Tag: ಚಂದ್ರು ಹತ್ಯೆ

  • ಕಲ್ಲಂಗಡಿ ಹಣ್ಣಿನ ಬಗ್ಗೆ ಕನಿಕರ ತೋರಿದವರು, ತಲೆ ಹೊಡೆದಾಗ ಏಕೆ ತೋರಲಿಲ್ಲ: ಸಿ.ಟಿ.ರವಿ ಪ್ರಶ್ನೆ

    ಕಲ್ಲಂಗಡಿ ಹಣ್ಣಿನ ಬಗ್ಗೆ ಕನಿಕರ ತೋರಿದವರು, ತಲೆ ಹೊಡೆದಾಗ ಏಕೆ ತೋರಲಿಲ್ಲ: ಸಿ.ಟಿ.ರವಿ ಪ್ರಶ್ನೆ

    ಚಿಕ್ಕಮಗಳೂರು: ಕಲ್ಲಂಗಡಿ ಹಣ್ಣಿನ ಬಗ್ಗೆ ಕನಿಕರ ತೋರಿಸುತ್ತಿರುವವರು ತಲೆ ಹೊಡೆದಾಗ ಏಕೆ ಕನಿಕರ ತೋರಿಸಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿಗೆ ಪ್ರಶ್ನಿಸಿದ್ದಾರೆ.

    ನಗರದ ಎಐಟಿ ಕಾಲೇಜು ಆವರಣದಲ್ಲಿ ನಡೆದ ಬೃಹತ್ ಆರೋಗ್ಯ ಶಿಬಿರದಲ್ಲಿ ಮಾತನಾಡಿದ ಅವರು, ಧಾರವಾಡದಲ್ಲಿ ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ಹಣ್ಣಿನ ಅಂಗಡಿ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕಿದಾಗ ಯಾರಾದರೂ ಸ್ಥಳಕ್ಕೆ ಹೋಗಿ ಖಂಡಿಸಿದ್ದಾರಾ? ಅಂದು ಯಾಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಯಾರು ಸತ್ತರೂ ಹೆಣದ ಮೇಲೆ ಬಿಜೆಪಿಯವರು ರಾಜಕಾರಣ ಮಾಡ್ತಾರೆ: ತಂಗಡಗಿ

    ಒಂದೊಂದು ಸಂದರ್ಭದಲ್ಲಿ ಒಂದೊಂದು ರೀತಿ ನಿಲುವು ಸರಿಯಲ್ಲ. ಕಲ್ಲಂಗಡಿ ಹಣ್ಣನ್ನು ಒಡೆದಾಗ ತೋರಿಸುವ ಸಂಕಟವನ್ನು ತಲೆ ಹೊಡೆದಾಗಲೂ ತೋರಿಸಲಿ. ಹಾಗೇನಾದರೂ ಖಂಡಿಸಿದರೆ ಓಟ್ ಲಾಸ್ ಆಗುತ್ತೆ ಎನ್ನುವ ಭಯವೇ? ಇದು ಧರ್ಮ ಸಂಘರ್ಷವಲ್ಲ, ಮತ ಸಂಘರ್ಷ. ಧರ್ಮ ಎಂದಿಗೂ ಸಂಘರ್ಷವನ್ನು ಬಯಸುವುದಿಲ್ಲ ಎಂದಿದ್ದಾರೆ.

    ಧರ್ಮ ಎಂದರೆ ಪರೋಪಕಾರ, ಮಾನವೀಯತೆ. ಅದು ಸಂಘರ್ಷವನ್ನು ಬಯಸುವುದಿಲ್ಲ. ಇದು ಮತದ ಸಂಘರ್ಷ. ನಮ್ಮ ಮತವೇ ಶ್ರೇಷ್ಠ ಎನ್ನುವ ಅಹಂಭಾವ, ನಮ್ಮದು ಉಳಿಯಬೇಕೆಂಬ ಕಾರಣದಿಂದ ನಡೆಯುತ್ತಿರುವ ಮತಾಂಧತೆ. ಧರ್ಮ ಮತ್ತು ಮತವನ್ನು ಒಂದೇ ರೀತಿ ನೋಡಬಾರದು ಎಂದಿದ್ದಾರೆ. ಮತಾಂಧತೆಗೆ ಪೋಷಕವಾಗಿರುವ ಎಲ್ಲವನ್ನೂ ನಿಲ್ಲಿಸಬೇಕು, ಆಗ ಸಂಘರ್ಷ ನಿಲ್ಲುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸಂಘ ಪರಿವಾರದ ಪುಂಡರ ಕೈಯಲ್ಲಿನ ಆಟಿಕೆಯ ಗೊಂಬೆ: ಸಿದ್ದರಾಮಯ್ಯ

    ಬೆಂಗಳೂರಿನ ಚಂದ್ರು ಹತ್ಯೆಯ ಮೂಲವನ್ನು ಬಿಟ್ಟು ಉಳಿದೆಲ್ಲಾ ವಿಷಯ ಚರ್ಚೆ ಆಗುತ್ತಿದೆ. ಹತ್ಯೆ ಮಾಡಿದ್ದೇ ಒಂದು ಘೋರ ಅಪರಾಧ. ಯಾಕೆ ಆ ರೀತಿಯ ಮನಸ್ಥಿತಿ ಬಂತು? ಸಣ್ಣ-ಸಣ್ಣ ವಿಚಾರಕ್ಕೆ ಯಾಕೆ ಅವರು ಕೆರಳುತ್ತಾರೆ? ಅದರ ಬಗ್ಗೆ ಯೋಚಿಸಬೇಕು. ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಸೇರಿ ಹಲವು ಜನರ ಮನೆಗೆ ಏಕೆ ಬೆಂಕಿ ಹಾಕಿದರು? ಅವರ ರಕ್ತ ಮಾತ್ರ ಕೆಂಪಗಿದೆಯಾ? ಉಳಿದವರ ರಕ್ತ ಕೆಂಪಾಗಿಲ್ಲವೇ? ಅವರಿಗೆ ಮಾತ್ರ ಕ್ರೋಧ, ತನ್ನತನ ಇದೆಯಾ? ಉಳಿದವರಿಗೆ ಇಲ್ಲವೆ? ಹರ್ಷನ ಹತ್ಯೆ ಮಾಡುವಂತಹ ಮನಸ್ಥಿತಿ ಅವರಿಗೆ ಏಕೆ ಬಂತು? ಇದರ ಬಗ್ಗೆ ಗಂಭೀರವಾಗಿ ಯೋಚನೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.