Tag: ಚಂದ್ರಾಲೇಔಟ್

  • ಕೆಲಸ ಮಾಡುತ್ತಿದ್ದ ವೇಳೆ ಮಷಿನ್‍ಗೆ ವೇಲ್ ಸಿಲುಕಿ ಯುವತಿ ಸಾವು

    ಕೆಲಸ ಮಾಡುತ್ತಿದ್ದ ವೇಳೆ ಮಷಿನ್‍ಗೆ ವೇಲ್ ಸಿಲುಕಿ ಯುವತಿ ಸಾವು

    ಬೆಂಗಳೂರು: ಕೆಲಸ ಮಾಡುತ್ತಿದ್ದ ವೇಳೆ ಮಷಿನ್‍ಗೆ ಯುವತಿ ವೇಲ್ ಸಿಲುಕಿಕೊಂಡು ಸಾವನ್ನಪ್ಪಿರುವ ಘಟನೆ ಚಂದ್ರಾಲೇಔಟ್‍ನಲ್ಲಿ ನಡೆದಿದೆ.

    ಬೆಂಗಳೂರಿನ ಚಂದ್ರಾಲೇಔಟ್‍ನಲ್ಲಿ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಯುವತಿ ಶಾಜಿಯಾ ಬಾನು ಕೆಲಸ ಮಾಡುತ್ತಿದ್ದರು. ಈ ವೇಳೆ ಶಾಜಿಯಾ ಬಾನು ಅವರ ವೇಲ್ ಮಷಿನ್‍ಗೆ ಸಿಲುಕಿ ಗಂಭೀರವಾಗಿ ಗಾಯವಾಗಿತ್ತು. ತಕ್ಷಣ ಫ್ಯಾಕ್ಟರಿ ಸಿಬ್ಬಂದಿ ಶಾಜಿಯಾ ಬಾನು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಗೋಮಾಂಸ ಸಾಗಾಟ – ಇಬ್ಬರು ಆರೋಪಿಗಳು ಸೆರೆ

    ಶಾಜಿಯಾ ಬಾನು ಸಾವಿನ ಹಿನ್ನೆಲೆ ಫ್ಯಾಕ್ಟರಿ ಮಾಲೀಕನ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಬ್ಬಂದಿಗಳು ಫ್ಯಾಕ್ಟರಿ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.

  • ಬಾಡಿಗೆ ಕಟ್ಟಲಾಗದೆ ಸ್ವಂತ ಮನೆಗೆ ಬಂದ್ರೆ ಹೆತ್ತ ತಾಯಿಯನ್ನೇ ಹೊರಗಟ್ಟಿದ ಪೊಲೀಸ್

    ಬಾಡಿಗೆ ಕಟ್ಟಲಾಗದೆ ಸ್ವಂತ ಮನೆಗೆ ಬಂದ್ರೆ ಹೆತ್ತ ತಾಯಿಯನ್ನೇ ಹೊರಗಟ್ಟಿದ ಪೊಲೀಸ್

    ಬೆಂಗಳೂರು: ಪೊಲೀಸ್ ಮುಖ್ಯಪೇದೆ ತನ್ನ ಹೆತ್ತ ತಾಯಿಯನ್ನೇ ಬೀದಿಗಟ್ಟಿದ ಘಟನೆ ಬೆಂಗಳೂರಿನ ಚಂದ್ರಾಲೇಔಟ್‍ನ ಬಿಸಿಸಿ ಬಡಾವಣೆಯಲ್ಲಿ ನಡೆದಿದೆ.

    ಬ್ಯಾಟರಾಯನಪುರ ಠಾಣೆಯಲ್ಲಿ ಮುಖ್ಯಪೇದೆಯಾಗಿರೋ ಜಗದೀಶ್ ಕಳೆದ ರಾತ್ರಿ ವೃದ್ಧ ತಾಯಿ ಪದ್ಮಾವತಮ್ಮರನ್ನ ಮನೆಯಿಂದ ನಿರ್ದಯವಾಗಿ ಹೊರಗಟ್ಟಿದ್ದಾನೆ. ಐವರು ಉದ್ಯೋಗಸ್ಥ ಮಕ್ಕಳನ್ನ ಹೊಂದಿರುವ ಪದ್ಮಾವತಮ್ಮ ಬಿಸಿಸಿ ಬಡಾವಣೆಯಲ್ಲಿರುವ ನಾಲ್ಕು ಅಂತಸ್ತಿನ ಮನೆಯಲ್ಲಿ ವಾಸವಿದ್ದರು. ಜಗದೀಶ್ ಮತ್ತು ಅವರ ಪತ್ನಿಯ ನಿತ್ಯ ಕಿರುಕುಳದಿಂದ ಸ್ವಂತ ಮನೆಯಿದ್ದೂ ಬಾಡಿಗೆ ಮನೆಯಲ್ಲಿ ವಾಸವಿದ್ದರು.

