Tag: ಚಂದ್ರಶೇಖರ್

  • ಕೋಟೆನಾಡಲ್ಲಿ ಖೋಟಾ ನೋಟು ನೋಟ್ ಕಿಂಗ್ ಪಿನ್ ಅರೆಸ್ಟ್

    ಕೋಟೆನಾಡಲ್ಲಿ ಖೋಟಾ ನೋಟು ನೋಟ್ ಕಿಂಗ್ ಪಿನ್ ಅರೆಸ್ಟ್

    ಚಿತ್ರದುರ್ಗ: ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ಖೋಟಾ ನೋಟು ನೀಡುವ ಮೂಲಕ ವಂಚಿಸಿ ನಾಪತ್ತೆಯಾಗಿದ್ದ ಚಿತ್ರದುರ್ಗ ನಗರಸಭೆ ಸದಸ್ಯ ಚಂದ್ರಶೇಖರ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ

    ಚಂದ್ರಶೇಖರನ  ಪತ್ನಿ ದೇವಿಕಾ, ಬಾಬು ಹಾಗೂ ಅರುಣ್ ಬಂಧಿತರು. ಈತ ಹಲವು ವರ್ಷಗಳಿಂದ ಖೋಟಾ ನೋಟು ದಂಧೆ ನಡೆಸುತ್ತಾ ಹಲವರನ್ನು ವಂಚಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಬಿಂದಾಸ್ ಆಗಿದ್ದನು. ವಾರ್ಡ್ ನಂ.4ರ JDS ನಗರಸಭೆ ಸದಸ್ಯ ಚಂದ್ರಶೇಖರ್ ಅಲಿಯಾಸ್ ಟೋಲಿ ಚಂದ್ರನನ್ನು ಚಿತ್ರದುರ್ಗ ಎಸ್‍ಪಿ ಜಿ.ರಾಧಿಕಾ ನೇತೃತ್ವದಲ್ಲಿ ಬಂಧಿಸಲಾಗಿದೆ.

    ಡಿಸೆಂಬರ್ 6 ರಂದು 6ಲಕ್ಷ ನಗದು ಪಡೆದು 18 ಲಕ್ಷ ನೀಡುವುದಾಗಿ ನಂಬಿಸಿ ವಂಚಿಸಿದ್ದಾರೆಂಬ ಆರೋಪ ಕೇಳಿಬಂದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಚಿತ್ರದುರ್ಗ ಪೊಲೀಸರು ಆಂದ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ.ದನ್ನೂ ಓದಿ: ನಕಲಿ ದಾಖಲೆಯಿಂದ ರೈಲು ಇಂಜಿನ್ ಮಾರಾಟ ಮಾಡಿದ ಎಂಜಿನಿಯರ್

    ದೊಡ್ಡಬಳ್ಳಾಪುರದ ನಾಗರಾಜ್ ಅವರಿಂದ 6ಲಕ್ಷ ಅಸಲಿ ಹಣ ಪಡೆದು 18ಲಕ್ಷ ಹಣವಿದೆ ಎಂದು ಬ್ಯಾಗ್ ನೀಡಿ ಮೋಸ ಮಾಡಲಾಗಿತ್ತು. ಹೀಗಾಗಿ ಪ್ರಕರಣ ಧಾಖಲಿಸಿಕೊಂಡ ಚಿತ್ರದುರ್ಗ ಬಡಾವಣೆ ಠಾಣೆ ಪೊಲೀಸರು, ಚಂದ್ರಶೇಖರ್ ಮತ್ತಿತರರ ವಿರುದ್ಧ ಕೇಸ್ ದಾಖಲಿಸಿಕೊಂಡು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಸಿಪಿಐ ಶಂಖರಪ್ಪ ಸೇರಿದಂತೆ ಪ್ರಕರಣ ಭೇದಿಸಿದ ಎಲ್ಲಾ ಸಿಬ್ಬಂದಿ ಎಸ್‍ಪಿ ರಾಧಿಕಾ ಅಭಿನಂದಿಸಿದ್ದಾರೆ. ದನ್ನೂ ಓದಿ: ಮಾಜಿ ಪತ್ನಿಗೆ 5516 ಕೋಟಿ ಜೀವನಾಂಶ ನೀಡುವಂತೆ ದುಬೈ ದೊರೆಗೆ ಹೈಕೋರ್ಟ್ ಆದೇಶ

