾಜ ಬೇಗ ಕರಗುತ್ತದೆ. ಈ ಗುಂಪು ಇದನ್ನೇ ಗುರಾಣಿಯನ್ನಾಗಿ ಇಟ್ಟುಕೊಂಡು ಸುಜಾತ ಭಟ್‌ ಅವರನ್ನು ಮುಂದಿರಿಸಿ ದಿನ ದಿನೇ ಕಥೆ ಕಟ್ಟುತ್ತಿದ್ದರು ಎಂದು ಹೇಳಿದರು.

     

    ಸೌಜನ್ಯ ಮೇಲೆ ಅತ್ಯಾಚಾರವಾಗಿದೆ. ಆ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು. ಅತ್ಯಾಚಾರ ಮಾಡಿದವರು ಜೈಲಿಗೆ ಹೋಗಬೇಕು ಎಂದು ನಾನು ಆಗ್ರಹ ಮಾಡುತ್ತೇನೆ. ಈ ಬದ್ಧತೆಯನ್ನು ಇಟ್ಟುಕೊಂಡೇ ನಾನು ಮಾತನಾಡುತ್ತಿದ್ದೇನೆ. ಈಗ ಹೇಗೆ ಮಾಸ್ಕ್‌ ಮ್ಯಾನ್, ಸುಜತಾ ಭಟ್‌ ಹೇಗೆ ಷಡ್ಯಂತ್ರದ ಭಾಗವಾಗಿದ್ದಾರೋ ಅದೇ ರೀತಿ ಸೌಜನ್ಯ ತಾಯಿ ಕುಸುಮಾವತಿ ಕೂಡ ಯಾವುದೋ ಷಡ್ಯಂತ್ರದ ಭಾಗವಾಗಿರುವುದು ಮೆಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  ಇದನ್ನೂ ಓದಿ: ಕಲರ್‌ ಕಲರ್‌ ಕಾಗೆ ಹಾರಿಸಿದ್ದ ಸಮೀರ್‌ಗೆ ಈಗ ಬಂಧನ ಭೀತಿ

    ಸುಜತಾ ಭಟ್‌ ಅವರನ್ನು ಮಾಧ್ಯಮಗಳು ನಿರಂತರ ವಿಚಾರಣೆ ಮಾಡದೇ ಇದ್ದರೆ ಮುಂದೊಂದು ದಿನ ಸುಜಾತ ಭಟ್‌ ಹೀರೋಯಿನ್‌ ಆಗುತ್ತಿದ್ದರು. ಆದರೆ ಯಾವಾಗ ಮಾಧ್ಯಮಗಳು ನಿರಂತರ ವಿಚಾರಣೆ ಮಾಡಲು ಆರಂಭಿಸಿದವು ಆಗ ಸತ್ಯ ಹೊರ ಬಂದಿದೆ. ಮಾಧ್ಯಮಗಳು ನಿರಂತರ ವಿಚಾರಣೆ ಮಾಡುವುದಕ್ಕೂ ಸಮೀರ್‌ ವಿಡಿಯೋ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದ ಎಂದರು.

    ಆರಂಭದಲ್ಲಿ ಭಾವನಾತ್ಮಕ ವಿಚಾರವನ್ನು ಮುಂದಿಡುತ್ತಾರೆ. ನಂತರ ಜೈನರ ವಿರುದ್ಧ ಜಾತಿ ಜಾತಿಗಳನ್ನು ಎತ್ತಿಕಟ್ಟಿ ಹಿಂದೂ ಸಮುದಾಯವನ್ನು ಒಡೆದು ಕುತಂತ್ರ ಮಾಡುತ್ತಿದ್ದರು ಸೂಲಿಬೆಲೆ ತಿಳಿಸಿದರು.

  • ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ – ಸೂಲಿಬೆಲೆ ವಿರುದ್ಧ ದಾಖಲಾದ ಕೇಸ್‌ ರದ್ದು

    ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ – ಸೂಲಿಬೆಲೆ ವಿರುದ್ಧ ದಾಖಲಾದ ಕೇಸ್‌ ರದ್ದು

    ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ‘ಅಯೋಗ್ಯ’ ಎಂದು ಕರೆದಿದ್ದಕ್ಕಾಗಿ ಚಕ್ರವರ್ತಿ ಸೂಲಿಬೆಲೆ (Chakravarty Sulibele) ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ರದ್ದುಗೊಳಿಸಿದೆ.

    ಕರ್ನಾಟಕ ಹೈಕೋರ್ಟ್‌ನ (Karnataka High Court) 2024ರ ಸೆ‍‍ಪ್ಟೆಂಬರ್‌ 27ರ ಆದೇಶ ಪ್ರಶ್ನಿಸಿ ಸೂಲಿಬೆಲೆ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ. ಎಂ. ಸುಂದರೇಶ್‌ ಹಾಗೂ ಎನ್‌.ಕೋಟೀಶ್ವರ ಸಿಂಗ್ ಅವರ ಪೀಠವು ಈ ಆದೇಶ ನೀಡಿತು.

    ಯುವ ಬ್ರಿಗೇಡ್‌ ವತಿಯಿಂದ ರಾಯಚೂರು ಜಿಲ್ಲೆಯ ಸಿರಾವರದಲ್ಲಿ 2024ರ ಜನವರಿ 18ರಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸೂಲಿಬೆಲೆ ಅವರು ಖರ್ಗೆ ಅವರನ್ನು ಅಯೋಗ್ಯ ಎಂದು ಕರೆದಿದ್ದರು. ಕಾಂಗ್ರೆಸ್ ಪಕ್ಷದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ ಸಲ್ಲಿಸಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದನ್ನೂ ಓದಿ: ಅಂದು ಇಂಡಿಯಾ ಔಟ್‌ – ಇಂದು ಸೇನಾ ಕಚೇರಿಯಲ್ಲೇ ದೊಡ್ಡ ಕಟೌಟ್‌ | ಇದು ಮೋದಿ ಮ್ಯಾಜಿಕ್‌

     

     

