ಧಾರಾವಾಹಿ ನಟಿ ಪವಿತ್ರಾ ಜಯರಾಮ್ (Pavitra Jayaram) ಅಪಘಾತ ಪ್ರಕರಣದಲ್ಲಿ ತಿರುವು ಸಿಕ್ಕಿದೆ. ಪವಿತ್ರಾ ಗೆಳೆಯ, ಸೀರಿಯಲ್ ನಟ ಚಂದು (Chandu) ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತಂತೆ ಚಂದ್ರು ಪತ್ನಿ ಶಿಲ್ಪಾ (Shilpa) ಆರೋಪಗಳನ್ನು ಮಾಡಿದ್ದಾರೆ. ಪವಿತ್ರಾ ಜೊತೆಗಿನ ಸಂಬಂಧವೇ ಪತಿಯನ್ನು ಬಲಿ ತಗೆದುಕೊಂಡಿದೆ ಎಂದಿದ್ದಾರೆ. ಮದುವೆಯಾಗಿದ್ದರೂ ಪವಿತ್ರಾ ಜೊತೆ ಪತಿ ಸಂಬಂಧ ಹೊಂದಿದ್ದರು ಎಂದಿದ್ದಾರೆ.
ಚಂದ್ರು ಮಣಿಕೊಂಡದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇವತ್ತು ಪವಿತ್ರಾ ಹುಟ್ಟುಹಬ್ಬ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪವಿತ್ರಾ ಸಾವಿನ ನಂತರ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಂದು, ಮಿದುಳಿನ ಕಾಯಿಲೆ ಇದ್ದು ಸಾಯುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು.
ಐದು ದಿನಗಳ ಹಿಂದಷ್ಟೇ ಮೆಹಬೂಬ್‌ನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪವಿತ್ರಾ ಸಾವನ್ನಪ್ಪಿದ್ದರು. ಬೆಂಗಳೂರಿನಿಂದ ಹೈದರಾಬಾದ್‌ಗೆ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಪವಿತ್ರಾ ಸಾವಿಗೀಡಾಗಿದ್ದರು. ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಂದು ಅವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಚಂದು ತ್ರಿನಯನಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಚಂದುಗೆ ಶಿಲ್ಪಾ ಎಂಬವರ ಜೊತೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಿರುತೆರೆ ನಟಿ ಪವಿತ್ರಾ ಜಯರಾಮ್ ಹಾಗೂ ಜಂದು ಸ್ನೇಹಿತರಾಗಿದ್ದರು ಎನ್ನಲಾಗಿದೆ. ರಾಧಮ್ಮ ಪೆಳ್ಳಿ ಮತ್ತು ಕಾರ್ತಿಕ ದೀಪಂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಆತ್ಮಹತ್ಯೆಗೆ ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉಪೇಂದ್ರ ಮತ್ತು ‘ಕಿಚ್ಚ’ ಸುದೀಪ್ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ದ ಹಿಂದಿ ಅವತರಣಿಕೆಯ ಹಕ್ಕುಗಳನ್ನು ಬಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಆನಂದ್ ಮೋಷನ್ ಪಿಕ್ಚರ್ಸ್ ತನ್ನದಾಗಿಸಿಕೊಂಡಿದ್ದು, ಮೊದಲ ಹಂತವಾಗಿ ಇಂದು ಹಿಂದಿ ಟೀಸರ್ ಬಿಡುಗಡೆ ಮಾಡಿದೆ. ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ ಲಾಂಛನದಲ್ಲಿ ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ‘ಕಬ್ಜ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಹಲವು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ.
ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರನ ಮಗ ಅರ್ಕೇಶ್ವರ, 1960-1984 ರ ಅವಧಿಯಲ್ಲಿ ಭಾರತದಲ್ಲಿ ಭೂಗತ ಜಗತ್ತಿನ ರಾಜನಾಗುತ್ತಾನೆ ಮತ್ತು ಭಾರತೀಯ ಇತಿಹಾಸದಲ್ಲಿ ತನ್ನ ಛಾಪು ಮೂಡಿಸುತ್ತಾನೆ. ಇಂಥದ್ದೊಂದು ಕಥೆ ಇರುವ ‘ಕಬ್ಜ’ ಚಿತ್ರದ ಬಗ್ಗೆ ಬರೀ ಕನ್ನಡವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿವೆ. ‘ಕಬ್ಜ’ ಚಿತ್ರದ ವಿತರಣೆಯ ಹಕ್ಕುಗಳನ್ನು ಪಡೆದಿರುವ ಆನಂದ್ ಪಂಡಿತ್ ಮಾತನಾಡಿ, ಪ್ರೇಕ್ಷಕರ ಮನರಂಜಿಸುವುದೇ ನಮ್ಮ ಪ್ರಮುಖ ಉದ್ದೇಶ ಮತ್ತು ಕಬ್ಜ ಅಂತಹ ಒಂದು ಮನರಂಜನೆಯಾಗಲಿದೆ ಎಂದು ನಮಗೆ ಸಂಪೂರ್ಣ ನಂಬಿಕೆಯಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: `ಕೆಜಿಎಫ್’ ತಾತ ಕೃಷ್ಣ ಜಿ. ರಾವ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಉಪೇಂದ್ರ, ‘ಭೂಗತಲೋಕದ ಹೊಸ ಅಧ್ಯಾಯವಾದ ಕಬ್ಜ ಚಿತ್ರೆದ ಹಿಂದಿ ಅವತರಣಿಕೆಯನ್ನು ಬಾಲಿವುಡ್‌ನ ಹೆಸರಾಂತ ನಿರ್ಮಾಪಕರಾದ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಬಿಡುಗಡೆ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ಅವರ ಸಹಕಾರ ಹೀಗೆಯೇ ಮುಂದುವರೆಯಲಿ’ ಎಂದು ಹೇಳಿದ್ದಾರೆ. ಕಿಚ್ಚ ಸುದೀಪ ಸಹ ಈ ಕುರಿತು ಮಾತನಾಡಿದ್ದು, ‘ದಕ್ಷಿಣ ಭಾರತೀಯ ಸಿನಿಮಾಗಳು ಭಾರತೀಯ ಸಿನಿಮಾ ಎಂದು ಗುರುತಿಸಿಕೊಳ್ಳುತ್ತಿರುವ ಈ ಅದ್ಭುತ ಸಂದರ್ಭದಲ್ಲಿ ಖ್ಯಾತ ವಿತರಕ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ನಮ್ಮ ‘ಕಬ್ಜ’ ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ. ಇದು ಚಿತ್ರತಂಡದ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ’ ಎಂದಿದ್ದಾರೆ.
