Tag: ಚಕ್ರ

  • ಬೆಂಗಳೂರಿಗರೇ ಎಚ್ಚರವಾಗಿರಿ – ಕಾರು ನಿಂತಲ್ಲೇ ನಿಂತಿರುತ್ತೆ, ಚಕ್ರ ಮಾತ್ರ ಮಾಯವಾಗಿರುತ್ತೆ!

    ಬೆಂಗಳೂರಿಗರೇ ಎಚ್ಚರವಾಗಿರಿ – ಕಾರು ನಿಂತಲ್ಲೇ ನಿಂತಿರುತ್ತೆ, ಚಕ್ರ ಮಾತ್ರ ಮಾಯವಾಗಿರುತ್ತೆ!

    ಬೆಂಗಳೂರು: ಪಾರ್ಕಿಂಗ್‌ ಸಮಸ್ಯೆ (Parking Problem) ಎಂದು ಹೇಳಿ ಬೆಂಗಳೂರಿನಲ್ಲಿ (Bengaluru) ನಿಮ್ಮ ಕಾರನ್ನು ಹೊರಗಡೆ ನಿಲ್ಲುಸುತ್ತಿದ್ದೀರಾ? ಹಾಗಾದ್ರೆ ಎಚ್ಚರವಾಗಿರಿ. ನಿಮ್ಮ ಕಾರು (Car) ನಿಂತಲ್ಲೇ ನಿಂತಿರುತ್ತದೆ ಆದರೆ ಕಾರಿನ ಚಕ್ರ ಮಾತ್ರ ಮಾಯವಾಗಿರುತ್ತದೆ.

    ಮನೆ ಮುಂದೆ ನಿಲ್ಲಿಸಿರುವ ಕಾರಿನ ಟಯರ್ ಕದಿಯುವ ಗ್ಯಾಂಗ್‌ ಈಗ ನಗರದಲ್ಲಿ ಹುಟ್ಟಿಕೊಂಡಿದೆ. ರಾತ್ರಿ ವೇಳೆ ಸ್ಕೂಟಿಯಲ್ಲಿ ಬರುವ ಕಳ್ಳರು ಟಯರ್ (Car Tyre) ಕದ್ದು ಪರಾರಿಯಾಗುತ್ತಿದ್ದಾರೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿ ಬಲಿ – ಗೃಹ ಸಚಿವರಿಗೆ ಮಾಂಗಲ್ಯಸರ ಪೋಸ್ಟ್ ಮಾಡಿದ ಮೃತನ ಪತ್ನಿ

    ಬೀದಿನಾಯಿಗಳು ಬೊಗಳುತ್ತಿರುವುದು
    ಬೀದಿನಾಯಿಗಳು ಬೊಗಳುತ್ತಿರುವುದು

    ಒಬ್ಬ ಟಯರ್ ಬಿಚ್ಚಿದರೆ ಇನ್ನೊಬ್ಬ ಅಕ್ಕ ಪಕ್ಕ ಯಾರು ಬರುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿರುತ್ತಾನೆ. ಈಗಾಗಲೇ ಜಯನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

    ಕಳ್ಳರು ಟಯರ್ ಕದ್ದು ಪರಾರಿ ಆಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳರು ಬಂದ ಕೆಲ ಕ್ಷಣದಲ್ಲಿ ಅಲ್ಲಿದ್ದ ಬೀದಿ ನಾಯಿಗಳು ಸ್ಥಳಕ್ಕೆ ಬಂದು ಬೊಗಳಲು ಆರಂಭಿಸಿದ್ದವು. ರಾತ್ರಿಯ ವೇಳೆ ಎಲ್ಲರೂ ನಿದ್ದೆಯಲ್ಲಿದ್ದ ಕಾರಣ ಯಾರಿಗೂ ವಿಚಾರ ಗೊತ್ತಾಗಿರಲಿಲ್ಲ.  ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಈಗ ಬಲೆ ಬೀಸಿದ್ದಾರೆ.