    ತೀರ್ಪಿಗೆ ಸೂಲಿಬೆಲೆ ಹೇಳಿದ್ದೇನು?
    ಶ್ರಾವಣ ಆರಂಭವಾಗಿದೆ. ಅದಕ್ಕೆ ಸರಿಯಾಗಿ ಪ್ರಿಯಾಂಕ್ ಖರ್ಗೆ ತನ್ನ ಬಳಗದ ಮೂಲಕ ಅವರ ತಂದೆಯನ್ನು ಅಯೋಗ್ಯ ಎಂದಿದ್ದೆ ಎಂಬ ಕಾರಣಕ್ಕೆ ಜಾತಿ‌ ನಿಂದನೆಯ ದೂರು ದಾಖಲಿಸಿ ಸುಪ್ರೀಂಕೋರ್ಟಿನವರೆಗೂ ಅಲೆದಾಡಿಸಿದರು. ಈಗಷ್ಟೇ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಸರ್ಕಾರಕ್ಕೆ ಛೀಮಾರಿ ಹಾಕಿ ‘ಬೇರೇನೂ ಕೆಲಸವಿಲ್ಲದೇ ಇಂಥದ್ದಕ್ಕೆ ಜೋತಾಡುತ್ತಿದ್ದೀರಾ’ ಎಂದು ಝಾಡಿಸಿದ್ದಾರೆ.

    ಹಾಗೆ ನೋಡಿದರೆ ಈ ಕೇಸಿನ ಕುರಿತಂತೆ ನಾನು ವಿಚಾರಿಸಿದ್ದಕ್ಕಿಂತ ಹೆಚ್ಚಾಗಿ ಅರುಣ್ ಶ್ಯಾಮ್ ಮತ್ತು ಅವರ ಸಹಯೋಗಿಗಳಾದ ಸುಯೋಗ್ ಮತ್ತು‌ ನಿಶಾಂತ್ ಇವರೀರ್ವರನ್ನೂ ಇತರರನೇಕರು ಪೀಡಿಸಿದ್ದಿದೆ. ಇಂದು ಸರ್ಕಾರದ ವಿರುದ್ಧ, ಒಂದು ರಾಷ್ಟ್ರೀಯ ಪಕ್ಷದ ವಿರುದ್ಧ ಈ ಗೆಲುವಿಗೆ ಇವರನ್ನೆಲ್ಲ ಹೃತ್ಪೂರ್ವಕವಾಗಿ ಸ್ಮರಿಸಿಕೊಳ್ಳುವೆ. ವಿಶೇಷವಾಗಿ ಧನ್ಯವಾದಗಳು ಮಿತ್ರ ಅರುಣ್ ಶ್ಯಾಮ್. ಇದನ್ನೂ ಓದಿ: ಇಂದಿರಾ ದಾಖಲೆ ಬ್ರೇಕ್‌ – 4078 ದಿನ ಪೂರ್ಣ, 10 ಸಾಧನೆ ನಿರ್ಮಿಸಿದ ಮೋದಿ

    ನನಗೆ ಪ್ರಿಯಾಂಕ್ ಖರ್ಗೆಯವರ ಮೇಲೆ ಯಾವ ಕೋಪವೂ ಇಲ್ಲ. ಅವರು ಇನ್ನಾದರೂ ತಮ್ಮ ಕ್ಷೇತ್ರದ ಕಡೆಗೆ ಗಮನ ಹರಿಸಿ ಜನರು ಪಡುತ್ತಿರುವ ಸಂಕಟದಿಂದ ಅವರನ್ನು ಪಾರುಮಾಡುವ ಸಮಾಜೋಪಯೋಗಿ ಕೆಲಸಗಳಲ್ಲಿ ನಿರತರಾದರೆ ಅವರಿಗೂ ಒಳಿತು, ರಾಜ್ಯಕ್ಕೂ ಒಳಿತು, ದೇಶಕ್ಕೂ ಒಳಿತು.

  • ಯಾರೇ ದ್ವೇಷ ಭಾಷಣ ಮಾಡಿದ್ರು ಸರ್ಕಾರ ಸುಮ್ಮನೆ ಇರಲು ಸಾಧ್ಯವಿಲ್ಲ: ದಿನೇಶ್ ಗುಂಡೂರಾವ್

    ಯಾರೇ ದ್ವೇಷ ಭಾಷಣ ಮಾಡಿದ್ರು ಸರ್ಕಾರ ಸುಮ್ಮನೆ ಇರಲು ಸಾಧ್ಯವಿಲ್ಲ: ದಿನೇಶ್ ಗುಂಡೂರಾವ್

    ಬೆಂಗಳೂರು: ದ್ವೇಷ ಭಾಷಣ ಯಾರೇ ಮಾಡಿದ್ರು ಸರ್ಕಾರ ಸುಮ್ಮನೆ ಇರೋದಕ್ಕೆ ಆಗುವುದಿಲ್ಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಸರ್ಕಾರ ನೊಟೀಸ್ ನೀಡಿದ ಕ್ರಮವನ್ನು ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸಮರ್ಥನೆ ಮಾಡಿಕೊಂಡಿದ್ದಾರೆ.

    ವಿಧಾನಸೌಧದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಭಾಷಣಕ್ಕೆ ಸರ್ಕಾರದಿಂದ ತಡೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ದ್ವೇಷ ಭಾಷಣ ಮಾಡಿದ್ರೆ ಸುಮ್ಮನೆ ಇರೋಕೆ ಆಗುತ್ತಾ? ಯಾರೇ ದ್ವೇಷ ಭಾಷಣ ಮಾಡಿದ್ರು ನೊಟೀಸ್ ಜಾರಿ ಆಗುತ್ತದೆ. ನಾನೇ ದ್ವೇಷ ಭಾಷಣ ಮಾಡಿದ್ರು ನನಗೂ ನೋಟೀಸ್ ಜಾರಿ ಆಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಇಡೀ ದೇಶದಲ್ಲಿ ಭ್ರಷ್ಟಾಚಾರ ಇದೆ, ಇಲ್ಲ ಅಂತ ಹೇಳಲು ಸಾಧ್ಯವೇ ಇಲ್ಲ: ದಿನೇಶ್ ಗುಂಡೂರಾವ್