  • ಮಹಿಳೆಗೆ ಮರ್ಮಾಂಗ ತೋರಿಸಿದ ಹೆಡ್ ಕಾನ್ಸ್ಟೇಬಲ್ ಅಮಾನತು

    ಮಹಿಳೆಗೆ ಮರ್ಮಾಂಗ ತೋರಿಸಿದ ಹೆಡ್ ಕಾನ್ಸ್ಟೇಬಲ್ ಅಮಾನತು

    ಬೆಂಗಳೂರು: ಹೆಡ್ ಕಾನ್ಸ್ಟೇಬಲ್ ಒಬ್ಬರು ಮಹಿಳೆಗೆ ತನ್ನ ಮರ್ಮಾಂಗ ತೋರಿಸಿದ ಘಟನೆ ಯಲಹಂಕ ನ್ಯೂಟೌನ್‍ನ ಹೌಸಿಂಗ್ ಬೋರ್ಡ್ ಬಳಿ ನಡೆದಿದೆ.

    ಅಮೃತ ಹಳ್ಳಿಯ ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ ಯಲಹಂಕ ಹೊಸನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ಮಹಿಳೆಯ ಮುಂದೆ ಬೈಕ್ ನಿಲ್ಲಿಸಿ ಟಾರ್ಚ್ ಹಾಕಿ ತನ್ನ ಮರ್ಮಾಂಗವನ್ನು ತೋರಿಸಿದ್ದಾರೆ.

    https://twitter.com/ForeverIndian07/status/1472870747706204165?t=cd-B0YYgEMjJp1ZeY7FHXw&s=19

    ಆರೋಪಿಯ ಮೇಲೆ ಐಪಿಸಿ ಸೆಕ್ಷನ್ 354(ಎ) ಹಾಗೂ 509ರ ಅಡಿಯಲ್ಲಿ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಬೆನ್ನಲ್ಲೇ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಅವರು ಹೆಡ್ ಕಾನ್ಸ್‍ಟೇಬಲ್ ಚಂದ್ರಶೇಖರ್ ಅಮಾನತುಗೊಳಿಸಿ ಆದೇಶ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಮದುವೆ ವಯಸ್ಸು ಹೆಚ್ಚಿಸಿರೋದಕ್ಕೆ ಮಹಿಳೆಯರೇ ಖುಷಿಯಾಗಿದ್ದಾರೆ, ಆಗದವರು ವಿರೋಧಿಸ್ತಿದ್ದಾರೆ: ಮೋದಿ

    ದೂರಿನಲ್ಲಿ ಏನಿದೆ?
    ಭಾನುವಾರ ರಂದು ರಾತ್ರಿ ಸುಮಾರು 10:30 ರಿಂದ 11 ಗಂಟೆ ಸಮಯಕ್ಕೆ ಬೀದಿ ನಾಯಿಗಳಿಗೆ ಊಟ ಹಾಕಲು ಹೋಗಿದ್ದೆ. ಆ ಸಂದರ್ಭದಲ್ಲಿ ಚಂದ್ರಶೇಖರ್ ಮೊಬೈಲ್ ಟಾರ್ಚ್ ಆನ್ ಮಾಡಿಕೊಂಡು ಜಿಪ್ ಅನ್ನು ತೆಗೆದು ಅವರು ಅಂಗಾಗವನ್ನು ತೋರಿಸಿದ್ದಾನೆ. ನಾನು ಜೋರಾಗಿ ಚೀರಿದ ಕೂಡಲೇ ಜನರು ಬಂದರು. ನನ್ನ ಹತ್ತಿರ ಮೊಬೈಲ್ ಫೋನ್ ಇಲ್ಲದ ಕಾರಣ ಸಾರ್ವಜನಿಕರು ವೀಡಿಯೋ ಮಾಡಿದ್ದಾರೆ. ಬಳಿಕ ವ್ಯಕ್ತಿಯು ನಾನು ಸಿಓಪಿ, ನೀವುಗಳು ಏನು ಮಾಡಲು ಆಗುವುದಿಲ್ಲ ಎಂದು ಹೇಳಿದ್ದಾನೆ. ಅವನು ಮಾಡಿದ ಎಲ್ಲಾ ಕಾರ್ಯವು ವೀಡಿಯೋದಲ್ಲಿ ಸೆರೆಯಾಗಿದೆ. ವೀಡಿಯೋ ರೆಕಾರ್ಡ್ ಮಾಡಲು ಹೇಳಿದ ಕೂಡಲೇ ಕುಡಿದ ಮತ್ತಿನಲ್ಲಿದ್ದ ಆತ ದ್ವಿಚಕ್ರ ವಾಹನದಲ್ಲಿ ಹೋಗಿದ್ದಾನೆ. ಇದನ್ನೂ ಓದಿ: ಹೆತ್ತವರ ವಿರುದ್ಧ ದೂರು ನೀಡಿ ತಾನೇ ಜೈಲು ಪಾಲಾದ ಮಗ!