  • ಚಲಿಸುತ್ತಿರುವಾಗಲೇ ಕಳಚಿ ಬಿತ್ತು ಬಸ್‌ನ ಹಿಂಬದಿ ಚಕ್ರ

    ಚಲಿಸುತ್ತಿರುವಾಗಲೇ ಕಳಚಿ ಬಿತ್ತು ಬಸ್‌ನ ಹಿಂಬದಿ ಚಕ್ರ

    ಗದಗ: ಬಸ್ (Bus) ಒಂದು ಚಲಿಸುತ್ತಿರುವಾಗಲೇ ಅದರ ಹಿಂಬದಿ ಚಕ್ರ (Tire) ಕಳಚಿ ಬಿದ್ದಿರುವ ಘಟನೆ ಗದಗ (Gadag) ತಾಲೂಕಿನ ಹೊಂಬಳ ಗ್ರಾಮದ ಬಳಿ ನಡೆದಿದೆ.

    ಗದಗದಿಂದ ನರಗುಂದಕ್ಕೆ ಹೊರಟಿದ್ದ ಬಸ್‌ನ ಚಕ್ರ ಕಳಚಿ ಬಿದ್ದರೂ ಹತ್ತಾರು ಮೀಟರ್ ಮುಂದಕ್ಕೆ ಚಲಿಸಿದೆ. ಹಿಂಬದಿಯ ಡಬಲ್ ಚಕ್ರದ ಪೈಕಿ ಒಂದು ಚಕ್ರ ದಿಢೀರ್ ಕಳಚಿರುವ ದೃಶ್ಯ ಹಿಂಬದಿಯಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. ಇದನ್ನೂ ಓದಿ: ಜಮೀನಿನಲ್ಲಿ ಧರೆಗುರುಳಿದ ಚಾಲಕ ರಹಿತ ತಪಸ್ ಯುಎವಿ

    ಬಸ್ ಗದಗ ಡಿಪೋಗೆ ಸೇರಿದ್ದು, ಘಟನೆ ವೇಳೆ ಸುಮಾರು 50 ಜನರು ಅದರಲ್ಲಿ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವಿದ್ಯಾರ್ಥಿಗಳು ಚಕ್ರ ಕಳಚಿದ ವೇಳೆ ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿ: ಕುಡಿಯಲು ಶಿಕ್ಷಕ ಹಣ ಕೇಳ್ತಾನೆ.. ವಾಚ್‍ಮ್ಯಾನ್‍ನಿಂದ ಕಿರುಕುಳ – ಪೊಲೀಸ್ ಕಮಿಷನರ್‌ಗೆ ವಿದ್ಯಾರ್ಥಿನಿಯರ ಪತ್ರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಕ್ರ ಕಳಚಿಬಿದ್ದ ರೋಡ್ ರೋಲರ್- ತಪ್ಪಿದ ಅನಾಹುತ

    ಚಕ್ರ ಕಳಚಿಬಿದ್ದ ರೋಡ್ ರೋಲರ್- ತಪ್ಪಿದ ಅನಾಹುತ

    ಮಡಿಕೇರಿ: ರಸ್ತೆ ಕಾಮಗಾರಿಗೆ ಹೋಗುತ್ತಿದ್ದ ರೋಡ್ ರೋಲರ್ ಚಕ್ರ ಬಿಚ್ಚಿದ್ದಕ್ಕೆ ಕಳಚಿಬಿದ್ದಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ಹಾಗೂ ಮೂರ್ನಾಡು ಮಧ್ಯೆ ನಡೆದಿದೆ.

    ರಸ್ತೆ ಕೆಲಸಕ್ಕೆಂದು ಹೋಗುತ್ತಿದ್ದಾಗ ರೋಲರ್ ನ ಎಡಭಾಗದ ಚಕ್ರ ಕಳಚಿ ರಸ್ತೆ ಪಕ್ಕದ ಬಾಳೆ ತೋಟಕ್ಕೆ ಹೋಗಿ ಬಿದ್ದಿದೆ. ಸ್ವಲ್ಪ ದೂರದಲ್ಲೇ ಆರ್‍ಟಿಓ ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸುತಿದ್ದರಿಂದ ರೋಡ್ ರೋಲರ್ ಎದುರಿಗೆ ಯಾವುದೇ ವಾಹನಗಳು ಬಂದಿಲ್ಲ. ಇದರಿಂದಾಗಿ ಸಂಭವಿಸಬಹುದಾಗಿದ್ದ ಬಾರಿ ಅನಾಹುತ ತಪ್ಪಿದೆ.