‘ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಸಂಸ್ಥೆಯು ಕೈ ಜೋಡಿಸಿರುವುದು ನಮ್ಮ ಬದ್ಧತೆ ಮತ್ತು ಪ್ರಯತ್ನಕ್ಕೆ ಸಿಕ್ಕ ಮನ್ನಣೆ’ ಎನ್ನುವ ಆರ್. ಚಂದ್ರು, ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಿಸುವುದಾಗಿ ಹೇಳುತ್ತಾರೆ. ‘ಕಬ್ಜ’ ಚಿತ್ರದಲ್ಲಿ ಉಪೇಂದ್ರ, ಸುದೀಪ್, ಶ್ರೀಯಾ ಶರಣ್ ಸೇರಿದಂತೆ ಪ್ರತಿಭಾವಂತರ ದೊಡ್ಡ ದಂಡೇ ಇದ್ದು, ಚಿತ್ರಕ್ಕೆ ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ದಾವಣಗೆರೆ: ಹಾಲಿ ಶಾಸಕ ರೇಣುಕಾಚಾರ್ಯ (Renukacharya) ಸಹೋದರನ ಮಗ ಚಂದ್ರಶೇಖರ್ (Chandru) ಸಾವು ಪ್ರಕರಣ ಅಂತಿಮ ಹಂತಕ್ಕೆ ಬಂದಿದೆ. ಈಗಾಗಲೇ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಿದೆ. ಮರಣೋತ್ತರ ಪರೀಕ್ಷೆಯ ಪ್ರಕಾರ ಶ್ವಾಸಕೋಶದ ಒಳಗೆ ನೀರು ನುಗ್ಗಿ ಸಾವನ್ನಪ್ಪಿದ್ದಾರೆ ಎಂದು ವರದಿಯನ್ನು ಕೊಟ್ಟಿದ್ದಾರೆ. ಇದನ್ನೂ ಓದಿ: ನನ್ನ ತೆಗೆಯಲು ನಿಖಿಲ್‍ರನ್ನು ಬಲಿ ಕೊಟ್ರು: ಎಲ್.ಆರ್.ಶಿವರಾಮೇಗೌಡ
ಆದರೆ ಆಕ್ಸಿಡೆಂಟ್ ಸಂಭವಿಸಿದ್ಯಾ ಎಂಬುದನ್ನು ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯದ (FSL) ವರದಿಗೆ ಪೊಲೀಸರು ಕಾಯುತ್ತಾ ಇದ್ರು. ಈಗ ಎಫ್‍ಎಸ್‍ಎಲ್ ಅಧಿಕಾರಿಗಳು ಕೂಡ ವರದಿ ನೀಡಿದ್ದಾರೆ. ಈಗಾಗಲೇ ಸರ್ಕಾರಿ ಎಫ್‍ಎಸ್‍ಎಲ್ ಕೂಡ ವರದಿ ನೀಡಿದೆ. ಇದರ ಪ್ರಕಾರ ಕಾರು ಅತಿಯಾದ ಸ್ಪೀಡ್‍ನಿಂದ ಡಿಕ್ಕಿ ಹೊಡೆದು ನೀರಿಗೆ ಬಿದ್ದಿದೆ ಎಂದಿದ್ದಾರೆ. ಪ್ರಕರಣದ ಮರುಸೃಷ್ಟಿಗೆ ತೆರಳಿದ್ದ ಖಾಸಗಿ ವಿಧಿ ವಿಜ್ಞಾನ ತಜ್ಞ ಫಣೀಂದ್ರ ಕೂಡ 40 ಪುಟಗಳ ವರದಿಯನ್ನು ನೀಡಿದ್ದಾರೆ. ವರದಿಯ ಪ್ರಕಾರ ಅಪಘಾತ ಸಂಭವಿಸಿದೆ ಎಂದು ವರದಿ ನೀಡಿದ್ದಾರೆ. ಇನ್ನು ಒಂದು ಹಂತದ ಪರೀಕ್ಷೆ ಬಾಕಿ ಇದೆ ಎಂದು ಫಣೀಂದ್ರ ಸ್ಪಷ್ಟಪಡಿಸಿದ್ದಾರೆ.
ಏನಿದು ಪ್ರಕರಣ?
ಅ.30ರ ಭಾನುವಾರ ಸಂಜೆ ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು ರಾತ್ರಿ ಊರಿಗೆ ಮರಳಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ದೆಹಲಿಯ ಸ್ನೇಹಿತರ ಜೊತೆ ಕೊನೆಯದಾಗಿ ಮಾತಾಡಿ ಬಳಿಕ ರಾತ್ರಿ 11:30ಕ್ಕೆ ಹೊನ್ನಾಳಿ ಪಟ್ಟಣದಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅಲ್ಲಿಂದ ಸಿಗ್ನಲ್ ಪತ್ತೆಯಾಗಿರಲಿಲ್ಲ. ಶಿವಮೊಗ್ಗದಿಂದ ನ್ಯಾಮತಿ ತಾಲೂಕಿನ ಸುರಹೊನ್ನೆಗೆ ಬಂದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಲಭ್ಯವಾಗಿತ್ತು. ಆದಾದ ಬಳಿಕ ನ.3 ರಂದು ಚಂದ್ರಶೇಖರ್ ಅವರ ಕ್ರೇಟಾ ಕಾರು ಸೊರಟೂರು ಬಳಿ ಇರುವ ತುಂಗಾಭದ್ರ ಕಾಲುವೆಯಲ್ಲಿ ಪತ್ತೆಯಾಗಿತ್ತು. ಹೊನ್ನಾಳಿ ಹಾಗೂ ನ್ಯಾಮತಿ ಮಾರ್ಗ ಮಧ್ಯೆ ಇರುವ ಕಾಲುವೆಯಲ್ಲಿ ಪತ್ತೆಯಾದ ಕಾರನ್ನು ಮೇಲಕ್ಕೆತ್ತಿದಾಗ ಕಾರಿನಲ್ಲೇ ಚಂದ್ರು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ಬಳಿಕ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಇದನ್ನೂ ಓದಿ: ಚಂದ್ರು ದೇಹದಲ್ಲಿ ಒಳ ಉಡುಪು ಇರಲಿಲ್ಲ – ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾದ್ರಾ ಯುವ ನಾಯಕ?
Live Tv
[brid partner=56869869 player=32851 video=960834 autoplay=true]
ದಾವಣಗೆರೆ: ಶಾಸಕ ಎಂಪಿ ರೇಣುಕಾಚಾರ್ಯ (MP Renukacharya) ಸಹೋದರನ ಪುತ್ರನ ಸಾವು ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅದರಲ್ಲೂ ಕೊಲೆ ಮಾಡಿ ಚಾನಲ್ ನಲ್ಲಿ ಬಿಸಾಕಿ ಹೋಗಿದ್ದಾರೆ ಎಂದು ಚಂದ್ರು ತಂದೆ ರಮೇಶ್ (Ramesh) ಕೂಡ ಈಗಾಗಲೇ ಹೊನ್ನಾಳಿ ಪೊಲೀಸ್ (Honnalli Police Station) ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಆದರೆ ಸರ್ಕಾರದ ಅವಿಭಾಜ್ಯ ಅಂಗವಾಗಿರುವ ರೇಣುಕಾಚಾರ್ಯ ಅವರೇ ಪೊಲೀಸ್ ತನಿಖೆ ಮೇಲೆ ಅನುಮಾನ ಗೊಂಡಿದ್ದಾರೆ. ಕೊಲೆಗಾರರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ, ಈ ಪ್ರಕರಣವನ್ನು ಹೆಚ್ಚಿನ ತನಿಖೆಗೆ ಒತ್ತಾಯಿಸಿದ್ದಾರೆ.
ಚಂದ್ರು ಪೋಸ್ಟ್ ಮಾರ್ಟಂ ವರದಿ ಪೊಲೀಸರ ಕೈ ಸೇರಿಲ್ಲ. ಈಗಾಗಲೇ ಚಂದ್ರು ಸಾವು ಸಹಜವಲ್ಲ ಕೊಲೆ ಅಂತ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಚಂದ್ರುವಿನ ಕಾರು ತುಂಗಾ ನಾಲೆಯಲ್ಲಿ ಸಿಕ್ಕಿದ್ದು, ಮೃತದೇಹ ಹಿಂಬದಿ ಸೀಟ್‍ನಲ್ಲಿ ಸಿಕ್ಕಿದೆ. ಅಲ್ಲದೇ ಆತನ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ರು ಅಂತ ಆರೋಪಿಸಿದ್ದಾರೆ. ಆದರೆ ಡಯಾಟಂ ಟೆಸ್ಟ್ ನಲ್ಲಿ ಕೂಡ ಇದೊಂದು ಅಪಘಾತ ಎಂದು ಬಂದಿದೆ. ಈ ಎಲ್ಲಾ ವರದಿಗಳ ಮೇಲೆ ನಂಬಿಕೆ ಇಲ್ಲದೆ ಹೆಚ್ವಿನ ತನಿಖೆಗೆ ಒತ್ತಾಯಿಸಿದೆ. ಈ ಮಧ್ಯೆ ಅಲ್ಲದೆ ಮಾಜಿ ಸಿಎಂ ಪುತ್ರ ವಿಜಯೇಂದ್ರ, ಮುತಾಲಿಕ್ ಸೇರಿದಂತೆ ಕ್ಷೇತ್ರದ ಜನರು ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ರು. ಇದನ್ನೂ ಓದಿ: ದಯವಿಟ್ಟು ಭಾವೋದ್ವೇಗದಿಂದ ಮಾತನಾಡಬೇಡಿ – ರೇಣುಕಾಚಾರ್ಯಗೆ ಆರಗ ಜ್ಞಾನೇಂದ್ರ ಮನವಿ
ಇಂದು ರೇಣುಕಾಚಾರ್ಯ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸೇರಿದಂತೆ ಹಲವು ಮುಖಂಡರು ಭೇಟಿ ನೀಡಲಿದ್ದಾರೆ. ಸರಿ ಸುಮಾರು ಒಂದು ಗಂಟೆಗಳ ಕಾಲ ರೇಣುಕಾಚಾರ್ಯ ಮನೆಯಲ್ಲಿದ್ದು ಸಾಂತ್ವನ ಹೇಳಲಿದ್ದಾರೆ. ಆ ಸಂದರ್ಭದಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ಪೊಲೀಸರು ನಡೆಸುತ್ತಿರುವ ತನಿಖೆ ನಮಗೆ ಅನುಮಾನಾಸ್ಪದವಾಗಿದೆ. ಈ ಪ್ರಕರಣವನ್ನು ಹೆಚ್ಚಿನ ತನಿಖೆಗೆ ವಹಿಸಬೇಕು ಅಂತ ಮನವಿ ಮಾಡೋ ಸಾಧ್ಯತೆ ಇದೆ. ಈಗಾಗಲೇ ಡಯಾಟಂ ವರದಿ ಪೊಲೀಸರ ಕೈ ಸೇರಿದ್ದು, ಇಂದು ಸಂಜೆಯೊಳಗೆ ಮರಣೋತ್ತರ ಪರೀಕ್ಷಾ ವರದಿ ಕೂಡ ಪೊಲೀಸರ ಕೈಸೇರಲಿದ್ದು ಸತ್ಯಾ ಸತ್ಯಾಸತ್ಯತೆ ವರದಿ ಬಂದ ನಂತರ ತಿಳಿಯಲಿದೆ.
