Tag: ಚಂಪಾಕಲಿ

  • ಬಾಲರಾಮನ ಪ್ರಾಣಪ್ರತಿಷ್ಠೆಯನ್ನು ಸಿಹಿ ತಿಂದು ಸಂಭ್ರಮಿಸಿ – ಚಂಪಾಕಲಿ ರೆಸಿಪಿ ನಿಮಗಾಗಿ

    ಬಾಲರಾಮನ ಪ್ರಾಣಪ್ರತಿಷ್ಠೆಯನ್ನು ಸಿಹಿ ತಿಂದು ಸಂಭ್ರಮಿಸಿ – ಚಂಪಾಕಲಿ ರೆಸಿಪಿ ನಿಮಗಾಗಿ

    ಬ್ಬಹರಿದಿನ ಅಂತ ಬಂದಾಗ ಸಿಹಿತಿನಿಸುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗುತ್ತದೆ. ಇಂದು ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಲಿದೆ. ಈ ಹಿನ್ನೆಲೆ ನಿಮ್ಮ ಮನೆಯಲ್ಲೂ ಈ ಸಂಭ್ರಮಾಚಾರಣೆಯನ್ನು ಸಿಹಿ ತಿಂದು ಆಚರಿಸಿ. ಇವತ್ತಿನ ನಮ್ಮ ರೆಸಿಪಿಯಲ್ಲಿ ಸಿಹಿಯಾದ ಚಂಪಾಕಲಿ ಸ್ವೀಟ್ ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಸಾಮಗ್ರಿಗಳು:
    ಹಾಲು – ಒಂದು ಲೀಟರ್
    ನಿಂಬೆ ಹಣ್ಣು – ಅರ್ಧ
    ಮೈದಾ ಹಿಟ್ಟು – 1 ಟೀ ಸ್ಪೂನ್
    ಸಕ್ಕರೆ – 1 ಕಪ್
    ನೀರು – ಒಂದೂವರೆ ಕಪ್
    ಸ್ವೀಟ್ ಖೋವ – ಸ್ವಲ್ಪ
    ಚರ‍್ರಿ ಹಣ್ಣು – ಸ್ವಲ್ಪ
    ಹಾಲಿನ ಪುಡಿ – ಸ್ವಲ್ಪ
    ಏಲಕ್ಕಿ ಪುಡಿ – ಸ್ವಲ್ಪ
    ಕೇಸರಿ – ಸ್ವಲ್ಪ

    ಮಾಡುವ ವಿಧಾನ:
    * ಒಂದು ಲೀಟರ್ ಹಾಲನ್ನು ಚೆನ್ನಾಗಿ ಕಾಯಿಸಿ. ಅದಕ್ಕೆ ಅರ್ಧ ನಿಂಬೆ ಹಣ್ಣಿನ ರಸವನ್ನು ಸ್ವಲ್ಪ ಸ್ವಲ್ಪ ಹಾಕುತ್ತ ಹಾಲಿಗೆ ಕೈಯಾಡಿಸಿ. ಹಾಲು ಒಡೆಯುವವರೆಗೆ ಈ ರೀತಿ ಮಾಡಿ. ಈಗ ನೀರನ್ನು ಬೇರ್ಪಡಿಸಿ. ಕಾಟನ್ ಬಟ್ಟೆಯಲ್ಲಿ ಸೋಸುವ ಮೂಲಕ ನೀರನ್ನು ಸಂಪೂರ್ಣವಾಗಿ ಬೇರ್ಪಡಿಸಿ.
    * ಈಗ ಒಂದು ಪಾತ್ರೆಯಲ್ಲಿ ನೀರನ್ನು ಬೇರ್ಪಿಸಿದ ಹಾಲಿನ ಪನೀರ್ ಮತ್ತು ಮೈದಾ ಹಿಟ್ಟನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸ್ವಲ್ಪ ನೀರು ಸೇರಿಸಿ ಮತ್ತು ಹಿಟ್ಟನ್ನು ಬೆರೆಸಿಕೊಳ್ಳಿ.
    * ನಂತರ ಈ ಹಿಟ್ಟನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಕೈಗಳ ಸಹಾಯದಿಂದ ಉಂಡೆ ಮಾಡಿಕೊಳ್ಳಿ.
    * ಈಗ ಒಂದು ಬಾಣಲೆಯಲ್ಲಿ 4 ಕಪ್ ನೀರು ಮತ್ತು ಸಕ್ಕರೆಯನ್ನು ಒಟ್ಟಿಗೆ ಹಾಕಿ ಮತ್ತು ಕಡಿಮೆ ಉರಿಯಲ್ಲಿ ಸುಮಾರು 10 ನಿಮಿಷಗಳ ಕಾಲ ಕುದಿಯಲು ಬಿಡಿ. ನಿಧಾನವಾಗಿ ಅದರ ಸಕ್ಕರೆ ಪಾಕ ಸಿದ್ಧವಾಗುತ್ತದೆ.
    * ಈಗ ನಿಧಾನವಾಗಿ ಉಂಡೆ ಮಾಡಿದ ಚಂಪಾಕಲಿಯನ್ನು ಸಿರಪ್‌ನಲ್ಲಿ ಹಾಕಿ ಮತ್ತು 12 ರಿಂದ 15 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಲು ಬಿಡಿ.
    * ಇದರ ನಂತರ, ಬೇಯಿಸಿದ ಚಂಪಾಕಲಿಯನ್ನು ಅನ್ನು ಪ್ಲೇಟ್‌ನಲ್ಲಿ ತೆಗೆದುಕೊಂಡು ಅದನ್ನು ತಣ್ಣಗಾಗಲು ಬಿಡಿ.
    * ಬಳಿಕ ಹಿಸುಕಿದ ಖೋಯಾ, ಸಕ್ಕರೆ, ಹಾಲಿನ ಪುಡಿ, ಏಲಕ್ಕಿ ಪುಡಿ ಮತ್ತು ಕೇಸರಿ ಹಾಲನ್ನು ಒಟ್ಟಿಗೆ ಪ್ಯಾನ್‌ನಲ್ಲಿ ಹಾಕಿ ಮತ್ತು ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ತಣ್ಣಗಾದ ಚಂಪಾಕಲಿಯ ಮಧ್ಯದಲ್ಲಿ ಚಾಕುವಿನಿಂದ ಕಟ್ ಮಾಡಿ, ನಂತರ ರೆಡಿ ಮಾಡಿದ ಮಿಶ್ರಣವನ್ನು ತುಂಬಿಸಿ.
    * ಈಗ ತಯಾರಾದ ಎಲ್ಲಾ ಚಂಪಾಕಲಿಯನ್ನು ಚರ‍್ರಿಯಿಂದ ಅಲಂಕರಿಸಿ ಸವಿಯಲು ಕೊಡಿ.