Tag: ಚಕ್ರವರ್ತಿ ಚಂದ್ರಚೂಡ್

  • ಶಿರಬಾಗಿ ಕ್ಷಮೆ ಕೇಳಿದ ಚಕ್ರವರ್ತಿ

    ಶಿರಬಾಗಿ ಕ್ಷಮೆ ಕೇಳಿದ ಚಕ್ರವರ್ತಿ

    ಪ್ರಿಯಾಂಕ ತಿಮ್ಮೇಶ್ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಅಶ್ಲೀಲ ಕೈ ಸನ್ನೆ ಮಾಡಿ ವೀಕ್ಷಕರ ಆಕ್ರೋಶಕ್ಕೆ ಗುರಿಯಾಗಿದ್ದ ಚಕ್ರವರ್ತಿ ಚಂದ್ರಚೂಡ್ ಅವರು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

    ಪ್ರಿಯಾಂಕ ತಿಮ್ಮೇಶ್ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗುವಾಗ ಚಕ್ರವರ್ತಿ ತೋರಿಸಿದ ಅಶ್ಲೀಲ ಸನ್ನೆಯ ಕುರಿತು ಸಾಕಷ್ಟು ಚರ್ಚೆಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಅವರ ವರ್ತನೆ ಮತ್ತು ಕ್ಷಮೆ ಕೇಳದ ಬಗ್ಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ಸುದೀಪ್ ಅವರ ಶೋದಲ್ಲೂ ಅವರು ಕ್ಷಮೆ ಕೇಳದ ಬಗ್ಗೆ ಚರ್ಚೆ ಆಗಿತ್ತು. ಈಗ ಚಕ್ರವರ್ತಿ ಕ್ಷಮೆ ಕೇಳಿದ್ದಾರೆ.

    ಪ್ರೀತಿಯಿಂದ ಅಭಿಮಾನದಿಂದ ನೋಡಿಕೊಡ ಹುಡುಗಿಗೆ ನಾನು ಆ ಕೈ ಸನ್ನೆ ಮಾಡಬಾರದಿತ್ತು. ಅದು ನನ್ನ ಗುಣವಲ್ಲ. ಸ್ವಲ್ಪ ಬೇಗ ಎಮೋಷನಲ್ ಆಗುತ್ತೇನೆ. ಸಿಟ್ಟಿಗೆ ಆ ರೀತಿ ಮಾಡಿದ್ದೇನೆ ಹೊರತಾಗಿ ಯಾವುದೇ ಉದ್ದೇಶವಿಲ್ಲ. ಆ ಕೈ ಸನ್ನೆಗೆ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಎಂದು ಬಿಗ್‍ಬಾಸ್ ಕ್ಯಾಮೆರಾ ಮುಂದೆ ಬಂದು ಕ್ಷಮೆಯಾಚಿಸಿದ್ದಾರೆ.

    ಅದು ತುಂಬಾ ಕೆಟ್ಟದಾಗಿ ಕಾಣಿಸಿತ್ತು ಮತ್ತು ಒಬ್ಬ ಹೆಣ್ಣು ಮಗಳಿಗೆ ಆ ರೀತಿ ಕೈ ಸನ್ನೆ ಮಾಡಬಾರದಿತ್ತು ಎಂದು ನನಗೆ ಅನಿಸಿದೆ. ಅದು ಯಾವುದೇ ಉದ್ದೇಶವಿಟ್ಟು ಮಾಡಿಲ್ಲ, ಸಿಟ್ಟಿನಲ್ಲಿ ಆ ರೀತಿ ಮಾಡಿದೆ ಅದಕ್ಕೆ ನಾನು ಶಿರಬಾಗಿ ಕ್ಷಮೆಯನ್ನು ಕೇಳಿಕೊಳ್ಳುತ್ತೇನೆ ದಯವಿಟ್ಟು ನನನ್ನು ಕ್ಷಮಿಸಿ ಎಂದಿದ್ದಾರೆ.  ಇದನ್ನೂ ಓದಿ : ಇವತ್ತು ಹೋಗಲ್ಲ, ಈ ವಾರ ಹೋಗ್ತಾರೆ- ಬಿಗ್ ಬಾಸ್ ಎಲಿಮಿನೇಶನ್ ಟ್ವಿಸ್ಟ್

    ವಾರದ ಕತೆ ಕಿಚ್ಚ ಜೊತೆಯಲ್ಲಿ ಮಾತನಾಡುವಾಗ ಚಕ್ರವರ್ತಿಯವರ ಬೆರಳಿನ ವಿಚಾರದ ಕುರಿತು ಪ್ರಶ್ನಿಸಿದ್ದರು. ಅಲ್ಲದೆ ಅದರ ಅರ್ಥ ಏನು ಎಂದು ಹೇಳುವವರೆಗೆ ಬಿಡುವುದಿಲ್ಲ ಎಂದಿದ್ದರು. ನಮ್ಮ ಕೈಯಲ್ಲಿನ ಐದು ಬೆರಳುಗಳ ಮೂಲಕ ಸನ್ನೆ ಮಾಡಬಹುದು ಪ್ರತಿ ಬೆರಳಿನ ಸನ್ನೆಗೂ ಅರ್ಥವಿದೆ ಎಂದು ಹೇಳಿದ ಸುದೀಪ್, ನೀವು ಮಾಡಿದ ಸನ್ನೆಯ ಅರ್ಥವೇನು ಎಂದು ಚಕ್ರವರ್ತಿಯವರನ್ನು ಕೇಳಿದ್ದರು.

    ಇದಕ್ಕೆ ಆರಂಭದಲ್ಲಿ ಉತ್ತರಿಸಿದ ಚಕ್ರವರ್ತಿ ಚಂದ್ರಚೂಡ್, ಸಿಟ್ಟು ಬಂತು ಹೀಗಾಗಿ ತೋರಿಸಿಬಿಟ್ಟೆ ಎನ್ನುತ್ತಾರೆ. ಬಳಿಕ ಮತ್ತೊಮ್ಮೆ ಕೇಳಿದಾಗ ಐದು ಬೆರಳುಗಳು ಪಂಚಭೂತಗಳ ಸಂಕೇತ, ಮಧ್ಯದ ಬೆರಳು ಸಮತೋಲನದ ಸಂಕೇತ, ಕಷ್ಟ, ಸುಖ ಎಲ್ಲವನ್ನೂ ಸಮತೋಲನವಾಗಿ ಸವೀಕರಿಸಲಿ ಎಂದು ಪ್ರಿಯಾಂಕಾ ಅವರಿಗೆ ಆ ಬೆರಳು ತೋರಿಸಿದೆ ಎನ್ನುತ್ತಾರೆ. ತಕ್ಷಣವೇ ಸುದೀಪ್ ಕೋಪಗೊಳ್ಳುತ್ತಾರೆ, ಮತ್ತೆ ನಿಧಾನವಾಗಿ ಪ್ರಶ್ನಿಸಿ, ಸಮತೋಲನದ ಬೆರಳು ಆಗಿದ್ದರೆ, ಹೇಗೆ ಅಪರಾಧವಾಗುತ್ತದೆ ಎಂದು ಕೇಳಿದ್ದರು.

    ಅದು ಅಪರಾಧವಾಗುತ್ತದೆ, ಆ ಸನ್ನೆ ಮಾಡುವುದು ಕಾನೂನಿನ ಪ್ರಕಾರ ಸಹ ತಪ್ಪು ಎನ್ನುತ್ತಾರೆ. ಆಗ ಚಕ್ರವರ್ತಿ ಹೌದು ಸರ್ ಕೆಟ್ಟ ಸನ್ನೆ ಎನ್ನುತ್ತಾರೆ. ಅದು ಕೆಟ್ಟ ಸನ್ನೆಯೇ, ಹೊರಗಡೆ ಈ ರೀತಿ ತೋರಿಸಿದರೆ ಜಗಳವಾಗುತ್ತದೆ. ಅದೂ ಒಂದು ಹುಡುಗಿಗೆ ಅದನ್ನು ನೀವು ತೋರಿಸುವುದು ನಾಟ್ ಒಕೆ ಸರ್ ಎಂದು ಸುದೀಪ್ ಹೇಳಿದ್ದರು. ಆಗ ಎಸ್ ಸರ್ ಐ ಅಗ್ರೀ ಸರ್, ಆ ಕ್ಷಣ ಸಿಟ್ಟು ಬಂದು ಮಾಡಿದೆ. ಅಲ್ಲದೆ ಕನ್ನಡಿಯಲ್ಲಿ ಮತ್ತೆ ನೋಡಿಕೊಂಡಿದ್ದು, ಯಾವ ಮಟ್ಟಕ್ಕೆ ಕಾಣುತ್ತಿದೆ, ಏನೋ ಮಾಡಿಬಿಟ್ನಲ್ಲ ಎಂದು ನನಗೆ ನಾನೇ ನೋಡಿಕೊಂಡೆ ಎಂದು ಚಕ್ರವರ್ತಿ ಹೇಳಿದ್ದರು.

  • ಸುದೀಪ್ ಸರ್, ನೀವು ನನ್ನನ್ನು ಸ್ತ್ರೀ ನಿಂದಕನಂತೆ ಬಿಂಬಿಸಿದ್ದೀರಿ: ಚಕ್ರವರ್ತಿ ಬೇಸರ

    ಸುದೀಪ್ ಸರ್, ನೀವು ನನ್ನನ್ನು ಸ್ತ್ರೀ ನಿಂದಕನಂತೆ ಬಿಂಬಿಸಿದ್ದೀರಿ: ಚಕ್ರವರ್ತಿ ಬೇಸರ

    ಬಿಗ್‍ಬಾಸ್ ಮನೆಯಲ್ಲಿ ಕೆಲವು ನಿಯಮಗಳಿಗೆ ಅದರ ವಿರುದ್ಧವಾಗಿ ಯಾರು ನಡೆದುಕೊಂಡರೂ ಸುದೀಪ್ ಆ ಕುರಿತಾಗಿ ವಾರಂತ್ಯದಲ್ಲಿ ಮಾತನಾಡಿ ಕೆಲವು ಪರಿಹಾರ, ಮತ್ತು ಬುದ್ಧಿವಾದವನ್ನು ಹೇಳುವ ಕೆಲಸವನ್ನು ಮಾಡುತ್ತಾರೆ. ಆದರೆ ಈ ವಾರ ಸುದೀಪ್ ವಿರುದ್ಧವಾಗಿ ಚಕ್ರವರ್ತಿ ತಿರುಗಿ ಬಿದ್ದಿದ್ದಾರೆ. ತಪ್ಪು ಮಾಡಿ ನನ್ನದಲ್ಲ ಎನ್ನುವ ರೀತಿಯಲ್ಲಿ ಸುದೀಪ್ ಬಳಿ ಚಕ್ರವರ್ತಿ ಮಾತನಾಡಿದ್ದಾರೆ.

     

    ಬಿಗ್‍ಬಾಸ್ ಮನೆಯಲ್ಲಿ ಪದೇಪದೇ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನನ್ನನ್ನು ಸುದೀಪ್ ಸ್ತ್ರೀ ಪೀಡಕ ಎಂಬಂತೆ ಬಿಂಬಿಸಿದ್ದಾರೆ. ನಾನು ಟಾರ್ಗೆಟ್ ಆಗುತ್ತಿದ್ದೇನೆ ಎಂದು ಬ್ರೇಕ್ ಸಂದರ್ಭದಲ್ಲಿ ಚಕ್ರವರ್ತಿ ಸ್ಪರ್ಧಿಗಳ ಜೊತೆ ಅಭಿಪ್ರಾಯ ಹಂಚಿಕೊಂಡರು. ಪ್ರತಿ ವಾರವೂ ನನಗೊಂದು ಎಪಿಸೋಡ್ ಮೀಸಲಿಡುತ್ತಿದ್ದೀರಿ. ನೀವು ನನ್ನನ್ನು ಸ್ತ್ರೀ ನಿಂದಕ ಎಂಬಂತೆ ಮಾಡಿದ್ದೀರಿ. ಅಂತೂ ಈಗ ನಾಲ್ಕು ಸಾಲು ಒಳ್ಳೆಯದನ್ನು ಹೇಳಿದ್ದೀರಿ. ಸಾಧು-ಸಂತರ ಮಧ್ಯೆ ನಾನು ಕ್ರಿಮಿನಲ್ ಆಗಿದ್ದೇನೆ. ನಿಮ್ಮ ಮೇಲೆ ನನಗೆ ಬೇಸರವಿದೆ. ನಾನು ಆಡುವ ಆಟ, ಕವನಗಳನ್ನು ನೀವು ಹೊಗಳುವುದೇ ಇಲ್ಲ. ಅಪರೂಪಕ್ಕೆ ನನ್ನನ್ನು ಹೊಗಳುತ್ತೀರಿ ಎಂದು ಚಕ್ರವರ್ತಿ ದೂರಿದರು.

    ಚಕ್ರವರ್ತಿ ಮಾತಿಗೆ ಸುದೀಪ್, ನೀವು ಹೇಳಿರೋದನ್ನೇ, ಮಾಡಿದ್ದನ್ನೇ ನಾನು ಹೇಳಿದ್ದೀನಿ ಅಂತ ಸಖತ್ ಖಡಕ್ ಆಗಿ ಉತ್ತರ ಕೊಟ್ಟರು. ನಂದೇನಾದರೂ ಇದೆಯಾ ಒಳ್ಳೆಯದನ್ನೂ ಹೇಳಿದ್ದೀನಿ. ನಾನು ನಿಮ್ಮ ಜ್ಞಾನ, ತಿಳುವಳಿಕೆ ಬಗ್ಗೆ ನನಗೆ ಗೌರವವಿದೆ, ಆ ವಿಚಾರದಲ್ಲಿ ನಾನು ನಿಮ್ಮ ಅಭಿಮಾನಿ. ಇಷ್ಟು ಸೀಸನ್‍ಗಳಲ್ಲಿ ನಾನು ಯಾರನ್ನೂ ಅಷ್ಟಾಗಿ ಹೊಗಳಿಲ್ಲ. ನಿಮ್ಮನ್ನು ಸಾಕಷ್ಟು ಬಾರಿ ಹೊಗಳಿದ್ದೇನೆ. ಅದನ್ನು ಸಾಬೀತುಪಡಿಸಲು ಕ್ಲಿಪ್ಪಿಂಗ್ ತೋರಿಸಬೇಕಾ? ಈ ಮನೆಯಲ್ಲಿ ಎಷ್ಟು ಜನಕ್ಕೆ ಇದನ್ನು ಹೇಳಿದ್ದೇನೆ. ನಿಮ್ಮಲ್ಲಿ ಒಳ್ಳೆತನ ಇದೆ. ಈ ವಾರ ಕೋಪ ಕಂಟ್ರೋಲ್ ಮಾಡಿಕೊಂಡ್ರಿ ಅದನ್ನು ಹೇಳ್ತಾ ಇದ್ದೀನಿ. ನೀವು ಕೊಟ್ಟಿರೋ ಬೇಜಾರನ್ನು ಬೇಜಾರಿಂದಲೇ ಹೇಳದೇ ತುಪ್ಪ ಹಚ್ಚಿ ಹೇಳಲಾ? ನಿಮ್ಮ ವೇದಿಕೆಯಿಂದ ನಾಲ್ಕು ಜನ ಕಲಿಯಲಿ ಅನ್ನೋದು ನನ್ನ ಅರ್ಥ ಎಂದು ಸುದೀಪ್ ತಿರುಗೇಟು ನೀಡಿದರು.

  • ಪ್ರಿಯಾಂಕಾಗೆ ಅಶ್ಲೀಲ ಸನ್ನೆ – ಚಕ್ರವರ್ತಿ ವಿರುದ್ಧ ವೀಕ್ಷಕರು ಗರಂ

    ಪ್ರಿಯಾಂಕಾಗೆ ಅಶ್ಲೀಲ ಸನ್ನೆ – ಚಕ್ರವರ್ತಿ ವಿರುದ್ಧ ವೀಕ್ಷಕರು ಗರಂ

    ಬಿಗ್‍ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಲ್ಲಿ ಚಕ್ರವರ್ತಿ ಚಂದ್ರಚೂಡ್ ಕೊಂಚ ಡಿಫರೆಂಟ್ ಆಗಿದ್ದಾರೆ. ಆದರೆ ಈ ಬಾರಿ ಚಕ್ರವರ್ತಿ ಮಾಡಿರುವ ಒಂದು ಸನ್ನೆಯಿಂದ ಬಿಗ್‍ಬಾಸ್ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಬಿಗ್‍ಬಾಸ್‍ನಲ್ಲಿ ಚಕ್ರವರ್ತಿ ಚಂದ್ರಚೂಡ್ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಅವರು ಅಶ್ಲೀಲ ಪದ ಬಳಕೆ ಮಾಡಿದ್ದರಿಂದ ಬೀಪ್ ಸೌಂಡ್ ಹಾಕಲಾಗಿತ್ತು. ಇದಕ್ಕೆ ಕಿಚ್ಚ ಸುದೀಪ್ ಅಸಮಾಧಾನ ಹೊರ ಹಾಕಿದ್ದರು. ಚಕ್ರವರ್ತಿ ಅವರೇ ನಿಮಗೆ ಇರುವ ಜ್ಞಾನಕ್ಕೆ ಇದು ಸಲ್ಲುವುದಿಲ್ಲ ಎಂದಿದ್ದರು. ಅದಾದ ನಂತರದಲ್ಲಿ ನಾನು ತಪ್ಪನ್ನು ತಿದ್ದಿಕೊಳ್ಳುತ್ತೇನೆ ಎಂದಿದ್ದರು ಚಕ್ರವರ್ತಿ. ಇದಾದ ಒಂದೇ ವಾರದಲ್ಲಿ ಅವರು ಮತ್ತೆ ಅದೇ ತಪ್ಪನ್ನು ಮಾಡಿದ್ದಾರೆ.