ಒಟ್ಟಾರೆಯಾಗಿ ಚಂದ್ರುವಿನ (Chandrashekhar) ಸಾವು ಎರಡು ಜಿಲ್ಲೆಗಳ ಪೊಲೀಸರ ನಿದ್ದೆಗೆಡಿಸಿದ್ದು, ಇಂದು ಅಥವಾ ನಾಳೆ ಮರಣೋತ್ತರ ಪರೀಕ್ಷಾ ವರದಿ ಅಧಿಕೃತವಾಗಿ ಪೊಲೀಸರ ಕೈ ಸೇರಲಿದ್ದು ಸತ್ಯಾಂಶ ಹೊರಬರಲಿದೆ. ಆದರೆ ಚಂದ್ರು ಕುಟುಂಬಸ್ಥರು ಮಾತ್ರ ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿ ಹೆಚ್ಚಿನ ತನಿಖೆಗೆ ಒತ್ತಾಯಿಸ್ತಿದ್ದಾರೆ. ಸಿಎಂ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ (Renukacharya) ಸಹೋದರನ ಪುತ್ರ ಚಂದ್ರು ಸಾವಿನ ಪ್ರಕರಣ (Chandru Case) ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ.
ಇದು ಕೊಲೆಯಲ್ಲ ಎಂಬುದು ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗುತ್ತಿದೆ. ಸಿಡಿಆರ್ ರಿಪೋರ್ಟ್ ಪ್ರಕಾರ, ಘಟನಾ ಸ್ಥಳದಲ್ಲಿ ಬೇರಾವುದೇ ಮೊಬೈಲ್ ಆಕ್ಟೀವ್ ಆಗಿರೋದು ಕಂಡುಬಂದಿಲ್ಲ. ಚಂದ್ರು ಗೆಳೆಯರು ನೀಡಿದ ಹೇಳಿಕೆಗಳಲ್ಲಿಯೂ ಯಾವುದೇ ಗೊಂದಲ, ಅನುಮಾನಾಸ್ಪದ ಅಂಶಗಳು ಕಂಡುಬಂದಿಲ್ಲ. ಹೀಗಾಗಿ ಸದ್ಯದವರೆಗೂ ಇದನ್ನು ಅಪಘಾತದಿಂದ ಸಾವು ಅಂತಲೇ ಪೊಲೀಸರು ಪರಿಗಣಿಸಿದ್ದಾರೆ. ಇದನ್ನೂ ಓದಿ: ತಾಕತ್ ಇದ್ರೆ ನನ್ನನ್ನು ಮುಟ್ಟಿ, ಅದನ್ನು ಬಿಟ್ಟು ನನ್ನ ಮಗನನ್ನು ಬಲಿ ಪಡೆದಿದ್ದು ಸರಿಯಲ್ಲ – ರೇಣುಕಾಚಾರ್ಯ
ಆದರೆ ಚಂದ್ರು ತಂದೆ ಇಂದು ಆಡಿರುವ ಮಾತುಗಳು ಇಡೀ ಪ್ರಕರಣಕ್ಕೆ ಹೊಸ ಆಯಾಮ ನಿಡುವಂತಿವೆ. ಸಲಿಂಗಕಾಮಕ್ಕೆ ಏನಾದ್ರೂ ಚಂದ್ರು ಬಲಿ ಆಗಿರಬಹುದಾ ಎಂಬ ಅನುಮಾನ ಅವರಿಗೆ ಮೂಡಿದೆ. ಚಂದ್ರು ಮೃತಪಟ್ಟ ಸಂದರ್ಭದಲ್ಲಿ ಒಳುಡುಪು ಇರಲಿಲ್ಲ. ಕಿವಿ ಕಚ್ಚಿದ್ದಾರೆ ಎಂದೆಲ್ಲಾ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸಾವಿಗೂ ಮುನ್ನ ಕ್ಲಾಸ್‍ಮೇಟ್‍ಗಳ ಭೇಟಿಗೆ ಹಾತೊರೆದಿದ್ದ ಚಂದ್ರಶೇಖರ್!
ಕಿರಣ್ ಮತ್ತು ಗೆಳೆಯರ ಮೇಲೆ ಚಂದ್ರು ತಂದೆಗೆ ಅನುಮಾನ ಇದೆ. ಆದರೆ ರೇಣುಕಾಚಾರ್ಯ ಮಾತ್ರ, ಸಹೋದರನ ಮಾತಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ, ಕಿರಣ್‍ನನ್ನು ಪೊಲೀಸರು ಸರಿಯಾಗಿ ವಿಚಾರಿಸಿಲ್ಲ. ಪಂಚನಾಮೆ ವೇಳೆ ನಮ್ಮನ್ನು ಕರೆದಿಲ್ಲ ಎಂದು ಪೊಲೀಸರ ಮೇಲೆ ಹರಿಹಾಯ್ದಿದ್ದಾರೆ. ಚಂದ್ರು ಸಾವಿಗೆ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಗೊತ್ತಾಗಲಿದೆ.
Live Tv
[brid partner=56869869 player=32851 video=960834 autoplay=true]
ದಾವಣಗೆರೆ: ನನ್ನ ಮಗನದ್ದು ವ್ಯವಸ್ಥಿತ ಸಂಚು. ಹೇಡಿಗಳು ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಶಿಖಂಡಿಗಳು ಇಂತಹ ಕೆಲಸ ಮಾಡಿದ್ದಾರೆ. ಮಚ್ಚಿನಿಂದ ತಲೆ ಹಾಗೂ ಬೆನ್ನಿಗೆ ಹೊಡೆದಿದ್ದಾರೆ. ಬಿಳಿ ಬಟ್ಟೆಯಿಂದ ಆತನ ಕಾಲು ಕಟ್ಟಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ (Renukacharya) ಆರೋಪಿಸಿದ್ದಾರೆ.