    ಕಾನೂನು ಬಾಹಿರವಾಗಿ ಯಾರು ನಡೆದುಕೊಳ್ಳಬೇಕು. ಅವರ ಭಾಷಣ ಸರಿಯಿಲ್ಲ. ಅವರು ತಪ್ಪಾಗಿ ಭಾಷಣ ಮಾಡಿದ್ರೆ ನಾವೇನು ಮಾಡೋಣ. ನೆಹರು, ಇಂದಿರಾಗಾಂಧಿಯನ್ನ ನಿತ್ಯವೂ ಸೂಲಿಬೆಲೆ ಟೀಕೆ ಮಾಡ್ತಾರೆ. ದ್ವೇಷ ಭಾಷಣದ ಹೇಳಿಕೆ ಕೊಟ್ಟಾಗ ಕ್ರಮ ತೆಗೆದುಕೊಳ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಮೀರ್ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ – ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ: ಈಶ್ವರ್ ಖಂಡ್ರೆ

    ರಾಹುಲ್ ಗಾಂಧಿಯವರು ಯಾವುದೇ ತಪ್ಪು ಮಾಡದೇ ಹೋದ್ರು, ಕೇಸ್ ಬುಕ್ ಮಾಡಿ ಅವರ ಎಂಪಿ ಸ್ಥಾನ ಕಿತ್ತುಕೊಂಡಿದ್ದರು. ರಾಹುಲ್ ಅವರೇನು ದ್ವೇಷ ಭಾಷಣ ಮಾಡಿದ್ರಾ? ಆದರೂ ಅವರ ಮೇಲೆ ಕ್ರಮ ಮಾಡಿದ್ರಿ. ಯಾರು ದ್ವೇಷ ಭಾಷಣ ಮಾಡಬಾರದು. ಸಾಮರಸ್ಯವಾಗಿ ಇರಬೇಕು ಎಂದು ತಿರುಗೇಟು ನೀಡಿದ್ದಾರೆ.

  • ರಾಜಕೀಯ ಮಾತಾಡ್ಬಾರದು ಅಂತ ಯಾವಾಗಿನಿಂದ ಜಾರಿಯಾಗಿದೆ? – ನೋಟಿಸ್‌ಗೆ ಚಕ್ರವರ್ತಿ ಸೂಲಿಬೆಲೆ ಕಿಡಿ

    ರಾಜಕೀಯ ಮಾತಾಡ್ಬಾರದು ಅಂತ ಯಾವಾಗಿನಿಂದ ಜಾರಿಯಾಗಿದೆ? – ನೋಟಿಸ್‌ಗೆ ಚಕ್ರವರ್ತಿ ಸೂಲಿಬೆಲೆ ಕಿಡಿ

    ಉಡುಪಿ: ಕರ್ನಾಟಕದಲ್ಲಿ ರಾಜಕೀಯ ಮಾತಾಡಬಾರದು ಎಂಬುದು ಯಾವಾಗಿನಿಂದ ಜಾರಿಯಾಗಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಕುಂದಾಪುರ (Kundapura) ಪೊಲೀಸರ (Police) ವಿರುದ್ಧ ಕಿಡಿಕಾರಿದ್ದಾರೆ.

    ಕುಂದಾಪುರದಲ್ಲಿ ಚಕ್ರವರ್ತಿ ಸೂಲಿಬೆಲೆಯವರಿಂದ `ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ’ ಎಂಬ ವಿಚಾರವಾಗಿ ಜೂ.20, 21 ಮತ್ತು 22 ರಂದು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಪೊಲೀಸರು, ರಾಜಕೀಯ ಮಾತನಾಡಬಾರದು ಹಾಗೂ ಯಾವುದೇ ನಾಯಕರ ತೇಜೋವಧೆ ಮಾಡಬಾರದು ಎಂದು ಆಯೋಜಕರಿಗೆ ಹಾಗೂ ಸುಲಿಬೆಲೆಯವರಿಗೆ ನೋಟಿಸ್ ನೀಡಿದ್ದಾರೆ. ಇದೀಗ ನೋಟಿಸ್ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಇಂದು 5,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿಯಿಂದ ಚಾಲನೆ

    ಇದು ನನ್ನನ್ನು ಅಘೋಷಿತ ಗಡಿಪಾರು ಮಾಡಿಸುವ ಪ್ರಯತ್ನವಾಗಿದೆ. ನನಗೆ ನೋಟಿಸ್ ಹೊಸತಲ್ಲ, ಬಹಳ ಕಡೆಗಳಲ್ಲಿ ನೋಟಿಸ್ ಕೊಟ್ಟಿದ್ದಾರೆ. ಈ ಬಾರಿ ರಾಜಕೀಯ ಮಾತನಾಡಬಾರದು, ಯಾವುದೇ ನಾಯಕರ ತೇಜೋವಧೆ ಮಾಡಬಾರದು ಎಂದಿದ್ದಾರೆ. ನೆಹರು, ಇಂದಿರಾ, ರಾಜೀವ್ ಕುರಿತಂತೆ ಮಾತನಾಡಬಾರದು ಎಂದು ಅರ್ಥವೇ? ಘಜ್ನಿ, ಘೋರಿ, ಔರಂಗಜೇಬ್ ಮುಂತಾದ ಕ್ರೂರಿಗಳ ತೇಜೋವಧೆ ಮಾಡಬಾರದೆಂದು ಅರ್ಥವೇ? ಕರ್ನಾಟಕದಲ್ಲಿ ರಾಜಕೀಯ ಮಾತನಾಡಬಾರದು ಎನ್ನುವುದು ಎಂದಿನಿಂದ ಜಾರಿಯಾಯಿತು? ಕುಂದಾಪುರ ಪೊಲೀಸರೇ ಮಾಹಿತಿ ಕೊಟ್ಟರೆ ಉತ್ತಮ. ನಾನು ಕುಂದಾಪುರಕ್ಕೆ ಬರಬಾರದೆಂದು ಹೇಳುವವರು ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ ಎಂದಿದ್ದಾರೆ.