    ಆದ್ರೆ ಬಾಡಿಗೆ ಕಟ್ಟಲಾಗದೆ ಸೋಮವಾರ ತನ್ನ ಸ್ವಂತ ಮನೆಗೆ ಬಂದ್ರೆ ಪುತ್ರ ಜಗದೀಶ್ ನಿರ್ದಾಕ್ಷಿಣ್ಯವಾಗಿ ಹೆತ್ತ ತಾಯಿಯನ್ನು ಮನೆಯಿಂದ ಹೊರಗಟ್ಟಿ ಅಮಾನವೀಯತೆ ಮೆರೆದಿದ್ದಾನೆ. ತನ್ನ ಉಳಿದ ಸಹೋದರರ ಮೇಲೂ ಖಾಕಿ ದರ್ಪ ತೋರಿಸಿರೋ ಜಗದೀಶ್ ವಿರುದ್ಧ ಸಹೋದರರೇ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

     

  • ಬೆಂಗಳೂರಿನಲ್ಲಿ ಯುವತಿಯ ಹಿಂಭಾಗಕ್ಕೆ ಹೊಡೆದು ಫ್ಲೈಯಿಂಗ್ ಕಿಸ್ ಕೊಟ್ಟ ಕಾಮುಕರು!

    ಬೆಂಗಳೂರಿನಲ್ಲಿ ಯುವತಿಯ ಹಿಂಭಾಗಕ್ಕೆ ಹೊಡೆದು ಫ್ಲೈಯಿಂಗ್ ಕಿಸ್ ಕೊಟ್ಟ ಕಾಮುಕರು!

    ಬೆಂಗಳೂರು: ರಸ್ತೆಯಲ್ಲಿ ಊಟದ ಪಾರ್ಸೆಲ್‍ಗಾಗಿ ಕಾಯುತ್ತಿದ್ದಾಗ ಹಿಂಭಾಗಕ್ಕೆ ಹೊಡೆದು ಮುಂದೆ ಹೋಗಿ ಫ್ಲೈಯಿಂಗ್ ಕಿಸ್ ಕೊಟ್ಟು ಕೀಟಲೆ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯೊಬ್ಬಳು ಇಬ್ಬರು ಕಾಮುಕರ ವಿರುದ್ಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

    ಮೂಲತಃ ಪಶ್ಚಿಮ ಬಂಗಾಳದ ವಿದ್ಯಾರ್ಥಿನಿ ನಾಗರಬಾವಿ ಸರ್ಕಲ್‍ನ ರೋಲ್ಸ್ ಆನ್ ವೀಲ್ಸ್ ಹೊಟೇಲ್‍ನಲ್ಲಿ ಊಟಕ್ಕೆ ಆರ್ಡರ್ ಮಾಡಿ ನಿಂತಿದ್ದರು. ಊಟದ ಪಾರ್ಸೆಲ್‍ಗಾಗಿ ಕಾಯುತ್ತಿದ್ದಾಗ ಯಮಹ ಬೈಕ್‍ನಲ್ಲಿ ಬಂದ ಕಾಮುಕರು ಯುವತಿಯ ಮುಂದೆ ಬೈಕ್ ವೀಲ್ಹಿಂಗ್ ಮಾಡಿದ್ದಾರೆ. ಯಾರೋ ಪೊರ್ಕಿಗಳು ಅಂತಾ ದೂರು ನೀಡದೇ ವಿದ್ಯಾರ್ಥಿನಿ ಸುಮ್ಮನಾಗಿದ್ದರು.

    ಆದರೆ ಕಾಮುಕರು ವಿದ್ಯಾರ್ಥಿನಿಯನ್ನು ಫಾಲೋ ಮಾಡಿ ಹಿಂಭಾಗಕ್ಕೆ ಹೊಡೆದು ಹೋಗಿದ್ದಾರೆ. ಇದರಿಂದ ಬೇಸತ್ತ ವಿದ್ಯಾರ್ಥಿನಿ ಕಾಲೇಜಿನ ಪ್ರಾಂಶುಪಾಲರ ಜೊತೆ ಬಂದು ಕಾಮುಕರ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಕಾಮುಕರ ಪತ್ತೆಗಾಗಿ ಜಾಲ ಬೀಸಿದ್ದಾರೆ.