ಘಟನೆ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮಗನ ಸಾವು ಸಹಜ ಸಾವು ಅಲ್ಲ. ಪೊಲೀಸರಿಗೆ ಮೊದಲೇ ಹೇಳಿದ್ದೆ ನನ್ನಮಗ ಕಿಡ್ನಾಪ್ ಆಗಿದ್ದಾನೆ ಎಂದು. ಆದರೆ ಹುಡುಕಾಟ ನಡೆಸಿದ್ರು ಈಗ ಅವನ ಮೃತದೇಹ ಸಿಕ್ಕಿದೆ. ಪೊಲೀಸರು ತನಿಖೆ ನಡೆಸಿ ನ್ಯಾಯ ಒದಗಿಸಲಿ. ನಮಗೆ ದೇವರೇ ನ್ಯಾಯ ಕೊಡಿಸಬೇಕು. ನನ್ನ ಮಗ ಬೆಂಗಳೂರಿಗೆ (Bengaluru) ಹೋಗುತ್ತೇನೆ ಎಂದು ಹೇಳಿದ್ದ. ನಮ್ಮ ಮನೆಯ ನಂದಾದೀಪ ಹಾರಿ ಹೋಗಿದೆ. ಅವನು ನನ್ನ ಜೊತೆ ಕ್ಷೇತ್ರದಲ್ಲಿ ಬೆಂಬಲವಾಗಿದ್ದ. ಜನರ ಪ್ರೀತಿ ಗಳಿಸಿದ್ದ ಈಗ ಅವನನ್ನು ಕಳೆದುಕೊಂಡಿದ್ದೇನೆ ಎಂದು ದುಃಖಿತರಾದರು. ಇದನ್ನೂ ಓದಿ: ಹೊನ್ನಾಳಿ ಚಂದ್ರು ಸಾವಿನ ಸುತ್ತ 5 ಅನುಮಾನ
ನನ್ನ ಮಗ ಬಹಳ ಬೇಗ ಬೆಳೆಯುತ್ತಿದ್ದ. ಸದಾ ಕೇಸರಿ ಶಾಲು, ಪಿಂಕ್ ಶರ್ಟ್ ಧರಿಸುತ್ತಿದ್ದ. ಇದನ್ನು ನೋಡಿ ಕೆಲವರು ಸಹಿಸುತ್ತಿರಲಿಲ್ಲ. ನನ್ನ ರಾಜಕಾರಣಕ್ಕೆ ಬೆನ್ನೆಲುಬಾಗಿ ನಿಂತಿದ್ದ. ನನ್ನ ಮಗನ ಸಾವಿಗೆ ನಾನೇ ಕಾರಣನಾಗಿಬಿಟ್ಟೆ. ಹೇಡಿಗಳು ನನ್ನನ್ನು ಬಲಿ ತೆಗೆದುಕೊಳ್ಳಬೇಕಿತ್ತು, ಆದರೆ ನನ್ನ ಮಗನನ್ನು ಬಲಿ ತೆಗೆದುಕೊಂಡರು ಎಂದು ಮರುಗಿದರು. ಇದನ್ನೂ ಓದಿ: ಶವ ಅಂತ ಹೇಳ್ಬೇಡಿ ಚಂದ್ರು ಅಂತ ಕರೆಯಿರಿ- ಗೋಳಾಡಿದ ರೇಣುಕಾಚಾರ್ಯ
ಕಳೆದೊಂದು ವಾರದಿಂದ ಹೊನ್ನಾಳಿಯಲ್ಲಿ ಅನುಮಾನಾಸ್ಪದವಾಗಿ ವಾಹನವೊಂದು ಓಡಾಡುತ್ತಿದೆ ಹುಷಾರಾಗಿರಿ ಅಂದಿದ್ದರು. ನಾನು ನಮ್ಮ ಹುಡುಗನಿಗೆ ಹುಷಾರಾಗಿರು ಅಂದಿದ್ದೆ. ಅಷ್ಟರಲ್ಲಿಯೇ ಹೇಡಿಗಳು ಇಂತಹ ಕೆಲಸ ಮಾಡಿದ್ದಾರೆ. ನಮ್ಮ ಹುಡುಗನ ಅಂತ್ಯ ಸಂಸ್ಕಾರವನ್ನು ನಮ್ಮ ಹೊಸ ಮನೆ ಬಳಿ ಮಾಡಬೇಕು ಎಂಬುದು ನನ್ನ ಆಸೆ. ಆದರೆ ನಮ್ಮ ಮನೆಯವರು ಒಪ್ಪುತ್ತಿಲ್ಲ. ತೋಟದಲ್ಲಿ ನಮ್ಮ ಹಿರಿಯರನ್ನೆಲ್ಲಾ ಮಾಡಿದ್ದೇವೆ ಅಲ್ಲೇ ಮಾಡಬೇಕು ಎನ್ನುತ್ತಿದ್ದಾರೆ ನೋಡೋಣ. ಮುಖ್ಯಮಂತ್ರಿಗಳು (CM) ಫೋನ್ ಮಾಡಿದ್ದರು ಮಾತನಾಡಲು ಆಗಲಿಲ್ಲ. ಯಡಿಯೂರಪ್ಪ, ಶೆಟ್ಟರ್, ಸಿ.ಟಿ.ರವಿ ಎಲ್ಲರೂ ಪೋನ್ ಮಾಡಿದ್ದರು ಎಂದರು.
Live Tv
[brid partner=56869869 player=32851 video=960834 autoplay=true]
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಂದಿನಿಂದ ‘ರಾಜಿ’ ಹೆಸರಿನ ಹೊಸ ಧಾರಾವಾಹಿ ಶುರುವಾಗಲಿದೆ. ಕರ್ಣ ಮತ್ತು ರಾಜೇಶ್ವರಿಯ ಪ್ರೀತಿ ಮತ್ತು ಸ್ನೇಹದ ಕುರಿತಾದ ಈ ಧಾರಾವಾಹಿ ಉತ್ತಮ ಕತೆ ಮತ್ತು ಕಲಾವಿದರಿಂದಾಗಿ ಕನ್ನಡ ಕಿರುತೆರೆ ವೀಕ್ಷಕರಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ. ಇದನ್ನೂ ಓದಿ : ಪುನೀತ್ ಬ್ಯಾನರ್ ಗಾಗಿ ನಡೆಯಿತು ಮಾರಾಮಾರಿ : ರಾಡ್ ಹಿಡಿದುಕೊಂಡು ಗಲಾಟೆ
ತಂದೆ ತಾಯಿ ಇಲ್ಲದ ಮುಗ್ಧ ಹುಡುಗಿ ರಾಜಿಯನ್ನು ಭಾಸ್ಕರ್ ಮತ್ತು ಸರಸ್ವತಿ ಶಾನುಭೋಗ ದಂಪತಿ ತಮ್ಮ ಮನೆಯಲ್ಲೇ ಬೆಳಸಿರುತ್ತಾರೆ. ಭಾಸ್ಕರ್ ಶಾನುಭೋಗ ರಾಜಿಯನ್ನು ತಮ್ಮ ಮನೆ ಮಗಳಂತೆ ಕಂಡರೂ, ಸರಸ್ವತಿ ಮತ್ತು ಶಾನುಭೋಗರ ಕಿರಿ ಮಗ ಕರ್ಣನನ್ನು ಹೊರತುಪಡಿಸಿ ಅವರ ಕುಟುಂಬದವರಿಗೆ ರಾಜಿ ಮನೆಕೆಲಸದಾಕೆ ಮಾತ್ರ. ಭಾಸ್ಕರ್ ಶಾನುಭೋಗರ ಮೂವರು ಗಂಡು ಮಕ್ಕಳು ಮತ್ತು ಒಬ್ಬ ಮಗಳ ಪೈಕಿ, ಮೊದಲನೆಯವನು ರವೀಶ್, ಮೃದು ಸ್ವಭಾವದ ಇವನಿಗೆ ತನ್ನ ಹೆಂಡತಿ ಶಾಂಭವಿ ಹೇಳಿದ್ದೆ ವೇದವಾಕ್ಯ. ಇನ್ನು ಎರಡನೇ ಮಗ ಉದಯ್ ಶಾಂಭವಿ ಅತ್ತಿಗೆ ತರಾನೇ ಸದಾ ತಂದೆಯ ಆಸ್ತಿ ಕಬಳಿಸುವ ಹೊಂಚು ಹಾಕುತ್ತಿರುತ್ತಾನೆ. ಉದಯ್ ಪತ್ನಿ ದೇವಕಿ ಶಾಂಭವಿ ಕೇಡಿತನದಲ್ಲಿ ಭಾಗಿಯಾಗಿದ್ರೂ ತನ್ನ ಮಂದ ಬುದ್ಧಿಯಿಂದಾಗಿ ಒಂದಿಲ್ಲೊಂದು ಎಡವಟ್ಟು ಮಾಡಿಕೊಳ್ಳುತ್ತಿರುತ್ತಾಳೆ ಹೀಗಾಗಿ ದೇವಕಿ ಇದ್ದ ಕಡೆ ಕಾಮಿಡಿ ಇರಲಿದೆ. ಶಂಕರ್ ಭಾಸ್ಕರ್ ಶಾನುಭೋಗರ ಮಗಳು ರೇಣು ಆಗಾಗ ತಂದೆಯ ಆಸ್ತಿಯಲ್ಲಿ ತನ್ನ ಪಾಲಿನ ಬಗ್ಗೆ ತಕರಾರು ಮಾಡುತ್ತಿರುತ್ತಾಳೆ, ರೇಣು ಪತಿ ಮನೋಜ್ ಆರ್ಥಿಕವಾಗಿ ಶ್ರೀಮಂತನಲ್ಲದಿದ್ದರೂ, ಒಳ್ಳೆಯ ಮನಸಿನವನಾಗಿರುತ್ತಾನೆ. ಇದನ್ನೂ ಓದಿ : ಕೆಜಿಎಫ್ 2 : ನಾಲ್ಕೇ ದಿನಕ್ಕೆ 550 ಕೋಟಿ ಬಾಚಿದ ರಾಕಿಭಾಯ್
