Tag: ಚಂದ್ರಶೇಖರ್ ಗುರೂಜಿ

  • ಗುರೂಜಿ ಹತ್ಯೆ ಪ್ರಕರಣ – ಹಂತಕರಿಂದ ಬೇನಾಮಿ ಆಸ್ತಿಯ ಮಾರಾಟದಲ್ಲಿ ಕೈ ಮುಖಂಡ ಭಾಗಿ

    ಗುರೂಜಿ ಹತ್ಯೆ ಪ್ರಕರಣ – ಹಂತಕರಿಂದ ಬೇನಾಮಿ ಆಸ್ತಿಯ ಮಾರಾಟದಲ್ಲಿ ಕೈ ಮುಖಂಡ ಭಾಗಿ

    ಹುಬ್ಬಳಿ: ಚಂದ್ರಶೇಖರ್ ಗುರೂಜಿ (Chandrashekhar Guruji) ಹತ್ಯೆಗೆ ಪ್ರಮುಖ ಕಾರಣ ಬೇನಾಮಿ ಆಸ್ತಿ (Benami Property) ಮಾರಟವಾಗಿದ್ದು, ಗುರೂಜಿಗೆ ತಿಳಿಯದಂತೆ ಆರೋಪಿಗಳು ಬೇನಾಮಿ ಜಮೀನು ಮಾರಾಟ ಮಾಡಿರುವುದರಿಂದ ಹುಟ್ಟಿಕೊಂಡ ದ್ವೇಷ ಗುರೂಜಿ ಹತ್ಯೆಯಲ್ಲಿ ಕೊನೆಯಾಗಿದೆ. ಈ ಬೇನಾಮಿ ಆಸ್ತಿ ಮಾರಾಟ ಮಾಡಿಸಲು ಮುಂದಾದವರು ಓರ್ವ ಕಾಂಗ್ರೆಸ್ ಮುಖಂಡ (Congress Leader) ಅಂತ ಈಗ ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೇ ಇದು ಕೇವಲ ಜಮೀನು ಮಾರಾಟ ಅಲ್ಲ, ಗುರೂಜಿ ಕೊಲೆ ಸುಪಾರಿಗೆ ತಳುಕು ಹಾಕಿಕೊಂಡಿದೆ. ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ (Deepak Chinchore) ಇದರ ಪ್ರಮುಖ ರೂವಾರಿ ಎಂಬುದು ತಿಳಿದುಬಂದಿದೆ.

    ದೀಪಕ್ ಚಿಂಚೋರೆ ತನ್ನ ಆಪ್ತ ತಾನಾಜಿ ಶಿರ್ಕೆಗೆ, ಹಂತಕರಿಗೆ ಒಂದಿಷ್ಟು ಹಣ ಅಡ್ವಾನ್ಸ್ ಕೊಟ್ಟು ಗುರೂಜಿ ಬೇನಾಮಿ ಆಸ್ತಿ ಕೊಡಿಸಿದ್ದರು. ರಿಜಿಸ್ಟ್ರೇಷನ್ ಬಳಿಕ ಪೂರ್ತಿ ಹಣ ನೀಡುವ ಮಾತುಕತೆಯಾಗಿತ್ತು. ಇಷ್ಟೊತ್ತಿಗಾಗಲೇ ಈ ವಿಚಾರ ತಿಳಿದು ಗುರೂಜಿ ಮತ್ತು ಕುಟುಂಬಸ್ಥರು ಈ ಬಗ್ಗೆ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದರು. ಇದರಿಂದಾಗಿ ಆಸ್ತಿ ಮಾರಾಟದ ಬಳಿಕ ಬರಬೇಕಿದ್ದ ಪೂರ್ತಿ ಹಣ ಹಂತಕರ ಕೈಗೆ ತಲುಪಿರಲಿಲ್ಲ. ಅಲ್ಲದೆ ಆಸ್ತಿ ಖರೀದಿಸಿದ್ದ ದೀಪಕ್ ಚಿಂಚೋರೆ, ಕೋರ್ಟ್ ಕೇಸ್ ಪರಿಹರಿಸಿ ಕೊಡಿ, ಇಲ್ಲದಿದ್ದರೆ ಹಣ ಮರಳಿ ಕೊಡುವಂತೆ ಒತ್ತಡ ಸಹ ಹಾಕಿದ್ದರು. ಇದರಿಂದಾಗಿ ಆರೋಪಿಗಳು ದೀಪಕ್ ಚಿಂಚೋರೆ ಮೇಲೂ ಸಹ ಅಸಮಾಧಾನಗೊಂಡಿದ್ದರು.

    ಹೀಗಾಗಿ ದೀಪಕ್ ಚಿಂಚೋರೆಗೆ ಟಾಂಗ್ ನೀಡುವ ನಿಟ್ಟಿನಲ್ಲಿ ಚಂದ್ರಶೇಖರ್ ಗುರೂಜಿಯನ್ನು ಹತ್ಯೆಗೈಯುವ ವಿಚಾರವಾಗಿ ವಾಟ್ಸಪ್ ಮೆಸೇಜ್ ಮಾಡಿರುವ ಮಹಾಂತೇಶ್ ಶಿರೂರು ಅದರಲ್ಲಿ ಹತ್ಯೆಯನ್ನು ಮಾಡಿಸಲು ನೀವೇ ಡಿಲ್ ಕೊಟ್ಟಿದ್ದೀರಿ ಅಂತ ಹೇಳಿಕೊಂಡಿದ್ದಾನೆ.

    ಮೇ 10 ರಂದು ರಾತ್ರಿ 11:59ಕ್ಕೆ ಹಂತಕ ಮಹಾಂತೇಶ್ ದೀಪಕ್ ಚಿಂಚೋರೆಗೆ ತನ್ನದೇ ಮೊಬೈಲ್ ಸಂಖ್ಯೆಯಿಂದ ದೀಪಕ್ ಚಿಂಚೋರೆ ನಂಬರ್‌ಗೆ ಈ ರೀತಿಯಲ್ಲಿ ಮೊದಲ ಮೆಸೇಜ್ ಮಾಡಿದ್ದಾನೆ. ನಮಸ್ಕಾರ ಅಣ್ಣಾವರೆ, ನೀವು ಗುರೂಜಿ ಹೊಡೆಯಾಕ ಡೀಲ್ ಕೊಟ್ಟಿದ್ದರಲ್ಲ ಅದರ ಬಗ್ಗೆ ಮಾತನಾಡಬೇಕು ಎಂದು ಬರೆಯಲಾಗಿತ್ತು. ಇದನ್ನೂ ಓದಿ: ಕಾಂಗ್ರೆಸ್‍ನವರು ನಿಷ್ಪಪ್ರಯೋಜಕ, ಅಪ್ರಯೋಜಕ ಅಂತ ನಾವು ಹೇಳೋದಿಲ್ಲ: ಪ್ರಹ್ಲಾದ್ ಜೋಶಿ ಲೇವಡಿ

    ಇದಾದ ಬಳಿಕ ಮಾರನೇ ದಿನ ಮಧ್ಯರಾತ್ರಿ 12 ಗಂಟೆಗೆ 2 ಮೆಸೇಜ್ ಕಳಿಸಿದ್ದ. ಅದರಲ್ಲಿ ಮೊದಲು ಪೋನ್ ರಿಸಿವ್ ಮಾಡ್ರಿ ಅಣ್ಣವರೇ, ನೀವು ಚಂದ್ರಶೇಖರ್ ಗುರೂಜಿ ಬೆನಾಮಿ ಪ್ರಾಪರ್ಟಿ ಹಿಡಿದಿದ್ದರ ಬಗ್ಗೆ ಗುರೂಜಿನ ಹೊಡೆಯೋಕೆ ಹೇಳಿದ್ದರಲ್ಲ ಅದರ ಬಗ್ಗೆ ಮಾತನಾಡಬೇಕಿತ್ತು. ನೀವು ಈ ಪೋನಲ್ಲಿ ಮಾತನಾಡಬೇಡ ಎಂದಿದ್ದಿರಿ. ಯಾವಾಗ, ಎಲ್ಲಿ ಭೇಟಿಯಾಗೋಣ ಹೇಳಿ ಅಣ್ಣಾವರೆ ಅಂತ ಮಹಾಂತೇಶ್ ಮೆಸೇಜ್ ಮಾಡಿದ್ದ.