     

     

  • ಹೆಚ್‍ಡಿಕೆ, ಸುಮಲತಾ ವಾಕ್ಸಮರ- ಅಂಬಿ ಅಭಿಮಾನಿಗಳಿಂದ ಪ್ರತಿಭಟನೆ

    ಹೆಚ್‍ಡಿಕೆ, ಸುಮಲತಾ ವಾಕ್ಸಮರ- ಅಂಬಿ ಅಭಿಮಾನಿಗಳಿಂದ ಪ್ರತಿಭಟನೆ

    ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅವರ ಪರ ನಾವಿದ್ದೇವೆ ಎಂದು ಅಂಬಿ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್‌ರವರು ಹೇಳಿದ್ದಾರೆ.

    ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಾಕ್ ಸಮರ ಹಿನ್ನೆಲೆ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಬೆಂಗಳೂರು ಘಟಕದ ವತಿಯಿಂದ ಪ್ರತಿಭಟನೆ ಪ್ರಾರಂಭವಾಗಿದೆ. ಬೆಂಗಳೂರಿನ ಕಂಠೀರವ ಸ್ಟೋಡಿಯೋದ ಬಳಿ ಸುಮಾರು 50ಕ್ಕೂ ಹೆಚ್ಚು ಅಭಿಮಾನಿಗಳು ಸೇರಿದ್ದು, ಅಂಬರೀಷ್ ಫೋಟೋ ಹಿಡಿದು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಅಂಬರೀಶ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್‌ರವರು ಮಾತನಾಡಿ, ಮಂಡ್ಯ ಸಂಸದೆ ಸುಮಲತಾ ಅವರ ಪರ ನಾವಿದ್ದೇವೆ. ಕುಮಾರಸ್ವಾಮಿ ಮನೆ ಮುಂದೆ ನಮಗೆ ಪ್ರೊಟೆಸ್ಟ್ ಮಾಡುವುದಕ್ಕೆ ಕೆಪಾಸಿಟಿ ಇಲ್ವಾ. ಪುಷ್ಪಾ ಅಮರನಾಥ್, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಮಹಿಳಾ ಮಣಿಗಳಿದ್ದಾರೆ. ಯಾರೂ ಮಾತಾನಾಡುವುದಕ್ಕೆ ಮುಂದೆ ಬರುತ್ತಿಲ್ಲ. ಅಂಬರೀಶ್ ಅಣ್ಣ ಇದ್ದಾಗ ಯಾವ ನಾಯಿಗಳು ಬೊಗಳುತ್ತಿರಲಿಲ್ಲ. ಅಂಬರೀಶ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಸುಮಲತಾ ಏಕಾಂಗಿಯಾಗಿ ಗೆದ್ದಿದ್ದಾರೆ ಏಕಾಂಗಿಯಾಗಿ ಎದುರಿಸ್ತಾರೆ: ಲಿಂಬಾವಳಿ

  • ಕೆಸಿಎನ್ ಚಂದ್ರು ನಿಧನಕ್ಕೆ ಸಿಎಂ ಬಿಎಸ್‍ವೈ ಸಂತಾಪ

    ಕೆಸಿಎನ್ ಚಂದ್ರು ನಿಧನಕ್ಕೆ ಸಿಎಂ ಬಿಎಸ್‍ವೈ ಸಂತಾಪ

    ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ವಿತರಕ ಕೆಸಿಎನ್ ಚಂದ್ರು ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಅವರ ತಂದೆ ಕೆ.ಸಿ. ನಂಜುಂಡೇಗೌಡ ಅವರಿಂದ ಪ್ರಭಾವಿತರಾಗಿ 50ಕ್ಕೂ ಹೆಚ್ಚು ಜನಪ್ರಿಯ ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದ ಅವರು ಹುಲಿಯ ಹಾಲಿನ ಮೇವು, ಬಬ್ರುವಾಹನ ಮುಂತಾದ ಅತ್ಯುತ್ತಮ ಚಿತ್ರಗಳನ್ನು ನಿರ್ಮಿಸಿದ್ದರು. ಮೂರು ಅವಧಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿದ್ದರು. ಸಿನಿಮಾಗಳ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದರು. ಇದನ್ನೂ ಓದಿ: ಬಬ್ರುವಾಹನ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ನಿಧನ

