Tag: ಚಂದ್ರಶೇಖರ್

  • ನನ್ನ ಮಗನ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ: ರೇಣುಕಾಚಾರ್ಯ ಅನುಮಾನ

    ನನ್ನ ಮಗನ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ: ರೇಣುಕಾಚಾರ್ಯ ಅನುಮಾನ

    ದಾವಣಗೆರೆ: ಸಹೋದರನ ಪುತ್ರ ಚಂದ್ರಶೇಖರ್ (Chandrashekhar) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶಾಸಕ ಎಂ.ಪಿ ರೇಣುಕಾಚಾರ್ಯ (MP Renukacharya) ಅವರು ಪೊಲೀಸರ ವಿರುದ್ಧವೇ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 7 ನಿಮಿಷದಲ್ಲಿ 6 ಕಿ.ಮೀ ಹಳ್ಳಿ ರಸ್ತೆಯನ್ನು ಕ್ರಮಿಸಿತ್ತು ಚಂದ್ರು ಕಾರು

    ನರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗನ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ. ನನ್ನ ಮಗನ ಶವದ ಮೇಲೆ ನೂರಾರು ಕಾರುಗಳನ್ನು ಹಾಕಿಕೊಂಡು ಓಡಾಡಿದರು. ಆದರೆ ನನ್ನ ಮಗನನ್ನು ಪತ್ತೆ ಮಾಡಿದ್ದು ನನ್ನ ಕ್ಷೇತ್ರದ ಜನರು. ಡ್ರೋಣ್ (Drone) ಮೂಲಕ ನನ್ನ ಮಗನನ್ನು ಹುಡುಕಾಟ ನಡೆಸಿದ್ದಾರೆ. ಆದರೆ ನಿನ್ನೆ ಒಬ್ಬ ಅಧಿಕಾರಿ ಬಂದು ಓವರ್ ಸ್ಪೀಡ್ ನಲ್ಲಿ ಬಂದು ಬಿದ್ದಿದ್ದಾನೆ ಎಂದು ಹೇಳುತ್ತಿದ್ದಾರೆ. ಹಾಗಾದ್ರೆ ಅವನ ಕೈಗೆ ಯಾರು ಹಗ್ಗ ಕಟ್ಟಿದ್ದರು ಹೇಳಿ. ಪೊಲೀಸರ ನಿರ್ಲಕ್ಷ್ಯ ಇದರಲ್ಲಿ ಎದ್ದು ಕಾಣುತ್ತಿದೆ, ಕನಿಷ್ಠ ಪಕ್ಷ ಆ ಅಧಿಕಾರಿ ನನ್ನ ಬಳಿ ಮಾಹಿತಿ ಪಡೆಯಲು ಕೂಡ ಬಂದಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ (Alok Kumar) ವಿರುದ್ಧ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಅಲೋಕ್ ಕುಮಾರ್ ಏನೇನು ಮಾಡಿದ್ದಾನೆ ಎನ್ನುವುದು ನಮಗೇನು ಗೊತ್ತಿಲ್ವಾ..?, ನನ್ನ ಮೇಲೆ ಕೊಲೆ ಬೆದರಿಕೆ ಹಾಕಿದ್ದರು, ಕರೆ ಮಾಡಿ ಕೂಡ ಬೆದರಿಕೆ ಹಾಕಿದ್ದರು. ಆಗ ಯಾವ ಅಧಿಕಾರಿ ಬಂದು ನನ್ನ ಹತ್ತಿರ ಮಾಹಿತಿ ಪಡೆಯಲಿಲ್ಲ. ಈಗ ಸ್ಪೀಡ್ ಆಗಿ ಬಂದು ಬಿದ್ದಿರಬಹುದು ಎಂದು ಹೇಳುತ್ತಿದ್ದಾರೆ. ಒಬ್ಬ ಶಾಸಕ ಮಗನಿಗೆ ಈ ರೀತಿಯಾದ್ರೆ ಸಾಮಾನ್ಯ ಜನರ ಗತಿ ಏನು ಎಂದು ಜನರು ಮಾತನಾಡುತ್ತಿದ್ದಾರೆ. ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ವೈಫಲ್ಯ ಕಾಣಿಸುತ್ತಿದೆ ಎಂದು ಕಿಡಿಕಾರಿದರು.  ಇದನ್ನೂ ಓದಿ: ಮಗ ಗೌರಿಗದ್ದೆಗೆ ಹೋಗಿದ್ದು ನನಗೆ ಗೊತ್ತಿರಲಿಲ್ಲ: ಮೃತ ಚಂದ್ರಶೇಖರ್ ತಾಯಿ

    ನಾವು ಮಾಹಿತಿ ಕೊಟ್ಟ ಕಡೆ ಮಾತ್ರ ಪೊಲೀಸರು ಹುಡುಕಾಟ ನಡೆಸಿದರು. ನಾನು ಸರ್ಕಾರದ ಒಂದು ಭಾಗ ಆದರೆ ನನ್ನ ಕುಟುಂಬಕ್ಕೆ ರಕ್ಷಣೆ ಇಲ್ಲ. ಗೃಹ ಸಚಿವರಿಗೆ ಸಿಎಂಗೆ ಮಾಹಿತಿ ನೀಡುತ್ತಾರೆ ವಿನಃ ಹುಡುಕಾಟದ ಕೆಲಸ ಮಾಡಿಲ್ಲ ಎಂದು ಹೇಳುವ ಮೂಲಕ ಪೊಲೀಸ್ ಇಲಾಖೆಯ ವಿರುದ್ಧ ರೇಣುಕಾಚಾರ್ಯ ಆಕ್ರೋಶ ಹೊರಹಾಕಿದರು.

    Live Tv
    [brid partner=56869869 player=32851 video=960834 autoplay=true]

  • ಈ ಹೊತ್ತಲ್ಲಿ ಯಾಕೋ ಬಂದಿದ್ದೀಯಾ ಅಂತಾ ಚಂದ್ರುನನ್ನು ವಿನಯ್ ಗುರೂಜಿ ಪ್ರಶ್ನಿಸಿದ್ರು: ಆಶ್ರಮದ ಸಿಬ್ಬಂದಿ

    ಈ ಹೊತ್ತಲ್ಲಿ ಯಾಕೋ ಬಂದಿದ್ದೀಯಾ ಅಂತಾ ಚಂದ್ರುನನ್ನು ವಿನಯ್ ಗುರೂಜಿ ಪ್ರಶ್ನಿಸಿದ್ರು: ಆಶ್ರಮದ ಸಿಬ್ಬಂದಿ

    ಚಿಕ್ಕಮಗಳೂರು: ಹೊನ್ನಾಳಿ ಶಾಸಕ ರೇಣುಕಾಚಾರ್ಯ (MP Renukacharya) ಸಹೋದರನ ಪುತ್ರ ಚಂದ್ರು ನಿಗೂಢವಾಗಿ ನಾಪತ್ತೆಯಾಗಿ ಸಾವನ್ನಪ್ಪುವ ಮುನ್ನ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ವಿನಯ್ ಗುರೂಜಿ (Vinay Guruji) ಅವರ ಆಶ್ರಮಕ್ಕೆ ಬಂದಿದ್ದರು. ಈ ವೇಳೆ ವಿನಯ್ ಗುರೂಜಿ ಕೂಡ ಭೇಟಿಯಾಗಿದ್ದರು.