    ಚಕ್ರ ಕಳಚಿ ಹೋಗಿದ್ದರಿಂದ ರೋಲರ್ ಮಿಷನ್ ರಸ್ತೆ ಮಧ್ಯದಲ್ಲೇ ಬಿದ್ದಿದೆ. ಬಳಿಕ ಜೆಸಿಬಿಯ ಸಹಾಯದಿಂದ ರೋಲರ್ ಮಿಷನ್ ಅನ್ನು ರಸ್ತೆಯಿಂದ ತೆರವುಗೊಳಿಸಿದ ವಿರಾಜಪೇಟೆಯ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

  • ಲಾರಿಯಡಿ ಸಿಲುಕಿ ನರಳಾಡಿದ ಯುವಕ – ಮಾರ್ಗಮಧ್ಯೆ ಸಾವು

    ಲಾರಿಯಡಿ ಸಿಲುಕಿ ನರಳಾಡಿದ ಯುವಕ – ಮಾರ್ಗಮಧ್ಯೆ ಸಾವು

    ಹಾಸನ: ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಲಾರಿಯಡಿ ಸಿಲುಕಿ ನರಳಾಡಿ ಪ್ರಾಣ ಬಿಟ್ಟ ಘಟನೆ ಹಾಸನ ಜಿಲ್ಲೆಯ, ಸಕಲೇಶಪುರದಲ್ಲಿ ನಡೆದಿದೆ.

    ಸಕಲೇಶಪುರದ ಬಿಎಂ ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಲಾರಿ ಡಿಕ್ಕಿ ಹೊಡೆದಿದೆ. 23 ವರ್ಷದ ಪ್ರವೀಣ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಚಕ್ರದಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ. ನಂತರ ಅಂಬುಲೆನ್ಸ್ ನಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆಯಲ್ಲಿ ಪ್ರವೀಣ್ ಕೊನೆಯುಸಿರೆಳೆದಿದ್ದಾನೆ.

    ಅಪಘಾತ ನಡೆದು 15 ನಿಮಿಷಗಳ ಆದರೂ ಸ್ಥಳಕ್ಕೆ ಅಂಬುಲೆನ್ಸ್ ಬಾರದಿದ್ದರಿಂದ ಲಾರಿಯ ಚಕ್ರದಡಿಗೆ ಸಿಲುಕಿದ ಯುವಕ ಒದ್ದಾಡುತ್ತಿದ್ದ ದೃಶ್ಯ ಸ್ಥಳದಲ್ಲಿ ನೆರೆದಿದ್ದವರ ಮನಕಲಕುವಂತಿತ್ತು. ಅಪಘಾತದ ಹಿನ್ನೆಲೆಯಲ್ಲಿ ಬಿ.ಎಂ ರಸ್ತೆಯಲ್ಲಿ ಅರ್ಧ ಕಿಲೋಮೀಟರಿಗೂ ಹೆಚ್ಚಿನ ದೂರ ವಾಹನಗಳು ಸಾಲುಗಟ್ಟಿ ನಿಂತು ಸಂಚಾರದಲ್ಲಿ ವ್ಯವಸ್ಥೆಯಲ್ಲಿ ಅಸ್ತವ್ಯಸ್ತವಾಗಿತ್ತು.

    ತೇಜಸ್ವಿ ಚಿತ್ರಮಂದಿರದ ಬಳಿ ಇರುವ ವೃತ್ತ ತೀರಾ ಕಿರಿದಾಗಿದ್ದು ಬೆಂಗಳೂರು, ಮಂಗಳೂರು ಹಾಗೂ ಚಿಕ್ಕಮಂಗಳೂರು ಜಿಲ್ಲೆಗಳಿಗೆ ಸಂಪರ್ಕಿಸುವ ವೃತ್ತವಾಗಿರುವುದರಿಂದ ದಿನನಿತ್ಯ ಸಾವಿರಾರು ವಾಹನಗಳು ತಿರುಗಾಡುತ್ತಿರುತ್ತವೆ. ಜನಸಂದಣಿಯ ಹೆಚ್ಚಾಗಿರುವುದರಿಂದ ಪದೇ ಪದೇ ಈ ಸ್ಥಳದಲ್ಲಿ ಅಪಘಾತವಾಗುತ್ತದೆ. ಆದ್ದರಿಂದ ಈ ವೃತ್ತವನ್ನು ಅಗಲೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.