    ಚಂದ್ರು ನಿಧನದಿಂದ ಅತ್ಯುತ್ತಮ ನಿರ್ಮಾಪಕರನ್ನು ಕನ್ನಡ ಚಿತ್ರರಂಗ ಕಳೆದುಕೊಂಡಂತಾಗಿದೆ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಕುಟುಂಬವರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    ತಂದೆ ಕೆ.ಸಿ.ಎನ್.ಗೌಡರ ಮಾರ್ಗದರ್ಶನದಲ್ಲಿ ಚಲನಚಿತ್ರ ನಿರ್ಮಾಣ ಪ್ರದರ್ಶನ ಚಿತ್ರ ವಿತರಣೆಯಲ್ಲಿ ಅಪಾರ ಅನುಭವಗಳಿಸಿದ್ದ ಕೆಸಿಎನ್ ಚಂದ್ರು ಅವರು ಬೆಂಗಳೂರಿನ ನವರಂಗ್, ಊರ್ವಶಿ ಮತ್ತು ದೊಡ್ಡಬಳ್ಳಾಪುರದ ರಾಜ್ ಕಮಲ್ ಚಿತ್ರಮಂದಿರದ ಮಾಲೀಕರಾಗಿ ಪ್ರದರ್ಶಕರಾಗಿದ್ದರು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮೂರು ಬಾರಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಚಂದ್ರು ಅವರು ಐವತ್ತಕ್ಕೂ ಹೆಚ್ಚು ಚಿತ್ರ ನಿರ್ಮಾಣ ಮಾಡಿದ್ದರು. ದಾರಿ ತಪ್ಪಿದ ಮಗ, ಹುಲಿಯ ಹಾಲಿನ ಮೇವು, ಬಬ್ರುವಾಹನ, ಅಂತ, ಮುಂತಾದ ಶ್ರೀಮಂತ ಚಿತ್ರಗಳನ್ನು ನಿರ್ಮಿಸಿದ್ದರು. ಸುಮಾರು ಐನೂರು ಚಿತ್ರಗಳನ್ನು ವಿತರಣೆ ಮಾಡಿದ್ದರು. ಸೆನ್ಸಾರ್ ಮಂಡಳಿಗೆ ಸದಸ್ಯರಾಗಿ ಆರು ವರ್ಷಗಳ ಸೇವೆ ಸಲ್ಲಿಸಿದ್ದರು.

    ಪನೋರಮಾ ವಿಭಾಗ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಿತಿ ಹಾಗೂ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಿತಿ ತೀರ್ಪುಗಾರಾಗಿ, ಮುಂಬೈನ ಭಾರತೀಯ ಚಲನಚಿತ್ರ ಒಕ್ಕೂಟದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಹಲವಾರು ಬದಲಾವಣೆ ತಂದ ಇವರು ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಆಪ್ತ ವಲಯದಲ್ಲಿ ಇದ್ದರು.

    ಶೇಷಾದ್ರಿಪುರದ ಶಿಕ್ಷಣ ದತ್ತಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತ ಸುಮಾರು ನೂರವೈತ್ತು ವಿದ್ಯಾರ್ಥಿಗಳಿಗೆ ಆಶ್ರಯವಾಗಿದ್ದರು.

  • ನಿರೂಪಕ ಅರುಣ್ ಬಡಿಗೇರ್​​ಗೆ  ಪಿತೃ ವಿಯೋಗ

    ನಿರೂಪಕ ಅರುಣ್ ಬಡಿಗೇರ್​​ಗೆ ಪಿತೃ ವಿಯೋಗ

    ಹುಬ್ಬಳ್ಳಿ: ಪಬ್ಲಿಕ್ ಟಿವಿಯ ನಿರೂಪಕ ಅರುಣ್ ಬಡಿಗೇರ್​​ಗೆ ಪಿತೃ ವಿಯೋಗವಾಗಿದೆ. 68 ವರ್ಷದ ಚಂದ್ರಶೇಖರ್ ಬಡಿಗೇರ್ ಅವರು ಕೊರೊನಾದಿಂದಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ಚಂದ್ರಶೇಖರ್ ಬಡಿಗೇರ್ ಕೆಇ ಬೋರ್ಡ್ ಶಾಲೆಯ ನಿವೃತ್ತ ಶಿಕ್ಷಕರಾಗಿದ್ದರು. ಇದೀಗ ಅರುಣ್ ಬಡಿಗೇರ್ ಸೇರಿ ಮೂವರು ಮಕ್ಕಳನ್ನು ಚಂದ್ರಶೇಖರ್ ಅವರು ಅಗಲಿದ್ದಾರೆ. ಮೂರು ದಿನಗಳ ಹಿಂದೆ ಕಳೆದ 27 ರಂದು ಅರುಣ್ ತಾಯಿ 53 ವರ್ಷದ ಕಸ್ತೂರಮ್ಮ ಬಡಿಗೇರ್ ನಿಧನವಾಗಿದ್ದರು. ಅಂದಿನಿಂದ ಮತ್ತಷ್ಟು ಗಂಭೀರವಾಗಿದ್ದ ಅರುಣ್ ತಂದೆ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.