ಸಾನ್ವಿ, ವಿರಾಟ್ ಮತ್ತು ಲಚ್ಚಜ್ಜಿಯ ಪಾತ್ರಗಳು, ‘ರಾಜಿ’ ಧಾರಾವಹಿಯ ಕತೆಯ ತಿರುವಿಗೆ ಕಾರಣವಾಗುತ್ತವೆ. ಭಾಸ್ಕರ್ ಶಾನುಭೋಗರ ಕಿರಿಯ ಮಗ ಕರ್ಣ ಲಂಡನ್ನಿಗೆ ತನ್ನ ವಿದ್ಯಾಭ್ಯಾಸಕ್ಕಾಗಿ ಹೋಗಿರುತ್ತಾನೆ. ಕರ್ಣ ಮತ್ತು ರಾಜಿ ಬಾಲ್ಯದ ಗೆಳೆಯರು, ಕರ್ಣನಿಗೆ ಇದು ಸ್ನೇಹವಾಗಿದ್ದರೂ ರಾಜಿಗೆ ಕರ್ಣನ ಬಗ್ಗೆ ಸ್ನೇಹಕ್ಕೂ ಮಿಗಿಲಾದ ಭಾವವಿರುತ್ತದೆ. ಇವರಿಬ್ಬರ ಸ್ನೇಹ, ಪ್ರೀತಿಯಾಗಿ ಬದಲಾಗುತ್ತಾ ಅನ್ನೋದೆ ‘ರಾಜಿ’ ಧಾರಾವಾಹಿಯ ಕಥಾಹಂದರ. ಇದನ್ನೂ ಓದಿ : ಕ್ಷಮಿಸಿ ಬಿಡು ಬಸವಣ್ಣ : ವಿಡಿಯೋ ರಿಲೀಸ್ ಮಾಡಿದ ಹಂಸಲೇಖ
ರಾಜಿಯ ಪಾತ್ರದಲ್ಲಿ ಸೌಂದರ್ಯ ಕಾಣಿಸಿಕೊಳ್ಳಲಿದ್ದಾರೆ, ಇನ್ನು ಕಾರ್ತಿಕ್ ಕರ್ಣನ ಪಾತ್ರದಲ್ಲಿದ್ದಾರೆ. ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು ಮತ್ತು ವೈಜಯಂತಿ ಕಾಶಿ, ಭಾಸ್ಕರ್ ಮತ್ತು ಸರಸ್ವತಿ ಶಾನುಭೋಗರ ಪಾತ್ರವಹಿಸಿದ್ದಾರೆ. ನಿನಾಸಂ ಅಶ್ವಥ್ ರಾಜಿಯ ತಂದೆ ವೀರೇಶ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ, ನಧಾಫ್ , ರಜನಿ, ಛಾಯಾ, ದಿನೇಶ್, ಸುಧಾ ಹೆಗ್ಡೆ, ಶಿಲ್ಪಾ, ಅಮೃತಾ ನಾಯ್ಕ್, ವಿನಾಯಕ ಮತ್ತು ಸಂದೀಪ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ‘ರಾಜಿ’ಯ ಶೀರ್ಷಿಕೆ ಗೀತೆ ಸುಮಧುರವಾಗಿದ್ದು, ಸಾಮಾಜಿಕ ತಾಣದಲ್ಲಿ ಬಹಳಷ್ಟು ಸದ್ದು ಮಾಡಿದೆ. ಶಾನುಭೋಗ ಮನೆತನದ ಪ್ರೀತಿಯ ಆಸ್ತಿ ‘ರಾಜಿ’, ಏಪ್ರಿಲ್ 18ರಿಂದ ಸಂಜೆ 7.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಬೆಂಗಳೂರು: ಚಂದ್ರು ಕೊಲೆ ಸಂಬಂಧ ಅವರ ತಾಯಿ ಹೇಳಿಕೆ ಕೇಳಿದ್ದೇನೆ. ಬೈಕ್ ಅಪಘಾತದಿಂದ ಯಾರಿಗೂ ಪೆಟ್ಟಾಗಿಲ್ಲ, ಯಾರಿಗೂ ಡ್ಯಾಮೇಜ್ ಆಗಿಲ್ಲ. ಭಾಷೆಯೂ ಒಂದು ನೆಪವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದರಲ್ಲಿ ಕೋಮು ಕದಡುವ ವಿಚಾರ ಎಲ್ಲಿದೆ? ಕೊಲೆ ಮಾಡುವ ಮಾನಸಿಕ ಸ್ಥಿತಿ ಯಾಕಿದೆ? ಸತ್ಯ ಹೇಳುವುದರಿಂದ ಯಾವ ಕೋಮು ಕದಡಲಿದೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಹೇಳಿಕೆ ನೋಡಿದರೆ ಅವರು ನಮ್ಮ ರಾಜ್ಯದ ಸಿಎಂ ಆಗಿದ್ದರು ಎಂದು ಹೇಳೋಕೆ ನಾಚಿಕೆ ಆಗುತ್ತದೆ. ಸಿದ್ದರಾಮಯ್ಯ ಕಾಲ ಕಾಲಕ್ಕೆ ಸತ್ಯ ಹೇಳುವ ಟೀಮ್ ಅನ್ನು ಇಟ್ಟುಕೊಳ್ಳಬೇಕು. ಅವರು ಅರಳೋ ಮರಳೋ ಎನ್ನುವಂತಹ ಪರಿಸ್ಥಿತಿಗೆ ಬಂದಿದ್ದಾರೆ. ಸ್ವತಃ ಅಲ್‌ಖೈದಾ ಉಗ್ರ ಆಲ್ ಜಹಾರಿ ಮಾತನಾಡಿರುವ ವೀಡಿಯೋ ಇದೆ. ಅದನ್ನು ನೋಡಬೇಕು. ಇಲ್ಲದಿದ್ದರೆ ಅವರು ಅವರ ಸ್ಥಾನಕ್ಕೆ ತಕ್ಕಂತೆ ಮಾತನಾಡುತ್ತಿಲ್ಲ ಎನ್ನುವುದು ಗೊತ್ತಾಗಲಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆಂಧ್ರಪ್ರದೇಶದ ಎಲ್ಲಾ ಸಚಿವರು ರಾಜೀನಾಮೆ
ಈ ವೇಳೆ ಗೃಹಸಚಿವರ ಹೇಳಿಕೆಗೆ ಕಾಮೆಂಟ್ ಮಾಡಲ್ಲ ಎಂದ ಸಿಟಿ ರವಿ, ಕೆಲವೊಮ್ಮೆ ಸತ್ಯ ಸಂಗತಿ ಹೇಳುವುದಕ್ಕಿಂತ ಮುಂದೆ ಆಗುವ ಗಲಾಟೆ ತಡೆಯುವುದಕ್ಕೆ ಪ್ರಯತ್ನ ಮಾಡುತ್ತಾರೆ. ಅವರೇ ಸಚಿವರ ಬಾಯಿಂದ ಹೇಳಿಸಿರುತ್ತಾರೆ. ಅವರ ತಾಯಿ ಹೇಳಿಕೆ ನೋಡಿದರೆ, ಭಾಷೆ ಹೇಳಿಕೆ ಕೂಡ ಕೊಲೆಗೆ ಕಾರಣವಾಗಿದೆ. ಗಲಭೆಗೆ ಕಾರಣ ಆಗಬಾರದೆಂದು ಸುಳ್ಳು ಹೇಳಿಸಿದ್ದಾರೆ ಎಂದು ಭಾಸಿದ್ದೇನೆ. ಅದು ಏನೇ ಆಗಿರಲಿ ತನಿಖೆ ಅಡ್ಡದಾರಿಗೆ ಹೋಗಬಾರದು ಎಂದು ಹೇಳಿದರು.
