Tag: ಚಂದ್ರಶೇಖರ್ ಗುರೂಜಿ

  • ಚಂದ್ರಶೇಖರ್ ಗುರೂಜಿ ಹತ್ಯೆಗೆ ಕಂಬನಿ ಮಿಡಿದ ನಟ ಜಗ್ಗೇಶ್

    ಚಂದ್ರಶೇಖರ್ ಗುರೂಜಿ ಹತ್ಯೆಗೆ ಕಂಬನಿ ಮಿಡಿದ ನಟ ಜಗ್ಗೇಶ್

    ರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಚಂದ್ರಶೇಖರ್ ಗುರೂಜಿ ಹತ್ಯೆಯನ್ನು ಖಂಡಿಸಿ ನಟ ಜಗ್ಗೇಶ್ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    JAGGESH

    ಚಂದ್ರಶೇಖರ್ ಗುರೂಜಿ ಮತ್ತು ನಟ ಜಗ್ಗೇಶ್ ಸಾಕಷ್ಟು ವರ್ಷಗಳಿಂದ ಪರಿಚಿತರು ಜಗ್ಗೇಶ್ ಅವರ ಏಳಿಗೆಯನ್ನ ಸದಾ ಪ್ರೋತ್ಸಾಹಿಸುತ್ತಿದ್ದರು. ಈಗ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆಗೆ ನಟ ಕಂಬನಿ ಮಿಡಿದಿದ್ದಾರೆ. ಇಂದಿನ ಕಾಲದಲ್ಲಿ ಯಾರನ್ನು ನಂಬಲು ಸಾಧ್ಯವಿಲ್ಲ ಅಂತಾ ಗುರೂಜಿ ಸಾವಿಗೆ ಟ್ವೀಟ್ ಮೂಲಕ ಕಂಬಿನಿ ಮಿಡಿದ್ದಾರೆ. ಇದನ್ನೂ ಓದಿ: ಆರ್.ಆರ್.ಆರ್ ಸಿನಿಮಾ ಸಲಿಂಗ ಪ್ರೇಮಕಥೆ ಎಂದ ಆಸ್ಕರ್ ಪ್ರಶಸ್ತಿ ವಿಜೇತ ರೆಸೂಲ್

    ನನ್ನ ಆತ್ಮೀಯ ಸ್ನೇಹಿತರು, ನನ್ನ ಅವರ ಒಡನಾಟ ಆಧ್ಯಾತ್ಮಿಕ ಹಾಗು ವಾಸ್ತು ಸಂಬಂಧಿಸಿದ್ದು, ಸದಾ ನನ್ನ ಒಳಿತು ಬಯಸುತ್ತಿದ್ದ ಆತ್ಮವಾಗಿತ್ತು. ನಾವಿಬ್ಬರು ಮಾತಿಗೆ ಕೂತರೆ ಘಂಟೆಗಟ್ಟಲೆ ಮಾತನಾಡುತ್ತಿದ್ದೆವು, ನನ್ನ ರಾಜ್ಯಸಭೆ ಸ್ಥಾನಕ್ಕೆ ತಮಗೆ ಸಿಕ್ಕಂತೆ ಸಂಭ್ರಮಿಸಿದ್ದರು. ಅವರ ಅಮಾನುಷವಾಗಿ ಕೊಲೆಗೈದ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಲಿ. ಇಂದಿನ ಕಾಲದಲ್ಲಿ ಯಾರನ್ನ ನಂಬುವುದು ಕಷ್ಟ ಅಂತಾ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಈಗ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಚಂದ್ರಶೇಖರ್‌ ಗುರೂಜಿ ಹತ್ಯೆ ಪ್ರಕರಣ – ಇಬ್ಬರು ಆರೋಪಿಗಳು ಅರೆಸ್ಟ್‌

    ಚಂದ್ರಶೇಖರ್‌ ಗುರೂಜಿ ಹತ್ಯೆ ಪ್ರಕರಣ – ಇಬ್ಬರು ಆರೋಪಿಗಳು ಅರೆಸ್ಟ್‌

    ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಘಟನೆ ನಡೆದ 4 ಗಂಟೆಗಳಲ್ಲೇ ಆರೋಪಿಗಳ ಹೆಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರು ಮಹಾಂತೇಶ್‌, ಮಂಜುನಾಥ್‌ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ

    ಹತ್ಯೆ ನಂತರ ಕಾರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

    ಹತ್ಯೆ ಹೇಗಾಯ್ತು?
    ಚಂದ್ರಶೇಖರ್‌ ಗುರೂಜಿ ಇಂದು ಹೋಟೆಲಿನಲ್ಲಿ ತಂಗಿದ್ದರು. ಹೋಟೆಲಿನಲ್ಲಿ ತಂಗಿದ್ದ ಇವರನ್ನು ಕರೆ ಮಾಡಿದ ಇಬ್ಬರು ರಿಸೆಪ್ಶನಿಸ್ಟ್‌ ಜಾಗಕ್ಕೆ ಬರಲು ಹೇಳಿದ್ದಾರೆ. ಇದನ್ನೂ ಓದಿ: ಗುರೂಜಿ ಹತ್ಯೆ ಹಿಂದೆ ಬೇನಾಮಿ ಅಪಾರ್ಟ್‌ಮೆಂಟ್‌ ಆಸ್ತಿ ಗಲಾಟೆ? – ಆಪ್ತನ ಪತ್ನಿ ಬಂಧನ