    ಅರುಣ್ ಸಹೋದರ, ಸಹೋದರಿ ಇಬ್ಬರಿಗೂ ಕೂಡ ಸೋಂಕು ತಗುಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದಹಾಗೆ, ಇದೇ 25ಕ್ಕೆ ಅರುಣ್ ಸಹೋದರಿಯ ಮದುವೆ ನಿಶ್ಚಿತವಾಗಿತ್ತು.

    ನಿರೂಪಕ ಅರುಣ್ ಬಡಿಗೇರ್​​ಗೆ ತಂದೆ ನಿಧನಕ್ಕೆ ಪಬ್ಲಿಕ್ ಟಿವಿ ಬಳಗ ಕಂಬನಿ ಮಿಡಿದಿದೆ.

  • ಸ್ಯಾಂಡಲ್‍ವುಡ್‍ಗೆ ಮತ್ತೊಂದು ಆಘಾತ – ಹಿರಿಯ ನಿರ್ಮಾಪಕ ಚಂದ್ರಶೇಖರ್ ಇನ್ನಿಲ್ಲ

    ಸ್ಯಾಂಡಲ್‍ವುಡ್‍ಗೆ ಮತ್ತೊಂದು ಆಘಾತ – ಹಿರಿಯ ನಿರ್ಮಾಪಕ ಚಂದ್ರಶೇಖರ್ ಇನ್ನಿಲ್ಲ

    ಬೆಂಗಳೂರು: ನಿಮಿಶಾಂಬ ಪ್ರೊಡಕ್ಷನ್ಸ್ ನ ಅಣ್ಣಯ್ಯ, ಬಿಂದಾಸ್, ಏನೋ ಒಂಥರಾ, ರನ್ನ ಖ್ಯಾತಿಯ ನಿರ್ಮಾಪಕ ಚಂದ್ರಶೇಖರ್ ಮೃತಪಟ್ಟಿದ್ದಾರೆ.

    23 ದಿನಗಳ ಹಿಂದೆ ಚಂದ್ರಶೇಖರ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಹೀಗಾಗಿ ಅವರನ್ನು ಮಣಿಪಾಲ್ ಸೆಂಟರ್ ಗೆ ದಾಖಲು ಮಾಡಲಾಗಿತ್ತು. ಕೋವಿಡ್ ವಾಸಿಯಾಗಿತ್ತಾದ್ರೂ, ಇದ್ದಕ್ಕಿದ್ದಂತೆ ಶ್ವಾಸಕೋಶದಲ್ಲಿ ಉಲ್ಬಣಗೊಂಡು ಇಂದು ಬೆಳಗ್ಗಿನ ಜಾವ ಸುಮಾರು 4 ಗಂಟೆ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ.

    ಚಂದ್ರಶೇಖರ್ ಅವರು ಇತ್ತೀಚೆಗಷ್ಟೇ ಮಂಜು ಮಾಂಡವ್ಯ ನಿರ್ದೇಶನದಲ್ಲಿ ಉಪೇಂದ್ರ ಅವರೊಂದಿಗೆ ಸಿನಿಮಾವೊಂದನ್ನ ಅನೌನ್ಸ್ ಮಾಡಿದ್ರು. ಆದರೆ ವಿಧಿಯಾಟ ಬೇರೆನೇ ಆಗಿದೆ. ಈ ಮೂಲಕ ಇತ್ತೀಚೆಗಷ್ಟೇ ಕೋವಿಡ್ ಗೆ ಬಲಿಯಾದ ಕೋಟಿ ನಿರ್ಮಾಪಕ ರಾಮು ಅವರ ಜೊತೆಗೆ ಉದ್ಯಮ ಮತ್ತೊಂದು ಅನ್ನದಾತನ್ನ ಕಳೆದುಕೊಂಡಂತಾಗಿದೆ.