    ಆಶ್ರಮದ ಭಕ್ತನಾಗಿದ್ದ ಚಂದ್ರು (Chandrashekhar) ವಿಗೆ ವಿನಯ್ ಗುರೂಜಿ ಈ ಹೊತ್ತಿನಲ್ಲಿ ಯಾಕೋ ಬಂದಿದ್ದೀಯಾ ಎಂದು ಪ್ರಶ್ನೆ ಮಾಡಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ಆಶ್ರಮದಲ್ಲಿದ್ದ ಚಂದ್ರು ಹಾಗೂ ಕಿರಣ್ ಗೆ ಕೈಗೆ ಒಂದು ಹಣ್ಣನ್ನು ನೀಡಿ ಟೈಂ ಆಗಿದೆ. ಹುಷಾರಾಗಿ ಹೋಗಿ ಎಂದಿದ್ದರು. ಚಂದ್ರು ಸಾವು ವಿನಯ್ ಗುರೂಜಿಗೂ ಕೂಡ ನೋವು ತಂದಿದೆ ಎಂದು ಆಶ್ರಮದ ಸಿಬ್ಬಂದಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದರು. ಇದನ್ನೂ ಓದಿ: ಚಂದ್ರು ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ: ಸಿದ್ದರಾಮಯ್ಯ ಆಗ್ರಹ

    ಆಶ್ರಮಕ್ಕೆ ನಿತ್ಯ ಸಾವಿರಾರು ಜನ ಬರುತ್ತಾರೆ. ನಾವು ಯಾರನ್ನೂ ವಿ.ಐ.ಪಿ. ಎಂದು ಪರಿಗಣಿಸಲ್ಲ. ಚಂದ್ರು ಕೂಡ ಕಿರಣ್ ಜೊತೆ ಬಂದಿದ್ದರು, ಬರುತ್ತಿದ್ದರು. ಅವರ ಸರಳತೆ ನೋಡಿ ಇಂದು ನಮಗೆ ತುಂಬಾ ಬೇಜಾರಾಗಿದೆ. ನಿನ್ನೆಯಿಂದ ಗುರುಗಳು ತುಂಬಾ ಬೇಜಾರಾಗಿದ್ದಾರೆ. ಆಶ್ರಮದಲ್ಲಿ ಚಂದ್ರು ಊಟ ಬಡಿಸುತ್ತಿದ್ದ, ತೆಂಗಿನಕಾಯಿ ಸುಲಿಯುತ್ತಿದ್ದ. ಆದರೆ ಇಂದು ಚಂದ್ರು ಸಾವು ನಮಗೆ ತುಂಬಾ ನೋವು ತಂದಿದೆ ಎಂದು ಸಿಬ್ಬಂದಿ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಂದ್ರು ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ: ಸಿದ್ದರಾಮಯ್ಯ ಆಗ್ರಹ

    ಚಂದ್ರು ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ: ಸಿದ್ದರಾಮಯ್ಯ ಆಗ್ರಹ

    ಬೆಂಗಳೂರು: ಶಾಸಕ ಎಂ.ಪಿ ರೇಣುಕಾಚಾರ್ಯ (MP Renukacharya) ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಆಗ್ರಹಿಸಿದ್ದಾರೆ.

    ಟ್ವಿಟರ್ ನಲ್ಲಿ ಸಂತಾಪ ಸೂಚಿಸಿ, ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಗೆ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿದ ಅವರು, ಶಾಸಕ ರೇಣುಕಾಚಾರ್ಯ ಅವರ ಸೋದರನ ಮಗನ ಸಾವಿನ ಸುದ್ದಿ ಕೇಳಿ ಆಘಾತವಾಯಿತು. ಮೃತ ಚಂದ್ರಶೇಖರ್ ಅವರ ತಂದೆ-ತಾಯಿ ಮತ್ತು ಸಂಬಂಧಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅನುಮಾನಾಸ್ಪದವಾಗಿ ಕಾಣುತ್ತಿರುವ ಈ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಗ ಗೌರಿಗದ್ದೆಗೆ ಹೋಗಿದ್ದು ನನಗೆ ಗೊತ್ತಿರಲಿಲ್ಲ: ಮೃತ ಚಂದ್ರಶೇಖರ್ ತಾಯಿ

    ಕಳೆದ ಭಾನುವಾರದಿಂದ ಶಾಸಕ ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ನಾಪತ್ತೆಯಾಗಿದ್ದರು. ಆ ಬಳಿಕದಿಂದ ಎಲ್ಲಾ ಕಡೆ ಚಂದ್ರುಗಾಗಿ ಹುಡುಕಾಟ ನಡೆಸಲಾಯಿತು. ಐದು ದಿನದ ಹಿಂದೆ ನಾಪತ್ತೆಯಾಗಿದ್ದ ಚಂದ್ರಶೇಖರ್ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುವಾರ ಮಧ್ಯಾಹ್ನದವರೆಗೂ ಚಂದ್ರು ಅವರನ್ನು ಅಪಹರಣ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಇದನ್ನೂ ಓದಿ: ನನ್ನ ಮಗನಿಗೆ ಮಚ್ಚಿನಿಂದ ತಲೆ, ಬೆನ್ನಿಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ: ರೇಣುಕಾಚಾರ್ಯ

    ಆದರೆ ಹೊನ್ನಾಳಿ ಮತ್ತು ನ್ಯಾಮತಿ ಮಾರ್ಗಮಧ್ಯೆ ಬರುವ ಸೊರಟೂರಿನ ತುಂಗಭದ್ರಾ ನದಿಯ ಕಾಲುವೆಯಲ್ಲಿ ಕಾರೊಂದು ಇದೆ ಎಂಬ ಸುದ್ದಿ ಇಡೀ ಪ್ರಕರಣಕ್ಕೆ ಟ್ವಿಸ್ಟ್ ನೀಡಿತು. ಕಾಲುವೆ ಮೇಲ್ಭಾಗದಲ್ಲಿ ಕಾರೊಂದರ ಬಿಡಿಭಾಗಳು ಪತ್ತೆ ಆಗಿದ್ದವು. ನುರಿತ ಈಜುಪಟುಗಳು ಮತ್ತು ಅಗ್ನಿಶಾಮಕ ಪಡೆ ಸಿಬ್ಬಂದಿ ಕಾರ್ಯಾರಚಣೆ ನಡೆಸಿ, ಕಾರನ್ನು ಮೇಲಕ್ಕೆ ಎತ್ತಿದರು. ಕಾರಿನಲ್ಲಿ ಚಂದ್ರಶೇಖರ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಗ ಗೌರಿಗದ್ದೆಗೆ ಹೋಗಿದ್ದು ನನಗೆ ಗೊತ್ತಿರಲಿಲ್ಲ: ಮೃತ ಚಂದ್ರಶೇಖರ್ ತಾಯಿ