    ಗುರೂಜಿ ಇವರ ಬಳಿ ಬರುತ್ತಿದ್ದಂತೆ ಇಬ್ಬರು ಎದ್ದು ನಿಂತಿದ್ದಾರೆ. ಗುರೂಜಿ ಕುಳಿತ ಬಳಿಕ ಒಬ್ಬ ಆಶೀರ್ವಾದ ಪಡೆಯುವ ನಾಟಕ ಮಾಡಿದ್ದರೆ ಮತ್ತೊಬ್ಬ ನಿಂತಿದ್ದ. ಕೆಲ ಕ್ಷಣದಲ್ಲೇ ಮುಂದುಗಡೆ ನಿಂತಿದ್ದ ಯುವಕ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಮತ್ತೊಬ್ಬ ಚಾಕುವಿನಿಂದ ಇರಿದಿದ್ದಾನೆ. ನಂತರ ಇಬ್ಬರು ಮನ ಬಂದಂತೆ ಇರಿದು ಬರ್ಬರವಾಘಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಒಟ್ಟು 20 ಸೆಕೆಂಡ್‌ನಲ್ಲಿ 60 ಬಾರಿ ಚಾಕುವಿನಿಂದ ಇರಿಯಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಗುರೂಜಿ ಹತ್ಯೆ ತನಿಖೆಗೆ ವಿಶೇಷ ತಂಡ ರಚನೆ – ಪೊಲೀಸ್ ಆಯುಕ್ತ ಲಾಭೂರಾಮ್

    ಗುರೂಜಿ ಹತ್ಯೆ ತನಿಖೆಗೆ ವಿಶೇಷ ತಂಡ ರಚನೆ – ಪೊಲೀಸ್ ಆಯುಕ್ತ ಲಾಭೂರಾಮ್

    ಹುಬ್ಬಳ್ಳಿ: ಚಂದ್ರಶೇಖರ್ ಗುರೂಜಿ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಈಗಾಗಲೇ ಬಲೆ ಬೀಸಲಾಗಿದೆ ಎಂದು ಪೊಲೀಸ್ ಆಯುಕ್ತ ಲಾಭೂರಾಮ್ ಎಂದು ತಿಳಿಸಿದ್ದಾರೆ.

    ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಲಾಭೂರಾಮ್ ಅವರು ಮಾತನಾಡಿದ್ದು, ಕಳೆದ 5 ದಿನಗಳಿಂದ ಖಾಸಗಿ ಹೊಟೇಲ್‍ನಲ್ಲಿಯೇ ಚಂದ್ರಶೇಖರ್ ಗುರೂಜಿ ತಂಗಿದ್ದರು. ಅವರ ಕಾಲಿಗೆ ನಮಸ್ಕಾರ ಮಾಡುವ ನೆಪದಲ್ಲಿ ಮಧ್ಯಾಹ್ನ ಈ ಕೃತ್ಯ ಎಸಗಿದ್ದಾರೆ. ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಹಲವಾರು ಬಾರಿ ಚಾಕುವಿನಿಂದ ಇರಿದಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ಟ್ರೈನಿ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – IAS ಅಧಿಕಾರಿ ವಶ 

    ಗುರೂಜಿ ಗಂಭೀರ ಗಾಯಗೊಂಡಿದ್ದರು. ಅಸ್ಪತ್ರೆಗೆ ದಾಖಲಿಸಲಾಯಿತ್ತು. ಅದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಈ ಕೇಸ್‍ನ್ನು ತುಂಬಾ ಗಂಭೀರವಾಗಿ ಪರಿಗಣಿಸಲಾಗಿದೆ.

    ಆರೋಪಿಗಳ ಪತ್ತೆಗಾಗಿ ಈಗಾಗಲೇ ಪೊಲೀಸ್ ಇಲಾಖೆ ಮುಂದಾಗಿದೆ. ಎಸಿಪಿ ವಿನೋದ್ ಮುಕ್ತೇದಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಈಗಾಗಲೇ ಬಲೆ ಬೀಸಲಾಗಿದೆ. ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂಬುದರ ಕುರಿತು ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಎಸಿಬಿ ದಾಳಿಗೆ ಒಳಗಾಗುವವರು ಶುದ್ಧರಾಗಿದ್ರೆ ಏಕೆ ಹೆದರಬೇಕು: ಬಿ.ಸಿ.ನಾಗೇಶ್ ಟಾಂಗ್

    ಎಸಿಪಿ ರ‍್ಯಾಂಕ್ ಅಧಿಕಾರಿ ನೇತೃತ್ವದಲ್ಲಿ ತನಿಖೆ ಸಹ ಮಾಡಲಾಗುತ್ತಿದೆ. ಪ್ರಕರಣ ಕುರಿತು ಒಟ್ಟು ಐದು ತಂಡಗಳಿಂದ ತನಿಖೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

    Live Tv
    [brid partner=56869869 player=32851 video=960834 autoplay=true]