  • ಹಾಸನ ಜಿಲ್ಲೆಯ ಮಟ್ಟಿಗೆ ಬಜೆಟ್ ನಿರಾಶದಾಯಕ: ಆರ್ಥಿಕ ತಜ್ಞ ಚಂದ್ರಶೇಖರ್

    ಹಾಸನ ಜಿಲ್ಲೆಯ ಮಟ್ಟಿಗೆ ಬಜೆಟ್ ನಿರಾಶದಾಯಕ: ಆರ್ಥಿಕ ತಜ್ಞ ಚಂದ್ರಶೇಖರ್

    ಹಾಸನ: ರಾಜ್ಯ ಸರ್ಕಾರದ ಬಜೆಟ್ ಮಂಡನೆ ಹಾಸನ ಜಿಲ್ಲೆಯ ಮಟ್ಟಿಗೆ ನಿರಾಶದಾಯಕವಾಗಿದೆ ಎಂದು ಹಾಸನ ಚೇಂಬರ್ ಆಫ್ ಕಾಮರ್ಸ್ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರು ಬಜೆಟ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಎತ್ತಿನಹೊಳೆಗೆ 1,500 ಕೋಟಿ ಹಣ ಮೀಸಲಿಟ್ಟಿರುವುದು ಯಾವುದೇ ಪ್ರಯೋಜನವಿಲ್ಲ. ಬಜೆಟ್ ನಲ್ಲಿ ಹಾಸನ ಜಿಲ್ಲೆಗೆ ಹೆಚ್ಚು ಒತ್ತು ಕೊಟ್ಟಿದ್ದರೆ ಅಕ್ಕಪಕ್ಕದ ಜಿಲ್ಲೆಗೆ ವರದಾನವಾಗುತ್ತಿತ್ತು ಎಂದರು.

    ಹಾಸನ ವಿಮಾನ ನಿಲ್ದಾಣ ಸೇರಿದಂತೆ, ಈ ಹಿಂದೆ ಹಾಸನ ಜಿಲ್ಲೆಗೆ ಘೋಷಣೆಯಾಗಿದ್ದ ಯೋಜನೆಗಳಿಗೆ ಅನುದಾನದ ನಿರೀಕ್ಷೆಯಲ್ಲಿದ್ದೇವು. ನಮ್ಮ ನಿರೀಕ್ಷೆ ಈಡೇರಿಲ್ಲ ಎಂದು ಹಾಸನ ಜನ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯದ ದೃಷ್ಟಿಕೋನದಿಂದಲೂ ಬಜೆಟ್ ಆಶಾದಾಯಕವಾಗಿಲ್ಲ ಎಂದು ಆರ್ಥಿಕ ತಜ್ಞ ಚಂದ್ರಶೇಖರ್ ಹೇಳಿದ್ದಾರೆ.

  • ಸುಮಲತಾ ವಿರುದ್ಧ ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ಗರಂ!

    ಸುಮಲತಾ ವಿರುದ್ಧ ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ಗರಂ!

    ಮಂಡ್ಯ: ಹಿರಿಯ ನಟ ಅಂಬರೀಶ್ ಅವರು ಬದುಕಿದ್ದಾಗ ಅವರ ಅತ್ಯಾಪ್ತರಾಗಿದ್ದ ಅಮರಾವತಿ ಚಂದ್ರಶೇಖರ್ ಇದೀಗ ಸುಮಲತಾ ವಿರುದ್ಧ ತೊಡೆತಟ್ಟಿದ್ದಾರೆ.

    ಕಾಂಗ್ರೆಸ್ ಕಚೇರಿಯಲ್ಲಿ ಅಮರಾವತಿ ಚಂದ್ರಶೇಖರ್ ಕೆಂಡಾಮಂಡಲವಾಗಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ಕಾಂಗ್ರೆಸ್‍ನವರ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ಚಂದ್ರಶೇಖರ್ ಅವರ ಅಂಬರೀಶ್ ಬದುಕಿದ್ದಾಗ ಅವರಿಗೆ ತುಂಬಾ ಆತ್ಮೀಯರಾಗಿದ್ದರು. ಅಂಬರೀಶ್ ಮಂಡ್ಯಕ್ಕೆ ಆಗಮಿಸಿದಾಗಲೆಲ್ಲ ಅಮರಾವತಿ ಚಂದ್ರಶೇಖರ್ ಮನೆಯಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಆದರೆ ಈಗ ಕಾಂಗ್ರೆಸ್ ಕಾರ್ಯಕರ್ತರು ಸುಮಲತಾ ಪರವಾಗಿ ಬಹಿರಂಗ ಪ್ರಚಾರ ಮಾಡುತ್ತಿದ್ದಾರೆ ಎಂದು ಕೋಪಗೊಂಡಿದ್ದಾರೆ.

    ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸಿ.ಡಿ ಗಂಗಾಧರ್ ಗೆ ತರಾಟೆ ತೆಗೆದುಕೊಂಡಿದ್ದು, ಲೋಕಸಭಾ ಚುನಾವಣೆಗೂ ಮೊದಲೇ ಸುಮಲತಾ ಪರ ಕೆಲಸ ಮಾಡದಂತೆ ಕಾರ್ಯಕರ್ತರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

  • ಜನಾರ್ದನ ರೆಡ್ಡಿ ಬಳಿ ಕ್ಷಮೆಯಾಚಿಸಿದ ವಕೀಲ ಚಂದ್ರಶೇಖರ್..!

    ಜನಾರ್ದನ ರೆಡ್ಡಿ ಬಳಿ ಕ್ಷಮೆಯಾಚಿಸಿದ ವಕೀಲ ಚಂದ್ರಶೇಖರ್..!

    ಬೆಂಗಳೂರು: ಅಂಬಿಡೆಂಟ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದರು ಎನ್ನಲಾಗಿದ್ದ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಅವರು ಶನಿವಾರ ತಮ್ಮ ವಕೀಲರ ಜೊತೆ ಬಂದು ಸಿಸಿಬಿ ಎದುರು ಹಾಜರಾಗಿದ್ದರು. ಈ ಬೆನ್ನಲ್ಲೇ ಇದೀಗ ವಕೀಲ ಚಂದ್ರಶೇಖರ್ ಅವರು ರೆಡ್ಡಿ ಬಳಿ ಕ್ಷಮೆ ಕೇಳಿದ್ದಾರೆ.

    ಹಿರಿಯ ಪೊಲೀಸ್ ಅಧಿಕಾರಿಗಳ ಮಾತು ನಂಬಿ ರೆಡ್ಡಿ ಕೆಟ್ಟು ಹೋದ್ರಂತೆ. ಯಾಕಂದ್ರೆ ವಿಚಾರಣೆಗೆ ಹಾಜರಾಗಿ, ಬಂಧಿಸಲ್ಲ ಎಂಬ ಆಶ್ವಾಸನೆ ಮೇರೆಗೆ ರೆಡ್ಡಿ ಬಂದಿದ್ದಾರಂತೆ. ಆದರೆ ವಿಚಾರಣೆ ಸದರ್ಭದಲ್ಲಿ ಆಗಿದ್ದೇ ಬೇರೆ. ತಡರಾತ್ರಿವರೆಗೂ ಸುದೀರ್ಘ ವಿಚಾರಣೆ ನಡೆದಿದೆ. ಇದರಿಂದ ಬೇಸತ್ತ ರೆಡ್ಡಿ ಅವರಿಗೆ ಪಶ್ಚಾತಾಪವಾಗಿದೆಯಂತೆ.

    ಈ ರೀತಿ ಮಾಡ್ತಾರೆ ಅನ್ನೋದು ಗೊತ್ತಿದ್ರೆ ಬೇಲ್ ತೆಗೆದುಕೊಂಡೆ ವಿಚಾರಣೆಗೆ ಬರುತ್ತಿದ್ದೆ ಅಂತ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ. ರೆಡ್ಡಿಯ ಈ ಮಾತಿನಿಂದ ತಾನೂ ಬೇಸರಗೊಂಡ ವಕೀಲ ಚಂದ್ರಶೇಖರ್ ಕೂಡಲೇ ರೆಡ್ಡಿ ಬಳಿ ಕ್ಷಮೆ ಕೇಳಿದ್ದಾರೆ ಅಂತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.