    ಮಗ ಗೌರಿಗದ್ದೆಗೆ ಹೋಗಿದ್ದು ನನಗೆ ಗೊತ್ತಿರಲಿಲ್ಲ: ಮೃತ ಚಂದ್ರಶೇಖರ್ ತಾಯಿ

    ದಾವಣಗೆರೆ: ನನ್ನ ಮಗ ಗೌರಿ ಗದ್ದೆ ಹೋಗಿದ್ದು ನನಗೆ ಗೊತ್ತಿರಲಿಲ್ಲ. ಆತನನ್ನು ನಾನು ನಿನ್ನೆ ಶವವಾಗಿ ನೋಡಿದ್ದೇನೆ ಎಂದು ಮೃತ ಚಂದ್ರಶೇಖರ್ (Chandrashekhar) ತಾಯಿ ಅನಿತಾ ಕಣ್ಣೀರಾಕಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಮಗನಿಗೆ ಏನು ಮಾಡಿದ್ರೋ ಗೊತ್ತಿಲ್ಲ. ಜೀವಂತವಾಗಿ ಮಗನ ಮುಖವನ್ನ ನಾನು ಮತ್ತು ನನ್ನ ಪತಿ ಸಹ ನೋಡಲಿಲ್ಲ. ಕೊನೆಗೆ ಏನಾಯಿತು ಗೊತ್ತಾಗಲಿಲ್ಲ. ರಾಜಕೀಯವಾಗಿ ಬೆಳೆಯುತ್ತಿದ್ದ ಸಾವಿಗೆ ನ್ಯಾಯ ಬೇಕು ಎಂದು ರೋಧಿಸಿದ್ದಾರೆ. ಇದನ್ನೂ ಓದಿ: ಹೊನ್ನಾಳಿ ಚಂದ್ರು ಸಾವಿನ ಸುತ್ತ 5 ಅನುಮಾನ

    ಕಳೆದ ಭಾನುವಾರದಿಂದ ಶಾಸಕ ರೇಣುಕಾಚಾರ್ಯ (MP Renukacharya) ತಮ್ಮನ ಮಗ ಚಂದ್ರಶೇಖರ್ ನಾಪತ್ತೆಯಾಗಿದ್ದರು. ಆ ಬಳಿಕದಿಂದ ಎಲ್ಲಾ ಕಡೆ ಚಂದ್ರುಗಾಗಿ ಹುಡುಕಾಟ ನಡೆಸಲಾಯಿತು. ಐದು ದಿನದ ಹಿಂದೆ ನಾಪತ್ತೆಯಾಗಿದ್ದ ಚಂದ್ರಶೇಖರ್ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುವಾರ ಮಧ್ಯಾಹ್ನದವರೆಗೂ ಚಂದ್ರು ಅವರನ್ನು ಅಪಹರಣ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಹೊನ್ನಾಳಿ ಮತ್ತು ನ್ಯಾಮತಿ ಮಾರ್ಗಮಧ್ಯೆ ಬರುವ ಸೊರಟೂರಿನ ತುಂಗಭದ್ರಾ ನದಿಯ ಕಾಲುವೆಯಲ್ಲಿ ಕಾರೊಂದು ಇದೆ ಎಂಬ ಸುದ್ದಿ ಇಡೀ ಪ್ರಕರಣಕ್ಕೆ ಟ್ವಿಸ್ಟ್ ನೀಡಿತು. ಇದನ್ನೂ ಓದಿ: ನನ್ನ ಮಗನಿಗೆ ಮಚ್ಚಿನಿಂದ ತಲೆ, ಬೆನ್ನಿಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ: ರೇಣುಕಾಚಾರ್ಯ

    ಕಾಲುವೆ ಮೇಲ್ಭಾಗದಲ್ಲಿ ಕಾರೊಂದರ ಬಿಡಿಭಾಗಳು ಪತ್ತೆ ಆಗಿದ್ದವು. ನುರಿತ ಈಜುಪಟುಗಳು ಮತ್ತು ಅಗ್ನಿಶಾಮಕ ಪಡೆ ಸಿಬ್ಬಂದಿ ಕಾರ್ಯಾರಚಣೆ ನಡೆಸಿ, ಕಾರನ್ನು ಮೇಲಕ್ಕೆ ಎತ್ತಿದರು. ಕಾರಿನಲ್ಲಿ ಚಂದ್ರಶೇಖರ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಾಸಕ ರೇಣುಕಾಚಾರ್ಯ ಸೇರಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಚಂದ್ರು ನಿನ್ನ ಸಾವಿಗೆ ನಾನೇ ಕಾರಣ. ಚಂದ್ರು ನನ್ನನ್ನು ಕರ್ಕೋಳೋ ಎಂದು ರೇಣುಕಾಚಾರ್ಯ ಗೋಳಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಹೊನ್ನಾಳಿ ಚಂದ್ರು ಸಾವಿನ ಸುತ್ತ 5 ಅನುಮಾನ

    ಹೊನ್ನಾಳಿ ಚಂದ್ರು ಸಾವಿನ ಸುತ್ತ 5 ಅನುಮಾನ

    ದಾವಣಗೆರೆ/ಬೆಂಗಳೂರು: ಮಾಜಿ ಮಂತ್ರಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ(Renukacharya) ಸಹೋದರ ಎಂ.ಪಿ.ರಮೇಶ್ ಪುತ್ರ ಚಂದ್ರಶೇಖರ್(Chandrashekar) ನಾಪತ್ತೆ ಪ್ರಕರಣ ವಿಷಾದದಲ್ಲಿ ಅಂತ್ಯವಾಗಿದೆ. ಐದು ದಿನದ ಹಿಂದೆ ನಾಪತ್ತೆಯಾಗಿದ್ದ ಚಂದ್ರಶೇಖರ್ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಗುರುವಾರ ಮಧ್ಯಾಹ್ನದವರೆಗೂ ಚಂದ್ರು ಅವರನ್ನು ಅಪಹರಣ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಹೊನ್ನಾಳಿ ಮತ್ತು ನ್ಯಾಮತಿ ಮಾರ್ಗಮಧ್ಯೆ ಬರುವ ಸೊರಟೂರಿನ ತುಂಗಭದ್ರಾ(Tungabhadra Canal) ನದಿಯ ಕಾಲುವೆಯಲ್ಲಿ ಕಾರೊಂದು ಇದೆ ಎಂಬ ಸುದ್ದಿ ಇಡೀ ಪ್ರಕರಣಕ್ಕೆ ಟ್ವಿಸ್ಟ್ ನೀಡಿತು.

    ಕಾಲುವೆ ಮೇಲ್ಭಾಗದಲ್ಲಿ ಕಾರೊಂದರ ಬಿಡಿಭಾಗಳು ಪತ್ತೆ ಆಗಿದ್ದವು. ನುರಿತ ಈಜುಪಟುಗಳು ಮತ್ತು ಅಗ್ನಿಶಾಮಕ ಪಡೆ ಸಿಬ್ಬಂದಿ ಕಾರ್ಯಾರಚಣೆ ನಡೆಸಿ, ಕಾರನ್ನು ಮೇಲಕ್ಕೆ ಎತ್ತಿದರು. ಕಾರಿನಲ್ಲಿ ಚಂದ್ರಶೇಖರ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಶವ ಅಂತ ಹೇಳ್ಬೇಡಿ ಚಂದ್ರು ಅಂತ ಕರೆಯಿರಿ- ಗೋಳಾಡಿದ ರೇಣುಕಾಚಾರ್ಯ

    ಶಾಸಕ ರೇಣುಕಾಚಾರ್ಯ ಸೇರಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಚಂದ್ರು ನಿನ್ನ ಸಾವಿಗೆ ನಾನೇ ಕಾರಣ. ಚಂದ್ರು ನನ್ನನ್ನು ಕರ್ಕೋಳೋ ಎಂದು ರೇಣುಕಾಚಾರ್ಯ ಗೋಳಾಡಿದ್ದಾರೆ.

    ಇದು ಕೊಲೆಯೋ? ಆತ್ಮಹತ್ಯೆಯೋ? ಅಪಘಾತದಿಂದ ಉಂಟಾದ ಸಾವೋ? ಎಂಬುದು ಖಚಿತವಾಗಿಲ್ಲ. ಚಂದ್ರು ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದು ನಿಂತಿದೆ. ಇದೀಗ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಚಂದ್ರಶೇಖರ್ ಸಾವಿನ ನೈಜ ಕಾರಣ ತಿಳಿದುಬರಲಿದೆ.

    ಮತ್ತೊಂದು ಕಡೆ ಪೊಲೀಸರ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿದ್ದಾರೆ. ಇದು ಸಹಜ ಸಾವಲ್ಲ. ಕೊಲೆ ನಡೆದಿದೆ ಈ ಬಗ್ಗೆ ತನಿಖೆ ಆಗಬೇಕು ಎಂದು ಶಾಸಕ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ. ರೇಣುಕಾಚಾರ್ಯ ಜೊತೆ ಚರ್ಚಿಸಿ ತನಿಖೆ ನಿರ್ಧಾರ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ. ಶುಕ್ರವಾರ ಚಂದ್ರಶೇಖರ್ ಅಂತ್ಯಕ್ರಿಯೆ ಹೊನ್ನಾಳಿಯಲ್ಲಿ ನಡೆಯಲಿದೆ.

    ಚಂದ್ರು ಸಾವಿನ ಸುತ್ತ ಅನುಮಾನದ ಹುತ್ತ
    ಅನುಮಾನ 1 – ಡ್ರೈವರ್ ಸೀಟ್ ಬೆಲ್ಟ್ ಲಾಕ್ ಆಗಿದ್ರೂ ಹಿಂಬದಿ ಸೀಟ್‍ನಲ್ಲಿ ಮೃತದೇಹ ಸಿಕ್ಕಿದೆ.
    ಅನುಮಾನ 2 – ಕ್ರೇಟಾ ಕಾರಿನ ಮುಂಭಾಗದ ಗಾಜು ದೊಡ್ಡದಾಗಿ ಒಡೆದಿರುವುದು. ಯಾರೋ ಕಲ್ಲು ಎತ್ತಿ ಹಾಕಿ ಒಡೆದಂತೆ ಕಾಣುತ್ತಿದೆ.
    ಅನುಮಾನ 3 – ಕಾರು ಹಿಂಬದಿ ನಜ್ಜು ಗುಜ್ಜಾಗಿರುವುದು.
    ಅನುಮಾನ 4 – ನಾಲೆಯ ತಡೆಗೋಡೆಗೆ ಹೆಚ್ಚು ಹಾನಿ ಆಗದಿರುವುದು.
    ಅನುಮಾನ 5 – ಮೃತ ಚಂದ್ರು ಮೊಬೈಲ್ ಟವರ್ ಲೊಕೇಶನ್ ಬೇರೆ ಕಡೆ ಕೊನೆಯಾಗಿರುವುದು.

    ಏನಿದು ಪ್ರಕರಣ?
    ಅ.30ರ ಭಾನುವಾರ ಸಂಜೆ ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು ರಾತ್ರಿ ಊರಿಗೆ ಮರಳಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ದೆಹಲಿಯ ಸ್ನೇಹಿತರ ಜೊತೆ ಕೊನೆಯದಾಗಿ ಮಾತಾಡಿದ್ದಾನೆ‌. ರಾತ್ರಿ 11:30 ಕ್ಕೆ ಹೊನ್ನಾಳಿ ಪಟ್ಟಣದಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅಲ್ಲಿಂದ ಸಿಗ್ನಲ್ ಪತ್ತೆಯಾಗಿಲ್ಲ. ಶಿವಮೊಗ್ಗದಿಂದ ನ್ಯಾಮತಿ ತಾಲ್ಲೂಕಿನ ಸುರಹೊನ್ನೆಗೆ ಬಂದ  ದೃಶ್ಯ ಸಿಸಿ ಕ್ಯಾಮೆರಾದಲ್ಲಿ  ಲಭ್ಯವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಮಗನನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುತ್ತೇವೆ: ರೇಣುಕಾಚಾರ್ಯ

    ನನ್ನ ಮಗನನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುತ್ತೇವೆ: ರೇಣುಕಾಚಾರ್ಯ

    – ಮಗನಿಗಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧ

    ದಾವಣಗೆರೆ: ನನ್ನ ಮಗನನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುತ್ತೇವೆ. ಕಿಡ್ನಾಪ್ ಮಾಡಿದವರು ನನ್ನ ಮಗನನ್ನು ಬಿಟ್ಟುಬಿಡಲಿ ನಾನು ದೂರು ನೀಡುವುದಿಲ್ಲ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ (M.P Renukacharya) ಹೇಳಿದ್ದಾರೆ.

    ಹೊನ್ನಾಳಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಮಗ ಚಂದ್ರು ಕಾಣೆಯಾಗಿ 5 ದಿನ ಆಯ್ತು. ಭಾನುವಾರ ಬೆಳಗ್ಗೆ ಎಲ್ಲಾ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಕೂಡ ಆತನಿಗೆ ಇಲ್ಲ. ದೊಡ್ಡಪ್ಪನ ಪರವಾಗಿ, ಕ್ಷೇತ್ರದ ಪರವಾಗಿ ಓಡಾಟ ನಡೆಸಿದ್ದ ಎಂದು ಕಣ್ಣೀರಿಟ್ಟರು.

    ಶಿವಮೊಗ್ಗ (Shivamogga) ಕ್ಕೆ ನಮ್ಮ ಗಾಡಿಯಲ್ಲಿಯೇ ನನ್ನ ಮಗ ಹೋಗಿದ್ದ. ಶಿವಮೊಗ್ಗದಿಂದ ಗೌರಿ ಗದ್ದೆಗೆ ನಮ್ಮ ಗಾಡಿ ಪಾಸ್ ಆಗಿಲ್ಲ. ಗುರೂಜಿ ಹತ್ತಿರ ಹೋದಾಗ ಆಶೀರ್ವಾದ ಮಾಡಿದ್ದಾರೆ. ಗ್ರೇ ಕಲರ್ ಗಾಡಿಯಲ್ಲಿ ಆಶ್ರಮಕ್ಕೆ ಹೋಗಿದ್ದು. ನಮ್ಮ ಗಾಡಿ ಶಿವಮೊಗ್ಗದಿಂದ ಔಟ್ ಗೋಯಿಂಗ್ ಇಲ್ಲ, ಇನ್ ಕಮಿಂಗ್ ಇಲ್ಲ. ಆದರೆ ನಮ್ಮ ಗಾಡಿ ಎಲ್ಲಿಗೆ ಹೋಯ್ತು ಎನ್ನುವುದು ತಿಳಿಯುತ್ತಿಲ್ಲ. ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದರು.

    ಗೃಹ ಸಚಿವರು ಹಾಗೂ ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಲಾಗಿದೆ. ಸೂರ್ಯಚಂದ್ರರೂ ಎಷ್ಟು ಸತ್ಯವೋ ಅಷ್ಟೇ ಸತ್ಯ ನನ್ನ ಮಗ ಕಿಡ್ನಾಪ್ (Kidnap) ಆಗಿದ್ದಾರೆ. ಎಲ್ಲರ ಆಶೀರ್ವಾದದಿಂದ ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥಿಸುತ್ತೇನೆ. ನನ್ನ ತಂದೆ-ತಾಯಿ ಹಾಗೂ ಕ್ಷೇತ್ರದ ಜನರ ಆಶೀರ್ವಾದದಿಂದ ನಾನು ಕ್ಷೇತ್ರದ ಕೆಲಸ ಮಾಡುತ್ತಿದ್ದೇನೆ ಎಂದರು. ಇದನ್ನೂ ಓದಿ: ನನ್ನ ತಮ್ಮನ ಮಗ ಕಿಡ್ನ್ಯಾಪ್ ಆಗಿದ್ದಾನೆ: ರೇಣುಕಾಚಾರ್ಯ

    ಭಾರವಾದ ಮನಸ್ಸಿನಿಂದ ಕ್ಷೇತ್ರದಲ್ಲಿ ಕೆಲಸ ಮಾಡಿದೆ. ನನಗೆ ಬೆದರಿಕೆ ಕರೆಗಳು ಬಂದರೂ ಜಗ್ಗಲಿಲ್ಲ. ನಾನು ಅನುಕಂಪಕ್ಕಾಗಿ ಕಣ್ಣೀರು ಹಾಕುತ್ತಿಲ್ಲ. ನಮ್ಮ ಮನೆ ಮಾಣಿಕ್ಯ ಆಗಿದ್ದ. ನನ್ನ ಬಾಯಲ್ಲಿ ಕೆಟ್ಟ ಮಾತುಗಳು ಬರುತ್ತವೆ, ಆದರೆ ಅವನು ಯಾರಿಗೂ ಕೆಟ್ಟ ಮಾತು ಆಡುತ್ತಿರಲಿಲ್ಲ. ಕಿಡ್ನಾಪ್ ಮಾಡಿದವರು ಏನಾದ್ರು ಬೇಡಿಕೆ ಇದ್ದರೆ ಹೇಳಲಿ ಎಂದು ಹೇಳಿದರು. ಇದನ್ನೂ ಓದಿ: ರೇಣುಕಾಚಾರ್ಯ ಸೋದರನ ಪುತ್ರ ನಾಪತ್ತೆ ಪ್ರಕರಣ- ಕಾರಿನಲ್ಲಿ ಹೋಗ್ತಿರೋ ಸಿಸಿಟಿವಿ ದೃಶ್ಯ ಲಭ್ಯ

    ಪೊಲೀಸ್ ಮೂಲಗಳ ಪ್ರಕಾರ ಗಾಡಿ ಮನೆಗೆ ಬಂದಿದೆ ಎನ್ನುತ್ತಾರೆ. ಆದರೆ ಸಿಸಿ ಕ್ಯಾಮೆರಾದಲ್ಲಿ ನೋಡಿದಾಗ ನನ್ನ ಮಗನ ಕಾರಿನ ಹಿಂದೆ ಸ್ವಿಫ್ಟ್ ಡಿಸೈರ್ ಕಾರು ಬರುತ್ತಿದೆ. ಯಾರು ಅಪಹರಿಸಿದ್ದಾರೋ ಅವರ ಡಿಮ್ಯಾಂಡ್ ನಾನು ಪೂರೈಸುತ್ತೇನೆ. ನನ್ನ ಮಗನಿಗಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧನಾಗಿದ್ದೇನೆ. ನಾನು ಎಂದೂ ಇಟ್ಟ ಹೆಜ್ಜೆ ಹಿಂದಕ್ಕೆ ಇಟ್ಟಿರಲಿಲ್ಲ. ಸೋತ ನಂತರ ಒಂದು ದಿನ ಕಣ್ಣೀರಿಟ್ಟಿದ್ದೇ ಅಷ್ಟೇ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ- ಕುಟುಂಬಸ್ಥರಲ್ಲಿ ಆತಂಕ

    ಎಲ್ಲಾ ಸಿಸಿ ಕ್ಯಾಮರಾ (CC Camera) ಗಳನ್ನು ಪರಿಶೀಲನೆ ಮಾಡಿದ್ದಾರೆ. ಶಿವಮೊಗ್ಗ ನಗರದಲ್ಲಿ ನಮ್ಮ ಮಗನ ಕಾರು ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ. ಕೇವಲ ಡೈವರ್ಟ್ ಮಾಡಲು ಈ ರೀತಿಯಾಗಿ ಕಾರು ಕಳಿಸಿದ್ದಾರೆ. ವಿನಯ್ ಗುರೂಜಿ (Vinay Guruji) ಕರೆ ಮಾಡಿ ಗ್ರೇ ಕಲರ್ ಗಾಡಿಯಲ್ಲಿ ಬಂದಿದ್ದರು ಎಂದು ಹೇಳಿದ್ದಾರೆ. ತನಿಖೆ ವಿಳಂಬದ ಬಗ್ಗೆ ನಾನು ಏನು ಕೂಡ ಮಾತನಾಡುವುದಿಲ್ಲ. ನಾನು ಕೂಡ ಪಾರ್ಟ್ ಆಫ್ ಗೌವರ್ನಮೆಂಟ್. ಎಸ್ ಪಿ ಯವರು ಕೂಡ ಉತ್ತಮ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ನಾನು ಅವರ ಮೇಲೆ ಆರೋಪ ಮಾಡುವುದು ಈ ಸಮಯದಲ್ಲಿ ಸರಿಯಲ್ಲ. ಅದಷ್ಟು ಬೇಗ ತನಿಖೆ ಮುಗಿಯುತ್ತದೆ ಎನ್ನುವ ನಂಬಿಕೆ ಇದೆ. ಕ್ಷೇತ್ರದಲ್ಲಿ ಇದ್ದ ಕಾರ್ಯಕ್ರಮಗಳನ್ನು ಮುಂದೂಡಿದ್ದೇನೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ನನ್ನ ತಮ್ಮನ ಮಗ ಕಿಡ್ನ್ಯಾಪ್ ಆಗಿದ್ದಾನೆ: ರೇಣುಕಾಚಾರ್ಯ