ಕಾಂಗ್ರೆಸ್ ರಾಜಕೀಯ ಕಾರಣಕ್ಕೆ ಮಗು ಚಿವುಟುವ ಕೆಲಸ ಮಾಡಿದೆ. ಖಲಿಸ್ತಾನ್ ಚಳುವಳಿಗೆ ಗೊಬ್ಬರ ಹಾಕಿದ್ದು ಕಾಂಗ್ರೆಸ್. ಅದಕ್ಕೆ ಬಲಿಯಾಗಿದ್ದು ಇಂದಿರಾಗಾಂಧಿ. ಹಿಜಬ್ ವಿಚಾರದಲ್ಲಿ ಕೂಡ ಹಾಗೆಯೇ ಆಗುತ್ತದೆ. ಹೆಣ್ಣು ಮಕ್ಕಳಿಗೆ ಕೊಡುವ ಸ್ವಾತಂತ್ರ‍್ಯದ ಬಗ್ಗೆ ಗೊತ್ತಿರಬೇಕಿತ್ತು. ಹಿಜಬ್ ವಿಚಾರದಲ್ಲಿ ವಕೀಲರನ್ನು ನೇಮಿಸಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿ ವಿರುದ್ಧ ಅಲ್ಪಸಂಖ್ಯಾತರನ್ನು ಎತ್ತಿಕಟ್ಟಬೇಕು ಎನ್ನುವುದು ಅವರ ಅಜೆಂಡಾ. ಹಿಜಬ್ ಕಾರಣಕ್ಕೆ ಅವರೆಲ್ಲಾ ಅವಕಾಶ ಕಳೆದುಕೊಳ್ಳುತ್ತಾರೆ. ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚೋದಲ್ಲದೆ, ವಾಹನಗಳನ್ನು ಸುಟ್ಟುಹಾಕಿದರು. ಇದರ ಬಗ್ಗೆ ಅಧ್ಯಯನ ಆಗದಿದ್ದರೆ, ಮುಂದೆ ಕಷ್ಟ ಆಗಲಿದೆ. ಈ ಬಗ್ಗೆ ಸತ್ಯ ಸಂಗತಿ ಅಧ್ಯಯನ ಆಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚಿದ ಅಪೌಷ್ಟಿಕತೆ: 3 ವಾರಗಳಲ್ಲಿ ವರದಿ ಸಲ್ಲಿಸುವಂತೆ `ಹೈ’ ಸೂಚನೆ
ಇನ್ನೊಂದೆಡೆ ವಾಟ್ಸಪ್ ಸಂದೇಶ ಹರಿದಾಡುತ್ತಿದೆ. ಅದನ್ನು ಮುಂದೆ ಇಡುತ್ತೇನೆ ಎಂದ ಸಿಟಿ ರವಿ ವಾಟ್ಸಪ್ ಸಂದೇಶ ಓದಿದರು. ಜಗತ್ತಿನಾದ್ಯಂತ ಬಾಂಬ್ ಸ್ಪೋಟ ಮಾಡುತ್ತಿರುವುದು ಕುರಾನ್‌ನಲ್ಲಿ ಹೇಳಿರುವುದಕ್ಕೆ ಅಂತೆ. ಅಲ್ಲಾ ಮುಸ್ಲಿಮೇತರ ದೇಶಗಳ ವಿರೋಧಿ. ವಿಗ್ರಹ ಹೊಲಸು, ವಿಗ್ರಹ ಆರಾಧಕರನ್ನು ಕೊಲ್ಲಿ, ಅಲ್ಲಾನಿಗಿಂತ ಯಾವುದೇ ದೇವರಿಲ್ಲ ಎಂಬ ವಾಟ್ಸಪ್ ಸಂದೇಶ ಇದೆ ಎಂದು ಸಂದೇಶವನ್ನು ಓದಿ ಹೇಳಿದರು. ಯಾವುದೇ ಆಯಾತ್ ಗೂಗಲ್ ಸರ್ಚ್ ಮಾಡಿ, ಸಂದೇಶ ನೋಡಿ ಎಂದು ಹೇಳಲಾಗಿದೆ. ಯಾರೂ ಕೂಡ ಈ ವಿಚಾರ ಚರ್ಚೆ ಮಾಡಿಲ್ಲ. ಇದು ಸುಳ್ಳಾಗಿದ್ದರೆ, ನಾನು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ಸಿಟಿ ರವಿ ಸವಾಲು ಹಾಕಿದರು.
ಬೆಂಗಳೂರು: ಬೈಕ್ ಡಿಕ್ಕಿ ಹೊಡೆದಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಚಂದ್ರವನ್ನು ಕೊಲೆ ಮಾಡಲಾಗಿದೆ ಎಂದು ಗೆಳೆಯ ಸೈಮನ್ ಹೇಳಿದ್ದಾರೆ.
ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಮನ್ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹಳೇ ಗುಡ್ಡದ ಹಳ್ಳಿಯಲ್ಲಿ ಪುಂಡರ ಪುಂಡಾಟ ಹೇಗಿತ್ತು? ಚಂದ್ರು ಕೊಲೆ ದಿನ ನಿಜವಾಗಿಯೂ ನಡೆದಿದ್ದೇನು ಎಂಬುದನ್ನು ಸೈಮನ್ ದೂರಿನಲ್ಲಿ ಸಂಪೂರ್ಣವಾಗಿ ವಿವರಿಸಿದ್ದಾರೆ. ಇದನ್ನೂ ಓದಿ: ಬೈಕ್‍ಗೆ ಡಿಕ್ಕಿ ಹೊಡೆದಿದ್ದಕ್ಕೆ ಚಂದ್ರು ಕೊಲೆ: ಕಮಲ್ ಪಂಥ್
ದೂರಿನಲ್ಲಿ ಏನಿದೆ?
ಏಪ್ರಿಲ್ 4 ಅಂದರೆ ಕಳೆದ ಸೋಮವಾರ ಸೈಮನ್ ರಾಜ್ ಆದ ನನ್ನ ಬರ್ತಡೇ ಇತ್ತು. ರಾತ್ರಿ 12 ಗಂಟೆ ಸಮಯದಲ್ಲಿ ಚಂದ್ರು ನನ್ನ ಬರ್ತಡೇಗೆ ಕೇಕ್ ಕಟ್ ಮಾಡಿಸಿದ್ದ. ನಂತರ ಚಂದ್ರು ನಂಗೆ ಚಿಕನ್ ರೋಲ್ ತಿನ್ನಬೇಕು ಅಂತಾ ಹೇಳಿದ್ದ.
ಆ ವೇಳೆ ನನ್ನ ಹೋಂಡಾ ಅಕ್ಟೀವಾ ಬೈಕ್ ಕೆಎ 02-ಕೆಜೆ 4195 ರಲ್ಲಿ ಸಿಟಿ ಮಾರ್ಕೆಟ್, ಚಾಮರಾಜಪೇಟೆ ಎಲ್ಲ ಕಡೆ ಚಿಕನ್ ರೋಲ್‍ಗಾಗಿ ಹುಡುಕಾಟ ನಡೆಸಿದ್ದು, ಎಲ್ಲೂ ಕೂಡ ಚಿಕನ್ ರೋಲ್ ಸಿಕ್ಕಿರಲಿಲ್ಲ. ರಂಜಾನ್ ಇರುವ ಕಾರಣ ಗೋರಿಪಾಳ್ಯದಲ್ಲಿ ಚಿಕನ್ ರೋಲ್ ಸಿಗುತ್ತೆ ಅನ್ನೋ ಕಾರಣಕ್ಕೆ ನಸುಕಿನ ಜಾವ 2:15 ರ ಸಮಯದಲ್ಲಿ ಹಳೇ ಗುಡ್ಡದ ಹಳ್ಳಿಗೆ ಹೋಗಿದ್ವಿ.
ಈ ವೇಳೆ ವೇಗವಾಗಿ ಬಂದ ಬೈಕ್‍ವೊಂದು ನಮ್ಮ ಬೈಕ್‍ಗೆ ಡಿಕ್ಕಿ ಹೊಡೆದಿತ್ತು. ನಾವು ಏರುಧ್ವನಿಯಲ್ಲಿ ಯಾಕೋ ಡಿಕ್ಕಿ ಹೊಡೆದೆ ಅಂತಾ ಕೇಳಿದ್ವಿ. ಇದಕ್ಕೆ ಶಾಹೀದ್ ಎಂಬಾತ, “ಯಾರೋ ನೀವು, ತೇರಿ ಮಾಕಿ ಸೂದ್, ನಾನು ಇದೇ ಏರಿಯಾದವನು ಏನ್ ಮಾಡ್ತಿಯಾ” ಎಂದು ಪ್ರಶ್ನಿಸಿದ. ಜೊತೆಗೆ ಇತರೆ ಹುಡುಗರನ್ನು ಸೇರಿಸಿಕೊಂಡು ಗಲಾಟೆ ಶುರುಮಾಡಿದರು. ಈ ವೇಳೆ ಶಾಹೀದ್ ತನ್ನ ಚಾಕುವಿನಿಂದ ಚಂದ್ರು ತೋಡೆಗೆ ಇರಿದ. ಇದನ್ನೂ ಓದಿ: ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಟ್ಟ ಜಮೀರ್
ಚಂದ್ರು ತೋಡೆಗೆ ಚಾಕು ಇರಿದ ಪರಿಣಾಮ ತೀವ್ರವಾಗಿ ರಕ್ತಸ್ತ್ರಾವ ಆಗಿದ್ದನ್ನು ನೋಡಿ ಶಾಹೀದ್ ಮತ್ತು ಸ್ನೇಹಿತರು ಅಲ್ಲಿಂದ ಓಡಿ ಹೋಗಿದ್ರು. ಈ ಗಲಾಟೆಯಿಂದ ತಪ್ಪಿಸಿಕೊಂಡು ನಾನು ಓಡಿ ಹೋದೆ. ಆಟೋದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ನಾಲ್ಕು ಗಂಟೆ ಸಮಯದಲ್ಲಿ ಚಂದ್ರು ಸಾವನ್ನಪ್ಪಿದ್ದಾನೆ.