    ವಿಚಾರಣೆಗೆ ಕರೆತಂದು ತಪ್ಪು ಮಾಡಿದೆ ಎಂದು ವಕೀಲರು ರೆಡ್ಡಿ ಬಳಿ ತಮ್ಮ ಅಲವತ್ತುಕೊಂಡಿದ್ದಾರೆ. ವಿಚಾರಣೆ ನೆಪದಲ್ಲಿ ಹಿಂಸೆ ಕೊಡ್ತಿದ್ದಾರೆ. ಕೋರ್ಟ್ ನಲ್ಲೇ ಉತ್ತರ ಕೋಡೋಣಾ ಅಂತ ವಕೀಲರು ಹೇಳಿದ್ದಾರೆ. ಈ ವೇಳೆ ರೆಡ್ಡಿ, ಆಗಿದ್ದು ಆಗಿ ಹೋಯಿತು ಎಂದು ವಕೀಲರ ಮಾತಿಗೆ ತಲೆದೂಗಿದ್ದಾರೆ. ರೆಡ್ಡಿಯ ಜೊತೆಯಲ್ಲಿಯೇ ಐವರು ವಕೀಲರು ರಾತ್ರಿ ಕಳೆದಿದ್ದಾರೆ. ಒಟ್ಟಿನಲ್ಲಿ ಕಳೆದ ಒಂದು ವಾರದಿಂದ ಸಿಗದೆ ಸತಾಯಿಸಿದ ರೆಡ್ಡಿಗೆ ಸತತ 15 ಗಂಟೆಗಳಿಂದ ಸಿಸಿಬಿ ಗ್ರಿಲ್ ಮಾಡಿದೆ ಎನ್ನಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕೋರ್ಟ್ ನಲ್ಲಿ ಉತ್ತರ ಕೊಡಬೇಕಾಗುತ್ತೆ- ಸಿಸಿಬಿಗೆ ಜನಾರ್ದನ ರೆಡ್ಡಿ ಎಚ್ಚರಿಕೆ

    ಕೋರ್ಟ್ ನಲ್ಲಿ ಉತ್ತರ ಕೊಡಬೇಕಾಗುತ್ತೆ- ಸಿಸಿಬಿಗೆ ಜನಾರ್ದನ ರೆಡ್ಡಿ ಎಚ್ಚರಿಕೆ

    ಬೆಂಗಳೂರು: ಅಂಬಿಡೆಂಟ್ ಕಂಪೆನಿ ಜೊತೆ 20 ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಮುಂದೆ ಹಾಜರಾಗಿರೋ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಅವರು ಅಧಿಕಾರಗಳ ವಿರುದ್ಧ ಗರಂ ಆಗಿದ್ದಾರೆ.

    ಸಿಸಿಬಿ ಹಾಜರಾದ ಕೂಡಲೇ ವಿಚಾರಣೆ ನಡೆಸಿದ ಅಧಿಕಾರಿಗಳು ತಡರಾತ್ರಿ 2 ಗಂಟೆವರೆಗೂ ರೆಡ್ಡಿಗೆ ಡ್ರಿಲ್ ಮಾಡಿದ್ದಾರೆ. ಸತತ 10 ಗಂಟೆಗಳ ಕಾಲ ವಿಚಾರಣೆಯಿಂದ ಬೇಸತ್ತ ರೆಡ್ಡಿ, ಬೇಕಂತಲೇ ಈ ರೀತಿ ಡ್ರಿಲ್ ಮಾಡುತ್ತಿದ್ದೀರಾ? ಕೋರ್ಟ್ ನಲ್ಲಿ ಉತ್ತರ ಕೊಡಬೇಕಾಗುತ್ತೆ ಅಂತ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ ಅನ್ನೋ ಮಾಹಿತಿಯೊಂದು ಸಿಸಿಬಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಅಲ್ಲದೇ ನನ್ನ ಮಾತು ಕೇಳಲಿಲ್ಲ ನೀವು ಅಂತ ತನ್ನ ಪರ ವಕೀಲರ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ರೆಡ್ಡಿ ಮಾತು ಕೇಳಿ ವಕೀಲ ಚಂದ್ರಶೇಖರ್ ಅವರು ಸೈಲೆಂಟ್ ಆಗಿ ಸಿಸಿಬಿಯಿಂದ ಹೊರಬಂದಿದ್ದಾರಂತೆ. ತನ್ನ ಪಿಎ ಅಲಿಖಾನ್ ಜೊತೆಯೂ ಮಾತಾಡದೆ ಜನಾರ್ದನ ರೆಡ್ಡಿ ಮೌನವಾಗಿ ಕುಳಿತಿದ್ದರಂತೆ. ಇಡೀ ರಾತ್ರಿ ನಿದ್ದೆ ಇಲ್ಲದೇ ಧ್ಯಾನ ಮಾಡುತ್ತಿದ್ದ ರೆಡ್ಡಿ, ಆಗಾಗ ತಿರುಪತಿ ವೆಂಕಟೇಶ್ವರನನ್ನು ನೆನೆದು ಕೈಮುಗಿಯುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews