Tag: ಚಕ್ರವರ್ತಿ ಚಂದ್ರಚೂಡ

  • ಭೀಮಾ ಕೋರೇಗಾಂವ ಚಿತ್ರದಲ್ಲಿ ದೀಪಿಕಾ ಪಡುಕೋಣೆ: ನಿರ್ದೇಶಕರು ಹೇಳಿದ್ದೇನು?

    ಭೀಮಾ ಕೋರೇಗಾಂವ ಚಿತ್ರದಲ್ಲಿ ದೀಪಿಕಾ ಪಡುಕೋಣೆ: ನಿರ್ದೇಶಕರು ಹೇಳಿದ್ದೇನು?

    ತ್ತೀಚೆಗಷ್ಟೆ ‘ಸಂಜು ವೆಡ್ಸ್ ಗೀತಾ-2’ ಚಿತ್ರಕ್ಕೆ ಚಾಲನೆ ನೀಡಿದ್ದ ನಿರ್ದೇಶಕ ನಾಗಶೇಖರ್ (Nagasekhar),  ಅದರ ಬೆನ್ನಲ್ಲೇ ಮತ್ತೊಂದು  ಬಿಗ್ ಪ್ರಾಜೆಕ್ಟ್   ಚಿತ್ರಕ್ಕೆ ಕೈ  ಹಾಕಿದ್ದಾರೆ. ರೆವಲ್ಯೂಷನರಿ ಸಬ್ಜೆಕ್ಟ್ ಇಟ್ಟುಕೊಂಡು ನೈಜ ಘಟನೆಯನ್ನು ತೆರೆಯ ಮೇಲೆ ಹೇಳಹೊರಟಿದ್ದಾರೆ. ಅದಕ್ಕೆ ಕೊಟ್ಟಿರುವ ಹೆಸರು ಭೀಮಾ ಕೋರೇಗಾಂವ (Bhima Koregaon). ನಾಗಶೇಖರ್ ಮೂವೀಸ್ ಹಾಗೂ ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿ ಛಲವಾದಿ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬಹು ಸೂಕ್ಷ್ಮ ವಿಚಾರ ಇಟ್ಟುಕೊಂಡು  ಮಾಡುತ್ತಿರುವ ಚಲನಚಿತ್ರ ಇದಾಗಿದ್ದು,  ಬೆಂಗಳೂರಿನ ಅಶೋಕಾ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಶೀರ್ಷಿಕೆಯನ್ನು  ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳು  ಬಿಡುಗಡೆ ಮಾಡಿದರು.

    ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡುತ್ತ ‘ಸಂಜು ವೆಡ್ಸ್ ಗೀತಾ’  ಚಿತ್ರದ ಬಗ್ಗೆ ಚರ್ಚೆ ನಡೆಸುವಾಗ ಈ ವಿಷಯ ಪ್ರಸ್ತಾಪಕ್ಕೆ ಬಂತು. ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಈ ಘಟನೆಯನ್ನು ನಮ್ಮ ಜನರಿಗೆ ತಿಳಿಸಬೇಕು ಎಂದು ನಿರ್ಧರಿಸಿ ನಿರ್ಮಾಣಕ್ಕೆ ಮುಂದಾಗಿದ್ದೇನೆ ಎಂದರು. ನಂತರ ನಾಗಶೇಖರ್ ಮಾತನಾಡಿ ‘1818ರ ಜ.1 ರಂದು ನಡೆದ ರೆವಲ್ಯೂಷನರಿ ಸಬ್ಜೆಕ್ಟ್. ಶೋಷಿತರ  ಬದುಕಿಗೆ ಬೆಳಕು ಹಚ್ಚುವ ಕೆಲಸಕ್ಕೆ ದೀಪ ಹಚ್ಚುವ ಮೂಲಕ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ಇದು ಬಹಳ ದೊಡ್ಡ ವಿಚಾರವಾಗಿದೆ ಎಂದರು.

    ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡುತ್ತಾ, ‘ಪೂನಾ ನದಿಯ ದಡದಲ್ಲಿ ಡಿ.31ರಿಂದ ಜ.1ರವರೆಗೆ ಸ್ವಾಭಿಮಾನಿ ಬದುಕಿಗೋಸ್ಕರ. ನಡೆದ ಘನಘೋರ ಯುದ್ಧ . 2ನೇ ಬಾಜೀರಾಯನ ಘೋರ ಕೃತ್ಯಗಳನ್ನು ವಿರೋಧಿಸಿ ಮೆಹರ್ ಸೈನಿಕರು ನಡೆಸಿದ ಯುದ್ದ, ಭಾರತದ ನೆಲದಲ್ಲಿ ಬಾಜೀರಾಯ ಅಸ್ಪೃಶ್ಯರನ್ನು ಹೇಗೆ ನಡೆಸಿಕೊಂಡಿದ್ದ, ಯಾವ ರೀತಿ ನೋಡಿಕೊಂಡಿದ್ದ, ಯಾವ ಉದ್ದೇಶಕ್ಕೆ ಈ ಯುದ್ಧ ನಡೆಯಿತು ಅನ್ನುವುದನ್ನು ಈ ಸಿನಿಮಾದಲ್ಲಿ ದಾಖಲು ಮಾಡಲಾಗುತ್ತೆ’ ಎಂದರು.

    ಮುಖ್ಯ ಅತಿಥಿಯಾಗಿದ್ದ ಚಿಂತಕ ಗೋಪಾಲ್ ಮಾತನಾಡುತ್ತಾ, ‘ಅಸಮಾನತೆಯ ವಿರುದ್ಧ ನಡೆದ ಹೋರಾಟವಿದು. 500 ಜನ ಸೈನಿಕರು, 30  ಸಾವಿರ ಪೇಶ್ವೆ ಬಾಜೀರಾಯನ ಸೈನಿಕರನ್ನು 12 ಗಂಟೆಗಳಲ್ಲಿ ಧ್ವಂಸ ಮಾಡಿದ ಘಟನೆ. ಮೆಹರ್ಸ್ ಅಂದರೆ ಗುಲಾಮರು. ಬಾಜೀರಾಯ  ಅಸ್ಪೃಶ್ಯರ ವಿರುದ್ಧ  ಕಠಿಣ  ಕಾನೂನುಗಳನ್ನು ಜಾರಿಗೆ ತಂದಿದ್ದ. ಇದನ್ನು ವಿರೋಧಿಸಿ ನಡೆದ ಯುದ್ದವಿದು. ಹಾಲಿವುಡ್ ಶೈಲಿಯ ಸಿನಿಮಾ ಆಗಲಿದೆ‌’ ಎಂದರು. ಉಳಿದಂತೆ ನೆಹರು ಓಲೇಕಾರ್, ಚಕ್ರವರ್ತಿ ಚಂದ್ರಚೂಡ್, ಈ ಘಟನೆಯ ಬಗ್ಗೆ ಒಂದಷ್ಟು ಮಾಹಿತಿ‌ ನೀಡಿದರು.

     

    ಕೊನೆಯಲ್ಲಿ ಮಾತು ಮುಂದುವರೆಸಿದ ನಾಗಶೇಖರ್, ‘ಈ ಸಿನಿಮಾ ಮಾಡುವಂತೆ ನನಗೆ ಪ್ರೇರೇಪಿಸಿದ್ದು ರೈಟರ್ ಚಂದ್ರಚೂಡ್ (Chakravarty Chandrachud),  ಜಾಸ್ತಿ ಬಂಡವಾಳ ಕೇಳುತ್ತೆ. ಚಿತ್ರದ ಬಜೆಟ್ 120 ಕೋಟಿ ಆಗಬಹುದು. ನಿರ್ಮಾಪಕ ಕುಮಾರ್ ಎಷ್ಟೇ ಆದರೂ ಖರ್ಚು ಮಾಡಲು ರೆಡಿ ಇದ್ದಾರೆ. ಕನ್ನಡದ ಸೂಪರ್ ಸ್ಟಾರ್ ಒಬ್ಬರು ಚಿತ್ರದಲ್ಲಿ ಅಭಿನಯಿಸಲು ಒಪ್ಪಿದ್ದಾರೆ. ನಟಿ ದೀಪಿಕಾ ಪಡುಕೋಣೆ (Deepika Padukone)ಅವರನ್ನು ನಾಯಕಿ ಪಾತ್ರಕ್ಕೆ ಕರೆತರುವ ಉದ್ದೇಶವಿದೆ. 54 ಕೋಟಿ ಶೋಷಿತರಿಗೆ ಬೆಳಕಾಗುವ ಕಥಾನಕವಿದು. ಚಂದ್ರಚೂಡ್ ನೇತೃತ್ವದಲ್ಲಿ ಬರಹಗಾರರ ತಂಡ ಕಟ್ಟಿ ಭಾಗ-1,  ಭಾಗ-2 ಮಾಡುವ ಯೋಚನೆಯಿದೆ. ಪ್ರೀ ಪ್ರೊಡಕ್ಷನ್ ಗೆ  365 ದಿನ ತೆಗೆದುಕೊಂಡಿದ್ದೇನೆ. ಈ ಕಥೆಯನ್ನು ಕಣ್ಣಿಗೆ ಕಟ್ಟುವ ಹಾಗೆ ಮನಸಿಗೆ ಮುಟ್ಟುವ ಹಾಗೆ ಕಟ್ಟಿಕೊಡುವ ಜವಾಬ್ದಾರಿ ನನ್ನ ಮೇಲಿದೆ’ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏಳು ವರ್ಷಗಳ ನಂತರ ನಿರ್ದೇಶನದ ಕ್ಯಾಪ್ ತೊಟ್ಟ ಚಕ್ರವರ್ತಿ ಚಂದ್ರಚೂಡ

    ಏಳು ವರ್ಷಗಳ ನಂತರ ನಿರ್ದೇಶನದ ಕ್ಯಾಪ್ ತೊಟ್ಟ ಚಕ್ರವರ್ತಿ ಚಂದ್ರಚೂಡ

    ತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ (Chakravarty Chandrachud) ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಅವರ ಹುಟ್ಟುಹಬ್ಬದಂದು ಮಿಲಿಂದ್ ಗೌತಮ್ ನಾಯಕನಾಗಿ ನಟಿಸುತ್ತಿರುವ ಈ ನೂತನ ಚಿತ್ರದ ಟೀಮ್ ಅನೌನ್ಸ್ ಆಗಿದೆ.  ಮಯೂರ ಮೋಷನ್ ಪಿಕ್ಚರ್ಸ್ ನ ನಿರ್ಮಾಪಕರು ಮಂಜುನಾಥ್ ಡಿ ಅವರು ‘ಅನ್ ಲಾಕ್  ರಾಘವ’ ನಂತರ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ.  ಮಿಲಿಂದ್ ಗೌತಮ್ ನಾಯಕ ನಟರಾಗಿರುವ ಈ ಸಿನೆಮಾಗೆ ನಿರ್ದೇಶಕರ ಕ್ಯಾಪ್ ತೊಟ್ಟಿರುವುದು ಬಹುಮುಖ ಪ್ರತಿಭೆ ಡಿ. ಜೆ. ಚಕ್ರವರ್ತಿ (ಚಂದ್ರಚೂಡ್). ಬಿಗ್ ಬಾಸ್ ಖ್ಯಾತಿಯ, ಬರಹಗಾರ, ನಿರ್ದೇಶಕ ಚಕ್ರವರ್ತಿ ಏಳು ವರ್ಷಗಳ ನಂತರ ನಿರ್ದೇಶನ ಮಾಡುತ್ತಿದ್ದಾರೆ.

    ಅನ್ ಲಾಕ್  ರಾಘವ ನಂತರ ಮಿಲಿಂದ್ ಗೌತಮ್ (Milind Gautam) ಅವರು ಸತತ ಮೂರು ತಿಂಗಳುಗಳಿಂದ ಈ ಹೊಸ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಬೇರೆ ಬೇರೆ ನಿರ್ದೇಶಕರಿಗೆ ಹಲವು ಸಿನಿಮಾಗಳನ್ನು ಬರೆಯುತ್ತಿರುವ ಚಕ್ರವರ್ತಿ ಈ ಸಿನಿಮಾವನ್ನು ತಾವೇ ಬರೆದು ನಿರ್ದೇಶಿಸುತ್ತಿದ್ದಾರೆ. ಇದನ್ನೂ ಓದಿ:ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಮೆಗಾಸ್ಟಾರ್‌ ಚಿರಂಜೀವಿ

    ಮಣಿಕಾಂತ್ ಕದ್ರಿ (Manikanth Kadri) ಸಂಗೀತ, ಮಧು ತುಂಬನಕೆರೆ ಸಂಕಲನ, ಯೋಗೇಶ್ವರನ್ ಛಾಯಾಗ್ರಹಣ, ಕಾರ್ಯಕಾರಿ ನಿರ್ಮಾಪಕರಾಗಿ ಪ್ರಶಾಂತ್ ಬಾಗೂರು, ಡಿಜಿಟಲ್ ಮಾರ್ಕೆಟಿಂಗ್ ಸುನೀಲ್ ಮಾನೆ, ಸಹ ನಿರ್ದೇಶಕರಾಗಿ ಚಂದ್ರಶೇಖರ ಮುದಬಾವಿ ಮುಂತಾದವರ ತಂಡವಿದೆ. ಈಗಾಗಲೇ ಕದ್ರಿ ಮಣಿಕಾಂತ್ ಹಾಡುಗಳು ಸಂಯೋಜನೆಯಲ್ಲಿದು, ಚಿತ್ರೀಕರಣಕ್ಕೆ ಪೂರ್ವ ತಯಾರಿ ಭರದಿಂದ ಸಾಗಿದೆ.

    ಆಗಸ್ಟ್ 18ರಂದು  ಟೀಸರ್ ಚಿತ್ರೀಕರಣ ನಡೆಯಲಿದ್ದು, ಸೆಪ್ಟೆಂಬರ್ 2 , ಅಭಿನಯ ಚಕ್ರವರ್ತಿ ಸುದೀಪ್ ರವರ ಹುಟ್ಟಿದ ದಿನದಂದು ಟೀಸರ್ ಬಿಡುಗಡೆ ಮತ್ತು ಎಲ್ಲಾ ಮಾಹಿತಿಗಳು ಲಭ್ಯವಾಗಲಿದೆ. ನಿರ್ದೇಶಕರ ಹುಟ್ಟುಹಬ್ಬದಂದು(ಆಗಸ್ಟ್ 15) ಟೀಮ್ ಅನೌನ್ಸ್ ಆಗಲಿದೆ. ಈ ಪೋಸ್ಟರ್ ನಲ್ಲಿರುವ ಸ್ಕ್ಯಾನ್ ಮಾಡಿ ಮ್ಯಾಜಿಕ್ ನೋಡಿ!  ನಿಮಗೊಂದು ಅಪರೂಪದ ವಿಷಯ ಸಿಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೂರಪ್ಪ ಬಾಬುಗೆ ಸೆಕ್ಯೂರಿಟಿ ಗಾರ್ಡ್ ಕೆಲಸ ಕೊಡ್ತೀನಿ ಎಂದ ಚಕ್ರವರ್ತಿ ಚಂದ್ರಚೂಡ

    ಸೂರಪ್ಪ ಬಾಬುಗೆ ಸೆಕ್ಯೂರಿಟಿ ಗಾರ್ಡ್ ಕೆಲಸ ಕೊಡ್ತೀನಿ ಎಂದ ಚಕ್ರವರ್ತಿ ಚಂದ್ರಚೂಡ

    ನ್ನಡದ ಹೆಸರಾಂತ ನಿರ್ಮಾಪಕ ಸೂರಪ್ಪ ಬಾಬು (Surappa Babu) ವಿರುದ್ಧ ಮತ್ತೆ ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ (Chakravarty Chandrachuda) ಹರಿಹಾಯ್ದಿದ್ದಾರೆ. ಮೊನ್ನೆಯಷ್ಟೇ ವಿಡಿಯೋವೊಂದನ್ನು ಮಾಡಿ ಸೂರಪ್ಪ ಬಾಬು ಅವರನ್ನು ‘ಶಿಖಂಡಿ’ ಎಂದು ಕರೆದಿದ್ದರು ಚಂದ್ರಚೂಡ, ಇಂದು ಮತ್ತೆ ಮಾಧ್ಯಮ ಗೋಷ್ಠಿಯಲ್ಲಿ’ಸೂರಪ್ಪ ಬಾಬುಗೆ ನಮ್ಮ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಖಾಲಿ ಇದೆ. ಬೇಕಾದರೆ ಕೊಡುತ್ತೇನೆ’ ಎಂದು ವಾಗ್ದಾಳಿ ನಡೆಸಿದರು.

    ಕಿಚ್ಚ ಸುದೀಪ್ (Sudeep) ವಿಚಾರವಾಗಿ ಒಂದು ಕಡೆ ನಿರ್ಮಾಪಕ ಎನ್.ಕುಮಾರ್ (N. Kumar) ಮತ್ತು ಸುದೀಪ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದರೆ, ಮತ್ತೊಂದು ಕಡೆ ಇದೇ ಸುದೀಪ್ ಅವರ ವಿಚಾರವಾಗಿ ನಿರ್ಮಾಪಕ ಸೂರಪ್ಪ ಬಾಬು ಮತ್ತು ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಕಚ್ಚಾಡಿಕೊಳ್ಳುತ್ತಿದ್ದಾರೆ. ಈ ಕಚ್ಚಾಟ ಅಷ್ಟು ಸುಲಭಕ್ಕೆ ಮುಗಿಯುವಂತೆ ಕಾಣುತ್ತಿಲ್ಲ.

    ಸೂರಪ್ಪ ಬಾಬು ವಿಚಾರದಲ್ಲಿ ಚಂದ್ರಚೂಡ ವಿಡಿಯೋವೊಂದನ್ನು ಮಾಡಿ ಯೂಟ್ಯೂಬ್ ಗೆ ಹಾಕಿದ್ದರು. ಅದರಲ್ಲಿ ಸೂರಪ್ಪ ಬಾಬು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಸೂರಪ್ಪ ಬಾಬು ಫ್ಯಾಮಿಲಿಯನ್ನು ಈ ವಿಚಾರದಲ್ಲಿ ಎಳೆತಂದಿದ್ದರು. ಬಾಬು ಮಗಳ ಬಗ್ಗೆಯೂ ಕೆಲವೊಂದಿಷ್ಟು ಮಾಹಿತಿಯನ್ನು ಆಚೆ ಹಾಕಿದ್ದರು. ಇದು ಬಾಬು ಕೋಪಕ್ಕೆ ಕಾರಣವಾಗಿತ್ತು. ಇದನ್ನೂ ಓದಿ:ಮೋಹನ್ ಲಾಲ್-ನಂದಕಿಶೋರ್ ಚಿತ್ರಕ್ಕೆ ಚಾಲನೆ: ಇದು ಪ್ಯಾನ್ ಇಂಡಿಯಾ ಸಿನಿಮಾ

    ನಿನ್ನೆಯಷ್ಟೇ ಸೂರಪ್ಪ ಬಾಬು ಮಾಧ್ಯಮಗೋಷ್ಠಿಯಲ್ಲಿ ಚಂದ್ರಚೂಡ ಅವರ ವಿರುದ್ಧ ಹಲವಾರು ಆರೋಪ ಮಾಡಿದ್ದರು. ಚಂದ್ರಚೂಡ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿದ್ದರು. ಜೊತೆಗೆ ಚಂದ್ರಚೂಡ ಯಾರು ಅಂತಾನೇ ತಮಗೆ ಗೊತ್ತಿಲ್ಲ. ಅವರಿಗೂ ಈ ವಿವಾದಕ್ಕೂ ಸಂಬಂಧವಿಲ್ಲ ಎಂದಿದ್ದರು.

     

    ಇಂದು ಮತ್ತೆ ಚಂದ್ರಚೂಡ ಮಾಧ್ಯಮಗಳ ಜೊತೆ ಮಾತನಾಡಿ, ‘ಸುದೀಪ್ ಅವರು ಸುಮ್ಮನಿದ್ದರೂ ನಾನು ಈ ವಿಚಾರದಲ್ಲಿ ಸುಮ್ಮನಿರುವುದಿಲ್ಲ. ಸುದೀಪ್ ಅವರಿಗೆ ಸೂರಪ್ಪ ಬಾಬು ಆರು ಕೋಟಿ ರೂಪಾಯಿ ಕೊಡಬೇಕು. ಅಲ್ಲದೇ ಅಣ್ಣನಂತಿರುವ ಸುದೀಪ್ ಅವರ ಮನಸ್ಸಿಗೆ ಬಾಬು ಸಾಕಷ್ಟು ನೋವು ಕೊಟ್ಟಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ಇಲ್ಲಿಗೆ ಬಿಡುವುದಿಲ್ಲ’ ಎಂದಿದ್ದಾರೆ ಚಂದ್ರಚೂಡ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುದೀಪ್ ಅವರಿಗೆ ಸೂರಪ್ಪ ಬಾಬು 6 ಕೋಟಿ ರೂಪಾಯಿ ಕೊಡಬೇಕು : ಚಕ್ರವರ್ತಿ ಚಂದ್ರಚೂಡ

    ಸುದೀಪ್ ಅವರಿಗೆ ಸೂರಪ್ಪ ಬಾಬು 6 ಕೋಟಿ ರೂಪಾಯಿ ಕೊಡಬೇಕು : ಚಕ್ರವರ್ತಿ ಚಂದ್ರಚೂಡ

    ಕಿಚ್ಚ ಸುದೀಪ್ (Sudeep) ವಿಚಾರವಾಗಿ ಒಂದು ಕಡೆ ನಿರ್ಮಾಪಕ ಎನ್.ಕುಮಾರ್ (N. Kumar) ಮತ್ತು ಸುದೀಪ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದರೆ, ಮತ್ತೊಂದು ಕಡೆ ಇದೇ ಸುದೀಪ್ ಅವರ ವಿಚಾರವಾಗಿ ನಿರ್ಮಾಪಕ ಸೂರಪ್ಪ ಬಾಬು (Surappa Babu) ಮತ್ತು ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಕಚ್ಚಾಡಿಕೊಳ್ಳುತ್ತಿದ್ದಾರೆ. ಈ ಕಚ್ಚಾಟ ಅಷ್ಟು ಸುಲಭಕ್ಕೆ ಮುಗಿಯುವಂತೆ ಕಾಣುತ್ತಿಲ್ಲ.

    ಸೂರಪ್ಪ ಬಾಬು ವಿಚಾರದಲ್ಲಿ ಚಂದ್ರಚೂಡ (Chakravarty Chandrachuda) ವಿಡಿಯೋವೊಂದನ್ನು ಮಾಡಿ ಯೂಟ್ಯೂಬ್ ಗೆ ಹಾಕಿದ್ದರು. ಅದರಲ್ಲಿ ಸೂರಪ್ಪ ಬಾಬು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಶಿಖಂಡಿ ಎನ್ನುವ ಪದಬಳಕೆಯನ್ನೂ ಚಂದ್ರಚೂಡ ಮಾಡಿದ್ದರು. ಜೊತೆಗೆ ಸೂರಪ್ಪ ಬಾಬು ಫ್ಯಾಮಿಲಿಯನ್ನು ಈ ವಿಚಾರದಲ್ಲಿ ಎಳೆತಂದಿದ್ದರು. ಇದನ್ನೂ ಓದಿ:ರಾಜಮೌಳಿ ಡೈರೆಕ್ಷನ್, ರಾಮ್ ಚರಣ್ ಜೊತೆ ಆಕ್ಟಿಂಗ್- ಪ್ರಭಾಸ್ ಕೊಟ್ರು ಗುಡ್ ನ್ಯೂಸ್

     

    ನಿನ್ನೆಯಷ್ಟೇ ಸೂರಪ್ಪ ಬಾಬು ಮಾಧ್ಯಮಗೋಷ್ಠಿಯಲ್ಲಿ ಚಂದ್ರಚೂಡ ಅವರ ವಿರುದ್ಧ ಹಲವಾರು ಆರೋಪ ಮಾಡಿದ್ದರು. ಚಂದ್ರಚೂಡ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿದ್ದರು. ಜೊತೆಗೆ ಚಂದ್ರಚೂಡ ಯಾರು ಅಂತಾನೇ ತಮಗೆ ಗೊತ್ತಿಲ್ಲ. ಅವರಿಗೂ ಈ ವಿವಾದಕ್ಕೂ ಸಂಬಂಧವಿಲ್ಲ ಎಂದಿದ್ದರು.

     

    ಇಂದು ಮತ್ತೆ ಚಂದ್ರಚೂಡ ಮಾಧ್ಯಮಗಳ ಜೊತೆ ಮಾತನಾಡಿ, ‘ಸುದೀಪ್ ಅವರು ಸುಮ್ಮನಿದ್ದರೂ ನಾನು ಈ ವಿಚಾರದಲ್ಲಿ ಸುಮ್ಮನಿರುವುದಿಲ್ಲ. ಸುದೀಪ್ ಅವರಿಗೆ ಸೂರಪ್ಪ ಬಾಬು ಆರು ಕೋಟಿ ರೂಪಾಯಿ ಕೊಡಬೇಕು. ನನ್ನ ಮನೆಯಲ್ಲಿ ಸೆಕ್ಯೂರಿಟಿ ಗಾಡ್ ಪೋಸ್ಟ್ ಖಾಲಿ ಇದೆ. ಬೇಕಾದರೆ ಆ ಕೆಲಸವನ್ನು ಕೊಡುತ್ತೇನೆ’ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಾಯಕಿ ಮಂಗ್ಲಿಗೆ ನಾಯಕಿಯಾಗುವ ಕನಸು ಭಗ್ನ: ಅದಕ್ಕೆ ಕಾರಣ ಯಾರು?

    ಗಾಯಕಿ ಮಂಗ್ಲಿಗೆ ನಾಯಕಿಯಾಗುವ ಕನಸು ಭಗ್ನ: ಅದಕ್ಕೆ ಕಾರಣ ಯಾರು?

    ತೆಲುಗು ಚಿತ್ರರಂಗದ ಹೆಸರಾಂತ ಗಾಯಕಿ, ಕನ್ನಡದಲ್ಲೂ ಹಲವಾರು ಗೀತೆಗಳನ್ನು ಹಾಡಿರುವ ಮಂಗ್ಲಿ (Mangli), ‘ಪಾದರಾಯ’ (Padaraya) ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶ ಮಾಡಬೇಕಿತ್ತು. ನಟ, ನಿರ್ದೇಶಕ ನಾಗಶೇಖರ್ (Nagasekhar) ನಾಯಕನಾಗಿ ನಟಿಸಲಿರುವ ಪಾದರಾಯ ಚಿತ್ರಕ್ಕೆ ಮಂಗ್ಲಿ ನಾಯಕಿಯಾಗಿ ಆಯ್ಕೆ ಕೂಡ ಆಗಿದ್ದರು. ಈ ಮಾಹಿತಿಯನ್ನು ಚಿತ್ರತಂಡ ಮತ್ತು ಸ್ವತಃ ಮಂಗ್ಲಿ ಕೂಡ ಹೇಳಿಕೊಂಡಿದ್ದರು. ಚಿತ್ರತಂಡದಲ್ಲಿ ಹಲವು ಬೆಳವಣಿಗೆಗೆಳು ನಡೆದಿವೆ. ಹಾಗಾಗಿ ಮಂಗ್ಲಿ ನಟನೆಯ ಮೊದಲ ಸಿನಿಮಾ ನಿಂತಿದೆ.

    ನಾಗಶೇಖರ್ ಮೇಲೆ ಹಲವು ಆರೋಪಗಳನ್ನು ಮಾಡಿರುವ ನಿರ್ದೇಶಕ ಡಿ.ಜೆ ಚಕ್ರವರ್ತಿ, ನಾಗಶೇಖರ್ ಜೊತೆ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಪಾದರಾಯ ಸಿನಿಮಾವನ್ನು ಬೇರೆಯವರ ಜೊತೆ ಮಾಡುವ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಹಂಚಿಕೊಂಡಿದ್ದಾರೆ. ‘ಪಾದರಾಯ ಸಿನಿಮಾವನ್ನು ನಾಗಶೇಖರ್ ಜೊತೆ ಮಾಡುವುದಿಲ್ಲ. ಹಾಗಾಗಿ ಮಂಗ್ಲಿ ಕುರಿತು ಸದ್ಯಕ್ಕೆ ಯಾವುದೇ ನಿರ್ಧಾರ ತಗೆದುಕೊಂಡಿಲ್ಲ. ನಿರ್ಮಾಪಕರು ಕೂಡ ಬದಲಾಗಲಿದ್ದಾರೆ. ನಾಯಕ ಯಾರು ಅನ್ನುವುದರ ಮೇಲೆ ನಾಯಕಿಯ ನಿರ್ಧಾರ ಆಗಲಿದೆ’ ಎಂದಿದ್ದಾರೆ ಚಕ್ರವರ್ತಿ. ಇದನ್ನೂ ಓದಿ: ನಟ ಉಪೇಂದ್ರ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣಾ ಆಯೋಗ

    ಪಾದರಾಯ ಚಿತ್ರಕ್ಕೆ ನಾಯಕ ಯಾರು ಎನ್ನುವುದರ ಮೇಲೆ ನಾಯಕಿಯ ತೀರ್ಮಾನ ಆಗುವುದಾಗಿ ಸ್ವತಃ ನಿರ್ದೇಶಕರೇ ಹೇಳಿರುವುದರಿಂದ ಮಂಗ್ಲಿ ಮುಂದಿನ ದಿನಗಳಲ್ಲಿ ಈ ಚಿತ್ರದಲ್ಲಿ ಇರುತ್ತಾರಾ ಎನ್ನುವುದು ಯಕ್ಷಪ್ರಶ್ನೆ. ಹಾಗಾಗಿ ಮಂಗ್ಲಿಗೆ ಪಾದರಾಯ ಮೊದಲ ಚಿತ್ರ ಆಗುವುದು ಬಹುತೇಕ ಅನುಮಾನ. ಕನ್ನಡದಲ್ಲಿ ಹಲವು ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಅವರು, ಕನ್ನಡ ಚಿತ್ರೋದ್ಯಮದ ಮೂಲಕ ನಾಯಕಿಯೂ ಆಗಲಿದ್ದರು. ಸಹಜವಾಗಿಯೇ ಅದು ಅವರಿಗೆ ಖುಷಿ ತಂದಿತ್ತು.

    ನಾಗಶೇಖರ್ ಮತ್ತು ಚಕ್ರವರ್ತಿ ನಡುವೆ ಹಲವು ಬೆಳವಣಿಗೆಗಳು ನಡೆದಿವೆ. ಸ್ವತಃ ಚಕ್ರವರ್ತಿ ಚಂದ್ರಚೂಡ ಅವರೇ ಎರಡ್ಮೂರು ದಿನಗಳ ಹಿಂದೆ ಇದೇ ಸಿನಿಮಾದ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಪತ್ರವೊಂದನ್ನು ಬರೆದಿದ್ದರು. ಅದರಲ್ಲೂ ಕೂಡ ನಾಗಶೇಖರ್ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು. ಆ ಎಲ್ಲ ಆರೋಪಗಳಿಗೂ ನಾನು ಈಗಲೂ ಬದ್ಧನಾಗಿದ್ದೇನೆ ಎನ್ನುವುದು ಅವರ ಮಾತು. ಹಾಗಂತ ಈ ಸಿನಿಮಾ ನಿಲ್ಲುವುದಿಲ್ಲ, ಬೇರೆ ನಿರ್ಮಾಪಕರೊಟ್ಟಿಗೆ ಸಿನಿಮಾ ಮಾಡುತ್ತೇನೆ ಎನ್ನುವುದು ಅವರ ಸ್ಪಷ್ಟನೆ. ಈ ಸಿನಿಮಾದಲ್ಲಿ ಮಂಗ್ಲಿ ಇರುತ್ತಾರಾ ಎನ್ನುವ ಕುತೂಹಲವೂ ಇದೆ.

  • ‘ಪಾದರಾಯ’ ಸಿನಿಮಾ ಹೆಸರಿನಲ್ಲಿ ಹಣದ ದಂಧೆ: ಎಚ್ಚರಿಕೆ ಕೊಟ್ಟ ನಿರ್ದೇಶಕ ಡಿ.ಜೆ.ಚಕ್ರವರ್ತಿ

    ‘ಪಾದರಾಯ’ ಸಿನಿಮಾ ಹೆಸರಿನಲ್ಲಿ ಹಣದ ದಂಧೆ: ಎಚ್ಚರಿಕೆ ಕೊಟ್ಟ ನಿರ್ದೇಶಕ ಡಿ.ಜೆ.ಚಕ್ರವರ್ತಿ

    ನಾಗಶೇಖರ್ (Nagasekhar) ಮತ್ತು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ (Chakraborty Chandrachuda) ಕಾಂಬಿನೇಷನ್ ನಲ್ಲಿ ‘ಪಾದರಾಯ’ (Padaraya) ಸಿನಿಮಾ ಮೂಡಿ ಬರಲಿದೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು. ಈ ಸಿನಿಮಾಗೆ ಜಾಕ್ ಮಂಜು (Jack Manju) ಅವರೇ ನಿರ್ಮಾಪಕರು ಎನ್ನಲಾಗಿತ್ತು. ಈ ಸಿನಿಮಾಗಾಗಿ ನಾಗಶೇಖರ್ ಅಂಜನಾದ್ರಿ ಬೆಟ್ಟ ಹತ್ತಿ, ವ್ರತ ಮಾಡಿ ತಯಾರಿ ಆಗುತ್ತಿದ್ದಾರೆ ಎನ್ನುವ ವಿಚಾರವೂ ತಿಳಿದು ಬಂದಿತ್ತು. ಆದರೆ, ಈ ಎಲ್ಲ ಸನ್ನಿವೇಶಗಳು ಬದಲಾದಂತೆ ಕಾಣುತ್ತಿದೆ. ಪಾದರಾಯ ಹೆಸರಿನಲ್ಲಿ ಹಲವರು ಹಣ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಮಾಡಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಅದರ ಸಾರಾಂಶ ಹೀಗಿದೆ..

    ಓವರ್ ಟು ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ..

    ನಾಲ್ಕು ತಿಂಗಳ ಹಿಂದೆ “ಪಾದರಾಯ “ಎಂಬ ಶೀರ್ಷಿಕೆ ಅಡಿ ಒಂದು ಸಿನಿಮಾ ಘೋಷಣೆಯಾಯ್ತು.ಇದು ಕೇವಲ ಘೋಷಣೆಯಾಗಿಯೇ ಉಳಿಯಿತು, ಛಾಯಾಗ್ರಹಣ ಸತ್ಯ ಹೆಗಡೆ ಸಂಗೀತ ಅಜನೀಶ್ ಲೋಕನಾಥ್ ಎಡಿಟರ್ ಆಂಟೋನಿ ನಾಯಕಿಯಾಗಿ ತೆಲುಗಿನ ಗಾಯಕಿ ಮಂಗ್ಲಿ, ನಾಯಕ ನಟರಾಗಿ ನಿರ್ದೇಶಕ, ನಟ ನಾಗಶೇಖರ್ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಚಕ್ರವರ್ತಿ ಡಿಜೆ ಎಂಬ ನಾನು ಎಂದು ನಿಕ್ಕಿಯಾಗಿತ್ತು. ಇವಿಷ್ಟೂ ಘೋಷಣೆಯ ಹಂತದಲ್ಲೇ ಉಳಿದವು. ಮೇಲ್ಕಂಡ ಯಾರೊಬ್ಬರಿಗೂ ಈ ಸಿನಿಮಾ ಕುರಿತಂತೆ ಯಾವುದೇ ಒಪ್ಪಂದಗಳಾಗಲಿ. ಹಣಕಾಸಿನ ಮುಂಗಡವಾಗಲಿ ನಿರ್ದೇಶಕನಾದ ನನ್ನ ಅರಿವಿಗೆ ಬಂದಂತೆ ಆಗಿರುವುದಿಲ್ಲ. ಈ ನಡುವೆ ನಾಗಶೇಖರ್ ಹಾಗೂ ಜಾಕ್ ಮಂಜು ಅವರು ನಿರ್ಮಾಪಕರೆಂದು ಹೇಳಲಾಗಿತ್ತು. ಅಲ್ಲದೇ ಎರಡೂವರೆ ತಿಂಗಳ ಹಿಂದೆಯೇ ನಿರ್ಮಾಪಕರಾದ ಜಾಕ್ ಮಂಜು ಅವರು ನಾನು ಈ ಸಿನಿಮಾ ನಿರ್ಮಿಸುತ್ತಿಲ್ಲವೆಂದು ಮೌಖಿಕವಾಗಿ ಅವರ ಜೆಪಿ ನಗರದ ಕಛೇರಿಯಲ್ಲಿ ನನಗೂ ಹಾಗೂ ನಾಗಶೇಖರ್ ಅವರಿಗೂ ವ್ಯವಹಾರಿಕ ಕಾರಣಗಳ ನೀಡಿ  ಸ್ಪಷ್ಟಪಡಿಸಿದರು.

    ಈ ನಡುವೆ ನಿರ್ಮಾಪಕ – ನಿರ್ದೇಶಕರಾದ ಆರ್.ಚಂದ್ರು ಅವರು ನಿರ್ಮಾಣ ಮಾಡುತ್ತೇನೆಂದು ಮೌಖಿಕವಾಗಿ ಹೇಳಿದರಾದರೂ ಯಾವುದೇ ಒಪ್ಪಂದ ಮಾಡಿಕೊಂಡಿರುವುದಿಲ್ಲ. ರಚನೆಕಾರ ನಿರ್ದೇಶಕನಾದ ನನಗೆ ಈವರೆಗೂ ಈ ಮೇಲ್ಕಂಡ ಯಾವುದೇ ತಂತ್ರಜ್ಞರು, ನಿರ್ಮಾಪಕರಿಂದ ಯಾವುದೇ ಒಪ್ಪಂದ ಪತ್ರ, ಮುಂಗಡ ಹಣ, ಸಿನಿಮಾ ತಯಾರಿ ಯಾವುದರ ಕುರಿತಾಗಿ ಯಾವೊಂದು ವಿಷಯವೂ ನಡೆದಿರುವುದಿಲ್ಲ. ಈ ನಡುವೆ ಸಿನಿಮಾಗೆ ಸಂಬಂಧವಿಲ್ಲದ ವ್ಯಕ್ತಿಯೊಬ್ಬರು ನಾಗಶೇಖರ್ ಅವರಿಗೆ ಅವರ ವೈಯಕ್ತಿಕವಾಗಿ ಎರಡೂ ಲಕ್ಷದ ನಲವತ್ತು ಸಾವಿರ ರುಪಾಯಿ ಹಣ ಕೊಟ್ಟಿರುವ ದಾಖಲಾತಿ ಹಿಡಿದುಕೊಂಡು ನಾನೇ ಈ ಸಿನಿಮಾದ ನಿರ್ಮಾಪಕ. ಆರ್ ಚಂದ್ರು ಅವರಿಂದ ನಾಗಶೇಖರ್ ಗೆ ಐದುಕೋಟಿ ರುಪಾಯಿ ಹಣದ ಒಪ್ಪಂದ ಈ ಸಿನಿಮಾದ ಕಥೆಯ ಮೇಲಾಗಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ.

    ಅಲ್ಲದೇ ನಾಗಶೇಖರ್ ಅವರು ಆಡಿಯೋ ರೈಟ್ಸ್ ಮಾರಾಟ ಮಾಡಿದ್ದಾರೆ. ಯಾರೂ ಈ ಸಿನಿಮಾ ಮಾಡಬೇಡಿ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಓರ್ವ ನಿರ್ದೇಶಕನ ಗಮನಕ್ಕೇ ಬಾರದೇ ಆಡಿಯೋ ರೈಟ್ಸ್ ಮಾರಾಟ, ಐದು ಕೋಟಿ ಒಪ್ಪಂದ ಅಥವಾ ಯಾವುದೇ ಹಣದ ವ್ಯವಹಾರ ಮಾಡುವುದು ಅಕ್ಷಮ್ಯ ಅಪರಾಧ. ಈ ಕುರಿತು ವಿಚಾರಿಸಲಾಗಿ ಈ ಬಗೆಯ ಪ್ರಯತ್ನಗಳು ನಡೆಯಿತು. ಆದರೆ ಸಫಲವಾಗಿಲ್ಲವೆಂದು ತಿಳಿದು ಬಂತು. ಈ ಕಥೆಯನ್ನೂ ನಾನು ಚಿತ್ರಕಥೆಯ ಸಹಿತ 2019 ರಲ್ಲೇ the cinematograph act 1952 ಪ್ರಕಾರ ನೊಂದಾಯಿಸಿ ಸಮಸ್ತ ದಾಖಲಾತಿ ಮಾಡಿಟ್ಟಿದ್ದೆ. (ನನ್ನ ಪುಣ್ಯ ) ಈ ಕಥೆ ಅಂಜನಾದ್ರಿ ಸುತ್ತಮುತ್ತಲಿನ ಭಾಗದ ಚಪ್ಪಲಿ ಕಳ್ಳ ಮತ್ತವನ ಹೆಂಡತಿಯ ಕಥೆಯಾಗಿರುತ್ತದೆ. ಇದನ್ನು ರೂಪಿಸಲು ಮೂರೂವರೆ ವರ್ಷದಲ್ಲಿ ಏಳು ರಾಜ್ಯ ಸುತ್ತಿದ್ದೇನೆ. ಹಲವಾರು ಗ್ರಂಥ ಓದಿದ್ದೇನೆ. ನನ್ನ ಹಣ, ಬೆವರು, ಹಸಿವು ಕಟ್ಟಿ ಕನಸುಗಣ್ಣುಗಳಿಂದ ಬರೆದಿಟ್ಟುಕೊಂಡಿದ್ದೇನೆ. ಹೊಟ್ಟೆಗೆ ಸಿನಿಮಾ ಸೆಟ್ ನ ಇಡ್ಲಿಯೋ ಅನ್ನವನ್ನೊ ತಿಂದಿರುವ ಯಾವೊಬ್ಬ ವ್ಯಕ್ತಿಯೂ ಕಂಡವರ ಕಣ್ಣಿಂದ ಉದುರಿದ ಕನಸುಗಳನ್ನು ಕಣ್ಣೀರಾಗಿಸುವುದಿಲ್ಲ. ಇದನ್ನೂ ಓದಿ:ಅಪ್ಪು ಹೆಸರಿನಲ್ಲಿ ಮಕ್ಕಳ ಚಿತ್ರೋತ್ಸವ: ಅದ್ಧೂರಿ ಚಾಲನೆ

    ಈ ಕಥೆ ಮತ್ತು ಸಿನಿಮಾದ ಹಕ್ಕು ಸಂಪೂರ್ಣ ಡಿ ಜೆ ಚಕ್ರವರ್ತಿ (ಚಂದ್ರಚೂಡ್ ) ಎಂಬ ನನ್ನದೇ ಆಗಿರುತ್ತದೆ. ಯಾರಾದರೂ ಈ ವಿಷಯದಲ್ಲಿ ಯಾರಿಗೇ ಹಣಕೊಟ್ಟಿದ್ದರೂ ನಾನು ಹೊಣೆಯಲ್ಲ. ನಾನು ಮುಂದಿನ ದಿನಗಳಲ್ಲಿ ಪಾದರಾಯ ಎಂದು ನಾಮಕರಣ ಮಾಡಿದ ಈ ಚಿತ್ರವನ್ನು ನಾನೇ ನಟಿಸಿ ನಿರ್ದೇಶಿಸಲಿದ್ದೇನೆ ಅಥವಾ ನನ್ನ ವಿವೇಚನೆಗೆ ತಕ್ಕಂತಹ ತಂಡದೊಂದಿಗೆ ಮಾಡಬಹುದು. ಈ ಕುರಿತಾಗಿ ದೂರವಾಣಿ ಸಂಭಾಷಣೆಯ ಮುಖಾಂತರ ಆರ್.ಚಂದ್ರು ಅವರಲ್ಲಿ ಚರ್ಚಿಸಲಾಗಿ ನಾನು ನಾಗಶೇಖರ್ ಅವರಿಗೆ ಯಾವುದೇ ಮಾತುಕೊಟ್ಟಿಲ್ಲ. ಐದು ಕೋಟಿ ಕೊಟ್ಟು ಸಿನಿಮಾ ಮಾಡುತ್ತೇನೆಂದು ಯಾವುದೇ ರೀತಿಯಲ್ಲಿ ಮುಂದಾಗಿಲ್ಲವೆಂದು ಸ್ಪಷ್ಟನೆ ಕೊಟ್ಟಿರುತ್ತಾರೆ.

    ಕೆಲವು ದುಷ್ಕರ್ಮಿಗಳು ವಿಕೃತರು ಈ ಕಥೆಯನ್ನೇ ಸೋಷಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾ, ನಾನು ಕಥೆಯನ್ನು ನಿರ್ಮಾಪಕರಿಗೆ ತಂತ್ರಜ್ಞರಿಗೆ ಚರ್ಚೆಯಲ್ಲಿ ರೀಡಿಂಗ್ ಕೊಡುವ ಧ್ವನಿ ಮುದ್ರಿಸಿ ಹೊರತಂದು ಸಿನಿಮಾ -ಮಾನವೀಯತೆಗೆ ದ್ರೋಹ ಬಗೆಯುವ ಪ್ರಯತ್ನ ಪಡುವುದೂ ಗಮನಕ್ಕೆ ಬಂದಿದೆ, ಅಂಥದ್ದೇನಾದರೂ ಕಂಡು ಬಂದರೆ ಉಗ್ರ ಕಾನೂನು ಕ್ರಮಕ್ಕೂ ಮುಂದಾಗಲು ಈಗಾಗಲೇ ಸರ್ವ ತಯಾರಿ ನಡೆದಿದೆ. ಈ ಕುರಿತಾಗಿ ಯಾರೂ ಯಾವುದೇ ಹಣಕಾಸಿನ ವ್ಯವಹಾರಗಳನ್ನು ಮಾಡಿ ತೊಂದರೆಗೀಡಾಗಬಾರದೆಂದು ಮತ್ತು ಈ ಬಗೆಯ ಪ್ರಯತ್ನಗಳು ನಡೆದರೆ ನನ್ನ ಗಮನಕ್ಕೆ ತರಲು ವಿನಂತಿಸುತ್ತೇನೆ.

  • ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಗಾಯಕಿ ಮಂಗ್ಲಿ

    ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಗಾಯಕಿ ಮಂಗ್ಲಿ

    ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ಹೇಳಿರುವ ಮಂಗ್ಲಿ, ಇದೀಗ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಗಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಈ ಗಾಯಕಿ, ಮೊದಲ ಬಾರಿಗೆ ನಾಯಕಿಯಾಗಿ ಪ್ರವೇಶ ಮಾಡುತ್ತಿದ್ದಾರೆ. ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ನಿರ್ದೇಶನದಲ್ಲಿ ಮೂಡಿ ಬರಲಿರುವ ಪಾದರಾಯ ಚಿತ್ರಕ್ಕೆ ಇವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ಸದ್ಯ ವೇದ ಸಿನಿಮಾದ ‘ಗಿಲ್ಲಕ್ಕೋ’ ಹಾಡಿನ ಮೂಲಕ ಮನೆಮಾತಾಗಿರುವ ಮಂಗ್ಲಿ, ತ್ರಿಬಲ್ ರೈಡಿಂಗ್, ವಿಕ್ರಾಂತ್ ರೋಣ, ದಿಪ್ ಪಸಂದ್, ರಾಬರ್ಟ್ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳ ಹಾಡಿಗೆ ದನಿಯಾಗಿದ್ದಾರೆ. ಅಷ್ಟೂ ಹಾಡುಗಳು ಸೂಪರ್ ಹಿಟ್ ಎನ್ನುವುದು ವಿಶೇಷ. ಇದೇ ಮೊದಲ ಬಾರಿಗೆ ಅವರು ನಾಯಕಿಯಾಗಿ ನಟಿಸುತ್ತಿದ್ದು, ನಾಗಶೇಖರ್ ಈ ಸಿನಿಮಾದ ನಾಯಕ. ಇದನ್ನೂ ಓದಿ: ಸಂಕ್ರಾಂತಿ ಹಾಡಿಗೆ ಸುಂದರಿಯರ ಜೊತೆ ಕುಣಿದ ರಮೇಶ್ ಅರವಿಂದ್

    ಇದೊಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದ್ದು, 2013-14ರಲ್ಲಿ ನಡೆದ ಘಟನೆಯನ್ನು ಚಿತ್ರವಾಗಿಸುತ್ತಿದ್ದಾರೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ. ಈ ಘಟನೆಯು ಆರು ರಾಜ್ಯಗಳಿಗೆ ಸಂಬಂಧಿಸಿದ್ದಾಗಿದ್ದು, ಅದನ್ನು ಹೊಸ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ. ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿರುವ ಅವರು, ಈ ಚಿತ್ರಕ್ಕೆ ಪಾದರಾಯ ಎಂದು ಹೆಸರಿಡುವುದಕ್ಕೂ ಕಾರಣವಿದೆಯಂತೆ. ಅದನ್ನು ಸಿನಿಮಾದಲ್ಲಿಯೇ ನೋಡಿ ಎನ್ನುತ್ತಾರೆ.

    ಈಗಾಗಲೇ ಪಾತ್ರಕ್ಕಾಗಿ ನಾಗಶೇಖರ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ತಯಾರಿಗಾಗಿಯೇ ಅವರು ಹಲವು ದಿನಗಳಿಂದ ಅಂಜನಾದ್ರಿ ಬೆಟ್ಟದಲ್ಲಿ ಬೀಡುಬಿಟ್ಟಿದ್ದಾರಂತೆ. ಈ ಬೆಟ್ಟದಲ್ಲಿ ನಡೆಯುವ ಪೂಜ ಪುನಸ್ಕಾರಗಳಲ್ಲೂ ಅವರು ಭಾಗಿಯಾಗಿದ್ದಾರೆ. ಅಲ್ಲದೇ, ಹನುಮನ ಮಾಲೆಯನ್ನೂ ಧರಿಸಿ, ಅಲ್ಲಿನ ಆಚಾರ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪಾದರಾಯ’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅತಿಥಿ ಪಾತ್ರ? ನೈಜ ಘಟನೆಯೇ ಚಿತ್ರದ ಜೀವಾಳ

    ‘ಪಾದರಾಯ’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅತಿಥಿ ಪಾತ್ರ? ನೈಜ ಘಟನೆಯೇ ಚಿತ್ರದ ಜೀವಾಳ

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಜಾಕ್ ಮಂಜು ಇದೀಗ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಸುದೀಪ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ನಿರ್ದೇಶಕ, ನಟ ನಾಗಶೇಖರ್ ಈ ಸಿನಿಮಾದ ನಾಯಕನಾಗಿದ್ದು, ಚಕ್ರವರ್ತಿ ಚಂದ್ರಚೂಡ ಇದರ ನಿರ್ದೇಶಕರು.

    ಕನ್ನಡ, ತಮಿಳು, ತೆಲುಗು, ಮಲಯಾಳಂ  ಹಾಗೂ ಹಿಂದಿ ಐದು ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾಗೆ ಪಾದರಾಯ ಎಂಬ ಟೈಟಲ್ ಇಡಲಾಗಿದ್ದು, ಕಾಂತಾರ ನಂತರ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಸತ್ಯ ಹೆಗಡೆ ಛಾಯಾಗ್ರಹಣ, ತಮಿಳನ ಖ್ಯಾತ ಸಂಕಲನಕಾರ ಆಂಟೋನಿ ಮುಂತಾದ ಖ್ಯಾತನಾಮರು ಕಾರ್ಯ ನಿರ್ವಹಿಸುತ್ತಿರುವುದು ಸಿನಿಮಾದ ಮತ್ತೊಂದು ವಿಶೇಷ. ಇದನ್ನೂ ಓದಿ: `ಅವತಾರ್ 2′ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ: 2 ಕೋಟಿ ಟಿಕೆಟ್ ಸೋಲ್ಡ್ ಔಟ್

    ಚಕ್ರವರ್ತಿ ಚಂದ್ರಚೂಡ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದರೆ, ಖ್ಯಾತ ನಿರ್ದೇಶಕ ಹಾಗೂ ನಟ ನಾಗಶೇಖರ್ ನಾಯಕ ನಟನಾಗುವ ಜೊತೆಗೆ ನಿರ್ಮಾಪಕರೂ ಆಗಿದ್ದಾರೆ. ದೇಶ ವ್ಯಾಪಿ ಸುದ್ದಿ ಮಾಡಿದ ನೈಜ ಘಟನೆಯೊಂದರ ಆಧಾರಿತ ಈ ಸಿನಿಮಾ ಹಲವು ಜೀವಂತ ಘಟ್ಟಗಳಿಂದ ಕೂಡಿದ್ದು, ಹಾಗಾಗಿ ಹನುಮ ಜಯಂತಿಯಂದೇ ಶೀರ್ಷಿಕೆ ಬಿಡುಗಡೆ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾ ಜನವರಿಯಿಂದ ಚಿತ್ರೀಕರಣ ಆರಂಭಿಸಲಿದೆ.

    ಸಿನಿಮಾದ ವಿಶೇಷ ಅಂದರೆ, 2016ರಲ್ಲಿ ಸಮಯದಲ್ಲಿ ನಡೆದ ಒಂದು ನೈಜ ಘಟನೆಯನ್ನು ಸಿನಿಮಾಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಅಂಜನಾದ್ರಿಯ ಸುತ್ತಾಮುತ್ತಾ ತುಂಬಾ ಬ್ಯಾಕ್ ವಾಟರ್ ನಲ್ಲಿ ಕಥೆ ನಡೆಯಲಿದೆ. ಪಾದರಾಯ ಕಥೆಯಗೂ ಮತ್ತು ಆಂಜನೇಯ ಪಾದಕ್ಕೂ ನಂಟಿದೆ. ಜೊತೆಗೆ ಅಯೋಧ್ಯೆಯಿಂದ ಬೆಂಗಳೂರಿನವರೆಗೂ ಕಥೆ ಸಾಗಿ ಬರಲಿದೆ ಎನ್ನುವುದು ಕುತೂಹಲದ ಅಂಶಗಳಾಗಿವೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ: ಅಚ್ಚರಿಯ ಮತ್ತೊಂದು ಹೆಸರು

    ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ: ಅಚ್ಚರಿಯ ಮತ್ತೊಂದು ಹೆಸರು

    ಬಿಗ್ ಬಾಸ್ ಸೀಸನ್ 9 ಈಗಾಗಲೇ ಏಳು ವಾರಗಳನ್ನು ಮುಗಿಸಿ, ಎಂಟನೇ ವಾರಕ್ಕೆ ಕಾಲಿಡುತ್ತಿದೆ. ಈ ವೇಳೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕುರಿತಂತೆ ಹಲವು ದಿನಗಳಿಂದ ನಾನಾ ಹೆಸರುಗಳು ಕೇಳಿ ಬರುತ್ತಿವೆ. ಈ ಹಿಂದೆ ಸೋನು ಶ್ರೀನಿವಾಸ್ ಗೌಡ ದೊಡ್ಮನೆ ಮರು ಪ್ರವೇಶ ಮಾಡುತ್ತಾರೆ ಎಂದು ಹೇಳಲಾಗಿತ್ತು. ಓಟಿಟಿ ಸೀಸನ್ ನಲ್ಲಿದ್ದ ಸೋನು ಗೌಡಗೆ ಬಿಗ್ ಬಾಸ್ ಸೀಸನ್ 9ಕ್ಕೂ ಹೋಗುತ್ತಾರೆ ಎನ್ನುವ ಮಾಹಿತಿ ಇತ್ತು. ಆದರೆ, ಈವರೆಗೂ ಅದು ಆಗಲಿಲ್ಲ.