ಬೆಂಗಳೂರು: ನಗರದ ಗೋರಿಪಾಳ್ಯದಲ್ಲಿ ಚಂದ್ರು ಹತ್ಯೆ ವಿಚಾರದಲ್ಲಿ ಸಮಗ್ರ ತನಿಖೆ ಆಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಗ್ರಹಿಸಿದರು.
ಮೊನ್ನೆ ರಾತ್ರಿ ಹತ್ಯೆಯಾದ ಚಂದ್ರು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಸಿ.ಟಿ. ರವಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಹತ್ಯೆಗೀಡಾದ ಚಂದ್ರು ಅವರ ಸಹೋದರ ನವೀನ್, ನಮ್ಮ ಪಕ್ಷದ ಬೂತ್ ಸಮಿತಿ ಕಾರ್ಯದರ್ಶಿ ಎಂದ ಅವರು, ಏಕಾಏಕಿ ಹತ್ಯೆ ನಡೆದಿದೆ. ಅಂಗಡಿಯವರೂ ನೆರವಿಗೆ ಬರಲಿಲ್ಲ. ಇಲ್ಲಿ ಪೂರ್ವದ್ವೇಷ ಇರಲಿಲ್ಲ. ಬೈಕ್ ತಾಗಿದ್ದನ್ನೇ ನೆಪ ಮಾಡಿ, ಕನ್ನಡ ಮತ್ತು ತಮಿಳು ಮಾತ್ರ ಬರುವುದಾಗಿ ಹೇಳಿದ ಚಂದ್ರುವನ್ನು ಉರ್ದುವಿನಲ್ಲಿ ಮಾತನಾಡಿಲ್ಲ ಎಂಬ ಕಾರಣಕ್ಕೆ ಚಾಕುವಿನಿಂದ ಚುಚ್ಚಿದ್ದಾರೆ ಎಂಬುದಾಗಿ ಮನೆಯವರು ಹೇಳುತ್ತಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ಬೇರೆ ಪಕ್ಷಗಳು ಹಣಬಲದಲ್ಲಿ ಶ್ರೀಮಂತ, AAP ವಿಚಾರ ಧಾರೆಯಲ್ಲಿ ಶ್ರೀಮಂತ: ಭಾಸ್ಕರ್ ರಾವ್
ಪೊಲೀಸ್ ಇಲಾಖೆಯವರು ಬಹಳಷ್ಟು ಸಾರಿ ವಾಸ್ತವಿಕ ಸಂಗತಿಗಳ ಕಡೆ ಹೋಗುವುದಕ್ಕಿಂತ ಈ ವಿಚಾರವನ್ನು ಇಲ್ಲಿಗೇ ತಣ್ಣಗೆ ಮಾಡಬೇಕೆಂದು ಯೋಚಿಸುತ್ತಾರೆ. ಅದು ತಪ್ಪೇನೂ ಅಲ್ಲ. ಆದರೆ ಇನ್ನೊಂದು ಕಡೆ ಇಂಥ ಘಟನೆ ಮರುಕಳಿಸಬಾರದು. ಕನ್ನಡನಾಡಿನಲ್ಲಿ ಕನ್ನಡ ಮಾತನಾಡಲಿಲ್ಲ ಎಂದರೆ ಸ್ವಲ್ಪ ಯೋಚಿಸಬೇಕಾದ ವಿಷಯ. ಇಲ್ಲಿ ಉರ್ದು ಮಾತನಾಡುವುದು ಕಡ್ಡಾಯ ಎಂದು ಯಾರೂ ಹೇಳಿಲ್ಲ. ಆ ಕಾರಣಕ್ಕೆ ಸಣ್ಣ ನೆಪಕ್ಕಾಗಿ ಹತ್ಯೆ ಮಾಡಿದ್ದು ಖಂಡನೀಯ. ಆರೋಪಿಗಳು ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದರೆಂಬ ಮಾಹಿತಿ ಲಭಿಸಿದೆ. ಘಟನೆಯ ಕುರಿತು ಸಮಗ್ರ ತನಿಖೆ ಅತ್ಯಗತ್ಯ ಎಂದರು.
ಪಕ್ಷದ ಕಡೆಯಿಂದ ರಾಜ್ಯಾಧ್ಯಕ್ಷರು ಕಳುಹಿಸಿದ 5 ಲಕ್ಷ ರೂಪಾಯಿ ನೆರವನ್ನು ಕೊಡಲಾಗುತ್ತಿದೆ. ಸರ್ಕಾರದ ಕಡೆಯಿಂದಲೂ ಸೂಕ್ತ ಪರಿಹಾರ ನೀಡಲು ಮುಖ್ಯಮಂತ್ರಿಯವರನ್ನು ಕೋರಲಾಗುವುದು. ಇದೊಂದು ದುರದೃಷ್ಟಕರ ಸಂಗತಿ. ಇದನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು ಎಂದು ಆಗ್ರಹಿಸಿದರು. ಡಿ.ಜಿ ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಹಿನ್ನೆಲೆಯಲ್ಲಿ ನಾವು ಸ್ವಲ್ಪ ಸಮಗ್ರವಾಗಿ ಆಲೋಚಿಸಬೇಕಿದೆ. ಯಾರಿಗೆ ಸಹಿಷ್ಣುತೆ ಇಲ್ಲ ಎಂಬುದನ್ನು ಡಿ.ಜಿ ಹಳ್ಳಿ, ಕೆ.ಜಿ.ಹಳ್ಳಿ ಘಟನೆ ಪುಷ್ಟೀಕರಿಸುತ್ತದೆ. ಶಾಸಕನಿಗೇ ರಕ್ಷಣೆ ಕೊಡಲಾಗದ ಪರಿಸ್ಥಿತಿ, ಜನಸಾಮಾನ್ಯನಿಗೆ ಇನ್ನು ಹೇಗೆ ರಕ್ಷಣೆ ಕೊಡಲು ಸಾಧ್ಯ ಎಂಬುದನ್ನು ಗಂಭೀರವಾಗಿ ಯೋಚಿಸಬೇಕಿದೆ. ಸಣ್ಣ ಸಣ್ಣ ವಿಚಾರಕ್ಕೂ ಹಿಂಸಾಚಾರಕ್ಕೆ ಇಳಿಯುವುದೇಕೆ? ಅದರ ಹಿನ್ನೆಲೆ, ಪ್ರಚೋದನೆ ಬಗ್ಗೆಯೂ ಸಮಗ್ರ ತನಿಖೆ ಅಗತ್ಯವಿದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ಇದನ್ನೂ ಓದಿ: ಕೋಮುದ್ವೇಷ ಕಕ್ಕುವುದು, ನನ್ನ ಹೆಸರು ಎಳೆದು ತರುವುದು ಸಿಟಿ ರವಿಗೆ ಮಾನಸಿಕ ರೋಗವಾಗಿದೆ: ಸಿದ್ದರಾಮಯ್ಯ
ಇದು ಪ್ರತ್ಯೇಕ ಘಟನೆಯೇ ಅಥವಾ ಕೋಮುಗಲಭೆಯ ಸಂಚು ಇದರ ಹಿಂದೆ ಇದೆಯೇ ಎಂಬುದರ ಕುರಿತು ಕೂಡ ಗೊತ್ತಾಗಬೇಕು. ಕೇವಲ ಸೀಮಿತ ದೃಷ್ಟಿಯಲ್ಲಿ ನೋಡದೆ ಸಮಗ್ರ ದೃಷ್ಟಿಕೋನದಿಂದ ತನಿಖೆ ಮಾಡಲು ಆಗ್ರಹಿಸುವುದಾಗಿ ತಿಳಿಸಿದರು. ಮಂಡ್ಯದ ಮುಸ್ಕಾನ್ ಘಟನೆಗೆ ಅಂತಾರಾಷ್ಟ್ರೀಯ ಭಯೋತ್ಪಾದಕರ ಪ್ರತಿಕ್ರಿಯೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ಬೇಳೆ ಬೇಯಿಸಿಕೊಳ್ಳಲು ಮತ್ತು ಭಾರತದ ನೆಲವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಿಕೊಳ್ಳುವುದಕ್ಕೆ ಇಂತಹ ಪ್ರಯತ್ನ ನಡೆದಿದೆ. ಕೆಲವೆಡೆ ಯಶಸ್ಸನ್ನೂ ಕಂಡಿದ್ದಾರೆ. ಇಲ್ಲಿಂದ ಕೆಲವರು, ಕೇರಳ, ತಮಿಳುನಾಡಿನಿಂದ ಹಾಗೂ ಭಟ್ಕಳದಿಂದ ಐಸಿಸ್ ಸೇರುವುದಾದರೆ ಏನೋ ಒಂದು ಕಾರಣ ಇರಬೇಕಲ್ಲವೇ? ಇದರ ಹಿಂದಿನ ಸತ್ಯ ತಿಳಿಯುವುದು ಅನಿವಾರ್ಯ. ಇದನ್ನು ಬಳಸಲು ಅಲ್ ಖೈದಾ ಹವಣಿಸುತ್ತಿದೆ ಎಂದು ನುಡಿದರು. ಇದನ್ನೂ ಓದಿ: ಹಿಂದೂಗಳಂತೆ ಮುಸಲ್ಮಾನರೂ ಪೌರಕಾರ್ಮಿಕರಾಗಿ ದುಡಿಯಲಿ: ಸೊಗಡು ಶಿವಣ್ಣ
ಭಾರತದ ನೆಲವನ್ನು ಭಯೋತ್ಪಾದನೆಗೆ ಬಳಸಿಕೊಳ್ಳಲು ಬಿಜೆಪಿ ಅವಕಾಶ ಕೊಡುವುದಿಲ್ಲ. ಇಲ್ಲಿ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುವ ಸರ್ಕಾರ ಇಲ್ಲ. ಭಯೋತ್ಪಾದಕರನ್ನು ಹೆಡೆಮುರಿ ಕಟ್ಟಲು ನಮಗೆ ಗೊತ್ತಿದೆ. ರಾಜ್ಯದ ಬೆಂಗಳೂರು, ಮಂಗಳೂರಿನಲ್ಲಿ ಎನ್‍ಐಎ ಠಾಣೆ ತೆರೆಯುವ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಅವರು, ತಾತ್ವಿಕವಾಗಿ ಒಪ್ಪಿಗೆ ಲಭಿಸಿ ಪ್ರಾರಂಭಿಸಿದ್ದಾರೆ. ಸಮಗ್ರವಾಗಿ ವ್ಯವಸ್ಥಿತವಾಗಿ ಅದು ಶೀಘ್ರವೇ ಆರಂಭವಾಗಲಿದೆ ಎಂದು ಅವರು ಉತ್ತರ ನೀಡಿದರು. ಇದನ್ನೂ ಓದಿ: ಗೌಡ್ರ ಮಕ್ಕಳು ಇನ್ನೂ ಬದುಕಿದ್ದಾರೆ, ಸ್ವಸ್ಥ ಸಮಾಜ ಕಟ್ಟುತ್ತೇವೆ: ಸಿಎಂ ಇಬ್ರಾಹಿಂ
ಯುನಿಫಾರ್ಮ್ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನು ಆಕ್ಷೇಪಿಸಿ ಬಂದ್ ಕರೆ ಕೊಡುವುದು ಸಮಾಜ ಒಡೆಯುವ ಕೆಲಸ ತಾನೇ? ಸಿಎಎ ವಿಚಾರದಲ್ಲಿ ಭಾಷಣ ಮಾಡಿದವರು ಪರಮನೀಚರು. ಯಾವ್ಯಾವ ಪಕ್ಷದವರು ಹಾಗೂ ಬುದ್ಧಿಜೀವಿಗಳು ಭಾಷಣ ಮಾಡಿದ್ದಾರೆಂಬ ವಿಡಿಯೋ ಸಿಗುತ್ತದೆ. ಅವರು ದಡ್ಡರಾ? ಸಂವಿಧಾನ ಓದಿಲ್ಲವೇ? ಮಸೂದೆ ಓದಿಲ್ಲವೇ? ಎರಡು ವರ್ಷಗಳಲ್ಲಿ ಸಿಎಎ ಯಾರದಾದರೂ ಪೌರತ್ವ ಕಿತ್ತುಕೊಂಡಿದೆಯೇ ಎಂದು ಇನ್ನೊಂದು ಪ್ರಶ್ನೆಗೆ ಉತ್ತರವಾಗಿ ಕೇಳಿದರು. ಇದನ್ನೂ ಓದಿ: ನಮಗೆ ಮಾನವೀಯತೆಯಲ್ಲಿ ನಂಬಿಕೆ ಇದ್ದರೆ, ಬಿಜೆಪಿ ಮನುವಾದದಲ್ಲಿ ನಂಬಿಕೆ ಇಟ್ಟಿದೆ: ಸಿದ್ದರಾಮಯ್ಯ
ದೇಶದಲ್ಲಿ ಅರಾಜಕತೆ ಹುಟ್ಟು ಹಾಕುವುದೇ ಅವರ ಉದ್ದೇಶವಾಗಿತ್ತು. ಇದಕ್ಕಾಗಿ ಹೊರಗಡೆಯಿಂದಲೂ ಧನಸಹಾಯ ಆಗುವ ಸಂಶಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಆ ನಿಟ್ಟಿನಲ್ಲಿ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. 1983ರಿಂದ ಯೂನಿಫಾರ್ಮ್ ಕಡ್ಡಾಯ ಇದೆ. ಆಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತೇ? ಇದ್ದಕ್ಕಿದ್ದಂತೆ ಹಿಜಬ್ ಹಿಡಿದುಕೊಂಡು ಯಾಕೆ ಬಂದರು? ಮಕ್ಕಳ ಮನಸ್ಸಿನಲ್ಲಿ ಜಾತಿಭೇದ ಇರಬಾರದು ಎಂಬ ಕಾರಣಕ್ಕೆ ಯೂನಿಫಾರ್ಮ್ ಕಡ್ಡಾಯಗೊಳಿಸಲಾಗಿತ್ತು ಎಂದು ವಿವರಿಸಿದರು. ಹಿಜಬ್ ಕುರಿತು ಮುಸ್ಲಿಂ ನ್ಯಾಯಮೂರ್ತಿಗಳೂ ಇದ್ದ ಹೈಕೋರ್ಟ್ ಪೀಠ ಸರ್ವಾನುಮತದ ತೀರ್ಪು ಕೊಟ್ಟಿದೆ. ಆಮೇಲೆ ಬಂದ್ ಕರೆ ಕೊಟ್ಟರು. ಈ ಥರದ ಜನ ಅಪಾಯಕಾರಿ. ಅವರಿಗೆ ಬೆಂಬಲ ಕೊಡುವವರು ಪರಮನೀಚರು ಎಂದು ವಾಗ್ದಾಳಿ ನಡೆಸಿದರು.
ನಮಗೆ ಬುದ್ಧಿ ಹೇಳುವ ಮೊದಲು ಆ ನೀಚತನದ ಕೆಲಸವನ್ನು ಅವರು ಬಿಡಬೇಕು ಎಂದು ಒತ್ತಾಯಿಸಿದರು. ಅದರ ಪರಿಣಾಮವಾಗಿ ಹರ್ಷ ಹಾಗೂ ಚಂದ್ರು ಕೊಲೆಯಾಗಿದೆ ಎಂದು ತಿಳಿಸಿದರು. ಇನ್ನೆಷ್ಟು ಬಲಿ ಬೇಕು? ತಮ್ಮ ಶಾಸಕನ ಮನೆಗೆ ಬೆಂಕಿ ಹಾಕಿದರೂ ಖಂಡಿಸುವ ಧೈರ್ಯ ಇರದ ನೀಚ ರಾಜಕಾರಣ ಮಾಡುವವರಿಂದ ಸಮಾಜ ಹಾಳಾಗುತ್ತಿದೆ. ಸತ್ಯ ಹೇಳುವ ನಮ್ಮಂಥವರಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯರಾದ ಎನ್ ರವಿಕುಮಾರ್, ಸಂಸದರಾದ ಪಿ.ಸಿ. ಮೋಹನ್, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಜಿ. ಮಂಜುನಾಥ್ ಅವರು ಉಪಸ್ಥಿತರಿದ್ದರು. ಇದನ್ನೂ ಓದಿ: ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಟ್ಟ ಜಮೀರ್