    ನನ್ನ ತಮ್ಮನ ಮಗ ಕಿಡ್ನ್ಯಾಪ್ ಆಗಿದ್ದಾನೆ: ರೇಣುಕಾಚಾರ್ಯ

    ದಾವಣಗೆರೆ: ನನ್ನ ತಮ್ಮನ ಮಗ ಕಿಡ್ನ್ಯಾಪ್ ಆಗಿದ್ದಾನೆ. ಯಾರೋ ಪ್ಲ್ಯಾನ್ ಮಾಡಿ ಈ ಕೆಲಸ ಮಾಡಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಆರೋಪಿಸಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೆಲ ದಿನಗಳಿಂದ ನನ್ನ ತಮ್ಮನ ಮಗ ಚಂದ್ರಶೇಖರ್‌ನನ್ನು ಹಿಂಬಾಲಿಸುತ್ತಿದ್ದರು. ಅವರೇ ಕಿಡ್ನ್ಯಾಪ್ ಮಾಡಿದ್ದಾರೆ. ಆದರೆ ಯಾವ ದುರುದ್ದೇಶದಿಂದ ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಅವರು ಉದ್ದೇಶ ಪೂರ್ವಕವಾಗಿಯೇ ಈ ರೀತಿ ಕೆಲಸ ಮಾಡಿದ್ದಾರೆ ಎಂದು ಸ್ಫೋಟಕ ಮಾಹಿತಿ ನೀಡಿದರು.

    ಕ್ಷೇತ್ರದ ಜನರು ದೇವರನ್ನು ಕೇಳಿಸುವುದು, ದೇವರಿಗೆ ಪೂಜೆ ಮಾಡುವುದನ್ನೆಲ್ಲ ಮಾಡುತ್ತಿದ್ದಾರೆ. ಆದರೂ ಇಷ್ಟು ದಿನವಾದರೂ ಚಂದ್ರಶೇಖರ್ ಸುಳಿವು ಸಿಗದೇ ಇರುವುದು ಒಂದು ಕಡೆ ಅನುಮಾನ ಬರುತ್ತಿದೆ. ಆದರೆ ಪೊಲೀಸರ ತನಿಖೆ ಬಗ್ಗೆ ನಾನು ಆರೋಪ ಮಾಡುತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಭಾರತಮಾತೆ ವಿಧವೆಯಲ್ಲ – ಹಣೆಗೆ ಬೊಟ್ಟು ಇಡದ ಪತ್ರಕರ್ತೆಗೆ ಪ್ರತಿಭಟನಾಕಾರನಿಂದ ತರಾಟೆ

    ಶಾಸಕ ಎಂ.ಪಿ ರೇಣುಕಾಚಾರ್ಯ (M.P Renukacharya) ಸಹೋದರನ ಪುತ್ರ ಕಳೆದ 4 ದಿನಗಳಿಂದ ನಾಪತ್ತೆಯಾಗಿರುವುದು ಈಗಾಗಲೇ ಭಾರೀ ಅನುಮಾನ ಹುಟ್ಟಿಸಿದೆ. ಚಂದ್ರಶೇಖರ್ (Chandrashekhar) ಕಾರು ಭಾನುವಾರ ಶಿವಮೊಗ್ಗ (Shivamogga) ಮೂಲಕ ಹೊನ್ನಾಳಿ ಕಡೆ ಬಂದಿತ್ತು. ಆದರೆ ಕಾರು ಹೊನ್ನಾಳಿ ತಲುಪಿಲ್ಲ ಅಂತ ಮೂಲಗಳು ತಿಳಿಸಿವೆ. ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರೇಣುಕಾಚಾರ್ಯ ಸೋದರನ ಪುತ್ರ ನಾಪತ್ತೆ ಪ್ರಕರಣ- ಕಾರಿನಲ್ಲಿ ಹೋಗ್ತಿರೋ ಸಿಸಿಟಿವಿ ದೃಶ್ಯ ಲಭ್ಯ

    Live Tv
    [brid partner=56869869 player=32851 video=960834 autoplay=true]

  • ರೇಣುಕಾಚಾರ್ಯ ಸೋದರನ ಪುತ್ರ ನಾಪತ್ತೆ ಪ್ರಕರಣ- ಕಾರಿನಲ್ಲಿ ಹೋಗ್ತಿರೋ ಸಿಸಿಟಿವಿ ದೃಶ್ಯ ಲಭ್ಯ

    ರೇಣುಕಾಚಾರ್ಯ ಸೋದರನ ಪುತ್ರ ನಾಪತ್ತೆ ಪ್ರಕರಣ- ಕಾರಿನಲ್ಲಿ ಹೋಗ್ತಿರೋ ಸಿಸಿಟಿವಿ ದೃಶ್ಯ ಲಭ್ಯ

    ದಾವಣಗೆರೆ: ಶಾಸಕ ಎಂ.ಪಿ ರೇಣುಕಾಚಾರ್ಯ (M.P Renukacharya) ಸಹೋದರನ ಪುತ್ರ ಕಳೆದ 3 ದಿನಗಳಿಂದ ನಾಪತ್ತೆಯಾಗಿರುವುದು ಭಾರೀ ಅನುಮಾನ ಹುಟ್ಟಿಸಿದೆ.

    ಚಂದ್ರಶೇಖರ್ (Chandrashekhar) ಕಾರು ಭಾನುವಾರ ಶಿವಮೊಗ್ಗ (Shivamogga) ಮೂಲಕ ಹೊನ್ನಾಳಿ ಕಡೆ ಬಂದಿತ್ತು. ಆದರೆ ಕಾರು ಹೊನ್ನಾಳಿ ತಲುಪಿಲ್ಲ ಅಂತ ಮೂಲಗಳು ತಿಳಿಸಿವೆ. ಶಿವಮೊಗ್ಗ-ನ್ಯಾಮತಿ ಮಧ್ಯೆ ಕಾರು ಹೋಗೋ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಶಿವಮೊಗ್ಗದಿಂದ ಬಂದ ಕಾರು ಸುರಹೊನ್ನೆ ಬಳಿ ರಾತ್ರಿ ಪಾಸ್ ಆಗಿದೆ. ಆದರೆ ಸುರಹೊನ್ನೆಯಿಂದ ಹೊನ್ನಾಳಿಗೆ ಬಂದ ಬಗ್ಗೆ ಸುಳಿವಿಲ್ಲ. ಸುರಹೊನ್ನೆಯಿಂದ ಹೊನ್ನಾಳಿಗೆ ಬಂದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದನ್ನೂ ಓದಿ: ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ- ಕುಟುಂಬಸ್ಥರಲ್ಲಿ ಆತಂಕ

    ಭಾನುವಾರ ಇಡೀ ದಿನ ಹೊನ್ನಾಳಿಯ ಹಲವು ಹಳ್ಳಿಗಳಲ್ಲಿ ಸಂಚಾರ ಮಾಡಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಸಂಜೆ 6 ಗಂಟೆಗೆ ಸ್ನೇಹಿತರನ್ನು ಭೇಟಿಯಾಗಿದ್ದಾರೆ. ಸಂಜೆ 6-30ಕ್ಕೆ ಶಿವಮೊಗ್ಗದಿಂದ ಸ್ನೇಹಿತ ಕಿರಣ್ ಜೊತೆ ಗೌರಿಗದ್ದೆಗೆ ಭೇಟಿ ನೀಡಿದ್ದಾರೆ.

    ರಾತ್ರಿ 10 ಗಂಟೆವರೆಗೂ ವಿನಯ್ ಗುರೂಜಿ (Vinay Guruji) ಆಶ್ರಮದಲ್ಲಿದ್ದ ಚಂದ್ರಶೇಖರ್, 11 ಗಂಟೆಗೆ ಶಿವಮೊಗ್ಗಕ್ಕೆ ಸ್ನೇಹಿತ ಕಿರಣ್ ಜೊತೆ ವಾಪಸ್ಸಾಗಿದ್ದಾರೆ. ರಾತ್ರಿ 11-56ಕ್ಕೆ ಸ್ನೇಹಿತ ಕಿರಣ್‍ನನ್ನು ಶಿವಮೊಗ್ಗದ ಮನೆಗೆ ಬಿಟ್ಟು ಹೊನ್ನಾಳಿಗೆ ಪ್ರಯಾಣ ಮಾಡಿದ್ದಾರೆ. ಕೆಎ-17 ಎಂಎ 2534 ನಂಬರ್‍ನ ಹೊಂಡಾಯ್ ಕ್ರೇಟಾ ಕಾರ್ ನಲ್ಲಿ ಹೊನ್ನಾಳಿಗೆ ವಾಪಸ್ ಆಗಿದ್ದಾರೆ. ಸೋಮವಾರ ಬೆಳಗ್ಗೆ 6-48ಕ್ಕೆ ಹೊನ್ನಾಳಿಯಲ್ಲಿ ಚಂದ್ರಶೇಖರ್ ಮೊಬೈಲ್ ಲೊಕೇಷನ್ ತೋರಿಸುತ್ತದೆ. ಅಲ್ಲಿಂದ ಮತ್ತೆ ಎಲ್ಲಿಗೆ ಹೋಗಿದ್ದಾರೆ ಎಂಬುದು ಪತ್ತೆಯಾಗಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಗೌರಿಗದ್ದೆಗೆ ಒಬ್ಬನೇ ಹೋಗಿದ್ದ ಚಂದ್ರಶೇಖರ್ – ತಮ್ಮನ ಮಗನನ್ನು ನೆನದು ರೇಣುಕಾಚಾರ್ಯ ಕಣ್ಣೀರು

    ಗೌರಿಗದ್ದೆಗೆ ಒಬ್ಬನೇ ಹೋಗಿದ್ದ ಚಂದ್ರಶೇಖರ್ – ತಮ್ಮನ ಮಗನನ್ನು ನೆನದು ರೇಣುಕಾಚಾರ್ಯ ಕಣ್ಣೀರು

    ದಾವಣಗೆರೆ: ಶಿವಮೊಗ್ಗದ (Shivamogga) ಗೌರಿಗದ್ದೆಗೆ ಚಂದ್ರಶೇಖರ್ (Chandrasekhar) ಹೋಗಿದ್ದನು. ಅಂದು ರಾತ್ರಿಯಿಂದಲೇ ಅವನ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಹೊನ್ನಾಳಿ (Honnali) ಕ್ಷೇತ್ರದ ಬಿಜೆಪಿ ಶಾಸಕ ಎಂ. ರೇಣುಕಾಚಾರ್ಯ (MP Renukacharya) ತಮ್ಮ ಸಹೋದರನ ಮಗ ನಾಪತ್ತೆಯಾಗಿರುವುದನ್ನು ನೆನೆದು ಕಣ್ಣೀರು ಹಾಕಿದ್ದಾರೆ.

    ಈ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಅವರು, ಚಂದ್ರಶೇಖರ್ ಎಲ್ಲಿ ಹೋಗಿದ್ದಾನೆ, ಎಲ್ಲಿ ಇದ್ದಾನೆ ಎನ್ನುವುದು ಕೂಡ ತಿಳಿಯುತ್ತಿಲ್ಲ. ಯಾವಾಗಲೂ ಸ್ನೇಹಿತರ ಜೊತೆ ಇರುತ್ತಿದ್ದ, ಆದರೆ ಕಳೆದ ಭಾನುವಾರ ಒಬ್ಬನೇ ಗೌರಿಗದ್ದೆಗೆ (Gourigadde) ಹೋಗಿದ್ದ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ- ಕುಟುಂಬಸ್ಥರಲ್ಲಿ ಆತಂಕ

    ಬೆಳಗ್ಗೆಯಿಂದಲೂ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಎಲ್ಲರಿಗೂ ಕರೆ ಮಾಡಿ ವಿಚಾರಿಸುತ್ತಿದ್ದೇವೆ. ಯಾವುದೇ ಮಾಹಿತಿಯಾಗಲಿ, ಕಾರು ಕೂಡ ಸಿಗುತ್ತಿಲ್ಲ. ಮನಸ್ಸು ಎಷ್ಟೇ ಭಾರವಾಗಿದ್ದರೂ ಎರಡು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಂದಿದ್ದೇನೆ. ಎಲ್ಲರೂ ಆತ್ಮ ವಿಶ್ವಾಸ ತುಂಬುತ್ತಿದ್ದಾರೆ. ಚುನಾವಣೆ ಸೋತಾಗಲೂ ನಾನು ಇಷ್ಟು ಯೋಚನೆ ಮಾಡಿರಲಿಲ್ಲ. ಚಂದ್ರಶೇಖರ್ ಬಹಳ ಸೌಮ್ಯ ಸ್ವಭಾವದವನು. ಒಂದು ಕೆಟ್ಟ ಪದ ಕೂಡ ಮಾತನಾಡುತ್ತಿರಲಿಲ್ಲ. ಎಲ್ಲರೊಂದಿಗೂ ಅಷ್ಟು ಚೆನ್ನಾಗಿ ಬೆರೆಯುತ್ತಿದ್ದ. ಎಲ್ಲಾ ಕಾರ್ಯಕ್ರಮಗಳಲ್ಲಿಯೂ ನನ್ನೊಂದಿಗೆ ಇರುತ್ತಿದ್ದ. ಚಂದ್ರು ವಾಪಸ್ ಬರುತ್ತಾನೆ ಎಂದು ಭಗವಂತನನ್ನು ನಂಬಿದ್ದೇನೆ. ಅವನು ಬಂದ ತಕ್ಷಣ ಮುದ್ದಾಡಬೇಕು ಎಂಬ ಆಸೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

     

    ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಅವರು ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದಾರೆ. ಇತ್ತೀಚಿಗೆ ರೇಣುಕಾಚಾರ್ಯ ಜೊತೆ ಸಕ್ರಿಯವಾಗಿ ಓಡಾಡಿಕೊಂಡಿದ್ದ 27 ವರ್ಷದ ಚಂದ್ರಶೇಖರ್ ಭಾನುವಾರ ಗೌರಿಗದ್ದೆಯಿಂದ ಹೊನ್ನಾಳಿಗೆ ವಾಪಸ್ ಆಗಿದ್ದರು. ಅದೇ ದಿನ ರಾತ್ರಿ 11:30ರ ಸುಮಾರಿಗೆ ಹೊನ್ನಾಳಿಯ ಸಂತೆ ಮೈದಾನದ ಬಳಿ ಚಂದ್ರಶೇಖರ್ ಫೋನ್ ಸ್ವಿಚ್ ಆಫ್ ಆಗಿದೆ.

    ಎಲ್ಲಿ ಹುಡುಕಿದರೂ ಕಾಣುತ್ತಿಲ್ಲ. ಅವರ ಕಾರು ಕೂಡ ಎಲ್ಲಿಯೂ ಪತ್ತೆ ಆಗಿಲ್ಲ. ಇದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ರೇಣುಕಾಚಾರ್ಯ ಅವರು ಚಂದ್ರಶೇಖರ ಎಲ್ಲಿದ್ದರೂ ಬಾರಪ್ಪ ಎಂದು ಗೋಳಾಡುತ್ತಿದ್ದಾರೆ. ಹೊನ್ನಾಳಿ ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ- ಕುಟುಂಬಸ್ಥರಲ್ಲಿ ಆತಂಕ

    ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ- ಕುಟುಂಬಸ್ಥರಲ್ಲಿ ಆತಂಕ

    ದಾವಣಗೆರೆ: ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ. ರೇಣುಕಾಚಾರ್ಯ (MP Renukacharya) ರ ಸಹೋದರನ ಮಗ ನಾಪತ್ತೆಯಾಗಿದ್ದು, ಭಾರೀ ಅನುಮಾನ ಹುಟ್ಟಿದೆ.

    ರೇಣುಕಾಚಾರ್ಯರ ಸಹೋದರನ ಮಗ ಚಂದ್ರು ಅಲಿಯಾಸ್ ಚಂದ್ರಶೇಖರ್ (Chandrashekhar) ನಾಪತ್ತೆಯಾದವರು. ಇದರಿಂದ ಇಡೀ ಕುಟುಂಬಕ್ಕೆ ಆಘಾತವಾಗಿದ್ದು, ಅಣ್ಣನ ಮಗನ ಹುಡುಕಾಟದಲ್ಲಿ ಶಾಸಕ ರೇಣುಕಾಚಾರ್ಯ ಇದ್ದಾರೆ. ಕಳೆದ ಭಾನುವಾರ ಶಿವಮೊಗ್ಗದ ಗೌರಿಗದ್ದೆಗೆ ತನ್ನ ಹೊಂಡಾಯ್ ಕ್ರೇಟ ಗಾಡಿಯಲ್ಲಿ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು, ಶಿವಮೊಗ್ಗ (Shivamogga) ದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಸ್ವಲ್ಪ ಕಾಲ ಅವರ ಜೊತೆ ಕಾಲ ಕಳೆದು ಹೊನ್ನಾಳಿಗೆ ಹಿಂದಿರುಗಿದ್ದರು. ಆದರೆ ಇದ್ದಕ್ಕಿದಂತೆ ಭಾನುವಾರ ನಾಪತ್ತೆಯಾದವರು ಇನ್ನೂ ಪತ್ತೆಯಾಗಿಲ್ಲವಂತೆ.

    ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿಯಲ್ಲಿ ನಿನ್ನೆ ಫೋನ್ ಸ್ವಿಚ್ಛ್ ಆಫ್ ಆಗಿದ್ದು, ಕುಟುಂಬಸ್ಥರಲ್ಲಿ ಭಯವನ್ನುಂಟು ಮಾಡಿದೆ. ಫೋನ್ ಸ್ವಿಚ್ಛ್ ಆಫ್ ಆದ ಬಳಿಕ ಅಂದಿನಿಂದ ನಾಪತ್ತೆಯಾಗಿದ್ದು ಇದುವರೆಗೂ ಸಿಕ್ಕಿಲ್ಲವಂತೆ. ಹೊನ್ನಾಳಿ ಪೊಲೀಸರು ಹಾಗೂ ಚಂದ್ರು ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸಿದ್ದು, ರೇಣುಕಾಚಾರ್ಯ ಅವರ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಗೆ 5 ವರ್ಷ ಜೈಲು

    ರೇಣುಕಾಚಾರ್ಯ ಸಹೋದರ ಎಂ.ಪಿ ರಮೇಶ್ (MP Ramesh) ಆತಂಕದಲ್ಲಿದ್ದಾರೆ. ಚಂದ್ರಶೇಖರ್ ತಾಯಿ ಉಮಾ ಜಿಲ್ಲಾ ಪಂಚಾಯ್ತಿಯ ಮಾಜಿ ಅಧ್ಯಕ್ಷೆಯಾಗಿದ್ದು, ತಂದೆ ರಮೇಶ್ ಕ್ಲಾಸ್ ಒನ್ ಕಂಟ್ರಾಕ್ಟರ್ ಆಗಿದ್ದರು. ಯಾವಾಗಲೂ ಕೂಡ ಎಂಪಿ ರೇಣುಕಾಚಾರ್ಯ ಜೊತೆ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ಕಳೆದ ಎರಡು ದಿನಗಳಿಂದ ಕಾಣೆಯಾದ ಚಂದ್ರಶೇಖರ್ ರೇಣುಕಾಚಾರ್ಯ ಜೊತೆ ಸಕ್ರಿಯವಾಗಿ ಹೊನ್ನಾಳಿ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದರು. ದೊಡ್ಡಪ್ಪನಿಗೆ ಬೆನ್ನೆಲುಬಾಗಿದ್ದ ಚಂದ್ರಶೇಖರ್‍ಗಾಗಿ ಹುಡುಕಾಟ ನಡೆಸಲಾಗಿದೆ.

    ಒಟ್ಟಿನಲ್ಲಿ ಯಾವಾಗಲೂ ಎಲ್ಲಿ ಹೋದರು ಕೂಡ ಸ್ನೇಹಿತರೊಂದಿಗೆ ಹೋಗುತ್ತಿದ್ದ ಚಂದ್ರು, ಈ ಬಾರಿ ಒಬ್ಬನೇ ಹೋಗಿರುವುದು ಕೂಡ ಮತ್ತಷ್ಟು ಆತಂಕ ಮನೆ ಮಾಡಿದೆ. ಚಿಂತೆಗೀಡಾದ ಚಂದ್ರು ಪೋಷಕರು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]