    ಸೋನು ಶ್ರೀನಿವಾಸ್ ಗೌಡ ಹೆಸರು ಕೇಳಿ ಬಂದ ಬೆನ್ನಲ್ಲೇ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಕೂಡ ಬಿಗ್ ಬಾಸ್ ಮನೆ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುದ್ದಿ ಹರಿದಾಡಿತು. ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಅವರನ್ನು ಕಟ್ಟಿಹಾಕಲು ಚಕ್ರವರ್ತಿ ಚಂದ್ರಚೂಡ ಸರಿಯಾದ ಆಟಗಾರ. ಹಾಗಾಗಿ ಚಕ್ರವರ್ತಿ ಚಂದ್ರಚೂಡಗೆ ಈ ಬಾರಿ ಮತ್ತೊಮ್ಮೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಲಾಯಿತು. ಆದರೆ, ಈವರೆಗೂ ಅದು ಕೂಡ ಆಗಿಲ್ಲ. ಇದನ್ನೂ ಓದಿ: ವ್ಯಾಯಾಮ ಮಾಡುತ್ತಿದ್ದಾಗ ಜಿಮ್ ನಲ್ಲಿ ಕುಸಿದು ಬಿದ್ದು ನಟ ಸಿದ್ಧಾಂತ್ ನಿಧನ

    ಇದೀಗ ಮತ್ತೊಂದು ಅಚ್ಚರಿಯ ಹೆಸರು ಕೇಳಿ ಬಂದಿದ್ದು, ಮೊನ್ನೆಯಷ್ಟೇ ಮನೆಯಿಂದ ಹೊರ ಬಂದಿರುವ ಸಾನ್ಯ  ಅಯ್ಯರ್ ಅವರನ್ನು ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆ ಒಳಗೆ ಕಳುಹಿಸುತ್ತಾರೆ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಾನ್ಯ ಮತ್ತೆ ಹೋಗಲಿ ಎನ್ನುವ ಒತ್ತಾಯ ಕೂಡ ಕೇಳಿ ಬರುತ್ತಿದೆ. ಬಿಗ್ ಬಾಸ್ ಮನೆಯಿಂದ ಆಚೆ ಬಂದ ತಕ್ಷಣ ಹಲವು ಮಾಧ್ಯಮಗಳಿಗೆ ಸ್ಪರ್ಧಿಗಳು ಸಂದರ್ಶನ ನೀಡುತ್ತಿದ್ದರು. ಆದರೆ, ಸಾನ್ಯ ಈವರೆಗೂ ಯಾವುದೇ ಮಾಧ್ಯಮಕ್ಕೆ ಸಿಕ್ಕಿಲ್ಲ. ಹಾಗಾಗಿ ಇಂಥದ್ದೊಂದು ಮಾತು ಕೇಳಿ ಬಂದಿದೆ.

    ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಗಾಗಿ ಸಾನ್ಯ ಅಯ್ಯರ್, ಸೋನು ಶ್ರೀನಿವಾಸ್ ಗೌಡ, ಚಕ್ರವರ್ತಿ ಚಂದ್ರಚೂಡ ಮುಂತಾದವರ ಹೆಸರು ಕೇಳಿ ಬರುತ್ತಿವೆ ಹೊರತು, ಈವರೆಗೂ ಯಾರೂ ಮನೆ ಒಳಗೆ ಪ್ರವೇಶ ಮಾಡಿಲ್ಲ. ಈ ಸೀಸನ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಇರತ್ತಾ ಎನ್ನುವುದು ಗೊತ್ತಿಲ್ಲ. ಆದರೂ, ವಾರದಿಂದ ವಾರಕ್ಕೆ ಒಬ್ಬೊಬ್ಬರ ಹೊಸ ಹೆಸರಂತೂ ಕೇಳಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸೋನು ಬದಲು ದೊಡ್ಮನೆಗೆ ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಎಂಟ್ರಿ

    ಸೋನು ಬದಲು ದೊಡ್ಮನೆಗೆ ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಎಂಟ್ರಿ

    ಬಿಗ್ ಬಾಸ್(Bigg Boss) ಮನೆಯ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 18 ಜನವಿದ್ದ ದೊಡ್ಮನೆಯಲ್ಲಿ 12 ಜನ ಸ್ಪರ್ಧಿಗಳಾಗಿದ್ದಾರೆ. ಸಾಕಷ್ಟು ರೋಚಕ ತಿರುವುಗಳನ್ನು ಪಡೆದು ಮುನ್ನುಗ್ಗುತ್ತಿದೆ. ಹೀಗಿರುವಾಗ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಟಿವಿ ಸೀಸನ್‌ಗೆ ಲಗ್ಗೆ ಇಡುತ್ತಾರೆ ಎನ್ನಲಾಗಿತ್ತು. ಆದರೆ ಈಗ ಬೇರೆಯದ್ದೇ ಟ್ವಿಸ್ಟ್ ಸಿಕ್ಕಿದೆ. ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಚಕ್ರವರ್ತಿ ಚಂದ್ರಚೂಡ್ (Chakravarthy Chandrachuda) ಬಿಗ್ ಬಾಸ್‌ಗೆ ಕಾಲಿಡುತ್ತಿದ್ದಾರೆ.

    ಸಿನಿಮಾ ಹಾವಳಿ ನಡುವೆ ಕಿರುತೆರೆಯ ಬಿಗ್ ಬಾಸ್ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಬಿಗ್ ಬಾಸ್ ಸೀಸನ್ 9ರಲ್ಲಿ ಪ್ರವೀಣರು ಮತ್ತು ನವೀನರ ಜುಗಲ್‌ಬಂದಿ ನೋಡುಗರನ್ನ ಅಟ್ರಾಕ್ಟ್ ಮಾಡುತ್ತಿದೆ. ಈ ಸೀಸನ್ ಇದೀಗ 6 ವಾರಗಳು ಪೂರೈಸಿದ್ದು, ವೈಲ್ಡ್ ಕಾರ್ಡ್ ಎಂಟ್ರಿಗೆ ಕೌಂಟ್ ಡೌನ್ ಶುರುವಾಗಿದೆ. 6ನೇ ಸ್ಪರ್ಧಿಯಾಗಿ ಸಾನ್ಯ ಎಲಿಮಿನೇಟ್ ಆಗಿರುವ ಬೆನ್ನಲ್ಲೇ ಹಳೆಯ ಸೀಸನ್‌ನ ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್(Wild Card Entry) ಎಂಟ್ರಿಯ ಮೂಲಕ ಮನೆಗೆ ಲಗ್ಗೆ ಇಡಲಿದ್ದಾರಂತೆ.

    ಬಿಗ್ ಬಾಸ್ ಮನೆಯ(Bigg Boss House) ಆಟ ಸಾಕಷ್ಟು ಟ್ವಿಸ್ಟ್‌ಗಳನ್ನ ಪಡೆಯುತ್ತಿದ್ದು, ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಓಟಿಟಿ ಫೇಮ್ ಸೋನು ಅವರನ್ನ ಕಳುಹಿಸಲು ಬಿಗ್ ಬಾಸ್ ಟೀಮ್ ನಿರ್ಧರಿಸಿತ್ತು. ಆದರೆ ಸೋನು ಅವರ ವೈಯಕ್ತಿಕ ಕಾರಣಗಳಿಂದ ದೊಡ್ಮನೆಗೆ ಹೋಗಲು ನೋ ಎಂದಿದ್ದಾರೆ. ಇದನ್ನೂ ಓದಿ:ಆಧಾರ್ ಇರುವ ಪ್ರತಿಯೊಬ್ಬರು ಟ್ವಿಟ್ಟರ್ ಬ್ಲೂಟಿಕ್ ಖಾತೆ ಪಡೆಯಬೇಕು – ಮಸ್ಕ್ ನಿರ್ಧಾರಕ್ಕೆ ಕಂಗನಾ ಬೆಂಬಲ

    ಇದೀಗ ಬಿಗ್ ಬಾಸ್ ಸೀಸನ್ 8ರಲ್ಲಿ ಮನೆ ಮಾತಾಗಿದ್ದ ಚಕ್ರವರ್ತಿ ಚಂದ್ರಚೂಡ್ ಅವರು ಸೀಸನ್ 9ಕ್ಕೆ ಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಅಥವಾ ವದಂತಿನಾ ಎಂಬುದನ್ನ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]