    ಕಾರ್ಯಕ್ರಮದ ಆಯೋಜಕ ನಿರಂಜನ್ ಶೆಟ್ಟಿ ಮಾತನಾಡಿ, ಎನ್‍ಎಸ್‍ಯುಐನವರು ಚಕ್ರವರ್ತಿ ಸೂಲಿಬೆಲೆಯವರು ಕುಂದಾಪುರಕ್ಕೆ ಬರಬಾರದು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಭಾಷಣ ಮಾಡಲು ಅವಕಾಶ ನೀಡಬಾರದು ಎಂದಿದ್ದಾರೆ. ಅಖಂಡ ಭಾರತದ ಬಗ್ಗೆ ಉಪನ್ಯಾಸ ನೀಡುವಾಗ ಕಾಶ್ಮೀರದ ವಿಚಾರ ಬರುತ್ತೆ. ಕಾಶ್ಮೀರ ಕಾಂಗ್ರೆಸ್ ಕಾಲದಲ್ಲಿ ಸಮಸ್ಯೆ ಆಗಿ ಉಳಿದಿತ್ತು. ಈ ವಿಚಾರ ಜನರಿಗೆ ತಿಳಿಯಬಾರದು ಅನ್ನೋದು ಇವರ ಉದ್ದೇಶ ಇರಬಹುದು. ಕಾಂಗ್ರೆಸ್ ಬಣ್ಣ ಬಯಲಾಗುತ್ತೆ ಎನ್ನುವ ಕಾರಣಕ್ಕೆ ತಡೆಯಲು ಮುಂದಾಗಿದ್ದಾರೆ. ತಡೆಯಲು ಎಷ್ಟೇ ಪ್ರಯತ್ನಪಟ್ಟರು ಕಾರ್ಯಕ್ರಮ ಮಾಡಿಯೇ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಗುಂಡಿನ ಚಕಮಕಿಯಲ್ಲಿ ಕುಕಿ ಸಮುದಾಯದ ಮಹಿಳೆ ಸಾವು – ಮಣಿಪುರ ಮತ್ತೆ ಉದ್ವಿಗ್ನ

  • ನನ್ನನ್ನು ಕಂಡರೆ ಸರ್ಕಾರಕ್ಕೆ ಭಯ, ಆರ್‌ಸಿಬಿ ಕೇಸ್‌ ತಿರುಗಿಸಲು ಮಾಹಿತಿ ಕೇಳಿರಬಹುದು: ಸೂಲಿಬೆಲೆ

    ನನ್ನನ್ನು ಕಂಡರೆ ಸರ್ಕಾರಕ್ಕೆ ಭಯ, ಆರ್‌ಸಿಬಿ ಕೇಸ್‌ ತಿರುಗಿಸಲು ಮಾಹಿತಿ ಕೇಳಿರಬಹುದು: ಸೂಲಿಬೆಲೆ

    – ನನ್ನ ವಿರುದ್ಧ 5 ಕೇಸ್‌ಗಳು ದಾಖಲು
    – ಸಿದ್ದರಾಮಯ್ಯ ಸಿಎಂ ಆದ ಮೇಲೆ ದಾಖಲಾದ ಕೇಸ್‌

    ಬೆಂಗಳೂರು: ನನ್ನ ಮೇಲೆ ಒಂದೇ ಒಂದು ಕೋಮುದ್ವೇಷದ ಪ್ರಕರಣವಿಲ್ಲ. ಆರ್‌ಸಿಬಿ ಕಾಲ್ತುಳಿತವನ್ನು (RCB Stampede) ಮರೆಸಲು ಜನರ ಮೂಡ್ ಡೈವರ್ಟ್ ಮಾಡಲು ಸರ್ಕಾರ ಹೀಗೆ ಮಾಡುತ್ತಿರಬಹುದು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಹೇಳಿದ್ದಾರೆ.

    ತನ್ನ ವಿರುದ್ಧ ಪೊಲೀಸ್‌ ಇಲಾಖೆ (Police Department) ಪ್ರಕರಣಗಳ ಬಗ್ಗೆ ಮಾಹಿತಿ ಕೇಳಿದ್ದಕ್ಕೆ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ ಅವರು, ಇದು ಕಾಂಗ್ರೆಸ್ (Congress) ಚಾಳಿಯಾಗಿದ್ದು ಹೊಸದೇನು ಅಲ್ಲ. ಸಿದ್ದರಾಮಯ್ಯ ಸರ್ಕಾರ ಹೆದರಿಕೊಂಡಿದ್ದು ಜಿಲ್ಲೆಗಳಿಗೆ ಹೋಗದಂತೆ ನಿರ್ಬಂಧ ಮಾಡಿ ಗೂಂಡಾ ಕಾಯ್ದೆ ಹಾಕಲು ಪ್ರಯತ್ನ ನಡೆಯುತ್ತಿರಬಹುದು ಎಂದು ತಿಳಿಸಿದರು.

     

    ನನ್ನ ಧ್ವನಿಯನ್ನು ಕಡಿಮೆ ಮಾಡಲು ಸರ್ಕಾರ ಈ ರೀತಿ ಮಾಡುತ್ತಿದೆ. ಇದಕ್ಕೆ ನಾನು ಹೆದರುವ ಜನ ನಾವಲ್ಲ. ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ನಾನು ತೊಡಕಾಗಬಹುದು ಎಂಬ ಆತಂಕವಿದೆ. 2022-25 ರ ನನ್ನ ವಿರುದ್ಧದ ಪ್ರಕರಣಗಳ ಬಗ್ಗೆ ಕಷ್ಟ ಪಡುವ ಅಗತ್ಯವಿಲ್ಲ. ನಾನೇ ನನ್ನ ಕೇಸುಗಳ ಮಾಹಿತಿ ಕೊಡುತ್ತೇನೆ. ಕಾಂಗ್ರೆಸ್ ಸರ್ಕಾರ ಅದೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಆಗಿರುವ ಎಫ್‌ಐಆರ್‌ಗಳು ಎಂದು ಹೇಳಿದರು.