    ಪ್ರಿಯಾಂಕಾ ಹಾಗೂ ಚಕ್ರವರ್ತಿ ನಡುವೆ ಒಂದು ಗೆಳೆತನ ಬೆಳೆದಿತ್ತು. ಆದರೆ ಬಿಗ್‍ಬಾಸ್ ಮನೆಯಲ್ಲಿ ಅದು ದಿಕ್ಕು ಬದಲಿಸಿಕೊಂಡಿತ್ತು. ಪ್ರಿಯಾಂಕಾ, ಶಮಂತ್ ಅನ್ಯೋನ್ಯವಾಗಿದ್ದಾರೆ ಎನ್ನುವುದೇ ಚಕ್ರವರ್ತಿ ಬೇಸರಕ್ಕೆ ಕಾರಣವಾಗಿತ್ತು. ಈ ಘಟನೆ ನಂತರದಲ್ಲಿ ಇಬ್ಬರೂ ಒಬ್ಬರ ಮುಖ ಒಬ್ಬರು ನೋಡುತ್ತಿರಲಿಲ್ಲ. ಈ ಜಗಳ ವಿಚಾರ ಸುದೀಪ್ ಮುಂದೆ ಕೂಡಾ ಪ್ರಸ್ತಾಪವಾಗಿತ್ತು. ಸುದೀಪ್ ಅವರು ಇಬ್ಬರಿಗೂ ಬುದ್ಧವಾದವನ್ನು ಹೇಳಿ ರಾಜಿ ಮಾಡಿಸಿದ್ದರು. ಆದರೆ ಮತ್ತೆ ಅದೇ ಮುನಿಸು, ಜಗಳ ಮತ್ತೆ ಮಂದುವರಿದಿತ್ತು.

    ಪ್ರಿಯಾಂಕಾ ತಿಮ್ಮೇಶ್ ಔಟ್ ಆಗಿದ್ದು ದೊಡ್ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಅವರಿಗೆ ಬಿಗ್‍ಬಾಸ್ ವಿಶೇಷ ಅಧಿಕಾರ ಒಂದನ್ನು ನೀಡಿದ್ದರು. ಅದರನ್ವಯ ಒಬ್ಬರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಬೇಕು. ಆಗ ಪ್ರಿಯಾಂಕಾ ತೆಗೆದುಕೊಂಡ ಹೆಸರು ಚಕ್ರವರ್ತಿ ಚಂದ್ರಚೂಡ್ ಅವರದ್ದು. ಇದು ಚಕ್ರವರ್ತಿ ಚಂದ್ರಚೂಡ್‍ಗೆ ಅಸಮಾಧಾನ ತರಿಸಿದೆ. ಹೀಗಾಗಿ ಪ್ರಿಯಾಂಕಾಗೆ ಅವರು ಮಧ್ಯದ ಬೆರಳು ತೋರಿಸಿ ಅಶ್ಲೀಲ ಸನ್ನೆ ಮಾಡಿದ್ದಾರೆ.

    ಚಕ್ರವರ್ತಿ ಚಂದ್ರಚೂಡ್ ಎಷ್ಟೇ ಹೇಳಿದರೂ ತಮ್ಮ ತಪ್ಪನ್ನು ತಿದ್ದಿಕೊಳ್ಳುವಂತೆ ಕಾಣುತ್ತಿಲ್ಲ. ಪದೇ ಪದೇ ಬಿಗ್‍ಬಾಸ್ ಚೌಕಟ್ಟನ್ನು ಮೀರಿ ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದಾರೆ. ಆದರೆ ಅವರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಈ ಬಾರಿ ಬಿಗ್‍ಬಾಸ್ ನಿಯಮವನ್ನು ಮತ್ತೆ ಮೀರಿದ್ದಾರೆ. ಅಷ್ಟೇ ಅಲ್ಲ ವೀಕ್ಷಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಈ ವಾರದ ವೀಕೆಂಡ್‍ನಲ್ಲಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ.

  • ಚಕ್ರವರ್ತಿಗೆ ಶಾಕ್ ಕೊಟ್ಟ ಪ್ರಿಯಾಂಕಾ

    ಚಕ್ರವರ್ತಿಗೆ ಶಾಕ್ ಕೊಟ್ಟ ಪ್ರಿಯಾಂಕಾ

    ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಪ್ರಿಯಾಂಕಾ ತಿಮ್ಮೇಶ್ ಬರಹಗಾರ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಕೊನೆಯಲ್ಲಿ ಶಾಕ್ ಕೊಟ್ಟಿದ್ದಾರೆ.

    ಪ್ರಿಯಾಂಕಾ ತಿಮ್ಮೇಶ್ ಮತ್ತು ಚಕ್ರವರ್ತಿ ಚಂದ್ರಚೂಡ್ ಅವರು ಮಧ್ಯ ಭಾಗದಲ್ಲಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದರು. ಹೀಗಾಗಿ ಇವರಿಬ್ಬರ ಮಧ್ಯೆ ಆರಂಭದಲ್ಲಿ ಉತ್ತಮವಾಗಿ ಮಾತುಕತೆ ನಡೆಯುತ್ತಿತ್ತು.

    ನಂತರದ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಬಂದಿತ್ತು. ಈ ಮಧ್ಯೆ ಬಿಗ್ ಬಾಸ್ ಸ್ಥಗಿತಗೊಂಡು ಆರಂಭಗೊಂಡ ವಾರದಲ್ಲೂ ಇಬ್ಬರ ನಡುವೆ ಮಾತುಕತೆ ನಡೆಯಿತಿತ್ತು. ಆದರೆ ನಂತರದ ದಿನಗಳಲ್ಲಿ ಚಕ್ರವರ್ತಿ ಅವರಿಂದ ಪ್ರಿಯಾಂಕಾ ತಿಮ್ಮೇಶ್ ಅಂತರ ಕಾಯ್ದುಕೊಂಡು ದಿವ್ಯಾ ಸುರೇಶ್, ಶಮಂತ್, ಶುಭ ಪೂಂಜಾ ಅವರ ಜೊತೆ ಹೆಚ್ಚು ಬೆರೆಯುತ್ತಿದ್ದರು.

    ಎರಡನೇ ಇನ್ನಿಂಗ್ಸ್‍ನ ಮೂರನೇ ವಾರದಲ್ಲಿ ಚಕ್ರವರ್ತಿ ಮತ್ತು ಪ್ರಿಯಾಂಕ ತಿಮ್ಮೇಶ್ ಮಧ್ಯೆ ಜಾಸ್ತಿ ಮಾತುಕತೆ ನಡೆದಿರಲಿಲ್ಲ. ಆದರೆ ಚಕ್ರವರ್ತಿಯವರು ನೇರವಾಗಿ ನನ್ನ ಹೆಸರು ತೆಗೆಯದೇ ಟಾಂಗ್ ನೀಡುತ್ತಿದ್ದಾರೆ ಎಂದು ಪ್ರಿಯಾಂಕಾ ಇತರೇ ಸ್ಪರ್ಧಿಗಳ ಜೊತೆ ಹೇಳುತ್ತಿದ್ದರು. ಇದನ್ನೂ ಓದಿ : ವೈಷ್ಣವಿ ಬಗ್ಗೆ ಸುದೀಪ್‍ಗಿದ್ದ ಅಭಿಪ್ರಾಯ ಚೇಂಜ್

    ಮೊದಲೇ ಚಕ್ರವರ್ತಿ ಅವರು ಪ್ರಿಯಾಂಕಾ ಬಗ್ಗೆ ಅಸಮಾಧಾನಗೊಂಡಿದ್ದರು. ಇದರ ಜೊತೆ ಕಳಪೆಗೆ ನೀಡಿದ ಕಾರಣ ಸರಿಯಿಲ್ಲ ಎಂದು ಹೇಳಿ ಪ್ರಿಯಾಂಕಾ ವಿರುದ್ಧ ಜೈಲಿನಲ್ಲೂ ಪ್ರತಿಭಟನೆ ಮಾಡಿದ್ದರು.

    ಅರವಿಂದ್ ಟೀಂ ಸೋತ ಹಿನ್ನೆಲೆಯಲ್ಲಿ ನಾಯಕ ಅರವಿಂದ್ ಬಿಟ್ಟು ವೈಷ್ಣವಿ, ಪ್ರಶಾಂತ್, ಶುಭಾ ಪುಂಜಾ, ಪ್ರಿಯಾಂಕಾ ತಿಮ್ಮೇಶ್ ನಾಮಿನೆಟ್ ಆಗಿದ್ದರು. ಹೀಗಾಗಿ ಕಡಿಮೆ ವೋಟ್ ಬಿದ್ದ ಹಿನ್ನೆಲೆಯಲ್ಲಿ ಪ್ರಿಯಾಂಕಾ ಮನೆಯಿಂದ ಔಟ್ ಆಗಿದ್ದಾರೆ.

    ಈ ಮೊದಲು ನಿಧಿ ಔಟಾದಾಗ ಅರವಿಂದ್ ಅವರನ್ನು ನಾಮಿನೆಟ್ ಮಾಡಿದ್ದರು. ನಂತ್ರ ರಘು ಶಮಂತ್ ಅವರನ್ನು ಸೇವ್ ಮಾಡಿದ್ದರು. ಈ ಬಾರಿ ಪ್ರಿಯಾಂಕಾ ಅವರು ನೇರವಾಗಿ ಚಂದ್ರಚೂಡ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಈ ಮೂಲಕ ಕೊನೆಗೆ ಮನೆಯಿಂದ ತೆರಳುವಾಗ ಪ್ರಿಯಾಂಕಾ ಶಾಕ್ ನೀಡಿದ್ದಾರೆ.

  • ಬಿಗ್‍ಮನೆಯಲ್ಲಿ ಹಾರಿದ ಕ್ರಾಂತಿಯ ಬಾವುಟ- ಕಾವೇರಿತು ಚಕ್ರವರ್ತಿ ಪ್ರತಿಭಟನೆ

    ಬಿಗ್‍ಮನೆಯಲ್ಲಿ ಹಾರಿದ ಕ್ರಾಂತಿಯ ಬಾವುಟ- ಕಾವೇರಿತು ಚಕ್ರವರ್ತಿ ಪ್ರತಿಭಟನೆ

    ಬಿಗ್‍ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್‍ಗೆ ಕಳಪೆ ಪಟ್ಟ ಕೊಟ್ಟು ಜೈಲಿಗೆ ಕಳಿಸಲಾಗಿದೆ. ತನಗೆ ಕಳಪೆ ಪಟ್ಟ ಕೊಡಲು ಸ್ಪರ್ಧಿಗಳು ನೀಡಿದ ಕಾರಣ ಸರಿ ಇಲ್ಲ ಎಂದು ಪ್ರತಿಭಟನೆಯನ್ನು ಆರಂಭಿಸಿದ್ದಾರೆ.

    ಬಿಗ್‍ಬಾಸ್ ಆಟದ ನಿಯಮದ ಪ್ರಕಾರ ಪ್ರತಿವಾರದ ಆಟ ಮತ್ತು ಮನೆಯಲ್ಲಿ ಹೇಗೆ ಇರುತ್ತಾರೆ ಎಂಬುದನ್ನು ಗಣನೆಗೆ ತೆಗೆದುಕೊಂಡು ಸ್ಪರ್ಧಿಗಳು ಒಮ್ಮತದಿಂದ ಒಬ್ಬರನ್ನು ಕಳಪೆ ಎಂದು ಸೂಚಿಸುತ್ತಾರೆ. ಅವರು ಬಿಗ್‍ಬಾಸ್ ಮುಂದಿನ ಆದೇಶದವರೆಗೆ ಜೈಲಿನಲ್ಲಿದ್ದು, ಶಿಕ್ಷೆಯನ್ನು ಅನುಭವಿಸಬೇಕು. ಸೆಕೆಂಡ್ ಇನ್ನಿಂಗ್ಸ್‍ನಲ್ಲಿ 2ನೇ ವಾರ ಕಳಪೆ ಪಟ್ಟಿಯನ್ನು ಹೊತ್ತು ಜೈಲು ಸೇರಿರುವ ಚಕ್ರವರ್ತಿ ಚಂದ್ರಚೂಡ್ ಬಿಗ್‍ಬಾಸ್ ಮನೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.

    ಚಕ್ರವರ್ತಿಯನ್ನು ಪ್ರಿಯಾಂಕಾ ತಿಮ್ಮೇಶ್, ಶಮಂತ್ ಬ್ರೊ ಗೌಡ, ಪ್ರಶಾಂತ್ ಸಂಬರ್ಗಿ, ಶುಭಾ ಪೂಂಜಾ ಸೇರಿ ಐವರು ಕಳಪೆ ಪಟ್ಟಕ್ಕೆ ನಾಮಿನೇಟ್ ಮಾಡಿದ್ದಾರೆ. ಮನನೊಂದಿರುವ ನಾನು ತರಕಾರಿ ಕಟ್ ಮಾಡೋದಿಲ್ಲ, ಸಾಂಬಾರ್ ಕಾಗೆ, ಜೊಳ್ಳು ಮಳ್ಳು, ಅವಕಾಶವಾದಿಗಳು, ಸುಬ್ಬಿ, ಒಟ್ಟಿಗೆ ಅನ್ನ ತಿಂದು ದ್ರೋಹ ಮಾಡಿದ ಸ್ನೇಹಿತರು ಎಂದು ಹೀಗೆ ಬರೆದು ಜೈಲಿನಲ್ಲೇ ಕುಳಿತುಕೊಂಡು ಟಿಶ್ಯು ಮೇಲೆ ಬರೆದು ಹಾಕಿದ್ದಾರೆ. ಇದೆಲ್ಲವನ್ನು ಹಾಡಿನ ರೂಪದಲ್ಲಿ ಹೇಳುತ್ತಾ ಜೈಲಿನೊಳಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ಗೋಡೆ ಮೇಲೆ ಬಾವುಟ, ಪೋಸ್ಟರ್ ಕೂಡ ಅಂಟಿಸುತ್ತಾ ಅವರಿಗೆ ಬೇಸರ ಮಾಡಿದ ಸ್ಪರ್ಧಿಗಳ ಹೆಸರು ಕೂಡ ಬರೆದಿದ್ದಾರೆ.

    ಚಕ್ರವರ್ತಿ ನಡವಳಿಕೆ ಬಗ್ಗೆ ಇತರ ಸ್ಪರ್ಧಿಗಳು ಚರ್ಚೆ ಮಾಡುತ್ತಿದ್ದಾರೆ. ಸ್ನೇಹಿತ ಸ್ನೇಹಿತರ ತರ ಇರಬೇಕು ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಆತ್ಮೀಯರಾಗಿರುವವರು ಈ ರೀತಿ ಮಾಡಿದರೆ ಬೇಸರ ಆಗತ್ತೆ ಅಂತ ಶಮಂತ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಚಕ್ರವರ್ತಿ ಅವರೇ ಇದನ್ನೆಲ್ಲ ನಿಲ್ಲಿಸಬೇಕು, ಬೇರೆ ಯಾರೂ ಏನೂ ಮಾಡೋಕೆ ಆಗದು ಮಂಜು ಪಾವಗಡ ಹೇಳಿದ್ದಾರೆ. ತರಕಾರಿಯನ್ನು ಅವರಿಗೆ ಕೋಡೋಣ ಮನಸ್ಸು ಬದಲಾಯಿಸಿ ಕಟ್ ಮಾಡಿದರು ಮಾಡಬಹುದು ಎಂದು ದಿವ್ಯಾ ಉರುಡುಗ ವೈಷ್ಣವಿಯ ಬಳಿ ಹೇಳಿದ್ದಾರೆ.