    ಮಹಾಂತೇಶ್ ಕಳಿಸಿದ ಮೆಸೇಜ್ ನೋಡಿದ ಬಳಿಕ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ, ಬೆಳಗ್ಗಿನ ಜಾವ ಪ್ರತಿಕ್ರಿಯಿಸಿ, ಮೂರ್ಖರಂತೆ ಮಾತನಾಡುವುದನ್ನು ನಿಲ್ಲಿಸಿ, ನಾನು ನನ್ನ ಜೀವನದಲ್ಲಿ ಎಂದಿಗೂ ತಪ್ಪು ಕೆಲಸಗಳನ್ನು ಮಾಡಿಲ್ಲ. ನನ್ನನ್ನು ಕೆಟ್ಟವನಂತೆ ತೋರಿಸುವ ಹುನ್ನಾರ ಮಾಡುತ್ತಿದ್ದು, ಆಧಾರರಹಿತ ಮಾತುಗಳನ್ನಾಡುತ್ತಿದ್ದೀರಿ. ನಾನು ನಿಮ್ಮಿಂದ ಇದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ನನ್ನ ಖ್ಯಾತಿಯನ್ನು ಹಾಳು ಮಾಡುವ ಪ್ರಯತ್ನವನ್ನು ನಿಲ್ಲಿಸಿ. ನಾನು ಮುಗ್ಧ ವ್ಯಕ್ತಿಯಾಗಿದ್ದು, ನಿಮ್ಮ ವರ್ತನೆ ನನ್ನನ್ನು ಅಪರಾಧಿಯಂತೆ ತೋರಿಸುತ್ತಿದೆ. ನಾನು ನನ್ನ ಜೀವನದಲ್ಲಿ ಎಂದೂ ತಪ್ಪು ಮಾಡಿಲ್ಲ ಎಂದು ಇಂಗ್ಲಿಷಿನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಮತ ಸೆಳೆಯಲು JDS ಮೇಲೆ ಚೆಲುವರಾಯಸ್ವಾಮಿ ಸಾಫ್ಟ್ ಕಾರ್ನರ್

    ಅಷ್ಟೇ ಅಲ್ಲದೆ ಮಹಾಂತೇಶ್ ಶಿರೂರು ಮಾಡಿದ ವಾಟ್ಸಪ್ ಮೆಸೇಜ್ ವಿಚಾರವನ್ನು ದೀಪಕ್ ಚಿಂಚೋರೆ ಗುರೂಜಿಯನ್ನು ಭೇಟಿಯಾಗಿ, ಅವರಿಗೂ ತಿಳಿಸಿದ್ದರಂತೆ. ಆದರೆ ಗುರೂಜಿ ಮಾತ್ರ ಹಂತಕರ ಬಗ್ಗೆ ಎಚ್ಚರ ವಹಿಸಲಿಲ್ಲ ಎನ್ನುವುದು ಬೆಳಕಿಗೆ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಚಂದ್ರಶೇಖರ್ ಗುರೂಜಿ ಹತ್ಯೆಗೆ ಟ್ವಿಸ್ಟ್ – ವಾಟ್ಸಾಪ್ ಚಾಟ್ ತೆರೆದಿಡ್ತು ಕೊಲೆ ರಹಸ್ಯ

    ಚಂದ್ರಶೇಖರ್ ಗುರೂಜಿ ಹತ್ಯೆಗೆ ಟ್ವಿಸ್ಟ್ – ವಾಟ್ಸಾಪ್ ಚಾಟ್ ತೆರೆದಿಡ್ತು ಕೊಲೆ ರಹಸ್ಯ

    ಹುಬ್ಬಳ್ಳಿ: (Hubballi) ಸರಳವಾಸ್ತು ಅನ್ನೋ ಸಾಮಾಜ್ಯವನ್ನು ಕಟ್ಟಿ ಭೀಕರವಾಗಿ ಕೊಲೆಯಾದ ಚಂದ್ರಶೇಖರ್ ಗುರೂಜಿ (Chandrashekhar Guruji) ಕೇಸ್‌ಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಒಂದೇ ಕುಟುಂಬದಂತಿದ್ದ ಗುರೂಜಿ ಪರಿವಾರ ಗ್ರೂಪ್‌ಗೆ ಹುಳಿ ಹಿಂಡಿದವರು ಅವರ ಅಣ್ಣನ ಮಕ್ಕಳು ಅನ್ನೋದು ಬಯಲಾಗಿದೆ.

    ಸರಳವಾಸ್ತು ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಕ್ತಿದೆ. ಇದಕ್ಕೆ ಪ್ರಮುಖ ಕಾರಣ ಆಪ್ತರಲ್ಲಿ ಮೂಡಿದ ಮನಸ್ತಾಪ. ಯಾವಾಗ ಅವರ ಅಣ್ಣನ ಮಕ್ಕಳು, ಗುರೂಜಿ ಕಂಪನಿಗೆ ಎಂಟ್ರಿ ಆದ್ರೋ ಅಲ್ಲಿಂದ ಸಮಸ್ಯೆ ಶುರುವಾಗಿದೆ. 2014ರ ನಂತರ ಗುರೂಜಿ ಸರಳವಾಸ್ತು (Saralavastu) ಕಂಪನಿಯಲ್ಲಿ ಮಹತ್ತರ ಬೆಳವಣಿಗೆ ಆಗಿದೆ. ಚಂದ್ರಶೇಖರ ಗುರೂಜಿ, ಸಿಬ್ಬಂದಿ ನಡುವೆ ಅಣ್ಣನ ಮಕ್ಕಳು ವಿಲನ್‌ಗಳಾಗುತ್ತಿದ್ದಾರೆ ಅಂತ ಹತ್ಯೆ ಆರೋಪಿ ಮಂಜುನಾಥ ಸ್ವತಃ ಗುರೂಜಿ ಮುಂದೆ ನೋವು ತೋಡಿಕೊಂಡಿದ್ದರು. ಇದನ್ನೂ ಓದಿ: ಮಂಗಳೂರಿನಲ್ಲಿ ಕೆಲ್ಸ- ಸಿಎಂಗೆ ಧನ್ಯವಾದ ಹೇಳಿದ ಪ್ರವೀಣ್ ನೆಟ್ಟಾರು ಪತ್ನಿ

    ಇನ್ನು 2019 ಜೂನ್ 24ರಂದು ಮಂಜುನಾಥ ಮರೆವಾಡ, ಚಂದ್ರಶೇಖರ್ ಗುರೂಜಿಗೆ ಮಾಡಿದ್ದ ವಾಟ್ಸಾಪ್ ಮೆಸೇಜ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ವಾಟ್ಸ್ ಮೆಸೇಜ್‌ನಲ್ಲಿರುವ ಪ್ರಮುಖ ಅಂಶಗಳು ಹೀಗಿವೆ.

    ಮಂಜುನಾಥ್ ವಾಟ್ಸಾಪ್ ಸಂದೇಶದಲ್ಲಿ ಏನಿದೆ?
    ನೀವು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಗೆ 2ನೇ ತಂದೆಯಾಗಿದ್ದೀರಿ. ನಿಮ್ಮ ಏಳಿಗೆಗಾಗಿ ನಾವು ಕಷ್ಟಪಟ್ಟು ದುಡಿದೆವು. ಆದ್ರೆ ಯಾವಾಗ ನಿಮ್ಮ ಅಣ್ಣನ ಮಕ್ಕಳು ಕಂಪನಿಗೆ ಎಂಟ್ರಿ ಕೊಟ್ರೋ ಆಗ ಎಲ್ಲವೂ ಬದಲಾಯಿತು. ನೀವು ಸಿಬ್ಬಂದಿಯನ್ನು ಮಕ್ಕಳಂತೆ ಕಾಣುತ್ತಿದ್ದೀರಿ. ಆದರೆ ನಿಮ್ಮ ಅಣ್ಣನ ಮಕ್ಕಳು ನಿಮ್ಮನ್ನು ಮತ್ತು ನಮ್ಮನ್ನು ಬೇರೆ ಮಾಡಲು ಶುರು ಪ್ರಯತ್ನಿಸಿದ್ದಾರೆ. ನಿಮ್ಮ ಅಣ್ಣನ ಮಕ್ಕಳು ಯಾವಾಗ ಕಂಪನಿಗೆ ಬಂದರೋ ಆಗ ನಿಮ್ಮ ಅವನತಿ ಆರಂಭವಾಯಿತು. ನೀವು ನಮ್ಮ ಪಾಲಿನ ದೇವರು ಅಂತ ತಿಳಿದುಕೊಂಡಿದ್ದೆವು. ಆದರೆ ನೀವು ನಮ್ಮ ಪಾಲಿನ ಯಮ ಆದಿರಿ. ನಿಮಗೆ ನಾವು ಏನು ಮಾಡಿದ್ವಿ? ನಮ್ಮ ಕಣ್ಣೀರು ನಿಮ್ಮನ್ನ ಕ್ಷಮಿಸೋದಿಲ್ಲ. 400 ಜನ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ರಿ. ಅವರ ಕಣ್ಣೀರು ಸುಮ್ಮನೆ ಬಿಡೋದಿಲ್ಲ. ಆದರೂ ನಿಮಗೆ ನಾವು ಒಳ್ಳೆಯದನ್ನೇ ಬಯಸುತ್ತೇವೆ ಎಂದು ಸಂದೇಶದಲ್ಲಿದೆ. ಇದನ್ನೂ ಓದಿ: ಅಕ್ರಮ ಒತ್ತುವರಿ ತೆರವಿಗೆ ಮುಂದಾದ ತಹಶೀಲ್ದಾರ್‌ಗೆ ವಕೀಲೆಯಿಂದ ಆವಾಜ್‌