    ನನ್ನ ಬಗ್ಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಭಯ ಇದ್ದು ಒಟ್ಟು 5 ಕೇಸ್‌ಗಳು ದಾಖಲಾಗಿವೆ. ಎರಡು ಕೇಸ್ ಶಿವಮೊಗ್ಗದಲ್ಲಿ ದಾಖಲಾದರೆ ಇನ್ನು ಎರಡು ಟ್ವೀಟ್‌ಗೆ ಸಂಬಂಧಿಸಿದಂತೆ ದಾಖಲಾಗಿದೆ. ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದಕ್ಕೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರ ಆಸ್ತಿಗೆ ಸಂಬಂಧಪಟ್ಟಂತೆ ಅರೋಗ್ಯ ಪದ ಬಳಕೆ ಮಾಡಿದ್ದೆ. ಅಯೋಗ್ಯ ಪದಕ್ಕೆ ಜಾತಿ ನಿಂದನೆ ಕೇಸ್ ಹಾಕಿದ್ದು ಇದು ಸುಪ್ರೀಂ ಕೋರ್ಟ್‌ನಲ್ಲಿದೆ ಎಂದರು.

    ನಾನು ಇತಿಹಾಸ ಅಷ್ಟೇ ಮಾತನಾಡುತ್ತೇನೆ. ಮಹಮ್ಮದ್‌  ಘಜ್ನಿ, ಘೋರಿ ಬಗ್ಗೆ ಮಾತನಾಡಿದರೆ ಮುಸ್ಲಿಮರಿಗೆ ಮಾತನಾಡಿದ್ದು ಎಂದರೆ ಹೇಗೆ ಎಂದು ಪ್ರಶ್ನಿಸಿದರು.

  • ಮುಸ್ಲಿಮರು ನಂಬಿಕೆಗೆ ಅರ್ಹರಲ್ಲ – ಪಹಲ್ಗಾಮ್‌ ದಾಳಿ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಮಾತು

    ಮುಸ್ಲಿಮರು ನಂಬಿಕೆಗೆ ಅರ್ಹರಲ್ಲ – ಪಹಲ್ಗಾಮ್‌ ದಾಳಿ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಮಾತು

    ಬೆಂಗಳೂರು: ಕಾಶ್ಮೀರ ಸರಿ ಹೋಗುವ ಜಾಗವಲ್ಲ ಅಂತ ಅನೇಕ ಬಾರಿ ಅನ್ನಿಸಿದೆ. ಮುಸ್ಲಿಮರು ನಂಬಿಕೆಗೆ ಅರ್ಹರಲ್ಲ. ದೇಶದ ಇತರ ಭಾಗದ ಜನರ ದುಡ್ಡಲ್ಲೇ ಕಾಶ್ಮೀರಿ ಮುಸ್ಲಿಮರು ಜೀವನ ಮಾಡುತ್ತಿರೋದು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಹೇಳಿದ್ದಾರೆ.

    ಕಾಶ್ಮೀರದಲ್ಲಿ ಪ್ರವಾಸಿಗರ ಮೇಲಿನ ದಾಳಿ ಕುರಿತು ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ ಅವರು, ಕಾಶ್ಮೀರ ಸರಿ ಹೋಗುವ ಜಾಗವಲ್ಲ ಅಂತ ಅನೇಕ ಬಾರಿ ಅನ್ನಿಸಿದೆ. ಮುಸ್ಲಿಮರು ನಂಬಿಕೆಗೆ ಅರ್ಹರಲ್ಲ. ದೇಶದ ಇತರ ಭಾಗದ ಜನರ ದುಡ್ಡಲ್ಲೇ ಕಾಶ್ಮೀರಿ ಮುಸ್ಲಿಮರು ಜೀವನ ಮಾಡುತ್ತಿರೋದು. ಕೊಲೆ ಮಾಡೋಕೆ ಪಾಕಿಸ್ತಾನದಿಂದಲೇ ಬರಬೇಕಿಲ್ಲ. ಅಲ್ಲಿನ ಸ್ಥಳೀಯರೇ ಹೇಳುವ ಪ್ರಕಾರ ಒಳಗೆಯೇ ಜಮಾತ್ ತಂಡ ಕಟ್ಟುತ್ತಿದೆ ಎಂದು ಬಾಂಬ್‌ ಸಿಡಿಸಿದ್ದಾರೆ. ಇದನ್ನೂ ಓದಿ: Pahalgam Terrorist Attack | ಶ್ರೀನಗರಕ್ಕೆ ಅಮಿತ್ ಶಾ ಭೇಟಿ – ಉನ್ನತ ಅಧಿಕಾರಿಗಳ ಜೊತೆ ಹೈವೋಲ್ಟೇಜ್‌ ಮೀಟಿಂಗ್‌

    ಯಾರಿಂದ ಬದುಕಿದ್ದೀರೋ ಅವರನ್ನೇ ನಾಶ ಮಾಡಿ ಸರ್ಕಾರಕ್ಕೆ ಸಂದೇಶ ಕೊಡುವ ಯತ್ನ ಇದು. ವ್ಯಕ್ತಿ ಮುಸ್ಲಿಂ ಅಲ್ಲ ಅಂತಾ ಕನ್ಪರ್ಮ್ ಮಾಡಿಕೊಂಡು ಕೊಲೆ ಮಾಡಿದ್ದಾರೆ. ಇದು ಹೇಯ ಕೃತ್ಯ. ಮಾನವೀಯ ಇಲ್ಲದ ದುಷ್ಟ ಜನಾಂಗ ಅದು. ಘಟನೆ ಬಳಿಕವು ಯಾವ ಮುಸ್ಲಿಂ ಮಾತಾನಾಡುತ್ತಿಲ್ಲ. ಮುಸ್ಲಿಂ ಮೂಲವಾಧಿಗಳು. ಭಾರತೀಯ ಸಂಸ್ಕೃತಿ, ಕಾನೂನು ಸಂವಿಧಾನ ಯಾವುದನ್ನ ಅವರು ಒಪ್ಪಲ್ಲ. ಪ್ರಪಂಚದ ಟೆರರಿಸ್ಟ್ ಲೀಸ್ಟ್ ಮಾಡಿ 99% ಮುಸ್ಲಿಮರೇ ಇರ್ತಾರೆ. ಪ್ಯಾಂಟ್ ಬಿಚ್ಚಿ ಕತ್ನಾ ಆಗಿದೀಯಾ ಅಂತ ಪರಿಶೀಲಿಸಿ ಕೊಲೆ ಮಾಡ್ತಾರೆ ಅಂದ್ರೆ ಇವರು ಎಷ್ಟು ಕ್ರೂರಿಗಳು ಎಂದು ಕೆಂಡಾಮಂಡಲವಾದರು. ಇದನ್ನೂ ಓದಿ: ʻನಿನ್ನನ್ನು ಕೊಲ್ಲುವುದಿಲ್ಲ, ಹೋಗಿ ಮೋದಿಗೆ ಇದನ್ನ ಹೇಳುʼ – ಶಿವಮೊಗ್ಗದ ಉದ್ಯಮಿ ಪತ್ನಿಗೆ ಉಗ್ರ ಹೇಳಿದ ಮಾತು

    ಸರ್ಕಾರಕ್ಕೆ ಎಚ್ಚರಿಕೆ ಕೊಡಲು ಈ ಕೆಲಸ ಮಾಡಿದ್ದಾರೆ. ಜನರ ಜೀವಕ್ಕೆ ಸರ್ಕಾರ ಗ್ಯಾರೆಂಟಿ ಕೊಡಬೇಕು. ಪ್ರಧಾನಿಗಳು, ಅಮಿತ್ ಶಾ ಕೂಡ ಈ ಬಗ್ಗೆ ಹೇಳಬೇಕು. ಕಾಶ್ಮೀರ ಎಷ್ಟು ಸೇಫ್ ಅಂದ್ರೆ ಕಳೆದ ವರ್ಷಕ್ಕಿಂತ ಈ ವರ್ಷ ಭಯೋತ್ಪಾದನೆ ಚಟುವಟಿಕೆ ಕಡಿಮೆ ಅನ್ನೋದೆ ಸೇಫ್ಟಿನಾ..? ಅಲ್ಲಿನ ಜನರೇ ಉಗ್ರರನ್ನ ಹಿಡಿದು ಬಡಿಯಬೇಕು. ಊಟ ಬೇಕು ಅಂದ್ರೆ ದೇಶದ ಇತರೆ ಜನ ಬೇಕು. ಕಾಶ್ಮೀರ ಜನರ ಒಳ್ಳೇತನ ಕೂಡ ಕಾಡುತ್ತೆ. ವಕ್ಫ್ ವಿಚಾರಕ್ಕೆ ಇದು ಆದ ಕೃತ್ಯದಂತಿಲ್ಲ. ಅಲ್ಲಿನ ಜನ ವಕ್ಫ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಪಾಕಿಸ್ತಾನದಲ್ಲಿನ ಭಯೋತ್ಪಾದಕರನ್ನ ಸೈಲೆಂಟಾಗಿ ಅನೌನ್ ಗನ್ ಮ್ಯಾನ್ ಗಳು ಕೊಲೆ ಮಾಡಿದ್ದಾರೆ. ಇದು ಅಸ್ತಿತ್ವಕ್ಕೆ ಪ್ರಶ್ನೆಯಾಗಿದೆ. ಜಾಗತಿಕ ಮಟ್ಟದಲ್ಲಿ ಕೃತ್ಯದ ಮೂಲಕ ಭಯೋತ್ಪಾದನೆ ಹೆಸರಲ್ಲಿ ಹಣ ಮಾಡೋಕು ಮಾಡಿರಬಹುದು. ಆದರೆ ಶೀಘ್ರ ಭಾರತ ಪ್ರತ್ಯುತ್ತರ ನೀಡಲಿದೆ. ಅಮೇರಿಕದ ಉಪಾಧ್ಯಕ್ಷ ನಮ್ಮ ದೇಶದಲ್ಲೇ ಇದ್ದಾರೆ. ಪಾಕಿಸ್ತಾನಕ್ಕೆ ಅಮೆರಿಕ ಜೊತೆ ಸೇರಿ ಬುದ್ದಿ ಕಲಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: Pahalgam Terrorist Attack – ಉಗ್ರರ ದಾಳಿಗೆ ಮತ್ತೊಬ್ಬ ಕನ್ನಡಿಗ ಬಲಿ

  • ಹಿಂದೂಗಳು ಮತಾಂತರ ಮಾಡುವಂತೆ ಬಹಿರಂಗವಾಗಿ ಕರೆ ಕೊಟ್ಟ ಚಕ್ರವರ್ತಿ ಸೂಲಿಬೆಲೆ

    ಹಿಂದೂಗಳು ಮತಾಂತರ ಮಾಡುವಂತೆ ಬಹಿರಂಗವಾಗಿ ಕರೆ ಕೊಟ್ಟ ಚಕ್ರವರ್ತಿ ಸೂಲಿಬೆಲೆ

    -‌ ಯಾರಾದ್ರೂ ಮತಾಂತರ ಆಗಬೇಕು ಅಂದ್ರೆ ಪ್ರೀತಿಯಿಂದ ಕರೀರಿ
    – ನಮ್ಮ ಹೆಣ್ಮಕ್ಕಳಿಗೆ ಗಂಡು ಮಕ್ಕಳ ಪಕ್ಕ ಕೂರಬೇಡಿ ಅಂದಿಲ್ಲ; ಚಿಂತಕ

    ಮಂಗಳೂರು: ಇತ್ತೀಚೆಗಷ್ಟೇ ʻಹಿಂದೂ ಯುವಕರು ಅನ್ಯ ಸಮಾಜದವರನ್ನು ಪ್ರೀತಿಸಿ ಮದುವೆಯಾಗಿʼ ಎಂದು ಕರೆ ನೀಡಿ ವಿವಾದಕ್ಕೀಡಾಗಿದ್ದ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಉಜಿರೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹಿಂದೂಗಳು ಮತಾಂತರ (Conversion) ಮಾಡುವಂತೆ ಬಹಿರಂಗವಾಗಿ ಕರೆ ಕೊಟ್ಟಿದ್ದಾರೆ.

    ಉಜಿರೆಯ ರಾಮೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಾ ಮಾತನಾಡಿದ ಅವರು, ಹಿಂದೂಗಳು ಮತಾಂತರ ಮಾಡುವಂತೆ ಬಹಿರಂಗ ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಎಡಪಂಥೀಯರು ಹಿಂದೂಗಳನ್ನ ಜಾತಿ, ಮತ, ಪಂಥಗಳ ಹೆಸರಿನಲ್ಲಿ ವಿಭಜಿಸುತ್ತಾರೆ: ಚಕ್ರವರ್ತಿ ಸೂಲಿಬೆಲೆ

    ಇತ್ತೀಚೆಗೆ ಬಜರಂಗದಳದವರು (Bajrang Dal) ಸಂಕಲ್ಪ ತಗೊಂಡಿದ್ದಾರೆ. ಹಿಂದೂಗಳ ಸಂಖ್ಯೆ ಜಾಸ್ತಿ ಮಾಡಲು ಏನು ಐಡಿಯಾ ಇದೆ ಅಂತ ಕೇಳಿದಾಗ ಹೆಚ್ಚು ಮಕ್ಕಳನ್ನು ಮಾಡುವಂತೆ ಮನವಿ ಮಾಡಿಕೊಳ್ತೇವೆ ಅಂತ ಹೇಳಿದ್ರು. ಆದ್ರೆ ನಮ್ಮ ಜನ 2-3 ಮಕ್ಕಳನ್ನ ಮಾಡ್ತಾರೇನ್ರೀ? ನಮ್ಮ ಜನರಿಗೆ ಅವರ ಮಕ್ಕಳನ್ನು ಪಂಚರ್ ಹಾಕಲು ಕಳುಹಿಸಲು ಇಷ್ಟ ಇಲ್ಲ. ಅವರಿಗೆ ನಮ್ಮ ಮಕ್ಕಳು ಚೆನ್ನಾಗಿ ಓದಿ ಡಾಕ್ಟರ್, ಇಂಜಿನಿಯರ್ ಆಗಿ ಮಾಡಬೇಕು ಅನ್ನೋದಷ್ಟೇ ಇದೆ. ಹಾಗಾಗಿ ಓದಿಸೋ ಕೆಪಾಸಿಟಿ ಇಲ್ಲದ ಕಾರಣ ಒಂದು ಸಾಕು, ಎರಡು ಸಾಕು ಅಂತಾರೆ. ಹಾಗಾಗಿ ಸರ್ಕಾರ ನಮಗಾಗಿ ಮಾಡಿರೋ ಕಾನೂನುಗಳನ್ನು ಬಳಸಿಕೊಳ್ಳಿ ಅಂತ ಕರೆ ಕೊಟ್ಟಿದ್ದಾರೆ.

    ಪೊಲೀಸರಿಗೂ ಹೇಳ್ತಾ ಇದೀನಿ, ಇದು ಸರ್ಕಾರ ಕೊಟ್ಟಿರೋ ಕಾನೂನು, ನಮ್ಮದಲ್ಲ. ಬಿಜೆಪಿ ಸರ್ಕಾರ ಇದ್ದಾಗ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿತು, ಹೊಸ ಸರ್ಕಾರ ಬಂದು ಆ ಕಾನೂನು ತೆಗೆದು ಹಾಕಿತು. ಅಂದರೆ ಅದರ ಅರ್ಥ ನೀವೂ ಮತಾಂತರ ಮಾಡಬಹುದು ಅಂತ. ಸರ್ಕಾರವೇ ಧೈರ್ಯವಾಗಿ ಹೇಳಿದೆ, ಮತಾಂತರ ಮಾಡಿ ಅಂತ, ಹಾಗಿದ್ದಾಗ ನಾವು ಮಾಡಬೇಕಲ್ವಾ? ಜಗತ್ತಿನ ಯಾವ ರಾಷ್ಟ್ರದಲ್ಲೂ ಈ ರೀತಿಯ ಪರಿಸ್ಥಿತಿ ಇಲ್ಲ. ಹಾಗಾಗಿ ಮತಾಂತರ ಮಾಡಿ, ಸರ್ಕಾರವೇ ಅಧಿಕೃತವಾಗಿ ಹೇಳಿದೆ, ಮಾಡಲು ನಿಮಗೆ ಕಷ್ಟ ಏನು? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಸೂಲಿಬೆಲೆ ವಿರುದ್ಧ ಉಳ್ಳಾಲದಲ್ಲಿ ಎಫ್‌ಐಆರ್‌ ದಾಖಲು

    ಮತಾಂತರ ಮಾಡೋದು ಕಷ್ಟ ಏನಿಲ್ಲ, ನಾನು ಜಗತ್ತಿನ ಅತ್ಯಂತ ಶ್ರೇಷ್ಠ ಹಿಂದೂ ಧರ್ಮಕ್ಕೆ ಸೇರಿದವನು. ಜಗತ್ತಿನಲ್ಲಿ ಅನೇಕ ಮತ ಪಂಥಗಳಿವೆ, ಆದರೆ ಅವರಿಗೆಲ್ಲಾ ಒಬ್ಬನೇ ದೇವರು. ಒಬ್ಬ ದೇವರಿಗೆ ಸಮಸ್ಯೆಯಾದ್ರೆ ಆ ಧರ್ಮವೇ ಹೋಯಿತು, ಆದರೆ ನಮಗೆ 33 ಕೋಟಿ ದೇವತೆಗಳು. ನೀವು ರಾಮನನ್ನ ಬೈದರೆ ನಾನು ಸೀತೆಯನ್ನ ಹಿಡಿದುಕೊಳ್ತೀನಿ. ನೀವು ಸೀತೆಗೆ ಕಳಂಕ ತರೋ ಪ್ರಯತ್ನ ಪಟ್ಟರೆ ಶ್ರೀಕೃಷ್ಣ ಇದ್ದಾನೆ. ಕೃಷ್ಣನಿಗೆ ಕಳಂಕ ತರೋ ಪ್ರಯತ್ನ ಪಟ್ಟರೆ ನಮಗೆ ಮಂಜುನಾಥಸ್ವಾಮಿ ಇದ್ದಾನೆ. ನೀವು ಮಂಜುನಾಥನಿಗೆ ಕಳಂಕ ತರೋ ಪ್ರಯತ್ನ ಪಟ್ಟರೆ ನನಗೆ ಊರಲ್ಲೊಂದು ದೇವಸ್ಥಾನ ಇದೆ, ಎಲ್ಲಿ ಬೇಕಾದರೂ ಹೋಗ್ತೀನಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಪ್ಲೀಸ್ ಪಾಸ್ ಮಾಡಿ ನನ್ನ ಲವ್ ನಿಮ್ಮ ಕೈಯಲ್ಲಿದೆ – ಉತ್ತರ ಪತ್ರಿಕೆಯಲ್ಲಿ 500 ರೂ. ಇಟ್ಟು ವಿದ್ಯಾರ್ಥಿಯ ವಿಚಿತ್ರ ಬೇಡಿಕೆ

    ಹಾಗಾಗಿ ಅವರಿಗೆ ಹೇಳಿ, ಒಂದೇ ದೇವರು ಒಳ್ಳೆಯದೋ ಅಥವಾ 33 ಕೋಟಿ ದೇವರು ಒಳ್ಳೆಯದೋ? ಅಂಥ. ಮಿತ್ರರೇ ಅವರು ಬಂದು ಹೇಳ್ತಾರೆ, ನಮ್ಮದೊಂದೇ ಪುಸ್ತಕ, ನಿಮ್ಮತ್ರ ಬಹಳ ಪುಸ್ತಕ ಇದೆ ಅಂತ. ಆಗ ನೀವು ಹೇಳಿ, ನಮ್ಮತ್ರ ಲೈಬ್ರಿರಿ ಇದೆ, ಯಾವುದೋ ಒಂದು ಪುಸ್ತಕ ಸುಡೋದ್ರಿಂದ ಹಿಂದೂ ಧರ್ಮ ಸಾಯಲ್ಲ. ನಿಮ್ಮ ಮತ-ಪಂಥಗಳಲ್ಲಿ ಹೆಣ್ಮಕ್ಕಳಿಗೆ ಗೌರವ ಇಲ್ಲ ಅಂತ ಅವರಿಗೆ ಹೇಳಿ. ಇಲ್ಲಿರೋ ಹೆಣ್ಮಕ್ಕಳಿಗೆ ಮುಖ ಮುಚ್ಚಿಕೊಳ್ಳಿ ಅಂತ ಹೇಳಿಲ್ಲ, ಗಂಡು ಮಕ್ಕಳ ಪಕ್ಕದಲ್ಲಿ ಕೂರಬೇಡಿ ಅಂತ ಹೇಳಿಲ್ಲ. ಬರೋರಿಗೆ ಬನ್ನಿ ಅಂತ ಹೇಳಿ, ಬರುವವರನ್ನು ಮುಕ್ತ ಕಂಠದಿಂದ ಸ್ವಾಗತಿಸಿ, ಸಂಖ್ಯೆ ವೃದ್ಧಿಸಲು ಮಕ್ಕಳೇ ಆಗಬೇಕೆಂದಿಲ್ಲ, ನಮ್ಮ ಹೃದಯ ಸ್ವಲ್ಪ ವಿಶಾಲ ಆಗಬೇಕಿದೆ ಎಂದು ಕರೆ ಕೊಟ್ಟಿದ್ದಾರೆ.

    ಸೇವೆ ಮಾಡೋದು ನಿಮ್ಮ ಸಮಾಜ ಮಾತ್ರ ಅಲ್ಲ, ನಮ್ಮ ಸಮಾಜ ಮಾಡೋ ಸೇವೆ ಯಾವ ಧರ್ಮ ಮಾಡಿದೆ? ಇಂಥ ಸೇವೆ ಮಾಡೋ ಸಮಾಜ ಮತ್ತೊಂದಿಲ್ಲ ಅಂತ ಹೇಳಿ ನಮ್ಮ ಸಮಾಜಕ್ಕೆ ಕರೆಯಿರಿ. ನಮ್ಮ ಸಮಾಜದ ಎಲ್ಲಾ ಪ್ರಮುಖರು ಈ ಬಗ್ಗೆ ಒಂದು ಘೋಷಣೆ ಹೊರಡಿಸಿ. ಯಾರಾದರೂ ನಮಗೆ ಮತಾಂತರ ಆಗಬೇಕು ಅಂದ್ರೆ ನಮ್ಮ ಸಮಾಜ ಅವರನ್ನ ಪ್ರೀತಿಯಿಂದ ಸ್ವಾಗತಿಸುತ್ತೆ ಬನ್ನಿ ಅಂತ ಕರೀರಿ. ಸಮಾಜದ ಸ್ವಾಮೀಜಿಗಳ ಮೂಲಕ ಘೋಷಣೆ ಕೊಡಲಿ, ಯಾರಾದ್ರೂ ಬರ್ತೀರ ಅಂತಾದರೆ ಜಾತಿ ಕೇಳದೇ ಕರೆಯಿರಿ, ನೀವು ಒಂದು ಸಲ ಮುಕ್ತ ಕಂಠದಿಂದ ಕರೀರಿ, ಎಷ್ಟು ಜನ ಸೈಲೆಂಟಾಗಿ ಸೇರಿಕೊಳ್ತಾರೆ ನೋಡಿ ಎಂದು ಬಹಿರಂಗವಾಗಿಯೇ ಮತಾಂತರಕ್ಕೆ ಕರೆ ಕೊಟ್ಟಿದ್ದಾರೆ.

    ಜನಸಂಖ್ಯೆ ಜಾಸ್ತಿ ಮಾಡಲು ಸರ್ಕಾರವೇ ಕೊಟ್ಟ ಇಂಥ ಕಾನೂನುಗಳು ನಮ್ಮಲ್ಲಿವೆ. ಹಾಗಾಗಿ ಸಂಖ್ಯೆ ವಿಸ್ತರಿಸಲು ಈ ರೀತಿಯಲ್ಲಿ ನಾವು ಕೆಲಸ ಮಾಡಬೇಕಿದೆ. ಮುಂದಿನ ಪೀಳಿಗೆಗೆ ಭಾರತ ಬಿಟ್ಟು ಕೊಟ್ಟು ಹೋಗುವಾಗ ಅದಕ್ಕೆ ಸ್ವಲ್ಪ ಪಾಕಿಸ್ತಾನ, ಬಾಂಗ್ಲಾದೇಶ, ಅಗತ್ಯ ಬಿದ್ದರೆ ನೇಪಾಳವನ್ನೂ ಸೇರಿಸೋಣ ಎಂದು ಹೇಳಿದ್ದಾರೆ.