    ಎಲ್ಲರೂ ಕಳಪೆಗಾಗಿ ಎಲ್ಲರೂ ಜೈಲಿಗೆ ಹೋಗಿದ್ದಾರೆ. ಆದರೆ ಯಾರು ಹೀಗೆ ಮಾಡಿಲ್ಲ. ಪ್ರಶಾಂತ್ ಸರ್ ತರಕಾರಿ ಕಟ್ ಮಾಡಲ್ಲ ಎಂದಾಗ ಎಲ್ಲರ ಮುಖದಲ್ಲಿ ಕೋಪ ಬಂತು. ಆದರೆ ಇವತ್ತು ಈ ವ್ಯಕ್ತಿಗೆ ಯಾರು ಏನು ಹೇಳಿಲ್ಲ. ಸರಿದೂಗಿಸಿಕೊಂಡು ಹೇಗೋ ಒಂದು ಸಾಂಬಾರ್ ಮಾಡಿದರು. ನನಗೆ ಈ ವಿಚಾರವಾಗಿ ಬೇಸರವಾಯಿತು. ಕಳಪೆಯಾಗಿ ಕಾಮಿಡಿ ಪೀಸ್ ಆಗಿ ಬಿಟ್ಟರು ಎಂದು ಪ್ರಿಯಾಂಕ ಶಮಂತ್ ಬಳಿ ಹೇಳಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ಸಿಕ್ಕ ಕಪ್ಪು ಬಣ್ಣದ ಕವರ್ ಅನ್ನು ಜೈಲಿನ ಕಂಬಿಗೆ ಕಟ್ಟಿದ್ದಾರೆ. ಮನೆಯ ಸ್ಪರ್ಧಿಗಳ ವಿರುದ್ಧ ನಾನು ಪ್ರತಿಭಟನೆ ಮಾಡುತ್ತಿದ್ದೇನೆ. ಇದುವೇ ಪ್ರತಿಭಟನೆಯ ಬಾವುಟ. ನಿಜವಾದ ಕಳಪೆ, ದಲ್ಲಾಳಿಗಳ ವಿರುದ್ಧ ನನ್ನ ಪ್ರತಿಭಟನೆ. ಕಪ್ಪು ಬಾವುಟ ನನ್ನ ಹೋರಾಟದ ಪ್ರತೀಕ ಬ್ರೋ ಎಂದು ಅರವಿಂದ್ ಬಳಿ ಚಕ್ರವರ್ತಿ ಹೇಳಿದ್ದಾರೆ. ಆಗ ಅರವಿಂದ್ ಓಓ.. ಹೌದಾ ಎಂದು ನಕ್ಕು ಸುಮ್ಮನಾಗಿದ್ದಾರೆ.

    ಪ್ರತಿ ಬಾರಿ ಕಳಪೆ ನೀಡಿದಾಗಲೂ ಅದನ್ನು ಒಪ್ಪಿಕೊಂಡು ಸ್ಪರ್ಧಿಗಳು ಜೈಲಿಗೆ ಹೋಗಿದ್ದಾರೆ. ದಿವ್ಯಾ ಕೈಗೆ ಗಾಯ ಆಗೋಕೆ ನಾನೇ ಕಾರಣ. ಹೀಗಾಗಿ ನಾನೇ ಜೈಲಿಗೆ ಹೋಗುತ್ತೇನೆ ಎಂದು ಚಕ್ರವರ್ತಿ ಅವರೇ ಬಾಯ್ಬಿಟ್ಟು ಹೇಳಿದ್ದರು. ಈಗ ಕಳಪೆ ಎನ್ನುವ ಪಟ್ಟ ನೀಡಿದ ನಂತರದಲ್ಲಿ ಅವರ ವರಸೆಯನ್ನು ಬದಲಾಯಿಸಿದ್ದಾರೆ.

  • ಎಷ್ಟು ಸಲ ಬೀಪ್ ಮಾಡುವುದು?- ಚಕ್ರವರ್ತಿಗೆ ಕಿಚ್ಚ ಸುದೀಪ್ ಕ್ಲಾಸ್

    ಎಷ್ಟು ಸಲ ಬೀಪ್ ಮಾಡುವುದು?- ಚಕ್ರವರ್ತಿಗೆ ಕಿಚ್ಚ ಸುದೀಪ್ ಕ್ಲಾಸ್

    ಕ್ರವರ್ತಿ ಹಾಗೂ ಪ್ರಶಾಂತ್ ಸಂಬರಗಿ ಅವರಿಗೆ ಹಲವು ಬಾರಿ ಕಿಚ್ಚ ಸುದೀಪ್ ಎಚ್ಚರಿಸಿದ್ದಾರೆ. ಆದರೂ ಕೆಲ ಸಂದರ್ಭಗಳಲ್ಲಿ ಎಡವಟ್ಟುಗಳು ಆಗುತ್ತಲೇ ಇವೆ. ಹೀಗಾಗಿ ಈ ವಾರದ ಪಂಚಾಯಿತಿಯಲ್ಲಿ ಸಹ ಸುದೀಪ್ ಮತ್ತೆ ಚಕ್ರವರ್ತಿಯವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ವೈಷ್ಣವಿ ಅವರ ಬಗ್ಗೆ ಪ್ರಶಾಂತ್ ಸಂಬರಗಿ ಬಳಿ ಸುಳ್ಳು ಹೇಳಿದ್ದಕ್ಕೆ ಕ್ಲಾಸ್ ತೆಗೆದುಕೊಂಡಿದ್ದು, ಯಾಕೆ ಸುಳ್ಳು ಹೇಳಿದ್ದೀರಿ, ಯಾಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದಿರಿ, ನಾವೂ ಮನೆಯಲ್ಲಿ ಮತ್ತೆ ಈ ಶೋ ನೋಡಬೇಕು. ನೀವಾಡಿದ ಮಾತುಗಳನ್ನು ಬೀಪ್ ಮಾಡಬೇಕು. ಎಷ್ಟು ಬಾರಿ ಬೀಪ್ ಮಾಡಬೇಕು ಎಂದು ತುಂಬಾ ಖಾರವಾಗಿ ಪ್ರಶ್ನಿಸಿದ್ದಾರೆ. ಈ ವೇಳೆ ಚಕ್ರವರ್ತಿ ಅವರು ಪ್ರತಿಕ್ರಿಯಿಸಿ, ಆ ರೀತಿ ಮಾತನಾಡಬಾರದಿತ್ತು, ತಪ್ಪು ಮಾಡಿದೆ ಎಂದು ಕ್ಷಮೆಯಾಚಿಸಿದ್ದಾರೆ.

    ನೀವು ಹೀಗೆ ಸುಳ್ಳು ಹೇಳಿದರೆ ವೈಷ್ಣವಿ ಅವರ ವ್ಯಕ್ತಿತ್ವ ಏನಾಗಬೇಕು, ಈ ಶಬ್ದ ಬಳಸ್ತಾರಾ ಎಂದು ಪ್ರಶ್ನಿಸಿದ್ದಾರೆ. ಆದರೂ ಚಕ್ರವರ್ತಿ ವಾದ ಮಾಡಿದ್ದಾರೆ. ನನ್ನ ಕಣ್ಣಲ್ಲೇ ಕಣ್ಣಿಟ್ಟು ಸುಳ್ಳು ಹೇಳುತ್ತೀರಿ, ನಾನಿದನ್ನು ಸಹಿಸುವುದಿಲ್ಲ. ಪ್ರತಿಯೊಬ್ಬ ಸ್ಪರ್ಧಿಯ ವ್ಯಕ್ತಿತ್ವ ಕಾಪಾಡುವುದು ನನ್ನ ಕರ್ತವ್ಯ. ಆಟದಲ್ಲಿ ಬಿಗ್ ಬಾಸ್ ಚೌಕಟ್ಟಿನಲ್ಲೇ ಇರಬೇಕು. ಯಾವುದೋ ಒಂದರಿಂದ ಮನೆಯಲ್ಲಿನವರ ಅಭಿಪ್ರಾಯವೇ ಬದಲಾಗುತ್ತಿದೆ ಎಂದರೆ ಅದನ್ನು ನೋಡಿಕೊಂಡು, ಹಾಳಾಗಲಿ ಎಂದು ಬಿಟ್ಟು ಹೋಗುವ ವ್ಯಕ್ತಿ ನಾನಲ್ಲ. ಹಾಗಂತ ನನಗೆ ಹತ್ತಿರ, ನನಗೆ ಬೇಕಾದವರು ಎಂದು ಬಿಡಲು ಆಗಲ್ಲ ಎಂದು ಸುದೀಪ್ ಖಾರವಾಗಿ ಎಚ್ಚರಿಸಿದ್ದಾರೆ.

    ನೀವು ಹೇಳಿದ್ದನ್ನು ಪ್ರಶಾಂತ್ ನಂಬಿದ್ದರೆ ವೈಷ್ಣವಿ ವ್ಯಕ್ತಿತ್ವ ಏನಾಗಬೇಡ, ವೈಷ್ಣವಿ ಬಗ್ಗೆ ಕೆಟ್ಟ ಅಭಿಪ್ರಾಯ ಸಂಬರಗಿ ಅವರಲ್ಲಿ ಉಳಿಯುತ್ತಿತ್ತು ಎಂದಿದ್ದಾರೆ. ನಿಮ್ಮ ಓದಿಗೆ, ನಿಮ್ಮ ತಿಳುವಳಿಕೆ, ನಿಮಗಿರುವ ಜ್ಞಾನವನ್ನು ಈ ವೇದಿಕೆಯಲ್ಲಿ ಇನ್ನಷ್ಟು ಜನ ಕಲಿಯಲಿ ಎಂದು ಕಳೆದ ಬಾರಿ ಹೇಳಿದ್ದೆ. ಆದರೆ ನೀವು ಯಾವ ಭಾಷೆ ಬಳಸಿದಿರಿ? ಮನೆಯಲ್ಲಿ ನಾವೂ ಕುಳಿತು ನೋಡಬೇಕು ಈ ಶೋವನ್ನು. ಎಷ್ಟು ಸಲ ಬೀಪ್ ಮಾಡುವುದು. ಇದು ನಿಮ್ಮ ವಿದ್ಯೆಯೇ? ಏನು ಭಾಷೆ ಇದು ಒಳಗಡೆ ಎಂದು ಚಕ್ರವರ್ತಿ ಅವರು ಬಳಿಸಿದ ಅವಾಚ್ಯ ಶಬ್ದಗಳ ಬಗ್ಗೆ ಚಳಿ ಬಿಡಿಸಿದ್ದಾರೆ.

  • ಮತ್ತೆ ಚಕ್ರವರ್ತಿ ಸಂಬರಗಿ ಮಧ್ಯೆ ಫೈಟ್

    ಮತ್ತೆ ಚಕ್ರವರ್ತಿ ಸಂಬರಗಿ ಮಧ್ಯೆ ಫೈಟ್

    ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಮಧ್ಯೆ ಫೈಟ್ ನಡೆಯುತ್ತಲೇ ಇರುತ್ತೆ. ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪುತ್ತಾರೆ. ಅದೇ ರೀತಿ ಇಂದೂ ಸಹ ಫುಲ್ ಜಗಳವಾಡಿದ್ದಾರೆ.

    ವೈಷ್ಣವಿ ಸಂಬಂಧ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಮತ್ತೆ ಜಗಳವಾಡಿಕೊಂಡಿದ್ದು, ಚಕ್ರವರ್ತಿಯವರು ನಮಕ್ ಹರಾಮ್ ಎಂದೆಲ್ಲ ಬೈದಿದ್ದಾರೆ. ಅಲ್ಲದೆ ಅವಾಚ್ಯ ಶಬ್ಧಗಳಿಮದ ಸಹ ನಿಂದಿಸಿದ್ದಾರೆ. ಟಾಸ್ಕ್ ವಿಚಾರವಾಗಿ ಸಂಬರಗಿ ವೈಷ್ಣವಿಗೆ ಸಲಹೆ ನೀಡಿದ್ದರ ಬಗ್ಗೆ ಮಾತನಾಡಿದ್ದನ್ನು ಚಕ್ರವರ್ತಿ ಸಂಬರಗಿ ಬಳಿ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಸಂಬರಗಿ ವೈಷ್ಣವಿ ಬಳಿ ಕೇಳಿದ್ದು, ನಾನು ಆ ರೀತಿ ಹೇಳಿಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ

    ಇಷ್ಟಕ್ಕೇ ಸಂಬರಗಿ ಇಬ್ಬರ ಸಂಬಂಧ ಹಾಳು ಮಾಡಬೇಡ, ವೈಷ್ಣವಿ ಬಗ್ಗೆ ನನಗೆ ಗೌರವ ಇದೆ. ಹೀಗೆ ಹೇಲಬೇಡ ಎಂದಿದ್ದಾರೆ. ಆಗ ನನಗೇಕೆ ಬುದ್ಧಿವಾದ ಹೇಳೋಕೆ ಬರ್ತಿಯಾ ನೀನು ನಿನ್ನ ಪಾಡಿಗೆ ಇರು ಎಂದು ಚಕ್ರವರ್ತಿ ಕಿರಿಚಿದ್ದಾರೆ. ಇಂತಹ ಹೊಲಸು ಕೆಲಸ ಮಾಡಬೇಡ, ನಾನು ಕೇಳಬೇಡ ಎಂದರು ವೈಷ್ಣವಿ ಬಳಿ ಯಾಕೆ ಕೇಳಿದೆ. ಇದು ಹೊಲಸು ಕೆಲಸ ಎಂದು ಚಕ್ರವರ್ತಿ ಫುಲ್ ರಾಂಗ್ ಆಗಿದ್ದಾರೆ.

    ಪರ್ಸನಲ್ ಆಗಿ ಮಾತನಾಡಿದ್ದನ್ನು ಮತ್ತೆ ಯಾರ ಬಳಿಯೂ ಕೇಳಬಾರದು, ಅದಕ್ಕೆ ಸ್ನೇಹ ಅನ್ನಲ್ಲ, ನೀನು ನನ್ನ ಬಳಿ ಅರವಿಂದ ಹಾಗೂ ದಿವ್ಯಾ ಉರುಡುಗ ಬಗ್ಗೆ ಮಾತನಾಡಿದ್ದನ್ನು ಹೇಳಬೇಕಾ, ತಾಕತ್ ಇದ್ದರೆ ರಘು, ದಿವ್ಯಾ ಉರುಡುಗ, ಅರವಿಂದ್ ಬಗ್ಗೆ ಮಾತನಾಡಿದ್ದನ್ನು ಹೇಳು ಬಾ ಎಂದು ರೇಗಿದ್ದಾರೆ.

    ನಾನು ಒಬ್ಬ ಅಪ್ಪ, ಅಮ್ಮಂಗೆ ಹುಟ್ಟಿದ್ದೇನೆ, ಸರಿಯಾಗಿಯೇ ಮಾತನಾಡಿದ್ದೇನೆ ಎಂದು ಜೋರಾಗಿ ಮಾತನಾಡಿದ್ದಾರೆ. ಬಳಿಕ ಪ್ರಶಾಂತ್ ಸಂಬರಗಿ ವೈಷ್ಣವಿ ಬಳಿ ಮಾತನಾಡಿದ್ದು, ನಾನು ನಿನ್ನನ್ನು ತುಂಬಾ ಗೌರವಿಸುತ್ತೇನೆ, ಎಮೋಶನಲಿ ಕನೆಕ್ಟ್ ಆಗಿದ್ದೇನೆ. ಎತ್ತರದ ಸ್ಥಾನದಲ್ಲಿ ಇಟ್ಟಿದ್ದೇನೆ. ಒಬ್ಬ ವ್ಯಕ್ತಿ ನೀವು ನನಗೆ ಈ ರೀತಿ ಮಾಡಿದ್ದೀರಿ ಎಂದರೆ ಬೇಜಾರಾಗುತ್ತದೆ ಎಂದು ಕಣ್ಣೀರು ಹಾಕಿದ್ದಾರೆ. ಪ್ರಶಾಂತ್ ಫುಲ್ ಎಮೋಶನ್ ಆಗಿದ್ದಾರೆ. ಅಲ್ಲದೆ ವೈಷ್ಣವಿ ಹೀಗೆ ಹೇಳಿದ್ದಾರಾ, ಅವರನ್ನೇ ಕೇಳಲಾ ಎಂದು ನಾನು 3 ಬಾರಿ ಕೇಳಿದೆ. ನೀನು ಆ ರೀತಿ ಮಾಡಲ್ಲ ಎಂದು ನನಗೆ ಖಂಡಿತವಾಗಿಯೂ ಗೊತ್ತಿತ್ತು. ಆದರೂ ಖಚಿತಪಡಿಸಿಕೊಂಡೆ ಎಂದಿದ್ದಾರೆ. ಈ ಮೂಲಕ ವೈಷ್ಣವಿಗೆ ಸಂಬರಗಿ ಸ್ಪಷ್ಟನೆ ನೀಡಿದ್ದಾರೆ.

  • ಬಿಗ್‍ಬಾಸ್ ಮನೆಯಲ್ಲಿ ಸಂಚಾರಿ ವಿಜಯ್ ಸ್ಮರಣೆ ಮಾಡಿದ ಸ್ಪರ್ಧಿಗಳು

    ಬಿಗ್‍ಬಾಸ್ ಮನೆಯಲ್ಲಿ ಸಂಚಾರಿ ವಿಜಯ್ ಸ್ಮರಣೆ ಮಾಡಿದ ಸ್ಪರ್ಧಿಗಳು

    ಬಿಗ್‍ಬಾಸ್ ಮನೆಯ ಸ್ಪರ್ಧಿಗಳು ಎಲ್ಲರೂ ಸೇರಿ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರನ್ನು ಸ್ಮರಣೆ ಮಾಡಿದ್ದಾರೆ. ಇದನ್ನೂ ಓದಿ:  ನಟಿ ಹರಿಪ್ರಿಯಾಗೆ ಹಾಲಿವುಡ್ ಪ್ರಶಸ್ತಿ

     

    ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸ್ಯಾಂಡಲ್‍ವುಡ್ ನಟ ಸಂಚಾರಿ ವಿಜಯ್ ರಸ್ತೆ ಅಪಘಾತದಲ್ಲಿ ತೀತ್ರವಾಗಿ ಗೊಯಗೊಂಡು ಕೊನೆಯುಸಿರೆಳೆದಿದ್ದಾರೆ. ಇವರ ನೆನಪಿಗಾಗಿ ಭಾವಚಿತ್ರವಿರುವ ಟಿ ಶರ್ಟ್‍ಅನ್ನು ಚಕ್ರವರ್ತಿ ಚಂದ್ರಚೂಡ್ ಧರಿಸಿದ್ದರು. ಈ ವೇಳೆ ಸ್ಪರ್ಧಿಗಳು ಎಲ್ಲಾ ಸೇರಿ ಅವರನ್ನು ನೆನೆದು ಮೌನಾಚರಣೆ ಮಾಡಿದ್ದಾರೆ.

    ಏಳು ಜೀವಗಳಿಗೆ ಜೀವವಾದವನೇ..ಪ್ರೀತಿ ಹುಡುಕಾಟದಲ್ಲಿ ರೀತಿ ಮರೆತವನೇ. ನಿನ್ನ ಗೋರಿ ಇರುವ ಈ ಭೂಮಿ ಬರೀ ಪಾಳುಯಾಕಿಷ್ಟು ಅವಸರವಿತ್ತೋ ನೀನೇ ಹೇಳು.ಸೂಲಗಿತ್ತಿಯೊಬ್ಬಳು ಹೆತ್ತ ಸ್ವರ ಮಗುವೇ. ನಮ್ಮಂಥ ಗೆಳೆಯರ ಎದೆಯಲ್ಲಿ ಎಂದೂ ಆರದ ಗಾಯವೇ. ಗೆಳೆತನದ ಪ್ರೀತಿಗೆ ನೀನು ಕಾರುಣ್ಯ. ನಮ್ಮೆಲ್ಲರ ಅಂಗೈಯೊಳಗೆ ಅರಳಿದ ಅರಣ್ಯ. ನಿನಗಾಗಿ ಬರೆಯುವೆ ನಾನು ಕೋಟಿ ಕೋಟಿ ಸಾಲು. ಇರಲಿ ನನಗೆ ನಿನ್ನಗಲಿಕೆಯ ದುಃಖದ ಪಾಲು ಎಂದು ಚಕ್ರವರ್ತಿ ಸಂಚಾರಿ ವಿಜಯ್ ಬಗ್ಗೆ ತಾವು ಬರೆದ ಸಾಲುಗಳನ್ನು ಹೇಳಿದರು.

    ಸಂಚಾರಿ ವಿಜಯ್ ಅಗಲಿದ್ದು ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ರಾಷ್ಟ್ರಕ್ಕೆ ಲಾಸ್. ಯಾಕಂದ್ರೆ ನ್ಯಾಷನಲ್ ಅವಾರ್ಡ್, ರಾಜ್ಯ ಪ್ರಶಸ್ತಿ ಸೇರಿದಂತೆ ಸಂಗೀತ, ರಂಗಭೂಮಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವನು ಮಾಸ್ಟರ್. ನನಗೆ ತುಂಬಾ ಆತ್ಮೀಯನಾಗಿದ್ದನು. ಕೊನೆಯಲ್ಲಿ ಅವನ ಅಂಗಾಂಗಗಳನ್ನು ದಾನ ಮಾಡಲಾಯಿತು ಎಂದು ಹೇಳಿದ ಚಕ್ರವರ್ತಿ ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ. ಸ್ಪರ್ಧಿಗಳು ಮೌನಾಚರಣೆ ಮಾಡುವ ಮೂಲಕ ಸಂಚಾರಿ ವಿಜಯ್‍ಗೆ ಗೌರವ ಸಲ್ಲಿಸಿದ್ದಾರೆ.

  • ಬಾಯಿ ಮುಚ್ಚಿದರೆ ಸರಿ- ಚಕ್ರವರ್ತಿಗೆ ಪ್ರಿಯಾಂಕಾ ಅವಾಜ್

    ಬಾಯಿ ಮುಚ್ಚಿದರೆ ಸರಿ- ಚಕ್ರವರ್ತಿಗೆ ಪ್ರಿಯಾಂಕಾ ಅವಾಜ್

    ಬಿಗ್‍ಬಾಸ್ ಮನೆಲಿ ಸೈಲೆಂಟ್ ಆಗಿದ್ದ ಪ್ರಿಯಾಂಕ ತಿಮ್ಮೇಶ್ ಇದೀಗ ಜೋರು ಧ್ವನಿಯಲ್ಲಿ ಚಕ್ರವರ್ತಿ ಅವರಿಗೆ ಅವಾಜ್ ಹಾಕಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ಜಗಳದ ಬೆಂಕಿ ಹೊತ್ತಿ ಉರಿಯುತ್ತಿದೆ.

    ಅವರು ನೇರವಾಗಿಲ್ಲ. ನಾಟಕೀಯ, ಸ್ಕೋಪ್ ತಗೆದುಕೂಳ್ಳುತ್ತಿದ್ದೀಯಾ? ಎಂದು ನನಗೆ ಹೇಗೆ ಹೇಳುತ್ತಿರುತ್ತಿರಾ ಎಂದು ಪ್ರಿಯಾಂಕಾ ಸುದೀಪ್ ಮುಂದೆ ಹೇಳಿಕೊಂಡಿದ್ದರು. ಕಟ್ಟೆಪಂಚಾಯ್ತಿಯಲ್ಲಿ ಈ ವಿಷಯನ್ನು ಇತ್ಯರ್ಥಮಾಡಿ ಸುದೀಪ್ ರಾಜಿ ಮಾಡಿದ್ದರು. ಈ ಹಿಂದೆ ಚಕ್ರವರ್ತಿ ಮತ್ತು, ಪ್ರಿಯಾಂಕಾ ನಡುವೆ ಹಲವು ಸಣ್ಣ ಸಣ್ಣ ವಿಚಾರಗಳಿಗೆ ಜಗಳವಾಗಿತ್ತು. ಆದರೆ ಇದೇ ವಿಷಯಗಳನ್ನು ಮತ್ತೇ ಕೆದಕಿಕೊಂಡು ಇಬ್ಬರು ಕಿತ್ತಾಟ ನಡೆಸಿದ್ದಾರೆ. ಕಾಲು ಕೆದರಿಕೊಂಡು ಜಗಳ ಮಾಡುವ ಚಕ್ರವರ್ತಿ ವಿರುದ್ಧವಾಗಿ ಪ್ರಿಯಾಂಕ ತಿರುಗಿ ಬಿದ್ದಿದ್ದಾರೆ.

    ಸಾಧ್ಯವಾದಷ್ಟು ಸೈಲೆಂಟ್ ಆಗಿಯೇ ಇದ್ದ ಪ್ರಿಯಾಂಕಾ ಯಾರು ಏನೇ ಹೇಳಿದರೂ ಅದನ್ನು ತಾಳ್ಮೆಯಿಂದ ನಿಭಾಯಿಸಿಕೊಂಡು ಸಾಗುತ್ತಿದ್ದರು. ಚಕ್ರವರ್ತಿ ಅವರ ಮಾತಿನಿಂದ ಆಗಾಗ ಪ್ರಿಯಾಂಕಾ ಅವರನ್ನು ಕೆಣಕುತ್ತಿದ್ದರು. ಇದೇ ಮೊದಲ ಬಾರಿಗೆ ಪ್ರಿಯಾಂಕಾ ತಿಮ್ಮೇಶ್ ಅವರು ದೊಡ್ಮನೆಯೊಳಗೆ ಉಗ್ರಾವತಾರ ತೋರಿದ್ದಾರೆ. ತಮ್ಮ ಬಗ್ಗೆ ಇಲ್ಲಸಲ್ಲದ ಮಾತನಾಡಿದ ಚಕ್ರವರ್ತಿ ಚಂದ್ರಚೂಡ್‍ಗೆ ಖಡಕ್ ಆಗಿ ವಾನಿರ್ಂಗ್ ನೀಡಿದ್ದಾರೆ.

    ಪ್ರಿಯಾಂಕಾ ಕಣ್ಣೀರು ಹಾಕುತ್ತಾ ನಾನು ಮತ್ತು ಶಮಂತ್ ಏನೇ ಮಾಡಿದರೂ ಅದನ್ನು ಕೇಳೋಕೆ ಇವರು ಯಾರು? ಎಂದು ಅಳುತ್ತಲೇ ತಮ್ಮ ನೋವನ್ನು ಪ್ರಶಂತ್, ಶಮಂತ್ ಬಳಿ ಹೇಳಿಕೊಳ್ಳುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಚಕ್ರವರ್ತಿ ಮತ್ತೆ ಪ್ರತ್ಯುತ್ತರ ನೀಡಲು ಬಂದಾಗ ಅವರ ಪ್ರಿಯಾಂಕಾ ತಾಳ್ಮೆಯ ಕಟ್ಟೆ ಒಡೆದಿದೆ. ಜೋರಾಗಿ ಕಿರುಚಾಡಿ ಪ್ರಿಯಾಂಕಾ ಚಕ್ರವರ್ತಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಕಣ್ಣಲ್ಲಿ ನೀರು ಹಾಕಿಕೊಂಡು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದೆಲ್ಲ ನಿಜವಾಗುವುದಿಲ್ಲ ಎಂದು ಚಕ್ರವರ್ತಿ ಏರು ಧ್ವನಿಯಲ್ಲಿ ಮಾತನಾಡಿದರು. ಅದಕ್ಕೆ ತಿರುಗೇಟು ನೀಡಿದ ಪ್ರಿಯಾಂಕಾ, ನಾನು ಕಣ್ಣೀರು ಹಾಕಿಕೊಂಡು ನಾಟಕ ಮಾಡುತ್ತಿಲ್ಲ. ಬಾಯಿ ಮುಚ್ಚಿದರೆ ಸರಿ ಎಂದು ಕಿರುಚಾಡಿ ಹಾಗೇ ಸಿಟ್ಟಿನಿಂದ ಚಕ್ರವರ್ತಿ ಅವರ ಬಳಿ ಹೋಗಿದ್ದಾರೆ. ಆಗ ಮನೆ ಮಂದಿ ತಡೆದು ನಿಲ್ಲಿಸುವ ಪ್ರಯತ್ನವನ್ನು ಮಾಡಿದ್ದಾರೆ.

  • ಚಕ್ರವರ್ತಿ ನನಗೆ ಒಂದು ಪಂಜರ ಕಟ್ಟಿಕೊಟ್ಟಿದ್ದಾರೆ ಎಂದಿದ್ಯಾಕೆ ಪ್ರಿಯಾಂಕಾ?

    ಚಕ್ರವರ್ತಿ ನನಗೆ ಒಂದು ಪಂಜರ ಕಟ್ಟಿಕೊಟ್ಟಿದ್ದಾರೆ ಎಂದಿದ್ಯಾಕೆ ಪ್ರಿಯಾಂಕಾ?

    ದೊಡ್ಮನೆಯ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸ್ಪರ್ಧಿಗಳ ಆಟದ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಅವರ ಮನಸ್ತಾಪಗಳ ಬಗ್ಗೆ ಮಾತನಾಡುವಂತಾಗಿದೆ. ನನ್ನನ್ನು ಬಿಗ್‍ಮನೆಯ ಹೊರಗೆ ನಾನು ಹೀಗೆ ಎಂದು ಒಂದು ಪಂಜರವನ್ನು ಚಕ್ರವರ್ತಿ ಚಂದ್ರಚೂಡ್ ಅವರು ಕಟ್ಟಿಕೊಟ್ಟಿದ್ದಾರೆ ಎಂದು ಪ್ರಿಯಾಂಕಾ ತಿಮ್ಮೆಶ್ ಸುದೀಪ್ ಮುಂದೆ ದೂರಿಕೊಂಡಿದ್ದಾರೆ.


    ವಾರದ ಕಥೆ ಕಿಚ್ಚನ ಜೊತೆ ಪಂಚಾಯಿತಿಯಲ್ಲಿ ಕಿಚ್ಚ, ಪ್ರಿಯಾಂಕಾ ಮತ್ತು ಚಕ್ರವರ್ತಿಯವರೆ ನಿಮ್ಮಿಬ್ಬರ ಸಮಸ್ಯೆ ಏನು ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಚಕ್ರವರ್ತಿ, ಪ್ರಿಯಾಂಕಾ ಅವರು ಲಾಸ್ಟ್ ಇನ್ನಿಂಗ್ಸ್ ನಲ್ಲಿ ನನ್ನೊಂದಿಗೆ ತುಂಬಾ ಜಗಳವಾಡಿದ್ದಾರೆ. ಈ ಇನ್ನಿಂಗ್ಸ್ ನಲ್ಲಿ ಆ ತರಹ ಏನು ಆಗಿಲ್ಲ. ಆದರೆ ನಾನು ಅವರ ಬಗ್ಗೆ ಹೇಳಿದ ಮಾತುಗಳನ್ನು ಅವರು ಮನಸ್ಸಿನಲ್ಲಿಟ್ಟುಕೊಂಡು ನೊಂದಿದ್ದಾರೆ ಅನಿಸುತ್ತೀದೆ ಎಂದರು.

    ನಾನು ಮತ್ತು ಶಮಂತ್ ಈ ಹಿಂದೆ ಊಟಮಾಡಿಸಬೇಕೆಂಬ ಒಂದು ಚಾಲೆಂಜ್ ಹಾಕಿಕೊಂಡಾಗ ಮತ್ತು ನಾನು ದಿವ್ಯಾ ಸುರೇಶ್ ಜೊತೆಗಿದ್ದಾಗ ಚಕ್ರವರ್ತಿಯವರು ನನ್ನೊಂದಿಗೆ ನಡೆದುಕೊಂಡ ವರ್ತನೆ ನನಗೆ ಇಷ್ಟ ಆಗಿಲ್ಲ. ಅವರ ಮಾತುಗಳು ನನಗೆ ತುಂಬಾ ಚುಚ್ಚಿದಂತೆ ಆಗುತ್ತದೆ. ಹಾಗಾಗಿ ನಾನು ನನ್ನ ಪಾಡಿಗೆ ಇದ್ದೇನೆ ಎಂದು ಪ್ರಿಯಾಂಕಾ ಬೇಸರತೊಡಿಕೊಂಡರು. ಇದನ್ನೂ ಓದಿ: ಅರವಿಂದ್‍ಗೆ ಕಥೆ ಹೇಳಿದ ಸುದೀಪ್

    ಇದನ್ನು ಕೇಳಿಸಿಕೊಂಡ ಚಕ್ರವರ್ತಿ ಇಲ್ಲ ನಾನು ಪ್ರಿಯಾಂಕಾ ಅವರಿಗೆ ಹೇಳಿದ ಸಾಂತ್ವನದ ಮಾತು ಅವರಿಗೆ ಇಷ್ಟ ಆಗಿಲ್ಲ. ನನಗೆ ಅವರ ನಾಟಕದ ಮಾತು ಹಿಡಿಸಿಲ್ಲ. ಅವರ ಸ್ವಭಾವದಿಂದಾಗಿ ಅವರು ನನಗೆ ಕಾಣಿಸದಂತೆ ಆಗಿದ್ದಾರೆ ಎಂದರು.

    ಸರ್ ನನ್ನ ಸ್ವಭಾವ ಮತ್ತು ಇತರ ವಿಷಗಳನ್ನು ತೆಗೆದುಕೊಂಡು ನನ್ನನ್ನು ಹೊರ ಪ್ರಪಂಚದಲ್ಲಿ ಅವರು ಬೇರೆ ರೀತಿ ಅರ್ಥ ಮಾಡಿಸಿದ್ದಾರೆ ಇದು ನನಗೆ ಇಷ್ಟ ಇಲ್ಲ. ಅವರು ಹೊರ ಪ್ರಪಂಚಕ್ಕೆ ನಾನು ಹೀಗೆ ಎಂದು ಪಂಜರವೊಂದನ್ನು ಹಾಕಿದ್ದಾರೆ ಎಂದು ಪ್ರಿಯಾಂಕಾ ಅಭಿಪ್ರಾಯಪಟ್ಟಿದ್ದಾರೆ.