    ಇಷ್ಟು ಮಾತ್ರವಲ್ಲ ಇನ್ನೂ ಸಾಕಷ್ಟು ಮೆಸೇಜ್‌ಗಳು ಆರೋಪಿಗಳಿಂದ ಗುರೂಜಿಗೆ ಹೋಗಿವೆ. ಆದರೆ ಚಂದ್ರಶೇಖರ ಗುರೂಜಿ ಮಾತ್ರ ಇವುಗಳಿಗೆ ತಲೆಕೆಡಿಸಿಕೊಂಡಿಲ್ಲ. ಗುರೂಜಿ, ಸಿಬ್ಬಂದಿ ಮೇಲಿಟ್ಟಿದ್ದ ಕಾಳಜಿಯು ಅಣ್ಣನ ಮಕ್ಕಳು ಎಂಟ್ರಿ ಬಳಿಕ ಕಡಿಮೆಯಾಗಿದೆ. ಇದರಿಂದ ಹುಟ್ಟಿಕೊಂಡ ಮನಸ್ತಾಪ ಗುರೂಜಿ ಅಂತ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸರಳವಾಸ್ತು ಗುರೂಜಿ ಹತ್ಯೆ ಕೇಸ್- ಬೇನಾಮಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಲಭ್ಯ

    ಸರಳವಾಸ್ತು ಗುರೂಜಿ ಹತ್ಯೆ ಕೇಸ್- ಬೇನಾಮಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಲಭ್ಯ

    ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ (Chandrashekhar Guruji) ಹತ್ಯೆಯ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಮುಖ್ಯ ತನಿಖಾಧಿಕಾರಿ ಎಸಿಪಿ ವಿನೋದ ಮುಕ್ತೇದಾರ ನೇತೃತ್ವದಲ್ಲಿ ಐದು ತನಿಖಾ ತಂಡ ರಚಿಸಲಾಗಿತ್ತು. ಸದ್ಯ ನ್ಯಾಯಾಲಯಕ್ಕೆ 800ಕ್ಕೂ ಅಧಿಕ ದೋಷಾರೋಪಣೆ ಪುಟಗಳನ್ನು ಅಧಿಕಾರಿಗಳು ಸಲ್ಲಿಸಿದ್ದಾರೆ. ಹಣ, ಬೇನಾಮಿ ಆಸ್ತಿ, ಮತ್ತು ಹಂತಕರಿಗೆ ಗುರೂಜಿಯಿಂದ ಹಂತಕರಿಗೆ ಮಾನಸಿಕ ಕಿರಿಕಿರಿ ಕೊಲೆಗೆ ಮುಖ್ಯ ಕಾರಣ ಎಂಬ ಪ್ರಮುಖ ಅಂಶಗಳು ಜಾರ್ಜ್ ಶೀಟ್‍ (ChargeSheet) ನಲ್ಲಿ ದಾಖಲಾಗಿವೆ.

    ಹುಬ್ಬಳ್ಳಿಯ ಖಾಸಗಿ ಹೋಟೆಲ್‍ನಲ್ಲಿ ನಡೆದ ಪ್ರಖ್ಯಾತ ಸರಳವಾಸ್ತು ಗುರೂಜಿಯ ಹತ್ಯೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಹತ್ಯೆಗೆ ಕಾರಣ ತಿಳಿಯಲು ಮುಖ್ಯ ತನಿಖಾಧಿಕಾರಿ ಎಸಿಪಿ ವಿನೋದ ಮುಕ್ತೇದಾರ ನೇತೃತ್ವದಲ್ಲಿ ಐದು ತನಿಖಾ ತಂಡ ರಚಿಸಲಾಗಿತ್ತು. ಸದ್ಯ ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ 800 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.

    ಚಂದ್ರಶೇಖರ ಗುರೂಜಿ ಹತ್ಯೆಗೆ ಕಾರಣಗಳು: ಹಂತಕನ ಹೆಸರಿನಲ್ಲಿದ್ದ 10 ಕೋಟಿ ಬೇನಾಮಿ ಜಮೀನಿ (Property) ನ ವ್ಯಾಜ್ಯವೇ ಹತ್ಯೆಗೆ ಕಾರಣ ಎಂಬುದಾಗಿ ಉಲ್ಲೇಖಿಸಲಾಗಿದೆ. ವಿಚಾರಣೆ ವೇಳೆ ಬೇನಾಮಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಪತ್ತೆಯಾಗಿದೆ. ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ 10 ಕೋಟಿ ರೂಪಾಯಿ ಮೌಲ್ಯದ 4.5 ಎಕರೆ ಜಮೀನು ಇದೆ. ಇದನ್ನು ಬೇನಾಮಿಯಾಗಿ ಗುರೂಜಿ ಹಂತಕ ಮಹಾಂತೇಶ ಹೆಸರಿಗೆ ಮಾಡಿದ್ದರು. ಈ ಜಮೀನನ್ನು ಮಹಾಂತೇಶ ಗುರೂಜಿಗೆ ತಿಳಿಯದಂತೆ ಮಾರಿದ್ದ. ಈ ವಿಚಾರವಾಗಿ ಗುರೂಜಿ, ಮಹಾಂತೇಶ ಕೋರ್ಟ್ ಮೆಟ್ಟಿಲೇರಿದ್ದರು.

    ರೆವಿನ್ಯೂ ಕೋರ್ಟ್ (Revenue Court) ನಲ್ಲಿ ಕೇಸ್ ಮಹಾಂತೇಶ್ ಪರವಾಗಿತ್ತು. ಈ ತೀರ್ಪು ಪ್ರಶ್ನಿಸಿ ಗುರೂಜಿ ಸಿವಿಲ್ ಕೋರ್ಟ್ (Civil Court) ಗೆ ಹೋಗಿದ್ದರು. ಈ ವಿಚಾರ ಮಹಾಂತೇಶ್ ಮತ್ತು ಗುರೂಜಿ ನಡುವೆ ಕಲಹಕ್ಕೆ ಕಾರಣವಾಗಿತ್ತು. ಅಲ್ಲದೆ ಹಂತಕರು ಸರಳವಾಸ್ತು ಸಂಸ್ಥೆಗೆ ವಿರುದ್ಧವಾಗಿ ಮತ್ತೊಂದು ಸಂಸ್ಥೆ ಕಟ್ಟಿದ್ರು. ತನ್ನ ಪ್ರಾಪರ್ಟಿಯನ್ನು ಮಹಾಂತೇಶ ಕಬಳಿಸಿದ್ದಕ್ಕೆ ಗುರೂಜಿ ಸಿಟ್ಟಾಗಿದ್ದರು. ಕೋಪಗೊಂಡಿದ್ದ ಗುರೂಜಿ ಇವರಿಗೆ ಹಿನ್ನಡೆ ಆಗುವಂತೆ ಮಾಡಿದ್ರು. ಇದಕ್ಕೆ ಹಂತಕರು ಗುರೂಜಿ ಅಪಾರ್ಟ್‍ಮೆಂಟ್‍ನಲ್ಲಿ ರೂಲ್ಸ್ ಬ್ರೇಕ್ ಆಗ್ತಿದೆ ಅಂತ ದೂರು ಕೊಟ್ಟಿದ್ರು.

    ಕಾನೂನುಗಳು ಉಲ್ಲಂಘನೆಯಾಗುತ್ತಿವೆ ಅಂತ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಈ ದೂರನ್ನು ಹಿಂಪಡೆಯುವಂತೆ ಗುರೂಜಿಯೇ ಹಂತಕರಿಗೆ ಒತ್ತಡ, ಮಾನಸಿಕ ಕಿರಿಕಿರಿ ನೀಡಿದ್ದರು ಎಂದು ಚಾರ್ಜ್‍ಶೀಟ್‍ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ಇಷ್ಟೆಲ್ಲ ಆದ್ಮೇಲೆ ಈ ಹಂತಕರು ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿಯವರನ್ನು ಹತ್ಯೆ ಮಾಡಲು ಪೂರ್ವ ತಯಾರಿ ನಡೆಸಿದ್ರು.

    ಹತ್ಯೆಗೆ ಪ್ರೀಪ್ಲಾನ್..!: ಗುರೂಜಿ ಹತ್ಯೆಗೆ ಮೂರು ತಿಂಗಳಿನಿಂದ ಹಂತಕರಿಂದ ಸ್ಕೆಚ್ ಹಾಕಿದ್ದರು. ಸಾರ್ವಜನಿಕವಾಗಿ ಗುರೂಜಿ ಕೊಲ್ಲಲು ಪ್ಲಾನ್ ಮಾಡಿದ್ರು. ಆದರೆ ಅದು ಸಫಲವಾಗಿರಲಿಲ್ಲ. ತಮ್ಮ ಮೊಮ್ಮಗನ ಸಾವಿನಿಂದ ಗುರೂಜಿ ಹುಬ್ಬಳ್ಳಿಗೆ ಬಂದಿದ್ದ ವಿಷಯ ತಿಳಿದ ಆರೋಪಿಗಳು, ಗುರೂಜಿ ಬಂದ ದಿನವೇ ಖಾಸಗಿ ಹೋಟೆಲ್‍ನಲ್ಲಿ ರೂಂ ಪಡೆದು ಹತ್ಯೆಗೆ ಮಾಸ್ಟರ್ ಪ್ಲಾನ್ ಹೂಡಿದ್ದರು. ಇದನ್ನೂ ಓದಿ: ದಸರಾ ಮೆರವಣಿಗೆ ವೇಳೆ ಮದರಸಾಗೆ ನುಗ್ಗಿ ಪೂಜೆ – 9 ಜನರ ವಿರುದ್ಧ ಎಫ್‌ಐಆರ್

    ಹತ್ಯೆ ಹಿಂದಿನ ದಿನ ಗುರೂಜಿಗೆ ಕರೆ ಮಾಡಿ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ನಾಟಕ ಮಾಡಿದರು. ಹಂತಕರ ಮಾತು ನಂಬಿದ್ದ ಗುರೂಜಿ ಭೇಟಿಗೆ ಒಪ್ಪಿ ಬರಲು ತಿಳಿಸಿದ್ದಾರೆ. ಗುರೂಜಿ ಭೇಟಿಗೆ ಹೋಟೆಲ್‍ಗೆ ಹೋಗಿದ್ದ ಹಂತಕರು, ಬೇನಾಮಿ ಆಸ್ತಿ ಪತ್ರ ಮತ್ತು ಹತ್ಯೆಗಾಗಿ ಚಾಕುವನ್ನು ಒಂದೇ ಕವರ್ ನಲ್ಲಿ ತಂದಿದ್ದರು. ಪ್ರೆಸಿಡೆಂಟ್ ಹೋಟೆಲ್‍ಗೆ ತೆಗೆದುಕೊಂಡು ಹೋಗಿದ್ದರು. ಮೊದಲು ದಾಖಲೆ ಪತ್ರ ತೆಗೆಯುವಂತೆ ನಾಟಕವಾಡಿ ಬಳಿಕ ಚಾಕು ತೆಗೆದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದ್ದಾರೆ.

    ಒಟ್ಟಾರೆ ಚಂದ್ರಶೇಖರ್ ಗುರೂಜಿ ಹತ್ಯೆ ನಡೆದು 3 ತಿಂಗಳು ಕಳೆದ ಮೇಲೆ ಚಾರ್ಜ್‍ಶೀಟ್ ದಾಖಲಾಗಿದ್ದು. ಹಂತಕರಿಗೆ ಯಾವ ಶಿಕ್ಷೆ ಆಗಲಿದೆ ಎಂಬುದು ಮುಂದೆ ಗೊತ್ತಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • 5 ಎಕ್ರೆ ಜಾಗಕ್ಕೆ ಕಿರಿಕ್ – ಚಂದ್ರಶೇಖರ್ ಗುರೂಜಿ ಹತ್ಯೆ ಕೇಸ್‌ಗೆ ಮತ್ತೊಂದು ಟ್ವಿಸ್ಟ್

    5 ಎಕ್ರೆ ಜಾಗಕ್ಕೆ ಕಿರಿಕ್ – ಚಂದ್ರಶೇಖರ್ ಗುರೂಜಿ ಹತ್ಯೆ ಕೇಸ್‌ಗೆ ಮತ್ತೊಂದು ಟ್ವಿಸ್ಟ್

    ಹುಬ್ಬಳ್ಳಿ: ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯಾ ಪ್ರಕರಣ ದಿನದಿಂದ ದಿನಕ್ಕೆ ಸಾಕಷ್ಟು ರೋಚಕ ಟ್ವಿಸ್ಟ್‌ಗಳನ್ನು ಪಡೆದುಕೊಳ್ಳುತ್ತಿದೆ. ಪೊಲೀಸರ ವಶದಲ್ಲಿರುವ ಹಂತಕರು ಗಂಟೆಗಂಟೆಗೂ ಗುರೂಜಿ ಕೊಲೆ ಹಿಂದಿನ ಅಸಲಿ ರೋಚಕ ಹಾಗೂ ಭಯಾನಕ ಸತ್ಯಗಳನ್ನು ಬಾಯ್ಬಿಡುತ್ತಿದ್ದು, ಕೊಲೆಗೆ ಕಾರಣವಾಗಿದ್ದ 3 ವಿಚಾರಗಳನ್ನು ಹಂತಕರು ಪೊಲೀಸರ ಮುಂದೆ ತೆರೆದಿಟ್ಟಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಮೊದಲನೆಯದಾಗಿ ಚಂದ್ರಶೇಖರ್ ಗುರೂಜಿ ಮಾಡಿದ್ದ ಬೇನಾಮಿ ಆಸ್ತಿಯನ್ನು ಕಾಂಗ್ರೆಸ್ ಮುಖಂಡರೊಬ್ಬರು ಖರೀದಿಸಿದ ವಿಚಾರ ಈಗ ಬೆಳಕಿಗೆ ಬಂದಿದೆ. ಸರ್ವೆ ನಂಬರ್ 166/1 ರಲ್ಲಿ ಇದ್ದ 5 ಎಕರೆ 11 ಗುಂಟೆ ಆಸ್ತಿಯನ್ನು ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಖರೀದಿಸಿದ್ದರು. ಸಿಜಿ ಪರಿವಾರದ ಮಾಜಿ ನೌಕರ ಬಸವರೆಡ್ಡಿ ಹೆಸರಿನಲ್ಲಿದ್ದ ಈ ಆಸ್ತಿಯನ್ನು ತಾನಾಜಿಬಶಿರ್ಕೆ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಖರೀದಿಸಿದ್ದರು. 2016 ರಲ್ಲಿ ಬಸವರೆಡ್ಡಿ ಹೆಸರಲ್ಲಿ ಬೇನಾಮಿ ಆಸ್ತಿಮಾಡಿದ್ದ ಈ ಆಸ್ತಿಯನ್ನು ಮಹಾಂತೇಶ್ ಶಿರೂರ ಜೊತೆಗೂಡಿ ಬಸವರೆಡ್ಡಿ ದೀಪಕ್ ಚಿಂಚೋರೆಗೆ ಮಾರಾಟ ಮಾಡಿದ್ದರು. ಅದರಂತೆಯೇ ದೀಪಕ್ ಚಿಂಚೋರೆಯಿಂದ 50 ಲಕ್ಷ ರೂ. ಮುಂಗಡ ಪಡೆದು, ಆ 50 ಲಕ್ಷ ರೂ.ಯಲ್ಲಿ ಮಹಾಂತೇಶ್ 20 ಲಕ್ಷ ರೂ. ಪಡೆದು, ಉಳಿದ ಹಣದಲ್ಲಿ ಬಸವರೆಡ್ಡಿ ಹಾಗೂ ಮಧ್ಯವರ್ತಿಗೆ ನೀಡಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಒಂದೇ ಆಟೋದಲ್ಲಿ 27 ಮಂದಿ ಪ್ರಯಾಣ- ದಿಗ್ಭ್ರಮೆಗೊಂಡ ಪೊಲೀಸರು

    ಇನ್ನುಳಿದ 1 ಕೋಟಿ ರೂ. ನೊಂದಣಿ ಸಮಯದಲ್ಲಿ ನೀಡುವುದಾಗಿ ದೀಪಕ್ ಚಿಂಚೋರೆ ಹೇಳುವ ಮೂಲಕ ಕಮೀಟ್ ಆಗಿದ್ದರು. ಆದರೆ ಈ ವಿಚಾರ ತಿಳಿದ ಗುರೂಜಿ ಜಮೀನು ಖರೀದಿ ಪ್ರಕ್ರಿಯೆಗೆ ಅಡ್ಡಿಪಡಿಸಿದ್ದ ಹಿನ್ನೆಲೆಯಲ್ಲಿ ಇದೇ ವಿಚಾರಕ್ಕೆ ಹಂತಕ ಮಹಾಂತೇಶ್ ಗುರೂಜಿ ಹತ್ಯೆಗೆ ಸ್ಕೆಚ್ ಹಾಕಿದ್ದಾನೆ.

    ಆಸ್ತಿ ಮಾರಾಟಕ್ಕೆ ಅಡ್ಡಿ ಪಡಿಸಿದ್ದ ಗುರೂಜಿ ತಮ್ಮ ಅಣ್ಣನ ಮಗ ಸಂತೋಷ್ ಅಂಗಡಿ ಮೂಲಕ ಕೋರ್ಟ್ನಲ್ಲಿ ಸ್ಟೇ ತಂದೊಡ್ಡಿದ್ದರು. ಹೀಗಾಗಿ ಆಸ್ತಿ ಖರೀದಿ ವಿಚಾರದಲ್ಲಿ ಅಡ್ಡಿಯಾಗಿದ್ದರಿಂದ ಇತ್ತ ದೀಪಕ್ ಚಿಂಚೋರೆ ಹಣ ಮರಳಿ ಕೊಡುವಂತೆ ಮಹಾಂತೇಶ್‌ಗೆ ಬೆನ್ನು ಬೀಳಲು ಶುರುಮಾಡಿದ್ದರು. ಆದರೆ ಆಸ್ತಿ ಮಾರಿ ಹಣ ಪಡೆದಿದ್ದ ಮಹಾಂತೇಶ್ ಆ ಹಣವನ್ನು ಸಂಪೂರ್ಣ ಖರ್ಚು ಮಾಡಿಕೊಂಡಿದ್ದ. ಇದರಿಂದ ದೀಪಕ್ ಚಿಂಚೋರೆಗೆ ಹಣ ಮರಳಿಸಲು ಸಾಧ್ಯವಾಗದೇ ಗುರೂಜಿ ಮೇಲೆ ಸಾಕಷ್ಟು ಕ್ರೋಧಗೊಂಡು ಹತ್ಯೆಗೆ ಒಂದೊಂದಾಗಿ ಸ್ಕೆಚ್ ಶುರು ಮಾಡಿದ್ದ. ಇದನ್ನೂ ಓದಿ: ಶೋಭಾ ಕರಂದ್ಲಾಜೆ ನೋಡಲು ನೆರೆ ನೀರಿನಲ್ಲಿ ಈಜಿ ಬಂದ ಜನ

    ಚಂದ್ರಶೇಖರ್ ಗುರೂಜಿ ಬೇನಾಮಿಯಾಗಿ ಮಾಡಿದ್ದ ಬಹುತೇಕ ಆಸ್ತಿಗಳನ್ನು ಮರಳಿ ಕೊಡಿಸಿದ್ದ ಮಹಾಂತೇಶ್‌ಗೆ ಗುರೂಜಿ 60 ಲಕ್ಷ ರೂ.ಹಣ ನೀಡುವುದಾಗಿ ಹೇಳಿ, ಆಸ್ತಿ ಮರಳಿ ಕೊಡಿಸಿದ ಬಳಿಕ ಆತನಿಗೆ ಹಣ ನೀಡಲು ನಿರಾಕರಿಸಿದ್ದರು. ಹೀಗಾಗಿ ತನ್ನ ಕೆಲಸ ಮುಗಿಸಿದರೂ ಗುರೂಜಿ ನಂಬಿಕೆ ಉಳಿಸದ ಕಾರಣ ಮಹಾಂತೇಶ್ ಗುರೂಜಿ ಹತ್ಯೆಗೆ ಪ್ಲಾನ್ ಮೇಲೆ ಪ್ಲಾನ್ ಮಾಡಿಕೊಂಡು, ಹತ್ಯೆ ನಡೆಸಿರುವುದಾಗಿ ಕೊಲೆಯ ಹಿಂದಿನ ಅಸಲಿ ಕಹಾನಿಯನ್ನು ಹಂತಕರು ಬಿಚ್ಚಿಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯಾಕಾಶಿ ಜನರಿಗೆ ದೇವಸ್ಥಾನ ಕಟ್ಟಿಸೋದಾಗಿ ಹೇಳಿ ಹಣ ಪಡೆದಿದ್ದ ಚಂದ್ರಶೇಖರ್ ಗುರೂಜಿ ಹಂತಕ

    ವಿದ್ಯಾಕಾಶಿ ಜನರಿಗೆ ದೇವಸ್ಥಾನ ಕಟ್ಟಿಸೋದಾಗಿ ಹೇಳಿ ಹಣ ಪಡೆದಿದ್ದ ಚಂದ್ರಶೇಖರ್ ಗುರೂಜಿ ಹಂತಕ

    ಧಾರವಾಡ: ಸರಳವಾಸ್ತು ಚಂದ್ರಶೇಖರ್ ಗುರೂಜಿ ಕೊಲೆ ನಡೆದು ಇಂದಿಗೆ ನಾಲ್ಕು ದಿನ ಕಳೆದಿವೆ. ಈಗಾಗಲೇ ಆರೋಪಿಗಳಾದ ಮಹಾಂತೇಶ್ ಹಾಗೂ ಮಂಜುನಾಥ್ ಪೊಲೀಸ್ ಕಸ್ಟಡಿಯಲ್ಲಿದ್ದು, ತನಿಖೆ ಎದುರಿಸುತ್ತಿದ್ದಾರೆ. ಇಷ್ಟರಲ್ಲೇ ಕೊಲೆಗಾರ ಮಂಜುನಾಥ್ ಮರೇವಾಡ ಬಗ್ಗೆ ಇನ್ನು ಹಲವು ಅಂಶ ಬೆಳಕಿಗೆ ಬಂದಿದ್ದು, ಆತ ವಿದ್ಯಾಕಾಶಿ ಧಾರವಾಡದಲ್ಲಿ ಬಿಲ್ಡಿಂಗ್ ಕಟ್ಟುವ ಗುತ್ತಿಗೆ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ.

    ನಗರದ ಸಿದ್ಧಾರೂಢ ಕಾಲೋನಿಯಲ್ಲಿ ಒಡೆಯರ್ ಹಾಗೂ ಹಂಚನಾಳ ಮನೆಗಳನ್ನ ಕಟ್ಟುವ ಗುತ್ತಿಗೆ ಪಡೆದಿದ್ದ ಕೊಲೆಗಾರ ಮಂಜುನಾಥ್ ಮರೇವಾಡ, ಹಂಚಿನಾಳ ಅವರಿಂದ 13 ಲಕ್ಷ ಹಣ ಪಡೆದಿದ್ದಾನೆ. ಆದರೆ ಅವರ ಮನೆಯ 6 ಲಕ್ಷ ರೂ.ಗಷ್ಟೇ ಕೆಲಸ ಮಾಡಿದ್ದಾನೆ. ಅಲ್ಲದೇ ಒಡೆಯರ್ ಎನ್ನುವವರ ಮನೆಯ ಕೆಲಸ ಕೂಡಾ ಅರ್ಧಕ್ಕೆ ನಿಂತಿದೆ. ಇದೇ ಕಾಲೋನಿಯಲ್ಲಿ ಹಲವು ಬಿಲ್ಡಿಂಗ್ ಕೆಲಸ ಮಾಡಿದ್ದಕ್ಕೆ, ಇವನಿಗೆ ಕಾಲೋನಿಯಲ್ಲಿ ಸಿದ್ಧಾರೂಢರ ದೇವಸ್ಥಾನ ಕಟ್ಟುವ ಗುತ್ತಿಗೆ ಕೂಡಾ ನೀಡಲಾಗಿದೆ. ಇದನ್ನೂ ಓದಿ:  ವೀರ ಮದಕರಿ ನಾಯಕ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ – ಪ್ರೋಫೆಸರ್ ಕ್ಷಮೆಯಾಚನೆ 

    ಕಳೆದ ನಾಲ್ಕು ತಿಂಗಳ ಹಿಂದೆ 5 ಲಕ್ಷಕ್ಕೆ ದೇವಸ್ಥಾನ ಕಟ್ಟಿಸಿ ಕೊಡಬೇಕು ಎಂದು ಗಡುವನ್ನು ನೀಡಿ 50 ಸಾವಿರ ಮುಂಗಡ ಹಣ ಕೂಡಾ ಕೊಡಲಾಗಿದೆ. ಆದರೆ ಈತ ಗುರೂಜಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಈ ಹಣ ಕೊಟ್ಟವರಿಗೆ ದೊಡ್ಡ ಸಂಕಷ್ಟ ಬಂದು ಒದಗಿದೆ. ಅಲ್ಲದೇ ಕೆಲ ಕಾರ್ಮಿಕರ ಸಂಬಳ ಕೂಡಾ ಈತ ನೀಡಬೇಕಾಗಿದ್ದು, ಅದೂ ಕೂಡಾ ಮಂಜುನಾಥ್ ಉಳಿಸಿಕೊಂಡಿದ್ದಾನೆ.

    ಮಂಜುನಾಥ್ ಮರೇವಾಡ ಜೈಲು ಸೇರಿದ ಮೇಲೆ ಯಾವಾಗ ಅವನು ಅಲ್ಲಿಂದ ಬಿಡುಗಡೆಯಾಗಿ ಬಂದು ನಮ್ಮ ಕೆಲಸ ಮುಗಿಸಿಕೊಡಬೇಕು, ಯಾವಾಗ ನಾವು ಆ ಮನೆಯಲ್ಲಿ ಇರಬೇಕು ಎಂದು ಮನೆ ಗುತ್ತಿಗೆ ಕೊಟ್ಟ ಮಾಲೀಕರು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ದೇವಸ್ಥಾನದ ಕೆಲಸ ಕೂಡಾ ಇದೇ ರೀತಿಯಾಗಿದೆ ಎಂಬ ಮಾತುಗಳು ಹೇಳಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಚಂದ್ರಶೇಖರ್‌ ಗುರೂಜಿ ಹತ್ಯೆ – ಹೋಟೆಲ್‌ನಲ್ಲಿ ಸುದರ್ಶನ ಹೋಮ

    ಚಂದ್ರಶೇಖರ್‌ ಗುರೂಜಿ ಹತ್ಯೆ – ಹೋಟೆಲ್‌ನಲ್ಲಿ ಸುದರ್ಶನ ಹೋಮ

    ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಹತ್ಯೆ ನಡೆದ ಹೋಟೆಲ್‌ನಲ್ಲಿ ಇಂದು ಹೋಮ, ಹವನ ನಡೆದಿದೆ.

    ಗುರೂಜಿ ಹತ್ಯೆಯಿಂದ ಸಿಬ್ಬಂದಿ ಆತಂಕಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಉಣಕಲ್ ಕೆರೆ ಬಳಿಯ ದಿ ಪ್ರೆಸಿಡೆಂಟ್ ಹೋಟೆಲ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ದೇವರ ಮೊರೆ ಹೋಗಿದ್ದಾರೆ.

    ಹುಬ್ಬಳ್ಳಿ ಖ್ಯಾತ ಪುರೋಹಿತರನ್ನು ಕರೆಯಿಸಿ ಗುರೂಜಿ ಕೊನೆಯುಸಿರೆಳೆದ ಸ್ಥಳದಲ್ಲೇ ಸುದರ್ಶನ ಹೋಮ ಮಾಡಿಸಿದ್ದಾರೆ. ಇಬ್ಬರು ಪುರೋಹಿತರು ಆಗಮಿಸಿ ಪೂಜೆಯನ್ನು ನೆರವೇರಿಸಿಕೊಟ್ಟಿದ್ದಾರೆ. ಇದನ್ನೂ ಓದಿ: T20 ಕ್ರಿಕೆಟ್‍ನಲ್ಲಿ ಟೀಂ ಇಂಡಿಯಾ ನಾಯಕನಾಗಿ ಈವರೆಗೆ ಯಾರೂ ಮಾಡದ ದಾಖಲೆ ಬರೆದ ರೋಹಿತ್ ಶರ್ಮಾ

    ಭಯ ದೂರಮಾಡಲು ಮತ್ತು ಹೋಟೆಲ್ ಶುದ್ಧಗೊಳಿಸಲು ಹೋಮ ಮಾಡಲಾಗಿದೆ ಎಂಬ ವಿಚಾರ ತಿಳಿದು ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ವಾಸ್ತುಗುರೂಜಿ ಕೊಲೆ ಬಗ್ಗೆ ಹಂತಕರ ತಪ್ಪೊಪ್ಪಿಗೆ – ಸಂಧಾನ ನೆಪದಲ್ಲಿ ದಾಖಲೆ ಜೊತೆ ಚಾಕು ತಂದು ಹತ್ಯೆ

    ವಾಸ್ತುಗುರೂಜಿ ಕೊಲೆ ಬಗ್ಗೆ ಹಂತಕರ ತಪ್ಪೊಪ್ಪಿಗೆ – ಸಂಧಾನ ನೆಪದಲ್ಲಿ ದಾಖಲೆ ಜೊತೆ ಚಾಕು ತಂದು ಹತ್ಯೆ

    ಹುಬ್ಬಳ್ಳಿ: ಖ್ಯಾತ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಹತ್ಯೆಯಾಗಿ ಮೂರು ದಿನ ಕಳೆಯುತ್ತಿದೆ. ಪ್ರಕರಣ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಹಂತಕರಿಂದ ಪೊಲೀಸರು ಮೊದಲ ದಿನವೇ ಆರೋಪಿಗಳಿಂದ ಮಹತ್ವದ ಸತ್ಯವನ್ನು ಬಾಯಿಬಿಡಿಸಿದೆ. ಮತ್ತೊಂದು ಕಡೆ ಅವರ ಕುಟುಂಬಸ್ಥರು ಮೂರನೇ ದಿನದ ಕಾರ್ಯ ನೆರವೇರಿಸಿದ್ದಾರೆ. ಆರೋಪಿಗಳನ್ನು ಕಸ್ಟಡಿಗೆ ಪಡೆದಿರೋ ಪೊಲೀಸರು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ. ಹಂತಕರು ತಪ್ಪೊಪ್ಪಿಕೊಂಡಿದ್ದು ಹತ್ಯೆ ಹಿಂದಿನ ದ್ವೇಷವನ್ನ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

    42 ಬಾರಿ ಚುಚ್ಚಿ ಕೊಲ್ಲುವಷ್ಟು ದ್ವೇಷ ಯಾಕೆ: ಚಂದ್ರಶೇಖರ ಗುರೂಜಿ ಹತ್ಯೆಗೆ ದ್ವೇಷವೇ ಕಾರಣ ಅಂತ ಹಂತಕರು ವಿಚಾರಣೆಯಲ್ಲಿ ಹೇಳಿದ್ದಾರೆ. ಗುರೂಜಿ ಬಳಿ 10-12 ವರ್ಷ ಕೆಲಸ ಮಾಡಿದ್ದ ಹಂತಕರು 2016ರಲ್ಲೇ ಕೆಲಸ ಬಿಟ್ಟಿದ್ರು. ಗುರೂಜಿ ಸಂಸ್ಥೆಯಿಂದ ಹೊರಬಂದ ಬಳಿಕ ರಿಯಲ್ ಎಸ್ಟೇಟ್ ಸೇರಿದಂತೆ ಬೇರೆ ಬೇರೆ ಕೆಲಸ ಮಾಡ್ಕೊಂಡಿದ್ರಂತೆ. ಆದರೆ ನಮ್ಮ ಪ್ರತಿ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು ಅಂತ ಹಂತಕರು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ನಮ್ಮ ವ್ಯಾಪಾರ-ಉದ್ಯೋಗಕ್ಕೆ ಅಡ್ಡಿಪಡಿಸುತ್ತಿದ್ದ ಗುರೂಜಿ ಬೆದರಿಕೆ ಹಾಕ್ತಿದ್ರು. ಹೀಗಾಗಿ ತಾಳ್ಮೆಗೆಟ್ಟು ನಾವೇ ಕೊಲೆ ಮಾಡಿದ್ದೇವೆಂದು ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಇಬ್ಬರಲ್ಲ, 20ಕ್ಕೂ ಹೆಚ್ಚು ಮಂದಿಯಿಂದ ಸ್ಕೆಚ್‌ – ಗುರೂಜಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಸುಲಿಗೆಗೆ ಇಳಿದಿದ್ದ ಹಂತಕರು

    ಸಂಧಾನ ನೆಪ.. ದಾಖಲೆ ಜೊತೆ ತಂದಿದ್ರು ಚಾಕು: ಚಂದ್ರಶೇಖರ್ ಗುರೂಜಿ ಹತ್ಯೆಗೆ ಜುಲೈ 3 ರಂದೇ ಪ್ಲಾನ್ ನಡೆದಿದೆ. ಮೂರು ದಿನದ ಹಿಂದೆ ಮನೆಬಿಟ್ಟಿದ್ದ ಹಂತಕರು ಹೊಸೂರು ವೃತ್ತದ ಬಳಿರುವ ಕೆನರಾ ಹೊಟೆಲ್‍ನಲ್ಲಿ ರೂಮ್ ಪಡೆದು ವಾಸವಿದ್ರು. ಹೋಟೆಲ್‍ನಲ್ಲಿ ಕೂತು ಹತ್ಯೆಗೆ ಪಕ್ಕಾ ಪ್ಲಾನ್ ಮಾಡಿಕೊಂಡಿದ್ರು. ಗುರೂಜಿ ಮತ್ತು ತಮ್ಮ ನಡುವೆ ಇರುವ ವ್ಯಾಜ್ಯದ ಸಂಧಾನ ನೆಪಹೇಳಿ ಚಂದ್ರಶೇಖರ್ ಗುರೂಜಿಯನ್ನು ಭೇಟಿ ಮಾಡಲು ಕೇಳಿಕೊಂಡಿದ್ರು. ಹಂತಕರ ಮುಖ ಅರಿಯದ ಗುರೂಜಿ ಭೇಟಿಗೆ ಒಪ್ಪಿದ್ದರು. ಹೋಟೆಲ್‍ಗೆ ಬರುವಾಗ ಕೈಯಲ್ಲಿ ದಾಖಲೆ ಪತ್ರಗಳನ್ನ ಹಿಡಿದುಕೊಂಡು ಬಂದಿದ್ದ ಹಂತಕರು, ದಾಖಲೆಪತ್ರಗಳ ಮಧ್ಯೆ ಚಾಕು ಹಿಡಿದು ತಂದಿದ್ರು. ಗುರೂಜಿ ಬರ್ತಿದ್ದಂತೆ ಹತ್ಯೆಗೈದು ದಾಖಲೆ ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ರು. ಹೋಟೆಲ್ ಮುಂಭಾಗದ ಕಸದ ರಾಶಿಯಲ್ಲಿ ಚಾಕು ಎಸೆದು ಎಸ್ಕೇಪ್ ಆಗಿದ್ರು. ಇದನ್ನೂ ಓದಿ: ಗುರೂಜಿಯನ್ನು ನಾವು ದೇವರಂತೆ ಕಾಣುತ್ತಿದ್ದೆವು: ವನಜಾಕ್ಷಿ

    ಹತ್ಯೆ ನಡೆದ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ವೇಳೆ ಹೋಟೆಲ್ ಭದ್ರತಾಲೋಪದ ಬಗ್ಗೆ ಹೋಟೆಲ್ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು. ಈ ಮಧ್ಯೆ ಗುರೂಜಿ ಸಾವಿನಿಂದ ಇನ್ನೂ ಹೊರಬಾರದ ಕುಟುಂಬಸ್ಥರು ಸಮಾಧಿಗೆ ಮೂರು ದಿನದ ಹಾಲು-ತುಪ್ಪ ಕಾರ್ಯ ನೆರವೇರಿಸಿದರು. ಮಗಳು ಸ್ವಾತಿ, ಗುರೂಜಿ ಪತ್ನಿ ಅಂಕಿತಾ ಹಾಗೂ ಅಣ್ಣನ ಮಗ ಸಂಜಯ್ ಸಮಾಧಿಗೆ ಪೂಜೆ ಸಲ್ಲಿಸಿದರು.

    Live Tv
    [brid partner=56869869 player=32851 video=960834 autoplay=true]

  • ಚಂದ್ರಶೇಖರ್ ಗುರೂಜಿ ಅಂತಿಮ ದರ್ಶನ ಪಡೆದ ಮುದ್ದಿನ ಶ್ವಾನ

    ಚಂದ್ರಶೇಖರ್ ಗುರೂಜಿ ಅಂತಿಮ ದರ್ಶನ ಪಡೆದ ಮುದ್ದಿನ ಶ್ವಾನ

    ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯ ಅಂತಿಮ ಸಂಸ್ಕಾರವು ಹುಬ್ಬಳ್ಳಿ ಸುಳ್ಳ ಗ್ರಾಮದ ರಸ್ತೆಯಲ್ಲಿ ಇರುವ ಗುರೂಜಿ ಜಮೀನಿನಲ್ಲಿಯೇ ನಡೆಯುತ್ತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

    ಸಾರ್ವಜನಿಕರು, ಕುಟುಂಬಸ್ಥರು ಸೇರಿದಂತೆ ಎಲ್ಲರೂ ಗುರೂಜಿ ಅಂತಿಮ ದರ್ಶನ ಪಡೆದರು. ಇದೇ ವೇಳೆ ಗುರೂಜಿ ಮುದ್ದಿನ ಶ್ವಾನ ಪ್ರಿನ್ಸ್ ಕೂಡ ಯಜಮಾನನ ಅಂತಿಮ ದರ್ಶನ ಪಡೆಯಿತು. ಶವಪೆಟ್ಟಿಗೆ ಮೇಲೆ ಕುಳಿತು ಪ್ರಿನ್ಸ್ ದುಃಖ ಹೊರಹಾಕಿತ್ತು. ಅಲ್ಲದೆ ಗುರೂಜಿ ಬಿಟ್ಟು ಹೋಗಲಾರೆ ಎಂದು ಶ್ವಾನ ಹಠ ಮಾಡಿರುವುದು ನೆರೆದವರ ಕಣ್ಣಂಚಲ್ಲಿ ನೀರು ತರಿಸಿತು.

    58 ವರ್ಷದ ಚಂದ್ರಶೇಖರ್ ಗುರೂಜಿಯನ್ನು ಭೇಟಿ ಮಾಡಲು ಬಂದ ಅವರ ಮಾಜಿ ಆಪ್ತ ಸಹಾಯಕರು ಈ ಕೃತ್ಯ ಎಸಗಿದ್ದಾರೆ. ಮಧ್ಯಾಹ್ನ 12.23ರ ಸಮಯಲ್ಲಿ ಹೋಟೆಲ್ ರೂಂನಿಂದ ರಿಸೆಪ್ಶನ್‍ಗೆ ಬಂದ ಚಂದ್ರಶೇಖರ ಗುರೂಜಿ ಪಾದಕ್ಕೆ ಒಬ್ಬ ನಮಸ್ಕರಿಸುವ ಹೊತ್ತಲ್ಲೇ ಅಲ್ಲೇ ನಿಂತಿದ್ದ ಇನ್ನೊಬ್ಬ ಗುರೂಜಿ ಎದೆಗೆ ಚಾಕು ಹಾಕಿದ್ದ. ನಂತರ ಇಬ್ಬರೂ ಸೇರಿಕೊಂಡು ಕೇವಲ 40 ಸೆಕೆಂಡ್‍ಗಳ ಅಂತರದಲ್ಲಿ 60ಕ್ಕೂ ಹೆಚ್ಚು ಬಾರಿ ಚುಚ್ಚಿ, ಕತ್ತು ಕೊಯ್ದು ಭೀಕರವಾಗಿ ಕೊಂದಿದ್ದಾರೆ. ಇದನ್ನೂ ಓದಿ: ನಾಳೆ ಪಂಜಾಬ್ ಸಿಎಂ 2ನೇ ಮದುವೆ – ಮತ್ತೆ ಹಸೆಮಣೆ ಏರಲಿದ್ದಾರೆ ಭಗವಂತ್ ಮಾನ್

    ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡಿದ ಚಂದ್ರಶೇಖರ ಗುರೂಜಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹತ್ಯೆ ಬೆನ್ನಲ್ಲೇ ಇಬ್ಬರು ಹಂತಕರು ಅಲ್ಲಿಂದ ಹೊರಗೆ ಓಡಿದ್ದಾರೆ. ಈ ಎಲ್ಲಾ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಾರಲ್ಲಿ ಮುಂಬೈಗೆ ಎಸ್ಕೇಪ್ ಆಗುತ್ತಿದ್ದ ಇಬ್ಬರು ಹಂತಕರಾz ಧಾರವಾಡದ ಮಹಂತೇಶ್ ಶಿರೂರ ಮತ್ತು ಕಲಘಟಗಿಯ ಮಂಜುನಾಥ್‍ನನ್ನು ರಾಮದುರ್ಗ ಬಳಿ ಸಿನಿಮೀಯ ರೀತಿಯಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ಮೊಬೈಲ್ ಲೋಕೇಷನ್ ಟವರ್ ಆಧರಿಸಿ ಬೆನ್ನಟ್ಟಿದ ಪೊಲೀಸರು ಆರೋಪಿಗಳು ಎಸ್ಕೇಪ್ ಆಗದಂತೆ ಸುತ್ತುವರೆದಿದ್ದಾರೆ. ರಸ್ತೆಗೆ ಅಡ್ಡಲಾಗಿ ಜೆಸಿಬಿ ನಿಲ್ಲಿಸಿ ಕಾರನ್ನು ತಡೆದ್ರು. ಆರೋಪಿಗಳು ಓಡಲು ಪ್ರಯತ್ನಿಸಿದಾಗ ರಾಮದುರ್ಗ ಡಿವೈಎಸ್‍ಪಿ ಶೂಟೌಟ್ ಮಾಡೋ ಎಚ್ಚರಿಕೆ ನೀಡಿ ಅರೆಸ್ಟ್ ಮಾಡಿದ್ರು.

    Live Tv
    [brid partner=56869869 player=32851 video=960834 autoplay=true]

  • ಚಂದ್ರಶೇಖರ್ ಗುರೂಜಿ ಹತ್ಯೆ : ಸ್ಯಾಂಡಲ್ ವುಡ್ ದಿಗ್ಭ್ರಮೆ

    ಚಂದ್ರಶೇಖರ್ ಗುರೂಜಿ ಹತ್ಯೆ : ಸ್ಯಾಂಡಲ್ ವುಡ್ ದಿಗ್ಭ್ರಮೆ

    ನಿನ್ನೆ ಹುಬ್ಬಳ್ಳಿಯ ಪ್ರತಿಷ್ಠಿತ ಹೊಟೇಲ್ ನಲ್ಲಿ ತಮ್ಮದೇ ಕಂಪನಿಯ ಮಾಜಿ ನೌಕರರಿಂದ ಹತ್ಯೆಯಾದ ಚಂದ್ರಶೇಖರ್ ಗುರೂಜಿ ಸಾವಿಗೆ ಸ್ಯಾಂಡಲ್ ವುಡ್ ನ ಅನೇಕರು ದಿಗ್ಭ್ರಮೆ ವ್ಯಕ್ತ ಪಡಿಸಿದ್ದಾರೆ. ಹಾಡು ಹಗಲೆ ಇಂಥದ್ದೊಂದು ಕೃತ್ಯ ನಡೆದಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ. ಮನುಷ್ಯನ ಮನಸ್ಥಿತಿಯ ಬಗ್ಗೆಯೂ ಅವರು ಚರ್ಚೆ ಮಾಡಿದ್ದಾರೆ. ಕೊಲ್ಲುವುದು ಎಲ್ಲದಕ್ಕೂ ಪರಿಹಾರವಲ್ಲ ಎಂಬ ಮಾತುಗಳನ್ನೂ ಆಡಿದ್ದಾರೆ.

    ನಿನ್ನೆಯಷ್ಟೇ ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಈ ಹತ್ಯೆಯ ಕುರಿತು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ‘ನನ್ನ ಆತ್ಮೀಯ ಸ್ನೇಹಿತರು, ನನ್ನ ಅವರ ಒಡನಾಟ ಅಧ್ಯಾತ್ಮಿಕ ಹಾಗೂ ವಾಸ್ತು ಸಂಬಂಧಿಸಿದ್ದು. ಸದಾ ನನ್ನ ಒಳಿತು ಬಯಸುತ್ತಿದ್ದ ಆತ್ಮ. ನಾವಿಬ್ಬರೂ ಮಾತಿಗೆ ಕೂತರೆ ಗಂಟೆಗಟ್ಟಲೇ. ನನ್ನ ರಾಜ್ಯಸಭಾ ಸ್ಥಾನಕ್ಕೆ ತಮಗೆ ಸಿಕ್ಕಂತೆ ಸಂಭ್ರಮಿಸಿದ್ದರು. ಅವರ ಅಮಾನುಷವಾಗಿ ಕೊಲೆಗೈದ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಲಿ. ಇಂದಿನ ಕಾಲದಲ್ಲಿ ಯಾರನ್ನು ನಂಬೋದು’ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ : ಬಾಲಿವುಡ್ ನಲ್ಲಿ ಕನ್ನಡದ ರಂಗಿತರಂಗ ಸಿನಿಮಾ ರಿಮೇಕ್

    ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ಕೂಡ ಫೇಸ್ ಬುಕ್ ನಲ್ಲಿ ಹತ್ಯೆಯ ವಿಡಿಯೋವನ್ನು ಹಂಚಿಕೊಂಡು, ‘ನಮ್ಮ ದೇಶದಲ್ಲಿ ಇಷ್ಟು ಸುಲಭವಾಗಿ ಒಬ್ಬರ ಜೀವ ತಗೆಯಬಹುದಾ? ಎಷ್ಟು ಘೋರ. ಗುರೂಜಿಯಾದರೂ, ಟೈಲರ್ ಆದರೂ ಮೃತರ ಆತ್ಮಕ್ಕೆ ಶಾಂತಿ ಕೋರುವುದೊಂದೇ ನಮ್ಮ ಕೈಲಿರೋದು’ ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 60 ಬಾರಿ ಚುಚ್ಚಿ ಚುಚ್ಚಿ ಕೊಂದ ಪಾತಕಿಗಳು- ಬುಧವಾರ ಹುಬ್ಬಳ್ಳಿಯಲ್ಲೇ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ

    60 ಬಾರಿ ಚುಚ್ಚಿ ಚುಚ್ಚಿ ಕೊಂದ ಪಾತಕಿಗಳು- ಬುಧವಾರ ಹುಬ್ಬಳ್ಳಿಯಲ್ಲೇ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ

    ಹುಬ್ಬಳ್ಳಿ: ಸರಳವಾಸ್ತು, ಮಾನವಗುರು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರನ್ನು ಹುಬ್ಬಳ್ಳಿಯ ಖಾಸಗಿ ಹೋಟೆಲ್‍ನಲ್ಲಿ ಭೀಕರವಾಗಿ ಕೊಲ್ಲಲಾಗಿದೆ. ನಾಳೆ ಹುಬ್ಬಳ್ಳಿಯಲ್ಲೇ ಅಂತ್ಯಕ್ರಿಯೆ ನಡೆಯಲಿದೆ.

    58 ವರ್ಷದ ಚಂದ್ರಶೇಖರ್ ಗುರೂಜಿಯನ್ನು ಭೇಟಿ ಮಾಡಲು ಬಂದ ಅವರ ಮಾಜಿ ಆಪ್ತ ಸಹಾಯಕರು ಈ ಕೃತ್ಯ ಎಸಗಿದ್ದಾರೆ. ಮಧ್ಯಾಹ್ನ 12.23ರ ಸಮಯಲ್ಲಿ ಹೋಟೆಲ್ ರೂಂನಿಂದ ರಿಸೆಪ್ಶನ್‍ಗೆ ಬಂದ ಚಂದ್ರಶೇಖರ ಗುರೂಜಿ ಪಾದಕ್ಕೆ ಒಬ್ಬ ನಮಸ್ಕರಿಸುವ ಹೊತ್ತಲ್ಲೇ ಅಲ್ಲೇ ನಿಂತಿದ್ದ ಇನ್ನೊಬ್ಬ ಗುರೂಜಿ ಎದೆಗೆ ಚಾಕು ಹಾಕಿದ್ದ. ನಂತ್ರ ಇಬ್ರು ಸೇರಿಕೊಂಡು ಕೇವಲ 40 ಸೆಕೆಂಡ್‍ಗಳ ಅಂತರದಲ್ಲಿ 60ಕ್ಕೂ ಹೆಚ್ಚು ಬಾರಿ ಚುಚ್ಚಿ, ಕತ್ತು ಕೊಯ್ದು ಭೀಕರವಾಗಿ ಕೊಂದಿದ್ದಾರೆ.

    ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡಿದ ಚಂದ್ರಶೇಖರ ಗುರೂಜಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹತ್ಯೆ ಬೆನ್ನಲ್ಲೇ ಇಬ್ಬರು ಹಂತಕರು ಅಲ್ಲಿಂದ ಹೊರಗೆ ಓಡಿದ್ದಾರೆ. ಈ ಎಲ್ಲಾ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಾರಲ್ಲಿ ಮುಂಬೈಗೆ ಎಸ್ಕೇಪ್ ಆಗುತ್ತಿದ್ದ ಇಬ್ಬರು ಹಂತಕರಾದ ಧಾರವಾಡದ ಮಹಂತೇಶ್ ಶಿರೂರ ಮತ್ತು ಕಲಘಟಗಿಯ ಮಂಜುನಾಥ್‍ನನ್ನು ರಾಮದುರ್ಗ ಬಳಿ ಸಿನಿಮೀಯ ರೀತಿಯಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಗುರೂಜಿ ಹತ್ಯೆ ಪ್ರಕರಣ- ರಸ್ತೆಯಲ್ಲಿ ಜೆಸಿಬಿ ಅಡ್ಡ ನಿಲ್ಲಿಸಿ, ಗನ್ ತೋರಿಸಿ ಹಂತಕರಿಗೆ ಬೇಡಿ ತೊಡಿಸಿದ ಖಾಕಿ

    ಮೊಬೈಲ್ ಲೋಕೇಷನ್ ಟವರ್ ಆಧರಿಸಿ ಬೆನ್ನಟ್ಟಿದ ಪೊಲೀಸರು ಆರೋಪಿಗಳು ಎಸ್ಕೇಪ್ ಆಗದಂತೆ ಸುತ್ತುವರೆದಿದ್ದಾರೆ. ರಸ್ತೆಗೆ ಅಡ್ಡಲಾಗಿ ಜೆಸಿಬಿ ನಿಲ್ಲಿಸಿ ಕಾರನ್ನು ತಡೆದ್ರು. ಆರೋಪಿಗಳು ಓಡಲು ಪ್ರಯತ್ನಿಸಿದಾಗ ರಾಮದುರ್ಗ ಡಿವೈಎಸ್ಪಿ ಶೂಟೌಟ್ ಮಾಡೋ ಎಚ್ಚರಿಕೆ ನೀಡಿ ಅರೆಸ್ಟ್ ಮಾಡಿದ್ರು. ಇದಕ್ಕೂ ಮುನ್ನ, ಮಹಂತೇಶ್ ಶಿರೂರ ಪತ್ನಿ ವನಜಾಕ್ಷಿಯನ್ನು ಪೊಲೀಸ್ರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು.

    ಹಂತಕರ ಬಂಧನ ನಂತ್ರ ವನಜಾಕ್ಷಿಯನ್ನು ಬಿಟ್ಟುಕಳಿಸಿದ್ರು. ಮುಂಬೈನಿಂದ ಕುಟುಂಬಸ್ಥರು ಹುಬ್ಬಳ್ಳಿಗೆ ಧಾವಿಸಿದ್ದು, ನಾಳೆ ಹುಬ್ಬಳ್ಳಿಯ ಸುಳ್ಳ ಗ್ರಾಮದ ರಸ್ತೆಯ ಫಾರಂಹೌಸ್‍ನಲ್ಲಿ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ ನಡೆಯಲಿದೆ. ಸರಳವಾಸ್ತು ಸಿಬ್ಬಂದಿ ಕಣ್ಣೀರಿಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]